All posts by nagaraj11081993

ಜನವರಿ 30-31ರಂದು ಹೈದರಾಬಾದ್​ನಲ್ಲಿ ಅಪೋಲೋ ಹಾಸ್ಪಿಟಲ್ಸ್​ನಿಂದ ‘ಇಂಟರ್ನ್ಯಾಷನಲ್ ಹೆಲ್ತ್ ಡೈಲೋಗ್’ – Kannada News | Apollo Hospitals organizing International Health Dialogue 2026 on Jan 30 31 at Hyderabad

ಹಿಂದಿನ ವರ್ಷದ ಐಎಚ್​ಡಿ ಸಮಾವೇಶದ ಒಂದು ಚಿತ್ರ

ಹೈದರಾಬಾದ್, ಜನವರಿ 9: ಇದೇ ತಿಂಗಳ ಕೊನೆಯ ಎರಡು ದಿನಗಳಂದು ಅಂತಾರಾಷ್ಟ್ರೀಯ ಆರೋಗ್ಯ ಸಂವಾದ ಕಾರ್ಯಕ್ರಮ ನಡೆಯಲಿದೆ. ಅಪೋಲೋ ಹಾಸ್ಪಿಟಲ್ಸ್ ಆಯೋಜಿಸುತ್ತಿರುವ ಇಂಟರ್ನ್ಯಾಷನಲ್ ಹೆಲ್ತ್ ಡೈಲೋಗ್​ನ 13ನೇ ಆವೃತ್ತಿ (IHD- International Health Dialogue) ಜನವರಿ 30-31ರಂದು ನಡೆಯಲಿದೆ. ಹೈದರಾಬಾದ್​ನಲ್ಲಿ ನಡೆಯುವ 2026ರ ಆವೃತ್ತಿಯ ಈ ಕಾರ್ಯಕ್ರಮದ ಥೀಮ್ ‘ಗ್ಲೋಬಲ್ ವಾಯ್ಸಸ್, ಒನ್ ವಿಶನ್’ (ಜಾಗತಿಕ ಧ್ವನಿಗಳು, ಒಂದೇ ದೃಷ್ಟಿ). ಜಾಗತಿಕ ಹೊರಹೊಮ್ಮುವ ಹೊಸ ಐಡಿಯಾಗಳು, ಇನ್ನೋವೇಶನ್​ಗಳು ಮತ್ತು ನಾಯಕತ್ವವನ್ನು ಒಂದು ಸಾಮಾನ್ಯ ಗುರಿಯತ್ತ ಕೊಂಡೊಯ್ಯುವ ಮೂಲಕ ಪ್ರಬಲವಾದ ಹೆಲ್ತ್​ಕೇರ್ ಸಿಸ್ಟಂಗಳನ್ನು ರೂಪಿಸುವ ಮಾರ್ಗಗಳನ್ನು ಅವಲೋಕಿಸುವುದು ಈ ಸಭೆಯ ಪ್ರಮುಖ ಅಜೆಂಡಾ ಆಗಿರುತ್ತದೆ.

ಆಸ್ಪತ್ರೆ ಕಾರ್ಯಾಚರಣೆಗಳು, ರೋಗಿ ಅನುಭವ ಮತ್ತು ಕ್ಲಿನಿಕಲ್ ಪರಿಣಾಮಗಳ ವಿಚಾರದಲ್ಲಿ ನಾಯಕತ್ವ ಪ್ರೇರಿತ ಸೇಫ್ಟಿ ಮಾಡಲ್​ಗಳು, ಮಾನವ ಕೇಂದ್ರಿತ ವಿನ್ಯಾಸ, ಡಿಜಿಟಲ್ ಪರಿವರ್ತನೆ ಮತ್ತು ಶ್ರೇಷ್ಠತೆ ಸಾಧಿಸುವುದು ಈ ಆಯಾಮಗಳ ಬಗ್ಗೆ ಐಎಚ್​ಡಿ 2026 ಕಾರ್ಯಕ್ರಮದಲ್ಲಿ ಗಮನ ಹರಿಸಲಾಗುತ್ತದೆ.

ಈ ಕಾರ್ಯಕ್ರಮ ಆಯೋಜಿಸುತ್ತಿರುವ ಅಪೋಲೋ ಹಾಸ್ಪಿಟಲ್ಸ್ ಗ್ರೂಪ್​ನ ಜಂಟಿ ಎಂಡಿಯಾಗಿರುವ ಡಾ. ಸಂಗೀತಾ ರೆಡ್ಡಿ ಅವರು ಈ ಕಾರ್ಯಕ್ರಮದ ಬಗ್ಗೆ ಮಾತನಾಡಿ, ಎಐ, ಡಾಟಾ ಮತ್ತು ಡಿಜಿಟಲ್ ಇಕೋಸಿಸ್ಟಂಗಳ ಶಕ್ತಿಯನ್ನು ಒಗ್ಗೂಡಿಸುತ್ತಿದೆ ಎಂದು ಹೇಳಿದ್ದಾರೆ.

‘ಹೆಲ್ತ್​ಕೇರ್ ತಜ್ಞರು, ಇನ್ನೋವೇಟರ್​ಗಳು, ನೀತಿ ರೂಪಕರು, ಪ್ರೇರಕರು (Evangelists) ಒಂದೆಡೆ ಸೇರಿ ಹೆಲ್ತ್​ಕೇರ್ ಕ್ಷೇತ್ರದ ಮುಂದಿನ ಹಾದಿಯನ್ನು ರೂಪಿಸುವ ಒಂದು ವೇದಿಕೆಯಾಗಿ ಇಂಟರ್ನ್ಯಾಷನಲ್ ಹೆಲ್ತ್ ಡೈಲೋಗ್ ಮಾರ್ಪಾಡಾಗಿದೆ. ಹೆಲ್ತ್​ಕೇರ್ ಅನ್ನು ಹೆಚ್ಚು ಸುಸ್ಥಿರವಾಗುವ ನಿಟ್ಟಿನಲ್ಲಿ ಜಾಗತಿಕ ಬದ್ಧತೆಯನ್ನು ಐಎಚ್​ಡಿ ಪ್ರತಿನಿಧಿಸುತ್ತದೆ. ಪ್ರತಿಯೊಂದು ಇನ್ನೋವೇಶನ್ ಕೂಡ ಮಾನವತೆಗೆ ಸೇವೆ ಸಲ್ಲಿಸುತ್ತದೆ. ಪ್ರತಿಯೊಂದು ಜೊತೆಗಾರಿಕೆಯೂ ಕೂಡ ವಿಶ್ವದ ಆರೋಗ್ಯಕ್ಕೆ ಕಾರಣವಾಗುತ್ತದೆ’ ಎಂದು ಡಾ. ಸಂಗೀತಾ ರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ: ಎಐ ಇಂಪ್ಯಾಕ್ಟ್ ಸಮಿಟ್​ಗೆ ಪೂರ್ವಭಾವಿಯಾಗಿ 12 ಸ್ಟಾರ್ಟಪ್​ಗಳೊಂದಿಗೆ ಪ್ರಧಾನಿ ಮೋದಿ ಸಭೆ

ಹೈದರಾಬಾದ್​ನಲ್ಲಿ ನಡೆಯುವ ಐಎಚ್​ಡಿ 2026 ಸಮಾವೇಶದಲ್ಲಿ ಈ ಕೆಳಗಿನ ನಾಲ್ಕು ಕಾನ್ಫರೆನ್ಸ್​ಗಳು ಮತ್ತು ಲರ್ನಿಂಗ್ ಸ್ಟ್ರೀಮ್​ಗಳು ಇರಲಿವೆ:

  1. ಐಪಿಎಸ್​ಸಿ (ಇಂಟರ್ನ್ಯಾಷನಲ್ ಪೇಶೆಂಟ್ ಸೇಫ್ಟಿ ಕಾನ್ಫರೆನ್ಸ್): ಸ್ವಯಂಪ್ರೇರಿತವಾದ ಪ್ರಾಕ್ಟಿಸ್ ಮತ್ತು ಹೆಲ್ತ್​ಕೇರ್ ಸಿಸ್ಟಂಗಳು ರೋಗಿ ಸುರಕ್ಷತೆಯನ್ನು ಹೇಗೆ ಸುಧಾರಿಸುತ್ತವೆ ಎಂಬುದನ್ನು ಸಮಾವೇಶದಲ್ಲಿ ಚರ್ಚಿಸಲಾಗುತ್ತದೆ.
  2. ಎಚ್​ಒಪಿಇ (ಹೆಲ್ತ್​ಕೇರ್ ಆಪರೇಷನ್ಸ್ ಮತ್ತು ಪೇಷೆಂಟ್ ಎಕ್ಸ್​ಪೀರಿಯನ್ಸ್ ಕಾನ್ಫರೆನ್ಸ್): ರೋಗಿಗೆ ಚಿಕಿತ್ಸೆ ನೀಡುವ ಪ್ರತೀ ಮುಖ್ಯ ಘಟ್ಟಗಳಲ್ಲೂ ಕ್ಷಮತೆ, ನಾವೀನ್ಯತೆ ತರುವ ಬಗ್ಗೆ ವಿಧಾನಗಳ ಬಗ್ಗೆ ಚರ್ಚಿಸಲಾಗುತ್ತದೆ.
  3. ಟಿಎಚ್​ಐಟಿ (ಟ್ರಾನ್ಸ್​ಫಾರ್ಮಿಂಗ್ ಹೆಲ್ತ್​ಕೇರ್ ವಿತ್ ಐಟಿ): ಈ ಕಾನ್ಫರೆನ್ಸ್​ನಲ್ಲಿ ವಿಶ್ವಾದ್ಯಂತ ಹೆಲ್ತ್​​ಕೇರ್ ಮತ್ತು ಐಟಿ ಮುಖಂಡರನ್ನು ಒಟ್ಟಿಗೆ ಸೇರಲಿದ್ದಾರೆ. ಅವರ ಅತ್ಯಾಧುನಿಕ ವಿಧಾನಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ.
  4. ಕ್ಲಿನೋವೇಟ್: ಕ್ಯಾನ್ಸರ್ ರೋಗ, ಹೃದ್ರೋಗ, ಮಹಿಳಾ ಆರೋಗ್ಯ, ಲ್ಯಾಬ್ ಮೆಡಿಸಿನ್ ಮೇಲೆ ಕ್ಲಿನಿಕಲ್ ಸಿಎಂಇ ಸೀರೀಸ್ ಇರುತ್ತದೆ. ಇದರಲ್ಲಿ ಹೆಲ್ತ್​ಕೇರ್ ವೃತ್ತಿಪರರು ಮತ್ತು ಸಂಶೋಧಕರಿಗೆ ತಜ್ಞರಿಂದ ಕಲಿಕೆ ನೀಡಲಾಗುತ್ತದೆ.

ಜನವರಿ 30 ಮತ್ತು 31ರಂದು ನಡೆಯುವ ಈ ಸಮಾವೇಶದಲ್ಲಿ ಆರೋಗ್ಯ ಕ್ಷೇತ್ರದ ಹಲವು ಮುಖಂಡರು ಮತ್ತು ನೀತಿ ರೂಪಕರು ಪಾಲ್ಗೊಳ್ಳುತ್ತಾರೆ. ನೈಜರ್ ರಿಪಬ್ಲಿಕ್​ನ ಪಬ್ಲಿಕ್ ಹೆಲ್ತ್ ಸಚಿವ ಕರ್ನಲ್ ಮೇಜರ್ ಗರ್ಬಾ ಹಕಿಮಿ, ಪಪುವಾ ನ್ಯೂಗಿನಿಯಾದ ಆರೋಗ್ಯ ಸಚಿವ ಇಲಿಯಾಸ್ ಕಪವೋರೆ, ಕಾಂಗೋ ರಿಪಬ್ಲಿಕ್​ನ ಆರೋಗ್ಯ ಸಚಿವ ಇಬಾರ, ಬರ್ಮುಡಾದ ಆರೋಗ್ಯ ಸಚಿವ ಕಿಮ್ ವಿಲ್ಸನ್ ಅವರು ಭಾಗವಹಿಸುತ್ತಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಕಾಫಿಗೆ ಯೂರೋಪ್​ನಲ್ಲಿ ಬಲು ಬೇಡಿಕೆ; 2025ರಲ್ಲಿ 2 ಬಿಲಿಯನ್ ಡಾಲರ್ ಮುಟ್ಟಿದ ಭಾರತದ ಒಟ್ಟಾರೆ ಕಾಫಿ ರಫ್ತು

ಆರೋಗ್ಯ ಕ್ಷೇತ್ರದ ಹಲವು ಸಂಘ ಸಂಸ್ಥೆಗಳ ಮುಖ್ಯಸ್ಥರಾದ ಡಾ. ಜೋನಾತನ್ ಪೆರ್ಲಿನ್, ಡಾ. ಕಾರ್ಸ್ಟನ್ ಎಂಜೆಲ್, ಡಾ. ಡೀನ್ ಹೋ, ಡಾ ಅತುಲ್ ಮೋಹನ್ ಕೋಚ್ಚರ್, ಡಾ. ನೀಲಮ್ ಧಿಂಗ್ರ, ಡಾ. ಇಯಾಲ್ ಝಿಮ್ಲಿಕ್ಮನ್ ಮೊದಲಾದವರು ಪಾಲ್ಗೊಳ್ಳುತ್ತಿದ್ದಾರೆ.

