All posts by nagaraj11081993

ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನಲ್ಲಿ ಚಳಿಯೋ ಚಳಿ, ರಾಜ್ಯದಲ್ಲಿ ಮುಂದುವರೆದ ಒಣ ಹವೆ – Kannada News | Bengaluru temperature: misty weather in Bengaluru, Dry weather elsewhere

ಬೆಂಗಳೂರು, ಡಿಸೆಂಬರ್ 27: ಕರಾವಳಿ ಸೇರಿದಂತೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿಯೂ ತೀವ್ರ ಚಳಿಯ ಜೊತೆಗೆ ಒಣಹವೆಯಿರಲಿದೆ  (Weather Forecast) ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರಿನಲ್ಲಿ ಶೀತದೊಂದಿಗೆ ಮಂಜು ಕವಿದ ವಾತಾವರಣ ಇರಲಿದ್ದು, ಬೆಚ್ಚಗಿನ ಉಡುಪು ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಬೆಳಗಿನ ಸಮಯ ದಟ್ಟ ಮಂಜು ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ವಾಹನ ಸವಾರರು ಎಚ್ಚರಿಕೆಯಿಂದ ಚಾಲನೆ ಮಾಡಬೇಕೆಂದು ಸೂಚಿಸಲಾಗಿದೆ.

ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ

ಇಂದು ಬೆಂಗಳೂರಿನ ತಾಪಮಾನ ಕನಿಷ್ಠ 15°C ಇದ್ದು, ಗರಿಷ್ಠ 28°C ಇರಲಿದೆ ಎಂದು ಇಲಾಖೆ ತಿಳಿಸಿದೆ. ಈ ರೀತಿಯ ತೀವ್ರ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ. ಇಂದು ಎಂದಿನಂತೆ ಚಳಿಯ ಜೊತೆಗೆ ಮಂಜು ಮುಸುಕಿದ ವಾತಾವರಣವಿರುವುದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿರುವ ಹವಾಮಾನ ಇಲಾಖೆ, ಬೆಚ್ಚನೆಯ ಉಡುಪು ಧರಿಸುವುದರ ಜೊತೆಗೆ ಸಮತೋಲನ ಆಹಾರ ಸೇವನೆಗೆ ಒತ್ತು ನೀಡುವಂತೆ ಸಲಹೆ ನೀಡಿದೆ.

ಎಲ್ಲೆಲ್ಲಿ ಒಣ ಹವೆ

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

3 ಸಾವಿರ ಕೋಟಿ ಒಡೆಯ ಸಲ್ಮಾನ್ ಖಾನ್; ಹೂಡಿಕೆಗಳನ್ನು ನೋಡಿದ್ರೆ ತಲೆತಿರುಗುತ್ತೆ – Kannada News | Salman Khan Birthday Actor Net worth And Total Investments

ಸಲ್ಮಾನ್ ಖಾನ್ ಮೂರು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿದ್ದಾರೆ. ಅವರಿಗೆ ಇಂದು (ಡಿಸೆಂಬರ್ 27) ಜನ್ಮದಿನ.  ಕಳೆದ ಕೆಲವು ವರ್ಷಗಳಲ್ಲಿ, ಸಲ್ಮಾನ್ ಖಾನ್ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇದರಿಂದಾಗಿ ಅವರು ಇಂದು ಒಂದು ಬ್ರ್ಯಾಂಡ್ ಆಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಸಲ್ಮಾನ್ ಖಾನ್ 3000 ಕೋಟಿ ರೂಪಾಯಿಗಳ ಸಂಪತ್ತಿನ ಮಾಲೀಕರಾಗಿದ್ದಾರೆ. ಸಲ್ಮಾನ್ ಖಾನ್ ಚಲನಚಿತ್ರಗಳಲ್ಲಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುವುದಲ್ಲದೆ, ಟಿವಿಯಲ್ಲಿ ಪ್ರಸಿದ್ಧ ರಿಯಾಲಿಟಿ ಶೋ ಬಿಗ್ ಬಾಸ್‌ನ ಹಲವು ಸೀಸನ್‌ಗಳನ್ನು ಸಹ ನಡೆಸಿಕೊಟ್ಟಿದ್ದಾರೆ. ಇದಲ್ಲದೆ, ಸಲ್ಮಾನ್ ಖಾನ್ ಅನೇಕ ಬ್ರಾಂಡ್‌ಗಳ ಜಾಹೀರಾತುಗಳಲ್ಲಿಯೂ ಕಾಣಿಸಿಕೊಳ್ಳುತ್ತಾರೆ. ಸಲ್ಮಾನ್ ಭಾರತ ಮತ್ತು ದುಬೈನ ಅನೇಕ ಸುಂದರ ಸ್ಥಳಗಳಲ್ಲಿ ಐಷಾರಾಮಿ ಆಸ್ತಿಗಳನ್ನು ಖರೀದಿಸಿದ್ದಾರೆ. ಸಲ್ಮಾನ್ ಚಲನಚಿತ್ರ ನಿರ್ಮಾಣದಿಂದ ಹಿಡಿದು ಫಿಟ್‌ನೆಸ್ ಮತ್ತು ಅನೇಕ ಬ್ರಾಂಡ್‌ಗಳವರೆಗೆ ಭಾರಿ ಹೂಡಿಕೆ ಮಾಡಿದ್ದಾರೆ.

ಸಲ್ಮಾನ್ ಖಾನ್ ಸಿನಿಮಾಗಳು..

ಅವರು ಚಿತ್ರರಂಗಕ್ಕೆ 1988ರಲ್ಲಿ ಕಾಲಿಟ್ಟರು. ‘ಬೀವಿ ಹೋ ತೋ ಐಸಿ’ ಚಿತ್ರದಿಂದ ಅವರು ಬಣ್ಣದ ಬದುಕು ಆರಂಭಿಸಿದರು. ಅವರು ಪ್ರತಿ ಚಿತ್ರಕ್ಕೆ 100 ಕೋಟಿ ರೂಪಾಯಿಗೂ ಅಧಿಕ ಸಂಭಾವನೆ ಪಡೆಯುತ್ತಾರೆ. ಸಲ್ಮಾನ್ ಖಾನ್ ಕೇವಲ ಸಿನಿಮಾಗಳಲ್ಲಿ ನಟಿಸುವುದಲ್ಲದೆ ತಮ್ಮದೇ ಆದ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ. ಈ ಕಂಪನಿಯ ಹೆಸರು ಸಲ್ಮಾನ್ ಖಾನ್ ಫಿಲ್ಮ್ಸ್ ಮತ್ತು ಇದು 2011 ರಲ್ಲಿ ಪ್ರಾರಂಭವಾಯಿತು. ಈ ನಿರ್ಮಾಣ ಸಂಸ್ಥೆ ಅನೇಕ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನಿರ್ಮಿಸಿದೆ.

ಬೀಯಿಂಗ್ ಹ್ಯೂಮನ್

ಬೀಯಿಂಗ್ ಹ್ಯೂಮನ್ ಎಂಬುದು ಸಲ್ಮಾನ್ ಖಾನ್ ಅವರ ಬಟ್ಟೆ ಬ್ರಾಂಡ್ ಆಗಿದ್ದು, ಇದು ಜನರಲ್ಲಿ ಬಹಳ ಜನಪ್ರಿಯವಾಗಿದೆ. ಸಲ್ಮಾನ್ ಈ ಬಟ್ಟೆ ಬ್ರಾಂಡ್ ಅನ್ನು 2012 ರಲ್ಲಿ ಪ್ರಾರಂಭಿಸಿದರು. ಈ ಬ್ರ್ಯಾಂಡ್‌ನ ವಿಶೇಷತೆಯೆಂದರೆ ಅದು ದತ್ತಿ ಸಂಸ್ಥೆಗಳಿಗೆ ಕೊಡುಗೆ ನೀಡುತ್ತದೆ. ಅವರ ಬ್ರ್ಯಾಂಡ್ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ, ಮಧ್ಯಪ್ರಾಚ್ಯ ಮತ್ತು ಯುರೋಪ್‌ಗೂ ವಿಸ್ತರಿಸುತ್ತದೆ.

ಎಸ್.ಕೆ-27 ಜಿಮ್

ಸಲ್ಮಾನ್ ಅವರ ದೇಹ, ಅವರ ಫಿಟ್ನೆಸ್ ಲಕ್ಷಾಂತರ ಅಭಿಮಾನಿಗಳಿಗೆ ಸ್ಫೂರ್ತಿ ನೀಡಿದೆ. ಅದಕ್ಕಾಗಿಯೇ ಸಲ್ಮಾನ್ ಬಟ್ಟೆಗಳ ಜೊತೆಗೆ ಜಿಮ್ ಮತ್ತು ಫಿಟ್ನೆಸ್ ಉಪಕರಣಗಳ ಬ್ರಾಂಡ್‌ಗಳಲ್ಲಿಯೂ ಹೂಡಿಕೆ ಮಾಡಿದ್ದಾರೆ. ಸಲ್ಮಾನ್ ಖಾನ್ ದೊಡ್ಡ ಫಿಟ್ನೆಸ್ ಫ್ರೀಕ್. ಅವರು 2019 ರಲ್ಲಿ SK-27 ಜಿಮ್ ಎಂಬ ಫಿಟ್ನೆಸ್ ಕೇಂದ್ರಗಳನ್ನು ತೆರೆದರು.

ಫ್ರೆಶ್

ಫಿಟ್ನೆಸ್ ಜೊತೆಗೆ, ಸಲ್ಮಾನ್ ಖಾನ್ ಸ್ಕಿನ್ ಕೇರ್ ರೀತಿಯ ಬ್ರಾಂಡ್‌ಗಳಲ್ಲಿಯೂ ಹೂಡಿಕೆ ಮಾಡಿದ್ದಾರೆ. ಅವರು Scentials Beauty Care and Wellness Pvt. Ltd. ಜೊತೆ ಪಾಲುದಾರಿಕೆಯಲ್ಲಿ FRESH ಬ್ರ್ಯಾಂಡ್‌ನೊಂದಿಗೆ ಹೊಸ ಉದ್ಯಮವನ್ನು ಪ್ರಾರಂಭಿಸಿದ್ದಾರೆ.

ಯಾತ್ರಾ.ಕಾಮ್

ಸಲ್ಮಾನ್ ಖಾನ್ ಪ್ರಯಾಣ ಕಂಪನಿ ಯಾತ್ರಾ.ಕಾಮ್ ನಲ್ಲಿಯೂ ಹೂಡಿಕೆ ಮಾಡಿದ್ದಾರೆ. ನಟ 2012 ರಲ್ಲಿ ಅದರ 5 ಪ್ರತಿಶತದಷ್ಟು ಷೇರುಗಳನ್ನು ಖರೀದಿಸಿದರು, ಇದು ಅವರಿಗೆ ಬಹಳಷ್ಟು ಲಾಭವನ್ನು ತಂದುಕೊಟ್ಟಿತು.

ಚಿಂಗಾರಿ

ಇತ್ತೀಚಿನ ದಿನಗಳಲ್ಲಿ ಕಿರು ವೀಡಿಯೊಗಳನ್ನು ಮಾಡುವ ಪ್ರವೃತ್ತಿ ಬಹಳ ಜನಪ್ರಿಯವಾಗಿದೆ. ಅಂತಹ ಕಿರು ವೀಡಿಯೊಗಳನ್ನು ತಯಾರಿಸಲು ಚಿಂಗಾರಿ ಒಂದು ಜನಪ್ರಿಯ ವೇದಿಕೆಯಾಗಿದ್ದು, ಇದರ ಬ್ರಾಂಡ್ ರಾಯಭಾರಿ ಸ್ವತಃ ಸಲ್ಮಾನ್ ಖಾನ್.

ಸಲ್ಮಾನ್ ಅವರ ಅಪಾರ್ಟ್ಮೆಂಟ್ ಬೆಲೆ ಎಷ್ಟು?

