ಮಹಾರಾಷ್ಟ್ರ: ಸಾಹಿತ್ಯ ಸಮ್ಮೇಳನದ ಕಾರ್ಯಾಧ್ಯಕ್ಷ ವಿನೋದ್ ಕುಲಕರ್ಣಿ ಮೇಲೆ ಅಮಾನುಷ ಹಲ್ಲೆ – Kannada News | Brutal Attack On Sahitya Sammelan Working President Vinod Kulkarni in Maharashtra
ಸತಾರ, ಜನವರಿ 04: ಸಾಹಿತ್ಯ ಸಮ್ಮೇಳನದ ಕಾರ್ಯಾಧ್ಯಕ್ಷ ವಿನೋದ್ ಕುಲಕರ್ಣಿ ಮೇಲೆ ಅಮಾನುಷ ದಾಳಿ(Attack) ನಡೆಸಿರುವ ಘಟನೆ ಸತಾರದಲ್ಲಿ ನಡೆದಿದೆ. ಅಪರಿಚಿತ ದುಷ್ಕರ್ಮಿಯೊಬ್ಬರು ಅವರನ್ನು ಅಡ್ಡಗಟ್ಟಿ, ಅವರ ಕಣ್ಣು ಮತ್ತು ಮುಖಕ್ಕೆ ಕಪ್ಪು ಪುಡಿಯ ಪದಾರ್ಥವನ್ನು ಎಸೆದು, ಕೊಲೆ ಬೆದರಿಕೆ ಹಾಕಿದ್ದಾರೆಂದು ವರದಿಯಾಗಿದೆ. ದಾಳಿಯ ತೀವ್ರತೆಯು ಕುಲಕರ್ಣಿ ಅವರ ಕಣ್ಣಿಗೆ ಗಂಭೀರ ಗಾಯವನ್ನುಂಟುಮಾಡಿದೆ. ಈ ಹಲ್ಲೆಯನ್ನು ತೀವ್ರವಾಗಿ ಖಂಡಿಸಿರುವ ಲೋಕೋಪಯೋಗಿ ಸಚಿವ ಶಿವೇಂದ್ರಸಿಂಹ ಭೋಸಲೆ, ಇದು ‘ಹೇಡಿತನದ ಕೃತ್ಯ’ ಎಂದು ಬಣ್ಣಿಸಿದ್ದು, ನಾಗರಿಕ ಸಮಾಜದಲ್ಲಿ ಇದಕ್ಕೆ ಸ್ಥಾನವಿಲ್ಲ….