All posts by nagaraj11081993

ಶಿಷ್ಟಾಚಾರ ಉಲ್ಲಂಘನೆ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ – Kannada News | Koppala Protocol Row: Minister Shivaraj Tangadagi Confronts Union Minister V Somanna.

ಕೊಪ್ಪಳ, ಜನವರಿ 05: ಜಿಲ್ಲೆಯ ಹಿಟ್ನಾಳ ಗ್ರಾಮದಲ್ಲಿ ನಡೆದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಶಿಲಾನ್ಯಾಸದ ವೇಳೆ ರಾಜಕೀಯ ಹೈಡ್ರಾಮಾ ನಡೆದಿದೆ. ಕೇಂದ್ರ ಸಚಿವ ವಿ. ಸೋಮಣ್ಣ ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಚಿವ ಶಿವರಾಜ್ ತಂಗಡಗಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆಹ್ವಾನ ಪತ್ರಿಕೆಯಲ್ಲಿ ಸ್ಥಳೀಯ ಸಂಸದರು, ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಹೆಸರುಗಳನ್ನು ನಮೂದಿಸಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದರೆ, ಶಿವರಾಜ್ ತಂಗಡಗಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತದೆ ಎಂದು ಹೇಳಿದ ತಂಗಡಗಿ, ರಾಜ್ಯಕ್ಕೆ ಅವಮಾನ ಮಾಡಬೇಡಿ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ನಿರೀಕ್ಷೆ ಮೂಡಿಸಿದ ‘ವಿಕಲ್ಪ’ ಟೀಸರ್; ಇದು ವಾಸ್ತವ ಮತ್ತು ಭ್ರಮೆಯ ನಡುವಿನ ಕಥೆ – Kannada News | Pruthviraj Patil Nagashree Hebbar starrer Vikalpa Kannada Movie Teaser

ಸೈಕಲಾಜಿಕಲ್‌-ಥ್ರಿಲ್ಲರ್‌ ಕಥಾಹಂದರ ಹೊಂದಿರುವ ‘ವಿಕಲ್ಪ’ ಸಿನಿಮಾ (Vikalpa Movie) ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಬಹುತೇಕ ಪೂರ್ಣಗೊಂಡಿವೆ. ಈಗ ಈ ಸಿನಿಮಾವನ್ನು ಸೆನ್ಸಾರ್‌ ಮಂಡಳಿಗೆ ಕಳಿಸಲಾಗಿದೆ. ಜೊತೆಗೆ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಇತ್ತೀಚೆಗೆ ‘ವಿಕಲ್ಪ’ ಸಿನಿಮಾ ಟೀಸರ್‌ (Vikalpa Teaser) ಬಿಡುಗಡೆ ಮಾಡಲಾಯಿತು. ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅವರು ವರ್ಚ್ಯುವಲ್‌ ಆಗಿ ಟೀಸರ್‌ ಅನಾವರಣ ಮಾಡಿದರು. ಲೇಖಕ ಜೋಗಿ ಅವರು ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬಂದು ಚಿತ್ರತಂಡಕ್ಕೆ ಮೆಚ್ಚುಗೆ ಸೂಚಿಸಿದರು.

ಸುದ್ದಿಗೋಷ್ಠಿಯಲ್ಲಿ ಜೋಗಿ ಮಾತನಾಡಿ ‘ಈ ಸಿನಿಮಾದ ಕೆಲವು ತುಣುಕುಗಳನ್ನು ನೋಡಿದ್ದೇನೆ. ತುಡಿತ ಇರುವಂಥವರು ಸೇರಿಕೊಂಡು ಮಾಡಿದ ಸಿನಿಮಾ ಇದು. ಕನ್ನಡದಲ್ಲಿ ಇಂಥ ಹೊಸ ಪ್ರಯತ್ನದ ಸಿನಿಮಾಗಳು ಬರುವಂತಾಗಬೇಕು. ಈ ಸಿನಿಮಾದ ಕಥೆ, ಟೀಸರ್‌, ಹಾಡು ಭರವಸೆ ಮೂಡಿಸುವಂತಿದೆ. ಸಿನಿಮಾ ಬಿಡುಗಡೆ ಆದ ಮೇಲೆ ಮೂಡಿಸಿರುವ ನಿರೀಕ್ಷೆಯನ್ನು ನಿಜ ಮಾಡಲಿ. ಹೊಸಬರ ಈ ಸಿನಿಮಾಕ್ಕೆ ಶುಭವಾಗಲಿ’ ಎಂದರು.

ಮನುಷ್ಯನ ಮನಸ್ಸಿನ ಸುಪ್ತ ಭಾವನೆಗಳು ಹಾಗೂ ತಲ್ಲಣಗಳನ್ನು ಈ ಸಿನಿಮಾ ಮೂಲಕ ತೆರೆಮೇಲೆ ತರಲಾಗುತ್ತಿದೆ. ಹಲವು ವರ್ಷಗಳಿಂದ ಹವ್ಯಾಸಿ ರಂಗಭೂಮಿಯ ಅನುಭವ ಹೊಂದಿರುವ ಪೃಥ್ವಿರಾಜ್‌ ಪಾಟೀಲ್‌ ಅವರ ಪರಿಕಲ್ಪನೆಯಲ್ಲಿ ಈ ಸಿನಿಮಾ ಸಿದ್ಧವಾಗಿದೆ. ‘ಸುರೂಸ್‌ ಟಾಕೀಸ್‌’ ಮೂಲಕ ಇಂದಿರಾ ಶಿವಸ್ವಾಮಿ ಅವರು ನಿರ್ಮಾಣ ಮಾಡಿದ್ದಾರೆ. ಇದು ಅವರ ಮೊದಲ ಸಿನಿಮಾ.

