nagaraj11081993

ಮಹಿಳೆಯರೇ ಡ್ರಾಪ್ ಕೇಳುವ ಮುನ್ನ ಹುಷಾರ್: ಸಹಾಯ ಮಾಡುವ ನೆಪದಲ್ಲಿ ಹೀಗಾ ಮಾಡೋದು? – Kannada News | Haveri: Woman Robbed of 29g Gold Chain After Asking for a Ride

ಹಾವೇರಿ, ಡಿಸೆಂಬರ್​ 29: ಡ್ರಾಪ್​ ಕೇಳಿದ್ದ ಮಹಿಳೆಯ ಮೂರು ಲಕ್ಷ ಮೌಲ್ಯದ ಚಿನ್ನದ ಸರವನ್ನು (Chain Snatching) ಖದೀಮ ಎಗರಿಸಿದ ಘಟನೆ ಹಾವೇರಿ (Haveri) ಜಿಲ್ಲೆಯ ಬ್ಯಾಡಗಿ ತಾಲೂಕಿನ ತಿರ್ಲಾಪುರ ಕ್ರಾಸ್​​​ ಬಳಿ ನಡೆದಿದೆ. ರತ್ನಾ ಬಣಕಾರ್​​ ಸರ ಕಳೆದುಕೊಂಡ ಮಹಿಳೆ. 29 ಗ್ರಾಂ ಮಾಂಗಲ್ಯ ಸರ ಕಿತ್ತುಕೊಂಡು ಖದೀಮ ಪರಾರಿಯಾಗಿದ್ದಾನೆ. ಕಾಗಿನೆಲೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಡೆದದ್ದೇನು? ರತ್ನಾ ಬಣಕಾರ್​​ ಅವರು ಬೈಕ್​​ಗೆ ಕೈ ಮಾಡಿ ಕುಮ್ಮೂರು ಕ್ರಾಸ್​ನಿಂದ ಗುಮ್ಮನಹಳ್ಳಿವರೆಗೆ ಡ್ರಾಪ್ ಕೇಳಿದ್ದಾರೆ. ಬೈಕ್…

Read More

ಕೊಟ್ಟ ಮಾತು ತಪ್ಪಿದ್ರಾ ಸಚಿವರು? ಗೃಹಲಕ್ಷ್ಮೀ ಹಣ ಖಾತೆಗೆ ಬೀಳುವುದು ಯಾವಾಗ? ಇಲ್ಲಿದೆ ಸಹಾಯವಾಣಿ – Kannada News | Karnataka government lapse delays Gruha Lakshmi scheme instalments, here Is Helpline For Money

ಬೆಂಗಳೂರು, (ಡಿಸೆಂಬರ್ 29): ರಾಜ್ಯ ಸರ್ಕಾರದ (Karnataka Congress Government)  ಅತ್ಯಂತ ಜನಪ್ರಿಯ ‘ಗೃಹಲಕ್ಷ್ಮಿ’ ಯೋಜನೆಯ (gruhalakshmi scheme) ಬಾಕಿ ಕಂತಿನ ಹಣಕ್ಕಾಗಿ ಮಹಿಳೆಯರು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಹೊಸ ವರ್ಷದ ಹೊಸ್ತಿಲಲ್ಲಿ ಹಣ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದ ಫಲಾನುಭವಿಗಳಿಗೆ ಇದೀಗ ತಾಂತ್ರಿಕ ವಿಘ್ನಗಳು ಎದುರಾಗಿದ್ದು, ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗೆ ಗ್ರಹಣ ಹಿಡಿದಂತಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದ ಡೆಡ್​ಲೈನ್ ಮುಗಿದು ಇವತ್ತಿಗೆ ಎರಡು ದಿನಗಳಾಗಿವೆ. ಆದ್ರೆ ಗೃಹಲಕ್ಷ್ಮೀಯರ ಅಕೌಂಟ್​​ಗಳಿಗೆ ಇನ್ನೂ ಹಣ ಬಂದಿಲ್ಲ. ಸಚಿವೆಯ ತವರು…

Read More

ಹೊಸ ವರ್ಷಕ್ಕೆ ಗುಡ್​​ನ್ಯೂಸ್​​: ಡಿ. 31ರ ತಡರಾತ್ರಿವರೆಗೂ ಮೆಟ್ರೋ, BMTC ಬಸ್​​ ಸಂಚಾರ – Kannada News | New Year 2026: Bengaluru Namma Metro run time extended on 31st December 2025

ಬೆಂಗಳೂರು, ಡಿಸೆಂಬರ್​​ 29: ಹೊಸ ವರ್ಷದ ಹಿನ್ನೆಲೆ ಮೆಟ್ರೋ ಸೇವೆ ಸಮಯವನ್ನು ವಿಸ್ತರಣೆಗೊಳಿಸಲಾಗಿದ್ದು, ಡಿ.31ರಂದು ಬೆಳಗಿನಜಾವ 3:10ರ ವರೆಗೂ ಮೆಟ್ರೋ ರೈಲುಗಳು ಸಂಚಾರ ನಡೆಸಲಿವೆ. ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಸುಗಮ ಪ್ರಯಾಣವನ್ನು ಒದಗಿಸುವ ಉದ್ದೇಶದಿಂದ ನೇರಳೆ, ಹಸಿರು ಹಾಗೂ ಹಳದಿ ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳನ್ನು ವಿಸ್ತರಿಸಲಾಗುತ್ತಿದೆ ಎಂದು ಪ್ರಕಟಣೆ ಮೂಲಕ ಬಿಎಂಆರ್​​ಸಿಎಲ್​​ ತಿಳಿಸಿದೆ. ಕೊನೆಯ ಮೆಟ್ರೋ ರೈಲಿನ ಸಮಯ ಹೊಸ ವರ್ಷ 2026ರ ಸಂಭ್ರಮಕ್ಕೆ ಮೆಟ್ರೋ ಸೇವೆ ವಿಸ್ತರಣೆ BMRCL Extends Metro Services on…

Read More

Horoscope Today 30 December: ಇಂದು ಈ ರಾಶಿಯವರಿಗೆ ಪ್ರೇಮದಲ್ಲಿ ಅತಂತ್ರ ಸ್ಥಿತಿಯಿಂದ ದುಃಖ – Kannada News | Horoscope Today 30 December: Meena and Vrishabha Astrological Forecast for Tuesday

ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಪೌಷ ಮಾಸ ಶುಕ್ಲ ಪಕ್ಷದ ದಶಮೀ ತಿಥಿ ಮಂಗಳವಾರ ವಿಚಿತ್ರ ಸ್ಫುರಣೆ, ಲೌಕಿಕ ಸುಖ, ಪದಚ್ಯುತಿ, ದೇಹಾರೋಗ್ಯ, ಹೊಸ ವಸ್ತು ಖರೀದಿ, ಪ್ರೇಮದಿಂದ ಪಾಠ, ಮಕ್ಕಳ ಬೇಸರ, ಅನಿಶ್ಚಿತ ಸವಾಲು, ಸೌಕರ್ಯಕ್ಕೆ ಸೆಣೆಸಾಟ ಇವೆಲ್ಲ ಇಂದಿನ ವಿಶೇಷ. ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಪೂರ್ವಾಷಾಢ, ವಾರ :…

Read More

‘ಗೌರಿ’ ಧಾರಾವಾಹಿ ನಟಿ ನಂದಿನಿ ನಿಧನ: ಆರ್​ಆರ್​ ನಗರದಲ್ಲಿ ದುರಂತ ಅಂತ್ಯ – Kannada News | Gauri Serial actress Nandini CM Death in Bengaluru