ಈ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಅಧಿಕೃತ ವೆಬ್​ಸೈಟ್​ಗಳ ಲಿಂಕ್ ಇಲ್ಲಿದೆ:

internationalhealthdialogue.com/

www.patient-safety.co.in

www.hopeconference.co.in/

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 7:52 pm, Fri, 9 January 26

Source link

2025ರಲ್ಲಿ ಮೋದಿ, ಟ್ರಂಪ್ 8 ಬಾರಿ ಮಾತನಾಡಿದ್ದರು; ಲುಟ್ನಿಕ್ ಹೇಳಿಕೆಗೆ ಭಾರತ ಸ್ಪಷ್ಟನೆ – Kannada News | PM Modi and Trump spoke 8 times in 2025; MEA rejects Howard Lutnicks claim on India US trade deal

ನವದೆಹಲಿ, ಜನವರಿ 9: ಭಾರತದ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಕರೆ ಮಾಡದ ಕಾರಣದಿಂದಲೇ ಕಳೆದ ವರ್ಷ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಮುಂದುವರೆಸಲು ಸಾಧ್ಯವವಾಗಲಿಲ್ಲ ಎಂಬ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಆದರೆ, ಅವರ ಈ ಹೇಳಿಕೆಯನ್ನು ಭಾರತ ನಿರಾಕರಿಸಿದೆ. ಪರಸ್ಪರ ಪ್ರಯೋಜನಕಾರಿ ಒಪ್ಪಂದವನ್ನು ಮಾಡಿಕೊಳ್ಳಲು ಭಾರತ ಸದಾ ಆಸಕ್ತಿ ಹೊಂದಿತ್ತು ಎಂದು ಭಾರತ ಹೇಳಿದೆ.

ಅಮೆರಿಕ ಮತ್ತು ಭಾರತದ ನಡುವಿನ ವ್ಯಾಪಾರ ಒಪ್ಪಂದವನ್ನು ಪೂರ್ಣಗೊಳಿಸಲು ಭಾರತಕ್ಕೆ 3 ವಾರ ಸಮಯ ನೀಡಲಾಗಿತ್ತು. ಆ ಒಪ್ಪಂದವನ್ನು ಮುಕ್ತಾಯಗೊಳಿಸಲು ಮೋದಿ ಟ್ರಂಪ್‌ಗೆ ಕರೆ ಮಾಡಬೇಕಾಗಿತ್ತು. ಆದರೆ, ಭಾರತದ ಕಡೆಯಿಂದ ಯಾವುದೇ ಫೋನ್ ಬರಲಿಲ್ಲ. ಇದು ಟ್ರಂಪ್ ಅಹಂಗೆ ಹೊಡೆತ ನೀಡಿತು ಎಂದು ಲುಟ್ನಿಕ್ ಪಾಡ್‌ಕ್ಯಾಸ್ಟ್‌ಗೆ ತಿಳಿಸಿದ್ದರು. ಇದು ತೀವ್ರ ಚರ್ಚೆಗೆ ಕಾರಣವಾಗಿತ್ತು.

ಇದನ್ನೂ ಓದಿ: ಮೋದಿ ಟ್ರಂಪ್​ಗೆ ಕರೆ ಮಾಡ್ಲಿಲ್ಲ, ಭಾರತ-ಅಮೆರಿಕದ ವ್ಯಾಪಾರ ಒಪ್ಪಂದ ಮುಂದುವರೀಲಿಲ್ಲ: ವಾಣಿಜ್ಯ ಕಾರ್ಯದರ್ಶಿ

ಈ ಬಗ್ಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯೆ ನೀಡಿದ್ದು, ಅಮೆರಿಕ ನೀಡಿದ ಈ ಹೇಳಿಕೆಗಳು ನಿಖರವಾಗಿಲ್ಲ. ಸಮತೋಲಿತ ಮತ್ತು ಪರಸ್ಪರ ಪ್ರಯೋಜನಕಾರಿ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳಲು ಹಲವಾರು ಸುತ್ತಿನ ಮಾತುಕತೆಗಳನ್ನು ನಡೆಸಲಾಗಿತ್ತು. 2025ರಲ್ಲಿ ಪ್ರಧಾನಿ ಮೋದಿ ಮತ್ತು ಟ್ರಂಪ್ 8 ಬಾರಿ ಫೋನ್​ನಲ್ಲಿ ಮಾತನಾಡಿದ್ದಾರೆ ಎಂದು ಜೈಸ್ವಾಲ್ ಹೇಳಿದ್ದಾರೆ.

ಕಳೆದ ವರ್ಷ ಫೆಬ್ರವರಿಯಲ್ಲಿ ಮೋದಿ ಮತ್ತು ಟ್ರಂಪ್ ನಡುವಿನ ಸಭೆಯ ನಂತರ ಭಾರತ ಮತ್ತು ಅಮೆರಿಕದ ನಡುವೆ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆಗಳು ಪ್ರಾರಂಭವಾದವು. ಎರಡು ಪೂರಕ ಆರ್ಥಿಕತೆಗಳ ನಡುವಿನ ಪರಸ್ಪರ ಪ್ರಯೋಜನಕಾರಿ ವ್ಯಾಪಾರ ಒಪ್ಪಂದದಲ್ಲಿ ನಾವು ಆಸಕ್ತಿ ಹೊಂದಿದ್ದೇವೆ. ಅದನ್ನು ಮುಕ್ತಾಯಗೊಳಿಸಲು ಎದುರು ನೋಡುತ್ತಿದ್ದೇವೆ ಎಂದು ಜೈಸ್ವಾಲ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಬಿದ್ದ ಚಿರತೆ, ವಿಲವಿಲ ಒದ್ದಾಡಿ ಪ್ರಾಣಬಿಟ್ಟಿತು – Kannada News | 3 year old leopard dies after being falling in trap in Chikkaballapur

