All posts by nagaraj11081993

ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ! – Kannada News | Kobbari Hori Invades Haveri Restaurant: Video goes Viral

ಹಾವೇರಿ, ಡಿಸೆಂಬರ್ 29: ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ಅಚ್ಚರಿಯ ಘಟನೆ ನಡೆದಿದೆ. ಡಿ.ಜೆ. ಪ್ಯಾಲೇಸ್ ರೆಸ್ಟೋರೆಂಟ್ ಮತ್ತು ಲಾಜ್ಡ್‌ನ ಬಾರ್‌ಗೆ ಏಕಾಏಕಿ ಕೊಬ್ಬರಿ ಹೋರಿ ನುಗ್ಗಿದ್ದು, ಮಧ್ಯಪ್ರಿಯರು ಪ್ರಾಣಭೀತಿಯಿಂದ ಓಡಿ ತಪ್ಪಿಸಿಕೊಂಡಿದ್ದಾರೆ. ಕೆಲಕಾಲ ಗೊಂದಲ ಉಂಟಾದರೂ, ಹೋರಿಯ ಅಭಿಮಾನಿಗಳು ಕೇಕೆ ಹಾಕಿ ಹೋರಿಯನ್ನು ಹೊರ ಹಾಕಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸ್ಮಶಾನದ ಬಳಿ ಮೃತ ಶಿಶುವನ್ನು ಬಾಯಲ್ಲಿ ಕಚ್ಚಿಕೊಂಡು ಓಡಿದ ನಾಯಿ – Kannada News | Madhya Pradesh: Newborn’s Body Found With Stray Dog Near Cremation Ground, Area on Alert

ನಾಯಿ-ಸಾಂದರ್ಭಿಕ ಚಿತ್ರImage Credit source: iStock

ವಿದಿಶಾ, ಡಿಸೆಂಬರ್ 29: ಸ್ಮಶಾನದ ಬಳಿ ನಾಯಿ(Dog)ಯೊಂದು ಬಾಯಲ್ಲಿ ಮೃತ ಶಿಶುವನ್ನು ಕಚ್ಚಿಕೊಂಡು ಓಡುತ್ತಿರುವುದನ್ನು ಕಂಡು ಜನರು ಬೆಚ್ಚಿಬಿದ್ದಿದ್ದಾರೆ. ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಡಿಸೆಂಬರ್ 28 ರಂದು, ಪರಾಶರಿ ಸ್ಮಶಾನದ ಬಳಿ ಅಂತ್ಯಕ್ರಿಯೆಗೆ ಆಗಮಿಸಿದ ಜನರು  ಶಿಶುವಿನ ಶವವನ್ನು ನಾಯಿ ಕಚ್ಚಿಕೊಂಡು ಓಡುತ್ತಿರುವುದನ್ನು ಕಂಡು ಬೆಚ್ಚಿಬಿದ್ದಿದ್ದರು. ಈ ದೃಶ್ಯವು ಅಲ್ಲಿದ್ದವರನ್ನು ದಿಗ್ಭ್ರಮೆಗೊಳಿಸಿತು ಮತ್ತು ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಡಿಸೆಂಬರ್ 28 ರ ಬೆಳಗ್ಗೆ, ಕೆಲವರು ಪರಾಶರಿ ಸ್ಮಶಾನಕ್ಕೆ ಅಂತ್ಯಕ್ರಿಯೆಗಾಗಿ ಬಂದಿದ್ದರು. ಸ್ಮಶಾನದ ಬಳಿ ನಾಯಿಯೊಂದು ಅಲೆದಾಡುತ್ತಿರುವುದನ್ನು ಅವರು ಗಮನಿಸಿದ್ದರು. ಹತ್ತಿರದಿಂದ ಪರಿಶೀಲಿಸಿದಾಗ, ನಾಯಿ ನವಜಾತ ಶಿಶುವಿನನ್ನು ಬಾಯಿಯಲ್ಲಿ ಹಿಡಿದಿಟ್ಟುಕೊಂಡಿರುವುದನ್ನು ಅವರು ಕಂಡರು.

ಈ ಭಯಾನಕ ದೃಶ್ಯವು ಜನರಲ್ಲಿ ಭಯಭೀತಿಯನ್ನು ಉಂಟುಮಾಡಿತು. ಕೆಲವೇ ಕ್ಷಣಗಳಲ್ಲಿ, ಸ್ಥಳದಲ್ಲಿ ಜನಸಮೂಹ ಜಮಾಯಿಸಿತು ಮತ್ತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಯಿತು.
ಮಾಹಿತಿ ಪಡೆದ ಗಂಜ್ ಬಸೋಡಾ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

ಮತ್ತಷ್ಟು ಓದಿ: ಅಂತ್ಯಕ್ರಿಯೆಗೆಂದು ಬಂದವರು ಹೋಗಿದ್ದು ಆಸ್ಪತ್ರೆಗೆ, 200 ಜನರಿಗೆ ರೇಬಿಸ್ ಇಂಜೆಕ್ಷನ್, ಆಗಿದ್ದೇನು?

ಪೊಲೀಸರು ಶವವನ್ನು ನಾಯಿಯಿಂದ ಬೇರ್ಪಡಿಸಿ ತಮ್ಮ ವಶಕ್ಕೆ ಪಡೆದರು. ಇದು ಇಡೀ ಪ್ರದೇಶದಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಸ್ಮಶಾನ ಮತ್ತು ಸುತ್ತಮುತ್ತ ಇದೇ ರೀತಿಯ ಘಟನೆಗಳು ಈ ಹಿಂದೆಯೂ ನಡೆದಿದ್ದು ಕಳವಳಕ್ಕೆ ಕಾರಣವಾಗಿವೆ ಎಂದು ಸ್ಥಳೀಯರು ಹೇಳುತ್ತಾರೆ.

ಶಿಶುವಿಗೆ ನಾಲ್ಕರಿಂದ ಐದು ತಿಂಗಳಾಗಿರಬಹುದು
ಪ್ರಕರಣಕ್ಕೆ ಸಂಬಂಧಿಸಿದಂತೆ, ಗಂಜ್ ಬಸೋಡಾ ಗ್ರಾಮೀಣ ಪೊಲೀಸ್ ಠಾಣೆಯ ಉಸ್ತುವಾರಿ ಮನೋಜ್ ದುಬೆ ಮಾತನಾಡಿ, ಪ್ರಾಥಮಿಕ ತನಿಖೆಗಳು ಶಿಶುವಿಗೆ ಸುಮಾರು ನಾಲ್ಕರಿಂದ ಐದು ತಿಂಗಳಾಗಿರಬಹುದು ಎಂದು ಸೂಚಿಸುತ್ತವೆ. ಕೆಲವೊಮ್ಮೆ, ಸಾಮಾಜಿಕ ಅಥವಾ ಇತರ ಕಾರಣಗಳಿಗಾಗಿ, ನವಜಾತ ಶಿಶುಗಳನ್ನು ಸ್ಮಶಾನದ ಬಳಿ ನೆಲದಲ್ಲಿ ಹೂಳಲಾಗುತ್ತದೆ ಎಂದು ಅವರು ಹೇಳಿದರು. ಅಂತಹ ಸಂದರ್ಭಗಳಲ್ಲಿ, ಪ್ರಾಣಿಗಳು ನೆಲವನ್ನು ಅಗೆದಾಗ ದೇಹವು ಕಾಣುತ್ತದೆ.

ಪೊಲೀಸರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದು, ಪ್ರತಿಯೊಂದು ಅಂಶವನ್ನೂ ತನಿಖೆ ನಡೆಸುತ್ತಿದ್ದಾರೆ ಎಂದು ಠಾಣೆಯ ಉಸ್ತುವಾರಿ ಅಧಿಕಾರಿ ತಿಳಿಸಿದ್ದಾರೆ.

ಮೃತದೇಹ ಅಲ್ಲಿಗೆ ಹೇಗೆ ಬಂತು ಮತ್ತು ಯಾವುದೇ ನಿರ್ಲಕ್ಷ್ಯ ಅಥವಾ ಅಪರಾಧ ಕೃತ್ಯ ನಡೆದಿದೆಯೇ ಎಂಬುದನ್ನು ಕಂಡುಹಿಡಿಯಲು ಅವರು ಪ್ರಯತ್ನಿಸುತ್ತಿದ್ದಾರೆ. ಪೊಲೀಸರು ಸುತ್ತಮುತ್ತಲಿನ ಪ್ರದೇಶದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ ಜನರಿಂದ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.

ಪೊಲೀಸರು ಶಿಶುವಿನ ದೇಹವನ್ನು ಸೂಕ್ತ ಪ್ರಕ್ರಿಯೆಯ ಪ್ರಕಾರ ಸಮಾಧಿ ಮಾಡಿದ್ದಾರೆ. ತನಿಖೆ ಪೂರ್ಣಗೊಂಡ ನಂತರವೇ ಪರಿಸ್ಥಿತಿ ಸ್ಪಷ್ಟವಾಗುತ್ತದೆ ಎಂದು ಆಡಳಿತ ಸ್ಪಷ್ಟಪಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 3:13 pm, Mon, 29 December 25

Source link

Gold Rate Today Bangalore: ಚಿನ್ನದ ಬೆಲೆ ಇಳಿಕೆ; ಬೆಳ್ಳಿ ಬೆಲೆ ಮತ್ತೆ ದಾಖಲೆ – Kannada News | Gold Price Today on 29th December 2025, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಡಿಸೆಂಬರ್ 29: ಚಿನ್ನದ ಬೆಲೆ ಸೋಮವಾರ ಕಡಿಮೆಗೊಂಡಿದೆ. ನಿನ್ನೆ 100 ರೂನಷ್ಟು ಹೆಚ್ಚಿದ್ದ ಇದರ ಬೆಲೆ ಇವತ್ತು 65 ರೂ ಕಡಿಮೆಗೊಂಡಿದೆ. 13,000 ರೂ ದಾಟಿದ ಆಭರಣ ಚಿನ್ನದ ಬೆಲೆ (gold rates) ಇದೀಗ 12,990 ರೂಗೆ ಇಳಿದಿದೆ. ವಿದೇಶಗಳಲ್ಲೂ ಹಲವೆಡೆ ಬೆಲೆ ಇಳಿದಿದೆ. ಕೆಲ ದೇಶಗಳಲ್ಲಿ ಬೆಲೆ ಅಲ್ಪ ಹೆಚ್ಚಳ ಪಡೆದಿದೆ. ಆದರೆ, ಇದಕ್ಕೆ ತದ್ವಿರುದ್ಧವಾಗಿ, ಬೆಳ್ಳಿ ಬೆಲೆಯ ಭರ್ಜರಿ ಓಟ ಮುಂದುವರಿಯುತ್ತಲೇ ಇದೆ. ಇಂದು ಇದರ ಬೆಲೆ 4 ರೂ ಹೆಚ್ಚಿದೆ. ನಿನ್ನೆಯಿಂದ ಇದರ ಬೆಲೆ ಬರೋಬ್ಬರಿ 7 ರೂ ಜಾಸ್ತಿಯಾಗಿದೆ. ಕೆಲ ನಗರಗಳಲ್ಲಿ ಬೆಳ್ಳಿ ಬೆಲೆ ಮೊದಲ ಬಾರಿಗೆ 280 ರೂ ಗಡಿ ದಾಟಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,29,900 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,41,710 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,800 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,29,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,800 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 28,100 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಡಿಸೆಂಬರ್ 29ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,171 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,990 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,628 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 258 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,171 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,990 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 258 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 12,990 ರೂ
  • ಚೆನ್ನೈ: 13,020 ರೂ
  • ಮುಂಬೈ: 12,990 ರೂ
  • ದೆಹಲಿ: 13,005 ರೂ
  • ಕೋಲ್ಕತಾ: 12,990 ರೂ
  • ಕೇರಳ: 12,990 ರೂ
  • ಅಹ್ಮದಾಬಾದ್: 12,995 ರೂ
  • ಜೈಪುರ್: 13,005 ರೂ
  • ಲಕ್ನೋ: 13,005 ರೂ
  • ಭುವನೇಶ್ವರ್: 12,990 ರೂ

ಇದನ್ನೂ ಓದಿ: 2025ರಲ್ಲಿ ಭಾರತದ ಬಿಲಿಯನೇರ್​ಗಳ ಪಟ್ಟಿ; ಯಾರು ಅತಿ ಶ್ರೀಮಂತರು, ಯಾರ ಶ್ರೀಮಂತಿಕೆ ಹೆಚ್ಚು ಏರಿದ್ದು?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 570 ರಿಂಗಿಟ್ (12,639 ರುಪಾಯಿ)
  • ದುಬೈ: 505.75 ಡಿರಾಮ್ (12,387 ರುಪಾಯಿ)
  • ಅಮೆರಿಕ: 141 ಡಾಲರ್ (12,678 ರುಪಾಯಿ)
  • ಸಿಂಗಾಪುರ: 180.50 ಸಿಂಗಾಪುರ್ ಡಾಲರ್ (12,627 ರುಪಾಯಿ)
  • ಕತಾರ್: 503.50 ಕತಾರಿ ರಿಯಾಲ್ (12,419 ರೂ)
  • ಸೌದಿ ಅರೇಬಿಯಾ: 513 ಸೌದಿ ರಿಯಾಲ್ (12,298 ರುಪಾಯಿ)
  • ಓಮನ್: 53.65 ಒಮಾನಿ ರಿಯಾಲ್ (12,529 ರುಪಾಯಿ)
  • ಕುವೇತ್: 41.13 ಕುವೇತಿ ದಿನಾರ್ (12,052 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 258 ರೂ
  • ಚೆನ್ನೈ: 281 ರೂ
  • ಮುಂಬೈ: 258 ರೂ
  • ದೆಹಲಿ: 258 ರೂ
  • ಕೋಲ್ಕತಾ: 258 ರೂ
  • ಕೇರಳ: 281 ರೂ
  • ಅಹ್ಮದಾಬಾದ್: 258 ರೂ
  • ಜೈಪುರ್: 258 ರೂ
  • ಲಕ್ನೋ: 258 ರೂ
  • ಭುವನೇಶ್ವರ್: 281 ರೂ
  • ಪುಣೆ: 258

