All posts by nagaraj11081993

‘ಸೈಜ್ ಎಷ್ಟು’ ಎಂದು ಕೇಳಿದವನಿಗೆ ಚಪ್ಪಲಿ ತೋರಿಸಿ ಉತ್ತರ ಕೊಟ್ಟ ಅದಾ ಶರ್ಮಾ

‘ಸೈಜ್ ಎಷ್ಟು’ ಎಂದು ಕೇಳಿದವನಿಗೆ ಚಪ್ಪಲಿ ತೋರಿಸಿ ಉತ್ತರ ಕೊಟ್ಟ ಅದಾ ಶರ್ಮಾ

ನಟಿ ಅದಾ ಶರ್ಮಾ (Adah Sharma) ಅವರು ಕನ್ನಡ ಚಿತ್ರರಂಗದವರಿಗೂ ಪರಿಚಿತರು. ಪುನೀತ್ ರಾಜ್​​ಕುಮಾರ್ ನಟನೆಯ ‘ರಣ ವಿಕ್ರಮ’ ಸಿನಿಮಾದಲ್ಲಿ ಅದಾ ಶರ್ಮಾ ಅವರು ನಟಿಸಿದ್ದರು. ಈ ಸಿನಿಮಾ ಮೆಚ್ಚುಗೆ ಪಡೆಯಿತು. ‘ದಿ ಕೇರಳ ಸ್ಟೋರಿ’ ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿತು. ಸದ್ಯ ಅವರು ಬಾಲಿವುಡ್​​ನಲ್ಲಿ ಬ್ಯುಸಿ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಆಗಿರೋ ಅದಾ ಶರ್ಮಾ ಅವರು ಆಗಾಗ ವಿವಿಧ ರೀತಿಯ ಪೋಸ್ಟ್​​ಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಅವರು ಅಶ್ಲೀಲವಾಗಿ ಪ್ರಶ್ನೆ ಕೇಳಿದವರಿಗೆ ಉತ್ತರ ನೀಡಿದ್ದಾರೆ.

ಸೆಲೆಬ್ರಿಟಿಗಳು ಕೆಲವೊಮ್ಮೆ ಬೋಲ್ಡ್ ಆಗಿ ಕಾಣಿಸಿಕೊಂಡು ಫೋಟೋ ಹಾಕುತ್ತಾರೆ. ಈ ಪೋಸ್ಟ್​​ಗಳ ಕಮೆಂಟ್ ಸೆಕ್ಷನ್​​ಗೆ ತೆರಳಿದರೆ ಸಾಕಷ್ಟು ಕೆಟ್ಟ​ ಕಮೆಂಟ್​​​ಗಳನ್ನು ಕಾಣಬಹುದು. ಕೆಲವು ನಟಿಯರು ಇದಕ್ಕೆ ಉತ್ತರ ಕೊಡದೆ ಸುಮ್ಮನೆ ಇದ್ದರೆ ಇನ್ನೂ ಕೆಲವರು ಈ ರೀತಿಯ ಪ್ರಶ್ನೆ ಕೇಳಿದವರಿಗೆ ಖಡಕ್ ಆಗಿ ಉತ್ತರ ನೀಡುತ್ತಾರೆ. ಅದಾ ಶರ್ಮಾ ಕೂಡ ಹಾಗೆಯೇ ಮಾಡಿದ್ದಾರೆ.

ಅದಾ ಶರ್ಮಾ ಅವರು ‘ಆಸ್ಕ್ ಮಿ ಎನಿಥಿಂಗ್’ ಸೆಷನ್ ನಡೆಸಿದ್ದರು. ಈ ವೇಳೆ ಅದಾ ಶರ್ಮಾ ಅವರಿಗೆ ‘ನಿಮ್ಮ ಸೈಜ್ ಎಷ್ಟು’ ಎಂದು ಕೇಳಲಾಗಿದೆ. ಇದು ಕೆಟ್ಟ ಉದ್ದೇಶದಿಂದ ಕೇಳಿದ ಪ್ರಶ್ನೆ ಎಂಬುದು ಅದಾಗೆ ಗೊತ್ತಾಗಿದೆ. ಹೀಗಾಗಿ, ಅವರು ‘ಸೈಜ್ 9, ನನ್ನ ಚಪ್ಪಲಿಯದ್ದು’ ಎಂದಿದ್ದಾರೆ. ಈ ವೇಳೆ ಅವರು ಪರೋಕ್ಷವಾಗಿ ಮಧ್ಯ ಬೆಟ್ಟನ್ನು ತೋರಿಸಿದ್ದಾರೆ. ಈ ಮೂಲಕ ಪ್ರಶ್ನೆ ಕೇಳಿದವನಿಗೆ ಅದಾ ಮಂಗಳಾರತಿ ಮಾಡಿದ್ದಾರೆ. ಅವರ ಕ್ರಮಕ್ಕೆ ಎಲ್ಲರೂ ಸಂತಸ ಹೊರಹಾಕಿದ್ದಾರೆ.

