IND-W vs SL-W: 69,79,79.. ಹ್ಯಾಟ್ರಿಕ್ ಅರ್ಧಶತಕ ಸಿಡಿಸಿದ ಶಫಾಲಿ ವರ್ಮಾ
ಶ್ರೀಲಂಕಾ ಮಹಿಳಾ ತಂಡದ ವಿರುದ್ಧ ತಿರುವನಂತಪುರದಲ್ಲಿ ನಡೆಯುತ್ತಿರುವ 4ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಸ್ಫೋಟಕ 79 ರನ್ಗಳ ಇನ್ನಿಂಗ್ಸ್ ಆಡಿದ್ದಾರೆ. ಇದು ಈ ಸರಣಿಯಲ್ಲಿ ಶಫಾಲಿ ಅವರ ಸತತ ಮೂರನೇ ಅರ್ಧಶತಕವಾಗಿದೆ. ಸರಣಿಯ ಮೊದಲ ಪಂದ್ಯದಲ್ಲಿ ಕೇವಲ 9 ರನ್ಗಳಿಗೆ ಔಟಾಗಿದ್ದ ಶಫಾಲಿ, ಆ ಬಳಿಕ 2ನೇ ಟಿ20 ಪಂದ್ಯದಲ್ಲಿ 69 ರನ್, 3ನೇ ಟಿ20 ಪಂದ್ಯದಲ್ಲಿ 79 ರನ್ ಹಾಗೂ 4ನೇ ಟಿ20 ಪಂದ್ಯದಲ್ಲಿ 79 ರನ್ ಬಾರಿಸಿದ್ದಾರೆ….