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಗ್ಯಾಂಗ್​​ ಎಸ್ಕೇಪ್​ – Kannada News | Hunasuru Gold Shop Robbery: CCTV Footage of Accused Escape

ಮೈಸೂರು, ಡಿಸೆಂಬರ್​​ 29: ಹುಣಸೂರು ಚಿನ್ನದಂಗಡಿ ದರೋಡೆ ನಡೆಸಿ ದುಷ್ಕರ್ಮಿಗಳು ಎಸ್ಕೇಪ್​​ ಆಗಿರುವ ದೃಶ್ಯ ಟಿವಿ9ಗೆ ಲಭ್ಯವಾಗಿದೆ. ಕೇವಲ ಐದೇ ಐದು ನಿಮಿಷಗಳಲ್ಲಿ ಗೋಲ್ಡ್​​ ಶಾಪ್​​ ರಾಬರಿ ನಡೆಸಲಾಗಿದ್ದು, ಕೆಜಿಗಟ್ಟಲೆ ಚಿನ್ನ ಕದ್ದು ಚಾಲಾಕಿಗಳು ಪರಾರಿಯಾಗಿದ್ದಾರೆ. ಮಧ್ಯಾಹ್ನ 2 ಗಂಟೆ 4 ನಿಮಿಷಕ್ಕೆ ಅಂಗಡಿಗೆ ಎಂಟ್ರಿಕೊಟ್ಟಿದ್ದ ಗ್ಯಾಂಗ್​​ 2 ಗಂಟೆ 9 ನಿಮಿಷಕ್ಕೆ ಶಾಪ್​​ನಿಂದ ತೆರಳಿದೆ. ಚಿನ್ನ ತೆಗೆದುಕೊಂಡ ಹೋಗಲು ಎರಡು ಚೀಲದಂತಹ ಬ್ಯಾಗ್ ತಂದಿದ್ದ ದರೋಡೆಕೋರರು, ಚಿನ್ನದಂಗಡಿಯ ಶೋಕೆಸ್​​ನಲ್ಲಿಟ್ಟಿದ್ದ ದೊಡ್ಡ ದೊಡ್ಡ ಗಾತ್ರದ ಆಭರಣವನ್ನ ಎರಡಲೇ ನಿಮಿಷದಲ್ಲಿ ಒಂದು ಕಡೆ ಗುಡ್ಡೆ ಹಾಕಿದ್ದಾರೆ. ಬಳಿಕ ಮತ್ತೆರಡು ನಿಮಿಷದಲ್ಲಿ ದೊಡ್ಡ ಬ್ಯಾಗ್​​​ಗೆ ಅವನ್ನು ತುಂಬಿಕೊಂಡು ಎಸ್ಕೇಪ್​​ ಆಗಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹೊಸ ವರ್ಷಾಚರಣೆಗೆ ಬೆಂಗಳೂರಿನ ಈ ಫ್ಲೈಓವರ್​ಗಳು, ಮಟ್ರೋ ಸ್ಟೇಷನ್ ಕ್ಲೋಸ್: ಯಾವ್ಯಾವ ಚಟುವಟಿಕೆ ಬ್ಯಾನ್? ಇಲ್ಲಿದೆ ಮಾಹಿತಿ – Kannada News | Bengaluru New Year 50 Flyovers Closed After 10 PM, 166 Drunk and Drive Checks, Police Issue Strict Guidelines

ಬೆಂಗಳೂರು, ಡಿಸೆಂಬರ್ 29: ಹೊಸ ವರ್ಷದ (New Year) ಸಂಭ್ರಮಾಚರಣೆಗೆ ಬೆಂಗಳೂರಿನಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಬೆಂಗಳೂರು (Bangalore) ನಗರಾದ್ಯಂತ ಪೊಲೀಸ್ ಹೈಅಲರ್ಟ್ ಘೋಷಿಸಲಾಗಿದೆ. ಡಿಸೆಂಬರ್ 31ರಂದು ರಾತ್ರಿ 10 ಗಂಟೆಯ ನಂತರ ನಗರದ ಪ್ರಮುಖ 50 ಫ್ಲೈಓವರ್‌ಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಎಲ್ಲೆಡೆ ಡ್ರಂಕ್ ಅಂಡ್ ಡ್ರೈವ್ ತಪಾಸಣೆ

ಹೊಸ ವರ್ಷದ ಸಂಭ್ರಮದ ವೇಳೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ನಗರದಲ್ಲಿ 166 ಕಡೆ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ನಡೆಸಲಾಗುತ್ತದೆ. ವ್ಹೀಲಿಂಗ್ ಹಾಗೂ ಅಪಾಯಕಾರಿ ಸ್ಟಂಟ್ ಮಾಡುವವರ ಮೇಲೆ ಕಠಿಣ ನಿಗಾ ವಹಿಸಲಾಗಿದ್ದು, ಇಂತಹ ಕೃತ್ಯಗಳು ನಡೆಯುವ 92 ಸ್ಥಳಗಳನ್ನು ಗುರುತಿಸಿ ಅಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ ಎಂದು ಅವರು ಹೇಳಿದರು.

ಎಂಜಿ ರಸ್ತೆ ಮೆಟ್ರೋ ನಿಲ್ದಾಣ ಬಂದ್

ಡಿಸೆಂಬರ್ 31ರಂದು ರಾತ್ರಿ 10 ಗಂಟೆಯ ನಂತರ ಎಂಜಿ ರಸ್ತೆ ಮೆಟ್ರೋ ನಿಲ್ದಾಣವನ್ನು ಬಂದ್ ಮಾಡಲಾಗುತ್ತದೆ. ನಿಗದಿತ ಸಮಯಕ್ಕೆ ಮೆಟ್ರೋ ಸೇವೆಗಳನ್ನು ನಿಯಂತ್ರಿಸುವಂತೆ ಸೂಚನೆ ನೀಡಲಾಗಿದೆ. ಮದ್ಯಪಾನ ಮಾಡಿ ಸಾರ್ವಜನಿಕವಾಗಿ ಕಿರಿಕಿರಿ ಮಾಡುವುದು, ಗಲಾಟೆ ಅಥವಾ ಅಶಾಂತಿ ಸೃಷ್ಟಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ನಗರದ ಪಬ್‌, ರೆಸ್ಟೋರೆಂಟ್‌, ಕ್ಲಬ್‌ ಹಾಗೂ ರೆಸಾರ್ಟ್‌ಗಳಿಗೆ ಸಮಯ ಮಿತಿ ಕಡ್ಡಾಯಗೊಳಿಸಲಾಗಿದ್ದು, ಡಿಜೆ ಹಾಗೂ ಲೌಡ್‌ಸ್ಪೀಕರ್ ಬಳಕೆಗೆ ಅನುಮತಿ ಮತ್ತು ಸಮಯ ಮಿತಿ ವಿಧಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ ವರ್ತನೆ, ಶಬ್ದ ಮಾಲಿನ್ಯ, ಅಕ್ರಮ ಪಾರ್ಟಿಗಳು ಹಾಗೂ ಅಪಾಯಕಾರಿ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.

