ಬೆಂಗಳೂರು, ಡಿಸೆಂಬರ್ 28: ಈಗಿನ ದುಬಾರಿ ದುನಿಯಾದಲ್ಲಿ ಎಷ್ಟೇ ದುಡಿದರೂ ಕೂಡ ಕಡಿಮೆಯೇ. ತಿಂಗಳ ಪ್ರಾರಂಭದಲ್ಲಿ ಕೈ ತುಂಬಾ ಸಂಬಳ ಬಂದ್ರೂ ತಿಂಗಳ ಕೊನೆಯಲ್ಲಿ ಕೈಯಲ್ಲಿದ್ದ ದುಡ್ಡೆಲ್ಲಾ ಖಾಲಿ. ಅದಲ್ಲದೇ ಅಲ್ಪ ಸ್ವಲ್ಪ ಸಂಬಳದಲ್ಲಿ ದಿನನಿತ್ಯ ವೆಚ್ಚಗಳನ್ನು ತೂಗಿಸಿಕೊಂಡು ಹೋಗುವುದು ಹೇಳುವಷ್ಟು ಸುಲಭವಲ್ಲ. ಎಲ್ಲಾ ದಿನಸಿ ಸಾಮಗ್ರಿಗಳ ಬೆಲೆ ಗಗನಕ್ಕೇರುತ್ತಿದೆ. ಬೆಂಗಳೂರಿನಲ್ಲಿ (Bengaluru) 500 ರೂ 50ಕ್ಕೆ ಸಮಾನ ಎಂದೇನಿಸುತ್ತಿದೆ ಎಂದು ಮಹಿಳೆಯೊಬ್ಬರು ಹೇಳಿದ್ದು, ಖರ್ಚು ವೆಚ್ಚಗಳು ಹೆಚ್ಚಾಗುತ್ತಿದೆ ಎಂದಿರುವ ವಿಡಿಯೋ ಚರ್ಚೆಗೆ ಕಾರಣವಾಗಿದೆ.
ದೀಪಾ ಗುಪ್ತಾ (its.me.dipaaa) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ದೀಪಾ ಗುಪ್ತಾ ಎಂಬ ಮಹಿಳೆ ಬೆಂಗಳೂರಿನಲ್ಲಿ ಹಣ ಎಷ್ಟು ಬೇಗನೆ ಖಾಲಿಯಾಗುತ್ತದೆ. ಸಣ್ಣ ಪ್ರವಾಸಗಳು ಸಹ ದುಬಾರಿಯಾಗಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ 500 ರೂ 50 ರೂಪಾಯಿಗಳಂತೆ ಭಾಸವಾಗುವುದು ಏಕೆ. ನಾನು 500 ರೂಪಾಯಿಗಳನ್ನು ಖರ್ಚು ಮಾಡುತ್ತೇನೆ. ನಾನು 50 ರೂಪಾಯಿ ಖರ್ಚು ಮಾಡುತ್ತಿರುವಂತೆ ಭಾಸವಾಗುತ್ತದೆ. ನೀವು ಮನೆಯಿಂದ ಹೊರಗಡೆ ಹೊರಟರೆ ನಿಮ್ಮ ಕೈಯಲ್ಲಿರುವ 500 ರೂ ಯಾವುದಕ್ಕೂ ಸಾಕಾಗಲ್ಲ. ನೀವು 50 ರೂಪಾಯಿಗೆ ತಿನ್ನುತ್ತಿದ್ದೀರಿ ಎಂದು ನೀವು ಭಾವಿಸುತ್ತೀರಿ, ಆದರೆ ನೀವು ನಿಜವಾಗಿಯೂ ಖರ್ಚು ಮಾಡುತ್ತಿರುವುದು 500 ರೂಪಾಯಿಗಳನ್ನು. ಈ ನಗರ ಯಾಕೆ ಇಷ್ಟೊಂದು ದುಬಾರಿ ಎಂದು ಮಹಿಳೆ ಹೇಳಿರುವುದನ್ನು ಕಾಣಬಹುದು.
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ನನಗೂ ಹೀಗೆ ಅನಿಸುತ್ತದೆ ಎಂದಿದ್ದಾರೆ. ಮತ್ತೊಬ್ಬರು ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಇದು ನನಗೂ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಇಸ್ಲಾಮಾಬಾದ್, ಡಿಸೆಂಬರ್ 28: ಅಲ್ಲಾನ ನಿರ್ಧಾರವೇ ಅಂತಿಮ ಎಂದು ಇಸ್ಲಾಮಿಕ್ ವಿದ್ವಾಂಸ ಮುಫ್ತಿ ಶಮೈಲ್ ನಡ್ವಿ ಹೇಳಿದ್ದಾರೆ. ನಮ್ಮ ತಾಯ್ನಾಡು ಧರ್ಮಕ್ಕಿಂತ ಪವಿತ್ರ, ಜಾತ್ಯತೀತ ವ್ಯವಸ್ಥೆಯನ್ನು ನಮಗಿಂತ ಪವಿತ್ರವೆಂದು ನಾವು ಭಾವಿಸಿದ್ದೇವೆ. ಬೇರೆ ನ್ಯಾಯಾಲಯವು ಯಾವುದೇ ನಿರ್ಧಾರ ತೆಗೆದುಕೊಂಡರೂ,ಮ ಶರಿಯಾ ವಿರುದ್ಧ ಆದೇಶ ನೀಡಿದರೂ ಅದನ್ನು ಅನುಮತಿಸಲಾಗುವುದಿಲ್ಲ, ಅಲ್ಲಾನ ನಿರ್ಧಾರವೇ ಅಂತಿ ಎಂದು ಆತ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶ್ರೀಲಂಕಾ ವಿರುದ್ಧದ ಟಿ20 ಸರಣಿಗಾಗಿ ಪಾಕಿಸ್ತಾನ್ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡದಲ್ಲಿ ಬಾಬರ್ ಆಝಂ ಕಾಣಿಸಿಕೊಂಡಿಲ್ಲ ಎಂಬುದು ವಿಶೇಷ. ಅಂದರೆ ಕಳೆದೊಂದು ವರ್ಷದಿಂದ ಪಾಕ್ ಟಿ20 ತಂಡದಿಂದ ಹೊರಗುಳಿದಿದ್ದ ಬಾಬರ್ ಆಝಂ ಸೌತ್ ಆಫ್ರಿಕಾ ವಿರುದ್ಧದ ಸರಣಿಯ ಮೂಲಕ ಕಂಬ್ಯಾಕ್ ಮಾಡಿದ್ದರು. ಇದೀಗ ಟಿ20 ವಿಶ್ವಕಪ್ಗೂ ಮುನ್ನ ನಡೆಯಲಿರುವ ಸರಣಿಯಿಂದ ಬಾಬರ್ ಆಝಂ ಅವರನ್ನು ತಂಡದಿಂದ ಕೈ ಬಿಡಲಾಗಿದೆ.
ಇತ್ತ ಬಾಬರ್ ಆಝಂ ಅವರನ್ನು ತಂಡದಿಂದ ಹೊರಗಿಡಲು ಮುಖ್ಯ ಕಾರಣ ಅವರು ಬಿಗ್ ಬ್ಯಾಷ್ ಲೀಗ್ ಆಡುತ್ತಿರುವುದು ಎನ್ನಲಾಗಿದೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಬಿಎಲ್ನಲ್ಲಿ ಬಾಬರ್ ಸಿಡ್ನಿ ಸಿಕ್ಸರ್ ಪರ ಕಣಕ್ಕಿಳಿಯುತ್ತಿದ್ದು, ಹೀಗಾಗಿ ಅವರನ್ನು ಶ್ರೀಲಂಕಾ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಗಿಲ್ಲ ಎಂದು ಹೇಳಲಾಗಿದೆ.
ಆದರೆ ಅದೇ ಬಿಗ್ ಬ್ಯಾಷ್ ಲೀಗ್ನಲ್ಲಿ ಕಣಕ್ಕಿಳಿಯುತ್ತಿದ್ದ ಶಾದಾಬ್ ಖಾನ್ ಪಾಕಿಸ್ತಾನ್ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹೀಗಾಗಿಯೇ ಪಾಕ್ ಟಿ20 ತಂಡದಿಂದ ಬಾಬರ್ ಆಝಂ ಮತ್ತೆ ಹೊರಬಿದ್ದರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಪಾಕಿಸ್ತಾನ್-ಶ್ರೀಲಂಕಾ ಸರಣಿ ಯಾವಾಗ ಶುರು?
ಪಾಕಿಸ್ತಾನ್ ಮತ್ತು ಶ್ರೀಲಂಕಾ ನಡುವಣ ಟಿ20 ಸರಣಿಯು ಜನವರಿ 7 ರಿಂದ ಶುರುವಾಗಲಿದೆ. ಈ ಸರಣಿಯ ಎಲ್ಲಾ ಮೂರು ಟಿ20 ಪಂದ್ಯಗಳುದಂಬುಲ್ಲಾದಲ್ಲಿ ನಡೆಯಲಿವೆ . ಮೊದಲ ಪಂದ್ಯ ಜನವರಿ 7 ರಂದು, ಎರಡನೇ ಪಂದ್ಯ ಜನವರಿ 9 ರಂದು ಮತ್ತು ಮೂರನೇ ಪಂದ್ಯ ಜನವರಿ 11 ರಂದು ನಡೆಯಲಿದೆ. ಈ ಸರಣಿಯ ಬಳಿಕ ಪಾಕಿಸ್ತಾನ್ ತಂಡ ಟಿ20 ವಿಶ್ವಕಪ್ಗೆ ಸಜ್ಜಾಗಲಿದೆ.
