ಬಳ್ಳಾರಿ, ಡಿಸೆಂಬರ್ 31: ಮಾಜಿ ಸಚಿವ ಬಿ. ನಾಗೇಂದ್ರ ಅವರ ಆಪ್ತ ವಿಶ್ವನಾಥ ಮನೆ ಮೇಲೆ ಬಳ್ಳಾರಿಯಲ್ಲಿ ಸಿಬಿಐ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ. ಬಳ್ಳಾರಿ ನಗರದ ಬೆಂಗಳೂರು ರಸ್ತೆಯಲ್ಲಿರುವ ವಿಶ್ವನಾಥ ನಿವಾಸಕ್ಕೆ ನಾಲ್ಕು ಜನ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಮನೆ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ವಿಶ್ವನಾಥ ಮನೆಯಲ್ಲಿಲ್ಲದ ಕಾರಣ, ಅವರ ಸಹೋದರ ಮಹೇಶ್ರನ್ನು ಸಿಬಿಐ ಅಧಿಕಾರಿಗಳು ಬ್ರೂಸ್ ಪೇಟೆ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.ಠಾಣೆಯಲ್ಲಿಯೇ ಸಿಬಿಐ ಅಧಿಕಾರಿಗಳು ವಿಶ್ವನಾಥ ಸಂಬಂಧಿತ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಈ ದಾಳಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದೆ ಎನ್ನಲಾಗಿದ್ದು, ಪ್ರಕರಣದಲ್ಲಿ ವಿಶ್ವನಾಥ ಪಾತ್ರವಿದೆ ಎಂಬ ಆರೋಪದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಸಂತೋಷ್ ಥಿಯೇಟರ್ನಲ್ಲಿ ಕಿಚ್ಚ ಸುದೀಪ್ ಅವರು ‘ಮಾರ್ಕ್’ ಸಿನಿಮಾ ವೀಕ್ಷಿಸಿದ್ದಾರೆ. ಬೆಳಿಗ್ಗೆ 10.30ರ ಶೋಗೆ ಸುದೀಪ್ ಆಗಮಿಸಿದರು. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಫ್ಯಾನ್ಸ್ ನೆರೆದಿದ್ದರು. ಅವರ ಮಧ್ಯೆ ಚಿತ್ರಮಂದಿರದ ಒಳಗೆ ಹೋಗಲು ಸುದೀಪ್ ಸಾಕಷ್ಟು ಕಷ್ಟಪಟ್ಟಿದ್ದಾರೆ. ಅವರ ಜೊತೆ ಸಿನಿಮಾ ನೋಡಿ ಫ್ಯಾನ್ಸ್ ಕೂಡ ಖುಷಿಪಟ್ಟರು.
ಸಾಮಾಜಿಕ ಜಾಲತಾಣದಲ್ಲಿ ಕಣ್ಣು ಮತ್ತು ಮೆದುಳಿಗೆ ಸವಾಲೊಡ್ಡುವ ಕುತೂಹಲಕಾರಿ ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳು ವೈರಲ್ ಆಗುವುದನ್ನು ನೀವು ನೋಡಿರುತ್ತೀರಿ. ಆದರೆ ಈ ಒಗಟಿನ (puzzles) ಚಿತ್ರಗಳನ್ನು ಬಿಡಿಸುವುದು ಹೇಳುವಷ್ಟು ಸುಲಭವಲ್ಲ. ಕೆಲವರು ಎಷ್ಟೇ ಪ್ರಯತ್ನಿಸಿದರೂ ಉತ್ತರ ಕಂಡು ಹಿಡಿಯಲು ಆಗುವುದೇ ಇಲ್ಲ. ಈ ಒಗಟಿನ ಚಿತ್ರ ಬಿಡಿಸಲು ಸಾಧ್ಯವೇ ಎಂದು ನೋಡಿ. ಒಣಗಿದ ಎಲೆಗಳ ನಡುವೆ ಹಾವೊಂದು ಅವಿತು ಕುಳಿತಿದೆ. ಈ ಸರೀಸೃಪವನ್ನು 5 ಸೆಕೆಂಡುಗಳಲ್ಲಿ ಹುಡುಕಬೇಕು.
ಈ ಚಿತ್ರ ನೋಡಿದಾಗ ನಿಮ್ಮ ಕಣ್ಣಿಗೆ ಏನು ಕಾಣಿಸುತ್ತದೆ?
