All posts by nagaraj11081993

ಬಿಕ್ಲು ಶಿವ ಕೊಲೆ ಕೇಸ್: ಜೈಲಿನಿಂದ ಹೊರಬಂದಿದ್ದರೂ ಭೈರತಿ ಬಸವರಾಜ್​​ಗೆ ಎದುರಾಯ್ತು ಸಂಕಷ್ಟ

ಬಿಕ್ಲು ಶಿವ ಕೊಲೆ ಕೇಸ್: ಜೈಲಿನಿಂದ ಹೊರಬಂದಿದ್ದರೂ ಭೈರತಿ ಬಸವರಾಜ್​​ಗೆ ಎದುರಾಯ್ತು ಸಂಕಷ್ಟ

ಬೆಂಗಳೂರು, ಏಪ್ರಿಲ್​​ 06: ರೌಡಿಶೀಟರ್​ ಬಿಕ್ಲು ಶಿವ ಕೊಲೆ ಪ್ರಕರಣ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಇದೇ ಕೇಸ್​ನಲ್ಲಿ ಬಂಧನಕ್ಕೊಳಗಾಗಿದ್ದ ಕೆ.ಆರ್ ಪುರಂ ಶಾಸಕ ಭೈರತಿ ಬಸವರಾಜ್ (Byrathi Basavaraj) ಇತ್ತೀಚೆಗೆ ಜಾಮೀನು ಮೇಲೆ ಬಿಡುಗಡೆಯಾಗಿದ್ದರು. ಇದೀಗ ಜಾಮೀನು ರದ್ದುಪಡಿಸುವಂತೆ ಕೋರಿ ಸಿಐಡಿ ಪೊಲೀಸರಿಂದ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ. ಆ ಮೂಲಕ ಭೈರತಿ ಬಸವರಾಜ್​​ಗೆ ಮತ್ತೆ ಸಂಕಷ್ಟ ಶುರುವಾಗಿದೆ.

ರೌಡಿಶೀಟರ್ ಬಿಕ್ಲು ಶಿವ ಅಲಿಯಾಸ್ ಶಿವಕುಮಾರ್ ಕೊಲೆ ಪ್ರಕರಣದಲ್ಲಿ 5ನೇ ಆರೋಪಿಯಾಗಿರುವ ಕೆ.ಆರ್.ಪುರಂ ಬಿಜೆಪಿ ಶಾಸಕ ಭೈರತಿ ಬಸವರಾಜ್‌ 6 ತಿಂಗಳ ಬಳಿಕ ಬಲೆಗೆ ಬಿದ್ದಿದ್ದರು. ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ರಾತ್ರಿ ಪೊಲೀಸರು ಭೈರತಿಯನ್ನು ಬಂಧಿಸಿದ್ದರು. ನಂತರ ಸಿಐಡಿಗೆ ಹಸ್ತಾಂತರಿಸಲಾಗಿತ್ತು.

ಇದನ್ನೂ ಓದಿ: Byrathi Basavaraj Release: ಸೆಂಟ್ರಲ್‌ ಜೈಲಿನಿಂದ ಬಿಜೆಪಿ ಶಾಸಕ ಬೈರತಿ ಬಸವರಾಜ್ ರಿಲೀಸ್‌

7 ದಿನ ಸಿಐಡಿ ಕಸ್ಟಡಿಗೆ ನೀಡಿ 42ನೇ ACJM ಕೋರ್ಟ್​ ಜಡ್ಜ್ ಆದೇಶ ಹೊರಡಿಸಿತ್ತು. 7 ದಿನಗಳ ಕಾಲ ಸಿಐಡಿ ಅಧಿಕಾರಿಗಳು 258 ಪ್ರಶ್ನೆಗಳನ್ನು ಮಾಡಿದ್ದರು. ಈ ವೇಳೆ ಬಹುತೇಕ ಪ್ರಶ್ನೆಗಳಿಗೆ ಶಾಸಕರು ಗೊತ್ತಿಲ್ಲ ಎಂದು ಉತ್ತರವನ್ನೇ ನೀಡಿದ್ದರು. ಇದರ ಜೊತೆಗೆ ಶಾಸಕರ ಎರಡು ಮೊಬೈಲ್​ಗಳು ಕೂಡ ಸಿಐಡಿ ಜಪ್ತಿ ಮಾಡಿತ್ತು. ಮಾರ್ಚ್​ 13ರಂದು ಷರತ್ತುಬದ್ಧ ಜಾಮೀನು ಮಂಜೂರು ಬೆನ್ನಲ್ಲೇ ಸೆಂಟ್ರಲ್‌ ಜೈಲಿನಿಂದ ಶಾಸಕ ಭೈರತಿ ಬಸವರಾಜ್ ಬಿಡುಗಡೆ ಆಗಿದ್ದರು.