ಸಲ್ಮಾನ್ ಖಾನ್ ತಮ್ಮ ಇಡೀ ಕುಟುಂಬದೊಂದಿಗೆ ಮುಂಬೈನ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ಸಮುದ್ರಕ್ಕೆ ಎದುರಾಗಿರುವ ಈ ಮೂರು ಅಂತಸ್ತಿನ ಅಪಾರ್ಟ್‌ಮೆಂಟ್‌ನ ಬೆಲೆ 100 ಕೋಟಿ ರೂ. ಮಾಧ್ಯಮ ವರದಿಗಳ ಪ್ರಕಾರ, ಈ ಅಪಾರ್ಟ್‌ಮೆಂಟ್ ಹೊರತುಪಡಿಸಿ, ಸಲ್ಮಾನ್ ಖಾನ್ ಮುಂಬೈನಲ್ಲಿ ಕೋಟ್ಯಂತರ ಮೌಲ್ಯದ ಅನೇಕ ಆಸ್ತಿಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ: ತೆಲಂಗಾಣದಲ್ಲಿ 10 ಸಾವಿರ ಕೋಟಿ ಹೂಡಿಕೆ ಮಾಡಲಿರುವ ಸಲ್ಮಾನ್ ಖಾನ್

ಕಾರುಗಳು

ಇನ್ನು ಸಾಕಷ್ಟು ಐಷಾರಾಮಿ ಕಾರುಗಳು ಅವರ ಬಳಿ ಇವೆ. ಇವರು ಹೆಚ್ಚಾಗಿ ಬಳಕೆ ಮಾಡೋದು ಲ್ಯಾಂಡ್​ ಕ್ರ್ಯೂಸರ್. ಇದು ಬುಲೆಟ್ ಪ್ರೂಫ್ ಕಾರು. ಇದರ ಬೆಲೆ 2.26 ಕೋಟಿ ರೂಪಾಯಿ. ಇದಲ್ಲದೆ ಇನ್ನೂ ಹಲವು ದುಬಾರಿ ವಾಹನಗಳು ಅವರ ಬಳಿ ಇವೆ. ಆದರೆ, ಅವುಗಳನ್ನು ಅವರು ಹೊರಗೆ ತಂದಿದ್ದು ಕಡಿಮೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕಡೆಯಿಂದ ಅವರಿಗೆ ಬೆದರಿಕೆ ಇದೆ. ಇದಾದಾಗಿನಿಂದಲೂ ಅವರು ಲ್ಯಾಂಡ್ ಕ್ರ್ಯೂಸರ್​ನಲ್ಲಿ ಓಡಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ಕೆಟ್ಟದ್ದು ಸಂಭವಿಸುವ ಮುನ್ನ ಯಾವೆಲ್ಲಾ ಸೂಚನೆಗಳು ಕಾಣಿಸುತ್ತೆ? – Kannada News | Daily Devotional: Traditional Omens, Understanding Warnings Before Bad Events

ಬೆಂಗಳೂರು, ಡಿಸೆಂಬರ್ 27: ನಮ್ಮ ಜೀವನವು ಲಾಭ-ನಷ್ಟ, ಸುಖ-ದುಃಖಗಳ ಮಿಶ್ರಣವಾಗಿದೆ. ಕೆಟ್ಟ ಘಟನೆಗಳು ಅಥವಾ ಅಶುಭಗಳು ಸಂಭವಿಸುವ ಮುನ್ನ, ನಮ್ಮ ಶಾಸ್ತ್ರಗಳು ಮತ್ತು ಪರಂಪರೆಗಳ ಪ್ರಕಾರ ಕೆಲವು ಶಕುನಗಳು ಅಥವಾ ಸೂಚನೆಗಳು ಗೋಚರಿಸುತ್ತವೆ. ವಿದ್ಯಾರ್ಥಿಗೆ ಪರೀಕ್ಷೆಯ ಮೊದಲು ಅನಿಸುವ ಆತಂಕ ಅಥವಾ ಸಾವಿನ ಮುನ್ನ ದೇಹ ನೀಡುವ ಸಂಕೇತಗಳಂತೆ, ಪ್ರಕೃತಿಯೂ ದುರಂತಗಳ ಬಗ್ಗೆ ಸುಳಿವು ನೀಡುತ್ತದೆ.

ಮನೆಯಿಂದ ಹೊರಡುವಾಗ ನಾಯಿಗಳು ಅರಚುವುದು, ಹಾವುಗಳು ಅಡ್ಡ ಬರುವುದು, ಅಥವಾ ಹಸುಗಳು ವಿಚಿತ್ರವಾಗಿ ಕೂಗಿಕೊಳ್ಳುವುದು ಇಂತಹ ಸೂಚನೆಗಳಾಗಿವೆ. ಮನೆಯಲ್ಲಿ ಗಾಜು ಒಡೆಯುವುದು, ಹಾಲು ಚೆಲ್ಲುವುದು, ಅರಿಶಿಣ-ಕುಂಕುಮ ಚೆಲ್ಲುವುದು, ಆರತಿ ದೀಪ ಆರುವುದು, ಅಥವಾ ಕೆಂಪು ಇರುವೆಗಳು ಸಾಲಾಗಿ ಕಾಣಿಸಿಕೊಳ್ಳುವುದು ಕೆಟ್ಟ ಶಕುನಗಳೆಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ಮನೆಯೊಳಗಿನ ಗುಬ್ಬಚ್ಚಿಗಳ ಪದೇ ಪದೇ ಚಲನೆ, ಇಲಿಗಳ ಉಪಟಳ, ಕನ್ನಡಿ ಒಡೆಯುವುದು, ಎಡಗಣ್ಣು (ಪುರುಷರಿಗೆ) ಅಥವಾ ಬಲಗಣ್ಣು (ಮಹಿಳೆಯರಿಗೆ) ಅರಳಿಸುವುದು, ಗಿಡಗಳು ಒಣಗಿ ಹೋಗುವುದು, ಪದೇ ಪದೇ ಸಣ್ಣ ಗಾಯಗಳಾಗುವುದು, ಆಹಾರ ಬೇಗ ಕೆಡುವುದು, ಸಾಕುಪ್ರಾಣಿಗಳು ಸಾಯುವುದು, ಮತ್ತು ದೀಪಗಳು ಪದೇ ಪದೇ ಆರುವುದು ಕೂಡ ಅಶುಭದ ಸಂಕೇತಗಳಾಗಿವೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

 

Source link

ಬರೋಬ್ಬರಿ 94 ವರ್ಷಗಳ ಬಳಿಕ ಬಾಕ್ಸಿಂಗ್ ಡೇನಲ್ಲಿ 20 ವಿಕೆಟ್..!

