All posts by nagaraj11081993

ಅಂದು ಮೋಕ್ಷಿತಾ, ಇಂದು ಸ್ಪಂದನಾ; ಕಾರು ಹತ್ತಿ ಬಂದ ಬಳಿಕ ಭಾರೀ ಬದಲಾವಣೆ – Kannada News | Bigg Boss Kannada: Spandana’s Comeback Game Change Mirrors Mokshitha Pai

ಮೋಕ್ಷಿತಾ ಪೈ ಅವರು ಕಳೆದ ಸೀಸನ್ ಅಲ್ಲಿ ಸೈಲೆಂಟ್ ಆಗಿದ್ದೇ ಹೆಚ್ಚು. ಬೇಕಾದ ಕಡೆಗಳಲ್ಲಿ ಅವರು ಸ್ಟ್ಯಾಂಡ್ ತೆಗೆದುಕೊಂಡಿದ್ದು ಇದೆ. ಆದರೆ, ಸೈಲೆಂಟ್ ಆಗಿದ್ದರು ಎಂಬ ಕಾರಣಕ್ಕೆ ಅವರನ್ನು ಎಲ್ಲರೂ ನೆಗ್ಲೆಕ್ಟ್ ಮಾಡಿದ್ದರು. ಆದರೆ, ಆ ಒಂದು ಕ್ಷಣ ಎಲ್ಲವನ್ನೂ ಬದಲಿಸಿತ್ತು. ಅವರು ಎಲಿಮಿನೇಷನ್ ಹಂತ ತಲುಪಿದ್ದರು. ಕಾರಿನಲ್ಲಿ ಹೊರ ಹೋಗಿ, ಸೇವ್ ಆಗಿ ಬಂದರು. ಮರಳಿ ಬರುತ್ತಿದ್ದಂತೆ ಅವರು ಚಾಲೆಂಜ್ ಮಾಡಿದ್ದರು. ಅವರ ಆಟ ಸಂಪೂರ್ಣ ಬದಲಾಯಿತು. ಈ ಬಾರಿ ಸ್ಪಂದನಾ (Spandana) ಕೂಡ ಹಾಗೆಯೇ ಆಗುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.

ಮೋಕ್ಷಿತಾ ಪೈ ಎಲಿಮಿನೇಷನ್ ಹಂತ ತಲುಪಿ ಮರಳಿ ಬಂದಿದ್ದರಿಂದ ಅವರಲ್ಲಿ ಗೆಲ್ಲಬೇಕು ಎನ್ನುವ ಛಲ ಹುಟ್ಟಿಕೊಂಡಿತು. ಈ ಕಾರಣದಿಂದಲೇ ಅವರ ಆಟದಲ್ಲಿ ಬದಲಾವಣೆ ಮಾಡಿಕೊಂಡರು. ಕಾರು ಇಳಿಯುತ್ತಿದ್ದಂತೆ ಅವರು ಚಾಲೆಂಜ್ ಕೂಡ ಮಾಡಿದರು. ಅವರು ಟಾಪ್ ಐದರಲ್ಲಿ ಸ್ಥಾನ ಪಡೆದರು. ಸ್ಪಂದನಾ ಕೂಡ ಹಾಗೆಯೇ ಆಗಬಹುದೇ ಎಂಬ ಪ್ರಶ್ನೆ ಮೂಡಿದೆ.

ಕಳೆದ ವಾರ ಮಾಳು ಹಾಗೂ ಸ್ಪಂದನಾ ನಾಮಿನೇಷನ್ ಲಿಸ್ಟ್​​ನಲ್ಲಿ ಇದ್ದರು. ಈ ಪೈಕಿ ಇಬ್ಬರನ್ನೂ ಕಾರು ಹತ್ತಿಸಿ ಕಳುಹಿಸಲಾಗಿದೆ. ಕೊನೆಯಲ್ಲಿ ಸ್ಪಂದನಾ ಉಳಿದುಕೊಂಡಿದ್ದಾರೆ. ಅವರು ಬಿಗ್ ಬಾಸ್ ಮನೆಗೆ ಬರುತ್ತಿದ್ದಂತೆ ಕಣ್ಣೀರು ಹಾಕಿದ್ದಾರೆ. ಆಟದಲ್ಲೂ ಬದಲಾವಣೆ ಮಾಡಿಕೊಂಡಂತೆ ಕಾಣಿಸುತ್ತದೆ.

ಇದನ್ನೂ ಓದಿ: ಬಿಗ್ ಬಾಸ್ ಕನ್ನಡ: ನಾಮಿನೇಟ್ ಆದ ಸ್ಪಂದನಾ; ಈ ವಾರವಾದ್ರೂ ಎಲಿಮಿನೇಟ್ ಆಗ್ತಾರಾ?

ಮೊದಲು ಸ್ಪಂದನಾ ಯಾರ ಜೊತೆಯೂ ಜಗಳ ಮಾಡಿದವರಲ್ಲ. ಆದರೆ, ಈಗ ಆ ರೀತಿಯ ಜಗಳ ನಡೆದಿದೆ. ‘ಸ್ಪಂದನಾಗಿಂತ ಮಾಳು ಬೆಸ್ಟ್’ ಎಂದು ಹೇಳಿದ ವಿಷಯಕ್ಕೆ ಸಂಬಂಧಿಸಿ ಅವರು ರಕ್ಷಿತಾ ಶೆಟ್ಟಿ ಜೊತೆ ಜಗಳ ಮಾಡಿದ್ದಾರೆ. ಈ ಮೂಲಕ ಮನೆಯಲ್ಲಿ ಹೈಲೈಟ್ ಆಗಿದ್ದಾರೆ. ಈ ವಾರ ಅವರ ಹೆಸರು ನಾಮಿನೇನ್ ಲಿಸ್ಟ್​​ನಲ್ಲಿ ಇದೆ. ಅವರು ಉತ್ತಮವಾಗಿ ಆಡಿದರೆ ಸೇವ್ ಆದರೂ ಆಗಬಹುದು. ಈ ವಾರ ಯಾರು ಫಿನಾಲೆ ವೀಕ್ ತಲುಪುತ್ತಾರೆ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹೊಸ ವರ್ಷದಲ್ಲಿ ಟೀಮ್ ಇಂಡಿಯಾ ಎದುರಾಳಿಗಳು ಯಾರೆಲ್ಲಾ? – Kannada News | Team India’s Schedule in 2026

ಸರಣಿ/ಟೂರ್ನಮೆಂಟ್ ಆತಿಥೇಯ ದೇಶ ಸ್ವರೂಪ ಪಂದ್ಯಗಳು ದಿನಾಂಕಗಳು ಭಾರತ ತಂಡದ ನ್ಯೂಝಿಲೆಂಡ್ ಪ್ರವಾಸ ಭಾರತ ಏಕದಿನ/ಟಿ20 3 ಏಕದಿನ ಪಂದ್ಯಗಳು, 5 ಟಿ20 ಪಂದ್ಯಗಳು ಜನವರಿ 11 ರಿಂದ ಜನವರಿ 31, 2026 ಟಿ20 ವಿಶ್ವಕಪ್ 2026 ಭಾರತ/ಶ್ರೀಲಂಕಾ ಟಿ20 ಟೂರ್ನಿ 4 ರಿಂದ 9 ಟಿ20 ಪಂದ್ಯಗಳು ಫೆಬ್ರವರಿ 7 ರಿಂದ ಮಾರ್ಚ್ 8, 2026 ಅಫ್ಘಾನಿಸ್ತಾನ್ ತಂಡದ ಭಾರತ ಪ್ರವಾಸ ಭಾರತ ಏಕದಿನ/ಟೆಸ್ಟ್ 1 ಟೆಸ್ಟ್, 3 ಏಕದಿನ ಪಂದ್ಯಗಳು ಜೂನ್ 2026 ಭಾರತ ತಂಡದ ಇಂಗ್ಲೆಂಡ್ ಪ್ರವಾಸ ಇಂಗ್ಲೆಂಡ್ ಏಕದಿನ/ಟಿ20  3 ಏಕದಿನ, 5 ಟಿ20 ಪಂದ್ಯಗಳು ಜುಲೈ 1 ರಿಂದ ಜುಲೈ 19, 2026 ಭಾರತ ತಂಡದ ಶ್ರೀಲಂಕಾ ಪ್ರವಾಸ ಶ್ರೀಲಂಕಾ ಪರೀಕ್ಷೆ 2 ಪರೀಕ್ಷೆಗಳು (WTC ಯ ಭಾಗ) ಆಗಸ್ಟ್ 2026 ಬಾಂಗ್ಲಾದೇಶ ತಂಡದ ಭಾರತ ಪ್ರವಾಸ* ಬಾಂಗ್ಲಾದೇಶ್ ಏಕದಿನ/ ಟಿ20 ಪಂದ್ಯಗಳು 3 ಏಕದಿನ, 5 ಟಿ20 ಪಂದ್ಯಗಳು ಸೆಪ್ಟೆಂಬರ್ 2026 ಏಷ್ಯನ್ ಗೇಮ್ಸ್ 2026* ಜಪಾನ್ ಟಿ20 ಟೂರ್ನಿ 1 ರಿಂದ 3 ಟಿ20 ಪಂದ್ಯಗಳು 19 ಸೆಪ್ಟೆಂಬರ್ ರಿಂದ 4 ಅಕ್ಟೋಬರ್ 2026 ಭಾರತ ತಂಡ ಅಫ್ಘಾನಿಸ್ತಾನ್ ಪ್ರವಾಸ* ತಟಸ್ಥ ಟಿ20 3 ಟಿ20 ಪಂದ್ಯಗಳು ಸೆಪ್ಟೆಂಬರ್/ಅಕ್ಟೋಬರ್ 2026 ವೆಸ್ಟ್ ಇಂಡೀಸ್ ತಂಡದ ಭಾರತ ಪ್ರವಾಸ ಭಾರತ ಏಕದಿನ/ ಟಿ20 3 ಏಕದಿನ,  5 ಟಿ20 ಪಂದ್ಯಗಳು ಅಕ್ಟೋಬರ್/ನವೆಂಬರ್ 2026 ಭಾರತ ತಂಡದ ನ್ಯೂಝಿಲೆಂಡ್ ಪ್ರವಾಸ ನ್ಯೂಝಿಲೆಂಡ್ ಟೆಸ್ಟ್, ಏಕದಿನ, ಟಿ20  2 ಟೆಸ್ಟ್‌ಗಳು, 3 ಏಕದಿನ ಪಂದ್ಯಗಳು, 5 ಟಿ20 ಪಂದ್ಯಗಳು ನವೆಂಬರ್/ಡಿಸೆಂಬರ್ 2026

Source link

New Year 2026: ಹೊಸ ವರ್ಷಾಚರಣೆಗೆ ಗುಡ್ ನ್ಯೂಸ್: ತಡರಾತ್ರಿ ವರೆಗೂ ಇರುತ್ತೆ ನಮ್ಮ ಮೆಟ್ರೋ ರೈಲು ಸಂಚಾರ! – Kannada News | New Year 2026: Namma Metro Extends Late Night Train Services in Bengaluru for New Year Celebrations, timing details here

ನಮ್ಮ ಮೆಟ್ರೋ ರೈಲು (ಸಾಂದರ್ಭಿಕ ಚಿತ್ರ)

ಬೆಂಗಳೂರು, ಡಿಸೆಂಬರ್ 31: ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಯ (New Year) ಸಂಭ್ರಮ ಕಳೆಗಟ್ಟಿದ್ದು, ಎಲ್ಲೆಡೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಇದೇ ವೇಳೆ, ಹೊಸ ವರ್ಷಾಚರಣೆ ಪಾರ್ಟಿಗಳಲ್ಲಿ ಭಾಗವಹಿಸುವವರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ಕೂಡ ರಾತ್ರಿ ಸಂಚಾರದ ಸಮಯ ವಿಸ್ತರಣೆ ಮಾಡಿದೆ. ಈ ಕುರಿತು ಪ್ರಕಟಣೆ ಮೂಲಕ ಬಿಎಂಆರ್​ಸಿಎಲ್ (BMRCL) ಮಾಹಿತಿ ಹಂಚಿಕೊಂಡಿದ್ದು, ಯಾವ ಮಾರ್ಗಗಳಲ್ಲಿ ಎಷ್ಟು ಗಂಟೆಗೆ ಕೊನೆಯ ಮೆಟ್ರೋ ಸಂಚಾರ ಮಾಡಲಿದೆ ಎಂಬ ಮಾಹಿತಿ ನೀಡಿದೆ. ಯಾವ ನಿಲ್ದಾಣದಿಂದ ಕೊನೆಯ ರೈಲು ಎಷ್ಟು ಗಂಟೆಗೆ ಹೊರಡಲಿದೆ ಎಂಬ ಮಾಹಿತಿಯನ್ನೂ ನೀಡಿದೆ.

ಹೊಸ ವರ್ಷದ ಸಂಭ್ರಮದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಸುಗಮ ಪ್ರಯಾಣವನ್ನು ಒದಗಿಸುವ ಉದ್ದೇಶದಿಂದ ನೇರಳೆ, ಹಸಿರು ಹಾಗೂ ಹಳದಿ ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳನ್ನು ವಿಸ್ತರಿಸಲಾಗುತ್ತಿದೆ ಎಂದು ಬಿಎಂಆರ್​​ಸಿಎಲ್ ತಿಳಿಸಿದೆ.

ಕೊನೆಯ ರೈಲುಗಳು ಹೊರಡುವ ಸಮಯದ ವಿವರ

31 ಡಿಸೆಂಬರ್ 2025ರ ಮಧ್ಯರಾತ್ರಿಯ ನಂತರ, ಅಂದರೆ 1ನೇ ಜನವರಿ 2026ರಂದು ಟರ್ಮಿನಲ್ ನಿಲ್ದಾಣಗಳಿಂದ ಹೊರಡುವ ಕೊನೆಯ ಮೆಟ್ರೋ ರೈಲುಗಳ ಸಮಯ ಈ ಕೆಳಕಂಡಂತಿದೆ;

  • ನೇರಳೆ ಮಾರ್ಗ: ವೈಟ್‌ಫೀಲ್ಡ್ ನಿಂದ ಚಲ್ಲಘಟ್ಟದ ವರೆಗೆ – ಬೆಳಗಿನ ಜಾವ 1:45ಗಂಟೆಗೆ, ಚಲ್ಲಘಟ್ಟದಿಂದ ವೈಟ್​ಫೀಲ್ಡ್ ವರೆಗೆ – ಬೆಳಗಿನ ಜಾವ 2 ಗಂಟೆಗೆ
  • ಹಸಿರು ಮಾರ್ಗ: ಮಾದಾವರ ದಿಂದ ರೇಷ್ಮೆ ಸಂಸ್ಥೆಯ ವರೆಗೆ – ಬೆಳಗಿನಜಾವ 2 ಗಂಟೆಗೆ, ರೇಷ್ಮೆ ಸಂಸ್ಥೆಯಿಂದ ಮಾದಾವರದ ವರೆಗೆ: ಬೆಳಗಿನಜಾವ 2:00ಗಂಟೆಗೆ
  • ಹಳದಿ ಮಾರ್ಗ: ಆ.ರ್‌ವಿ ರಸ್ತೆ ಯಿಂದ ಬೊಮ್ಮಸಂದ್ರದ ವರೆಗೆ – ಬೆಳಗಿನಜಾವ 3:10 ಗಂಟೆಗೆ, ಬೊಮ್ಮಸಂದ್ರ ದಿಂದ ಆರ್‌ವಿ ರಸ್ತೆಯ ವರೆಗೆ – ಬೆಳಗಿನಜಾವ 1:30 ಗಂಟೆಗೆ

ಬಿಎಂಆರ್​ಸಿಎಲ್ ಎಕ್ಸ್ ಸಂದೇಶ

ಕೆಂಪೇಗೌಡ ಮೆಜೆಸ್ಟಿಕ್ ನಿಲ್ದಾಣ: ನೇರಳೆ ಮಾರ್ಗದ ವೈಟ್‌ಫೀಲ್ಡ್ ಮತ್ತು ಚಲ್ಲಘಟ್ಟ ಕಡೆಗೆ ಹಾಗೂ ಹಸಿರು ಮಾರ್ಗದ ಮಾದಾವರ ಮತ್ತು ರೇಷ್ಮೆ ಸಂಸ್ಥೆ ಕಡೆಗೆ ಹೊರಡುವ ಕೊನೆಯ ರೈಲು ಬೆಳಗಿನ ಜಾವ 2:45ಕ್ಕೆ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್​​ನಿಂದ ಹೊರಡಲಿದೆ.

ಎಷ್ಟು ನಿಮಿಷಕ್ಕೊಂದು ರೈಲು ಸಂಚಾರ?

31ನೇ ಡಿಸೆಂಬರ್ 2025ರ ರಾತ್ರಿ 11:30ರಿಂದ ವಿಸ್ತರಿತ ಸೇವೆ ಮುಗಿಯುವವರೆಗೂ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ 8 ನಿಮಿಷಗಳ ಅಂತರದಲ್ಲಿ ಹಾಗೂ ಹಳದಿ ಮಾರ್ಗದಲ್ಲಿ 15 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸಲಿವೆ.

ಎಂಜಿ ರಸ್ತೆ ಮೆಟ್ರೋ ನಿಲ್ದಾಣ ಕ್ಲೋಸ್

ಎಂ.ಜಿ ರಸ್ತೆ ಪ್ರದೇಶದಲ್ಲಿ ಹೆಚ್ಚಿನ ಜನಸಂದಣಿ ನಿರೀಕ್ಷೆಯಿರುವುದರಿಂದ, ರಾತ್ರಿ 10 ರಿಂದ ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗುತ್ತದೆ. ಆದರೆ, ರೈಲುಗಳು ಪಕ್ಕದ ನಿಲ್ದಾಣಗಳಾದ
ಟ್ರಿನಿಟಿ ಹಾಗೂ ಕಬ್ಬನ್ ಪಾರ್ಕ್ ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಿದ್ದು, ಪ್ರಯಾಣಿಕರು ಅಲ್ಲಿ ರೈಲನ್ನು ಹತ್ತಿ-ಇಳಿಯಬಹುದು ಎಂದು ಬಿಎಂಆರ್​​ಸಿಎಲ್ ತಿಳಿಸಿದೆ.

ರಾತ್ರಿ 11 ರ ನಂತರ ಈ ನಿಲ್ದಾಣಗಳಲ್ಲಿಲ್ಲ ಟೋಕನ್ ಮಾರಾಟ

ಟಿಕೆಟ್ ಕೌಂಟರ್‌ಗಳಲ್ಲಿ ಜನ ದಟ್ಟಣೆಯನ್ನು ತಪ್ಪಿಸುವ ಉದ್ದೇಶದಿಂದ, ಟ್ರಿನಿಟಿ ಹಾಗೂ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ರಾತ್ರಿ 11 ರ ನಂತರ ಟೋಕನ್ ಮಾರಾಟ ಇರುವುದಿಲ್ಲ. ಈ ನಿಲ್ದಾಣಗಳಿಂದ ರಾತ್ರಿ 11 ಗಂಟೆಯ ನಂತರ ಪ್ರಯಾಣಿಸುವ ಪ್ರಯಾಣಿಕರು ಕ್ಯೂಆರ್ ಟಿಕೆಟ್‌ಗಳ ಮೂಲಕ, ಮುಂಗಡವಾಗಿ ರಿಟರ್ನ್ ಟಿಕೆಟ್ ಖರೀದಿಸುವಂತೆ ಅಥವಾ ಸಾಕಷ್ಟು ನಗದು ಇರುವ ಸ್ಮಾರ್ಟ್ ಕಾರ್ಡ್‌ಗಳನ್ನು ಬಳಸುವಂತೆ ಸಲಹೆ ನೀಡಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope Today 31 December: ಇಂದು ಈ ರಾಶಿಯವರಿಗೆ ನಂಬಿದವರಿಂದ ಮೋಸ ಹೋಗುವ ಸಾಧ್ಯತೆ

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿ ಅವರು 31-12-2025 ಬುಧವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ತಿಳಿಸಿದ್ದಾರೆ. ಇಂದು 2025ರ ಕೊನೆಯ ದಿನವಾಗಿದ್ದು, ಆತ್ಮಾವಲೋಕನ ಮಾಡಿಕೊಳ್ಳಲು ಮತ್ತು 2026 ಕ್ಕೆ ಹೊಸ ಸಂಕಲ್ಪಗಳೊಂದಿಗೆ ಸಿದ್ಧರಾಗಲು ಕರೆ ನೀಡಿದ್ದಾರೆ. ಕೇವಲ ಹಣ ಸಂಪಾದನೆಯ ಗುರಿಯ ಬದಲು, ಉತ್ತಮ ಆಲೋಚನೆಗಳು ಮತ್ತು ದಾನ-ಧರ್ಮಗಳ ಮಹತ್ವವನ್ನು ಒತ್ತಿ ಹೇಳಿದ್ದಾರೆ.

ಇಂದು ಮುಕ್ಕೋಟಿ ದ್ವಾದಶಿ ಇರುವುದರಿಂದ ಉಪವಾಸ ತ್ಯಜಿಸಿ, ದಾನ-ಧರ್ಮಗಳನ್ನು ಮಾಡಲು ಶುಭ ದಿನವಾಗಿದೆ. ರವಿ ಧನು ರಾಶಿಯಲ್ಲಿ ಮತ್ತು ಚಂದ್ರ ಮೇಷ ರಾಶಿಯಲ್ಲಿ ಸಂಚರಿಸಲಿದ್ದಾನೆ. ಪ್ರತಿಯೊಂದು ರಾಶಿಗಳ ಆರ್ಥಿಕ ಸ್ಥಿತಿ, ಉದ್ಯೋಗ, ವ್ಯಾಪಾರ, ಆರೋಗ್ಯ ಮತ್ತು ಕುಟುಂಬ ಸಂಬಂಧಗಳ ಕುರಿತು ವಿವರವಾದ ಮಾಹಿತಿ ನೀಡಲಾಗಿದೆ. ಜೊತೆಗೆ ಅದೃಷ್ಟದ ಸಂಖ್ಯೆ, ಬಣ್ಣ ಮತ್ತು ಜಪಿಸಬೇಕಾದ ಮಂತ್ರಗಳನ್ನೂ ಸೂಚಿಸಲಾಗಿದೆ. ಈ ಮೂಲಕ ಪ್ರತಿಯೊಬ್ಬರೂ ಶುಭವನ್ನು ಕಾಣುವಂತೆ ಡಾ. ಬಸವರಾಜ ಗುರೂಜಿ ಹಾರೈಸಿದ್ದಾರೆ.

Source link

ಸಿನಿಮಾ ರಿಲೀಸ್ ಆದ 20 ದಿನಗಳ ಬಳಿಕ ಕೋರ್ಟ್​​ನಿಂದ ಮಹತ್ವದ ಆದೇಶ ತಂದ ‘ಡೆವಿಲ್’ ತಂಡ – Kannada News | Darshan’s Devil Movie Gets Court Order Against Negative Reviews and Defamation post

ದರ್ಶನ್ ನಟನೆಯ ‘ದಿ ಡೆವಿಲ್’ (The Devil Movie) ಸಿನಿಮಾ ಡಿಸೆಂಬರ್ 11ರಂದು ರಿಲೀಸ್ ಆಯಿತು. ಈ ಚಿತ್ರವನ್ನು ಅವರ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಈ ಚಿತ್ರದ ಗಳಿಕೆ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಹೀಗಿರುವಾಗಲೇ ಸಿನಿಮಾ ತಂಡದವರು ಕೋರ್ಟ್​​ನಿಂದ ಆದೇಶ ಒಂದನ್ನು ತಂದಿದ್ದಾರೆ. ಇದರ ಅನುಸಾರ ಚಿತ್ರದ ಬಗ್ಗೆ ನೆಗೆಟಿವ್ ಆಗಿ ಬರೆಯುವುದು ಅಥವಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದು ಅಪರಾಧವಾಗಿದೆ.

‘ಶ್ರೀ ಜೈಮಾ ಕಂಬೈನ್ಸ್’ ‘ಡೆವಿಲ್’ ಸಿನಿಮಾ ನಿರ್ಮಾಣ ಮಾಡಿದೆ. ಮಿಲನ ಪ್ರಕಾಶ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಕೆಲವರು ಉದ್ದೇಶ ಪೂರ್ವಕವಾಗಿ ನೆಗೆಟಿವ್ ಮಾಡುವ ಪ್ರಯತ್ನ ಮಾಡಿದ್ದಾರೆ. ಇದನ್ನು ತಡೆಯಲು ಚಿತ್ರ ತಂಡ ಕೋರ್ಟ್​​ನಿಂದ ಆದೇಶವನ್ನು ತಂದಿದೆ.

‘ದಿ ಡೆವಿಲ್ ಚಿತ್ರದ ಕುರಿತು ಯಾವುದೇ ವ್ಯಕ್ತಿ, ಸಂಸ್ಥೆ, ಚಾನೆಲ್, ಸಾಮಾಜಿಕ ಜಾಲತಾಣದ ಖಾತೆದಾರರು ಅಥವಾ ಸಂಬಂಧಿತ ಪ್ಲಾಟ್‌ಫಾರ್ಮ್ಗಳು, ಅವಹೇಳನಕಾರಿ, ಮಾನಹಾನಿಕರ, ಅಪಪ್ರಚಾರಾತ್ಮಕ ವಿಮರ್ಶೆಗಳು ಅಥವಾ ನೆಗೆಟಿವ್ ರೇಟಿಂಗ್‌ಗಳು ಸೇರಿದಂತೆ ಚಿತ್ರಕ್ಕೆ ಹಾನಿಯುಂಟು ಮಾಡುವ ಅಥವಾ ನಿರ್ಮಾಪಕರಿಗೆ ಯಾವುದೇ ರೀತಿಯ ಆರ್ಥಿಕ, ವಾಣಿಜ್ಯ ಹಾಗೂ ಗೌರವಕ್ಕೆ ಹಾನಿ ಮಾಡುವಂತಹ ವಿಷಯಗಳನ್ನು ಪ್ರಕಟಿಸುವುದು, ಪ್ರಸಾರ ಮಾಡುವುದು ಅಥವಾ ಹರಡುವುದನ್ನು ಮಾಡುವಂತಿಲ್ಲ. ಹಾಗೇನಾದರೂ ಮಾಡಿದಲ್ಲಿ ಸಂಬಂಧಪಟ್ಟ ವ್ಯಕ್ತಿಗಳು, ಸಂಸ್ಥೆ, ಚಾನೆಲ್ ಗಳು ವೈಯಕ್ತಿಕವಾಗಿ ಸಂಪೂರ್ಣ ಹೊಣೆಗಾರರಾಗಿದ್ದು, ಅವರ ವಿರುದ್ಧ ಕಾನೂನು ಪ್ರಕಾರ ಸಿವಿಲ್‌ ಹಾಗೂ ಕ್ರಿಮಿನಲ್ ಕಾನೂನುಗಳ ಅಡಿಯಲ್ಲಿ ಕಠಿಣ ಕ್ರಮ ಜರುಗಿಸಲು ಅವಕಾಶವಿದೆ’ ಎಂದು ಬರೆಯಲಾಗಿದೆ.

‘ಈಗಾಗಲೇ ಪ್ರಕಟಗೊಂಡಿರುವ ಇಂತಹ ಎಲ್ಲ ವಿಷಯಗಳನ್ನು ತೆಗೆದುಹಾಕಿ ನಿಷ್ಕ್ರಿಯಗೊಳಿಸಬೇಕು. ಇಲ್ಲವಾದಲ್ಲಿ ಅಗತ್ಯವಿದ್ದರೆ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಿ ಬಂಧನ ಸೇರಿದಂತೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಬರೆಯಲಾಗಿದೆ.

ಇದನ್ನೂ ಓದಿ: ಸೋಮವಾರವೂ ‘ಮಾರ್ಕ್’, ‘45’ ಅಬ್ಬರದ ಕಲೆಕ್ಷನ್; ‘ಡೆವಿಲ್’ ಕಥೆ ಏನು?

‘ಡೆವಿಲ್’ ಚಿತ್ರದಲ್ಲಿ ಡಬಲ್ ಶೇಡ್​​ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಒಳ್ಳೆಯ ಹಾಗೂ ಕೆಟ್ಟ ಪಾತ್ರ ಎರಡನ್ನೂ ಮಾಡಿರುವುದರಿಂದ ಅವರ ಅಭಿಮಾನಿಗಳಿಗೆ ಇದು ಧಮಾಕಾ ಆಗಿದೆ. ಒಂದೇ ಇತ್ರದಲ್ಲಿ ಎರಡು ಶೇಡ್​​ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೋಗಿಲು ಶೆಡ್ಡಲ್ಲಿದ್ದವರಿಗೆ ತ್ವರಿತ ಪರಿಹಾರ, ಅರ್ಹರ ಕಣ್ಣೀರು ಒರೆಸದ ಸರ್ಕಾರ: ದಶಕಗಳಿಂದ ಕಾಯ್ತಿರುವವರಿಗಿಲ್ಲ ಸೂರು – Kannada News | Swift Relief for Kogilu Shed Evictees Sparks Outrage as Long Pending Land Victims Await Justice in Karnataka

ಕೋಗಿಲು ಶೆಡ್ಡಲ್ಲಿದ್ದವರಿಗೆ ತ್ವರಿತ ಪರಿಹಾರ, ಅರ್ಹರ ಕಣ್ಣೀರು ಒರೆಸದ ಸರ್ಕಾರ

ಬೆಂಗಳೂರು, ಡಿಸೆಂಬರ್ 31: ಬೆಂಗಳೂರಿನ (Bangalore) ಕೋಗಿಲು ಲೇಔಟ್​​ನಲ್ಲಿ ಅಕ್ರಮ ಶೆಡ್, ಮನೆಗಳ ತೆರವು ದೊಡ್ಡ ಮಟ್ಟದಲ್ಲಿ ರಾಜಕೀಯ ಕೋಲಾಹಲವನ್ನೇ ಸೃಷ್ಟಿಸಿದೆ. ಇಲ್ಲಿನ ಸಂತ್ರಸ್ತರಿಗೆ ಕೇವಲ ಎರಡೇ ದಿನದಲ್ಲಿ ಪರಿಹಾರ ಕೊಡಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಬೇರೆಬೇರೆ ಜಿಲ್ಲೆಗಳಲ್ಲಿ ವಸತಿರಹಿತ ಸಂತ್ರಸ್ತರಿದ್ದರೂ ಅವರಿಗೆ ದಶಕಗಳಿಂದ ಪರಿಹಾರ ಸಿಕ್ಕಿಲ್ಲ. ಕಾಂಗ್ರೆಸ್ (Congress) ಸರ್ಕಾರದ ಈ ಇಬ್ಭಗೆ ನೀತಿ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

65 ವರ್ಷ ಕಳೆದ್ರೂ ಶರಾವತಿ ಸಂತ್ರಸ್ತರಿಗೆ ಸಿಗದ ಹಕ್ಕುಪತ್ರ

ಶಿವಮೊಗ್ಗದಲ್ಲಿ 1959 ಲಿಂಗನಮಕ್ಕಿ ಡ್ಯಾಂ ನಿರ್ಮಾಣ ಆಗಿದ್ದು, ಸಾಗರ, ಹೊಸನಗರ ತಾಲೂಕಿನ 6000ಕ್ಕೂ ಅಧಿಕ ರೈತರು ಭೂಮಿ ಕಳೆದುಕೊಂಡಿದ್ದರು. ಇವರಿಗೆ 9,600 ಎಕರೆ ಭೂಮಿ ನೀಡಲಾಗಿದೆ. ಆದರೂ, 65 ವರ್ಷದಿಂದ ಹಕ್ಕುಪತ್ರ ಸಿಕ್ಕಿಲ್ಲ. ಇದೇ ಕಾಂಗ್ರೆಸ್ ನಾಯಕರು ಸಂತ್ರಸ್ತರ ಪರ ಪಾದಯಾತ್ರೆ ಮಾಡಿದ್ದರು. ಆದರೆ ಪಕ್ಷ ಅಧಿಕಾರಕ್ಕೆ ಬಂದಮೇಲೆ ಮರೆತು ಬಿಟ್ಟಿದ್ದಾರೆ.

ಕೊಡಗು ಪ್ರವಾಹ ಸಂತ್ರಸ್ತರಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ

2019 ರಲ್ಲಿ ಕುಶಾಲನಗರ ತಾಲೂಕಿನ ಸಿದ್ದಾಪುರ, ಕರಡಿಗೋಡು, ನೆಲ್ಲಿಹುದಿಕೇರಿ, ಕುಂಬಾರಗುಂಡಿ ಗ್ರಾಮಗಳು ಪ್ರವಾಹಕ್ಕೆ ಸಿಲುಕಿದ್ದವು. ಅಂದು ಮನೆ ಕಳೆದುಕೊಂಡವರಿಗೆ ಇಂದಿಗೂ ಪ್ಲಾಸ್ಟಿಕ್ ಹೊದಿಕೆಯೇ ಆಶ್ರಯವಾಗಿದೆ. ಸರ್ಕಾರ ಪರಿಹಾರ ಕೊಟ್ಟಿಲ್ಲ. ಪ್ರರ್ಯಾಯ ಮನೆಗೆ 7 ಎಕರೆ ಜಾಗ ಗುರುತು ಮಾಡಿದ್ದರೂ ಭರವಸೆ ಈಡೇರಿಲ್ಲ.

ಬೆಳಗಾವಿಯಲ್ಲಿ 1095 ದಿನ ಕಳೆದ್ರೂ ಸಿಕ್ಕಿಲ್ಲ ಸೂರು

ಬೆಳಗಾವಿಯ ಕಲ್ಯಾಣನಗರದಲ್ಲಿ ಮಳೆಯಿಂದ ಪ್ರೇಮಾ ಎಂಬುವವರ ಮನೆ ಬಿದ್ದಿತ್ತು. 1095 ದಿನ ಕಳೆದರೂ ಸೂರು ಸಿಕ್ಕಿಲ್ಲ. ಹೊಸ ಮನೆಗೆ ಪಾಯ ಹಾಕಿ ಪರಿಹಾರಕ್ಕಾಗಿ ಕುಟುಂಬ ಕಾಯುತ್ತಿದೆ.

ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರ ಕಣ್ಣೀರು ಒರೆಸದ ಸರ್ಕಾರ

ಬೆಂಗಳೂರು ಜನರಿಗೆ ಪರಿಹಾರ ಕೊಟ್ಟ ಸರ್ಕಾರದ ವಿರುದ್ಧ ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಭೂಮಿ ಕಳೆದುಕೊಂಡ ರೈತರು ಆಕ್ರೋಶ ಹೊರಹಾಕಿದ್ದಾರೆ. ಸರಕಾರದ ಇಬ್ಬಗೆಯ ನೀತಿಗೆ ಕಿಡಿಕಾರಿದ್ದಾರೆ.

ಧಾರವಾಡ, ಬಳ್ಳಾರಿಯಲ್ಲಿ ಕೆಐಎಡಿಬಿಗೆ ಭೂಮಿ ಕೊಟ್ಟವರಿಗಿಲ್ಲ ನೆರವು

ಧಾರವಾಡ, ಬಳ್ಳಾರಿಯಲ್ಲಿ 15 ವರ್ಷಗಳ ಹಿಂದೆ ಕೆಐಎಡಿಬಿಗೆ ರೈತರು ಭೂಮಿ ನೀಡಿದ್ದರು. ಬಳ್ಳಾರಿಯಲ್ಲಿ 12 ಸಾವಿರ ಎಕರೆ ಜಮೀನು ವಶಪಡಿಸಿಕೊಳ್ಳಲಾಗಿತ್ತು. ಧಾರವಾಡದ ರೈತರಿಗೆ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶ ನೀಡಿದ್ದರೂ ರೈತರಿಗೆ ಪರಿಹಾರ ಸಿಕ್ಕಿಲ್ಲ.

ಚಿಕ್ಕಮಗಳೂರು: 11 ಕುಟುಂಬಗಳಿಗೆ ಇನ್ನೂ ಸಿಕ್ಕಿಲ್ಲ ಸೂರು

ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಎರಡು ಗ್ರಾಮದಲ್ಲಿ 11 ಕುಟುಂಬಗಳಿಗೆ 7 ವರ್ಷಗಳಿಂದ ಆಶ್ರಯವಿಲ್ಲ. 7 ವರ್ಷಗಳ ಹಿಂದೆ ಮಳೆಯಿಂದ ಮನೆಗಳು ನೆಲಸಮವಾಗಿದ್ದು, ಮಲೆಮನೆ, ಮಧುಗುಂಡಿಯ 11 ಕುಟುಂಬಗಳು ಮನೆಗಾಗಿ ಎದುರು ನೋಡುತ್ತಿವೆ.

ಮತ್ತೊಂದೆಡೆ, ಗದಗ ಸಿಂಗಟಾಲೂರ ಏತ ನೀರಾವರಿ ಯೋಜನೆಗೆ ಭೂಮಿ ಕಳೆದುಕೊಂಡವರಿಗೂ ನೆಲೆಯಿಲ್ಲ. ಇಷ್ಟೇ ಅಲ್ಲ, ಧಾರವಾಡದಲ್ಲಿ ಕರ್ನಾಟಕ ಹೌಸಿಂಗ್ ಬೋರ್ಡ್‌ಗೆ 21 ಎಕರೆ ಜಮೀನು ನೀಡಿದ್ದ ಮಧು ಪ್ರಸಾದ್ ಎಂಬುವವರಿಗೆ ಪರಿಹಾರ ಸಿಕ್ಕಿಲ್ಲ.

ಇದನ್ನೂ ಓದಿ: ಕೋಗಿಲು ನಿರಾಶ್ರಿತರಿಗೆ ಫಟಾಫಟ್ ಪರಿಹಾರ! ಚಿಕ್ಕಮಗಳೂರು, ಮಡಿಕೇರಿ ಪ್ರವಾಹ ಸಂತ್ರಸ್ತರಿಗೆ ಮನೆ ಯಾವಾಗ?

ಕೋಗಿಲು ನಿವಾಸಿಗಳ ವಿಷಯದಲ್ಲಿ ಮಾತ್ರ ಸರ್ಕಾರ ತಕ್ಷಣ ಪರಿಹಾರ ನೀಡಲು ಮುಂದಾಗಿದೆ. ಇದು ರಾಜ್ಯದ ಜನರಿಗೆ ಒಂದು ನ್ಯಾಯ, ಪಕ್ಕದ ರಾಜ್ಯದಿಂದ ಬಂದು ಅಕ್ರಮವಾಗಿ ಶೆಡ್ ನಿರ್ಮಿಸಿ ಬೀಡುಬಿಟ್ಟವರಿಗೆ ಮತ್ತೊಂದು ನ್ಯಾಯಾವಾ ಎಂಬ ಪ್ರಶ್ನೆ ಹುಟ್ಟುಹಾಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

T20 World Cup 2026: ಟಿ20 ವಿಶ್ವಕಪ್​ಗೆ 15 ಸದಸ್ಯರ ಇಂಗ್ಲೆಂಡ್‌ ತಾತ್ಕಾಲಿಕ ತಂಡ ಪ್ರಕಟ – Kannada News | England T20 World Cup 2026 Provisional Squad: Brook Captain, Livingstone Out

ಮುಂದಿನ ವರ್ಷ ಅಂದರೆ 2026 ರ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ (T20 World Cup 2026) ಇಂಗ್ಲೆಂಡ್ ತನ್ನ ತಾತ್ಕಾಲಿಕ ತಂಡವನ್ನು ಪ್ರಕಟಿಸಿದೆ. ತಾತ್ಕಾಲಿಕ ತಂಡ ಎಂದರೆ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಇಂಗ್ಲೆಂಡ್ ಈಗ ಆಯ್ಕೆ ಮಾಡಿರುವ ತಂಡದಲ್ಲಿ ಬದಲಾವಣೆಗಳನ್ನು ಮಾಡುವ ಅವಕಾಶ ಹೊಂದಿರುತ್ತದೆ. ಅಂದರೆ ಟಿ20 ವಿಶ್ವಕಪ್​ಗೆ ಇದೇ ಅಂತಿಮ ತಂಡವಲ್ಲ. ವಾಸ್ತವವಾಗಿ ಐಸಿಸಿ (ICC) ನಿಯಮಗಳ ಪ್ರಕಾರ, ಎಲ್ಲಾ ತಂಡಗಳು ಪಂದ್ಯಾವಳಿಗೆ ಒಂದು ತಿಂಗಳ ಮೊದಲು ತಮ್ಮ ತಂಡಗಳನ್ನು ಘೋಷಿಸಬೇಕು. ಆ ಬಳಿಕ ತಮ್ಮ ತಮ್ಮ ತಂಡಗಳಲ್ಲಿ ಬದಲಾವಣೆ ಮಾಡಲು ಐಸಿಸಿ ಗಡುವು ನೀಡಿರುತ್ತದೆ. ಆ ಗಡುವಿಗೂ ಮೊದಲು ತಂಡಗಳು ಬದಲಾವಣೆಗಳನ್ನು ಮಾಡಬಹುದು. ಅದರಂತೆ ಇಂಗ್ಲೆಂಡ್‌ ಕೂಡ ಇದೀಗ ತಾತ್ಕಾಲಿಕ ತಂಡವನ್ನು ಪ್ರಕಟಿಸಿದ್ದು, ಆ ಬಳಿಕ ತಂಡದಲ್ಲಿ ಬದಲಾವಣೆ ಮಾಡುವ ಅವಕಾಶವನ್ನು ಹೊಂದಿರುತ್ತದೆ.

ಲಿವಿಂಗ್‌ಸ್ಟೋನ್ ಔಟ್

ಪ್ರಸ್ತುತ ಹ್ಯಾರಿ ಬ್ರೂಕ್ ನೇತೃತ್ವದಲ್ಲಿ ಇಂಗ್ಲೆಂಡ್ ಮಂಡಳಿ ಒಟ್ಟು 15 ಆಟಗಾರರನ್ನು ಆಯ್ಕೆ ಮಾಡಿದೆ. ಆದಾಗ್ಯೂ ಈ ತಂಡದಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ಲಿಯಾಮ್ ಲಿವಿಂಗ್‌ಸ್ಟೋನ್ ಇಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ. ಲಿವಿಂಗ್‌ಸ್ಟೋನ್ ಮಾರ್ಚ್ 2025 ರಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಿದ್ದಾರೆ. ಫೆಬ್ರವರಿ 2025 ರಲ್ಲಿ ಭಾರತದ ವಿರುದ್ಧ ಕೊನೆಯ ಪಂದ್ಯವನ್ನಾಡಿದ್ದ ಲಿವಿಂಗ್‌ಸ್ಟೋನ್​ಗೆ ಆ ಬಳಿಕ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ತಮ್ಮ ಟಿ20 ವೃತ್ತಿಜೀವನದಲ್ಲಿ ಇದುವರೆಗೆ 60 ಪಂದ್ಯಗಳನ್ನಾಡಿರುವ ಲಿವಿಂಗ್‌ಸ್ಟೋನ್, 47 ಇನ್ನಿಂಗ್ಸ್‌ಗಳಲ್ಲಿ ಒಂದು ಶತಕ ಮತ್ತು ಎರಡು ಅರ್ಧಶತಕಗಳು ಸೇರಿದಂತೆ 955 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ, ಅವರು 54 ಬೌಂಡರಿಗಳು ಮತ್ತು 59 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಹ್ಯಾರಿ ಬ್ರೂಕ್​ಗೆ ನಾಯಕತ್ವ

ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು 2026 ರ ಟಿ20 ವಿಶ್ವಕಪ್​ಗೆ ಬಲಿಷ್ಠ ತಂಡವನ್ನೇ ಆಯ್ಕೆ ಮಾಡಿದೆ. ಇದರಲ್ಲಿ ಹ್ಯಾರಿ ಬ್ರೂಕ್ ಸೇರಿದಂತೆ, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಫಿಲ್ ಸಾಲ್ಟ್ ಮತ್ತು ಟಾಮ್ ಬ್ಯಾಂಟನ್ ಅವರಂತಹ ಆಟಗಾರರಿದ್ದು, ಜೋಫ್ರಾ ಆರ್ಚರ್ ತಂಡದ ವೇಗದ ದಾಳಿಯನ್ನು ಮುನ್ನಡೆಸಿದರೆ, ಆದಿಲ್ ರಶೀದ್ ಸ್ಪಿನ್ ವಿಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಆಶಸ್ ಸರಣಿಯಲ್ಲಿ ಮಿಂಚಿದ ಜೋಶ್ ಟಂಗ್ ಅವರನ್ನು ಮೊದಲ ಬಾರಿಗೆ ಆಯ್ಕೆ ಮಾಡಲಾಗಿದೆ.

ಫೆ. 7 ರಿಂದ ಮಾ. 8 ರವರೆಗೆ ವಿಶ್ವಕಪ್

2026 ರ ಟಿ20 ವಿಶ್ವಕಪ್ ಫೆಬ್ರವರಿ 7 ರಂದು ಪ್ರಾರಂಭವಾಗಿ ಮಾರ್ಚ್ 8 ರವರೆಗೆ ನಡೆಯಲಿದೆ. ಎಲ್ಲಾ 20 ತಂಡಗಳನ್ನು ಐದು ಗುಂಪುಗಳಾಗಿ ವಿಂಗಡಿಸಲಾಗಿದೆ. ಇಂಗ್ಲೆಂಡ್ ತಂಡವು ಬಾಂಗ್ಲಾದೇಶ, ಇಟಲಿ, ವೆಸ್ಟ್ ಇಂಡೀಸ್ ಮತ್ತು ನೇಪಾಳದೊಂದಿಗೆ ಗ್ರೂಪ್ ಸಿ ನಲ್ಲಿದೆ.

U19 World Cup: ಅಂಡರ್-19 ವಿಶ್ವಕಪ್​ಗೆ 15 ಸದಸ್ಯರ ಭಾರತ ತಂಡ ಪ್ರಕಟ

2026 ರ ಟಿ20 ವಿಶ್ವಕಪ್‌ಗಾಗಿ ಇಂಗ್ಲೆಂಡ್ ತಂಡ: ಹ್ಯಾರಿ ಬ್ರೂಕ್ (ನಾಯಕ), ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಫಿಲ್ ಸಾಲ್ಟ್, ಜೋಸ್ ಬಟ್ಲರ್, ಜಾಕೋಬ್ ಬೆಥೆಲ್, ಟಾಮ್ ಬ್ಯಾಂಟನ್, ರಿಯಾನ್ ಅಹ್ಮದ್, ಜೋಫ್ರಾ ಆರ್ಚರ್, ಜೋಶ್ ಟಂಗ್, ಲ್ಯೂಕ್ ವುಡ್, ಆದಿಲ್ ರಶೀದ್, ಸ್ಯಾಮ್ ಕರನ್, ಜೇಮೀ ಓವರ್ಟನ್, ಲಿಯಾಮ್ ಡಾಸನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:52 pm, Tue, 30 December 25

Source link

ಹೊಸ ವರ್ಷಾಚರಣೆಗೆ ಗೋಕರ್ಣ, ಹೊನ್ನಾವರ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ದಂಡು, ಕಠಿಣ ರೂಲ್ಸ್​​ ಮಾಡಿದ ಜಿಲ್ಲಾಡಳಿತ – Kannada News | Gokarna, Murudeshwar New Year: Tourist Boom, Police Vigil and Homestay Price Surge

ಉತ್ತರ ಕನ್ನಡ, ಡಿ.30: ಹೊಸ ವರ್ಷಾಚರಣೆಗೆ ಎಲ್ಲಿಗಾದರೂ ಹೋಗಬೇಕು ಎಂದು ಪ್ಲಾನ್​​ ಮಾಡಿಕೊಂಡು ಪ್ರವಾಸಿಗರು ಉತ್ತರ ಕನ್ನಡದ (Uttara Kannada) ಹಲವಾರು ರಮಣೀಯ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಇದೀಗ ಉತ್ತರ ಕನ್ನಡ ಜಿಲ್ಲೆಯತ್ತ ಪ್ರವಾಸಿಗರು ಬರುತ್ತಿದ್ದು, ಕ್ರಿಸ್ಮಸ್​​​ ದಿನದಿಂದಲೇ ಪ್ರವಾಸಿಗರು ಉತ್ತರ ಕನ್ನಡದ ಹಲವು ಭಾಗಗಳಿಗೆ ಬರುತ್ತಿದ್ದಾರೆ. ಡಿ.25ರಿಂದ ಗೋಕರ್ಣ, ಹೊನ್ನಾವರ ಹೋಂ ಸ್ಟೇ, ರೆಸಾರ್ಟ್​​ಗಳು ತುಂಬಿದೆ. ಇನ್ನು ಈ ಪ್ರದೇಶದಲ್ಲಿ ಬೀಚ್​​​ ಹಾಗೂ ಹೆಚ್ಚಿನ ಪ್ರವಾಸಿ ತಾಣಗಳು ಇರುವ ಕಾರಣ ಈ ಭಾಗವನ್ನೇ ಹೆಚ್ಚು ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಇದನ್ನೇ ಲಾಭ ಮಾಡಿಕೊಂಡ ಹೋಂ ಸ್ಟೇ, ರೆಸಾರ್ಟ್​​ಗಳ ಮಾಲೀಕರು ದರಗಳನ್ನು ಕೂಡ ಏರಿಕೆ ಮಾಡಿಕೊಂಡಿದ್ದಾರೆ.

ಉತ್ತರಕನ್ನಡದ ಈ ಪ್ರದೇಶಗಳಿಗೆ ಹೆಚ್ಚಿನ ಜನರು ಬರುತ್ತಿರುವ ಕಾರಣ ಟ್ರಾಫಿಕ್​​ ಸಮಸ್ಯೆ ಕೂಡ ಉಂಟಾಗಿದೆ. ಇದರ ಜತೆಗೆ ಹೋಂ ಸ್ಟೇ ಹಾಗೂ ರೆಸಾರ್ಟ್​ಗಳ ಮೇಲೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ನ್ಯೂ ಇಯರ್​ ದಿನ ಯಾವುದೇ ತೊಂದರೆ ಆಗಬಾರದು ಎಂದು ಡಿ.24ರಿಂದ ಜಿಲ್ಲೆಯಲ್ಲಿ ಭದ್ರತೆಗೆ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಭದ್ರತೆಗೆ 1300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಗೋಕರ್ಣ, ಮುರುಡೇಶ್ವರದಲ್ಲಿ 200ಕ್ಕೂ ಹೆಚ್ಚು ಹೋಂ ಗಾರ್ಡ್ಸ್ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 31 ಚೆಕ್ ಪೋಸ್ಟ್​ಗಳನ್ನು ಹಾಕಲಾಗಿದೆ. ಜತೆಗೆ ಪ್ರವಾಸಿಗರು ರಾತ್ರಿ ವೇಳೆ ಸಮುದ್ರಕ್ಕಿಳಿಯುವಂತಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ದೀಪನ್ ಹೇಳಿದ್ದಾರೆ.

ಇನ್ನು ಪಾರ್ಟಿ ವೇಳೆ ಏನಾದರೂ ಅನುಮಾನಾಸ್ಪದ ವಸ್ತುಗಳು ಪತ್ತೆಯಾದರೆ, ಹೋಂ ಸ್ಟೇ, ರೆಸಾರ್ಟ್​​ ಹಾಗೂ ಪ್ರವಾಸಿಗರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು, ಈಗಾಗಲೇ ಕಳೆದ ನಾಲ್ಕು ದಿನಗಳಿಂದ 156 ಡ್ರಂಕ್ ಆ್ಯಂಡ್ ಡ್ರೈವ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಹೋಂ ಸ್ಟೇ ಹಾಗೂ ರೆಸಾರ್ಟ್ ಗಳ ಮೇಲೆ ಗಮನ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅನುಮಾನ ಬಂದ ಕಡೆ ರೈಡ್ ಮಾಡಲು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಕಡಲ ತೀರಗಳಲ್ಲಿ ಹೆಚ್ಚಿನ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಎಂ.ಎನ್.ದೀಪನ್ ಹೇಳಿದ್ದಾರೆ.

ಇದನ್ನೂ ಓದಿ: ಹೊಸ ವರ್ಷ ಸಂಭ್ರಮಾಚರಣೆಗೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತಾ ಕ್ರಮ? ಇಲ್ಲಿದೆ ನೋಡಿ

ಹೋಂ ಸ್ಟೇ ಮತ್ತು ರೆಸಾರ್ಟ್ ದರ ನಿಗದಿ ಮಾಡುವ ಹಕ್ಕು ನಮಗಿಲ್ಲ:

ಹೋಂ ಸ್ಟೇ ಮತ್ತು ರೆಸಾರ್ಟ್ ದರ ನಿಗದಿ ಮಾಡುವ ಹಕ್ಕು ನಮಗಿಲ್ಲ, ಮಾಲೀಕರ ಅನುಕೂಲಕ್ಕೆ ತಕ್ಕಂತೆ ದರ ನಿಗದಿ ಮಾಡಿರುತ್ತಾರೆ. ಸಿಜನ್ ಸಮಯದಲ್ಲಿ ದರ ಹೆಚ್ಚು ಮಾಡಿದ್ರೆ ನಾವು ಏನೂ ಮಾಡೋಕೆ ಆಗಲ್ಲ. ಅವರು ಎಷ್ಟೇ ದರ ಏರಿಕೆ ಮಾಡಿದ್ರು, ಅದನ್ನು ಕೇಳುವ ಹಕ್ಕಿಲ್ಲ. ಕಡಲ ತೀರದಲ್ಲಿ ಹೋಂ ಗಾರ್ಡ್ ಇರಲಿಲ್ಲ. ಆದರೆ ಇದೀಗ ಎಲ್ಲ ಕಡೆಗೂ ಲೈಫ್ ಗಾರ್ಡ್ ಹಾಕಲಾಗಿದೆ. ಕೆಲವು ಕಡೆ ಇನ್ನಷ್ಟು ಸುರಕ್ಷತಾ ಸಲಕರಣೆಯ ಅವಶ್ಯಕತೆ ಇದೆ. ಮುಂದಿನ ತಿಂಗಳಲ್ಲಿ ಖರೀದಿ ಮಾಡಲು ಸಿದ್ದತೆ ಮಾಡಿಕೊಂಡಿದ್ದೇವೆ ಎಂದು ಜಿಲ್ಲೆಯ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಿ ಮಂಗಳಗೌರಿ ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಸಿದ್ದರಾಮಯ್ಯ ಸರ್ಕಾರ ಕೇರಳದ್ದಾ ಅಥವಾ ಕರ್ನಾಟಕದ್ದಾ? ಆರ್​ ಅಶೋಕ್​​ ವಾಗ್ದಾಳಿ – Kannada News | Kogilu Layout Rehabilitation: R. Ashoka spakrs government on Illegal Allocation and Pakistan Row

ಆರ್​. ಅಶೋಕ್​​, ಸಿದ್ದರಾಮಯ್ಯ

ಬೆಂಗಳೂರು, ಡಿಸೆಂಬರ್​ 30: ಕೋಗಿಲು ಲೇಔಟ್ (Kogilu Layout)​ ನಿವಾಸಿಗಳಿಗೆ ಮನೆ ಹಂಚಿಕೆಗೆ ನಿರ್ಧಾರ ವಿಚಾರ ಸದ್ಯ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ವಿಪಕ್ಷಗಳು ತೀವ್ರ ಕಿಡಿಕಾರಿವೆ. ಯಾವ ಕಾನೂನಿನಡಿಯಲ್ಲೂ ಅವರಿಗೆ ಮನೆ ಕೊಡಲು ಸಾಧ್ಯವೇ ಇಲ್ಲ. ಕನ್ನಡಿಗರ ನೆಲ ಪರಭಾರೆ ಮಾಡುವ ಅಧಿಕಾರ ನಿಮಗೆ ಯಾರು ಕೊಟ್ಟರು? ರಾಜ್ಯದಲ್ಲಿರುವ ಸರ್ಕಾರ ಕೇರಳದ್ದಾ ಅಥವಾ ಕರ್ನಾಟಕದ್ದಾ ಎಂದು ವಿಪಕ್ಷ ನಾಯಕ ಆರ್​. ಅಶೋಕ್ (R Ashoka)​ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಪಾಕಿಸ್ತಾನಕ್ಕೂ ನಮ್ಮನ್ನು ಕಾಂಗ್ರೆಸ್​ನವರು ಅಡವಿಟ್ಟುಬಿಟ್ರಾ?: ಅಶೋಕ್ ಕಿಡಿ

ಕೋಗಿಲು ಅಕ್ರಮ ವಲಸಿಗರ ಮನೆ ತೆರವು ವಿಚಾರವಾಗಿ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್​​, ಕೋಗಿಲು ಲೇಔಟ್​ನಲ್ಲಿ ಅನಧಿಕೃತ ಮನೆಗಳ ತೆರವು ಸಂಬಂಧಿಸಿದ ದಾಖಲೆಗಳ ಬಿಡುಗಡೆ ಮಾಡಿದ್ದಾರೆ. ಮನೆ ಹಂಚಿಕೆ ವಿಚಾರ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಿಬಿಟ್ಟಿದೆ. ಈಗ ಪಾಕಿಸ್ತಾನಕ್ಕೂ ನಮ್ಮನ್ನು ಕಾಂಗ್ರೆಸ್​ನವರು ಅಡವಿಟ್ಟುಬಿಟ್ರಾ? ಪಾಕಿಸ್ತಾನದವರು ಕರ್ನಾಟಕದ ಬಗ್ಗೆಯೇ ಯಾಕೆ ಮಾತಾಡುತ್ತಾರೆ? ಪಾಕ್​ನವರು ಮಹಾರಾಷ್ಟ್ರ, ತಮಿಳುನಾಡು ಬಗ್ಗೆ ಯಾಕೆ ಮಾತಾಡಲ್ಲ. ಸಿಎಂ, ಡಿಸಿಎಂ ಜಗಳದಲ್ಲಿ ನಾವು ದುರಂತದ ತುದಿಗೆ ಬಂದು ಬಿಟ್ಟಿದ್ದೇವೆ. ಬಾಂಗ್ಲಾದವರಿಗೆ ಜಮೀನು‌ ಕೊಡುತ್ತೀರಿ ಅಂತಾದರೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದ್ದಾರೆ.

ಕೋರ್ಟ್​ ಮೊರೆ ಹೋಗುವ ಸಂಬಂಧ ಚರ್ಚೆ

ಕೋಗಿಲು ಲೇಔಟ್​ ನಿವಾಸಿಗಳಿಗೆ ಮನೆ ಹಂಚಿಕೆ ವಿಚಾರವಾಗಿ ಕೋರ್ಟ್​ ಮೊರೆ ಹೋಗುವ ಸಂಬಂಧ ಚರ್ಚೆ ನಡೆಸಿದ್ದೇವೆ. ಈಗಾಗಲೇ ಈ ಬಗ್ಗೆ ಕಾನೂನು ತಂಡಕ್ಕೆ ಸೂಚನೆ ನೀಡಿದ್ದೇನೆ. ವಿಜಯಪುರ ಜಿಲ್ಲೆಯ ಆಲಮಟ್ಟಿ, ಕೊಡಗು ಸೇರಿದಂತೆ ರಾಜ್ಯದಲ್ಲಿರುವ ಸಂತ್ರಸ್ತರಿಗೆ ಮನೆ ಕೊಡಲು ಯೋಗ್ಯತೆ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ: ಕೆಸಿ ವೇಣುಗೋಪಾಲ್ ಮಾತು ಕೇಳಿ ಆಡಳಿತ ಮಾಡುವುದು 6 ಕೋಟಿ ಜನತೆಗೆ ಮಾಡಿದ ಅವಮಾನ; ಲಹರ್ ಸಿಂಗ್​​

ಇದು ವಕ್ಫ್ ಬೋರ್ಡ್ ಆಸ್ತಿ ಅಲ್ಲ, ಸರ್ಕಾರಿ ಭೂಮಿ. ವಕ್ಫ್ ಬೋರ್ಡ್ ಆಸ್ತಿ ಇದೆ ಅಲ್ವಾ, ಅದರಲ್ಲಿ ಮನೆ ಕಟ್ಟಿಕೊಡಿ. ಕೋಗಿಲು ಲೇಔಟ್​ನಲ್ಲಿರೋದು 650 ಕೋಟಿ ರೂ ಮೌಲ್ಯದ ಭೂಮಿ ಇದೆ. ಅನಧಿಕೃತ ಮನೆ ನಿರ್ಮಾಣ ಬಗ್ಗೆ ಒಂದು ವರ್ಷದ ಹಿಂದೆ ಅಂದರೆ ಸೆ.12ರಂದು BBMP ಜಂಟಿ ಆಯುಕ್ತರಿಗೆ ತಹಶೀಲ್ದಾರ್ ಪತ್ರ ಬರೆದಿದ್ದಾರೆ. ಈಗ ಮನೆ ಕಟ್ಟಿಕೊಡಿ ಅಂತಾ ಯಾರು ಹೇಳಿದರು. ಆಶ್ರಯ ಯೋಜನೆಯಡಿ ಕೊಟ್ಟರೆ ಶಾಸಕರ ಅಧ್ಯಕ್ಷತೆಯಲ್ಲಿ ಕೊಡಬೇಕು. ನನಗೆ ಗೊತ್ತಿರುವ ಪ್ರಕಾರ ಬ್ಯಾಟರಾಯನಪುರ ಶಾಸಕ ವಿದೇಶದಲ್ಲಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಪ್ರಾಯೋಜಿತದಿಂದಾಗಿ ಅಕ್ರಮ ಮನೆಗಳ ನಿರ್ಮಾಣ ಮಾಡಲಾಗಿದೆ. ಮಾನವೀಯತೆ ಆಧಾರದಲ್ಲಿ ವಸತಿ ಕೊಡಬೇಕೆಂದು ಸಿಎಂ‌ ಸೂಚಿಸಿದ್ದಾರೆ. ಕಸ ಹಾಕುವ ಜಾಗದಲ್ಲಿ‌ ಕಾಂಗ್ರೆಸ್​ನವರು ಮನೆ ಕಟ್ಟಿಕೊಂಡಿದ್ದಾರೆ. 14 ಎಕರೆ 8 ಗುಂಟೆ ಜಮೀನಿನಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಲಾಗಿದೆ. ಘನತ್ಯಾಜ್ಯ ನಿರ್ವಹಣೆಗೆ 100 ಕೋಟಿ ರೂ. ಮೀಸಲು ಇಟ್ಟಿದ್ದಾರೆ. ಬಾಂಗ್ಲಾದಿಂದ ಮುಸ್ಲಿಮರು ಪಶ್ಚಿಮ ಬಂಗಾಳಕ್ಕೆ ಬಂದರೆ ಏಜೆನ್ಸಿ ಇದೆಯಂತೆ. ಅಲ್ಲಿ 20 ಸಾವಿರ ಕೊಟ್ಟರೆ ಆಧಾರ್ ಎಲ್ಲವೂ ಮಾಡಿಕೊಡುತ್ತಾರಂತೆ ಎಂದರು.

ಇದನ್ನೂ ಓದಿ: ನಮ್ಮ ಸರ್ಕಾರದ ಆಡಳಿತದಲ್ಲಿ ಕೈ ಹಾಕುವುದು ಬೇಡ: ಕೇರಳ ಸರ್ಕಾರಕ್ಕೆ ಡಿಕೆ ಶಿವಕುಮಾರ್ ಎಚ್ಚರಿಕೆ​

ಕೋಗಿಲು ಸರ್ವೆ ನಂಬರ್ 99ರ ಜಮೀನು ಇದು. ಕಲ್ಲು ಬಂಡೆ ಜಾಗವನ್ನು ಸರ್ಕಾರ ಖಾಸಗಿ ವ್ಯಕ್ತಿಗೆ ಲೀಸ್​ಗೆ ಕೊಟ್ಟಿತ್ತು. ಕಳೆದ 20 ವರ್ಷಗಳಿಂದ ವಾಸವಿದ್ದಾರೆ ಅಂತಾ ಹೇಳುತ್ತಿದ್ದಾರೆ. 2023ರ ಸ್ಯಾಟಲೈಟ್ ಮ್ಯಾಪ್ ಪ್ರಕಾರ ಜಾಗ ಖಾಲಿ ಇತ್ತು. ಆ ಜಾಗದಲ್ಲಿ ಪಾಲಿಕೆಯವರು ಕಸ ಹಾಕುತ್ತಿದ್ದರು, ನೀರು ತುಂಬಿತ್ತು. 2025ರ ಸ್ಯಾಟಲೈಟ್ ಮ್ಯಾಪ್ ಪ್ರಕಾರ ಆ ಜಾಗದಲ್ಲಿ ಮನೆ ಕಟ್ಟಿದ್ದಾರೆ. ಆರು ತಿಂಗಳ‌ ಹಿಂದೆ ಮಣ್ಣು ತುಂಬಿ ಮನೆ ಕಟ್ಟಿದ್ದಾರೆ. ಕಾಂಗ್ರೆಸ್ ನಾಯಕ ವಾಸೀಂ ಅಗ್ರಿಮೆಂಟ್ ಮಾಡಿಕೊಟ್ಟಿದ್ದಾನೆ. ಎಲ್ಲರ ಹತ್ತಿರ 4-5 ಲಕ್ಷ ಹಣ ಪಡೆದು ಅಗ್ರಿಮೆಂಟ್ ಮಾಡಿಕೊಟ್ಟಿದ್ದಾನೆ. ಈ ಎಲ್ಲಾ ಮಾಹಿತಿಗಳೂ ಅಧಿಕಾರಿಗಳ ಬಳಿ ಇದೆ ಎಂದು ಆರ್​​ ಅಶೋಕ್​ ಆರೋಪಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 5:03 pm, Tue, 30 December 25

Source link

Horoscope Today 31 December : ಇಂದು ಈ ರಾಶಿಯವರು ಅನ್ಯರ ಹೃದಯ ಗೆಲ್ಲಲು ಸೋಲುವರು

ಮೇಷ ರಾಶಿ:

ಅಧಿಕಾರಕ್ಕೆ ಸಂಬಂಧಿತ ವಿಷಯಗಳಲ್ಲಿ ಸಹನೆ ಅಗತ್ಯ. ದುರಭ್ಯಾಸಗಳಿಂದ ದೂರವಿದ್ದರೆ ಆಂತರಿಕ ಶಕ್ತಿಯ ವೃದ್ಧಿಯಾಗುತ್ತದೆ. ಮುಖ್ಯ ಅಂಶಗಳನ್ನು ಎಲ್ಲಿಯಾದರೂ ಮರೆತುಬಿಡುವಿರಿ. ರಾಜಕೀಯ ವ್ಯಕ್ತಿಗಳ ಪ್ರಭಾವವನ್ನು ಬಳಸಿಕೊಳ್ಳುವಿರಿ. ನಿಮ್ಮ ಆಸೆಗಳನ್ನು ಪೂರ್ಣ ಮಾಡಿಕೊಳ್ಳಲಾಗದು. ಭಾವನೆಗಳಿಗೆ ಬೆಲೆ ಕೊಡದೇ ಇರುವುದು ನಿನಗೆ ಬೇಸರವಾಗಬಹುದು. ಬಂಧುಗಳ ಆಗಮನದಿಂದ ಇಂದಿನ ವ್ಯವಹಾರದಲ್ಲಿ ಬದಲಾವಣೆ ಇರುವುದು. ಎಲ್ಲ ಸಮಯದಲ್ಲಿಯೂ ನಿಮ್ಮ ಪರಿಸ್ಥಿತಿಯು ಸಕಾರಾತ್ಮಕವಾಗಿ ಇರದು. ಮಾನಸಿಕ ಒತ್ತಡ ಮತ್ತು ಸಂವೇದನಾಶೀಲತೆ ಹೆಚ್ಚಾಗುವ ದಿನ. ಸಾಮಾಜಿಕ ಸೇವೆಯಲ್ಲಿ ತೊಡಗಿದರೆ ಮನಸ್ಸಿಗೆ ಶಾಂತಿ. ಉದ್ಯಮ, ಕೈಗಾರಿಕಾ ಯೋಜನೆಗಳು ನಿಧಾನಗತಿಯಲ್ಲಿ ಇರಬಹುದು. ಇಂದು ನಿಮ್ಮ ವಿರುದ್ಧ ಮಾತನಾಡುವವರಿಗೆ ಉತ್ತರವನ್ನು ಕೊಡುವ ಅವಶ್ಯಕ ಇರುವುದಿಲ್ಲ. ಉದ್ಯೋಗದಲ್ಲಿ ವಿಶ್ವಾಸಗಳಿಸುವುದು ಮುಖ್ಯ. ನಿಮ್ಮನ್ನು ದಿಕ್ಕು ತಪ್ಪಿಸಿ ಕಾರ್ಯದ ವೇಗವನ್ನು ಕಡಿಮೆ‌ ಮಾಡಿಸಬಹುದು.

ವೃಷಭ ರಾಶಿ:

ಅಧಿಕಾರದ ಚುಕ್ಕಾಣಿ ನಿಮ್ಮ ಕೈಯಲ್ಲಿ ಬಂದರೂ ಒತ್ತಡ ಹೆಚ್ಚಾಗುತ್ತದೆ. ದುರಭ್ಯಾಸ ನಿಯಂತ್ರಿಸಿದರೆ ಸ್ಪಷ್ಟ ನಿರ್ಧಾರ ಸಾಧ್ಯ. ಮಾತಿನಲ್ಲಿ ಸಂಯಮ ಅಗತ್ಯ. ಪೂರ್ವಾರ್ಜಿತ ಆಸ್ತಿಯ ಬಗ್ಗೆ ನಿಮಗೆ ಪೂರ್ಣ ಸಮಾಧಾನ ಇರದು. ನಿಮ್ಮ ತಪ್ಪುಗಳು ಅರ್ಥವಾಗದೇ ಬೇರೆಯವರ ಮೂಲಕ ನೀವು ತಿಳಿದುಕೊಳ್ಳಬೇಕಾದೀತು. ಸಾಲವನ್ನು ಮಾಡುವಾಗ ಯಾರದ್ದಾದರೂ ಸಲಹೆಯನ್ನು ಪಡೆಯುವುದು ಉತ್ತಮ. ರಾಜಕೀಯ ವ್ಯಕ್ತಿಗಳು ನಿಮ್ಮನ್ನು ಬಳಸಿಕೊಳ್ಳಬಹುದು. ಯಾವ ಕೆಲಸವನ್ನು ಒಪ್ಪಿಕೊಳ್ಳುವಾಗಲೂ ಜಾಗರೂಕತೆ ಇರಲಿ. ಇನ್ನೊಬ್ಬರ ಒತ್ತಾಯಕ್ಕೆ ನೀವು ಮಣಿದು ಹಣದ ಹೂಡಿಕೆಯನ್ನು ಮಾಡುವಿರಿ. ಇಂದು ಹೊಸ ಉದ್ಯಮ ಆಲೋಚನೆಗಳು ಮನಸ್ಸಿನಲ್ಲಿ ಮೂಡುತ್ತವೆ. ಸಾಮಾಜಿಕ ಕಾರ್ಯಗಳಲ್ಲಿ ನಾಯಕತ್ವ ಸಿಗಬಹುದು. ಚರಾಸ್ತಿಯನ್ನು ಕೊಟ್ಟು ಅಲ್ಪ ಲಾಭವನ್ನು ಮಾಡಿಕೊಳ್ಳುವಿರಿ. ನಿಮ್ಮ ಮಾತಿಗೆ ಬೆಲೆ ಕೊಡದೇ ಇರುವುದರಿಂದ ಬೇಸರವಾದೀತು. ಹಳೆಯ ವಿಚಾರವನ್ನು ಮತ್ತೆ ಕೆದಕುವಿರಿ.

ಮಿಥುನ ರಾಶಿ:

ಸಾಮಾಜಿಕ ಕಾರ್ಯಗಳಲ್ಲಿ ನಿಮ್ಮ ಶ್ರಮ ಮೌಲ್ಯ ಪಡೆಯುತ್ತದೆ. ದುರಭ್ಯಾಸಗಳಿಂದ ಆರೋಗ್ಯ ಹಾನಿ ಸಾಧ್ಯ. ಮಾತಿನಲ್ಲಿ ಕಠಿಣತೆ ಕುಟುಂಬದಲ್ಲಿ ಬೇಸರ ಉಂಟುಮಾಡಬಹುದು. ಮೇಲಧಿಕಾರಿಗಳ ವರ್ತನೆಯನ್ನು ಸಹಿಸಲು ಕಷ್ಟವಾದೀತು. ಹಿರಿಯರ ಮಾರ್ಗದರ್ಶನವನ್ನು ನೀವು ಅಲ್ಲಗಳೆಯುವಿರಿ. ಧನವ್ಯಯವಾಗುವ ಸಂದರ್ಭವು ಬರಬಹುದು.‌ ತುರ್ತು ಹಣ‌ ಸಂಪಾದನೆಯನ್ನು ಮಾಡಬೇಕಾದೀತು. ಸಂಗಾತಿಯ ಜೊತೆ ವಾಗ್ವಾದ ಮಾಡಿ ಮನಸ್ಸನ್ನು ಕೆಡಿಸಿಕೊಳ್ಳುವಿರಿ. ನಿಮ್ಮ ಸತ್ಯದಿಂದ ಸಹೋದ್ಯೋಗಿಯ ಕೆಲಸವು ಹೋಗಬಹುದು. ನಿಮ್ಮ ನಡೆಯುವುದು ಇತರರಿಗೆ ತೊಂದರೆಯನ್ನು ಉಂಟುಮಾಡೀತು. ಕೈಗಾರಿಕಾ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಅಧಿಕಾರದ ಹೊಣೆಗಾರಿಕೆ ಒತ್ತಡ ತಂದರೂ ಅನುಭವ ಸಹಾಯ ಮಾಡುತ್ತದೆ. ಸಾಮಾಜಿಕ ಗೌರವವನ್ನು ನೀವು ಪಡೆಯಲಿದ್ದೀರಿ. ವಿದ್ಯಾಭ್ಯಾಸಕ್ಕಾಗಿ ಮನೆಯನ್ನು ಬಿಟ್ಟು ಇರುವುದು ಕಷ್ಟವಾಗುವುದು. ಆಲಸ್ಯದಿಂದ ಕೆಲವು ಅನಿವಾರ್ಯ ಕಾರ್ಯವನ್ನು ಮಾಡಲಾರಿರಿ.

ಕರ್ಕಾಟಕ ರಾಶಿ:

ವಿಭಿನ್ನ ಉದ್ಯಮ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು ಕಾಣಿಸುತ್ತವೆ. ಅಧಿಕಾರ ಸಂಬಂಧಿತ ನಿರ್ಧಾರಗಳಲ್ಲಿ ಧೈರ್ಯ ಅಗತ್ಯ. ಒತ್ತಡ ಇದ್ದರೂ ಆಶಾವಾದ ನಿಮ್ಮ ಶಕ್ತಿ. ಎಲ್ಲವನ್ನೂ ತಿಳಿದೆನೆಂಬ ಅಹಂ ನಿಂದ ಸೋಲಾಗುವುದು. ಕುಟುಂಬದವರ ಜೊತೆ ನಿಮ್ಮ ಒಡಾನಾಟವು ಕಡಿಮೆ ಆಗಬಹುದು. ಕೃಷಿಯ ಚಟುವಟಿಕೆಯಿಂದ ಲಾಭವಾಗುವುದು. ಮಿತ್ರರ ಸಹಾಯವನ್ನು ನೀವು ಉಪೇಕ್ಷಿಸುವಿರಿ. ಓಡಾಟದಿಂದ ಕೆಲಸವಾಗದು. ಜಾಣ್ಮೆಯಿಂದ ಕೆಲಸವನ್ನು ಮುಗಿಸುಕೊಳ್ಳಿ. ನಿಮ್ಮ ಸ್ವಾಭಿಮಾನಕ್ಕೆ ಪೆಟ್ಟು ಬೀಳಬಹುದು. ನೀವು ಆಪ್ತರಿಗೆ ಎಲ್ಲವನ್ನೂ ಹೇಳಬೇಕು ಎಂದುಕೊಂಡರೂ ನಿಮಗೆ ಹೇಳಲಾಗದೆ ದುಃಖವಾಗುವುದು. ಪರಿಚಿತರಿಂದಲೇ ಭೂಮಿಗೆ ಸಂಬಂಧಿಸಿದ ವಿಚಾರದಲ್ಲಿ ವಂಚನೆಯಾಗಲಿದೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದರೆ ಮಾನಸಿಕ ತೃಪ್ತಿ. ದುರಭ್ಯಾಸ ತ್ಯಜಿಸಿದರೆ ಮುಂದಿನ ದಾರಿಗಳು ಸುಗಮ. ಮೇಲಧಿಕಾರಿಗಳು ನಿಮ್ಮ ಮೇಲಿಟ್ಟ ವಿಶ್ವಾಸಕ್ಕೆ ಭಂಗಬಾರದಂತೆ ನಿಮ್ಮ ವರ್ತಿಸಿ. ತಂದೆಯಿಂದ ಕೇಳಿದ್ದು ಸಿಗಲಿಲ್ಲ ಎಂದು ಬೇಸರವಾಗಬಹುದು.

ಸಿಂಹ ರಾಶಿ:

ಉದ್ಯಮದಲ್ಲಿ ಪಾಲುದಾರರೊಂದಿಗೆ ಸ್ಪಷ್ಟತೆ ಅಗತ್ಯ. ಸಾಮಾಜಿಕ ಕಾರ್ಯಗಳು ನಿಮ್ಮ ಒಳಗಿನ ಶಕ್ತಿಯನ್ನು ಹೊರತರುತ್ತವೆ. ದುರಭ್ಯಾಸಗಳು ಪ್ರಗತಿಗೆ ಅಡ್ಡಿಯಾಗಬಹುದು. ನಿಮಗೆ ಆಸಕ್ತಿ ಇಲ್ಲದಿದ್ದರೂ ಹೊಸ ಕೆಲಸವನ್ನು ಮಾಡಬೇಕಾದೀತು. ಪರರ ಮನೆಯಲ್ಲಿ ಆಹಾರವನ್ನು ಸ್ವೀಕಾರ ಮಾಡುವಿರಿ. ನಿಮ್ಮ ಮಾತು ನಿಮಗೇ ಹೆಚ್ಚಾದಂತೆ ತೋರುವುದು. ಬರಹಗಾರರು ಪ್ರಶಂಸೆಯನ್ನು ಗಳಿಸುವರು. ಆರ್ಥಿಕ ನಷ್ಟದಿಂದ ನಿಮಗೆ ಚಿಂತೆಯಾಗಬಹುದು. ಸಾಮೂಹಿಕ ಕೆಲಸವು ನಿಮಗೆ ಕಿರಿಕಿರಿ ಕೊಡಬಹುದು. ತಂದೆಯಿಂದ ನಿಮಗೆ ಬೇಕಾದ ಕೆಲಸವು ಮಾಡಿಸಿಕೊಳ್ಳುವಿರಿ. ಧಾರ್ಮಿಕ ಕಾರ್ಯಗಳಲ್ಲಿ ನಿಮಗೆ ಆಸಕ್ತಿ ಹೆಚರಚಾಗುವುದು. ಇಂದು ಕೆಲಸದ ಒತ್ತಡ ಮತ್ತು ಮಾನಸಿಕ ಚಡಪಡಿಕೆ ಕಾಣಿಸಿಕೊಳ್ಳಬಹುದು. ಅಧಿಕಾರಿಗಳೊಂದಿಗೆ ಮಾತುಕತೆ ಜಾಗರೂಕವಾಗಿರಲಿ. ನಿಮ್ಮ ಯೋಜನೆಯನ್ನು ಯಾರ ಬಳಿಯೂ ಪ್ರಕಟಮಾಡಿಕೊಳ್ಳುವುದು ಬೇಡ. ಯಾರೋ‌ ಮಾಡಿದ ನಿಯಮಕ್ಕೆ ನಿಮಗೆ ತೊಂದರೆಯಾಗಬಹುದು.

ಕನ್ಯಾ ರಾಶಿ:

ಉದ್ಯಮ ಹಾಗೂ ಕೈಗಾರಿಕಾ ವ್ಯವಹಾರಗಳಲ್ಲಿ ಲಾಭದ ಸೂಚನೆ. ಅಧಿಕಾರದ ಚುಕ್ಕಾಣಿ ನಿಮ್ಮ ಕೈಗೆ ಬರುವ ಸಾಧ್ಯತೆ. ಒತ್ತಡದ ನಡುವೆಯೂ ಸಮತೋಲನ ಕಾಯ್ದುಕೊಳ್ಳುವಿರಿ. ಹಠದ ಸ್ವಭಾವದಿಂದ ಉದ್ಯೋಗವನ್ನು ಕಳೆದುಕೊಳ್ಳುವುದು ಅನಿವಾರ್ಯವಾಗಬಹುದು. ಧೃತಿಗೆಡದೇ ಹೊಸ ಉದ್ಯೋಗಕ್ಕೆ ತೆರಳುವಿರಿ. ವ್ಯವಹಾರದ ನಷ್ಟವು ನಿಮ್ಮ ಮನಸ್ಸನ್ನು ವಿಚಲಿತ ಮಾಡೀತು. ಯಾರದೋ ಮಾತಿನ ಮೇಲೆ ನಿಮ್ಮ ಗೆಳೆತನವನ್ನು ದೂರ ಮಾಡಿಕೊಳ್ಳಬಹುದು. ಅನಿರೀಕ್ಷಿತವಾಗಿ ಸಿಕ್ಕ ಉನ್ನತ ಅಧಿಕಾರದಿಂದ ಸಂತೋಷವಾಗಬಹುದು. ಸಾಮಾಜಿಕ ಕಾರ್ಯಗಳಲ್ಲಿ ಗೌರವ ಹೆಚ್ಚುತ್ತದೆ. ದುರಭ್ಯಾಸದಿಂದ ದೂರವಿದ್ದರೆ ಆರೋಗ್ಯ ಸುಧಾರಣೆ. ಬೇಸರ ಮಾತುಗಳನ್ನು ತಪ್ಪಿಸಿ. ದಾಂಪತ್ಯದಲ್ಲಿ ಬರುವ ಸಮಸ್ಯೆಗಳನ್ನು ಪರಸ್ಪರ ಮಾತು ಕತೆಯಿಂದ ಸರಿ ಮಾಡಿಕೊಳ್ಳಿ. ಬಹಿರಂಗಪಡಿಸಿ ನಿಮ್ಮ ಮಾನವನ್ನು ಕಳೆದುಕೊಳ್ಳಬೇಕಾಗಬಹುದು. ಸಾಧ್ಯವಾದಷ್ಟು ಮಾತನ್ನು ಕಡಿಮೆ ಮಾಡಿ, ಕಾರ್ಯದಲ್ಲಿ ತೋರಿಸುವಿರಿ. ನೀವು ಸಣ್ಣ ನೋವನ್ನೂ ನಿರ್ಲಕ್ಷಿಸುವುದು ಬೇಡ. ಅನುಮಾನದಿಂದ ಸ್ನೇಹವು ಹಾಳುಗುವುದು.

ತುಲಾ ರಾಶಿ:

ಕೆಲಸದ ಒತ್ತಡ ಹೆಚ್ಚು ಅನುಭವವಾಗಬಹುದು. ಅಧಿಕಾರ ಸಂಬಂಧಿತ ಹೊಣೆಗಾರಿಕೆ ಹೆಚ್ಚುತ್ತದೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದರೆ ನಿಮ್ಮ ಶ್ರಮ ಗುರುತಿಸಲಾಗುತ್ತದೆ. ಉದ್ಯೋಗವನ್ನು ಬದಲಿಸುವ ಮನಸ್ಸಿದ್ದರೂ ನಿಯಮಕ್ಕೆ ಕಟ್ಟುಬಿದ್ದು ಕಷ್ಟವಾದೀತು. ಪಾಲುದಾರಿಕೆಯಲ್ಲಿ ಹಣದ ವ್ಯವಹಾರದಿಂದ ನಿಮಗೆ ಅಸಮಾಧಾನವಾಗುವುದು. ಸಾಲವನ್ನು ತೀರಿಸಲು ಏನಾದರೂ ಮಾಡಬೇಕು ಏನಿಸಬಹುದು. ಬಂಧುಗಳ ಮಾತಿನಿಂದ ಸಮಾಧಾನ ಸಿಕ್ಕೀತು. ಉದ್ಯೋಗವನ್ನು ಹುಡುಕಿಕೊಂಡು ಅಲೆದಾಡಬೇಕಾದೀಯು. ಆಗಾಗ ಬರುವ ಸಾಲದ ವಿಚಾರದಿಂದ ಮನೆಯ ವಾತಾವರಣವು ಸರಿಯಾಗಿ ಇರದು. ಉದ್ಯಮದಲ್ಲಿ ಹೊಸ ಪ್ರಯೋಗ ಮಾಡುವ ಮುನ್ನ ವಿಶ್ಲೇಷಣೆ ಅಗತ್ಯ. ಮಾತಿನಲ್ಲಿ ಅತಿಸ್ಪಷ್ಟತೆ ಕೆಲವರಿಗೆ ನೋವು ತರಬಹುದು. ಕಳೆದುಹೋದ ವಿಷಯವನ್ನು ಯಾರೋ ಪುನಃ ನೆನಪಿಸಿಕೊಂಡು ಮನಸ್ಸು ಭಾರವಾಗುವುದು. ಇಂದಿನ‌ ನಿಮ್ಮ ಪ್ರಯಾಣವು ಕೆಲವು ಅಡೆತಡೆಗಳಿಂದ ಇರಲಿದೆ. ನಿಮ್ಮ ಆಸಕ್ತಿಯ ವಿಚಾರವನ್ನು ಬದಲಿಸುವಿರಿ. ನಿಮ್ಮ ಅಂತಶ್ಶಕ್ತಿ ನಿಮ್ಮರಿಗೆ ಗೊತ್ತಾಗುವುದು.

ವೃಶ್ಚಿಕ ರಾಶಿ:

ಇಂದು ಅಧಿಕಾರದ ಸ್ಥಾನದಲ್ಲಿ ನಿಮ್ಮ ಮಾತಿಗೆ ತೂಕ ಇರುತ್ತದೆ. ಆದರೆ ಅಹಂಕಾರದಿಂದ ಬೇಸರ ಮಾತು ಹೊರಬರುವ ಸಾಧ್ಯತೆ. ಒತ್ತಡವನ್ನು ನಿಯಂತ್ರಿಸಲು ಸಾಮಾಜಿಕ ಸೇವೆ ಸಹಾಯಕ. ಧಾರ್ಮಿಕ ನಾಯಕರ ನಡುವೆ ವಾಗ್ವಾದ ಮಾಡುವಿರಿ. ಕಳೆದುಕೊಂಡ ವಸ್ತುಗಳ ಬಗ್ಗೆ ನಿಮಗೆ ಮೋಹವಿರದು. ಭೂಮಿಯ ವ್ಯವಹಾರದಿಂದ ಹೊರಬರಲು ಪ್ರಯತ್ನಿಸುವಿರಿ. ಇಂದು ಇನ್ನೊಬ್ಬರ ವಾಹನದಿಂದ ನೋವಾಗುವ ಸಾಧ್ಯತೆ ಇದೆ. ಹಳೆಯ ಸಂಸ್ಥೆಯೊಂದನ್ನು ಮುನ್ನಡೆಸುವ ಜವಾಬ್ದಾರಿಯು ನಿಮಗೆ ಬರಬಹುದು. ಹೆಚ್ಚು ಆದಾಯವನ್ನು ಇಂದಿನ ಕಾರ್ಯದಿಂದ ನಿರೀಕ್ಷಿಸುವಿರಿ. ನಿಮ್ಮ ಕರ್ತವ್ಯದ ಕಡೆ ಗಮನ ಅತಿಯಾಗಿ ಇರಲಿ. ಕೈಗಾರಿಕಾ ಕ್ಷೇತ್ರದಲ್ಲಿ ಹೊಸ ಸಂಪರ್ಕಗಳು ಲಾಭ ತರುತ್ತವೆ. ದುರಭ್ಯಾಸ ತ್ಯಜಿಸಿದರೆ ಮಾನಸಿಕ ಹಾಗೂ ದೈಹಿಕ ಶಕ್ತಿ ಹೆಚ್ಚುತ್ತದೆ. ನಿಮ್ಮ ಕೆಲಸವನ್ನು ನೀವು ಮಾಡಿ. ಮಾತಿಗೆ ತಪ್ಪಿದ್ದಕ್ಕೆ ನಿಮ್ಮನ್ನು ಅವಮಾನಿಸಿಯಾರು. ಆರ್ಥಿಕ ಬಲವು ನಿಮಗೆ ಅಗತ್ಯವಾಗಿ ಬೇಕಾಗುವುದು. ಬೇರೆ ಕೆಲಸಗಳಿಂದ ಹೆಚ್ಚು ಆದಾಯ ಬರುವಂತೆ ನೀವು ನೋಡಿಕೊಳ್ಳುವಿರಿ.

ಧನು ರಾಶಿ:

ಕೆಲಸದ ಒತ್ತಡದಿಂದ ಬೇಸರ ಹೆಚ್ಚಾಗಬಹುದು. ಆದರೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗುವುದರಿಂದ ಮನಸ್ಸಿಗೆ ಸಮಾಧಾನ. ಉದ್ಯಮ ಹಾಗೂ ಕೈಗಾರಿಕೆ ಸಂಬಂಧಿತ ನಿರ್ಧಾರಗಳಲ್ಲಿ ಕುಟುಂಬದ ಸಲಹೆ ಉಪಯುಕ್ತ. ಇಂದು ನಿಮಗೆ ಹಣದ ಅಗತ್ಯತೆಗಳು ತುಂಬಾ ಎದುರಾಗಬಹುದು. ರಾಜಕೀಯದ ಅನಿರೀಕ್ಷಿತ ಬದಲಾವಣೆಯ ಬಿಸಿಯು ನಿಮಗೂ ತಟ್ಟಬಹುದು. ಕೆಲವನ್ನು ನೀವು ಹೇಳಿ ಮಾಡುವುದು ಸಾಧ್ಯವಾಗದು. ಕಳ್ಳತನದ ಭೀತಿ ಇರಲಿದೆ. ಅಕಸ್ಮಾತ್ ವಾಹನದಿಂದ ಬೀಳಬಹುದು. ಸಣ್ಣ ಗಾಯಗಳೂ ಆಗಬಹುದು. ಮನೆಯ ಸ್ವಚ್ಛತೆಯ ಕಡೆ ಗಮನ ಇರಲಿದೆ. ಅಧಿಕಾರಿಗಳೊಂದಿಗೆ ಮಾತುಕತೆ ಮೃದುವಾಗಿರಲಿ. ದುರಭ್ಯಾಸಗಳಿಂದ ದೂರವಿರುವುದು ಆರೋಗ್ಯಕ್ಕೆ ಒಳಿತು. ಉದ್ಯೋಗದ ನಿಮಿತ್ತ ಸುತ್ತಾಡುವುದರಿಂದ ಅನಾರೋಗ್ಯಕ್ಕೆ ಕಾರಣವಾಗಬಹುದು. ಅಧಿಕ ಒತ್ತಡವು ನಿಮ್ಮ ಕಾರ್ಯಕ್ಕೆ ಭಂಗ ತರಬಹುದು. ಕಬ್ಬಿಣದ ವ್ಯಾಪರದಿಂದ ಲಾಭವನ್ನು ಪಡೆಯುವಿರಿ. ವೃತ್ತಿಯಲ್ಲಿ ನಿಮ್ಮ ಬಗ್ಗೆ ಸಲ್ಲದ ಮಾತುಗಳು ಕೇಳಿ ಆತಂಕವಾಗಬಹುದು. ನಿಮ್ಮನ್ನು ಅವಲಂಬಿಸಿದವರ ಅವಶ್ಯಕತೆಗಳನ್ನು ಪೂರೈಸುವಿರಿ.

ಮಕರ ರಾಶಿ:

ವಿಭಿನ್ನ ಉದ್ಯಮ ಆಲೋಚನೆಗಳು ಇಂದು ಕಾರ್ಯರೂಪಕ್ಕೆ ಬರಬಹುದು. ಅಧಿಕಾರದ ಚುಕ್ಕಾಣಿ ಸಿಕ್ಕರೂ ಸಹನೆ ಅಗತ್ಯ. ಒತ್ತಡದಿಂದ ಮಾತು ಕಠಿಣವಾಗುವ ಸಾಧ್ಯತೆ ಇದೆ. ತಂದೆಯ ಜೊತೆಗಿನ ಮನಸ್ತಾಪವನ್ನು ನೀವು ಕುಳಿತು ಬಗೆಹರಿಸಿಕೊಳ್ಳುವುದು ಸೂಕ್ತ. ಕಲಾವಿದರು ಹೊಸ ಅವಕಾಶಗಳನ್ನು ಪಡೆದುಕೊಳ್ಳುವರು. ನಿಮ್ಮ ವಿದ್ಯೆಗೆ ಗೌರವ ಸಿಗುವುದು. ಬರಬೇಕಾದ ಹಣವನ್ನು ಬಹಳ ಮುತುವರ್ಜಿಯಿಂದ ಪಡೆಯಬೇಕು. ಅತಿಯಾದ ಅಸೆಯಿಂದ ನಿಮ್ಮಲ್ಲಿರುವ ವಸ್ತುವು ನಿಮಗೆ ದುಃಖಕೊಟ್ಟೀತು. ಅಪರಿಚಿತರ ಸಲಹೆಗಳು ನಿಮಗೆ ಯೋಗ್ಯವೆನಿಸಬಹುದು. ಸಾಮಾಜಿಕ ಕಾರ್ಯಗಳು ನಿಮ್ಮ ವ್ಯಕ್ತಿತ್ವವನ್ನು ಮೆಚ್ಚುವಂತೆ ಮಾಡುತ್ತವೆ. ದುರಭ್ಯಾಸ ತ್ಯಜಿಸಿದರೆ ಮಾನಸಿಕ ಸ್ಪಷ್ಟತೆ ಹೆಚ್ಚುತ್ತದೆ. ಸಂಗಾತಿಯನ್ನು ನೋಡುವ ದೃಷ್ಟಿಯು ಬದಲಾದೀತು‌. ನೀವಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳಲು ನಿಮ್ಮವರು ಕಷ್ಟಪಟ್ಟಾರು. ಇಂದು ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯಲು ಅವಕಾಶ ಇರಲಿದೆ. ಶ್ರಮದ ಕೆಲಸಕ್ಕೆ ನೀವು ಹೋಗುವುದಿಲ್ಲ.

ಕುಂಭ ರಾಶಿ:

ಮಾನಸಿಕ ಒತ್ತಡ ನಿಧಾನವಾಗಿ ಹೆಚ್ಚಾಗಬಹುದು. ಅಧಿಕಾರ ಸಂಬಂಧಿತ ವಿಚಾರಗಳಲ್ಲಿ ಜವಾಬ್ದಾರಿ ಹೆಚ್ಚುತ್ತದೆ. ಸಾಮಾಜಿಕ ಸೇವೆಯಲ್ಲಿ ಭಾಗವಹಿಸಿದರೆ ಗೌರವ ಸಿಗುತ್ತದೆ. ದುರಭ್ಯಾಸದಿಂದ ಆರೋಗ್ಯಕ್ಕೆ ತೊಂದರೆ ಸಂಭವ. ರಪ್ತು ವ್ಯಾಪಾರವು ಸುಗಮವಾಗಿ ಸಾಗುವುದು. ನೌಕರರ ಸಮಸ್ಯೆಗಳಿಗೆ ಸ್ಪಂದಿಸುವಿರಿ. ಅಪರಿಚಿತರಿಗೆ ನಿಮ್ಮ ವಾಹನವನ್ನು ಕೊಟ್ಟು ಕೆಡಿಸಿಕೊಳ್ಳುವಿರಿ. ದೂರಪ್ರಯಾಣವನ್ನು ಮಾಡಲು ಮನಸ್ಸು ಒಪ್ಪದು. ಸಮಯಪ್ರಜ್ಞೆಯಿಂದ ನೀವು ಯೋಗ್ಯ ಮಾತುಗಳನ್ನು ಆಡುವಿರಿ. ನಿಮ್ಮ ಆತಂಕವನ್ನು ನೀವು ಆಪ್ತರ ಜೊತೆ ಹೇಳಿಕೊಳ್ಳಿ. ಉದ್ಯಮ, ಕೈಗಾರಿಕೆ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಮೊದಲು ಸೂಕ್ತ ಸಲಹೆ ಪಡೆಯಿರಿ. ಅನಗತ್ಯ ಮಾತು ವಿವಾದ ಉಂಟುಮಾಡಬಹುದು. ಯಾರದೋ ಪ್ರೇರಣೆಯಿಂದ ನಿಮ್ಮ ಬದುಕು ಬದಲಾವಣೆಯ ಕಡೆ ಹೋಗಲಿದೆ. ಪ್ರೀತಿಯು ಸಿಗದೇ ಮೀನಿನಂತೆ ಒದ್ದಾಡುವಿರಿ. ಕೊಟ್ಟ ಹಣವನ್ನು ಪುನಃ ಹಿಂದಿರುಗಿಸಿ ಪ್ರಶಂಸೆ ಪಡೆಯುವಿರಿ. ನೌಕರರನ್ನು ಉದ್ಯಮದಲ್ಲಿ ಕಡಿಮೆ ಮಾಡಿಕೊಳ್ಳಬೇಕಾಗುವುದು.

ಮೀನ ರಾಶಿ:

ಇಂದು ದುರಭ್ಯಾಸಗಳಿಂದ ದೂರ ಉಳಿಯುವ ಸಂಕಲ್ಪ ಅಗತ್ಯ. ಕೆಲಸದ ಒತ್ತಡ ಹೆಚ್ಚಿದರೂ ನಿರ್ಣಯಾಧಿಕಾರ ನಿಮ್ಮ ಕೈಯಲ್ಲಿರುತ್ತದೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದರೆ ಮನಸ್ಸಿಗೆ ನೆಮ್ಮದಿ. ನ್ಯಾಯಾಲಯದ ಆದೇಶಕ್ಕೆ ತಲೆ ಬಾಗಿ ನಿಮ್ಮ ಮುಂದಿನ ಕೆಲಸವನ್ನು ಮಾಡಿ. ಕಳೆದುಕೊಂಡ ವಸ್ತುವಿನ ಮೌಲ್ಯವನ್ನು ಪಡೆಯುವಿರಿ. ಹದಗೆಡುವ ಆರೋಗ್ಯವನ್ನು ಮೊದಲೇ ಸರಿಮಾಡಿಕೊಂಡು ಜಾಣರಾಗಿರಿ. ನಿಮ್ಮ ಯೋಜನೆಗೆ ಕೆಲವು ಅಪಸ್ವರಗಳು ಕೇಳಿಸುವುದು. ಒಂದೇ ವಿಚಾರದ ಬಗ್ಗೆ ಹೆಚ್ಚು ಹೊತ್ತು ಚಿಂತಿಸಿದರೂ ಪ್ರಯೋಜನವಾಗದು. ಉದ್ಯಮ ಹಾಗೂ ಕೈಗಾರಿಕಾ ವಿಚಾರಗಳಲ್ಲಿ ಹೊಸ ಯೋಜನೆಗಳ ಚಿಂತನೆ ಬರಲಿದೆ. ಮಾತಿನಲ್ಲಿ ತೀಕ್ಷ್ಣತೆ ಬೇಸರಕ್ಕೆ ಕಾರಣವಾಗಬಹುದು. ಆಕಸ್ಮಿಕವಾಗಿ ಆರ್ಥಿಕಲಾಭವಿದ್ದರೂ ಸಂತೋಷವಾಗದು. ಸಂತೋಷವನ್ನು ಹೇಳಿಕೊಳ್ಳಲು ನಿಮ್ಮ ಜೊತೆ ಯಾರೂ ಇಲ್ಲವೆನಿಸುವುದು. ಆಪ್ತರ ಮಾತಿಗೆ ಕಿವಿಯಾಗಿರುವಿರಿ. ಅತಿಯಾದ ನಂಬಿಕೆಯು ಹುಸಿಯಾದ ಕಾರಣ ಪಶ್ಚಾತ್ತಾಪಪಡುವಿರಿ. ಅವರವರ ಭಾರ ಅವರಿಗೇ ಗೊತ್ತಾಗುವ ದಿನ.

31 ಡಿಸೆಂಬರ್​​ 2025ರ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಉತ್ತರಾಷಾಢ, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ಏಕಾದಶೀ ನಿತ್ಯನಕ್ಷತ್ರ : ಭರಣೀ, ಯೋಗ : ಐಂದ್ರ, ಕರಣ : ಭದ್ರ, ಸೂರ್ಯೋದಯ – 06 – 49 am, ಸೂರ್ಯಾಸ್ತ – 06 – 05 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:28 – 13:52, ಯಮಗಂಡ ಕಾಲ 08:14 – 09:39, ಗುಳಿಕ ಕಾಲ 11:03 – 12:28

-ಲೋಹಿತ ಹೆಬ್ಬಾರ್ – 8762924271 (what’s app only)

Source link