ಟಿ20 ವಿಶ್ವಕಪ್ನ ಮೊದಲ ಸುತ್ತಿನಲ್ಲಿ ಪಾಕಿಸ್ತಾನ್ ತಂಡವು ಭಾರತ, ನಮೀಬಿಯಾ , ನೆದರ್‌ಲೆಂಡ್ಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಅಮೆರಿಕ ಂಡಗಳನ್ನು ಎದುರಿಸಲಿದೆ. ಇದೀಗ ಪಾಕ್ ತಂಡದಲ್ಲಿ ಸ್ಥಾನ ಪಡೆದಿರುವ ಬಹುತೇಕ ಆಟಗಾರರು ಟಿ20 ವಿಶ್ವಕಪ್ ತಂಡದಲ್ಲೂ ಕಾಣಿಸಿಕೊಳ್ಳುವುದು ಖಚಿತ.
ರಾಯಚೂರು, ಡಿಸೆಂಬರ್ 28: ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪಟ್ಟಣದಲ್ಲಿ ಕರೀಂ ಸಾಬ್ ಕುಟುಂಬ ಕೋಮು ಸೌಹಾರ್ದತೆಗೆ ಮಾದರಿಯಾಗಿದೆ. ಈ ಮುಸ್ಲಿಂ ಕುಟುಂಬ ಕಳೆದ ನಾಲ್ಕು ವರ್ಷಗಳಿಂದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡುತ್ತಿದ್ದು, ಮಾಲಾಧಾರಿಗಳ ವಿಧಿವಿಧಾನ ಮತ್ತು ಸಂಪ್ರದಾಯದಂತೆ ಭೋಜನವನ್ನು ಸಿದ್ಧಪಡಿಸಲಾಗುತ್ತಿದೆ. ಕರೀಂ ಸಾಬ್ ಕುಟುಂಬವು ಯಾವುದೇ ಧರ್ಮದ ಕಾರ್ಯಕ್ರಮವಿರಲಿ, ಅದರಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವುದಾಗಿ ತಿಳಿಸಿದೆ. ಸುಮಾರು 35ಕ್ಕೂ ಹೆಚ್ಚು ಮಾಲಾಧಾರಿಗಳು ಈ ಭೋಜನ ವ್ಯವಸ್ಥೆಯಲ್ಲಿ ಭಾಗಿಯಾಗಿದ್ದು, ಇವರ ಸೇವೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
ಡಾ. ಬಸವರಾಜ ಗುರೂಜಿಅವರ ಭವಿಷ್ಯವಾಣಿಯ ಪ್ರಕಾರ, 2026 ಮೀನ ರಾಶಿಯವರಿಗೆ ಮಹತ್ವದ ವರ್ಷವಾಗಲಿದೆ. ಸಾಡೇಸಾತಿಯ ಎರಡನೇ ಹಂತದಲ್ಲಿದ್ದರೂ, ಈ ವರ್ಷವು ಸಾಧನೆ ಮತ್ತು ಯಶಸ್ಸಿನ ಅವಧಿಯಾಗಿದೆ. ಆರ್ಥಿಕವಾಗಿ ಬಾಕಿಗಳ ವಸೂಲಿ ಮತ್ತು ಉತ್ತಮ ಆರೋಗ್ಯದಂತಹ ಸಕಾರಾತ್ಮಕ ಫಲಿತಾಂಶಗಳನ್ನು ನಿರೀಕ್ಷಿಸಬಹುದು.
ಗುರು ಗ್ರಹವು ನಾಲ್ಕನೇ ಮನೆಯಿಂದ ಐದನೇ ಮನೆಗೆ ಚಲಿಸುವುದರಿಂದ ಮತ್ತು ಶನಿ ಗ್ರಹವು ಮೊದಲ ಸ್ಥಾನದಲ್ಲಿರುವುದರಿಂದ ವಿವಿಧ ಕ್ಷೇತ್ರಗಳ ಮೇಲೆ ಪ್ರಭಾವ ಬೀರಲಿದೆ. ಮನೆ ನಿರ್ಮಾಣ ಅಥವಾ ನಿವೇಶನ ಖರೀದಿ ಯೋಗವಿದೆ. ಜೂನ್‌ನಿಂದ ಗುರು ಸಂಚಾರವು ‘ಮಹಾರಾಜಯೋಗ’ವನ್ನು ತರುತ್ತದೆ, ಇದು ಒಟ್ಟಾರೆ ಶುಭ ಫಲಗಳನ್ನು ನೀಡುತ್ತದೆ. ಆದಾಗ್ಯೂ, ಶನಿಯ ಸ್ಥಾನ ಮತ್ತು ಶತ್ರುಗಳ ಸಂಭವನೀಯ ಹೆಚ್ಚಳದಿಂದಾಗಿ ಮಾನಸಿಕ ಸ್ಥೈರ್ಯ ಮತ್ತು ತಾಳ್ಮೆ ಅತ್ಯಗತ್ಯ.
