Headlines

nagaraj11081993

MI vs RCB: ಮುಂಬೈ ವಿರುದ್ಧ ಸಿಡಿಲಬ್ಬರದ ಅರ್ಧಶತಕ ಚಚ್ಚಿದ ಸಾಲ್ಟ್

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ 2026 ರ 20ನೇ ಪಂದ್ಯದಲ್ಲಿ ಐದು ಬಾರಿಯ ಮುಂಬೈ ತಂಡವನ್ನು ಎದುರಿಸಿದ್ದ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆರಂಭಿಕ ಫಿಲ್ ಸಾಲ್ಟ್ ಸಿಡಿಲಬ್ಬರದ ಅರ್ಧಶತಕ ಬಾರಿಸಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಫಾರ್ಮ್​ ಕಂಡುಕೊಳ್ಳಲು ಹೆಣಗಾಡುತ್ತಿದ್ದ ಸಾಲ್ಟ್ ಸರಿಯಾದ ಸಂದರ್ಭದಲ್ಲಿ ತಮ್ಮ ಹಳೆಯ ಲಯಕ್ಕೆ ಮರಳಿದ್ದಾರೆ. ಮುಂಬೈನಂತಹ ಬಲಿಷ್ಠ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಸಾಲ್ಟ್ ಬೌಂಡರಿ ಹಾಗೂ ಸಿಕ್ಸರ್​ಗಳ ಮಳೆಗರೆದರು. ಇದರ ಪರಿಣಾಮವಾಗಿ ಕೇವಲ 25…

Read More

ಟಿವಿ9 ಎಜುಕೇಶನ್ ಎಕ್ಸ್ಪೋ: ಪ್ರಥಮ್ ಮೆಚ್ಚುಗೆ ಮಾತು

ಬೆಂಗಳೂರಿನ ಅರಮನೆ ಮೈದಾನದಲ್ಲಿ, ಟಿವಿ9 ಎಜುಕೇಷನ್ ಸಮ್ಮಿಟ್ (Tv9 Education summit) ಆಯೋಜಿಸಿದೆ. ವಿದ್ಯಾರ್ಥಿಗಳು, ಪೋಷಕರು, ವಿವಿಧ, ಪ್ರತಿಷ್ಠಿತ ಶಾಲಾ-ಕಾಲೇಜುಗಳ ಸಿಬ್ಬಂದಿ ಒಂದೇ ಸೂರಿನಡಿ ಪರಸ್ಪರ ಚರ್ಚಿಸಿ, ಸಂವಾದ ನಡೆಸಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಆಯ್ಕೆಗೆ ಎಕ್ಸ್ಪೋ ಸಹಾಯ ಮಾಡುತ್ತಿದೆ. ಹಲವು ರಂಗಗಳ ಪ್ರಮುಖರು ಸಹ ಈ ಎಜುಕೇಶನ್ ಎಕ್ಸ್ಪೋನಲ್ಲಿ ಭಾಗವಹಿಸಿದ್ದರು. ಇಂದು ನಟ, ಬಿಗ್​​ಬಾಸ್ ಮಾಜಿ ವಿನ್ನರ್ ಪ್ರಥಮ್ ಸಹ ಭಾಗವಹಿಸಿದ್ದು, ಟಿವಿ9 ಅವರ ಈ ಪ್ರಯತ್ನವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಜೊತೆಗೆ ತಮ್ಮ ಶಾಲೆ, ಕಾಲೇಜು…

Read More

ದೂರು ನೀಡಿದವರ ವಿರುದ್ಧವೇ ಪ್ರತಿದೂರು ನೀಡಿದ ಗಾಯಕಿ ಮಂಗ್ಲಿ

ತೆಲುಗು ಚಿತ್ರರಂಗದ (Tollywood) ಜನಪ್ರಿಯ ಗಾಯಕಿ ಮಂಗ್ಲಿ (Singer Mangli) ವಿರುದ್ಧ ಹೈದರಾಬಾದ್‌ನ ಪಂಜಗುಟ್ಟಾ ಪೊಲೀಸ್ ಠಾಣೆಯಲ್ಲಿ 10 ಕೋಟಿ ರೂಪಾಯಿಗಳ ವಂಚನೆಯ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ವಕೀಲ ಸುಬ್ಬಾರಾವ್ ಎಂಬುವವರು ಈ ದೂರನ್ನು ನೀಡಿದ್ದು, ಮಂಗ್ಲಿ ಮತ್ತು ಅವರ ಸಹೋದರ ಶಿವ ಸೇರಿದಂತೆ ಇತರರು ಹಲವರಿಂದ ಹಣ ಪಡೆದು ಹೂಡಿಕೆದಾರರಿಗೆ ವಂಚಿಸಿದ್ದಾರೆ, ಹಣ ಮರಳಿ ಕೇಳಿದವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಇದೀಗ ವಕೀಲ ಸುಬ್ಬರಾವ್ ವಿರುದ್ಧ ಗಾಯಕಿ ಮಂಗ್ಲಿ ಪ್ರತಿದೂರು ದಾಖಲಿಸಿದ್ದಾರೆ. ದೂರುದಾರ…