ಮೆಲ್ಬೋರ್ನ್​ನಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ ನಾಲ್ಕನೇ ಪಂದ್ಯದ ಮೊದಲ ದಿನವೇ 20 ವಿಕೆಟ್​ಗಳು ಉರುಳಿವೆ. ಅಂದರೆ ಒಂದೇ ದಿನವೇ ಎರಡೂ ತಂಡಗಳು ಆಲೌಟ್ ಆಗಿವೆ. ಆಸ್ಟ್ರೇಲಿಯಾದಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್​ನ ಮೊದಲ ದಿನ 20 ವಿಕೆಟ್​ಗಳು ಉರುಳಿರುವುದು 94 ವರ್ಷಗಳ ಬಳಿಕ ಎಂಬುದು ವಿಶೇಷ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಕೇವಲ 152 ರನ್​ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 110 ರನ್​ಗಳಿಗೆ ಸರ್ವಪತನ ಕಂಡಿದೆ. ಅಂದರೆ ಉಭಯ ತಂಡಗಳು ಬ್ಯಾಟಿಂಗ್ ಮಾಡಿರುವುದು 75.1 ಓವರ್​ಗಳನ್ನು ಮಾತ್ರ.

ಇದಕ್ಕೂ ಮುನ್ನ ಬಾಕ್ಸಿಂಗ್ ಡೇ (ಕ್ರಿಸ್ಮಸ್​ ಮರುದಿನ) ಟೆಸ್ಟ್ ಪಂದ್ಯದ ಮೊದಲ ದಿನವೇ 20 ವಿಕೆಟ್​ ಉರುಳಿರುವುದು 1931 ರಲ್ಲಿ. ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ನಡುವಣ ಈ ಪಂದ್ಯದ ಮೊದಲ ದಿನವೇ ಉಭಯ ತಂಡಗಳು ಆಲೌಟ್ ಆಗಿದ್ದವು.

ಇದಾದ ಬಳಿಕ ಆಸ್ಟ್ರೇಲಿಯಾದಲ್ಲಿ ನಡೆದ ಯಾವುದೇ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನವೇ ಉಭಯ ತಂಡಗಳು ಪ್ರಥಮ ಇನಿಂಗ್ಸ್ ಅಂತ್ಯಗೊಳಿಸಿರಲಿಲ್ಲ. ಇದೀಗ 94 ವರ್ಷಗಳ ಬಳಿಕ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನ 20 ವಿಕೆಟ್​ಗಳ ಪತನಕ್ಕೆ ಸಾಕ್ಷಿಯಾಗಿದೆ.

 

Source link

Horoscope Today 27 December: ಇಂದು ಈ ರಾಶಿಯವರ ಅನಿಸಿಕೆಗಳಿಗೆ ಫಲ ಸಿಗಲಿದೆ – Kannada News | Daily Horoscope for 27 December 2025: Dr. Basavaraj Gurujis Predictions for Zodiac Signs

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯನ, ಪುಷ್ಯಮಾಸ, ಹೇಮಂತ ಋತು, ಶುಕ್ಲಪಕ್ಷ, ಸಪ್ತಮಿ, ಉತ್ತರಾಭಾದ್ರ ನಕ್ಷತ್ರ, ವ್ಯತಿಪಾತ ಯೋಗ, ವಣಿಗ ಕರಣ ಇಂದಿನ ದಿನದ ಪ್ರಮುಖ ಪಂಚಾಂಗ ವಿವರಗಳಾಗಿವೆ.

ರವಿ ಧನು ರಾಶಿಯಲ್ಲಿ ಮತ್ತು ಚಂದ್ರ ಮೀನ ರಾಶಿಯಲ್ಲಿ ಸಂಚರಿಸಲಿದ್ದಾನೆ. ರಾಹುಕಾಲ ಬೆಳಿಗ್ಗೆ 9:29 ರಿಂದ 10:54 ರವರೆಗೆ ಇದ್ದು, ಸರ್ವಸಿದ್ಧಿ, ಸಂಕಲ್ಪ ಹಾಗೂ ಶುಭಕಾಲ ಮಧ್ಯಾಹ್ನ 1:45 ರಿಂದ 3:11 ರವರೆಗೆ ಇರುತ್ತದೆ. ಇಂದು ಶನಿವಾರ ಆಗಿದ್ದು, ಸಾಕ್ಷಾತ್ ಶನಿಭಗವಾನರ ಹಾಗೂ ಶ್ರೀ ವೆಂಕಟೇಶ್ವರನ ಲಹರಿಗಳು ಇವೆ. ಶಾಕಂಭರಿ ವ್ರತ ಆಚರಣೆ ಮತ್ತು ಶಿವಮೊಗ್ಗ ಕೋಟೆಯಲ್ಲಿ ಕಲ್ಯಾಣೋತ್ಸವ ನಡೆಯಲಿದೆ. ಡಾ. ಬಸವರಾಜ ಗುರೂಜಿ ಅವರು ಪ್ರತಿಯೊಂದು ರಾಶಿ ಚಿಹ್ನೆಗೂ ಆರ್ಥಿಕ ಸ್ಥಿತಿ, ಆರೋಗ್ಯ, ಕೆಲಸ-ಕಾರ್ಯಗಳು, ಕುಟುಂಬದ ವಿಷಯಗಳು, ಪ್ರೇಮ ವ್ಯವಹಾರಗಳು, ಶುಭ ಬಣ್ಣ ಮತ್ತು ಅದೃಷ್ಟ ಸಂಖ್ಯೆಗಳನ್ನು ಒಳಗೊಂಡಂತೆ ವಿವರವಾದ ಭವಿಷ್ಯವನ್ನು ನೀಡಿದ್ದಾರೆ.

 

Source link

ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ – Kannada News | Bangaluru Namma Metro Molestation: Woman Reports Harassment, Accused Warned by Police

ಬೆಂಗಳೂರು, ಡಿಸೆಂಬರ್​ 26: ಯುವತಿಯ ಮೈ-ಕೈ ಮುಟ್ಟಿ ಅಪರಿಚಿತ ವ್ಯಕ್ತಿ ಅಸಭ್ಯವಾಗಿ ವರ್ತಿಸಿರುವಂತಹ ಘಟನೆ ನಮ್ಮ ಮೆಟ್ರೋದಲ್ಲಿ ನಡೆದಿದೆ. ವಿಧಾನಸೌಧ ಮೆಟ್ರೋದಿಂದ ತೆರಳುತ್ತಿದ್ದ ವೇಳೆ  ಘಟನೆ ನಡೆದಿದೆ. ಈ ವೇಳೆ ಯುವತಿ ಅಲ್ಲಿದ್ದ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಕೂಡಲೇ ಆ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎನ್​​​ಸಿಆರ್ ದಾಖಲಿಸಿ ವ್ಯಕ್ತಿಗೆ ವಾರ್ನ್ ಮಾಡಿ ಪೊಲೀಸರು ಕಳುಹಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Koppal: ಸರ್ಕಾರಿ ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ; ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು! – Kannada News | Koppala Headmaster Funds Flight Trip for Government School Students