SssnakeySci ಎಂಬ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾದ ಟ್ರಿಕ್ಕಿ ಒಗಟಿನ ಚಿತ್ರ ಇದಾಗಿದೆ. ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ಮೊದಲು ನೋಡಿದಾಗ ಒಣಗಿದ ಎಲೆಗಳು ಕಾಣಿಸುತ್ತದೆ. ಇಲ್ಲೊಂದು ಹಾವು ಅಡಗಿ ಕುಳಿತಿದೆ. ಒಣಗಿದ ಎಲೆಗಳ ಬಣ್ಣದೊಂದಿಗೆ ಹಾವಿನ ಮೈ ಬಣ್ಣವು ಬೆರೆತು ಹೋಗಿದೆ. ಹೀಗಾಗಿ ನಿರ್ದಿಷ್ಟ ಸಮಯದೊಳಗೆ ಹಾವನ್ನು ಕಂಡು ಹಿಡಿಯುವುದು ಕಷ್ಟಕರ. ನಿಮ್ಮ ದೃಷ್ಟಿ ಸಾಮರ್ಥ್ಯ ಪರೀಕ್ಷಿಸಿಕೊಳ್ಳಲು ಇದೊಂದು ಒಳ್ಳೆಯ ಸಮಯ, ಟೈಮ್ ವೇಸ್ಟ್ ಮಾಡದೇ ಈ ಹಾವನ್ನು ಕಂಡುಹಿಡಿಯಬೇಕು.
ತೀಕ್ಷ್ಣ ಕಣ್ಣುಗಳನ್ನು ಹೊಂದಿರುವವರು ಮಾತ್ರ ಹಾವನ್ನು ಗುರುತಿಸಲು ಸಾಧ್ಯವಾಗುತ್ತದೆ. ಎಷ್ಟೇ ಪ್ರಯತ್ನಿಸಿದರೂ ಈ ಚಿತ್ರದಲ್ಲಿ ಅಡಗಿರುವ ಹಾವನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದಾದರೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಈ ಕೆಳಗಿನ ಚಿತ್ರದಲ್ಲಿ ಹಾವು ಎಲ್ಲಿದೆ ಎಂದು ಗುರುತಿಸಿದ್ದೇವೆ. ಈ ಚಿತ್ರ ನೋಡಿದ ಮೇಲೆ ಹಾವು ಎಲ್ಲಿದೆ ಎನ್ನುವುದು ನಿಮಗೆ ತಿಳಿಯುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
‘ಕಿಲಾಡಿ ಕಿಟ್ಟು’ ಚಿತ್ರದ ಸಂಗೀತ ನಿರ್ದೇಶಕ, ಆರ್ಕೆಸ್ಟ್ರಾಗಳ ಮೂಲಕ ಮನೆ ಮಾತಾದ ಮೈಸೂರು ಮೋಹನ್ (Mysore Mohan) ಅವರು ಈಗ ಹೊಸ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಹೊಸ ಸಿಂಗರ್ ಹಿಮಾ ಎಂ. (Hima M) ಅವರ ಕಂಠದಲ್ಲಿ ಈ ಹಾಡು ಮೂಡಿಬಂದಿದೆ. ಇದು ಹೊಸ ವರ್ಷಕ್ಕೆ (New Year 2026) ಸಂಬಂಧಿಸಿದ ಗೀತೆ. ನ್ಯೂ ಇಯರ್ ಸೆಲೆಬ್ರೇಷನ್ ಸಮಯದಲ್ಲೇ ಈ ಗೀತೆಯನ್ನು ರಿಲೀಸ್ ಮಾಡಲಾಗಿದೆ. ಇಂಗ್ಲಿಷ್ ಸಾಹಿತ್ಯ ಇರುವ ಈ ಹಾಡು ಸುಮಧುರವಾಗಿದೆ. ಹೊಸ ಗಾಯಕಿಗೆ ಕೇಳುಗರ ಪ್ರೋತ್ಸಾಹ ಸಿಗುತ್ತಿದೆ.
‘ಮೈಸೂರು ಮೋಹನ್ ಆರ್ಕೆಸ್ಟ್ರಾ’ ಮೂಲಕ ಮೋಹನ್ ಅವರು ಕಳೆದ 60 ವರ್ಷಗಳಿಂದಲೂ ಮನರಂಜನೆ ನೀಡುತ್ತಾ ಬಂದಿದ್ದಾರೆ. ಈಗ ಅವರು ಹೊಸ ಹಾಡಿಗೆ ಸಂಗೀತ ನೀಡಿದ್ದಾರೆ. ಲಾಯರ್ ಆಗಿರುವ ಅವರು ಹಿಮಾ ಅವರು ಸಂಗೀತದಲ್ಲೂ ಆಸಕ್ತಿ ಹೊಂದಿದ್ದಾರೆ. ಅವರ ಸಂಗೀತ ಪಯಣಕ್ಕೆ ತಾಯಿ ಡಾ. ಎ.ಎನ್. ಪದ್ಮಾ ಅವರು ಬೆಂಬಲವಾಗಿ ನಿಂತಿದ್ದಾರೆ.
