ಬೈ ಎಲೆಕ್ಷನ್: ಬಾಗಲ’ಕೋಟೆ’ ಯಾರಿಗೆ? ಹೇಗಿದೆ ಕಾಂಗ್ರೆಸ್-ಬಿಜೆಪಿ ನಾಯಕರ ಗೆಲುವಿನ ಲೆಕ್ಕಾಚಾರ?
ಬಾಗಲಕೋಟೆ, (ಏಪ್ರಿಲ್ 12): ಕಾಂಗ್ರೆಸ್ ಶಾಸಕರಾಗಿದ್ದ ಹೆಚ್ ವೈ ಮೇಟಿ ಅಕಾಲಿಕ ನಿಧನದಿಂದ ನಡೆದ ಬಾಗಲಕೋಟೆ ಉಪಚುನಾವಣೆ (Bagalkot By Election) ಅಂತ್ಯವಾಗಿದ್ದು. ಇದೀಗ ಎಲ್ಲರ ಚಿತ್ತ ಮೇ 4ರ ಫಲಿತಾಂಶದತ್ತ ನೆಟ್ಟಿದೆ. ಉಪಚುನಾವಣೆಯಲ್ಲಿ ಶೇ.68.74ರಷ್ಟು ಮತದಾನವಾಗಿದೆ. ಆದ್ರೆ, ಕಳೆದ ಬಾರಿ ಅಂದರೆ 2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಶೇ. 69.40ರಷ್ಟು ವೋಟಿಂಗ್ ಆಗಿದ್ದು, ಈ ಬಾರಿ ಕಳೆದ ಬಾರಿಗಿಂತ ಕಡಿಮೆ ಆಗಿದೆ. ಈ ಹಿನ್ನೆಲೆಯಲ್ಲಿ ಮತದಾನದ ಪ್ರತಿಶತ ಆಧಾರದ ಮೇಲೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ…