All posts by nagaraj11081993

ಇಂಟರ್​ನ್ಯಾಷನಲ್​ ಟಿ20 ಲೀಗ್​ನಲ್ಲಿ ಹೊಸ ಇತಿಹಾಸ ಬರೆದ ಆಂಡ್ರೀಸ್ ಗೌಸ್ – Kannada News | Andries Gous slams the highest individual score in ILT20

ಅಬುಧಾಬಿಯಲ್ಲಿ ನಡೆದ ಇಂಟರ್​ನ್ಯಾಷನಲ್ ಲೀಗ್ ಟಿ20 ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಆಂಡ್ರೀಸ್ ಗೌಸ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಶೇಖ್ ಝಾಯೆದ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಡೆಸರ್ಟ್ ವೈಪರ್ಸ್ ಹಾಗೂ ಎಂಐ ಎಮಿರೇಟ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಎಂಐ ಎಮಿರೇಟ್ಸ್ ತಂಡದ ನಾಯಕ ಕೀರನ್ ಪೊಲಾರ್ಡ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಡೆಸರ್ಟ್ ವೈಪರ್ಸ್ ಪರ ಇನಿಂಗ್ಸ್ ಆರಂಭಿಸಿದ ಆಂಡ್ರೀಸ್ ಗೌಸ್ 58 ಎಸೆತಗಳಲ್ಲಿ 9 ಭರ್ಜರಿ ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ ಅಜೇಯ 120 ರನ್ ಬಾರಿಸಿದರು.

ಈ ಮೂಲಕ ಇಂಟರ್​ನ್ಯಾಷನಲ್ ಲೀಗ್ ಟಿ20 ಟೂರ್ನಿ ಇತಿಹಾಸದಲ್ಲೇ ಗರಿಷ್ಠ ವೈಯುಕ್ತಿಕ ಸ್ಕೋರ್​ಗಳಿಸಿದ ಬ್ಯಾಟರ್ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಅಲೆಕ್ಸ್ ಹೇಲ್ಸ್​ ಹೆಸರಿನಲ್ಲಿತ್ತು. 2023 ರಲ್ಲಿ ಹೇಲ್ಸ್ 110 ರನ್​ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು.

ಇದೀಗ 120 ರನ್​ಗಳೊಂದಿಗೆ ಆಂಡ್ರೀಸ್ ಗೌಸ್ ಇಂಟರ್​ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಶತಕದ ನೆರವಿನೊಂದಿಗೆ ಡೆಸರ್ಟ್ ವೈಪರ್ಸ್ ತಂಡವು 20 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು 233 ರನ್ ಕಲೆಹಾಕಿತು.

ಈ ಕಠಿಣ ಗುರಿ ಬೆನ್ನತ್ತಿದ ಎಂಐ ಎಮಿರೇಟ್ಸ್ ತಂಡವು 20 ಓವರ್​ಗಳಲ್ಲಿ 188 ರನ್​ಗಳಿಸಿ 45 ರನ್​ಗಳಿಂದ ಸೋಲೊಪ್ಪಿಕೊಂಡಿದೆ. ಈ ಗೆಲುವಿನೊಂದಿಗೆ ಡೆಸರ್ಟ್ ವೈಪರ್ಸ್ ತಂಡವು ಇಂಟರ್​ನ್ಯಾಷನಲ್ ಲೀಗ್ ಟಿ20 ಟೂರ್ನಿಯ ಫೈನಲ್​ಗೆ ಪ್ರವೇಶಿಸಿದೆ.

Source link

ಹೊಸ ವರ್ಷಕ್ಕೆ ಜಮ್ಮು-ಕಾಶ್ಮೀರದಲ್ಲಿ ಕಟ್ಟೆಚ್ಚರ, 100ಕ್ಕೂ ಹೆಚ್ಚು ಉಗ್ರರು ಒಳನುಸುಳಲು ಸಂಚು – Kannada News | High Alert in Jammu and Kashmir Ahead of New Year Celebrations

ಶ್ರೀನಗರ, ಡಿಸೆಂಬರ್ 31: ಹೊಸ ವರ್ಷ(New Year)ವನ್ನು ಬರಮಾಡಿಕೊಳ್ಳಲು ಕೆಲವೇ ಕೆಲವು ಗಂಟೆಗಳು ಬಾಕಿ ಉಳಿದಿವೆ. ಜಮ್ಮು ಮತ್ತು ಕಾಶ್ಮೀರದ 740 ಕಿಲೋಮೀಟರ್ ಉದ್ದದ ನಿಯಂತ್ರಣ ರೇಖೆ (ಎಲ್‌ಒಸಿ) ಉದ್ದಕ್ಕೂ ಎಚ್ಚರಿಕೆ ನೀಡಲಾಗಿದೆ. ಗಡಿಯುದ್ದಕ್ಕೂ 60 ಲಾಂಚ್‌ಪ್ಯಾಡ್‌ಗಳಿಂದ ಕಾರ್ಯನಿರ್ವಹಿಸುತ್ತಿರುವ 100 ಕ್ಕೂ ಹೆಚ್ಚು ಭಯೋತ್ಪಾದಕರು ಹೊಸ ವರ್ಷದ ದಿನದಂದು ಒಳನುಸುಳಲು ಪ್ರಯತ್ನಿಸಬಹುದು ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ಈ ಗುಪ್ತಚರ ಮಾಹಿತಿಯ ನಂತರ, ಭಾರತೀಯ ಸೇನೆಯನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ. ಸರಿಸುಮಾರು 13,000 ಅಡಿಗಳಷ್ಟು ದೂರದಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದ್ದು, ಬಿಎಸ್‌ಎಫ್ ಸಿಬ್ಬಂದಿ ಹಗಲು ರಾತ್ರಿ ಕಾವಲು ಕಾಯುತ್ತಿದ್ದಾರೆ.

ಹೊಸ ವರ್ಷಕ್ಕೂ ಮುನ್ನ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಮಂಗಳವಾರ ಜಮ್ಮು ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ಚೀಲವೊಂದು ಕಾಣಿಸಿಕೊಂಡ ವರದಿ ಭದ್ರತಾ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿತು. ಚೀಲದ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಮತ್ತು ಭದ್ರತಾ ಪಡೆಗಳು ಆ ಪ್ರದೇಶವನ್ನು ಸುತ್ತುವರೆದು ಪ್ರಯಾಣಿಕರಿಗೆ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದರು.

