All posts by nagaraj11081993

Optical Illusion: ಈ ಚಿತ್ರದಲ್ಲಿರುವ ಅಣಬೆಯನ್ನು 30 ಸೆಕೆಂಡುಗಳಲ್ಲಿ ಗುರುತಿಸಬಲ್ಲಿರಾ – Kannada News | Optical Illusion: Let’s find the hidden mushroom in this picture

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಪ್ರತಿನಿತ್ಯ ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್‌ ಇಲ್ಯೂಷನ್‌ (optical illusion) ಸೇರಿದಂತೆ ಇನ್ನಿತ್ತರ ಟ್ರಿಕ್ಕಿ ಒಗಟಿನ ಚಿತ್ರಗಳು ವೈರಲ್ ಆಗುತ್ತಿರುತ್ತವೆ. ಈ ಒಗಟಿನ ಚಿತ್ರಗಳು ನೋಡುವುದಕ್ಕೆ ಸುಲಭವಾಗಿ ಕಂಡರೂ ಉತ್ತರ ಕಂಡು ಕೊಳ್ಳುವುದು ಸುಲಭವಲ್ಲ. ನೀವು ಈ ಹಿಂದೆ ಇಂತಹ ಒಗಟುಗಳನ್ನು ಬಿಡಿಸುವಲ್ಲಿ ವಿಫಲರಾಗಿದ್ದೀರಾ. ಇದೀಗ ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸುವ ಮತ್ತೊಂದು ಆಪ್ಟಿಕಲ್‌ ಇಲ್ಯೂಷನ್ ಚಿತ್ರವೊಂದಿದೆ. ಈ ಚಿತ್ರದಲ್ಲಿ ಜಾಣತನದಿಂದ ಮರೆಮಾಡಲಾಗಿರುವ ಅಣಬೆಯನ್ನು ಮೂವತ್ತು ಸೆಕೆಂಡುಗಳೊಳಗೆ ಪತ್ತೆ ಹಚ್ಚಬೇಕು. ಈ ಒಗಟು ಬಿಡಿಸಲು ನೀವು ರೆಡಿ ಇದ್ದೀರಾ.

ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ

ಇಲ್ಯೂಷನ್ ಚಿತ್ರಗಳು ನಿಮ್ಮನ್ನು ಭ್ರಮೆಯಲ್ಲಿ ಮುಳುಗಿಸಿ ನಿಮ್ಮ ಕಣ್ಣನ್ನು ಮೋಸಗೊಳಿಸುತ್ತವೆ. ಈ ಚಿತ್ರವು ನೋಡಲು ಅದೇ ರೀತಿಯಿದೆ. ನೀವು ಈ ಚಿತ್ರದಲ್ಲಿ ಕುರಿ ಮಂದೆಯನ್ನು ಕಾಣಬಹುದು. ಕುರಿಗಳನ್ನು ಒಳಗೊಂಡ ಪ್ರದೇಶದಲ್ಲಿ ಅಣಬೆಯೊಂದಿದೆ. ನೀವು ನಿಮ್ಮ ವೀಕ್ಷಣಾ ಸಾಮರ್ಥ್ಯ ಬಳಸಿ 30 ಸೆಕೆಂಡುಗಳೊಳಗೆ ಈ ಗುಪ್ತವಸ್ತುವನ್ನು ಕಂಡು ಹಿಡಿಯಬೇಕು.

ಇದನ್ನೂ ಓದಿ:ಜಸ್ಟ್ 7 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿರುವ ನವಿಲನ್ನು ಗುರುತಿಸಬಲ್ಲಿರಾ

ನಿಮ್ಮ ಕಣ್ಣಿಗೆ ಅಣಬೆ ಕಾಣಿಸಿತೇ?

ಈ ಆಪ್ಟಿಕಲ್ ಇಲ್ಯೂಷನ್ ಒಗಟಿನ ಆಟವನ್ನು ಬಿಡಿಸಲು 30 ಸೆಕೆಂಡುಗಳನ್ನು ನೀಡಲಾಗಿದೆ. ಈ ನಿರ್ದಿಷ್ಟ ಸಮಯದೊಳಗೆ ಅಣಬೆಯನ್ನು ಗುರುತಿಸುವುದು ಸಾಧ್ಯವಾದರೆ ನಿಮ್ಮ ವೀಕ್ಷಣಾ ಸಾಮರ್ಥ್ಯ ಅತ್ಯುತ್ತಮವಾಗಿದೆ ಎಂದರ್ಥ. ಒಂದು ವೇಳೆ ಈ ಚಿತ್ರದಲ್ಲಿರುವ ಗುಪ್ತ ವಸ್ತುವನ್ನು ಕಂಡು ಹಿಡಿಯುವುದು ಸಾಧ್ಯವಾಗಿಲ್ಲ ಎಂದಾದರೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಅಣಬೆ ಎಲ್ಲಿದೆ ಎಂದು ಈ ಕೆಳಗಿನ ಚಿತ್ರದಲ್ಲಿ ನಾವೇ ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇದು ಬಾಂಗ್ಲಾದೇಶದ 2ನೇ ವಿಮೋಚನೆ: 2024ರ ದಂಗೆಯನ್ನು ಹೊಗಳಿದ ಬಿಎನ್​ಪಿ ನಾಯಕ ತಾರಿಖ್ ರಹಮಾನ್ – Kannada News | Ex Bangla PM Khaleda Zia’s son Tarique Rahman describes 2024 uprising as liberation

ಬಾಂಗ್ಲಾ ಹಂಗಾಮಿ ಪಿಎಂ ಜೊತೆ ತಾರಿಖ್ ರಹಮಾನ್

ಢಾಕಾ, ಡಿಸೆಂಬರ್ 25: ಹದಿನೇಳು ವರ್ಷದ ಹಿಂದೆ ಕಾನೂನು ಕುಣಿಕೆಯಿಂದ ತಪ್ಪಿಸಿಕೊಂಡು ಬಾಂಗ್ಲಾದೇಶ ಬಿಟ್ಟು ಹೊರದೇಶಕ್ಕೆ ಹೋಗಿದ್ದ ತಾರಿಖ್ ರಹಮಾನ್ ಇದೀಗ ತವರಿಗೆ ವಾಪಸ್ ಬಂದಿದ್ದು, ಚುನಾವಣೆಗೆ ರಹಕಹಳೆಗಳನ್ನು ಮೊಳಗಿಸುತ್ತಿದ್ದಾರೆ. 2024ರಲ್ಲಿ ಶೇಖ್ ಹಸೀನಾ (Sheikh Hasina) ಸರ್ಕಾರ ಪತನಗೊಳ್ಳಲು ಕಾರಣವಾದ ವಿದ್ಯಾರ್ಥಿ ನೇತೃತ್ವದ ಹೋರಾಟ ಹಾಗೂ ದಂಗೆಗಳನ್ನು ತಾರಿಖ್ ರಹಮಾನ್ (Tarique Rahman) ಹೊಗಳಿದ್ಧಾರೆ. ಮಾಜಿ ಬಾಂಗ್ಲಾ ಪ್ರಧಾನಿ ಖಾಲಿದಾ ಜಿಯಾ (Khaleda Zia) ಅವರ ಮಗನಾದ 60 ವರ್ಷದ ತಾರಿಖ್ ರಹಮಾನ್, ಬಾಂಗ್ಲಾಗೆ ಎರಡನೇ ಬಾರಿ ವಿಮೋಚನೆ ಆಗಿದೆ ಎಂದಿದ್ದಾರೆ.