ಪ್ರಕರಣದ ಹಿನ್ನೆಲೆ

ಕಿತ್ತಗನೂರಿನ ಜಮೀನು ವಿವಾದದ ಹಿನ್ನೆಲೆ ಕಳೆದ ವರ್ಷ ಜುಲೈ 15ರಂದು ದುಷ್ಕರ್ಮಿಗಳ ಗುಂಪೊಂದು ಮಾಜಿ ರೌಡಿ ಶೀಟರ್ ಬಿಕ್ಲು ಶಿವನನ್ನು ಮಚ್ಚು, ಲಾಂಗ್​ಗಳಿಂದ ಅಟ್ಯಾಕ್ ಮಾಡಿ ಕೊಲೆ ಮಾಡಿತ್ತು. ಮೃತನ ತಾಯಿ ಭೈರತಿ ಬಸವರಾಜ್ ಸೇರಿದಂತೆ ಹಲವರ ಮೇಲೆ ದೂರು ನೀಡಿದ್ದರು. ಎಫ್​ಐಆರ್ ದಾಖಲಾಗುತ್ತಿದ್ದಂತೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿ ಬಂಧನದಿಂದ ಮಧ್ಯಂತರ ರಕ್ಷಣೆ ಪಡೆದ ಭೈರತಿ ಬಸವರಾಜ್ ಪೊಲೀಸರ ಮುಂದೆ ತನಿಖೆಗೆ ಹಾಜರಾಗಿದ್ದರು. ಆದರೆ ಪ್ರಯಾಗ್ ರಾಜ್​ಗೆ ತನ್ನ ಜೊತೆಯಲ್ಲೇ ಪ್ರಯಾಣಿಸಿದ ಎ1 ಆರೋಪಿ ಜಗ್ಗ ಅಲಿಯಾಸ್ ಜಗದೀಶ್ ಯಾರೆಂಬುದೇ ಗೊತ್ತಿಲ್ಲವೆಂದು ಹೇಳಿಕೆ ನೀಡಿದ್ದರು. ಈ ವೇಳೆ ಭೈರತಿ ಬಸವರಾಜ್‌ ತಗ್ಲಾಕಿಕೊಂಡಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ನಾನು ಸ್ಟಾರ್ ಅಲ್ಲ, ಕಲಾವಿದೆ; ಕಲಾವಿದರಿಗೆ ಸಾವಿಲ್ಲ’: ನಟಿ ಶ್ರುತಿ ಹರಿಹರನ್

ನಟಿ ಶ್ರುತಿ ಹರಿಹರನ್ (Sruthi Hariharan) ಅವರು ಸಿನಿಮಾಗಳ ಆಯ್ಕೆಯಲ್ಲಿ ಬಹಳ ಚ್ಯೂಸಿ. ವಯಸ್ಸು ಆಗುತ್ತಿದ್ದಂತೆಯೇ ಇನ್ನೂ ಉತ್ತಮವಾದ ಪಾತ್ರಗಳು ಸಿಗುತ್ತಿವೆ ಎಂಬ ಖುಷಿ ಅವರಿಗೆ ಇದೆ. ‘ಲೈಫ್ ಚೆನ್ನಾಗಿ ನಡೆಯುತ್ತಿದೆ. ಇನ್ನೊಂದು ಬಿಸ್ನೆಸ್ ಕೂಡ ಶುರು ಮಾಡಿದ್ದೇನೆ. ಮನೆ, ಮಗು, ಸಿನಿಮಾ ಜೊತೆ ಬ್ಯುಸಿ ಆಗಿದ್ದೇನೆ. ಎನ್​ಹೆಚ್​ 66 ಸಿನಿಮಾ ಕೂಡ ನನಗೆ ಚಾಲೆಂಜಿಂಗ್ ಆಗಿದೆ. 15 ವರ್ಷಗಳಲ್ಲಿ ಅಂದಾಜು 40 ಪಾತ್ರ ಮಾಡಿರುತ್ತೇನೆ. ಆದರೆ ಅವುಗಳಿಗಿಂತ ಡಿಫರೆಂಟ್ ಆಗಿರುವ ಪಾತ್ರ ಈ ಸಿನಿಮಾದಲ್ಲಿ ನನಗೆ ಸಿಕ್ಕಿದೆ. ಪ್ರತಿ ಬಾರಿ ಈ ರೀತಿಯ ಚಾಲೆಂಜಿಂಗ್ ಪಾತ್ರ ಸಿಕ್ಕಾಗ ನಮ್ಮ ಕೆಲಸವನ್ನು ನಾವು ಸರಿಯಾಗಿ ಮಾಡಬೇಕು ಎಂಬ ಪ್ಯಾಷನ್​ನೊಂದಿಗೆ ನಾನು ಕೆಲಸ ಶುರು ಮಾಡುತ್ತೇನೆ. ನಾನು ಕಲಾವಿದೆ. ಸ್ಟಾರ್ ಅಲ್ಲ. ಕಲಾವಿದರಿಗೆ ಸಾವಿಲ್ಲ. ಪಾತ್ರಗಳು ಬರುತ್ತಾ ಇರುತ್ತವೆ’ ಎಂದು ಶ್ರುತಿ ಹರಿಹರನ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮದುವೆ ಬಳಿಕ ಮೊದಲ ಬಾರಿ ತವರಿಗೆ ಬಂದ ರಶ್ಮಿಕಾ: ಮಗಳಿಗೆ ಬಂಗಲೆ ಗಿಫ್ಟ್ ಕೊಟ್ಟ ತಂದೆ

ಸ್ಯಾಂಡಲ್‌ವುಡ್‌ನಿಂದ ಬಣ್ಣದ ಬದುಕು ಆರಂಭಿಸಿ ಬಳಿಕ ನ್ಯಾಷನಲ್ ಕ್ರಶ್ ಆಗಿ ಮಿಂಚಿದ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ವಿಜಯ್ ದೇವರಕೊಂಡ (Vijay Deverakonda) ಜೊತೆ ಮದುವೆ ಮಾಡಿಕೊಂಡಿದ್ದರು. ಈಗ ಪತಿಯ ಜೊತೆ ಅವರು ಮೊದಲ ಬಾರಿಗೆ ತವರಿಗೆ ಆಗಮಿಸಿದ್ದಾರೆ. ಮದುವೆಯಾದ ನಂತರ ಇದೇ ಮೊದಲ ಬಾರಿಗೆ ರಶ್ಮಿಕಾ (Rashmika Mandanna) ಅವರು ಕೊಡಗಿನ (Kodagu) ವಿರಾಜಪೇಟೆಗೆ ಭೇಟಿ ನೀಡಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಅವರು ತವರಿಗೆ ಬಂದಿದ್ದಾರೆ. ಅವರಿಗೆ ತಂದೆಯಿಂದ ಭರ್ಜರಿ ಉಡುಗೊರೆ ಸಿಕ್ಕಿದೆ.

ಭಾನುವಾರ (ಏಪ್ರಿಲ್ 5) ರಶ್ಮಿಕಾ ಮಂದಣ್ಣ ಅವರ ಹುಟ್ಟುಹಬ್ಬವಿತ್ತು. ಈ ವಿಶೇಷ ದಿನವನ್ನು ಆಚರಿಸಲು ರಶ್ಮಿಕಾ ಮತ್ತು ವಿಜಯ್ ಅವರು ಕೊಡಗು ಜಿಲ್ಲೆಯ ವಿರಾಜಪೇಟೆ ಹೊರವಲಯದಲ್ಲಿರುವ ಕದನೂರಿನ ತಮ್ಮ ನಿವಾಸಕ್ಕೆ ಆಗಮಿಸಿದ್ದಾರೆ. ಮದುವೆಯ ನಂತರ ಮೊದಲ ಬಾರಿಗೆ ಮಗಳು ಮತ್ತು ಅಳಿಯ ಮನೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ರಶ್ಮಿಕಾ ತಂದೆ ಮದನ್ ಮಂದಣ್ಣ ಅವರು ಮನೆಯನ್ನು ವಿಶೇಷವಾಗಿ ನವೀಕರಣಗೊಳಿಸಿದ್ದರು.

ಹುಟ್ಟುಹಬ್ಬದ ಅಂಗವಾಗಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ದಂಪತಿ ಕೊಡಗಿನ ಆರಾಧ್ಯ ದೈವ, ಮಡಿಕೇರಿ ತಾಲೂಕಿನ ಕಕ್ಕಬ್ಬೆ ಗ್ರಾಮದಲ್ಲಿರುವ ಪಾಡಿ ಇಗ್ಗುತ್ತಪ್ಪ ದೇವಸ್ಥಾನಕ್ಕೆ ಭೇಟಿ ನೀಡಿದರು. ಯಾವುದೇ ಸೆಲೆಬ್ರಿಟಿ ಹಮ್ಮಿಲ್ಲದೆ ಸಾಮಾನ್ಯರಂತೆ ದೇವಸ್ಥಾನಕ್ಕೆ ಆಗಮಿಸಿದ ಈ ಜೋಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದಲ್ಲಿದ್ದ ಭಕ್ತರು ನೆಚ್ಚಿನ ನಟ-ನಟಿಯನ್ನು ಒಟ್ಟಾಗಿ ಕಂಡು ಅಚ್ಚರಿ ವ್ಯಕ್ತಪಡಿಸಿದರು.

