ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಎಲ್ಲೆಲ್ಲಿಯೂ ಆರ್ಸಿಬಿ ಆಟಗಾರ ಫಿಲ್ ಸಾಲ್ಟ್ ಅವರದ್ದೇ ಅಬ್ಬರ. ಈ ಪಂದ್ಯದಲ್ಲಿ ಫಿಲ್ ಸಾಲ್ಟ್ ಮೂರು ಅದ್ಭುತ ಕ್ಯಾಚ್ಗಳನ್ನು ಹಿಡಿಯುವ ಮೂಲಕ ಇಡೀ ಮೈದಾನವೇ ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಅದರಲ್ಲೂ 80 ರನ್ ಬಾರಿಸಿ ಶತಕದತ್ತ ಮುನ್ನಗುತ್ತಿದ್ದ ಎಸ್ಆರ್ಎಚ್ ನಾಯಕ ಇಶಾನ್ ಕಿಶನ್ ಅವರ ಅತ್ಯಂತ ಕಷ್ಟಕರವಾದ ಕ್ಯಾಚ್ ಅನ್ನು ಸಾಲ್ಟ್, ಚಿರತೆಯಂತೆ ಎಗರಿ ಎಂದೇ ಕೈನಲ್ಲಿ ಹಿಡಿದರು. ಸ್ವತಃ ಇಶಾನ್ ಕಿಶನ್ ಅವರೇ ಸಾಲ್ಟ್ ಹಿಡಿದ ಈ ಅಸಾಧ್ಯವಾದ ಕ್ಯಾಚ್ಗೆ ಒಂದು ಕ್ಷಣ ದಂಗಾಗಿ ನಿಂತರು.
ಆರ್ಸಿಬಿ ಪರ ಚೊಚ್ಚಲ ಐಪಿಎಲ್ ಪಂದ್ಯವನ್ನಾಡಿದ ಅಭಿನಂದನ್ ಸಿಂಗ್, ಪಂದ್ಯದ 16ನೇ ಓವರ್ ಬೌಲ್ ಮಾಡಲು ಬಂದರು. ಈ ಓವರ್ನ 5ನೇ ಎಸೆತವನ್ನು ಕಿಶನ್ ಭರ್ಜರಿ ಸಿಕ್ಸರ್ ಬಾರಿಸಿದರು. ಕೊನೆಯ ಎಸೆತದಲ್ಲೂ ಇದೇ ಪ್ರಯತ್ನ ಕಂಡುಬಂತು. ಅಭಿನಂದನ್ ಓವರ್ನ ಕೊನೆಯ ಎಸೆತವನ್ನು ಫುಲ್ ಟಾಸ್ ಬೌಲ್ ಮಾಡಿದರು. ಇತ್ತ ಸ್ಟ್ರೈಕ್ನಲ್ಲಿದ್ದ ಕಿಶನ್, ಪಾಯಿಂಟ್ ದಿಕ್ಕಿನ ಕಡೆಗೆ ಸ್ಲೈಸ್ ಮಾಡಿದರು. ಇತ್ತ ಫಿಲ್ ಸಾಲ್ಟ್ ಡೀಪ್ ಪಾಯಿಂಟ್‌ನಿಂದ ತನ್ನ ಬಲಕ್ಕೆ ವೇಗವಾಗಿ ಓಡಿ ಬಂದು ಚಿರತೆಯಂತೆ ಎಗರಿ ತನ್ನ ಬಲಗೈಯನ್ನು ಚಾಚಿ ಸ್ಲೈಡಿಂಗ್ ಮಾಡುವ ಮೂಲಕ ಅದ್ಭುತ ಕ್ಯಾಚ್ ಹಿಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಬಿಡುಗಡೆ ಮುಂದೂಡಲ್ಪಟ್ಟಿದೆ. ಮಾರ್ಚ್ 19ರಂದು ಬಿಡುಗಡೆ ಆಗಬೇಕಿದ್ದ ಈ ಸಿನಿಮಾ ಈಗ ಜೂನ್ 04ಕ್ಕೆ ತೆರೆಗೆ ಬರಲಿದೆ. ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ ‘ಟಾಕ್ಸಿಕ್’ ಸಿನಿಮಾ. ಯಶ್ ನಟನೆಯ ಈ ಸಿನಿಮಾನಲ್ಲಿ ಹಲವು ಸ್ಟಾರ್ ನಟಿಯರು ನಾಯಕಿಯರಾಗಿ ನಟಿಸಿದ್ದಾರೆ. ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಮತ್ತು ತಾರಾ ಸುತರಿಯಾ ಅವರುಗಳು ನಟಿಸಿದ್ದಾರೆ. ಆದರೆ ಇಷ್ಟು ಮಂದಿ ನಟಿಯರಲ್ಲಿ ಕಿಯಾರಾ ಅಡ್ವಾಣಿ ಅವರದ್ದು ಬಹು ಮುಖ್ಯ ಪಾತ್ರ ಎನ್ನಲಾಗುತ್ತಿದೆ. ಇದು ಅವರ ಪಾಲಿಗೆ ಮೊದಲ ಕನ್ನಡ ಸಿನಿಮಾ ಆಗಿದ್ದು, ‘ಟಾಕ್ಸಿಕ್’ ನಿರ್ದೇಶಕಿ ಗೀತು ಮೋಹನ್ದಾಸ್ ಅವರು ಕಿಯಾರಾ ಅವರನ್ನೇ ‘ಟಾಕ್ಸಿಕ್’ ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡಿದ್ದೇಕೆ ಎಂಬುದನ್ನು ಹೇಳಿಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್ ದಾಸ್, ‘ನಾಡಿಯಾ ಪಾತ್ರಕ್ಕೆ ಕಿಯಾರಾ ಅವರೇ ನನ್ನ ಮೊದಲ ಮತ್ತು ಏಕೈಕ ಆಯ್ಕೆಯಾಗಿದ್ದರು” ಎಂದು ತಿಳಿಸಿದ್ದಾರೆ. ಈ ಪಾತ್ರವು ಏಕಕಾಲದಲ್ಲಿ ಮೃದುತ್ವ ಮತ್ತು ಉಗ್ರತೆಯನ್ನು ಬೇಡುವ ಪಾತ್ರ ಆಗಿತ್ತು. ಆ ಎರಡೂ ಕಿಯಾರಾ ಅಡ್ವಾಣಿ ಅವರಲ್ಲಿದೆ. ಕಿಯಾರಾ ಅವರ ಸ್ಕ್ರೀನ್ ಪ್ರೆಸೆನ್ಸ್‌ನಲ್ಲಿ ಒಂದು ಸಹಜವಾದ ಮಾನವೀಯ ಗುಣವಿದೆ, ಅದು ಈ ಪಾತ್ರಕ್ಕೆ ಬಹಳ ಅವಶ್ಯಕವಾಗಿತ್ತು ಎಂದು ಅವರು ಹೇಳಿದ್ದಾರೆ.
ಕಿಯಾರಾ ಅವರು ಪಾತ್ರವನ್ನು ಕೇವಲ ನಿರ್ದೇಶಕರು ಹೇಳಿದಷ್ಟು ಮಾತ್ರವೇ ನಟಿಸದೇ, ಪಾತ್ರದ ಭಾವನಾತ್ಮಕ ಆಳವನ್ನು ಅರ್ಥಮಾಡಿಕೊಂಡು ನಟಿಸುತ್ತಾರೆ. ಕ್ಯಾಮೆರಾ ಎದುರು ಬರುವ ಮೊದಲೇ ಅವರು ತಮ್ಮ ಮನಸ್ಸಿನಲ್ಲಿ ಆ ಪಾತ್ರವಾಗಿ ಬದುಕಿರುತ್ತಾರೆ. ಅವರ ಶಿಸ್ತು ಮತ್ತು ಪಾತ್ರದ ಬಗ್ಗೆ ಅವರಿಗಿರುವ ಕುತೂಹಲವು ಚಿತ್ರೀಕರಣದ ಪ್ರಕ್ರಿಯೆಯನ್ನು ಕೇವಲ ಒಂದು ಕಡೆಯ ನಿರ್ದೇಶನವಾಗಿಸದೆ, ಅರ್ಥಪೂರ್ಣ ಸಂವಾದವನ್ನಾಗಿ ಬದಲಿಸುತ್ತದೆ ಎಂದು ಗೀತು ಮೋಹನ್ದಾಸ್ ಪ್ರಶಂಸಿಸಿದ್ದಾರೆ.