ಕನ್ನಡ ಮತ್ತು ತಮಿಳು ಧಾರಾವಾಹಿಗಳಲ್ಲಿ (Serial) ನಟಿಸಿ ಖ್ಯಾತಿ ಪಡೆದಿದ್ದ ನಂದಿನಿ ಸಿಎಂ (Nandini CM) ಅವರು ನಿಧನರಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡು ಅವರು ಕೊನೆಯುಸಿರು ಎಳೆದಿದ್ದಾರೆ ಎನ್ನಲಾಗುತ್ತಿದೆ. ಬೆಂಗಳೂರಿನ ಆರ್​ಆರ್​ ನಗರದಲ್ಲಿ ನಂದಿನಿ ಅವರು ಸಾವಿಗೆ ಶರಣಾಗಿದ್ದಾರೆ. ಅವರ ಸಾವಿಗೆ (Nandini CM Death) ನಿಖರ ಕಾರಣ ಏನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಬಣ್ಣದ ಲೋಕದಲ್ಲಿ ಮಿಂಚುವ ಕನಸು ಕಂಡಿದ್ದ ನಂದಿನಿ ಅವರು ಈ ರೀತಿ ದುರಂತ ಅಂತ್ಯ ಕಂಡಿರುವುದು ನೋವಿನ ಸಂಗತಿ. ಕನ್ನಡದ ‘ಜೀವ ಹೂವಾಗಿದೆ’,…

Read More

ಕಿಡಿಗೇಡಿತನ; ಆರ್‌ಎಸ್‌ಎಸ್-ಬಿಜೆಪಿ ಕುರಿತ ದಿಗ್ವಿಜಯ ಸಿಂಗ್ ಹೊಗಳಿಕೆಗೆ ರಾಹುಲ್ ಗಾಂಧಿ ಅಸಮಾಧಾನ – Kannada News | You did mischief; Rahul Gandhi’s banter with Digvijaya Singh after RSS BJP praise

ನವದೆಹಲಿ, ಡಿಸೆಂಬರ್ 29: ಆರ್‌ಎಸ್‌ಎಸ್-ಬಿಜೆಪಿಯಿಂದ ನಮ್ಮ ಪಕ್ಷ ಕಲಿಯುವುದಿದೆ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಕಾಂಗ್ರೆಸ್ ಹೈಕಮಾಂಡ್​​ನ ಕೆಂಗಣ್ಣಿಗೆ ಗುರಿಯಾಗಿದ್ದರು. ಇಂದು ಕಾಂಗ್ರೆಸ್ ಸಂಸ್ಥಾಪನಾ ದಿನದಂದು ಪಕ್ಷದ ಪ್ರಧಾನ ಕಚೇರಿ ಇಂದಿರಾ ಭವನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ಮುಖಾಮುಖಿಯಾಗಿ ಭೇಟಿಯಾದರು. ಮೂಲಗಳ ಪ್ರಕಾರ, ರಾಹುಲ್ ಗಾಂಧಿ ದಿಗ್ವಿಜಯ ಸಿಂಗ್ ಅವರೊಂದಿಗೆ ಕೈಕುಲುಕುತ್ತಾ, “ನೀವು ನಿನ್ನೆ ಕಿಡಿಗೇಡಿತನ ಮಾಡಿದ್ದೀರಿ” ಎಂದು ತಮಾಷೆಯಾಗಿ ಹೇಳಿದ್ದಾರೆ….

Read More

ತ್ರಿಪುರದ ವಿದ್ಯಾರ್ಥಿಯ ಭೀಕರ ಹತ್ಯೆಗೆ ಕಠಿಣ ಕ್ರಮದ ಭರವಸೆ ನೀಡಿದ ಸಿಎಂ; ಮರಣೋತ್ತರ ಪರೀಕ್ಷೆಯಲ್ಲೇನಿದೆ? – Kannada News | Tripura student killing Bleeding In Brain Damage To Spine what is in Medical Report