ರಶ್ಮಿಕಾ ಅವರ ಈ ಬಾರಿಯ ಹುಟ್ಟುಹಬ್ಬಕ್ಕೆ ತಂದೆ ಮದನ್ ಮಂದಣ್ಣ ಕಡೆಯಿಂದ ಅತ್ಯಮೂಲ್ಯ ಉಡುಗೊರೆ ಸಿಕ್ಕಿದೆ. ಕದನೂರು ಬಳಿಯಿರುವ ಸುಸಜ್ಜಿತ ‘ಸೆರೆನಿಟಿ’ ಬಂಗಲೆಯನ್ನು ಮದನ್ ಮಂದಣ್ಣ ಅವರು ಮಗಳು ರಶ್ಮಿಕಾಗೆ ಗಿಫ್ಟ್ ನೀಡಿದ್ದಾರೆ. ಈಗಾಗಲೇ ವಿರಾಜಪೇಟೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಬಂಗಲೆಯ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಧಿಕೃತವಾಗಿ ರಶ್ಮಿಕಾ ಅವರ ಹೆಸರಿಗೆ ಆಸ್ತಿ ವರ್ಗಾವಣೆಯಾಗಿದೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ: ಸ್ಪೆಷಲ್ ವಿಡಿಯೋ ಹಂಚಿಕೊಂಡ ವಿಜಯ್ ದೇವರಕೊಂಡ

ಮದುವೆಗೂ ಮುಂಚೆಯೇ ರಶ್ಮಿಕಾ ಮಂದಣ್ಣ ಅವರು ಹೈದರಾಬಾದ್​ನಲ್ಲಿ ಸೆಟ್ಲ್ ಆಗಿದ್ದರು. ತೆಲುಗು ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಅವರು ಹೆಚ್ಚು ಬ್ಯುಸಿ ಆಗಿದ್ದಾರೆ. ವಿಜಯ್ ದೇವರಕೊಂಡ ಜೊತೆ ಅವರು ‘ರಣಬಾಲಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರ ಹುಟ್ಟುಹಬ್ಬದ ಪ್ರಯುಕ್ತ ವಿಜಯ್ ದೇವರಕೊಂಡ ಮೇಕಿಂಗ್ ವಿಡಿಯೋ ಹಂಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆರ್​ಬಿಐ ಎಂಪಿಸಿ ಸಭೆ ಶುರು; ಬಡ್ಡಿ ದರ ಇಳಿಯುತ್ತಾ? ಏಪ್ರಿಲ್ 8ರಂದು ನಿರ್ಧಾರ

ನವದೆಹಲಿ, ಏಪ್ರಿಲ್ 6: ಭಾರತೀಯ ರಿಸರ್ವ್ ಬ್ಯಾಂಕ್​ನ ಮಾನಿಟರಿ ಪಾಲಿಸಿ ಕಮಿಟಿಯ ದ್ವೈಮಾಸಿಕ ಸಭೆ ಇವತ್ತು ಆರಂಭವಾಗಿದೆ. ಜಾಗತಿಕ ಪರಿಸ್ಥಿತಿ ಬಹಳ ಬಿಗಡಾಯಿಸಿದ ಕ್ಲಿಷ್ಟಕರ ಸಂದರ್ಭದಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ತೆಗೆದುಕೊಳ್ಳಲಾಗುವ ನಿರ್ಧಾರಗಳ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಮೂರು ದಿನಗಳ ಕಾಲ ನಡೆಯುವ ಈ ಸಭೆಯ ನಿರ್ಧಾರಗಳನ್ನು ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಏಪ್ರಿಲ್ 8ರಂದು ಬೆಳಗ್ಗೆ 10 ಗಂಟೆಗೆ ಪ್ರಕಟಿಸಲಿದ್ದಾರೆ.

ಜಾಗತಿಕ ಕಚ್ಛಾ ತೈಲ ಬೆಲೆ ಬಹಳ ಎತ್ತರಕ್ಕೆ ಹೋಗಿದೆ. ಪಶ್ಚಿಮ ಏಷ್ಯಾ ಪ್ರದೇಶ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಜಗತ್ತಿನ ಹೆಚ್ಚಿನ ದೇಶಗಳು ಇದರ ಪರಿಣಾಮ ಎದುರಿಸುತ್ತಿವೆ. ಭಾರತಕ್ಕೂ ಬಹಳ ಬಾಧೆಯಾಗಿದೆ. ಜನಸಾಮಾನ್ಯರಿಗೆ ಹೊರೆಯಾಗಬಾರದೆಂದು ಸರ್ಕಾರ ಪೆಟ್ರೋಲ್, ಡೀಸಲ್ ಬೆಲೆ ಏರಿಕೆಯನ್ನು ತಡೆ ಹಿಡಿದಿದೆ. ಇಂಥ ಪರಿಸ್ಥಿತಿಯಲ್ಲಿ ಆರ್​ಬಿಐ ಮುಂದೆ ಬಹಳ ದೊಡ್ಡ ಸವಾಲುಗಳು ಇವೆ ಎನ್ನುವುದು ನಿಜ. ಎಂಪಿಸಿ ಸಭೆಯಲ್ಲಿ ತೆಗೆದುಕೊಳ್ಳುವ ಒಂದೊಂದು ನಿರ್ಧಾರದ ಹಿಂದೆಯೂ ಸಾಕಷ್ಟು ಪರಾಮರ್ಶೆಗಳು ನಡೆಯುತ್ತವೆ ಎನ್ನುವ ಆಶಯ ಇದೆ.