ಬೆಂಗಳೂರಿನಾದ್ಯಂತ 20 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ

ಹೊಸ ವರ್ಷಾಚರಣೆ ವೇಳೆ ಭದ್ರತೆಗಾಗಿ ನಗರಾದ್ಯಂತ ಸುಮಾರು 20 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸಿಸಿಟಿವಿ, ಡ್ರೋನ್‌ ಹಾಗೂ ತಾಂತ್ರಿಕ ಸಾಧನಗಳ ಮೂಲಕ ನಿಗಾವಹಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಪ್ರವಾಸಿ ಪ್ರಿಯರಿಗೆ ಶಾಕ್​​: ಹೊಸ ವರ್ಷದ ಹಿನ್ನೆಲೆ ಈ ಸ್ಥಳಗಳಿಗೆ ಇರಲಿದೆ ನಿರ್ಬಂಧ

ಭದ್ರತೆಗಾಗಿ ಬೆಂಗಳೂರು ನಗರದ ಹಲವೆಡೆ ವಾಚ್ ಟವರ್‌ಗಳ ನಿಯೋಜನೆ ಮಾಡಲಾಗಿದೆ. ಸುರಕ್ಷಿತ ವಲಯಗಳ ಗುರುತಿಸುವಿಕೆ ಹಾಗೂ ಹೀಟ್ ಮ್ಯಾಪ್ ವ್ಯವಸ್ಥೆ ಮಾಡಲಾಗಿದೆ. ಸಹಾಯ, ದೂರುಗಳಿಗಾಗಿ ಮಹಿಳಾ ಸಹಾಯ ಕೇಂದ್ರಗಳ ಸ್ಥಾಪನೆ ಮಾಡಲಾಗುತ್ತಿದೆ. ಜನಸಂದಣಿ ನಿಯಂತ್ರಣಕ್ಕೆ ಮೆಟ್ರೋ ರೈಲುಗಳ ಸಮಯಾವಧಿ ವಿಸ್ತರಣೆ, ಸಂಚಾರ ಸುಗಮಗೊಳಿಸಲು ಬಸ್ ಸೇವೆಗಳ ಸಮಯಾವಧಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ. ಹೋಟೆಲ್‌ಗಳು, ಲಾಡ್ಜ್‌ಗಳಲ್ಲಿ ನಿಯಮ ಪಾಲನೆ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಸಮಾಜ ವಿರೋಧಿ ಅಂಶಗಳನ್ನು ತಡೆಗಟ್ಟಲು ಎಐ ಕ್ಯಾಮರಾಗಳ ಬಳಕೆ ಮಾಡಲಾಗುವುದು. ಕ್ಯೂಆರ್‌ಟಿ, ಚೆನ್ನಮ್ಮ ಪಡೆ ಸೇರಿ ವಿಶೇಷ ಪೊಲೀಸ್ ಪಡೆ ನಿಯೋಜನೆ ಮಾಡಲಾಗುತ್ತದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸರಿಯಾದ ಸಮಯಕ್ಕೆ ಸಿಂಧೂರ ತಂದು, ನಿಲ್ಲಬೇಕಿದ್ದ ಮದುವೆಯನ್ನು ಸರಾಗವಾಗಿ ನಡೆಯುವಂತೆ ಮಾಡಿದ ಬ್ಲಿಂಕಿಟ್ – Kannada News | Delhi: Wedding Ritual Resumes After Blinkit Rush Delivers Sindoor

ದೆಹಲಿ, ಡಿಸೆಂಬರ್ 29: ಇತ್ತೀಚಿನ ದಿನಗಳಲ್ಲಿ ಬ್ಲಿಂಕಿಟ್, ಸ್ವಿಗ್ಗಿ, ಜೊಮಾಟೊ ಹೀಗೆ ಆನ್​ಲೈನ್​ ಆ್ಯಪ್​ಗಳದ್ದೇ ಹವಾ. ಬ್ಲಿಂಕಿಟ್ ಕೂಡಾ ಕಣ್ಣು ಮಿಟುಕಿಸುವಷ್ಟರಲ್ಲಿ ನಾವು ಆರ್ಡರ್​ ಮಾಡಿದ್ದನ್ನು ನಮ್ಮ ಕಣ್ಣಮುಂದಿರಿಸುತ್ತದೆ. ಈ ಬಾರಿ ಬ್ಲಿಂಕಿಟ್ ನಿಲ್ಲಬೇಕಿದ್ದ ಮದುವೆ(Marriage)ಯನ್ನು ಸರಾಗವಾಗಿ ನಡೆಯುವಂತೆ ಮಾಡಿದೆ. ದೆಹಲಿಯಲ್ಲಿ ಮದುವೆ ಸಮಾರಂಭವೊಂದು ನಡೆಯುತ್ತಿತ್ತು, ಎಲ್ಲಾ ವಿಧಿ ವಿಧಾನಗಳು ನಡೆಯುತ್ತಿದ್ದವು. ಇನ್ನೇನು ವರ ವಧುವಿಗೆ ಸಿಂಧೂರ ಹಚ್ಚಬೇಕು ಎನ್ನುವಷ್ಟರಲ್ಲಿ ತಾವು ಸಿಂಧೂರವನ್ನು ತಂದೇ ಇಲ್ಲ ಎಂಬುದು ಕುಟುಂಬಕ್ಕೆ ನೆನಪಾಗಿದೆ.

ಸಪ್ತಪದಿ ಮುಗಿದಿತ್ತು, ಪತ್ನಿ ಹಣೆಗೆ ಸಿಂಧೂರವಿಡಬೇಕು ಎನ್ನುವಷ್ಟರಲ್ಲಿ ಸಿಂಧೂರವಿರಲಿಲ್ಲ, ಆಗಲೇ ನೆನಪಾಗಿದ್ದು, ಬ್ಲಿಂಕಿಟ್ ಇದು ಕೂಡಲೇ ಸಿಂಧೂರವನ್ನು ಡೆಲಿವರಿ ಮಾಡಿದೆ. ಮದುವೆ ಸರಾಗವಾಗಿ ನಡೆದಿದೆ. ಮದುವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು, ಕುಟುಂಬ ಸದಸ್ಯರು ಪರಿಸ್ಥಿತಿಯನ್ನು ಪರಿಹರಿಸಲು ಒಟ್ಟುಗೂಡಿದರು.

ಭಯಭೀತರಾಗುವ ಅಥವಾ ಅಂಗಡಿಯನ್ನು ಹುಡುಕಲು ಕುಟುಂಬ ಸದಸ್ಯರನ್ನು ಕಳುಹಿಸುವ ಬದಲು, ಅವರು ಬ್ಲಿಂಕಿಟ್‌ನಲ್ಲಿ ತುರ್ತು ಆರ್ಡರ್ ಮಾಡಿದ್ದರು. ಕೆಲವೇ ನಿಮಿಷಗಳಲ್ಲಿ ಸಿಂಧೂರ ಅವರ ಕೈ ಸೇರಿತು. ಅತಿಥಿಗಳ ಚಪ್ಪಾಳೆ ಮತ್ತು ಹರ್ಷೋದ್ಗಾರದ ನಡುವೆ ವರನು ಆಚರಣೆಯನ್ನು ಮುಗಿಸುತ್ತಾರೆ. ಬ್ಲಿಂಕಿಟ್ ಡೆಲಿವರಿ ಬಾಯ್​ನನ್ನು ಸೈಲೆಂಟ್ ಸೂಪರ್ ಹೀರೋ ಎಂದು ಕರೆದಿದ್ದಾರೆ.

ಪೋಸ್ಟ್

ಗುಜರಾತ್‌ನಲ್ಲಿ ನಡೆದ ನನ್ನ ಮೈದುನನ ಮದುವೆಯಲ್ಲೂ ಇಂಥಾ ಘಟನೆ ಸಂಭವಿಸಿದೆ ಮತ್ತು ಕಣ್ಣು ಮಿಟುಕಿಸುವುದರ ಒಳಗೆ ವ್ಯಕ್ತಿ ಅದನ್ನು ತಲುಪಿಸಿದ್ದಾರೆ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

Published On – 12:53 pm, Mon, 29 December 25

Source link

ತಮ್ಮ ಹೇಳಿದಂತೆ ಆಡಿದರೆ ಕಾವ್ಯಾಗೆ ನಷ್ಟ; ಸೂರಜ್ ನೇರ ಮಾತು – Kannada News | Suraj After Bigg Boss Kannada 12: Gilli’s Energy Shocked Me Kavya Game will face backlash Says Suraj

ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಸೂರಜ್ ಅವರು ಶನಿವಾರ ಎಲಿಮಿನೇಟ್ ಆಗಿದ್ದಾರೆ. ಅವರು ಯಾವುದೇ ಸೆಲೆಬ್ರಿಟಿ ಅಲ್ಲ. ಆದಾಗ್ಯೂ ದೊಡ್ಮನೆ ಒಳಗೆ ಹೋಗುವ ಅವಕಾಶ ಸಿಕ್ಕಿತು. ಅವರು ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್​ ಮನೆ ಒಳಗೆ ತೆರಳಿದ್ದರು. 90 ದಿನ ಬಿಗ್ ಬಾಸ್ ಮನೆಯಲ್ಲಿ ಇದ್ದು ಅವರು ಎಲಿಮಿನೇಟ್ ಆಗಿದ್ದಾರೆ. ಗಿಲ್ಲಿ ನಟನ ಕ್ರೇಜ್ ಬಗ್ಗೆ ಅವರಿಗೆ ಮನೆಯ ಒಳಗೆ ಐಡಿಯಾ ಸಿಕ್ಕಿದೆ. ಗಿಲ್ಲಿ (Gilli) ಬಗ್ಗೆ ಅವರು ಮಾತನಾಡಿದ್ದಾರೆ. ಜೊತೆಗೆ ಕಾವ್ಯಾ ಬಗ್ಗೆಯೂ ಮಾತನಾಡಿದ್ದಾರೆ.

ಗಿಲ್ಲಿ ಕ್ರೇಜ್ ನೋಡಿ ಶಾಕ್ ಆದೆ..

‘ಗಿಲ್ಲಿ ಇಡೀ ದಿನ ಎನರ್ಜಿಯಲ್ಲೇ ಇರುತ್ತಾನೆ. ಅವನ ಕೌಂಟರ್ ನೋಡಿ ಶಾಕ್ ಆಗ್ತಾ ಇತ್ತು. ರಕ್ಷಿತಾ ಶೆಟ್ಟಿ ಚೆನ್ನಾಗಿ ಆಡ್ತಾ ಇದಾಳೆ. ಅವಳ ಮಾತು ಇಷ್ಟ ಆಗ್ತಿದೆ. ಅವಳು ಯಾರಿಗೂ ಬೇಸರ ಮಾಡಿಲ್ಲ’ ಎಂದಿದ್ದಾರೆ ಸೂರಜ್.
‘ಗಿಲ್ಲಿ ಆಟ ಕಾವ್ಯಾಗೆ ಪ್ಲಸ್ ಆಗುತ್ತಿದೆ. ಗಿಲ್ಲಿ ಯಾವಾಗಲೂ ಕಾವ್ಯಾ ಜೊತೆ ಇರ್ತಾನೆ. ಇದು ತಪ್ಪು ಎಂದು ಹೇಳುವುದಿಲ್ಲ. ಗಿಲ್ಲಿಯಿಂದ ಕಾವ್ಯಾಗೆ ಸಹಾಯ ಆಗುತ್ತಿದ್ದೆ.

ಕಾವ್ಯಾಗೆ ಮುಳುವಾಗುತ್ತದೆ..

ಕಾವ್ಯಾ ಸಹೋದರ ಬಿಗ್ ಬಾಸ್ ಮನೆಗೆ ಬಂದಿದ್ದರು. ಈ ವೇಳೆ ಹೊರಗಿನ ವಿಷಯ ಹೇಳಿದ್ದರು. ಇದರಿಂದ ಕಾವ್ಯಾ ಸಹೋದರನ ಅರ್ಧಕ್ಕೆ ಹೊರಕ್ಕೆ ಕಳುಹಿಸಬೇಕಾಯಿತು. ಈ ಬಗ್ಗೆ ಸೂರಜ್ ಮಾತನಾಡಿದ್ದಾರೆ. ‘ಕಾವ್ಯಾಗೆ ಹೊರಗಿರೋ ಒಪೀನಿಯನ್ ಸಿಕ್ಕಿದೆ. ಅದೇ ರೀತಿ ಆಡಿದರೆ ಅವರಿಗೆ ನೆಗೆಟಿವ್ ಆಗುತ್ತದೆ. ಕಾವ್ಯಾರ ತಮ್ಮಆ ರೀತಿ ಮಾಡಿದ್ದು ಸರಿಯಲ್ಲ’ ಎಂದಿದ್ದಾರೆ ಸೂರಜ್.

ಎಲಿಮಿನೇಷನ್ ಫೇರ್ ಅನಿಸಿದೆ.

