ಬೆಂಗಳೂರು, ಮಾರ್ಚ್ 29: ರಾಜ್ಯದ ಹಲವೆಡೆ ಕಳೆದ ಮೂರು-ನಾಲ್ಕು ದಿನಗಳಿಂದ ಗುಡುಗು ಸಹಿತ ಮಳೆಯಾಗಿದೆ. ಇಂದೂ ಸಹ ಹಲವೆಡೆ ಮಳೆಯಾಗುವ (Weather Forecast) ಸೂಚನೆಯಿದ್ದು, ಹವಾಮಾನ ಇಲಾಖೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಕೆಲ ಭಾಗಗಳಲ್ಲಿ ಒಣ ಹವೆಯ ವಾತಾವರಣವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಯಾವೆಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್?
ಕಲಬುರ್ಗಿ, ವಿಜಯಪುರ, ಗದಗ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಹಾವೇರಿ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದ್ದರಿಂದ ಈ 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಸೂಚಿಸಲಾಗಿದೆ.
ಎಲ್ಲೆಲ್ಲಿ ಒಣ ಹವೆ?
ದಕ್ಷಿಣ ಕನ್ನಡ ಸೇರಿದಂತೆ ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೀದರ್, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಒಣ ಹವೆಯಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.
ಐಪಿಎಲ್ ಸೀಸನ್-19 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಭಾರಂಭ ಮಾಡಿದೆ. ಈ ಶುಭಾರಂಭಕ್ಕೆ ಮುಖ್ಯ ಕಾರಣ ಆರ್ಸಿಬಿ ತಂಡದ ನೂತನ ವೇಗಿ ಜೇಕಬ್ ಡಫಿ ಎಂದರೆ ತಪ್ಪಾಗಲಾರದು. ಏಕೆಂದರೆ ಈ ಮ್ಯಾಚ್ನಲ್ಲಿ ಕರಾರುವಾಕ್ ದಾಳಿ ಸಂಘಟಿಸಿದ ಡಫಿ 4 ಓವರ್ಗಳಲ್ಲಿ ನೀಡಿದ್ದು ಕೇವಲ 22 ರನ್ಗಳು ಮಾತ್ರ.
ಅಷ್ಟೇ ಅಲ್ಲದೆ ಪಂದ್ಯದ ಆರಂಭದಲ್ಲೇ ಡೇಂಜರಸ್ ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಅವರ ವಿಕೆಟ್ ಕಬಳಿಸುವ ಮೂಲಕ ಆರ್ಸಿಬಿ ತಂಡಕ್ಕೆ ಅತ್ಯುತ್ತಮ ಆರಂಭ ಒದಗಿಸಿದ್ದರು. ಈ ಭರ್ಜರಿ ಆರಂಭದೊಂದಿಗೆ ಡಫಿ ವಿಶೇಷ ದಾಖಲೆಯನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.
ಈ ಪಂದ್ಯದಲ್ಲಿ 4 ಓವರ್ಗಳನ್ನು ಎಸೆದಿದ್ದ ಜೇಕಬ್ ಡಫಿ 13 ಡಾಟ್ ಬಾಲ್ ಮಾಡಿದ್ದರು. ಅಂದರೆ 24 ಎಸೆತಗಳಲ್ಲಿ ಡಫಿ 11 ಬಾಲ್ಗಳಲ್ಲಿ ಮಾತ್ರ ರನ್ ನೀಡಿದ್ದರು. ಇನ್ನುಳಿದ 13 ಬಾಲ್ಗಳನ್ನು ಡಾಟ್ ಮಾಡುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಪಾದಾರ್ಪಣೆ ಪಂದ್ಯದಲ್ಲೇ ಅತ್ಯಧಿಕ ಡಾಟ್ ಬಾಲ್ ಎಸೆದ ಬೌಲರ್ ಎನಿಸಿಕೊಂಡಿದ್ದಾರೆ.
ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ನ ಚೊಚ್ಚಲ ಪಂದ್ಯದಲ್ಲೇ ಹೊಸ ಇತಿಹಾಸ ನಿರ್ಮಿಸುವಲ್ಲಿ ನ್ಯೂಝಿಲೆಂಡ್ನ ಜೇಕಬ್ ಡಫಿ ಯಶಸ್ವಿಯಾಗಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡವು 20 ಓವರ್ಗಳಲ್ಲಿ 201 ರನ್ ಕಲೆಹಾಕಿದ್ದರು. ಈ ಕಠಿಣ ಗುರಿಯನ್ನು ಆರ್ಸಿಬಿ ತಂಡ ಕೇವಲ 15.4 ಓವರ್ಗಳಲ್ಲಿ ಚೇಸ್ ಮಾಡಿ 6 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಯಲ್ಲಾಗಿಯೇ ಐಪಿಎಲ್ ಅಭಿಯಾನ ಆರಂಭಿಸಿದ್ದಾರೆ.
ದೇವನಹಳ್ಳಿ, ಮಾರ್ಚ್ 29: ಯೂಟರ್ನ್ ಪಡೆಯುತ್ತಿದ್ದ ಟ್ರಕ್ಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡ ಘಟನೆ ಹೊಸಕೋಟೆ-ಕೋಲಾರ ಹೆದ್ದಾರಿಯ ಹಲಸಹಳ್ಳಿ ಗೇಟ್ ಬಳಿ ನಡೆದಿದೆ. ಡಿಕ್ಕಿಯ ರಬಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಸಂಪೂರ್ಣ ಕಾರು ಹಾಗೂ ಟ್ರಕ್ನ ಸ್ವಲ್ಪ ಭಾಗ ಸುಟ್ಟು ಕರಕಲಾಗಿದೆ. ಅಪಘಾತದ ಬಳಿಕ ಕಾರಿನಲ್ಲಿ ಸಿಲುಕಿದ್ದ ಚಾಲಕನನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸಿದ್ದು, ಅಪಘಾತವಾಗ್ತಿದ್ದಂತೆ ಟ್ರಕ್ ಚಾಲಕ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಸ್ಥಳಕ್ಕೆ ಹೊಸಕೋಟೆ ಸಂಚಾರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
IPL 2026: ಟಿ20 ಲೀಗ್ ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ವರ್ಲ್ಡ್ ರೆಕಾರ್ಡ್ ನಿರ್ಮಿಸಿರುವುದು ಮತ್ಯಾರೂ ಅಲ್ಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB). ಅದು ಕೂಡ ವಿಸ್ಫೋಟಕ ಬ್ಯಾಟಿಂಗ್ನೊಂದಿಗೆ 200+ ರನ್ಗಳನ್ನು ಚೇಸ್ ಮಾಡುವ ಮೂಲಕ ಎಂಬುದು ವಿಶೇಷ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2026ರ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 201 ರನ್ ಕಲೆಹಾಕಿತ್ತು.