ಇದನ್ನೂ ಓದಿ: ಎಐ ಕಾಲದಲ್ಲಿ ಎಂಜಿನಿಯರ್ ಜಪ ಬಿಡಿ, ನೀವು ಊಹಿಸಲೂ ಕಷ್ಟವಾದ ನಾನಾ ಉದ್ಯಮಗಳು ಸೃಷ್ಟಿಯಾಗುತ್ತವಂತೆ

ಬಡ್ಡಿದರ ಇಳಿಸುತ್ತಾ ಸಮಿತಿ?

ಎಸ್​ಬಿಐ ರಿಸರ್ಚ್ ಸಂಸ್ಥೆ ಪ್ರಕಾರ ಆರ್​ಬಿಐ ಈ ಬಾರಿಯೂ ರಿಪೋ ದರದಲ್ಲಿ ಬದಲಾವಣೆ ಮಾಡದಿರುವ ಸಾಧ್ಯತೆ ಇದೆ. ಹಣದುಬ್ಬರ ಏರುಗತಿಯಲ್ಲಿರುವುದರಿಂದ ಬಡ್ಡಿ ದರ ಇಳಿಸುವುದು ಮತ್ತಷ್ಟು ಅಪಾಯ ತಂದುಕೊಂಡಂತಾಗಬಹುದು. ಈ ಕಾರಣಕ್ಕೆ ರಿಪೋ ದರವನ್ನು ಶೇ. 5.25ರಲ್ಲೇ ಮುಂದುವರಿಸಬಹುದು ಎನ್ನುವ ಅಭಿಪ್ರಾಯಗಳಿವೆ.

ಕಳೆದ ಮೂರು ವರ್ಷದಲ್ಲಿ ಆರ್​ಬಿಐ ತನ್ನ ರಿಪೋ ದರವನ್ನು 125 ಮೂಲಾಂಕಗಳಷ್ಟು ಇಳಿಸಿದೆ. 2023ರ ಫೆಬ್ರುವರಿಯಲ್ಲಿ ಶೇ. 6.50ರಷ್ಟು ರಿಪೋ ದರ ಇತ್ತು. 2025ರ ಡಿಸೆಂಬರ್ ವೇಳೆಗೆ ನಾಲ್ಕೈದು ಬಾರಿ ರಿಪೋ ದರ ಇಳಿಕೆಯಾಗಿ ಶೇ. 5.25ಕ್ಕೆ ಬಂದು ನಿಂತಿದೆ. 2026ರ ಫೆಬ್ರುವರಿಯಲ್ಲಿ ನಡೆದ ಎಂಪಿಸಿ ಸಭೆಯಲ್ಲಿ ಬಡ್ಡಿದರದ ಯಥಾಸ್ಥಿತಿ ಉಳಿಸಲಾಯಿತು. ಈ ಬಾರಿಯೂ ಅದೇ ಮುಂದುವರಿಯಬಹುದು.

ಇದನ್ನೂ ಓದಿ: ಬೆಂಗಳೂರಿಂದ ರಸ್ತೆ ಮೂಲಕ ಮುಂಬೈಗೆ ಕೇವಲ 5.5 ಗಂಟೆ ಪ್ರಯಾಣ; ಇದು ಎಕ್ಸ್​ಪ್ರೆಸ್​ವೇ ಮ್ಯಾಜಿಕ್

ಬಡ್ಡಿದರ ಯಥಾಸ್ಥಿತಿಯಲ್ಲಿ ಇರುವ ನಿರೀಕ್ಷೆಯಲ್ಲಿ ಬ್ಯಾಂಕುಗಳ ಬಡ್ಡಿದರದಲ್ಲಿ ಸ್ಥಿರತೆ ಸಿಕ್ಕಿದೆ. ಗೃಹ ಸಾಲ ಪಡೆಯುವ ಗ್ರಾಹಕರಿಗೂ ನಿರ್ದಿಷ್ಟತೆ ಸಿಕ್ಕಂತಾಗಿದೆ. ಈ ಹಂತದಲ್ಲಿ ಆರ್​ಬಿಐನಿಂದ ರಿಪೋ ದರದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IPL 2026: 0,0,0,0,0,0.. 14 ಪಂದ್ಯಗಳಲ್ಲಿ 6 ಸೊನ್ನೆ ಸುತ್ತಿದ ಅಭಿಷೇಕ್ ಶರ್ಮಾ

Source link

Karnataka 2nd PUC Results 2026: ದ್ವಿತೀಯ ಪಿಯು ಫಲಿತಾಂಶದ ಬಗ್ಗೆ ಬಿಗ್​ ಅಪ್​ಡೇಟ್, ವಿದ್ಯಾರ್ಥಿಗಳಿಗೆ-ಪೋಷಕರಿಗೆ ನಿರಾಸೆ

