All posts by nagaraj11081993

ಮೋದಿ ಹೇಳಿದ ದುಬೈನ ‘ಕನ್ನಡ ಪಾಠ ಶಾಲೆ’ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಮಾಹಿತಿ – Kannada News | What Makes Dubai’s ‘Kannada Paatha Shaale’ Special, as Mentioned by Modi in Mann Ki Baat?

ದುಬೈನ ‘ಕನ್ನಡ ಪಾಠ ಶಾಲೆ’ ಬಗ್ಗೆ ಮೋದಿ ಉಲ್ಲೇಖ

ಬೆಂಗಳೂರು, ಡಿಸೆಂಬರ್​​ 28: 2025ನೇ ಸಾಲಿನ ಕೊನೆಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ದುಬೈನ ‘ಕನ್ನಡ ಪಾಠ ಶಾಲೆ’ ಬಗ್ಗೆ ಉಲ್ಲೇಖಿಸಿದ್ದಾರೆ. ನಮ್ಮ ಮಕ್ಕಳು ಟೆಕ್‌ವರ್ಲ್ಡ್‌ನಲ್ಲಿ ಪ್ರಗತಿ ಹೊಂದುತ್ತಿದ್ದಾರೆ. ಆದರೆ ಅವರು ತಮ್ಮ ನೆಲದ ಭಾಷೆಯಾದ ಕನ್ನಡದಿಂದ ದೂರ ಆಗುತ್ತಿದ್ದಾರೆ ಎಂಬ ಉದ್ದೇಶದಿಂದ ದುಬೈನಲ್ಲಿ ಕನ್ನಡ ಪಾಠ ಶಾಲೆ ಆರಂಭ‌ವಾಯ್ತು ಎಂದಿದ್ದಾರೆ. ಆ ಮೂಲಕ ದುಬೈ ಕನ್ನಡಿಗರ ಕನ್ನಡ ಭಾಷಾ ಪ್ರೇಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಯಾವುದು ಇದು ದುಬೈನ ‘ಕನ್ನಡ ಪಾಠ ಶಾಲೆ’?

ಕರ್ನಾಟಕದ ಹೊರಗಿನ ಅತಿದೊಡ್ಡ ಕನ್ನಡ ಭಾಷಾ ಶಾಲೆ ಆಗಿರುವ ‘ಕನ್ನಡ ಪಾಠ ಶಾಲೆ’ ದುಬೈನಲ್ಲಿ 2014ರಿಂದ ಕಾರ್ಯನಿರ್ವಹಿಸುತ್ತಿದೆ. ದುಬೈನಲ್ಲಿರುವ ಕನ್ನಡಿಗ ಮಕ್ಕಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸುವ ಸದುದ್ದೇಶದಿಂದ ಈ ಶಾಲೆ ಕನ್ನಡಿಗರಿಂದಲೇ ಆರಂಭವಾಗಿದ್ದು, ವಾರಾಂತ್ಯಗಳಲ್ಲಿ ತರಗತಿಗಳು ನಡೆಯುತ್ತವೆ. ಸ್ವಯಂಸೇವಕ ಶಿಕ್ಷಕರು ಉಚಿತವಾಗಿ ಕನ್ನಡ ಕಲಿಸೋದು ಕೂಡ ಇದರ ವಿಶೇಷ. ‘ಕನ್ನಡ ಮಿತ್ರರು’ ಎಂಬ ಸಂಘಟನೆ ಈ ಶಾಲೆಯನ್ನು ನಡೆಸಿಕೊಂಡು ಬಂದಿದೆ.

ಇದನ್ನೂ ಓದಿ: ಬೆಂಗಳೂರಿನ ಐಐಎಸ್​ಸಿಯನ್ನು ಹಾಡಿಹೊಗಳಿದ ಪ್ರಧಾನಿ ಮೋದಿ

‘ಕನ್ನಡ ಪಾಠ ಶಾಲೆ’ ಆರಂಭ ಆಗಿದ್ಯಾಕೆ?

ಕೆಲಸಕ್ಕಾಗಿ ದುಬೈಗೆ ಸಾವಿರಾರು ಕನ್ನಡಿಗರು ವಲಸೆ ಬರುತ್ತಾರೆ. ಹೀಗಾಗಿ ಅವರ ಮಕ್ಕಳು ತಮ್ಮ ಮೂಲ ನೆಲದ ಭಾಷೆಯನ್ನು ಕಲಿಯಲು ಸಾಧ್ಯವಾಗುತ್ತಿಲ್ಲ. ಪೋಷಕರು ಕೂಡ ಕೆಲಸಕ್ಕೆ ಹೋಗುವ ಕಾರಣ ಅವರಿಗೂ ಮಕ್ಕಳಿಗೆ ತಮ್ಮ ಭಾಷೆಯ ಬಗ್ಗೆ ಹೇಳಿಕೊಡಲು ಸಮಯ ಇರುವುದಿಲ್ಲ. ಹೀಗಾಗಿ ಅಂತಹ ಮಕ್ಕಳಿಗೆ ಕನ್ನಡ ಕಲಿಸಬೇಕು ಎಂಬ ಉದ್ದೇಶದೊಂದಿಗೆ 50 ಜನರ ತಂಡ ಈ ಶಾಲೆಯನ್ನು ಆರಂಭಿಸಿದೆ. ಉಚಿತ ಕನ್ನಡ ಪಾಠದ ಜೊತೆಗೆ ಇದಕ್ಕೆ ಅಗತ್ಯವಿರುವ ಪಠ್ಯಕ್ರಮವನ್ನೂ ಇವರೇ ವಿನ್ಯಾಸಗೊಳಿಸಿದ್ದಾರೆ. ಹಂತ ಹಂತವಾಗಿಯೇ ಕನ್ನಡ ಪಾಠ ಇಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ವರ್ಣಮಾಲೆ, ಸಂಖ್ಯೆಗಳ ಪರಿಚಯ, ಎರಡನೇ ಹಂತದಲ್ಲಿ ಪದ ಮತ್ತು ವಾಕ್ಯಗಳ ರಚನೆ ಹೇಳಿಕೊಡಲಾಗುತ್ತೆ. ಮೂರನೇ ಹಂತದಲ್ಲಿ ವ್ಯಾಕರಣ ಸೇರಿ ಇತರ ವಿಷಯಗಳ ಪಾಠ ಹೇಳಿಕೊಡಲಾಗುತ್ತೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:36 pm, Sun, 28 December 25

Source link

Vasthu Tips: ಮನೆಯ ಮೆಟ್ಟಿಲುಗಳ ಕೆಳಗೆ ಈ ವಸ್ತುಗಳನ್ನು ಇಡಲೇಬೇಡಿ; ಸಮಸ್ಯೆ ತಪ್ಪಿದ್ದಲ್ಲ – Kannada News | Vastu for Under Staircase: What to Avoid to Prevent Negative Energy at Home

