All posts by nagaraj11081993

ಬೇಸಿಗೆಯ ಧಗೆಯ ನಡುವೆ ಅಡುಗೆಮನೆಯ ನಿರ್ವಹಣೆ ಮತ್ತು ಆಹಾರದ ಸುರಕ್ಷತೆ ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ

ಬೇಸಿಗೆಯ ಧಗೆಯ ನಡುವೆ ಅಡುಗೆಮನೆಯ ನಿರ್ವಹಣೆ ಮತ್ತು ಆಹಾರದ ಸುರಕ್ಷತೆ ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ

ಬೇಸಿಗೆ ಎಂದರೆ ಬರೀ ಬೆವರುವ ತಾಪಮಾನ ಮಾತ್ರವಲ್ಲ, ಅದು ಅಡುಗೆಮನೆಯ ತಾಳ್ಮೆಯ ಪರೀಕ್ಷೆಯೂ ಹೌದು. ಹೊರಗಿನ ಬಿಸಿಲಿಗೆ ಫ್ರಿಜ್ ಬಾಗಿಲು ತೆರೆದಾಗ ಸಿಗುವ ತಂಪು ಹಿತವೆನಿಸಿದರೂ, ಅಡುಗೆಮನೆಯೊಳಗಿನ ಪದಾರ್ಥಗಳು ಬಾಡದಂತೆ ನೋಡಿಕೊಳ್ಳುವುದು ಒಂದು ದೊಡ್ಡ ಕಲೆ. ಹಿರಿಯರು ಹೇಳುತ್ತಿದ್ದ ಒಂದು ಮಾತು ಇಂದಿಗೂ ಸತ್ಯ— “ಆಹಾರವನ್ನು ಅಡುಗೆ ಮಾಡುವುದು ಎಷ್ಟು ಮುಖ್ಯವೋ, ಅದನ್ನು ಕಾಪಾಡುವುದು ಅಷ್ಟೇ ಮುಖ್ಯ”. ಬೇಸಿಗೆಯ ಈ ದಿನಗಳಲ್ಲಿ ನಿಮ್ಮ ಅಡುಗೆಮನೆಯನ್ನು ತಾಜಾವಾಗಿಡಲು ಇಲ್ಲಿವೆ ಕೆಲವು ಸರಳ ಮತ್ತು ಪ್ರಭಾವಶಾಲಿ ಸೂತ್ರಗಳು.

ಯಾವುದನ್ನು ಎಲ್ಲಿಡಬೇಕು? – ಸರಿಯಾದ ಜಾಗದ ಆಯ್ಕೆ:

ಪ್ರತಿ ಪದಾರ್ಥಕ್ಕೂ ತನ್ನದೇ ಆದ ಸ್ವಭಾವವಿರುತ್ತದೆ. ಹಣ್ಣು, ಸೊಪ್ಪು ಮತ್ತು ಹಾಲಿನ ಪದಾರ್ಥಗಳಿಗೆ ತಂಪು ಆಶ್ರಯ ಬೇಕು, ಹಾಗಾಗಿ ಅವು ಫ್ರಿಜ್‌ಗೆ ಸೇರಲಿ. ಆದರೆ ಈರುಳ್ಳಿ, ಆಲೂಗಡ್ಡೆ, ಬೆಳ್ಳುಳ್ಳಿ ಮತ್ತು ಬಾಳೆಹಣ್ಣುಗಳಿಗೆ ಫ್ರಿಜ್‌ನ ತಂಪು ಹಿಡಿಸುವುದಿಲ್ಲ. ಅವುಗಳನ್ನು ಗಾಳಿಯಾಡುವ, ಒಣ ಜಾಗದಲ್ಲಿಟ್ಟರೆ ಮಾತ್ರ ದೀರ್ಘಕಾಲ ಬಾಳಿಕೆ ಬರುತ್ತವೆ.

ತೊಳೆಯುವುದರಲ್ಲೂ ಇರಲಿ ವಿವೇಚನೆ:

ಸಾಮಾನ್ಯವಾಗಿ ತರಕಾರಿ ತಂದೊಡನೆ ತೊಳೆದಿಡುತ್ತೇವೆ. ಆದರೆ ಬೇಸಿಗೆಯಲ್ಲಿ ತರಕಾರಿಗಳಲ್ಲಿ ತೇವಾಂಶ ಉಳಿದರೆ ಅವು ಬೇಗ ಕೊಳೆಯುವ ಸಾಧ್ಯತೆ ಹೆಚ್ಚು. ಆದ್ದರಿಂದ, ಹಣ್ಣು-ತರಕಾರಿಗಳನ್ನು ಬಳಸುವ ಮೊದಲು ತೊಳೆಯುವ ಅಭ್ಯಾಸ ರೂಢಿಸಿಕೊಳ್ಳಿ. ಒಂದು ವೇಳೆ ತೊಳೆದರೂ ಸಹ, ಅವುಗಳನ್ನು ಸಂಪೂರ್ಣವಾಗಿ ಒಣಗಿಸಿ ನಂತರ ಫ್ರಿಜ್‌ನಲ್ಲಿ ಸಂಗ್ರಹಿಸಿ.

ಮುಚ್ಚಿದ ಡಬ್ಬಿ ಬಳಸಿ:

ಅಡುಗೆಮನೆಯಲ್ಲಿ ಗಾಳಿ ಮತ್ತು ಅತಿಯಾದ ತೇವಾಂಶ ಆಹಾರದ ಶತ್ರುಗಳು. ಉಳಿದ ಅನ್ನ, ಪಲ್ಯ ಅಥವಾ ಕತ್ತರಿಸಿದ ಹಣ್ಣುಗಳನ್ನು ತೆರೆದಿಡುವುದರಿಂದ ಅವು ಬೇಗನೆ ಬ್ಯಾಕ್ಟೀರಿಯಾಗಳ ವಾಸಸ್ಥಾನವಾಗುತ್ತವೆ. ಒಂದು ಗಾಳಿಯಾಡದ (Air-tight) ಡಬ್ಬಿ ಆಹಾರದ ರುಚಿ ಮತ್ತು ತಾಜಾತನವನ್ನು ಕಾಪಾಡುವ ಸಣ್ಣ ಕೋಟೆಯಂತೆ ಕೆಲಸ ಮಾಡುತ್ತದೆ.

