All posts by nagaraj11081993

ಮನೆಯಲ್ಲಿ ಪದೇ ಪದೇ ಕಾಡುವ ಜೇಡರ ಬಲೆಗಳ ಸಮಸ್ಯೆಯಿಂದ ಮುಕ್ತಿ ಪಡೆಯಲು ಈ ಮನೆಮದ್ದುಗಳು ಬೆಸ್ಟ್‌

ಮನೆಯಲ್ಲಿ ಪದೇ ಪದೇ ಕಾಡುವ ಜೇಡರ ಬಲೆಗಳ ಸಮಸ್ಯೆಯಿಂದ ಮುಕ್ತಿ ಪಡೆಯಲು ಈ ಮನೆಮದ್ದುಗಳು ಬೆಸ್ಟ್‌

ಇಲಿ, ಹಲ್ಲಿ, ಸೊಳ್ಳೆ, ಜಿರಳೆಗಳ ಕಾಟ ಇರುವಂತೆ ಹೆಚ್ಚಿನ ಮನೆಗಳಲ್ಲಿ ಜೇಡರ ಬಲೆಗಳ  (cobweb) ಸಮಸ್ಯೆಯೂ ಇದ್ದೇ ಇರುತ್ತವೆ. ಮನೆಯ ಸೀಲಿಂಗ್‌, ಮೂಲೆಗಳು, ಗೋಡೆಗಳಲ್ಲಿ ಕಾಣಿಸಿಕೊಳ್ಳುವ ಜೇಡರ ಬಲೆಗಳು ಮನೆಯ ಸೌಂದರ್ಯವನ್ನು ಹಾಳು ಮಾಡುವುದಲ್ಲದೆ, ಈ ಜೇಡರ ಬಲೆಗಳು ಈ ಜೇಡರ ಬಲೆಗಳು ಆಸ್ತಮಾ ಮತ್ತು ಅಲರ್ಜಿಯಂತಹ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ ಇದನ್ನು ತೊಡೆದು ಹಾಕಲು ಅನೇಕರು ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಇವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದಿಲ್ಲ ಮತ್ತು ಪದೇ ಪದೇ ಜೇಡಗಳು ಪದೇ ಪದೇ ಬಲೆ ಕಟ್ಟುತ್ತವೆ. ಹೀಗಿರುವಾಗ ಈ ಜೇಡರಬಲೆಗಳನ್ನು ಪರಿಣಾಮಕಾರಿಯಾಗಿ ತೊಡೆದು ಹಾಕಲು ಈ ನೈಸರ್ಗಿಕ ವಿಧಾನವನ್ನು ಅನುಸರಿಸಿ.

ಜೇಡರ ಬಲೆಗಳನ್ನು ತೊಡೆದುಹಾಕಲು ಇಲ್ಲಿವೆ ಪರಿಣಾಮಕಾರಿ ಮಾರ್ಗ:

ವಿನೆಗರ್: ಜೇಡರ ಬಲೆಗಳನ್ನು ನಿವಾರಿಸಲು ವಿನೆಗರ್‌ ಕೂಡ ಪರಿಣಾಮಕಾರಿ. ಎರಡು ಅಥವಾ ಮೂರು ಬೆಳ್ಳುಳ್ಳಿ ಎಸಳುಗಳನ್ನು ಜಜ್ಜಿ ಪುಡಿಮಾಡಿ ಒಂದು ಕಪ್ ವಿನೆಗರ್‌ನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. ಈ ವಿನೆಗರ್ ಮತ್ತು ಬೆಳ್ಳುಳ್ಳಿ ದ್ರವವನ್ನು ಸ್ಪ್ರೇ ಬಾಟಲಿಗೆ ಸುರಿದು ಜೇಡಗಳು ಬಲೆ ಕಟ್ಟುವ ಪ್ರದೇಶಗಳಲ್ಲಿ ಸಿಂಪಡಿಸಿ. ಜೇಡಗಳು ಬೆಳ್ಳುಳ್ಳಿ ಮತ್ತು ವಿನೆಗರ್‌ನ ಬಲವಾದ ವಾಸನೆಯನ್ನು ಸಹಿಸುವುದಿಲ್ಲ. ಇದು ಅವುಗಳನ್ನು ಓಡಿಹೋಗುವಂತೆ ಮಾಡುತ್ತದೆ.

ಪುದೀನ ನೀರು: ಪುದೀನಾದ ಕಟುವಾದ ವಾಸನೆಯನ್ನು ಜೇಡಗಳು ಇಷ್ಟಪಡುವುದಿಲ್ಲ. ಆದ್ದರಿಂದ, ಕೆಲವು ಪುದೀನ ಎಲೆಗಳನ್ನು ತೆಗೆದುಕೊಂಡು ಸ್ವಲ್ಪ ನೀರಿನೊಂದಿಗೆ ಬೆರೆಸಿ ಪೇಸ್ಟ್ ಮಾಡಿ. ನಂತರ, ಸ್ಪ್ರೇ ಬಾಟಲಿಯಲ್ಲಿ ಸ್ವಲ್ಪ ನೀರನ್ನು ತೆಗೆದುಕೊಂಡು ಅದಕ್ಕೆ ಈ ಪುದೀನ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಜೇಡ ಗೂಡುಕಟ್ಟುವ ಪ್ರದೇಶಗಳಲ್ಲಿ ಸಿಂಪಡಿಸಿ. ಈ ಮಿಶ್ರಣದ ಬಲವಾದ ವಾಸನೆಯು ಜೇಡಗಳ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅವು ಹೊರಗೆ ಹೋಗುವಂತೆ ಮಾಡುತ್ತದೆ.

ದಾಲ್ಚಿನ್ನಿ ಪುಡಿ: ಜೇಡಗಳಿಗೆ ದಾಲ್ಚಿನ್ನಿ ವಾಸನೆ ಇಷ್ಟವಾಗುವುದಿಲ್ಲ. ಅದರಿಂದ ಹೊರಹೊಮ್ಮುವ ಬಲವಾದ ಸುವಾಸನೆಯು ಜೇಡಗಳು ಮನೆಯಿಂದ ಹೊರಗೆ ಹೋಗುವಂತೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಜೇಡಗಳು ಬಲೆ ಕಟ್ಟುವ ಸ್ಥಳಗಳಲ್ಲಿ, ಮನೆಯ ಮೂಲೆಗಳಲ್ಲಿ ಸ್ವಲ್ಪ ದಾಲ್ಚಿನ್ನಿ ಪುಡಿಯನ್ನು ಸಿಂಪಡಿಸಿದರೆ,  ದಾಲ್ಚಿನ್ನಿ ಎಣ್ಣೆಯನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿ ಸ್ಪ್ರೇ ಮಾಡುವುದರಿಂದ ಜೇಡ ಬಲೆ ಕಟ್ಟುವುದನ್ನು ಪರಿಣಾಮಕಾರಿಯಾಗಿ ತಡೆಯಬಹುದು.

ಇದನ್ನೂ ಓದಿ: ಬೇಸಿಗೆಯಲ್ಲಿ ತುಳಸಿ ಗಿಡ ಒಣಗಿ ಹೋಗದಂತೆ ನೋಡಿಕೊಳ್ಳಲು ಸಿಂಪಲ್‌ ಸಲಹೆ ಪಾಲಿಸಿ

ನಿಂಬೆ ಸಿಪ್ಪೆ: ಜೇಡರ ಬಲೆಗಳನ್ನು ತೊಡೆದುಹಾಕಲು ನಿಂಬೆ ಸಿಪ್ಪೆ ಕೂಡ ಪರಿಣಾಮಕಾರಿ.  ನಿಂಬೆ ಸಿಪ್ಪೆಗಳನ್ನು ಪುಡಿ ಮಾಡಿ ಒಂದು ಕಪ್ ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ. ಈ ನೀರನ್ನು ಸ್ಪ್ರೇ ಬಾಟಲಿಗೆ ಸುರಿದು ಜೇಡಗಳು ಹೆಚ್ಚಾಗಿ ಗೂಡು ಕಟ್ಟುವ ಸ್ಥಳಗಳಾದ ಮನೆಯ ಮೂಲೆಗಳಲ್ಲಿ, ಬಾಗಿಲು ಮತ್ತು ಕಿಟಕಿಗಳ ಹಿಂದೆ ಸಿಂಪಡಿಸಿ. ಸಿಟ್ರಸ್ ವಾಸನೆಯು ಜೇಡಗಳನ್ನು ಹಿಮ್ಮೆಟ್ಟಿಸುತ್ತದೆ. ಇದಲ್ಲದೆ ಜೇಡರ ಬಲೆಗಳನ್ನು ತೊಡೆದು ಹಾಕಲು ಕರ್ಪೂರವನ್ನು ಸಹ ಬಳಸಬಹುದು.