ಹಿಮಾ ಅವರ ಸಂಗೀತ ಪ್ರತಿಭೆಯನ್ನು ಮೊದಲು ಗುರುತಿಸಿದ್ದೇ ಅವರ ತಾಯಿ ಪದ್ಮಾ. ಸ್ವತಃ ಉತ್ತಮ ಗಾಯಕಿ ಆಗಿರುವ ಡಾ. ಪದ್ಮಾ ಅವರು ಈಗ ಮಗಳಿಗಾಗಿ ಈ ಹಾಡನ್ನು ನಿರ್ಮಿಸಿದ್ದಾರೆ. ಹಿಮಾ ಎಂ. ಅವರ ತಂದೆ ಡಾ. ಮಂಜುನಾಥ ಕೆ. ಕೂಡ ಸಂಗೀತದ ಆಸಕ್ತಿಯುಳ್ಳವರು. ಪ್ರೀ ಆ್ಯಂಡ್ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ‘ಶ್ರೀವಾರಿ ಮ್ಯೂಸಿಕ್ ಕಂಪನಿ’ ಮಾಡಿದೆ.
ಈ ಹಾಡಿನ ಇಂಗ್ಲಿಷ್ ಸಾಹಿತ್ಯವನ್ನು ಗೌತಮ್ ಶ್ರೀವತ್ಸಾ ಹಾಗೂ ಗೌರವ್ ಅವರು ಬರೆದಿದ್ದಾರೆ. ಕೇಳುಗರಿಗೆ ಸ್ಫೂರ್ತಿ ತುಂಬುವಂತಹ ಸಾಹಿತ್ಯ ಈ ಹಾಡಿನಲ್ಲಿ ಇದೆ. ಈ ಹಾಡಿನಲ್ಲಿ ಸ್ವತಃ ಹಿಮಾ ಎಂ. ಮತ್ತು ಮೈಸೂರು ಮೋಹನ್ ಅವರು ಕಾಣಿಸಿಕೊಂಡಿದ್ದಾರೆ. ಸಂಗೀತ ಪ್ರಿಯರಿಗೆ ಹಾಡು ಇಷ್ಟ ಆಗುತ್ತದೆ ಎಂಬ ನಂಬಿಕೆಯಲ್ಲಿ ನ್ಯೂ ಇಯರ್ ಪ್ರಯುಕ್ತ ‘ಶ್ರೀವಾರಿ ಮ್ಯೂಸಿಕ್’ ಮೂಲಕ ರಿಲೀಸ್ ಮಾಡಲಾಗಿದೆ.
ಫರೀದಾಬಾದ್, ಡಿಸೆಂಬರ್ 31: ಲಿಫ್ಟ್ ಕೊಡುವುದಾಗಿ ಹತ್ತಿಕೊಂಡು ಕಾರಿನಲ್ಲೇ ಇಬ್ಬರು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ(Rape)ವೆಸಗಿರುವ ಘಟನೆ ಫರೀದಾಬಾದಿನಲ್ಲಿ ನಡೆದಿದೆ. ದೂರಿನ ನಂತರ ಪೊಲೀಸರು ಕ್ರಮ ಕೈಗೊಂಡಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆ ಆರಂಭಿಸಲಾಗಿದೆ. ವರದಿಗಳ ಪ್ರಕಾರ, ಮಹಿಳೆಯ ಕುಟುಂಬವು ಡಿ. 30 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಪೊಲೀಸರಿಗೆ ದೂರು ನೀಡಿದೆ.
ದೂರಿನ ಪ್ರಕಾರ, ಮಹಿಳೆ ತನ್ನ ಪತಿಯಿಂದ ಬೇರ್ಪಟ್ಟ ನಂತರ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದಳು. ಡಿಸೆಂಬರ್ 29 ರ ರಾತ್ರಿ, ರಾತ್ರಿ 8.30 ರ ಸುಮಾರಿಗೆ, ತನ್ನ ತಾಯಿಯೊಂದಿಗೆ ಜಗಳವಾಡಿ ನಂತರ ಮಹಿಳಾ ಸ್ನೇಹಿತೆಯನ್ನು ಭೇಟಿ ಮಾಡಲು ಮನೆಯಿಂದ ಹೊರಟಿದ್ದಳು.