ಚಿಕ್ಕಬಳ್ಳಾಪುರ, (ಜನವರಿ 09): ಕಾಡು ಹಂದಿಗೆ ಹಾಕಲಾಗಿದ್ದ ಉರುಳಿಗೆ ಚಿರತೆ ಸಿಕ್ಕು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕೇತೇನಹಳ್ಳಿ ಅರಣ್ಯದಲ್ಲಿ ನಡೆದಿದೆ. ಕೇತೇನಹಳ್ಳಿ ಅರಣ್ಯದಲ್ಲಿ ಕಾಡುಹಂದಿಗೆ ಹಾಕಿದ್ದ ಉರುಳಿಗೆ 3 ವರ್ಷದ ಹೆಣ್ಣು ಚಿರತೆ ಸಿಲುಕಿ ಒದ್ದಾಡಿದೆ. ಕೂಡಲೇ ಚಿರತೆಯನ್ನು ಉರುಳಿನಿಂದ ಬಿಡಿಸಿ ಚಿಕಿತ್ಸೆ ನೀಡಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ತಜ್ಞರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನೆರವೇರಿಸಲಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬಿಗ್​​ಬಾಸ್ ಕನ್ನಡ 12ರ ವಿನ್ನರ್ ಯಾರು: ಪ್ರಶಾಂತ್ ಸಂಬರ್ಗಿ ಹೇಳಿದ್ದು ಹೀಗೆ – Kannada News | Bigg Boss Kannada 12: Prashanth Sambargi pics his contestant

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss) ರ ಫಿನಾಲೆ ಹತ್ತಿರವಾಗುತ್ತಿದೆ. ಮನೆಯಲ್ಲಿ ಸದ್ಯಕ್ಕೆ ಎಂಟು ಮಂದಿ ಸದಸ್ಯರಿದ್ದಾರೆ. ಗಿಲ್ಲಿ ಸದ್ಯದ ವಿನ್ನರ್ ಎನ್ನಲಾಗುತ್ತಿದೆ. ಆದರೆ ಅಶ್ವಿನಿ, ರಕ್ಷಿತಾ, ಧನುಶ್ ಸಹ ವಿನ್ನರ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದೀಗ ಕೆಲವು ಮಾಜಿ ಸ್ಪರ್ಧಿಗಳು ತಮ್ಮ ಮೆಚ್ಚಿನ ಸ್ಪರ್ಧಿ ಯಾರು? ಈ ಬಾರಿ ಗೆಲ್ಲಬಹುದು ಎಂಬ ಊಹೆಯನ್ನು ಸಹ ಮಾಡುತ್ತಿದ್ದಾರೆ. ಎರಡು ಬಾರಿ ಬಿಗ್​​ಬಾಸ್ ಸ್ಪರ್ಧೆಯಲ್ಲಿ ಭಾಗವಹಿಸಿರುವ ಪ್ರಶಾಂತ್ ಸಂಬರ್ಗಿ ಅವರು ಈ ಬಾರಿ ತಮ್ಮ ಮೆಚ್ಚಿನ ಸ್ಪರ್ಧಿ ಯಾರು ಈ ಬಾರಿ ಯಾರು ಗೆಲ್ಲಬಹುದು ಎಂಬ ಊಹೆಯನ್ನು ಮಾಡಿದ್ದಾರೆ. ಸಂಬರ್ಗಿ ಪ್ರಕಾರ ಈ ಬಾರಿಯ ವಿನ್ನರ್ ಯಾರು? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಲಕ್ಷಾಂತರ ರೂ ಲಂಚ ಆರೋಪ: CPRI ಅಧಿಕಾರಿ ಮನೆ ಮೇಲೆ ಸಿಬಿಐ ದಾಳಿ, ಕೋಟ್ಯಂತರ ರೂ ಪತ್ತೆ – Kannada News | CBI Raids Bengaluru CPRI Official: 3.59 Cr Cash, Foreign Currency Seized

ಬೆಂಗಳೂರು, ಜನವರಿ 09: ಸೆಂಟ್ರಲ್ ಪವರ್ ರಿಸರ್ಚ್‌ ಇನ್ಸ್ಟಿಟ್ಯೂಟ್ ಜಂಟಿ ನಿರ್ದೇಶಕ ರಾಜಾರಾಮ್ ಮೋಹನ್ ರಾವ್ ಚೆನ್ನು ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ (CBI Raid) ಮಾಡಿದ್ದಾರೆ. 9.5 ಲಕ್ಷ ರೂ. ಲಂಚ ಆರೋಪ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದ್ದು, ಈ ವೇಳೆ ಅವರ ನಿವಾಸದಲ್ಲಿ 3.59 ಕೋಟಿ ರೂ ನಗದು ಪತ್ತೆ ಆಗಿದೆ. ವಿದೇಶಿ‌ ಕರೆನ್ಸಿ (Foreign currency) ಮತ್ತು ಚಿನ್ನಾಭರಣಗಳು ಸೇರಿದಂತೆ ಪ್ರಮುಖ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಮುಖ ದಾಖಲೆಗಳು ವಶಕ್ಕೆ

ಲಂಚ ಆರೋಪ ಹಿನ್ನೆಲೆ ದೂರು ದಾಖಲಿಸಿಕೊಂಡು ಬೆಂಗಳೂರಿನಲ್ಲಿರುವ ರಾಜಾರಾಮ್ ಮೋಹನ್ ರಾವ್ ಚೆನ್ನು ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿ ವೇಳೆ ಕೋಟ್ಯಂತರ ರೂ ನಗದು ಸೇರಿದಂತೆ ಯುಎಸ್, ಹಾಂಗ್ ಕಾಂಗ್, ಸಿಂಗಾಪುರ್ ಡಾಲರ್, ಇಂಡೋನೇಷ್ಯಾ ರುಪಿಯಾ,
ಮಲೇಷಿಯನ್ ರಿಂಗಿಟ್, ಯುರೋ ಸೇರಿ ಯುವಾನ್ ವಿದೇಶಿ‌ ಕರೆನ್ಸಿ ಮನೆಯಲ್ಲಿ ಪತ್ತೆ ಆಗಿದೆ. ಜೊತೆಗೆ ಆಭರಣಗಳು ಸೇರಿದಂತೆ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

ರಾಜಾರಾಮ್ ಜೊತೆಗೆ ಅತುಲ್ ಖನ್ನಾ ಬಂಧನ

ಇನ್ನು ರಾಜಾರಾಮ್ ಮೋಹನ್ ರಾವ್ ಜೊತೆಗೆ ಸುಧೀರ್ ಗ್ರೂಪ್ ಆಫ್ ಕಂಪನಿಯ ನಿರ್ದೇಶಕನಾಗಿರುವ ಅತುಲ್ ಖನ್ನಾ ಕೂಡ ಬಂಧನವಾಗಿದೆ. ಸುಧೀರ್ ಗ್ರೂಪ್ ಆಫ್ ಕಂಪನಿ ಉತ್ಪಾದಿಸುವ ವಿದ್ಯುತ್ ಉಪಕರಣಗಳಿಗೆ ಅನುಕೂಲಕರ ಪರೀಕ್ಷಾ ವರದಿಗಳನ್ನ ನೀಡಲು ಲಂಚ ಪಡೆದ ಆರೋಪ ಹಿನ್ನೆಲೆ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