ಕೊಪ್ಪಳ, ಡಿಸೆಂಬರ್​​ 27: ಬಹದ್ದೂರಬಂಡಿ ಗ್ರಾಮದ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯ ಬೀರಪ್ಪ ಅಂಡಗಿ ಸ್ವಂತ ಖರ್ಚಿನಲ್ಲಿ 24 ವಿದ್ಯಾರ್ಥಿಗಳನ್ನು ಜಿಂದಾಲ್​​ ಏರ್​​ಪೋರ್ಟ್​​ನಿಂದ ವಿಮಾನದಲ್ಲಿ ಬೆಂಗಳೂರಿಗೆ ಪ್ರವಾಸಕ್ಕೆ ಕರೆದೊಯ್ದಿದ್ದಾರೆ. ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರು, ಎಸ್​​ಡಿಎಂಸಿ ಸದಸ್ಯರು, ಬಿಸಿಯೂಟ ಅಡುಗೆ ತಯಾರಕರು ಸೇರಿ ಒಟ್ಟು 40 ಜನರು ವಿಮಾನ ಪ್ರಯಾಣ ಮಾಡಿದ್ದಾರೆ. ವಿಶೇಷ ವಿಮಾನಕ್ಕೆ 3.50 ಲಕ್ಷ ರೂಪಾಯಿ ವೆಚ್ಚವನ್ನು ಬೀರಪ್ಪ ಭರಿಸಿದ್ದಾರೆ. ಊಟ ವಸತಿ ಸೇರಿ ಎರಡು ದಿನಗಳ ಪ್ರವಾಸದ ವೆಚ್ಚ ಸುಮಾರು 5 ಲಕ್ಷ ರೂ. ಆಗಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಈ ವರ್ಷ 1 ಟ್ರಿಲಿಯನ್ ಡಾಲರ್ ರಫ್ತು ಗುರಿ ಅಸಾಧ್ಯ; ಭಾರತಕ್ಕಿರುವ ಪ್ರಮುಖ ತೊಡಕುಗಳಿವು… – Kannada News | India may miss export target of 1 trillion USD this year, know the reasons for the setback

ನವದೆಹಲಿ, ಡಿಸೆಂಬರ್ 26: ಭಾರತ ಈ ಹಣಕಾಸು ವರ್ಷದಲ್ಲಿ ಒಂದು ಟ್ರಿಲಿಯನ್ ಡಾಲರ್ ಮೊತ್ತದ ಸರಕು ಮತ್ತು ಸೇವೆಗಳನ್ನು ರಫ್ತು (export) ಮಾಡುವ ಗುರಿ ಇಟ್ಟಿತ್ತು. ಆದರೆ, ಈವರೆಗಿನ ರಫ್ತು ಅಂಕಿ ಅಂಶ ಗಮನಿಸಿದಾಗ ಮೇಲಿನ ಒಂದು ಟ್ರಿಲಿಯನ್ ಡಾಲರ್ ಗುರಿ ಮುಟ್ಟುವುದು ಬಹುತೇಕ ಅಸಾಧ್ಯದಂತೆ ಕಾಣುತ್ತಿದೆ. ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಷಿಯೇಟಿವ್ (ಜಿಟಿಆರ್​ಐ) ತನ್ನ ವರದಿಯೊಂದರಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ, ಭಾರತದ ರಫ್ತು ಗುರಿ ವಿಫಲವಾಗಲು ಏನು ಕಾರಣ ಎಂದು ವಿವರಿಸುವ ಪ್ರಯತ್ನ ಮಾಡಿದೆ.

ಭಾರತದಲ್ಲಿ ಈ ವರ್ಷ ಸರಕುಗಳ ರಫ್ತು ಅಷ್ಟೇನೂ ಹೆಚ್ಚಳ ಆಗುವಂತೆ ಕಾಣುವುದಿಲ್ಲ. ಸೇವಾ ರಫ್ತು ಸ್ವಲ್ಪ ಏರಿಕೆಯಾಗಿ 400 ಬಿಲಿಯನ್ ಡಾಲರ್ ಮುಟ್ಟಬಹುದು. ಸರಕು ಮತ್ತು ಸೇವೆ ಸೇರಿ ಈ ವರ್ಷ ಒಟ್ಟು ರಫ್ತು 850 ಬಿಲಿಯನ್ ಡಾಲರ್ ಆಗಬಹುದು. ಸೇವಾ ರಫ್ತು ಏರಿಕೆ ಅಗದೇ ಹೋಗಿದ್ದರೆ ಒಟ್ಟಾರೆ ರಫ್ತು ಇಷ್ಟೂ ಕೂಡ ಸಾಧ್ಯವಾಗುತ್ತಿರಲಿಲ್ಲ. ಸರ್ಕಾರದ ಗುರಿಯಾದ ಒಂದು ಟ್ರಿಲಿಯನ್ ಡಾಲರ್ ಮುಟ್ಟಲು ಇನ್ನೂ 150 ಬಿಲಿಯನ್ ಡಾಲರ್ ಕೊರತೆ ಆಗುತ್ತದೆ ಎಂದು ಜಿಟಿಆರ್​ಐನ ಸಂಸ್ಥಾಪಕ ಅಜಯ್ ಶ್ರೀವಾಸ್ತವ ತಿಳಿಸಿದ್ದಾರೆ.

ಇದನ್ನೂ ಓದಿ: ಎಫ್ ಅಂಡ್ ಒ ಕರ್ಮಕಾಂಡ; ಭಾರತದಿಂದ ಅಮೆರಿಕಕ್ಕೆ ಹರಿದುಹೋಗುತ್ತಿದೆಯಾ ವರ್ಷಕ್ಕೆ ಲಕ್ಷ ಕೋಟಿ ರೂ?