ಇದನ್ನೂ ಓದಿ: ಪುನೀತ್ ಜೊತೆ ನಟಿಸಿದ ಅದಾ ಶರ್ಮಾ ನಿಜವಾದ ಹೆಸರೇನು ಗೊತ್ತಾ? ಪಕ್ಕಾ ಟ್ರೆಡಿಷನಲ್

ಸಾಮಾನ್ಯವಾಗಿ ಮುಜುಗರ ತರುವ ಪ್ರಶ್ನೆ ಅಥವಾ ಅಶ್ಲೀಲ ಪ್ರಶ್ನೆ ಕೇಳಿದಾಗ ಸೆಲೆಬ್ರಿಟಿಗಳು ಆ ಬಗ್ಗೆ ಉತ್ತರ ನೀಡಲು ಹಿಂದೇಟು ಹಾಕುತ್ತಾರೆ. ಆ ರೀತಿಯ ಪ್ರಶ್ನೆಗಳನ್ನು ಸ್ಕಿಪ್ ಮಾಡುತ್ತಾರೆ. ಆದರೆ, ಅದಾ ಶರ್ಮಾ ಅವರು ಆ ರೀತಿ ಮಾಡಿಲ್ಲ. ಅವರು ಈ ಪ್ರಶ್ನೆಯನ್ನು ಗಂಭೀರವಾಗಿ ಸ್ವೀಕರಿಸಿ, ಅದಕ್ಕೆ ಉತ್ತರ ಕೊಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಂತ್ರಾಲಯ ರಾಯರ ಹುಂಡಿಯಲ್ಲಿ ಕೇವಲ 21 ದಿನಗಳಲ್ಲಿ 2.48 ಕೋಟಿ ರೂ. ಸಂಗ್ರಹ

ರಾಯಚೂರು, ಏಪ್ರಿಲ್ 2: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಮಾರ್ಚ್ ತಿಂಗಳ ಕೇವಲ 21 ದಿನಗಳಲ್ಲಿ ಭಕ್ತರು ದಾಖಲೆ ಪ್ರಮಾಣದ ಕಾಣಿಕೆ ಅರ್ಪಿಸಿದ್ದಾರೆ. ಹುಂಡಿ ಎಣಿಕೆ ಕಾರ್ಯದಲ್ಲಿ ಒಟ್ಟು 2,48,28,737 ರೂಪಾಯಿ ನಗದು ಸಂಗ್ರಹವಾಗಿದೆ. ಇದರೊಂದಿಗೆ 14 ಗ್ರಾಂ ಚಿನ್ನ ಹಾಗೂ 2.16 ಕೆಜಿ ಬೆಳ್ಳಿಯ ಆಭರಣಗಳನ್ನು ಭಕ್ತರು ರಾಯರ ಪಾದಕ್ಕೆ ಸಮರ್ಪಿಸಿದ್ದಾರೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಮಗೆ RCB ಅಂದ್ರೆ ಭಯ… ವ್ಯಂಗ್ಯವಾಡಿದ ಸೆಹ್ವಾಗ್..!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​-19 ರಂಗೇರುತ್ತಿರುವ ಬೆನ್ನಲ್ಲೇ, ಭಾರತ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ನೀಡಿರುವ ಒಂದು ಹೇಳಿಕೆ ಈಗ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಅದು ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳನ್ನು ತುಚ್ಛವಾಗಿ ಕಾಣುವ ಮೂಲಕ. ಅಂದರೆ ತಾನು ಐಪಿಎಲ್ ಆಡುತ್ತಿದ್ದ ಸಮಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳನ್ನು  ಹೇಗೆ ನೋಡುತ್ತಿದ್ದೆವು ಎಂಬ ವಿಚಾರವನ್ನು ಸೆಹ್ವಾಗ್ ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಸೆಹ್ವಾಗ್ ಅವರ ಪ್ರಕಾರ, ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ವಿರುದ್ಧ ಆಡುವಾಗ ಅವರಿಗೆ ಯಾವುದೇ ಭಯವಿರುತ್ತಿರಲಿಲ್ಲ. “ಸಿಎಸ್‌ಕೆ ಸೋಲಿಸುವುದು ಕಷ್ಟ ಎಂಬುದು ನಮಗೆ ತಿಳಿದಿತ್ತು, ಹಾಗಾಗಿ ಅವರ ವಿರುದ್ಧ ಗೆದ್ದರೆ ಅದು ನಮಗೆ ‘ಬೋನಸ್’ ಎಂದು ಭಾವಿಸುತ್ತಿದ್ದೆವು” ಎಂದಿದ್ದಾರೆ. ಆದರೆ ಅಸಲಿ ಭಯವಿದ್ದುದು ಆರ್‌ಸಿಬಿ ಮತ್ತು ಡೆಲ್ಲಿ ವಿರುದ್ಧ ಆಡುವಾಗವಂತೆ!

‘ಫ್ರೀ ಪಾಯಿಂಟ್ಸ್’

“ಆರ್‌ಸಿಬಿ ಮತ್ತು ಡೆಲ್ಲಿ ತಂಡಗಳ ವಿರುದ್ಧದ ಪಂದ್ಯಗಳನ್ನು ನಾವು ‘ಫ್ರೀ ಪಾಯಿಂಟ್ಸ್’ (ಸುಲಭದ ಅಂಕಗಳು) ಎಂದು ಪರಿಗಣಿಸುತ್ತಿದ್ದೆವು. ಈ ಪಂದ್ಯಗಳನ್ನು ನಾವು ಯಾವುದೇ ಕಾರಣಕ್ಕೂ ಸೋಲಬಾರದು ಎಂಬ ದೊಡ್ಡ ಒತ್ತಡ ನಮ್ಮ ಮೇಲಿರುತ್ತಿತ್ತು. ಟೇಬಲ್‌ನಲ್ಲಿ ಮೇಲೆ ಬರಲು ಈ ಎರಡು ಅಂಕಗಳು ಅತ್ಯಂತ ಸುಲಭ ಮತ್ತು ಅನಿವಾರ್ಯವಾಗಿದ್ದವು” ಎಂದು ಸೆಹ್ವಾಗ್ ಹೇಳಿದ್ದಾರೆ.

ನಾವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳನ್ನು ನಮಗೆ ಅಂಕಗಳನ್ನು ನೀಡುವ ತಂಡಗಳೆಂದೇ ನೋಡುತ್ತಿದ್ದೆವು. ಹೀಗಾಗಿಯೇ ಅವರ ವಿರುದ್ಧ ಸೋತು ಬಿಟ್ಟರೆ ಎಂಬ ಭಯ ಕಾಡುತ್ತಿತ್ತು ಎಂದು ವೀರೇಂದ್ರ ಸೆಹ್ವಾಗ್ ವ್ಯಂಗ್ಯವಾಡಿದ್ದಾರೆ.

ಬದಲಾದ ಆರ್​ಸಿಬಿ:

ವೀರೇಂದ್ರ ಸೆಹ್ವಾಗ್ ಅವರ ಈ ಹಳೆಯ ಅನುಭವದ ಮಾತುಗಳು ಇಂದಿನ ಐಪಿಎಲ್ 2026ಕ್ಕೆ ಅನ್ವಯಿಸುವುದಿಲ್ಲ. ಏಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ರಸ್ತುತ ಐಪಿಎಲ್​ನ ಬಲಿಷ್ಠ ತಂಡ. ಅದರಲ್ಲೂ ಕಳೆದ ಸೀಸನ್‌ನಲ್ಲಿ (2025)  ಚಾಂಪಿಯನ್ ಆಗಿ ಹೊರಹೊಮ್ಮಿರುವ ಆರ್‌ಸಿಬಿ, ಈಗ ‘ಡಿಫೆಂಡಿಂಗ್ ಚಾಂಪಿಯನ್ಸ್’ ಪಟ್ಟದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: IPL 2026: ಮೊದಲ ಪಂದ್ಯಗಳ ಬಳಿಕ ಹೀಗಿದೆ ಪಾಯಿಂಟ್ಸ್ ಟೇಬಲ್

ಇದಾಗ್ಯೂ ಕಾಮೆಂಟ್ರಿ ಮಾಡುವಾಗ ಇತರೆ ತಂಡಗಳ ಅಭಿಮಾನಿಗಳನ್ನು ಕೆಣಕುವ ರೀತಿಯಲ್ಲಿ ಮಾತನಾಡುವ ವೀರೇಂದ್ರ ಸೆಹ್ವಾಗ್ ವಿರುದ್ಧ ಇದೀಗ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ಫ್ರೀ ಪಾಯಿಂಟ್ಸ್ ಹೇಳಿಕೆ ನೀಡಿರುವ ಸೆಹ್ವಾಗ್ ಎಷ್ಟು ಐಪಿಎಲ್ ಟ್ರೋಫಿ ಗೆದ್ದಿದ್ದಾರೆ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆಗಳನ್ನೆತ್ತಿದ್ದಾರೆ.

 

Source link

ಕೋಲಾರ: ಗಂಡನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಹಿಳೆ ಮೇಲೆ ಆ್ಯಸಿಡ್ ದಾಳಿ ಮಾಡಿದ ಪತ್ನಿ

ಕೋಲಾರ, ಏಪ್ರಿಲ್ 2: ಕೋಲಾರ (Kolar) ಜಿಲ್ಲಾ ಕೇಂದ್ರದ ಆಜಾದ್ ನಗರದಲ್ಲಿ ಬುಧವಾರ ರಾತ್ರಿ ಭೀಕರ ಘಟನೆಯೊಂದು ಸಂಭವಿಸಿದೆ. ಅಕ್ರಮ ಸಂಬಂಧದ ಆರೋಪದ ಹಿನ್ನೆಲೆಯಲ್ಲಿ ನಡೆದ ರಾಜಿ ಸಂಧಾನ ವಿಕೋಪಕ್ಕೆ ತಿರುಗಿ, ಮಹಿಳೆಯೊಬ್ಬಳು ತನ್ನ ಪತಿಯ ಜತೆ ಅಕ್ರಮ ಸಂಬಂಧ ಹೊಂದಿದ್ದಾಕೆಯ ಮೇಲೆ ಆಸಿಡ್ ಎರಚಿದ್ದಾಳೆ. ಘಟನೆಯಲ್ಲಿ ಮುಸ್ಕಾನ್ ಎಂಬ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

ಆರೋಪಿ ಆಯೇಷಾ ಹಾಗೂ ಗಾಯಾಳು ಮುಸ್ಕಾನ್ ಇಬ್ಬರೂ ಪರಸ್ಪರ ಸಂಬಂಧಿಕರು. ಆಯೇಷಾಳ ಪತಿ ಶಾಬಾಜ್ ಅಹಮದ್‌ನ ತಮ್ಮನ ಪತ್ನಿ ಮುಸ್ಕಾನ್ ಎನ್ನಲಾಗಿದೆ. ಮುಸ್ಕಾನ್ ಪತಿ ಕುಡಿತದ ವ್ಯಸನಿಯಾಗಿದ್ದು, ಸಂಸಾರ ನಿರ್ವಹಣೆಯಲ್ಲಿ ವಿಫಲನಾಗಿದ್ದ. ಈ ಸಂದರ್ಭದಲ್ಲಿ ಶಾಬಾಜ್ ಅಹಮದ್ ಹಣಕಾಸಿನ ನೆರವು ನೀಡುತ್ತಿದ್ದ. ಅಲ್ಲದೆ, ಆ ನೆಪದಲ್ಲಿ ಮುಸ್ಕಾನ್ ಜೊತೆಗೆ ಅಕ್ರಮ ಸಂಬಂಧ ಬೆಳೆಸಿದ್ದ ಎಂಬ ಆರೋಪವಿದೆ.