ವಿದ್ಯಾರ್ಥಿಗಳು ಅತ್ಯುತ್ತಮ ಶೈಕ್ಷಣಿಕ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ವೃತ್ತಿಜೀವನವು ಉತ್ತಮವಾಗಿರುತ್ತದೆ. ಹಣಕಾಸಿನ ನಿರ್ವಹಣೆ ಮುಖ್ಯವಾಗುತ್ತದೆ. ದಾಂಪತ್ಯ ಮತ್ತು ಸಂಬಂಧಗಳಲ್ಲಿ ಕೆಲವು ಸವಾಲುಗಳು ಎದುರಾದರೂ, ದೈವಿಕ ಬೆಂಬಲವೂ ಇದೆ. ತೀರ್ಥಕ್ಷೇತ್ರಗಳ ಭೇಟಿ ಹೆಚ್ಚಾಗುವ ಸಾಧ್ಯತೆಯಿದೆ. ಶಿವ ಮಂತ್ರಗಳ ಪಠಣ, ನಂದಿ ಅಭಿಷೇಕ ಮತ್ತು ಹಿರಿಯರಿಗೆ ಸಹಾಯ ಮಾಡುವುದು ಸವಾಲುಗಳನ್ನು ನಿವಾರಿಸಲು ಮತ್ತು ಸಕಾರಾತ್ಮಕ ಶಕ್ತಿಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದು 2026 ಅನ್ನು ಫಲಪ್ರದವಾಗಿಸುತ್ತದೆ.
ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಕೀರನ್ ಪೊಲಾರ್ಡ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಅದು ಸಹ ಒಂದೇ ಓವರ್ನಲ್ಲಿ 30 ರನ್ ಚಚ್ಚುವ ಮೂಲಕ. ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಎಂಐ ಎಮಿರೇಟ್ಸ್ ಹಾಗೂ ದುಬೈ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ದುಬೈ ಕ್ಯಾಪಿಟಲ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕಲೆಹಾಕಿದ್ದು ಕೇವಲ 122 ರನ್ಗಳು ಮಾತ್ರ.
ಅದರಂತೆ 123 ರನ್ಗಳ ಸುಲಭ ಗುರಿ ಬೆನ್ನತ್ತಿದ ಎಂಐ ಎಮಿರೇಟ್ಸ್ ತಂಡವು 59 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕಣಕ್ಕಿಳಿದ ನಾಯಕ ಕೀರನ್ ಪೊಲಾರ್ಡ್ ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ್ದರು.
ಆದರೆ ವಕಾರ್ ಸಲಾಂಖೈಲ್ ಎಸೆದ 15ನೇ ಓವರ್ನಲ್ಲಿ ಅಬ್ಬರಿಸಿದ ಪೊಲಾರ್ಡ್ 6, 4, 2, 6, 6, 6, ಸಿಡಿಸುವ ಮೂಲಕ ಬರೋಬ್ಬರಿ 30 ರನ್ ಚಚ್ಚಿದರು. ಈ ಮೂಲಕ 16.4 ಓವರ್ಗಳಲ್ಲಿ ಎಮಿರೇಟ್ಸ್ ತಂಡವನ್ನು ಗುರಿ ಮುಟ್ಟಿಸಿ 8 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟರು.
ಈ ಗೆಲುವಿನೊಂದಿಗೆ ಎಂಐ ಎಮಿರೇಟ್ಸ್ ತಂಡವು ಇಂಟರ್ನ್ಯಾಷನಲ್ ಟಿ20 ಲೀಗ್ನ ಪ್ಲೇಆಫ್ಗೆ ಅರ್ಹತೆ ಪಡೆದುಕೊಂಡಿದೆ. ಅದರಂತೆ ಜನವರಿ ಮೊದಲ ವಾರದಲ್ಲಿ ನಡೆಯಲಿರುವ ಪ್ಲೇಆಫ್ ಪಂದ್ಯಗಳಲ್ಲಿ ಎಂಐ ಎಮಿರೇಟ್ಸ್ ತಂಡ ಕೂಡ ಕಣಕ್ಕಿಳಿಯಲಿದೆ.