1971ರಲ್ಲಿ ಮೊದಲ ವಿಮೋಚನೆ ಆಯಿತು. ಈಗ 2024ರಲ್ಲಿ ಎರಡನೇ ಬಾರಿ ವಿಮೋಚನೆ ಆಗಿದೆ. 2024ರಲ್ಲಿ ಆಗಿದ್ದು ಜನರ ಹೋರಾಟ. ಇದು ದೇಶದ ಪ್ರಜಾತಾಂತ್ರಿಕ ಆಶಯಗಳನ್ನು ಮರಳಿ ಸ್ಥಾಪಿಸುವ ಪ್ರಯತ್ನವಾಗಿದೆ ಎಂದು ತಾರೀಕ್ ರಹಮಾನ್ ಹೇಳಿದ್ದಾರೆ.

ಇದನ್ನೂ ಓದಿ: ಫಾಕ್ಸ್​ಕಾನ್ ಘಟಕ; ಕರ್ನಾಟಕ ಮಾದರಿ ಎಂದ ರಾಹುಲ್ ಗಾಂಧಿ; ಇದು ಮೇಕ್ ಇನ್ ಇಂಡಿಯಾ ಎಫೆಕ್ಟ್ ಎಂದ ಕೇಂದ್ರ ಸಚಿವ

ಕಳೆದ ವರ್ಷ ಆರಂಭವಾದ ದಂಗೆಗಳ ಬಳಿಕ ಈಗ ಬಾಂಗ್ಲಾದೇಶದಲ್ಲಿ ಬಿಎನ್​ಪಿ ಪಕ್ಷದ ಪರ ಅಲೆಯೇ ಎದ್ದಿದೆ ಎಂದು ಹೇಳಲಾಗುತ್ತಿದೆ. ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಕ್ಷದ ಅಧ್ಯಕ್ಷೆ ಖಾಲಿದಾ ಜಿಯಾಗೆ 80 ವರ್ಷ ವಯಸ್ಸಾಗಿದೆ. ತಮ್ಮ ಮಗ ತಾರಿಖ್ ರಹಮಾನ್​ಗೆ ಪಕ್ಷದ ಚುಕ್ಕಾಣಿ ಬಿಟ್ಟುಕೊಡುವ ನಿರೀಕ್ಷೆ ಇದೆ. ಮುಂದಿನ ವರ್ಷ ನಡೆಯಲಿರುವ ಬಾಂಗ್ಲಾ ಚುನಾವಣೆಯಲ್ಲಿ ಬಿಎನ್​ಪಿ ಗೆಲುವು ಸಾಧಿಸಿದರೆ ತಾರಿಖ್ ರಹಮಾನ್ ಅವರ ನೇತೃತ್ವದಲ್ಲೇ ಸರ್ಕಾರ ರಚನೆಯಾಗಬಹುದು ಎಂದು ಅಲ್ಲಿಯ ರಾಜಕೀಯ ಪಂಡಿತರು ನಂಬಿದ್ದಾರೆ.

ಎಲ್ಲಾ ಸಮುದಾಯ ಮತ್ತು ಜನಾಂಗಗಳಿಗೆ ಸಮಾನ ಆದ್ಯತೆ

ಎಲ್ಲರನ್ನೂ ಒಳಗೊಳ್ಳುವ ಬಾಂಗ್ಲಾದೇಶದ ನಿರ್ಮಾಣ ಆಗಬೇಕು. ಅದರಲ್ಲಿ ಎಲ್ಲಾ ಸಮುದಾಯಗಳು ಹಾಗೂ ಜನಾಂಗಗಳು ಭಾಗಿಯಾಗಬೇಕು. ಏಕತೆ ಮತ್ತು ಸಮಾನತೆಯು ತಮ್ಮ ಪಕ್ಷದ ನೀತಿಯಲ್ಲಿ ಪ್ರಮುಖವಾಗಿರುತ್ತದೆ. ತಮ್ಮ ಪಕ್ಷವ ದೇಶದಲ್ಲಿ ಶಾಂತಿ, ಶಿಸ್ತು ಮತ್ತು ರಾಜಕೀಯ ಸ್ಥಿರತೆ ತರಲು ಅವಿರತವಾಗಿ ಶ್ರಮಿಸುತ್ತದೆ ಎಂದು ತಾರೀಖ್ ರಹಮಾನ್ ವಾಗ್ದಾನ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಐಫೋನ್ ಫ್ಯಾಕ್ಟರಿಯಲ್ಲಿ ಕ್ಷಿಪ್ರವೇಗದಲ್ಲಿ 30,000 ಉದ್ಯೋಗಿಗಳ ನೇಮಕ; ಭಾರತದಲ್ಲಿ ಸಿಕ್ಕಾಪಟ್ಟೆ ಆಗುತ್ತಿದೆ ಐಟಿ ಹೈರಿಂಗ್

ಡಿಸೆಂಬರ್ 12ರಂದು ಹತರಾದ ಬಿಎನ್​ಪಿ ನಾಯಕ ಉಸ್ಮಾನ್ ಹದಿ ಅವರನ್ನು ಇದೇ ವೇಳೆ ತಾರೀಖ್ ಸ್ಮರಿಸಿದ್ದಾರೆ. ಉಸ್ಮಾನ್ ಹದಿ ಅವರು ಪ್ರಜಾತಂತ್ರ ದೇಶದ ಕನಸು ಕಂಡಿದ್ದರು. ಅವರ ಕನಸು ನನಸು ಮಾಡಲು ಬಿಎನ್​ಪಿ ಪಕ್ಷ ಕೆಲಸ ಮಾಡುತ್ತದೆ ಎಂದು ತಾರೀಖ್ ಪ್ರಮಾಣ ಮಾಡಿದ್ದಾರೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 5:11 pm, Thu, 25 December 25

Source link

ಬಿಡುಗಡೆ ಸಿದ್ಧವಾಗಿದೆ ಹೊಸಬರ ಸೈಕಲಾಜಿಕಲ್‌ ಥ್ರಿಲ್ಲರ್‌ ಸಿನಿಮಾ ‘ವಿಕಲ್ಪ’ – Kannada News | Psychological thriller Kannada movie Vikalpa getting ready for release