ಪೃಥ್ವಿರಾಜ್‌ ಪಾಟೀಲ್‌ ಅವರು ನಿರ್ದೇಶನ ಮಾಡುವುದರ ಜೊತೆಗೆ ತೆರೆಮೇಲೆ ಮುಖ್ಯಪಾತ್ರವನ್ನೂ ಮಾಡಿದ್ದಾರೆ. ನಾಗಶ್ರೀ ಹೆಬ್ಬಾರ್‌, ಹರಿಣಿ ಶ್ರೀಕಾಂತ್‌, ಗಣಪತಿ ವಡ್ಡಿನಗದ್ದೆ, ಸ್ವರೂಪ್‌ ಬಚ್ಚ್‌, ಸಂಧ್ಯಾ ವಿನಾಯಕ್‌, ಪೂಜಾ ಬಚ್ಚ್‌, ಜಯಂತ್‌ ಡೇವಿಡ್‌, ಡಾ. ಪ್ರಕೃತಿ, ಗಿರೀಶ್‌ ಹೆಗಡೆ, ಮಾಸ್ಟರ್‌ ಆಯುಷ್ ಸಂತೋಷ್‌, ಪ್ರಜ್ಞಾ ಗಣಪತಿ, ಗಣಪತಿ ಹಿತ್ತಲಕೈ, ಮಾಧವ ಶರ್ಮಾ, ಗೋಡೆ ನಾರಾಯಣ ಹೆಗಡೆ, ಗಣಪತಿ ಎ.ಆರ್. ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

‘ವಿಕಲ್ಪ’ ಸಿನಿಮಾ ಟೀಸರ್:

‘ವಿಕಲ್ಪ ಎಂದರೆ ವಾಸ್ತವ ಮತ್ತು ಕಲ್ಪನೆಗಳ ನಡುವಿನ ಒಂದು ಸ್ಥಿತಿ. ಇದೊಂದು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಕಥೆ. ಆದರೂ ಸಂಪೂರ್ಣ ಥ್ರಿಲ್ಲರ್‌ ಸಿನಿಮಾ ಎಂಬುದು ವಿಶೇಷ. ಜೊತೆಗೆ ಹಾಸ್ಯ ಮತ್ತು ಮನರಂಜನೆಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಕಥೆಯೇ ಈ ಸಿನಿಮಾದ ಹೀರೋ’ ಎಂದು ನಿರ್ದೇಶಕ, ನಟ ಪೃಥ್ವಿರಾಜ್‌ ಪಾಟೀಲ್‌ ಅವರು ಮಾಹಿತಿ ನೀಡಿದ್ದಾರೆ. ಈ ಸಿನಿಮಾದಲ್ಲಿ ಹರಿಣಿ ಶ್ರೀಕಾಂತ್‌ ಅವರು ಸೈಕಿಯಾಟ್ರಿಸ್ಟ್‌ ಪಾತ್ರ ಮಾಡಿದ್ದಾರೆ.

ಇದನ್ನೂ ಓದಿ: ಕುದುರೆಯಾ? ಹೆಗ್ಗಣವಾ? ಹೊಸ ಸಿನಿಮಾ ಘೋಷಿಸಿದ ಡಾಲಿ ಧನಂಜಯ್

ಮನೋವೈದ್ಯರ ಸಲಹೆಯ ಮೇರೆಗೆ ಹಲವು ದೃಶ್ಯಗಳ ಚಿತ್ರೀಕರಣ ನಡೆದಿದೆ ಎಂದು ಚಿತ್ರತಂಡ ಹೇಳಿದೆ. ಬೆಂಗಳೂರು, ಸಾಗರ, ತೀರ್ಥಹಳ್ಳಿ, ಶಿರಸಿ, ಯಲ್ಲಾಪುರ, ಕುಂದಾಪುರ, ಸಿಂಗಾಪುರ, ನೆದರ್ಲ್ಯಾಂಡ್‌ ಮುಂತಾದೆಡೆ ಶೂಟಿಂಗ್ ಮಾಡಲಾಗಿದೆ. ಅಭಿರಾಮ್‌ ಗೌಡ ಅವರು ಛಾಯಾಗ್ರಹಣ ಮಾಡಿದ್ದಾರೆ. ಸುರೇಶ್‌ ಆರುಮುಗಮ್‌ ಅವರ ಸಂಕಲನ ಈ ಚಿತ್ರಕ್ಕಿದೆ. ಸಂವತ್ಸರ ಅವರು ಸಂಗೀತ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆಸ್ತಿ ಮಾರಾಟ; ತೆರಿಗೆ ಉಳಿಸಲು ಸೆಕ್ಷನ್ 54 ಮತ್ತು 54ಎಫ್ ಅವಕಾಶ ಬಳಸಿ – Kannada News | Selling gold and other assets, get tax deductions using section 54f, know more details here

ಕಳೆದ ಕೆಲ ವರ್ಷಗಳಲ್ಲಿ ಚಿನ್ನದ ಬೆಲೆ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಇದರ ಮೇಲಿನ ಹೂಡಿಕೆ ಬಹಳ ಆಕರ್ಷಕ ಎನಿಸಿದೆ. ಚಿನ್ನದಂತಹ ಆಸ್ತಿಯನ್ನು ಮಾರಿದಾಗ ಕ್ಯಾಪಿಟಲ್ ಗೇನ್ ಟ್ಯಾಕ್ಸ್ (Capital Gain tax) ಅನ್ವಯ ಆಗುತ್ತದೆ. ಶೇ. 20ರವರೆಗೂ ತೆರಿಗೆ ಇದೆ. ದೀರ್ಘಾವಧಿ ಲಾಭ ಗಳಿಕೆ ತೆರಿಗೆ (Long term capital gain tax) ಶೇ. 12.5 ಇದೆ. ಅಲ್ಪಾವಧಿ ಲಾಭ ಗಳಿಕೆ ತೆರಿಗೆ ಶೇ. 20 ಇದೆ. ಇಷ್ಟು ದೊಡ್ಡ ಮೊತ್ತದ ಟ್ಯಾಕ್ಸ್ ಅನ್ನು ಕಟ್ಟುವುದನ್ನು ತಪ್ಪಿಸಲು ಇನ್ಕಮ್ ಟ್ಯಾಕ್ಸ್ (Income Tax) ಕಾನೂನಿನಲ್ಲಿ ಒಂದು ಅವಕಾಶ ಕೊಡಲಾಗಿದೆ. ಅದು ಸೆಕ್ಷನ್ 54ಎಫ್ ಮಾರ್ಗ.