ಬೆಂಗಳೂರು, ಡಿಸೆಂಬರ್ 28: ನವ ವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಗಳ ಸಾವಿಗೆ ಆಕೆಯ ಗಂಡನ ಕುಟುಂಬವೇ ಕಾರಣ. ಆತ ಗಂಡಸೇ ಅಲ್ಲ ಎಂದು ದೂರಿದ್ದ ಗಾನವಿ ಕುಟುಂಬದ ವಿರುದ್ಧವೇ ಈಗ ಎಫ್ಐಆರ್ ದಾಖಲಾಗಿದೆ. ತನ್ನ ಮೇಲೆ ವರದಕ್ಷಿಣೆ ಕಿರುಕುಳ ಆರೋಪ ಕೂಡ ಕೇಳಿಬಂದಿದ್ದ ಕಾರಣ ಮನನೊಂದಿದ್ದ ಗಾನವಿ ಪತಿ ಸೂರಜ್ ಕೂಡ ಮಹಾರಾಷ್ಟ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಮಗನ ಜೊತೆ ಆತನ ತಾಯಿ ಜಯಂತಿಯೂ ಸೂಸೈಡ್ ಯತ್ನ ಮಾಡಿದ್ದರು. ಇಷ್ಟೆಲ್ಲ ರಾದ್ಧಾಂತಕ್ಕೆ ಗಾನವಿ ಲವ್ ಸ್ಟೋರಿಯೇ ಕಾರಣ ಎಂಬ ಹೊಸ ಆರೋಪ ಈಗ ಕೇಳಿಬಂದಿದೆ.
ಹೌದು, ಮೃತ ಗಾನವಿ ಮೇಲೆಯೇ ಸೂರಜ್ ಕುಟುಂಬಸ್ಥರು ಈಗ ಹೊಸ ಆರೋಪ ಮಾಡಿದ್ದಾರೆ. ಗಾನವಿ ಈ ಹಿಂದೆ ಹರ್ಷಾ ಎಂಬಾತನನ್ನ ಪ್ರೀತಿ ಮಾಡುತ್ತಿದ್ದಳು. ಆತನನ್ನೆ ಮದುವೆಯಾಗ್ಬೇಕು ಎಂದು ನಿರ್ಧರಿಸಿದ್ದಳು. ಆದರೆ ಮನೆಯವರ ಒತ್ತಾಯಕ್ಕೆ ಗಾನವಿ ಸೂರಜ್ನ ಮದುವೆಯಾಗಿದ್ದಾಳೆ. ಶ್ರೀಲಂಕಾಗೆ ಹನಿಮೂನ್ಗೆ ಹೋದಾಗ ಪ್ರೀತಿ ವಿಚಾರವನ್ನು ಆಕೆಯೇ ಸೂರಜ್ಗೆ ತಿಳಿಸಿದ್ದಳು. ಈ ವಿಚಾರ ಕೇಳಿ ಆತ ಶಾಕ್ ಆಗಿದ್ದ. ಹೀಗಾಗಿಯೇ ಹನಿಮೂನ್ಗೆ ತೆರಳಿದ್ದ ಅವರು ಅರ್ಧಕ್ಕೇ ಬೆಂಗಳೂರಿಗೆ ಹಿಂದಿರುಗಿದ್ದರು. ನಂತರ ಗಾನವಿಯನ್ನ ತಮ್ಮ ಮನೆಗೆ ಅವರ ಕುಟುಂಬಸ್ಥರು ಕರೆದೊಯ್ದಿದ್ದು, ಡಿಸೆಂಬರ್ 24ರಂದು ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆ ಬಳಿಕ ಸೂರಜ್ ಮೇಲೆ ಆಕೆಯ ತಾಯಿ ರುಕ್ಮಿಣಿ ಕಿರುಕುಳ ಆರೋಪ ಹೊರಿಸಿದ್ದಾರೆ ಎನ್ನಲಾಗಿದೆ.
ಫ್ಯಾಮಿಲಿ ಮೇಲೆ ವಿದ್ಯಾರಣ್ಯಪುರ ಠಾಣೆಯಲ್ಲಿ ವರದಕ್ಷಿಣೆ ಕೇಸ್ ದಾಖಲಾದ ಬಳಿಕ ಮಹಾರಾಷ್ಟ್ರಕ್ಕೆ ಸೂರಜ್ ಮತ್ತು ಆತನ ತಾಯಿ ಜಯಂತಿ ತೆರಳಿದ್ದರು. ಆರೋಪದಿಂದ ನೊಂದಿದ್ದ ಸೂರಜ್ ಲಾಡ್ಜ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಸೂರಜ್ ಭಾವ ರಾಜ್ಕುಮಾರ್ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಗಾನವಿ ಪ್ರೀತಿ ವಿಚಾರ ಮುಚ್ಚಿಟ್ಟು ಸುಳ್ಳು ಅಪಪ್ರಚಾರ ಮಾಡಲಾಗ್ತಿದೆ. ಸೂರಜ್ ಸಾವಿಗೆ ಗಾನವಿ, ಆಕೆಯ ತಾಯಿ ರುಕ್ಮಿಣಿ, ರಾಧಾ, ಬಾಬುಗೌಡ, ಸತೀಶ್ ಕಾರಣ ಎಂದು ದೂರಿದ್ದಾರೆ.
