All posts by nagaraj11081993

Video: ಟೊಮೊಟೊ ಕೊಡಲ್ಲ ಎಂದಿದ್ದಕ್ಕೆ ಮನೆಯೊಡತಿಗೆ ಬೆದರಿಕೆ ಹಾಕಿದ ಸಾಕು ಗಿಳಿ – Kannada News | Parrot threatens owner with calling police

ಗಿಳಿ (Parrot) ಬುದ್ದಿವಂತ ಪಕ್ಷಿಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಮನುಷ್ಯರಂತೆ ಮಾತನಾಡಬಲ್ಲದು ಕೂಡ. ಹೀಗಾಗಿ ಎಲ್ಲರೂ ಈ ಗಿಳಿಯನ್ನು ಸಾಕಲು ಇಷ್ಟ ಪಡುತ್ತಾರೆ. ಆದರೆ ಇಲ್ಲೊಂದು ಸಾಕು ಗಿಳಿಯೂ ಮನೆ ಒಡತಿಗೆ (owner) ಬೆದರಿಕೆ ಹಾಕಿದೆ. ಟೊಮೊಟೊ ಕೊಡದಿದ್ದರೆ ಪೊಲೀಸರನ್ನು ಕರೆಯುತ್ತೇನೆ ಎಂದು ಹೆದರಿಸಿದೆ. ಗಿಳಿಯ ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

@aalianadim ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಮನೆಯ ಸಾಕು ಗಿಳಿಯದ್ದಾಗಿದೆ. ಪಂಜರದಲ್ಲಿರುವ ಗಿಳಿಯೂ ಮಹಿಳೆಯ ಬಳಿ ಟೊಮೆಟೊ ಕೇಳುತ್ತಿರುವುದನ್ನು ಕಾಣಬಹುದು. ಆದರೆ ಮನೆಯೊಡತಿಯೂ ನಿರಾಕರಿಸಿದ್ದಕ್ಕೆ, ಕೋಪಗೊಂಡ ಗಿಳಿ ಪೊಲೀಸರಿಗೆ ಕರೆ ಮಾಡುವುದಾಗಿ ಬೆದರಿಕೆ ಹಾಕಲು ಪ್ರಾರಂಭಿಸುತ್ತದೆ. ನಾನು ಪೊಲೀಸರನ್ನು ಕರೆಯುತ್ತೇನೆ ಎಂದೇಳಿ ಪೊಲೀಸ್ ಪೊಲೀಸ್ ಪೊಲೀಸ್ ಎಂದು ಜೋರಾಗಿ ಕೂಗುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ:ಹಸಿದ ಶ್ವಾನಕ್ಕೆ ಆಹಾರ ನೀಡಿ ಹಸಿವು ನೀಗಿಸಿದ ಪುಣ್ಯಾತ್ಮ

ಜನವರಿ 7 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಹದಿನಾಲ್ಕು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಗಿಳಿಗಳು ಮಾತನಾಡುವಾಗ ತುಂಬಾ ಮುದ್ದಾಗಿ ಕಾಣುತ್ತವೆ ಎಂದಿದ್ದಾರೆ. ಮತ್ತೊಬ್ಬರು ಗಿಳಿಗೂ ಹೆದರುವ ಕಾಲ ಬಂದಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಮಹಿಳೆಗೆ ಬ್ಲಾಕ್ ಮೇಲ್ ಮಾಡುತ್ತಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:13 pm, Thu, 8 January 26

Source link

ಚಿಕ್ಕಮಗಳೂರು: ಮುತ್ತಿಗೆಪುರ ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನಯಾನ ಭಾಗ್ಯ! ಫ್ಲೈಟ್​ನಲ್ಲಿ ಚಿಣ್ಣರ ಸಂಭ್ರಮ ನೋಡಿ – Kannada News | Chikkamagaluru Government School Students Take First Flight Trip, Muttigepura Kids’ Joy Goes Viral

ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರವಾಸ ಕೈಗೊಂಡ ಈ ಮಕ್ಕಳು, ಫ್ಲೈಟ್‌ನಲ್ಲಿ ಪ್ರಯಾಣಿಸುವ ಮೂಲಕ ಜೀವನದಲ್ಲಿ ಮರೆಯಲಾಗದ ಅನುಭವ ಪಡೆದುಕೊಂಡಿದ್ದಾರೆ. ವಿಮಾನದಲ್ಲಿ ಕುಳಿತು ಹಾರಾಟದ ಸಂಭ್ರಮ ಅನುಭವಿಸಿದ ಪುಟ್ಟ ಮಕ್ಕಳ ಮುಖದಲ್ಲಿ ಕಂಡ ಖುಷಿ ನೋಡುವುದೇ ಒಂದು ಹಬ್ಬದಂತಿತ್ತು. ಬೆಂಗಳೂರಿಗೆ ಫ್ಲೈಟ್ ಮೂಲಕ ತೆರಳಿ, ಅಲ್ಲಿಂದ ಬಸ್‌ನಲ್ಲಿ ಹಿಂತಿರುಗುವಂತೆ ಪ್ರವಾಸವನ್ನು ಯೋಜಿಸಲಾಗಿತ್ತು.

ಈ ವಿಶಿಷ್ಟ ಪ್ರವಾಸ ಶಿಕ್ಷಕರು, ಪೋಷಕರು, ದಾನಿಗಳು ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಅವರ ಸಹಕಾರದಿಂದ ಸಾಧ್ಯವಾಗಿದೆ. ಮಕ್ಕಳಿಗೆ ಪುಸ್ತಕದ ಪಾಠಕ್ಕಷ್ಟೇ ಸೀಮಿತವಲ್ಲದೆ, ಜೀವನ ಪಾಠವನ್ನೂ ಕಲಿಸಬೇಕು ಎಂಬ ಉದ್ದೇಶದಿಂದ ಈ ಪ್ರವಾಸವನ್ನು ಆಯೋಜಿಸಲಾಗಿದೆ ಎಂದು ಶಿಕ್ಷಕರು ತಿಳಿಸಿದ್ದಾರೆ.

ಸರ್ಕಾರಿ ಶಾಲೆಗಳು ಎಂದರೆ ಹಿಂದುಳಿದವೆಂಬ ಧೋರಣೆಗೆ ತುತ್ತು ಬೀಳುವವರಿಗೂ ಈ ಶಾಲೆ ಒಂದು ಮಾದರಿಯಾಗಿದೆ. ‘ಸರ್ಕಾರಿ ಶಾಲೆ ಅಂದ್ರೆ ಸುಮ್ನೇನಾ?’ ಎಂಬ ಪ್ರಶ್ನೆಗೆ ಮುತ್ತಿಗೆಪುರದ ಈ ಶಾಲೆ ತನ್ನ ಕಾರ್ಯದ ಮೂಲಕಲೇ ಗಟ್ಟಿಯಾದ ಉತ್ತರ ಕೊಟ್ಟಿದೆ.

ಈ ಹಿಂದೆ, ಕೊಪ್ಪಳ ಜಿಲ್ಲೆಯ ಬಹದ್ದೂರಬಂಡಿ ಗ್ರಾಮದ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯ ಬೀರಪ್ಪ ಅಂಡಗಿ ಸ್ವಂತ ಖರ್ಚಿನಲ್ಲಿ 24 ವಿದ್ಯಾರ್ಥಿಗಳನ್ನು ಜಿಂದಾಲ್​​ ಏರ್​​ಪೋರ್ಟ್​​ನಿಂದ ವಿಮಾನದಲ್ಲಿ ಬೆಂಗಳೂರಿಗೆ ಪ್ರವಾಸಕ್ಕೆ ಕರೆದೊಯ್ದು ಸುದ್ದಿಯಾಗಿದ್ದರು. ಶಿಕ್ಷಕರು, ಎಸ್​​ಡಿಎಂಸಿ ಸದಸ್ಯರು, ಬಿಸಿಯೂಟ ಅಡುಗೆ ತಯಾರಕರು ಸೇರಿ ಒಟ್ಟು 40 ಜನರು ವಿಮಾನ ಪ್ರಯಾಣ ಮಾಡಿದ್ದರು.