ಬೇವಿನ ಎಲೆ: ಬೇವಿನ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಮತ್ತು ಕೀಟ ನಿವಾರಕ ಗುಣಗಳನ್ನು ಹೊಂದಿವೆ.  ಒಣಗಿದ ಬೇವಿನ ಎಲೆಗಳನ್ನು ಸುಟ್ಟಾಗ ಉತ್ಪತ್ತಿಯಾಗುವ ಹೊಗೆ ಜೇಡಗಳಿಗೆ ಇಷ್ಟವಾಗುವುದಿಲ್ಲ. ಈ ಮೂಲಕ ಜೇಡರ ಬಲೆಗಳನ್ನು ನಿವಾರಿಸಬಹುದು. ಇದಲ್ಲದೆ,  ಸ್ವಲ್ಪ ನೀರಿನೊಂದಿಗೆ ಬೇವಿನ ಎಣ್ಣೆಯನ್ನು ಬೆರೆಸಿ, ಅದರಲ್ಲಿ ಹತ್ತಿಯನ್ನು ಅದ್ದಿ ಮನೆಯ ಮೂಲೆಗಳಲ್ಲಿ ಇಟ್ಟರೆ, ಜೇಡಗಳು ಅಲ್ಲಿಂದ ಓಡಿಹೋಗುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಿಯುಸಿಯಲ್ಲಿ ಕಡಿಮೆ ಅಂಕ ಬಂದಿದೆಯೇ? ಚಿಂತಿಸಬೇಡಿ, ಯಶಸ್ಸಿಗೆ ಇಲ್ಲಿವೆ ಸಾವಿರ ಹಾದಿಗಳು!

ಪಿಯುಸಿ ಫಲಿತಾಂಶ ಬಂದಾಗ ಅಂಕಗಳು ನಿರೀಕ್ಷೆಯಂತೆ ಇಲ್ಲದಿದ್ದರೆ ಆತಂಕವಾಗುವುದು ಸಹಜ. ಹೆಚ್ಚಿನ ವಿದ್ಯಾರ್ಥಿಗಳು ಮತ್ತು ಪೋಷಕರು ಅಂಕಗಳೇ ಭವಿಷ್ಯದ ಅಂತಿಮ ತೀರ್ಪು ಎಂದು ಭಾವಿಸುತ್ತಾರೆ. ಆದರೆ ವಾಸ್ತವವೆನೆಂದರೆ, ಪಿಯುಸಿ ಅಂಕಪಟ್ಟಿ ನಿಮ್ಮ ಬದುಕಿನ ಒಂದು ‘ಬಾಗಿಲು’ ಮಾತ್ರ, ಅದು ನಿಮ್ಮ ಬದುಕಿನ ‘ಅಂತ್ಯ’ವಲ್ಲ. ಇಂದಿನ ಆಧುನಿಕ ಜಗತ್ತಿನಲ್ಲಿ ಕಂಪನಿಗಳು ಅಭ್ಯರ್ಥಿಯ ಅಂಕಪಟ್ಟಿ ನೋಡುವುದಕ್ಕಿಂತ ಹೆಚ್ಚಾಗಿ ಅವರಲ್ಲಿರುವ ಕೌಶಲ (Skill) ಮತ್ತು ಸಮಸ್ಯೆ ಪರಿಹರಿಸುವ ಸಾಮರ್ಥ್ಯವನ್ನು ನೋಡುತ್ತಿವೆ. ಕಡಿಮೆ ಅಂಕ ಬಂದರೂ ನೀವು ಆಯ್ಕೆ ಮಾಡಿಕೊಳ್ಳಬಹುದಾದ ಕೆಲವು ಅದ್ಭುತ ವೃತ್ತಿಜೀವನದ ದಾರಿಗಳು ಇಲ್ಲಿವೆ. ಆದ್ದರಿಂದ, ಫಲಿತಾಂಶದ ಬಗ್ಗೆ ಹೆಚ್ಚು ಚಿಂತಿಸದೆ ಮುಂದಿರುವ ಅವಕಾಶಗಳತ್ತ ಗಮನ ಹರಿಸಿ.

ವೃತ್ತಿಪರ ಡಿಪ್ಲೋಮಾ ಮತ್ತು ಪ್ಯಾರಾ ಮೆಡಿಕಲ್ ಕೋರ್ಸ್‌ಗಳು:

ಕಡಿಮೆ ಅಂಕ ಬಂದವರಿಗೆ ವೃತ್ತಿಪರ ಡಿಪ್ಲೋಮಾ ಕೋರ್ಸ್‌ಗಳು ಅತ್ಯುತ್ತಮ ಆಯ್ಕೆಯಾಗಿವೆ. ಪ್ಯಾರಾ ಮೆಡಿಕಲ್ ಕ್ಷೇತ್ರದಲ್ಲಿರುವ ನರ್ಸಿಂಗ್, ಲ್ಯಾಬ್ ಟೆಕ್ನಿಷಿಯನ್ ಅಥವಾ ಡಯಾಲಿಸಿಸ್ ಟೆಕ್ನಿಷಿಯನ್ ಕೋರ್ಸ್‌ಗಳು ತಕ್ಷಣದ ಉದ್ಯೋಗ ಭರವಸೆಯನ್ನು ನೀಡುತ್ತವೆ. ಹಾಗೆಯೇ ತಾಂತ್ರಿಕ ಆಸಕ್ತಿ ಇರುವವರು ಮೆಕ್ಯಾನಿಕಲ್, ಇಲೆಕ್ಟ್ರಿಕಲ್ ಅಥವಾ ಸಿವಿಲ್ ಡಿಪ್ಲೋಮಾ ಮಾಡುವುದರಿಂದ ಕೈಗಾರಿಕಾ ಕ್ಷೇತ್ರಗಳಲ್ಲಿ ಬೇಗನೆ ನೆಲೆ ಕಂಡುಕೊಳ್ಳಬಹುದು. ಈ ಕೋರ್ಸ್‌ಗಳಲ್ಲಿ ಪ್ರಾಯೋಗಿಕ ಜ್ಞಾನಕ್ಕೆ ಹೆಚ್ಚಿನ ಒತ್ತು ಇರುವುದರಿಂದ, ಕೆಲಸದ ಮಾರುಕಟ್ಟೆಯಲ್ಲಿ ಇವರಿಗೆ ಹೆಚ್ಚಿನ ಬೇಡಿಕೆಯಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಸರ್ಕಾರಿ ಉದ್ಯೋಗ:

ಸರ್ಕಾರಿ ಕೆಲಸದ ಕನಸು ಇರುವವರು ಅಂಕಗಳು ಕಡಿಮೆ ಇವೆ ಎಂದು ನಿರಾಶರಾಗಬೇಕಿಲ್ಲ. ಕೇಂದ್ರ ಸರ್ಕಾರದ ಎಸ್‌ಎಸ್‌ಸಿ (SSC) ನಡೆಸುವ ಪರೀಕ್ಷೆಗಳು ಅಥವಾ ರಾಜ್ಯ ಸರ್ಕಾರದ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಪಿಯುಸಿ ಕೇವಲ ಪಾಸಾಗಿದ್ದರೂ ಸಾಕು. ಇಲ್ಲಿ ನಿಮ್ಮ ಅಂಕಗಳಿಗಿಂತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನೀವು ತೋರುವ ಪ್ರತಿಭೆ ಮತ್ತು ದೈಹಿಕ ಸಾಮರ್ಥ್ಯಕ್ಕೆ ಪ್ರಾಮುಖ್ಯತೆ ಇರುತ್ತದೆ. ಆದ್ದರಿಂದ, ಸರಿಯಾದ ತರಬೇತಿ ಮತ್ತು ಪರಿಶ್ರಮವಿದ್ದರೆ ಸರ್ಕಾರಿ ಹುದ್ದೆಯನ್ನು ಪಡೆಯುವುದು ಕಷ್ಟವೇನಲ್ಲ.

ಡಿಜಿಟಲ್ ಯುಗದ ಹೊಸ ಕೌಶಲಗಳು (The AI & Digital Wave):

ಡಿಜಿಟಲ್ ಕೌಶಲಗಳನ್ನು ಕಲಿಯುವುದು ಇಂದಿನ ಕಾಲದ ಅನಿವಾರ್ಯತೆಯಾಗಿದೆ. ನೀವು ಯಾವುದೇ ವಿಭಾಗದಲ್ಲಿ (ಆರ್ಟ್ಸ್, ಕಾಮರ್ಸ್, ಸೈನ್ಸ್) ಪಿಯುಸಿ ಮುಗಿಸಿದ್ದರೂ, ಡಿಜಿಟಲ್ ಮಾರ್ಕೆಟಿಂಗ್, ಗ್ರಾಫಿಕ್ ಡಿಸೈನಿಂಗ್ ಅಥವಾ ವಿಡಿಯೋ ಎಡಿಟಿಂಗ್‌ನಂತಹ ಕೋರ್ಸ್‌ಗಳನ್ನು ಮಾಡಬಹುದು. ಇವುಗಳನ್ನು ಕಲಿಯಲು ಕೇವಲ 3 ರಿಂದ 6 ತಿಂಗಳು ಸಾಕು. ಇಂದಿನ ಸ್ಟಾರ್ಟ್‌ಅಪ್ ಯುಗದಲ್ಲಿ ಇಂತಹ ಕ್ರಿಯೇಟಿವ್ ಕೆಲಸ ಮಾಡುವವರಿಗೆ ದೊಡ್ಡ ದೊಡ್ಡ ಸಾಫ್ಟ್‌ವೇರ್ ಕಂಪನಿಗಳು ಮತ್ತು ಜಾಹೀರಾತು ಸಂಸ್ಥೆಗಳು ಆಕರ್ಷಕ ಸಂಬಳ ನೀಡಲು ಸಿದ್ಧವಿರುತ್ತವೆ.