ಪ್ರತಿಯೊಬ್ಬರ ಜೀವನದಲ್ಲಿಯೂ ಸುಖ, ದುಃಖ, ಲಾಭ ಮತ್ತು ನಷ್ಟಗಳು ಸಹಜ. ಯಾವುದೇ ಘಟನೆ ಸಂಭವಿಸುವ ಮೊದಲು, ನಮ್ಮ ಶಾಸ್ತ್ರಗಳು, ಧರ್ಮ ಮತ್ತು ಪರಂಪರೆಗಳು ಕೆಲವು ಸೂಚನೆಗಳನ್ನು ನೀಡುತ್ತವೆ ಎಂದು ಹೇಳಲಾಗುತ್ತದೆ. ಇವುಗಳನ್ನು ಶಕುನಗಳು ಎಂದು ಪರಿಗಣಿಸಲಾಗುತ್ತದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಚರ್ಚಿಸಿದ್ದಾರೆ.
ಗುರೂಜಿಯವರು ಹೇಳಯವಂತೆ, ಕೆಟ್ಟದ್ದು ಸಂಭವಿಸುವ ಮುನ್ನ ಕಂಡುಬರುವ ಸೂಚನೆಗಳು ಸೂಕ್ಷ್ಮವಾಗಿರುತ್ತವೆ. ಉದಾಹರಣೆಗೆ, ಪರೀಕ್ಷೆ ಬರೆಯುವ ಮೊದಲು ವಿದ್ಯಾರ್ಥಿಗೆ ತನ್ನ ಮನಸ್ಸಿನಲ್ಲಿಯೇ ಕೆಲವು ಸಂಕೇತಗಳು ಸಿಗುತ್ತವೆ. ಅದೇ ರೀತಿ, ಸಾವು ಬರುವ ಮುನ್ನವೂ ದೇಹದಲ್ಲಿ ಕೆಲವು ಸೂಚನೆಗಳು ಗೋಚರಿಸುತ್ತವೆ ಎನ್ನಲಾಗುತ್ತದೆ. ಪ್ರಕೃತಿಯು ಸಹ ಮುಂಬರುವ ಕೆಡುಕುಗಳ ಬಗ್ಗೆ ಸೂಚನೆಗಳನ್ನು ನೀಡುತ್ತದೆ. ರಸ್ತೆಯಲ್ಲಿ ಸಂಚರಿಸುವಾಗ ಮುಂದೆ ಅಪಾಯವಿದ್ದರೆ ರಸ್ತೆಯಲ್ಲೇ ಕೆಲವು ಚಿಹ್ನೆಗಳು ಕಾಣಿಸುತ್ತವೆ. ಕೆಲವೊಮ್ಮೆ ಅವುಗಳನ್ನು ನಿರ್ಲಕ್ಷಿಸಿ ಮುಂದೆ ಸಾಗಿದಾಗ ಅನಾಹುತಗಳು ಸಂಭವಿಸುತ್ತವೆ.
ಮನೆಯಿಂದ ಹೊರಗೆ ಹೋಗುವಾಗ ಅಥವಾ ಮನೆಯೊಳಗೆ ಕೆಲವು ಅಶುಭ ಶಕುನಗಳು ಕಾಣಿಸಿಕೊಳ್ಳಬಹುದು. ನಾಯಿಗಳು ಅರಚುವುದು, ಹಾವುಗಳು ಅಡ್ಡ ಬರುವುದು, ಅಥವಾ ಮನೆಯಲ್ಲಿನ ಹಸುಗಳು ವಿಚಿತ್ರವಾಗಿ ಕೂಗಿಕೊಳ್ಳುವುದು ಇಂತಹ ಕೆಲವು ಸೂಚನೆಗಳು. ಇನ್ನು ಕೆಲವು ದುಷ್ಟ ಶಕುನಗಳಲ್ಲಿ ಮನೆಯಲ್ಲಿ ಗಾಜು ಒಡೆಯುವುದು, ಹಾಲು ಚೆಲ್ಲುವುದು, ಅರಿಶಿಣ ಅಥವಾ ಕುಂಕುಮ ಚೆಲ್ಲುವುದು, ಆರತಿ ಮಾಡುವಾಗ ದೀಪ ಆರಿಹೋಗುವುದು ಅಥವಾ ನಾವು ಆಕಸ್ಮಿಕವಾಗಿ ಎಡವಿ ಬೀಳುವುದು ಸೇರಿವೆ. ಮನೆಮಂದಿಗೆ ಸಾಮಾನ್ಯವಾಗಿ ಕೇಳುವ “ಎಲ್ಲಿಗೆ ಹೋಗುತ್ತಿದ್ದೀರಾ?” ಎಂಬ ಪ್ರಶ್ನೆಯನ್ನು ಸಹ ಅಶುಭವೆಂದು ಪರಿಗಣಿಸಲಾಗುತ್ತದೆ.