ಮೂರು ತಿಂಗಳ ಹಿಂದೆ ಮುಸ್ಕಾನ್ ಮತ್ತು ಶಾಬಾಜ್ ಅಹಮದ್ ಓಡಿಹೋಗಿ ಬೆಂಗಳೂರಿನಲ್ಲಿ ವಾಸವಿದ್ದರು. ಇತ್ತೀಚೆಗಷ್ಟೇ ಸಂಬಂಧಿಕರು ಇವರನ್ನು ಪತ್ತೆಹಚ್ಚಿ ಕೋಲಾರಕ್ಕೆ ಕರೆತಂದಿದ್ದರು.

ರಾಜಿ ಸಂಧಾನದಲ್ಲಿ ಗಲಾಟೆ

ಸಮಸ್ಯೆಯನ್ನು ಬಗೆಹರಿಸಲು ಬುಧವಾರ ರಾತ್ರಿ ಸಂಬಂಧಿಕರ ಮನೆಯೊಂದರಲ್ಲಿ ‘ರಾಜಿ ಪಂಚಾಯ್ತಿ’ ಹಮ್ಮಿಕೊಳ್ಳಲಾಗಿತ್ತು. ಮಾತಿನ ಚಕಮಕಿ ನಡೆಯುತ್ತಿರುವಾಗಲೇ ಆಕ್ರೋಶಗೊಂಡ ಆಯೇಷಾ, ತಾನು ಮೊದಲೇ ಸಿದ್ಧಪಡಿಸಿಕೊಂಡು ತಂದಿದ್ದ ಬಾತ್ ರೂಂ ಕ್ಲೀನಿಂಗ್ ಆಸಿಡ್ ಅನ್ನು ಮುಸ್ಕಾನ್ ಮುಖಕ್ಕೆ ಎರಚಿದ್ದಾಳೆ. ದಾಳಿಯ ಬಳಿಕ ಆಯೇಷಾ ಸ್ಥಳದಿಂದ ಪರಾರಿಯಾಗಿದ್ದಾಳೆ.

ಇದನ್ನೂ ಓದಿ: ತೆಲಂಗಾಣ ಟೆಕ್ಕಿ ದಂಪತಿಯ ಜೀವವನ್ನೇ ತೆಗೆಯಿತು ಎಐ! ಆಗಿದ್ದೇನು ಗೊತ್ತಾ?

ವಿಷಯ ತಿಳಿಯುತ್ತಿದ್ದಂತೆಯೇ ಗಲ್ ಪೇಟೆ ಪೊಲೀಸರು ಸ್ಥಳಕ್ಕೆ ಧಾವಿಸಿ, ನೋವಿನಿಂದ ನರಳುತ್ತಿದ್ದ ಮುಸ್ಕಾನ್ ಅವರನ್ನು ತಮ್ಮ ಜೀಪ್‌ನಲ್ಲೇ ಕರೆದೊಯ್ದು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಎಸ್‌ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಲೆಮರೆಸಿಕೊಂಡಿದ್ದ ಆಯೇಷಾಳನ್ನು ಪೊಲೀಸರು ಸದ್ಯ ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐಪಿಎಲ್ ಉದ್ಘಾಟನಾ ಪಂದ್ಯ: ‘ಬೆಂಗಳೂರು ಮಾಡೆಲ್’ ಯಶಸ್ಸಿಗೆ ಮುಂಬೈ-ಕೋಲ್ಕತ್ತಾ ಫಿದಾ!

ಬೆಂಗಳೂರು, ಏಪ್ರಿಲ್ 2: ಸಿಲಿಕಾನ್ ಸಿಟಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಈಗ ಕೇವಲ ಕ್ರಿಕೆಟ್ ಪಂದ್ಯಗಳಿಗಷ್ಟೇ ಅಲ್ಲ, ಸುಸಜ್ಜಿತ ಜನಸಂದಣಿ ನಿರ್ವಹಣೆಗೂ (Crowd Management) ಮಾದರಿಯಾಗಿ ಹೊರಹೊಮ್ಮಿದೆ. ಆರ್​ಸಿಬಿ (RCB) ವಿಜಯೋತ್ಸವ ಕಾಲ್ತುಳಿತ ಘಟನೆಯಿಂದ ಇಡೀ ದೇಶದ ಗಮನ ಸೆಳೆದಿದ್ದ, ಜನಸಂದಣಿ ನಿರ್ವಹಣೆಯಲ್ಲಿ ವಿಫಲವಾಗಿದ್ದ ಬೆಂಗಳೂರು ಅದಾಗಿ ಒಂದು ವರ್ಷದ ಒಳಗೇ ದೇಶದ ಇತರ ರಾಜ್ಯಗಳ ಹುಬ್ಬೇರುವಂತೆ ಮಾಡಿದೆ. ಇತ್ತೀಚೆಗೆ ನಡೆದ ಐಪಿಎಲ್ ಉದ್ಘಾಟನಾ ಪಂದ್ಯದ ಅದ್ಭುತ ವ್ಯವಸ್ಥೆಯನ್ನು ಕಂಡು ಮುಂಬೈ ಮತ್ತು ಕೋಲ್ಕತ್ತಾದಂತಹ ಮೆಟ್ರೋ ಪಾಲಿಟನ್ ನಗರಗಳ ಕ್ರಿಕೆಟ್ ಆಡಳಿತ ಮಂಡಳಿಗಳು ಬೆಂಗಳೂರು ಮಾದರಿಯ ಮಾಹಿತಿಯನ್ನು ಕೋರಿವೆ.