ಹೊಸಬರ ತಂಡದ ‘ವಿಕಲ್ಪ’ ಸಿನಿಮಾ (Vikalpa Movie) ಬಿಡುಗಡೆಗೆ ಸಜ್ಜಾಗುತ್ತಿದೆ. ಸೈಕಲಾಜಿಕಲ್‌ ಥ್ರಿಲ್ಲರ್‌ ಕಥಾಹಂದರ ಈ ಸಿನಿಮಾದಲ್ಲಿ ಇದೆ. ಮನುಷ್ಯನ ಮನಸ್ಸಿನ ಸುಪ್ತ ಭಾವನೆಗಳು, ತುಮುಲ ತಲ್ಲಣಗಳನ್ನು ಈ ಸಿನಿಮಾದ ಮೂಲಕ ತೆರೆಮೇಲೆ ತರುತ್ತಿದ್ದಾರೆ ಯುವ ನಟ, ನಿರ್ದೇಶಕ ಪೃಥ್ವಿರಾಜ್‌ ಪಾಟೀಲ್‌. ಕನ್ನಡ ಚಿತ್ರರಂಗದಲ್ಲಿ ಸೈಕಲಾಜಿಕಲ್‌ ಥ್ರಿಲ್ಲರ್‌ (Psychological Thriller) ಸಿನಿಮಾಗಳ ಸಂಖ್ಯೆ ಕಡಿಮೆ. ಅಂಥ ವಿರಳ ಸಿನಿಮಾಗಳ ಸಾಲಿಗೆ ‘ವಿಕಲ್ಪ’ ಸಿನಿಮಾ ಕೂಡ ಸೇರುತ್ತಿದೆ. ‘ವಿಕಲ್ಪ’ ಎಂದರೆ ವಾಸ್ತವ ಹಾಗೂ ಕಲ್ಪನೆಗಳ ನಡುವಿನ ಒಂದು ಸ್ಥಿತಿ ಎಂದು ಚಿತ್ರತಂಡ ಹೇಳಿದೆ.

ಇದೊಂದು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಕಥೆ ಎಂದೆನಿಸಿದರೂ ಒಂದು ಸಂಪೂರ್ಣ ಥ್ರಿಲ್ಲರ್‌ ಸಿನಿಮಾ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಜೊತೆಗೆ ಹಾಸ್ಯ ಮತ್ತು ಮನರಂಜನೆಗೆ ಹೆಚ್ಚಿನ ಒತ್ತು ನೀಡಿ ಇಡೀ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ. ‘ಈ ಸಿನಿಮಾದಲ್ಲಿ ಕಥೆಯೆ ಹೀರೋ. ಇಲ್ಲಿ ಪ್ರತಿ ಪಾತ್ರ ಕೂಡ ನೋಡುಗರ ಮನಮುಟ್ಟುತ್ತವೆ’ ಎಂದು ನಿರ್ದೇಶಕ ಪೃಥ್ವಿರಾಜ್‌ ಪಾಟೀಲ್ ಅವರು ಹೇಳಿದ್ದಾರೆ.

ಪೃಥ್ವಿರಾಜ್‌ ಪಾಟೀಲ್‌ ಅವರು ಹವ್ಯಾಸಿ ರಂಗಭೂಮಿಯಲ್ಲಿ ಅನುಭವ ಹೊಂದಿದ್ದಾರೆ. ಐಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಅವರು ಈಗ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ‘ಸುರೂಸ್‌ ಟಾಕೀಸ್‌’ ಸಂಸ್ಥೆಯ ಅಡಿಯಲ್ಲಿ ಇಂದಿರಾ ಶಿವಸ್ವಾಮಿ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದು ಅವರ ಚೊಚ್ಚಲ ಚಿತ್ರ. ನಿರ್ದೇಶಕ ಪೃಥ್ವಿರಾಜ್‌ ಪಾಟೀಲ್‌ ಅವರೇ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.

ಈ ಸಿನಿಮಾದ ಮತ್ತೊಂದು ವಿಶೇಷ ಏನೆಂದರೆ, ಅನೇಕ ನುರಿತ ಮಾನಸಿಕ ವೈದ್ಯರ ಸಲಹೆಯ ಮೇರೆಗೆ ಈ ಸಿನಿಮಾದ ಹಲವು ಸನ್ನಿವೇಶಗಳನ್ನು ಚಿತ್ರಿಸಲಾಗಿದೆ. ಬೆಂಗಳೂರು, ಸಾಗರ, ಶಿರಸಿ, ತೀರ್ಥಹಳ್ಳಿ, ಕುಂದಾಪುರ, ಯಲ್ಲಾಪುರ ಸುತ್ತಮುತ್ತ ‘ವಿಕಲ್ಪ’ ಸಿನಿಮಾದ ಶೂಟಿಂಗ್ ಮಾಡಲಾಗಿದೆ. ಸಿಂಗಾಪುರ, ನೆದರ್ಲ್ಯಾಂಡ್‌ ಮುಂತಾದ ದೇಶಗಳಲ್ಲೂ ಚಿತ್ರೀಕರಣ ನಡೆದಿದೆ.

ಪೃಥ್ವಿರಾಜ್‌ ಪಾಟೀಲ್‌, ಸಂಧ್ಯಾ ವಿನಾಯಕ್‌, ನಾಗಶ್ರೀ ಹೆಬ್ಬಾರ್‌, ಗಣಪತಿ ವಡ್ಡಿನಗದ್ದೆ, ಸ್ವರೂಪ್‌ ಬಚ್ಚ್‌, ಪೂಜಾ ಬಚ್ಚ್‌, ಡಾ. ಪ್ರಕೃತಿ, ಜಯಂತ್‌ ಡೇವಿಡ್‌, ಮಾಸ್ಟರ್‌ ಆಯುಷ್ ಸಂತೋಷ್‌ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಖ್ಯಾತ ನಟಿ ಹರಿಣಿ ಶ್ರೀಕಾಂತ್‌ ಅವರು ಈ ಸಿನಿಮಾದಲ್ಲಿ ವಿಭಿನ್ನ ಹಾಗೂ ವಿಶೇಷವಾದ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ರಂಗಭೂಮಿ ಕಲಾವಿದರಾದ ಗಣಪತಿ ಹಿತ್ತಲಕೈ, ಪ್ರಜ್ಞಾ ಗಣಪತಿ, ಗಿರೀಶ್‌ ಹೆಗಡೆ, ಮಾಧವ ಶರ್ಮಾ, ಗಣಪತಿ ಎ.ಆರ್, ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ‘ಡೆವಿಲ್’ ಬಳಿಕ ರೇಟಿಂಗ್ ಕೊಡದಂತೆ ಕೋರ್ಟ್​​ನಿಂದ ಆರ್ಡರ್ ತಂದ ‘45’, ‘ಮಾರ್ಕ್​​’

‘ವಿಕಲ್ಪ’ ಸಿನಿಮಾಗೆ ಮಿಥುನ್‌ ತೀರ್ಥಹಳ್ಳಿ ಸಹ-ನಿರ್ದೇಶನ ಮಾಡಿದ್ದಾರೆ. ಅಭಿರಾಮ್‌ ಗೌಡ ಅವರು ಛಾಯಾಗ್ರಣ ಮಾಡಿದ್ದಾರೆ. ಸುರೇಶ್‌ ಆರುಮುಗಮ್‌ ಅವರ ಸಂಕಲನ, ಸಂವತ್ಸರ ಅವರ ಸಂಗೀತ ಈ ಸಿನಿಮಾಗಿದೆ. ಪೃಥ್ವಿರಾಜ್‌ ಪಾಟಿಲ್‌ ಹಾಗೂ ಕೌಂಡಿನ್ಯ ಕುಡ್ಲುತೋಟ ಅವರು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಸಿದ್ದಾರ್ಥ್‌ ಬೆಳ್ಮಣ್ಣು, ಸಂವತ್ಸರ, ಇಂಚರಾ, ಶ್ರೀರಂಜಿನಿ ಮುಂತಾದವರು ‘ವಿಕಲ್ಪ’ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಚಿತ್ರದುರ್ಗ ಬಳಿ ಬಸ್​​ ದುರಂತ: ಮಕ್ಕಳು ನಾಪತ್ತೆ, ಕರುಳು ಹಿಂಡುವಂತಿದೆ ಪೋಷಕರ ಗೋಳಾಟ – Kannada News | Chitradurga Bus Tragedy: Parents Agony Over Missing Daughters Navya and Manasa

ಚಿತ್ರದುರ್ಗ, ಡಿಸೆಂಬರ್​​ 25: ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಖಾಸಗಿ ಸ್ಲೀಪರ್​​ ಬಸ್​​ ಹೊತ್ತಿ ಉರಿದ ಪರಿಣಾಮ ಐವರು ಸಜೀವ ದಹನವಾಗಿದ್ದಾರೆ. ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಬಸ್​​ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸಂಪೂರ್ಣವಾಗಿ ಸುಟ್ಟುಕರಕಲಾಗಿದೆ. ಘಟನೆ ಬಳಿಕ ಮೂವರು ನಾಪತ್ತೆಯಾಗಿದ್ದು, ಆ ಪೈಕಿ ಈಗ ಒಬ್ಬರ ಪತ್ತೆಯಾಗಿದೆ. ಉಳಿದ ಇಬ್ಬರು ಯುವತಿಯರು ಇನ್ನೂ ಮಿಸ್ಸಿಂಗ್​​ ಹಿನ್ನೆಲೆ
ಅವರ ಪೋಷಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿ, ತಮ್ಮ ಮಕ್ಕಳನ್ನು ಹುಡುಕುತ್ತಾ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹುಬ್ಬಳ್ಳಿ ಮರ್ಯಾದೆ ಹತ್ಯೆ: ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಕೆಂಡಾಮಂಡಲ

ಹುಬ್ಬಳ್ಳಿ, (ಡಿಸೆಂಬರ್ 25): ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರದಲ್ಲಿ ಗರ್ಭಿಣಿ ಪುತ್ರಿ ಮಾನ್ಯಗಳನ್ನು ತಂದೆಯೇ ಕೊಚ್ಚಿ ಕೊಂದಿದ್ದಾನೆ. ದಲಿತ ಹುಡುಗನ ಮದುವೆಯಾಗಿದ್ದಕ್ಕೆ ಈ ಮರ್ಯಾದೆ ಹತ್ಯೆ ನಡೆದಿದೆ. ಇನ್ನು ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದು, ತಂದೆಯ ಕೃತ್ಯಕ್ಕೆ ಆಕ್ರೋಗಳು ವ್ಯಕ್ತವಾಗುತ್ತಿವೆ. ಇನ್ನು ಕೆಲವರು ಹೆತ್ತು ಹೊತ್ತು ಬೆಳೆಸಿದ ಮಗಳು ಈ ರೀತಿ ಮಾರ್ಯದೆ ತೆಗೆದಿದ್ದು ಎಷ್ಟು ಸರಿ ಎಂದು ಕೊಲೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇನ್ನು ಈ ಬಗ್ಗೆ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿದ್ದು, ಮರ್ಯಾದೆ ಹತ್ಯೆಯನ್ನು ಘಟನೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಅಂಬೇಡ್ಕರ್ ಕನಸು ಇನ್ನು ನನಸಾಗಿಲ್ಲ ಎನ್ನುವುದಕ್ಕೆ ಇದು ಸಾಕ್ಷಿ. ಹೊಡೆದವರಿಗೆ ಹೃದಯವಿಲ್ಲ, ರಾಕ್ಷಸರು ಅವರು. ಸರ್ಕಾರ ಕೂಡಾ ಈ ಬಗ್ಗೆ ಸರಿಯಾಗಿ ಕ್ರಮ ಕೈಗೊಳ್ಳುತ್ತಿಲ್ಲ.ಸ್ವಂತ ಮಗಳು ಗರ್ಭಿಣಿಯಾದ್ರು ತಂದೆ ಕೊಲೆ ಮಾಡಿದ್ದಾನೆ. ಗರ್ಭಿಣಿ ಹೊಟ್ಟೆಗೆ ಕೊಡಲಿ ಹಾಕಿರೋನು ರಾಕ್ಷಸ. ಅವರನ್ನು ಜೈಲಿಗೆ ಹಾಕೋ ಅವಶ್ಯಕತೆ ಇಲ್ಲ.ಬದಲಿಗೆ ಶೂಟ್ ಮಾಡಬೇಕು. ದಲಿತರು ಪ್ರೀತಿನೇ ಮಾಡಬಾರದಾ? ಇಂತಹ ಘಟನೆ ಎಂದಿಗೂ ಆಗದಂತಹ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

BOI Recruitment 2025: ಬ್ಯಾಂಕ್ ಆಫ್ ಇಂಡಿಯಾದಲ್ಲಿ 400 ಅಪ್ರೆಂಟಿಸ್ ನೇಮಕಾತಿ; ಪದವೀಧರರು ಅರ್ಹರು – Kannada News | Bank of India Apprentice Recruitment 2025: 400 Posts, Apply Online by Jan 10!

ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್‌ ಹುದ್ದೆಗಳ ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಂದಿನಿಂದ ಅಂದರೆ ಡಿಸೆಂಬರ್ 25 ರಿಂದ ಪ್ರಾರಂಭವಾಗಿದೆ. ಬ್ಯಾಂಕ್ 400 ಅಪ್ರೆಂಟಿಸ್ ಹುದ್ದೆಗಳನ್ನು ಪ್ರಕಟಿಸಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ bankofindia.bank.in ಗೆ ಭೇಟಿ ನೀಡುವ ಮೂಲಕ ನಿಗದಿತ ದಿನಾಂಕದೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಜನವರಿ 10 ಎಂದು ನಿಗದಿಪಡಿಸಲಾಗಿದೆ.

ಯಾರು ಅರ್ಜಿ ಸಲ್ಲಿಸಬಹುದು?

ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸುವ ಅರ್ಜಿದಾರರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಸ್ಟ್ರೀಮ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ಅವರು 01.04.2021 ಮತ್ತು 01.12.2025 ರ ನಡುವೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅರ್ಜಿದಾರರ ವಯಸ್ಸು 20 ರಿಂದ 28 ವರ್ಷಗಳ ನಡುವೆ ಇರಬೇಕು. ಅರ್ಜಿದಾರರು 02.12.1997 ಕ್ಕಿಂತ ಮೊದಲು ಮತ್ತು 01.12.2005 ಕ್ಕಿಂತ ನಂತರ ಜನಿಸಿರಬೇಕು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯವಿದೆ.

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ ವರ್ಗದವರಿಗೆ 800 ರೂ. ಜೊತೆಗೆ GST ಅರ್ಜಿ ಶುಲ್ಕ. SC/ST/ಎಲ್ಲಾ ಮಹಿಳಾ ಅಭ್ಯರ್ಥಿಗಳಿಗೆ 600 ರೂ. ಜೊತೆಗೆ GST ಅರ್ಜಿ ಶುಲ್ಕ. ಅಂಗವಿಕಲರ ವರ್ಗಕ್ಕೆ 400 ರೂ. ಜೊತೆಗೆ GST ಶುಲ್ಕ. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಶುಲ್ಕವನ್ನು ಪಾವತಿಸಬೇಕು.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್​​ನಲ್ಲಿ ಉದ್ಯೋಗವಕಾಶ; ಸಂಶೋಧನಾ ಸಹಾಯಕ ಹುದ್ದೆಗೆ ನೇಮಕಾತಿ

ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ?

  • bankofindia.bank.in ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ನೀಡಿರುವ ವೃತ್ತಿ ಟ್ಯಾಬ್‌ಗೆ ಹೋಗಿ.
  • ಅಪ್ರೆಂಟಿಸ್ ಹುದ್ದೆಯ ಅಧಿಸೂಚನೆ ಲಿಂಕ್ ಅನ್ನು ಇಲ್ಲಿ ಕ್ಲಿಕ್ ಮಾಡಿ.
  • ಈಗ ಅಧಿಸೂಚನೆಯಂತೆ ಅರ್ಜಿ ಸಲ್ಲಿಸಿ.

BOI ಅಪ್ರೆಂಟಿಸ್ ಹುದ್ದೆಯ 2025 ಅಧಿಸೂಚನೆ ಪಿಡಿಎಫ್ ಅಭ್ಯರ್ಥಿಗಳು ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಅಧಿಸೂಚನೆಯನ್ನು ಪರಿಶೀಲಿಸಬಹುದು.

ಆಯ್ಕೆಯನ್ನು ಹೇಗೆ ಮಾಡಲಾಗುತ್ತದೆ?

ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸ್ಥಳೀಯ ಭಾಷಾ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಪರೀಕ್ಷೆಯು ಒಟ್ಟು 100 ಅಂಕಗಳನ್ನು ಹೊಂದಿರುವ 100 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ ಮತ್ತು 90 ನಿಮಿಷಗಳ ಅವಧಿಯದ್ದಾಗಿರುತ್ತದೆ. ಹೆಚ್ಚಿನ ವಿವರಗಳಿಗಾಗಿ, ಅಭ್ಯರ್ಥಿಗಳು ಹುದ್ದೆಯ ಅಧಿಸೂಚನೆಯನ್ನು ಪರಿಶೀಲಿಸಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ – Kannada News | Last Video of Bengaluru To gokarna seabird bus Before Accident at Chitradruga

ಚಿತ್ರದುರ್ಗ, (ಡಿಸೆಂಬರ್ 25): ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಸೀಬರ್ಡ್ ಸ್ಲೀಪರ್ ಕೋಚ್ ಬಸ್​ ಹಿರಿಯೂರಿನ ಗೊರ್ಲತ್ತು ಬಳಿ ದುರಂತಕ್ಕೀಡಾಗಿದೆ. ಟ್ಯಾಂಕರ್ ಬಂದು ಬಸ್​ ಗೆ ಡಿಕ್ಕಿ ಹೊಡೆದಿದ್ದು, ಇದರ ರಭಸಕ್ಕೆ ಇಡೀ ಬಸ್ ಸುಟ್ಟು ಕರಕಲಾಗಿದೆ. ಇನ್ನು ಬಸ್​​ನಲ್ಲಿದ್ದ ಕೆಲ ಪ್ರಯಾಣಿಕರು ಸಹ ಸುಟ್ಟು ಕರಕಲಾಗಿದ್ದಾರೆ. ಒಬ್ಬೊಬ್ಬರದ್ದು ಒಂದೊಂದು ಕಥೆ ಕೇಳಿದ್ರೆ ಕರುಳು ಚುರುಕ್​ ಎನ್ನುತ್ತೆ. ಕೆಲವರು ಬ್ಯಾಚ್ಯುಲರ್ ಪಾರ್ಟಿಗೆ ತೆರಳುತ್ತಿದ್ದ, ಇನ್ನು ಕೆಲವರು ಗೋಕರ್ಣಕ್ಕೆ ಪ್ರವಾಸಕ್ಕೆ ತೆರಳುತ್ತಿದ್ದರು. ಆದ್ರೆ, ವಿಧಿ ಅವರನ್ನ ಬಲಿ ಪಡೆದುಕೊಂಡಿದೆ. ಇನ್ನು ಸೀಬರ್ಡ್ ಬಸ್ ಕೊನೆ ಕ್ಷಣದ ದೃಶ್ಯ ಇಲ್ಲಿದೆ ನೋಡಿ.

ಇದನ್ನೂ ಓದಿ: ಮತ್ತೊಂದು ಘನಘೋರ ದುರಂತ: ಚಿತ್ರದುರ್ಗ ಹೆದ್ದಾರಿಯಲ್ಲಿ ಹೊತ್ತಿ ಉರಿದ ಖಾಸಗಿ ಬಸ್​​​​, 9ಕ್ಕೂ ಹೆಚ್ಚು ಜನ ಸಜೀವ ದಹನ

Source link

Chitradurga Bus Accident: ಮದುವೆಗೂ ಮುನ್ನ ಮಸಣ ಸೇರಿದ ಯುವತಿ; ತಾಯಿ-ಮಗಳು ಅಗ್ನಿಗೆ ಆಹುತಿ – Kannada News | Chitradurga Bus Tragedy: Five Passengers, Including a Child and the Lorry Driver Died

ಚಿತ್ರದುರ್ಗ, ಡಿಸೆಂಬರ್​​ 25: ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ಖಾಸಗಿ ಸ್ಲೀಪರ್​​ ಬಸ್​​ ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಒಟ್ಟು 6 ಜನ ಸಜೀವ ದಹನವಾಗಿದ್ದಾರೆ. ಲಾರಿ ಚಾಲಕ ಸೇರಿ ಬಸ್​​ನಲ್ಲಿದ್ದ 5 ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಬಸ್​​​ನಲ್ಲಿ ಚಾಲಕ ಮತ್ತು ನಿರ್ವಾಹಕ ಸೇರಿ ಒಟ್ಟು 33 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಚಿತ್ರದುರ್ಗ, ಶಿರಾ, ಹಿರಿಯೂರು ಸೇರಿ ವಿವಿಧ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ತಾಯಿ ಮಗು ದಾರುಣ ಸಾವು

ಇನ್ನು ಅಪಘಾತದಲ್ಲಿ ಬದುಕುಳಿದ ಒಬ್ಬೊಬ್ಬ ಪ್ರಯಾಣಿಕರ ಕತೆಯೂ ರೋಚಕವಾಗಿದೆ. ಒಂದೇ ಐಟಿ ಕಂಪನಿಯ 6 ಮಂದಿ ಸಹೋದ್ಯೋಗಿಗಳು ಬೆಂಕಿಯ ಕೆನ್ನಾಲೆಯ ನಡುವೆ ಸಿಲುಕಿ ಒದ್ದಾಡಿದ್ದಾರೆ. ಕವಿತಾರ ಮದುವೆ ನಿಗದಿಯಾಗಿರುವ ಹಿನ್ನೆಲೆ ಬ್ಯಾಚುಲರ್​​ ಪಾರ್ಟಿಗೆಂದು ಇವರು ಗೋಕರ್ಣಕ್ಕೆ ತೆರಳುತ್ತಿದ್ದರು. ಅಲ್ಲಿನ ಖಾಸಗಿ ರೆಸಾರ್ಟ್​​ನಲ್ಲಿ ಪಾರ್ಟಿಯೂ ನಿಗದಿಯಾಗಿತ್ತು. ಕ್ರಿಸ್ಮಸ್​ ರಜೆ ಹಿನ್ನೆಲೆ ತಂಡವೇ ಗೋಕರ್ಣಕ್ಕೆ ಹೊರಟಿತ್ತು. ಆ ಪೈಕಿ ಬಿಂದು ಮತ್ತು ಆಕೆಯ 5 ವರ್ಷದ ಮಗುಗ್ರೇಯ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಗಾಯಾಳುಗಳಾದ ಶಶಾಂಕ್​​ ಮತ್ತು ಸಂಧ್ಯಾ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಇದನ್ನೂ ಓದಿ: ಸೀಬರ್ಡ್ ಬಸ್ ದುರಂತ; ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ

ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕ

ಹಾಸನ ಜಿಲ್ಲೆ ಚನ್ನರಾಯಪಟ್ಟಣ ಮೂಲದ ಮಾನಸ ಐಡಿಯಲ್ಲಿ ನಾಲ್ಕು ಜನರಿಗೆ ಟಿಕೆಟ್​​ ಬುಕ್​​ ಆಗಿತ್ತು. ಬೆಂಗಳೂರು ಐಟಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಮಾನಸ ಪಿಜಿಯಲ್ಲಿ ವಾಸವಿದ್ದರು. ತಮ್ಮ ಜೊತೆಗೆ ಇದ್ದ ನವ್ಯಾ, ಮಿಲನ ಸೇರಿ ಅಭಿಷೇಕ್​​ ಎಂಬವರ ಜೊತೆ ಗೋಕರ್ಣ ಪ್ರವಾಸಕ್ಕೆ ಹೊರಟಿದ್ದರು. ಮಾನಸಾಗೆ ಮದುವೆಯೂ ನಿಗದಿಯಾಗಿದ್ದು, ಅದಕ್ಕಾಗಿ ಆಭರಣವನ್ನೂ ಕುಟುಂಬ ಖರೀದಿಸಿತ್ತು. ಆದ್ರೆ ವಿಧಿಯಾಟಕ್ಕೆ ಹಸೆಮಣೆ ಏರುವ ಮುನ್ನವೇ ಅವರು ಮಸಣ ಸೇರಿದ್ದಾರೆ.

ನ್ನು ಬಸ್​​ ಹೊತ್ತಿ ಉರಿಯುತ್ತಿದ್ದ ವೇಳೆ ಏನು ಮಾಡಬೇಕೆಂದು ತೋಚದೆ ಕೆಲವರು ಬಸ್​​ನಿಂದ ಹೊರಗಡೆ ಹಾರಿದ ಪರಿಣಾಮ ಅವರ ಪ್ರಾಣ ಉಳಿದಿದೆ. ಇಬ್ಬರು ಬಸ್​​ನಿಂದ ಜಿಗಿಯುವ ದೃಶ್ಯ ಮೊಬೈಲ್​​ ಕ್ಯಾಮರಾದಲ್ಲಿ ಸೆರೆಯಾಗಿದೆ.  ಬುಕಿಂಗ್​​ ಮಾಡಿದ ಪ್ರಯಾಣಿಕರು ಮಾತ್ರವಲ್ಲದೆ ಮಾರ್ಗ ಮಧ್ಯೆ ಬಸ್​​ ಹತ್ತಿದ ಇಬ್ಬರು ಕೂಡ ಬಸ್​​ನಲ್ಲಿ ಇದ್ದರು ಎಂಬುದು ಗೊತ್ತಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 4:38 pm, Thu, 25 December 25

Source link

ನಟಿ ರುಕ್ಮಿಣಿ ವಸಂತ್ ಆಕಾಂಕ್ಷೆ ಬೇರೆಯೇ ಇತ್ತು: ಚಿತ್ರರಂಗಕ್ಕೆ ಬಂದಿದ್ದು ಹೇಗೆ? – Kannada News | Rukmini Vasanth wants to became a veterinarian but came to Movie industry

ರುಕ್ಮಿಣಿ ವಸಂತ್ (Rukmini Vasanth) ಪ್ರಸ್ತುತ ದಕ್ಷಿಣ ಭಾರತದ ಸ್ಟಾರ್ ನಟಿ. ತಮ್ಮ ನಟನೆ ಮತ್ತು ಸೌಂದರ್ಯದಿಂದ ಕೋಟ್ಯಂತರ ಹೃದಯಗಳನ್ನು ಗೆದ್ದಿದ್ದಾರೆ ರುಕ್ಮಿಣಿ ವಸಂತ್. ‘ಸಪ್ತ ಸಾಗರದಾಚೆ ಎಲ್ಲೊ’ ಮತ್ತು ‘ಕಾಂತಾರ: ಚಾಪ್ಟರ್ 1’ ಸಿನಿಮಾಗಳಲ್ಲಿ ರುಕ್ಮಿಣಿ ಅವರ ನಟನೆ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಪರ ಭಾಷೆಯ ದೊಡ್ಡ ನಿರ್ಮಾಣ ಸಂಸ್ಥೆಯ ಸಿನಿಮಾಗಳಲ್ಲಿ ರುಕ್ಮಿಣಿ ನಟಿಸುತ್ತಿದ್ದಾರೆ. ಇವುಗಳ ನಡುವೆ ಬಾಲಿವುಡ್​​ಗೂ ಸಹ ರುಕ್ಮಿಣಿ ವಸಂತ್ ಕಾಲಿಡುತ್ತಿದ್ದಾರೆ. ಆದರೆ ರುಕ್ಮಿಣಿ ಅವರಿಗೆ ನಟಿ ಆಗುವ ಆಸೆಯೇ ಇರಲಿಲ್ಲ, ಬೇರೆ ಏನೋ ಆಗುವ ಆಸೆ ಇತ್ತು.

ಬಹುತೇಕರಿಗೆ ಗೊತ್ತಿರುವಂತೆ ಭಾರತೀಯ ಸೇನೆಯ ಹೆಮ್ಮೆಯ ಕರ್ನಲ್ ವಸಂತ್ ವೇಣುಗೋಪಾಲ್ ಅವರ ಪುತ್ರಿ ರುಕ್ಮಿಣಿ ವಸಂತ್. ಎಳವೆಯಿಂದ ವಿದ್ಯಾಭ್ಯಾಸದಲ್ಲಿಯೂ ಮುಂದಿದ್ದರಂತೆ ರುಕ್ಮಿಣಿ. ಬಹಳ ವರ್ಷ ಅವರಿಗೆ ತಾವು ಪಶು ವೈದ್ಯರಾಗಬೇಕು ಎಂಬ ಆಸೆ ಇತ್ತಂತೆ. ಪ್ರಾಣಿ ಪ್ರೇಮಿ ಆಗಿದ್ದ ರುಕ್ಮಿಣಿ ಅವರಿಗೆ ತಾವು ಪ್ರಾಣಿಗಳಿಗೆ ಚಿಕಿತ್ಸೆ ನೀಡುವ ವೈದ್ಯೆ ಆಗಬೇಕು ಎಂಬ ಆಸೆಯಿತ್ತಂತೆ. ಆದರೆ ಬರ ಬರುತ್ತಾ, ಆ ಕೆಲಸ ಎಷ್ಟು ಕಷ್ಟ ಎಂದು ಅರಿವಾಗಿ ಆ ಆಸೆ ಕೈಬಿಟ್ಟರಂತೆ ನಟಿ.

ಇದನ್ನೂ ಓದಿ:ರುಕ್ಮಿಣಿ ವಸಂತ್ ಮೇಕಪ್ ಹೀಗೆ ನಡೆಯುತ್ತೆ: ವಿಡಿಯೋ ನೋಡಿ

ಅದರ ಬಳಿಕ ಫ್ಯಾಷನ್ ಡಿಸೈನರ್ ಆಗುವ ಆಸೆ ಮೂಡಿತಂತೆ. ಆದರೆ ಆ ಆಸೆಯೂ ಕಮರಿ ಕೊನೆಗೆ ನಟನೆಯತ್ತ ಮನಸ್ಸು ಹೊರಳಿದೆ. ಬಳಿಕ ಅವರು ಲಂಡನ್​​ನ ಪ್ರತಿಷ್ಠಿತ ಡ್ರಾಮಾ ಶಾಲೆಯಾದ ರಾಡಾನಲ್ಲಿ ಅಡ್ಮೀಷನ್ ಪಡೆದರು. ಅಲ್ಲಿ ಹಲವು ವರ್ಷ ಕಲಿತು ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ಮೊದಲಿಗೆ ‘ಬೀರ್​​ಬಲ್’ ಸಿನಿಮಾನಲ್ಲಿ ನಟಿಸಿದರು. ಅದರ ಬಳಿಕ ಮತ್ತೊಂದು ಸಿನಿಮಾ ಒಪ್ಪಿಕೊಂಡರಾದರೂ ಅದು ಕೋವಿಡ್ ಕಾರಣಕ್ಕೆ ನಿಂತು ಹೋಯ್ತು. ಬಳಿಕ ಇನ್ನು ಚಿತ್ರರಂಗದಲ್ಲಿ ಉಳಿವಿಲ್ಲ ಎಂದುಕೊಂಡಾಗ ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾನಲ್ಲಿ ಅವಕಾಶ ದೊರೆಯಿತು. ಬಳಿಕ ನಡೆದಿದ್ದೆಲ್ಲ ಇತಿಹಾಸ.

ಅಂದಹಾಗೆ ರುಕ್ಮಿಣಿ ಅವರು ನಟಿಯಾಗುವಲ್ಲಿ ಅವರ ತಾಯಿಯ ಪಾತ್ರ ಮಹತ್ವದ್ದಂತೆ. ರುಕ್ಮಿಣಿ ಅವರ ತಾಯಿ ಸ್ವತಃ ನೃತ್ಯ ಕಲಾವಿದೆ. ಅದ್ಭುತವಾಗಿ ನೃತ್ಯ ಮಾಡುವ ಜೊತೆಗೆ ನಾಟಕ ರಚನೆ, ನಿರ್ದೇಶನ ಸಹ ಮಾಡುತ್ತಿದ್ದರಂತೆ. ಎಳವೆಯಲ್ಲಿ ಕೆಲವು ನಾಟಕಗಳಲ್ಲಿಯೂ ರುಕ್ಮಿಣಿ ನಟಿಸಿದ್ದರು. ಬಳಿಕ ತಾಯಿಯ ಮಾರ್ಗದರ್ಶನದಲ್ಲಿ ನೃತ್ಯವನ್ನೂ ಕಲಿತರು. ರಾಡಾನಲ್ಲಿ (ರಾಯಲ್ ಅಕಾಡೆಮಿ ಆಫ್ ಡ್ರಾಮಾ ಆರ್ಟ್ಸ್) ಅಡ್ಮೀಷನ್ ಪಡೆಯುವಲ್ಲಿ ತಾಯಿಯ ಬೆಂಬಲವೂ ಸಾಕಷ್ಟಿದೆ ಎಂದು ರುಕ್ಮಿಣಿ ಇತ್ತೀಚೆಗಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅಂದಹಾಗೆ ರುಕ್ಮಿಣಿ ವಸಂತ್ ಅವರು ಬೆಂಗಳೂರಿನಲ್ಲಿ ಬ್ಯಾಲೆ ಡ್ಯಾನ್ಸ್ ಸಹ ಕಲಿತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಫಾಕ್ಸ್​ಕಾನ್ ಘಟಕ; ಕರ್ನಾಟಕ ಮಾದರಿ ಎಂದ ರಾಹುಲ್ ಗಾಂಧಿ; ಇದು ಮೇಕ್ ಇನ್ ಇಂಡಿಯಾ ಎಫೆಕ್ಟ್ ಎಂದ ಕೇಂದ್ರ ಸಚಿವ – Kannada News | On Foxconn, Rahul Gandhi says Karnataka set an Example, union minister Vaishnaw gives cheeky reply

ನವದೆಹಲಿ, ಡಿಸೆಂಬರ್ 25: ಬೆಂಗಳೂರಿನ ಬಳಿ ಫಾಕ್ಸ್​ಕಾನ್ ಬೃಹತ್ ಘಟಕ ಸ್ಥಾಪಿಸಿ 9 ತಿಂಗಳಲ್ಲಿ 30,000 ಮಂದಿಯನ್ನು ನೇಮಕಾತಿ ಮಾಡಿಕೊಂಡ ಸುದ್ದಿಯನ್ನು ಹಂಚಿಕೊಂಡು, ಕರ್ನಾಟಕದ ಮಾದರಿ ಹಾಕಿಕೊಟ್ಟಿದೆ ಎಂದಿದ್ದ ರಾಹುಲ್ ಗಾಂಧಿಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಇದು ಮೇಕ್ ಇನ್ ಇಂಡಿಯಾ ಯೋಜನೆ ಫಲ ಎಂದು ನೆನಪಿಸಿದ್ದಾರೆ. ನರೇಂದ್ರ ಮೋದಿ ಸರ್ಕಾರದ ಮೇಕ್ ಇನ್ ಇಂಡಿಯಾವನ್ನು ಗುರುತಿಸಿದ್ದಕ್ಕೆ ಧನ್ಯವಾದ ಎಂದು ರಾಹುಲ್ ಗಾಂಧಿಗೆ (Rahul Gandhi) ಪರೋಕ್ಷವಾಗಿ ಟಾಂಟ್ ಕೊಟ್ಟಿದ್ದಾರೆ ಕೇಂದ್ರ ಸಚಿವರು.

ರಾಹುಲ್ ಗಾಂಧಿ ಹೇಳಿದ್ದೇನು?

‘ಕೇವಲ 8-9 ತಿಂಗಳಲ್ಲಿ 30,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಭಾರತದಲ್ಲಿ ಈವರೆಗೂ ಇಷ್ಟು ವೇಗದಲ್ಲಿ ಫ್ಯಾಕ್ಟರಿ ನೇಮಕಾತಿ ಆಗಿದ್ದಿಲ್ಲ. ಇದು ಕೇವಲ ಅಂಕಿ ಅಂಶ ಅಲ್ಲ. ಪರಿವರ್ತನಾತ್ಮಕ ಉದ್ಯೋಗ ಸೃಷ್ಟಿ ಇದು. ಈ ಘಟಕದಲ್ಲಿ ಶೇ. 80ರಷ್ಟು ಮಹಿಳೆಯರೇ ಇರುವುದು, ಅದರಲ್ಲೂ 19-24ರ ವಯಸ್ಸಿನಲ್ಲಿರುವ, ಮೊದಲ ಬಾರಿಗೆ ಕೆಲಸ ಮಾಡುತ್ತಿರುವ ಯುವತಿಯರೇ ಇದ್ದಾರೆ. ಹೀಗಾಗಿ, ಈ ಉದ್ಯೋಗಸೃಷ್ಟಿ ಇನ್ನೂ ಪ್ರಬಲವೆನಿಸುತ್ತದೆ’ ಎಂದು ಕಾಂಗ್ರೆಸ್ ನಾಯಕ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಹೇಳಿದ್ದರು.

ಇದನ್ನೂ ಓದಿ: ಬೆಂಗಳೂರಿನ ಐಫೋನ್ ಫ್ಯಾಕ್ಟರಿಯಲ್ಲಿ ಕ್ಷಿಪ್ರವೇಗದಲ್ಲಿ 30,000 ಉದ್ಯೋಗಿಗಳ ನೇಮಕ; ಭಾರತದಲ್ಲಿ ಸಿಕ್ಕಾಪಟ್ಟೆ ಆಗುತ್ತಿದೆ ಐಟಿ ಹೈರಿಂಗ್

‘ಈ ಮಟ್ಟದಲ್ಲಿ ಮತ್ತು ವೇಗದಲ್ಲಿ ಉತ್ಪಾದನಾ ವಲಯ ಬೆಳೆಯಬಲ್ಲಂತಹ ಇಕೋಸಿಸ್ಟಂ ಅನ್ನು ನಿರ್ಮಿಸುವ ಮೂಲಕ ಕರ್ನಾಟಕವು ಒಂದು ಮಾದರಿ ಹಾಕಿಕೊಟ್ಟಿದೆ. ಗೌರವದ ಕೆಲಸ ಮತ್ತು ಸರ್ವರಿಗೂ ಅವಕಾಶ.. ಇಂಥ ಭಾರತವನ್ನು ನಾವು ಕಟ್ಟಬೇಕಿರುವುದು’ ಎಂದು ರಾಹುಲ್ ಗಾಂಧಿ ಕರೆ ನೀಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಅಶ್ವಿನಿ ವೈಷ್ಣವ್, ‘ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಯೋಜನೆಯ ಯಶಸ್ಸನ್ನು ಗುರುತಿಸಿದ್ದಕ್ಕೆ ಧನ್ಯವಾದ. ನೀವು ಗಮನಿಸಿದಂತೆ, ನಮ್ಮ ಪ್ರಧಾನಿಗಳ ದೃಷ್ಟಿಯಂತೆ ನಾವು ಉತ್ಪಾದಕ ಆರ್ಥಿಕತೆಯಾಗಿ ಬೆಳೆಯುತ್ತಿದ್ದೇವೆ’ ಎಂದಿದ್ದಾರೆ.

ಸಚಿವ ಅಶ್ವಿನಿ ವೈಷ್ಣವ್ ಅವರ ಎಕ್ಸ್ ಪೋಸ್ಟ್

ಇದನ್ನೂ ಓದಿ: ಒಡಿಶಾದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಐವರು ನಕ್ಸಲರ ಹತ್ಯೆ

ದೇವನಹಳ್ಳಿ ಬಳಿ 300 ಎಕರೆ ಪ್ರದೇಶದಲ್ಲಿ ಫಾಕ್ಸ್​ಕಾನ್​ನ ಮ್ಯಾನುಫ್ಯಾಕ್ಚರಿಂಗ್ ಯೂನಿಟ್ ಅನ್ನು ಸ್ಥಾಪಿಸಲಾಗಿದೆ. ಇಲ್ಲಿ 50,000 ಮಂದಿ ಉದ್ಯೋಗಿಗಳು ಕೆಲಸ ಮಾಡುವಷ್ಟು ವಿಶಾಲವಾಗಿದೆ. ವರ್ಷಕ್ಕೆ ಇಲ್ಲಿ ಎರಡು ಕೋಟಿ ಐಫೋನ್​ಗಳನ್ನು ಅಸೆಂಬ್ಲಿಂಗ್ ಮಾಡಬಹುದು. ಫಾಕ್ಸ್​ಕಾನ್ ಇಲ್ಲಷ್ಟೇ ಅಲ್ಲದೆ, ತಮಿಳುನಾಡಿನಲ್ಲಿ ಎರಡು ಘಟಕಗಳನ್ನು ಹೊಂದಿದೆ. ಆ್ಯಪಲ್ ಕಂಪನಿಯ ಐಫೋನ್​ಗಳನ್ನು ಭಾರತದಲ್ಲಿ ಫಾಕ್ಸ್​ಕಾನ್ ಮತ್ತು ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿಗಳು ಅಸೆಂಬ್ಲಿಂಗ್ ಮಾಡಿಕೊಡುತ್ತವೆ. ಚೀನಾದಲ್ಲಿ ಈಗಲೂ ಹೆಚ್ಚಿನ ಐಫೋನ್ ತಯಾರಿಕೆ ಆಗುತ್ತದಾದರೂ ಸದ್ಯ ಭಾರತದಲ್ಲಿ ತಯಾರಾಗುತ್ತಿರುವ ಐಫೋನ್​ಗಳ ಸಂಖ್ಯೆ ಶೇ. 20 ಮುಟ್ಟಿರುವುದು ಗಮನಾರ್ಹ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link