ಈ ವರ್ಷ ಬರಲಿದೆ ಇಪಿಎಫ್ಒ 3.0; ಹಣ ಹಿಂಪಡೆಯುವ ಪ್ರಕ್ರಿಯೆ ಮತ್ತಷ್ಟು ಸುಗಮ
ನವದೆಹಲಿ, ಏಪ್ರಿಲ್ 7: ಭಾರತದಲ್ಲಿ ಹೆಚ್ಚಿನ ಉದ್ಯೋಗಿಗಳಿಗೆ ರಿಟೈರ್ಮೆಂಟ್ ಸ್ಕೀಮ್ ಆಗಿ ಇಪಿಎಫ್ (EPF) ಇದೆ. ಕಳೆದ ಒಂದು ದಶಕದಲ್ಲಿ ಇಪಿಎಫ್ ಸಿಸ್ಟಂನಲ್ಲಿ ಗಮನಾರ್ಹ ಮಾರ್ಪಾಡುಗಳಾಗಿವೆ. ಆನ್ಲೈನ್ನಲ್ಲೇ ಹೆಚ್ಚಿನ ಕಾರ್ಯಗಳು ನಡೆಯುತ್ತಿವೆ. ಇಡೀ ಸಿಸ್ಟಂ ಅನ್ನು ತಕ್ಕಮಟ್ಟಿಗೆ ಸ್ಟ್ರೀಮ್ಲೈನ್ ಮಾಡಲಾಗಿದೆ. ಮೂಲ ಇಪಿಎಫ್ಒನಲ್ಲಿದ್ದ ಸಿಸ್ಟಂಗೂ ಇಪಿಎಫ್ಒ 2.0ಗೂ ಅಜಗಜಾಂತರ ವ್ಯತ್ಯಾಸ ಗುರುತಿಸಬಹುದು. ಹಣ ವಿತ್ಡ್ರಾ ಮಾಡುವುದು, ಯುಎಎನ್ ಅಡಿಯಲ್ಲಿ ಅಕೌಂಟ್ಗಳನ್ನು ಸೇರಿಸುವುದು, ವಿಲೀನಗೊಳಿಸುವುದು ಇವೆಲ್ಲಾ ಪ್ರಕ್ರಿಯೆಗಳು ಸರಳಗೊಂಡಿವೆ. ಇದೇ ಹೊತ್ತಲ್ಲಿ ಸರ್ಕಾರ ಇಪಿಎಫ್ಒ 3.0 ಅನ್ನು ಜಾರಿಗೆ…