ಸೃಜನಶೀಲ ವೃತ್ತಿಜೀವನ (Creative Careers):

ಸೃಜನಶೀಲ ವೃತ್ತಿಜೀವನವನ್ನು ಇಷ್ಟಪಡುವವರಿಗೆ ಹೋಟೆಲ್ ಮ್ಯಾನೇಜ್‌ಮೆಂಟ್, ಫ್ಯಾಷನ್ ಡಿಸೈನಿಂಗ್ ಮತ್ತು ಅನಿಮೇಷನ್ ಕ್ಷೇತ್ರಗಳು ಬಾಗಿಲು ತೆರೆದಿವೆ. ನಿಮಗೆ ಅಡುಗೆಯಲ್ಲಿ ಆಸಕ್ತಿ ಇದ್ದರೆ ಅಥವಾ ವಿನ್ಯಾಸಗಳಲ್ಲಿ ಹೊಸತನ ಹುಡುಕುವ ಹವ್ಯಾಸವಿದ್ದರೆ, ಈ ಕ್ಷೇತ್ರಗಳಲ್ಲಿ ನಿಮ್ಮ ಕಲ್ಪನಾ ಶಕ್ತಿಯೇ ಬಂಡವಾಳವಾಗುತ್ತದೆ. ಪ್ರವಾಸೋದ್ಯಮ ಮತ್ತು ಸಿನೆಮಾ ರಂಗವು ಬೆಳೆಯುತ್ತಿರುವ ಕಾರಣ, ಈ ವೃತ್ತಿಗಳಲ್ಲಿ ಉದ್ಯೋಗದ ಕೊರತೆಯಿಲ್ಲ. ಇದು ನಿಮ್ಮ ಹವ್ಯಾಸವನ್ನೇ ವೃತ್ತಿಯನ್ನಾಗಿ ಮಾಡಿಕೊಳ್ಳಲು ಇರುವ ಸುಸಂದರ್ಭವಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾರಾಮತಿ ಉಪಚುನಾವಣೆಯಲ್ಲಿ ಅಚ್ಚರಿಯ ಬೆಳವಣಿಗೆ; ಸುನೇತ್ರಾ ಪವಾರ್ ಅವಿರೋಧ ಆಯ್ಕೆ

ಬಾರಾಮತಿ, ಏಪ್ರಿಲ್ 9: ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಇತರ ಹಿರಿಯ ನಾಯಕರು ಏಪ್ರಿಲ್ 23ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಸುನೇತ್ರಾ ಪವಾರ್ (Sunetra Pawar) ಅವರು ಅವಿರೋಧವಾಗಿ ಆಯ್ಕೆಯಾಗುವಂತೆ ಮಾಡಬೇಕೆಂದು ಮಾಡಿದ ಮನವಿಗಳನ್ನು ಒಪ್ಪಿಕೊಂಡಿರುವ ಮಹಾರಾಷ್ಟ್ರದ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್ ಅವರು ಬಾರಾಮತಿ ವಿಧಾನಸಭಾ ಉಪಚುನಾವಣೆಯಿಂದ ಪಕ್ಷವು ತನ್ನ ಅಭ್ಯರ್ಥಿಯನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ. ಹೀಗಾಗಿ, ಸುನೇತ್ರಾ ಪವಾರ್ ಅವರ ಎದುರಾಳಿಯಾಗಿ ಯಾವುದೇ ಸ್ಪರ್ಧಿ ಇಲ್ಲದ ಕಾರಣ ಈ ಚುನಾವಣೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಏಪ್ರಿಲ್ 23ರಂದು ನಡೆಯಲಿರುವ ಬಾರಾಮತಿ ಉಪಚುನಾವಣೆಯಿಂದ ಹಿಂದೆ ಸರಿಯುವಂತೆ ಶರದ್ ಪವಾರ್ ಮತ್ತು ಸುಪ್ರಿಯಾ ಸುಳೆ ಸೇರಿದಂತೆ ಹಿರಿಯ ಎನ್‌ಸಿಪಿ ನಾಯಕರು ಕಾಂಗ್ರೆಸ್​​ಗೆ ಮನವಿ ಮಾಡಿದ್ದರು. ಇದಾದ ನಂತರ ಕಾಂಗ್ರೆಸ್ ಈ ಕ್ರಮ ಕೈಗೊಂಡಿದೆ.

ಇದನ್ನೂ ಓದಿ: Video: ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ ಎನ್‌ಸಿಪಿ ನಾಯಕಿ ಸುನೇತ್ರಾ ಪವಾರ್ ಅಧಿಕಾರ ಸ್ವೀಕಾರ

ಜನವರಿಯಲ್ಲಿ ಬಾರಾಮತಿಯಲ್ಲಿ ನಡೆಯಲಿದ್ದ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನರಾದರು. ಆಗ ಅವರು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ಬಾರಾಮತಿಯ ಶಾಸಕರಾಗಿದ್ದರು. ಅದಾದ 1 ತಿಂಗಳ ನಂತರ ಅವರ ಪತ್ನಿ ಸುನೇತ್ರಾ ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಿಸಲಾಯಿತು.ಆದರೆ, ಅವರು ಶಾಸಕಿಯಾಗಿ ಆಯ್ಕೆಯಾಗಬೇಕಾಗಿದ್ದರಿಂದ ಈ ಬಾರಿ ಉಪಚುನಾವಣೆಯಲ್ಲಿ ಅವರನ್ನು ಕಣಕ್ಕಿಳಿಸಲಾಗಿತ್ತು. ಅಜಿತ್ ಪವಾರ್ ಅವರ ಗೌರವಾರ್ಥವಾಗಿ ಕಾಂಗ್ರೆಸ್ ತನ್ನ ಪಕ್ಷ ಅಭ್ಯರ್ಥಿಯನ್ನು ಹಿಂಪಡೆಯುವ ಮೂಲಕ ಸುನೇತ್ರಾ ಪವಾರ್ ಅವಿರೋಧವಾಗಿ ಆಯ್ಕೆಯಾಗುವಂತೆ ಮಾಡಿದೆ.

ಬಾರಾಮತಿ ಸ್ಥಾನವನ್ನು ಪವಾರ್ ಕುಟುಂಬದ ಭದ್ರಕೋಟೆ ಎಂದು ಪರಿಗಣಿಸಲಾಗಿದೆ. ಇದನ್ನು 1991ರಿಂದ ಅಜಿತ್ ಪವಾರ್ ಹೊಂದಿದ್ದರು. ಅದಕ್ಕೂ ಮೊದಲು, ಅವರ ಚಿಕ್ಕಪ್ಪ ಶರದ್ ಪವಾರ್ ಬಾರಾಮತಿ ಸ್ಥಾನವನ್ನು ಹೊಂದಿದ್ದರು. ಸುಪ್ರಿಯಾ ಸುಲೆ ಬಾರಾಮತಿಯ ಸಂಸದೆ. ಹೀಗಾಗಿ ಬಾರಾಮತಿ ವಿಧಾನಸಭಾ ಸ್ಥಾನ ಮತ್ತು ಸಂಸದೀಯ ಕ್ಷೇತ್ರ ಎರಡನ್ನೂ ಪವಾರ್ ಕುಟುಂಬವು ಹೊಂದಿದೆ.

ಇದನ್ನೂ ಓದಿ: ಎನ್‌ಸಿಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಸುನೇತ್ರಾ ಪವಾರ್ ಆಯ್ಕೆ

ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕವಾದ ಇಂದು (ಗುರುವಾರ) ಮಹಾರಾಷ್ಟ್ರದ ಕಾಂಗ್ರೆಸ್ ಮುಖ್ಯಸ್ಥ ಹರ್ಷವರ್ಧನ್ ಸಪ್ಕಲ್ ಪಕ್ಷದ ಅಭ್ಯರ್ಥಿ ಅಮರ್ ಮೋರೆ ಅವರು ಚುನಾವಣೆಯಿಂದ ಹಿಂದೆ ಸರಿಯುತ್ತಾರೆ ಎಂದು ಘೋಷಿಸಿದರು. ಈ ಹಿಂದೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರಗಳ ಭಾಗವಾಗಿದ್ದ ಅಜಿತ್ ಪವಾರ್ ಅವರ ಮೇಲಿನ ಗೌರವದಿಂದಾಗಿ ಕಾಂಗ್ರೆಸ್ ಪಕ್ಷವು ತನ್ನ ನಿಲುವನ್ನು ಬದಲಾಯಿಸಿತು ಎಂದು ಅವರು ಹೇಳಿದ್ದಾರೆ.