ಸ್ವಂತ  ಮನೆ ಕಟ್ಟುವುದು ಪ್ರತಿಯೊಬ್ಬರ ಕನಸು. ಪ್ರತಿಯೊಬ್ಬರೂ ತಮ್ಮ ಜೀವಮಾನದ ಕಠಿಣ ಪರಿಶ್ರಮದಿಂದ ನಿರ್ಮಿಸಿದ ಮನೆಯಲ್ಲಿ ಆರಾಮವಾಗಿ ಬದುಕಲು ಬಯಸುತ್ತಾರೆ. ಅದಕ್ಕಾಗಿಯೇ ಅವರು ಮನೆ ನಿರ್ಮಿಸುವಾಗ ವಾಸ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಆದಾಗ್ಯೂ, ಜಾಗವನ್ನು ಉಳಿಸುವ ಪ್ರಕ್ರಿಯೆಯಲ್ಲಿ ಅನೇಕ ಜನರು ಮಾಡುವ ದೊಡ್ಡ ತಪ್ಪು ಎಂದರೆ ಮೆಟ್ಟಿಲುಗಳ ಕೆಳಗಿರುವ ಖಾಲಿ ಜಾಗವನ್ನು ಅವರು ಬಯಸಿದಂತೆ ಬಳಸುವುದು. ವಾಸ್ತು ಶಾಸ್ತ್ರದ ಪ್ರಕಾರ, ಮೆಟ್ಟಿಲುಗಳ ಕೆಳಗಿರುವ ಖಾಲಿ ಜಾಗವು ತುಂಬಾ ಸೂಕ್ಷ್ಮವಾಗಿರುತ್ತದೆ. ಅಲ್ಲಿ ಮಾಡುವ ಸಣ್ಣ ತಪ್ಪು ಮನೆಯೊಳಗೆ ನಕಾರಾತ್ಮಕ ಶಕ್ತಿ ಪ್ರವೇಶಿಸಲು ಕಾರಣವಾಗಬಹುದು.

ಇವು ಮೆಟ್ಟಿಲುಗಳ ಕೆಳಗೆ ಇರಲೇಬಾರದು:

ಪೂಜಾ ಕೊಠಡಿ:

ಸ್ಥಳಾವಕಾಶದ ಕೊರತೆಯಿಂದಾಗಿ ಅನೇಕ ಜನರು ದೇವರ ಕೋಣೆಯನ್ನು ಮೆಟ್ಟಿಲುಗಳ ಕೆಳಗೆ ಇಡುತ್ತಾರೆ. ಆದರೆ ನಾವು ಮೆಟ್ಟಿಲುಗಳ ಕೆಳಗೆ ನಡೆಯುವುದರಿಂದ, ದೇವರ ಮೇಲೆ ನಡೆಯುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಇದು ಮನೆಯಲ್ಲಿ ಕಲಹಕ್ಕೆ ಕಾರಣವಾಗಬಹುದು.

ಅಡುಗೆ ಮನೆ:

ಮೆಟ್ಟಿಲುಗಳ ಕೆಳಗೆ ಅಡುಗೆ ಮನೆ ಇದ್ದರೆ ಆರ್ಥಿಕ ತೊಂದರೆ ಉಂಟಾಗಬಹುದು. ಮೆಟ್ಟಿಲುಗಳ ಕೆಳಗಿರುವ ಜಾಗವು ಅಗ್ನಿ ಅಂಶಕ್ಕೆ ಸೂಕ್ತವಲ್ಲ ಎಂದು ವಾಸ್ತು ತಜ್ಞರು ಹೇಳುತ್ತಾರೆ.

ಶೌಚಾಲಯ – ಸ್ನಾನಗೃಹ:

ಮೆಟ್ಟಿಲುಗಳ ಕೆಳಗೆ ನೀರಿಗೆ ಸಂಬಂಧಿಸಿದ ರಚನೆಗಳು ಇರುವುದರಿಂದ ಕುಟುಂಬ ಸದಸ್ಯರಲ್ಲಿ ಭಿನ್ನಾಭಿಪ್ರಾಯಗಳು ಮತ್ತು ಆರೋಗ್ಯ ಸಮಸ್ಯೆಗಳ ಅಪಾಯಕ್ಕೆ ಕಾರಣವಾಗಬಹುದು.

ಇದನ್ನೂ ಓದಿ: ಮನಿ ಪ್ಲಾಂಟ್‌ನ ಬುಡದಲ್ಲಿ ಒಂದು ನಾಣ್ಯ ಹೂತಿಡಿ; ಪ್ರಯೋಜನ ಸಾಕಷ್ಟಿವೆ

ಶೂ ಸ್ಟ್ಯಾಂಡ್:

ಹಳೆಯ ವಸ್ತುಗಳನ್ನು ಮೆಟ್ಟಿಲುಗಳ ಕೆಳಗೆ ಎಸೆಯುವುದು ಅಥವಾ ಶೂ ಸ್ಟ್ಯಾಂಡ್ ಇಡುವುದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಚಿಂತೆಗಳಿಗೆ ಕಾರಣವಾಗಬಹುದು.

ವಾಸ್ತು ಪ್ರಕಾರ ಇದನ್ನು ಯಾವುದಕ್ಕೆ ಬಳಸಬಹುದು?

ಸ್ಟೋರ್ ರೂಂ:

ನೀವು ನಿಯಮಿತವಾಗಿ ಬಳಸದ ವಸ್ತುಗಳನ್ನು ಸಂಗ್ರಹಿಸಲು ಮುಚ್ಚಿದ ಸ್ಟೋರ್ ರೂಂ ಅನ್ನು ನಿರ್ಮಿಸಬಹುದು.

ಹೆಚ್ಚುವರಿ ಸಂಗ್ರಹಣೆ:

ಅಗತ್ಯ ದಾಖಲೆಗಳು ಅಥವಾ ಇತರ ವಸ್ತುಗಳನ್ನು ಸುರಕ್ಷಿತವಾಗಿಡಲು ನೀವು ಮೆಟ್ಟಿಲುಗಳ ಕೆಳಗೆ ಕಪಾಟುಗಳನ್ನು ನಿರ್ಮಿಸಬಹುದು. ಆದಾಗ್ಯೂ, ಅದು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಾಮರಾಜನಗರ: ಬಾಳೆಹಣ್ಣಿಗಾಗಿ ನಡುರಸ್ತೆಯಲ್ಲಿಯೇ ಲಾರಿ ತಡೆದ ‘ಬನಾನಾ ಬೇಬಿ’! – Kannada News | Wild Elephant Menace Continues in Chamarajanagar

