ಬಾಲಿವುಡ್ (Bollywood) ಸ್ಟಾರ್ ನಟ ಹೃತಿಕ್ ರೋಷನ್ ಅದ್ಭುತ ನಟ ಮತ್ತು ಯಶಸ್ವಿ ಉದ್ಯಮಿ ಆಗಿರುವ ಜೊತೆಗೆ ಬಹಳ ಒಳ್ಳೆ ತಂದೆಯೂ ಸಹ ಹೌದು. ಪತ್ನಿ ಸೂಸನ್ ಜೊತೆಗೆ ಹಲವು ವರ್ಷಗಳ ಹಿಂದೆಯೇ ವಿಚ್ಛೇದನ ಪಡೆದಿದ್ದರೂ ಸಹ ಮಕ್ಕಳೊಟ್ಟಿಗೆ ಆತ್ಮೀಯ ಬಂಧವನ್ನು ಇರಿಸಿಕೊಂಡಿದ್ದಾರೆ. ಇದೀಗ ಇಬ್ಬರೂ ಮಕ್ಕಳೊಂದಿಗಿನ ಕೆಲವು ಮುದ್ದಾದ ವಿಡಿಯೋಗಳನ್ನು ಹೃತಿಕ್ ರೋಷನ್ ಹಂಚಿಕೊಂಡಿದ್ದಾರೆ. ಅದರಲ್ಲೂ ಮಕ್ಕಳಿಬ್ಬರ ಜೊತೆಗೆ ಸಮುದ್ರದಲ್ಲಿ ಈಜಾಡುತ್ತಿರುವ ವಿಡಿಯೋ ಬಹಳ ಚೆನ್ನಾಗಿದೆ. ವಿಡಿಯೋ ಇಲ್ಲಿದೆ ನೋಡಿ…
ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಗ್ರಹಗಳು ಕೇವಲ ವ್ಯಕ್ತಿಗಳ ಮೇಲೆ ಮಾತ್ರವಲ್ಲದೆ, ಭಾರತ ಹಾಗೂ ಜಾಗತಿಕ ಮಟ್ಟದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲಿವೆ. ಏಪ್ರಿಲ್ 2026 ರಲ್ಲಿ ದೇಶ ಮತ್ತು ವಿದೇಶಗಳಲ್ಲಿ ಎಂತಹ ಬದಲಾವಣೆಗಳು ಆಗಲಿವೆ ಎನ್ನುವುದರನ್ನು ಸರಿಯಾಗಿ ಊಹಿಸಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಅವಧಿಯಲ್ಲಿ ವಿಶೇಷವಾಗಿ ಮೀನ ಮತ್ತು ಮೇಷ ರಾಶಿಯಲ್ಲಿ ಸಂಭವಿಸುವ ಗ್ರಹಗಳ ಸಂಯೋಜನೆಯು ರಾಷ್ಟ್ರಗಳ ಆರ್ಥಿಕ ಮತ್ತು ರಾಜಕೀಯ ಸ್ಥಿತಿಗತಿಗಳ ಮೇಲೆ ಈ ಪ್ರಭಾವ ಬೀರಲಿದೆ.
ಭಾರತಕ್ಕೆ ಆಗುವ ಲಾಭ ಮತ್ತು ಶುಭ ಫಲಗಳು
ತಾಂತ್ರಿಕಕ್ರಾಂತಿ:
ಬುಧ ಮತ್ತು ಗುರು ಗ್ರಹಗಳ ಅನುಕೂಲಕರ ಸ್ಥಿತಿಯಿಂದಾಗಿ ಭಾರತದ ಐಟಿ, ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಮೂಲಸೌಕರ್ಯ ಕ್ಷೇತ್ರದಲ್ಲಿ ಅಭೂತಪೂರ್ವ ಪ್ರಗತಿ ಕಂಡುಬರಲಿದೆ. ಹೊಸ ಸ್ಟಾರ್ಟ್‌ಅಪ್‌ಗಳಿಗೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ಸಿಗಲಿದೆ.
ರಕ್ಷಣಾ ಕ್ಷೇತ್ರದ ಬಲ :
ಮಂಗಳ ಗ್ರಹದ ಪ್ರಭಾವದಿಂದ ಭಾರತದ ರಕ್ಷಣಾ ಉತ್ಪಾದನೆ ಮತ್ತು ರಫ್ತು ಹೆಚ್ಚಾಗಲಿದೆ. ಸೈನ್ಯಕ್ಕೆ ಆಧುನಿಕ ಶಸ್ತ್ರಾಸ್ತ್ರಗಳ ಸೇರ್ಪಡೆಯಾಗಲಿದ್ದು, ಜಾಗತಿಕವಾಗಿ ಭಾರತದ ಸೈನಿಕ ಶಕ್ತಿ ಮತ್ತಷ್ಟು ಬಲಗೊಳ್ಳಲಿದೆ.
ಕೃಷಿಭೂಮಿಯ ಮೌಲ್ಯವರ್ಧನೆ:
ಭೂಮಿಗೆ ಸಂಬಂಧಿಸಿದ ಗ್ರಹಗಳ ಸಂಯೋಜನೆಯಿಂದಾಗಿ ಕೃಷಿ ಭೂಮಿ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆ ಮಾಡುವವರಿಗೆ ಲಾಭದಾಯಕ ಸಮಯವಿದು.
ಭಾರತಕ್ಕೆ ಎದುರಾಗಬಹುದಾದ ನಷ್ಟ ಮತ್ತು ಸವಾಲುಗಳು
ಗಡಿ ಭಾಗದಲ್ಲಿ ಉದ್ವಿಗ್ನತೆ:
ಏಪ್ರಿಲ್ ಎರಡನೇ ವಾರದಲ್ಲಿ ಮಂಗಳ ಮತ್ತು ಶನಿ ಗ್ರಹಗಳ ಯುತಿಯು ಮೀನ ರಾಶಿಯಲ್ಲಿ ಸಂಭವಿಸುವುದರಿಂದ, ನೆರೆಹೊರೆಯ ರಾಷ್ಟ್ರಗಳೊಂದಿಗೆ ಗಡಿ ವಿವಾದ ಅಥವಾ ಸಣ್ಣಪುಟ್ಟ ಸಂಘರ್ಷಗಳು ಉಂಟಾಗುವ ಸಾಧ್ಯತೆ ಇದೆ.
ಆಡಳಿತಾತ್ಮಕ ಬದಲಾವಣೆ:
ಸೂರ್ಯ ಮತ್ತು ಶನಿಯ ಪ್ರಭಾವದಿಂದ ದೇಶದ ರಾಜಕೀಯದಲ್ಲಿ ದಿಢೀರ್ ಬದಲಾವಣೆಗಳು ಅಥವಾ ಸಚಿವ ಸಂಪುಟದಲ್ಲಿ ಪುನಾರಚನೆಯಂತಹ ವಿದ್ಯಮಾನಗಳು ನಡೆಯಬಹುದು.
