Delayed Marriage: ಮದುವೆ ವಿಳಂಬವಾಗುತ್ತಿದೆಯೇ? ಜಾತಕದಲ್ಲಿನ ಈ ಗ್ರಹ ದೋಷಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ
ಜೀವನದಲ್ಲಿ ಎಲ್ಲವೂ ಸುಸೂತ್ರವಾಗಿದ್ದರೂ, ಅಂದರೆ ಉತ್ತಮ ಉದ್ಯೋಗ, ಸುಸಂಸ್ಕೃತ ನಡವಳಿಕೆ ಮತ್ತು ಗೌರವಾನ್ವಿತ ಕುಟುಂಬವಿದ್ದರೂ ಕೆಲವೊಮ್ಮೆ ಮದುವೆ ಎಂಬುದು ವಿಳಂಬವಾಗುತ್ತಿರುತ್ತದೆ . ಬಂದ ಸಂಬಂಧಗಳು ಕೈತಪ್ಪುವುದು ಅಥವಾ ಸೂಕ್ತವಾದ ಪ್ರಸ್ತಾಪಗಳೇ ಬಾರದಿರುವುದು ಅನೇಕರನ್ನು ಚಿಂತೆಗೀಡು ಮಾಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿನ ಗ್ರಹಗಳ ಸ್ಥಾನಗತಿ ಮತ್ತು ದೋಷಗಳೇ ಇಂತಹ ಅಡೆತಡೆಗಳಿಗೆ ಪ್ರಮುಖ ಕಾರಣಗಳಾಗಿವೆ. ಜಾತಕದ ‘ಏಳನೇ ಮನೆ’ಯ ಪ್ರಾಮುಖ್ಯತೆ: ಜ್ಯೋತಿಷ್ಯ ಶಾಸ್ತ್ರದಲ್ಲಿ ಜಾತಕದ 12 ಮನೆಗಳ ಪೈಕಿ ಏಳನೇ ಮನೆಯನ್ನು ವಿವಾಹ ಮತ್ತು ಜೀವನ ಸಂಗಾತಿಯ ಸ್ಥಾನ…