ಚಾಮರಾಜನಗರ, ಡಿಸೆಂಬರ್ 28: ಚಾಮರಾಜನಗರ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ‘ಬನಾನಾ ಬೇಬಿ’ ಎಂದು ಕರೆಯಲ್ಪಡುವ ಆನೆ ಮತ್ತೆ ಸಕ್ರಿಯವಾಗಿದೆ. ಕಳೆದ ಮೂರು ತಿಂಗಳಿಂದ ಸೈಲೆಂಟ್ ಆಗಿದ್ದ ಈ ಆನೆ, ಇದೀಗ ಕಾಡಿನಿಂದ ನಾಡಿಗೆ ಆಹಾರ ಅರಸಿ ಬರುತ್ತಿದೆ. ಬಾಳೆಹಣ್ಣು ಹೊತ್ತು ಸಾಗುವ ವಾಹನಗಳೇ ಈ ಆನೆಯ ಮುಖ್ಯ ಗುರಿಯಾಗಿದ್ದು, ನಡುರಸ್ತೆಯಲ್ಲೇ ವಾಹನಗಳನ್ನು ತಡೆದು ನಿಲ್ಲಿಸುತ್ತಿದೆ. ಇದರಿಂದಾಗಿ ಪುಣಜನೂರಿನಿಂದ ತಮಿಳುನಾಡಿನ ಅಸನೂರು ರಸ್ತೆ ಭಾಗದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಅರಣ್ಯ ಇಲಾಖೆ ಈ ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಈ ಮಧ್ಯೆ, ಕಡೂರು ತಾಲೂಕಿನ ರಂಗೇನಹಳ್ಳಿ ಗ್ರಾಮದಲ್ಲಿ ಜನರ ಆತಂಕಕ್ಕೆ ಕಾರಣವಾಗಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

ಕೇವಲ 1 ರೂಪಾಯಿ ಸಂಭಾವನೆ ಪಡೆದು ಹೆಚ್​ಐವಿ ಪೀಡಿತನ ಪಾತ್ರ ಮಾಡಿದ್ದ ಸಲ್ಮಾನ್ ಖಾನ್ – Kannada News | Salman Khan acted in Phir Milenge by getting Rs 1 as remuneration

ನಟ ಸಲ್ಮಾನ್ ಖಾನ್ (Salman Khan) ಅವರು ಪ್ರತಿ ಸಿನಿಮಾಗೆ ನೂರಾರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಹಿಂದಿ ಚಿತ್ರರಂಗದಲ್ಲಿ ಅವರು ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರ ಕೆಲವು ಸಿನಿಮಾಗಳು ಸೋತಿದ್ದರೂ ಕೂಡ ಬೇಡಿಕೆ ಕಡಿಮೆ ಆಗಿಲ್ಲ. ಇತ್ತೀಚೆಗೆ ಅವರು 60ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಈ ವೇಳೆ ಸಲ್ಮಾನ್ ಖಾನ್ ಕುರಿತ ಕೆಲವು ಇಂಟರೆಸ್ಟಿಂಗ್ ವಿಷಯಗಳು ವೈರಲ್ ಆಗಿವೆ. 2004ರಲ್ಲಿ ಹೆಚ್​ಐವಿ (HIV) ಪೀಡಿತ ವ್ಯಕ್ತಿಯ ಪಾತ್ರ ಮಾಡಲು ಸಲ್ಮಾನ್ ಖಾನ್ ಕೇವಲ 1 ರೂಪಾಯಿ ಸಂಭಾವನೆ (Salman Khan Remuneration) ಪಡೆದಿದ್ದರು!

2004ರ ವೇಳೆಗೆ ಸಲ್ಮಾನ್ ಖಾನ್ ಅವರು ಸೂಪರ್ ಸ್ಟಾರ್ ಆಗಿದ್ದರು. ಆದರೂ ಕೂಡ ಅವರು ಇಂಥ ಪಾತ್ರವನ್ನು ಮಾಡಲು ಒಪ್ಪಿಕೊಂಡಿದ್ದರು. 2004ರಲ್ಲಿ ತೆರೆಕಂಡ ‘ಫಿರ್ ಮಿಲೇಂಗೆ’ ಸಿನಿಮಾಗೆ ರೇವತಿ ಅವರು ನಿರ್ದೇಶನ ಮಾಡಿದ್ದರು. ಆ ಸಿನಿಮಾಗೆ ಮುಕೇಶ್ ಉದಾಸಿ ಮತ್ತು ಶೈಲೇಂದ್ರ ಸಿಂಗ್ ಬಂಡವಾಳ ಹೂಡಿದ್ದರು. ಆ ಸಿನಿಮಾ ಬಗ್ಗೆ ಶೈಲೇಂದ್ರ ಸಿಂಗ್ ಮಾತನಾಡಿದ ವಿಡಿಯೋ ಈಗ ವೈರಲ್ ಆಗಿದೆ.

‘ಆ ಸಿನಿಮಾಗೆ ಸಲ್ಮಾನ್ ಖಾನ್ ಅವರು ಕೇವಲ 1 ರೂಪಾಯಿ ಸಂಭಾವನೆ ಪಡೆದಿದ್ದರು. ಚಿತ್ರದ ಕ್ಲೈಮ್ಯಾಕ್ಸ್​​ನಲ್ಲಿ ಆ ಪಾತ್ರ ಸಾಯುತ್ತದೆ. ಭಾರತದ ಜನತೆಗೆ, ಅದರಲ್ಲೂ ಯುವಜನರಿಗೆ ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆ ಸಿನಿಮಾ ಮಾಡಿದರು. ಸಲ್ಮಾನ್ ಖಾನ್ ಅವರು ಅಂದಿಗೂ, ಇಂದಿಗೂ ಭಾರತದ ಅತಿ ದೊಡ್ಡ ಯೂತ್ ಐಕಾನ್’ ಎಂದು ಶೈಲೇಂದ್ರ ಸಿಂಗ್ ಹೇಳಿದ್ದಾರೆ.

‘ಈ ಪಾತ್ರ ಮಾಡಲು ಇಡೀ ಹಿಂದಿ ಚಿತ್ರರಂಗದ ಎಲ್ಲ ನಟರು ನೋ ಎಂದಿದ್ದರು. ಆ ದಿನ ನಾನು ಸಲ್ಮಾನ್ ಖಾನ್ ಅವರಿಗೆ ಕರೆ ಮಾಡಿದೆ’ ಎಂದು ಆ ದಿನವನ್ನು ಶೈಲೇಂದ್ರ ಸಿಂಗ್ ಅವರು ನೆನಪಿಸಿಕೊಂಡಿದ್ದಾರೆ. ಆ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಹಿಟ್ ಆಗಲಿಲ್ಲ ಎಂಬುದು ಬೇರೆ ಮಾತು. ಆದರೆ ಸಮಾಜಕ್ಕೆ ಜಾಗೃತಿ ಸಂದೇಶ ನೀಡಬೇಕು ಎಂಬ ಕಾರಣಕ್ಕೆ ಸಲ್ಮಾನ್ ಖಾನ್ ಅವರು ಅಂದು ತೆಗೆದುಕೊಂಡ ನಿರ್ಧಾರವನ್ನು ಈಗಲೂ ಎಲ್ಲರೂ ಮೆಚ್ಚಿಕೊಳ್ಳುತ್ತಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಫಾರ್ಮ್​ ಹೌಸ್ ಒಳಗೆ ಪಾರ್ಟಿ ಹೇಗೆ ನಡೆಯುತ್ತೆ? ವಿವರಿಸಿದ ನಟಿ

