ಮಹಿಳೆಯರ ಒಳ ಉಡುಪು ಕದಿಯುತ್ತಿದ್ದದ್ದು ಸೈಕೋ ಪಾತ್ ಅಲ್ಲ, ಖಾಸಗಿ ಕಂಪನಿ ಉದ್ಯೋಗಿ
ಚಾಮರಾಜನಗರ, ಏಪ್ರಿಲ್ 10: ಕಳೆದ ಎರಡು-ಮೂರು ತಿಂಗಳಿಂದ ಮಹಿಳೆಯರ ನಿದ್ದೆಗೆಡಿಸಿದ್ದ ಸೈಕೋ ಪಾತ್ನನ್ನು (Psychopath) ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯರ ಒಳ ಉಡುಪು ಕಳವು (Female Innerwear) ಮಾಡುತ್ತಿದ್ದ. ದೂರು ನೀಡಿದರೂ ಕ್ಯಾರೆ ಎನ್ನದ ಪೊಲೀಸರು ಟಿವಿ9 ನಲ್ಲಿ ಸುದ್ದಿ ಬಿತ್ತರಿಸಿದ 24 ಗಂಟೆ ಒಳಗೆ ವ್ಯಕ್ತಿಯನ್ನು ಬಂಧಿಸಿದ್ದಾರೆ. ಅಮೃತ್ ಅಲಿಯಾಸ್ ಅಮೃತ್ ಆಚಾರ್ಯ ಬಂಧಿತ ವ್ಯಕ್ತಿ. ರಾತ್ರಿ 1 ಗಂಟೆಯ ಸಮಯ. ಎಲ್ಲರೂ ಗಾಢ ನಿದ್ದೆಗೆ ಜಾರಿರುತ್ತಾರೆ. ಊರೆಲ್ಲಾ ಮಲಗಿದ್ದರೆ ಓರ್ವ ಮಾತ್ರ ಮನೆಯಿಂದ ಆಚೆ…