All posts by nagaraj11081993

IND-W vs SL-W: 69,79,79.. ಹ್ಯಾಟ್ರಿಕ್ ಅರ್ಧಶತಕ ಸಿಡಿಸಿದ ಶಫಾಲಿ ವರ್ಮಾ

ಶ್ರೀಲಂಕಾ ಮಹಿಳಾ ತಂಡದ ವಿರುದ್ಧ ತಿರುವನಂತಪುರದಲ್ಲಿ ನಡೆಯುತ್ತಿರುವ 4ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಸ್ಫೋಟಕ 79 ರನ್​ಗಳ ಇನ್ನಿಂಗ್ಸ್ ಆಡಿದ್ದಾರೆ. ಇದು ಈ ಸರಣಿಯಲ್ಲಿ ಶಫಾಲಿ ಅವರ ಸತತ ಮೂರನೇ ಅರ್ಧಶತಕವಾಗಿದೆ. ಸರಣಿಯ ಮೊದಲ ಪಂದ್ಯದಲ್ಲಿ ಕೇವಲ 9 ರನ್​ಗಳಿಗೆ ಔಟಾಗಿದ್ದ ಶಫಾಲಿ, ಆ ಬಳಿಕ 2ನೇ ಟಿ20 ಪಂದ್ಯದಲ್ಲಿ 69 ರನ್, 3ನೇ ಟಿ20 ಪಂದ್ಯದಲ್ಲಿ 79 ರನ್ ಹಾಗೂ 4ನೇ ಟಿ20 ಪಂದ್ಯದಲ್ಲಿ 79 ರನ್ ಬಾರಿಸಿದ್ದಾರೆ. ಟಿ20 ವಿಶ್ವಕಪ್ ಸಮೀಪಿಸುತ್ತಿರುವಾಗ ಶಫಾಲಿ ಅವರ ಈ ಅಮೋಘ ಫಾರ್ಮ್​ ತಂಡಕ್ಕೆ ಆನೆಬಲ ತಂದುಕೊಟ್ಟಿದೆ. ಇನ್ನು ಈ ಪಂದ್ಯದಲ್ಲಿ 46 ಎಸೆತಗಳನ್ನು ಎದುರಿಸಿದ ಶಫಾಲಿ 12 ಬೌಂಡರಿ ಹಾಗೂ 1 ಸಿಕ್ಸರ್ ಕೂಡ ಬಾರಿಸಿದರು. ಮಾತ್ರವಲ್ಲದೆ ಸ್ಮೃತಿ ಜೊತೆಗೂಡಿ ಮೊದಲ ವಿಕೆಟ್​ಗೆ 162 ರನ್​ಗಳ ದಾಖಲೆಯ ಜೊತೆಯಾಟ ಕಟ್ಟಿದರು.

Source link

ಮೊದಲ ಪತಿ ಮೇಲೆ ವರದಕ್ಷಿಣೆ ಕೇಸ್​​ ಹಾಕಿದ ಮಹಿಳೆಗೆ ಶಾಕ್ ಕೊಟ್ಟ 2ನೇ ಗಂಡ! – Kannada News | Second husband testifies for first husband in court woman loses domestic violence case

ಮುಂಬೈ, ಡಿಸೆಂಬರ್ 28: ಮಹಾರಾಷ್ಟ್ರದ ಮುಂಬೈನ (Mumbai) ಕೋರ್ಟ್​ನಲ್ಲಿ ನಾಟಕೀಯ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬರ ಮೇಲೆ ಅವರ ಹೆಂಡತಿ ಕೌಟುಂಬಿಕ ದೌರ್ಜನ್ಯದ ಕೇಸ್ ಹಾಕಿದ್ದಳು. ತನಗೆ ಗಂಡನಿಂದ ಆರ್ಥಿಕ ಪರಿಹಾರ ಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದಳು. ಆದರೆ, ಆಕೆಯ ಗಂಡ ಆಕೆಯ 2ನೇ ಗಂಡನನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಬಂದ ನಂತರ ಈ ಪ್ರಕರಣದ ದಿಕ್ಕೇ ಬದಲಾಗಿದೆ.

ವರದಕ್ಷಿಣೆ ಆರೋಪದ ಮೇಲೆ ತನ್ನ ಪತಿ ತನ್ನ ಮೇಲೆ ದೈಹಿಕ ಹಲ್ಲೆ ನಡೆಸಿ, ವಿಚ್ಛೇದನದ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬಳು ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ವಿವಾಹದ ಸ್ವಲ್ಪ ಸಮಯದ ನಂತರ ನನ್ನ ಗಂಡ ನನ್ನನ್ನು ತೊರೆದು ಊರಿನಲ್ಲಿ ಇನ್ನೊಬ್ಬ ಮಹಿಳೆಯೊಂದಿಗೆ ನೆಲೆಸಿದ್ದಾರೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಳು. ಅಲ್ಲದೆ, ಆತ ತನ್ನನ್ನು ಮನೆಯಿಂದ ಹೊರಗೆ ಹಾಕಿದ್ದಾನೆ ಎಂದು ಆ ಮಹಿಳೆ ಆರೋಪಿಸಿದ್ದಳು. ನನ್ನ ಗಂಡ ನನ್ನ ಮತ್ತು ನನ್ನ ಮಗುವಿನ ಆರ್ಥಿಕ ಅಗತ್ಯಗಳನ್ನು ಪೂರೈಸಲಿಲ್ಲ, ಆದ್ದರಿಂದ ಆತನಿಂದ ಆರ್ಥಿಕ ಪರಿಹಾರವನ್ನು ಕೊಡಿಸಬೇಕೆಂದು ಕೋರಿದ್ದಳು.

ಇದನ್ನೂ ಓದಿ: Video: ಮಗುವನ್ನು ಆಟೋದಲ್ಲಿ ಕೂರಿಸಿ ಬಾರ್​ಗೆ ಕುಡಿಯಲು ಹೋದ ಮಹಿಳೆ

ಈ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾದಾಗ ಆ ಮಹಿಳೆ ತನ್ನ ತಂಗಿಯನ್ನು ಸಾಕ್ಷಿಯಾಗಿ ಹಾಜರುಪಡಿಸಿದಳು. ಈ ಮದುವೆಯಿಂದ ತನ್ನ ಅಕ್ಕ ಆಘಾತಕ್ಕೊಳಗಾಗಿದ್ದಾರೆ ಎಂದು ಆಕೆ ಹೇಳಿಕೆ ನೀಡಿದ್ದರು. ನ್ಯಾಯಾಲಯವು ಮೊದಲು ವಿಚಾರಣೆಯ ಸಮಯದಲ್ಲಿ ಮಧ್ಯಂತರ ಕ್ರಮವಾಗಿ ಆ ಮಹಿಳೆಗೆ ಮಾಸಿಕ ಭತ್ಯೆಯನ್ನು ಪಾವತಿಸಲು ಆಕೆಯ ಗಂಡನಿಗೆ ಸೂಚಿಸಿತ್ತು.