‘ಸಲ್ಮಾನ್ ಖಾನ್ ಅವರು ಸ್ಟಾರ್ ಆಗಿದ್ದಾಗ ಹೆಚ್​ಐವಿ ಕುರಿತ ಸಿನಿಮಾದಲ್ಲಿ ನಟಿಸಲು ಅವರನ್ನು ಒಪ್ಪಿಸುವುದು ಹೇಗೆ ಅಂತ ಕಲ್ಪಿಸಿಕೊಳ್ಳಿ. ಹೆಚ್​ಐವಿ ಬಂದು ಹೀರೋ ಕ್ಲೈಮ್ಯಾಕ್ಸ್​​ನಲ್ಲಿ ಸಾಯುತ್ತಾನೆ. ಅದರಿಂದ ಸಲ್ಮಾನ್ ಖಾನ್ ಅವರ ಅಭಿಮಾನಿಗಳಿಗೆ ಖುಷಿ ಆಗಲಿಲ್ಲ. ಆದರೆ ಆ ಸಿನಿಮಾದ ಸಂದೇಶ ಇಡೀ ದೇಶಕ್ಕೆ ತಲುಪಿತು. ಫಿರ್ ಮಿಲೇಂಗೆ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದು ಮಾತ್ರವಲ್ಲದೇ ಸ್ಯಾಟಲೈಟ್, ಕಿರುತೆರೆ ಮತ್ತು ಕೇಬಲ್ ಮೂಲಕ ಎಲ್ಲ ಕಡೆಗಳಿಗೆ ತಲುಪಿತು’ ಎಂದಿದ್ದಾರೆ ಶೈಲೇಂದ್ರ ಸಿಂಗ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಮಗುವನ್ನು ಆಟೋದಲ್ಲಿ ಕೂರಿಸಿ ಬಾರ್​ಗೆ ಕುಡಿಯಲು ಹೋದ ಮಹಿಳೆ – Kannada News | Viral Video From Gurugram Raises Child Safety Concerns

ಗುರುಗ್ರಾಮ, ಡಿಸೆಂಬರ್ 28: ಮಗುವನ್ನು ಆಟೋದಲ್ಲಿ ಕೂರಿಸಿ ತಾಯಿಯೊಬ್ಬಳು ಹತ್ತಿರದ ಬಾರ್​ಗೆ ಕುಡಿಯಲು ಹೋಗಿದ್ದ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಇ-ಆಟೋದಲ್ಲಿ ತನ್ನ 4 ವರ್ಷದ ಮಗನನ್ನು ಕೂರಿಸಿ ಆಕೆ ಬಾರ್​ಗೆ ಕುಡಿಯಲು ಹೋಗಿದ್ದಳು. ಪೊಲೀಸ್ ಸಿಬ್ಬಂದಿ ಬಾಲಕನನ್ನು ಗಮನಿಸಿದ್ದಾರೆ ಮತ್ತು ಸುರಕ್ಷಿತವಾಗಿ ಬಾಲಕನನ್ನು ಮನೆಗೆ ಸೇರಿಸಿದ್ದಾರೆ. ಮಹಿಳೆ ತನ್ನ ಮಗನೊಂದಿಗೆ ಇ-ರಿಕ್ಷಾವನ್ನು ಬಾಡಿಗೆಗೆ ಪಡೆದಿದ್ದಳು ಮತ್ತು ಹತ್ತಿರದ ಬಾರ್‌ಗೆ ಹೋಗುವಾಗ ಮಗುವಿನೊಂದಿಗೆ ಕಾಯಲು ಚಾಲಕನನ್ನು ಕೇಳಿಕೊಂಡಿದ್ದಳು. ಮಗುವಿನ ಸುರಕ್ಷತೆಯ ಬಗ್ಗೆ ಕಳವಳಗೊಂಡ ಇ-ರಿಕ್ಷಾ ಚಾಲಕ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿದರು.

ಪೊಲೀಸ್ ಅಧಿಕಾರಿಗಳು ತಕ್ಷಣ ಪ್ರತಿಕ್ರಿಯಿಸಿ ಅಲ್ಲಿಗೆ ಬಂದು ವಿಚಾರಣೆ ನಡೆಸಿದ್ದಾರೆ.ಪೊಲೀಸ್ ಅಧಿಕಾರಿಗಳು ಮಗುವನ್ನು ಮಹಿಳೆಗೆ ಹಸ್ತಾಂತರಿಸುವ ಮೊದಲು ಮಹಿಳೆಯೊಂದಿಗೆ ಮಾತನಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆಕೆ ಕಂಠಪೂರ್ತಿ ಕುಡಿದಿದ್ದಳು. ಇ-ರಿಕ್ಷಾ ಚಾಲಕನ ಜಾಗರೂಕತೆ ಮತ್ತು ಪೊಲೀಸರ ತ್ವರಿತ ಪ್ರತಿಕ್ರಿಯೆಯನ್ನು ಹಲವರು ಶ್ಲಾಘಿಸಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Video: ದೆಹಲಿಗಿಂತ ಬೆಂಗಳೂರು ಬೆಸ್ಟ್, ಈ ನಗರವನ್ನೇ ರಾಷ್ಟ್ರ ರಾಜಧಾನಿ ಮಾಡಿ ಎಂದ ಯುವತಿ – Kannada News | Delhi woman says make Bengaluru the national capital

ಬೆಂಗಳೂರು, ಡಿಸೆಂಬರ್ 28: ರಾಷ್ಟ್ರ ರಾಜಧಾನಿ ಯಾವುದೆಂದು ಕೇಳಿದ್ರೆ ಮೊದಲು ನೆನಪಿಗೆ ಬರೋದೇ ದೆಹಲಿ. ಆದರೆ ದೆಹಲಿಯ ಯುವತಿಯು (young woman) ಬೆಂಗಳೂರನ್ನು (Bengaluru) ದೇಶದ ರಾಜಧಾನಿಯಾಗಿ ಮಾಡಬೇಕು ಎಂದು ಹೇಳಿದ್ದಾಳೆ. ಬೆಂಗಳೂರಿಗೆ ಸ್ಥಳಾಂತರಗೊಂಡ ಬಳಿಕ ಇಲ್ಲಿನ ಉತ್ತಮ ಗುಣಮಟ್ಟದ ಜೀವನ, ವಾಯುಗುಣಮಟ್ಟ, ಸುರಕ್ಷತೆ ಹಾಗೂ ರಸ್ತೆ ಈ ಎಲ್ಲವನ್ನು ಹತ್ತಿರದಿಂದ ಗಮನಿಸಿ ಈ ಮಾತನ್ನು ಹೇಳಿದ್ದಾಳೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸಮೃದ್ಧಿ ಮಖಿಜಾ (simridhimakhija) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ದೆಹಲಿ ಮೂಲದ ಯುವತಿಯೊಬ್ಬಳು ಬೆಂಗಳೂರಿನ ಜೀವನದ ಬಗ್ಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದನ್ನು ನೋಡಬಹುದು. ಎರಡು ತಿಂಗಳ ಹಿಂದೆ ಬೆಂಗಳೂರಿಗೆ ಸ್ಥಳಾಂತರಗೊಂಡಿರುವುದಾಗಿ ಹೇಳಿಕೊಂಡಿದ್ದಾಳೆ. ತನ್ನ ಹೆತ್ತವರನ್ನು ಕಾಣಲು ದೆಹಲಿಗೆ ಹೋದ ಬಳಿಕ ತನ್ನ ಈ ಆಲೋಚನೆಗಳು ಮತ್ತಷ್ಟು ಬಲಗೊಂಡವು. ದೆಹಲಿಯ ಗಾಳಿಯು ಕೆಟ್ಟದಾಗಿರುವಂತೆ ಅನಿಸಿತು. ಉಸಿರಾಟ ಕಷ್ಟವಾಯಿತು.ಅಕ್ಷರಶಃ ಗ್ಯಾಸ್ ಚೇಂಬರ್‌ನಲ್ಲಿರುವಂತೆ ಆಯಿತು. ಆದರೆ ಬೆಂಗಳೂರಿನಲ್ಲಿ ಈ ಸಮಸ್ಯೆ ಇಲ್ಲ. ಹೀಗಾಗಿ ದೆಹಲಿಗಿಂತ ಬೆಂಗಳೂರೇ ರಾಜಧಾನಿಯಾಗಲು ಅರ್ಹವಾಗಿದೆ ಎಂದಿದ್ದಾಳೆ.

ವೈರಲ್‌ ವಿಡಿಯೋ ಇಲ್ಲಿದೆ ನೋಡಿ

ಈ ನಗರವು ರಾತ್ರಿ ಕೂಡ ಮಹಿಳೆಯರಿಗೆ ಸುರಕ್ಷಿತವಾಗಿದೆ. ಸ್ನೇಹಿತರನ್ನು ಭೇಟಿಯಾಗಿ, ರಾತ್ರಿ 10 ಗಂಟೆಗೆ ಒಬ್ಬಳೇ ಮನೆಗೆ ಹೋಗುವಾಗ ನನಗೆ ಒಂದೊಳ್ಳೆ ಅನುಭವವಾಯಿತು. ದೆಹಲಿಯಲ್ಲಿ ಇಂತಹ ಅನುಭವವಾಗಲ್ಲ. ಬೆಂಗಳೂರಿಗೆ ಹೆಚ್ಚು ಆದ್ಯತೆ ಕೊಡಲು ಇದೂ ಕೂಡ ಪ್ರಮುಖ ಕಾರಣವಾಗಿದೆ ಎಂದು ಹೇಳಿದ್ದಾಳೆ.

ದೆಹಲಿಗಿಂತ ಬೆಂಗಳೂರಿನ ಮೂಲಸೌಕರ್ಯ, ನಗರ ವ್ಯವಸ್ಥೆ ಮತ್ತು ರಸ್ತೆಗಳು ಉತ್ತಮವಾಗಿದೆ. ಪಾದಚಾರಿಗಳಿಗೆ ಹೆಚ್ಚು ಅನುಕೂಲಕರವಾಗಿದೆ. ಭಾರತಕ್ಕೆ ಬರುವ ಪ್ರವಾಸಿಗರು ಕಲುಷಿತಗೊಂಡ ದೆಹಲಿಗೆ ಏಕೆ ಬರಬೇಕು?. ಬೆಂಗಳೂರಿಗೆ ಬಂದ ಉತ್ತಮ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವುದನ್ನು ಕಾಣಬಹುದು.

ಇದನ್ನೂ ಓದಿ:ಹಬ್ಬದ ದಿನ ಬೆಂಗಳೂರಿಗೆ ಬರುವಾಗ ಖಾಲಿ ಖಾಲಿ, ಆದರೆ ಹೊರಗೆ ಹೋಗುವಾಗ ಹೇಗಿರುತ್ತದೆ ನೋಡಿ?

ಈ ವಿಡಿಯೋ ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನೀವು ಹೇಳುವುದನ್ನು ನಾವು ಒಪ್ಪುತ್ತೇವೆ ಎಂದರೆ, ಮತ್ತೊಬ್ಬರು ನಾನು ಬೆಂಗಳೂರಿಗ. ಈ ಯುವತಿ ಹೇಳುವಂತೆ ಬೆಂಗಳೂರು ಅಷ್ಟೇನು ಚೆನ್ನಾಗಿಲ್ಲ. ನೀವು ಹೈದರಾಬಾದ್, ಚೆನ್ನೈ, ಪುಣೆಯನ್ನು ಆಯ್ಕೆ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಇನ್ನೊಬ್ಬರು, ಪ್ರಾಮಾಣಿಕ ಅಭಿಪ್ರಾಯ ಹೇಳಿದ್ದೀರಾ, ನೀವು ಗಮನಿಸಿದ್ದಕ್ಕೆ ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:07 pm, Sun, 28 December 25

Source link

Mann Ki Baat: ಬೆಂಗಳೂರಿನ ಐಐಎಸ್​ಸಿಯನ್ನು ಹಾಡಿಹೊಗಳಿದ ಪ್ರಧಾನಿ ಮೋದಿ – Kannada News | Mann ki Baat:From Operation Sindoor to Sports Glory: PM Modi Highlights India’s 2025 Milestones

ಬೆಂಗಳೂರು, ಡಿಸೆಂಬರ್ 28: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(IISc)ಯಲ್ಲಿ ಕೇವಲ ವಿಜ್ಞಾನವನ್ನು ಕಲಿಸುವುದು ಮಾತ್ರವಲ್ಲದೆ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಿಸುವ ಸಂಗೀತ ತರಗತಿಗಳನ್ನು ಕೂಡ ನಡೆಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮನ್​ ಕಿ ಬಾತ್(Mann Ki baat)​ನಲ್ಲಿ ಹೇಳಿದ್ದಾರೆ. ಪ್ರತಿಷ್ಠಿತ ಸಂಶೋಧನಾ ವಿಶ್ವವಿದ್ಯಾಲಯದಲ್ಲಿ ವಿಜ್ಞಾನದ ಜೊತೆಗೆ ಸಂಗೀತವನ್ನು ಕೂಡ ಆರಾಧಿಸಲಾಗುತ್ತದೆ. ವಿಜ್ಞಾನದ ಜತೆಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕಲಿಸಲಾಗುತ್ತದೆ. ಐಐಎಸ್ಸಿಯಲ್ಲಿ ವಿಜ್ಞಾನ ಮತ್ತು ಸಂಗೀತ ಹೇಗೆ ಒಟ್ಟಿಗೆ ಅಭಿವೃದ್ಧಿ ಹೊಂದಬಹುದು ಎಂಬುದನ್ನು ಸಾಬೀತುಪಡಿಸುತ್ತದೆ.

2025 ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುವ ಹಲವು ಕ್ಷಣಗಳನ್ನು ನಮಗೆ ನೀಡಿದೆ. ರಾಷ್ಟ್ರೀಯ ಭದ್ರತೆಯಿಂದ ಕ್ರೀಡಾ ಕ್ಷೇತ್ರದವರೆಗೆ, ವಿಜ್ಞಾನ ಪ್ರಯೋಗಾಲಯಗಳಿಂದ ವಿಶ್ವದ ಅತಿದೊಡ್ಡ ವೇದಿಕೆಗಳವರೆಗೆ, ಭಾರತವು ಎಲ್ಲೆಡೆ ಬಲವಾದ ಛಾಪು ಮೂಡಿಸಿದೆ.

ಆಪರೇಷನ್ ಸಿಂಧೂರ್

ಆಪರೇಷನ್ ಸಿಂಧೂರ್ ಬಗ್ಗೆ ಉಲ್ಲೇಖಿಸಿದ ಪ್ರಧಾನಿ ಮೋದಿ, ಈ ವರ್ಷ ಆಪರೇಷನ್ ಸಿಂಧೂರ್ ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ಸಂಕೇತವಾಯಿತು. ಇಂದಿನ ಭಾರತ ತನ್ನ ಭದ್ರತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದನ್ನು ಇಡೀ ಜಗತ್ತು ಕಂಡಿತ್ತು. ವಂದೇ ಮಾತರಂ 150 ವರ್ಷಗಳನ್ನು ಪೂರೈಸಿದಾಗಲೂ ಅದೇ ಭಾವನೆ ಕಂಡುಬಂದಿತ್ತು.

ಕ್ರಿಕೆಟ್

ಪುರುಷರ ಕ್ರಿಕೆಟ್ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದರೆ, ಮಹಿಳಾ ಕ್ರಿಕೆಟ್ ತಂಡ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿತು. ಭಾರತದ ಹೆಣ್ಣುಮಕ್ಕಳು ಮಹಿಳಾ ಅಂಧರ ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದರು. ಏಷ್ಯಾ ಕಪ್ ಟಿ20ಯಲ್ಲೂ ತ್ರಿವರ್ಣ ಧ್ವಜ ಹೆಮ್ಮೆಯಿಂದ ಹಾರಿತು ಎಂದು ಹೇಳಿದರು.

ತಮಿಳು ಕರಕಲಂ

ಈ ವರ್ಷ, ವಾರಾಣಸಿಯಲ್ಲಿ ನಡೆದ ‘ಕಾಶಿ ತಮಿಳು ಸಮಾಗಮ’ ಸಂದರ್ಭದಲ್ಲಿ, ತಮಿಳು ಕಲಿಕೆಗೆ ವಿಶೇಷ ಒತ್ತು ನೀಡಲಾಯಿತು. ‘ತಮಿಳು ಕಲಿಯಿರಿ – ತಮಿಳು ಕರಕಲಂ’ ಎಂಬ ವಿಷಯದ ಅಡಿಯಲ್ಲಿ, ವಾರಣಾಸಿಯ 50 ಕ್ಕೂ ಹೆಚ್ಚು ಶಾಲೆಗಳಲ್ಲಿ ವಿಶೇಷ ಅಭಿಯಾನಗಳನ್ನು ನಡೆಸಲಾಯಿತು. ತಮಿಳು ವಿಶ್ವದ ಅತ್ಯಂತ ಹಳೆಯ ಭಾಷೆ. ಇಂದು, ದೇಶದ ಇತರ ಭಾಗಗಳಲ್ಲಿ, ಯುವಕರು ಮತ್ತು ಮಕ್ಕಳಲ್ಲಿ ತಮಿಳು ಕಡೆಗೆ ಹೊಸ ಆಕರ್ಷಣೆ ಕಾಣುತ್ತಿದೆ ಎಂದು ನನಗೆ ಸಂತೋಷವಾಗಿದೆ. ಇದು ಭಾಷೆಯ ಶಕ್ತಿ. ಇದು ಭಾರತದ ಏಕತೆ ಎಂದರು.

ಮತ್ತಷ್ಟು ಓದಿ: ದಕ್ಷಿಣ ಕನ್ನಡ ಹಾಗೂ ತುಮಕೂರಿನ ಜೇನುತುಪ್ಪದ ಸ್ವಾದವನ್ನು ಹಾಡಿಹೊಗಳಿದ ಪ್ರಧಾನಿ ಮೋದಿ

ಮುಂದಿನ ತಿಂಗಳು 12 ರಂದು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುವುದು. ಅದೇ ದಿನ ಯುವ ನಾಯಕರ ಸಂವಾದವನ್ನು ಸಹ ಆಯೋಜಿಸಲಾಗುವುದು. ಭಾರತ ವಿಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿಯೂ ಮಹತ್ತರವಾದ ಪ್ರಗತಿಯನ್ನು ಸಾಧಿಸಿದೆ.

ಶುಭಾಂಶು ಶುಕ್ಲಾ

ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ ಮೊದಲ ಭಾರತೀಯರಾದರು. ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆಗೆ ಸಂಬಂಧಿಸಿದ ಹಲವಾರು ಉಪಕ್ರಮಗಳು 2025 ಅನ್ನು ವಿಶೇಷವಾಗಿಸಿದವು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 11:58 am, Sun, 28 December 25

Source link

‘ಟಾಕ್ಸಿಕ್’ ಸಿನಿಮಾ: ಎಲಿಜಬೆತ್ ಪಾತ್ರದಲ್ಲಿ ಹುಮಾ ಖುರೇಷಿ; ಫಸ್ಟ್ ಲುಕ್ ರಿಲೀಸ್ – Kannada News | Yash starrer Toxic movie team released Huma Qureshi first Look poster

‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ‘ಟಾಕ್ಸಿಕ್’ (Toxic Movie) ಸಿನಿಮಾದಲ್ಲಿ ಹಲವು ಕಲಾವಿದರು ನಟಿಸುತ್ತಿದ್ದಾರೆ. ಸಿನಿಮಾದ ಬಿಡುಗಡೆಗೆ ಇನ್ನೂ ಹಲವು ದಿನಗಳು ಬಾಕಿ ಇವೆ. ಈಗಾಗಲೇ ಸಿನಿಮಾದ ಪ್ರಚಾರವನ್ನು ಭರ್ಜರಿಯಾಗಿ ಮಾಡಲಾಗುತ್ತಿದೆ. ಪಾತ್ರಗಳ ಪರಿಚಯವನ್ನು ಒಂದೊಂದಾಗಿಯೇ ಮಾಡಲಾಗುತ್ತಿದೆ. ಯಶ್ (Yash) ಜೊತೆ ಪರಭಾಷೆ ಕಲಾವಿದರ ದಂಡೇ ಈ ಸಿನಿಮಾದಲ್ಲಿ ಇರಲಿದೆ. ಕಿಯಾರಾ ಅಡ್ವಾಣಿ, ಹುಮಾ ಖುರೇಶಿ ಮುಂತಾದವರು ಈ ಸಿನಿಮಾದಲ್ಲಿದ್ದಾರೆ. ಈಗ ಹುಮಾ ಖುರೇಷಿ (Huma Qureshi) ಅವರ ಪಾತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಲಾಗಿದೆ.

ಹುಮಾ ಖುರೇಷಿ ಅವರು ‘ಟಾಕ್ಸಿಕ್’ ಸಿನಿಮಾದಲ್ಲಿ ಎಲಿಜಬೆತ್ ಎಂಬ ಪಾತ್ರ ಮಾಡುತ್ತಿದ್ದಾರೆ. ಹೆಸರಿಗೆ ತಕ್ಕಂತೆಯೇ ಈ ಪಾತ್ರ ಸಖತ್ ರಿಚ್ ಆಗಿರಲಿದೆ. ರೆಟ್ರೋ ಕಾಲದ ಐಷಾರಾಮಿ ಕಾರಿನ ಎದುರಿನಲ್ಲಿ ಗ್ಲಾಮರಸ್ ಡ್ರೆಸ್ ಧರಿಸಿ ನಿಂತಿರುವ ಹುಮಾ ಖುರೇಷಿ ಅವರ ಲುಕ್ ಗಮನ ಸೆಳೆಯುತ್ತಿದೆ. ಇದನ್ನು ನೋಡಿದ ಬಳಿಕ ಅಭಿಮಾನಿಗಳ ನಿರೀಕ್ಷೆ ಇನ್ನಷ್ಟು ಜಾಸ್ತಿ ಆಗಿದೆ.

ಬಾಲಿವುಡ್​​ನಲ್ಲಿ ಸಾಕಷ್ಟು ಹೆಸರು ಮಾಡಿರುವ ಹುಮಾ ಖುರೇಷಿ ಅವರಿಗೆ ಈಗ 39 ವರ್ಷ ವಯಸ್ಸು. ಸಿನಿಮಾಗಳಲ್ಲಿ ಮಾತ್ರವಲ್ಲದೇ ವೆಬ್ ಸಿರೀಸ್​​ಗಳಲ್ಲಿ ಕೂಡ ನಟಿಸಿ ಅವರು ಫೇಮಸ್ ಆಗಿದ್ದಾರೆ. ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸುವ ಅವಕಾಶ ಅವರಿಗೆ ಸಿಕ್ಕಿದೆ. ಆ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಂತೆ ಆಗಿದೆ. ಈ ಸಿನಿಮಾ ಮಾರ್ಚ್ 19ರಂದು ರಿಲೀಸ್ ಆಗಲಿದೆ.

ಏಕಕಾಲಕ್ಕೆ ಕನ್ನಡ ಮತ್ತು ಇಂಗ್ಲಿಷ್​​ನಲ್ಲಿ ‘ಟಾಕ್ಸಿಕ್’ ಸಿನಿಮಾ ನಿರ್ಮಾಣ ಆಗುತ್ತಿದೆ. ಇನ್ನುಳಿದ ಭಾಷೆಗಳಿಗೆ ಡಬ್ ಆಗುತ್ತಿದೆ. ಬೃಹತ್ ಬಜೆಟ್​​ನಲ್ಲಿ ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆ ಈ ಸಿನಿಮಾವನ್ನು ನಿರ್ಮಿಸುತ್ತಿದೆ. ಯಶ್, ನಯನತಾರಾ, ಕಿಯಾರಾ ಅಡ್ವಾಣಿ, ಅಕ್ಷಯ್ ಒಬೆರಾಯ್, ತಾರಾ ಸುತಾರಿಯಾ, ಟೊವಿನೋ ಥಾಮಸ್, ರುಕ್ಮಿಣಿ ವಸಂತ್ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರದಿಂದ ನಟಿ ಕಿಯಾರಾ ಅಡ್ವಾಣಿ ಫಸ್ಟ್ ಲುಕ್ ಬಿಡುಗಡೆ

ಕೆಲವೇ ದಿನಗಳ ಹಿಂದೆ ನಟಿ ಕಿಯಾರಾ ಅಡ್ವಾಣಿ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಈ ಸಿನಿಮಾದಲ್ಲಿ ಅವರು ನಾಡಿಯಾ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ಗೀತು ಮೋಹನ್​ದಾಸ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ‘ಕೆಜಿಎಫ್: ಚಾಪ್ಟರ್ 2’ ಬಳಿಕ ಯಶ್ ಒಪ್ಪಿಕೊಂಡ ಸಿನಿಮಾ ಎಂಬ ಕಾರಣಕ್ಕೆ ‘ಟಾಕ್ಸಿಕ್’ ಮೇಲೆ ಬೆಟ್ಟದಷ್ಟು ನಿರೀಕ್ಷೆ ಸೃಷ್ಟಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:50 am, Sun, 28 December 25

Source link

ಮಂತ್ರಾಲಯಕ್ಕೂ ತಟ್ಟಿದ ಭಾಷಾ ವಿವಾದದ ಕಿಚ್ಚು, ಇದು ಕಿಡಿಗೇಡಿಗಳ ಕೃತ್ಯವೆಂದ ಭಕ್ತರು – Kannada News | Rayara Matha Kannada Controversy: Bhagyavanta Film Proves Historical Link

ರಾಯಚೂರು, ಡಿಸೆಂಬರ್ 28: ಆಂಧ್ರ ಗಡಿಯ ಮಂತ್ರಾಲಯದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದ ಫಲಕವೊಂದರ ವಿಚಾರದಲ್ಲಿ ಭಾಷಾ ವಿವಾದದ ಕಿಡಿ ಹೊತ್ತಿದ್ದು, ಮಠದ ಮುಖ್ಯ ದ್ವಾರದಲ್ಲಿ ಕನ್ನಡದಲ್ಲಿ ಬರೆಯಲಾಗಿರುವ ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ ಎಂಬ ಶ್ಲೋಕದ ಫಲಕಕ್ಕೆ ತೆಲುಗು ಭಾಷಿಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮಂತ್ರಾಲಯವು ಆಂಧ್ರದ ಕರ್ನೂಲು ಜಿಲ್ಲೆಗೆ ಸೇರಿದ್ದು, ಇಲ್ಲಿ ತೆಲುಗು ಭಾಷೆಯಲ್ಲಿ ಫಲಕ ಇರಬೇಕೆಂದು ಬರೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಆಂಧ್ರಪ್ರದೇಶ ಸಿಎಂ ಮತ್ತು ಉಪಮುಖ್ಯಮಂತ್ರಿಗಳಿಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.

ಇದೀಗ ಈ ಕುರಿತು ಸ್ಪಷ್ಟನೆ ನೀಡಿರುವ ರಾಯರ ಭಕ್ತರು, ರಾಯರ ಕಾರ್ಯವ್ಯಾಪ್ತಿ ಕನ್ನಡದಲ್ಲೇ ಹೆಚ್ಚಿದೆ.ಎಲ್ಲಾ ಭಾಷೆಗೆ ಅವರ ಕೊಡುಗೆಯಿದೆ. ಎಲ್ಲಾ ಭಾಷೆಯಲ್ಲಿಯೂ ಅವರ ಭಕ್ತರಿದ್ದಾರೆ.  50 ಕ್ಕೂ ಹೆಚ್ಚು ವರ್ಷಗಳ ಹಿಂದೆಯೇ ಶ್ಲೋಕ ಕನ್ನಡದಲ್ಲಿಯೇ ಇತ್ತು. 1981ರ ಭಾಗ್ಯವಂತ ಸಿನಿಮಾದ ದೃಶ್ಯಾವಳಿಗಳಲ್ಲಿ ಇದಕ್ಕೆ ಸಾಕ್ಷಿಯಿದೆ. ಅಂದು ಇಲ್ಲದ ಸಮಸ್ಯೆ ಇಂದು ಭುಗಿಲೆದ್ದಿರುವುದು ಕಿಡಿಗೇಡಿಗಳ ಹುನ್ನಾರವೆಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವಿಕೆಟ್ ಕೀಪರ್ ಬದಲಿಗೆ ಟೀಮ್ ಇಂಡಿಯಾಗೆ ಎಡಗೈ ದಾಂಡಿಗನ ಎಂಟ್ರಿ – Kannada News | Ishan Kishan is likely to be picked India’s ODI Squad

ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದೆ. ಈ ಬದಲಾವಣೆಯೊಂದಿಗೆ ಎಡಗೈ ದಾಂಡಿಗ ಇಶಾನ್ ಕಿಶನ್ ಭಾರತ ಏಕದಿನ ತಂಡಕ್ಕೂ ಮರಳಲಿದ್ದಾರೆ ಎಂದು ವರದಿಯಾಗಿದೆ. ಆದರೆ ಇಶಾನ್ ಕಿಶನ್ ಅವರ ಆಯ್ಕೆಯಿಂದ ಹೊರಬೀಳಲಿರುವುದು ರಿಷಭ್ ಪಂತ್ ಎಂಬುದು ಅಚ್ಚರಿ.

ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರನ್ನು ಕೈ ಬಿಡಲು ಬಿಸಿಸಿಐ ಆಯ್ಕೆ ಸಮಿತಿ ಚಿಂತಿಸಿದೆ ಎಂದು ವರದಿಯಾಗಿದೆ. ಬದಲಿಗೆ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಲು ಉತ್ಸುಕರಾಗಿದ್ದಾರೆ.

ಇಶಾನ್ ಕಿಶನ್ ಭರ್ಜರಿ ಫಾರ್ಮ್​ನಲ್ಲಿದ್ದು, ಈ ಫಾರ್ಮ್ ಕಾರಣದಿಂದಲೇ ಅವರು ಟಿ20 ವಿಶ್ವಕಪ್​ಗೆ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ ವಿಜಯ ಹಝಾರೆ ಟೂರ್ನಿಯಲ್ಲೂ ಕೇವಲ 33 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. ಅದು ಕೂಡ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದು ಎಂಬುದು ಇಲ್ಲಿ ಉಲ್ಲೇಖಾರ್ಹ.

ಈ ಸ್ಫೋಟಕ ಇನಿಂಗ್ಸ್ ಬೆನ್ನಲ್ಲೇ ಇಶಾನ್ ಕಿಶನ್​ಗೆ ಭಾರತ ಏಕದಿನ ತಂಡದಲ್ಲೂ ಸ್ಥಾನ ನೀಡುವ ಬಗ್ಗೆ ಆಲೋಚಿಸಲಾಗಿದೆ. ಇತ್ತ ಇಶಾನ್ ಅವರನ್ನು ಆಯ್ಕೆ ಮಾಡಬೇಕಿದ್ದರೆ ಪಂತ್ ಅವರನ್ನು ಕೈ ಬಿಡಲೇಬೇಕು. ಏಕೆಂದರೆ ಇಬ್ಬರೂ ಸಹ ವಿಕೆಟ್ ಕೀಪರ್ ಬ್ಯಾಟರ್​ಗಳು.

ಅತ್ತ ಇಶಾನ್ ಕಿಶನ್ ಆರಂಭಿಕ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಚಾಕಚಕ್ಯತೆಯನ್ನು ಹೊಂದಿದ್ದಾರೆ. ಹೀಗಾಗಿ ಅವರ ಆಯ್ಕೆಯಿಂದ ವಿಕೆಟ್ ಕೀಪರ್, ಫಿನಿಶರ್ ಹಾಗೂ ಓಪನರ್ ಸ್ಥಾನಗಳನ್ನು ತುಂಬಬಹುದು. ಹೀಗಾಗಿ ರಿಷಭ್ ಪಂತ್ ಬದಲಿಗೆ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ.

ಅಷ್ಟೇ ಅಲ್ಲದೆ ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ಕೆಎಲ್ ರಾಹುಲ್ ಅವರನ್ನು ವಿಕೆಟ್ ಕೀಪರ್ ಬ್ಯಾಟರ್ ಆಗಿ ಆಯ್ಕೆ ಮಾಡಿದರೂ ಇಶಾನ್ ಕಿಶನ್ ಅವರನ್ನು ಫಿನಿಶರ್ ರೂಪದಲ್ಲಿ ಕಣಕ್ಕಿಳಿಸುವ ಅವಕಾಶ ಕೂಡ ದೊರೆಯಲಿದೆ. ಹೀಗಾಗಿ ಕಿವೀಸ್ ವಿರುದ್ಧದ ಸರಣಿಯಲ್ಲಿ ಇಶಾನ್ ಕಿಶನ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ನ್ಯೂಝಿಲೆಂಡ್ ವಿರುದ್ಧದ ಸರಣಿಗೆ ಭಾರತದ ಸಂಭಾವ್ಯ ತಂಡ: ಶುಭ್​ಮನ್ ಗಿಲ್ (ನಾಯಕ), ಶ್ರೇಯಸ್ ಅಯ್ಯರ್ (ಉಪನಾಯಕ) , ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್,  ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್.

ಇದನ್ನೂ ಓದಿ: ಜೋಶ್ ಟಂಗ್​ ಕರಾರುವಾಕ್ ದಾಳಿಯಿಂದ ಆಸ್ಟ್ರೇಲಿಯಾಗೆ 60 ಕೋಟಿ ರೂ. ನಷ್ಟ..!

ಭಾರತ vs ನ್ಯೂಝಿಲೆಂಡ್ ಏಕದಿನ ಸರಣಿ ವೇಳಾಪಟ್ಟಿ

  • ಮೊದಲ ಏಕದಿನ ಪಂದ್ಯ – ಜನವರಿ 11 – ವಡೋದರಾ – ಮಧ್ಯಾಹ್ನ 1:30
  • ಎರಡನೇ ಏಕದಿನ ಪಂದ್ಯ – ಜನವರಿ 14 – ರಾಜ್‌ಕೋಟ್ – ಮಧ್ಯಾಹ್ನ 1:30
  • ಮೂರನೇ ಏಕದಿನ ಪಂದ್ಯ – ಜನವರಿ 18 – ಇಂದೋರ್ – ಮಧ್ಯಾಹ್ನ 1:30

Source link