ಮತ್ತಷ್ಟು ಓದಿ: ಹೊಸ ವರ್ಷಕ್ಕೆ ಕೌಂಟ್​ಡೌನ್: ಖಾಕಿ ಅಲರ್ಟ್​​; ಎಣ್ಣೆ ಏಟಲ್ಲಿ ಎಲ್ಲಾದ್ರೂ ಮಲಗಿದ್ರೆ ಪೊಲೀಸರೇ ಮನೆಗೆ ಬಿಡ್ತಾರೆ!

ಸಾಕಷ್ಟು ಪ್ರಯತ್ನ ಮತ್ತು ತಾಂತ್ರಿಕ ತನಿಖೆಯ ನಂತರ, ಅಧಿಕಾರಿಗಳು ಬ್ಯಾಗ್‌ನಲ್ಲಿ ಯಾವುದೇ ಅನುಮಾನಾಸ್ಪದ ಅಥವಾ ಸ್ಫೋಟಕ ವಸ್ತುಗಳು ಇಲ್ಲ ಎಂದು ದೃಢಪಡಿಸಿದರು. ಪೊಲೀಸರು ಬ್ಯಾಗ್ ಅನ್ನು ವಶಪಡಿಸಿಕೊಂಡು ಹತ್ತಿರದ ಪೊಲೀಸ್ ಠಾಣೆಗೆ ಕೊಂಡೊಯ್ದರು. ಬ್ಯಾಗ್ ಅನ್ನು ಅಲ್ಲಿ ಯಾರು ಬಿಟ್ಟಿದ್ದಾರೆ ಅಥವಾ ಅದು ಆಕಸ್ಮಿಕವಾಗಿ ಬಿಟ್ಟು ಹೋಗಿರುವ ಪ್ರಯಾಣಿಕರ ಸಾಮಾನುಗಳೇ ಎಂಬುದನ್ನು ನಿರ್ಧರಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

ತನಿಖೆ ಪೂರ್ಣಗೊಂಡ ನಂತರ, ಬಸ್ ನಿಲ್ದಾಣದಲ್ಲಿ ಸಂಚಾರ ಮತ್ತು ಇತರ ಚಟುವಟಿಕೆಗಳು ಪುನರಾರಂಭಗೊಂಡಿವೆ. ಕಾಶ್ಮೀರವು 2025 ಕ್ಕೆ ವಿದಾಯ ಹೇಳಿ 2026 ಅನ್ನು ಸ್ವಾಗತಿಸಲು ಸಜ್ಜಾಗಿದೆ. ಕಣಿವೆಯಲ್ಲಿ ಪ್ರಸ್ತುತ ಹಬ್ಬದ ವಾತಾವರಣವಿದ್ದು, ದೇಶಾದ್ಯಂತದ ಪ್ರವಾಸಿಗರು ಕಾಶ್ಮೀರದ ಜನಪ್ರಿಯ ಪ್ರವಾಸಿ ತಾಣಗಳನ್ನು ತುಂಬುತ್ತಿದ್ದಾರೆ.

ನೀವು ಈ ಆಚರಣೆಯ ಭಾಗವಾಗಲು ಯೋಜಿಸುತ್ತಿದ್ದರೆ, ಜಾಗರೂಕರಾಗಿರಿ, ಏಕೆಂದರೆ ದಾಖಲೆಯ ಜನಸಂದಣಿ ಮತ್ತು ಕೊರೆಯುವ ಚಳಿಯು ನಿಮ್ಮ ಹೊಸ ವರ್ಷದ ಆಚರಣೆಯನ್ನು ಕುಂಠಿತಗೊಳಿಸಬಹುದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

New Year 2026: ಹೊಸ ವರ್ಷಕ್ಕೆ ನೈಟ್ ಪ್ಲಾನ್ ಇದೆಯಾ? ಬಿಎಂಟಿಸಿ ನೀಡುತ್ತಿದೆ ತಡರಾತ್ರಿಯವರೆಗೂ ಬಸ್ ಸೇವೆ – Kannada News | Bangalore New Year Transport: BMTC Midnight Buses and Metro Extended Services

ಹೊಸ ವರ್ಷಕ್ಕೆ ನೈಟ್ ಪ್ಲಾನ್ ಇದೆಯಾ? ಬಿಎಂಟಿಸಿ ನೀಡುತ್ತಿದೆ ತಡರಾತ್ರಿಯವರೆಗೂ ಬಸ್ ಸೇವೆ

ಬೆಂಗಳೂರು, ಡಿಸೆಂಬರ್ 31: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಸಾರ್ವಜನಿಕರಿಗೆ ಕೊಡುಗೆ ನೀಡಿದ್ದು, ಇಂದು (ಡಿಸೆಂಬರ್ 31) ತಡರಾತ್ರಿಯವರೆಗೂ ನಗರದ ಸಾರ್ವಜನಿಕರ ಪ್ರಯಾಣಕ್ಕೆ ಅನುಕೂಲವಾಗುವಂತೆ ಎಂ.ಜಿ. ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ ವಿಶೇಷ ಮಧ್ಯರಾತ್ರಿ ಬಸ್ ಸೇವೆಗಳನ್ನು ಘೋಷಿಸಿದೆ. ನ್ಯೂ ಇಯರ್ ಪ್ರಯುಕ್ತ ಇಂದು ರಾತ್ರಿ 11 ಗಂಟೆಯಿಂದ ಜನವರಿ 1ರ ಬೆಳಗಿನ ಜಾವ 2 ಗಂಟೆಯವರೆಗೆ ವಿಶೇಷ ಬಸ್ ಸೇವೆಗಳು ಕಾರ್ಯನಿರ್ವಹಿಸಲಿದ್ದು, ಪ್ರಯಾಣಿಕರ ಬೇಡಿಕೆ ಹೆಚ್ಚಾದಲ್ಲಿ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲಾಗುವುದೆಂದು ಬಿಎಂಟಿಸಿ ತಿಳಿಸಿದೆ.

ಎಂ.ಜಿ. ರಸ್ತೆ ಮತ್ತು ಬ್ರಿಗೇಡ್ ರಸ್ತೆಯಿಂದ ನೇರ ಸೇವೆಗಳು

ವಿಶೇಷ ಬಸ್‌ಗಳು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ ಮತ್ತು ಬ್ರಿಗೇಡ್ ರಸ್ತೆಯಿಂದ ಹೊರಟು ಬೆಂಗಳೂರಿನ ಪ್ರಮುಖ ಪ್ರದೇಶಗಳಾದ ಎಲೆಕ್ಟ್ರಾನಿಕ್ಸ್ ಸಿಟಿ ಪೂರ್ವ, ಜಿಗಣಿ, ಸರ್ಜಾಪುರ, ಕೆಂಗೇರಿ ಕೆಎಚ್‌ಬಿ ಕ್ವಾರ್ಟರ್ಸ್, ಜನಪ್ರಿಯ ಟೌನ್‌ಶಿಪ್, ನೆಲಮಂಗಲ, ಯಲಹಂಕ (ಉಪನಗರ 5ನೇ ಹಂತ ಸೇರಿ), ಬಾಗಲೂರು, ಹೊಸಕೋಟೆ, ಚನ್ನಸಂದ್ರ, ಕಾಡುಗೋಡಿ, ಬನಶಂಕರಿ, ಜೀವನ್ ಭೀಮಾನಗರ ಸೇರಿದಂತೆ ಹಲವೆಡೆಗೆ ಬಸ್ ಸಂಚಾರ ಇರಲಿದೆ. ಈ ಕಾರಿಡಾರ್‌ಗಳಿಗೆ ಜಿ-ಸರಣಿ ಹಾಗೂ ನಿಯಮಿತ ಮಾರ್ಗದ ಬಸ್‌ಗಳನ್ನು ಮೀಸಲಿಡಲಾಗಿದೆ.

ಮಾರ್ಗ ಮತ್ತು ಬಸ್ ಸಂಖ್ಯೆಗಳ ವಿವರ

ಬ್ರಿಗೇಡ್ ರಸ್ತೆಯಿಂದ

  • ಎಲೆಕ್ಟ್ರಾನಿಕ್ಸ್ ಸಿಟಿ – ಜಿ-3
  • ಜಿಗಣಿ – ಜಿ-4

ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣದಿಂದ:

  •  ಸರ್ಜಾಪುರ – ಜಿ-2
  •  ಕೆಂಗೇರಿ ಕೆಎಚ್‌ಬಿ ಕ್ವಾರ್ಟರ್ಸ್ – ಜಿ-6
  •  ಜನಪ್ರಿಯ ಟೌನ್‌ಶಿಪ್ – ಜಿ-7
  •  ನೆಲಮಂಗಲ – ಜಿ-8
  •  ಯಲಹಂಕ ಉಪನಗರ 5ನೇ ಹಂತ – ಜಿ-9
  •  ಯಲಹಂಕ – ಜಿ-10
  •  ಬಾಗಲೂರು – ಜಿ-11
  •  ಹೊಸಕೋಟೆ – 317-ಜಿ
  •  ಚನ್ನಸಂದ್ರ / ಕಾಡುಗೋಡಿ – ಎಸ್‌ಬಿಎಸ್‌-13ಕೆ
  •  ಬನಶಂಕರಿ – 13 ಗೆ ಬಸ್​ಗಳು ಸಂಚರಿಸಲಿವೆ.

ಇದನ್ನೂ ಓದಿ New Year 2026: ಹೊಸ ವರ್ಷಾಚರಣೆಗೆ ಗುಡ್ ನ್ಯೂಸ್: ತಡರಾತ್ರಿ ವರೆಗೂ ಇರುತ್ತೆ ನಮ್ಮ ಮೆಟ್ರೋ ರೈಲು ಸಂಚಾರ!

ವಿಶೇಷ ಮೆಟ್ರೋ ಸೇವೆ

ಇದೇ ವೇಳೆ, ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವವರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಸೇವಾ ಅವಧಿಯನ್ನು ವಿಸ್ತರಿಸಿದೆ. ಡಿಸೆಂಬರ್ 31ರ ರಾತ್ರಿ 11 ಗಂಟೆಯಿಂದ ಜನವರಿ 1ರ ತಡರಾತ್ರಿ 2 ಗಂಟೆಯವರೆಗೆ ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣವನ್ನು ಭದ್ರತಾ ಕಾರಣಗಳಿಂದ ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವಾಚ್ ಟವರ್‌, ಹೀಟ್ ಮ್ಯಾಪ್, ಚೆನ್ನಮ್ಮ ಪಡೆ: ಹೊಸ ವರ್ಷಾಚರಣೆಗೆ ಬೆಂಗಳೂರಿನ ಎಲ್ಲೆಡೆ ಪೊಲೀಸ್ ಬಂದೋಬಸ್ತ್ – Kannada News | Bengaluru New Year 2026: Watch Towers, Heat Maps and 20000 Cops Deployed for Citywide Security

ಹೊಸ ವರ್ಷಾಚರಣೆಗೆ ಬೆಂಗಳೂರಿನ ಎಲ್ಲೆಡೆ ಪೊಲೀಸ್ ಬಂದೋಬಸ್ತ್

ಬೆಂಗಳೂರು, ಡಿಸೆಂಬರ್ 31: ಹೊಸ ವರ್ಷವನ್ನು ಸ್ವಾಗತಿಸಲು ಬೆಂಗಳೂರು (Bangalore) ಸಜ್ಜಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಚರ್ಚ್ ಸ್ಟ್ರೀಟ್‌ನಂತಹ ಪ್ರಮುಖ ಕೇಂದ್ರಗಳು ದೀಪಾಲಂಕಾರದಿಂದ ಜಗಮಗಿಸುತ್ತಿವೆ. ಈ ಪ್ರದೇಶಗಳು ಮತ್ತು ಕೋರಮಂಗಲ ಸೇರಿದಂತೆ ಹೆಚ್ಚು ಜನಸಂದಣಿ ನಿರೀಕ್ಷಿತ ಸ್ಥಳಗಳಲ್ಲಿ ಪೊಲೀಸರು ಅತ್ಯಂತ ಹೆಚ್ಚಿನ ನಿಗಾ ವಹಿಸಿದ್ದಾರೆ. ನಗರದಾದ್ಯಂತ ಸುಮಾರು 20,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ರಸ್ತೆಗಳ ಎರಡೂ ಬದಿಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, 6,000ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳ ಮೂಲಕ ನಿರಂತರ ಕಣ್ಗಾವಲು ಇರಿಸಲಾಗಿದೆ.

ಪ್ರಮುಖ ರಸ್ತೆಗಳಲ್ಲಿ ವಾಚ್‌ಟವರ್‌

ಪ್ರಮುಖ ರಸ್ತೆಗಳಲ್ಲಿ ವಾಚ್‌ಟವರ್‌ಗಳನ್ನು ನಿರ್ಮಿಸಿ ಪೊಲೀಸರು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಿದ್ದಾರೆ. ಕುಡಿದು ವಾಹನ ಚಲಾಯಿಸುವುದನ್ನು ತಡೆಯಲು 66 ಡ್ರಿಂಕ್ ಅಂಡ್ ಡ್ರೈವ್ ಚೆಕ್ ಪಾಯಿಂಟ್‌ಗಳನ್ನು ಸ್ಥಾಪಿಸಲಾಗಿದೆ ಮತ್ತು 92 ವೀಲಿಂಗ್ ಸ್ಪಾಟ್‌ಗಳನ್ನು ಗುರುತಿಸಲಾಗಿದೆ.

ಭದ್ರತೆಗಾಗಿ ಬೆಂಗಳೂರು ನಗರದ ಹಲವೆಡೆ ವಾಚ್ ಟವರ್‌ಗಳ ನಿಯೋಜನೆ ಮಾಡಲಾಗಿದೆ. ಸುರಕ್ಷಿತ ವಲಯಗಳ ಗುರುತಿಸುವಿಕೆ ಹಾಗೂ ಹೀಟ್ ಮ್ಯಾಪ್ ವ್ಯವಸ್ಥೆ (ಕಲರ್ ಕೋಡೆಡ್ ವಿಶ್ಯುಯಲ್ ಟೂಲ್​ ಆಧಾರಿತ ಭದ್ರತಾ ವ್ಯವಸ್ಥೆ. ಇದು ಪೊಲೀಸರಿಗೆ ಹೆಚ್ಚಿನ ಚಟುವಟಿಕೆ ಇರುವ ಪ್ರದೇಶಗಳನ್ನು ಗುರುತಿಸಲು ನೆರವಾಗುತ್ತದೆ.) ಮಾಡಲಾಗಿದೆ.

ಮಹಿಳಾ ಸುರಕ್ಷತೆಗೆ ಚೆನ್ನಮ್ಮ ಪಡೆ

ಮಹಿಳಾ ಸುರಕ್ಷತೆಗೆ ಹೆಚ್ಚಿನ ಕ್ರಮ ಕೈಗೊಳ್ಳಲಾಗಿದ್ದು ಕ್ಯೂಆರ್‌ಟಿ, ಚೆನ್ನಮ್ಮ ಪಡೆ ಸೇರಿ ವಿಶೇಷ ಪೊಲೀಸ್ ಪಡೆ ನಿಯೋಜನೆ ಮಾಡಲಾಗುತ್ತದೆ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ, ಲೇಡಿ ಡಿ.ಸಿ.ಪಿ. ಶ್ರೇಣಿಯ ಅಧಿಕಾರಿಗಳು ಸಹ ನಿಯೋಜಿತರಾಗಿದ್ದಾರೆ. ಕ್ಯೂಆರ್ ಕೋಡ್ ಮೂಲಕ ಮಹಿಳಾ ಸಹಾಯವಾಣಿ ಕೇಂದ್ರಗಳ ಕುರಿತು ಮಾಹಿತಿ ನೀಡಲಾಗುತ್ತಿದೆ.

ಮಹಿಳಾ ಬೌನ್ಸರ್ಸ್ ನಿಯೋಜನೆ

ವುಮೆನ್ ಬೌನ್ಸರ್​ಗಳನ್ನೂ ಸಹ ನಿಯೋಜಿಸಲಾಗಿದೆ. ಅಸ್ವಸ್ಥರಾದವರಿಗೆ ಸುರಕ್ಷತೆ ಒದಗಿಸಲು ಸೇಫ್ಟಿ ಐಲ್ಯಾಂಡ್‌ಗಳನ್ನು ನಿರ್ಮಿಸಲಾಗಿದ್ದು, ವುಮೆನ್ ಶೆಲ್ಟರ್‌ಗಳಲ್ಲಿ ಮಹಿಳಾ ಸಿಬ್ಬಂದಿ ಮತ್ತು ಆರೋಗ್ಯ ಸಿಬ್ಬಂದಿ ಲಭ್ಯವಿರುತ್ತಾರೆ. 112 ತುರ್ತು ಸೇವೆಗೆ ಕರೆ ಬಂದ ತಕ್ಷಣ ದ್ವಿಗುಣ ಬಲದೊಂದಿಗೆ ಸ್ಪಂದಿಸಲು ವ್ಯವಸ್ಥೆ ಮಾಡಲಾಗಿದೆ. ಅಗ್ನಿಶಾಮಕ ದಳ ಮತ್ತು ಅಬಕಾರಿ ಇಲಾಖೆಗಳೊಂದಿಗೆ ಜಂಟಿ ತಪಾಸಣೆ ನಡೆಸಲಾಗಿದೆ.

ಬೆಂಗಳೂರು ಪೊಲೀಸ್ ಆಯುಕ್ತರಿಂದ ಭದ್ರತಾ ಪರಿಶೀಲನೆ

ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಡಿಸೆಂಬರ್ 30ರ ರಾತ್ರಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದ್ದು, ಜನಸಂದಣಿ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಜನರನ್ನು ಪದೇ ಪದೇ ಪ್ರಮುಖ ರಸ್ತೆಗಳಲ್ಲಿ ಅಡ್ಡಾಡಲು ಬಿಡುವುದಿಲ್ಲ, ಬದಲಾಗಿ ಹೋಟೆಲ್, ಪಬ್ ಮತ್ತು ರೆಸ್ಟೋರೆಂಟ್‌ಗಳಂತಹ ನಿರ್ದಿಷ್ಟ ಸ್ಥಳಗಳಿಗೆ ತೆರಳಲು ಅವಕಾಶ ನೀಡಲಾಗುವುದು ಎಂದಿದ್ದಾರೆ. ಸ್ಥಳೀಯ ಶಾಸಕ ಎನ್.ಎ. ಹ್ಯಾರಿಸ್ ಅವರು ಬ್ರಿಗೇಡ್ ರಸ್ತೆಗೆ ಭೇಟಿ ನೀಡಿ ಭದ್ರತಾ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಅವರು ಜನರಿಗೆ ಶಿಸ್ತುಬದ್ಧವಾಗಿ ಸಂಭ್ರಮಿಸಲು ಕರೆ ನೀಡಿದ್ದು, ಪೊಲೀಸರ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಿದ್ದಾರೆ. ಪೊಲೀಸ್ ಕಣ್ಗಾವಲು ವ್ಯವಸ್ಥೆ ಎಲ್ಲವನ್ನೂ ದಾಖಲಿಸುತ್ತಿದ್ದು, ಯಾವುದೇ ತಪ್ಪು ಮಾಡಿದರೆ ನಂತರವೂ ಪತ್ತೆಹಚ್ಚಲು ಸಾಧ್ಯ ಎಂದು ಅವರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಭಾರಿ ಬಂದೋಬಸ್ತ್, ಎಲ್ಲೆಡೆ ಖಾಕಿ ಹದ್ದಿನಕಣ್ಣು

ಮುಂಜಾಗ್ರತಾ ಕ್ರಮವಾಗಿ, ಬೆಂಗಳೂರು ದಕ್ಷಿಣ ಜಿಲ್ಲೆಯ ಕೆಲವು ಪ್ರವಾಸಿ ತಾಣಗಳಾದ ಶ್ರೀರಾಮದೇವರ ಬೆಟ್ಟ, ಸಂಗಮ, ಮೇಕೆದಾಟು ಮತ್ತು ಚುಂಚಿ ಫಾಲ್ಸ್‌ಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಜಿಲ್ಲಾಧಿಕಾರಿ ಯಶ್ವಂತ್ ಅವರು ಈ ಕುರಿತು ಆದೇಶ ಹೊರಡಿಸಿದ್ದು, ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ಜನವರಿ 1 ರ ಬೆಳಗ್ಗೆ 6 ಗಂಟೆಯವರೆಗೆ ಪ್ರವಾಸಿಗರಿಗೆ ಈ ತಾಣಗಳಿಗೆ ಭೇಟಿ ನೀಡಲು ಅವಕಾಶವಿರುವುದಿಲ್ಲ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಉತ್ತರಾಖಂಡದ ಸುರಂಗದಲ್ಲಿ ಕಾರ್ಮಿಕರ ಹೊತ್ತೊಯ್ಯುತ್ತಿದ್ದ 2 ಲೋಕೊ ರೈಲುಗಳು ಡಿಕ್ಕಿ, 60 ಜನರಿಗೆ ಗಾಯ – Kannada News | Two Worker Trains Collide Inside Uttarakhand Tunnel, Dozens Injured

ಚಮೋಲಿ, ಡಿಸೆಂಬರ್ 31: ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಎರಡು ರೈಲುಗಳು ಸುರಂಗದೊಳಗೆ ಡಿಕ್ಕಿ ಹೊಡೆದುಕೊಂಡ ಪರಿಣಾಮ 60 ಕಾರ್ಮಿಕರು ಗಾಯಗೊಂಡಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಉತ್ತರಾಖಂಡದ ಚಮೋಲಿ ಜಿಲ್ಲೆಯ ಜಲವಿದ್ಯುತ್ ಯೋಜನೆಯೊಂದರಲ್ಲಿ ತಡರಾತ್ರಿ ಪಾಳಿ ಬದಲಾವಣೆಯು ಅಸ್ತವ್ಯಸ್ತವಾಗಿದೆ, ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಎರಡು ರೈಲುಗಳು ಸುರಂಗದೊಳಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 60 ಜನರು ಗಾಯಗೊಂಡಿದ್ದಾರೆ.

ಟಿಎಚ್‌ಡಿಸಿ ನಡೆಸುತ್ತಿರುವ ವಿಷ್ಣುಗಡ-ಪಿಪಲ್ಕೋಟಿ ಜಲವಿದ್ಯುತ್ ಯೋಜನೆಯಲ್ಲಿ ರಾತ್ರಿ 930 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.ಸುರಂಗದೊಳಗೆ ಚಲಿಸುತ್ತಿದ್ದ ಎರಡು ಲೋಕೋ ರೈಲುಗಳು ಶಿಫ್ಟ್ ಬದಲಾವಣೆಯ ಸಮಯದಲ್ಲಿ ಪರಸ್ಪರ ಡಿಕ್ಕಿ ಹೊಡೆದಿವೆ.ಡಿಕ್ಕಿಯ ಸಮಯದಲ್ಲಿ ಒಟ್ಟು 109 ಕಾರ್ಮಿಕರು ರೈಲುಗಳಲ್ಲಿದ್ದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Video: ಮೊಬೈಲ್ ಅಂಗಡಿ ಮಾಲೀಕನ ಗಮನ ಬೇರೆಡೆ ಸೆಳೆದು ಹಣ ಕದ್ದ ಮಹಿಳೆ – Kannada News | Cash Theft at Jhansi Mobile Store Caught on CCTV

ಝಾನ್ಸಿ, ಡಿಸೆಂಬರ್ 31: ಉತ್ತರ ಪ್ರದೇಶದ ಝಾನ್ಸಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬಳು ಮೊಬೈಲ್ ಶೋರೂಮನ್​ನಲ್ಲಿ ಮಾಲೀಕನ ಗಮನ ಬೇರೆಡೆಗೆ ತಿರುಗಿಸಿ, ಕೌಂಟರ್​ನಲ್ಲಿದ್ದ ನಗದನ್ನು ಕದ್ದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಂಗಡಿ ಮಾಲೀಕರು ಮೊಬೈಲ್​ಗಳನ್ನು ತೋರಿಸುವುದರಲ್ಲಿ ನಿರತರಾಗಿರುತ್ತಾರೆ. ಅವರು ಅತ್ತ ವಿವರಿಸುತ್ತಿದ್ದಂತೆ, ಈಕೆ ತೆರೆದ ನಗದು ಡ್ರಾಯರ್ ಕಡೆಗೆ ಕೈ ಹಾಕುತ್ತಾಳೆ.

ಒಂದು ಬಂಡಲ್ ಹಣವನ್ನು ಎತ್ತಿಕೊಂಡು ಸಂಭಾಷಣೆಗೆ ಅಡ್ಡಿಯಾಗದಂತೆ ತನ್ನ ಬಟ್ಟೆ ಅಥವಾ ಚೀಲಕ್ಕೆ ಹಾಕುತ್ತಾಳೆ. ಅಂಗಡಿಯಿಂದ ಹೊರಡುವ ಮೊದಲು ನಿಜವಾದ ಗ್ರಾಹಕರಂತೆ ವರ್ತಿಸುತ್ತಾಳೆ. ಇದೆಲ್ಲವೂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನನ್ನ ಬರವಣಿಗೆಯನ್ನೂ ಮೆಚ್ಚಬೇಕು; ಸಿಲ್ಲಿ ಲಲ್ಲಿಯಲ್ಲಿ ಹೇಳಿದ್ದ ಯಶ್ – Kannada News | Yash’s ‘Toxic’ Story: From Silli Lalli Star to Writer. His Vision Revealed

ನಟ ಯಶ್ ಅವರ ಖ್ಯಾತಿ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರು ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದವರು. ‘ಕೆಜಿಎಫ್ 2’ ಬಳಿಕ ಅವರ ಜನಪ್ರಿಯತೆ ಬೇರೆಯದೇ ಹಂತಕ್ಕೆ ಹೋಗಿದೆ. ಈ ಚಿತ್ರಕ್ಕೆ ಅವರು ಕೂಡ ಕಥೆ ಬರೆದಿದ್ದಾರೆ. ಅವರಿಗೆ ಬರವಣಿಗೆ ಬಗ್ಗೆ ಮೊದಲಿನಿಂದಲೂ ಆಸಕ್ತಿ ಇತ್ತೇ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಆಗಿದ್ದು ಯಶ್ ಅವರು ನೀಡಿದ ಹೇಳಿಕೆ.

ಯಶ್ ಅವರು ಈಗ ದೊಡ್ಡ ಸ್ಟಾರ್ ಆಗಿ ಬೆಳೆದಿರಬಹುದು. ಆದರೆ, ಅಂದು ಅವರು ಆ ರೀತಿ ಇರಲಿಲ್ಲ. ಅವರು ಕಿರುತೆರೆಯಲ್ಲಿ ನಟಿಸುತ್ತಿದ್ದರು. ಕಿರುತೆರೆಯಿಂದ ಹಿರಿ ತೆರೆಗೆ ಕಾಲಿಟ್ಟರು. ಆ ಬಳಿಕ ಯಶ್ ಅವರನ್ನು ತಡೆಯುವವರೇ ಯಾರೂ ಇಲ್ಲ ಎಂಬಂತಾಯಿತು. ಪರಭಾಷೆಯಲ್ಲೂ ಯಶ್ ಬ್ಯುಸಿ ಇದ್ದಾರೆ. ಅವರು ಒಂದು ವಿಡಿಯೋ ಈಗ ವೈರಲ್ ಆಗಿದೆ.

‘ಸಾಹಿತ್ಯನ ಮೆಚ್ಚಬೇಕು, ಸ್ವಂತ ಬರೆಯಬೇಕು’ ಎಂದು ಧಾರಾವಾಹಿಯಲ್ಲಿ ಹೇಳಲಾಗುತ್ತದೆ. ‘ಹೃದಯ ಮಾತ್ರವಲ್ಲ, ನನ್ನ ಬರವಣಿಗೆಯನ್ನೂ ಜನರು ಮೆಚ್ಚಬೇಕು’ ಎಂದು ಯಶ್ ಹೇಳುತ್ತಾರೆ. ಈಗ ಆ ಮಾತು ನಿಜವಾಗಿದೆ. ಯಶ್ ಅವರು ‘ಟಾಕ್ಸಿಕ್’ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಈ ಕಥೆ ಯಾವ ರೀತಿಯಲ್ಲಿ ಇರುತ್ತದೆ ಎಂಬ ಕುತೂಹಲ ಮೂಡಿದೆ.

‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ತೆರೆಗೆ ಬರುತ್ತಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರ ಗೆಲ್ಲುವ ಭರವಸೆ ಅಭಿಮಾನಿಗಳಿಗೆ ಇದೆ. ಈ ಚಿತ್ರಕ್ಕೆ ಗೀತು ಮೋಹನ್​​ದಾಸ್ ನಿರ್ದೇಶನ ಇದೆ. ಕನ್ನಡ ಮಾತ್ರವಲ್ಲದೆ, ಇಂಗ್ಲಿಷ್​​ನಲ್ಲೂ ಸಿನಿಮಾ ಶೂಟ್ ಆಗಿದೆ. ಪರಭಾಷೆಗೂ ಸಿನಿಮಾ ಡಬ್ ಆಗಿ ರಿಲೀಸ್ ಆಗುತ್ತಾ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತಂತ್ರದಿಂದ ಗಿಲ್ಲಿ ಬಳಿ ದೊಡ್ಡ ಅವಕಾಶ ಪಡೆದ ಅಶ್ವಿನಿ; ಫಿನಾಲೆ ವಾರ ತಲುಪೋದು ಮತ್ತಷ್ಟು ಸುಲಭ – Kannada News | Big Boss Kannada: Gilli’s Shocking Ashwini Gowda Queen Choice Explained

ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ಮಧ್ಯೆ ಆಗಾಗ ಕಿರಿಕ್​​ಗಳು ಆಗುತ್ತಲೇ ಇರುತ್ತವೆ. ಗಿಲ್ಲಿ ಅವರು ಅಶ್ವಿನಿ ಪರ ನಿಂತಿದ್ದು, ಅವರ ಜರ್ನಿಗೆ ಸಹಾಯ ಆಗುವಂತೆ ನಡೆದುಕೊಂಡಿದ್ದು ತುಂಬಾನೇ ಕಡಿಮೆ. ಆದರೆ, ಬಿಗ್ ಬಾಸ್ (Bigg Boss) ಫಿನಾಲೆ ವೀಕ್​​ನಲ್ಲಿ ಅಶ್ವಿನಿ ಗೌಡ ಅವರಿಗೆ ಗಿಲ್ಲಿ ಅವರು ದೊಡ್ಡ ಅವಕಾಶ ನೀಡಿದರು. ಈ ನಿರ್ಧಾರ ಮನೆಯ ಅನೇಕರಿಗೆ ಅಚ್ಚರಿ ತಂದಿದೆ. ಕೆಲವರಿಗೆ ಶಾಕ್ ಎನಿಸಿದೆ. ಅಷ್ಟಕ್ಕೂ ಏನು ಆ ನಿರ್ಧಾರ? ಗಿಲ್ಲಿ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು? ಆ ಬಗ್ಗೆ ಇಲ್ಲಿದೆ ವಿವರ.

ಫಿನಾಲೆಗೆ ಉಳಿದುಕೊಂಡಿರೋದು ಕೆಲವೇ ವಾರಗಳು ಮಾತ್ರ. ಹೀಗಿರುವಾಗ ಸೀಸನ್​ನ ಕೊನೆಯ ಕ್ಯಾಪ್ಟನ್ ಆಯ್ಕೆ ಮಾಡಲು ಪ್ರಕ್ರಿಯೆ ಆರಂಭ ಆಯಿತು. ಗಿಲ್ಲಿ ನಟ ಈ ವಾರದ ಕ್ಯಾಪ್ಟನ್ ಆಗಿರುವುದರಿಂದ ಅವರನ್ನು ರಾಜ ಎಂದು ಬಿಗ್ ಬಾಸ್ ಘೋಷಣೆ ಮಾಡಿದರು. ಇಷ್ಟೇ ಅಲ್ಲ, ಮುಂದಿನ ಕ್ಯಾಪ್ಟನ್ಸಿ ರೇಸ್​ಗೆ ಅವರು ನೇರವಾಗಿ ಆಯ್ಕೆ ಆದರು. ರಾಜನ ಆಯ್ಕೆ ಮಾಡಿದ ಮೇಲೆ ರಾಣಿನ ಆಯ್ಕೆ ಮಾಡಲೇಬೇಕಲ್ಲವೇ? ಗಿಲ್ಲಿಗೆ ರಾಣಿ ಆಯ್ಕೆ ಮಾಡುವ ಅವಕಾಶ ನೀಡಲಾಯಿತು. ಈ ವೇಳೆ ಅವರು ಆಯ್ಕೆ ಮಾಡಿದ್ದು ಅಶ್ವಿನಿ ಗೌಡ ಅವರನ್ನು.

ಕಾವ್ಯಾ ಪರವಾಗಿ ಗಿಲ್ಲಿ ಹೆಚ್ಚು ನಿಲ್ಲುತ್ತಿದ್ದರು. ಆದರೆ, ಈ ಬಾರಿ ಕಾವ್ಯಾನ ಬಿಟ್ಟು ಅಶ್ವಿನಿ ಗೌಡಗೆ ದೊಡ್ಡ ಅವಕಾಶ ನೀಡಿದರು ಗಿಲ್ಲಿ. ಇದಕ್ಕೆ ಕಾರಣ ಬಿಗ್ ಬಾಸ್ ಕೊಟ್ಟ ಸೂಚನೆ ಹಾಗೂ ಅಶ್ವಿನಿ ಗೌಡ ರೂಪಿಸಿ ತಂತ್ರ. ‘ಟಾಸ್ಕ್ ಆಡಿ ಗೆಲ್ಲಲು ಅರ್ಹರಲ್ಲ ಎನಿಸಿದ ಮಹಿಳಾ ಸ್ಪರ್ಧಿಯನ್ನು ರಾಣಿ ಸ್ಥಾನಕ್ಕೆ ಆಯ್ಕೆ ಮಾಡಬೇಕು’ ಎಂದು ಬಿಗ್ ಬಾಸ್ ಹೇಳಿದರು.

ಇದನ್ನೂ ಓದಿ: ಅಂದು ಮೋಕ್ಷಿತಾ, ಇಂದು ಸ್ಪಂದನಾ; ಕಾರು ಹತ್ತಿ ಬಂದ ಬಳಿಕ ಭಾರೀ ಬದಲಾವಣೆ

ಅಚ್ಚರಿಯ ಸಂಗತಿ ಎಂದರೆ ಹಿಂದಿನ ದಿನವಷ್ಟೇ ಅಶ್ವಿನಿ ಬಳಿ ಮಾತನಾಡಿದ್ದ ಗಿಲ್ಲಿ, ‘ನಿಮಗೆ ಟಾಸ್ಕ್ ಆಡೋಕೆ ಬರಲ್ಲ. ನೀವು ಟಾಸ್ಕ್​​ಗಳನ್ನು ಗೆಲ್ಲಲ್ಲ’ ಎಂದಿದ್ದರು. ಹೀಗಾಗಿ, ಇದೇ ಮಾತನ್ನು ಇಟ್ಟುಕೊಂಡು ಅಶ್ವಿನಿ ಟಾಂಟ್ ಕೊಡೋಕೆ ಆರಂಭಿಸಿದರು. ‘ನನಗೆ ಟಾಸ್ಕ್ ಆಡೋಕೆ ಬರೋದಿಲ್ಲ ಎಂದಿದ್ಯಲ್ಲ. ಹಾಗಿದ್ರೆ ಮಾತಿನಮೇಲೆ ನಿಂತುಕೋ’ ಎಂದು ಗಿಲ್ಲಿಗೆ ಹೇಳಿದರು ಅಶ್ವಿನಿ. ಈ ಕಾರಣಕ್ಕೆ ಅಶ್ವಿನಿಯನ್ನು ರಾಣಿಯಾಗಿ ಗಿಲ್ಲಿ ಆಯ್ಕೆ ಮಾಡಿದರು. ಇದರಿಂದ ಅವರು ಕೂಡ ಕ್ಯಾಪ್ಟನ್ಸಿ ರೇಸ್​ಗೆ ಸ್ಥಾನ ಪಡೆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