ಆದರೆ, ಇದಕ್ಕೆ ಒಪ್ಪದ ಆಕೆಯ ಮೊದಲ ಪತಿ, 2008ರಲ್ಲಿ ತಾವಿಬ್ಬರೂ ವಿಚ್ಛೇದನ ಪಡೆದಿದ್ದೇವೆ. ಆ ಮಹಿಳೆ ಸ್ವಂತ ಇಚ್ಛೆಯಂತೆ ನನ್ನನ್ನು ತೊರೆದು ಹೋಗಿದ್ದಾಳೆ. ನಾವಿಬ್ಬರೂ ಡೈವೋರ್ಸ್ ಪಡೆದ ನಂತರ ಆಕೆ ಈಗಾಗಲೇ ಬೇರೊಬ್ಬನನ್ನು ಮದುವೆಯಾಗಿರುವುದರಿಂದ ಆರ್ಥಿಕ ಪರಿಹಾರ ನೀಡುವ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರೀತಿ ಇಷ್ಟೇನಾ? ಇಷ್ಟಪಟ್ಟು ಮದುವೆಯಾಗಿ 24 ಗಂಟೆಯೊಳಗೆ ವಿಚ್ಛೇದನ ಪಡೆದ ದಂಪತಿ

ಆಕೆಗೆ ಇನ್ನೊಂದು ಮದುವೆಯಾಗಿದೆ ಎಂಬುದನ್ನು ಸಾಬೀತುಪಡಿಸಲು ಆಕೆಯ ಮೊದಲ ಗಂಡ ಆಕೆಯ 2ನೇ ಗಂಡನನ್ನೇ ಸಾಕ್ಷಿಯಾಗಿ ಕೋರ್ಟ್​ಗೆ ಹಾಜರುಪಡಿಸಿದ್ದಾರೆ. ಅವರು ತಾನು ಆ ಮಹಿಳೆಯನ್ನು ಮದುವೆಯಾಗಿರುವುದಾಗಿ ಒಪ್ಪಿಕೊಂಡರು. ಈ ಸಾಕ್ಷ್ಯಗಳನ್ನು ಪರಿಗಣಿಸಿದ ನಂತರ, ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಬಿ.ಎನ್. ಚಿಕ್ನೆ ಅವರು ಮಹಿಳೆ ಈಗಾಗಲೇ ಇನ್ನೊಬ್ಬ ಪುರುಷನನ್ನು ಮದುವೆಯಾಗಿದ್ದಾರೆ, ಆದ್ದರಿಂದ ಆಕೆಯ ವಿಚ್ಛೇದಿತ ಪತಿಯಿಂದ ಯಾವುದೇ ಪರಿಹಾರಕ್ಕೆ ಅರ್ಹರಲ್ಲ ಎಂದು ತೀರ್ಪು ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮನೆಯಲ್ಲಿ ನನ್ನ ಮಕ್ಕಳು ಸುರಕ್ಷಿತವಾಗಿಲ್ಲ; ಕುಲದೀಪ್ ಸೆಂಗಾರ್ ಜಾಮೀನು ವಿರುದ್ಧ ಉನ್ನಾವ್ ಅತ್ಯಾಚಾರ ಸಂತ್ರಸ್ತೆ ಕಳವಳ – Kannada News | My children unsafe at home Unnao rape survivor accuses against Kuldeep Singh Sengar

ನವದೆಹಲಿ, ಡಿಸೆಂಬರ್ 28: 2017ರ ಉನ್ನಾವ್ (Unnao Case) ಅತ್ಯಾಚಾರ ಪ್ರಕರಣದ ಆರೋಪಿ ಉತ್ತರ ಪ್ರದೇಶದ ಮಾಜಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿರುವುದನ್ನು ಪ್ರಶ್ನಿಸಿ ಕೇಂದ್ರ ತನಿಖಾ ದಳ (ಸಿಬಿಐ) ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಿದ್ಧತೆ ನಡೆಸಿದೆ. ಇದರ ಬೆನ್ನಲ್ಲೇ ಅತ್ಯಾಚಾರ ಸಂತ್ರಸ್ತೆ ತನ್ನ ಮಕ್ಕಳು ಮತ್ತು ಕುಟುಂಬದ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ನಮಗೆ ನ್ಯಾಯ ನೀಡುವ ಬಗ್ಗೆ ನಂಬಿಕೆ ಇದೆ. ನಾನು ಪ್ರತಿಯೊಬ್ಬ ಮಹಿಳೆಯ ಪರವಾಗಿಯೂ ಧ್ವನಿ ಎತ್ತುತ್ತಿದ್ದೇನೆ. ಸಿಬಿಐ ಮೊದಲೇ ಕ್ರಮ ಕೈಗೊಂಡಿದ್ದರೆ ನನಗೆ ನ್ಯಾಯ ಸಿಗುತ್ತಿತ್ತು ಮತ್ತು ಅವರ ಜಾಮೀನು ತಿರಸ್ಕರಿಸಲ್ಪಡುತ್ತಿತ್ತು ಎಂದು ಆ ಮಹಿಳೆ ಹೇಳಿದ್ದಾರೆ.

ಇದನ್ನೂ ಓದಿ: ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬ, ಕಾರ್ಯಕರ್ತರಿಂದ ನ್ಯಾಯಾಲಯದೆದುರು ಪ್ರತಿಭಟನೆ

“ನನ್ನ ತಂದೆಯನ್ನು ಕೊಲ್ಲಲಾಯಿತು. ನನ್ನ ಕುಟುಂಬದ ಸದಸ್ಯರನ್ನು ಕೊಲ್ಲಲಾಯಿತು. ನನ್ನ ಕುಟುಂಬ ಮತ್ತು ಸಾಕ್ಷಿಗಳಿಗೆ ಭದ್ರತೆಯಿಲ್ಲ. ನನ್ನ ಪತಿ ಕೆಲಸ ಕಳೆದುಕೊಂಡರು. ನನ್ನ ಮಕ್ಕಳು ಮನೆಯಲ್ಲಿ ಅಸುರಕ್ಷಿತರಾಗಿದ್ದಾರೆ” ಎಂದು ಆಕೆ ಆರೋಪಿಸಿದ್ದಾರೆ.

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ಅಗಸ್ಟೀನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಾಧೀಶರ ಪೀಠವು ಡಿಸೆಂಬರ್ 29ರಂದು ಈ ವಿಷಯದ ವಿಚಾರಣೆ ನಡೆಸಲಿದೆ. ಕುಲದೀಪ್ ಸೆಂಗಾರ್ ಅವರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ಅವರ ಮೇಲ್ಮನವಿ ವಿಚಾರಣೆಯಲ್ಲಿರುವಾಗ ಅವರಿಗೆ ಜಾಮೀನು ನೀಡುವ ನಿರ್ಧಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ನಾಳೆ ಈ ಪ್ರಕರಣದ ವಿಚಾರಣೆ ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೆಸಿಬಿ, ಟಿಪ್ಪರ್, ಟ್ರ್ಯಾಕ್ಟರ್​ ಬಾಡಿಗೆ ದರ ಹೆಚ್ಚಳ: ಅಸಲಿ ಕಾರಣ ಏನು ಗೊತ್ತಾ? – Kannada News | Bengaluru: JCB and Tipper Rental Rates to Increase; Here Are the Details

ಆನೇಕಲ್, ಡಿಸೆಂಬರ್​ 28: 15 ಮತ್ತು 20 ವರ್ಷ ಮೀರಿದ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ನೀಡಲು ಸಾರಿಗೆ ಸಚಿವರು ಸೂಚಿಸಿದ್ದರು. ಆದರೆ ಆರ್​ಟಿಓ (RTO) ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಜನವರಿ 5ರೊಳಗೆ ಫಿಟ್ನೆಸ್ ಸರ್ಟಿಫಿಕೇಟ್ ರಿಜಿಸ್ಟರ್ ಮಾಡದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಅಖಿಲ ಭಾರತ ಲಾರಿ ಅಸೋಸಿಯೇಷನ್ ಅಧ್ಯಕ್ಷ ಷಣ್ಮುಖಪ್ಪ ರಾಜ್ಯ ಸರ್ಕಾರಕ್ಕೆ ಗಡುವು ನೀಡಿದ್ದಾರೆ.