ಛಗನ್ ಭುಜಬಲ್ ಮತ್ತು ಧನಂಜಯ್ ಮುಂಡೆ ನೇತೃತ್ವದ ಹಿರಿಯ ಎನ್‌ಸಿಪಿ ನಾಯಕರ ನಿಯೋಗವು ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ವೈಯಕ್ತಿಕವಾಗಿ ಸಂಪರ್ಕಿಸಿತ್ತು. ಸುನೇತ್ರಾ ಪವಾರ್ ಕೂಡ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದ್ವಿತೀಯ ಪಿಯು ರಿಸಲ್ಟ್: ಕಾಮರ್ಸ್​​ನಲ್ಲಿ ಮಂಗಳೂರು ವಿದ್ಯಾರ್ಥಿನಿ ರಾಜ್ಯಕ್ಕೆ ಟಾಪ್

ಮಂಗಳೂರು, (ಏಪ್ರಿಲ್ 09): 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ (2nd PUC Result) ಇಂದು (ಏಪ್ರಿಲ್ 09) ಆನ್​​ಲೈನಲ್ಲಿ ಪ್ರಕಟಗೊಂಡಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರು ಆನ್​​ಲೈನ್​​​ಲ್ಲಿ ರಿಸಲ್ಟ್ ವೀಕ್ಷಣೆ ಮಾಡಬಹುದಾಗಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ಕಾಲೇಜು ವಿದ್ಯಾರ್ಥಿನಿ ದಿಶಾ, ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಪಡೆದುಕೊಂಡಿದ್ದಾರೆ. ಹೌದು…ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ಕಾಲೇಜು ವಿದ್ಯಾರ್ಥಿನಿ ದಿಶಾ ವಾಣಿಜ್ಯ ವಿಭಾಗದಲ್ಲಿ ಔಟ್ ಆಫ್ ಔಟ್ ಅಂದರೆ 600ಕ್ಕೆ 600 ಅಂಕ ಪಡೆದು ಕರ್ನಾಟಕಕ್ಕೆ ಟಾಪರ್ ಆಗಿದ್ದಾರೆ.

ಇದನ್ನೂ ನೋಡಿ: ದ್ವಿತೀಯ ಪಿಯುಸಿ ರಿಸಲ್ಟ್ ಪ್ರಕಟ: ಈ ಬಾರಿ ದಾಖಲೆ ಫಲಿತಾಂಶ, ಪಾಸಾದವರು ಎಷ್ಟು ಗೊತ್ತಾ?

Source link

ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ 114 ಭಾರಿ ಭೂಕಂಪ: ಉತ್ತರ ಕರ್ನಾಟಕ ಭಾಗದಲ್ಲೇ ಹೆಚ್ಚು; ಕಾರಣ ಏನು?

ಬೆಂಗಳೂರು, ಏಪ್ರಿಲ್​​ 09: 2021-2025ರ ಅವಧಿಯಲ್ಲಿ ಕಡಿಮೆ ತೀವ್ರತೆಯ ಭೂಕಂಪಗಳು ಕರ್ನಾಟಕದಲ್ಲಿ ದಾಖಲಾಗುತ್ತಿದ್ದು ವಿಶೇಷವಾಗಿ ಉತ್ತರ ಹಾಗೂ ಉತ್ತರ-ಪೂರ್ವ ಜಿಲ್ಲೆಗಳು ಇವುಗಳ ಕೇಂದ್ರವಾಗಿ ಹೆಚ್ಚು ಹೊರಹೊಮ್ಮಿವೆ ಎಂದು ಭೂ ವಿಜ್ಞಾನ ಸಚಿವಾಲಯವು ಲೋಕಸಭೆಯಲ್ಲಿ ನೀಡಿದ ಮಾಹಿತಿಯಲ್ಲಿ ತಿಳಿಸಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ 114 ಘಟನೆಗಳು ಮಾತ್ರ ದಾಖಲಾಗಿವೆ. ವಿಜಯಪುರ, ಬೀದರ್​ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಹೆಚ್ಚು ಕಂಪನಗಳು ದಾಖಲಾಗಿವೆ. ಆ ಪೈಕಿ ವಿಜಯಪುರದಲ್ಲಿಯೇ ಭೂಕಂಪನದ ಘಟನೆಗಳು ಹೆಚ್ಚಾಗಿ ನಡೆದಿವೆ ಎನ್ನಲಾಗಿದೆ.

2021ರಲ್ಲಿ 11, 2022ರಲ್ಲಿ 19, 2023ರಲ್ಲಿ 6, 2024ರಲ್ಲಿ 2 ಮತ್ತು 2025ರಲ್ಲಿ 7 ಭೂಕಂಪಗಳು ವಿಜಯಪುರದಲ್ಲಿ ದಾಖಲಾಗಿವೆ. ಬೀದರ್​​ನಲ್ಲೂ ಹಲವು ಬಾರಿ ಭೂಕಂಪನದ ಅನುಭವ ಆಗಿದ್ದು 2021 ಮತ್ತು 2022ರಲ್ಲಿ ತಲಾ 3, 2023ರಲ್ಲಿ 7, ನಂತರದ ವರ್ಷಗಳಲ್ಲಿ 2 ಮತ್ತು 3 ಘಟನೆಗಳು ದಾಖಲಾಗಿವೆ. 2021ರಲ್ಲಿ ಯಾವುದೇ ಕಂಪನವಾಗದ ಕಲಬುರಗಿಯಲ್ಲಿ 2023ರಲ್ಲಿ 5 ಮತ್ತು 2025ರಲ್ಲಿ 4 ಸಲ ಭೂಕಂಪದ ಅನುಭವ ಆಗಿದೆ. ಇತ್ತ ಬಳ್ಳಾರಿಯಲ್ಲಿ 2024ರಲ್ಲಿ ಅಚಾನಕ್ ಏರಿಕೆ ಕಂಡುಬಂದಿದ್ದು, 7 ಭೂಕಂಪಗಳು ದಾಖಲಾಗಿವೆ. ಮೈಸೂರು, ದಕ್ಷಿಣ ಕನ್ನಡ ಮತ್ತು ಕೋಲಾರ ಜಿಲ್ಲೆಗಳಲ್ಲಿ ಅತಿ ಕಡಿಮೆ ಅಥವಾ ವಿರಳ ಭೂಕಂಪ ಘಟನೆಗಳು ಮಾತ್ರ ವರದಿಯಾಗಿವೆ.

ಇದನ್ನೂ ಓದಿ: ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಪ್ರಬಲ ಭೂಕಂಪ

ಸಚಿವಾಲಯ ನೀಡಿದ ಪಟ್ಟಿಯಲ್ಲಿ ಭೂಕಂಪ ದಾಖಲಾಗಿದ 16 ಜಿಲ್ಲೆಗಳಷ್ಟೇ ಸೇರಿವೆ. ಉಳಿದ ಜಿಲ್ಲೆಗಳಲ್ಲಿ ಈ ಅವಧಿಯಲ್ಲಿ ಯಾವುದೇ ಗಮನಾರ್ಹ ಭೂಕಂಪ ದಾಖಲಾಗಿಲ್ಲ.ರಾಜ್ಯದಲ್ಲಿ ದಾಖಲಾಗಿರುವ ಬಹುತೇಕ ಭೂಕಂಪಗಳು ರಿಕ್ಟರ್ ಮಾಪಕದಲ್ಲಿ 3.0 ಕ್ಕಿಂತ ಕಡಿಮೆ ತೀವ್ರತೆ ಹೊಂದಿರುವ ಅಥವಾ ಸಣ್ಣ ಮಟ್ಟದವುಗಳಾಗಿವೆ. 3.0 ರಿಂದ 3.9 ನಡುವಿನವುಗಳು ಕಡಿಮೆ ಸಂಖ್ಯೆಯಲ್ಲಿ ಇದ್ದು, 4.0ಕ್ಕಿಂತ ಹೆಚ್ಚಿನವುಗಳು ವಿರಳವಾಗಿವೆ. 5.0 ಕ್ಕಿಂತ ಹೆಚ್ಚಿನ ಭೂಕಂಪಗಳು ಯಾವುದೇ ವರ್ಷದಲ್ಲೂ ದಾಖಲಾಗಿಲ್ಲ.

ಸುರತ್ಕಲ್‌ನ ಎನ್‌ಐಟಿಕೆ ನಾಗರಿಕ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಬಬ್ಲೂ ಚೌಧರಿ ಅವರು ಉತ್ತರ ಕರ್ನಾಟಕದಲ್ಲಿ ಹೆಚ್ಚು ಭೂಕಂಪ ಕಂಡುಬರುವುದಕ್ಕೆ ಮಳೆಗಾಲ ಹಾಗೂ ನಂತರದ ಅವಧಿಯಲ್ಲಿ ಉಂಟಾಗುವ ಹೈಡ್ರೋಸೀಸ್ಮಿಕ ಪ್ರತಿಕ್ರಿಯೆಗಳು ಮತ್ತು ದೊಡ್ಡ ಮಟ್ಟದ ಗಣಿಗಾರಿಕೆ ಚಟುವಟಿಕೆಗಳು ಕಾರಣವಾಗಿರಬಹುದು ಎಂದು ತಿಳಿಸಿದ್ದಾರೆ. 3.0 ಕ್ಕಿಂತ ಕಡಿಮೆ ತೀವ್ರತೆಯ ಭೂಕಂಪಗಳು ತಕ್ಷಣದ ಆತಂಕಕ್ಕೆ ಕಾರಣವಾಗುವುದಿಲ್ಲ ಎಂದರೂ, ಇವುಗಳ ಸಂಖ್ಯೆ ಅಥವಾ ತೀವ್ರತೆಯಲ್ಲಿ ಏರಿಕೆ ಕಂಡುಬಂದರೆ ವೈಜ್ಞಾನಿಕವಾಗಿ ಗಂಭೀರವಾಗಿ ಅಧ್ಯಯನ ಮಾಡಬೇಕೆಂದು ಅವರು ಎಚ್ಚರಿಕೆ ನೀಡಿರೋದಾಗಿ ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ದ್ವಿತೀಯ ಪಿಯುಸಿ ರಿಸಲ್ಟ್ ಪ್ರಕಟ: ಈ ಬಾರಿ ದಾಖಲೆ ಫಲಿತಾಂಶ, ಪಾಸಾದವರು ಎಷ್ಟು ಗೊತ್ತಾ?

ಬೆಂಗಳೂರು, (ಏಪ್ರಿಲ್ 09): ಪ್ರಸಕ್ತ 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ- 1 ರ ಫಲಿತಾಂಶ (Karnataka 2nd PUC result 2026 declared)  ಏಪ್ರಿಲ್‌ 9ರ ಗುರುವಾರ ಮಧ್ಯಾಹ್ನ 3 ಗಂಟೆಗೆ ಪ್ರಕಟಗೊಂಡಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಆನ್​​ಲೈನಲ್ಲಿ ಫಲಿತಾಂಶ ಬಿಡುಗಡೆ ಮಾಡಿದ್ದು, ಅಧಿಕೃತ ವೆಬ್‌ಸೈಟ್‌ https://www.karresults.nic.in/ ಮೂಲಕ ಫಲಿತಾಂಶ ಪರಿಶೀಲನೆ ಮಾಡಿಕೊಳ್ಳಬಹುದು. ಇನ್ನು ಈ ಬಾರಿ ಪಿಯುಸಿ ಫಲಿತಾಂಶ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಹೌದು…2025-26ನೇ ಸಾಲಿನ ಸೆಕೆಂಡ್ ಪಿಯುಸಿ ಪರೀಕ್ಷೆಯಲ್ಲಿ ಶೇ.86ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆ. ಅಂದರೆ 7,10,363 ವಿದ್ಯಾರ್ಥಿಗಳ ಪೈಕಿ 6.10 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ವರ್ಷ ಶೇ.73.45ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಇದರೊಂದಿಗೆ ಈ ಬಾರಿ ಪಿಯುಸಿ ಫಲಿತಾಂಶದಲ್ಲಿ ಸುಧಾರಣೆ ಕಂಡಿದೆ.

ಇದನ್ನೂ ಓದಿ: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2026: ಆನ್​​​ಲೈನ್​​​ನಲ್ಲಿ ರಿಸಲ್ಟ್ ಪ್ರಕಟ

Source link

‘ಧುರಂಧರ್ 2’ ಯಶಸ್ಸು: ಸಂಜಯ್ ದತ್ ಬಗ್ಗೆ ಮೆಚ್ಚುಗೆಯ ಮಾತಾಡಿದ ರಾಘವ್ ಚಡ್ಡಾ

ಆದಿತ್ಯ ಧರ್ ನಿರ್ದೇಶನದ ‘ಧುರಂಧರ್: ದಿ ರಿವೇಂಜ್’ (Dhurandhar: The Revenge) ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದ್ದು, ಚಿತ್ರದ ಪ್ರತಿಯೊಬ್ಬ ಕಲಾವಿದರಿಗೂ ಪ್ರೇಕ್ಷಕರಿಂದ ಅಪಾರ ಪ್ರೀತಿ ವ್ಯಕ್ತವಾಗುತ್ತಿದೆ. ಈ ನಡುವೆ, ರಾಜಕಾರಣಿ ರಾಘವ್ ಚಡ್ಡಾ ಅವರು ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಅವರನ್ನು ಶ್ಲಾಘಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಈಗ ವೈರಲ್ ಆಗಿದೆ. ಇತ್ತೀಚೆಗೆ ರಾಜಕೀಯದ ಏರಿಳಿತಗಳ ಕಾರಣದಿಂದ ಸುದ್ದಿಯಲ್ಲಿದ್ದ ರಾಘವ್ ಚಡ್ಡಾ (Raghav Chadha) ಅವರು ಈಗ ಬಾಲಿವುಡ್​ ನಟನ ಸ್ನೇಹದ ಕಾರಣಕ್ಕಾಗಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಗುರುವಾರ (ಏ.9) ಇನ್‌ಸ್ಟಾಗ್ರಾಮ್‌ನಲ್ಲಿ ಸಂಜಯ್ ದತ್ ಅವರೊಂದಿಗೆ ಇರುವ ಫೋಟೋಗಳನ್ನು ಹಂಚಿಕೊಂಡ ರಾಘವ್ ಚಡ್ಡಾ, ಸಂಜು ಬಾಬಾ ಅವರ ವ್ಯಕ್ತಿತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಫೋಟೋಗಳಲ್ಲಿ ಇಬ್ಬರೂ ಕುರ್ತಾ ಧರಿಸಿ, ರಾಘವ್ ಅವರ ಮನೆಯ ತೋಟದಲ್ಲಿ ಕುಳಿತು ಹರಟೆ ಹೊಡೆಯುತ್ತಿರುವುದನ್ನು ಕಾಣಬಹುದು. ಅವರ ಫೋಸ್ಟ್ ವೈರಲ್ ಆಗಿದೆ.

‘ಕೆಲವು ಸಮಯದ ಹಿಂದೆ ನನ್ನ ನಿವಾಸಕ್ಕೆ ಅತಿಥಿಯಾಗಿ ಬಂದಿದ್ದ ಅತ್ಯಂತ ಆತ್ಮೀಯ ವ್ಯಕ್ತಿಗಳಲ್ಲಿ ಒಬ್ಬರಾದ ಸಂಜಯ್ ದತ್ ಅವರಿಗೆ ಆತಿಥ್ಯ ನೀಡುವ ಅವಕಾಶ ಸಿಕ್ಕಿತು. ಧುರಂಧರ್ ಚಿತ್ರದಿಂದ ನಿಮಗೆ ಸಿಗುತ್ತಿರುವ ಪ್ರೀತಿಯನ್ನು ಕಂಡು ಸಂತೋಷವಾಯಿತು. ನಿಮ್ಮ ಔರಾ ಮೊದಲಿನಂತೆಯೇ ಇದೆ ಮತ್ತು ಪ್ರತಿ ಕಾಲಘಟ್ಟದಲ್ಲೂ ನಿಮ್ಮ ಮೇಲಿರುವ ಅಭಿಮಾನ ಅಚಲವಾಗಿದೆ. ಈ ಯಶಸ್ಸಿಗೆ ನೀವು ಅರ್ಹರು. ನಾನು ಯಾವಾಗಲೂ ನಿಮಗೆ ಬೆಂಬಲವಾಗಿರುತ್ತೇನೆ’ ಎಂದು ರಾಘವ್ ಚಡ್ಡಾ ಬರೆದುಕೊಂಡಿದ್ದಾರೆ.

‘ಧುರಂಧರ್’ ಚಿತ್ರದಲ್ಲಿ ಸಂಜಯ್ ದತ್ ಅವರು ಎಸ್‌ಪಿ ಚೌಧರಿ ಅಸ್ಲಂ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರವು ಪಾಕಿಸ್ತಾನದ ರಿಯಲ್ ಲೈಫ್ ಪೊಲೀಸ್ ಅಧಿಕಾರಿ ಎಸ್‌ಪಿ ಚೌಧರಿ ಅಸ್ಲಂ ಅವರ ಜೀವನದಿಂದ ಪ್ರೇರಿತವಾಗಿದೆ. ಸಂಜಯ್ ದತ್ ಅವರ ಗಂಭೀರ ನಟನೆಗೆ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದನ್ನೂ ಓದಿ: ‘ಧುರಂಧರ್ 2’ ಬಳಿಕ ಮತ್ತೊಂದು ಬ್ಲಾಕ್ ಬಸ್ಟರ್ ನಿರೀಕ್ಷೆಯಲ್ಲಿ ಸಂಜಯ್ ದತ್

ವಿಶೇಷವೆಂದರೆ, ಖುದ್ದು ಚೌಧರಿ ಅಸ್ಲಂ ಅವರ ಪತ್ನಿ ನೌರೀನ್ ಅಸ್ಲಂ ಕೂಡ ಸಂಜಯ್ ದತ್ ಅವರ ನಟನೆಯನ್ನು ಮೆಚ್ಚಿಕೊಂಡಿದ್ದಾರೆ. ‘ಪರದೆಯ ಮೇಲೆ ನೋಡುವಾಗ ಒಂದು ಕ್ಷಣ ನನ್ನ ಪತಿ ಅಸ್ಲಂ ಅವರೇ ಬಂದಿದ್ದಾರೆ ಎಂದು ಅನಿಸಿತು’ ಎಂದು ಅವರು ಭಾವುಕರಾಗಿ ಹೇಳಿದ್ದಾರೆ. ‘ಧುರಂಧರ್ 2’ ಸಿನಿಮಾದಿಂದಾಗಿ ಸಂಜಯ್ ದತ್ ಅವರ ಖ್ಯಾತಿ ಇನ್ನಷ್ಟು ಹೆಚ್ಚಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಚಿಕ್ಕ ಮಕ್ಕಳಲ್ಲಿ ಕೂದಲು ಬಿಳಿಯಾಗುವುದಕ್ಕೆ ಕಾರಣವೇನು? ವಿಟಮಿನ್ ಕೊರತೆಯೇ ಅಥವಾ ರೋಗದ ಲಕ್ಷಣವೇ?

ಮೊದಲೆಲ್ಲಾ ಬಿಳಿ ಕೂದಲು (White Hair) ವಯಸ್ಸಾದವರಲ್ಲಿ ಕಂಡುಬರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಲ್ಲಿಯೂ ಬಿಳಿ ಕೂದಲು ಕಾಣಿಸಿಕೊಳ್ಳುತ್ತಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ತಜ್ಞರ ಪ್ರಕಾರ, ಇದನ್ನು ನಿರ್ಲಕ್ಷಿಸುವುದು ಸರಿಯಲ್ಲ, ಏಕೆಂದರೆ ಇದು ದೇಹದಲ್ಲಿ ವಿಟಮಿನ್ ಕೊರತೆ ಅಥವಾ ಕೆಲವು ಆರೋಗ್ಯ ಸಮಸ್ಯೆಗಳ ಸೂಚನೆಯಾಗಿರಬಹುದು. ಹೌದು ಮಗುವಿನ ಕೂದಲಿನ ಬಣ್ಣವು ಅವರ ಆರೋಗ್ಯ, ಪೋಷಣೆ ಮತ್ತು ದೇಹದ ಆಂತರಿಕ ಸ್ಥಿತಿಯನ್ನು ಸಹ ಪ್ರತಿಬಿಂಬಿಸುತ್ತದೆ ಎಂಬುದು ನಿಮಗೆ ತಿಳಿದಿದೆಯೇ… ಈ ರೀತಿಯಾಗುವ ಬದಲಾವಣೆಯನ್ನು ಸಮಯಕ್ಕೆ ಸರಿಯಾಗಿ ಗುರುತಿಸಿ ಪರಿಹಾರ ಕಂಡುಕೊಳ್ಳದಿದ್ದರೆ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು. ಹಲವು ಬಾರಿ, ಇದು ಕೇವಲ ಬಾಹ್ಯ ಬದಲಾವಣೆಯಲ್ಲ, ಬದಲಾಗಿ ದೇಹದೊಳಗೆ ಸಂಭವಿಸುವ ಕೆಲವು ಅಸಮತೋಲನವನ್ನು ಸೂಚಿಸುತ್ತಿರಬಹುದು ಹಾಗಾಗಿ ಅವುಗಳನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಹಾಗಾದರೆ ಈ ರೀತಿಯಾಗುವುದಕ್ಕೆ ನಿಜವಾದ ಕಾರಣವೇನು, ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ವಿಟಮಿನ್ ಕೊರತೆಯೇ ಪ್ರಮುಖ ಕಾರಣ:

ಚರ್ಮ ತಜ್ಞೆ ಡಾ. ಸೌಮ್ಯ ಪ್ರಕಾರ, ಮಕ್ಕಳಲ್ಲಿ ಬಿಳಿ ಕೂದಲು ಕಾಣಿಸಿಕೊಳ್ಳುವುದು ವಿಟಮಿನ್ ಬಿ12, ಐರನ್, ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಕೊರತೆಯಿಂದಾಗಿರಬಹುದು. ಈ ಪೋಷಕಾಂಶಗಳ ಕೊರತೆ ಕೂದಲಿನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಸರಿಯಾದ ಪೋಷಕಾಂಶ ಸಿಗದಿದ್ದರೆ ಕೂದಲು ಬೇಗ ಬಿಳಿಯಾಗುವ ಸಾಧ್ಯತೆ ಇದೆ.

ರೋಗಗಳ ಸೂಚನೆಯೂ ಆಗಿರಬಹುದು:

ಕೆಲವು ಸಂದರ್ಭಗಳಲ್ಲಿ ಥೈರಾಯ್ಡ್ ಸಮಸ್ಯೆಗಳು, ಆಟೋಇಮ್ಯೂನ್ ರೋಗಗಳು ಅಥವಾ ಚರ್ಮ ಸಂಬಂಧಿತ ಕಾಯಿಲೆಗಳು ಕೂಡ ಕೂದಲಿನ ಬಣ್ಣ ಬದಲಾವಣೆಗೆ ಕಾರಣವಾಗಬಹುದು. ಮಕ್ಕಳಲ್ಲಿ ವೇಗವಾಗಿ ಕೂದಲು ಬಿಳಿಯಾಗುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ.

ಇದನ್ನೂ ಓದಿ: ಒಂದು ಬಿಳಿಕೂದಲು ಕಿತ್ತರೆ ಸುತ್ತಲಿನ ಕೂದಲು ಬಿಳಿಯಾಗುತ್ತಾ?

ಜೆನೆಟಿಕ್ ಮತ್ತು ಜೀವನಶೈಲಿಯೂ ಕಾರಣ:

ಕುಟುಂಬದಲ್ಲಿ ಇಂತಹ ಸಮಸ್ಯೆ ಇದ್ದರೆ, ಇದು ವಂಶಪಾರಂಪರ್ಯದಿಂದಲೂ ಬರಬಹುದು. ಜೊತೆಗೆ ಅಸಮತೋಲನದ ಆಹಾರ, ಜಂಕ್ ಫುಡ್ ಹೆಚ್ಚು ಸೇವನೆ, ನಿದ್ರೆ ಕೊರತೆ ಮತ್ತು ಮಾನಸಿಕ ಒತ್ತಡವೂ ಮಕ್ಕಳ ಕೂದಲಿನ ಆರೋಗ್ಯವನ್ನು ಹಾಳುಮಾಡಬಹುದು. ಕೆಮಿಕಲ್ ಇರುವ ಹೇರ್ ಪ್ರಾಡಕ್ಟ್ಸ್ ಬಳಕೆ ಮತ್ತು ಪರಿಸರ ಮಾಲಿನ್ಯವೂ ಕೂಡ ಈ ರೀತಿ ಸಮಸ್ಯೆಗೆ ಕಾರಣವಾಗಬಹುದು.

ಬಿಳಿ ಕೂದಲನ್ನು ಹೇಗೆ ತಡೆಗಟ್ಟಬಹುದು?

ಈ ಸಮಸ್ಯೆಯನ್ನು ತಡೆಯಲು ಮಕ್ಕಳ ಆಹಾರದಲ್ಲಿ ಹಸಿರು ತರಕಾರಿ, ಹಣ್ಣು, ಹಾಲು, ದಾಲ್ ಮತ್ತು ಪ್ರೋಟೀನ್ ಸಮೃದ್ಧ ಆಹಾರಗಳನ್ನು ಸೇರಿಸಬೇಕು. ಇದೆಲ್ಲದರ ಜೊತೆಗೆ ಸರಿಯಾಗಿ ನಿದ್ರೆ ಮತ್ತು ಒತ್ತಡರಹಿತ ವಾತಾವರಣವೂ ಅಗತ್ಯವಾಗಿರುತ್ತದೆ. ಕೆಮಿಕಲ್ ಇರುವ ಉತ್ಪನ್ನಗಳನ್ನು ತಪ್ಪಿಸಿ, ಕೂದಲಿನ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಚಿಕ್ಕ ಮಕ್ಕಳಲ್ಲಿ ಬಿಳಿ ಕೂದಲು ಕಾಣಿಸಿಕೊಳ್ಳುವುದು ಸಣ್ಣ ಸಮಸ್ಯೆಯಂತೆ ಕಂಡರೂ, ಇದು ದೇಹದ ಒಳಗಿನ ಅಸಮತೋಲನದ ಸೂಚನೆಯಾಗಿರಬಹುದು. ಆದ್ದರಿಂದ ಸಮಯಕ್ಕೆ ಸರಿಯಾಗಿ ಗಮನಿಸಿ, ಅಗತ್ಯವಿದ್ದರೆ ವೈದ್ಯರ ಸಲಹೆ ಪಡೆಯುವುದು ಅತ್ಯಂತ ಮುಖ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತಕ್ಕೆ ಪೆಟ್ರೋಲ್, ಡೀಸಲ್ ಸಮಸ್ಯೆ ವಕ್ಕರಿಸಲಿಲ್ಲ ಯಾಕೆ? ಸರ್ಕಾರದ ಈ ಕೆಲ ಕ್ರಮಗಳೇ ಕಾರಣವಾ?

ನವದೆಹಲಿ, ಏಪ್ರಿಲ್ 9: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧವು ಜಾಗತಿಕವಾಗಿ ದೊಡ್ಡ ಬಿಕ್ಕಟ್ಟನ್ನೇ ಸೃಷ್ಟಿಸಿದೆ. ಜಗತ್ತಿನ ಶೇ. 20ರಷ್ಟು ತೈಲ ಸರಬರಾಜು ಆಗುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿದ ಹಿನ್ನೆಲೆಯಲ್ಲಿ ಅನೇಕ ದೇಶಗಳಿಗೆ ಪೆಟ್ರೋಲ್, ಡೀಸಲ್ ಪೂರೈಕೆ ಕಡಿಮೆ ಆಗಿತ್ತು. ಅದರಲ್ಲೂ ಏಷ್ಯನ್ ರಾಷ್ಟ್ರಗಳು ತತ್ತರಿಸಿವೆ. ಭಾರತದಂತಹ ಕೆಲ ದೇಶಗಳು ಈ ಬಿಕ್ಕಟ್ಟನ್ನು (oil crisis) ತಕ್ಕಮಟ್ಟಿಗೆ ನಿರ್ವಹಿಸಲು ಯಶಸ್ವಿಯಾಗಿವೆ. ಭಾರತ ಈ ಬಿಕ್ಕಟ್ಟನ್ನು ನಿಭಾಯಿಸಲು ಹೇಗೆ ಸಾಧ್ಯವಾಯಿತು? ಇಲ್ಲಿದೆ ಮಾಹಿತಿ.

ಏಳು ವರ್ಷಗಳ ನಂತರ ಇರಾನ್​ನಿಂದ ತೈಲ ಆಮದು

ಇರಾನ್ ಜೊತೆ ಭಾರತಕ್ಕೆ ಮೊದಲಿಂದಲೂ ಉತ್ತಮ ಸಂಬಂಧ ಇದೆ. ಆದರೆ, ಅಮೆರಿಕದ ನಿಷೇಧ ಕ್ರಮದ ಕಾರಣ 2019ರಿಂದ ಇರಾನ್​ನಿಂದ ಭಾರತ ತೈಲ ಪಡೆದಿಲ್ಲ. ಈಗ ಯುದ್ಧ ಶುರುವಾದ ಬಳಿಕ ಅಮೆರಿಕವು ತೈಲ ನಿಷೇಧವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದರಿಂದ ಇರಾನ್​ನಿಂದ ಸಾಕಷ್ಟು ತೈಲದ ಪೂರೈಕೆ ಪಡೆಯಿತು.

ತೈಲ ಪೂರೈಕೆ ಜಾಲ ವಿಸ್ತಾರ

ಭಾರತ ತೈಲ ಪೂರೈಕೆ ವಿಚಾರದಲ್ಲಿ ನಾಲ್ಕೈದು ದೇಶಗಳನ್ನು ನಂಬಿ ಕುಳಿತುಕೊಳ್ಳಲಿಲ್ಲ. ಇರಾನ್, ರಷ್ಯಾ, ಗಲ್ಫ್ ರಾಷ್ಟ್ರಗಳು, ಆಫ್ರಿಕನ್ ದೇಶಗಳು, ಅಮೆರಿಕನ್ ದೇಶಗಳು ಹೀಗೆ ಬೇರೆ ಬೇರೆ ಮೂಲಗಳಿಂದ ಭಾರತವು ಕಚ್ಚಾ ತೈಲದ ಪೂರೈಕೆ ಪಡೆಯುತ್ತಿದೆ. ಹೀಗಾಗಿ, ಭಾರತಕ್ಕೆ ಪೆಟ್ರೋಲ್, ಡೀಸಲ್ ಬಿಕ್ಕಟ್ಟು ಸೃಷ್ಟಿಯಾಗಲಿಲ್ಲ.

ಇದನ್ನೂ ಓದಿ: ಮೂರು ತಿಂಗಳಲ್ಲಿ 80,000 ಟೆಕ್ಕಿಗಳ ಲೇ ಆಫ್; ಮುಂದೈತೆ ಇನ್ನೂ ದೊಡ್ಡ ಬಲಿ

ಪೆಟ್ರೋಲಿಯಂ ಸಂಗ್ರಹದಲ್ಲಿ ಹೆಚ್ಚಳ

ಭಾರತವು ಕಚ್ಛಾ ತೈಲವನ್ನು ಆಮದು ಮಾಡಿಕೊಂಡು ಅದನ್ನು ಸಂಸ್ಕರಿಸಿ, ತನಗೆ ಬೇಕಾದ ಪೆಟ್ರೋಲ್, ಡೀಸಲ್ ಇತ್ಯಾದಿ ಪೆಟ್ರೋಲಿಯಂ ಉತ್ಪನ್ನಗಳನ್ನು ಮಾಡಿಕೊಳ್ಳುತ್ತದೆ. ಇವನ್ನು ಬೇರೆ ದೇಶಗಳಿಗೂ ರಫ್ತುಮಾಡುತ್ತದೆ. ಹಾಗೆಯೇ, ಅಂಡರ್​ಗ್ರೌಂಡ್ ಸಂಗ್ರಹಗಾರಗಳಲ್ಲೂ ತೈಲ ಮತ್ತು ಪೆಟ್ರೋಲಿಯಂ ಅನ್ನು ಶೇಖರಿಸಿ ಇಡುತ್ತದೆ. ಈ ರೀತಿಯ ಪೆಟ್ರೋಲಿಯಂ ಸಂಗ್ರಹವು ಭಾರತಕ್ಕೆ ಹಲವು ವಾರಗಳಿಗೆ ಆಗುವಷ್ಟು ಇದೆ. ತೈಲ ಪೂರೈಕೆ ತೀರಾ ನಿಂತುಬಿಟ್ಟರೂ ಒಂದಷ್ಟು ದಿನಗಳ ಬಳಕೆಗೆ ಸಾಕಾಗುವಷ್ಟು ಪೆಟ್ರೋಲ್ ಸಂಗ್ರಹ ಇದೆ.

ನೌಕಾದಳ ಬಳಸಿ ಹಡಗುಗಳಿಗೆ ಭದ್ರತೆ

ಇರಾನ್ ಯುದ್ಧದ ವೇಳೆ ಹಾರ್ಮುಜ್ ಜಲಸಂಧಿ ಬಹುತೇಕ ಬಂದ್ ಆಗಿತ್ತು. ಇರಾನ್ ಈ ಜಲಮಾರ್ಗವನ್ನು ತಡೆದು ನಿಲ್ಲಿಸಿತ್ತು. ಭಾರತದ ಪ್ರಯತ್ನಗಳ ಫಲವಾಗಿ ಕೆಲ ಭಾರತೀಯ ಗ್ಯಾಸ್ ಹಡಗುಗಳಿಗೆ ಹೊರಹೋಗಲು ಅವಕಾಶ ಕೊಡಲಾಯಿತು. ಭಾರತದ ನೌಕಾದಳದ ಹಡಗುಗಳ ಬೆಂಗಾವಲಿನಲ್ಲಿ ಈ ಎಲ್​ಪಿಜಿ ಟ್ಯಾಂಕರ್​ಗಳು ಭಾರತವನ್ನು ತಲುಪಿದವು.

ಪರ್ಯಾಯ ಇಂಧನಕ್ಕೆ ಪ್ರಯತ್ನ

ಎಲ್​ಪಿಜಿ ಬಿಕ್ಕಟ್ಟನ್ನು ಕಡಿಮೆ ಮಾಡಲು ಭಾರತ ನ್ಯಾಚುರಲ್ ಗ್ಯಾಸ್ ಬಳಕೆ ಹೆಚ್ಚಿಸಲು ಕ್ರಮ ತೆಗೆದುಕೊಂಡಿತು. ದೇಶೀಯವಾಗಿ ನೈಸರ್ಗಿಕ ಅನಿಲ ಉತ್ಪಾದನೆ ಹೆಚ್ಚಿಸಿ, ಪಿಎನ್​ಜಿ ಪೂರೈಕೆ ಮಾಡುತ್ತಿದೆ. ಬೇರೆ ಬೇರೆ ದೇಶಗಳಿಂದ ಎಲ್​ಎನ್​ಜಿ ಪೂರೈಕೆ ಪಡೆದು ಅದನ್ನು ಪಿಎನ್​ಜಿಯಾಗಿ ಸರಬರಾಜು ಮಾಡುತ್ತಿದೆ.

ಇದನ್ನೂ ಓದಿ: ಧೋಬಿ ಎಲ್ಲಿ ಡೈಮಂಡ್ ಡೀಲ್ಸ್ ಎಲ್ಲಿ? ಬಟ್ಟೆ ಒಗೆಯುವವನಿಗೆ 598 ಕೋಟಿ ರೂ ಟ್ಯಾಕ್ಸ್ ನೋಟೀಸ್ ಬಂದಿದ್ದು ಯಾಕೆ?

ಬೆಲೆ ಕಡಿಮೆ ಇದ್ದಾಗ ಹೆಚ್ಚಿನ ಖರೀದಿ…

ಅಮೆರಿಕ ಇರಾನ್ ಮಧ್ಯೆ ಕದನ ವಿರಾಮ ಏರ್ಪಟ್ಟಾಗ ತೈಲ ಬೆಲೆ ನಿನ್ನೆ ದಿಢೀರನೇ ಕುಸಿದುಹೋಯಿತು. ಈ ಸಂದರ್ಭದಲ್ಲಿ ಭಾರತ ಹೆಚ್ಚಿನ ಮೊತ್ತದ ತೈಲವನ್ನು ಖರೀದಿಸಿದೆ. ಇದು ಮುಂದೆ ಸಹಾಯಕ್ಕೆ ಬರುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರೋಗಿಗಳಿಗೆ ಔಷಧಿ ಕೊರತೆ ಆತಂಕ: ಆರೋಗ್ಯ ಸಚಿವರಿಗೆ ಫಾರ್ಮಾಸ್ಯುಟಿಕಲ್ಸ್ ಕಂಪನಿ ಪತ್ರ

ಬೆಂಗಳೂರು, ಏಪ್ರಿಲ್ 09: ಇರಾನ್, ಅಮೆರಿಕ ನಡುವಿನ ಯುದ್ಧಕ್ಕೆ 15 ದಿನಗಳ ವಿರಾಮ ಬಿದ್ದಿದೆ. ಇದರಿಂದ ಹೊರ್ಮುಝ್​​​​​​​​​​​​​ನಲ್ಲಿ ಸಿಲುಕಿಕೊಂಡಿರುವ ಭಾರತದ ಹಡಗುಗಳು ಇನ್ಮುಂದೆ ಬರಲಿದೆ. ಆದರೆ ಕರ್ನಾಟಕದಲ್ಲಿ ಎಲ್‌ಪಿಜಿ ಗ್ಯಾಸ್ ಸಮಸ್ಯೆ ಮಾತ್ರ ಮುಂದುವರಿದಿದೆ. ಆ ಮೂಲಕ ಔಷಧಿ ತಯಾರಿಕೆಯ (medicine manufacturing) ಮೇಲೂ ಯುದ್ಧದ ಕರಿನೆರಳು ಆವರಿಸಿದಂತಾಗಿದೆ. ವಿದೇಶದಿಂದ ಬರಬೇಕಿದ್ದ ಡ್ರಗ್ಸ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಈ ಕುರಿತಾಗಿ ಆರೋಗ್ಯ ಸಚಿವರಿಗೆ ಫಾರ್ಮಾಸ್ಯುಟಿಕಲ್ಸ್ ಕಂಪನಿ ಪತ್ರ ಬರೆದಿವೆ.

ಔಷಧಿ ತಯಾರಿಕೆಗೂ ಹೊಡೆತ

ಎಲ್‌ಪಿಜಿ ಗ್ಯಾಸ್​ ಸಮಸ್ಯೆ ಸರಿಯಾಗಿಲ್ಲ. ಹೀಗಾಗಿ ಹೋಟೆಲ್ ಉದ್ಯಮಕ್ಕೆ ಒಂದು ಕಡೆ ಸಂಕಷ್ಟದಲ್ಲಿ ಇದ್ದರೆ, ಮತ್ತೊಂದಡೆ ಔಷಧ ವಲಯದ ಮೇಲೆ ಯುದ್ಧದ ಕರಿನೆರಳು ಆವರಿಸಿದೆ. ಅಮೆರಿಕ, ಇಸ್ರೇಲ್, ಇರಾನ್‌ ಯುದ್ಧದ ಎಫೆಕ್ಟ್ ಸಾಕಷ್ಟು ವಲಯಗಳ ಮೇಲೆ ಪರಿಣಾಮ ಬೀರಿದೆ‌. ಇದರ ಮಧ್ಯೆ ಔಷಧಿ ತಯಾರಿಕೆಗೂ ಹೊಡೆತ ಬಿದ್ದಿದೆ.

ಇದನ್ನೂ ಓದಿ: ಯುದ್ಧದ ಎಫೆಕ್ಟ್: ಗ್ಯಾಸ್ ಅಭಾವದ ಬೆನ್ನಲ್ಲೇ ರೋಗಿಗಳಿಗೂ ಶಾಕ್, ಈ ವಾರದಿಂದಲೇ ಔಷಧ ಬೆಲೆ ಏರಿಕೆ

ಎಲ್‌ಪಿಜಿ ಗ್ಯಾಸ್ ಕೊರತೆ ಬೆನ್ನಲ್ಲೇ ಔಷಧಿತಯಾರಿಕೆಗೂ ಹೊಡೆತ ಹಿನ್ನೆಲೆ ಫಾರ್ಮಾಸ್ಯುಟಿಕಲ್ಸ್ ಕಂಪನಿಯಿಂದ ಆರೋಗ್ಯ ಸಚಿವರಿಗೆ ಪತ್ರ ಬರೆಯಲಾಗಿದೆ. ವಿದೇಶದಿಂದ ಬರಬೇಕಿದ್ದ ಡ್ರಗ್ಸ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಔಷಧಿ ತಯಾರಿಕೆಗೆ ಕಷ್ಟವಾಗಲಿದೆ ಎಂದು ಫಾರ್ಮಾಸ್ಯುಟಿಕಲ್ಸ್ ಕಂಪನಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಔಷಧಗಳ ದರ ಏರಿಕೆ ಸಾಧ್ಯತೆ

ಇನ್ನು ಎಲ್​ಪಿಜಿ ಗ್ಯಾಸ್ ಅಭಾವ ಹಿನ್ನಲೆ ಮಾತ್ರೆಗಳ ಫಾಯಿಲ್ಸ್ ತಯಾರಿಕೆಗೆ ಪೆಟ್ರೋಕೆಮಿಕಲ್ಸ್ ಅತ್ಯಗತ್ಯ. ಯುದ್ಧದ ಪರಿಣಾಮ ಸಪ್ಕೈ ಚೈನ್ ಮೇಲೆ ಪರಿಣಾಮ ಬಿದ್ದ ಕಾರಣ ಔಷಧಗಳ ದರ ಕೂಡ ಏರಿಕೆ ಆಗುವ ಸಾಧ್ಯತೆ ಇದೆ. ಮುಂದಿನ ವಾರದಿಂದ ಅಂದರೆ ಏಪ್ರಿಲ್ ಮೊದಲ ವಾರದಲ್ಲಿ ಔಷಧಗಳ ದರ ಹೆಚ್ಚಳವಾಗಲಿದೆ.

ಇದನ್ನೂ ಓದಿ: ರೋಗಿಗಳ ಮೇಲೂ ಯುದ್ಧದ ಎಫೆಕ್ಟ್: ಔಷಧಿಗಳ ದರ ಶೇ 15 ರಷ್ಟು ಏರಿಕೆ ಸಾಧ್ಯತೆ

ಸರಾಸರಿ 15 ರಿಂದ 20% ಔಷಧ ದರಗಳು ಹೆಚ್ಚಳ ಆಗಲಿದ್ದು. ಪ್ಯಾರಸಿಟಮಲ್, ಕಾರ್ಡಿಯಾಕ್ ಡ್ರಗ್ಸ್, ಡಯಾಬಿಟಿಸ್ ಡ್ರಗ್ಸ್, ಗ್ಯಾಸ್ಟ್ರಿಕ್‌ ಟ್ಯಾಬ್ಲೆಟ್, ಕಾಫ್ ಸಿರಪ್, ಐರನ್ ಟಾನಿಕ್ಸ್ ಸೇರಿ 600 ಕ್ಕೂ ಹೆಚ್ಚು ಔಷಧಗಳ ಬೆಲೆ ಹೆಚ್ಚಳ ಆಗಲಿದೆ. ಸಾಮಾನ್ಯವಾಗಿ ವರ್ಷದಿಂದ ವರ್ಷಕ್ಕೆ ಔಷಧ ದರ ಹೆಚ್ಚಳ ಮಾಡಲಾಗುತ್ತದೆ. 5 ರಿಂದ 10% ದರ ಹೆಚ್ಚಳ ಇರುತ್ತದೆ‌. ಆದರೆ ಈ ಬಾರಿ ಯುದ್ಧದ ಎಫೆಕ್ಟ್ ಕಾರಣ 15 ರಿಂದ 20% ಪೂರ್ಣ ಏರಿಕೆ ಆಗುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link