202 ರನ್ಗಳ ಕಠಿಣ ಗುರಿ ಪಡೆದ ಆರ್ಸಿಬಿ ಪರ ವಿರಾಟ್ ಕೊಹ್ಲಿ (69), ದೇವದತ್ ಪಡಿಕ್ಕಲ್ (61), ರಜತ್ ಪಾಟಿದಾರ್ (31) ಅಬ್ಬರಿಸಿದರು. ಈ ಅಬ್ಬರದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೇವಲ 15.4 ಓವರ್ಗಳಲ್ಲಿ 203 ರನ್ಗಳಿಸಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಈ ಭರ್ಜರಿ ಜಯದೊಂದಿಗೆ ಟಿ20 ಲೀಗ್ ಕ್ರಿಕೆಟ್ನಲ್ಲಿ ಅತೀ ಕಡಿಮೆ ಎಸೆತಗಳಲ್ಲಿ 200+ ರನ್ಗಳ ಗುರಿ ಬೆನ್ನತ್ತಿ ಗೆದ್ದ ತಂಡವೆಂಬ ವಿಶ್ವ ದಾಖಲೆಯೊಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ರಾಜಸ್ಥಾನ್ ರಾಯಲ್ಸ್ ತಂಡದ ಹೆಸರಿನಲ್ಲಿತ್ತು.
2025ರ ಐಪಿಎಲ್ ಸೀಸನ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 15.5 ಓವರ್ಗಳಲ್ಲಿ 210 ರನ್ಗಳನ್ನು ಚೇಸ್ ಮಾಡಿದ್ದರು. ಈ ಮೂಲಕ ಟಿ20 ಲೀಗ್ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 200+ ರನ್ ಚೇಸ್ ಮಾಡಿದ ವಿಶ್ವ ದಾಖಲೆ ನಿರ್ಮಿಸಿದ್ದರು.
ಇದೀಗ ಈ ದಾಖಲೆಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದಾಂಡಿಗರು ಅಳಿಸಿ ಹಾಕಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 15.4 ಓವರ್ಗಳಲ್ಲಿ 203 ರನ್ ಬಾರಿಸುವ ಮೂಲಕ ಆರ್ಸಿಬಿ, ಟಿ20 ಲೀಗ್ನಲ್ಲಿ ಅತೀ ಕಡಿಮೆ ಎಸೆತಗಳಲ್ಲಿ 200+ ರನ್ ಚೇಸ್ ಮಾಡಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಶ್ರೀಲಂಕಾ ನಾಗರಿಕ ಯುದ್ಧದ ಕಹಿ ಘಟನೆಗಳನ್ನಾಧರಿಸಿದ ‘ನೀಲಿರ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಖ್ಯಾತ ತಮಿಳು ನಿರ್ದೇಶಕ ವೆಟ್ರಿಮಾರನ್ ಪಾಲ್ಗೊಂಡಿದ್ದರು. ಈ ವೇಳೆ ಅವರು ಸಿನಿಮಾರಂಗದಲ್ಲಿ ಹೆಚ್ಚುತ್ತಿರುವ ಪ್ರೊಪಗಾಂಡ (Propaganda) ಮತ್ತು ದ್ವೇಷ ಬಿತ್ತುವ ಚಿತ್ರಗಳ ಬಗ್ಗೆ ನೇರವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ವೆಟ್ರಿಮಾರನ್ (Vetrimaaran) ಅವರ ಈ ಮಾತುಗಳು ಈಗ ಇಂಟರ್ನೆಟ್‌ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿವೆ. ಆದಿತ್ಯ ಧರ್ ಮತ್ತು ರಣವೀರ್ ಸಿಂಗ್ ಅವರ ‘ಧುರಂಧರ್ 2’ (Dhurandhar 2) ಚಿತ್ರವನ್ನೇ ಗುರಿಯಾಗಿಸಿಕೊಂಡು ಅವರು ಟೀಕಿಸಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯಪಡುತ್ತಿದ್ದಾರೆ.
ವೇದಿಕೆಯ ಮೇಲೆ ಮಾತನಾಡಿದ ವೆಟ್ರಿಮಾರನ್, ‘ನಮ್ಮ ಕಥೆಗಳನ್ನು ನಾವೇ ಹೇಳುವವರೆಗೆ, ನಮ್ಮ ಜೀವನ ಎಂತಹುದು ಎಂಬುದನ್ನು ನಮ್ಮ ಶತ್ರುಗಳೇ ನಿರ್ಧರಿಸುತ್ತಾರೆ. ನಮ್ಮ ಕಥೆಗಳನ್ನು ಮುಕ್ತವಾಗಿ ಹೇಳುವ ಪ್ರಜಾಪ್ರಭುತ್ವದ ಹಕ್ಕು ನಮಗಿಲ್ಲದಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು. ಇಂತಹ ಸಂಕಷ್ಟದ ನಡುವೆಯೂ ಶ್ರೀಲಂಕಾದ ಕಥೆಯನ್ನು ಆಯ್ಕೆ ಮಾಡಿಕೊಂಡ ‘ನೀಲಿರ’ ಚಿತ್ರತಂಡವನ್ನು ಅವರು ಶ್ಲಾಘಿಸಿದರು. ಅಲ್ಲದೆ, ತೆಲುಗು ರಾಜ್ಯದವರಾಗಿದ್ದರೂ ಇಂತಹ ಕಥೆಗೆ ಬೆನ್ನೆಲುಬಾಗಿ ನಿಂತ ನಟ ರಾಣಾ ದಗ್ಗುಬಾಟಿ ಅವರ ಬೆಂಬಲವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಇತ್ತೀಚಿನ ಕೆಲವು ಸಿನಿಮಾಗಳ ಬಗ್ಗೆ ಮಾತನಾಡಿದ ಅವರು, ‘ಇಂದು ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ಕೇವಲ ದ್ವೇಷ ಅಥವಾ ಹಿಂಸೆಯನ್ನು ಮಾರಾಟ ಮಾಡುವ ಮೂಲಕ ನೂರಾರು ಕೋಟಿ ಗಳಿಸುವ ಉದ್ದೇಶದ ಚಿತ್ರಗಳು ಬರುತ್ತಿವೆ. ಆದರೆ ನೀಲಿರ ಚಿತ್ರವು ಯಾವುದೇ ಧರ್ಮ, ಸಮುದಾಯ ಅಥವಾ ಜನಾಂಗವನ್ನು ಕೆಟ್ಟದಾಗಿ ಚಿತ್ರಿಸುವುದಿಲ್ಲ’ ಎಂದರು.
“Today everything becomes propoganda. Propoganda has power to influence memory. We all know who has impacted with demonetization & how many Lost lives in standing the queue. It’s hate propoganda”pic.twitter.com/kdQgYobUCN
ಮುಖ್ಯವಾಗಿ, ನೋಟ್ ಬ್ಯಾನ್ ಬಗ್ಗೆ ವೆಟ್ರಿಮಾರನ್ ಅವರು ನೀಡಿದ ಹೇಳಿಕೆಯಿಂದ ಈ ವಿಡಿಯೋ ವೈರಲ್ ಆಗಿದೆ. ‘ನೋಟ್ ಬ್ಯಾನ್ ಸಮಯದಲ್ಲಿ ಯಾರು ಹೆಚ್ಚು ತೊಂದರೆ ಅನುಭವಿಸಿದರು ಮತ್ತು ಕ್ಯೂನಲ್ಲಿ ನಿಂತು ಎಷ್ಟು ಜೀವಗಳು ಹೋದವು ಎಂಬುದು ನಮಗೆಲ್ಲರಿಗೂ ಗೊತ್ತು. ಆದರೆ ಇಂದು ಸಿನಿಮಾಗಳ ಮೂಲಕ ಆ ನೆನಪನ್ನು ಬದಲಾಯಿಸುವ ಪ್ರಯತ್ನ ನಡೆಯುತ್ತಿದೆ’ ಎಂದು ಹೇಳಿದರು.