‘ಬಿಗ್ ಬಾಸ್ ಮನೆಯ ಅನುಭವ ಚೆನ್ನಾಗಿತ್ತು. ಸಾಮಾನ್ಯ ವ್ಯಕ್ತಿಯಾಗಿ ಹೋಗಿ ಇಷ್ಟು ದಿನ ಆಡಿದ್​ದೇನೆ. ಆರಂಭದಲ್ಲಿ 4-5 ವಾರ ಇರುತ್ತೇನೆ ಎಂದುಕೊಂಡಿದ್ದೆ. ಆದರೆ, ನನ್ನ ಸಾಮರ್ಥ್ಯ ಏನು ಎಂಬುದು ನಂತರ ಗೊತ್ತಾಗಿದೆ. ಫಿನಾಲೆವರೆಗೆ ಇರ್ತೀನಿ ಎಂದುಕೊಂಡಿದ್ದೆ, ಆದರೆ, ಆಗಿಲ್ಲ. ಆ ಬಗ್ಗೆ ಬೇಸರ ಇದೆ. ಎಲ್ಲರ ಜೊತೆ ಒಳ್ಳೆಯ ರೀತಿಯಲ್ಲಿ ಒಡನಾಡಬೇಕಿತ್ತು ಎಂದು ಈಗ ಅನಿಸುತ್ತದೆ. ಹಾಗಿದ್ದರೆ ನಾನು ಮತ್ತೊಂದಷ್ಟು ದಿನ ಮನೆಯಲ್ಲಿ ಇರೋ ಅವಕಾಶ ಸಿಗುತ್ತಿತ್ತು’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಗಿಲ್ಲಿ ರೀತಿಯ ಹುಡುಗ ಬೇಕು’; ಮನಸ್ಸಿನ ಭಾವನೆ ಹೊರಹಾಕಿದ ರಕ್ಷಿತಾ ಶೆಟ್ಟಿ

‘ನಾನು ಸ್ಟ್ರಾಂಗ್ ಸ್ಪರ್ಧಿ. ಸ್ಪಂದನಾ ಅವರಿಗಿಂತ ಟಫ್ ಕಾಂಪಿಟೇಟರ್ ಆಗಿದ್ದೆ. ಜನರು ಅವರಿಗೆ ವೋಟ್ ಹಾಕಿ ಉಳಿಸಿಕೊಂಡಿದ್ದಾರೆ ಎಂದರೆ ನನಗೇನು ತೊಂದರೆ ಇಲ್ಲ. ಎಲ್ಲರೂ ರಾಶಿಕಾ ಜೊತೆ ಸ್ಟ್ರಕ್ ಆಗಿದ್ದೀನಿ ಎನ್ನುತ್ತಿದ್ದರು. ಆದರೆ, ನಾನು ಹಾಗೆ ಸ್ಟ್ರಕ್ ಆಗಿಲ್ಲ’ ಎಂದಿದ್ದಾರೆ ಸೂರಜ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 1:15 pm, Mon, 29 December 25

Source link

ಪ್ರವಾಸಿ ಪ್ರಿಯರಿಗೆ ಶಾಕ್​​: ಹೊಸ ವರ್ಷದ ಹಿನ್ನೆಲೆ ಈ ಸ್ಥಳಗಳಿಗೆ ಇರಲಿದೆ ನಿರ್ಬಂಧ – Kannada News | Karnataka new year restrictions nandi hills mullayanagiri and seetalayyanagiri closed on december 31

ಬೆಂಗಳೂರು/ಚಿಕ್ಕಮಗಳೂರು, ಡಿಸೆಂಬರ್​​ 29: ಹೊಸ ವರ್ಷದ ಹಿನ್ನಲೆ ಫ್ಯಾಮಿಲಿ, ಸ್ನೇಹಿತರ ಜೊತೆ ಟೂರ್​​ ಹೋಗೋರ ಸಂಖ್ಯೆ ಅತ್ಯಧಿಕವಾಗಿರುತ್ತೆ. ನೀವು ಕೂಡ ಎಲ್ಲಾದರೂ ಪ್ರವಾಸಕ್ಕೆ ಹೋಗೋಣ ಎಂದುಕೊಂಡಿದ್ರೆ ಆ ಸ್ಥಳಗಳು ಅಂದು ಓಪನ್​​ ಇರುತ್ತಾ ಅಥವಾ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ ವಿಧಿಸಲಾಗಿದ್ಯಾ ಎಂಬುದನ್ನು ಮೊದಲು ಪರೀಕ್ಷಿಸಿಕೊಳ್ಳಿ. ಯಾಕೆಂದ್ರೆ ಬೆಂಗಳೂರು ಸಮೀಪದ ನಂದಿಗಿರಿಧಾಮ, ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಸೇರಿ ವಿವಿಧ ಪ್ರವಾಸಿ ತಾಣಗಳಿಗೆ ಟೂರಿಸ್ಟ್​​ಗಳನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ನಂದಿಗಿರಿಧಾಮಕ್ಕಿಲ್ಲ ಪ್ರವೇಶ

ಹೊಸ ವರ್ಷಾಚರಣೆ ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವಪ್ರಸಿದ್ಧ ಪ್ರವಾಸಿತಾಣ ನಂದಿಗಿರಿಧಾಮಕ್ಕೆ ಡಿ.31ರ ಮಧ್ಯಾಹ್ನ 2ರಿಂದ ಜ.1ರ ಬೆಳಿಗ್ಗೆ 10 ಗಂಟೆಯವರೆಗೆ ಬಂದ್​​ ಆಗಿರಲಿದೆ. ಅತಿಥಿಗೃಹ ಬುಕ್ ಮಾಡಿದವರನ್ನು ಹೊರತುಪಡಿಸಿ ಉಳಿದ ಪ್ರವಾಸಿಗರಿಗೆ ನಿಷೇಧ ವಿಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರರಿಂದ ಆದೇಶ ಮಾಡಿದ್ದಾರೆ. ಕುಡಿದು ಪ್ರವಾಸಿಗರ ಮೋಜು ಮಸ್ತಿ ಮಾಡೋದನ್ನು ತಡೆಯುವ ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿರೋದಾಗಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: 2026ರ ಹೊಸ ವರ್ಷ ಈ ಮೂರು ರಾಶಿಗೆ ಅದೃಷ್ಟದ ಬಾಗಿಲು ತೆರೆಯಲಿದೆ; ಮುಟ್ಟಿದೆಲ್ಲಾ ಚಿನ್ನ!

ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿಗೆ ನಿರ್ಬಂಧ

ನ್ಯೂ ಇಯರ್ ಆಚರಣೆಗೆ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಜಿಲ್ಲಾಡಳಿತ ಅಲರ್ಟ್ ಆಗಿದೆ. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಸೇರಿ ಪ್ರವಾಸಿತಾಣಗಳಿಗೆ ಡಿ.31ರ ಸಂಜೆ 6 ಗಂಟೆಯಿಂದ ಜ.1ರ ಬೆಳಗ್ಗೆ 6 ಗಂಟೆವರೆಗೆ ನಿರ್ಬಂಧ ವಿಧಿಸಲಾಗಿದೆ. ಈ ಬಗ್ಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಪ್ರವಾಸಿ ಸ್ಥಾಳಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಪ್ರವಾಸಿತಾಣಗಳಲ್ಲಿ ಪಾರ್ಟಿ, ನ್ಯೂ ಇಯರ್ ಆಚರಣೆಗೂ ನಿರ್ಬಂಧ ಹೇರಲಾಗಿದೆ.