ಬೆಂಗಳೂರು, (ಏಪ್ರಿಲ್ 06): ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಕುತೂಹಲದಿಂದ ಕಾಯುತ್ತಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ (Puc Exam Result) ನಾಳೆ(ಏ.7) ಪ್ರಕಟವಾಗುವುದಿಲ್ಲ. ಶಿಕ್ಷಣ ಸಚಿವ ಮಧುಬಂಗಾರಪ್ಪ (Madhu Bangarappa) ಅವರೇ ಸುದ್ದಿಗೋಷ್ಠಿಯಲ್ಲಿ ಏಪ್ರಿಲ್ ಮೊದಲ ವಾರದಲ್ಲೇ ಫಲಿತಾಂಶ ನೀಡುವುದಾಗಿ ಘೋಷಿಸಿದ್ದರು. ಆದ್ರೆ, ನಾಳೆ(ಏಪ್ರಿಲ್ 7) ದ್ವಿತೀಯ ಪಿಯುಸಿ ರಿಸಲ್ಟ್ ಅನೌನ್ಸ್ ಆಗುವುದಿಲ್ಲ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (ಕೆಎಸ್‌ಇಎಬಿ) ಅಧ್ಯಕ್ಷ ಪ್ರಕಾಶ್ ನಿಟ್ಟಾಲಿ ಅವರು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಬಹಳ ಕಾತರದಿಂದ ಕಾಯುತ್ತಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ನಿರಾಸೆಯಾಗಿದೆ.

ಈ ಮೊದಲು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಏಪ್ರಿಲ್ ಮೊದಲ ವಾರದಲ್ಲೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸುವುದಾಗಿ ಘೋಷಿಸಿದ್ದರು. ಹೀಗಾಗಿ ಪ್ರತಿವರ್ಷಕ್ಕಿಂತ ಈ ಬಾರಿ ಬೇಗ ರಿಸಲ್ಟ್ ಕೊಡುತ್ತಾರೆಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಸಂತಸ ವ್ಯಕ್ತಪಡಿಸಿದ್ದರು.  ಆದರೆ ಇದೀಗ ಎಕ್ಸಾಂ ಬೋರ್ಡ್ ಅಧಿಕಾರಿಗಳು ನಾಳೆ ಫಲಿತಾಂಶ ಪ್ರಕಟವಾಗುವುದಿಲ್ಲ. ಇನ್ನೂ ಯಾವಾಗ ಫಲಿತಾಂಶ ಪ್ರಕಟಿಸಬೇಕು ಎನ್ನುವ ಕುರಿತು ದಿನಾಂಕ ನಿಗದಿಪಡಿಸಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Karnataka 2nd PUC Result 2026 Date: ದ್ವಿತೀಯ ಪಿಯುಸಿ ಫಲಿತಾಂಶ ಆನ್​ಲೈನಲ್ಲಿ ನೋಡೋದು ಹೇಗೆಂಬ ಮಾಹಿತಿ ಇಲ್ಲಿದೆ

ಮಾರ್ಚ್‌ನಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗೆ ರಾಜ್ಯಾದ್ಯಂತ ಸುಮಾರು 7 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷೆ ಮುಗಿದ ಬೆನ್ನಲ್ಲೇ ಮೌಲ್ಯಮಾಪನ ಕಾರ್ಯ ಚುರುಕಿನಿಂದ ಸಾಗಿತ್ತು. ಆದರೆ, ಈಗ ಕೊನೆಯ ಕ್ಷಣದಲ್ಲಿ ಮೌಲ್ಯಮಾಪನ ಪ್ರಕ್ರಿಯೆಯ ಸಣ್ಣ ಪುಟ್ಟ ಕೆಲಸಗಳು ಬಾಕಿ ಇರುವುದರಿಂದ ಫಲಿತಾಂಶದ ದಿನಾಂಕ ಮುಂದೂಡಲ್ಪಟ್ಟಿದ್ದು,  ಇನ್ನೆರಡು ದಿನ ವಿಳಂಬವಾಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಇನ್ನು ಫಲಿತಾಂಶ ಯಾವಾಗ? ಏನು ಅಂತ ಶಿಕ್ಷಣ ಇಲಾಖೆ ಯಾವುದೇ ಮಾಹಿತಿ ನೀಡಿಲ್ಲ.  ಇದರಿಂದ ಗೊಂದಲ ಸೃಷ್ಟಿಯಾಗಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತುಮಕೂರು: ಸಾರ್ವಜನಿಕರಿಗೆ ಬಿತ್ತು ತೆರಿಗೆ ಬರೆ; ಪಾಲಿಕೆಯ ಹೊಸ ನೀತಿಗೆ ಜನ ಕಂಗಾಲು