‘ನಾಡಿಯಾ’ ಪಾತ್ರವು ಕಿಯಾರಾ ಅವರನ್ನು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಬಹಳಷ್ಟು ಪರೀಕ್ಷಿಸಿದೆ. ಅವರು ಈ ಪಾತ್ರಕ್ಕೆ ತಮ್ಮ ಸಂಪೂರ್ಣ ಶಕ್ತಿಯನ್ನು ಧಾರೆ ಎರೆದಿದ್ದಾರೆ. ಕೆಲವು ದೃಶ್ಯಗಳಲ್ಲಿ ಕಿಯಾರಾ ನಟಿಸುತ್ತಿದ್ದಾಗ, ಆ ಪಾತ್ರವು ಕಣ್ಣೆದುರೇ ಜೀವಂತವಾಗಿ ಉಸಿರಾಡುತ್ತಿರುವಂತೆ ನನಗೆ ಭಾಸವಾಯಿತು ಎಂದು ನಿರ್ದೇಶಕಿ ಗೀತು ಮೋಹನ್ದಾಸ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಕಿಯಾರಾ ಅಡ್ವಾಣಿ ಅವರು ಜುಲೈ 2025 ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ, ಈ ದೊಡ್ಡ ಪ್ರಾಜೆಕ್ಟ್ ಮೂಲಕ ಮತ್ತೆ ಬೆಳ್ಳಿತೆರೆಗೆ ಮರಳುತ್ತಿದ್ದಾರೆ. ‘ಟಾಕ್ಸಿಕ್’ ಚಿತ್ರವು ಜೂನ್ 4 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಯಶ್ ಅವರೊಂದಿಗೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ.
ಧಾರಾವಾಡ, ಮಾ.28: ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬೇಸಿಗೆಯ ಆರಂಭದಲ್ಲೇ ವರುಣನ ಅಟ್ಟಹಾಸ ಶುರುವಾಗಿದೆ. ಕಳೆದ ಹತ್ತು ದಿನಗಳಿಂದ ಸುರಿಯುತ್ತಿರುವ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಧಾರಾವಾಡ ಜಿಲ್ಲೆಯ ಮಾವು ಬೆಳೆಗಾರರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಮರದಲ್ಲಿ ನಳನಳಿಸುತ್ತಿದ್ದ ಮಾವಿನ ಕಾಯಿಗಳು ಈಗ ನೆಲಪಾಲಾಗಿವೆ.
ಧಾರಾವಾಡ ಜಿಲ್ಲೆಯ ಕಲಘಟಗಿ, ಹುಬ್ಬಳ್ಳಿ ಮತ್ತು ಧಾರಾವಾಡ ತಾಲೂಕುಗಳಲ್ಲಿ ಅತಿ ಹೆಚ್ಚು ಮಾವು ಬೆಳೆಯಲಾಗುತ್ತದೆ. ಇಲ್ಲಿನ ಹೆಮ್ಮೆಯ ‘ಆಲ್ಪಾನ್ಸೋ’ (ಆಪೂಸ್) ಮಾವಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆಯಿದೆ. ಕಳೆದ ವರ್ಷ ಫಸಲು ಬಾರದೆ ಕಂಗಾಲಾಗಿದ್ದ ರೈತರು, ಈ ಬಾರಿ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದರು. ಆದರೆ, ಕಳೆದ ಕೆಲ ದಿನಗಳಿಂದ ಬಿಟ್ಟುಬಿಡದೆ ಸುರಿಯುತ್ತಿರುವ ಆಲಿಕಲ್ಲು ಮಳೆ ರೈತರ ಆಸೆಯ ಮೇಲೆ ತಣ್ಣೀರು ಎರಚಿದೆ.
ಬಿರುಗಾಳಿಯ ಹೊಡೆತಕ್ಕೆ ಮಾವಿನ ಕಾಯಿಗಳು ಉದುರಿ ಬಿದ್ದಿದ್ದರೆ, ಆಲಿಕಲ್ಲು ಬಿದ್ದಿದ್ದರಿಂದ ಗಿಡದಲ್ಲಿ ಉಳಿದಿರುವ ಕಾಯಿಗಳೂ ಕಲೆಗಳಾಗಿ ಹಾಳಾಗುತ್ತಿವೆ. ಮಾಚಾಪುರ ಗ್ರಾಮದಂತಹ ಕೆಲವು ಕಡೆಗಳಲ್ಲಿ ಆಲಿಕಲ್ಲು ಮಳೆಯ ತೀವ್ರತೆ ಎಷ್ಟಿತ್ತೆಂದರೆ, ಮರದಲ್ಲಿ ಕಾಯಿ ಹೋಗಲಿ, ಒಂದೇ ಒಂದು ಎಲೆಯೂ ಉಳಿಯದಂತೆ ಮರಗಳು ಬೋಳಾಗಿವೆ.
ಹೂ ಬಿಡುವ ಹಂತದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಔಷಧ ಸಿಂಪಡಿಸಿದ್ದ ರೈತರಿಗೆ ಈಗ ಮಾಡಿದ ಖರ್ಚು ಕೂಡ ಕೈಗೆ ಬರದಂತಾಗಿದೆ. ಜಿಲ್ಲೆಯ ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಮಾವು ಸಂಪೂರ್ಣ ನಾಶವಾಗಿದೆ. ಸಂಕಷ್ಟದಲ್ಲಿರುವ ತಮಗೆ ಸರ್ಕಾರ ಕೂಡಲೇ ವೈಜ್ಞಾನಿಕ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ಮಾವು ಬೆಳೆಗಾರರು ಕಣ್ಣೀರಿಡುತ್ತಾ ಆಗ್ರಹಿಸಿದ್ದಾರೆ.
ಬೇಸಿಗೆ (summer) ಸಮಯದಲ್ಲಿನ ವಿಪರೀತ ಉರಿ ಬಿಸಿಲು ನಮ್ಮನ್ನು ಹೈರಾಣಾಗಿಸಿ ಬಿಡುತ್ತದೆ. ಈ ಸಮಯದಲ್ಲಿ ದೇಹವನ್ನು ಎಷ್ಟು ಪ್ರಮಾಣದಲ್ಲಿ ತಂಪಾಗಿ ಮತ್ತು ಚೈತನ್ಯಭರಿತವಾಗಿ ಇಟ್ಟುಕೊಂಡರೂ ಸಾಲದು. ಹೌದು ಉರಿ ಬಿಸಿಲಿನ ಬೇಗೆಗೆ ಬೆವರು ನೀರಿನಂತೆ ಹರಿದು ಹೋಗುತ್ತಾ ಇರುತ್ತದೆ. ಇದರಿಂದಾಗಿ ನಿರ್ಜಲೀಕರಣ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ ಈ ಸಮಸ್ಯೆಯಿಂದ ಪಾರಾಗಲು ಜನ ನೀರಿನ ಜೊತೆಗೆ ಫ್ರೂಟ್ಸ್ ಜ್ಯೂಸ್‌ಗಳನ್ನು ಸಹ ಸೇವನೆ ಮಾಡುತ್ತಾರೆ. ಇವುಗಳ ಜೊತೆಗೆ ಈ ಒಂದಷ್ಟು ಹಣ್ಣುಗಳನ್ನು ಸೇವನೆ ಮಾಡುವ ಮೂಲಕವೂ ದೇಹದಲ್ಲಿ ಸಾಕಷ್ಟು ಪ್ರಮಾಣದ ನೀರಿನಾಂಶವನ್ನು ಕಾಪಾಡಿಕೊಳ್ಳಬಹುದು.