Read More

ಬೆಳಗ್ಗೆ ಉರಿ ಬಿಸಿಲು: ರಾತ್ರಿಯಾದ್ರೆ ಸಾಕು ಸೆಕೆ; ಬೆಂಗಳೂರಿಗರ ಸುಖ ನಿದ್ರೆಗೆ ಭಂಗ!

ಬೆಂಗಳೂರು, ಏಪ್ರಿಲ್​ 12: ಈ ಬಾರಿ ಬೇಸಿಗೆಯ ಬಿರುಬಿಸಿಲು ಸಿಲಿಕಾನ್ ಸಿಟಿ ಜನರನ್ನ ಬಿಡದೆ ಕಾಡುತ್ತಿದೆ. ಮನೆಯಲ್ಲಿದ್ದರೆ ಬಿಸಿಲ ಧಗೆ (heatwave). ಇನ್ನು ಹೊರಗೆ ಬಂದರೆ ಸುಡೋ ಬಿಸಿಲು. ಹೀಗಾಗಿ ಜನರು ಕೂಲ್ ಡ್ರಿಂಕ್ಸ್, ಎಳನೀರು ಮೊರೆ ಹೋಗುತ್ತಿದ್ದಾರೆ. ಆದರೆ ರಾತ್ರಿ ನಿದ್ದೆ ಮಾಡುವುದಕ್ಕೆ ಸಂಕಷ್ಟ ಶುರುವಾಗಿದೆ. ಮತ್ತೊಂದೆಡೆ ಏರ್ ಕೂಲರ್ ಹಾಗೂ ಎಸಿಗೆ ಡಿಮ್ಯಾಂಡ್​ ಕೂಡ ಶುರುವಾಗಿದೆ. ರಾತ್ರಿ ನಿದ್ದೆಗೆ ಬಿಸಿಲು ಅಡ್ಡಿ ಸದ್ಯ ಬೆಂಗಳೂರಿನಲ್ಲಿ 35 ರಿಂದ 36 ಡಿಗ್ರಿ ತಾಪಮಾನ ದಾಖಲಾಗುತ್ತಿದೆ. ಏಪ್ರಿಲ್​…

Read More

ಮಂತ್ರಿಗಿರಿ ಬೇಡಿಕೆಯೊಂದಿಗೆ ಶಾಸಕರ ದೆಹಲಿ ಯಾತ್ರೆ ಬಗ್ಗೆ ಸಿದ್ದರಾಮಯ್ಯ ಖಡಕ್ ಮಾತು

ಬೆಂಗಳೂರು/ಚಿಕ್ಕಮಗಳೂರು, (ಏಪ್ರಿಲ್ 12): ಕರ್ನಾಟಕ ಕಾಂಗ್ರೆಸ್​​ನಲ್ಲಿ (Karnataka Congress) ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆದಿವೆ. ನಾಯಕತ್ವ ಗೊಂದಲ, ದಾವಣಗೆರೆ ಜಟಾಪಟಿ ನಡುವೆ ಕಾಂಗ್ರೆಸ್ ಹಿರಿಯ ಶಾಸಕರು ಮಂತ್ರಿಗಿರಿ ಬೇಡಿಕೆಯೊಂದಿಗೆ ದೆಹಲಿ ಯಾತ್ರೆ ಕೈಗೊಂಡಿದ್ದಾರೆ. ಎರಡಕ್ಕಿಂತ ಹೆಚ್ಚು ಬಾರಿ ಗೆದ್ದಿರುವ ಸುಮಾರು 30 ಶಾಸಕರು ಮಂತ್ರಿಗಿರಿಗೆ ಹಕ್ಕೊತ್ತಾಯ ಮಾಡಲು ಇಂದು (ಏಪ್ರಿಲ್ 12) ಮಧ್ಯಾಹ್ನ ಬೆಂಗಳೂರಿನಿಂದ (Bengaluru) ದೆಹಲಿಗೆ ತೆರಳಿದ್ದಾರೆ. ಎಲ್ಲಾ ಶಾಸಕರು ಎರಡು ದಿನ ದೆಹಲಿಯಲ್ಲೇ ಠಿಕಾಣಿ ಹೂಡಲಿದ್ದು, ಹೈಕಮಾಂಡ್ ನಾಯಕರನ್ನ ಭೇಟಿ ಮಾಡಲಿದ್ದಾರೆ. ಇನ್ನು ಈ…