ಫ್ರಿಜ್ ಕೂಡ ಉಸಿರಾಡಲಿ:

ಹಾಳಾಗಬಾರದು ಎಂಬ ಆತುರದಲ್ಲಿ ಫ್ರಿಜ್ ತುಂಬಾ ಪದಾರ್ಥಗಳನ್ನು ತುರುಕಬೇಡಿ. ಫ್ರಿಜ್ ಸರಿಯಾಗಿ ತಂಪಾಗಲು ಅದರೊಳಗೆ ಗಾಳಿಯ ಸಂಚಾರ (Air circulation) ಅಗತ್ಯ. ಫ್ರಿಜ್‌ನಲ್ಲಿ ಸ್ವಲ್ಪ ಜಾಗ ಬಿಡುವುದು ಆಹಾರದ ದೀರ್ಘಕಾಲದ ರಕ್ಷಣೆಗೆ ಬಹಳ ಮುಖ್ಯ.

ಬೇಯಿಸಿದ ಆಹಾರದ ಬಗ್ಗೆ ಎಚ್ಚರವಿರಲಿ:

ಬೇಸಿಗೆಯಲ್ಲಿ ಬೆಳಿಗ್ಗೆ ಮಾಡಿದ ಅಡಿಗೆ ಮಧ್ಯಾಹ್ನದ ಹೊತ್ತಿಗೆ ಹಾಳಾಗುವ ಸಾಧ್ಯತೆ ಇರುತ್ತದೆ. ಆಹಾರ ತಯಾರಾದ ನಂತರ ಅದು ಸಾಮಾನ್ಯ ತಾಪಮಾನಕ್ಕೆ ಬಂದ ತಕ್ಷಣ ಫ್ರಿಜ್‌ನಲ್ಲಿಡುವುದು ಉತ್ತಮ. ಹೆಚ್ಚು ಹೊತ್ತು ಹೊರಗೆ ಬಿಟ್ಟರೆ ಆಹಾರದ ಗುಣಮಟ್ಟ ಹದಗೆಡುತ್ತದೆ.

ಇದನ್ನೂ ಓದಿ: Cold Water Vs Warm Water: ಬಿಸಿ ನೀರು ಅಥವಾ ತಣ್ಣೀರು; ಬೇಸಿಗೆಯಲ್ಲಿ ಕುಡಿಯಲು ಯಾವುದು ಬೆಸ್ಟ್?

ಒಣ ಪದಾರ್ಥಗಳ ರಕ್ಷಣೆ:

ಅಕ್ಕಿ, ಬೇಳೆ ಮತ್ತು ಮಸಾಲೆ ಪದಾರ್ಥಗಳಿಗೆ ಬೇಸಿಗೆಯಲ್ಲಿ ಕೀಟಗಳ ಕಾಟ ಹೆಚ್ಚು. ಅವುಗಳನ್ನು ಗಾಳಿಯಾಡದ ಡಬ್ಬಿಗಳಲ್ಲಿಡಿ. ಅಜ್ಜಿಯ ಹಳೆಯ ಪದ್ಧತಿಯಂತೆ ಬೇಳೆಕಾಳುಗಳ ಡಬ್ಬಿಗೆ ಸ್ವಲ್ಪ ಒಣಗಿದ ಬೇವು ಎಲೆ ಹಾಕಿದರೆ ಕೀಟಗಳ ಬಾಧೆಯನ್ನು ಸುಲಭವಾಗಿ ತಡೆಯಬಹುದು.

ದಿನಕ್ಕೊಮ್ಮೆ ಇಣುಕಿ ನೋಡಿ:

ಅಡುಗೆಮನೆಯ ಕಪಾಟು ಮತ್ತು ಫ್ರಿಜ್ ಅನ್ನು ದಿನಕ್ಕೊಮ್ಮೆ ಗಮನಿಸುವುದು ಒಳ್ಳೆಯ ಅಭ್ಯಾಸ. ಹಳೆಯ ಪದಾರ್ಥ ಯಾವುದು, ಹೊಸದು ಯಾವುದು ಎಂಬ ಅರಿವಿದ್ದರೆ ವ್ಯರ್ಥವಾಗುವುದನ್ನು ತಪ್ಪಿಸಬಹುದು. ಯಾವುದಾದರೂ ಹಣ್ಣು ಅಥವಾ ತರಕಾರಿ ಹಾಳಾಗಿದ್ದರೆ ಅದನ್ನು ಕೂಡಲೇ ತೆಗೆಯಿರಿ, ಇಲ್ಲದಿದ್ದರೆ ಅದು ಪಕ್ಕದಲ್ಲಿರುವ ಪದಾರ್ಥಗಳನ್ನೂ ಹಾಳು ಮಾಡುತ್ತದೆ.

ಲೇಖನ: ಡಾ. ರವಿಕಿರಣ ಪಟವರ್ಧನ, ಪಟವರ್ಧನ ಆಯುರ್ವೇದಿಕ್ ಕ್ಲಿನಿಕ್, ಶಿರಸಿ (9242122874)

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಣ್ಣೀರಿಟ್ಟ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ: ಕಾರಣ ಇಲ್ಲಿದೆ

ಹಾವೇರಿ, ಏಪ್ರಿಲ್​​ 10: ಜಿಲ್ಲಾ ಪಂಚಾಯತ್​​ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಕಣ್ಣೀರಿಟ್ಟ ಪ್ರಸಂಗ ನಡೆದಿದೆ. ಸ್ವತಂತ್ರಪೂರ್ವದಿಂದಲೂ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡು ಕೆಲವು ಗ್ರಾಮ ಇವೆ. ಅವು ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿ ಬರುತ್ತವೆ ಎಂದು ಜನರ ಮೇಲೆ FIR ದಾಖಲು ಮಾಡಿ ಜಾಗೆ ಖಾಲಿ ಮಾಡಿಸಿದ್ದಾರೆ. ಹಾವೇರಿಯ ಗುತ್ತಲ ತಾಂಡಾ, ಕರೂರು ಗ್ರಾಮ ನಿವಾಸಿಗಳನ್ನ ವಕ್ಕಲು ಎಬ್ಬಿಸಿದ್ದಾರೆ. ಸರ್ಕಾರವೇ ಮೂರು ದಶಕಗಳಿಂದ ಮನೆ ಮತ್ತು ಉಳುಮೆಗೆ ಅವಕಾಶ ಮಾಡಿದೆ. ಈಗ ಅರಣ್ಯ ಇಲಾಖೆ ಸಿಬ್ಬಂದಿ ಜಾಗ ಮೀಸಲು ಅರಣ್ಯಕ್ಕೆ ಬರುತ್ತೆ ಎಂದು ನೋಟೀಸ್ ನೀಡಿದ್ದಾರೆ. ಐದು ವರ್ಷಗಳಿಂದ ಕೇಂದ್ರ ಸರ್ಕಾರದ ಮಂತ್ರಿ ಮತ್ತು ಸಂಸದರನ್ನ ನಾನು ಭೇಟಿ ಮಾಡಿದ್ದಾನೆ. ಎಲ್ಲಿಯೋ ಎಸಿ ಕಚೇರಿಯಲ್ಲಿ ಕೂತು ಆದೇಶ ಮಾಡುತ್ತಾರೆ. ಹೀಗಾದರೆ ಸಾವಿರಾರು ಬಡವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸುತ್ತಲೇ ಅವರು ಭಾವುಕರಾಗಿದ್ದಾರೆ. ಅಲ್ಲದೆ ಈ ಸಂಬಂಧ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಆಗ್ರಹಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ವೇಗ ಅತಿವೇಗ.. ಟಿ20 ಕ್ರಿಕೆಟ್​ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಬಾಬರ್ ಆಝಂ

Source link

ಟೋಲ್ ಬೂತ್​ನಲ್ಲಿ ಇನ್ಮುಂದೆ ಕ್ಯಾಷ್ ಪೇಮೆಂಟ್​ಗೆ ಅವಕಾಶವೇ ಇಲ್ಲ; ಫಾಸ್​ಟ್ಯಾಗ್ ಕಡ್ಡಾಯ

ನವದೆಹಲಿ, ಏಪ್ರಿಲ್ 10: ಹೆದ್ದಾರಿಗಳಲ್ಲಿರುವ ಟೋಲ್ ಬೂತ್​ಗಳಲ್ಲಿ ನೂರಕ್ಕೆ ನೂರು ಫಾಸ್​ಟ್ಯಾಗ್ (FASTag) ಕಡ್ಡಾಯ ಮಾಡಲಾಗಿದೆ. ಇವತ್ತಿನಿಂದಲೇ ಡಿಜಿಟಲ್ ಟೋಲ್ ಕಲೆಕ್ಷನ್ ಸಿಸ್ಟಂ (Digital toll collection system) ಜಾರಿಯಾಗಿದೆ. ದೇಶಾದ್ಯಂತ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎಕ್ಸ್​ಪ್ರೆಸ್​ವೇಗಳಲ್ಲಿ ಇರುವ ಟೋಲ್ ಬೂತ್​ಗಳಲ್ಲಿ ಫಾಸ್​ಟ್ಯಾಗ್ ಮೂಲಕವೇ ವಾಹನಗಳು ಟೋಲ್ ಪಾವತಿಸಬೇಕು. ಫಾಸ್​ಟ್ಯಾಗ್ ಇಲ್ಲದವರು ಟೂಲ್ ಬೂತ್​ಗಳಲ್ಲಿ ಕ್ಯಾಷ್ ನೀಡಿ ಪಾವತಿಸುವ ಅವಕಾಶ ನಿನ್ನೆಯೇ ಮುಕ್ತಾಯಗೊಂಡಿದೆ.

ಫಾಸ್​ಟ್ಯಾಗ್ ಇಲ್ಲದ ವಾಹನಗಳಿಂದ ಟೋಲ್ ಬೂತ್​ಗಳಲ್ಲಿ ವಾಹನದಟ್ಟನೆ ಹೆಚ್ಚುತ್ತಿರುವುದು ಗಮನಕ್ಕೆ ಬಂದಿತ್ತು. ಟೋಲ್ ಬೂತ್​ಗಳಲ್ಲಿ ಈ ವಾಹನದಟ್ಟನೆ ಕಡಿಮೆ ಮಾಡಲು, ಕಾಯುವಿಕೆ ಅವಧಿ ಕಡಿಮೆ ಮಾಡಲು ಮತ್ತು ವಾಹನ ಸಂಚಾರವನ್ನು ಸುಗಮಗೊಳಿಸಲು ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಪೂರ್ಣ ಮಟ್ಟದಲ್ಲಿ ಡಿಜಿಟಲ್ ಟೋಲ್ ಕಲೆಕ್ಷನ್ ಸಿಸ್ಟಂ ಅನ್ನು ಅನುಷ್ಠಾನಕ್ಕೆ ತಂದಿದೆ.

ಇದನ್ನೂ ಓದಿ: AMFI data: ಮಾರ್ಚ್​ನಲ್ಲಿ ಈಕ್ವಿಟಿ ಫಂಡ್​ಗಳಿಗೆ ಹೂಡಿಕೆ ಸುಗ್ಗಿ; ಶೇ. 55ರಷ್ಟು ಹೆಚ್ಚಿದ ಒಳಹರಿವು

ಫಾಸ್​ಟ್ಯಾಗ್ ಕೆಲಸ ಮಾಡದಿದ್ದಾಗ?

ಎಲ್ಲಾ ವಾಹನಗಳಿಗೂ ಫಾಸ್​ಟ್ಯಾಗ್ ಅಳವಡಿಸಿಕೊಳ್ಳಬೇಕಾಗುತ್ತದೆ. ಫಾಸ್​ಟ್ಯಾಗ್ ಅಳವಡಿಕೆ ಆಗಿದ್ದೂ ಅದು ಸಕ್ರಿಯವಾಗಿಲ್ಲದಿದ್ದರೆ ಆಟೊಮ್ಯಾಟಿಕ್ ಟೋಲ್ ಕಲೆಕ್ಷನ್ ಆಗುವುದಿಲ್ಲ. ಇಂಥ ಸಂದರ್ಭದಲ್ಲಿ ವಾಹನ ಸವಾರರು ಕ್ಯಾಷ್ ಮೂಲಕ ಟೋಲ್ ಪೇಮೆಂಟ್ ಮಾಡುತ್ತಿದ್ದರು? ಈಗ ಕ್ಯಾಷ್ ಪೇಮೆಂಟ್​ಗೆ ಅವಕಾಶ ಇಲ್ಲದಿರುವಾಗ ಏನು ಮಾಡಬೇಕು? ಆಗ ಕ್ಯಾಷ್ ಬದಲು ಯುಪಿಐ ಅಥವಾ ಇತರ ಡಿಜಿಟಲ್ ವಿಧಾನಗಳಿಂದ ಟೋಲ್ ಪೇಮೆಂಟ್ ಮಾಡಬಹುದು. ಇದಕ್ಕೆ ಹೆಚ್ಚಿನ ಟೋಲ್ ವಿಧಿಸಲಾಗುತ್ತದೆ. ಶೇ. 125ರಷ್ಟು ಟೋಲ್ ಕಟ್ಟಬೇಕಾಗುತ್ತದೆ. ಅಂದರೆ, 100 ರೂ ಇರುವ ಟೋಲ್​ಗೆ 125 ರೂ ಪಾವತಿಸಬೇಕಾಗುತ್ತದೆ.

