ಅಂತ್ಯಕ್ರಿಯೆಗೆಂದು ಬಂದವರು ಹೋಗಿದ್ದು ಆಸ್ಪತ್ರೆಗೆ, 200 ಜನರಿಗೆ ರೇಬಿಸ್ ಇಂಜೆಕ್ಷನ್, ಆಗಿದ್ದೇನು? – Kannada News | 200 UP Villagers Get Rabies Shots After Consuming Curd From Buffalo Killed By Dog
ಉತ್ತರ ಪ್ರದೇಶ, ಡಿಸೆಂಬರ್ 29: ಅಂತ್ಯಕ್ರಿಯೆಗೆ ಬಂದ 200ಕ್ಕೂ ಹೆಚ್ಚು ಮಂದಿ ರೇಬಿಸ್(Rabies) ಚುಚ್ಚುಮದ್ದು ಪಡೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಬುಡೌನ್‌ನ ಪಿಪ್ರೌಲಿ ಗ್ರಾಮದ ಸುಮಾರು 200 ನಿವಾಸಿಗಳು ಅಂತ್ಯಕ್ರಿಯೆಯೊಂದರಲ್ಲಿ ಪಾಲ್ಗೊಂಡಿದ್ದರು. ಎಲ್ಲರೂ ನಾಯಿ ಕಚ್ಚಿ ಸತ್ತ ಎಮ್ಮೆಯ ಹಾಲಿನಿಂದ ಮಾಡಿದ ರಾಯತಾವನ್ನು ತಿಂದಿದ್ದರು. ಬಳಿಕ 200 ಮಂದಿಗೂ ರೇಬಿಸ್ ಚುಚ್ಚುಮದ್ದು ನೀಡಲಾಗಿದೆ. ಗ್ರಾಮಸ್ಥರ ಪ್ರಕಾರ, ಡಿ.23ರಂದು ಗ್ರಾಮದಲ್ಲಿ ಅಂತ್ಯಕ್ರಿಯೆಯೊಂದು ನಡೆದಿತ್ತು. ಅಲ್ಲಿ ಜನರು ನಾಯಿ ಕಚ್ಚಿ ಸತ್ತ ಎಮ್ಮೆಯ ಹಾಲಿನಿಂದ ಮಾಡಿದ…