ಒಟ್ಟಿನಲ್ಲಿ, ಖಾಸಗಿ ಶಾಲೆಯವರಿಗೂ ಅಚ್ಚರಿ ಮೂಡಿಸಿದ ಮುತ್ತಿಗೆಪುರದ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳ ವಿಮಾನ ಪ್ರವಾಸ, ಸರ್ಕಾರಿ ಶಾಲೆಗಳ ಸಾಮರ್ಥ್ಯಕ್ಕೆ ಹೊಸ ಅರ್ಥ ನೀಡಿದೆ. ಕಾಫಿನಾಡಿನ ಕುಗ್ರಾಮದಿಂದ ಹಾರಿದ ಈ ಪುಟ್ಟ ಕನಸುಗಳು, ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೆ ಹಾರಲಿ ಎಂಬುದೇ ಎಲ್ಲರ ಆಶಯ.

Published On – 12:35 pm, Thu, 8 January 26

Source link

ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್​​ ನಡುವೆ ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!

ಬೆಂಗಳೂರು, ಜನವರಿ 08: ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಯ ಗಡುವು ಮತ್ತೆ ಮುಂದಕ್ಕೆ ಹೋಗಿದೆ. ಪಂಚರಾಜ್ಯ ಚುನಾವಣೆ ಮುಗಿಯುವವರೆಗೂ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳದಿರಲು ಹೈಕಮಾಂಡ್​​ ನಿರ್ಧರಿಸಿದೆ ಎನ್ನಲಾಗಿದೆ. ಇತ್ತೀಚೆಗೆ, ಸಿಎಂ ಸಿದ್ದರಾಮಯ್ಯ ‘ಎಷ್ಟು ದಿನ ಇರುತ್ತೇವೋ ಗೊತ್ತಿಲ್ಲ’ ಎಂದು ಹೇಳಿದ್ದರೆ, ಡಿ.ಕೆ. ಶಿವಕುಮಾರ್ ‘ಕೊಟ್ಟ ಮಾತಿಗೆ’ ಬದ್ಧರಾಗಿರಬೇಕು ಎಂದು ಹೇಳಿರೋದು ನಾನಾ ಚರ್ಚೆಗಳಿಗೆ ಕಾರಣವಾಗಿತ್ತು. ದೇವರಾಜು ಅರಸು ಅವರ ದಾಖಲೆಯನ್ನೂ ಸಿಎಂ ಆಗಿ ಸಿದ್ದರಾಮಯ್ಯ ಮುರಿದಿರುವ ಕಾರಣ, ಅಧಿಕಾರ ಹಸ್ತಾಂತರ ವಿಚಾರ ಮತ್ತೆ ಮುನ್ನೆಲೆಗೆ ಬಂದಿತ್ತು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪ್ರತ್ಯೇಕ ಘಟನೆ: ಬಸ್​​ ಅಪಘಾತದಲ್ಲಿ ಹಲವರಿಗೆ ಗಾಯ; ಓರ್ವ ವಿದ್ಯಾರ್ಥಿ ಸ್ಥಿತಿ ಗಂಭೀರ – Kannada News | Bus Accidents: 22 Injured Across Karnataka, Student Critical

ಅಪಘಾತದಲ್ಲಿ ವಿದ್ಯಾರ್ಥಿ ಕೈ ಛಿದ್ರ.

ಉತ್ತರ ಕನ್ನಡ, ಜನವರಿ 08: ರಾಜ್ಯದ ವಿವಿಧೆಡೆ ಸಂಭವಿಸಿದ ಬಸ್​​ ಅಪಘಾತದಲ್ಲಿ ಒಟ್ಟು 22 ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಉತ್ತರ ಕನ್ನಡದಲ್ಲಿ ಮರಕ್ಕೆ ಬಸ್​​ ಡಿಕ್ಕಿಯಾಗಿ 20 ಜನ ಗಾಯಗೊಂಡಿದ್ದರೆ, ಸೈಕಲ್​​ನಲ್ಲಿ ತೆರಳುತ್ತಿದ್ದ ವೇಳೆ ಬಸ್​​ ಗುದ್ದಿದ ಪರಿಣಾಮ ಕಲಬುರಗಿಯಲ್ಲಿ ವಿದ್ಯಾರ್ಥಿಯ ಕೈ ಸಂಪೂರ್ಣ ಛಿದ್ರವಾಗಿದೆ. ಬಸ್​​ ಡಿಕ್ಕಿಯಾಗಿ ಹಾವೇರಿಯಲ್ಲೂ ಓರ್ವ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿವೆ.

ಓವರ್‌ಟೇಕ್ ವೇಳೆ ಮರಕ್ಕೆ ಬಸ್​ ಡಿಕ್ಕಿ

ಮರಕ್ಕೆ ಗುದ್ದಿದ ಬಸ್​​

ಓವರ್‌ಟೇಕ್ ವೇಳೆ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಬಸ್​ ಗುದ್ದಿದ ಪರಿಣಾಮ 20ಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಬಾನಸಗೇರಿ ಗ್ರಾಮದ ಮೊರಾರ್ಜಿ ಹಾಸ್ಟೆಲ್ ಬಳಿ ನಡೆದಿದೆ. ಕೆಎಸ್​ಆರ್​ಟಿಸಿ ಬಸ್ ಚಾಲಕ, 8 ವಿದ್ಯಾರ್ಥಿನಿಯರು, ಇಬ್ಬರು ಶಾಲಾ ಮಕ್ಕಳು, ಇಬ್ಬರು ಮಹಿಳೆಯರು ಮತ್ತು ನಿರ್ವಾಹಕ ಸೇರಿ ಹಲವರು ಘಟನೆಯಲ್ಲಿ ಗಾಯಗೊಂಡಿದ್ದಾರೆ. ಓವರ್‌ಟೇಕ್ ಮಾಡುವ ಸಂದರ್ಭ ಮುಂದಿನಿಂದ ಕಾರು ಬಂದ ಹಿನ್ನೆಲೆ ಅಪಘಾತ ತಪ್ಪಿಸಲು ಚಾಲಕ ಯತ್ನಿಸಿದ್ದಾನೆ. ಈ ವೇಳೆ ನಿಯಂತ್ರಣ ಕಳೆದುಕೊಂಡ ಬಸ್​​ ಮರಕ್ಕೆ ಹೋಗಿ ಗುದ್ದಿದೆ. ಗಾಯಾಳುಗಳನ್ನು ಹಳಿಯಾಳ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ಇದನ್ನೂ ಓದಿ: ಊಟಿ ಬಳಿ 120 ಅಡಿ ಆಳಕ್ಕೆ ಬಿದ್ದ ಮಿನಿಬಸ್; 32 ಜನರಿಗೆ ಗಾಯ

ವಿದ್ಯಾರ್ಥಿ ಬಲಗೈ ಛಿದ್ರ

ಸೈಕಲ್​​ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿಗೆ ಕೆಕೆಆರ್​ಟಿಸಿ ಬಸ್​ ಡಿಕ್ಕಿಯಾಗಿರುವ ಘಟನೆ ಕಲಬುರಗಿಯ ಜೇವರ್ಗಿ ಪಟ್ಟಣದ ವಿಜಯಪುರ ರಸ್ತೆಯಲ್ಲಿ ನಡೆದಿದೆ. ಘಟನೆಯಲ್ಲಿ ವಿದ್ಯಾರ್ಥಿ ಇರ್ಫಾನ್ ದವಲಸಾಬ್(15)ಗೆ ಗಂಭೀರ ಗಾಯಗೊಂಡಿದ್ದು, ವಿದ್ಯಾರ್ಥಿ ಅಬ್ದುಲ್ ಕಲಾಂ ಆಜಾದ್ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ. ಘಟನೆ ಬಗ್ಗೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರೀಕ್ಷೆಗೆ ಹೊರಟ್ಟಿದ್ದವನಿಗೆ ಗುದ್ದಿದ ಬಸ್​