ರಾತ್ರಿ 12.30 ರ ಸುಮಾರಿಗೆ, ಆಕೆ ಮನೆಗೆ ಹಿಂತಿರುಗಲು ಮೆಟ್ರೋ ಚೌಕ್ ಬಳಿ ಆಟೋ ಚಾಲಕರೊಂದಿಗೆ ಮಾತನಾಡುತ್ತಿದ್ದಳು. ಈ ಸಮಯದಲ್ಲಿ, ವ್ಯಾನ್ ಬಂದು ಆಕೆಗೆ ಲಿಫ್ಟ್ ಕೊಡುವುದಾಗಿ ಹೇಳಿ ಹತ್ತಿಸಿಕೊಂಡಿದ್ದರು.ಆರೋಪಿಯು ಅವಳನ್ನು ಗುರುಗ್ರಾಮದ ಕಡೆಗೆ ಕರೆದೊಯ್ದು ಕಾಡಿನ ಪ್ರದೇಶದಲ್ಲಿ ಅಪರಾಧ ಎಸಗಿದ್ದಾನೆ ಎಂದು ವರದಿಯಾಗಿದೆ.
ಸಂತ್ರಸ್ತೆಯ ತಲೆಗೆ ಗಂಭೀರ ಗಾಯಗಳಾಗಿದ್ದು, 12 ಹೊಲಿಗೆಗಳನ್ನು ಹಾಕಲಾಗಿದೆ. ದೂರು ನೀಡಿದ ಕೂಡಲೇ ಎಫ್‌ಐಆರ್ ದಾಖಲಿಸಲಾಗಿದ್ದು, ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರೂ ಶಂಕಿತರು ಫರಿದಾಬಾದ್ ನಿವಾಸಿಗಳು ಎಂದು ಪೊಲೀಸರು ಹೇಳಿದ್ದಾರೆ.
ಕಲಿಯುಗದ ದೈವ ಶ್ರೀ ವೆಂಕಟೇಶ್ವರನಿಗೆ ಹರಕೆ ಅಥವಾ ಮುಡುಪು ಕಟ್ಟುವ ಸಂಪೂರ್ಣ ವಿಧಾನದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಗುರೂಜಿಯವರು ಹೇಳುವಂತೆ, ಮನುಷ್ಯನು ಜೀವನದಲ್ಲಿ ಹಲವು ಆಸೆ ಆಕಾಂಕ್ಷೆಗಳನ್ನು ಹೊಂದಿರುತ್ತಾನೆ. ಇಂತಹ ಆಸೆಗಳನ್ನು ಈಡೇರಿಸಲು ಕಲಿಯುಗದಲ್ಲಿ ನೇರವಾಗಿ ಅನುಗ್ರಹಿಸುವ ದೈವ ಕಲೌ ವೆಂಕಟನಾಥ ಎಂಬ ನಂಬಿಕೆ ಇದೆ. ಶ್ರೀ ವೆಂಕಟೇಶ್ವರನು ಕಲಿಯುಗದ ದೇವರಾಗಿದ್ದು, ಭಕ್ತರ ಕೋರಿಕೆಗಳನ್ನು ಈಡೇರಿಸುವ ಶಕ್ತಿಯನ್ನು ಹೊಂದಿದ್ದಾನೆ. ಭಕ್ತಿ, ಶರಣಾಗತಿ ಮತ್ತು ಆತ್ಮವಿಶ್ವಾಸದಿಂದ ಹರಕೆ ಅಥವಾ ಮುಡುಪನ್ನು ಕಟ್ಟುವ ಮೂಲಕ ನಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಬಹುದು. ಕನ್ನಡದಲ್ಲಿ ಹರಕೆ ಎಂದು ಕರೆಯಲಾಗುವ ಇದನ್ನು ತಿರುಪತಿ ಕ್ಷೇತ್ರದಲ್ಲಿ ಮುಡುಪು ಎಂದು ಕರೆಯುತ್ತಾರೆ. ಈ ಮುಡುಪನ್ನು ಕಟ್ಟುವ ಒಂದು ವಿಶಿಷ್ಟ ವಿಧಾನವಿದೆ.
