ರಾವಣನ ಪಾತ್ರ ಮಾಡಲು ಒಪ್ಪಿದ್ದೇಕೆ ಯಶ್, ನಿರ್ದೇಶಕರು ಕೊಟ್ಟರು ಉತ್ತರ
ರಣ್ಬೀರ್ ಕಪೂರ್ (Ranbir Kapoor), ಯಶ್ ಮತ್ತು ಸಾಯಿ ಪಲ್ಲವಿ ನಟಿಸುತ್ತಿರುವ ‘ರಾಮಾಯಣ’ ಸಿನಿಮಾ ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ನ ಸಿನಿಮಾ ಎನಿಸಿಕೊಂಡಿದೆ. ಸಿನಿಮಾದ ಎರಡು ಭಾಗಗಳ ನಿರ್ಮಾಣಕ್ಕೆ ಸುಮಾರು 4000 ಕೋಟಿ ಬಜೆಟ್ ಮೀಸಲಿಡಲಾಗಿದೆಯಂತೆ. ಸಿನಿಮಾಕ್ಕೆ ವಿಶ್ವದರ್ಜೆಯ ವಿಎಫ್ಎಕ್ಸ್ ತಂತ್ರಜ್ಞಾನ ಬಳಸಲಾಗಿದೆ. ಸಿನಿಮಾವನ್ನು ಐಮ್ಯಾಕ್ಸ್ ಗಾಗಿ ವಿಶೇಷವಾಗಿ ಚಿತ್ರೀಕರಿಸಲಾಗಿದೆ. ಸಿನಿಮಾನಲ್ಲಿ ರಣ್ಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿಯೂ ಹಾಗೂ ರಾವಣನಾಗಿ ನಟ ಯಶ್ ನಟಿಸಿದ್ದಾರೆ. ಆದರೆ ‘ಕೆಜಿಎಫ್’, ‘ಕೆಜಿಎಫ್ 2’ ಸಿನಿಮಾದಿಂದ…