ಏನಿದು ಸೆಕ್ಷನ್ 54ಎಫ್?

ಈ ಸೆಕ್ಷನ್​ನಲ್ಲಿ ಜನರು ಮನೆ ಖರೀದಿಸಲಾಗುವಂತೆ ಪ್ರೋತ್ಸಾಹಿಸಲಾಗುತ್ತದೆ. ನೀವು ಒಂದು ಆಸ್ತಿಯನ್ನು ಮಾರಿ ಅದರಿಂದ ಬಂದ ಹಣವನ್ನು ವಾಸದ ಮನೆ ಖರೀದಿಸಲು ಅಥವಾ ಕಟ್ಟಲು ಬಳಸಿದರೆ ಆಗ ಆ ಹಣಕ್ಕೆ ತೆರಿಗೆ ವಿನಾಯಿತಿ ಸಿಗುತ್ತದೆ. ಅಂದರೆ, ಆಸ್ತಿ ಮಾರಿ ಸಿಕ್ಕ ಲಾಭಕ್ಕೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಕಟ್ಟಬೇಕಾಗುವುದಿಲ್ಲ.

ಇದನ್ನೂ ಓದಿ: ಪೋಸ್ಟ್ ಆಫೀಸ್ ಸ್ಮಾಲ್ ಸೇವಿಂಗ್ ಸ್ಕೀಮ್​ಗಳ ಬಡ್ಡಿದರದಲ್ಲಿ ಇಳಿಕೆ ಇಲ್ಲ; ಇಲ್ಲಿದೆ ಜನವರಿ-ಮಾರ್ಚ್ ಕ್ವಾರ್ಟರ್​ನ ಬಡ್ಡಿದರಗಳ ಪಟ್ಟಿ

ಚಿನ್ನ, ಷೇರುಗಳು, ಮ್ಯೂಚುವಲ್ ಫಂಡ್​ಗಳು ಇತ್ಯಾದಿ ಆಸ್ತಿಗಳಿಗೆ ಸೆಕ್ಷನ್ 54ಎಫ್ ಅನ್ವಯ ಆಗುತ್ತದೆ. ಕಮರ್ಷಿಯಲ್ ಆಸ್ತಿಯ ಮಾರಾಟದಿಂದ ಬಂದ ಹಣಕ್ಕೂ ಈ ವಿನಾಯಿತಿ ಸಿಗುತ್ತದೆ.

ಸೆಕ್ಷನ್ 54ಎಫ್​ನಂತೆ ಸೆಕ್ಷನ್ 54 ಕೂಡ ಇದೆ. ನೀವು ಮನೆಯನ್ನು ಮಾರಿ ಆ ಹಣವನ್ನು ಬೇರೊಂದು ಮನೆ ಖರೀದಿಸಲು ಅಥವಾ ನಿರ್ಮಿಸಲು ಬಳಸಿದರೆ ಆಗ ಸೆಕ್ಷನ್ 54 ನೆರವಿಗೆ ಬರುತ್ತದೆ. ಆದರೆ, ನೀವು ಮನೆ ಖರೀದಿಸಿ ಕನಿಷ್ಠ ಎರಡು ವರ್ಷ ಆದ ಬಳಿಕವಷ್ಟೇ ಮಾರಿ, ಅದನ್ನು ಎರಡು ವರ್ಷದೊಳಗೆ ಬೇರೆ ಮನೆ ಖರೀದಿಗೆ ಬಳಸಬೇಕು. ಅಥವಾ ಮೂರು ವರ್ಷದೊಳಗೆ ಹೊಸ ಮನೆ ಕಟ್ಟಬೇಕು. ಆಗ ಹಿಂದಿನ ಮನೆ ಮಾರಾಟದಿಂದ ಬಂದ ಲಾಭಕ್ಕೆ ನೀವು ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಕಟ್ಟುವ ಅಗತ್ಯ ಇರುವುದಿಲ್ಲ.

ಇದನ್ನೂ ಓದಿ: 27 ವರ್ಷಗಳಲ್ಲಿ ಅಮೆರಿಕದ ಈಕ್ವಿಟಿ ಹಾಗೂ ಚಿನ್ನವನ್ನೂ ಮೀರಿಸಿದ್ಯಾ ಭಾರತದ ನಿಫ್ಟಿ?; ಹೇಗೆ ಹೂಡಿಕೆ ಮಾಡುವುದು ನಿಫ್ಟಿ50ಯಲ್ಲಿ?