ಷೇರು ಮಾರುಕಟ್ಟೆಯಲ್ಲಿ ಅಸ್ಥಿರತೆ:
ಹಣಕಾಸಿನ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತಗಳು ಕಂಡುಬರಲಿವೆ. ಹೂಡಿಕೆದಾರರು ಜಾಗರೂಕರಾಗಿರಬೇಕಾದ ಸಮಯವಿದು.
ಇತರ ರಾಷ್ಟ್ರಗಳು ಮತ್ತು ಜಾಗತಿಕ ಸ್ಥಿತಿ
ಆರ್ಥಿಕ ಪುನಶ್ಚೇತನ:
ಜಾಗತಿಕವಾಗಿ ಅನೇಕ ರಾಷ್ಟ್ರಗಳು ತಮ್ಮ ಹಳೆಯ ಆರ್ಥಿಕ ನೀತಿಗಳನ್ನು ಕೈಬಿಟ್ಟು ಹೊಸ ಡಿಜಿಟಲ್ ಕರೆನ್ಸಿ ಅಥವಾ ಸುಧಾರಿತ ತೆರಿಗೆ ನೀತಿಗಳತ್ತ ಮುಖ ಮಾಡಲಿವೆ. ಇದು ದೀರ್ಘಕಾಲದ ಲಾಭಕ್ಕೆ ದಾರಿ ಮಾಡಿಕೊಡಲಿದೆ.
ನೈಸರ್ಗಿಕ ವಿಕೋಪ ಭೀತಿ:
ಗ್ರಹಗಳ ಸಂಘರ್ಷದಿಂದಾಗಿ ಇಂಡೋನೇಷ್ಯಾ, ಜಪಾನ್ ಮತ್ತು ರಷ್ಯಾದ ಕೆಲವು ಭಾಗಗಳಲ್ಲಿ ಭೂಕಂಪ ಅಥವಾ ಸಮುದ್ರ ಮಟ್ಟದಲ್ಲಿ ಏರಿಕೆಯಂತಹ ನೈಸರ್ಗಿಕ ವಿಕೋಪಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ.
ಸಾಂಸ್ಕೃತಿಕ ಪುನರುತ್ಥಾನ:
ಯೂರೋಪ್ ಮತ್ತು ಅಮೆರಿಕದಂತಹ ರಾಷ್ಟ್ರಗಳಲ್ಲಿ ಭಾರತೀಯ ಆಧ್ಯಾತ್ಮಿಕತೆ ಮತ್ತು ಯೋಗದಂತಹ ಪದ್ಧತಿಗಳಿಗೆ ಹೆಚ್ಚಿನ ಬೇಡಿಕೆ ಕಂಡುಬರಲಿದ್ದು, ಸಾಂಸ್ಕೃತಿಕ ವಿನಿಮಯದಿಂದ ಭಾರತಕ್ಕೆ ಗೌರವ ಲಭಿಸಲಿದೆ.
ಲೋಹ ಮತ್ತು ವಸ್ತುಗಳ ಬೆಲೆ ಏರಿಕೆ
ಚಿನ್ನದ ಬೆಲೆ:
ಏಪ್ರಿಲ್ ತಿಂಗಳ ಅಂತ್ಯದ ವೇಳೆಗೆ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬರುವ ಸಾಧ್ಯತೆ ಇದೆ. ಈ ಸಮಯದಲ್ಲಿ ಮಾಡುವ ಹೂಡಿಕೆ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುವುದು.
ಇಂಧನ:
ಕಚ್ಚಾ ತೈಲದ ಬೆಲೆಯಲ್ಲಿ ಅಸ್ಥಿರತೆ ಇರಲಿದ್ದು, ಇದರಿಂದಾಗಿ ಕೆಲವು ರಾಷ್ಟ್ರಗಳಲ್ಲಿ ಸಾರಿಗೆ ವೆಚ್ಚ ಅಧಿಕವಾಗಬಹುದು.
ಒಟ್ಟಾರೆಯಾಗಿ ಏಪ್ರಿಲ್ ೨೦೨೬ರಲ್ಲಿ ಭಾರತವು ತನ್ನ ಆಂತರಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಜಾಗತಿಕ ಮಟ್ಟದಲ್ಲಿ ಪ್ರಭಾವಿ ದೇಶವಾಗಿ ಹೊರಹೊಮ್ಮಲಿದೆ. ಆದಾಗ್ಯೂ, ಗಡಿ ಸುರಕ್ಷತೆ ಮತ್ತು ಆರ್ಥಿಕ ಶಿಸ್ತಿನ ಕಡೆಗೆ ಹೆಚ್ಚಿನ ಗಮನ ಹರಿಸುವುದು ಅನಿವಾರ್ಯ. ಇದಕ್ಕೆ ತಕ್ಕಂತೆ ವೈಯಕ್ತಿಕ ವ್ಯಾಪಾರ ವ್ಯವಹಾರ, ಯೋಜನೆಗಳು ಇದ್ದರೆ ಸುಖವಾದ ಜೀವನ ಸಾಧ್ಯ.
ನವದೆಹಲಿ, ಮಾರ್ಚ್ 28: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೂ (West Bengal Elections) ಮುನ್ನ ಇಂದು ಚುನಾವಣಾ ಪ್ರಚಾರದಲ್ಲಿ ಭಾಗಿಯಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಬಂಗಾಳದಲ್ಲಿ ಆಡಳಿತ ಪಕ್ಷದ ವಿರುದ್ಧ “ಚಾರ್ಜ್‌ಶೀಟ್” ಬಿಡುಗಡೆ ಮಾಡಿದ್ದಾರೆ. ಸುಳ್ಳು ಭರವಸೆಗಳನ್ನು ನೀಡುತ್ತಾ, ಅನುಕಂಪದ ಅಲೆ ಗಿಟ್ಟಿಸಿಕೊಳ್ಳುತ್ತಾ ಮಮತಾ ಬ್ಯಾನರ್ಜಿ ಜನರಲ್ಲಿ ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.
“ಮಮತಾ ಬ್ಯಾನರ್ಜಿ ತಮ್ಮ ರಾಜಕೀಯ ಕಾರ್ಯಸೂಚಿಗಾಗಿ ಸುಳ್ಳು, ಬೆದರಿಕೆ ಮತ್ತು ಹಿಂಸಾಚಾರವನ್ನು ಅವಲಂಬಿಸಿದ್ದಾರೆ. ಗಡಿ ರಾಜ್ಯ ಬಂಗಾಳವು ದೇಶದ ಭದ್ರತೆಗೆ ಮುಖ್ಯವಾಗಿದೆ. ಏಕೆಂದರೆ ಒಳನುಸುಳುವವರು ದೇಶದ ಭದ್ರತೆಗೆ ಬೆದರಿಕೆಯೊಡ್ಡುತ್ತಿದ್ದಾರೆ” ಎಂದು ಅಮಿತ್ ಶಾ ಆರೋಪಿಸಿದ್ದಾರೆ.