Read More

MI vs RCB Playing XI: ಟಾಸ್ ಗೆದ್ದ ಮುಂಬೈ; ಆರ್​ಸಿಬಿ ಪ್ಲೇಯಿಂಗ್​ 11 ನಿಂದ ಹೇಜಲ್​ವುಡ್ ಔಟ್

ಐಪಿಎಲ್ 2026 (IPL 2026) ರ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (MI vs RCB) ತಂಡವನ್ನು ಎದುರಿಸಿದೆ. ಎರಡೂ ತಂಡಗಳಿಗೆ ಇದು ಈ ಆವೃತ್ತಿಯ ನಾಲ್ಕನೇ ಪಂದ್ಯವಾಗಿದೆ. ಎರಡೂ ತಂಡಗಳು ಕಳೆದ ಪಂದ್ಯದಲ್ಲಿ ಸೋತಿವೆ. ಆದ್ದರಿಂದ, ಎರಡೂ ತಂಡಗಳು ಮತ್ತೆ ಗೆಲುವಿನ ಲಯಕ್ಕೆ ಮರಳಲು ಪ್ರಯತ್ನಿಸಲಿವೆ. ಒಂದೆಡೆ ಆರ್​ಸಿಬಿ ಆಡಿರುವ ಮೂರು ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆದ್ದು 1 ಪಂದ್ಯದಲ್ಲಿ ಸೋತಿದ್ದು, 4 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ…

Read More

ಜೂ ಎನ್​​ಟಿಆರ್ ಸಿನಿಮಾಕ್ಕೆ ಬಾಲಿವುಡ್ ನಟನಿಗೆ ಗಾಳ ಹಾಕಿದ ಪ್ರಶಾಂತ್ ನೀಲ್

ಜೂ ಎನ್​​ಟಿಆರ್ (Jr NTR) ನಟಿಸಿ ಪ್ರಶಾಂತ್ ನೀಲ್ (Prashant Neel) ನಿರ್ದೇಶನ ಮಾಡುತ್ತಿರುವ ‘ಡ್ರ್ಯಾಗನ್’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಸಿನಿಮಾದ ಚಿತ್ರೀಕರಣ ಕರ್ನಾಟಕ, ಹೈದರಾಬಾದ್ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾಕ್ಕೆ ಹೊಸ-ಹೊಸ ಕಲಾವಿದರು ಸೇರುತ್ತಿದ್ದಾರೆ. ಇತ್ತೀಚೆಗಷ್ಟೆ ಮಲಯಾಳಂ ಸ್ಟಾರ್ ನಟ ಟೊವಿನೋ ಥೋಮಸ್ ಅವರನ್ನು ಪ್ರಮುಖ ಪಾತ್ರೊಂದಕ್ಕಾಗಿ ಕೇಳಲಾಗಿತ್ತು. ಆದರೆ ಟೊವಿನೊ, ಪಾತ್ರವನ್ನು ನಿರಾಕರಿಸಿದ್ದರು. ಇದೀಗ ಅದೇ ಪಾತ್ರಕ್ಕೆ ಬಾಲಿವುಡ್ ನಟನೊಬ್ಬನ ಆಯ್ಕೆ ಮಾಡಿದ್ದಾರಂತೆ ಪ್ರಶಾಂತ್ ನೀಲ್. ಪ್ರಶಾಂತ್ ನೀಲ್ ನಿರ್ದೇಶನದ, ಜೂನಿಯರ್…

Read More

ಕಾಂಗ್ರೆಸ್ ಮಾತ್ರವಲ್ಲ ದಾವಣಗೆರೆ ಬಿಜೆಪಿಯಲ್ಲೂ ಮತ್ತೆ ಭಿನ್ನಮತ ಸ್ಫೋಟ, ಸಿಡಿದೆದ್ದ ರೇಣುಕಾಚಾರ್ಯ