ನಿರ್ಜಲೀಕರಣದಿಂದ ಪಾರಾಗಲು ಸೇವನೆ ಮಾಡಿ ಈ ಹಣ್ಣು:
ಕಿತ್ತಳೆ: ಕಿತ್ತಳೆ ಹಣ್ಣು ನೀರಿನಾಂಶದ ಉತ್ತಮ ಮೂಲವಾಗಿದ್ದು, ಇದು ವಿಟಮಿನ್ ಸಿ ಯಿಂದ ಸಮೃದ್ಧವಾಗಿವೆ. ಅವುಗಳ ಹೆಚ್ಚಿನ ನೀರಿನ ಅಂಶವು ಬಿಸಿ ವಾತಾವರಣದಲ್ಲಿ ದೇಹಕ್ಕೆ ಉತ್ತಮ ಜಲಸಂಚಯನವನ್ನು ಒದಗಿಸುತ್ತವೆ. ಇದಲ್ಲದೆ, ಇದರಲ್ಲಿರುವ ವಿಟಮಿನ್ ಸಿ ಅಂಶವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ
ಕಲ್ಲಂಗಡಿ: ಬೇಸಿಗೆಯಲ್ಲಿ ನಿರ್ಜಲೀಕರಣ ಸಮಸ್ಯೆಯಿಂದ ಪಾರಾಗಲು ಮತ್ತು ದೇಹದಲ್ಲಿ ನೀರಿನಂಶವನ್ನು ಕಾಪಾಡಿಕೊಳ್ಳಲು ಕಲ್ಲಂಗಡಿ ಹಣ್ಣನ್ನು ಸೇವನೆ ಮಾಡುವುದು ಉತ್ತಮ. ಇದರಲ್ಲಿ ಶೇಕಡಾ 92 ರಷ್ಟು ನೀರು ಇರುವುದರಿಂದ ಇದು ಬೇಸಿಗೆಗೆ ಸೂಕ್ತವಾದ ಹಣ್ಣಾಗಿದೆ. ಇದು ಜಲಸಂಚಯನವನ್ನು ಒದಗಿಸುವುದಲ್ಲದೆ ಆರೋಗ್ಯಕ್ಕೂ ಸಖತ್ ಪ್ರಯೋಜನಕಾರಿ.
ಸ್ಟ್ರಾಬೆರಿ: ತಿನ್ನಲು ರುಚಿಕರವಾಗಿರುವ ಸ್ಟ್ರಾಬೆರಿ ಉತ್ತಮ ಪ್ರಮಾಣದ ನೀರನ್ನು ಸಹ ಹೊಂದಿರುತ್ತವೆ. ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಸ್ಟ್ರಾಬೆರಿಗಳು ಸ್ವತಂತ್ರ ರಾಡಿಕಲ್ ಹಾನಿ ಮತ್ತು ಶಾಖದಿಂದ ದೇಹವನ್ನು ರಕ್ಷಿಸುತ್ತವೆ.
ಅನಾನಸ್: ಅನಾನಸ್ ಬೇಸಿಗೆಯಲ್ಲಿ ಸೇವಿಸಬಹುದಾದ ಒಂದು ಉತ್ತಮ ಹಣ್ಣು. ಈ ಹಣ್ಣು ರುಚಿಕರವಾಗಿರುವುದಲ್ಲದೆ, ದೇಹಕ್ಕೆ ಜಲಸಂಚಯನವನ್ನೂ ಒದಗಿಸುತ್ತದೆ. ಇದಲ್ಲದೆ, ಅನಾನಸ್ ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸುವ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದೆ.
ಸೌತೆಕಾಯಿ: ಸೌತೆಕಾಯಿಗಳು 96 ಪ್ರತಿಶತದಷ್ಟು ನೀರನ್ನು ಹೊಂದಿರುತ್ತವೆ, ಇದು ದೇಹಕ್ಕೆ ಉತ್ತಮ ಪ್ರಮಾಣದ ಜಲ ಸಂಚಯನವನ್ನು ಒದಗಿಸುತ್ತದೆ. ಹಾಗಾಗಿ ಈ ಬೇಸಿಗೆಯಲ್ಲಿ ನೀವು ದಿನನಿತ್ಯ ಸೌತೆಕಾಯಿ ಸೇವನೆ ಮಾಡಬಹುದು.
ರಾಮನಗರ, ಮಾರ್ಚ್ 28: ರೇಷ್ಮೆನಗರಿ ರಾಮನಗರ, ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾ ಕೇಂದ್ರ. ಸಿಲಿಕಾನ್ ಸಿಟಿಯಿಂದ ಕೂಗಳತೆ ದೂರದಲ್ಲಿದ್ದರು, ಜಿಲ್ಲಾ ಕೇಂದ್ರದಲ್ಲಿ ಒಂದು ಬಸ್ ಶೆಲ್ಟರ್ (bus shelter) ಇಲ್ಲ. ಹೀಗಾಗಿ ಪ್ರಾಧಿಕಾರದ ವತಿಯಿಂದ ಸುಸಜ್ಜಿತ ಬಸ್ ಶೆಲ್ಟರ್ ಕಾಮಗಾರಿಗೆ ಗುದ್ದಲಿ ಪೂಜೆ ಹಮ್ಮಿಕೊಳ್ಳಲಾಗಿತ್ತು. ಗುದ್ದಲಿಪೂಜೆ ನೆರವೇರಿಸಲು ರಾಮನಗರ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ (MLA Iqbal Hussain) ಕೂಡ ಆಗಮಿಸಿದ್ದರು. ಆದರೆ ತಂಗುದಾಣ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಗುದ್ದಲಿಪೂಜೆ ನೆರವೇರಿಸದೇ ಶಾಸಕರು ವಾಪಾಸ್ ತೆರಳಿದ್ದಾರೆ.
ವಿವಾದಕ್ಕೆ ಕಾರಣವಾದ ನೂತನ ಬಸ್ ಶೆಲ್ಟರ್ ನಿರ್ಮಾಣ
ಹೌದು. ನೂತನ ಬಸ್ ಶೆಲ್ಟರ್ ನಿರ್ಮಾಣ ವಿಚಾರ ರಾಮನಗರದಲ್ಲಿ ವಿವಾದಕ್ಕೆ ಕಾರಣವಾಗಿದೆ. ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲು ಶಾಸಕ ಇಕ್ಬಾಲ್ ಹುಸೇನ್ ಆಗಮಿಸಿದ್ದರು. ಸ್ಥಳೀಯರ ವಿರೋಧದ ಹಿನ್ನೆಲೆ ಗುದ್ದಲಿ ಪೂಜೆ ನಡೆಸದೇ ವಾಪಾಸ್ ತೆರಳಿದ ಘಟನೆ ನಡೆದಿದೆ. ಅಂದಹಾಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದ ಐಜೂರು ವೃತ್ತದ ಬಳಿ, ರಾಮನಗರ ಪ್ರಾಧಿಕಾರದ ವತಿಯಿಂದ ಬಸ್ ಶೆಲ್ಟರ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು.
ಬೆಂಗಳೂರಿನಿಂದ ಮೈಸೂರು ಕಡೆ ಪ್ರಯಾಣಿಸುವ ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸುಮಾರು 20 ಲಕ್ಷ ರೂ ವೆಚ್ಚದಲ್ಲಿ ಶೆಲ್ಟರ್ ನಿರ್ಮಾಣಕ್ಕೆ ಮುಂದಾಗಿದ್ದರು. ಇನ್ನು ಪ್ರತಿನಿತ್ಯ ಬಸ್ ಶೆಲ್ಟರ್ ಇಲ್ಲದೆ ಬಿಸಿಲಿನಲ್ಲಿ ನಿಲ್ಲಬೇಕಾಗಿರುವ ಪ್ರಯಾಣಿಕರಿಗೆ ಈ ಯೋಜನೆ ಸಹಾಯಕವಾಗಬೇಕಿತ್ತು. ಹೀಗಾಗಿ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೂ ಸಕಲ ಸಿದ್ಧತೆ ಮಾಡಲಾಗಿತ್ತು. ಆದರೆ ಕಾಂಪ್ಲೆಕ್ಸ್ ಮಾಲೀಕರು ಹಾಗೂ ಜೆಡಿಎಸ್ ಮುಖಂಡರು, ಶೆಲ್ಟರ್ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ತಮ್ಮ ಅಂಗಡಿಗಳ ಮುಂದೆ ಶೆಲ್ಟರ್ ನಿರ್ಮಾಣವಾದರೆ ವ್ಯಾಪಾರಕ್ಕೆ ತೊಂದರೆಯಾಗಲಿದೆ ಎಂದು ಆಕ್ಷೇಪಿಸಿದರು. ಈ ಹಿನ್ನೆಲೆ ಗುದ್ದಲಿ ಪೂಜೆಗೆ ಆಗಮಿಸಿದ್ದ ಶಾಸಕ ಇಕ್ಬಾಲ್ ಹುಸೇನ್ ಗುದ್ದಲಿ ಪೂಜೆ ನೆರವೇರಿಸದೇ ವಾಪಾಸ್ ತೆರಳಿದ್ದಾರೆ.
ವ್ಯಾಪಾರಕ್ಕೆ ತೊಂದರೆ
ಅಂದಹಾಗೆ ನೂತನ ಬಸ್ ಶೆಲ್ಟರ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡುತ್ತಾರೆ ಎಂಬ ವಿಚಾರ ತಿಳಿದು ಕಾಂಪ್ಲೆಕ್ಸ್ ಮಾಲೀಕರು ಮೊದಲೇ ಜಮಾವಣೆಗೊಂಡಿದ್ದರು. ಈ ವೇಳೆ ಗುದ್ದಲಿ ಪೂಜೆಗೆ ಆಗಮಿಸಿದ ಶಾಸಕ ಇಕ್ಬಾಲ್ ಹುಸೇನ್ ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಪರಿಸ್ಥಿತಿ ತೀವ್ರವಾಗುತ್ತಿದ್ದಂತೆ ಗುದ್ದಲಿ ಪೂಜೆ ನಡೆಸದೇ ಶಾಸಕ ಸ್ಥಳದಿಂದ ವಾಪಾಸ್ ತೆರಳಿದರು. ಇನ್ನು ಈ ಬಗ್ಗೆ ಮಾತನಾಡಿದ ಕಾಂಪ್ಲೆಕ್ಸ್ ಮಾಲೀಕ ಜಯರಾಮ್, ನಮ್ಮ ಕಾಂಪ್ಲೆಕ್ಸ್ ಮುಂಭಾಗ ನಿರ್ಮಾಣ ಮಾಡಿದರೆ, ನಮ್ಮ ವ್ಯಾಪಾರಕ್ಕೆ ತೊಂದರೆ ಆಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ತಂಗುದಾಣ ನಿರ್ಮಾಣಕ್ಕೆ ಅವಕಾಶ ಕೊಡಲ್ಲ ಎಂದಿದ್ದಾರೆ.
ಒಟ್ಟಾರೆ ರಾಮನಗರದ ಐಜೂರು ವೃತ್ತದ ಬಳಿ ಬಸ್ ಶೆಲ್ಟರ್ ನಿರ್ಮಾಣ ವಿಚಾರದಲ್ಲಿ ಸ್ಥಳೀಯರ ವಿರೋಧ ವ್ಯಕ್ತವಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಯೋಜನೆ ರೂಪಿಸಿದ್ದರೂ, ವ್ಯಾಪಾರಿಗಳಿಗೆ ಉಂಟಾಗುವ ಸಮಸ್ಯೆಗಳನ್ನು ಉಲ್ಲೇಖಿಸಿ ವಿರೋಧ ವ್ಯಕ್ತವಾಗಿದೆ. ಇದೀಗ ಅಧಿಕಾರಿಗಳು ಮುಂದಿನ ಕ್ರಮ ಏನು ಕೈಗೊಳ್ಳುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.
ಬೆಂಗಳೂರು, ಮಾ.28: ಐಪಿಎಲ್ ಕ್ರೇಜ್ ಈಗ ಕೇವಲ ಮೈದಾನಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ವಿಧಾನಸಭೆಯಲ್ಲೂ ಪ್ರತಿಧ್ವನಿಸಿದೆ. ಐಪಿಎಲ್ ಪಂದ್ಯಗಳ ವೀಕ್ಷಣೆಗೆ ಶಾಸಕರಿಗೆ ಟಿಕೆಟ್ ನೀಡುವ ವಿಚಾರ ಸದನದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸುರೇಶ್ ಕುಮಾರ್ ಅವರಂತಹ ಕೆಲವು ಹಿರಿಯ ಶಾಸಕರು ನಮಗೆ ಟಿಕೆಟ್ ಬೇಡ ಎಂದು ಅಸಮಾಧಾನ ವ್ಯಕ್ತಪಡಿಸಿದರೆ, ಇನ್ನು ಕೆಲವರು ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದರು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಐಪಿಎಲ್ ಪಂದ್ಯಗಳಿಗಾಗಿ ಶಾಸಕರು ಮತ್ತು ಎಂಎಲ್‌ಸಿಗಳಿಗೆ ನೀಡಲಾಗುತ್ತಿದ್ದ ಟಿಕೆಟ್ ಸಂಖ್ಯೆಯನ್ನು ಹೆಚ್ಚಿಸುವಂತೆ ಕೆಲವರು ಬೇಡಿಕೆ ಇಟ್ಟಿದ್ದರು. ಈ ಹಿಂದೆ ತಲಾ ಒಂದು ಟಿಕೆಟ್ ನೀಡಲಾಗುತ್ತಿತ್ತು, ಈಗ ಎರಡು ಟಿಕೆಟ್ ನೀಡಬೇಕು ಎಂಬ ಚರ್ಚೆ ನಡೆದಿದೆ. ಶಾಸಕರಿಗೆ ಟಿಕೆಟ್ ನೀಡುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಈ ಬಾರಿಯೂ ಅದನ್ನು ಮುಂದುವರಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದರು. ತಮಗೂ ಕ್ರಿಕೆಟ್‌ನಲ್ಲಿ ಆಸಕ್ತಿ ಇದೆ, ಆದರೆ ಚುನಾವಣೆ ಮತ್ತು ಕೆಲಸದ ಒತ್ತಡದ ನಡುವೆ ಸಮಯ ಸಿಕ್ಕರೆ ಮಾತ್ರ ಮುಂದಿನ ಪಂದ್ಯಗಳನ್ನು ವೀಕ್ಷಿಸುವುದಾಗಿ ಅವರು ಹೇಳಿದರು. ಏಪ್ರಿಲ್ 9ರವರೆಗೂ ಬಿಡುವಿಲ್ಲದ ಕಾರಣ ಸದ್ಯಕ್ಕೆ ಮೈದಾನಕ್ಕೆ ಹೋಗಲು ಸಾಧ್ಯವಿಲ್ಲ ಎಂದರು.
ನವದೆಹಲಿ, ಮಾರ್ಚ್ 28: ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನಿ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಮಾತನಾಡಿದ್ದಾರೆ. ಇಬ್ಬರೂ ನಾಯಕರು ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷ ಮತ್ತು ಪ್ರಾದೇಶಿಕ ಸ್ಥಿರತೆ ಮತ್ತು ಕಡಲ ಭದ್ರತೆಗೆ ಆ ಯುದ್ಧದ ಪರಿಣಾಮಗಳ ಬಗ್ಗೆ ಚರ್ಚಿಸಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಪ್ರಧಾನಿ ಮೋದಿ, ಪಶ್ಚಿಮ ಏಷ್ಯಾ ಪ್ರದೇಶದಲ್ಲಿನ ಪ್ರಮುಖ ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವುದಾಗಿ ತಿಳಿಸಿದ್ದಾರೆ.
“ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನಿ ಎಚ್‌ಆರ್‌ಎಚ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಮಾತನಾಡಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಚರ್ಚಿಸಿದ್ದೇನೆ. ಪ್ರಾದೇಶಿಕ ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಗಳನ್ನು ಭಾರತ ಖಂಡಿಸುತ್ತದೆ ಎಂದು ನಾನು ಪುನರುಚ್ಚರಿಸಿದ್ದೇನೆ” ಎಂದು ಅವರು ಹೇಳಿದ್ದಾರೆ.