“ಮಮತಾ ಬ್ಯಾನರ್ಜಿ ನಿರಂತರವಾಗಿ ‘ವಿಕ್ಟಿಮ್ ಕಾರ್ಡ್’ ಬಳಸುತ್ತಿದ್ದಾರೆ. ಕೆಲವೊಮ್ಮೆ ಅವರ ಕಾಲು ಮುರಿಯುತ್ತದೆ ಅಥವಾ ತಲೆಗೆ ಬ್ಯಾಂಡೇಜ್ ಹಾಕಿಕೊಳ್ಳುತ್ತಾರೆ ಅಥವಾ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಇತರ ಸಮಯಗಳಲ್ಲಿ, ಅವರು ಚುನಾವಣಾ ಆಯೋಗದ ಮುಂದೆ ಗೂಬೆ ಕೂರಿಸುತ್ತಾರೆ. ಬಂಗಾಳದ ಜನರು ನಿಮ್ಮ ರಾಜಕೀಯ ಬ್ರ್ಯಾಂಡ್ ಅನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ನಾನು ಮಮತಾ ಬ್ಯಾನರ್ಜಿಯವರಿಗೆ ನಾನು ಹೇಳಲು ಇಲ್ಲಿಗೆ ಬಂದಿದ್ದೇನೆ” ಎಂದು ಅಮಿತ್ ಶಾ ಲೇವಡಿ ಮಾಡಿದ್ದಾರೆ.
ಒಳನುಸುಳುವವರು ಭಾರತದ ಭದ್ರತೆಗೆ ಬೆದರಿಕೆ ಹಾಕುತ್ತಿದ್ದಾರೆ ಮತ್ತು ಬಡ ಕಾರ್ಮಿಕರ ವೇತನ ಮತ್ತು ಯುವಕರ ಉದ್ಯೋಗಾವಕಾಶಗಳನ್ನು ಸಹ ಕಸಿದುಕೊಳ್ಳುತ್ತಿದ್ದಾರೆ. ಅಸ್ಸಾಂನಿಂದ ದೇಶದೊಳಗೆ ಒಳನುಸುಳುವಿಕೆಯನ್ನು ಬಿಜೆಪಿ ಬಹುತೇಕ ನಿಲ್ಲಿಸಿದೆ. ಆದ್ದರಿಂದ, ಬಂಗಾಳ ಚುನಾವಣೆಯು ರಾಜ್ಯಕ್ಕೆ ಮಾತ್ರವಲ್ಲದೆ ದೇಶಕ್ಕೂ ಅದರಲ್ಲೂ ವಿಶೇಷವಾಗಿ ರಾಷ್ಟ್ರೀಯ ಭದ್ರತೆಯ ದೃಷ್ಟಿಕೋನದಿಂದ ಮಹತ್ವದ್ದಾಗಿದೆ. ಟಿಎಂಸಿ ಒಳನುಸುಳುವಿಕೆಯ ರಾಜಕೀಯದಿಂದಾಗಿ ಸಿಲಿಗುರಿ ಕಾರಿಡಾರ್‌ನ ಭದ್ರತೆಯು ತೀವ್ರವಾಗಿ ಸಮಸ್ಯೆಯಾಗಿ ಪರಿಣಮಿಸಿದೆ” ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 28: ರಣರಣ ಅಂತಿರೋ ಬೇಸಿಗೆ ಬಿಸಿಲು ನಡುವೆ ರಾಜ್ಯದ ಕೆಲವೆಡೆ ಮಳೆ (rain) ಅಬ್ಬರಿಸಿದೆ. ಅದರಲ್ಲೂ ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಹಲವು ಅವಾಂತರಗಳು ಸಂಭವಿಸಿವೆ. ಗಿಡಮರಗಳು ನೆಲಕ್ಕುರುಳಿದ್ದು, ಕಟ್ಟಡಗಳ ಹೆಂಚುಗಳು ಗಾಳಿಗೆ ಹಾರಿ ಹೋಗಿವೆ.
ಬಿರುಬಿಸಿಲ ಬೇಗೆ ನಡುವೆ ಮಳೆಯ ರಣಾರ್ಭಟಿಸಿದ್ದಾರೆ. ಬಿರುಗಾಳಿಗೆ ಕಟ್ಟಡಗಳ ಹೆಂಚುಗಳೇ ಹಾರಿ ಹೋಗಿದ್ದು, ಅಡಕೆ ತೋಟ ಅಲ್ಲೋಲಕಲ್ಲೋಲವೇ ಆಗಿದ್ದರೆ, ತೆಂಗಿನ ಮರ ನೆಲಕ್ಕುರುಳಿದೆ. ಬಳ್ಳಾರಿ, ರಾಯಚೂರು, ಕಲಬುರಗಿ ಮಾತ್ರವಲ್ಲ ಈ ಬಾರಿ ರಾಜ್ಯದ ಉದ್ದಗಲಕ್ಕೂ ಬಿಸಿಲು ಹೆಚ್ಚಾಗಿದೆ. ಈ ಬಿಸಿಲಬೇಗೆ ನಡುವೆ ಅಲ್ಲಲ್ಲಿ ಮಳೆ ಆಗ್ತಿದೆ. ಇವತ್ತು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ಮಳೆ ಆರ್ಭಟಿಸಿದೆ.
ಹಾರಿಹೋದ ಶಾಲೆಯ ಹೆಂಚು
ಅದರಲ್ಲೂ ಜೋರುಗಾಳಿ ಇದ್ದಿದ್ರಿಂದ ಮೂಡಿಗೆರೆಯ ಬಸ್ ನಿಲ್ದಾಣದ ಬಳಿಯಿರುವ ಸರ್ಕಾರಿ ಪ್ರೌಢಶಾಲೆಯ ಹೆಂಚುಗಳು ಪುಡಿಪುಡಿ ಆಗಿವೆ. ಹೆಂಚುಗಳು ಹಾರಿಹೋಗುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಆಗಿದೆ.
ಮೂಡಿಗೆರೆ ತಾಲೂಕಿನ ಬಿದರಹಳ್ಳಿಯಲ್ಲಿ ಬಿರುಗಾಳಿಗೆ ಕ್ಯಾಂಟೀನ್ ಮೇಲ್ಚಾವಣೆ ಹಾರಿಹೋಗಿದೆ. ತೆಂಗಿನ ಮರ ರಸ್ತೆಗೆ ಉರುಳಿದೆ. ಇನ್ನು ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸುತ್ತಮುತ್ತ ಧಾರಾಕಾರವಾಗಿ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ಥವಾಗಿತ್ತು.
ಕಾರಿನ ಮೇಲೆ ಉರುಳಿದ ಮರ: ದಂಪತಿ ಬಚಾವ್!
ಮೂಡಿಗೆರೆಯ ಪರಿಮಳಮ್ಮ ದೇಗುಲ ಬಳಿ ಚಲಿಸುತ್ತಿದ್ದ ಕಾರ್ ಮೇಲೆ ಬೃಹತ್ ಮರ ಉರುಳಿ ಬಿದ್ದಿತ್ತು. ಕಾರಿನಲ್ಲಿದ್ದ ದಂಪತಿ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ. ದಂಪತಿ ರಕ್ಷಣೆ ಮಾಡಿರುವ ಅಗ್ನಿಶಾಮಕ ಸಿಬ್ಬಂದಿ ಮರ ತೆರವು ಮಾಡಿದ್ದಾರೆ.