ಕೆಂಪು ಇರುವೆಗಳ ಸಾಲು ಸಾಲು ಮನೆಯಲ್ಲಿ ಕಾಣಿಸಿಕೊಂಡರೆ, ಅದು ಕೆಟ್ಟ ಸೂಚನೆಯ ಸಂಕೇತ ಎಂದು ಭಾವಿಸಲಾಗುತ್ತದೆ. ಇಂತಹ ಸಮಯದಲ್ಲಿ ದೇವತಾ ಪ್ರಾರ್ಥನೆ ಮಾಡುವುದು, ದೇವಸ್ಥಾನಕ್ಕೆ ಭೇಟಿ ನೀಡಿ ಅರ್ಚನೆ ಮಾಡಿಸುವುದು, ಅಥವಾ ಗುರುಹಿರಿಯರ ಪಾದ ಮುಟ್ಟಿ ನಮಸ್ಕರಿಸುವುದು ಸೂಕ್ತ.
ಇತ್ತೀಚೆಗೆ ಗುಬ್ಬಚ್ಚಿಗಳು ಕಡಿಮೆಯಾಗಿದ್ದರೂ, ಹಳ್ಳಿಗಳಲ್ಲಿ ಗುಬ್ಬಚ್ಚಿಗಳು ಪದೇ ಪದೇ ಮನೆಗೆ ಬಂದು ಹೋಗುವುದು ಅಥವಾ ಕಿಟಕಿಯ ಮೇಲೆ ಕುಳಿತು ಅತಿಯಾಗಿ ಸದ್ದು ಮಾಡುವುದು, ಹಾಗೂ ಸಾಮಾನ್ಯವಾಗಿ ಕಾಣಿಸದ ಇಲಿಗಳು ಪದೇ ಪದೇ ಕಾಣಿಸಿಕೊಳ್ಳುವುದು ಕೂಡ ಕೆಟ್ಟ ಸೂಚನೆಗಳಾಗಿವೆ. ಕನ್ನಡಿ ಒಡೆಯುವುದು, ಕಾಗೆ ಮನೆ ಮುಂದೆ ಅತಿಯಾಗಿ ಸದ್ದು ಮಾಡುವುದು, ಮತ್ತು ನಾಯಿ ಮನೆ ಮುಂದೆ ಬಂದು ಅರಚುವುದು ಕೂಡ ಇದೇ ಸಾಲಿಗೆ ಸೇರುತ್ತವೆ.
ಗಂಡಸರಿಗೆ ಎಡಗಣ್ಣು ಅದುರಿದರೆ ಅದು ಅಶುಭ ಎಂದು ಹೇಳಿದರೆ, ಮಹಿಳೆಯರಿಗೆ ಬಲಗಣ್ಣು ಅದುರಿದರೆ ಅದು ಅಶುಭ ಎಂದು ಪರಿಗಣಿಸಲಾಗುತ್ತದೆ. ದೊಡ್ಡ ಅನಾಹುತ ಸಂಭವಿಸುವ ಮುನ್ನ, ಮನೆಯಲ್ಲಿನ ಗಿಡಗಳು ಒಣಗಿ ಹೋಗುವುದು ಅಥವಾ ಮರಗಳು ಒಣಗಿ ಹೋಗುವುದು ಸಾಮಾನ್ಯ. ಸುಮ್ಮನೆ ನಡೆದುಕೊಂಡು ಹೋಗುತ್ತಿರುವಾಗ ಪದೇ ಪದೇ ಎಡವಿ ಬೀಳುವುದು ಅಥವಾ ಸಣ್ಣಪುಟ್ಟ ಗಾಯಗಳಾಗುವುದು ಕೂಡ ಮುನ್ಸೂಚನೆಗಳಾಗಿವೆ.
ಇನ್ನು ಆಶ್ಚರ್ಯಕರ ಸಂಗತಿಯೆಂದರೆ, ಆಹಾರ ಬೇಗ ಕೆಟ್ಟುಹೋಗುವುದು ಅಥವಾ ಅಡುಗೆ ಮಾಡಿದ ಸಾಂಬಾರು ವಿಚಿತ್ರವಾಗಿ ರುಚಿ ಕೆಡುವುದು ಸಹ ಒಂದು ಸೂಚನೆ. ಸಾಕು ಪ್ರಾಣಿಗಳು ಸಾಯುವುದು ಕೂಡ ಕೆಟ್ಟ ಸೂಚನೆಯ ಸಂಕೇತ. ದೀಪ ಹಚ್ಚುವಾಗ, ಎಣ್ಣೆ ಮತ್ತು ಬತ್ತಿ ಚೆನ್ನಾಗಿದ್ದರೂ ಪದೇ ಪದೇ ದೀಪ ಆರಿಹೋಗುವುದು ಕೆಲವು ಸೂಚನೆಗಳನ್ನು ನೀಡುತ್ತದೆ.