ಟೋಲ್ ಬೂತ್​ಗಳಲ್ಲಿ ವಿನಾಯಿತಿ; ನಿಯಮಗಳೀಗ ಕಠಿಣ

ಟೋಲ್ ಬೂತ್​ಗಳಲ್ಲಿ ವಿವಿಧ ಅಧಿಕಾರಿಗಳು ಮತ್ತು ರಾಜಕಾರಣಿಗಳ ಹೆಸರು ಹೇಳಿಕೊಂಡು ಬಹಳ ಜನರು ಟೋಲ್ ಕಟ್ಟುವುದಿಲ್ಲ. ಸಾಕಷ್ಟು ಕಡೆ ಮಾರಾಮಾರಿಯೇ ಆಗಿ ಹೋಗಿ ಸಾವುನೋವುಗಳು ಸಂಭವಿಸಿರುವುದಿದೆ. ಇದನ್ನು ತಪ್ಪಿಸಲು ಈಗ ಸರ್ಕಾರ ಬಿಗಿ ನಿಯಮ ತಂದಿದೆ. ಯಾವುದೇ ವ್ಯಕ್ತಿಗಳಿಗೆ ಟೋಲ್ ಎಕ್ಸೆಂಪ್ಷನ್ ಸಿಗುವುದಿಲ್ಲ. ನಿರ್ದಿಷ್ಟಪಡಿಸಿದ ವಾಹನಗಳಿಗೆ ಮಾತ್ರವೇ ಈ ವಿನಾಯಿತಿ ಕೊಡಲಾಗುತ್ತದೆ.

ಇದನ್ನೂ ಓದಿ: ಎಡಿಬಿ ವರದಿ: ಭಾರತದ ಜಿಡಿಪಿ ಬೆಳವಣಿಗೆ 2025ರಲ್ಲಿ ಶೇ. 6.9, 2027ರಲ್ಲಿ ಶೇ. 7.3 ಅಂದಾಜು

ಫಾಸ್​ಟ್ಯಾಗ್ ವಾರ್ಷಿಕ ಪಾಸ್

ಹೆದ್ದಾರಿಗಳನ್ನು ಸಾಕಷ್ಟು ಬಳಸುವವರಿಗೆ, ಅಂದರೆ ನಿಯಮಿತವಾಗಿ ಹೆದ್ದಾರಿ ಬಳಸುವವರಿಗೆ ಫಾಸ್​ಟ್ಯಾಗ್ ವಾರ್ಷಿಕ ಪಾಸ್ ಅನುಕೂಲವಾಗಲಿದೆ. ಖಾಸಗಿ ಕಾರುಗಳಿಗೆ ಈ ವಾರ್ಷಿಕ ಪಾಸ್ ನೀಡಲಾಗುತ್ತದೆ. ವರ್ಷದಲ್ಲಿ 200 ಟೋಲ್ ಕ್ರಾಸಿಂಗ್ ಮಾಡಬಹುದು. ಈ ಪಾಸ್ ಬೆಲೆ 3,000 ರೂ ಇದ್ದದ್ದು 3,075ಕ್ಕೆ ಏರಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಿಹಾರ ವಿಧಾನಸಭೆಗೆ ಬಾಂಬ್ ಬೆದರಿಕೆ; ತೀವ್ರ ಶೋಧ ಕಾರ್ಯಾಚರಣೆ ಆರಂಭ

ಪಾಟ್ನಾ, ಏಪ್ರಿಲ್ 10: ಬಿಹಾರ ವಿಧಾನಸಭೆಗೆ (Bihar Assembly) ಇಂದು ಇಮೇಲ್ ಮೂಲಕ ಬಾಂಬ್ ಬೆದರಿಕೆ (Bomb Threat) ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 2 ದಿನಗಳ ಹಿಂದಷ್ಟೇ ದೆಹಲಿ ವಿಧಾನಸಭೆ ಆವರಣದೊಳಗೆ ಕಾರಿನಲ್ಲಿ ನುಗ್ಗಿದ್ದ ವ್ಯಕ್ತಿಯೊಬ್ಬ ಸ್ಪೀಕರ್ ಕಚೇರಿ ಬಳಿ ಹೂವಿನ ಬೊಕ್ಕೆ ಇಟ್ಟು ಹೋಗಿದ್ದ. ಆತನನ್ನು ಬಂಧಿಸಲಾಗಿತ್ತು. ದೆಹಲಿ ವಿಧಾನಸಭೆಗೂ ಬಾಂಬ್ ಬೆದರಿಕೆ ಬಂದಿತ್ತು. ಅದರ ಬೆನ್ನಲ್ಲೇ ಇದೀಗ ಬಿಹಾರ ವಿಧಾನಸಭೆಗೂ ಬಾಂಬ್ ಬೆದರಿಕೆ ಬಂದಿರುವುದರಿಂದ ಶೋಧ ಕಾರ್ಯಾಚರಣೆ ತೀವ್ರವಾಗಿ ನಡೆದಿದೆ.