ಭಾರತದ ರಫ್ತು ಏರಿಕೆ ಆಗದೇ ಇರಲು ಎರಡು ಪ್ರಮುಖ ಕಾರಣಗಳು

  • ಜಾಗತಿಕ ವಾತಾವರಣ ಅಸ್ಥಿರವಾಗಿರುವುದು
  • ಅಮೆರಿಕದ ಟ್ಯಾರಿಫ್

ಭಾರತದ ರಫ್ತಿಗೆ ಅತಿದೊಡ್ಡ ಮಾರುಕಟ್ಟೆ ಅಮೆರಿಕ ಆಗಿತ್ತು. ಆದರೆ, ಶೇ. 50ರಷ್ಟು ಟ್ಯಾರಿಫ್ ಇರುವ ಪರಿಣಾಮ ಅಮೆರಿಕಕ್ಕೆ ಭಾರತದ ರಫ್ತು ಶೇ. 21ರಷ್ಟು ಕಡಿಮೆ ಆಗಿದೆ. ಎಲೆಕ್ಟ್ರಾನಿಕ್ಸ್ ರಫ್ತು ಹೆಚ್ಚಾದರೂ ಕೂಡ ಬೇರೆ ರಫ್ತು ತಗ್ಗಿದ ಕಾರಣ ಭಾರತದ ಒಟ್ಟಾರೆ ರಫ್ತು ನಿರೀಕ್ಷಿತ ಮಟ್ಟಕ್ಕಿಂತ ಕೆಳಗಿದೆ.

ಇದನ್ನೂ ಓದಿ: 2025ರಲ್ಲಿ ಭಾರತದ ಬಿಲಿಯನೇರ್​ಗಳ ಪಟ್ಟಿ; ಯಾರು ಅತಿ ಶ್ರೀಮಂತರು, ಯಾರ ಶ್ರೀಮಂತಿಕೆ ಹೆಚ್ಚು ಏರಿದ್ದು?

ಭಾರತಕ್ಕೆ ಸಕಾರಾತ್ಮಕವಾಗಿರುವ ಅಂಶಗಳು

ಜಿಟಿಆರ್​ಐ ವರದಿಯಲ್ಲಿ ಭಾರತಕ್ಕೆ ಅನುಕೂಲವಾಗಿರುವ ಕೆಲ ಅಂಶಗಳನ್ನೂ ಪ್ರಸ್ತಾಪಿಸಲಾಗಿದೆ. ಕೆಲವು ಇಂತಿವೆ:

  • ದೇಶೀಯ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿದೆ
  • ಅಮೆರಿಕ ಬಿಟ್ಟು ಇತರ ದೇಶಗಳಿಗೆ ಭಾರತದ ರಫ್ತು ಶೇ. 5.5ರಷ್ಟು ಹೆಚ್ಚಾಗಿದೆ. ಈ ಟ್ರೆಂಡ್ ಮುಂದುವರಿಯಬಹುದು.
  • ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ಜೊತೆ ವ್ಯಾಪಾರ ಒಪ್ಪದ ಏರ್ಪಡಬಹುದು.

ಭಾರತ ಮುಂದೇನು ಮಾಡಬೇಕು?

ಭಾರತದ ರಫ್ತು ತೀರಾ ಏರಿಕೆ ಆಗದಿದ್ದರೂ ಜಿಡಿಪಿ ತಕ್ಕಮಟ್ಟಿಗೆ ಉತ್ತಮವಾಗಿ ಹಿಗ್ಗಿರುವುದನ್ನು ಜಿಟಿಆರ್​ಐ ರಿಪೋರ್ಟ್​ನಲ್ಲಿ ಗುರುತಿಸಲಾಗಿದೆ. ದೇಶೀಯ ಆರ್ಥಿಕತೆ ಉತ್ತಮವಾಗಿರುವುದರ ಸಂಕೇತ ಇದು. ಭಾರತ ತನ್ನ ರಫ್ತು ಹೆಚ್ಚಿಸಬೇಕಾದರೆ ಉತ್ಪನ್ನದ ಗುಣಮಟ್ಟ ಸುಧಾರಿಸಬೇಕು. ವ್ಯಾಲ್ಯೂ ಚೈನ್ ಅಥವಾ ಮೌಲ್ಯ ಸರಪಳಿಯಲ್ಲಿ ಮೇಲಿನ ಮಟ್ಟಕ್ಕೆ ಹೋಗಬೇಕು. ಉತ್ಪಾದನಾ ವೆಚ್ಚ ತಗ್ಗಿಸಬೇಕು ಎಂದು ಈ ವರದಿಯಲ್ಲಿ ಸಲಹೆ ಕೊಡಲಾಗಿದೆ.

ಹಾಗೆಯೇ, ಎಲೆಕ್ಟ್ರಾನಿಕ್ಸ್, ಎಂಜಿನಿಯರಿಂಗ್ ಮತ್ತು ಟೆಕ್ಸ್​ಟೈಲ್ ಸಎಕ್ಟರ್​ಗಳಲ್ಲಿ ಹೆಚ್ಚಿನ ಮೌಲ್ಯ ವರ್ಧನೆಗೆ ಅವಕಾಶ ಇದೆ ಎಂದೂ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕೇರಳದಲ್ಲಿ ಇತಿಹಾಸ ನಿರ್ಮಿಸಿದ ಬಿಜೆಪಿ; ತಿರುವನಂತಪುರದ ಕೇಸರಿ ಪಕ್ಷದ ಮೊದಲ ಮೇಯರ್ ಆಗಿ ವಿ.ವಿ. ರಾಜೇಶ್ ಆಯ್ಕೆ – Kannada News | BJP creates History In Kerala VV Rajesh becomes first Ever BJP Mayor of Thiruvananthapuram

ತಿರುವನಂತಪುರಂ, ಡಿಸೆಂಬರ್ 26: ಕೇರಳದ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿತ್ತು. ಇದೀಗ ತಿರುವನಂತಪುರದ (Thiruvananthapuram) ಬಿಜೆಪಿಯ ಮೊದಲ ಮೇಯರ್ ಆಗಿ ವಿ.ವಿ. ರಾಜೇಶ್ ಆಯ್ಕೆಯಾಗಿದ್ದಾರೆ. ಇವರು ತಿರುವನಂತಪುರದ ಸ್ಥಳೀಯ ನಾಯಕರಾಗಿದ್ದು, ಬಿಜೆಪಿಯ ಕಾರ್ಯಕರ್ತರು ಮತ್ತು ಸಾರ್ವಜನಿಕರಲ್ಲಿ ಚಿರಪರಿಚಿತರಾಗಿದ್ದಾರೆ.