“ಹಡಗು ಮಾರ್ಗಗಳು ಮತ್ತು ವ್ಯಾಪಾರ ಮಾರ್ಗಗಳ ಸುರಕ್ಷತೆಯ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ನಡುವೆ ಈ ಪ್ರದೇಶದಲ್ಲಿ ನಿರಂತರ ಸಮುದ್ರ ಸಂಚಾರದ ಅವಕಾಶದ ಮಹತ್ವವನ್ನು ಎರಡೂ ಕಡೆಯವರು ಒಪ್ಪಿಕೊಂಡಿದ್ದೇವೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
Spoke with Crown Prince and PM of Saudi Arabia, HRH Prince Mohammed bin Salman and discussed the ongoing conflict in West Asia.
I reiterated India’s condemnation of attacks on regional energy infrastructure.
We agreed on the need to ensure freedom of navigation and keeping…
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2026 ರ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಕಣಕ್ಕಿಳಿದಿವೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಎಸ್ಆರ್ಹೆಚ್ ತಂಡಕ್ಕೆ ಆರಂಭಿಕ ಆಘಾತ ಎದುರಾಗಿದೆ. ಕೇವಲ 29 ರನ್ಗಳಿಗೆ ತಂಡದ 3 ಪ್ರಮುಖ ವಿಕೆಟ್ಗಳು ಪತನವಾಗಿವೆ. ಸನ್ರೈಸರ್ಸ್ಗೆ ಈ ಆಘಾತ ನೀಡಿದ್ದು, ಆರ್ಸಿಬಿ ಪರ ಐಪಿಎಲ್ಗೆ ಪಾದಾರ್ಪಣೆ ಮಾಡಿರುವ ಕಿವೀಸ್ ವೇಗಿ ಜಾಕೋಬ್ ಡಫಿ
ವಾಸ್ತವವಾಗಿ ಆಸ್ಟ್ರೇಲಿಯಾದ ಅನುಭವಿ ವೇಗದ ಬೌಲರ್ ಜೋಶ್ ಹೇಜಲ್‌ವುಡ್ ಇಂಜುರಿ ಕಾರಣ ಐಪಿಎಲ್ನ ಆರಂಭಿಕ ಪಂದ್ಯಗಳನ್ನು ಆಡುತಿಲ್ಲ. ಹೀಗಾಗಿ ಅವರ ಬದಲಿಗೆ ಜಾಕೋಬ್ ಡಫಿಗೆ ತಂಡದಲ್ಲಿ ಆಡುವ ಅವಕಾಶ ನೀಡಲಾಯಿತು. ಪಂದ್ಯ ಆರಂಭಕ್ಕೂ ಮುನ್ನ ಡಫಿ, ಹೇಜಲ್‌ವುಡ್ ಸ್ಥಾನ ತುಂಬುತ್ತಾರಾ ಎಂಬ ಪ್ರಶ್ನೆ ಮೂಡಿದ್ದವು. ಆದರೆ ಮೊದಲ ಪಂದ್ಯದಲ್ಲೇ ಡಫಿ, ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ಆರ್ಸಿಬಿ ಪರ ಬೌಲಿಂಗ್ ಆರಂಭಿಸಿದ ಡಫಿ, ಮೊದಲ ಓವರ್ನಲ್ಲಿ 7 ರನ್ ಬಿಟ್ಟುಕೊಟ್ಟರು. ಈ ಓವರ್ನಲ್ಲಿ ಅಭಿಷೇಕ್ 1 ಭರ್ಜರಿ ಸಿಕ್ಸರ್ ಕೂಡ ಬಾರಿಸಿದರು. ಆ ಬಳಿಕ ಇನ್ನಿಂಗ್ಸ್ನ ಮೂರನೇ ಓವರ್ ಬೌಲ್ ಮಾಡಲು ಬಂದ ಡಫಿ, ಓವರ್ನ ಮೊದಲ ಎಸೆತದಲ್ಲೇ ಅಭಿಷೇಕ್ ಶರ್ಮಾ ವಿಕೆಟ್ ಉರುಳಿಸಿದರು. ನಂತರ ಇದೇ ಓವರ್ನ ಕೊನೆಯ ಎಸೆತದಲ್ಲಿ ಅಪಾಯಕಾರಿ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಅವರನ್ನು ಡಫಿ ಪೆವಿಲಿಯನ್ಗಟ್ಟಿದರು. ಹೆಡ್ ಕೇವಲ 11 ರನ್ ಗಳಿಸಿ ಔಟಾದರು.
ತಮ್ಮ ಖೋಟಾದ ಮೂರನೇ ಓವರ್ನಲ್ಲೂ ವಿಕೆಟ್ ಭೇಟೆ ಮುಂದುವರೆಸಿದ ಡಫಿ, ಈ ಬಾರಿ ಎಸ್ಆರ್ಹೆಚ್ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಬಲಿ ಪಡೆದರು. ರನ್ಗಳಿಸಲು ಹೆಣಗಾಡುತ್ತಿದ್ದ ನಿತೀಶ್ ಕೇವಲ 1 ರನ್ ಗಳಿಸಿ ಔಟಾದರು. ಈ ಪಂದ್ಯದಲ್ಲಿ 4 ಓವರ್ ಬೌಲ್ ಮಾಡಿದ ಡಫಿ, ಕೇವಲ 22 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದರು. ಈ ಮೂಲಕ ಸನ್ರೈಸರ್ಸ್ ತಂಡವನ್ನು ಆರಂಭದಲ್ಲೇ ಕಟ್ಟಿಹಾಕಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
90ರ ದಶಕದಲ್ಲಿ ಬಾಲಿವುಡ್ (Bollywood) ಅನ್ನು ಭೂಗತ ಜಗತ್ತು ಇನ್ನಿಲ್ಲದಂತೆ ಕಾಡಿತ್ತು. ಹಲವಾರು ಸಿನಿಮಾ ನಟ, ನಿರ್ದೇಶಕ, ನಿರ್ಮಾಪಕ, ನಟಿಯರಿಗೆ ಭೂಗತ ಲೋಕದ ದುರುಳರಿಂದ ಬೆದರಿಕೆ ಕರೆಗಳು ಬರುತ್ತಿದ್ದವು. ಟಿ-ಸೀರೀಸ್ ಮಾಲೀಕನ ಕೊಲೆಯನ್ನೂ ಈ ಭೂಗತ ಲೋಕದ ಮಂದಿ ಮಾಡಿದ್ದರು. ಕೆಲವು ನಟರು, ಭಯಗೊಂಡು ಭೂಗತ ಲೋಕದವರ ಪಾರ್ಟಿಗಳಲ್ಲಿ ಸಹ ಕಾಣಿಸಿಕೊಂಡಿದ್ದರು. ಆದರೆ ಕೆಲವರು ಮಾತ್ರ ಧೈರ್ಯವನ್ನು ಅದೆಲ್ಲವನ್ನೂ ಎದುರಿಸಿದ್ದರು. ಇದೀಗ ನಟ ವರುಣ್ ಧವನ್, ತಮ್ಮ ಮನೆಗೆ ಭೂಗತ ಲೋಕದ ಕರೆ ಬಂದಿದ್ದ ಘಟನೆಯನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ವರುಣ್ ಧವನ್ ತಂದೆ, ಖ್ಯಾತ ನಿರ್ದೇಶಕ ಡೇವಿಡ್ ಧವನ್ ಅವರಿಗೂ ಭೂಗತ ಲೋಕದ ಇಂತಹ ಕರೆಗಳು ಬರುತ್ತಿದ್ದವಂತೆ. ಈ ಬಗ್ಗೆ ಮಾತನಾಡರುವ ವರುಣ್, ನಮ್ಮ ಮನೆಗೂ ಕರೆಗಳು ಬರುತ್ತಿದ್ದವು, ಆದರೆ ಮನೆಯಲ್ಲಿದ್ದ ಕೆಲಸದ ಸಿಬ್ಬಂದಿಗೆ ಅದು ಅಂಡರ್‌ವರ್ಲ್ಡ್ ಕರೆ ಎಂದು ತಿಳಿದಿರಲಿಲ್ಲ. ಕರೆ ಮಾಡಿದವರ ಜೊತೆ ಸಿಬ್ಬಂದಿ ವಾಗ್ವಾದ ನಡೆಸುತ್ತಿದ್ದರು. ಇದರಿಂದ ನಾವು ತೊಂದರೆಗೆ ಸಿಲುಕಿಕೊಳ್ಳುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.