ರಾಜ್ಯದಲ್ಲಿ ಮೀತಿಮೀರಿದ ಆರ್​ಟಿಓ, ಪೊಲೀಸ್ ಕಿರುಕುಳ

15 ಮತ್ತು 20 ವರ್ಷ ಹಳೆಯದಾದ ವಾಹನಗಳ ಫಿಟ್ನೆಸ್ ಸರ್ಟಿಫಿಕೇಟ್ ಪಡೆಯಲು ದುಬಾರಿ ಹಣ ಪಾವತಿಗೆ ಕೇಂದ್ರ ಸರ್ಕಾರ ಕಾನೂನು ರೂಪಿಸಿದೆ. ಇದು ವಾಹನಗಳ ಮಾಲೀಕರಿಗೆ ನುಂಗಲಾರದ ತುತ್ತಾಗಿದೆ. ಕೇರಳ ಮತ್ತು ಜಾರ್ಖಂಡ್ ರಾಜ್ಯದಲ್ಲಿ ಹಳೆಯ ಪದ್ದತಿ ಚಾಲ್ತಿಯಲ್ಲಿದೆ. ಆದರೆ ರಾಜ್ಯದಲ್ಲಿ ಆರ್​ಟಿಓ ಮತ್ತು ಪೊಲೀಸ್ ಕಿರುಕುಳ ಮೀತಿಮೀರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!

ಇನ್ನು ಬೆಂಗಳೂರಿನಲ್ಲಿ ಜೆಸಿಬಿ, ಟಿಪ್ಪರ್ ಲಾರಿ, ಟ್ರಾಕ್ಟರ್ ಬಾಡಿಗೆ ಕೂಡ ದುಬಾರಿಯಾಗುತ್ತಿದೆ. ಸರ್ಕಾರದ ತುಘಲಕ್ ನೀತಿಗಳಿಗೆ ಜನಸಾಮಾನ್ಯರು ದುಬಾರಿ ಬೆಲೆ ತೆರಬೇಕಿದೆ‌. ಟ್ರಾಫಿಕ್ ಕಿರಿಕಿರಿ ನೆಪದಲ್ಲಿ ಟಿಪ್ಪರ್ ಲಾರಿ ಜೆಸಿಬಿ ಮಾಲೀಕರಿಗೆ ಆರ್​​ಟಿಓ ಮತ್ತು ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ದಿನಕ್ಕೆ ಕೇವಲ ಮೂರು ತಾಸು ಕೆಲಸ ಮಾಡಲು ಅವಕಾಶ ನೀಡುತ್ತಿದ್ದು, ಬೆಳಗ್ಗೆ ಮತ್ತು ಸಂಜೆ ಟ್ರಾಫಿಕ್ ಪೀಕ್ ಅವರ್ ಎಂದು ಜೆಸಿಬಿ, ಲಾರಿ ಟ್ರಾಕ್ಟರ್​ಗಳಿಗೆ ನಿರ್ಬಂಧ ವಿಧಿಸುತ್ತಿದ್ದಾರೆ.

ಇದನ್ನೂ ಓದಿ: ಕೆಂಪೇಗೌಡ ಏರ್ಪೋರ್ಟ್: ಹಳದಿ ಬೋರ್ಡ್ ಕ್ಯಾಬ್ ನಿಯಮ, ದಂಡ ಪರಿಷ್ಕರಣೆ, ಚಾಲಕರಿಗೆ ರಿಲೀಫ್

20 ಲಕ್ಷ ರೂ ಇದ್ದ ಲಾರಿ ಬೆಲೆ 40 ಲಕ್ಷ ರೂ ಆಗಿದೆ. ಚಾಲಕ ಮತ್ತು ಕ್ಲೀನರ್ ಬಾಟಾ ಸಾವಿರ ಮುಟ್ಟಿದೆ. ಡಿಸೇಲ್ ಬೆಲೆ ನಾಗಾಲೋಟಕ್ಕೆ ಏರುತ್ತಿದೆ. ಒಂದು ರೂ. ಇದ್ದ ಸ್ಪೇರ್ ಪಾರ್ಟ್ಸ್ 15 ರೂ ಆಗಿದೆ. ಸರ್ಕಾರದ ತುಘಲಕ್ ನೀತಿಗಳು, ಬೆಲೆ ಹೆಚ್ಚಳ ಮತ್ತು ನಿರ್ವಹಣೆ ದುಬಾರಿ ಆಗಿದೆ‌. ಹಾಗಾಗಿ ಟಿಪ್ಪರ್ ಲಾರಿ ಬಾಡಿಗೆ 5000 ದಿಂದ 7000 ರೂ ಏರಿಕೆಯಾಗಿದೆ. ಜೆಸಿಬಿ ಬಾಡಿಗೆ ಗಂಟೆಗೆ 900 ರಿಂದ 1200 ರೂ ಏರಿಕೆಯಾಗಿದ್ದು, ಗ್ರಾಹಕರು ಬೆಲೆ ಏರಿಕೆಗೆ ಸಹಕರಿಸಬೇಕು ಎಂದು ಲಾರಿ ಮತ್ತು ಜೆಸಿಬಿ ಮಾಲೀಕರ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND-W vs SL-W: ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10000 ರನ್ ಪೂರೈಸಿದ ಸ್ಮೃತಿ ಮಂಧಾನ – Kannada News | Smriti Mandhana Achieves 10,000 International Runs Record in Cricket

ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಮಿಥಾಲಿ ರಾಜ್ ತಮ್ಮ ವೃತ್ತಿಜೀವನದಲ್ಲಿ ಮೂರು ಸ್ವರೂಪಗಳಲ್ಲಿ 10,868 ರನ್‌ ಕಲೆಹಾಕಿದ್ದರೆ, ಇದೀಗ 10000 ರನ್​ಗಳ ಗಡಿ ದಾಟಿರುವ ಸ್ಮೃತಿ, ಮಿಥಾಲಿ ಅವರ ದಾಖಲೆಯನ್ನು ಇನ್ನು ಕೆಲವೇ ಪಂದ್ಯಗಳಲ್ಲಿ ಮುರಿಯಲಿದ್ದಾರೆ.

