ಸಾವಿನಲ್ಲೂ ಒಂದಾದ ಜೀವದ ಗೆಳತಿಯರು: ಸುಟ್ಟು ಕರಕಲಾದ ನವ್ಯ-ಮಾನಸಳ ಗೆಳೆತನ ಬಿಚ್ಚಿಟ್ಟು ಕಣ್ಣೀರಿಟ್ಟ ತಂದೆ – Kannada News | Chitradurga Bus Accident: father Manjappa reveals Hassan Navya And Manasa Friendship
ಹಾಸನ, (ಡಿಸೆಂಬರ್ 26): ಚಿತ್ರದುರ್ಗ (Chitradruga) ಜಿಲ್ಲೆಯ ಹಿರಿಯೂರು ಪಟ್ಟಣದ ಬಳಿ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ (Bus Incident) ಒಟ್ಟು 7 ಮಂದಿ ಪ್ರಾಣ ಕಳೆದುಕೊಂಡಿದ್ದು, ಸದಾ ಜೊತೆಯಲ್ಲೇ ಇರುತ್ತಿದ್ದ ಹಾಸನದ (Hassan) ಚನ್ನರಾಯಪಟ್ಟಣ ಮೂಲದ ನವ್ಯ ಹಾಗೂ ಮಾನಸ ಸಹ ಸುಟ್ಟು ಕರಕಲಾಗಿದ್ದಾರೆ. ಇದರೊಂದಿಗೆ ಕುಚಿಕು ಗೆಳೆಯರು ಸಾವಿನಲ್ಲೂ ಜೊತೆಯಾಗಿದ್ದಾರೆ. ಇನ್ನು ಮೃತ ಮಗಳು ನವ್ಯ ತಂದೆ ಮಂಜಪ್ಪ ಮಾತನಾಡಿ, ನಿನ್ನೆ ಬೆಳಿಗ್ಗೆ7 ಗಂಟೆಗೆ ನಮಗೆ ವಿಷಯ ತಿಳಿಯಿತು ಅವರು ಮಾನಸ, ನವ್ಯ, ಮಿಲನ…