ಡೆಹ್ರಾಡೂನ್, ಡಿಸೆಂಬರ್ 29: ಡೆಹ್ರಾಡೂನ್‌ನಲ್ಲಿ ಓದುತ್ತಿದ್ದ ತ್ರಿಪುರದ ವಿದ್ಯಾರ್ಥಿಯ ಹತ್ಯೆಯಲ್ಲಿ ಭಾಗಿಯಾಗಿರುವ ಆರನೇ ಆರೋಪಿಯನ್ನು ಬಂಧಿಸಲು ಉತ್ತರಾಖಂಡದ (Uttarakhand) ಪೊಲೀಸರು ನೇಪಾಳಕ್ಕೆ ತಮ್ಮ ತಂಡವನ್ನು ಕಳುಹಿಸಿದ್ದಾರೆ. 24 ವರ್ಷದ ಏಂಜೆಲ್ ಚಕ್ಮಾ ಎಂಬ ಯುವಕ ಡೆಹ್ರಾಡೂನ್‌ನ ಖಾಸಗಿ ವಿಶ್ವವಿದ್ಯಾಲಯದಲ್ಲಿ ಎಂಬಿಎ ಓದುತ್ತಿದ್ದ. ಆತನ ಮೇಲೆ ಡಿಸೆಂಬರ್ 9ರಂದು 6 ಜನರ ಗುಂಪೊಂದು ಸಣ್ಣ ಜಗಳದ ಬಳಿಕ ಹಲ್ಲೆ ಮಾಡಿದ್ದರು. 17 ದಿನಗಳ ಜೀವನ್ಮರಣದ ಹೋರಾಟದ ಬಳಿಕ ಆತ ಡಿ. 26ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ಈ ಹತ್ಯೆ…

Read More

ಮಗಳಿಗೆ ಗಾಳ, ಅಮ್ಮನಿಗೆ ಬೆಂಕಿ: ತಲೆಮರೆಸಿಕೊಂಡಿದ್ದ ಆಸಾಮಿ ಅಂದರ್ – Kannada News | Bengaluru: Man Arrested for Setting Mother on Fire After She Refused to Let Him Marry His Daughter

ಬೆಂಗಳೂರು, ಡಿಸೆಂಬರ್​ 29: ಪುತ್ರಿಯನ್ನು ಮದುವೆ ಮಾಡಿಕೊಡಲಿಲ್ಲವೆಂಬ ಕಾರಣಕ್ಕೆ ಆಕೆಯ ತಾಯಿಗೆ ವ್ಯಕ್ತಿಯೋರ್ವ ಬೆಂಕಿ (fire) ಹಚ್ಚಿರುವಂತಹ ಘಟನೆ ಬೆಂಗಳೂರಿನ ಬಸವೇಶ್ವರ ನಗರದ ಭೋವಿ ಕಾಲೋನಿಯಲ್ಲಿ ನಡೆದಿದೆ. ಗೀತಾ ಮೃತ ಮಹಿಳೆ. ಮುತ್ತು ಅಭಿಮನ್ಯು ಬೆಂಕಿ ಹಚ್ಚಿದ ವ್ಯಕ್ತಿ. ಸದ್ಯ ಆರೋಪಿ ಮುತ್ತು ಅಭಿಮನ್ಯುವನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ (Arrested). ಇನ್ನು ಗೀತಾ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಮಗಳನ್ನ ಮದುವೆ ಮಾಡಿಕೊಡು ಅಂತ ತಾಯಿಗೆ ಬೆಂಕಿ ಹಾಕಿದ್ದ ಕಿರಾತಕ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಕಳೆದ ಮಂಗಳವಾರ…

Read More

ಡ್ರಗ್ ಫ್ಯಾಕ್ಟರಿ ಪತ್ತೆ ಮಾಡಿದ ಮಹಾ ಪೊಲೀಸ್: ಬೆಂಗಳೂರಿನ ಮೂವರು ಇನ್ಸ್​​​ಪೆಕ್ಟರ್​​​ಗಳ ತಲೆದಂಡ – Kannada News | Maharashtra police bust three illegal drug manufacturing units in Bengaluru, 3 inspectors Suspended