ಒಂದು ವೇಳೆ ನೀವಿರುವ ವಾಸದ ಮನೆಯನ್ನು ಸರ್ಕಾರ ಸ್ವಾಧೀನಪಡಿಸಿಕೊಂಡು, ಅದಕ್ಕೆ ಪರಿಹಾರ ಹಣ ಕೊಟ್ಟರೆ ಅದಕ್ಕೂ ಟ್ಯಾಕ್ಸ್ ಬೆನಿಫಿಟ್ ಇರುತ್ತದೆ. ಆ ಕಾಂಪೆನ್ಸೇಶನ್ ಹಣವನ್ನು ಬೇರೆ ಮನೆ ಖರೀದಿಗೆ ಅಥವಾ ನಿರ್ಮಾಣಕ್ಕೆ ಬಳಸಬೇಕು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ – Kannada News | Congress Workers Attempts to Attack On Minister V Somanna With chair at Koppal

ಕೊಪ್ಪಳ, (ಜನವರಿ 05): ರೈಲ್ವೆ ಮೇಲ್ಸೇತುವೆ ಕಾಮಗಾರಿ ಶಿಲಾನ್ಯಾಸ ಕಾರ್ಯಕ್ರಮದ ವೇಳೆ ಕೇಂದ್ರ ಸಚಿವ ಸೋಮಣ್ಣ (Minister V Somanna )ಮೇಲೆಯೇ ಕಾಂಗ್ರೆಸ್ ಕಾರ್ಯಕರ್ತರು ಕುರ್ಚಿ ತೂರಿರುವ ಘಟನೆ ನಡೆದಿದೆ. ಇಂದು (ಜನವರಿ 05) ಕೊಪ್ಪಳ (Koppal) ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರೈಲ್ವೆ ಮೇಲ್ಸೇತುವೆ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲಿಸಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶಗೊಂಡಿದ್ದು, ಗಲಾಟೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಕೆಲ ಕೈ ಕಾರ್ಯಕರ್ತರು, ಸಚಿವ ಸೋಮಣ್ಣ ಅವರತ್ತ ಕುರ್ಚಿ ತೂರಿದ್ದಾರೆ. ಈ ವೇಳೆ ಅಂಗರಕ್ಷಕರು ಕುರ್ಚಿಗಳನ್ನ ತಡೆದಿದ್ದಾರೆ. ಇದರಿಂದ ಅನಾಹುತ ತಪ್ಪಿದಂತಾಗಿದೆ.

ಇದನ್ನೂ ಓದಿ: ಕೊಪ್ಪಳದಲ್ಲಿ ಹೈಡ್ರಾಮಾ: ಕೇಂದ್ರ ಸಚಿವರತ್ತಲೇ ಕುರ್ಚಿ ತೂರಿದ ‘ಕೈ’ ಕಾರ್ಯಕರ್ತರು!

Source link

ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ!

ಬೀದರ್, ಜನವರಿ 05: ಬೀದರ್ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಕೆಡಿಪಿ ಸಭೆ ಗಲಾಟೆಗೆ ಕಾರಣವಾಯಿತು. ಸಭೆಯಲ್ಲಿ ಹುಮನಾಬಾದ್ ಕ್ಷೇತ್ರದ ಶಾಸಕ ಸಿದ್ದು ಪಾಟೀಲ್ ಹಾಗೂ ಎಂಎಲ್‌ಸಿ ಭೀಮರಾವ್ ಪಾಟೀಲ್ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಭೀಮರಾವ್ ಪಾಟೀಲ್ ಅವರು ಅರಣ್ಯ ಇಲಾಖೆಯ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಶಾಸಕ ಸಿದ್ದು ಪಾಟೀಲ್ ಆರೋಪಿಸಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಗೆ ತಿಳಿಸಿದರು. ಇದಕ್ಕೆ ಕೋಪಗೊಂಡ ಭೀಮರಾವ್ ಪಾಟೀಲ್, “ಅದನ್ನು ಕೇಳಲು ನೀನ್ಯಾರು?” ಎಂದು ಪ್ರತಿಕ್ರಿಯಿಸಿ ಏಕವಚನದಲ್ಲಿ ನಿಂದಿಸಿದಾಗ ವಾಗ್ವಾದವು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪುತ್ತಿದ್ದಂತೆ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಇಬ್ಬರನ್ನೂ ಬೇರ್ಪಡಿಸಿದರು. ನಂತರ ಸಚಿವ ಈಶ್ವರ ಖಂಡ್ರೆ ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಳ್ಳಾರಿ ಗಲಭೆ: 26 ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್​ – Kannada News | Ballari Banner Violence: 26 Accused in Judicial Custody and Shifted to Parappana Agrahara

ಬೆಂಗಳೂರು, ಜನವರಿ 05: ಬಳ್ಳಾರಿಯ ಬ್ಯಾನರ್​​ ಗಲಾಟೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತ ಬಲಿ ಪ್ರಕರಣಕ್ಕೆ (bellary violence Case) ಸಂಬಂಧಿಸಿದಂತೆ ಕೊಲೆ ಆರೋಪಿ ಗುರುಚರಣ್‌ ಸಿಂಗ್ ಸೇರಿ 26 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ (Judicial Custody) ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೋಮವಾರ ಆದೇಶ ಹೊರಡಿಸಿದೆ. ಸದ್ಯ ಪೊಲೀಸರು ಪ್ರಕರಣದ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಿದ್ದಾರೆ.

ಹೊಸ ವರ್ಷದ ಮೊದಲ ದಿನವೇ ಗಣಿನಾಡು ಬಳ್ಳಾರಿ ಹೊತ್ತಿ ಉರಿದಿತ್ತು. ಅಂದು ಕಾಂಗ್ರೆಸ್‌ ಕಾರ್ಯಕರ್ತ
ರಾಜಶೇಖರ್‌ ಫೈರಿಂಗ್‌ಗೆ ಬಲಿ ಆಗಿದ್ದ. ಶಾಸಕ ಭರತ್‌ ರೆಡ್ಡಿ ಆಪ್ತ ಸತೀಶ್‌ ರೆಡ್ಡಿ ಗನ್‌ಮ್ಯಾನ್‌ನಿಂದಲೇ ಈ ಫೈರಿಂಗ್‌ ಆಗಿದೆ ಅನ್ನೋದು ಗೊತ್ತಾಗಿತ್ತು. ಗನ್‌ಮ್ಯಾನ್ ಗುರುಚರಣ್‌ ಸಿಂಗ್ ವಿರುದ್ಧವೇ ಪೊಲೀಸರು ಬೊಟ್ಟು ಮಾಡಿದ್ದರು. ಗುರುಚರಣ್‌ ಹಾರಿಸಿದ್ದ ಬುಲೆಟ್‌ಗೆ ರಾಜಶೇಖರ್‌ ಮೃತಪಟ್ಟಿದ್ದಾನೆ ಅನ್ನೋದನ್ನ ಪೊಲೀಸ್‌ ಮೂಲಗಳು ಖಚಿತಪಡಿಸಿವೆ.