ಕಳೆದ ವರ್ಷ ಆರ್‌ಸಿಬಿ ಐಪಿಎಲ್ ವಿಜಯೋತ್ಸವ ಕಾರ್ಯಕ್ರಮದ ವೇಳೆ ನಡೆದ ಕಾಲ್ತುಳಿತ ಮತ್ತು ಗೊಂದಲದ ಪರಿಸ್ಥಿತಿಯಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಮತ್ತು ಬೆಂಗಳೂರು ಪೊಲೀಸರು ಎಚ್ಚೆತ್ತುಕೊಂಡಿತ್ತು. ಆ ಕಹಿ ಘಟನೆಯನ್ನು ಸವಾಲಾಗಿ ಸ್ವೀಕರಿಸಿದ ಆಡಳಿತ ಮಂಡಳಿ, ಈ ಬಾರಿ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಐಪಿಎಲ್ ಉದ್ಘಾಟನಾ ಪಂದ್ಯದ ವೇಳೆ ಮೈದಾನದ ಒಳಗೆ ಮತ್ತು ಹೊರಗೆ ಯಾವುದೇ ನೂಕುನುಗ್ಗಲು ಉಂಟಾಗದಂತೆ ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಇದು ಗಮನ ಸೆಳೆದಿದೆ.

ಐಪಿಎಲ್ ಟಿಕೆಟ್​​ನಲ್ಲಿ ಮೆಟ್ರೋ ಕ್ಯೂಆರ್ ಕೋಡ್: ದೇಶಾದ್ಯಂತ ಮೆಚ್ಚುಗೆ

ಬೆಂಗಳೂರಿನ ಈ ಯಶಸ್ಸಿನ ಹಿಂದೆ ಇದ್ದ ಪ್ರಮುಖ ಸೂತ್ರವೆಂದರೆ ‘ಮ್ಯಾಚ್ ಟಿಕೆಟ್ ಜೊತೆಯೇ ಮೆಟ್ರೋ ಟಿಕೆಟ್’ ಸೌಲಭ್ಯ. ಕ್ರಿಕೆಟ್ ಟಿಕೆಟ್ ಖರೀದಿಸಿದವರಿಗೇ ಮೆಟ್ರೋ ಪ್ರಯಾಣದ ಕ್ಯೂಆರ್ ಕೋಡ್ (QR Code) ನೀಡಿದ ವ್ಯವಸ್ಥೆಗೆ ಮುಂಬೈ ಮತ್ತು ಕೋಲ್ಕತ್ತಾ ಕ್ರಿಕೆಟ್ ಮಂಡಳಿಗಳು ಮಾರುಹೋಗಿವೆ. ಇದರಿಂದ ಸ್ಟೇಡಿಯಂ ಸುತ್ತಮುತ್ತ ಖಾಸಗಿ ವಾಹನಗಳ ಹಾವಳಿ ಕಡಿಮೆಯಾಗಿ, ಟ್ರಾಫಿಕ್ ಸಮಸ್ಯೆ ಗಣನೀಯವಾಗಿ ತಗ್ಗಿದೆ.

ಐಪಿಎಲ್ ಪಂದ್ಯಗಳಿಗಾಗಿ ಮುಂದಿನ ಯೋಜನೆಗಳೇನು?

ಮೆಟ್ರೋ ಯಶಸ್ಸಿನ ಬೆನ್ನಲ್ಲೇ, ಮುಂದಿನ ಪಂದ್ಯಗಳ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಿಂದ ನೇರವಾಗಿ ಮೆಜೆಸ್ಟಿಕ್‌ಗೆ ವಿಶೇಷ ಬಸ್ ವ್ಯವಸ್ಥೆ ಮಾಡಲು ಬಿಎಂಟಿಸಿ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಮತ್ತೊಂದೆಡೆ, ನಕಲಿ ಟಿಕೆಟ್ ಹಾವಳಿಗೆ ಬ್ರೇಕ್ ಹಾಕಲೂ ಕ್ರಮ ಕೈಗೊಳ್ಳಲಾಗುತ್ತಿದೆ.

ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಸಿಸಲು ಬರುವವರಿಗೆ ಹೊಸ ರೂಲ್ಸ್! ಅಭಿಮಾನಿಗಳೇ ಈ ವಿಚಾರ ತಿಳಿದಿರಿ

1,500 ರೂಪಾಯಿ ಮುಖಬೆಲೆಯ ಟಿಕೆಟ್‌ಗಳಲ್ಲಿ ನಕಲಿ ಹಾವಳಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಇನ್ನು ಮುಂದೆ ಕಡಿಮೆ ಬೆಲೆಯ ಟಿಕೆಟ್‌ಗಳನ್ನು ಕೇವಲ ಆನ್‌ಲೈನ್‌ನಲ್ಲಿ ಮಾತ್ರ ಮಾರಾಟ ಮಾಡಲು ಚಿಂತನೆ ನಡೆಸಲಾಗಿದೆ. ಆಫ್‌ಲೈನ್ ಕೌಂಟರ್‌ಗಳಲ್ಲಿ ಉಂಟಾಗುವ ಜನಸಂದಣಿ ತಪ್ಪಿಸಲು ಇದು ಸಹಕಾರಿಯಾಗಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಮೊದಲ ಪಂದ್ಯಗಳ ಬಳಿಕ ಹೀಗಿದೆ ಪಾಯಿಂಟ್ಸ್ ಟೇಬಲ್

Source link

ತಮ್ಮ ನೋವಿನ ಕಥೆ ಹೇಳಿದ ‘ಜೋಡಿ ನಂಬರ್ 1’ ಸ್ಪರ್ಧಿಗಳು

ಜೀ ಕನ್ನಡದಲ್ಲಿ ಏಪ್ರಿಲ್ 4ರಂದು ಜೋಡಿ ನಂಬರ್ 1 ಶೋ ಆರಂಭ ಆಗಲಿದೆ. ಈ ಶೋ ನೋಡಲು ಫ್ಯಾನ್ಸ್ ಕಾದಿದ್ದಾರೆ. 10 ಸೆಲೆಬ್ರಿಟಿ ಜೋಡಿಗಳು ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಧನರಾಜ್, ಬಾಳು ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಈ ಶೋಗೆ ನೆನಪಿರಲಿ ಪ್ರೇಮ್, ಮಾಳವಿಕಾ, ರಾಜೇಶ್ ನಟರಂಗ, ಛಾಯಾ ಸಿಂಗ್ ಜಡ್ಜ್ ಸ್ಥಾನದಲ್ಲಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Fact Check: ಸೋನಿಯಾ ಗಾಂಧಿ ಭೇಟಿ ಮಾಡಲು ಆಸ್ಪತ್ರೆಗೆ ಹೋಗಿದ್ರಾ ಪ್ರಧಾನಿ ಮೋದಿ?

ನವದೆಹಲಿ, ಏಪ್ರಿಲ್ 2: ಪ್ರಧಾನಿ ನರೇಂದ್ರ ಮೋದಿ (Narendra Modi) ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದಾರೆ ಎಂದು ಹೇಳುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಅಮರ್​​ಉಜಾಲಾ ನಡೆಸಿದ ಫ್ಯಾಕ್ಟ್​ಚೆಕ್​ನಲ್ಲಿ ಅದು ಸುಳ್ಳು ಎಂಬುದು ತಿಳಿದುಬಂದಿದೆ. ಸೋನಿಯಾ ಗಾಂಧಿ ಅವರನ್ನು ಮಂಗಳವಾರ ಬೆಳಗ್ಗೆ ರಾಜಧಾನಿ ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಜ್ವರ ಕಾಣಿಸಿಕೊಂಡ ನಂತರ ಮಾರ್ಚ್ 24 ರಂದು ಅವರನ್ನು ಅಲ್ಲಿಗೆ ದಾಖಲಿಸಲಾಗಿತ್ತು. ಆ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಸ್ಪತ್ರೆಗೆ ಭೇಟಿ ನೀಡಿರುವಂತೆ ಕಾಣುವ ಫೋಟೊಗಳು ಕೂಡ ಕಾಣಿಸಿಕೊಂಡಿತ್ತು. ಈ ಫೊಟೊವನ್ನು ಎಐ ಮೂಲಕ ಚಿತ್ರಿಸಲಾಗಿದೆ. ತೇಜಸ್ವಿ ಯಾದವ್ ಆರ್‌ಜೆಡಿ ಎಂಬ ಫೇಸ್‌ಬುಕ್ ಬಳಕೆದಾರರು ದೀರ್ಘಕಾಲದಿಂದ ದಾಖಲಾಗಿರುವ ಸೋನಿಯಾ ಗಾಂಧಿ ಅವರನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಆಸ್ಪತ್ರೆಯಲ್ಲಿ ಭೇಟಿ ಮಾಡಿದರು ಎಂದು ಬರೆದಿದ್ದರು.

ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿವೆ. ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಎಲ್ಲಾ ಪ್ರಮುಖ ಪಕ್ಷಗಳು ತಮ್ಮ ಕಾರ್ಯತಂತ್ರಗಳನ್ನು ಅಂತಿಮಗೊಳಿಸುವಲ್ಲಿ ನಿರತವಾಗಿವೆ ಮತ್ತು ಚುನಾವಣಾ ಪ್ರಚಾರಗಳು ತಳಮಟ್ಟದಲ್ಲಿ ವೇಗವನ್ನು ಪಡೆದಿವೆ.

ಮತ್ತಷ್ಟು ಓದಿ: ಪ್ರಧಾನಿ ಮೋದಿಗಾಗಿ ಹಾಡು ಹಾಡಿದ ಅಸ್ಸಾಂ ಚಹಾ ತೋಟದ ಕಾರ್ಮಿಕರು

ಈ ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ಒಂದು ಫೋಟೋ ವೇಗವಾಗಿ ವೈರಲ್ ಆಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ ಎಂದು ಅದು ಹೇಳುತ್ತದೆ.
ಈ ಫೋಟೋದಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಇದ್ದಾರೆ.

ಇಂದು ನರೇಂದ್ರ ಮೋದಿ ತಮ್ಮ ವಿರೋಧ ಪಕ್ಷದ ನಾಯಕರನ್ನು ಭೇಟಿಯಾದರು ಎನ್ನುವ ಶೀರ್ಷಿಕೆಯಲ್ಲಿ ಫೋಟೊ ವೈರಲ್ ಮಾಡಲಾಗಿತ್ತು. ವೈರಲ್ ಫೋಟೋದಲ್ಲಿ ಸಿಂಥ್‌ಐಡಿ ವಾಟರ್‌ಮಾರ್ಕ್ (AI ವಿಷಯ ಗುರುತಿನ ಸಾಧನ) ಕಂಡುಬಂದಿದೆ. ನೀಲಿ ಬಣ್ಣವು ಎಐ-ರಚಿತ ಭಾಗವನ್ನು ಎತ್ತಿ ತೋರಿಸುತ್ತದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಮೃತ ಸ್ಟಾರ್ ಹೀರೋ ನನ್ನ ಪತಿ ಎಂದು ಹೇಳಿಕೊಂಡು ಬಂದ ನಟಿ; ಮುಂದೇನಾಯ್ತು?

ಬಾಲಿವುಡ್​​ನಲ್ಲಿ ಹಲವು ವರ್ಷಗಳ ಕಾಲ ಮಿಂಚಿದವರು ರಾಜೇಶ್​ ಖನ್ನಾ. ಅವರು ಮೃತಪಟ್ಟು ಹಲವು ವರ್ಷಗಳೇ ಕಳೆದಿವೆ. ಆದರೆ, ಅವರ ಮೇಲೆ ಇರುವ ಒಂದು ವಿವಾದ ಮಾತ್ರ ಈಗಲೂ ಸುದ್ದಿ ಆಗುತ್ತಿದೆ. ‘ರಾಜೇಶ್ ಖನ್ನಾ ನನ್ನ ಪತಿ’ ಎಂದು ನಟಿ ಅನಿತಾ ಅಡ್ವಾಣಿ ಅವರು ಹೇಳಿಕೊಂಡಿದ್ದರು. ಅದರೆ, ಕೋರ್ಟ್ಅಲ್ಲಿ ಅವರಿಗೆ ಹಿನ್ನಡೆ ಆಗಿದೆ. ಅವರಿಗೆ ಪತ್ನಿಯ ಸ್ಥಾನ ಕೊಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

‘ಕಾನೂನಾತ್ಮಕವಾಗಿ ರಾಜೇಶ್ ಖನ್ನಾ ನಿಮ್ಮ ಪತಿ ಆಗಲು ಸಾಧ್ಯವಿಲ್ಲ’ ಎಂದು ದಿಂಡೋಶಿ ಸೆಷನ್ ಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪನ್ನು ಅನಿತಾ ಅಡ್ವಾಣಿ ಬಾಂಬೇ ಹೈಕೋರ್ಟ್​ ಅಲ್ಲಿ ಪ್ರಶ್ನೆ ಮಾಡಿದ್ದರು. ಅಲ್ಲಿಯೂ ಅನಿತಾಗೆ ಹಿನ್ನಡೆ ಆಗಿದೆ.

ಅನಿತಾ ಅವರು ಬಾಂಬೇ ಹೈಕೋರ್ಟ್​​ಗೆ ಅರ್ಜಿ ಸಲ್ಲಿಕೆ ಮಾಡಿದ ಬಳಿಕ ರಾಜೇಶ್ ಪರವಾಗಿ ಅವರ ಮಗಳು ಟ್ವಿಂಕಲ್ ಖನ್ನಾ, ಅಳಿತ ಅಕ್ಷಯ್ ಕುಮಾರ್ ಹಾಗೂ ಪತ್ನಿ ಡಿಂಪಲ್ ಕಪಾಡಿಯಾ ವಕಲೀರೊಬ್ಬರನ್ನು ನೇಮಿಸಿದ್ದರು. ಅನಿತಾ ಅಡ್​ವಾಣಿ ಅವರನ್ನು ರಾಜೇಶ್ ಪತ್ನಿ ಎಂದು ಕರೆಯಲು ಸಾಧ್ಯವಿಲ್ಲ ಎಂದು ವಾದಿಸಲಾಯಿತು. ಇದನ್ನು ಕೋರ್ಟ್ ಪುರಸ್ಕರಿಸಿದೆ.

‘ನನ್ನ ಹಾಗೂ ರಾಜೇಶ್ ಮಧ್ಯೆ ಪತ್ನಿ ರೀತಿಯ ಸಂಬಂಧ ಇತ್ತು. ಅದು ಮದುವೆ ರೀತಿಯೇ ಆಗಿತ್ತು. ರಾಜೇಶ್ ನಿಧನದ ನಂತರ ನನ್ನನ್ನು ಮನೆಯಿಂದ ಹೊರಕ್ಕೆ ಹಾಕಲಾಯಿತು’ ಎಂದು ಅನಿತಾ ಆರೋಪಿಸಿದ್ದಾರೆ. ಲಿವಿನ್​ ರಿಲೇಶನ್​ಶಿಪ್​ಗೆ ಮದುವೆಯ ಸ್ಥಾನ ಕೊಡಲು ಸಾಧ್ಯವಿಲ್ಲ ಎಂಬುದು ಕೋರ್ಟ್ ಅಭಿಪ್ರಾಯ.

ಇದನ್ನೂ ಓದಿ: ‘ನೀನು ಅಕ್ಷಯ್​ ಕುಮಾರ್​​ನ ಮದ್ವೆ ಆಗ್ತೀಯಾ’; ಟ್ವಿಂಕಲ್​ ಖನ್ನಾ ಕೈ ನೋಡಿ ಭವಿಷ್ಯ ನುಡಿದಿದ್ದ ಜ್ಯೋತಿಷಿ