ಬೆಂಗಳೂರು, (ಡಿಸೆಂಬರ್ 29): ಕರ್ನಾಟಕವನ್ನ ಡ್ರಗ್ಸ್ ಮುಕ್ತ ರಾಜ್ಯ ಮಾಡಬೇಕು ಎನ್ನುವ ಪೋಲಿಸರ ಕನಸು,ಸರ್ಕಾರದ ಯೋಜನೆಗೆ ಜನ ಶಬ್ಬಾಶ್ ಅಂದಿದ್ರು. ಆದರೆ, ಸಿಲಿಕಾನ್ ಸಿಟಿಯಲ್ಲೇ ಡ್ರಗ್ಸ್ ಫ್ಯಾಕ್ಟರಿ (drug manufacturing units) ಇರೋದನ್ನ ಪತ್ತೆ ಮಾಡಿದ್ದಾರೆ. ಹೌದು…ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನಲ್ಲಿದ್ದ ಡ್ರಗ್ಸ್​ ಫ್ಯಾಕ್ಟರಿಯನ್ನು ಪತ್ತೆ ಮಾಡಿದ್ದು, ಈ ಸಂಬಂಧ ಇದೀಗ ಮೂವರು ಇನ್ಸ್​​ಪೆಕ್ಟರ್​ಗಳನ್ನು ಸಸ್ಪೆಂಡ್ ಮಾಡಲಾಗಿದೆ. ಬೆಂಗಳೂರಿನ (Bengaluru) ಕೊತ್ತನೂರು, ಆವಲಹಳ್ಳಿ ಮತ್ತು ಬಾಗಲೂರು ಠಾಣೆಯ ಇನ್ಸ್​​ಪೆಕ್ಟರ್​​ಗಳನ್ನು ಅಮಾನತು ಮಾಡಿ ಕಮಿನಷರ್ ಆದೇಶ ಹೊರಡಿಸಿದ್ದಾರೆ. ಮೂರು ಠಾಣೆಯ…

Read More

ಇನ್ನೊಮ್ಮೆ ಬಿಜೆಪಿಗೆ ಮತ ಹಾಕಿ, ಅಸ್ಸಾಂನಿಂದ ನುಸುಳುಕೋರರನ್ನು ಹೊರಹಾಕುತ್ತೇವೆ; ಅಮಿತ್ ಶಾ – Kannada News | Vote again For BJP Will Remove Infiltrators Home Minister Amit Shah In Assam

ಗುವಾಹಟಿ, ಡಿಸೆಂಬರ್ 29: ಅಸ್ಸಾಂನಲ್ಲಿ ಇಂದು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಬಿಜೆಪಿಗೆ ಇನ್ನೂ 5 ವರ್ಷಗಳ ಅಧಿಕಾರವನ್ನು ನೀಡುವಂತೆ ಕೇಳಿಕೊಂಡರು. ಅಸ್ಸಾಂ ಮತ್ತು ದೇಶದ ಉಳಿದ ಭಾಗಗಳಿಂದ ಅಕ್ರಮ ನುಸುಳುಕೋರರನ್ನು ಹೊರಹಾಕಲು ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಬಹಳ ಅಗತ್ಯವಿದೆ ಎಂದು ಅವರು ಹೇಳಿದರು. 15ನೇ ಶತಮಾನದ ವೈಷ್ಣವ ಸಂತ-ಸುಧಾರಕ ಶ್ರೀಮಂತ ಶಂಕರದೇವ ಅವರ ಜನ್ಮಸ್ಥಳವನ್ನು ಜಾಗತಿಕ ಆಧ್ಯಾತ್ಮಿಕ ಕೇಂದ್ರವಾಗಿ ಪುನರಾಭಿವೃದ್ಧಿ ಮಾಡುವ ನಾಗಾಂವ್‌ನಲ್ಲಿ 200…

Read More