ಶಿವಮೊಗ್ಗ ಮಹಾನಗರ ಪಾಲಿಕೆ ಮೇಲೆ ಲೋಕಾ ದಾಳಿ: ತಬ್ಬಿಬ್ಬಾದ ಸಿಬ್ಬಂದಿ

ಶಿವಮೊಗ್ಗ ಮಹಾನಗರ ಪಾಲಿಕೆ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ಶಿವಮೊಗ್ಗ ನಗರ ಪಾಲಿಕೆ ಕಂದಾಯ ವಿಭಾಗ, ಆಡಳಿತ ವಿಭಾಗ, ನ್ಯಾಯಾಂಗ ವಿಭಾಗ, ಟಪಾಲು ವಿಭಾಗದ ಕಚೇರಿಯಲ್ಲಿ ದಾಖಲೆ ಪರಿಶೀಲನೆ ಮಾಡಲಾಗಿದೆ. ಲೋಕಾಯುಕ್ತ ದಾಳಿ ವೇಳೆ ಮಹಾನಗರ ಪಾಲಿಕೆ ಸಿಬ್ಬಂದಿ ತಬ್ಬಿಬ್ಬಾದರು.

ಇದನ್ನೂ ಓದಿ: ಪ್ರತ್ಯೇಕ ಘಟನೆ: ಭೂಸ್ವಾಧೀನ ಪರಿಹಾರ ನೀಡದಕ್ಕೆ NHAI ಕಚೇರಿ, ಡಿಸಿ ಕಾರು ಜಪ್ತಿ

ವಿಲೇವಾರಿಯಾಗದೇ ಇರುವ ಅರ್ಜಿಗಳನ್ನ ಅಧಿಕಾರಿಗಳು ಪರಿಶೀಲಿಸಿದರು. ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬೆಳಗ್ಗೆ 11 ಗಂಟೆಯಾದರೂ ಅಧಿಕಾರಿಗಳು ಕಚೇರಿಗಳ ಬೀಗ ಹುಡುಕುತ್ತಿರುವುದು ನೋಡಿ ಸಿಬ್ಬಂದಿಯನ್ನ ತರಾಟೆ ತೆಗೆದುಕೊಂಡರು. ಮಹಾನಗರ ಪಾಲಿಕೆ ಸಿಬ್ಬಂದಿ ಐಡಿ ಕಾರ್ಡ್ ಹಾಕದೆ ಇರುವುದಕ್ಕೂ ತರಾಟೆ ತೆಗೆದುಕೊಂಡರು. ದಿನನಿತ್ಯ ನಿರ್ವಹಿಸುವ ಕಾರ್ಯದ ಬಗ್ಗೆ ಮಾಹಿತಿ ಇಲ್ಲದೆ ಸಿಬ್ಬಂದಿ ಪರದಾಡಿದರು. ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ನಡೆಗೆ ಲೋಕಾಯುಕ್ತ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Mysuru: ತವರಿಗೆ ಬಂದ್ರೂ ತಪ್ಪಲಿಲ್ಲ ಪತಿ ಕಾಟ; ಬಡಿದು ಪತ್ನಿಯನ್ನೇ ಕೊಂದ ಕುಡುಕ ಗಂಡ! – Kannada News | Husband Arrested for Brutally Killing Wife Over Domestic Dispute in Nanjangud, Mysuru

ಮೈಸೂರು, ಜನವರಿ 09: ತನ್ನಿಂದ ದೂರವಾಗಿ ತವರು ಮನೆ ಸೇರಿದ್ದ ಪತ್ನಿಯನ್ನು ಪತಿಯೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕಳಲೆ ಗ್ರಾಮದಲ್ಲಿ ನಡೆದಿದೆ. ಸುಧಾ ಮೃತ ಮಹಿಳೆಯಾಗಿದ್ದು, ಮರದ ತುಂಡಿನಿಂದ ಹೊಡೆದು ಮರ್ಡರ್​​ ಮಾಡಿರುವ ಆರೋಪಿ ಮಹೆಶ್​​ನನ್ನು ಪೊಲೀಸರು ಬಂಧಿಸಿದ್ದಾರೆ. ತಾಳಿ ಕಟ್ಟಿದ ಪತಿಯೇ ಪತ್ನಿಯನ್ನು ಕೊಲೆ ಮಾಡಿರೋದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.

ಘಟನೆ ಏನು?

13 ವರ್ಷಗಳ ಹಿಂದೆ ಮಲ್ಲಹಳ್ಳಿ ಗ್ರಾಮದ ಮಹೇಶ್ ಜೊತೆ ವಿವಾಹವಾಗಿದ್ದ ಸುಧಾ ಎರಡು ವರ್ಷಗಳ ಹಿಂದೆ ಪತಿಯಿಂದ ದೂರವಾಗಿದ್ದು, ತನ್ನ ತವರಿಗೆ ಬಂದಿದ್ದಳು. ಕಳಲೆ ಗ್ರಾಮದ ದೊಡ್ಡ ಬೀದಿಯಲ್ಲಿ ತಾಯಿ ಮತ್ತು ಮಕ್ಕಳ ಜೊತೆ ಜೀವನ ನಡೆಸಿಕೊಂಡಿದ್ದಳು. ಆದ್ರೆ , ಮನೆಗೆ ಬಾ ಎಂದು ಸುಧಾಳನ್ನು ಮಹೇಶ ಹಲವು ಬಾರಿ ಒತ್ತಾಯಿಸಿದ್ದ. ಕಳೆದ ವಾರವೂ ಮನೆಗೆ ಹಿಂದಿರುಗಿ ಬಾ ಎಂದು ಕೇಳಿಕೊಂಡಿದ್ದ. ಆದರೆ ಸುಧಾ ಇದಕ್ಕೆ ಒಪ್ಪಿರಲಿಲ್ಲ. ಹೀಗಾಗಿ ಕೋಪಗೊಂಡ ಮಹೇಶ ಪತ್ನಿ ಜೊತೆ ಜಗಳ ಆರಂಭಿಸಿದ್ದಾನೆ. ಗಲಾಟೆ ವಿಕೋಪಕ್ಕೆ ಹೋಗಿ ಮರದ ತುಂಡಿನಿಂದ ಸುಧಾಳ ತಲೆ ಭಾಗಕ್ಕೆ ಹಲ್ಲೆ ನಡೆಸಿದ್ದಾನೆ. ಗಂಡ ಹೊಡೆದ ಏಟಿಗೆ ಸುಧಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಇದನ್ನೂ ಓದಿ: ಕುಟುಂಬಗಳ ನಡುವೆ ಆಸ್ತಿ ವಿವಾದ; ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​