ಹಾಸನದಲ್ಲಿ ಸಿಡಿಲಿನ ಆರ್ಭಟ: ಐವರಿಗೆ ಗಾಯ!
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲೂ ಮಳೆ ಅಬ್ಬರಿಸಿದೆ. ದೀನಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಐವರು ಗಾಯಗೊಂಡಿದ್ದು ಆಸ್ಪತ್ರೆ ಸೇರಿದ್ದಾರೆ. ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದ್ದು, ರೂಪಾ, ಲಕ್ಷ್ಮೀ, ಸುಮಿತ್ರಾ, ಜಯಮ್ಮ ಸೇರಿದಂತೆ ಐವರನ್ನ ಸಕಲೇಶಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಲಿಕಲ್ಲು ಮಳೆ: ಮಾವು ಬೆಳೆಗಾರರು ಕಂಗಾಲು
ಧಾರವಾಡ ಜಿಲ್ಲೆಯ ಕಲಘಟಗಿ, ಹುಬ್ಬಳ್ಳಿ, ಧಾರವಾಡ ತಾಲೂಕಿನಲ್ಲಿ ವಾರದ ಹಿಂದೆ ಆಲಿಕಲ್ಲು ಮಳೆ ಆಗಿತ್ತು. ಥೇಟ್ ಕಾಶ್ಮೀರದಂತೆ ಬದಲಾಗಿತ್ತು. ಇದೇ ಆಲಿಕಲ್ಲು ಮಳೆ ಮಾವು ಬೆಳೆಗಾರರು ಕಂಗಾಲಾಗುವಂತೆ ಮಾಡಿದೆ. ಇಬ್ಬನಿಯಿಂದ್ಲೇ ಹೂವು ಉದುರಿ ಹೋಗಿದ್ವು. ಅಳಿದುಳಿದಿದ್ದ ಮಾವು, ಆಲಿಕಲ್ಲು ಮಳೆಯಿಂದ ಸಾವಿರಾರು ಎಕರೆಯಲ್ಲಿನ ಮಾವು ಹಾಳಾಗಿದೆ.
ಬೆಂಗಳೂರು, ಮಾ.28: ನಿಗಮವು ತನ್ನ “ಪಾರದರ್ಶಕ ನೇಮಕಾತಿ ಮತ್ತು ಪರಿಣಾಮಕಾರಿ ತರಬೇತಿ ಕಾರ್ಯಕ್ರಮ”ಕ್ಕೆ ಪ್ರತಿಷ್ಠಿತ ಸ್ಕೋಚ್ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದೆ. ನಿಗಮವು ಅರ್ಜಿ ಸಲ್ಲಿಕೆದಿಂದ ಆಯ್ಕೆ ಪ್ರಕ್ರಿಯೆಯವರೆಗೆ, ಘಟಕ ನಿಯೋಜನೆ ವರೆಗೆ ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ಏಕರೂಪತೆಯನ್ನು ಕಾಪಾಡಿಕೊಂಡು ಮೂಲಕ ಮಾನವ ಹಸ್ತಕ್ಷೇಪವನ್ನು ನಿಲ್ಲಿಸಲಾಗಿದೆ.
ತಂತ್ರಜ್ಞಾನ ಆಧಾರಿತ ನೇಮಕಾತಿ ವ್ಯವಸ್ಥೆ, ಸ್ವಯಂ ಚಾಲಿತ ಚಾಲನಾ ಪರೀಕ್ಷೆ, ಆನ್ಲೈನ್ ಪರೀಕ್ಷೆಗಳು, ದಾಖಲೆಗಳ ಡಿಜಿಟಲ್ ಪರಿಶೀಲನೆ, ವೆಬ್ ಕ್ಯಾಸ್ಟಿಂಗ್, ಅಟೋ ಜನರೇಟಡ್ ಅಂಕಪಟ್ಟಿ ನೀಡುವ ಮೂಲಕ 2000 ಚಾಲಕ/ ನಿರ್ವಾಹಕರು, 300 ತಾಂತ್ರಿಕ ಸಿಬ್ಬಂದಿಗಳು, 441 ಅನುಕಂಪ ಆಧಾರದಲ್ಲಿ ಹುದ್ದೆಗಳನ್ನು ನೇಮಕಾತಿ ಮಾಡಲಾಗಿದೆ. ಇದಲ್ಲದೆ, ಕಳೆದ ಆರು ತಿಂಗಳಲ್ಲಿ ಸುಮಾರು 12,000ಕ್ಕೂ ಹೆಚ್ಚು ಸಿಬ್ಬಂದಿಗೆ ಪರಿಣಾಮಕಾರಿ ತರಬೇತಿ ನೀಡಲಾಗಿದ್ದು, ನಿಗಮದ ಸಮಗ್ರ ವಿಷಯ ನಿರೂಪಣೆಯಲ್ಲಿನ ಬದಲಾವಣೆಗೆ ಸಹಕಾರಿಯಾಗಿದೆ.
ದೆಹಲಿ ಮೂಲದ ಸ್ಕಾಚ್ ಸಂಸ್ಥೆಯು ಸ್ವತಂತ್ರ ವಿಚಾರ ತಜ್ಞ ವೇದಿಕಾ ಸಂಸ್ಥೆಯಾಗಿದ್ದು, 1997ರಲ್ಲಿ ಸ್ಥಾಪಿತವಾಗಿರುತ್ತದೆ. ಈ ಸಂಸ್ಥೆಯು 2003 ರಿಂದ ಸ್ಕಾಚ್ ಪ್ರಶಸ್ತಿಯನ್ನು ದೇಶದ ವಿವಿಧ ಸಂಸ್ಥೆಗಳು ಸಾಧಿಸಿರುವ ಉತ್ತಮ ಆಡಳಿತ ನಿರ್ವಹಣೆ, ಹಣಕಾಸು, ತಾಂತ್ರಿಕತೆ ಅಳವಡಿಕೆ, ಪಾರದರ್ಶಕ ನೀತಿ, ಯೋಜನೆ, ಆಂತರಿಕ ಬೆಳವಣಿಗೆಗಾಗಿ ನೀಡುತ್ತಾ ಬಂದಿರುವ ಕೊಡುಗೆಗಳು ಉತ್ತಮ ಸಾಧನೆ ಹಾಗೂ ಅವುಗಳಿಂದ ಉಂಟಾಗಿರುವ ಪರಿಣಾಮಗಳನ್ನು ಆಧರಿಸಿ ಆಯ್ಕೆ ಮಾಡಿ ನೀಡಲಾಗುತ್ತದೆ.