New Year 2026: ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಭಾರಿ ಬಂದೋಬಸ್ತ್, ಎಲ್ಲೆಡೆ ಖಾಕಿ ಹದ್ದಿನಕಣ್ಣು – Kannada News | New Year 2026 in Bengaluru: Massive Police Security Deployed On Ground Report and watch Video

ಬೆಂಗಳೂರು, ಡಿಸೆಂಬರ್ 31: ಬೆಂಗಳೂರಿನಲ್ಲಿ 2026ರ ಹೊಸ ವರ್ಷಾಚರಣೆಗೆ ಭರ್ಜರಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ. ಹೊಸ ವರ್ಷಾಚರಣೆಯ ಕೌಂಟ್ ಡೌನ್ ಈಗಾಗಲೇ ಪ್ರಾರಂಭವಾಗಿದ್ದು, ಈ ಪ್ರದೇಶಗಳನ್ನು ದೀಪಗಳಿಂದ ಅಲಂಕರಿಸಲಾಗಿದೆ. ಸುಮಾರು 20,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. 6,000ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ವಾಚ್‌ಟವರ್‌ಗಳಿಂದ ನಿಗಾ ವಹಿಸಲಾಗುತ್ತಿದೆ.

ಮಹಿಳೆಯರ ಸುರಕ್ಷತೆಗೆ ವಿಶೇಷ ಗಮನ ನೀಡಲಾಗಿದ್ದು, ಹೆಚ್ಚುವರಿ ಮಹಿಳಾ ಸಿಬ್ಬಂದಿ, ಸೇಫ್ಟಿ ಐಲ್ಯಾಂಡ್‌ಗಳು, ವುಮೆನ್ ಶೆಲ್ಟರ್‌ಗಳು ಮತ್ತು ಸಹಾಯವಾಣಿ ವ್ಯವಸ್ಥೆ ಮಾಡಲಾಗಿದೆ. 66 ಡ್ರಿಂಕ್ ಅಂಡ್ ಡ್ರೈವ್ ಚೆಕ್ ಪಾಯಿಂಟ್‌ಗಳು ಮತ್ತು 92 ವೀಲಿಂಗ್ ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಕೆಲವು ಪ್ರವಾಸಿ ತಾಣಗಳಿಗೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮತ್ತು ಸ್ಥಳೀಯ ಶಾಸಕ ಎನ್.ಎ. ಹ್ಯಾರಿಸ್ ಅವರು ಭದ್ರತಾ ಕ್ರಮಗಳನ್ನು ಪರಿಶೀಲಿಸಿದ್ದು, ಶಿಸ್ತುಬದ್ಧವಾಗಿ ಹೊಸ ವರ್ಷಾಚರಣೆ ಮಾಡಲು ಸಾರ್ವಜನಿಕರಿಗೆ ಸೂಚಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಹವಾಮಾನ ವರದಿ: ಬೆಂಗಳೂರು, ತುಮಕೂರು ಸೇರಿ ಹಲವೆಡೆ ಮಳೆಯ ಸಾಧ್ಯತೆ – Kannada News | Bengaluru temperature: Light rain in south part of Karnataka including Bengaluru

ಬೆಂಗಳೂರು, ತುಮಕೂರು ಸೇರಿ ಹಲವೆಡೆ ಮಳೆಯ ಸಾಧ್ಯತೆ

ಬೆಂಗಳೂರು, ಡಿಸೆಂಬರ್ 31: ಕಳೆದ ಹಲವು ದಿನಗಳಿಂದ ರಾಜ್ಯದೆಲ್ಲೆಡೆ ಒಣ ಹವೆಯ (Weather Forecast) ವಾತಾವರಣವಿದ್ದು, ಇಂದು ದಕ್ಷಿಣ ಒಳನಾಡಿನ ಕೆಲವೆಡೆ ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲೂ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ಮಳೆಯಾಗಲಿದೆ. ಬೆಂಗಳೂರಿನ ತಾಪಮಾನದಲ್ಲಿ ಅಷ್ಟೇನೂ ಸುಧಾರಣೆಯಿಲ್ಲದ ಕಾರಣ ಬೆಚ್ಚಗಿನ ಉಡುಪು ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ವರ್ಷಾಂತ್ಯದ ವರೆಗೂ ರಾಜ್ಯದಲ್ಲಿ ಒಣ ಹವೆಯೇ ಇರಲಿದ್ದು, ಹೊಸ ವರ್ಷಕ್ಕೆ ವರುಣಾರ್ಭಟವಿರಬಹುದೆಂದು ಇಲಾಖೆ ತಿಳಿಸಿದೆ.

ಎಲ್ಲಲ್ಲಿ ಮಳೆ?

ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಕೋಲಾರ, ಮಂಡ್ಯ, ಮೈಸೂರು, ತುಮಕೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಒಣಹವೆ?

ದಕ್ಷಿಣ ಒಳನಾಡಿನ ಬಳ್ಳಾರಿ, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಶಿವಮೊಗ್ಗ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಒಣ ಹವೆಯ ವಾತಾವರಣ ಇರಲಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿಯಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಮೋಡ, ಮಳೆ

ಬೆಂಗಳೂರಿನಲ್ಲಿ ಇಂದು ಮೋಡ ಕವಿದ ವಾತಾವರಣವಿದ್ದು, ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನ ತಾಪಮಾನ ಕನಿಷ್ಠ 18°C ಇದ್ದು, ಗರಿಷ್ಠ 28°C ಇರಲಿದೆ ಎಂದು ಇಲಾಖೆ ತಿಳಿಸಿದೆ. ಈ ರೀತಿಯ ತೀವ್ರ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 7:53 am, Wed, 31 December 25

Source link