ಭಯೋತ್ಪಾದನೆಯನ್ನು ತಡೆಯಲು ಮತ್ತು ನಕಲಿ ನೋಟು ಹಾವಳಿಯನ್ನು ನಿಲ್ಲಿಸಲು ನೋಟ್ ಬ್ಯಾನ್ ಮಾಡಲಾಯಿತು ಎಂಬಂತೆ ‘ಧುರಂಧರ್ 2’ ಸಿನಿಮಾದಲ್ಲಿ ಚಿತ್ರಿಸಲಾಗಿದೆ. ಈ ಹಿನ್ನೆಲೆಯಲ್ಲಿ ವೆಟ್ರಿಮಾರನ್ ಅವರ ಮಾತುಗಳು ನೇರವಾಗಿ ಈ ಚಿತ್ರಕ್ಕೇ ಅನ್ವಯಿಸುತ್ತವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಹಾಲಿಲ್ಲದೆ ಪೂಜೆ ಮಾಡಿದರೆ ಅದರಿಂದ ಫಲ ಸಿಗುತ್ತಾ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಯಾವುದೇ ಪೂಜೆ, ಹವನ ಅಥವಾ ಅಭಿಷೇಕಗಳಲ್ಲಿ ಹಾಲು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಅನೇಕ ವಿಧದ ಅಭಿಷೇಕಗಳಲ್ಲಿ, ಪಂಚಾಮೃತ ಅಭಿಷೇಕದಲ್ಲಿಯೂ ಹಾಲಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗುತ್ತದೆ. ಶುದ್ಧವಾದ ಹಸುವಿನ ಹಾಲನ್ನು ಅಮೃತಕ್ಕೆ ಸಮಾನ ಎಂದು ಪರಿಗಣಿಸಲಾಗುತ್ತದೆ. ಈ ಹಾಲಿನಲ್ಲಿ ಭಗವಂತನ ಶಕ್ತಿಗಳನ್ನು ಆಕರ್ಷಿಸುವ ಅದಮ್ಯ ಶಕ್ತಿ ಅಡಗಿದೆ ಎಂದು ನಂಬಲಾಗಿದೆ. ಪ್ರತಿ ಪೂಜೆಯಲ್ಲಿಯೂ ಮನೆಯಲ್ಲಿ ಕನಿಷ್ಠ ಪಕ್ಷ ಸ್ವಲ್ಪ ಹಾಲನ್ನು ನೈವೇದ್ಯಕ್ಕೆ ಇಟ್ಟಾಗ ಆ ಪೂಜೆ ಪರಿಪೂರ್ಣವಾಗುತ್ತದೆ ಎಂದು ಗುರೂಜಿ ಹೇಳಿದ್ದಾರೆ.
ಆನೇಕಲ್, ಮಾರ್ಚ್ 29: ಸಾಲಗಾರರ ಕಾಟಕ್ಕೆ ಒಂದೇ ಕುಟುಂಬದ ಇಬ್ಬರು ಮೃತಪಟ್ಟಿರುವ ಆಘಾತಕಾರಿ ಘಟನೆ ಬೆಂಗಳೂರುನಗರ ಜಿಲ್ಲೆ ಆನೇಕಲ್ ತಾಲೂಕಿನ ಮಲ್ಲೇನಹಳ್ಳಿಯಲ್ಲಿ ನಡೆದಿದೆ. ವ್ಯಕ್ತಿಯೋರ್ವ ತಾಯಿ, ಅಕ್ಕ ಮತ್ತು ಅಕ್ಕನ ಮಗನ ಕತ್ತು ಸೀಳಿ, ಬಳಿಕ ತಾನೂ ಆತ್ಮಹತ್ಯೆಗೆ ಮುಂದಾಗಿದ್ದಾನೆ. ಘಟನೆಯಲ್ಲಿ ತಾಯಿ ಮತ್ತು ಅಕ್ಕ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದರೆ, ಬಾಲಕ ಸೇರಿ ಇಬ್ಬರಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ತಾಯಿ ಆಶಾ(55), ಅಕ್ಕ ವರ್ಷಿತಾ(34) ಮೃತರಾಗಿದ್ದು, ಮೋಹನ್ ಗೌಡ(27), ಅಕ್ಕನ ಮಗ ಮಯಾಂಕ್(11) ಸ್ಥಿತಿ ಗಂಭೀರವಾಗಿದೆ.
ಸಾಲಗಾರರ ಕಾಟದಿಂದ ಮೋಹನ್ ಗೌಡ ತೀವ್ರವಾಗಿ ಬೇಸತ್ತಿದ್ದರು. ಈ ಸಂಬಂಧ ನಿನ್ನೆ ರಾತ್ರಿ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ವಿಡಿಯೋ ಮಾಡಿದ್ದ ಮೋಹನ್, ಅದನ್ನು ತನ್ನ ಸಂಬಂಧಿಕರಿಗೆ ಕೂಡ ಕಳುಹಿಸಿದ್ದರು. ವಿಡಿಯೋ ನೋಡಿ ಆತಂಕಗೊಂಡ ಸಂಬಂಧಿಕರು ಮನೆ ಬಳಿ ಬಂದಿದ್ದಾರೆ. ಈ ವೇಳೆ ಡೋರ್ ಲಾಕ್ ಆಗಿರೋದು ಕಂಡುಬಂದಿದ್ದು, ಬಾಗಿಲನ್ನು ಒಡೆದು ಒಳ ಹೋಗಿ ನೋಡಿದಾಗ ಎರಡು ಮೃತ ದೇಹಗಳು ಪತ್ತೆಯಾಗಿವೆ. ಜೊತೆಗೆ ಮೋಹನ್ ಮತ್ತು ಮಯಾಂಕ್ ನೆಲದ ನೇಲೆ ಒದ್ದಾಡುತ್ತಿರುವುದನ್ನು ಕಂಡ ಸಂಬಂಧಿಕರು ಕೂಡಲೇ ಅವರಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇವರಿಬ್ಬರಿಗೂ ಸದ್ಯ ಚಿಕಿತ್ಸೆ ಮುಂದುವರಿದಿದೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅತ್ತಿಬೆಲೆ ಪೋಲಿಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಇನ್ನು ಘಟನೆ ಬಗ್ಗೆ ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾತ್ ಮಾಹಿತಿ ನೀಡಿದ್ದು, ರಾತ್ತಿ 10:30ರ ಸುಮಾರಿಗೆ ಆತ್ಮಹತ್ಯೆ ಯತ್ನದ ಬಗ್ಗೆ ಮಾಹಿತಿ ಸಿಕ್ಕಿದೆ. ಕೂಡಲೇ ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಅತಿಯಾದ ಸಾಲ ಘಟನೆಗೆ ಕಾರಣ ಎಂಬುದು ಗೊತ್ತಾಗಿದೆ. ಗಾಯಾಳು ಮೋಹನ್ ಚೀಟಿ ವ್ಯವಹಾರದಲ್ಲಿ ಸಾಲ ಮಾಡಿಕೊಂಡಿದ್ದ. ಜೊತೆಗೆ ಐಷಾರಾಮಿ ಜೀವನಕ್ಕೆಂದು ದುಂದು ವೆಚ್ಚ ಮಾಡಿದ್ದು, ಸಾಲ ತೀರಿಸಲಾಗದೆ ಇಡೀ ಕುಟುಂಬ ಆತ್ಮಹತ್ಯೆಗೆ ನಿರ್ಧರಿಸಿದೆ. ಗಾಯಾಳು ಮೋಹನ್ ತಾಯಿ, ಅಕ್ಕ ಮತ್ತು ಅಕ್ಕನ ಮಗನ ಕುತ್ತಿಗೆ ಸೀಳಿ ಬಳಿಕ ತಾನು ಕುತ್ತಿಗೆ ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿರೋದು ಮೇಲ್ನೋಟಕ್ಕೆ ಕಂಡು ಬಂದಿದೆ. ಮುಂದಿನ ತನಿಖೆ ವೇಳೆ ನಿಖರ ಕಾರಣ ತಿಳಿಯಲಿದೆ ಎಂದಿದ್ದಾರೆ.