ತುಮಕೂರು, ಏಪ್ರಿಲ್​ 06: ಸದ್ಯ ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ಹೊಡೆತ ಎಲ್ಲೆಡೆ ತಟ್ಟಿದೆ. ಅನಿಲ ಅಭಾವದಿಂದ ಜನ ತತ್ತರಿಸಿದ್ದಾರೆ. ಅತ್ತ ಅಡುಗೆ ಅನಿಲ ಕೊರತೆ ಉಂಟಾದರೆ, ಇತ್ತ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ. ಇದರ ಮಧ್ಯೆ ಮುಂದೇನಾಗುತ್ತೋ ಎಂಬ ಆತಂಕದಲ್ಲಿರುವ ತುಮಕೂರು (tumakuru) ನಗರದ ಜನರಿಗೆ ಪಾಲಿಕೆ ಈಗ ಶಾಕ್ ಕೊಟ್ಟಿದೆ. ತುಮಕೂರು ಮಹಾನಗರ ಪಾಲಿಕೆ ತೆರಿಗೆ ದರವನ್ನು (tax hike) ದಿಢೀರ್ ಏರಿಕೆ ಮಾಡಿದೆ. ಯುಜಿಡಿ, ನೀರಿನ ತೆರಿಗೆ ಸೇರಿದಂತೆ ಹಲವು ಶುಲ್ಕಗಳಲ್ಲಿ ಭಾರೀ ಏರಿಕೆಯಾಗಿದ್ದು, ಜನ ಕಂಗಾಲಾಗಿದ್ದಾರೆ.

ಮಹಾನಗರ ಪಾಲಿಕೆಯಿಂದ ದಿಢೀರ್ ತೆರಿಗೆ ದರ ಹೆಚ್ಚಳ

ತುಮಕೂರು ನಗರದ ಜನರಿಗೆ ಪಾಲಿಕೆಯಿಂದ ತೆರಿಗೆ ಶಾಕ್ ಎದುರಾಗಿದೆ. ಕಳೆದ 10 ವರ್ಷಗಳಿಂದ ಏರಿಕೆಯಾಗದ ಯುಜಿಡಿ ಮತ್ತು ನೀರಿನ ತೆರಿಗೆ ದರವನ್ನು ಮಹಾನಗರ ಪಾಲಿಕೆ ಈ ವರ್ಷ ದಿಢೀರ್ ಹೆಚ್ಚಳ ಮಾಡಿದೆ. ಈ ಮೂಲಕ 2026-27ನೇ ಸಾಲಿನ ಆಸ್ತಿ ತೆರಿಗೆಯ ಮೇಲೂ ಶೇಕಡ 5ರಷ್ಟು ಹೆಚ್ಚಳ ಮಾಡಲಾಗಿದ್ದು, ಏಪ್ರಿಲ್ 1ರಿಂದಲೇ ಹೊಸ ದರ ಜಾರಿಯಾಗಿದೆ. ಆದರೆ ಜನರಿಗೆ ತುಮಕೂರು ಮಹಾನಗರ ಪಾಲಿಕೆಯ ಈ ಲೆಕ್ಕಾಚಾರವೇ ಕಂಗಾಲಾಗಿಸಿದೆ.

ಇದನ್ನೂ ಓದಿ: ಹೊಸ ಚರ್ಚೆ ಹುಟ್ಟುಹಾಕಿದ KPS ಮ್ಯಾಗ್ನೆಟ್ ಶಾಲೆ ಯೋಜನೆ: ಆರಂಭಕ್ಕೂ ಮುನ್ನವೇ ಅಪಸ್ವರ ಏಕೆ?

ಯುಜಿಡಿ ತೆರಿಗೆ 480 ರೂ ಇಂದ ನೇರವಾಗಿ 1,440 ರೂ.ಗೆ ಏರಿಕೆಯಾಗಿದೆ. ಇದೇ ರೀತಿ ನೀರಿನ ತೆರಿಗೆ 2,400 ರೂ, ಇಂದ 3,600 ರೂ. ಗೆ ಹೆಚ್ಚಳ ಕಂಡಿದೆ. ಖಾತಾ ವರ್ಗಾವಣೆ ಶುಲ್ಕವೂ 100 ರೂಪಾಯಿಯಿಂದ 200 ರೂಪಾಯಿಗೆ ಡಬಲ್ ಆಗಿದೆ. ದಿಢೀರ್ ಏರಿಕೆಯ ಈ ನಿರ್ಧಾರಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಒಂದು ಕಡೆ ಹಣ ಕೊಡುತ್ತೇವೆ ಅಂತ ಹೇಳಿ ಗ್ಯಾರಂಟಿ ಯೋಜನೆ ಅಂತ ಎರಡು ಸಾವಿರ ರೂ ಕೊಟ್ಟು, ಇನ್ನೊಂದು ಕಡೆ ತೆರಿಗೆ ರೂಪದಲ್ಲಿ ನಮ್ಮಿಂದಲೇ ಹಣ ವಾಪಸ್ ಪಡೆಯುತ್ತಿದ್ದಾರೆ. ಪಾಶ್ಚಿಮಾತ್ಯದ ಯುದ್ಧ ಪರಿಸ್ಥಿತಿ, ಬೆಲೆ ಏರಿಕೆ ಸಮಸ್ಯೆಗಳ ನಡುವೆ ಈ ತೆರಿಗೆ ಹೆಚ್ಚಳ ಸರಿಯಲ್ಲ ಎಂದು ಚಾಂದ್ ಪಾಷ ಎನ್ನುವವರು  ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಾಲಿಕೆ ಆಯುಕರು ಹೇಳುವುದೇನು?