ಇಂತಹ ಅಶುಭ ಸೂಚನೆಗಳು ಕಂಡುಬಂದಾಗ, ಮನೆಯಲ್ಲಿ ಪೂಜೆ, ಜಪ ಮಾಡುವುದು ಅಥವಾ ಗುರುಗಳನ್ನು ಅಥವಾ ವಿಪ್ರರನ್ನು ಆಹ್ವಾನಿಸಿ ಪಾದಪೂಜೆ ಮಾಡಿಸಿ, ಅವರಿಗೆ ಆಹಾರ ಅರ್ಪಿಸುವುದು ಉತ್ತಮ. ಗೋಮೂತ್ರ, ಅರಿಶಿಣ ನೀರು, ಶುದ್ಧ ನದಿಯ ನೀರು, ತುಳಸಿ ನೀರು, ಬಿಲ್ವಪತ್ರೆ ನೀರು, ವಿಭೂತಿ ನೀರು ಅಥವಾ ಉಪ್ಪು ನೀರನ್ನು ಮನೆ ಪೂರ್ತಿಯಾಗಿ ಸಿಂಪಡಿಸಿ ಸ್ವಲ್ಪ ಸಮಯ ಜಪ ಮಾಡುವುದರಿಂದ ಶುಭ ಫಲಗಳು ದೊರೆಯುತ್ತವೆ. ನಾವು ಯಾವಾಗಲೂ ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂಬ ತತ್ವವನ್ನು ಅನುಸರಿಸಬೇಕು ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಅಂಧೇರಿ, ಡಿಸೆಂಬರ್ 28: ಅಂಧೇರಿಯಲ್ಲಿ ರಾತ್ರಿ ಹೊತ್ತು ನಡೆದ ಘಟನೆ ನಗರದ ಜನರನ್ನು ಆತಂಕಕ್ಕೆ ದೂಡಿದೆ. ಆಟೋ ಚಾಲಕನೊಬ್ಬ ಕುಡಿದ ಮತ್ತಿನಲ್ಲಿ ಆಟೋವನ್ನು ಅಡ್ಡಾದಿಡ್ಡಿಯಾಗಿ ಓಡಿಸಿದ್ದಷ್ಟೇ ಅಲ್ಲದೆ ರಸ್ತೆಯ ಪಕ್ಕದಲ್ಲಿ ಹೋಗುತ್ತಿದ್ದ ಹೆಣ್ಣುಮಕ್ಕಳಿಗೆ ಕಿರುಕುಳ ಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋವನ್ನು ಹಂಚಿಕೊಂಡ ವ್ಯಕ್ತಿ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು ಮತ್ತು ನಾಗರಿಕರು ಮೌನವಾಗಿರುವ ಬದಲು ಮಾತನಾಡುವಂತೆ ಮನವಿ ಮಾಡಿದರು.
ಅಂಧೇರಿ ಪಶ್ಚಿಮದ ಆರ್‌ಟಿಒ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ಕಳೆದ ಹದಿನೈದು ದಿನಗಳಲ್ಲಿ ಎರಡು ಬಾರಿ ದೂರು ನೀಡಿದ್ದೇವೆ, ಅಜಾಗರೂಕ ರಿಕ್ಷಾ ಚಾಲನೆ, ನಿಂದನೀಯ ಭಾಷೆ ಮತ್ತು ನಾಲ್ಕರಿಂದ ಐದು ಪ್ರಯಾಣಿಕರನ್ನು ಸಾಗಿಸುವುದಕ್ಕೆ ಸಂಬಂಧಿಸಿದ ವೀಡಿಯೊಗಳನ್ನು ಹಂಚಿಕೊಂಡಿದ್ದೇವೆ ಎಂದು ಒಬ್ಬ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ರಬುಪುರ, ಡಿಸೆಂಬರ್ 28: ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿದೆ. ಬಳಿಕ ವಾಹನಗಳಿಗೆ ಬೆಂಕಿ ಆವರಿಸಿದೆ. ವಾಹನಗಳು ಜೆವರ್‌ನಿಂದ ನೋಯ್ಡಾ ಕಡೆಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಇದು ರಬುಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವರದಿಯ ಪ್ರಕಾರ, ವಾಹನದೊಳಗಿರುವ ಜನರು ಬೇಗನೆ ಹೊರಬಂದು ತಮ್ಮ ಜೀವಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಯಾವುದೇ ಸಾವುನೋವುಗಳು ದಾಖಲಾಗಿಲ್ಲ, ಬೆಂಕಿಯನ್ನು ನಿಯಂತ್ರಿಸಲು ಪೊಲೀಸರು ಮತ್ತು ಅಗ್ನಿಶಾಮಕ ದಳದ ತಂಡಗಳು ತಕ್ಷಣ ಆಗಮಿಸಿದ್ದವು ಇದರಿಂದಾಗಿ ಎರಡೂ ಕಾರುಗಳು ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಎಲ್ಲಾ ಪ್ರಯಾಣಿಕರು ಅದೃಷ್ಟವಶಾತ್ ಪಾರಾಗಿದ್ದರೂ ಅಪಘಾತದ ತೀವ್ರತೆಯನ್ನು ದೃಶ್ಯಗಳು ಒತ್ತಿಹೇಳುತ್ತವೆ.