ವರುಣ್ ಹೇಳಿರುವಂತೆ, ‘ಒಮ್ಮೆ ಅಂಡರ್ವಲ್ಡ್ನವರು ಫೋನ್ ಮಾಡಿದಾಗ ಅವರ ಮನೆಯ ಸಿಬ್ಬಂದಿ ಫೋನ್ ರಿಸೀವ್ ಮಾಡಿ ಕರೆ ಮಾಡಿದ ವ್ಯಕ್ತಿಯ ಜೊತೆಗೆ ಜಗಳ ಆಡಿದ್ದರಂತೆ. ಅಷ್ಟೇ ಅಲ್ಲದೆ, ಅವರಿಗೆ ವರುಣ್ ಧವನ್ ಮನೆಯ ಪೂರ್ಣ ವಿಳಾಸ ನೀಡಿ, ‘ಧೈರ್ಯವಿದ್ದರೆ ಪಕ್ಕದ ಗಾರ್ಡನ್‌ಗೆ ಬಾ, ನಿನಗೆ ಅಲ್ಲೇ ಸರಿಯಾಗಿ ಹೊಡೆಯುತ್ತೇನೆ’ ಎಂದು ಸವಾಲು ಹಾಕಿದ್ದರಂತೆ. ಬಳಿಕ ಚಿತ್ರರಂಗದ ಮತ್ತೊಬ್ಬ ನಟರು ಡೇವಿಡ್ ಧವನ್ ಅವರಿಗೆ ಕರೆ ಮಾಡಿ ಎಚ್ಚರಿಸಿದರು. ಕರೆ ಮಾಡಿದ ವ್ಯಕ್ತಿ ಆಯುಧಗಳೊಂದಿಗೆ ಮನೆಗೆ ಬರುವುದಾಗಿ ಮತ್ತು ನಿಮ್ಮ (ಡೇವಿಡ್ ಧವನ್) ಆಫೀಸ್ ಸಮಯದ ವಿವರಗಳನ್ನು ಕೇಳುತ್ತಿದ್ದಾನೆ ಎಂದು ತಿಳಿಸಿದರಂತೆ. ವಿಷಯದ ಗಂಭೀರತೆ ಅರಿತ ಧವನ್ ಕುಟುಂಬ, ಸುರಕ್ಷತೆಯ ದೃಷ್ಟಿಯಿಂದ ಅಂದು ರಾತ್ರಿಯೇ ತಮ್ಮ ಮನೆ ಬಿಟ್ಟು ಬೇರೆಡೆಗೆ ಹೋಗಿ ಉಳಿದುಕೊಳ್ಳಬೇಕಾಯಿತಂತೆ. ‘ಈಗ ಇದನ್ನು ನೆನೆಸಿಕೊಂಡರೆ ನಗು ಬರಬಹುದು, ಆದರೆ ಆ ಸಮಯದಲ್ಲಿ ಅದು ನಿಜಕ್ಕೂ ಭಯಾನಕವಾಗಿತ್ತು’ ಎಂದು ವರುಣ್ ತಿಳಿಸಿದ್ದಾರೆ.
ವರುಣ್ ಧವನ್ ಇತ್ತೀಚೆಗೆ ‘ಬಾರ್ಡರ್ 2‘ ಚಿತ್ರದಲ್ಲಿ ನಟಿಸಿದ್ದಾರೆ. ಇದು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಕಂಡಿದೆ. ಸದ್ಯ ಅವರು ತಮ್ಮ ತಂದೆ ಡೇವಿಡ್ ಧವನ್ ನಿರ್ದೇಶನದ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದರಲ್ಲಿ ಪೂಜಾ ಹೆಗ್ಡೆ ಮತ್ತು ಮೃಣಾಲ್ ಠಾಕೂರ್ ನಾಯಕಿಯರಾಗಿ ನಟಿಸಿದ್ದಾರೆ. ಈ ಚಿತ್ರವು ಜೂನ್ 04 ರಂದು ಬಿಡುಗಡೆ ಆಗಬೇಕಿತ್ತು, ಆದರೆ ಅದೇ ದಿನ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆಗುತ್ತಿರುವುದರಿಂದ ಬಿಡುಗಡೆ ದಿನಾಂಕ ಮುಂದೂಡಲಾಗಿದೆ.
ಬೆಂಗಳೂರು, ಮಾ.28: ಪೊಲೀಸ್ ಇಲಾಖೆಯಲ್ಲಿ ಅಸಾಧಾರಣ ಸೇವೆ ಮತ್ತು ದಕ್ಷತೆ ಮೆರೆದ ಒಟ್ಟು 153 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ 2025ನೇ ಸಾಲಿನ ಪ್ರತಿಷ್ಠಿತ ‘ಮುಖ್ಯಮಂತ್ರಿ ಪದಕ’ (Chief Minister’s Medal) ಪ್ರಕಟವಾಗಿದೆ. ಏಪ್ರಿಲ್ 2ರಂದು ಬೆಂಗಳೂರಿನಲ್ಲಿ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಈ ಪದಕಗಳನ್ನು ಪ್ರದಾನ ಮಾಡಲಾಗುವುದು. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸಿದ ಎಸ್‌ಐಟಿ (SIT) ತಂಡದಲ್ಲಿದ್ದ ಐಪಿಎಸ್ ಅಧಿಕಾರಿ, ಬಳ್ಳಾರಿ ಎಸ್ಪಿ ಡಾ. ಸುಮನ್ ಡಿ. ಪನ್ನೇಕರ್ ಅವರಿಗೆ ಈ ಬಾರಿ ಪದಕ ಒಲಿದಿದೆ. ಅತ್ಯಂತ ಸಂಕೀರ್ಣವಾಗಿದ್ದ ಈ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಹಿಳಾ ಅಧಿಕಾರಿಗಳ ದಕ್ಷತೆಗೆ ಈ ಮೂಲಕ ಮನ್ನಣೆ ಸಿಕ್ಕಂತಾಗಿದೆ.
ಒಟ್ಟು 153 ಮಂದಿಯ ಪಟ್ಟಿಯಲ್ಲಿ 6 ಐಪಿಎಸ್ ಅಧಿಕಾರಿಗಳು ಸ್ಥಾನ ಪಡೆದಿದ್ದಾರೆ. ಬಳ್ಳಾರಿ ಎಸ್ಪಿ ಡಾ. ಸುಮನ್ ಡಿ. ಪನ್ನೇಕರ್, ಉಡುಪಿ ಎಸ್ಪಿ ಡಾ. ಕೆ. ಅರುಣ್, ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್, ಬೆಂಗಳೂರು ಡಿಸಿಪಿ (ಸಂಚಾರ ದಕ್ಷಿಣ) ಡಾ. ಗೋಪಾಲ ಎಂ. ಬ್ಯಾಕೋಡ, ಹಾಸನ ಎಎಸ್ಪಿ-1 ಎಂ.ಕೆ. ತಮ್ಮಯ್ಯ, ಶಿವಮೊಗ್ಗ ಎಎಸ್ಪಿ-2 ಎಸ್. ರಮೇಶ್ ಕುಮಾರ್. ಇವರಲ್ಲದೆ 12 ಮಂದಿ ಡಿವೈಎಸ್ಪಿಗಳು ಹಾಗೂ ವಿವಿಧ ಹಂತದ ಸಿಬ್ಬಂದಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಪದಕ ವಿಜೇತರು ನಿಗದಿತ ಸಮವಸ್ತ್ರ ಧರಿಸಿ ಸಮಾರಂಭಕ್ಕೆ ಹಾಜರಾಗುವಂತೆ ಡಿಜಿಪಿ ಡಾ. ಎಂ.ಎ. ಸಲೀಂ ಸೂಚಿಸಿದ್ದಾರೆ.