“ಬಿಹಾರ ವಿಧಾನಸಭೆ ಅಧಿಕಾರಿಗಳಿಗೆ ಬಾಂಬ್ ಬೆದರಿಕೆ ಇರುವ ಇಮೇಲ್ ಬಂದಿದೆ ಎಂದು ನಮಗೆ ಮಾಹಿತಿ ಬಂದಿದೆ. ಪೊಲೀಸರು ಆವರಣವನ್ನು ಸಂಪೂರ್ಣವಾಗಿ ಪರಿಶೀಲಿಸುತ್ತಿದ್ದಾರೆ” ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮಣಿಪುರದಲ್ಲಿ ಮನೆ ಮೇಲೆ ಬಾಂಬ್ ದಾಳಿ, ಇಬ್ಬರು ಮಕ್ಕಳು ಸಾವು

ಬಾಂಬ್ ಮತ್ತು ಶ್ವಾನ ದಳದ ತಂಡಗಳನ್ನು ನಿಯೋಜಿಸಲಾಗಿದ್ದು, ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಮಾರ್ಚ್ 13ರಂದು ಕೂಡ ವಿಧಾನಸಭೆಗೆ ಇದೇ ರೀತಿಯ ಬೆದರಿಕೆ ಬಂದಿತ್ತು. ಆದರೆ ಅದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದುಬಂದಿತ್ತು. ಗುರುವಾರ ದೆಹಲಿ ವಿಧಾನಸಭೆಗೆ ಕೂಡ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಲಾಗಿತ್ತು. ದೆಹಲಿ ವಿಧಾನಸಭೆಗೆ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಲಾಗಿದ್ದು, ಪ್ರಮುಖ ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ವಹಿಸಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೆವಿಎನ್ ಬೆಂಬಲಕ್ಕೆ ನಿಂತ ಚಿರಂಜೀವಿ; ದೊಡ್ಡ ಕರೆಕೊಟ್ಟ ನಟ

ದಳಪತಿ ವಿಜಯ್ ಅವರ ‘ಜನ ನಾಯಗನ್’ (Jana Nayagan) ಸಿನಿಮಾಗೆ ತೊಂದರೆ ಮೇಲೆ ತೊಂದರೆ ಎದುರಾಗುತ್ತಿದೆ. ಮೊದಲು ಸಿನಿಮಾ ರಿಲೀಸ್ ವಿಳಂಬ ಆಯಿತು. ಆ ಬಳಿಕ ತಂಡದವರು ಕೋರ್ಟ್​​ಗೆ ಹೋದರೂ ಯಾವುದೇ ಪ್ರಯೋಜನ ಆಗಿಲ್ಲ. ಈಗ ಪುನರ್ ವಿಮರ್ಶೆ ಸಮಿತಿಗೆ ಸಿನಿಮಾನ ಸಲ್ಲಿಕೆ ಮಾಡಲಾಗಿದ್ದು, ಅಲ್ಲಿ ಇನ್ನಷ್ಟೇ ವೀಕ್ಷಿಸಬೇಕಿದೆ. ಹೀಗಿರುವಾಗಲೇ ಚಿತ್ರದ ಪ್ರಮುಖ ದೃಶ್ಯಗಳು ಲೀಕ್ ಆಗಿದೆ. ಕೆಲವು ವರದಿ ಪ್ರಕಾರ ಇಡೀ ಚಿತ್ರವೇ ಲೀಕ್ ಆಗಿದೆ ಎಂದು ಕೂಡ ಹೇಳಲಾಗುತ್ತಿದೆ. ಈ ಬಗ್ಗೆ ಚಿರಂಜೀವಿ ಅವರು ಆತಂಕ ಹೊರಹಾಕಿದ್ದಾರೆ. ಅಲ್ಲದೆ, ಕೆವಿಎನ್​​ಗೆ ಬೆಂಬಲ ಕೊಟ್ಟಿದ್ದಾರೆ.

ಚಿರಂಜೀವಿ ಅವರು ಚಿತ್ರರಂಗದ ಆಗು ಹೋಗುಗಳ ಬಗ್ಗೆ ಮಾತನಾಡುತ್ತಾರೆ.ಅವರು ಸದಾ ಚಿತ್ರರಂಗದ ಪರವಾಗಿ ನಿಲ್ಲುತ್ತಾ ಬಂದಿದ್ದಾರೆ. ಈಗ ಅವರು ಜನ ನಾಯಗನ್ ಸಿನಿಮಾ ಪರವಾಗಿ ಮಾತನಾಡಿದ್ದಾರೆ. ಈ ರೀತಿಯ ಅನ್ಯಾಯ ಯಾರಿಗೂ ಆಗಬಾರದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಡುಗಡೆಗೂ ಮುನ್ನವೇ ‘ಜನ ನಾಯಗನ್’ ದೃಶ್ಯ ಲೀಕ್: ದಳಪತಿ ವಿಜಯ್ ಸಿನಿಮಾಗೆ ಸಂಕಷ್ಟ 

‘ಜನನಾಯಗನ್ ಸೋರಿಕೆ ಆಗಿದ್ದು ತುಂಬಾನೇ ಕಳವಳಕಾರಿ ವಿಷಯ. ಸಿನಿಮಾ ಎಂಬುದು ನಂಬಿಕೆ, ಪ್ರಯತ್ನ ಮತ್ತು ಅನೇಕರ ಕನಸಿನಿಂದ ಮಾಡಲ್ಪಟ್ಟಿದೆ. ಇಂತಹ ಘಟನೆಗಳು ಉದ್ಯಮದಲ್ಲಿರುವ ನಮ್ಮೆಲ್ಲರ ಮೇಲೆ ಪರಿಣಾಮ ಬೀರುತ್ತವೆ. ಸಿನಿಮಾಗೆ ಆದ ಹಾನಿಯನ್ನು ತಡೆಗಟ್ಟುವಲ್ಲಿ ಮತ್ತು ಅಪರಾಧಿಗಳನ್ನು ಶಿಕ್ಷಿಸುವಲ್ಲಿ ನಾವು ಕೆವಿಎನ್ ಪ್ರೊಡಕ್ಷನ್ಸ್ ಜೊತೆಗಿದ್ದೇವೆ. ಸಿನಿಮಾವನ್ನು ಗೌರವಿಸಲು ಮತ್ತು ರಕ್ಷಿಸಲು ನಾವೆಲ್ಲರೂ ನಮ್ಮ ಬೆಂಬಲವನ್ನು ನೀಡೋಣ. ಪೈರಸಿಯನ್ನು ನಾಶ ಮಾಡಿ, ಸಿನಿಮಾ ಉಳಿಸಿ’ ಎಂದು ಕರೆ ಕೊಟ್ಟಿದ್ದಾರೆ.

ಸಿನಿಮಾ ಲೀಕ್ ಪ್ರಕರಣ ಇಡೀ ಚಿತ್ರತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ವಿಚಾರವಾಗಿ ಚಿತ್ರತಂಡ ಕಾನೂನು ಹೋರಾಟಕ್ಕೆ ಮುಂದಾಗುತ್ತಿದೆ. ಸಿನಿಮಾದ ದೃಶ್ಯಗಳನ್ನ ಶೇರ್ ಮತ್ತು ಡೌನ್ಲೋಡ್ ಮಾಡಿದರೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೊನಾಲಿಸಾ ವಯಸ್ಸು ಕೇವಲ 16: ಗಂಡ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕೇಸ್

ಕುಂಭಮೇಳದ ಸಮಯದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಭಾರಿ ವೈರಲ್ ಆಗಿದ್ದ ಮೊನಾಲಿಸಾ ಭೋಸ್ಲೆ (Monalisa Bhosale) ಅವರ ವಿವಾಹ ಪ್ರಕರಣ ಈಗ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ನಡೆಸಿದ ತನಿಖೆಯಲ್ಲಿ, ಮದುವೆಯ ವೇಳೆ ಮೊನಾಲಿಸಾ ಅಪ್ರಾಪ್ತ ಬಾಲಕಿ ಆಗಿದ್ದಳು ಎಂಬ ಆಘಾತಕಾರಿ ಸತ್ಯ ಬಹಿರಂಗವಾಗಿದೆ. ಇದರಿಂದಾಗಿ ಗಂಡ ಫರ್ಮಾನ್ ಖಾನ್ (Farman Khan)​ ಕಾನೂನಿನ ಸಂಕಷ್ಟ ಎದುರಿಸಬೇಕಾಗಿದೆ. ಅಪ್ರಾಪ್ತ ಬಾಲಕಿಯನ್ನು ಮದುವೆ ಮಾಡಿಕೊಂಡಿದ್ದಕ್ಕಾಗಿ ಫರ್ಮಾನ್ ಖಾನ್ ಮೇಲೆ ಪೋಕ್ಸೋ (POCSO) ಕೇಸ್ ದಾಖಲಾಗಿದೆ.

ಮಾರ್ಚ್ 11ರಂದು ಕೇರಳದ ತಿರುವನಂತಪುರದ ಅರುಮನೂರು ನೈನಾರ್ ದೇವಾಲಯದಲ್ಲಿ ಉತ್ತರ ಪ್ರದೇಶ ಮೂಲದ ಫರ್ಮಾನ್ ಖಾನ್ ಜೊತೆ ಮೊನಾಲಿಸಾ ವಿವಾಹ ನಡೆದಿತ್ತು. ಈ ಮದುವೆಯ ನೋಂದಣಿಗಾಗಿ ಸಲ್ಲಿಸಲಾಗಿದ್ದ ಆಧಾರ್ ಕಾರ್ಡ್‌ನಲ್ಲಿ ಆಕೆಗೆ 18 ವರ್ಷ ಎಂದು ನಮೂದಿಸಲಾಗಿತ್ತು. ಆದರೆ, ಮಧ್ಯಪ್ರದೇಶದ ಮಹೇಶ್ವರದಲ್ಲಿರುವ ಸರ್ಕಾರಿ ಆಸ್ಪತ್ರೆಯ ದಾಖಲೆಗಳನ್ನು ಪರಿಶೀಲಿಸಿದಾಗ, ಮೊನಾಲಿಸಾ 2009ರ ಡಿಸೆಂಬರ್ 30ರಂದು ಜನಿಸಿರುವುದು ದೃಢಪಟ್ಟಿದೆ. ಇದರರ್ಥ ಮದುವೆಯ ಸಮಯದಲ್ಲಿ ಆಕೆಗೆ ಕೇವಲ 16 ವರ್ಷ 2 ತಿಂಗಳು ವಯಸ್ಸಾಗಿತ್ತು.

ಆಕೆ ಅಪ್ರಾಪ್ತ ವಯಸ್ಕಳು ಎಂಬುದು ಸಾಬೀತಾದ ಬೆನ್ನಲ್ಲೇ, ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕಾಯ್ದೆ ಹಾಗೂ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮದುವೆಗಾಗಿ ನಕಲಿ ದಾಖಲೆಗಳನ್ನು ನೀಡಿದ ಆರೋಪದ ಮೇಲೆ ಕೇರಳದ ಸ್ಥಳೀಯ ಅಧಿಕಾರಿಗಳಿಗೂ ಆಯೋಗವು ಸಮನ್ಸ್ ನೀಡಿದೆ.

ಮೊನಾಲಿಸಾಳನ್ನು ಬಲವಂತವಾಗಿ ಮತಾಂತರಿಸಿ ಮದುವೆ ಮಾಡಲಾಗಿದೆ ಎಂದು ಆಕೆಯ ತಂದೆ ಜೈ ಸಿಂಗ್ ಭೋಸ್ಲೆ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಥಮ್ ದುಬೆ ಅವರು ಆಯೋಗಕ್ಕೆ ದೂರು ನೀಡಿದ್ದರು. ಆ ಬಳಿಕ ತನಿಖೆ ಆರಂಭಿಸಲಾಗಿತ್ತು. ಈಗ ತನಿಖೆಯ ವಿವರಗಳು ಲಭ್ಯವಾಗಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಇದನ್ನು ಲವ್ ಜಿಹಾದ್ ಎಂದು ನಿರ್ದೇಶಕ ಸನೋಜ್ ಮಿಶ್ರಾ ಆರೋಪಿಸಿದ್ದಾರೆ.

ಇದನ್ನೂ ಓದಿ: ಮೊನಾಲಿಸಾ ಭೋಸ್ಲೆ ಇಸ್ಲಾಂ ಧರ್ಮಕ್ಕೆ ಮತಾಂತರ ಆಗ್ತಾರಾ? ಪತಿ ಫರ್ಮಾನ್ ಖಾನ್ ಸ್ಪಷ್ಟನೆ

ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಮಧ್ಯಪ್ರದೇಶ ಮತ್ತು ಕೇರಳದ ಪೊಲೀಸ್ ಮಹಾನಿರ್ದೇಶಕರಿಗೆ ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಿದೆ. ಮದುವೆ ನಡೆದ ರೀತಿಗೆ ಹಾಗೂ ನಕಲಿ ದಾಖಲೆಗಳ ಬಳಕೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಣೆಗೆ ಕರೆಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜೋಂಬಿ ಡ್ರಗ್ಸ್ ಕೇಸ್​​: ವಿಡಿಯೋ ಹಂಚಿಕೊಂಡ ನಟ ಸೇರಿ ಹಲವರಿಗೆ ಸಂಕಷ್ಟ

ಬೆಂಗಳೂರು, ಏಪ್ರಿಲ್​ 10: ಬೆಂಗಳೂರಿನಲ್ಲಿ ವೈರಲ್​ ಜೋಂಬಿ ಡ್ರಗ್ಸ್ (Zombie Drugs Rumours) ಕೇಸ್​​ ಬೆನ್ನತ್ತಿದ್ದ ಪೊಲೀಸರು ತನಿಖೆ ನಡೆಸಿ ಜೋಂಬಿ ಡ್ರಗ್ಸ್ ಎನ್ನುವುದೇ ಇಲ್ಲಾ ಎಂಬ ಅಸಲಿ ಸತ್ಯವನ್ನು ಹೊರಗೆಳೆದಿದ್ದಾರೆ. ಅಷ್ಟೇ ಅಲ್ಲದೆ ವಿಡಿಯೋ ವೈರಲ್​ ಮಾಡಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಸದ್ಯ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್​​ ಕೂಡ ಮಾತನಾಡಿದ್ದಾರೆ. ಇನ್ನು ಈ ಕುರಿತಾಗಿ ವಿಡಿಯೋ ಹಂಚಿಕೊಂಡಿದ್ದ ದೊಡ್ಡ ದೊಡ್ಡ ವ್ಯಕ್ತಿಗಳಿಂದ ಹಿಡಿದು ಎಲ್ಲರಿಗೂ ಇದೀಗ ಪೊಲೀಸರಿಂದ ನೋಟಿಸ್ (Notice) ಜಾರಿ ಮಾಡಲಾಗಿದ್ದು, ಸಂಕಷ್ಟ ಎದುರಾಗಿದೆ.

ನಟ ದುನಿಯಾ ವಿಜಯ್ ಸೇರಿ ಹಲವರಿಗೆ ನೋಟಿಸ್

ಜೋಂಬಿ ಡ್ರಗ್ಸ್ ಎಂದು ವಿಡಿಯೋ ಮಾಡಿ ವೈರಲ್​ ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ವಿಡಿಯೋ ಹಂಚಿಕೊಂಡ ಎಲ್ಲರಿಗೂ ಇದೀಗ ಪೊಲೀಸರಿಂದ ನೋಟಿಸ್ ನೀಡಲಾಗಿದೆ. ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಪ್ರತಿಕ್ರಿಯಿಸಿದ್ದು, ನಟ ದುನಿಯಾ ವಿಜಯ್ ಸೇರಿ ಹಲವರಿಗೆ ಈಗಾಗಲೇ ನೋಟಿಸ್​ ಜಾರಿ ಮಾಡಲಾಗಿದ್ದು, 25ಕ್ಕೂ ಹೆಚ್ಚು ಜನರಿಗೆ ನೋಟಿಸ್ ನೀಡಲಿದ್ದೇವೆ. ನಿವೃತ್ತ ಪೊಲೀಸ್ ಆಯುಕ್ತ ಭಾಸ್ಕರ್​​ ರಾವ್​ಗೂ ನೋಟಿಸ್ ನೀಡುವ ಸಾಧ್ಯತೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು ವೈರಲ್​ ಜೋಂಬಿ ಡ್ರಗ್ಸ್ ಕೇಸ್; ಪೊಲೀಸ್​​ ತನಿಖೆಯಲ್ಲಿ ಅಸಲಿಯತ್ತು ಬಯಲು

ಈಗಾಗಲೇ ಜೋಂಬಿ ಡ್ರಗ್ಸ್ ವಿಚಾರವಾಗಿ ಸ್ಪಷ್ಟನೆ ಕೊಟ್ಟಿದ್ದೇವೆ. ವ್ಯಕ್ತಿ ಜೋಂಬಿ ಡ್ರಗ್ಸ್ ಸೇವಿಸಿರೋದು ಪತ್ತೆಯಾಗಿಲ್ಲ. ಆತನಿಗೆ ಮೆಡಿಕಲ್ ಟೆಸ್ಟ್ ಸಹ ಮಾಡಿಸಲಾಗಿದೆ. ವಿಡಿಯೋ ಅಪ್ಲೋಡ್ ಮಾಡಿದ್ದ ಆರೋಪಿ ಹೇಮಂತ್​ನನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದು, ವಿಚಾರಣೆ ಮಾಡಲಾಗುತ್ತಿದೆ. ಈಗ ಆತ ಕ್ಷಮೆ ಕೇಳಿ ವಿಡಿಯೋ ಮಾಡಿದ್ದಾನೆ ಎಂದರು.

ಇನ್ನು ಈ ವಿಡಿಯೋ ಯಾರೆಲ್ಲಾ ಶೇರ್ ಮಾಡಿದ್ದಾರೋ ಅವರಿಗೆ ನೋಟಿಸ್ ಕೊಡುತ್ತೇವೆ. ಮೆಡಿಕಲ್ ರಿಪೋರ್ಟ್ ಆಧಾರದ ಮೇಲೆ ಕಾಮೆಂಟ್ ಮಾಡಬೇಕು. ಒಬ್ಬರ ಬಗ್ಗೆ ಅಪಪ್ರಚಾರ ಮಾಡುವ ಕೆಲಸ ಆಗಬಾರದು. ಊಹೆ ಮಾಡಿಕೊಂಡು ಪೋಸ್ಟ್ ಮಾಡುವುದು, ಆಧಾರ ರಹಿತ ಆರೋಪ ಮಾಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ‘ಝೋಂಬಿ ಡ್ರಗ್ಸ್​ ಎನ್ನುವುದು ಏನೂ ಇಲ್ಲ’: ಗೃಹ ಸಚಿವ ಪರಮೇಶ್ವರ್

ಜೋಂಬಿ ಡ್ರಗ್ಸ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿದ್ದ ಆತಂಕ ನಿವಾರಣೆಯಾಗಿದೆ. ಜೊತೆಗೆ ಸ್ಪಷ್ಟತೆ ಇಲ್ಲದೇ ಸುಮ್ ಸುಮ್ನೆ, ಸುಳ್ಳು ಸುದ್ದಿ, ವಿಡಿಯೋ ವೈರಲ್ ಮಾಡುವವರಿಗೆ ಬೆಂಗಳೂರು ಪೊಲೀಸರು ಪಾಠ ಕಲಿಸಿದ್ದಾರೆ. ಇದು ಎಲ್ಲರಿಗೂ ಒಂದು ಎಚ್ಚರಿಕೆಯ ಘಂಟೆ ಎಂದು ಹೇಳಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಕುಮಾರಸ್ವಾಮಿ ಅಚ್ಚರಿ ಮಾತು

ಬೆಂಗಳೂರು, (ಏಪ್ರಿಲ್ 10): ಜೆಡಿಎಸ್ (JDS) ಯುವಕ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರಿಗೆ ಕ್ಷೇತ್ರದ್ದೇ ದೊಡ್ಡ ತಲೆನೋವಾಗಿದೆ. ಕೇವಲ ನಿಖಿಲ್ ಕುಮಾರಸ್ವಾಮಿಗೆ ಮಾತ್ರವಲ್ಲ ಅಭಿಮಾನಿಗಳು ಹಾಗೂ ಕಾರ್ಯಕರ್ತರಲ್ಲೂ ಕ್ಷೇತ್ರದ ಗೊಂದಲ ಸೃಷ್ಟಿಸಿದೆ. ಯಾಕಂದ್ರೆ ಮಂಡ್ಯ ಲೋಕಸಭೆಯಲ್ಲಿ ಸೋತರು. ರಾಮನಗರ ವಿಧಾನಸಭೆ ಹಾಗೂ ಚನ್ನಪಟ್ಟಣ ಉಪಚುನಾವಣೆಯಲ್ಲೂ ಸಹ ನಿಖಿಲ್ ಪರಾಭವಗೊಂಡಿದ್ದಾರೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೆನ್ನುವುದೇ ನಿಖಿಲ್​​ ಅವರನ್ನ ಗೊಂದಲಕ್ಕೀಡು ಮಾಡಿದೆ.

ಇನ್ನು ಈ ಬಗ್ಗೆ ಬೆಂಗಳೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ನಿಖಿಲ್ ಕುಮಾರಸ್ವಾಮಿ, ನನ್ನ ಸ್ಪರ್ಧೆ ಎಲ್ಲಿ ಎನ್ನುವುದನ್ನು ಅವತ್ತಿನ ಸಂದರ್ಭದಲ್ಲಿ ತೀರ್ಮಾನಿಸೋಣ. ಹೆಚ್​.ಡಿ.ಕುಮಾರಸ್ವಾಮಿ ನಾಯಕತ್ವದಲ್ಲೇ ಮತ ಕೇಳುತ್ತೇವೆ. ನನ್ನ ಹಣೆಬರಹ ಎಲ್ಲಿದೆ, ಜನ ಎಲ್ಲಿ ಗೆಲ್ಲಿಸ್ತಾರೋ ನೋಡೋಣ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ: ಇಲ್ಲಿ ಮಹಿಳೆಯರಿಗೆ ರಕ್ಷಣೆಯಿಲ್ಲವೇ?

ಜೈಪುರ, ಏ.10: ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಮಹಿಳೆಯರ ಸುರಕ್ಷತೆಯನ್ನು ಅಣಕಿಸುವಂತಹ ಘಟನೆಯೊಂದು ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಸಂಚಲನ ಮೂಡಿಸಿದೆ. ಚಲಿಸುವ ರಸ್ತೆಯಲ್ಲೇ ಯುವತಿಯೊಬ್ಬರ ಜೊತೆ ದುಷ್ಕರ್ಮಿಗಳು ಅಸಭ್ಯವಾಗಿ ವರ್ತಿಸಿರುವ ದೃಶ್ಯಗಳು ಹರಿದಾಡುತ್ತಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ, ಬ್ಯುಸಿ ರಸ್ತೆಯಲ್ಲೇ ಯುವತಿಗೆ ಕೆಲವರು ಕಿರುಕುಳ ನೀಡುತ್ತಿರುವುದು ಕಂಡುಬಂದಿದೆ. ಈ ಘಟನೆಯು ಕೇವಲ ಮಹಿಳೆಯರ ಸುರಕ್ಷತೆಯ ಪ್ರಶ್ನೆಯನ್ನಷ್ಟೇ ಅಲ್ಲದೆ, ಅಂತಹ ಸಮಯದಲ್ಲಿ ನೆರವಿಗೆ ಬಾರದ ಜನರ ಮನಸ್ಥಿತಿಯನ್ನೂ ಪ್ರಶ್ನಿಸುವಂತೆ ಮಾಡಿದೆ. ಸಾರ್ವಜನಿಕ ಸ್ಥಳದಲ್ಲಿ ಇಂತಹ ದುಸ್ಸಾಹಸ ನಡೆಯುತ್ತಿದ್ದರೂ ಕಾನೂನು ಸುವ್ಯವಸ್ಥೆ ಎಲ್ಲಿಗೆ ತಲುಪಿದೆ ಎಂಬುದು ಜನಸಾಮಾನ್ಯರ ಆತಂಕಕ್ಕೆ ಕಾರಣವಾಗಿದೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ. ಆದರೆ, ಜೈಪುರದಂತಹ ಪ್ರಮುಖ ನಗರದಲ್ಲಿ ಇಂತಹ ಘಟನೆಗಳು ಮಹಿಳೆಯರಲ್ಲಿ ಭಯದ ವಾತಾವರಣ ನಿರ್ಮಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು “ಪಿಂಕ್ ಸಿಟಿ ಈಗ ಮಹಿಳೆಯರಿಗೆ ಸುರಕ್ಷಿತವಲ್ಲವೇ?” ಎಂದು ಪ್ರಶ್ನಿಸುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

 

 

 

Source link