ಬಸ್​​ ಗುದ್ದಿದ ಪರಿಣಾಮ ಪರೀಕ್ಷೆ ಬರೆಯಲು ಕಾಲೇಜಿಗೆ ಹೊರಟಿದ್ದ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾವೇರಿ ನಗರ ಬಸ್ ನಿಲ್ದಾಣದಲ್ಲಿ ನಡೆದಿದೆ. ಹಾವೇರಿ ತಾಲ್ಲೂಕಿನ ಕೊಣನತಂಬಿಗಿ ಗ್ರಾಮದ ವಿಧ್ಯಾರ್ಥಿ ರೋಹಿತ್ ಕೆಸರಳ್ಳಿ ಬೆನ್ನಿಗೆ ಮತ್ತು ತಲೆಗೆ ಘಟನೆಯಲ್ಲಿ ಗಂಭೀರ ಗಾಯಗಳಾಗಿವೆ. ನಗರದ ಹಾಸ್ಟೆಲ್​​ನಲ್ಲಿ ವಾಸವಿದ್ದು, ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈತ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಗಾಯಾಳುವಿಗೆ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 1:43 pm, Thu, 8 January 26

Source link

ಈ ಕನ್ನಡದ ನಟನಿಗೆ ಸಿಕ್ಕಿತ್ತು ‘ಟಾಕ್ಸಿಕ್’ನಲ್ಲಿ ನಟಿಸುವ ಅವಕಾಶ: ನಿರಾಕರಿಸಿದ್ದೇಕೆ? – Kannada News | Gulshan Devaiah was offered character in Toxic movie but he rejected it

ಯಶ್ (Yash) ನಟಿಸಿರುವ ‘ಟಾಕ್ಸಿಕ್’ ಸಿನಿಮಾ ಭಾರತದ ಅತಿ ಹೆಚ್ಚು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಸಿನಿಮಾವನ್ನು ಹಾಲಿವುಡ್​ ಗುಣಮಟ್ಟದಲ್ಲಿ ನಿರ್ಮಾಣ ಮಾಡಲಾಗಿದ್ದು, ಇಂದು (ಜನವರಿ 08) ಬಿಡುಗಡೆ ಆಗಿರುವ ಟೀಸರ್​​ನಿಂದ ಇದು ಖಾತ್ರಿ ಆಗುತ್ತಿದೆ. ‘ಟಾಕ್ಸಿಕ್’ ಸಿನಿಮಾನಲ್ಲಿ ಖ್ಯಾತ ನಟ-ನಟಿಯರ ದಂಡೇ ಇದೆ. ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಅವರುಗಳು ಜೊತೆಗೆ ಕೆಲವು ಹಾಲಿವುಡ್, ಬಾಲಿವುಡ್​​ನ ಜನಪ್ರಿಯ ನಟ-ನಟಿಯರು ಸಹ ಇದ್ದಾರೆ. ಈ ಸಿನಿಮಾನಲ್ಲಿ ನಟಿಸುವ ಅವಕಾಶ ಕರ್ನಾಟಕ ಮೂಲದ ನಟರೊಬ್ಬರಿಗೆ ಸಿಕ್ಕಿತ್ತು ಆದರೆ ಅವಕಾಶ ನಿರಾಕರಿಸಿದ್ದಾರೆ ಆ ನಟ. ಕಾರಣವೇನು?

ಗುಲ್ಷನ್ ದೇವಯ್ಯ, ಮೂಲತಃ ಬೆಂಗಳೂರಿನವರು. ಆದರೆ ಅವರು ಹೆಚ್ಚಾಗಿ ಮಿಂಚುತ್ತಿರುವುದು ಬಾಲಿವುಡ್ ಸಿನಿಮಾಗಳಲ್ಲಿ. ಇತ್ತೀಚೆಗೆ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆದ ‘ಕಾಂತಾರ: ಚಾಪ್ಟರ್ 1’ ಸಿನಿಮಾನಲ್ಲಿ ಕುಲಶೇಖರ ಪಾತ್ರದಲ್ಲಿ ನಟಿಸಿರುವ ಗುಲ್ಷನ್ ದೇವಯ್ಯ, ಹೆಚ್ಚು ನಟಿಸಿರುವುದು ಹಿಂದಿ ಸಿನಿಮಾ ಮತ್ತು ವೆಬ್ ಸರಣಿಗಳಲ್ಲಿ. ಇವರಿಗೆ ‘ಟಾಕ್ಸಿಕ್’ ಸಿನಿಮಾನಲ್ಲಿ ಅವಕಾಶ ಅರಸಿ ಬಂದಿತ್ತು. ಆದರೆ ಅವರು ನಿರಾಕರಿಸಿದರು. ಅದಕ್ಕೆ ಕಾರಣವನ್ನೂ ಸಹ ಗುಲ್ಷನ್ ತಿಳಿಸಿದ್ದಾರೆ.

ಗುಲ್ಷನ್ ದೇವಯ್ಯ

ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಗುಲ್ಷನ್ ದೇವಯ್ಯ, ‘ಬಹಳ ಹಿಂದೆಯೇ ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸುವಂತೆ ಆಫರ್ ಬಂದಿತ್ತು. ಸಿನಿಮಾದ ನಿರ್ದೇಶಕಿ ಗೀತು ಮೋಹನ್​​ದಾಸ್ ಅವರು ಬಹಳ ಸಮಯ ನನ್ನೊಂದಿಗೆ ಮಾತುಕತೆ ನಡೆಸಿದರು. ನಿರ್ದಿಷ್ಟ ಪಾತ್ರದಲ್ಲಿ ನಾನೇ ನಟಿಸಲಿ ಎಂಬುದು ಅವರ ಇಚ್ಛೆ ಆಗಿತ್ತು. ಆದರೆ ಹಲವು ಕಾರಣಗಳಿಂದಾಗಿ ಆ ಸಿನಿಮಾನಲ್ಲಿ ನಾನು ನಟಿಸಲಿಲ್ಲ’ ಎಂದಿದ್ದಾರೆ ಗುಲ್ಷನ್.

ಇದನ್ನೂ ಓದಿ:ಫ್ಯಾನ್ಸ್ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ: ಹುಟ್ಟುಹಬ್ಬಕ್ಕೂ ಮುನ್ನ ಯಶ್ ಸಂದೇಶ

‘ಟಾಕ್ಸಿಕ್’ ಸಿನಿಮಾ ಒಪ್ಪಿಕೊಳ್ಳದಿರಲು ಮುಖ್ಯ ಕಾರಣ ಡೇಟ್ಸ್​ ಸಮಸ್ಯೆ. ಅವರು (ಟಾಕ್ಸಿಕ್) ಬಹಳ ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಅವರ ಶೆಡ್ಯೂಲ್ ಅವಧಿ ದೊಡ್ಡದು ಮತ್ತು ಅವರು ಅವರು ಹಲವು ಹಂತಗಳಲ್ಲಿ ಚಿತ್ರೀಕರಣ ಮಾಡುತ್ತಿದ್ದರು, ನಾನು ಅದಾಗಲೇ ಒಂದು ದೊಡ್ಡ ಸಿನಿಮಾ ಒಪ್ಪಿಕೊಂಡಿದ್ದೆ, ಅದರ ಜೊತೆಗೆ ಬೇರೆ ಕೆಲವು ಸಿನಿಮಾಗಳು ಸಹ ಇದ್ದವು ಹಾಗಾಗಿ ನನಗೆ ‘ಟಾಕ್ಸಿಕ್’ ಒಪ್ಪಿಕೊಳ್ಳಲು ಆಗಲಿಲ್ಲ’ ಎಂದಿದ್ದಾರೆ ಗುಲ್ಷನ್ ದೇವಯ್ಯ.

‘ಟಾಕ್ಸಿಕ್’ ಸಿನಿಮಾಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ಸಿನಿಮಾ ನಿರ್ದೇಶನ ಮಾಡಿರುವುದು ಗೀತು ಮೋಹನ್​​ದಾಸ್, ಸಂಗೀತ ರವಿ ಬಸ್ರೂರು ಅವರದ್ದು. ಬಂಡವಾಳ ಹೂಡಿರುವುದು ಕೆವಿಎನ್ ಮತ್ತು ಯಶ್ ಅವರ ಮಾನ್​ಸ್ಟರ್ ಮೈಂಡ್ಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 1:27 pm, Thu, 8 January 26

Source link

Pakistan: ಲಕ್ಷ ರೂ ಸಂಬಳ ಪಡೆಯುತ್ತಿರುವ ಪಾಕಿಸ್ತಾನೀಯರ ಸಂಖ್ಯೆ ಎಷ್ಟು ಗೊತ್ತಾ? – Kannada News | Very few Pakistanis getting monthly salary of over Rs 1 lakh, here what income tax data says

ನವದೆಹಲಿ, ಜನವರಿ 8: ಪಾಕಿಸ್ತಾನದಲ್ಲಿ (Pakistan) ಆದಾಯ ತೆರಿಗೆ ಪಾವತಿದಾರರ ಸಂಖ್ಯೆ ಬಹಳ ಕಡಿಮೆ ಇದೆ. ಒಂದು ಅಂದಾಜು ಪ್ರಕಾರ ಅಲ್ಲಿ ನೊಂದಾಯಿತ ತೆರಿಗೆ ಪಾವತಿದಾರರ ಸಂಖ್ಯೆ ಸುಮಾರು 60 ಲಕ್ಷ ಆಸುಪಾಸು ಇರಬಹುದು. ಅದರಲ್ಲಿ ಅಧಿಕ ಆದಾಯ ತೋರಿಸಿರುವವರ ಸಂಖ್ಯೆ ಬಹಳ ಕಡಿಮೆ. ಭಾರತೀಯ ರುಪಾಯಿ ಲೆಕ್ಕದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಾಸಿಕ ಆದಾಯ ಹೊಂದಿರುವ ಪಾಕಿಸ್ತಾನೀಯರ ಸಂಖ್ಯೆ 4 ಲಕ್ಷದಿಂದ 10 ಲಕ್ಷದಷ್ಟಿರಬಹುದು ಎನ್ನಲಾಗಿದೆ.

ಪಾಕಿಸ್ತಾನದಲ್ಲಿ ಸರಾಸರಿ ಸಂಬಳ 39,000 ಪಿಕೆಆರ್ ಇದೆ. ಭಾರತೀಯ ರುಪಾಯಿಯಲ್ಲಿ ಪಾಕಿಸ್ತಾನದ ಸರಾಸರಿ ಮಾಸಿಕ ಸಂಬಳ ಸುಮಾರು 12,500 ರೂ ಆಗುತ್ತದೆ. ಭಾರತದ ಒಂದು ಲಕ್ಷ ರೂ ಪಾಕಿಸ್ತಾನದ 3.30 ಲಕ್ಷ ರೂಗೆ ಸಮ. ಪ್ರತೀ ಸಾವಿರ ಮಂದಿಯಲ್ಲಿ ಮೂರ್ನಾಲ್ಕು ಜನರು ಮಾತ್ರ ಇಷ್ಟು ಸಂಬಳ ಪಡೆಯುತ್ತಾರೆ.

ಇದನ್ನೂ ಓದಿ: ಈ ಬಾರಿ ಬಹಳ ಜನರಿಗೆ ಸಿಕ್ಕಿಲ್ಲ ಇನ್ಕಮ್ ಟ್ಯಾಕ್ಸ್ ರೀಫಂಡ್; ಏನು ಕಾರಣ?

ಪಾಕಿಸ್ತಾನದಲ್ಲಿ ದೊಡ್ಡ ಸಂಬಳ ಪಡೆಯುವವರ ಸಂಖ್ಯೆ ಇಷ್ಟೆಯಾ?

ಪಾಕಿಸ್ತಾನದಲ್ಲಿ ಟ್ಯಾಕ್ಸ್ ಸಿಸ್ಟಂ ಇನ್ನೂ ಬಲಿಷ್ಠವಾಗಿಲ್ಲ. ಬಹಳ ಜನರು ತೆರಿಗೆ ಕಟ್ಟುವುದರಿಂದ ತಪ್ಪಿಸಿಕೊಳ್ಳಲು ತಮ್ಮ ನೈಜ ಆದಾಯವನ್ನು ಬಚ್ಚಿಟ್ಟಿರಬಹುದು ಎಂದು ಹೇಳಲಾಗುತ್ತಿದೆ.

ಪಾಕಿಸ್ತಾನದ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್ ದರಗಳು ಎಷ್ಟಿವೆ?

ಭಾರತದಲ್ಲಿರುವಂತೆ ಪಾಕಿಸ್ತಾನದಲ್ಲೂ ಆದಾಯ ತೆರಿಗೆಗೆ ವಿವಿಧ ಸ್ಲ್ಯಾಬ್ ರೇಟ್​ಗಳಿವೆ. 6 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಇದೆ. 41 ಲಕ್ಷ ರೂವರೆಗಿನ ಆದಾಯಕ್ಕೆ 7 ಲಕ್ಷ ರೂವರೆಗೆ ಟ್ಯಾಕ್ಸ್ ಇದೆ. 41 ಲಕ್ಷ ರೂ ಮೇಲ್ಪಟ್ಟ ವಾರ್ಷಿಕ ಆದಾಯಕ್ಕೆ ಶೇ. 35ರಷ್ಟು ಟ್ಯಾಕ್ಸ್ ಇರುತ್ತದೆ.

ಇದನ್ನೂ ಓದಿ: ಕರ್ನಾಟಕದ ಕಾಫಿಗೆ ಯೂರೋಪ್​ನಲ್ಲಿ ಬಲು ಬೇಡಿಕೆ; 2025ರಲ್ಲಿ 2 ಬಿಲಿಯನ್ ಡಾಲರ್ ಮುಟ್ಟಿದ ಭಾರತದ ಒಟ್ಟಾರೆ ಕಾಫಿ ರಫ್ತು

ಭಾರತದಲ್ಲಿ ತೆರಿಗೆ ಪಾವತಿದಾರರು ಎಷ್ಟಿದ್ದಾರೆ?

ಭಾರತದಲ್ಲಿ ನೊಂದಾಯಿತ ತೆರಿಗೆ ಪಾವತಿದಾರರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಿದೆ. ಸುಮಾರು 9 ಕೋಟಿ ಸಂಖ್ಯೆಯಷ್ಟು ರಿಜಿಸ್ಟರ್ಡ್ ಟ್ಯಾಕ್ಸ್ ಪೇಯರ್ಸ್ ಭಾರತದಲ್ಲಿದ್ದಾರೆ. ವೈಯಕ್ತಿಕ ಆದಾಯ ತೆರಿಗೆ 2024-25ರಲ್ಲಿ ಹತ್ತಿರಹತ್ತಿರ 13 ಲಕ್ಷ ಕೋಟಿ ರೂನಷ್ಟು ಸಂಗ್ರಹವಾಗಿತ್ತು. ಕಾರ್ಪೊರೇಟ್ ಟ್ಯಾಕ್ಸ್ ಕೂಡ ಸೇರಿಸಿದರೆ ಒಟ್ಟು ನೇರ ತೆರಿಗೆ ಸಂಗ್ರಹ ಆ ವರ್ಷ 25 ಲಕ್ಷ ಕೋಟಿ ರೂ ಮೀರಿದೆ.

ಪಾಕಿಸ್ತಾನದಲ್ಲಿ ಸುಮಾರು 10 ಲಕ್ಷ ಕೋಟಿ ಪಿಕೆಆರ್​ನಷ್ಟು ನೇರ ತೆರಿಗೆ ಸಂಗ್ರಹ ಇದೆ. ಭಾರತೀಯ ರುಪಾಯಿ ಲೆಕ್ಕದಲ್ಲಿ ಸುಮಾರು 3 ಲಕ್ಷ ಕೋಟಿ ರೂ ಆಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಭಾರತ ನಮ್ಮನ್ನು ಅವಮಾನಿಸಿದೆ… ನಾವು ಶ್ರೀಲಂಕಾದಲ್ಲಿ ಆಡ್ತೀವಿ..!

2026ರ ಟಿ20 ವಿಶ್ವಕಪ್​ನಲ್ಲಿ ಬಾಂಗ್ಲಾದೇಶ್ ತಂಡ ಕಣಕ್ಕಿಳಿಯುವುದೆಲ್ಲಿ? ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಸದ್ಯಕ್ಕಂತು ಉತ್ತರ ಸಿಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಏಕೆಂದರೆ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯಲು ಬಾಂಗ್ಲಾದೇಶ್ ಹಿಂದೇಟು ಹಾಕಿದೆ. ಬದಲಾಗಿ ನಮ್ಮ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಮನವಿ ಮಾಡಿದೆ. ಈ ಮನವಿಯನ್ನು ಐಸಿಸಿ ತಿರಸ್ಕರಿಸಿದೆ. ಇದಾಗ್ಯೂ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ತನ್ನ ನಿಲುವು ಬದಲಿಸಿಲ್ಲ.

ಕೆಲ ದಿನಗಳ ಹಿಂದೆಯಷ್ಟೇ ಇಂಡಿಯನ್ ಪ್ರೀಮಿಯರ್ ಲೀಗ್​ನಿಂದ ಬಾಂಗ್ಲಾದೇಶ್ ವೇಗಿ ಮುಸ್ತಫಿಝುರ್ ರೆಹಮಾನ್ ಅವರನ್ನು ಕೈ ಬಿಡಲಾಗಿತ್ತು. ಇದಕ್ಕೆ ಮುಖ್ಯ ಕಾರಣ ಬಾಂಗ್ಲಾದೇಶ್​​ನಲ್ಲಿ ಹಿಂದೂಗಳ ಮೇಲಿನ ನಡೆಯುತ್ತಿರುವ ದೌರ್ಜನ್ಯ. ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮತ್ತು ಹತ್ಯೆಯನ್ನು ಖಂಡಿಸಿ ಇತ್ತೀಚೆಗೆ ಭಾರತದಲ್ಲಿ ಪ್ರತಿಭಟನೆಗಳು ನಡೆದಿದ್ದವು.

ಈ ಪ್ರತಿಭಟನೆ ವೇಳೆ ಬಾಂಗ್ಲಾದೇಶ್ ಆಟಗಾರ ಮುಸ್ತಫಿಝುರ್ ರೆಹಮಾನ್ ಅವರನ್ನು ಕೆಕೆಆರ್ ಪರ ಕಣಕ್ಕಿಳಿಯಲು ಬಿಡುವುದಿಲ್ಲ ಎಂದು ಕೆಲ ಸಂಘಟನೆಗಳು ಘೋಷಿಸಿದ್ದವು. ಹೀಗಾಗಿ ಐಪಿಎಲ್​ನಿಂದ ಬಾಂಗ್ಲಾ ವೇಗಿಯನ್ನು ಕೈ ಬಿಡುವಂತೆ ಬಿಸಿಸಿಐ ಸೂಚಿಸಿತ್ತು. ಅದರಂತೆ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಮುಸ್ತಫಿಝುರ್ ರೆಹಮಾನ್ ಅವರನ್ನು ತಂಡದಿಂದ ಕೈ ಬಿಟ್ಟಿದ್ದಾರೆ.

ಬಾಂಗ್ಲಾದೇಶ್ ಆಟಗಾರನನ್ನು ಐಪಿಎಲ್​ನಿಂದ ಕೈ ಬಿಟ್ಟ ಬೆನ್ನಲ್ಲೇ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಟಿ20 ವಿಶ್ವಕಪ್​ನಲ್ಲಿ ತಮ್ಮ ತಂಡದ ಸುರಕ್ಷತೆ ಬಗ್ಗೆ ಪ್ರಶ್ನೆಗಳನ್ನೆತ್ತಿದೆ. ಭಾರತದಲ್ಲಿ ಓರ್ವ ಆಟಗಾರನಿಗೆ ಸಂಪೂರ್ಣ ಸುರಕ್ಷತೆ ನೀಡಲು ಸಾಧ್ಯವಾಗದೇ ಇದ್ದರೆ, ಬಿಸಿಸಿಐ ಹೇಗೆ ಬಾಂಗ್ಲಾದೇಶ್ ತಂಡಕ್ಕೆ ಭದ್ರತಾ ವ್ಯವಸ್ಥೆ ಕಲ್ಪಿಸಲಿದೆ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

ಹೀಗಾಗಿ ಬಾಂಗ್ಲಾದೇಶ್ ತಂಡದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸುವಂತೆ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಐಸಿಸಿಗೆ ಮನವಿ ಮಾಡಿದೆ. ಬಿಸಿಬಿಯ ಈ ಮನವಿಯ ಹೊರತಾಗಿಯೂ, ಭಾರತದಲ್ಲೇ ಟೂರ್ನಿ ಆಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಪಂದ್ಯದಿಂದ ವಾಕ್ ಓವರ್ ಪಡೆಯಿರಿ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ತಿಳಿಸಿದೆ. ಇದಾಗ್ಯೂ ಭಾರತದಲ್ಲಿ ಟಿ20 ವಿಶ್ವಕಪ್ ಆಡಲು ಬಾಂಗ್ಲಾದೇಶ್ ಒಪ್ಪಿಲ್ಲ.

ಈ ಬಗ್ಗೆ ಮಾತನಾಡಿರುವ ಬಾಂಗ್ಲಾದೇಶದ ಕ್ರೀಡಾ ಸಲಹೆಗಾರ ಡಾ. ಆಸಿಫ್ ನಜ್ರುಲ್, ಪ್ರಶ್ನೆ ಕೇವಲ ಭದ್ರತೆಯ ಬಗ್ಗೆ ಮಾತ್ರವಲ್ಲ. ಈ ವಿಷಯದಲ್ಲಿ ದೇಶದ ಘನತೆಯ  ಕೂಡ ಇದೆ. ಹೀಗಾಗಿ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಶ್ರೀಲಂಕಾದಲ್ಲಿ ಬಾಂಗ್ಲಾದೇಶ್ ಪಂದ್ಯವನ್ನು ಆಯೋಜಿಸಬೇಕೆಂದು ಮತ್ತೊಮ್ಮೆ ಐಸಿಸಿಗೆ ಮನವಿ ಮಾಡುತ್ತೇವೆ ಎಂದಿದ್ದಾರೆ.

ಭಾರತದಲ್ಲಿ ಬಾಂಗ್ಲಾದೇಶಿ ಕ್ರಿಕೆಟಿಗರ ಭದ್ರತಾ ಸಮಸ್ಯೆಯ ಪ್ರಮಾಣವನ್ನು ಐಸಿಸಿ ಸಂಪೂರ್ಣವಾಗಿ ಅರಿತುಕೊಂಡಿಲ್ಲ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಬಾಂಗ್ಲಾದೇಶ್ ಆಟಗಾರನನ್ನು ಕೈ ಬಿಡುವ ಮೂಲಕ ಅವರು ಬಾಂಗ್ಲಾದೇಶ್​ ತಂಡವು  ಭಾರತದಲ್ಲಿ ಆಡುವುದು ಸುರಕ್ಷಿತವಲ್ಲ ಎಂದು ಸಾರಿದ್ದಾರೆ. ಇದಾಗ್ಯೂ ಐಸಿಸಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ನಜ್ರುಲ್ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾ ಆಟಗಾರನಿಗೆ ಶಸ್ತ್ರಚಿಕಿತ್ಸೆ… ತಂಡದಿಂದ ಔಟ್..!

ಬಾಂಗ್ಲಾದೇಶ್ ಆಟಗಾರನನ್ನು ಐಪಿಎಲ್ ಟೂರ್ನಿಯಿಂದ ಹೊರಹಾಕುವ ಮೂಲಕ ಅವರು ಅವಮಾನ ಮಾಡಿದ್ದಾರೆ. ಹೀಗಾಗಿ ಭಾರತದಲ್ಲಿ ಆಡುವುದು ಇದು ಕೇವಲ ಭದ್ರತಾ ಸಮಸ್ಯೆಯಲ್ಲ. ನಮ್ಮ ದೇಶದ ಘನತೆಯ ವಿಷಯವೂ ಆಗಿದೆ. ಭಾರತವು ಬಾಂಗ್ಲಾದೇಶವನ್ನು ಅವಮಾನಿಸಿದೆ. ಈ ಅವಮಾನದ ಕಾರಣ ನಮ್ಮ ತಂಡ ಭಾರತದಲ್ಲಿ ಆಡಬಾರದು ಎಂಬುದು ನನ್ನ ನಿಲುವು ಎಂದು ಬಾಂಗ್ಲಾದೇಶದ ಕ್ರೀಡಾ ಸಲಹೆಗಾರ ಡಾ. ಆಸಿಫ್ ನಜ್ರುಲ್ ಹೇಳಿದ್ದಾರೆ.

 

 

 

Source link

ಕೋಗಿಲು ಅಕ್ರಮ ವಾಸಿಗಳಿಗೆ ಜಮೀರ್ ಗುಡ್ ನ್ಯೂಸ್: ಮೊದಲ ಹಂತದಲ್ಲಿ 26 ಮನೆ ಹಂಚಿಕೆಗೆ ಸಿದ್ಧತೆ – Kannada News | Good News for Kogilu Evictees as Minister Zameer Ahmed says govt Prepares to Allot 26 Houses in First Phase

ಕೋಗಿಲು ಅಕ್ರಮ ವಾಸಿಗಳಿಗೆ ಜಮೀರ್ ಗುಡ್ ನ್ಯೂಸ್

ಬೆಂಗಳೂರು, ಜನವರಿ 8: ಕೋಗಿಲು ಲೇಔಟ್ (Kogilu Layout) ಅಕ್ರಮವಾಸಿಗಳಿಗೆ ಮನೆ ಭಾಗ್ಯ ಸಿಗುವ ಕಾಲ ಸನ್ನಿಹಿತವಾಗುತ್ತಿದೆ. ಬಿಜೆಪಿ ನಾಯಕರ ವಿರೋಧದ ನಡುವೆಯೂ ಸರ್ಕಾರ ಅಕ್ರಮವಾಸಿಗಳಿಗೆ ಮನೆ ಹಂಚಲು ನಿರ್ಧರಿಸಿದೆ. ಇಂದೇ 26 ಮನೆಗಳ ಹಂಚಿಕೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಸುಳಿವು ನೀಡಿರುವ ವಸತಿ ಸಚಿವ ಜಮೀರ್ ಅಹ್ಮದ್ (Zameer Ahmed), 26 ಮನೆಗಳನ್ನು ಕೊಡಬಹುದು. ಉಳಿದ ಅರ್ಜಿಗಳ ಪರಿಶೀಲನೆಯಾಗುತ್ತಿದೆ ಎಂದಿದ್ದಾರೆ. ಹಾಗೆಯೇ ಅರ್ಜಿ ಹಾಕಿದ ಎಲ್ಲರಿಗೂ ಕೊಡಲ್ಲ. ಹೊರಗಿನವರಿಗಂತೂ ಮನೆ ಕೊಡುವುದೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಮನೆ ಹಂಚಿಕೆಗೆ ಮಾನದಂಡವೇನು?

  • ಕರ್ನಾಟಕದ ಬೇರೆ ಭಾಗದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರಬೇಕು.
  • ಕೋಗಿಲು ಲೇಔಟ್‌ನಲ್ಲಿ ಐದು ವರ್ಷದಿಂದ ವಾಸ ಇರಬೇಕು.
  • ಮಾತೃ ಭಾಷೆ ಬೇರೆ ಆಗಿದ್ದರೂ ಕರ್ನಾಟಕದವರಾಗಿರಬೇಕು.
  • ಒಂದಕ್ಕಿಂತ ಹೆಚ್ಚಿನ ಅರ್ಜಿ ಸಲ್ಲಿಸಿದ್ದಲ್ಲಿ ರೇಷನ್ ಕಾರ್ಡ್ ಪರಿಗಣನೆ.
  • ವೋಟರ್ ಐಡಿ, ರೇಷನ್ ಕಾರ್ಡ್, ಮಕ್ಕಳ ಶಾಲಾ ದಾಖಲಾತಿ ಪತ್ರ ಪರಿಗಣನೆ.

ಹೀಗಾಗಿಯೇ ವಸತಿ ಸಚಿವ ಜಮೀರ್ ಅಹ್ಮದ್, ಹೊರಗಿನವ್ರಿಗೆ ಮನೆ ಕೊಡಲ್ಲ ಅಂತಾ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ, ಬಿಜೆಪಿ ನಾಯಕರು ಮಾತ್ರ ಬಾಂಗ್ಲಾದವರಿಗೆ ಮನೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕೋಗಿಲು ನಿರಾಶ್ರಿತರ ಪಟ್ಟಿ ರಿಲೀಸ್ ಮಾಡಿದ ಸರ್ಕಾರ

ಕೋಗಿಲು ಲೇಔಟ್‌ನಲ್ಲಿ ಸರ್ವೆ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿರುವ ಅಧಿಕಾರಿಗಳು ಅರ್ಹರ ಪಟ್ಟಿ ಸಿದ್ಧಪಡಿಸಿದ್ದಾರೆ. ಯಾವ ಭಾಷೆಯ ಎಷ್ಟೆಷ್ಟು ಕುಟುಂಬವಿದೆ ಎಂದು ಪಟ್ಟಿ ತಯಾರಿಸಿದ್ದು, ಅದನ್ನು ಸರ್ಕಾರ ರಿಲೀಸ್ ಮಾಡಿದೆ. ಸರ್ಕಾರ ರಿಲೀಸ್ ಮಾಡಿರುವ ನಿರಾಶ್ರಿತರ ಪಟ್ಟಿ ‘ಟಿವಿ9’ಗೆ ಲಭ್ಯವಾಗಿದೆ.

ಕೋಗಿಲು ನಿರಾಶ್ರಿತರ ಕುಟುಂಬಗಳ ಭಾಷಾವಾರು ಪಟ್ಟಿ

  • ಕನ್ನಡ ಭಾಷಿಕರು – 108
  • ಉರ್ದು ಮಾತನಾಡುವವರು – 103
  • ತಮಿಳು ಭಾಷಿಕರು – 13
  • ಹಿಂದಿ ಭಾಷಿಕರು – 11
  • ಮರಾಠಿ ಮಾತನಾಡುವವರು – 03
  • ತೆಲುಗು ಭಾಷಿಕ ಕುಟುಂಬ – 03

ಸರ್ಕಾರವೇನೋ ಪಟ್ಟಿ ಸಿದ್ಧ ಮಾಡಿದೆ. 26 ಮನೆಗಳ ಹಂಚಿಕೆಗೆ ಸಿದ್ಧತೆ ಮಾಡಿಕೊಂಡಿದೆ. ಆದರೆ, ಕೋಗಿಲು ನಿವಾಸಿಗಳು ಮಾತ್ರ ಬೇರೆ ಯಾರಿಗೋ ಮನೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಐದಾರು ಜನಕ್ಕೆ ಕರೆ ಬಂದಿದೆ ಎಂದು ಕೆಲವರು ಹೇಳಿದ್ದಾರೆ.

ಇದನ್ನೂ ಓದಿ:  ಕೋಗಿಲು ಲೇಔಟ್: ಅಕ್ರಮ ಮನೆಗೆ 1 ರಿಂದ 2 ಲಕ್ಷ ರೂ. ವಸೂಲಿ, ಸರ್ಕಾರಿ ಭೂಮಿ ಕಬಳಿಸಿ ತನ್ನದೇ ಹೆಸರಿಟ್ಟಿದ್ದ ಆರೋಪಿ!

ಮತ್ತೊಂದೆಡೆ, ಕೋಗಿಲು ಲೇಔಟ್‌ನ 20ಕ್ಕೂ ಹೆಚ್ಚು ನಿವಾಸಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಯಾವಾಗ ಬಂದಿದ್ದಿರಿ, ಯಾರಿಗೆ ಎಷ್ಟು ದುಡ್ಡು ಕೊಟ್ಟಿದ್ದಿರಿ, ಕರೆಂಟ್ ಹೇಗೆ ಬಂತು ಎಂದೆಲ್ಲ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಸದ್ಯ ಸೈಟ್ ಅತಿಕ್ರಮ ಮಾಡಿದ ನಾಲ್ವರ ವಿರುದ್ಧ ಎಫ್​ಐಆರ್ ದಾಖಲಾಗಿದ್ದು, ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ ಟೀಸರ್​ನ ಆ​ ಡೈಲಾಗ್​​ನಲ್ಲೇ ಅಡಗಿದೆ ಚಿತ್ರದ ಕಥೆ – Kannada News | Toxic Movie Teaser: Yash’s Daddy’s Home Dialogue and Hollywood Meaning

‘ಟಾಕ್ಸಿಕ್’ ಚಿತ್ರದ ಟೀಸರ್ ಬಗ್ಗೆ ಎಲ್ಲೆಡೆ ಚರ್ಚೆ ಆಗುತ್ತಿದೆ. ಈ ಚಿತ್ರದ ಮೇಕಿಂಗ್ ಹೇಗಿರಲಿದೆ ಎಂಬ ಸಣ್ಣ ಝಲಕ್ ಟೀಸರ್​​ನಲ್ಲಿ ತೋರಿಸಲಾಗಿದೆ. ಸಿನಿಮಾದಲ್ಲಿ ಬರೋ ಬೋಲ್ಡ್ ದೃಶ್ಯಗಳನ್ನು ನೋಡಿದರೆ ಇದೊಂದು ‘ಎ’ ಪ್ರಮಾಣಪತ್ರ ಪಡೆಯಲಿರುವ ಚಿತ್ರ ಎಂಬುದು ಅಭಿಮಾನಿಗಳಿಗೆ ಸ್ಪಷ್ಟವಾಗುತ್ತಿದೆ. ಹೀಗಿರುವಾಗೇ ‘ಟಾಕ್ಸಿಕ್’ ಸಿನಿಮಾದ ಟೀಸರ್​​ನಲ್ಲಿ ಬರೋ ಕೊನೆಯ ಡೈಲಾಗ್ ಗಮನ ಸೆಳೆಯುವ ರೀತಿಯಲ್ಲಿದೆ. ಇಡೀ ಚಿತ್ರ ಕಥೆ ಇದರಲ್ಲೇ ಅಡಿಗೆ ಎನ್ನಲಾಗಿದೆ.

‘ಟಾಕ್ಸಿಕ್’ ಚಿತ್ರದ ಓಪನಿಂಗ್ ದೃಶ್ಯ ಆರಂಭ ಆಗೋದು ಸ್ಮಶಾನದ ಮೂಲಕ. ಹೆಣ ಹೂಳುವ ಕೆಲಸ ಆಗುತ್ತಾ ಇರುತ್ತದೆ. ಅಲ್ಲಿಗೆ ಬರೋ ಗ್ಯಾಂಗ್ ಇವರ ಮೇಲೆ ಹಲ್ಲೆ ಮಾಡುತ್ತದೆ. ಅವರನ್ನು ಸ್ಮಶಾನದಿಂದ ಹೊರ ಹಾಕುತ್ತಾರೆ. ಆಗ ಎಂಟ್ರಿ ಆಗುತ್ತಾನೆ ರಾಯ (ಯಶ್). ಬೋಲ್ಡ್ ದೃಶ್ಯವನ್ನು ತೋರಿಸೋ ನಿರ್ದೇಶಕಿ ಗೀತು ಮೋಹನ್​​ದಾಸ್, ನಂತರ ಮಾಸ್ ಅಂಶ ತೋರಿಸುತ್ತಾರೆ.

ಯಶ್ ಅವರಿಗೆ ಇಡೀ ಸಿನಿಮಾದಲ್ಲಿ ಇರೋದು ಒಂದೇ ಡೈಲಾಗ್, ಅದುವೇ ‘Daddy’s Home’ ಎಂದು. ಈ ಪದದ ಅರ್ಥ ‘ಲೀಡರ್ ಬಂದಾಯ್ತು’ ಎಂದು. ಅಥವಾ ರಕ್ಷಕ ಬಂದ ಎಂಬರ್ಥವೂ ಬರುತ್ತದೆ. ಅಂದರೆ, ಕೆಟ್ಟವರಿಗೆ ರಾಯ ದುಸ್ವಪ್ನನಾಗುತ್ತಾನೆ ಎಂಬರ್ಥವನ್ನೂ ಇದಕ್ಕೆ ಕಲ್ಪಿಸಬಹುದು. ಈ ಚಿತ್ರದಲ್ಲಿ ಯಶ್ ಅವರೇ ಗ್ಯಾಂಗ್​​ಸ್ಟರಾ ಎಂಬ ಪ್ರಶ್ನೆಯೂ ಮೂಡುತ್ತದೆ.

ಇದನ್ನೂ ಓದಿ: ‘ಟಾಕ್ಸಿಕ್’ ಟೀಸರ್​​​ನಲ್ಲಿ ಮಾಸ್ ಹಾಗೂ ಹಸಿಬಿಸಿ ದೃಶ್ಯ; ಇಲ್ಲಿವೆ ಫೋಟೋಸ್

‘ಟಾಕ್ಸಿಕ್’ ಸಿನಿಮಾ ಕೇವಲ ವಯಸ್ಕರಿಗೆ ಮಾತ್ರ. ಚಿತ್ರದ ಮೇಕಿಂಗ್ ಹಾಲಿವುಡ್ ಸ್ಟೈಲ್​​ನಲ್ಲಿ ಇದೆ. ಈ ಟೀಸರ್ ಮೂರು ಗಂಟೆಗೆ ಬರೋಬ್ಬರಿ 3 ಲಕ್ಷದಷ್ಟು ವೀಕ್ಷಣೆ ಕಂಡಿದೆ ಎಂಬುದು ವಿಶೇಷ. ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ನಯನತಾರಾ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ಹುಮಾ ಖುರೇಶಿ, ಕಿಯಾರಾ ಅಡ್ವಾಣಿ ಮೊದಲಾದವರು ನಟಿಸಿದ್ದಾರೆ. ಮಾರ್ಚ್ 19ರಂದು ಸಿನಿಮಾ ರಿಲೀಸ್ ಆಗಲಿದೆ. ಟ್​ರೇಲರ್​​ಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹೊಸ ಹಾಲಿವುಡ್ ಸಿನಿಮಾನಲ್ಲಿ ಪ್ರಿಯಾಂಕಾ ಚೋಪ್ರಾ, ಪೋಸ್ಟರ್ ನೋಡಿ – Kannada News | Priyanka Chopra’s poster from Hollywood movie The Bluff released

ಪ್ರಿಯಾಂಕಾ ಚೋಪ್ರಾ (Priyanka Chopra) ಭಾರತದ ನಟಿಯಾದರೂ ಮಿಂಚುತ್ತಿರುವುದು ಹಾಲಿವುಡ್​​ನಲ್ಲಿ. 2017 ರಲ್ಲಿ ಹಾಲಿವುಡ್​​ಗೆ ಎಂಟ್ರಿ ಕೊಟ್ಟ ಪ್ರಿಯಾಂಕಾ ಆರಂಭದಲ್ಲಿ ಅಷ್ಟೇನೂ ಪ್ರಾಮುಖ್ಯತೆ ಇಲ್ಲದ ಕೆಲವು ಪಾತ್ರಗಳಲ್ಲಿ ನಟಿಸಿದರಾದರೂ ವರ್ಷಗಳು ಕಳೆದಂತೆ ತಮ್ಮನ್ನು ತಾವು ಹಾಲಿವುಡ್​​ನಲ್ಲಿ ಗಟ್ಟಿಯಾಗಿ ನೆಲೆಗೊಳಿಸಿಕೊಂಡಿದ್ದಾರೆ. ಇತ್ತೀಚೆಗಿನ ವರ್ಷಗಳಲ್ಲಿ ಪ್ರಿಯಾಂಕಾ ಚೋಪ್ರಾ ಅವರಿಗೆ ಪ್ರಮುಖ ನಾಯಕಿಯ ಪಾತ್ರಗಳು ಅದರಲ್ಲೂ ಆಕ್ಷನ್ ನಾಯಕಿಯ ಪಾತ್ರಗಳೇ ಹೆಚ್ಚಾಗಿ ಸಿಗುತ್ತಿವೆ. ಸಿನಿಮಾಗಳು ಯಶಸ್ವಿಯೂ ಆಗುತ್ತಿವೆ. ಇದೀಗ ಪ್ರಿಯಾಂಕಾ ಮುಖ್ಯ ಪಾತ್ರದಲ್ಲಿ ನಟಿಸಿರುವ ಮತ್ತೊಂದು ಆಕ್ಷನ್ ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಪೋಸ್ಟರ್ ಬಿಡುಗಡೆ ಆಗಿದೆ.

ಪ್ರಿಯಾಂಕಾ ಚೋಪ್ರಾ ‘ದಿ ಬ್ಲಫ್’ ಹೆಸರಿನ ಆಕ್ಷನ್ ಜಾನರ್​​ನ ಹಾಲಿವುಡ್ ಸಿನಿಮಾನಲ್ಲಿ ನಟಿಸಿದ್ದಾರೆ. ‘ದಿ ಬ್ಲಫ್’ ಸಿನಿಮಾನಲ್ಲಿ ಪ್ರಿಯಾಂಕಾ ಅವರದ್ದು ನಾಯಕಿಯ ಪಾತ್ರ, ಸಿನಿಮಾದ ಪ್ರಧಾನ ಪಾತ್ರವೂ ಅವರದ್ದೆ. ಸಿನಿಮಾನಲ್ಲಿ ಪೈರೇಟ್ (ಕಡಲ್ಗಳ್ಳ) ಪಾತ್ರದಲ್ಲಿ ಪ್ರಿಯಾಂಕಾ ನಟಿಸಿದ್ದಾರೆ. ತಾಯಿಯಾಗಿ ತನ್ನ ಮಗುವನ್ನು ಕಾಪಾಡಿಕೊಳ್ಳುವ ಪೈರೇಟ್ ಪಾತ್ರ ಪ್ರಿಯಾಂಕಾ ಚೋಪ್ರಾ ಅವರದ್ದು. ಸಿನಿಮಾದ ಪೋಸ್ಟರ್ ಇದೀಗ ಬಿಡುಗಡೆ ಆಗಿದ್ದು, ಅದ್ಭುತ ಆಕ್ಷನ್ ಭರಿತ ಸಿನಿಮಾ ಇದೆಂಬುದು ತಿಳಿಯುತ್ತಿದೆ.

ಸಿನಿಮಾದ ವಿಲನ್ ಪಾತ್ರದಲ್ಲಿ ಹಾಲಿವುಡ್​ನ ಖ್ಯಾತ ನಟ ಕಾರ್ಲ್ ಅರ್ಬನ್ ನಟಿಸಿದ್ದಾರೆ. ಈ ಹಿಂದೆ ಅವರು ‘ಥಾರ್’, ‘ಬ್ರೂನೊ: ಸುಪ್ರಿಮಸಿ’, ‘ಲಾರ್ಡ್ ಆಫ್ ದಿ ರಿಂಗ್ಸ್’, ‘ಸ್ಟಾರ್ ಟ್ರೆಕ್’, ‘ಸ್ಟಾರ್ ವಾರ್ಸ್’, ‘ವಾಕಿಂಗ್ ವಿತ್ ಡೈನೋಸಾರ್ಸ್’ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ದಿ ಬ್ಲಫ್’ ಸಿನಿಮಾನಲ್ಲಿ ಪ್ರಿಯಾಂಕಾ ಅವರಿಗೆ ಎದುರಾಗಿ ನಟಿಸುತ್ತಿದ್ದಾರೆ. ‘ದಿ ಬ್ಲಫ್’ ಸಿನಿಮಾ ನಿರ್ದೇಶನ ಮಾಡುತ್ತಿರುವುದು ಫ್ರಾಂಕ್ ಇ ಫ್ಲವರ್ಸ್.

ಇದನ್ನೂ ಓದಿ:ದೀಪಿಕಾ ಪಡುಕೋಣೆ ಸ್ಥಾನಕ್ಕೆ ಪ್ರಿಯಾಂಕಾ ಚೋಪ್ರಾ: ಡಬಲ್ ಧಮಾಕ

ಪ್ರಿಯಾಂಕಾ ಚೋಪ್ರಾ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಸಿನಿಮಾನಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿ. ಅದರ ಹೊರತಾಗಿ ಹಾಲಿವುಡ್ ಆಕ್ಷನ್ ಸಿನಿಮಾ ‘ಜಡ್ಜ್​​ಮೆಂಟಲ್ ಡೇ’ ಸಿನಿಮಾನಲ್ಲಿ ಸಹ ನಟಿಸುತ್ತಿದ್ದಾರೆ. ‘ದಿ ಬ್ಲಫ್’ ಸಿನಿಮಾ ಶೂಟಿಂಗ್ ಮುಗಿದಿದ್ದು, ಸಿನಿಮಾ ಫೆಬ್ರವರಿ ಆರರಂದು ಅಮೆಜಾನ್ ಪ್ರೈಮ್​​ನಲ್ಲಿ ಬಿಡುಗಡೆ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link