ಮದ್ಯವ್ಯಸನಿಯಾಗಿದ್ದ ಮಹೇಶ್​​

ಆರೋಪಿ ಮಹೇಶ್​​ ಮದ್ಯಕ್ಕೆ ದಾಸನಾಗಿದ್ದ. ಜೊತೆಗೆ ಇತರ ದುಶ್ಚಟಗಳಿಗೆ ಬಲಿಯಾಗಿ ಹೆಂಡತಿಗೆ ಹಿಂಸೆ ಕೊಡುತ್ತಿದ್ದ. ಇಸ್ಪೀಟ್​​ ಆಡಿ ವಿಪರೀತವಾಗಿ ಸಾಲ ಕೂಡ ಮಾಡಿಕೊಂಡಿದ್ದ. ಇದೇ ಕಾರಣಕ್ಕೆ ಸುಧಾ ಗಂಡನ ಮನೆ ಬಿಟ್ಟು ತನ್ನಿಬ್ಬರ ಮಕ್ಕಳ ಜೊತೆ ತವರಿಗೆ ಬಂದಿದ್ದಳು ಎನ್ನಲಾಗಿದೆ. ಇನ್ನು ಘಟನೆ ಬಳಿಕ ಎಸ್ಕೇಪ್​​ ಆಗಿದ್ದ ಮಹೇಶ್​​ನನ್ನು ನಂಜನಗೂಡು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆಗೆ ನಿಖರ ಕಾರಣ ಏನು ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಗದ ಕಾರಣ, ಆ ಬಗ್ಗೆ ತನಿಖೆ ನಡೆಯುತ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಇರಾನ್ ಹಿಂದೆ ಸರಿಯುವುದಿಲ್ಲ, ಟ್ರಂಪ್ ಪದಚ್ಯುತಿ ಖಚಿತ; ಸುಪ್ರೀಂ ನಾಯಕ ಖಮೇನಿ ಪ್ರತಿಜ್ಞೆ – Kannada News | Iran will not back down Supreme Leader Ayatollah Khamenei vows

ಟೆಹ್ರಾನ್, ಜನವರಿ 9: ಇಂದು ಇರಾನ್​ ದೇಶವನ್ನುದ್ದೇಶಿಸಿ ಮಾತನಾಡಿದ ಇರಾನ್​​ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Khamenei), ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಎಚ್ಚರಿಕೆ ನೀಡಿದ್ದಾರೆ. ದುರಹಂಕಾರ ಮತ್ತು ಹೆಮ್ಮೆಯಿಂದ ಕುಳಿತು ಇಡೀ ಪ್ರಪಂಚದ ಮೇಲೆ ತೀರ್ಪು ನೀಡುವ ಟ್ರಂಪ್ ಬಗ್ಗೆ ಹೇಳುವುದಾದರೆ, ಸಾಮಾನ್ಯವಾಗಿ ವಿಶ್ವದ ನಿರಂಕುಶಾಧಿಕಾರಿಗಳು ಮತ್ತು ದುರಹಂಕಾರಿ ಶಕ್ತಿಗಳಾದ ಫರೋ, ನಿಮ್ರೋಡ್, ರೆಜಾ ಖಾನ್, ಮೊಹಮ್ಮದ್ ರೆಜಾ ಮತ್ತು ಅವರಂಥವರು ದುರಹಂಕಾರದ ಉತ್ತುಂಗದಲ್ಲಿದ್ದಾಗಲೇ ಅವರ ಪತನವಾಯಿತು ಎಂಬುದನ್ನು ಟ್ರಂಪ್ ತಿಳಿಯುವುದು ಒಳ್ಳೆಯದು. ಅದೇ ರೀತಿ ಟ್ರಂಪ್ ಅವರನ್ನೂ ಅಧಿಕಾರದಿಂದ ಉರುಳಿಸಲಾಗುತ್ತದೆ ಎಂದು ಹೇಳಿದ್ದಾರೆ.

“ಇಸ್ಲಾಮಿಕ್ ಗಣರಾಜ್ಯವು ಲಕ್ಷಾಂತರ ಜನರ ರಕ್ತದಿಂದ ಅಧಿಕಾರಕ್ಕೆ ಬಂದಿತು. ನಮ್ಮ ದೇಶ ಟ್ರಂಪ್ ರೀತಿಯ ವಿಧ್ವಂಸಕರ ಮುಂದೆ ಎಂದಿಗೂ ಹಿಂದೆ ಸರಿಯುವುದಿಲ್ಲ” ಎಂದು ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಹೇಳಿದ್ದಾರೆ.

ಇದನ್ನೂ ಓದಿ: ಅಮೆರಿಕ ದೊಡ್ಡ ತಪ್ಪು ಮಾಡಿದೆ, ತಕ್ಕ ಶಿಕ್ಷೆ ಅನುಭವಿಸಲಿದೆ: ಇರಾನ್ ಸುಪ್ರೀಂ ನಾಯಕ ಖಮೇನಿ

ಪ್ರತಿಭಟನಾಕಾರರು ಟ್ರಂಪ್ ಅವರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಖಮೇನಿ, “ಪ್ರತಿಭಟನಾಕಾರರು ಟ್ರಂಪ್ ಅವರನ್ನು ಸಂತೋಷಪಡಿಸಲು ಬಯಸುತ್ತಾರೆ. ಟ್ರಂಪ್​ಗೆ ದೇಶವನ್ನು ಹೇಗೆ ನಡೆಸಬೇಕೆಂದು ತಿಳಿದಿದ್ದರೆ ಅವರು ತಮ್ಮದೇ ಆದ ದೇಶವನ್ನು ನಡೆಸುತ್ತಿದ್ದರು. ಬೇರೆ ದೇಶಕ್ಕೆ ನುಗ್ಗುತ್ತಿರಲಿಲ್ಲ” ಎಂದು ಹೇಳಿದ್ದಾರೆ.