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್ 29, ಭಾನುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷ, ಏಕಾದಶಿ ತಿಥಿಯಾಗಿದೆ. ಇಂದು ಡಾ. ಬಸವರಾಜ ಗುರೂಜಿಯವರು ಪ್ರತಿ ರಾಶಿಯವರಿಗೂ ಆರೋಗ್ಯ, ಆರ್ಥಿಕ ಸ್ಥಿತಿ, ಉದ್ಯೋಗ, ವ್ಯಾಪಾರ, ಕುಟುಂಬ ಮತ್ತು ವೈಯಕ್ತಿಕ ಸಂಬಂಧಗಳ ಕುರಿತು ವಿವರವಾದ ಸಲಹೆಗಳನ್ನು ನೀಡಿದ್ದಾರೆ. ಆಶ್ಲೇಷ ನಕ್ಷತ್ರದಲ್ಲಿ ಚಂದ್ರನ ಸಂಚಾರವು ವಿವಿಧ ರಾಶಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅವರು ವಿವರಿಸಿದ್ದಾರೆ.
ಕೃಷಿಯಲ್ಲಿ ತೊಡಗಿಕೊಂಡವರು ಜಮೀನಿನಲ್ಲಿ ಕೆಲವು ದೀರ್ಘಾವಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಯೋಜನೆ ರೂಪಿಸಲಿದ್ದೀರಿ. ಕೊಟ್ಟಿಗೆ, ಗೋದಾಮು, ಇತರೆ ನಿಮ್ಮ ಚಟುವಟಿಕೆಗೆ ಅನುಕೂಲ ಆಗುವ ರೀತಿ ಯೋಜನೆ ಮಾಡಿಕೊಳ್ಳಲಿದ್ದೀರಿ. ಕುಟುಂಬ ಸದಸ್ಯರು ನಿಮ್ಮ ಆಲೋಚನೆಗಳಿಗೆ ಆರ್ಥಿಕವಾಗಿ ನೆರವು ನೀಡಲಿದ್ದಾರೆ. ತಕ್ಷಣಕ್ಕೆ ಬೇಡ ಅಂದುಕೊಂಡಂಥ ಕೆಲವು ಕೆಲಸಗಳನ್ನು ನಿರ್ಧಾರ ಬದಲಿಸಿ, ಆರಂಭ ಮಾಡಿಬಿಡುತ್ತೀರಿ. ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದಂಥವರು ಅದನ್ನು ಹಿಂತೆಗೆದುಕೊಳ್ಳವ ಆಲೋಚನೆ ಬಂದರೆ ಅದರಂತೆಯೇ ನಡೆದುಕೊಳ್ಳುವುದು ಉತ್ತಮ. ನಿಮಗೆ ಉದ್ಯೋಗ ಸ್ಥಳದಲ್ಲಿ ನೀಡಿದ್ದ ಭರವಸೆಗಳನ್ನು ಮೇಲಧಿಕಾರಿಗಳು ಈಡೇರಿಸುವ ಸೂಚನೆ ದೊರೆಯಲಿದೆ.
ತುಂಬ ಉತ್ಸಾಹದಿಂದ ಕೆಲಸ- ಕಾರ್ಯಗಳಲ್ಲಿ ತೊಡಗಿಕೊಳ್ಳುವುದಕ್ಕೆ ಆಗಲ್ಲ. ಮುಖ್ಯವಾಗಿ ಮೈ- ಕೈ ನೋವು, ಜ್ವರ, ತಲೆನೋವು ಇಂಥವು ನಿಮ್ಮನ್ನು ಈ ದಿನ ಬಹುವಾಗಿ ಕಾಡಲಿವೆ. ಯಾಕೆ- ಏನು ಎಂಬುದನ್ನು ವಿಚಾರಿಸದೆ ಸ್ನೇಹಿತರು ಹೇಳುವಂತಹ ಕೆಲಸಗಳನ್ನು ಮಾಡುವುದಕ್ಕೆ ಒಪ್ಪಿಕೊಳ್ಳಬೇಡಿ. ಸಂಘ- ಸಂಸ್ಥೆಗಳನ್ನು ಮುನ್ನಡೆಸುತ್ತಾ ಇರುವವರಿಗೆ ದೊಡ್ಡ ಜವಾಬ್ದಾರಿಯೊಂದು ಹೆಗಲು ಏರಲಿದೆ. ಇನ್ನು ಬಿಡಿ ಬಿಡಿಯಾಗಿ ಕೆಲಸ ಮುಗಿಸುವ ಬದಲಿಗೆ ಒಂದೇ ಸಲಕ್ಕೆ ಎಲ್ಲವನ್ನೂ ಮಾಡಿಬಿಡೋಣ ಎಂದುಕೊಂಡು ಮುಂದಕ್ಕೆ ಹಾಕಿಕೊಂಡು ಹೋಗಬೇಡಿ.
ಬಂದದ್ದು ಬರಲಿ ಎಂದು ಧೈರ್ಯವಾಗಿ ನೀವು ತೆಗೆದುಕೊಂಡ ತೀರ್ಮಾನಗಳು ಲಾಭದಾಯಕ ಆಗಲಿದೆ. ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸುವುದಕ್ಕಾಗಿ ವಿರೋಧಿಗಳು ಮಾಡುವ ಪ್ರಯತ್ನಗಳು ಅವರಿಗೇ ಉಲ್ಟಾ ಹೊಡೆಯಲಿದೆ. ನಿಧಾನವಾಗಿ ಬದಲಾವಣೆಗೆ ಹೊಂದಾಣಿಕೆ ಮಾಡಿಕೊಳ್ಳಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ಕೆಲವು ತಾಂತ್ರಿಕ ತರಬೇತಿಗಳನ್ನು ಅನಿವಾರ್ಯವಾಗಿ ಕಲಿಯಬೇಕು ಎಂಬ ಸ್ಥಿತಿ ನಿರ್ಮಾಣ ಆಗಲಿದೆ. ಆದರೆ ಇದರಿಂದ ಭವಿಷ್ಯದಲ್ಲಿ ನಿಮಗೆ ಅನುಕೂಲ ಆಗಲಿದೆ. ಕ್ರೀಡಾಪಟುಗಳಿಗೆ ಪ್ರಾಯೋಜಕರು ದೊರೆಯುವಂಥ ಯೋಗ ಇದೆ. ಪ್ರತಿಷ್ಠಿತ ಸಂಸ್ಥೆ ಅಥವಾ ವ್ಯಕ್ತಿಗಳು ಅವರಾಗಿಯೇ ಭೇಟಿ ಆಗುವಂತೆ ತಿಳಿಸಿದಲ್ಲಿ ನಿಧಾನ ಮಾಡಬೇಡಿ.
ನೀವು ನಂಬಿದ ವ್ಯವಹಾರ ಬೆಳವಣಿಗೆಗೆ ಸಹಕಾರಿ ಆಗುವ ಸುಳಿವು ನೀಡಲಿದೆ. ಸಂಗಾತಿ ಕುಟುಂಬದ ಕಡೆಯಿಂದ ದೊಡ್ಡ ಮಟ್ಟದಲ್ಲಿ ಬೆಂಬಲ ದೊರೆಯಲಿದೆ. ನಿಮ್ಮ ಜೊತೆಗೆ ಓದಿದಂಥ ಸ್ನೇಹಿತರ ಸಲಹೆಯಿಂದ ಆಲೋಚನಾ ವಿಧಾನವನ್ನು ಬದಲಾವಣೆ ಮಾಡಿಕೊಳ್ಳಲಿದ್ದೀರಿ. ನಿಮಗೆ ಗೊತ್ತಿರುವ ಕೌಶಲಕ್ಕೆ ಬೇಡಿಕೆ ಹೆಚ್ಚಾಗಲಿದ್ದು, ಕೆಲವು ಪ್ರಾಜೆಕ್ಟ್ ಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣ ಮಾಡಿಕೊಟ್ಟಲ್ಲಿ ಮಾರುಕಟ್ಟೆಯಲ್ಲಿ ಇರುವುದಕ್ಕಿಂತ ಹೆಚ್ಚಿನ ಮೊತ್ತವನ್ನು ನೀಡುವುದಾಗಿ ಕೆಲವರು ಪ್ರಸ್ತಾವ ಇಡಲಿದ್ದಾರೆ. ನೀವು ಹಾಕಿದ್ದ ಪ್ಲಾನ್ ಗೆ ಸಂಬಂಧಿಸಿದಂತೆ ಇರುವ ಅನಿಶ್ಚಿತತೆ ದೂರ ಆಗಲಿದ್ದು, ಕುಟುಂಬದ ಎಲ್ಲ ಸದಸ್ಯರು ಬೆಂಬಲವನ್ನು ನೀಡಲಿದ್ದಾರೆ.
ನಿಮ್ಮ ಬುದ್ಧಿವಂತಿಕೆ ಹಾಗೂ ಚೌಕಾಶಿ ಮಾಡುವ ಸಾಮರ್ಥ್ಯ ಅತ್ಯುತ್ತಮವಾದ ಫಲ ನೀಡುವ ದಿನ ಇದಾಗಿರುತ್ತದೆ. ನಿಮ್ಮ ಜಮೀನು, ಸೈಟು ಅಥವಾ ಯಾವುದೇ ಅಸ್ತಿಗೆ ಸಂಬಂಧಿಸಿದ ಕಾಗದ ಪತ್ರದ ವ್ಯವಹಾರಕ್ಕೆ ಬಹಳ ಸಮಯದಿಂದ ಓಡಾಡುತ್ತಾ ಇದ್ದೀರಿ ಅಂತಾದರೆ ಅದು ಪೂರ್ಣಗೊಳ್ಳುವ ಯೋಗ ಇದೆ. ನಿಮ್ಮಿಂದ ಸಾಲ ಪಡೆದು ಬಹಳ ಸಮಯದಿಂದ ಅದನ್ನು ಹಿಂತಿರುಗಿಸಲ್ಲ ಅಂತಾದಲ್ಲಿ ಅದನ್ನು ವಸೂಲಿ ಮಾಡುವಂಥ ಯೋಗ ಈ ದಿನ ಇದೆ. ಬೇಕರಿ ಪದಾರ್ಥಗಳಿಂದ ದೂರ ಇರುವುದು ಒಳ್ಳೆಯದು. ಅದರಲ್ಲೂ ಇತ್ತೀಚೆಗೆ ನಿಮಗೆ ಹೊಟ್ಟೆನೋವಿನ ಸಮಸ್ಯೆ ತೀವ್ರ ಆಗಿದೆ ಅಂತಾದಲ್ಲಿ ಈ ಸಲಹೆಯನ್ನು ಕಡ್ಡಾಯವಾಗಿ ಪಾಲಿಸಿ.
ಈ ದಿನ ಚಂಚಲತೆ ವಿಪರೀತ ಕಾಡುತ್ತದೆ. ಆತುರದಲ್ಲಿ ನಿಮ್ಮ ಯಾವುದೇ ತೀರ್ಮಾನ ಹೇಳುವುದಕ್ಕೆ ಹೋಗಬೇಡಿ. ಇನ್ನು ನಿಮ್ಮ ಬಳಿ ಇರುವ ಹಣಕ್ಕೆ ಎಷ್ಟು ಅಷ್ಟಕ್ಕೆ ಮಾತ್ರ ಯೋಜನೆ ಹಾಕಿಕೊಳ್ಳಿ. ಏನನ್ನಾದರೂ ದಕ್ಕಿಸಿಕೊಳ್ಳ ಬಲ್ಲೆ ಎಂಬ ಆಲೋಚನೆ ಅಪಾಯಕಾರಿ ಆಗಲಿದೆ. ಸರ್ಕಾರಿ ಮಟ್ಟದಲ್ಲಿ ಆಗಬೇಕಾದ ಕೆಲಸಗಳನ್ನು ಮುಗಿಸಿಕೊಳ್ಳುವುದಕ್ಕೆ ಎಲ್ಲ ಪ್ರಯತ್ನ ಮಾಡಿದ ನಂತರವೂ ಕೊನೆ ಹಂತದಲ್ಲಿ ಅದು ನಿಂತು ಬಿಡಲಿದೆ. ಬೆನ್ನು ನೋವು ವಿಪರೀತವಾಗಿ ಕಾಡಬಹುದು. ಅದರಲ್ಲಿಯೂ ದ್ವಿಚಕ್ರ ವಾಹನವನ್ನು ಹೆಚ್ಚಾಗಿ ಬಳಸುತ್ತೀರಿ ಅಂತಾದಲ್ಲಿ ವೈದ್ಯರ ಬಳಿ ತೆರಳಿ, ಸಲಹೆ ತೆಗೆದುಕೊಳ್ಳುವುದು ಕ್ಷೇಮ.
ನಿಮ್ಮ ಪಾಲಿನ ಜವಾಬ್ದಾರಿಯನ್ನು ಶ್ರದ್ಧೆಯಿಂದ ಮಾಡಿದ್ದರ ಉತ್ತಮ ಫಲಿತವನ್ನು ಪಡೆದುಕೊಳ್ಳಲಿದ್ದೀರಿ. ನಿಮ್ಮಲ್ಲಿ ಕೆಲವರು ಹೆಚ್ಚಿನ ಬಡ್ಡಿದರಕ್ಕೆ ತಂದಿದ್ದ ಸಾಲವನ್ನು ಹಿಂತಿರುಗಿಸುವುದಕ್ಕೆ ಪ್ರಯತ್ನ ಮಾಡಲಿದ್ದೀರಿ. ಮಿನರಲ್ ವಾಟರ್ ವಿತರಣೆಯ ವ್ಯವಹಾರ ಮಾಡುತ್ತಾ ಇರುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ಉದ್ಯೋಗ ಸ್ಥಳದಲ್ಲಿ ಸವಾಲು ಎನಿಸಿದಂ ಕೆಲವು ಕೆಲಸಗಳನ್ನು ನೀವಾಗಿಯೇ ಮುಂದೆ ಹೋಗಿ ವಹಿಸಿಕೊಳ್ಳಲಿದ್ದೀರಿ. ಇದರಿಂದ ಯಶಸ್ಸು ಹಾಗೂ ಭವಿಷ್ಯದಲ್ಲಿ ಬಡ್ತಿ ಇತ್ಯಾದಿ ವಿಷಯಗಳಿಗೆ ಅನುಕೂಲ ಒದಗಿ ಬರುತ್ತದೆ. ಸಾದ್ಯಂತವಾಗಿ ಪರೀಕ್ಷೆ ಮಾಡದ ಹೊರತು ಯಾವುದೇ ಮುಖ್ಯ ಕಾಗದ- ಪತ್ರಗಳಿಗೆ ಸಹಿ ಮಾಡುವುದಕ್ಕೆ ಹೋಗಬೇಡಿ.
ಮನೆಯಲ್ಲಿ ಖುಷಿಯ ವಾತಾವರಣ ಇರುತ್ತದೆ. ಅಲಂಕಾರದ ದೃಷ್ಟಿಯಿಂದ ಏನೇನು ಬದಲಾವಣೆ ಮಾಡಬೇಕು ಅಂದುಕೊಂಡಿರುತ್ತೀರೋ ಆ ಎಲ್ಲವನ್ನು ಮಾಡಲು ಸಾಧ್ಯ ಆಗಲಿದೆ. ನಿಮಗೆ ಇರುವಂಥ ಬದ್ಧತೆಯನ್ನು ಸಾಬೀತು ಮಾಡಿಸಿಕೊಳ್ಳಲು ಅವಕಾಶಗಳು ಉದ್ಭವ ಆಗಲಿವೆ. ಕೆಲವು ಹಣಕಾಸಿನ ವಿಚಾರದ ನಿರ್ಧಾರಗಳು ಮುಂದಕ್ಕೆ ಹಾಕಿಕೊಳ್ಳಬೇಕಾಗುತ್ತದೆ. ಮೆಡಿಕಲ್ ಶಾಪ್ ನಡೆಸುತ್ತಾ ಇರುವವರು ಇದಕ್ಕೆ ಪೂರಕವಾಗಿ ಕೆಲವು ಹೊಸ ವ್ಯವಹಾರ ನಡೆಸುವ ಚಿಂತನೆ ನಡೆಸುತ್ತೀರಿ. ಉದ್ಯೋಗ ಸ್ಥಳದಲ್ಲಿ ನೀವು ಯಾವುದನ್ನು ಕೊನೆ ಆಯ್ಕೆ ಎಂದು ಭಾವಿಸಿರುತ್ತೀರೋ ಅದನ್ನೇ ಆರಿಸಿಕೊಳ್ಳುವಂತೆ ಆಗಲಿದೆ.
ಇತರರ ವೈಯಕ್ತಿಕ ಅಭಿಪ್ರಾಯಗಳನ್ನು ತೆಗೆದುಹಾಕಲು ಹೋಗಬೇಡಿ. ಉದ್ಯೋಗ, ವೃತ್ತಿ- ವ್ಯವಹಾರಗಳಲ್ಲಿ ನೀಡುವಂಥ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ. ದೂರ ಪ್ರಯಾಣಕ್ಕೆ ಅಚಾನಕ್ ಆಗಿ ತೆರಳಲೇ ಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಹಳೇ ಒಪ್ಪಂದಗಳನ್ನು ಮುಂದುವರಿಸುವುದು ಬೇಡ ಎಂದುಕೊಳ್ಳಲಿದ್ದೀರಿ. ತರಕಾರಿ- ಹಣ್ಣುಗಳ ಸರಬರಾಜು ವಾಹನವನ್ನು ಚಾಲನೆ ಮಾಡುವವರು ಇದ್ದಲ್ಲಿ ಅದರದೇ ವ್ಯಾಪಾರವನ್ನು ಶುರು ಮಾಡುವ ಆಲೋಚನೆ ಮೂಡಲಿದೆ. ದುಡಿಮೆಯು ನಿರೀಕ್ಷೆ ಮಟ್ಟದಲ್ಲಿ ಇಲ್ಲ ಎಂಬುದು ಬಹಳವಾಗಿ ಕೊರೆಯಲು ಆರಂಭವಾಗುತ್ತದೆ. ಸ್ನೇಹಿತರ ಪೈಕಿ ಕೆಲವರು ನಿಮ್ಮ ಉದ್ದೇಶಕ್ಕೆ ಕೈ ಜೋಡಿಸಲು ಮುಂದೆ ಬರಲಿದ್ದಾರೆ.
ನಿಮ್ಮ ಆನಂದದ ವ್ಯಕ್ತಿತ್ವದಿಂದಾಗಿ ಇತರರು ನಿಮ್ಮೊಂದಿಗೆ ಸಂಬಂಧವನ್ನು ಬೆಳೆಸಲು ಪ್ರಯತ್ನಿಸುತ್ತಾರೆ. ನೀವು ಜಾಣ್ಮೆಯಿಂದ ವರ್ತಿಸಬೇಕಾದೀತು. ಮನೆಯಿಂದ ದೂರ ಇರಬೇಕಾದೀತು. ಸಾಮಾಜಿಕ ಗೌರವದಿಂದ ನಿಮ್ಮ ನೈತಿಕವಾದ ಸ್ಥೈರ್ಯ ಹೆಚ್ಚುತ್ತದೆ. ಅಗತ್ಯಕ್ಕಿಂತ ಹೆಚ್ಚು ಖರ್ಚು ಬೇಡ. ಪ್ರೀತಿಪಾತ್ರರು ನಿಮಗೆ ಬೇಕಾದ ಸಹಕಾರ ಮಾಡುವರು. ಆಗಿದಹೋದ ವಿಚಾರವನ್ನು ಸಂಗಾತಿಯ ಜೊತೆ ಚರ್ವಿತಚರ್ವಣ ಮಾಡುವಿರಿ.
ವೃಷಭ ರಾಶಿ:
ನೀವು ಕುಟುಂಬ ಸದಸ್ಯರಿಂದ ಒತ್ತಡವನ್ನು ಎದುರಿಸಬಹುದು. ಗೊತ್ತಿಲ್ಲದೇ ಯಾರ ಬಗ್ಗೆಯೂ ಮಾತನಾಡುವುದು ಬೇಡ. ಹಣದ ಬಗ್ಗೆ ವಾದಗಳು ಇರಬಹುದು. ನೀವು ಲೌಕಿಕ ಭೋಗಗಳಿಂದ ಮತ್ತು ಸೇವಕರಿಂದ ಎಲ್ಲ ರೀತಿಯ ಸಂತೋಷ ಮತ್ತು ಲಾಭವನ್ನು ಪಡೆಯುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿ ಆರೋಗ್ಯದ ಕಡೆ ಸ್ವಲ್ಪ ಹೆಚ್ಚು ಗಮನವಿರಲಿ. ನಿಮ್ಮ ಕೆಲಸವು ಕೇವಲ ಸುತ್ತಾಟದಲ್ಲಿಯೇ ಮುಕ್ತಾಯವಾಗುವುದು. ಅಪ್ರಯೋಜಕ ವಿಚಾರದ ಬಗ್ಗೆ ಚಿಂತೆ ಮಾಡುವಿರಿ.