Source link

ರಾಯರ ಮಠದಲ್ಲಿ ಭಾಷಾ ವಿವಾದ: ಕನ್ನಡ ಶ್ಲೋಕದೊಂದಿಗೆ ಸಾಕ್ಷಿ ಸಮೇತ ಕನ್ನಡಿಗರ ಕೌಂಟರ್ – Kannada News | Mantralaya Raghavendra Swamy Mutt Language Dispute: Kannadigas Counter Telugu Claims with Evidence

ರಾಯಚೂರು, ಡಿಸೆಂಬರ್​ 28: ಕಲಿಯುಗದ ಕಾಮಧೇನು ಅಂತಲೇ ಭಕ್ತರಿಂದ ಕರೆಸಿಕೊಳ್ಳುವ ಮಂತ್ರಾಲಯ (Mantralaya) ಗುರು ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭಾಷಾ ವಿವಾದ ಇದೀಗ ಕನ್ನಡಿಗರನ್ನ ಕೆರಳಿಸಿದೆ. ಶ್ರೀ ಮಠದ ಮುಖ್ಯದ್ವಾರದಲ್ಲಿ ಕನ್ನಡ ಭಾಷೆಯಲ್ಲಿರುವ ರಾಯರ ಶ್ಲೋಕವನ್ನ ತೆಲುಗು ಭಾಷಿಗರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, ಕರ್ನಾಟಕದ ಭಕ್ತರು 1981ರಲ್ಲಿ ಇದೇ ಮಂತ್ರಾಲಯದಲ್ಲಿ ಚಿತ್ರೀಕರಣವಾದ ರಾಜ್ ಕುಮಾರ್ ಅಭಿನಯದ ಭಾಗ್ಯವಂತ ಸಿನೆಮಾದಲ್ಲೂ ಕನ್ನಡದಲ್ಲೇ ರಾಯರ ಶ್ಲೋಕ ಇರುವುದನ್ನ ತೋರಿಸಿ ಕೌಂಟರ್ ಕೊಟ್ಟಿದ್ದಾರೆ.

ಸಾಕ್ಷ ಸಮೇತ ಕನ್ನಡಿಗರಿಂದ ಕೌಂಟರ್

ಆಂಧ್ರಪ್ರದೇಶದಲ್ಲಿರುವ ಕರ್ನಾಟಕದ ಗಡಿಯ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭಾಷಾ ವಿವಾದವನ್ನ ಸೃಷ್ಟಿ ಮಾಡಿರೋದರ ವಿರುದ್ಧ ಭಕ್ತ ವೃಂದವೇ ಕೆರಳಿದೆ. ವಿವಾದ ಸೃಷ್ಟಿಸುತ್ತಿರುವವರ ವಿರುದ್ಧ ಭಕ್ತರು ಆಕ್ರೋಶ ಹೊರಹಾಕ್ತಿದ್ದಾರೆ. ಶ್ರೀ ಮಠದ ಮುಖ್ಯ ದ್ವಾರದಲ್ಲಿ ಕನ್ನಡ ಭಾಷೆಯಲ್ಲಿ ರಾಯರ ಶ್ಲೋಕವಿದೆ. ಇದೇ ಶ್ಲೋಕ ತೆಲುಗು ಭಾಷೆಯಲ್ಲಿ ಯಾಕಿಲ್ಲ ಅಂತ ತೆಲುಗು ಭಾಷಿಕರು ಸಾಮಾಜಿಕ ಜಾಲತಾಣಗಳ ಮೂಲಕ ಅಲ್ಲಿನ ಸಿಎಂ, ಡಿಸಿಎಂ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಕರ್ನಾಟಕದ ಭಕ್ತರು ಕೌಂಟರ್ ಕೊಟ್ಟಿದ್ದಾರೆ. ರಾಯರ ಮಠದ ಇತಿಹಾಸದಲ್ಲೇ ಇಂದೆಂದು ವಿವಾದವಾಗಿಲ್ಲ. ಅದರಲ್ಲೂ ಕನ್ನಡ ಭಾಷೆಯಲ್ಲಿ ಶ್ಲೋಕ ಇದೆ ಅನ್ನೋದು ದಶಕಗಳಿಂದ ಎಲ್ಲರಿಗೂ ಗೊತ್ತು. ಆದರೆ ಇದೀಗ ಅದನ್ನೇ ಮುಂದಿಟ್ಟುಕೊಂಡು ವಿವಾದ ಸೃಷ್ಟಿಸುತ್ತಿರುವವರಿಗೆ ಕರ್ನಾಟಕದ ಭಕ್ತರ ಸಾಕ್ಷ ಸಮೇತ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ರಾಯರ ಮಠಕ್ಕೂ ತಟ್ಟಿದ ಭಾಷಾ ವಿವಾದ: ಕನ್ನಡದಲ್ಲಿರುವ ಫಲಕಕ್ಕೆ ತೆಲುಗು ಭಾಷಿಕರ ವಿರೋಧ

1981ರಲ್ಲಿ ಕನ್ನಡದ ಭಾಗ್ಯವಂತ ಸಿನೆಮಾದ ಬಗ್ಗೆ ವಿವರಿಸಿದ್ದಾರೆ. ಆ ಸಿನೆಮಾದಲ್ಲಿ ಡಾ. ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಬಾಲ ಕಲಾವಿದನಾಗಿ ನಟಿಸಿದ್ದಾರೆ. ಆ ಸಿನೆಮಾವನ್ನು ಇದೇ ಮಂತ್ರಾಲಯದಲ್ಲೇ ಚಿತ್ರೀಕರಣ ಮಾಡಲಾಗಿದೆ. ಆ ಸಿನೆಮಾದ ಕ್ಲೈಮ್ಯಾಕ್ಸ್​​ನಲ್ಲಿ ಡಾ.ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಜೊತೆ ಮಾತನಾಡಿ, ಮನವೊಲಿಸುವ ದೃಶ್ಯವಿದೆ. ಅದರಲ್ಲಿ ಸ್ಪಷ್ಟವಾಗಿ ಕನ್ನಡ ಭಾಷೆಯಲ್ಲಿ ಈಗಿರುವ ಶ್ಲೋಕವೂ ಇದೆ ನೋಡಿಕೊಳ್ಳಿ ಅಂತ ಕರ್ನಾಟಕದ ಭಕ್ತರು ಕೌಂಟರ್ ಕೊಟ್ಟಿದ್ದಾರೆ.

ದಶಕಗಳಿಂದ ಇರದ ಈ ವಿಚಾರವನ್ನ ಈಗ ಬೇಕಂತಲೇ ಹಬ್ಬಿಸುತ್ತಿರುವ ಆರೋಪ ಕೇಳಿ ಬಂದಿದೆ. ಅಷ್ಟಕ್ಕೂ ರಾಯರ ಮಠದಲ್ಲಿ ತೆಲುಗು ಭಾಷೆಯೇ ಪ್ರಮುಖ ಭಾಷೆಯನ್ನಾಗಿ ಶ್ರೀ ಮಠ ಪರಿಗಣಿಸಿದೆ. ಅಲ್ಲದೇ ಭಕ್ತರ ಸಂಖ್ಯೆ ಹೆಚ್ಚಿರುವ ಕಾರಣಕ್ಕೆ ಇಂಗ್ಲಿಷ್, ಹಿಂದಿ ಕನ್ನಡದಲ್ಲೂ ನಾಮಫಲಕಗಳನ್ನ ಹಾಕಲಾಗಿದೆ. ಆದರೆ ಈ ವಿವಾದದ ಬೆನ್ನಲ್ಲೇ ರಾಯರ ಪರಮ ಭಕ್ತರಾಗಿರುವ ಉಪನ್ಯಾಕ ಜಿ.ರಾಮ್ ರಾವ್ ಅನ್ನೋರು ರಾಯರಿಗೆ ಅಚ್ಚುಮೆಚ್ಚಿನ ಭಾಷೆಯೇ ಕನ್ನಡ ಅಂತ ಇತಿಹಾಸ ತಿಳಿಸಿದೆ. ರಾಯರು ಎಲ್ಲಾ ಭಾಷೆಗೆ ಕೊಡುಗೆ, ಗೌರವ ಕೊಟ್ಟಿದ್ದಾರೆ. ಗುರುಗಳಿಗೆ ಭಾಷೆ ತರುವುದು ಬೇಡ ಅನ್ನೋದು ಭಕ್ತರ ವಾದ.