ಇರಾನ್‌ನ ಕರೆನ್ಸಿ ರಿಯಾಲ್ ಯುಎಸ್ ಡಾಲರ್ ವಿರುದ್ಧ ದಾಖಲೆಯ ಕನಿಷ್ಠ ಮಟ್ಟವನ್ನು ತಲುಪಿದ ನಂತರ ಡಿಸೆಂಬರ್ 28ರಂದು ಭುಗಿಲೆದ್ದ ಪ್ರತಿಭಟನೆಗಳು ರಾಷ್ಟ್ರವ್ಯಾಪಿ ಹರಡಿವೆ ಮತ್ತು ಹಿಂಸಾತ್ಮಕವಾಗಿವೆ. ಈ ಘಟನೆಯಿಂದ 42 ಜನರು ಸಾವನ್ನಪ್ಪಿದ್ದಾರೆ ಮತ್ತು 2,270ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

‘ದಿ ರಾಜಾ ಸಾಬ್’ಗೂ ಎದುರಾಯ್ತು ಕಂಟಕ: ಅಡಕತ್ತರಿಯಲ್ಲಿ ನಿರ್ಮಾಪಕ – Kannada News | Courts slams Telangana Government for permitting ticket price hike for The Raja Saab

ಪ್ರಭಾಸ್ (Prabhas) ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಇಂದು (ಜನವರಿ 09) ಬಿಡುಗಡೆ ಆಗಿದೆ. ಭಾರಿ ಬಜೆಟ್​​ನಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ನಿನ್ನೆ (ಜನವರಿ 08) ಸಿನಿಮಾದ ಫ್ಯಾನ್ಸ್ ಶೋ ಅನ್ನು ಸಹ ಹಲವು ಚಿತ್ರಮಂದಿರಗಳಲ್ಲಿ ಆಯೋಜನೆ ಮಾಡಲಾಗಿತ್ತು. ಸಿನಿಮಾ ಬಿಡುಗಡೆ ಮುಂಚೆ ಆಂಧ್ರ ಮತ್ತು ತೆಲಂಗಾಣ ಎರಡೂ ಸರ್ಕಾರಗಳಿಂದ ಅನುಮತಿ ಪಡೆದು ಟಿಕೆಟ್ ದರಗಳನ್ನು ಸಹ ಹೆಚ್ಚಳ ಮಾಡಲಾಗಿದ್ದು, ಇದೀಗ ಹೈದರಾಬಾದ್​​ನಲ್ಲಿ ‘ದಿ ರಾಜಾ ಸಾಬ್’ ಸಿನಿಮಾ ಟಿಕೆಟ್ ದರ 450-550 ರೂಪಾಯಿಗಳಿದೆ. ಆದರೆ ಇದೀಗ ಸಿನಿಮಾಕ್ಕೆ ನ್ಯಾಯಾಲಯ ಶಾಕ್ ನೀಡಿದೆ.

ನಿನ್ನೆ ಹರಿದಾಡಿದ್ದ ಸುದ್ದಿಯ ಪ್ರಕಾರ, ತೆಲಂಗಾಣ ನ್ಯಾಯಾಲಯವೇ ‘ದಿ ರಾಜಾ ಸಾಬ್’ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ನೀಡಿದೆ ಎನ್ನಲಾಗಿತ್ತು. ಆದರೆ ಇದೀಗ ತೆಲಂಗಾಣ ಹೈಕೋರ್ಟ್, ‘ದಿ ರಾಜಾ ಸಾಬ್’ ಸಿನಿಮಾದ ಟಿಕೆಟ್ ಹೆಚ್ಚಳವನ್ನು ಟೀಕೆ ಮಾಡಿದ್ದು, ಸರ್ಕಾರಿ ಆದೇಶ 120ರ ಪ್ರಕಾರ ಸಿನಿಮಾದ ಟಿಕೆಟ್ ದರ 350ಕ್ಕೂ ಹೆಚ್ಚಿರಬಾರದು ಎಂದಿದೆ. ಅಲ್ಲದೆ, ‘ದಿ ರಾಜಾ ಸಾಬ್’ ಸಿನಿಮಾಕ್ಕೆ ನೀಡಲಾಗಿರುವ ಅನುಮತಿಯನ್ನು ಹಿಂಪಡೆಯಬೇಕು ಎಂದು ಸರ್ಕಾರಕ್ಕೆ ಸೂಚನೆ ನೀಡಿದೆ.

ಈ ಹಿಂದೆ ‘ಅಖಂಡ 2’ ಸಿನಿಮಾದ ಬಿಡುಗಡೆ ಸಮಯದಲ್ಲಿ ತೆಲಂಗಾಣದಲ್ಲಿ ಸರ್ಕಾರವು ಟಿಕೆಟ್ ಹೆಚ್ಚಳಕ್ಕೆ ಅನುಮತಿ ನೀಡಿತ್ತು, ಅದನ್ನು ಖಂಡಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ನೀಡುವಂತಿಲ್ಲ ಎಂದಿತ್ತು. ಒಂದೊಮ್ಮೆ ಟಿಕೆಟ್ ದರ ಹೆಚ್ಚಿಸಬೇಕಾಗಿದ್ದರೂ 350 ರೂಪಾಯಿಗಳಿಗೆ ಹೆಚ್ಚಿಲ್ಲದಂತೆ ಮಾತ್ರವೇ ಟಿಕೆಟ್ ದರ ಹೆಚ್ಚಿಸಬೇಕು ಎಂದಿತ್ತು. ಆದರೆ ಈಗ ಪ್ರಭಾಸ್ ಸಿನಿಮಾದ ಟಿಕೆಟ್ ದರ 450 ರಿಂದ 510 ರೂಪಾಯಿಗಳಿವೆ.

ಇದನ್ನೂ ಓದಿ:ಪ್ರಭಾಸ್ ಫ್ಯಾನ್ಸ್ ಹುಚ್ಚಾಟ; ‘ದಿ ರಾಜಾ ಸಾಬ್’ ನೋಡಲು ಚಿತ್ರಮಂದಿರಕ್ಕೆ ಮೊಸಳೆ ತಂದ ಅಭಿಮಾನಿ

‘ದಿ ರಾಜಾ ಸಾಬ್’ ಸಿನಿಮಾಕ್ಕೆ ಮೊದಲ ಕೆಲವು ಶೋಗಳಿಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಆದರೆ ಸಿನಿಮಾದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿಲ್ಲ. ಸಿನಿಮಾ ಚೆನ್ನಾಗಿಲ್ಲವೆಂದು ಹಲವು ವಿಮರ್ಶಕರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಸಿನಿಮಾದ ಕಲೆಕ್ಷನ್ ನಾಳೆಯಿಂದ ಕಡಿಮೆ ಆಗುವ ಸಾಧ್ಯತೆ ಇದೆ. ಅಂಥಹುದರಲ್ಲಿ ನ್ಯಾಯಾಲಯ ಸಹ ಟಿಕೆಟ್ ದರವನ್ನು ಕಡಿಮೆಗೊಳಿಸುವಂತೆ ಆದೇಶ ನೀಡಿರುವುದು ಸಿನಿಮಾದ ನಿರ್ಮಾಪಕರಿಗೆ ಭಾರಿ ಹೊಡೆತ ನೀಡುವ ಸಾಧ್ಯತೆ ಇದೆ.

‘ದಿ ರಾಜಾ ಸಾಬ್’ ಸಿನಿಮಾನಲ್ಲಿ ಪ್ರಭಾಸ್ ಜೊತೆಗೆ ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್, ರಿಧಿ ಕುಮಾರ್ ನಾಯಕಿಯರಾಗಿ ನಟಿಸಿದ್ದಾರೆ. ಸಿನಿಮಾನಲ್ಲಿ ಸಂಜಯ್ ದತ್, ಬೊಮನ್ ಇರಾನಿ ಅವರುಗಳು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಅನ್ನು ಮಾರುತಿ ನಿರ್ದೇಶನ ಮಾಡಿದ್ದು, ಪೀಪಲ್ಸ್ ಮೀಡಿಯಾ ಫ್ಯಾಕ್ಟರ್ ನಿರ್ಮಾಣ ಮಾಡಿದೆ. ಇದು ಹಾರರ್ ಕಾಮಿಡಿ ಜಾನರ್​​ನ ಸಿನಿಮಾ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

WPL 2026: ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ಪರ 6 ಆಟಗಾರ್ತಿಯರು ಪಾದಾರ್ಪಣೆ – Kannada News | WPL 2026: MI vs RCB Opening Match Toss! RCB Bowls First in Navi Mumbai

ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ನಾಲ್ಕನೇ ಸೀಸನ್ ಜನವರಿ 9 ರಿಂದ ಪ್ರಾರಂಭವಾಗುತ್ತಿದೆ. ಈ ಆವೃತ್ತಿಯ ಉದ್ಘಾಟನಾ ಪಂದ್ಯ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸುತ್ತಿದೆ. ಹರ್ಮನ್‌ಪ್ರೀತ್ ಕೌರ್ ಮುಂಬೈ ತಂಡವನ್ನು ಮುನ್ನಡೆಸುತ್ತಿದ್ದರೆ, ಸ್ಮೃತಿ ಮಂಧಾನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಮುಂಬೈ ಮತ್ತು ಆರ್‌ಸಿಬಿ ಎರಡೂ ಚಾಂಪಿಯನ್ ತಂಡಗಳಾಗಿದ್ದು, ಮುಂಬೈ 2 ಬಾರಿ ಟ್ರೋಫಿ ಗೆದ್ದಿದ್ದರೆ, ಆರ್‌ಸಿಬಿ 1 ಬಾರಿ ಗೆದ್ದಿದೆ. ಇನ್ನು ಈ ಉದ್ಘಾಟನಾ ಪಂದ್ಯದ ಟಾಸ್ ಕೂಡ ನಡೆದಿದ್ದು, ಟಾಸ್ ಗೆದ್ದ ಆರ್​ಸಿಬಿ ನಾಯಕಿ ಸ್ಮೃತಿ ಮಂಧಾನ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

ಮೇಲೆ ಹೇಳಿದಂತೆ 2026 ರ ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಟಾಸ್ ಗೆದ್ದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದೆ. ಮುಂಬೈನಲ್ಲಿ ಇಬ್ಬನಿ ಪ್ರಮುಖ ಪಾತ್ರವಹಿಸುವುದರಿಂದ ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್‌ ಮಾಡುವ ತಂಡಕ್ಕೆ ಅನುಕೂಲಕರವಾಗಿರುತ್ತದೆ. ಹೀಗಾಗಿ ಮೊದಲು ಬೌಲಿಂಗ್ ಮಾಡುವುದಾಗಿ ಮಂಧಾನ ಹೇಳಿದರು. ಇತ್ತ ಹರ್ಮನ್‌ಪ್ರೀತ್ ಕೂಡ ಟಾಸ್ ಗೆದ್ದಿದ್ದರೆ ತಾವು ಕೂಡ ಮೊದಲು ಬೌಲಿಂಗ್ ಮಾಡುವುದಾಗಿ ಹೇಳಿದರು. ಟಾಸ್ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದ್ದು, ಆರ್​ಸಿಬಿ ತಂಡದ ಪರ ಆರು ಆಟಗಾರ್ತಿಯರು ಪದಾರ್ಪಣೆ ಮಾಡುತ್ತಿದ್ದಾರೆ ಎಂದರು.

Source link

ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ – Kannada News | Dhruvanth overacting in front of Ashwini Gowda in Bigg Boss Kannada Season 12

ಬಿಗ್ ಬಾಸ್ ಮನೆಯಲ್ಲಿ ಧ್ರುವಂತ್ (Dhruvanth) ಅವರು ಬಗೆಬಗೆಯ ಎಕ್ಸ್​ಪ್ರೆಷನ್ ನೀಡುವ ಮೂಲಕ ಹೈಲೈಟ್ ಆಗುತ್ತಾರೆ. ರಕ್ಷಿತಾ ಶೆಟ್ಟಿಯ ಹಾವಭಾವವನ್ನು ಧ್ರುವಂತ್ ಅನುಕರಣೆ ಮಾಡುತ್ತಾರೆ. ಈಗ ಅಶ್ವಿನಿ ಗೌಡ ಎದುರಲ್ಲಿ ಧ್ರುವಂತ್ ಬೇಕಂತಲೇ ಓವರ್ ಆ್ಯಕ್ಟಿಂಗ್ ಮಾಡಿದ್ದಾರೆ. ಸದ್ಯಕ್ಕೆ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋನಲ್ಲಿ 8 ಜನರು ಉಳಿದುಕೊಂಡಿದ್ದಾರೆ. ಶೀಘ್ರದಲ್ಲೇ ಇಬ್ಬರ ಎಲಿಮಿನೇಷನ್ ಆಗಲಿದೆ. ಆಗ ಕೇವಲ 6 ಜನರು ಉಳಿದುಕೊಳ್ಳುತ್ತಾರೆ. ಈ ವಿಷಯವನ್ನು ಧ್ರುವಂತ್​​ಗೆ ಅಶ್ವಿನಿ ಗೌಡ (Ashwini Gowda) ಹೇಳಿದ್ದಾರೆ. ಅದನ್ನು ಕೇಳಿ ಧ್ರುವಂತ್ ಅವರು ಕಣ್ಣೀರು ಹಾಕಿದಂತೆ ನಟಿಸಿದ್ದಾರೆ. ಜನವರಿ 9ರ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link