ಗುಂಡು ಹಾರಿಸಿದ ಗುರುಚರಣ್‌ ಸಿಂಗ್‌ ಸೇರಿ ಒಟ್ಟು 26 ಮಂದಿ ಲಾಕ್!

ಜನವರಿ 1ರಂದು ನಡೆದಿದ್ದ ಗಲಭೆ ದಿನ ಶಾಸಕ ಭರತ್‌ ರೆಡ್ಡಿ ಆಪ್ತನ ಗನ್‌ಮ್ಯಾನ್‌ನಿಂದಲೇ ಫೈರಿಂಗ್‌ ಆಗಿದೆ ಅನ್ನೋದು ಗೊತ್ತಾಗಿದೆ. ಗನ್‌ಮ್ಯಾನ್‌ಗಳಾದ ಗುರುಚರಣ್‌ ಸಿಂಗ್‌, ಬಲ್ಜಿತ್ ಸಿಂಗ್‌ ಹಾಗೂ ಮಹೇಂದ್ರ ಸಿಂಗ್​​ನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಅಷ್ಟೇ ಅಲ್ಲ ಗುರುಚರಣ ಸಿಂಗ್ ತಂಗಿದ್ದ ಎಂಆರ್​ವಿ ಬಡಾವಣೆಯಲ್ಲಿರುವ ಮನೆಗೆ ಕರೆತಂದು ಮಹಜರೂ ಮಾಡಿದ್ದಾರೆ. ಈ ವೇಳೆ ಬುಲೆಟ್ ಕಾಟ್ರಿಜ್​ಗಳನ್ನ ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಜನಾರ್ದನ ರೆಡ್ಡಿ ನಿವಾಸದ ಬಳಿಯೂ ತಂದು ಮಹಜರು ಮಾಡಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಗಲಭೆ: 20 ಜನರ ಬಂಧನ, ಕಾಂಗ್ರೆಸ್​​ನವರೆಷ್ಟು, ಬಿಜೆಪಿಯವರೆಷ್ಟು? ರೆಡ್ಡಿಗೂ ಸಂಕಷ್ಟ

ಇನ್ನು ಬಳ್ಳಾರಿ ಬ್ಯಾನರ್ ಗಲಾಟೆ ಸಂಬಂಧ ಬ್ರೂಸ್‌ಪೇಟೆ ಠಾಣೆಯಲ್ಲಿ ಒಟ್ಟು 6 ಪ್ರಕರಣ ದಾಖಲಾಗಿವೆ. ಮೊನ್ನೆ 45 ಜನರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದ ಪೊಲೀಸರು, ಕಾಂಗ್ರೆಸ್‌ನ 10, ಬಿಜೆಪಿಯ 11 ಕಾರ್ಯಕರ್ತರು ಸೇರಿದಂತೆ 26 ಜನರನ್ನು ಬಂಧಿಸಿದ್ದರು. ಕೇಸ್ ಜನಪ್ರತಿನಿಧಿಗಳ ವಿಶೇಷ ಕೋರ್ಟ್​​ ವ್ಯಾಪ್ತಿಗೆ ಬರುವುದರಿಂದ 26 ಆರೋಪಿಗಳನ್ನು ಇಂದು ಕೋರ್ಟ್​ಗೆ ಹಾಜರು ಪಡಿಸಿ ಇದೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 3:22 pm, Mon, 5 January 26

Source link

ಕುರ್ಚಿ ಕದನಕ್ಕೆ ಹೊಸ ಟ್ವಿಸ್ಟ್: ಗದ್ದುಗೆ ಗುದ್ದಾಟಕ್ಕೆ ದಲಿತ ಸ್ವಾಮೀಜಿಗಳ ಎಂಟ್ರಿ – Kannada News | Dalit Leaders Demand CM Post Amid Power Struggle, Siddaramaiah Under Pressure

ಕುರ್ಚಿ ಕದನಕ್ಕೆ ಹೊಸ ಟ್ವಿಸ್ಟ್: ಗದ್ದುಗೆ ಗುದ್ದಾಟಕ್ಕೆ ದಲಿತ ಸ್ವಾಮೀಜಿಗಳ ಎಂಟ್ರಿ

ಮೈಸೂರು, ಜನವರಿ 05: ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿರುವ ಕುರ್ಚಿ ಕದನ ಇನ್ನೂ ಅಂತ್ಯ ಕಾಣದಿರುವ ಹಿನ್ನೆಲೆಯಲ್ಲಿ ಇದೀಗ ದಲಿತ ನಾಯಕರು ಹಾಗೂ ದಲಿತ ಸಮುದಾಯದ ಸ್ವಾಮೀಜಿಗಳು ಅಖಾಡಕ್ಕೆ ಇಳಿದಿದ್ದಾರೆ. ವಿಶೇಷವೆಂದರೆ, ಈ ಬೆಳವಣಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿಯೇ ನಡೆದಿದೆ.