ಹಿರಿಯ ಐಪಿಎಸ್ ಮತ್ತು ಗೆಜೆಟೆಡ್ ಅಧಿಕಾರಿಗಳು:
ಕ್ರ.ಸಂ
ಹೆಸರು
ಹುದ್ದೆ ಮತ್ತು ಕಾರ್ಯಸ್ಥಳ
1
ಡಾ. ಸುಮನ್ ಡಿ ಪೆನ್ನೇಕರ್
ಐಪಿಎಸ್, ಎಸ್ಪಿ, ಬಳ್ಳಾರಿ (SIT ಸದಸ್ಯೆ)
2
ಡಾ. ಅರುಣ್ ಕೆ
ಐಪಿಎಸ್, ಎಸ್ಪಿ, ಉಡುಪಿ
3
ಪೃಥ್ವಿಕ್ ಶಂಕರ್
ಐಪಿಎಸ್, ಎಸ್ಪಿ, ಯಾದಗಿರಿ
4
ಡಾ. ಗೋಪಾಲ ಎಂ ಬ್ಯಾಕೋಡ
ಐಪಿಎಸ್, ಡಿಸಿಪಿ (ಸಂಚಾರ ದಕ್ಷಿಣ), ಬೆಂಗಳೂರು
5
ಶ್ರೀಹರಿಬಾಬು ಬಿ.ಎಲ್.
ಐಪಿಎಸ್, ಡಿಸಿಪಿ (ಅಪರಾಧ), ಬೆಂಗಳೂರು
6
ನಜ್ಮಾ ಫಾರೂಕಿ
ಎಸಿಪಿ, ಮಂಗಳೂರು
ಎಸಿಪಿ ಮತ್ತು ಡಿವೈಎಸ್‌ಪಿ ಅಧಿಕಾರಿಗಳ ಪಟ್ಟಿ
ಕ್ರ.ಸಂ
ಹೆಸರು
ಹುದ್ದೆ ಮತ್ತು ಕಾರ್ಯಸ್ಥಳ
1
ಎಂ ಕೆ ತಮ್ಮಯ್ಯ
ಅಡಿಷನಲ್ ಎಸ್ಪಿ, ಹಾಸನ
2
ಎಸ್ ರಮೇಶ್ ಕುಮಾರ್
ಅಡಿಷನಲ್ ಎಸ್ಪಿ, ಶಿವಮೊಗ್ಗ
3
ವಾಸು ಆರ್
ಡಿವೈಎಸ್‌ಪಿ, ರಾಜ್ಯ ಗುಪ್ತವಾರ್ತೆ
4
ಸಂತೋಷ್ ದಯಾನಂದ
ಎಸಿಪಿ, ಬೆಳಗಾವಿ ನಗರ
5
ನಾರಾಯಣಸ್ವಾಮಿ ವಿ
ಎಸಿಪಿ, ಬೆಂಗಳೂರು ನಗರ
6
ತುಳಜಪ್ಪ ಸುಲ್ಪಿ
ಡಿವೈಎಸ್‌ಪಿ, ವಿಜಯಪುರ
7
ಸಿದ್ದಲಿಂಗಪ್ಪಗೌಡ ಪಾಟೀಲ್
ಡಿವೈಎಸ್‌ಪಿ, ಕೊಪ್ಪಳ
8
ಎಂ ಹೆಚ್ ಉಮೇಶ್
ಡಿವೈಎಸ್‌ಪಿ, ಸಿಐಡಿ
9
ಪ್ರಭಾಕರ್ ಜಿ
ಎಸಿಪಿ, ಸಂಚಾರ ಪ್ಲಾನಿಂಗ್, ಬೆಂಗಳೂರು
10
ಹೆಚ್ ಕೆ ಮಹಾನಂದ
ಎಸಿಪಿ, ಸಿಸಿಬಿ, ಬೆಂಗಳೂರು
11
ರಾಘವೇಂದ್ರ ಬಿ ಹವಾಲ್ದಾರ್
ಡಿವೈಎಸ್‌ಪಿ, ರಾಜ್ಯ ಗುಪ್ತವಾರ್ತೆ
12
ನಾಗರಾಜ್ ಕೆ ಕೆನ್ನಿಕರ್
ಎಸಿಪಿ, ಸಿಎಆರ್, ಬೆಂಗಳೂರು
13
ವೆಂಕಟೇಶ್
ಡಿವೈಎಸ್‌ಪಿ, ಸೈಬರ್ ಕ್ರೈಂ, ರಾಯಚೂರು
14
ಕೆ ಬಸವರಾಜು
ಡಿವೈಎಸ್‌ಪಿ, ಐಎಸ್‌ಡಿ, ಕಲಬುರಗಿ
15
ಪಾಂಡುರಂಗ ವಿ ಭಂಡಾರಿ
ಎಸಿಪಿ, ಬೆಂಗಳೂರು ನಗರ
16
ಡಾ. ಸಂತೋಷ ಚವ್ಹಾಣ
ಡಿವೈಎಸ್‌ಪಿ, ಹರಪನಹಳ್ಳಿ
17
ಬಾಳಪ್ಪ ನಂದಗಾವಿ
ಡಿವೈಎಸ್‌ಪಿ, ಬಸವನಬಾಗೇವಾಡಿ
18
ಲಕ್ಷ್ಮೀಕಾಂತ್ ಆರ್
ಎಸಿಪಿ, ಸಿಸಿಪಿಎಸ್, ಬೆಂಗಳೂರು
ಪೊಲೀಸ್ ಇನ್ಸ್‌ಪೆಕ್ಟರ್ (PI) ಮತ್ತು ಸಬ್-ಇನ್ಸ್‌ಪೆಕ್ಟರ್ (PSI) ಪಟ್ಟಿ
ಹೆಸರು (PI)
ಹೆಸರು (PSI/PI)
ಎಂ ಜಿ ದಯಾನಂದ
ಕಿರಣ್ ಕುಮಾರ್ ಬಿ ವಿ (PSI)
ಶಿವರಾಜ್ ಆರ್ ಮುಧೋಳ್
ಕುಮಾರ್ ದುಂಡಪ್ಪ ಹಡ್ಕರ್ (PSI)
ಕೆ ಶರಣು ವರ್ಮ
ಶ್ರೀಕಂಠೇಗೌಡ (PSI)
ಉದಯ ರವಿ ಜಿ
ಕಳಿಂಗ ಎ (PSI)
ಜಿ ಸೋಮಶೇಖರ್
ಸುರೇಶ್ (PSI)
ಸುರೇಶ್ ಕುಮಾರ್ ಎಸ್ ಡಿ
ಸುನೀಲ್ ಪವಾರ್ (PSI)
ಬಿ ಮಲ್ಲಿಕಾರ್ಜುನ
ಟಿಪ್ಪುಸುಲ್ತಾನ್ ನಾಯಕ್ವಾಡಿ (PSI)
ಸಿದ್ದೇಶ ಎಂ ಡಿ
ರಾಜ್‌ಕುಮಾರ್ ಸಿದ್ರಾಮಪ್ಪ (PSI)
ಸಂತೋಷ್ ಕಶ್ಯಪ್ ಆರ್
ಭೀಮಪ್ಪ ನಾಗಪ್ಪ (PSI)
ಸತೀಶ್ ಕುಮಾರ್ ವೈ
ಮಂಜನಗೌಡ ಪಾಟೀಲ್ (PSI)
ಪ್ರಶೀಲಾ ಬಿ ಎಸ್
ಶ್ರೀಕಾಂತ್ ಕಾಂಬ್ಳೆ (PI)
ಸುಶೀಲ್ ಕುಮಾರ್
ಜಯಾನಂದ ಎನ್ (PI)
ಶ್ರೀಶೈಲಕುಮಾರ ಜೆ
ನವೀನ ಎಸ್ ನಾಯ್ಕ (PSI)
ಆನಂದ ವಿ ಠಕ್ಕಣನವರ್
ನಯಾಜ್ (PI)
ಮಂಜೇಶ್ ಎಂ ಜೆ
ಸುರೇಶ್ ಎಂ ಎನ್ (PI)
ಸೃಜನ ಎಂ
ಮಂಜುನಾಥ ಬಿ (PSI)
ರಾಜೇಶ್ ಆರ್
ಕಿಶೋರ್ ಬಿ ಟಿ (PSI)
ಇ ಕೊದಂಡಪಾಣಿ (PSI)
ಮಹಾದೇವಪ್ಪ ಡಿ (PI)
ಗ್ಲೋರಿ ಕ್ರಿಸ್ಟಿನಾ ಎ
ಬಿ ಜಿ ಕುಮಾರ್ (PI)
ಇತರೆ ಶ್ರೇಣಿಯ ಅಧಿಕಾರಿಗಳು ಮತ್ತು ಸಿಬ್ಬಂದಿ:
ಹೆಸರು
ಶ್ರೇಣಿ
ಹೆಸರು
ಶ್ರೇಣಿ
ಪ್ರದೀಪ ಹೆಚ್ ಕೆ
ಅಸಿಸ್ಟೆಂಟ್ ಕಮಾಂಡೆಂಟ್
ಇರ್ಷಾದ್ ಪಿ
HC
ರಾಮನಾಥ ಪಿ ಬಿ