ಹಂಪಿ ಕ್ಷೇತ್ರದಲ್ಲಿ ಅವರ ಪೂರ್ವಜರು ಇದ್ದದ್ದು, ಬಳಿಕ ಯತಿ ಪರಂಪರೆಯಲ್ಲಿ ಕನ್ನಡದಲ್ಲಿ ಕೊಡುಗೆ ಕೊಟ್ಟಿದ್ದಾರೆ. ಕನ್ನಡದಲ್ಲಿ ಕೃತಿ, ಹಾಡು ರಚನೆ ಮಾಡಿದ್ದಾರೆ. ಅವರ ಕಾಲದ ಅವಧಿಯಲ್ಲಿ ರಾಯಚೂರಿನ ಬಿಚ್ಚಾಲಿ, ಪಂಚಮುಖಿಯಲ್ಲಿ ಸೇವೆ ಮಾಡಿದ್ದಾರೆ. ದೈವಿ ಸಂಕಲ್ಪದಿಂದ ಗಡಿ ಪ್ರಾಂತ್ಯದ ಮಂತ್ರಾಲಯ ಅಂತಿಮ ಕ್ಷೇತ್ರ ಆಯ್ತು. ಗುರುಗಳಿಗೆ ಕನ್ನಡ ಭಾಷೆ ಪ್ರಿಯವಾದ ಭಾಷೆ ಅಂತ ಉಪನ್ಯಾಸಕ ಜಿ.ರಾಮ್ ರಾವ್ ಹೇಳಿದ್ದಾರೆ.

ಇದನ್ನೂ ಓದಿ: ಮಂತ್ರಾಲಯಕ್ಕೂ ತಟ್ಟಿದ ಭಾಷಾ ವಿವಾದದ ಕಿಚ್ಚು, ಇದು ಕಿಡಿಗೇಡಿಗಳ ಕೃತ್ಯವೆಂದ ಭಕ್ತರು

ಇದಷ್ಟೇ ಅಲ್ಲ ಮಂತ್ರಾಲಯದ ಮಠಕ್ಕೆ ಕರ್ನಾಟಕದಿಂದಲೇ ಸುಮಾರು 80ರಷ್ಟು ಭಕ್ತರು ಬರುತ್ತಾರೆ. ಅಲ್ಲದೇ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆ ಶ್ಲೋಕ ಅಳವಡಿಸಲಾಗಿದೆಯೇ ಹೊರತು ಬೇರೆ ಉದ್ದೇವಿಲ್ಲ ಅಂತ ಭಕ್ತರ ವಾದ. ಹೀಗಾಗಿ ಈ ಬಗ್ಗೆ ಸುಖಾಸುಮ್ಮನೇ ಭಾಷೆ ವಿವಾದ ಸೃಷ್ಟಿಸುವುದನ್ನು ಬಿಟ್ಟು ರಾಯರ ಅನುಗೃಹಕ್ಕಾಗಿ ಪ್ರಾರ್ಥನೆ ಮಾಡಿ ಅಂತ ಹೇಳ್ತಿದ್ದಾರೆ ಅಪಾರ ಭಕ್ತ ಗಣ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪ್ರಭಾಸ್ ‘ಮಿಡ್ ರೇಂಜ್ ಹೀರೋ: ನಿರ್ದೇಶಕನ ಮಾತಿಗೆ ರೊಚ್ಚಿಗೆದ್ದ ಫ್ಯಾನ್ಸ್ – Kannada News | Director Maruthi said Prabhas was a medium range hero

ಪ್ರಭಾಸ್ (Prabhas) ಪ್ಯಾನ್ ಇಂಡಿಯಾ ಸ್ಟಾರ್ ನಟ. ಅವರ ಕೆಟ್ಟ ಸಿನಿಮಾಗಳು ಸಹ 200-300 ಕೋಟಿ ಹಣವನ್ನು ಸುಲಭವಾಗಿ ಬಾಕ್ಸ್ ಆಫೀಸ್​​ನಲ್ಲಿ ಗಳಿಕೆ ಮಾಡುತ್ತವೆ. ಪ್ರಭಾಸ್ ನಟನೆಯ ಕಳೆದ ಕೆಲ ಸಿನಿಮಾಗಳು ದೊಡ್ಡ ಯಶಸ್ಸು ಗಳಿಸದೇ ಇದ್ದರೂ ಸಹ ಅವರ ಕೈಯಲ್ಲಿ ಕನಿಷ್ಟ ಐದು ಸಿನಿಮಾಗಳಂತೂ ಇದೆ. ತೆಲುಗು ಮಾತ್ರವಲ್ಲದೆ ಬಾಲಿವುಡ್​ನ ನಿರ್ಮಾಪಕರುಗಳು ಸಹ ಹಣದ ಥೈಲಿ ಹಿಡಿದುಕೊಂಡು ಪ್ರಭಾಸ್ ಕಾಲ್​​ಶೀಟ್​​ಗಾಗಿ ಕಾಯುತ್ತಿದ್ದಾರೆ. ಅಂಥಹಾ ನಟನನ್ನು ನಿರ್ದೇಶಕನೊಬ್ಬ ‘ಮಿಡ್ ರೇಂಜ್ ಹೀರೋ’ ಎಂದಿದ್ದಾರೆ. ಇದು ಪ್ರಭಾಸ್ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನಿನ್ನೆ ಬಲು ಅದ್ಧೂರಿಯಾಗಿ ನೆರವೇರಿದೆ. ಕಾರ್ಯಕ್ರಮದಲ್ಲಿ ಪ್ರಭಾಸ್ ಸೇರಿದಂತೆ ಸಿನಿಮಾನಲ್ಲಿ ನಟಿಸಿದ ಹಲವು ನಟ, ನಟಿಯರು ಭಾಗಿ ಆಗಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವ ಮಾರುತಿ ಅವರು ಸಹ ಕಾರ್ಯಕ್ರಮದಲ್ಲಿದ್ದು ವೇದಿಕೆ ಮೇಲೆ ಭಾವುಕವಾಗಿ ಮಾತನಾಡಿದ್ದಾರೆ. ಒಂದು ಹಂತದಲ್ಲಂತೂ ವೇದಿಕೆ ಮೇಲೆ ಕಣ್ಣೀರು ಸಹ ಹಾಕಿದ್ದಾರೆ ಮಾರುತಿ.

ಪ್ರಭಾಸ್ ಅನ್ನಂತೂ ಹೊಗಳಿ ಅಟ್ಟಕ್ಕೆ ಏರಿಸಿದರು ಮಾರುತಿ. ಆದರೆ ಅವರು ವೇದಿಕೆ ಮೇಲೆ ಮಾತು ಆರಂಭಿಸಿದಾಗ ಪ್ರಭಾಸ್ ಅವರನ್ನು ‘ಮೀಡಿಯಮ್ ರೇಂಜ್ ಹೀರೋ’ (ಸಾಧಾರಣ ನಾಯಕ ನಟ) ಎಂದು ಕರೆದರು.

ಇದನ್ನೂ ಓದಿ:ಪ್ರಭಾಸ್ ಅಭಿಮಾನಿಗಳಿಗೆ ತನ್ನ ಮನೆ ವಿಳಾಸ ಕೊಟ್ಟ ‘ರಾಜಾ ಸಾಬ್’ ನಿರ್ದೇಶಕ

ಆಗಿದ್ದಿಷ್ಟು, ಪ್ರಭಾಸ್ ಅವರ ಜನಪ್ರಿಯತೆ ಬಗ್ಗೆ ವೇದಿಕೆ ಮೇಲೆ ಮಾತನಾಡಿದ ಮಾರುತಿ, ‘ಕಾಶ್ಮೀರಕ್ಕೆ ಹೋಗಲಿ, ಎಲ್ಲೇ ಹೋಗಲಿ ಪ್ರಭಾಸ್ ಅಲ್ಲಿನ ಜನರಿಗೆ ಗೊತ್ತು. ನಾನು ಆಫ್ರಿಕಾದ ಮಸಾಯಿಮಾರಾಕ್ಕೆ ಶೂಟಿಂಗ್​​ಗೆ ಹೋಗಿದ್ದೆ ಅಲ್ಲಿಯ ಹಳ್ಳಿಯ ಜನರಿಗೂ ಪ್ರಭಾಸ್ ಎಂದರೆ ಗೊತ್ತು. ಇದಕ್ಕೆಲ್ಲ ನಾವು ರಾಜಮೌಳಿಗೆ ಧನ್ಯವಾದ ಹೇಳಬೇಕು, ನಾವೆಲ್ಲ ಇಂದು ಪ್ಯಾನ್ ಇಂಡಿಯಾ ಎಂದು ಕಾಲರ್ ಮೇಲೆತ್ತುಕೊಂಡು ಓಡಾತ್ತಿದ್ದೇವೆ, ಆದರೆ ತನ್ನ ಜೀವನವನ್ನೇ ಮುಡಿಪಾಗಿಟ್ಟು ಒಬ್ಬ ‘ಮೀಡಿಯಮ್ ರೇಂಜ್ ಹೀರೋ’ ಅನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿದವರು ರಾಜಮೌಳಿ’ ಎಂದು ಮಾರುತಿ ಹೇಳಿದರು.

ಮಾರುತಿ ಅವರು ಪ್ರಭಾಸ್ ಅವರನ್ನು ‘ಮೀಡಿಯಮ್ ರೇಂಜ್ ಹೀರೋ’ ಎಂದಿದ್ದು ಪ್ರಭಾಸ್ ಅಭಿಮಾನಿಗಳಿಗೆ ಬೇಸರ ತಂದಿದೆ. ಸಾಮಾಜಿಕ ಜಾಲತಾಣದಲ್ಲಿ ಇದೀಗ ಮಾರುತಿ ಅವರ ಭಾಷಣದ ತುಣುಕು ವೈರಲ್ ಆಗಿದ್ದು, ಸಖತ್ ಟ್ರೋಲ್ ಸಹ ಆಗುತ್ತಿದ್ದಾರೆ. ಆದರೆ ಮಾರುತಿ ತಮ್ಮ ಅದೇ ಭಾಷಣದಲ್ಲಿ ಪ್ರಭಾಸ್ ಅವರನ್ನು ನಾನಾ ರೀತಿಯಲ್ಲಿ ಕೊಂಡಾಡಿದ್ದಾರೆ. ಆದರೆ ರಾಜಮೌಳಿಯವರನ್ನು ಹೊಗಳುವ ಭರದಲ್ಲಿ ಪ್ರಭಾಸ್ ಅವರನ್ನು ಮೀಡಿಯಮ್ ರೇಂಜ್ ಹೀರೋ ಎಂದಿದ್ದಾರಷ್ಟೆ.

ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾವನ್ನು ಮಾರುತಿ ನಿರ್ದೇಶನ ಮಾಡಿದ್ದಾರೆ. ಇದು ಹಾರರ್ ಕಾಮಿಡಿ ಸಿನಿಮಾ ಆಗಿದ್ದು, ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ಬಿಡುಗಡೆ ಆಗುತ್ತಿದೆ. ಸಿನಿಮಾನಲ್ಲಿ ನಿಧಿ ಅಗರ್ವಾಲ್ ಸೇರಿದಂತೆ ಮೂವರು ನಾಯಕಿಯರು ಇದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಆಯ್ಕೆ ಯಾವಾಗ? – Kannada News | India vs NZ ODI 2026: Team India Squad Announcement; Kohli, Rohit Awaited

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯನ್ನು ಗೆಲುವಿನೊಂದಿಗೆ ಅಂತ್ಯಗೊಳಿಸಿದ್ದ ಟೀಂ ಇಂಡಿಯಾ (Team India) ಪ್ರಸ್ತುತ ವಿಶ್ರಾಂತಿ ಮೂಡ್​ನಲ್ಲಿದೆ. ಇನ್ನೇನಿದ್ದರೂ ತಂಡ ಕಣಕ್ಕಿಳಿಯುವುದು ಮುಂದಿನ ವರ್ಷವೇ. ಆದಾಗ್ಯೂ 2026 ರಲ್ಲಿ ಟೀಂ ಇಂಡಿಯಾ ಮೊದಲಿಗೆ ಯಾವ ತಂಡವನ್ನು ಯಾವಾಗ ಎದುರಿಸಲಿದೆ ಎಂಬುದು ಖಚಿತವಾಗಿದೆ. ಅದರಂತೆ ಭಾರತ ಏಕದಿನ ತಂಡ ನ್ಯೂಜಿಲೆಂಡ್ (India vs New Zealand) ವಿರುದ್ಧ ಏಕದಿನ ಸರಣಿಯನ್ನು ಆಡಲಿದೆ. ಈ ಸರಣಿ ಜನವರಿ 11 ರಿಂದ ಆರಂಭವಾಗಲಿದೆ. ಈ ಸರಣಿಯೊಂದಿಗೆ ಟೀಂ ಇಂಡಿಯಾದ ಹೊಸ ವರ್ಷವೂ ಆರಂಭವಾಗಲಿದೆ. ಆದರೆ ಈ ಸರಣಿಗೆ ಇನ್ನು ಟೀಂ ಇಂಡಿಯಾವನ್ನು ಆಯ್ಕೆ ಮಾಡಲಾಗಿಲ್ಲ. ಈ ಏಕದಿನ ಸರಣಿ ಆರಂಭವಾಗಲು ಕೇವಲ 14 ದಿನಗಳು ಮಾತ್ರ ಉಳಿದಿದ್ದು, ಆಯ್ಕೆ ಪ್ರಕ್ರಿಯೆಯನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಆದಾಗ್ಯೂ, ಇದು ಹೊಸ ವರ್ಷದ ಮೊದಲ ವಾರದಲ್ಲಿ ಪೂರ್ಣಗೊಳ್ಳಲಿದೆ ಎಂದು ವರದಿಯಾಗಿದೆ.

ಟೀಂ ಇಂಡಿಯಾ ಯಾವಾಗ ಪ್ರಕಟ?

ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಮುನ್ನ ಇದು ಟೀಂ ಇಂಡಿಯಾದ ಕೊನೆಯ ಸರಣಿಯಾಗಲಿದೆ. ಏಕದಿನ ಸರಣಿ ಅಷ್ಟೇನೂ ಮುಖ್ಯವಾಗದಿದ್ದರೂ, ಹಲವಾರು ಕಾರಣಗಳಿಂದ ಈ ಸರಣಿ ಕೂಡ ವಿಶೇಷವಾಗಿರುತ್ತದೆ. ವಾಸ್ತವವಾಗಿ, ಟೀಂ ಇಂಡಿಯಾ ಕಳೆದ ಎರಡು ತಿಂಗಳುಗಳಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಗಳನ್ನು ಆಡಿದೆ, ಅಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಇಬ್ಬರು ಅನುಭವಿಗಳು ಟಿ20 ತಂಡದ ಭಾಗವಾಗಿಲ್ಲದ ಕಾರಣ ಅಭಿಮಾನಿಗಳು ಸಾಧ್ಯವಾದಷ್ಟು ಬೇಗ ಅವರನ್ನು ಮತ್ತೆ ನೋಡಲು ಉತ್ಸುಕರಾಗಿದ್ದಾರೆ.

ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಬಿಸಿಸಿಐನ ಹಿರಿಯ ಆಯ್ಕೆ ಸಮಿತಿಯು ಜನವರಿ 3 ರ ಶನಿವಾರ ಅಥವಾ ಜನವರಿ 4 ರ ಭಾನುವಾರ ಏಕದಿನ ಸರಣಿಗೆ ತಂಡಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ. ವರದಿಯ ಪ್ರಕಾರ, ಅಜಿತ್ ಅಗರ್ಕರ್ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ಸಭೆ ಸೇರುವ ಬದಲು ಆನ್‌ಲೈನ್‌ನಲ್ಲಿ ಸಭೆ ಸೇರಲಿದೆ. ಇದು ಟಿ20 ವಿಶ್ವಕಪ್ ತಂಡ ಪ್ರಕಟಣೆಗಳಿಗಿಂತ ಭಿನ್ನವಾಗಿ, ತಂಡವನ್ನು ಪತ್ರಿಕಾಗೋಷ್ಠಿಯಲ್ಲಿ ಅಲ್ಲ, ಬಿಸಿಸಿಐನ ಸೋಶಿಯಲ್ ಮೀಡಿಯಾ ಖಾತೆ ಮತ್ತು ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಸಾಧ್ಯತೆಗಳಿವೆ.

ಈ ಸರಣಿಗೆ ತಂಡದ ಆಯ್ಕೆ ಏಕೆ ವಿಶೇಷವಾಗಿದೆ?

ಈ ಬಾರಿಯೂ ವಿರಾಟ್ ಮತ್ತು ರೋಹಿತ್ ಆಯ್ಕೆ ಖಚಿತವಾಗಿದ್ದರೂ, ಆಯ್ಕೆದಾರರು ಯಾವುದಾದರೂ ಅಚ್ಚರಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆಯೇ ಎಂಬ ಕುತೂಹಲವಿದೆ. ಹೆಚ್ಚಿನ ಕಣ್ಣುಗಳು ಸ್ಟಾರ್ ಬ್ಯಾಟ್ಸ್‌ಮನ್ ಮತ್ತು ಇತ್ತೀಚೆಗೆ ನೇಮಕಗೊಂಡ ಉಪನಾಯಕ ಶ್ರೇಯಸ್ ಅಯ್ಯರ್ ಅವರ ಆಯ್ಕೆಯ ಮೇಲಿರುತ್ತವೆ. ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಫೀಲ್ಡಿಂಗ್ ಮಾಡುವಾಗ ಅಯ್ಯರ್ ಗಾಯಗೊಂಡು ಅಂದಿನಿಂದ ಕ್ರಿಕೆಟ್ ಚಟುವಟಿಕೆಯಿಂದ ದೂರವಿದ್ದಾರೆ. ಅವರು ಇತ್ತೀಚೆಗೆ ಎರಡು ತಿಂಗಳ ನಂತರ ಮೊದಲ ಬಾರಿಗೆ ಬ್ಯಾಟಿಂಗ್ ಅಭ್ಯಾಸ ಮಾಡಿದ್ದರು. ಪ್ರಸ್ತುತ ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್​ನಲ್ಲಿರುವ ಅಯ್ಯರ್ ತಂಡಕ್ಕೆ ಮರಳುವುದು ಖಚಿತವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:38 pm, Sun, 28 December 25

Source link

ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ, ಮೋದಿ ಅಭಿಮಾನಿಯಿಂದ ವ್ಯವಸ್ಥೆ – Kannada News | PM Modi Fan arranged free biriyani for people Who Came listening Mann Ki Baat at Chikkaballapur

ಚಿಕ್ಕಬಳ್ಳಾಪುರ, (ಡಿಸೆಂಬರ್ 28): ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು (ಡಿಸೆಂಬರ್ 28) 129ನೇ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನಲ್ಲಿ (Mann Ki Baat) ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದು, ಇದನ್ನು ಸಂಸದ ಡಾ. ಸುಧಾಕರ್ ಅವರು ಅಗಲಗುರ್ಕಿ ಗ್ರಾಮದ ಜನರ ಜತೆ ‘ಮನ್ ಕಿ ಬಾತ್’ ಆಲಿಸಿದರು. ಅಲ್ಲದೇ ‘ಮನ್ ಕಿ ಬಾತ್’ ವೀಕ್ಷಿಸಿದವರಿಗೆ ಪ್ರೀ ಬಿರಿಯಾನಿ ವ್ಯವಸ್ಥೆ ಮಾಡಲಾಗಿದೆ. ಮೋದಿ ಅಭಿಮಾನಿ ರೈತ ರಾಮಾಂಜನಿ ಅವರು ಬಿರಿಯಾನಿ ವ್ಯವಸ್ಥೆ ಮಾಡಿದ್ದು, ಬಿರಿಯಾನಿಗಾಗಿ ಜನರು ಮುಗಿಬಿದ್ದಿದ್ದರು.

 

Source link

ಥೈರಾಯ್ಡ್ ಸಮಸ್ಯೆ ಇದ್ಯಾ? ಹಾಗಿದ್ರೆ ಚಳಿಗಾಲದಲ್ಲಿ ಈ ಆಹಾರಗಳನ್ನು ಅಪ್ಪಿತಪ್ಪಿಯೂ ಸೇವನೆ ಮಾಡಬೇಡಿ – Kannada News | Winter Foods Thyroid Patients Should Avoid, Says Expert

ಚಳಿಗಾಲದಲ್ಲಿ ಥೈರಾಯ್ಡ್ (Thyroid) ರೋಗಿಗಳು ಆರೋಗ್ಯದ ಬಗ್ಗೆ ಸ್ವಲ್ಪ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಶೀತ ಹೆಚ್ಚಾದಂತೆ, ದೇಹದಲ್ಲಿ ಆಲಸ್ಯ, ಆಯಾಸ, ತೂಕ ಹೆಚ್ಚಾಗುವುದು ಸೇರಿದಂತೆ ನಾನಾ ರೀತಿಯ ಸಮಸ್ಯೆಗಳು ಉದ್ಭವಿಸಬಹುದು. ಅದರಲ್ಲಿಯೂ ಥೈರಾಯ್ಡ್ ಇರುವಾಗ, ಔಷಧಿಗಳ ಜೊತೆಗೆ, ಸರಿಯಾದ ಆಹಾರ ಸೇವನೆಯೂ ಸಹ ಬಹಳ ಮುಖ್ಯವಾಗುತ್ತದೆ. ಹೆಚ್ಚು ಹುರಿದ ಮತ್ತು ಸಿಹಿ ಅಂಶವಿರುವ ಆಹಾರ ಸೇವನೆ ಥೈರಾಯ್ಡ್ ರೋಗಿಗಳ ಸಮಸ್ಯೆಗಳನ್ನು ಹೆಚ್ಚಿಸುತ್ತದೆ ಮತ್ತು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಜೊತೆಗೆ ಈ ರೀತಿಯ ಅನುಚಿತ ಆಹಾರ ಪದ್ಧತಿ, ಔಷಧಿಗಳ ಪರಿಣಾಮವನ್ನು ಕೂಡ ಕಡಿಮೆ ಮಾಡಬಹುದು. ಹಾಗಾಗಿ ರೋಗಲಕ್ಷಣಗಳು ನಿಯಂತ್ರಿಸಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಚಳಿಗಾಲದಲ್ಲಿ ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು ಮತ್ತು ಮಾಡಬಾರದು ಎಂಬುದರ ಬಗ್ಗೆ ವಿಶೇಷ ಗಮನ ಹರಿಸುವುದು ಮುಖ್ಯವಾಗುತ್ತದೆ. ಹಾಗಾದರೆ, ಥೈರಾಯ್ಡ್ ರೋಗಿಗಳು ಚಳಿಗಾಲದಲ್ಲಿ ಯಾವ ರೀತಿಯ ಆಹಾರವನ್ನು ಸೇವಿಸಬಾರದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಥೈರಾಯ್ಡ್ ರೋಗಿಗಳು ಚಳಿಗಾಲದಲ್ಲಿ ಯಾವ ರೀತಿಯ ಆಹಾರಗಳನ್ನು ಸೇವಿಸಬಾರದು?

ಡಾ. ಅಮಿತ್ ಕುಮಾರ್ ಅವರು ಹೇಳುವ ಪ್ರಕಾರ, ಚಳಿಗಾಲದಲ್ಲಿ ಥೈರಾಯ್ಡ್ ಸಮಸ್ಯೆ ಇರುವವರು ಹೊರಗೆ ಸಿಗುವ ಹುರಿದ, ಮಸಾಲೆಯುಕ್ತ ಮತ್ತು ಜಂಕ್ ಫುಡ್‌ಗಳನ್ನು ಸೇವಿಸುವುದನ್ನು ತಪ್ಪಿಸಬೇಕು, ಏಕೆಂದರೆ ಇವು ತೂಕ ಹೆಚ್ಚಾಗಲು ಮತ್ತು ಆಯಾಸವನ್ನು ಹೆಚ್ಚಿಸಲು ಕಾರಣವಾಗಬಹುದು. ಸೋಯಾ ಮತ್ತು ಸೋಯಾ ಆಧಾರಿತ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಥೈರಾಯ್ಡ್ ಹಾರ್ಮೋನುಗಳ ಸಮತೋಲನವನ್ನು ಅಡ್ಡಿಪಡಿಸಬಹುದು. ಎಲೆಕೋಸು, ಹೂಕೋಸು ಮತ್ತು ಬ್ರೊಕೊಲಿಯಂತಹ ತರಕಾರಿಗಳನ್ನು ಕಚ್ಚಾ ರೂಪದಲ್ಲಿ ಅತಿಯಾಗಿ ತಿನ್ನುವುದು ಸಹ ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುತ್ತದೆ. ಹೆಚ್ಚುವರಿಯಾಗಿ, ಹೆಚ್ಚು ಸಕ್ಕರೆ, ಸಂಸ್ಕರಿಸಿದ ಹಿಟ್ಟು ಮತ್ತು ಬೇಕರಿ ಉತ್ಪನ್ನಗಳನ್ನು ಸೇವಿಸುವುದು ಹಾನಿಕಾರಕವಾಗಿದೆ. ಚಳಿಗಾಲದಲ್ಲಿ ಚಹಾ ಮತ್ತು ಕಾಫಿಯನ್ನು ಅತಿಯಾಗಿ ಸೇವಿಸುವುದು ಥೈರಾಯ್ಡ್ ರೋಗಿಗಳಿಗೆ ಸೂಕ್ತವಲ್ಲ. ಆದ್ದರಿಂದ, ಈ ಆಹಾರಗಳನ್ನು ಸೀಮಿತಗೊಳಿಸುವುದರಿಂದ ರೋಗಲಕ್ಷಣಗಳನ್ನು ನಿಯಂತ್ರಿಸುವುದು ಸುಲಭವಾಗುತ್ತದೆ.

ಥೈರಾಯ್ಡ್‌ ರೋಗಿಗಳು ಸೇವಿಸಬೇಕಾದ ಆಹಾರಗಳು:

ಚಳಿಗಾಲದಲ್ಲಿ, ಥೈರಾಯ್ಡ್ ಸಮಸ್ಯೆ ಇದ್ದವರು ಸಮತೋಲಿತ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಸೀಮಿತ ಪ್ರಮಾಣದಲ್ಲಿ ಬೆಚ್ಚಗಿನ ಹಾಲು, ಮೊಸರು ಮತ್ತು ಚೀಸ್ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಹಸಿರು ತರಕಾರಿ, ಕಾಲೋಚಿತ ಹಣ್ಣು ಮತ್ತು ಧಾನ್ಯಗಳು ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಬಾದಾಮಿ, ವಾಲ್ನಟ್ಸ್ ಮತ್ತು ಅಗಸೆಬೀಜಗಳಂತಹ ಬೀಜಗಳು ದೇಹಕ್ಕೆ ಶಕ್ತಿಯನ್ನು ನೀಡುತ್ತವೆ ಮತ್ತು ಶೀತದಿಂದ ರಕ್ಷಿಸುತ್ತವೆ. ಸಾಕಷ್ಟು ಪ್ರಮಾಣದಲ್ಲಿ ಪ್ರೋಟೀನ್ ಸೇವಿಸುವುದರಿಂದ ಆಯಾಸ ಕಡಿಮೆಯಾಗುತ್ತದೆ ದೇಹವನ್ನು ಸಕ್ರಿಯವಾಗಿರಿಸುತ್ತದೆ. ಈ ಆಹಾರಗಳು ಥೈರಾಯ್ಡ್ ರೋಗಿಗಳಿಗೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಈ ಭಾಗಗಳಲ್ಲಿ ನೋವು ಕಂಡುಬಂದರೆ ನಿರ್ಲಕ್ಷಿಸಬೇಡಿ ಇದು ಥೈರಾಯ್ಡ್ ಲಕ್ಷಣವಾಗಿರಬಹುದು!

ಈ ಸಲಹೆಗಳನ್ನು ತಪ್ಪದೆ ಪಾಲಿಸಿ:

  • ಪ್ರತಿದಿನ ನಿಗದಿತ ಸಮಯದಲ್ಲಿ ಔಷಧಿಗಳನ್ನು ತೆಗೆದುಕೊಳ್ಳಿ.
  • ಹೆಚ್ಚು ಚಳಿ ಇರುವ ಸಮಯದಲ್ಲಿ ದೇಹವನ್ನು ಆದಷ್ಟು ಬೆಚ್ಚಗಿಟ್ಟುಕೊಳ್ಳಿ.
  • ಪ್ರತಿದಿನ ಲಘು ವ್ಯಾಯಾಮ ಅಥವಾ ಯೋಗ ಮಾಡಿ.
  • ಒಳ್ಳೆಯ ನಿದ್ರೆ ಮಾಡಿ.
  • ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ.
  • ಕಾಲಕಾಲಕ್ಕೆ ಥೈರಾಯ್ಡ್ ಅನ್ನು ಪರೀಕ್ಷಿಸಿಕೊಳ್ಳಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link