ಅಹಿಂದ ರಾಜಕಾರಣದಲ್ಲಿ ‘ಅ’ ಮತ್ತು ‘ದ’ ಪಾತ್ರ ಸ್ಪಷ್ಟಪಡಿಸಿ ಎಂದ ಸ್ವಾಮೀಜಿ

ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ದಲಿತ ಸಮಾಜದ ಪ್ರಮುಖ ಮುಖಂಡರು ಹಾಗೂ ವಿವಿಧ ಮಠಗಳ ಸ್ವಾಮೀಜಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಮಾತನಾಡಿದ ನಾಯಕರು, ಸಿದ್ದರಾಮಯ್ಯ ಅವರು ಅಹಿಂದ ರಾಜಕಾರಣದಲ್ಲಿ ‘ಅ’ ಮತ್ತು ‘ದ’ ಅಂದರೆ ಅಲ್ಪಸಂಖ್ಯಾತರು ಹಾಗೂ ದಲಿತರ ಪಾತ್ರವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೆ, ದಲಿತ ಸಮುದಾಯದ ನಾಯಕನನ್ನೇ ಮುಖ್ಯಮಂತ್ರಿ ಮಾಡಬೇಕು ಎಂಬ ಕೂಗು ಸಭೆಯಲ್ಲಿ ಜೋರಾಗಿ ಕೇಳಿಬಂತು. “ನನ್ನ ನಂತರ ದಲಿತರು ಸಿಎಂ” ಎಂದು ಸಿದ್ದರಾಮಯ್ಯ ಘೋಷಿಸಿದರೆ, ಅವರು ದಿ. ದೇವರಾಜ ಅರಸು ಅವರಿಗಿಂತಲೂ ಒಂದು ಹಂತ ಮೇಲಕ್ಕೆ ಹೋಗುತ್ತಾರೆ ಎಂದು ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಖರ್ಗೆ, ಪರಮೇಶ್ವರ್​​ಗೆ ಅನ್ಯಾಯವಾಗಲು ಬಿಡಲ್ಲ

ಮಲ್ಲಿಕಾರ್ಜುನ ಖರ್ಗೆ ಹಾಗೂ ಜಿ. ಪರಮೇಶ್ವರ್ ಅವರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದ ಸ್ವಾಮೀಜಿ, ಡಿ.ಕೆ. ಶಿವಕುಮಾರ್ ಕೂಡ ಮುಂದೆ ಮುಖ್ಯಮಂತ್ರಿ ಆಗಲಿ, ಆದರೆ ಮೊದಲು ದಲಿತರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. 75 ವರ್ಷಗಳಿಂದ ಕಾಂಗ್ರೆಸ್ ಜೊತೆ ನಿಂತಿರುವ ದಲಿತ ಸಮುದಾಯಕ್ಕೆ ನ್ಯಾಯ ಸಿಗಬೇಕು. ಈಗಾಗಲೇ ಶೇ.70ರಷ್ಟು ದಲಿತರು ಕಾಂಗ್ರೆಸ್‌ನಿಂದ ದೂರವಾಗಿದ್ದಾರೆ, ಬೇಡಿಕೆ ಈಡೇರದಿದ್ದರೆ ಉಳಿದ ಶೇ.30ರಷ್ಟು ಜನರೂ ದೂರವಾಗುತ್ತಾರೆ ಎಂದು ಸಭೆಯಲ್ಲಿ ಆಕ್ರೋಶ ಹೊರಹಾಕಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಇಲಿಗಳ ಕಾಟದಿಂದ ಶಾಶ್ವತ ಪಡೆಯಲು ನೆಲ ಒರೆಸುವ ನೀರಿಗೆ ಈ ಒಂದು ವಸ್ತುವನ್ನು ಬೆರಸಿ – Kannada News | Here is an easy solution to get permanent relief from rat infestation

ಬಹುತೇಕರ ಮನೆಗಳಲ್ಲಿ ಹಲ್ಲಿ, ಸೊಳ್ಳೆ, ಇಲಿಗಳ (rats) ಕಾಟ ಇದ್ದೇ ಇರುತ್ತದೆ. ಅದರಲ್ಲೂ ಈ ಇಲಿಗಳು ಅಡುಗೆ ಸಾಮಾಗ್ರಿಗಳ ಜೊತೆಗೆ ಬಟ್ಟೆ, ಮನೆಯಲ್ಲಿರುವ ಇತರೆ ವಸ್ತುಗಳನ್ನು ಸಹ ಹಚ್ಚಿ ಹಾಳು ಮಾಡಿ ಬಿಡುತ್ತವೆ. ಇವುಗಳ ಈ ಕಾಟದಿಂದ ಮುಕ್ತಿ ಪಡೆಯಲು ಹೆಚ್ಚಿನವರು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಉತ್ಪನ್ನಗಳನ್ನು ಉಪಯೋಗ ಮಾಡುತ್ತಾರೆ, ಇನ್ನೂ ಕೆಲವು ಹಲವು ಬಗೆಯ ಮನೆ ಮದ್ದುಗಳನ್ನು ಸಹ ಪ್ರಯೋಗ ಮಾಡುತ್ತಾರೆ. ಆದ್ರೆ ಇವುಗಳಿಂದ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದಾದ್ರೆ, ನೆಲ ಒರೆಸುವ ನೀರಿಗೆ ಕರ್ಪೂರವನ್ನು ಸೇರಿಸಿ ಮನೆಯನ್ನು ಕ್ಲೀನ್‌ ಮಾಡಿ. ಈ ಒಂದು ಸರಳ ಪರಿಹಾರದಿಂದ ಯಾವುದೇ ಹೆಣಗಾಟವಿಲ್ಲದೆ ಸುಲಭವಾಗಿ ಇಳಿಗಳ ಕಾಟದಿಂದ ಮುಕ್ತಿ ಪಡೆಯಬಹುದು.

ಇಲಿಗಳನ್ನು ಓಡಿಸಲು ಕರ್ಪೂರ ಹೇಗೆ ಸಹಾಯ ಮಾಡುತ್ತದೆ?

ಇಲಿಗಳನ್ನು ಮನೆಯಿಂದ ಓಡಿಸಲು ಕರ್ಪೂರ ಅಗ್ಗದ ಮತ್ತು ಪರಿಣಾಮಕಾರಿ ಮನೆಮದ್ದಾಗಿದೆ. ಕರ್ಪೂರವು ತುಂಬಾ ಬಲವಾದ ವಾಸನೆಯನ್ನು ಹೊಂದಿರುತ್ತದೆ, ಇದನ್ನು ಇಲಿಗಳು ಇಷ್ಟಪಡುವುದಿಲ್ಲ. ಅವು ಅದರ ಬಲವಾದ ವಾಸನೆಯನ್ನು ಸಹಿಸುವುದಿಲ್ಲ ಮತ್ತು ತಕ್ಷಣವೇ ಆ ಪ್ರದೇಶದಿಂದ ಓಡಿಹೋಗಲು ಪ್ರಯತ್ನಿಸುತ್ತವೆ. ಇದು ಇಲಿಗಳನ್ನು ಓಡಿಸಲು ನೈಸರ್ಗಿಕ ಪರಿಹಾರ ಮಾತ್ರವಲ್ಲದೆ ಸುರಕ್ಷಿತ ಪರಿಹಾರವು ಹೌದು.

ಇಲಿಗಳನ್ನು ಓಡಿಸಲು ಕರ್ಪೂರವನ್ನು ಹೇಗೆ ಬಳಸಬೇಕು?

ನೀವು ನೆಲ ಒರೆಸುವ ನೀರಿಗೆ ನೀರಿಗೆ 4-5 ತುಂಡು ಕರ್ಪೂರವನ್ನು ಸೇರಿಸಿ, ಈ ನೀರನ್ನು ಬಳಸಿ ಇಡೀ ಮನೆಯನ್ನು ಒರೆಸಿ. ಕರ್ಪೂರ ಕಡಿಮೆ ಇದ್ದರೆ ಅದಕ್ಕೆ ನೀವು ಸ್ವಲ್ಪ ಪುದೀನಾ ಎಣ್ಣೆಯನ್ನೂ ಸೇರಿಸಬಹುದು.  ಇಲಿಗಳು ಹೆಚ್ಚಾಗಿ ಓಡಾಡುವ ಸ್ಥಳಗಳಾದ ಅಡುಗೆಮನೆ, ಬಾಗಿಲು, ಕಿಟಕಿಗಳ ಬಳಿ ಚೆನ್ನಾಗಿ ಸ್ವಚ್ಛಗೊಳಿಸಿ, ನೀವು ನಿಮ್ಮ ಮನೆಯನ್ನು ಕರ್ಪೂರ ಬೆರೆಸಿದ ನೀರಿನಿಂದ ಒರೆಸಿದ ತಕ್ಷಣ, ಅದರ ವಾಸನೆಯು ಇಲಿಗಳನ್ನು ಕೆರಳಿಸಲು ಪ್ರಾರಂಭಿಸುತ್ತದೆ. ಅವು ಶೀಘ್ರದಲ್ಲೇ ಅಲ್ಲಿಂದ ಓಡಿಹೋಗುತ್ತವೆ. ಪ್ರತಿನಿತ್ಯ ಈ ರೀತಿ ಮಾಡುವುದರಿಂದ ಇಲಿಗಳ ಕಾಟದಿಂದ ಸುಲಭವಾಗಿ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದು. ಬಯಸಿದರೆ ನೀವು ಇಲಿಗಳು ಕಂಡುಬರುವ ಇಂತಹ ಸ್ಥಳಗಳಲ್ಲಿ ಸಣ್ಣ ತುಂಡು ಕರ್ಪೂರವನ್ನು ಇಡಬಹುದು.

ಇದನ್ನೂ ಓದಿ: ಬಲು ಸುಲಭವಾಗಿ ಬೆಳ್ಳುಳ್ಳಿ ಸಿಪ್ಪೆ ಸುಳಿಯಲು ಈ ಸಿಂಪಲ್‌ ಟ್ರಿಕ್ಸ್‌ ಅನುಸರಿಸಿ

ಕರ್ಪೂರದ ಇತರೆ ಪ್ರಯೋಜನಗಳೇನು?

ಕರ್ಪೂರವು ಇಲಿಗಳನ್ನು ಹಿಮ್ಮೆಟ್ಟಿಸುವುದು ಮಾತ್ರವಲ್ಲದೆ, ಮನೆಗೆ ಸುವಾಸನೆಯನ್ನು ಕೂಡ ನೀಡುತ್ತದೆ. ಇದರ ಪರಿಮಳವು ತಾಜಾತನದ ಭಾವನೆಯನ್ನು ಸೃಷ್ಟಿಸುತ್ತದೆ ಮತ್ತು ಬ್ಯಾಕ್ಟೀರಿಯಾಗಳನ್ನು ಮನೆಯಿಂದ ದೂರವಿಡುತ್ತದೆ. ಇದು ನೈಸರ್ಗಿಕ ಮತ್ತು ರಾಸಾಯನಿಕ-ಮುಕ್ತ ವಿಧಾನವಾಗಿದೆ. ಕರ್ಪೂರ ಇಲಿಗಳನ್ನು ಮಾತ್ರವಲ್ಲದೆ ಕೀಟಗಳ ಕಾಟದಿಂದಲೂ ಪರಿಹಾರ ಒದಗಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ, ಸ್ಥಳದಲ್ಲೇ ಪ್ರಾಣ ಬಿಟ್ಟ ಇಬ್ಬರು ಯುವಕರು – Kannada News | Machohalli Fatal Crash: Bolero Swift Collision Kills Two Young Men