ದಾವಣಗೆರೆ, (ಏಪ್ರಿಲ್ 12): ದಾವಣಗೆರೆ (Davanagere) ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿರುವ ದಕ್ಷಿಣ ಕ್ಷೇತ್ರದ ಟಿಕೆಟ್ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲೂ (BJP) ಸಹ ಭಾರೀ ಗೊಂದಲಗಳು ಏರ್ಪಟ್ಟಿದ್ದವು. ಒಂದೆಡೆ ಮಾಜಿ ಸಂಸದ ಜಿಎಂ ಸಿದ್ದೇಶ್ವರ್ ಇನ್ನೊಂದೆಡೆ ಎಂಪಿ ರೇಣುಕಾಚಾರ್ಯ ಬಣದ ನಡುವೆ ಟಿಕೆಟ್ ಫೈಟ್ ಜೋರಾಗಿತ್ತು. ಅಂತಿಮವಾಗಿ ಹೈಕಮಾಂಡ್ ಎರಡು ಬಣಗಳ ಕಿತ್ತಾಟ ನಡುವೆ ಮೂರನೇ ವ್ಯಕ್ತಿಗೆ ಮಣೆ ಹಾಕಿತ್ತು. ಇದೀಗ ಬೈ ಎಲೆಕ್ಷನ್ ಎಲ್ಲಾ ಮುಗಿದು ಫಲಿತಾಂಶಕ್ಕಾಗಿ ಕಾಯುವಂತಾಗಿದೆ. ಇದರ ನಡುವೆ ಇದೀಗ…

Read More

ಪ್ರಾಕೃತಿಕ ಸಂಪತ್ತಿನಿಂದ ಖ್ಯಾತಿ ಪಡೆದ ಉಡುಪಿಗೆ ಇದೆಂಥಾ ಸ್ಥಿತಿ? ಜಿಲ್ಲೆಯ ಜನರಲ್ಲಿ ಶುರುವಾದ ಆತಂಕವೇನು?

ಉಡುಪಿ, ಏಪ್ರಿಲ್​ 12: ಪ್ರಾಕೃತಿಕ ಸಂಪತ್ತಿನಿಂದ ಖ್ಯಾತಿ ಪಡೆದ ಕರಾವಳಿ ನಗರ ಉಡುಪಿಯಲ್ಲಿ ಹೊಸ ಆತಂಕ ಎದುರಾಗಿದೆ. ಉಡುಪಿಯ (udupi) ವಾಯು ಗುಣಮಟ್ಟ (air quality) ಹದಗೆಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಈ ಪ್ರದೇಶದಲ್ಲಿ ಉತ್ತಮ ಮಳೆ ಮತ್ತು ಹವಾಮಾನ ಇದ್ದರೂ ಗಾಳಿಯ ಗುಣಮಟ್ಟದಲ್ಲಿ ನಿರಂತರ ಏರುಪೇರು ಕಂಡುಬರುತ್ತಿದೆ. ಗಾಳಿಯಲ್ಲಿ ಅತಿಸೂಕ್ಷ್ಮ ಕಣಗಳು ಪತ್ತೆ ಉಡುಪಿ ನಗರ ವ್ಯಾಪ್ತಿಯಲ್ಲಿ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, 2.5 ಮೈಕ್ರೋನ್​ಗಿಂತ ಕಡಿಮೆ ವ್ಯಾಸದ ಅತಿಸೂಕ್ಷ್ಮ ಕಣಗಳು (PM2.5) ಗಾಳಿಯಲ್ಲಿ ಪತ್ತೆಯಾಗಿವೆ….

Read More

MI vs RCB IPL 2026 Live Score: ಮುಂಬೈ- ಆರ್​ಸಿಬಿ ನಡುವೆ ಪಂದ್ಯ – Kannada News | Mumbai Indians vs Royal Challengers Bengaluru IPL 2026 Live Cricket Score MI vs RCB Match on 12th April latest news in Kannada

ಐಪಿಎಲ್ 2026 ರಲ್ಲಿ ಇಂದು ಒಂದು ಸೂಪರ್ ಹಿಟ್ ಪಂದ್ಯ ನಡೆಯಲಿದ್ದು, ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪ್ರಸ್ತುತ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಈ ಆವೃತ್ತಿಯಲ್ಲಿ ಉಭಯ ತಂಡಗಳ ನಡುವಿನ ಮೊದಲ ಪಂದ್ಯ ಇದಾಗಿದ್ದು, ಎರಡೂ ತಂಡಗಳು ಗೆಲುವಿನ ಹಾದಿಗೆ ಮರಳಲು ಇದು ಒಂದು ಅವಕಾಶವಾಗಿದೆ. ಆತಿಥೇಯ ಮುಂಬೈ ಇದುವರೆಗೆ ಮೂರು ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದಿದೆ. ಏತನ್ಮಧ್ಯೆ, ಸ್ಫೋಟಕ ಆರಂಭ ಹೊಂದಿದ್ದ ಬೆಂಗಳೂರು, ಸತತ…

Read More