ಯಾರು ಶ್ರದ್ಧಾಭಕ್ತಿಯಿಂದ ಸಂಕಲ್ಪ ಮಾಡಿಕೊಂಡು ಮುಡುಪನ್ನು ಕಟ್ಟುತ್ತಾರೋ, ಅವರ ಕಾರ್ಯಗಳು ಯಶಸ್ವಿಯಾದ ನಂತರ ಆ ಮುಡುಪಿನ ಸಮೇತ ಕ್ಷೇತ್ರಕ್ಕೆ ಭೇಟಿ ನೀಡಿ ಭಗವಂತನಿಗೆ ಅರ್ಪಿಸಿದರೆ ಶುಭವಾಗುತ್ತದೆ. ಈ ಹರಕೆ ಅಥವಾ ಮುಡುಪು ಹೇಗೆ ಇರಬೇಕು ಮತ್ತು ಅದನ್ನು ಹೇಗೆ ಕಟ್ಟಬೇಕು ಎಂಬುದು ಇಲ್ಲಿ ವಿವರಿಸಲಾಗಿದೆ. ವೆಂಕಟೇಶ್ವರನನ್ನು ಕರೆದರೆ ಮಾತಾಡೋ ದೈವ ಎಂದೂ ಕರೆಯುತ್ತಾರೆ. ನಿಮ್ಮ ಎಲ್ಲೆಡೆ ಇರುವ ವೆಂಕಟೇಶ್ವರನ ಚಿತ್ರ ಅಥವಾ ವಿಗ್ರಹದ ಮುಂದೆ ನೀವು ನಿಮ್ಮ ಕೋರಿಕೆಗಳನ್ನು ಪ್ರಾರ್ಥಿಸಬಹುದು. ವಿದ್ಯಾಭ್ಯಾಸ, ಸಂತಾನ, ಮನೆ ನಿರ್ಮಾಣ ಅಥವಾ ಮಾರಾಟ, ಆಸ್ತಿ ಖರೀದಿ ಅಥವಾ ಮಾರಾಟ, ಉದ್ಯೋಗ, ವ್ಯಾಪಾರ ಅಥವಾ ಆರೋಗ್ಯ ಸಮಸ್ಯೆಗಳು ಹೀಗೆ ಮನುಷ್ಯನ ಯಾವುದೇ ನ್ಯಾಯಯುತವಾದ ಇಷ್ಟಾರ್ಥಗಳನ್ನು ಭಗವಂತನಿಗೆ ಅರಿಕೆ ಮಾಡಿಕೊಳ್ಳಬಹುದು. ಧರ್ಮಬದ್ಧವಾದ ಕೋರಿಕೆಗಳಾಗಿದ್ದರೆ ಕಲೌ ವೆಂಕಟನಾಥನ ಕೃಪೆ ನೇರವಾಗಿ ಸಿಗುತ್ತದೆ ಮತ್ತು ಎಂತಹ ಸಮಸ್ಯೆಗೂ ಪರಿಹಾರ ಸಿಗುತ್ತದೆ ಎಂಬುದು ನಂಬಿಕೆ.‘
ಹರಕೆ ಅಥವಾ ಮುಡುಪನ್ನು ಕಟ್ಟುವ ವಿಧಾನ ಹೀಗಿದೆ. ಶನಿವಾರದ ದಿನದಂದು ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಶುಚಿರ್ಭೂತರಾಗಬೇಕು. ನಂತರ ನಿಮ್ಮ ಮನೆಯಲ್ಲಿರುವ ವೆಂಕಟೇಶ್ವರನ ಚಿತ್ರಪಟ ಅಥವಾ ವಿಗ್ರಹದ ಮುಂದೆ ಕುಳಿತು ದೀಪಾರಾಧನೆ ಮಾಡಬೇಕು. ಗಣಪತಿ ಸ್ತೋತ್ರವನ್ನು ಪಠಿಸುವುದು ಶುಭ. ಒಂದು ಬಿಳಿಯ ವಸ್ತ್ರವನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಚೆನ್ನಾಗಿ ಶುದ್ಧೀಕರಿಸಿ, ಅದಕ್ಕೆ ಅರಿಶಿನವನ್ನು ಲೇಪಿಸಿ ಹಳದಿ ಬಟ್ಟೆಯನ್ನಾಗಿ ಮಾಡಿಕೊಳ್ಳಬೇಕು. ಆ ಅರಿಶಿನದ ಬಟ್ಟೆಯ ನಾಲ್ಕು ಕಡೆಗಳಲ್ಲಿ ಕುಂಕುಮ ಹಚ್ಚಿ, ಅದರಲ್ಲಿ ಒಂದಷ್ಟು ಅರಿಶಿನದ ಅಕ್ಷತೆಗಳನ್ನು ಇಡಬೇಕು. ನಂತರ ಹನ್ನೊಂದು ರೂಪಾಯಿ ನಾಣ್ಯಗಳನ್ನು (ಹನ್ನೊಂದು ಒಂದೊಂದು ರೂಪಾಯಿ ನಾಣ್ಯಗಳಾಗಿರಬಹುದು, ಅಥವಾ ಹತ್ತು ರೂಪಾಯಿ ಮತ್ತು ಒಂದು ರೂಪಾಯಿ ನಾಣ್ಯವಾಗಿರಬಹುದು) ಅದರಲ್ಲಿ ಇಡಬೇಕು. ನಿಮ್ಮ ಅನುಕೂಲಕ್ಕೆ ತಕ್ಕಂತೆ ಹೆಚ್ಚಿನ ಹಣವನ್ನೂ ಸಹ ಇಡಬಹುದು.
ಈ ಹರಕೆ ಅಥವಾ ಮುಡುಪನ್ನು ಸಿದ್ಧಪಡಿಸಿದ ನಂತರ ಸ್ವಾಮಿಗೆ ಹೇಳಿ, “ನನ್ನ ಇಂತಹ ಕೋರಿಕೆ ಈಡೇರಿದ ಮೇಲೆ ದರ್ಶನಕ್ಕೆ ಬರುತ್ತೇನೆ” ಎಂದು ಪ್ರಾರ್ಥಿಸಬೇಕು. ಅದಕ್ಕೆ ಆರತಿ ಮಾಡಿ, ಪೂಜೆ ಮಾಡಿ ಭಗವಂತನ ಹತ್ತಿರ ಇಟ್ಟು ಪ್ರಾರ್ಥಿಸಬೇಕು. “ನನ್ನ ಆಸೆ, ನನ್ನ ಕೋರಿಕೆ ಇದನ್ನು ಈಡೇರಿಸು ಸ್ವಾಮಿ” ಎಂದು ಶ್ರದ್ಧಾಭಕ್ತಿಯಿಂದ ಬೇಡಿಕೊಳ್ಳಬೇಕು. ಶನಿವಾರದ ದಿನ ಅವರ ನಾಮಾವಳಿಗಳಾದ “ಓಂ ನಮೋ ವೆಂಕಟೇಶಾಯ” ಎಂಬ ಮಂತ್ರವನ್ನು 108 ಬಾರಿ ಜಪಿಸಬೇಕು. ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖಮಾಡಿ ಪ್ರಾರ್ಥನೆ ಮಾಡುವುದು ಉತ್ತಮ.
ಈ ಪ್ರಾರ್ಥನೆ ಮಾಡಿದ ಹರಕೆಯನ್ನು ದೇವರ ಗುಡಿಯಲ್ಲಿ ಅಥವಾ ನಿಮ್ಮ ಬೀರುವಿನಲ್ಲಿ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ನಿಮ್ಮ ಕೆಲಸ ಕಾರ್ಯಗಳು ಯಶಸ್ವಿಯಾಗಿ, ಇಷ್ಟಾರ್ಥ ಈಡೇರಿದ ನಂತರ ಆ ಮುಡುಪನ್ನು ತೆಗೆದುಕೊಂಡು ನೇರವಾಗಿ ತಿರುಪತಿ ಕ್ಷೇತ್ರಕ್ಕೆ ಹೋಗಿ ಹುಂಡಿಗೆ ಹಾಕಿ. ಅದರ ಜೊತೆಗೆ ಇನ್ನೊಂದಷ್ಟು ಹಣವನ್ನು ಹಾಕಿ ಭಗವಂತನಿಗೆ ಕೃತಜ್ಞತೆ ಸಲ್ಲಿಸಿ ಪ್ರಾರ್ಥನೆ ಮಾಡಿಕೊಂಡು ಬಂದರೆ, ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಕೂಡಾ ಈಡೇರುತ್ತವೆ. ಈ ದರ್ಶನದಿಂದಲೇ ಕೂಡಾ ಒಳ್ಳೆದಾಗುತ್ತದೆ. ಇದು ಹರಕೆ ಅಥವಾ ಮುಡುಪಿನ ಮಹತ್ವ ಮತ್ತು ಫಲವಾಗಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮಠಾಧೀಶರಾದ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮೀಜಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್, ನನ್ನ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯರಾದ ಬಿಕೆ ಹರಿಪ್ರಸಾದ್ ಸೇರಿದಂತೆ ಹಲವು ಗಣ್ಯರು ಈ ವೇಳೆ ಹಾಜರಿದ್ದರು ಎಂದು ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.
ಹೆಚ್ಚೇನೂ ಹೈಪ್ ಇಲ್ಲದೇ ಬಿಡುಗಡೆ ಆದ ‘ಧುರಂಧರ್’ (Dhurandhar) ಸಿನಿಮಾ ಈ ಪರಿ ಕಲೆಕ್ಷನ್ ಮಾಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ನೋಡನೋಡುತ್ತಿದ್ದಂತೆಯೇ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. 2025ರಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಸಿನಿಮಾ ಎಂಬ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ. ಅಲ್ಲದೇ, ಈ ಮೊದಲಿನ ಅನೇಕ ದಾಖಲೆಗಳನ್ನು ‘ಧುರಂಧರ್’ ಸಿನಿಮಾ ಅಳಿಸಿ ಹಾಕಿದೆ. ರಣವೀರ್ ಸಿಂಗ್ (Ranveer Singh) ಅವರು ಈ ಸಿನಿಮಾದಿಂದ ಬಹುದೊಡ್ಡ ಗೆಲುವು ಪಡೆದಿದ್ದಾರೆ. ನಿರ್ದೇಶಕ ಆದಿತ್ಯ ಧಾರ್ ಅವರ ಬೇಡಿಕೆ ಹೆಚ್ಚಾಗಿದೆ. ಬಿಡುಗಡೆಯಾಗಿ 27 ದಿನಗಳು ಕಳೆದಿದ್ದರೂ ಸಹ ‘ಧುರಂಧರ್’ ಸಿನಿಮಾದ ಕಲೆಕ್ಷನ್ (Dhurandhar Box Office Collection) ನಿಂತಿಲ್ಲ.
ದೇಶಭಕ್ತಿ ಕಥಾಹಂದರ ‘ಧುರಂಧರ್’ ಸಿನಿಮಾದಲ್ಲಿ ಇದೆ. ಪಾಕಿಸ್ತಾನದಲ್ಲಿ ನಡೆಯುವ ಭಯೋತ್ಪಾದಕ ಘಟನೆಗಳನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಜನರು ಮುಗಿಬಿದ್ದು ಈ ಚಿತ್ರವನ್ನು ನೋಡುತ್ತಿದ್ದಾರೆ. ರಜೆ ದಿನ, ವಾರಾಂತ್ಯ ಮಾತ್ರವಲ್ಲದೇ ವಾರದ ದಿನಗಳಲ್ಲಿ ಕೂಡ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಇದರಿಂದಾಗಿ ಸಿನಿಮಾದ ಕಲೆಕ್ಷನ್ ಏರುತ್ತಲೇ ಇದೆ.
ಭಾರತದ ಮಾರುಕಟ್ಟೆಯಲ್ಲಿ ಈಗಾಗಲೇ ‘ಧುರಂಧರ್’ ಸಿನಿಮಾ 712 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಪ್ರತಿ ದಿನ ಬಹುಕೋಟಿ ರೂಪಾಯಿ ಕಲೆಕ್ಷನ್ ಆಗುತ್ತಲೇ ಇದೆ. ಇದೇ ವೇಗದಲ್ಲಿ ಮುಂದುವರಿದರೆ ಅನಾಯಾಸವಾಗಿ ಇನ್ನು ಕೆಲವೇ ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್ 800 ಕೋಟಿ ರೂಪಾಯಿ ಮೀರಲಿದೆ. ವಿದೇಶದ ಕಲೆಕ್ಷನ್ ಕೂಡ ಸೇರಿಸಿದರೆ ಈಗಾಗಲೇ 1000 ಕೋಟಿ ರೂಪಾಯಿ ಮೀರಿದೆ.
‘ಧುರಂಧರ್’ ಸಿನಿಮಾ ಬಿಡುಗಡೆ ಆದ ಬಳಿಕ ‘ದಿ ಡೆವಿಲ್’, ‘ಅಖಂಡ 2’, ‘ಮಾರ್ಕ್’, ‘45’, ‘ತು ಮೇರಿ ಮೇ ತೇರ ಮೇ ತೇರ ತು ಮೇರಿ’, ‘ಅವತಾರ್ 3’, ‘ಅನಾಕೊಂಡ’ ಮುಂತಾದ ಸಿನಿಮಾಗಳು ಬಿಡುಗಡೆ ಆದವು. ಆದರೆ ಈ ಯಾವ ಸಿನಿಮಾಗಳಿಂದಲೂ ‘ಧುರಂಧರ್’ ಹವಾ ಕಡಿಮೆ ಮಾಡಲು ಸಾಧ್ಯವಾಗಲೇ ಇಲ್ಲ. ಎಲ್ಲ ರಾಜ್ಯಗಳಲ್ಲೂ ಈ ಸಿನಿಮಾ ಸೂಪರ್ ಸಕ್ಸಸ್ ಆಗಿದೆ.
ಈ ಚಿತ್ರದಲ್ಲಿ ನಟಿಸಿದ ಎಲ್ಲ ಕಲಾವಿದರಿಗೂ ಭಾರಿ ಜನಪ್ರಿಯತೆ ಸಿಕ್ಕಿದೆ. ವಿಶೇಷವಾಗಿ ನಟ ಅಕ್ಷಯ್ ಖನ್ನಾ ಅವರು ಸೆನ್ಸೇಷನ್ ಸೃಷ್ಟಿ ಮಾಡಿದ್ದಾರೆ. ರೆಹಮಾನ್ ಡಕಾಯಿತ್ ಎಂಬ ವಿಲನ್ ಪಾತ್ರವನ್ನು ಅವರು ಮಾಡಿದ್ದಾರೆ. ಅರ್ಜುನ್ ರಾಮ್ಪಾಲ್, ಸಂಜಯ್ ದತ್, ಸಾರಾ ಅರ್ಜುನ್ ಅವರ ನಟನೆಗೂ ಮೆಚ್ಚುಗೆ ಸಿಗುತ್ತಿದೆ. ರಣವೀರ್ ಸಿಂಗ್ ಅವರ ಫ್ಯಾನ್ ಫಾಲೋಯಿಂಗ್ ಹೆಚ್ಚಾಗಿದೆ.
ಬೆಂಗಳೂರು, ಡಿಸೆಂಬರ್ 31: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪೊಲೀಸರು ವ್ಯಾಪಕ ಭದ್ರತಾ ಸಿದ್ಧತೆಗಳನ್ನು ಕೈಗೊಂಡಿದ್ದಾರೆ. ವಿಶೇಷವಾಗಿ ಮಹಿಳೆಯರ ಸುರಕ್ಷತೆಗಾಗಿ ನಗರದ ಪ್ರಮುಖ ಪ್ರದೇಶಗಳಲ್ಲಿ ಮಹಿಳಾ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹೊಸ ವರ್ಷದ ರಾತ್ರಿಯ ಭದ್ರತೆಯ ಪ್ರಮುಖ ಭಾಗವಾಗಿರುವ ಈ ಕೇಂದ್ರಗಳು, ಚರ್ಚ್ ಸ್ಟ್ರೀಟ್, ಬ್ರಿಗೇಡ್ ರೋಡ್, ಎಂಜಿ ರೋಡ್, ಕೋರಮಂಗಲ, ಇಂದಿರಾನಗರ, ನೀಲಾದ್ರಿ ರಸ್ತೆ ಮತ್ತು ಬಾಣಸವಾಡಿ ಸೇರಿದಂತೆ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.
ಈ ಮಹಿಳಾ ಸಹಾಯ ಕೇಂದ್ರಗಳು ತುರ್ತು ಸಂದರ್ಭಗಳಲ್ಲಿ ಮಹಿಳೆಯರಿಗೆ ನೆರವು ನೀಡಲು ಮೀಸಲಾಗಿವೆ. ಯಾವುದೇ ಸಮಸ್ಯೆ ಅಥವಾ ಆರೋಗ್ಯ ಸಮಸ್ಯೆ ಎದುರಾದಾಗ, ಮಹಿಳೆಯರು ನೇರವಾಗಿ ಈ ಕೇಂದ್ರಗಳಿಗೆ ಭೇಟಿ ನೀಡಿ ದೂರುಗಳನ್ನು ದಾಖಲಿಸಬಹುದು ಅಥವಾ ಸಹಾಯ ಪಡೆಯಬಹುದು. ಪೊಲೀಸ್ ಅಧಿಕಾರಿಗಳು, ಮಹಿಳಾ ಪೊಲೀಸರು ಮತ್ತು ಬಿಬಿಎಂಪಿ ಆರೋಗ್ಯ ಸಿಬ್ಬಂದಿ ಈ ಕೇಂದ್ರಗಳಲ್ಲಿ ಲಭ್ಯವಿರುತ್ತಾರೆ. ಅಗತ್ಯವಿದ್ದರೆ, ಇಲ್ಲಿಂದ ಕ್ಯಾಬ್ ವ್ಯವಸ್ಥೆ ಮಾಡುವುದು ಅಥವಾ ವೈದ್ಯಕೀಯ ಚಿಕಿತ್ಸೆಗೆ ಒದಗಿಸುವುದು ಮುಂತಾದ ಸೇವೆಗಳನ್ನು ನೀಡಲಾಗುತ್ತದೆ. ಈ ಮೂಲಕ ಹೊಸ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ಮಹಿಳೆಯರು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದು ಆದ್ಯತೆಯಾಗಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