ರಾಜೇಶ್ ಖನ್ನಾ ಭಾರತ ಚಿತ್ರರಂಗದ ಅತಿದೊಡ್ಡ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರು. ಅವರು 1965ರಲ್ಲಿ 1969 ಮತ್ತು 1971 ರ ನಡುವೆ, ಅವರು ಸತತ 15 ಹಿಟ್ ಚಿತ್ರಗಳನ್ನು ನೀಡಿದರು. ಇದು ಹಿಂದಿ ಚಿತ್ರರಂಗದಲ್ಲಿ ದಾಖಲೆಯಾಗಿದೆ. ಅವರು ಮೂರು ಫಿಲ್ಮ್‌ಫೇರ್ (ಅತ್ಯುತ್ತಮ ನಟ) ಪ್ರಶಸ್ತಿಗಳನ್ನು ಗೆದ್ದರು. ಅವರು ಕೆಲ ವರ್ಷ ರಾಜಕೀಯದಲ್ಲೂ ಇದ್ದರು. 1973ರಲ್ಲಿ ಡಿಂಪಲ್ ಕಪಾಡಿಯಾ ಅವರನ್ನು ರಾಜೇಶ್ ವಿವಾಹ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನನ್ನ ಸಾವಿಗೆ ಇವರೇ ಕಾರಣ: ಪ್ರಾಧ್ಯಾಪಕರ ಜತೆ ಸಂಬಂಧ ಕಲ್ಪಿಸಿ ಅಪಪ್ರಚಾರ, ಬಿಎಎಂಎಸ್ ವಿದ್ಯಾರ್ಥಿನಿ ಆತ್ಮಹತ್ಯೆ!

ಚಿತ್ರದುರ್ಗ, ಏ.2: “ಸ್ಟೂಡೆಂಟ್​​​​ ಲೈಫ್ ಈಸ್​​​ ಗೋಲ್ಡನ್​ ಲೈಫ್” ಎಂಬ ಮಾತಿದೆ. ಕಾಲೇಜು ಜೀವನದಲ್ಲಿ ಎಲ್ಲವೂ ಚಂದ, ಆದರೆ ಅಲ್ಲಿ ಕೆಲವೊಂದು ಅತಿರೇಖದ ವಿಚಾರಗಳು ನಡೆಯುತ್ತದೆ, ವಿದ್ಯಾರ್ಥಿಗಳ ನಡುವೆ ಲವ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವೆ ಮಿತಿಮೀರಿದ ಸಂಬಂಧಗಳು, ಹೀಗೆ ಹಲವೂ ಘಟನೆಗಳು ನಡೆದಿರುತ್ತದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವೆ ಇರಬೇಕಾದ ಗುರು ಹಾಗೂ ಶಿಷ್ಯರ ಸಂಬಂಧಕ್ಕೆ ಬೇರೆ ಅರ್ಥವನ್ನು ಕಲ್ಪಿಸುವ ಚಟ ಈಗ ಕಾಲೇಜಿಗಳಲ್ಲಿ ಶುರುವಾಗಿದೆ. ಇದೀಗ ಇಂತಹದೇ ಒಂದು ವಿಚಾರಕ್ಕೆ ವಿದ್ಯಾರ್ಥಿಯೊಬ್ಬಳ ಜೀವ ಕಳೆದುಕೊಂಡಿದ್ದಾಳೆ. ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಮಲ್ಲಾಡಿಹಳ್ಳಿಯ ಆಯುರ್ವೇದ ಕಾಲೇಜಿನ ಬಿಎಎಂಎಸ್ ವಿದ್ಯಾರ್ಥಿನಿ ಲಿಖಿತಾ (23), ತನ್ನ ಅಧ್ಯಾಪಕರ ಜೊತೆ ಸಂಬಂಧ ಕಲ್ಪಿಸಿ ನಡೆಸಲಾದ ಅಪಪ್ರಚಾರಕ್ಕೆ ಮನನೊಂದು ನೇಣಿಗೆ ಶರಣಾಗಿದ್ದಾರೆ.

ಹೊಳಲ್ಕೆರೆ ಪಟ್ಟಣದ ಬಸವ ಲೇಔಟ್‌ನ ಮನೆಯಲ್ಲಿ ಲಿಖಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಾಧ್ಯಾಪಕ ಡಾ. ರಾಜು ಅವರೊಂದಿಗೆ ಸಂಬಂಧವಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸಿ, ತನ್ನ ವ್ಯಕ್ತಿತ್ವಕ್ಕೆ ಧಕ್ಕೆ ತಂದಿದ್ದರಿಂದ ನೊಂದಿದ್ದ ವಿದ್ಯಾರ್ಥಿನಿ ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಆತ್ಮಹತ್ಯೆಗೂ ಮುನ್ನ ಲಿಖಿತಾ ಬರೆದಿಟ್ಟಿರುವ ಡೆತ್ ನೋಟ್‌ನಲ್ಲಿ ಪ್ರಾಧ್ಯಾಪಕ ಡಾ. ರಾಜು, ಅವರ ಪತ್ನಿ ನಿಶಾ ಹಾಗೂ ಕೆಲವು ವಿದ್ಯಾರ್ಥಿನಿಯರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಇವರ ಕಿರುಕುಳ ಮತ್ತು ಅಪಪ್ರಚಾರವೇ ನನ್ನ ಸಾವಿಗೆ ಕಾರಣ ಎಂದು ಅವರು ಡೆತ್ ನೋಟ್‌ನಲ್ಲಿ ಬರೆದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕೋಲಾರ: ಗಂಡನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಹಿಳೆ ಮೇಲೆ ಆ್ಯಸಿಡ್ ದಾಳಿ ಮಾಡಿದ ಪತ್ನಿ

ಘಟನೆಗೆ ಸಂಬಂಧಿಸಿದಂತೆ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಾಧ್ಯಾಪಕ ರಾಜು, ಪತ್ನಿ ನಿಶಾ ಮತ್ತು ಡೆತ್ ನೋಟ್‌ನಲ್ಲಿ ಹೆಸರಿಸಲಾದ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link