ಇಂದು, ಸ್ಕಾಚ್ ಸಂಸ್ಥೆಯು ದೆಹಲಿಯ, ಸಿಲ್ವರ್ ಓಕ್ ಹಾಲ್, ಇಂಡಿಯಾ ಹ್ಯಾಬಿಟೇಟ್ ಸೆಂಟರ್ ನಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀ ಅಕ್ರಂ ಪಾಷ, ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಕೆಎಸ್ಆರ್ ಟಿಸಿ ರವರು ಶ್ರೀ. ಸಮೀರ್ ಕೊಚ್ಚರ್,ಅಧ್ಯಕ್ಷರು ಸ್ಕಾಚ್ ಫೌಂಡೇಶನ್ , ಡಾ.ಗುರುಚರಣ್ ಧನ್ಜಾಲ್, ಉಪಾಧ್ಯಕ್ಷರು, ಸ್ಕಾಚ್ ಗ್ರೂಪ್ ರವರಿಂದ ಸ್ವೀಕರಿಸಿದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಎಲ್ಲೆಲ್ಲಿಯೂ ಆರ್ಸಿಬಿ ಆಟಗಾರ ಫಿಲ್ ಸಾಲ್ಟ್ ಅವರದ್ದೇ ಅಬ್ಬರ. ಈ ಪಂದ್ಯದಲ್ಲಿ ಫಿಲ್ ಸಾಲ್ಟ್ ಮೂರು ಅದ್ಭುತ ಕ್ಯಾಚ್ಗಳನ್ನು ಹಿಡಿಯುವ ಮೂಲಕ ಇಡೀ ಮೈದಾನವೇ ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಅದರಲ್ಲೂ 80 ರನ್ ಬಾರಿಸಿ ಶತಕದತ್ತ ಮುನ್ನಗುತ್ತಿದ್ದ ಎಸ್ಆರ್ಎಚ್ ನಾಯಕ ಇಶಾನ್ ಕಿಶನ್ ಅವರ ಅತ್ಯಂತ ಕಷ್ಟಕರವಾದ ಕ್ಯಾಚ್ ಅನ್ನು ಸಾಲ್ಟ್, ಚಿರತೆಯಂತೆ ಎಗರಿ ಎಂದೇ ಕೈನಲ್ಲಿ ಹಿಡಿದರು. ಸ್ವತಃ ಇಶಾನ್ ಕಿಶನ್ ಅವರೇ ಸಾಲ್ಟ್ ಹಿಡಿದ ಈ ಅಸಾಧ್ಯವಾದ ಕ್ಯಾಚ್ಗೆ ಒಂದು ಕ್ಷಣ ದಂಗಾಗಿ ನಿಂತರು.
ಆರ್ಸಿಬಿ ಪರ ಚೊಚ್ಚಲ ಐಪಿಎಲ್ ಪಂದ್ಯವನ್ನಾಡಿದ ಅಭಿನಂದನ್ ಸಿಂಗ್, ಪಂದ್ಯದ 16ನೇ ಓವರ್ ಬೌಲ್ ಮಾಡಲು ಬಂದರು. ಈ ಓವರ್ನ 5ನೇ ಎಸೆತವನ್ನು ಕಿಶನ್ ಭರ್ಜರಿ ಸಿಕ್ಸರ್ ಬಾರಿಸಿದರು. ಕೊನೆಯ ಎಸೆತದಲ್ಲೂ ಇದೇ ಪ್ರಯತ್ನ ಕಂಡುಬಂತು. ಅಭಿನಂದನ್ ಓವರ್ನ ಕೊನೆಯ ಎಸೆತವನ್ನು ಫುಲ್ ಟಾಸ್ ಬೌಲ್ ಮಾಡಿದರು. ಇತ್ತ ಸ್ಟ್ರೈಕ್ನಲ್ಲಿದ್ದ ಕಿಶನ್, ಪಾಯಿಂಟ್ ದಿಕ್ಕಿನ ಕಡೆಗೆ ಸ್ಲೈಸ್ ಮಾಡಿದರು. ಇತ್ತ ಫಿಲ್ ಸಾಲ್ಟ್ ಡೀಪ್ ಪಾಯಿಂಟ್‌ನಿಂದ ತನ್ನ ಬಲಕ್ಕೆ ವೇಗವಾಗಿ ಓಡಿ ಬಂದು ಚಿರತೆಯಂತೆ ಎಗರಿ ತನ್ನ ಬಲಗೈಯನ್ನು ಚಾಚಿ ಸ್ಲೈಡಿಂಗ್ ಮಾಡುವ ಮೂಲಕ ಅದ್ಭುತ ಕ್ಯಾಚ್ ಹಿಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಬಿಡುಗಡೆ ಮುಂದೂಡಲ್ಪಟ್ಟಿದೆ. ಮಾರ್ಚ್ 19ರಂದು ಬಿಡುಗಡೆ ಆಗಬೇಕಿದ್ದ ಈ ಸಿನಿಮಾ ಈಗ ಜೂನ್ 04ಕ್ಕೆ ತೆರೆಗೆ ಬರಲಿದೆ. ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ ‘ಟಾಕ್ಸಿಕ್’ ಸಿನಿಮಾ. ಯಶ್ ನಟನೆಯ ಈ ಸಿನಿಮಾನಲ್ಲಿ ಹಲವು ಸ್ಟಾರ್ ನಟಿಯರು ನಾಯಕಿಯರಾಗಿ ನಟಿಸಿದ್ದಾರೆ. ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಮತ್ತು ತಾರಾ ಸುತರಿಯಾ ಅವರುಗಳು ನಟಿಸಿದ್ದಾರೆ. ಆದರೆ ಇಷ್ಟು ಮಂದಿ ನಟಿಯರಲ್ಲಿ ಕಿಯಾರಾ ಅಡ್ವಾಣಿ ಅವರದ್ದು ಬಹು ಮುಖ್ಯ ಪಾತ್ರ ಎನ್ನಲಾಗುತ್ತಿದೆ. ಇದು ಅವರ ಪಾಲಿಗೆ ಮೊದಲ ಕನ್ನಡ ಸಿನಿಮಾ ಆಗಿದ್ದು, ‘ಟಾಕ್ಸಿಕ್’ ನಿರ್ದೇಶಕಿ ಗೀತು ಮೋಹನ್ದಾಸ್ ಅವರು ಕಿಯಾರಾ ಅವರನ್ನೇ ‘ಟಾಕ್ಸಿಕ್’ ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡಿದ್ದೇಕೆ ಎಂಬುದನ್ನು ಹೇಳಿಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್ ದಾಸ್, ‘ನಾಡಿಯಾ ಪಾತ್ರಕ್ಕೆ ಕಿಯಾರಾ ಅವರೇ ನನ್ನ ಮೊದಲ ಮತ್ತು ಏಕೈಕ ಆಯ್ಕೆಯಾಗಿದ್ದರು” ಎಂದು ತಿಳಿಸಿದ್ದಾರೆ. ಈ ಪಾತ್ರವು ಏಕಕಾಲದಲ್ಲಿ ಮೃದುತ್ವ ಮತ್ತು ಉಗ್ರತೆಯನ್ನು ಬೇಡುವ ಪಾತ್ರ ಆಗಿತ್ತು. ಆ ಎರಡೂ ಕಿಯಾರಾ ಅಡ್ವಾಣಿ ಅವರಲ್ಲಿದೆ. ಕಿಯಾರಾ ಅವರ ಸ್ಕ್ರೀನ್ ಪ್ರೆಸೆನ್ಸ್‌ನಲ್ಲಿ ಒಂದು ಸಹಜವಾದ ಮಾನವೀಯ ಗುಣವಿದೆ, ಅದು ಈ ಪಾತ್ರಕ್ಕೆ ಬಹಳ ಅವಶ್ಯಕವಾಗಿತ್ತು ಎಂದು ಅವರು ಹೇಳಿದ್ದಾರೆ.
ಕಿಯಾರಾ ಅವರು ಪಾತ್ರವನ್ನು ಕೇವಲ ನಿರ್ದೇಶಕರು ಹೇಳಿದಷ್ಟು ಮಾತ್ರವೇ ನಟಿಸದೇ, ಪಾತ್ರದ ಭಾವನಾತ್ಮಕ ಆಳವನ್ನು ಅರ್ಥಮಾಡಿಕೊಂಡು ನಟಿಸುತ್ತಾರೆ. ಕ್ಯಾಮೆರಾ ಎದುರು ಬರುವ ಮೊದಲೇ ಅವರು ತಮ್ಮ ಮನಸ್ಸಿನಲ್ಲಿ ಆ ಪಾತ್ರವಾಗಿ ಬದುಕಿರುತ್ತಾರೆ. ಅವರ ಶಿಸ್ತು ಮತ್ತು ಪಾತ್ರದ ಬಗ್ಗೆ ಅವರಿಗಿರುವ ಕುತೂಹಲವು ಚಿತ್ರೀಕರಣದ ಪ್ರಕ್ರಿಯೆಯನ್ನು ಕೇವಲ ಒಂದು ಕಡೆಯ ನಿರ್ದೇಶನವಾಗಿಸದೆ, ಅರ್ಥಪೂರ್ಣ ಸಂವಾದವನ್ನಾಗಿ ಬದಲಿಸುತ್ತದೆ ಎಂದು ಗೀತು ಮೋಹನ್ದಾಸ್ ಪ್ರಶಂಸಿಸಿದ್ದಾರೆ.
‘ನಾಡಿಯಾ’ ಪಾತ್ರವು ಕಿಯಾರಾ ಅವರನ್ನು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಬಹಳಷ್ಟು ಪರೀಕ್ಷಿಸಿದೆ. ಅವರು ಈ ಪಾತ್ರಕ್ಕೆ ತಮ್ಮ ಸಂಪೂರ್ಣ ಶಕ್ತಿಯನ್ನು ಧಾರೆ ಎರೆದಿದ್ದಾರೆ. ಕೆಲವು ದೃಶ್ಯಗಳಲ್ಲಿ ಕಿಯಾರಾ ನಟಿಸುತ್ತಿದ್ದಾಗ, ಆ ಪಾತ್ರವು ಕಣ್ಣೆದುರೇ ಜೀವಂತವಾಗಿ ಉಸಿರಾಡುತ್ತಿರುವಂತೆ ನನಗೆ ಭಾಸವಾಯಿತು ಎಂದು ನಿರ್ದೇಶಕಿ ಗೀತು ಮೋಹನ್ದಾಸ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಕಿಯಾರಾ ಅಡ್ವಾಣಿ ಅವರು ಜುಲೈ 2025 ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ, ಈ ದೊಡ್ಡ ಪ್ರಾಜೆಕ್ಟ್ ಮೂಲಕ ಮತ್ತೆ ಬೆಳ್ಳಿತೆರೆಗೆ ಮರಳುತ್ತಿದ್ದಾರೆ. ‘ಟಾಕ್ಸಿಕ್’ ಚಿತ್ರವು ಜೂನ್ 4 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಯಶ್ ಅವರೊಂದಿಗೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ.
ಧಾರಾವಾಡ, ಮಾ.28: ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬೇಸಿಗೆಯ ಆರಂಭದಲ್ಲೇ ವರುಣನ ಅಟ್ಟಹಾಸ ಶುರುವಾಗಿದೆ. ಕಳೆದ ಹತ್ತು ದಿನಗಳಿಂದ ಸುರಿಯುತ್ತಿರುವ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಧಾರಾವಾಡ ಜಿಲ್ಲೆಯ ಮಾವು ಬೆಳೆಗಾರರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಮರದಲ್ಲಿ ನಳನಳಿಸುತ್ತಿದ್ದ ಮಾವಿನ ಕಾಯಿಗಳು ಈಗ ನೆಲಪಾಲಾಗಿವೆ.
ಧಾರಾವಾಡ ಜಿಲ್ಲೆಯ ಕಲಘಟಗಿ, ಹುಬ್ಬಳ್ಳಿ ಮತ್ತು ಧಾರಾವಾಡ ತಾಲೂಕುಗಳಲ್ಲಿ ಅತಿ ಹೆಚ್ಚು ಮಾವು ಬೆಳೆಯಲಾಗುತ್ತದೆ. ಇಲ್ಲಿನ ಹೆಮ್ಮೆಯ ‘ಆಲ್ಪಾನ್ಸೋ’ (ಆಪೂಸ್) ಮಾವಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆಯಿದೆ. ಕಳೆದ ವರ್ಷ ಫಸಲು ಬಾರದೆ ಕಂಗಾಲಾಗಿದ್ದ ರೈತರು, ಈ ಬಾರಿ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದರು. ಆದರೆ, ಕಳೆದ ಕೆಲ ದಿನಗಳಿಂದ ಬಿಟ್ಟುಬಿಡದೆ ಸುರಿಯುತ್ತಿರುವ ಆಲಿಕಲ್ಲು ಮಳೆ ರೈತರ ಆಸೆಯ ಮೇಲೆ ತಣ್ಣೀರು ಎರಚಿದೆ.
ಬಿರುಗಾಳಿಯ ಹೊಡೆತಕ್ಕೆ ಮಾವಿನ ಕಾಯಿಗಳು ಉದುರಿ ಬಿದ್ದಿದ್ದರೆ, ಆಲಿಕಲ್ಲು ಬಿದ್ದಿದ್ದರಿಂದ ಗಿಡದಲ್ಲಿ ಉಳಿದಿರುವ ಕಾಯಿಗಳೂ ಕಲೆಗಳಾಗಿ ಹಾಳಾಗುತ್ತಿವೆ. ಮಾಚಾಪುರ ಗ್ರಾಮದಂತಹ ಕೆಲವು ಕಡೆಗಳಲ್ಲಿ ಆಲಿಕಲ್ಲು ಮಳೆಯ ತೀವ್ರತೆ ಎಷ್ಟಿತ್ತೆಂದರೆ, ಮರದಲ್ಲಿ ಕಾಯಿ ಹೋಗಲಿ, ಒಂದೇ ಒಂದು ಎಲೆಯೂ ಉಳಿಯದಂತೆ ಮರಗಳು ಬೋಳಾಗಿವೆ.
ಹೂ ಬಿಡುವ ಹಂತದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಔಷಧ ಸಿಂಪಡಿಸಿದ್ದ ರೈತರಿಗೆ ಈಗ ಮಾಡಿದ ಖರ್ಚು ಕೂಡ ಕೈಗೆ ಬರದಂತಾಗಿದೆ. ಜಿಲ್ಲೆಯ ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಮಾವು ಸಂಪೂರ್ಣ ನಾಶವಾಗಿದೆ. ಸಂಕಷ್ಟದಲ್ಲಿರುವ ತಮಗೆ ಸರ್ಕಾರ ಕೂಡಲೇ ವೈಜ್ಞಾನಿಕ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ಮಾವು ಬೆಳೆಗಾರರು ಕಣ್ಣೀರಿಡುತ್ತಾ ಆಗ್ರಹಿಸಿದ್ದಾರೆ.
ಬೇಸಿಗೆ (summer) ಸಮಯದಲ್ಲಿನ ವಿಪರೀತ ಉರಿ ಬಿಸಿಲು ನಮ್ಮನ್ನು ಹೈರಾಣಾಗಿಸಿ ಬಿಡುತ್ತದೆ. ಈ ಸಮಯದಲ್ಲಿ ದೇಹವನ್ನು ಎಷ್ಟು ಪ್ರಮಾಣದಲ್ಲಿ ತಂಪಾಗಿ ಮತ್ತು ಚೈತನ್ಯಭರಿತವಾಗಿ ಇಟ್ಟುಕೊಂಡರೂ ಸಾಲದು. ಹೌದು ಉರಿ ಬಿಸಿಲಿನ ಬೇಗೆಗೆ ಬೆವರು ನೀರಿನಂತೆ ಹರಿದು ಹೋಗುತ್ತಾ ಇರುತ್ತದೆ. ಇದರಿಂದಾಗಿ ನಿರ್ಜಲೀಕರಣ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ ಈ ಸಮಸ್ಯೆಯಿಂದ ಪಾರಾಗಲು ಜನ ನೀರಿನ ಜೊತೆಗೆ ಫ್ರೂಟ್ಸ್ ಜ್ಯೂಸ್‌ಗಳನ್ನು ಸಹ ಸೇವನೆ ಮಾಡುತ್ತಾರೆ. ಇವುಗಳ ಜೊತೆಗೆ ಈ ಒಂದಷ್ಟು ಹಣ್ಣುಗಳನ್ನು ಸೇವನೆ ಮಾಡುವ ಮೂಲಕವೂ ದೇಹದಲ್ಲಿ ಸಾಕಷ್ಟು ಪ್ರಮಾಣದ ನೀರಿನಾಂಶವನ್ನು ಕಾಪಾಡಿಕೊಳ್ಳಬಹುದು.
ನಿರ್ಜಲೀಕರಣದಿಂದ ಪಾರಾಗಲು ಸೇವನೆ ಮಾಡಿ ಈ ಹಣ್ಣು:
ಕಿತ್ತಳೆ: ಕಿತ್ತಳೆ ಹಣ್ಣು ನೀರಿನಾಂಶದ ಉತ್ತಮ ಮೂಲವಾಗಿದ್ದು, ಇದು ವಿಟಮಿನ್ ಸಿ ಯಿಂದ ಸಮೃದ್ಧವಾಗಿವೆ. ಅವುಗಳ ಹೆಚ್ಚಿನ ನೀರಿನ ಅಂಶವು ಬಿಸಿ ವಾತಾವರಣದಲ್ಲಿ ದೇಹಕ್ಕೆ ಉತ್ತಮ ಜಲಸಂಚಯನವನ್ನು ಒದಗಿಸುತ್ತವೆ. ಇದಲ್ಲದೆ, ಇದರಲ್ಲಿರುವ ವಿಟಮಿನ್ ಸಿ ಅಂಶವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ
ಕಲ್ಲಂಗಡಿ: ಬೇಸಿಗೆಯಲ್ಲಿ ನಿರ್ಜಲೀಕರಣ ಸಮಸ್ಯೆಯಿಂದ ಪಾರಾಗಲು ಮತ್ತು ದೇಹದಲ್ಲಿ ನೀರಿನಂಶವನ್ನು ಕಾಪಾಡಿಕೊಳ್ಳಲು ಕಲ್ಲಂಗಡಿ ಹಣ್ಣನ್ನು ಸೇವನೆ ಮಾಡುವುದು ಉತ್ತಮ. ಇದರಲ್ಲಿ ಶೇಕಡಾ 92 ರಷ್ಟು ನೀರು ಇರುವುದರಿಂದ ಇದು ಬೇಸಿಗೆಗೆ ಸೂಕ್ತವಾದ ಹಣ್ಣಾಗಿದೆ. ಇದು ಜಲಸಂಚಯನವನ್ನು ಒದಗಿಸುವುದಲ್ಲದೆ ಆರೋಗ್ಯಕ್ಕೂ ಸಖತ್ ಪ್ರಯೋಜನಕಾರಿ.
ಸ್ಟ್ರಾಬೆರಿ: ತಿನ್ನಲು ರುಚಿಕರವಾಗಿರುವ ಸ್ಟ್ರಾಬೆರಿ ಉತ್ತಮ ಪ್ರಮಾಣದ ನೀರನ್ನು ಸಹ ಹೊಂದಿರುತ್ತವೆ. ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಸ್ಟ್ರಾಬೆರಿಗಳು ಸ್ವತಂತ್ರ ರಾಡಿಕಲ್ ಹಾನಿ ಮತ್ತು ಶಾಖದಿಂದ ದೇಹವನ್ನು ರಕ್ಷಿಸುತ್ತವೆ.
ಅನಾನಸ್: ಅನಾನಸ್ ಬೇಸಿಗೆಯಲ್ಲಿ ಸೇವಿಸಬಹುದಾದ ಒಂದು ಉತ್ತಮ ಹಣ್ಣು. ಈ ಹಣ್ಣು ರುಚಿಕರವಾಗಿರುವುದಲ್ಲದೆ, ದೇಹಕ್ಕೆ ಜಲಸಂಚಯನವನ್ನೂ ಒದಗಿಸುತ್ತದೆ. ಇದಲ್ಲದೆ, ಅನಾನಸ್ ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸುವ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದೆ.
ಸೌತೆಕಾಯಿ: ಸೌತೆಕಾಯಿಗಳು 96 ಪ್ರತಿಶತದಷ್ಟು ನೀರನ್ನು ಹೊಂದಿರುತ್ತವೆ, ಇದು ದೇಹಕ್ಕೆ ಉತ್ತಮ ಪ್ರಮಾಣದ ಜಲ ಸಂಚಯನವನ್ನು ಒದಗಿಸುತ್ತದೆ. ಹಾಗಾಗಿ ಈ ಬೇಸಿಗೆಯಲ್ಲಿ ನೀವು ದಿನನಿತ್ಯ ಸೌತೆಕಾಯಿ ಸೇವನೆ ಮಾಡಬಹುದು.
ರಾಮನಗರ, ಮಾರ್ಚ್ 28: ರೇಷ್ಮೆನಗರಿ ರಾಮನಗರ, ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾ ಕೇಂದ್ರ. ಸಿಲಿಕಾನ್ ಸಿಟಿಯಿಂದ ಕೂಗಳತೆ ದೂರದಲ್ಲಿದ್ದರು, ಜಿಲ್ಲಾ ಕೇಂದ್ರದಲ್ಲಿ ಒಂದು ಬಸ್ ಶೆಲ್ಟರ್ (bus shelter) ಇಲ್ಲ. ಹೀಗಾಗಿ ಪ್ರಾಧಿಕಾರದ ವತಿಯಿಂದ ಸುಸಜ್ಜಿತ ಬಸ್ ಶೆಲ್ಟರ್ ಕಾಮಗಾರಿಗೆ ಗುದ್ದಲಿ ಪೂಜೆ ಹಮ್ಮಿಕೊಳ್ಳಲಾಗಿತ್ತು. ಗುದ್ದಲಿಪೂಜೆ ನೆರವೇರಿಸಲು ರಾಮನಗರ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ (MLA Iqbal Hussain) ಕೂಡ ಆಗಮಿಸಿದ್ದರು. ಆದರೆ ತಂಗುದಾಣ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಗುದ್ದಲಿಪೂಜೆ ನೆರವೇರಿಸದೇ ಶಾಸಕರು ವಾಪಾಸ್ ತೆರಳಿದ್ದಾರೆ.
ವಿವಾದಕ್ಕೆ ಕಾರಣವಾದ ನೂತನ ಬಸ್ ಶೆಲ್ಟರ್ ನಿರ್ಮಾಣ
ಹೌದು. ನೂತನ ಬಸ್ ಶೆಲ್ಟರ್ ನಿರ್ಮಾಣ ವಿಚಾರ ರಾಮನಗರದಲ್ಲಿ ವಿವಾದಕ್ಕೆ ಕಾರಣವಾಗಿದೆ. ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲು ಶಾಸಕ ಇಕ್ಬಾಲ್ ಹುಸೇನ್ ಆಗಮಿಸಿದ್ದರು. ಸ್ಥಳೀಯರ ವಿರೋಧದ ಹಿನ್ನೆಲೆ ಗುದ್ದಲಿ ಪೂಜೆ ನಡೆಸದೇ ವಾಪಾಸ್ ತೆರಳಿದ ಘಟನೆ ನಡೆದಿದೆ. ಅಂದಹಾಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದ ಐಜೂರು ವೃತ್ತದ ಬಳಿ, ರಾಮನಗರ ಪ್ರಾಧಿಕಾರದ ವತಿಯಿಂದ ಬಸ್ ಶೆಲ್ಟರ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು.
ಬೆಂಗಳೂರಿನಿಂದ ಮೈಸೂರು ಕಡೆ ಪ್ರಯಾಣಿಸುವ ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸುಮಾರು 20 ಲಕ್ಷ ರೂ ವೆಚ್ಚದಲ್ಲಿ ಶೆಲ್ಟರ್ ನಿರ್ಮಾಣಕ್ಕೆ ಮುಂದಾಗಿದ್ದರು. ಇನ್ನು ಪ್ರತಿನಿತ್ಯ ಬಸ್ ಶೆಲ್ಟರ್ ಇಲ್ಲದೆ ಬಿಸಿಲಿನಲ್ಲಿ ನಿಲ್ಲಬೇಕಾಗಿರುವ ಪ್ರಯಾಣಿಕರಿಗೆ ಈ ಯೋಜನೆ ಸಹಾಯಕವಾಗಬೇಕಿತ್ತು. ಹೀಗಾಗಿ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೂ ಸಕಲ ಸಿದ್ಧತೆ ಮಾಡಲಾಗಿತ್ತು. ಆದರೆ ಕಾಂಪ್ಲೆಕ್ಸ್ ಮಾಲೀಕರು ಹಾಗೂ ಜೆಡಿಎಸ್ ಮುಖಂಡರು, ಶೆಲ್ಟರ್ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ತಮ್ಮ ಅಂಗಡಿಗಳ ಮುಂದೆ ಶೆಲ್ಟರ್ ನಿರ್ಮಾಣವಾದರೆ ವ್ಯಾಪಾರಕ್ಕೆ ತೊಂದರೆಯಾಗಲಿದೆ ಎಂದು ಆಕ್ಷೇಪಿಸಿದರು. ಈ ಹಿನ್ನೆಲೆ ಗುದ್ದಲಿ ಪೂಜೆಗೆ ಆಗಮಿಸಿದ್ದ ಶಾಸಕ ಇಕ್ಬಾಲ್ ಹುಸೇನ್ ಗುದ್ದಲಿ ಪೂಜೆ ನೆರವೇರಿಸದೇ ವಾಪಾಸ್ ತೆರಳಿದ್ದಾರೆ.
ವ್ಯಾಪಾರಕ್ಕೆ ತೊಂದರೆ
ಅಂದಹಾಗೆ ನೂತನ ಬಸ್ ಶೆಲ್ಟರ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡುತ್ತಾರೆ ಎಂಬ ವಿಚಾರ ತಿಳಿದು ಕಾಂಪ್ಲೆಕ್ಸ್ ಮಾಲೀಕರು ಮೊದಲೇ ಜಮಾವಣೆಗೊಂಡಿದ್ದರು. ಈ ವೇಳೆ ಗುದ್ದಲಿ ಪೂಜೆಗೆ ಆಗಮಿಸಿದ ಶಾಸಕ ಇಕ್ಬಾಲ್ ಹುಸೇನ್ ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಪರಿಸ್ಥಿತಿ ತೀವ್ರವಾಗುತ್ತಿದ್ದಂತೆ ಗುದ್ದಲಿ ಪೂಜೆ ನಡೆಸದೇ ಶಾಸಕ ಸ್ಥಳದಿಂದ ವಾಪಾಸ್ ತೆರಳಿದರು. ಇನ್ನು ಈ ಬಗ್ಗೆ ಮಾತನಾಡಿದ ಕಾಂಪ್ಲೆಕ್ಸ್ ಮಾಲೀಕ ಜಯರಾಮ್, ನಮ್ಮ ಕಾಂಪ್ಲೆಕ್ಸ್ ಮುಂಭಾಗ ನಿರ್ಮಾಣ ಮಾಡಿದರೆ, ನಮ್ಮ ವ್ಯಾಪಾರಕ್ಕೆ ತೊಂದರೆ ಆಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ತಂಗುದಾಣ ನಿರ್ಮಾಣಕ್ಕೆ ಅವಕಾಶ ಕೊಡಲ್ಲ ಎಂದಿದ್ದಾರೆ.
ಒಟ್ಟಾರೆ ರಾಮನಗರದ ಐಜೂರು ವೃತ್ತದ ಬಳಿ ಬಸ್ ಶೆಲ್ಟರ್ ನಿರ್ಮಾಣ ವಿಚಾರದಲ್ಲಿ ಸ್ಥಳೀಯರ ವಿರೋಧ ವ್ಯಕ್ತವಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಯೋಜನೆ ರೂಪಿಸಿದ್ದರೂ, ವ್ಯಾಪಾರಿಗಳಿಗೆ ಉಂಟಾಗುವ ಸಮಸ್ಯೆಗಳನ್ನು ಉಲ್ಲೇಖಿಸಿ ವಿರೋಧ ವ್ಯಕ್ತವಾಗಿದೆ. ಇದೀಗ ಅಧಿಕಾರಿಗಳು ಮುಂದಿನ ಕ್ರಮ ಏನು ಕೈಗೊಳ್ಳುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.