ಮಿಥುನ ರಾಶಿ:
ಅಧಿಕಾರಿಗಳಿಂದ ಕ್ರಮ ತೆಗೆದುಕೊಳ್ಳಬಹುದು. ವಾಹನ ಚಾಲನೆಯಿಂದ ಆಯಾಸವಾಗುವುದು. ನಿಮ್ಮನ್ನು ಇತರರು ನೋಡುವರು. ರಾಜಕಾರಣಿಗಳು ಕಾರ್ಯಕ್ರಮದ ಒತ್ತಡದಲ್ಲಿ ಇರುವರು. ಮಾನಸಿಕ ಒತ್ತಡದಿಂದ ಬೇರೆ ಕೆಲಸದಲ್ಲಿ ತೊಡಗಿಕೊಳ್ಳುವಿರಿ. ಹಳೆಯ ವಿಚಾರವನ್ನು ವಿರೋಧಿಗಳು ಪುನಃ ಮೇಲಕ್ಕೆ ತಂದು ಕಲಹ ಮಾಡಬಹುದು. ನಿಮ್ಮ ಬಗ್ಗೆ ಪ್ರಶಂಸೆಯ ಮಾತುಗಳನ್ನು ನೀವು ಕೇಳಲು ಸಂಕೋಚಪಡುವಿರಿ. ಅವಕಾಶವನ್ನು ಬಿಟ್ಟು ನೀವು ದೊಡ್ಡವರಾಗುವುದು ಬೇಡ. ಕೆಟ್ಟ ಮಾತುಗಳನ್ನು ಇನ್ನೊಬ್ಬರ ಬಗ್ಗೆ ತಪ್ಪಿ ಆಡುವಿರಿ.
ಕರ್ಕಾಟಕ ರಾಶಿ:
ಪರೋಪಕಾರದ ಬಗ್ಗೆ ಆಸಕ್ತಿಯು ಮೂಡಬಹುದು. ಧಾರ್ಮಿಕ ವಿಧಿವಿಧಾನಗಳಲ್ಲಿ ಆಸಕ್ತಿ ವಹಿಸಿ ಸಂಪೂರ್ಣ ಸಹಕಾರ ನೀಡುವಿರಿ. ಭೂ ವ್ಯವಹಾರದಿಂದ ಸೋಲು. ಅದೃಷ್ಟದಿಂದಲೂ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ, ನಿಮ್ಮ ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ನಿಮ್ಮನ್ನು ನಂಬಿದವರಿಗೆ ನೀವು ಮೋಸ ಮಾಡುವುದು ಬೇಡ. ನಿಮ್ಮ ಸಂಗಾತಿಯ ಮನಃಸ್ಥಿತಿಯು ಬದಲಾಗಿದ್ದು ನಿಮಗೆ ಸಮಸ್ಯೆಯಾಗುವುದು.
ಸಿಂಹ ರಾಶಿ:
ವ್ಯಾಪಾರ ಬೆಳವಣಿಗೆಗೆ ಮಾಡಿದ ಪ್ರಯತ್ನಗಳು ಫಲಪ್ರದವಾಗುವುದಿಲ್ಲ. ಭವಿಷ್ಯದಲ್ಲಿ ನೀವು ಒಳ್ಳೆಯ ಫಲಿತಾಂಶವನ್ನು ಪಡೆಯುವಿರಿ. ಪರರ ಒಳಿತನ್ನು ನೋಡಿ ಅಸೂಯೆ ಬೇಡ. ಬರುವ ಕಾಲದ ವರೆಗೆ ತಾಳ್ಮೆ ಬೇಕು. ಬೇಡದ ಮಾತುಗಳನ್ನು ನೀವು ಎಲ್ಲರೆದುರು ಪ್ರಸ್ತಾಪಿಸುವಿರಿ. ನೀವು ತಾಳ್ಮೆಯಿಂದ ಮಾಡುವ ಯಾವುದೇ ಕೆಲಸವನ್ನು ನೀವು ಯಶಸ್ವಿಯಾಗಿ ಪೂರ್ಣಮಾಡುವಿರಿ. ಧಾರ್ಮಿಕ ಕಾರ್ಯಗಳಿಗೆ ದೂರಪ್ರಯಾಣವನ್ನು ಮಾಡುವಿರಿ. ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ.
ಕನ್ಯಾ ರಾಶಿ:
ಇಂದು ನಿಮ್ಮ ಕರ್ತವ್ಯದ ಕಡೆ ಗಮನ ಹೆಚ್ಚಿರಲಿದೆ. ನೀವು ಸ್ವಂತ ಕೆಲಸಕ್ಕಾಗಿ ಸಾಕಷ್ಟು ಓಡಾಟ ಹಾಗೂ ಖರ್ಚನ್ನು ಮಾಡಬೇಕಾದೀತು. ನೀವು ನಿಮ್ಮ ಗುರುವಿನ ಬಗ್ಗೆ ಸಂಪೂರ್ಣ ಭಕ್ತಿ ಮತ್ತು ನಿಷ್ಠೆಯನ್ನು ಇಟ್ಟುಕೊಳ್ಳುವಿರಿ. ಮನಸ್ಸಿನ ನಿಯಂತ್ರಣದಲ್ಲಿ ನಿಮಗೆ ಕಷ್ಟವಾದೀತು. ಕುಟುಂಬದ ತೊಡಕುಗಳನ್ನು ಸೂಕ್ಷ್ಮವಾಗಿ ಪರಿಹರಿಸಿಕೊಳ್ಳಿ. ನೀವು ಹೊಸ ಕೆಲಸದಲ್ಲಿ ಹೂಡಿಕೆ ಮಾಡಬೇಕಾದರೆ, ನೀವು ಲಾಭವನ್ನು ಪಡೆಯುತ್ತೀರಿ ಮತ್ತು ನಿಮ್ಮ ವ್ಯವಹಾರದಲ್ಲಿ ಉತ್ತಮ ಲಾಭವಿದೆ.
ತುಲಾ ರಾಶಿ:
ಇಂದು ಕಷ್ಟಕರವಾದ ಕಾರ್ಯಗಳೂ ಕೆಲವರಿಗೆ ಭಾರವಾಗದೇ ಇರಬಹುದು. ನಿಮ್ಮ ಉದ್ಯಮದ ಗುಣಮಟ್ಟವನ್ನು ಏರಿಸುವಿರಿ. ಪ್ರತಿಯೊಂದು ವಿಷಯದಲ್ಲೂ ನಿಮ್ಮ ಪೋಷಕರಿಂದ ನೀವು ಸಂತೋಷ ಮತ್ತು ಬೆಂಬಲವನ್ನು ಪಡೆಯುತ್ತೀರಿ. ಇಂದು ದೊಡ್ಡ ಖರೀದಿಯನ್ನು ಮಾಡಲು ತೀರ್ಮಾನಿಸಿದ್ದೀರಿ. ನೀವು ಜನರಿಂದ ಪೂರ್ಣ ಗೌರವವನ್ನು ಪಡೆಯುತ್ತೀರಿ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಆಪ್ತರು ನಿಮಗೆ ಆತಿಥ್ಯವನ್ನು ಕೊಡಿಸುವರು. ಇಂದು ವಿದ್ಯಾರ್ಥಿಗಳಿಗೆ ಪ್ರಶಂಸೆ ಸಿಗುವುದು.