ಮೇಯರ್ ಆಗಿ ಆಯ್ಕೆಯಾದ ನಂತರ ಮಾತನಾಡಿದ ಅವರು, “ನಾವು ಒಟ್ಟಿಗೆ ಮುಂದುವರಿಯುತ್ತೇವೆ. ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುತ್ತೇವೆ. ಎಲ್ಲಾ 101 ವಾರ್ಡ್‌ಗಳಲ್ಲಿ ಅಭಿವೃದ್ಧಿಯನ್ನು ಜಾರಿಗೆ ತರಲಾಗುವುದು. ತಿರುವನಂತಪುರಂ ಅಭಿವೃದ್ಧಿ ಹೊಂದಿದ ನಗರವಾಗಿ ರೂಪಾಂತರಗೊಳ್ಳುತ್ತದೆ” ಎಂದು ಹೇಳಿದ್ದಾರೆ.

ಬಿಜೆಪಿ ಕೇರಳದಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಹಲವು ದಶಕಗಳಿಂದ ಪ್ರಯತ್ನಿಸುತ್ತಲೇ ಇದೆ. ಆದರೂ ಎಡಪಕ್ಷಗಳ ದರ್ಬಾರ್ ಜೋರಿರುವ ಕೇರಳದಲ್ಲಿ ಬಿಜೆಪಿಗೆ ಸ್ಥಾನ ಸಿಕ್ಕಿರಲಿಲ್ಲ. ಕೇರಳದಲ್ಲಿ ಇದುವರೆಗೆ ಒಬ್ಬ ಬಿಜೆಪಿ ಶಾಸಕ ಹಾಗೂ ಓರ್ವ ಸಂಸದನನ್ನು ಮಾತ್ರ ಹೊಂದಿದೆ. ಓ. ರಾಜಗೋಪಾಲ್ 2016ರಲ್ಲಿ ನೇಮಮ್ ಕ್ಷೇತ್ರದಿಂದ ಶಾಸಕನಾಗಿ ಆಯ್ಕೆಯಾಗಿದ್ದರು. ನಟ ಹಾಘೂ ರಾಜಕಾರಣಿ ಸುರೇಶ್ ಗೋಪಿ 2024ರಲ್ಲಿ ತ್ರಿಶೂರ್ ಕ್ಷೇತ್ರದಿಂದ ಗೆದ್ದು ಸಂಸದರಾಗಿದ್ದರು.

ಇದನ್ನೂ ಓದಿ: ತಿರುವನಂತಪುರಂ ಕಾರ್ಪೊರೇಷನ್‌ ಫಲಿತಾಂಶದ ಬಳಿಕ ಬಿಜೆಪಿ ಕಾರ್ಯಕರ್ತರ ಸಂಭ್ರಮ

ಇಂದು ಬೆಳಿಗ್ಗೆ ನಡೆದ ಮತದಾನದಲ್ಲಿ 45 ವರ್ಷ ವಯಸ್ಸಿನ ವಿ.ವಿ ರಾಜೇಶ್ ಅವರು 51 ಮತಗಳನ್ನು ಪಡೆದರು. ಸಿಪಿಐಎಂನ ಆರ್‌ಪಿ ಶಿವಾಜಿ 29 ಸ್ಥಾನಗಳನ್ನು ಪಡೆದರು ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್‌ನ ಕೆ.ಎಸ್. ಶಬರಿನಾಥನ್ 19 ಸ್ಥಾನಗಳನ್ನು ಪಡೆದರು. ಸ್ವತಂತ್ರ ಶಾಸಕರಾದ ಒಬ್ಬ ಕೌನ್ಸಿಲರ್ ಗೈರುಹಾಜರಾಗಿದ್ದರು. ಎರಡನೇ ಸ್ವತಂತ್ರ ಕೌನ್ಸಿಲರ್ ಪಿ. ರಾಧಾಕೃಷ್ಣನ್ ಅವರ ಬೆಂಬಲದಿಂದ ಬಿಜೆಪಿಯ ಗೆಲುವು ಸಾಧ್ಯವಾಯಿತು.

ಡಿಸೆಂಬರ್ 9ರ ಚುನಾವಣೆಯಲ್ಲಿ ಬಿಜೆಪಿ 50 ಸ್ಥಾನಗಳನ್ನು ಗೆದ್ದಿತ್ತು. ಇದು ಪಕ್ಷಕ್ಕೆ ದಾಖಲೆಯ ಯಶಸ್ಸಾಗಿತ್ತು. ರಾಜೇಶ್ ಅವರ ಮೇಯರ್ ಸ್ಥಾನವು ಕೇರಳದ ರಾಜಕೀಯದಲ್ಲಿ ಬಿಜೆಪಿಯ ಹೊಸ ಅಧ್ಯಾಯವನ್ನು ಸೂಚಿಸುತ್ತದೆ.

ಇದನ್ನೂ ಓದಿ: ಕಾಂಗ್ರೆಸ್​​ಗೆ ಭಾರಿ ಮುಖಭಂಗ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯದ್ದೇ ಪಾರುಪತ್ಯ

ಏಪ್ರಿಲ್ 2026ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ 4 ತಿಂಗಳು ಬಾಕಿ ಇರುವಾಗ ಮೇಯರ್ ಆಗಿ ವಿ.ವಿ. ರಾಜೇಶ್ ಅವರ ನೇಮಕವು ಕೇರಳದ ಬಿಜೆಪಿಗೆ ಮಹತ್ವದ ಹೆಜ್ಜೆಯಾಗಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಲ್ಲಿ ಹಲವು ಸುತ್ತಿನ ಚರ್ಚೆಗಳು ಮತ್ತು ಚರ್ಚೆಗಳ ನಂತರ ವಿ.ವಿ. ರಾಜೇಶ್ ಅವರ ಹೆಸರನ್ನು ಮೇಯರ್ ಅಭ್ಯರ್ಥಿಯಾಗಿ ನಿರ್ಧರಿಸಲಾಯಿತು. ರಾಜೇಶ್ ಪ್ರಸ್ತುತ ತಿರುವನಂತಪುರಂ ಕಾರ್ಪೊರೇಷನ್‌ನಲ್ಲಿ ಎರಡನೇ ಅವಧಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕೊಡಂಗನೂರು ವಾರ್ಡ್ ಅನ್ನು ಪ್ರತಿನಿಧಿಸುತ್ತಿದ್ದಾರೆ. 2025ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅವರು 515 ಮತಗಳ ಅಂತರದಿಂದ ಸ್ಥಾನವನ್ನು ಗೆದ್ದಿದ್ದರು.