PI
ಮಹಾಲಿಂಗ ಗಾಣಿಗ
HC
ಬಸಣ್ಣ ಎಸ್
RSI
ಬಾಹುಬಾಲಿ ಎ ಅನಗಲೆ
HC
ಪ್ರದೀಪ್ ನಾಯಕ್
RSI
ವಿಜಯ ಕುಮಾರ್ ರೈ
HC
ಆರ್ ಸುಬ್ರಮಣಿ
RSI
ಬೀರಪ್ಪ ಬಿ
HC
ಮಂಜುನಾಥ್
RSI
ಸುವರ್ಣ
PC
ಕಾರ್ತಿಕ್ ಬಿ ಎಸ್
RSI
ಷರೀಫ್ ಎಂ
PC
ನಿಸಾರ್ ಅಹಮದ್
RSI
ಆರೀಫ್ ಮುದನಾಳ್
PC
ಕೆ ಎಂ ಶಿವಶೇಖರ
RSI
ಪ್ರವೀಣ್ ಬಿಳಗಿಮಠ
PC
ಚಂದ್ರಶೆಟ್ಟಿ
ASI
ರಾಘವೇಂದ್ರ ಹೆಚ್ ಬಿ
PC
ಕೃಷ್ಣ ಸಿ ಎನ್
ASI
ರವಿ ಜಿ ಎನ್
Follower
ಜೋಷಿ ಕುಟ್ಟಪ್ಪ
ASI
ರಮೇಶ್ ಎಂ
HC
ಮಮತಾ ಎಂ
ASI
ಹನುಮಂತಪ್ಪ ಶಿರೀಹಳ್ಳಿ
PSI
ಸೌಮ್ಯಲತಾ ಡಿ
ASI
ಅಣ್ಣಪ್ಪ ಎನ್
HC
ರತ್ನಮ್ಮ ಕೆ
ASI
ಗುರುಸ್ವಾಮಿ
ASI
ಬಿ ಎಂ ಹಫೀದುನ್ನೀಸ
ASI
ಎನ್ ವರದರಾಜು
ARSI
ಮಹೇಂದ್ರ ಹೆಚ್ ಪಿ
ASI
ವಸಂತ್ ಕುಮಾರ್
HC
ಅಶೋಕ ಎಸ್ ಜಿ
ASI
ಕೆ ಎಂ ಆನಂದ
PC
ತಿಲಕ್ ರಾಜ್
ASI
ಮಣಿ ಎಂ ಎನ್
HC
ರವಿಕುಮಾರ
ASI
ಸತೀಶ್ ಹೆಚ್
HC
ಪ್ರಕಾಶ್ ಡಿ ನಾಯಕ್
HC
ರಘುರಾಜ್ ಎಸ್
RSI
ನಾಗರಾಜು
HC
ಮಹಮ್ಮದ್ ಶಬ್ಬಿರ್
HC
ಫ್ರಾಂಕಿ ಎಬಿನೇಚರ್
HC
ಜಗದೀಶ್ ಕಾದ್ರೋಳ್ಳಿ
HC
ಡಾ. ಸಂತೋಷ್ ಶೆಟ್ಟಿ
HC
ಗಿರೀಶ್ ಟಿ ಎಸ್
HC
ಜಾಫರ್ ಬಚ್ಚೇರಿ
HC
ರಾಮನಗೌಡ ಬಿರಾದರ
PC
ಸಂತೋಷ್ ಎಂ
HC
ಚಿದಾನಂದ ಗಿಡಗಂಚಿ
PC
ನವೀನ್ ಬಿ ಎಸ್
HC
ಗಿರೀಶ ಜಿ ಬಿ
PC
ಸುನೀಲ್ ವಿಷ್ಣು ಕಾಂಬ್ಳೆ
HC
ಅಭಿಷೇಕ್ ಗೌಡ ಎಂ
PC
ಪ್ರಸನ್ನ ಕುಮಾರ್ ಬಿ ಎನ್
HC
ಪರಶುರಾಮ
PSI
ಬಿ ವಿ ಅಶೋಕ
HC
ಈರಪ್ಪ ಪೂಜಾರಿ
HC
ಅಬ್ದುಲ್ ರಜಾಕ್
HC
ಡಿ ಎಸ್ ಬಸವರಾಜು
Follower
ಗಿರೀಶ್ ಬಿ ಎಸ್
HC
ವಿರೇಶ್ ಎ ಜೋಳದ
HC
ರಾಮನಾಥ್ ಎಸ್ ಪತ್ತೆಗಾರ್
HC
ನಾಗರತ್ನಮ್ಮ ಹೆಚ್ ಎಸ್
HC
ಲಲಿತಾಲಕ್ಷ್ಮಿ
HC
ರೇವಣ್ಣ
HC
ಸುಮಾಲತಾ ಎಸ್
HC
ಜಯಕುಮಾರ್
HC
ರಾಘವೇಂದ್ರ ಜಿ
HC
ರಾಘವೇಂದ್ರ ಎಸ್ ಪಿ
HC
ರಾಜಕುಮಾರ್ ಜೆ ಭೋಸಗಿ
HC
ಮಂಜುನಾಥ ಟಿ
HC
ಮಂಜುನಾಥ ಸಿ
HC
ದಿವಾಕರ ವಿ ಎಂ
HC
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ನಡೆದಿದ್ದ ಸವಾಲಿನ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ವಿಜಯಪುರ ಜಿಲ್ಲೆಯ ಐವರು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ 2025ನೇ ಸಾಲಿನ ಪ್ರತಿಷ್ಠಿತ ‘ಮುಖ್ಯಮಂತ್ರಿ ಪದಕ’ ಘೋಷಣೆಯಾಗಿದೆ. ಜಿಲ್ಲೆಯ ಮೂವರು ಹಿರಿಯ ಅಧಿಕಾರಿಗಳು ಹಾಗೂ ಇಬ್ಬರು ಕಾನ್‌ಸ್ಟೇಬಲ್‌ಗಳು ಈ ಗೌರವಕ್ಕೆ ಭಾಜನರಾಗಿದ್ದಾರೆ.
2025ರ ಮೇ 25ರಂದು ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್‌ನಲ್ಲಿ ನಡೆದಿದ್ದ ಭಾರಿ ಕಳ್ಳತನ ಪ್ರಕರಣ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿತ್ತು. ಈ ಪ್ರಕರಣವನ್ನು ಬೆನ್ನಟ್ಟಿದ ಈ ಅಧಿಕಾರಿಗಳ ತಂಡ, ಅತ್ಯಂತ ಚಾಕಚಕ್ಯತೆಯಿಂದ ಆರೋಪಿಗಳನ್ನು ಬಂಧಿಸಿ ಮಾಲು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇವರ ಈ ಶ್ಲಾಘನೀಯ ಸೇವೆಯನ್ನು ಗುರುತಿಸಿ ಸರ್ಕಾರ ಈ ಪದಕವನ್ನು ನೀಡಿದೆ. ಈ ಸಾಧನೆಗೆ ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ (SP) ಲಕ್ಷ್ಮಣ ನಿಂಬರಗಿ ಅವರು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ.