Headlines

nagaraj11081993

ಮೂರು ದಿನಗಳಾದರೂ ಚಿಕ್ಕಮಗಳೂರಿನಲ್ಲಿ ನಾಪತ್ತೆಯಾದ ಬಾಲಕಿಯ ಸುಳಿವಿಲ್ಲ! ಕಿಡ್ನ್ಯಾಪ್ ಆಗಿರಬಹುದೇ?

ಬೆಂಗಳೂರು, ಏಪ್ರಿಲ್ 10: ಪ್ರವಾಸಕ್ಕೆಂದು ಪೋಷಕರ ಜೊತೆ ಜಿಲ್ಲೆಯ ಚಂದ್ರದ್ರೋಣ ಪರ್ವತ ಸರಣಿಗೆ ಬಂದಿದ್ದ ಕೇರಳದ ಬಾಲಕಿ ನಾಪತ್ತೆ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಪರಮೇಶ್ವರ್, ಚಿಕ್ಕಮಗಳೂರು ಶ್ರೀನಂದ ಬಾಲಕಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮಾಹಿತಿ ಲಭ್ಯವಿದ್ದರೂ, ಬಾಲಕಿಯನ್ನು ಇನ್ನೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಈ ಪ್ರಕರಣದಲ್ಲಿ ಒಂದು ಕಡೆ ಆಕೆಯ ಅಪಹರಣದ ಶಂಕೆಯಿದ್ದರೆ, ಮತ್ತೊಂದು ಕಡೆ ಬಾಲಕಿ ಬೇರೆಯವರ ಜೊತೆ ಹೋಗಿರುವ ಸಾಧ್ಯತೆಯೂ ಇದೆ. ಅಂತಿಮ ಸತ್ಯವು ಬಾಲಕಿ ಪತ್ತೆಯಾದ…

Read More

ಶಾಲೆಯಲ್ಲೇ ಕಾಮದಾಟ, ಪ್ರಕರಣ ಬಯಲಾಗದಿರಲು ವಿದ್ಯಾರ್ಥಿನಿಗೆ ಗರ್ಭಪಾತ ಮಾಡಿಸಿದ್ದ ಗಣಿತ ಶಿಕ್ಷಕ! ಕೇಸ್ ದಾಖಲು

ಚಿತ್ರದುರ್ಗ, ಏಪ್ರಿಲ್ 10: ಗುರು-ಶಿಷ್ಯ ಸಂಬಂಧಕ್ಕೇ ಕಳಂಕ ತರುವಂತಹ ಘಟನೆಯೊಂದು ಚಿತ್ರದುರ್ಗ (Chitradurga) ಜಿಲ್ಲೆಯಲ್ಲಿ ಜರುಗಿದೆ. 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಗಣಿತ ಶಿಕ್ಷಕನೊಬ್ಬ ಶಾಲೆಯ ತರಗತಿ ಕೊಠಡಿಯಲ್ಲೇ ಅತ್ಯಾಚಾರ ಎಸಗಿದ್ದು, ಬಾಲಕಿ ಗರ್ಭಿಣಿಯಾದ ಬಳಿಕ ಅಕ್ರಮವಾಗಿ ಗರ್ಭಪಾತ ಮಾಡಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ಸದ್ಯ ಆರೋಪಿ ಶಿಕ್ಷಕ ಹಾಗೂ ಗರ್ಭಪಾತ ಮಾಡಿಸಿದ ವೈದ್ಯೆ ವಿರುದ್ಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲಾಗಿದೆ. ಘಟನೆಯ ವಿವರ ಚಿತ್ರದುರ್ಗ ಚಳ್ಳಕೆರೆ ತಾಲೂಕಿನ ತಳಕು ಪೊಲೀಸ್ ಠಾಣಾ…

Read More

ಗೂಗಲ್ ಪೇಯಲ್ಲಿ ‘ಪಾಕೆಟ್ ಮನಿ’ ಆಪ್ಷನ್ ಕ್ಲಿಕ್​​ ಮಾಡಿದ್ರೆ ಹಣ ಹೋಗುತ್ತಾ? ಯಾರಿಗಾಗಿ ಈ ಆಯ್ಕೆ? ಇಲ್ಲಿದೆ ನೋಡಿ

ಸಾಮಾಜಿಕ ಜಾಲತಾಣದಲ್ಲಿ ಗೂಗಲ್ ಪೇಯಲ್ಲಿ ನೀಡಿರುವ ‘ಪಾಕೆಟ್ ಮನಿ’ ಆಪ್ಷನ್ ಬಗ್ಗೆ ಭಾರೀ ಚರ್ಚೆಗಳು ಆಗುತ್ತಿದೆ. ಈ ಆಪ್ಷನ್ ಕ್ಲಿಕ್ ಮಾಡಿದ್ರೆ ಹಣ ಎಲ್ಲವೂ ಹೋಗುತ್ತದೆ, ಇದೊಂದು ರೀತಿ ಸ್ಕ್ಯಾಮ್ ಎಂದು ಹೇಳುತ್ತಿದ್ದಾರೆ. ಇದೀಗ ಈ ಬಗ್ಗೆ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್​ ಆಗುತ್ತಿದೆ. ಅಷ್ಟಕ್ಕೂ ಇದರ ಹಿಂದೆ ಇರುವ ನಿಜವಾದ ತಂತ್ರ ಏನು? ಎಂಬ ಬಗ್ಗೆ ತಿಳಿಯಬೇಕಿದೆ. ಅಷ್ಟಕ್ಕೂ ಗೂಗಲ್​​ ಪೇಯಲ್ಲಿ ಇಂತಹ ಸ್ಕ್ಯಾಮ್​​​ಗಳು ನಡೆಯಲು ಸಾಧ್ಯವೇ? ಇಷ್ಟು ದೊಡ್ಡ ಸಂಸ್ಥೆ ಸೆಕ್ಯುರಿಟಿ ವಿಚಾರದಲ್ಲಿ…

Read More

Karnataka Government Jobs: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಗಮನಕ್ಕೆ; KEAಯಿಂದ ನೇಮಕಾತಿ ಪರೀಕ್ಷೆಗಳ ದಿನಾಂಕ ಪ್ರಕಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ರಾಜ್ಯದ ವಿವಿಧ ಪ್ರಮುಖ ನಿಗಮ, ಮಂಡಳಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆಯ ವೇಳಾಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS), ಬೆಂಗಳೂರು ಜಲಮಂಡಳಿ (BWSSB) ಮತ್ತು ಕೃಷಿ ಮಾರಾಟ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೆ ಈ ಪರೀಕ್ಷೆಗಳು ನಡೆಯಲಿವೆ. ಈ ಮೂಲಕ ಬಹುದಿನಗಳಿಂದ ಪರೀಕ್ಷೆಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಪ್ರಾಧಿಕಾರವು…

Read More

ದ್ವಿತೀಯ ಪಿಯುಸಿ ಫಲಿತಾಂಶದ ದಿನವೇ ವಿದ್ಯಾರ್ಥಿನಿ ನಿಗೂಢ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಅಸಲಿಗೆ ಆಗಿದ್ದೇ ಬೇರೆ!

ಬೆಂಗಳೂರು, ಏಪ್ರಿಲ್ 10: ಹೆಬ್ಬಾಳದ ಮನೋರಾಯನಪಾಳ್ಯದಲ್ಲಿ ವಿದ್ಯಾರ್ಥಿನಿ ತನುಶ್ರೀ ಸಾವು (Tanushree Death Case) ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಮೊದಲು ತಾಯಿಯ ಮೇಲೆ ಅನುಮಾನ ವ್ಯಕ್ತವಾಗಿದ್ದರೂ, ಈಗ ಲಭ್ಯವಿರುವ ಸಾಕ್ಷ್ಯಗಳು ಇದು ದ್ವಿತೀಯ ಪಿಯುಸಿ ಪರೀಕ್ಷೆ ಫೇಲ್ ಆಗಿ ಮನನೊಂದ ಆತ್ಮಹತ್ಯೆ ಎಂಬದನ್ನು ಪುಷ್ಟೀಕರಿಸುತ್ತಿವೆ. ತನುಶ್ರೀ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಗುರುವಾರ ಸಂಜೆ ಪತ್ತೆಯಾಗಿತ್ತು. ಸಂಬಂಧಿಕರು ಕೂಡ ವಿದ್ಯಾರ್ಥಿನಿಯ ತಾಯಿಯ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದರು. ಆದರೆ, ಇದೀಗ ಅಸಲಿ…

Read More

ಚಾಮರಾಜನಗರ: ದೇವರಿಗೆ ಕೈ ಮುಗಿದು, ಕುಂಕುಮ ಹಚ್ಚಿಕೊಂಡು ಹುಂಡಿ ಹಣ ಕದ್ದ ಕಳ್ಳ!

ಚಾಮರಾಜನಗರ, ಏಪ್ರಿಲ್​​ 09: ಕಳ್ಳ-ಕಾಕರಿಗೆ ಸಾಮಾನ್ಯವಾಗಿ ಯಾವುದರ ಮೇಲೂ ಭಯ ಇರೋದಿಲ್ಲ. ಆದರೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದಲ್ಲಿ ದೇವಸ್ಥಾನದ ಹುಂಡಿ ಕದಿಯಲು ಬಂದ ಖದೀಮನೋರ್ವ, ಕನ್ನ ಹಾಕುವ ಮೊದಲು ದೇವರಿಗೆ ಕೈ ಮುಗಿದು ಕುಂಕುಮವನ್ನೂ ಹಚ್ಚಿಕೊಂಡಿದ್ದಾನೆ. ಗ್ರಾಮದ ಶಕ್ತಿ ದೇವತೆ ಪಟ್ಟದರಾಣಿ ದೇವಾಲಯದಲ್ಲಿ ಕಳ್ಳತನ ನಡೆದಿದ್ದು, ಈ ಹಿಂದೆಯೂ ಹುಂಡಿ ಹಣ ಕಳುವಾಗಿದ್ದ ಕಾರಣಕ್ಕೆ ದೇಗುಲಕ್ಕೆ ಸಿಸಿಟಿವಿ ಕ್ಯಾಮರಾ ಹಾಕಲಾಗಿತ್ತು. ಈ ಹಿನ್ನೆಲೆ ಕಳ್ಳತನದ ದೃಶ್ಯ ಸೆರೆಯಾಗಿದೆ. ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಬೊಮ್ಮಲಾಪುರ ಗ್ರಾಮದಲ್ಲಿ…

Read More

ಕೊಡವ ಶೈಲಿಯಲ್ಲಿ ಸೀರೆ ಉಟ್ಟು ಗಮನ ಸೆಳೆದ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಅವರು ಕೊಡಗಿನವರು. ಅವರು ಉದಯಪುರದಲ್ಲಿ ವಿವಾಹ ಆದರು. ಆ ಬಳಿಕ ಹೈದರಾಬಾದ್​​​ನಲ್ಲಿ ರಿಸೆಪ್ಶನ್ ನಡೆಯಿತು. ಈಗ ರಶ್ಮಿಕಾ ಮಂದಣ್ಣ ಅವರು ಕೊಡಗಿಗೆ ಬಂದಿದ್ದಾರೆ. ಪತಿ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಕೊಡಗನ್ನು ಸುತ್ತಿದ್ದಾರೆ. ಆ ಸಂದರ್ಭದ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ. ಬರ್ತ್​ಡೇ ಸಂದರ್ಭದಲ್ಲೇ ರಶ್ಮಿಕಾ ಕೊಡಗಿಗೆ ಬಂದಿದ್ದು ವಿಶೇಷ. ರಶ್ಮಿಕಾ ಮಂದಣ್ಣ ಅವರು ತಂಗಿ ಜೊತೆ ಸ್ಕೂಲ್ ಎದುರು ಪೋಸ್ ಕೊಟ್ಟಿದ್ದಾರೆ. ಅದರ ಫೋಟೋನ ರಶ್ಮಿಕಾ ಹಂಚಿಕೊಂಡಿದ್ದಾರೆ. ರಶ್ಮಿಕಾ ಹಾಗೂ ಅವರ…

Read More

Gold Rates: ಚಿನ್ನದ ಬೆಲೆ ಗ್ರಾಮ್​ಗೆ 140 ರೂ ಏರಿಕೆ; ಇಲ್ಲಿದೆ ದರಪಟ್ಟಿ

ಬೆಂಗಳೂರು, ಏಪ್ರಿಲ್ 10: ಚಿನ್ನ, ಬೆಳ್ಳಿ ಬೆಲೆಗಳ ಏರಿಳಿತದ ಟ್ರೆಂಡ್ ಮುಂದುವರಿಯುತ್ತಿದೆ. ಚಿನ್ನದ ಬೆಲೆ (Gold Rates) ಮೊನ್ನೆ ಏರಿತ್ತು, ನಿನ್ನೆ ಕುಸಿದಿತ್ತು, ಇವತ್ತು ಮತ್ತೆ ಏರಿದೆ. ಶುಕ್ರವಾರ ಇದರ ಬೆಲೆ ಗ್ರಾಮ್​ಗೆ 140 ರೂಗಳಷ್ಟು ಹೆಚ್ಚಿದೆ. ವಿದೇಶಗಳಲ್ಲೂ ಇದರ ಬೆಲೆಯಲ್ಲಿ ಅಲ್ಪ ಏರಿಳಿತಗಳಾಗಿವೆ. ಬೆಳ್ಳಿ ಬೆಲೆಯಲ್ಲೂ ಇದೇ ಟ್ರೆಂಡ್ ಇದೆ. ನಿನ್ನೆ ಇಳಿದಿದ್ದ ಬೆಳ್ಳಿ ಬೆಲೆ ಇವತ್ತು 5 ರೂ ಏರಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,40,250 ರುಪಾಯಿ…

Read More

ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆಯಲ್ಲಿ ಸಂಚರಿಸುವುದು ನರಕಯಾತನೆ: ಅಧಿಕಾರಿಗಳೇ ಪಿಜಿ ನಿವಾಸಿಗಳ ಕಷ್ಟ ಸ್ವಲ್ಪ ನೋಡಿ

ಬೆಂಗಳೂರು, ಏ.10 : ಬೆಂಗಳೂರಿನ ಪ್ರತಿಷ್ಠಿತ ಐಟಿ ಹಬ್ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರ ರಸ್ತೆ (Neeladri Nagar Road) ಸದ್ಯ ಗುಂಡಿಗಳ ಮಯವಾಗಿದ್ದು, ಮಳೆಯಾದರಂತೂ ಕೆರೆಯಂತಾಗುತ್ತಿದೆ. ಪ್ರತಿನಿತ್ಯ ಸಾವಿರಾರು ಜನರು ಸಂಚರಿಸುವ ಈ ರಸ್ತೆಯು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅಕ್ಷರಶಃ ನರಕವಾಗಿ ಮಾರ್ಪಟ್ಟಿದೆ. ಲವಲವಿಕೆಯಿಂದ ಇರಬೇಕಾದ ಈ ರಸ್ತೆಯಲ್ಲಿ ಸ್ವಲ್ಪ ಮಳೆಯಾದರೂ ನೀರು ಸರಿಯಾಗಿ ಹರಿದು ಹೋಗದೆ ನಿಲ್ಲುತ್ತಿದೆ. ಇದರಿಂದ ರಸ್ತೆಯಲ್ಲಿರುವ ಗುಂಡಿಗಳು ಯಾವುವು ಎಂಬುದು ತಿಳಿಯದೆ ವಾಹನ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ. ಈ ಭಾಗದಲ್ಲಿ ಸುಮಾರು ಶೇ….

Read More

Job Horoscope: ನಿಮ್ಮ ರಾಶಿಗನುಗುಣವಾಗಿ ಏಪ್ರಿಲ್ 12 ರಿಂದ 18ರ ವರೆಗಿನ ಉದ್ಯೋಗ ಭವಿಷ್ಯ ತಿಳಿಯಿರಿ

ಏಪ್ರಿಲ್ 12ರಿಂದ 18ರ ಅವಧಿಯಲ್ಲಿ ಸಾಡೇ ಸಾಥ್ ಶನಿ ಮೀನ ರಾಶಿಯಲ್ಲಿ ಹಾಗೂ ಗುರು ಮಿಥುನ ರಾಶಿಯಲ್ಲಿದ್ದಾನೆ. ಈ ಗ್ರಹಸ್ಥಿತಿಗಳು ಉದ್ಯೋಗದ ಮೇಲೆ ಬೀರುವ ಅನೇಕ ಪ್ರಭಾವಗಳನ್ನು ಬೀರಲಿವೆ. ಮೇಷ: ಉದ್ಯೋಗದಲ್ಲಿ ಹಠಾತ್ ಬದಲಾವಣೆ ಸಾಧ್ಯತೆ. ಹಿರಿಯ ಅಧಿಕಾರಿಗಳಿಂದ ಒತ್ತಡ ಬರಬಹುದು. ಆದರೆ ನಿಮ್ಮ ಸಂವಹನ ಕಲೆ ಮತ್ತು ಶ್ರಮದಿಂದ ವಾರದ ಕೊನೆಯಲ್ಲಿ ಉತ್ತಮ ಲಾಭ ಹಾಗೂ ಕಚೇರಿಯಲ್ಲಿ ಸ್ಥಾನಮಾನ ಪಡೆಯುವಿರಿ. ವೃಷಭ: ವೃತ್ತಿಯಲ್ಲಿ ಬಹಳ ಸಮಯದಿಂದ ನಿರೀಕ್ಷಿಸುತ್ತಿದ್ದ ಬಡ್ತಿ ಸಿಗುವ ಸಮಯ. ಆರ್ಥಿಕವಾಗಿ ಲಾಭದಾಯಕ ದಿನಗಳು….

Read More