ವೃತ್ತಿಯಲ್ಲಿ ವಕೀಲರಾಗಿರುವ ರಾಜೇಶ್ ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಪಕ್ಷದ ಹಿರಿಯ ನಾಯಕ. ಅವರು ಈ ಹಿಂದೆ ತಿರುವನಂತಪುರಂ ಜಿಲ್ಲಾ ಅಧ್ಯಕ್ಷರಾಗಿ ಮತ್ತು ಬಿಜೆಪಿ ಯುವ ಮೋರ್ಚಾದ ರಾಜ್ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಂದೇ ಬೈಕ್‌ನಲ್ಲಿ 5 ಜನ ಸವಾರಿ! 31 ಸಾವಿರ ರೂ. ದಂಡ ಹಾಕಿದ ಪೊಲೀಸರು – Kannada News | UP Bike Stunt: 5 Youths on Single Bike Goes Viral, Police Impose 31,000 Fine

ಉತ್ತರ ಪ್ರದೇಶ, ಡಿ.26: ಉತ್ತರ ಪ್ರದೇಶದ (UP bike stunt) ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದೇ ಬೈಕ್​​ನಲ್ಲಿ 5 ಜನ ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ರಸ್ತೆ ಸಂಚಾರ ನಿಯಮವನ್ನು ಉಲ್ಲಂಘಿಸಿ, ಐದು ಹುಡುಗರು ಒಂದೇ ಬೈಕ್​​ನಲ್ಲಿ ಹೋಗಿದ್ದಾರೆ. ಇದೀಗ ಈ ರೀತಿಯ ಸಂಚಾರ ಸಾರ್ವಜನಿಕರಲ್ಲಿ ಹಾಗೂ ವಾಹನ ಸವಾರರಲ್ಲಿ ಭೀತಿ ಹುಟ್ಟಿಸಿದೆ. ಹಾಪುರದ ರಾಷ್ಟ್ರೀಯ ಹೆದ್ದಾರಿ 9 ರಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋದಲ್ಲಿ 5 ಜನ ಯುವಕರು ಅಪಾಯಕಾರಿ ಸವಾರಿ ನಡೆಸಿದ್ದಾರೆ. ಇನ್ನು ಈ ಬೈಕ್​​ನ ಕೊನೆಯಲ್ಲಿ ನೇತಾಡಿಕೊಂಡು ಕೂತಿರುವುದನ್ನು ಕಾಣಬಹುದು. ಇದೀಗ ಈ ವಿಡಿಯೋ ಪೊಲೀಸರ ಕೈ ಸೇರಿದೆ.

ವಿಡಿಯೋದಲ್ಲಿ ಏನಿದೆ ?

ರಾಷ್ಟ್ರೀಯ ಹೆದ್ದಾರಿ 9ರಲ್ಲಿ ಐದು ಹುಡುಗರು ಒಂದೇ ಬೈಕ್​​ನಲ್ಲಿ ಸವಾರಿ ಮಾಡುವುದನ್ನು ಕಾಣಬಹುದು. ಐದು ಹುಡುಗರಲ್ಲಿ ಒಬ್ಬ ಹುಡುಗ ಬೈಕ್‌ನಿಂದ ನೇತಾಡುತ್ತಿರುವುದು ಮತ್ತು ಇನ್ನೊಬ್ಬ ಹುಡುಗ ಅವನ ಬೆನ್ನಿಗೆ ನಿಂತಿರುವುದನ್ನು ಕಾಣಬಹುದು. ಮತ್ತೊಂದೆಡೆ, ಬೈಕ್​​​ನ ಹಿಂದೆ ಕೂತಿದ್ದ ಯುವಕ ವಿಡಿಯೋ ಮಾಡಿದ್ದಾನೆ. ಇನ್ನು ಬೈಕ್​​ ಹಿಂದೆ ಒಬ್ಬರು ವಿಡಿಯೋ ದೃಶ್ಯವನ್ನು ಸೆರೆಹಿಡಿದು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವೈರಲ್​​ ಪೋಸ್ಟ್​ ಇಲ್ಲಿದೆ ನೋಡಿ:

ಪೊಲೀಸರ ಕ್ರಮ ಏನು?

ಈ ವಿಡಿಯೋ ವೈರಲ್ ಆದ ನಂತರ, ಪಿಲ್ಖುವಾ ಕೊಟ್ವಾಲಿಯ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ತನಿಖೆಯನ್ನು ನಡೆಸಿ, ಪೊಲೀಸರು ಸಂಚಾರ ಉಲ್ಲಂಘನೆ ಪ್ರಕರಣವನ್ನು ದಾಖಲಿಸಿಕೊಂಡು ಅಜಾಗರೂಕ ಮತ್ತು ಅಪಾಯಕಾರಿ ಸವಾರಿಗಾಗಿ 31,000 ರೂ. ದಂಡ ಹಾಕಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಬುಲೆಟ್​​​ಗೆ ಗುದ್ದಿ ಅರ್ಧ ಕಿಮೀ ಎಳೆದೊಯ್ದ ಕಾರು, ರಸ್ತೆಯುದ್ದಕ್ಕೂ ಬೆಂಕಿಯ ಕಿಡಿ

ಎಚ್ಚರಿಕೆ ವಹಿಸಲು ಸಾರ್ವಜನಿಕರಲ್ಲಿ ಮನವಿ:

ಈ ವಿಡಿಯೋ ಇದೊಂದೇ ಅಲ್ಲ. ಜನರು ಸಾರ್ವಜನಿಕ ರಸ್ತೆಗಳಲ್ಲಿ ಇಂತಹ ಅಪಾಯಕಾರಿ ಸಾಹಸಗಳನ್ನು ಮಾಡುತ್ತಲೇ ಇರುತ್ತಾರೆ, ಇದು ಅವರ ಜೀವಕ್ಕೆ ಮತ್ತು ರಸ್ತೆಗಳಲ್ಲಿ ಇತರರ ಸವಾರಿಗೂ ಜೀವಕ್ಕೆ ದೊಡ್ಡ ಅಪಾಯವನ್ನುಂಟುಮಾಡುತ್ತದೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:36 pm, Fri, 26 December 25

Source link