ವೃಶ್ಚಿಕ ರಾಶಿ:
ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾಗುವುದು. ನಿಮ್ಮ ಈ ಪ್ರಯಾಣವು ತುಂಬಾ ಪ್ರಯೋಜನಕಾರಿಯಾಗಲಿದೆ. ಬಾಂಧವರ ಜೊತೆ ಸ್ನೇಹದಿಂದ ಇರುವಿರಿ. ಭೂಮಿಯ ವ್ಯವಹಾರವನ್ನು ಮಾಡಲು ಬಹಳ ಉತ್ಸಾವಿರಲಿದೆ. ಪೋಷಕರ ಬೆಂಬಲ ಮತ್ತು ಆಶೀರ್ವಾದದಿಂದ ಸಮಾಧಾನವಿರುತ್ತದೆ. ನಿಮ್ಮ ಬಂಧುಗಳ ಜೊತೆ ಯಾವುದೇ ರೀತಿಯ ವ್ಯವಹಾರವನ್ನು ಮಾಡಬೇಡಿ. ಇಲ್ಲದಿದ್ದರೆ ನೀವು ಸಮಸ್ಯೆಗಳನ್ನು ಎದುರಿಸಬಹುದು. ಮಧುರವಾದ ಮಾತುಗಳಿಂದ ತುಂಡಾಗುವ ಸಂಬಂಧವನ್ನು ಸರಿ ಮಾಡಿಕೊಳ್ಳುವಿರಿ.
ಧನು ರಾಶಿ:
ಇಂದು ಅದೃಷ್ಟವು ನಿಮ್ಮ ಕಡೆ ಇರುವಂತೆ ಕಾಣುತ್ತದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮ ಮಕ್ಕಳ ವೃತ್ತಿಜೀವನದಲ್ಲಿ ನೀವು ಸಾಕಷ್ಟು ತೃಪ್ತರಾಗುವಿರಿ. ಇಂದು, ತಾಯಿಯ ಕಡೆಯಿಂದ ಪ್ರೀತಿ ಮತ್ತು ವಿಶೇಷ ಬೆಂಬಲವನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಐಷಾರಾಮಿಗಳಿಗಾಗಿ ನೀವು ಹಣವನ್ನು ಖರ್ಚು ಮಾಡುತ್ತೀರಿ. ಇದರಿಂದ ನಿಮ್ಮ ಶತ್ರುಗಳನ್ನು ಅಸಮಾಧಾನಗೊಳಿಸುತ್ತದೆ. ಕಾಲಿನ ಕೆಳನ ಭಾಗಕ್ಕೆ ಗಾಯವಾಗುವ ಸಾಧ್ಯತೆ ಇದೆ.
ಮಕರ ರಾಶಿ:
ಯಾವುದೇ ಕೂಲಂಕುಷವಾಗಿ ಯೋಚಿಸಿದ ಅನಂತರ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ನಿಮ್ಮ ಶತ್ರುಗಳಿಗೆ ತಾನಾಗಿಯೇ ಸೋಲಾಗುವುದು. ಸಾಮಾಜಿಕ ಚಟುವಟಿಕೆಗಳಲ್ಲಿ ಅಡಚಣೆ ಉಂಟಾಗುವುದು. ಇಂದು ಕಛೇರಿಯಲ್ಲಿ ಕೊಡುವ ಕೆಲಸವನ್ನು ಬಹಳ ಜವಾಬ್ದಾರಿಯಿಂದ ಮಾಡಬೇಕಾದೀತು. ಆರೋಗ್ಯ ಸಮಸ್ಯೆಗಳು ನಿಮ್ಮ ಸರಿಯಿಲ್ಲದ ದಿನಚರಿಯಿಂದ ಬರಲಿದೆ. ಸೊಂಟದ ಭಾಗದಲ್ಲಿ ನೋವು ಕಾಣಿಸುಬುದು. ಅಮೂಲ್ಯ ವಸ್ತುವಿನ ಬಗ್ಗೆ ನಿಷ್ಕಾಳಜಿ ಸರಿಯಲ್ಲ. ವ್ಯಾಪಾರಸ್ಥರು ಅಧಿಕ ಲಾಭವನ್ನು ಗಳಿಸುವರು.
ಕುಂಭ ರಾಶಿ:
ಇಂದು ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವು ನಿಮಗೇ ಪ್ರಯೋಜನವನ್ನು ನೀಡುತ್ತದೆ. ಮಾನಸಿಕ ಸ್ಥೈರ್ಯ ನಿಮಗೆ ಕಡಿಮೆಯಾಗಬಹುದು. ಇಂದು ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ನಿಮ್ಮ ಮನಸ್ಸಿನಲ್ಲಿ ನೀವು ತುಂಬಾ ಸಂತೋಷವಾಗಿರುತ್ತೀರಿ. ಇಂದಿನ ಆದಾಯವು ಮಧ್ಯಮಕ್ಕಿಂತ ಚೆನ್ನಾಗಿ ಇರುವುದು. ಚಂಚಲ ಮನಸ್ಸು ಸಹಜವಾದುದನ್ನು ಗುರುತಿಸಲಾರದು. ಶತ್ರುಗಳ ಚಿಂತೆಯಿಂದ ಮಾನಸಿಕವಾಗಿ ಕುಗ್ಗುವಿರಿ. ನಿಮ್ಮಷ್ಟಕ್ಕೆ ನೀವಿರಲು ಸಾಧ್ಯವಾಗದು.
ಮೀನ ರಾಶಿ:
ಇಂದು ನೀವು ಹಣದ ವಿಷಯಗಳಲ್ಲಿ ಯಾವುದೇ ರೀತಿಯ ಅಪಾಯವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಬಂಧುಗಳ ಒತ್ತಾಯಕ್ಕೆ ಮಣಿಯಬೇಕಾಗುವುದು. ನೀವು ಹಳೆಯ ಸ್ನೇಹಿತರಿಂದ ಬೆಂಬಲವನ್ನು ಪಡೆಯುವಿರಿ. ಉತ್ತಮ ಸ್ನೇಹಿತರ ಸಮೂಹವೂ ಸಹ ಹೆಚ್ಚಾಗಲಿದೆ. ಉತ್ತಮ ಕೆಲಸದ ಅನ್ವೇಷಣೆಯನ್ನು ಮಾಡುವಿರಿ. ನಿಮ್ಮ ಮಗನ ಮೇಲೆ ಸಂಪತ್ತಿನ ದೂರುವಿರಿ. ತುರ್ತು ಕಾರ್ಯಕ್ಕಾಗಿ ಮನೆಯಿಂದ ದೂರ ಹೋಗಬೇಕಾಗಬಹುದು.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ಉತ್ತರಾಭಾದ್ರ, ವಾರ : ಭಾನು ಪಕ್ಷ : ಶುಕ್ಲ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಪುಷ್ಯ, ಯೋಗ : ಸುಕರ್ಮ, ಕರಣ : ಗರಜ, ಸೂರ್ಯೋದಯ – 06 – 23 am, ಸೂರ್ಯಾಸ್ತ – 06 – 34 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 17:04 – 18:35, ಯಮಗಂಡ ಕಾಲ 12:29 – 14:01, ಗುಳಿಕ ಕಾಲ 16:32 – 17:04