ಬೆಂಗಳೂರು,ಜ.5: ಬೊಲೆರೋ ವಾಹನವೊಂದು ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದು ಇಬ್ಬರ ಯುವಕರು ಸಾವನ್ನಪ್ಪಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿ ಬಳಿ ನಡೆದಿದೆ. ಗಗನ್ (27), ದರ್ಶನ್ (26) ಮೃತರು ಎಂದು ಹೇಳಲಾಗಿದೆ. ಚನ್ನರಾಯಪಟ್ಟಣದ ಮೂಲದ ಗಗನ್ ಮಾದನಾಯಕನಹಳ್ಳಿ ಖಾಸಗಿ ಬಾರ್​​ನಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ. ದರ್ಶನ್ ಕೋಳಿ ಸಪ್ಲೈ ಮಾಡುವ ವಾಹನ ಡ್ರೈವರ್ ಆಗಿದ್ದ. ಎಲೆಕ್ಟ್ರಾನಿಕ್ ಸಿಟಿ ಬಳಿ ಇರುವ ಸ್ನೇಹಿತನ ರೂಂಗೆ ತೆರಳುತ್ತಿದ್ದ ವೇಳೆ, ಮಾಗಡಿ ರಸ್ತೆಯ ಮಾಚೋಹಳ್ಳಿ ಬೊಲೆರೋ ವಾಹನ ಬಂದು ಇವರ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಸದ್ಯ ಇಬ್ಬರ ಮೃತ ದೇಹ ನೆಲಮಂಗಲ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಮಾದನಾಯಕನಹಳ್ಳಿ ಪೊಲೀಸರು ಮರಣೋತ್ತರ ಪರೀಕ್ಷೆ ಕಳಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Source link

Video: ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಉದ್ಯಮಿ ಮುಖೇಶ್ ಅಂಬಾನಿ – Kannada News | Mukesh Ambani Duo Seeks Blessings at Salangpur’s Kashtbhanjan Hanuman Temple and makes Rs 5 Crore Contribution

ಮುಂಬೈ, ಜನವರಿ 05: ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ(Mukesh Ambani) ತಮ್ಮ ಮಗ ಅನಂತ್ ಅಂಬಾನಿ ಜತೆ ಕಷ್ಟಭಂಜನ್ ದೇವ್ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ದೇವಸ್ಥಾನಕ್ಕೆ 5 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಈ ದೇಣಿಗೆಯನ್ನು ದೇವಾಲಯದ ಅಭಿವೃದ್ಧಿ ಮತ್ತು ಭಕ್ತರಿಗೆ ಸೌಲಭ್ಯಗಳಿಗಾಗಿ ಬಳಸಲಾಗುತ್ತದೆ.

ಜನವರಿ 2 ರಂದು ಮುಖೇಶ್ ಅಂಬಾನಿ, ನೀತಾ ಅಂಬಾನಿ ಮತ್ತು ಅನಂತ್ ಅವರು ಪ್ರಭಾಸ್ ಪಠಾಣ್‌ನಲ್ಲಿರುವ ಸೋಮನಾಥ ಮಹಾದೇವ ಜ್ಯೋತಿರ್ಲಿಂಗಕ್ಕೆ ಭೇಟಿ ನೀಡಿದ್ದರು. ಅಂಬಾನಿ ಕುಟುಂಬವು ಇಲ್ಲಿ ಶಿವನಿಗೆ ಜಲಶುದ್ಧೀಕರಣ ಕಾರ್ಯಕ್ರಮವನ್ನು ನಡೆಸಿತ್ತು. ಸೋಮನಾಥಕ್ಕೆ ಭೇಟಿ ನೀಡಿದ ತಕ್ಷಣ, ಅವರು ನೇರವಾಗಿ ಸಾರಂಗಪುರ ಹನುಮಾನ್ ದೇವಸ್ಥಾನಕ್ಕೆ ಹೋದರು. ಕಷ್ಟಭಂಜನ ದೇವ್ ಅವರನ್ನು ತೊಂದರೆ ನಿವಾರಕ ಎಂದು ಪರಿಗಣಿಸಲಾಗುತ್ತದೆ ಮತ್ತು ಅಂಬಾನಿ ಕುಟುಂಬವು ಆ ದೇವರ ಮೇಲೆ ಆಳವಾದ ನಂಬಿಕೆಯನ್ನು ಇಟ್ಟಿದೆ.

ಈ ದೇವಸ್ಥಾನವು ಬೋಟಾಡ್ ಜಿಲ್ಲೆಯ ಸಲಾಂಗ್​ಪರದಲ್ಲಿದೆ. ಅಲ್ಲಿ ಮುಖೇಶ್ ಅವರಿಗೆ ಹಾರ ಹಾಕಿ ಆಶೀರ್ವಾದವಾಗಿ ಹನುಮಾನ್ ದಾದಾ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಲಾಯಿತು.ಈ ಸಂದರ್ಭದಲ್ಲಿ, ಮುಖೇಶ್ ಅಂಬಾನಿ ದೇವಾಲಯದ ಆವರಣದಲ್ಲಿ ಗೋಪೂಜೆಯನ್ನು ಸಹ ನೆರವೇರಿಸಿದರು.

ಮತ್ತಷ್ಟು ಓದಿ: ಭಾರತದ ಅತ್ಯಂತ ಶ್ರೀಮಂತರು ಇವರು; ರೋಷನಿಗೆ 3ನೇ ಸ್ಥಾನ; ಬೆಂಗಳೂರಿಗೂ 3ನೇ ಸ್ಥಾನ

ಮುಖೇಶ್ ಅಂಬಾನಿ ಅವರು ಸಲಾಂಗ್‌ಪುರ ಹನುಮಾನ್‌ಜಿ ದೇವಾಲಯದ ಅಭಿವೃದ್ಧಿ ಕಾರ್ಯಗಳಿಗಾಗಿ 5 ಕೋಟಿ ರೂ.ಗಳ ಬೃಹತ್ ಮೊತ್ತವನ್ನು ದೇಣಿಗೆ ನೀಡಿದ್ದಾರೆ. ಈ ದೇಣಿಗೆಯು ದೇವಾಲಯದ ಮೂಲಸೌಕರ್ಯ, ಸೌಲಭ್ಯಗಳು ಮತ್ತು ಯಾತ್ರಾರ್ಥಿಗಳಿಗೆ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸುತ್ತದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link