ಮಂಗಳವಾರವೂ ಬನ್ನೇರುಘಟ್ಟ ಮೃಗಾಲಯ ಓಪನ್

ಕ್ರಿಸ್ ಮಸ್ ಮತ್ತು ಹೊಸವರ್ಷಾಚರಣೆ ರಜೆ ಹಿನ್ನೆಲೆ ಮಂಗಳವಾರವೂ ಬನ್ನೇರುಘಟ್ಟ ಮೃಗಾಲಯ ಓಪನ್ ಇರಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಝೂಗೆ ಭೇಟಿ ನೀಡುವ ಸಾಧ್ಯತೆ ಹಿನ್ನಲೆ ವಾಡಿಕೆಯ ರಜೆ ದಿನವೂ ಮೃಗಾಲಯ ಓಪನ್ ಇರಲಿದೆ. ಪ್ರವಾಸಿಗರಿಗೆ ಮೃಗಾಲಯ ಮತ್ತು ಚಿಟ್ಟೆ ಪಾರ್ಕ್ ನೋಡಲು ಅವಕಾಶ ಇರಲಿದ್ದು, ಆನ್​​ಲೈನ್​​ ಮೂಲಕವೂ ಡಿಕೆಟ್​​ ಪಡೆದುಕೊಳ್ಳಬಹುದು ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆಡಳಿತ ಮಂಡಳಿ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:28 pm, Mon, 29 December 25

Source link

ಅಂತ್ಯಕ್ರಿಯೆಗೆಂದು ಬಂದವರು ಹೋಗಿದ್ದು ಆಸ್ಪತ್ರೆಗೆ, 200 ಜನರಿಗೆ ರೇಬಿಸ್ ಇಂಜೆಕ್ಷನ್, ಆಗಿದ್ದೇನು? – Kannada News | 200 UP Villagers Get Rabies Shots After Consuming Curd From Buffalo Killed By Dog

ಉತ್ತರ ಪ್ರದೇಶ, ಡಿಸೆಂಬರ್ 29: ಅಂತ್ಯಕ್ರಿಯೆಗೆ ಬಂದ 200ಕ್ಕೂ ಹೆಚ್ಚು ಮಂದಿ ರೇಬಿಸ್(Rabies) ಚುಚ್ಚುಮದ್ದು ಪಡೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಬುಡೌನ್‌ನ ಪಿಪ್ರೌಲಿ ಗ್ರಾಮದ ಸುಮಾರು 200 ನಿವಾಸಿಗಳು ಅಂತ್ಯಕ್ರಿಯೆಯೊಂದರಲ್ಲಿ ಪಾಲ್ಗೊಂಡಿದ್ದರು. ಎಲ್ಲರೂ ನಾಯಿ ಕಚ್ಚಿ ಸತ್ತ ಎಮ್ಮೆಯ ಹಾಲಿನಿಂದ ಮಾಡಿದ ರಾಯತಾವನ್ನು ತಿಂದಿದ್ದರು. ಬಳಿಕ 200 ಮಂದಿಗೂ ರೇಬಿಸ್ ಚುಚ್ಚುಮದ್ದು ನೀಡಲಾಗಿದೆ.

ಗ್ರಾಮಸ್ಥರ ಪ್ರಕಾರ, ಡಿ.23ರಂದು ಗ್ರಾಮದಲ್ಲಿ ಅಂತ್ಯಕ್ರಿಯೆಯೊಂದು ನಡೆದಿತ್ತು. ಅಲ್ಲಿ ಜನರು ನಾಯಿ ಕಚ್ಚಿ ಸತ್ತ ಎಮ್ಮೆಯ ಹಾಲಿನಿಂದ ಮಾಡಿದ ಮೊಸರನ್ನು ತಿಂದಿದ್ದರು. ನಂತರ, ಖಾದ್ಯ ತಯಾರಿಸಲು ಬಳಸಲಾದ ಹಾಲು ಕೆಲವು ದಿನಗಳಿಂದ ನಾಯಿ ಕಚ್ಚಿ ಸತ್ತ ಎಮ್ಮೆಯದ್ದು ಎಂಬುದು ಬೆಳಕಿಗೆ ಬಂದಿತ್ತು. ಡಿಸೆಂಬರ್ 26 ರಂದು ಎಮ್ಮೆ ಸಾವನ್ನಪ್ಪಿತು, ನಂತರ ಸೋಂಕಿನ ಭಯದಿಂದಾಗಿ ಗ್ರಾಮದಲ್ಲಿ ಭೀತಿ ಹರಡಿತ್ತು. ಗ್ರಾಮಸ್ಥರು ಉಜ್ನಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗಿ ಲಸಿಕೆ ಹಾಕಿಸಿಕೊಂಡರು.

ಗ್ರಾಮದಲ್ಲಿ ಒಂದು ಎಮ್ಮೆಯನ್ನು ಹುಚ್ಚು ನಾಯಿ ಕಚ್ಚಿ ರೇಬೀಸ್ ಲಕ್ಷಣಗಳಿಂದ ಸಾವನ್ನಪ್ಪಿದೆ ಎಂಬ ಮಾಹಿತಿ ಬಂದಿದೆ ಎಂದು ಮುಖ್ಯ ವೈದ್ಯಾಧಿಕಾರಿ ಡಾ. ರಾಮೇಶ್ವರ ಮಿಶ್ರಾ ಭಾನುವಾರ ತಿಳಿಸಿದ್ದಾರೆ.
ಗ್ರಾಮಸ್ಥರು ರಾಯ್ತಾ ಸೇವಿಸಿದ್ದಾರೆ ಎಂದು ವರದಿಯಾಗಿದೆ. ಮುನ್ನೆಚ್ಚರಿಕೆಯಾಗಿ, ಎಲ್ಲರಿಗೂ ರೇಬೀಸ್ ಇಂಜೆಕ್ಷನ್ ಪಡೆಯುವಂತೆ ಸೂಚಿಸಲಾಯಿತು.

ಮತ್ತಷ್ಟು ಓದಿ: ಉತ್ತರ ಪ್ರದೇಶ: ಕೇವಲ ನಾಯಿ ನೆಕ್ಕಿದ್ದಕ್ಕೆ ರೇಬಿಸ್​​ನಿಂದ ಪ್ರಾಣಬಿಟ್ಟ ಬಾಲಕ

ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮ. ಸಂದೇಹ ಇದ್ದ ಎಲ್ಲರಿಗೂ ರೇಬಿಸ್ ವಿರೋಧಿ ಲಸಿಕೆ ನೀಡಲಾಯಿತು. ಸಾಮಾನ್ಯವಾಗಿ, ಹಾಲನ್ನು ಕುದಿಸಿದ ನಂತರ ರೇಬೀಸ್ ಬರುವ ಅಪಾಯವಿರುವುದಿಲ್ಲ, ಆದರೆ ಯಾವುದೇ ಸಂಭಾವ್ಯ ಅಪಾಯವನ್ನು ತಡೆಗಟ್ಟಲು ಲಸಿಕೆಯನ್ನು ನೀಡಲಾಯಿತು ಎಂದು ಮಿಶ್ರಾ ಹೇಳಿದರು.

ಆರೋಗ್ಯ ಇಲಾಖೆಯ ಪ್ರಕಾರ, ಗ್ರಾಮದಲ್ಲಿ ಇಲ್ಲಿಯವರೆಗೆ ಯಾವುದೇ ರೋಗ ಹರಡಿಲ್ಲ ಮತ್ತು ಪರಿಸ್ಥಿತಿ ಸಾಮಾನ್ಯವಾಗಿದೆ. ಉಜ್ನಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೇಬಿಸ್ ನಿರೋಧಕ ಇಂಜೆಕ್ಷನ್ ಪಡೆಯಲು ಬಂದವರಿಗೆ ತಕ್ಷಣವೇ ಇಂಜೆಕ್ಷನ್ ನೀಡಲಾಗುತ್ತಿತ್ತು ಎಂದು ಸಿಎಂಒ ತಿಳಿಸಿದ್ದಾರೆ.

ಈ ಉದ್ದೇಶಕ್ಕಾಗಿ, ಪ್ರಾಥಮಿಕ ಆರೋಗ್ಯ ಕೇಂದ್ರ/ಸಮುದಾಯ ಕೇಂದ್ರವನ್ನು ಶನಿವಾರ ಮತ್ತು ಭಾನುವಾರ ಎರಡೂ ದಿನಗಳಲ್ಲಿ ತೆರೆಯಲಾಗಿತ್ತು. ಯಾವುದೇ ರೀತಿಯ ವದಂತಿ ಅಥವಾ ಭೀತಿ ಹರಡದಂತೆ ಮುನ್ನೆಚ್ಚರಿಕೆಯಾಗಿ ಗ್ರಾಮವನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಮತ್ತೊಬ್ಬ ಗ್ರಾಮಸ್ಥರಾದ ಧರ್ಮಪಾಲ್, ಆ ಎಮ್ಮೆಯನ್ನು ನಾಯಿ ಕಚ್ಚಿದ್ದರಿಂದ ಅದು ಅನಾರೋಗ್ಯಕ್ಕೆ ಒಳಗಾಯಿತು ಮತ್ತು ನಂತರ ಸತ್ತುಹೋಯಿತು ಎಂದು ಹೇಳಿದರು. ಅದೇ ಎಮ್ಮೆಯ ಹಾಲಿನಿಂದ ರಾಯ್ತಾ ತಯಾರಿಸಲ್ಪಟ್ಟಿದ್ದರಿಂದ ಸೋಂಕಿನ ಭಯ ಹುಟ್ಟಿಕೊಂಡಿತು, ಆದ್ದರಿಂದ ಅವರಿಗೆ ರೇಬೀಸ್ ಇಂಜೆಕ್ಷನ್ ನೀಡಲಾಯಿತು ಎಂದರು.

ರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Viral: ಕಂಪನಿ ನನ್ನನ್ನು ನಡೆಸಿಕೊಂಡ ರೀತಿ ಇದು; ಟಾಯ್ಲೆಟ್ ಪೇಪರ್‌ನಲ್ಲಿ ರಾಜೀನಾಮೆ ಪತ್ರ ಬರೆದು ಉದ್ಯೋಗ ತೊರೆದ ವ್ಯಕ್ತಿ – Kannada News | Employee quits job by writing resignation letter on toilet paper

ಕಂಪನಿಯಲ್ಲಿ (company) ಕೆಲಸ ಮಾಡುವ ಉದ್ಯೋಗಿಗಳನ್ನು ಒತ್ತಡವು ಬೆಂಬಿಡದೆ ಕಾಡುತ್ತದೆ. ಅನೇಕ ಬಾರಿ ಕಂಪನಿಗಳು ಉದ್ಯೋಗಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತವೆ. ಹೀಗಾಗಿ ರಾಜೀನಾಮೆ (resignation) ನೀಡುವ ನಿರ್ಧಾರಕ್ಕೆ ಬರುತ್ತಾರೆ. ಇದೀಗ ರಾಜೀನಾಮೆ ಪತ್ರವೊಂದು ವೈರಲ್ ಆಗಿದೆ. ಉದ್ಯೋಗಿಯೂ ಟಾಯ್ಲೆಟ್ ಪೇಪರ್‌ನಲ್ಲಿ ರಾಜೀನಾಮೆ ನೀಡಿರುವುದೇ ಹೈಲೈಟ್ ಆಗಲು ಮುಖ್ಯ ಕಾರಣ. ಅದಲ್ಲದೇ, ತಾನು ಯಾವ ಕಾರಣಕ್ಕಾಗಿ ಈ ಪೇಪರ್ ಬಳಸಿದ್ದೇನೆ ಎನ್ನುವುದನ್ನು ರಾಜೀನಾಮೆಯಲ್ಲಿ ಉಲ್ಲೇಖಿಸಾಲಾಗಿದೆ. ಈ ರಾಜೀನಾಮೆ ಪತ್ರ ನೋಡಿ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.

ವೋಟ್ಪಿಸ್ಮಿಕ್‌ (Whotfismick) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಉದ್ಯೋಗಿಯು ಟಾಯ್ಲೆಟ್ ಪೇಪರ್‌ನಲ್ಲಿ ರಾಜೀನಾಮೆ ಪತ್ರ ಬರೆದಿರುವುದನ್ನು ಕಾಣಬಹುದು. ಕಂಪನಿ ನನ್ನನ್ನು ಹೇಗೆ ನಡೆಸಿಕೊಂಡಿತು ಎಂಬುದರ ಸಂಕೇತವಾಗಿ ನಾನು ಈ ಟಾಯ್ಲೆಟ್ ಪೇಪರ್‌ರನ್ನು ನನ್ನ ರಾಜೀನಾಮೆ ಪತ್ರ ಬರೆಯಲು ಆರಿಸಿಕೊಂಡೆ. ನಾನು ಈ ಕೆಲಸವನ್ನು ತ್ಯಜಿಸುತ್ತೇನೆ ಎಂದು ಉಲ್ಲೇಖಿಸಿರುವುದನ್ನು ನೋಡಬಹುದು.

ವೈರಲ್ ಪೋಸ್ಟ್ ಇಲ್ಲಿದೆ

ಇದನ್ನೂ ಓದಿ:ತಿಂಗಳಿಗೆ 4 ಲಕ್ಷ ರೂ ಸಂಪಾದನೆ ಮಾಡಿದ್ರೂ ಖುಷಿ ಅನ್ನೋದೇ ಇಲ್ಲ ಎಂದ ಉದ್ಯಮಿ

ಡಿಸೆಂಬರ್ 23 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 1.6 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಈ ವ್ಯಕ್ತಿಯೂ ಕಂಪನಿ ನಡೆಸಿಕೊಂಡ ರೀತಿ ತೀರಾ ವೈಯುಕ್ತಿಕವಾಗಿ ತೆಗೆದುಕೊಂಡ ಎನಿಸುತ್ತಿದೆ ಎಂದಿದ್ದಾರೆ. ಇನ್ನೊಬ್ಬರು, ಕಂಪನಿಗೆ ಮುಟ್ಟಿಕೊಳ್ಳುವಂತಹ ಉತ್ತರ ನೀಡಿದ ಉದ್ಯೋಗಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಅತ್ಯದ್ಭುತ ಪ್ರತಿಭೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link