ಮಹಾನಗರ ಪಾಲಿಕೆ ಆಯುಕ್ತೆ ಶುಭ ಅವರು ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. 10 ವರ್ಷಗಳಿಂದ ಏರಿಕೆಯಾಗದ ಯುಜಿಡಿ ಮತ್ತು ನೀರಿನ ತೆರಿಗೆ ದರವನ್ನು ಸರ್ಕಾರದ ನಿಯಮದಂತೆ ಈ ವರ್ಷ ಹೆಚ್ಚಿಸಲಾಗಿದೆ ಎಂದಿದ್ದಾರೆ. ಜೊತೆಗೆ, ಪ್ರತಿ ವರ್ಷದಂತೆ ಶೇಕಡ 5ರಷ್ಟು ಆಸ್ತಿ ತೆರಿಗೆ ಏರಿಕೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಏಪ್ರಿಲ್ ತಿಂಗಳಲ್ಲೇ ತೆರಿಗೆ ಪಾವತಿಸಿದರೆ ಶೇಕಡ 5ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಅರಣ್ಯ ಇಲಾಖೆ ಹೆಸರಲ್ಲಿ ನಕಲಿ ತರಬೇತಿ ಕೇಂದ್ರ: ಖದೀಮರ ಸೆಟ್​​ ಅಪ್​​ ಕಂಡು ಅಧಿಕಾರಿಗಳೇ ಕಂಗಾಲು

ಒಟ್ಟಾರೆ, ತೆರಿಗೆ ಏರಿಕೆಗೆ ಕಾರಣ ಕೊಟ್ಟ ಪಾಲಿಕೆ ಕಡ್ಡಾಯ ಪಾವತಿಗೆ ಸೂಚಿಸಿದ್ದು, ಏಪ್ರಿಲ್​ ವಿನಾಯಿತಿಯ ಲೆಕ್ಕಾಚಾರ ನೀಡಿದೆ. ಆದರೆ ತೆರಿಗೆ ಹೆಚ್ಚಳದ ಬಳಿಕ ಕೊಟ್ಟ ಈ ಆಫರ್ ಜನರಿಗೆ ನುಂಗಲಾರದ ತುತ್ತಾಗಿದ್ದು, ಪಾಲಿಕೆಯ ಚಿಂತನೆಗೆ ಜನ, ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಈ ದೇವಸ್ಥಾನದಲ್ಲಿ ಪ್ರಸಾದವಾಗಿ ನೂಡಲ್ಸ್, ಪಿಜ್ಜಾ ಕೊಡ್ತಾರೆ!

ಕೊಲ್ಕತ್ತಾ, ಏಪ್ರಿಲ್ 6: ಭಾರತೀಯ ಭಕ್ತಿ, ಚೀನಾದ ಸಂಪ್ರದಾಯದ ಸಂಗಮವಾಗಿರುವ ಕೊಲ್ಕತ್ತಾದ ‘ಚೀನಾ ಕಾಳಿ ದೇವಸ್ಥಾನ’ದಲ್ಲಿ ಪಿಜ್ಜಾ ಮತ್ತು ನೂಡಲ್ಸ್​ ಅನ್ನೇ ಪ್ರಸಾದವಾಗಿ ನೀಡಲಾಗುತ್ತದೆ. ಹಲವು ದಶಕಗಳ ಹಿಂದೆ ಚೀನಾದಿಂದ ಇಲ್ಲಿ ನೆಲೆಸಿ ಬಂಗಾಳಿ ಸಂಸ್ಕೃತಿಯನ್ನು ಸ್ವೀಕರಿಸಿದವರು ಈ ದೇವಾಲಯವನ್ನು (Kali Temple) ನಿರ್ಮಿಸಿದರು. ಈ ಮಂದಿರ ವೈವಿಧ್ಯತೆಯಲ್ಲಿ ಏಕತೆಗೆ ಸಾಕ್ಷಿಯಾಗಿದೆ. ನೂಡಲ್ಸ್ ಮತ್ತು ಸೂಪ್ ಅನ್ನು ನೈವೇದ್ಯವಾಗಿ ನೀಡುವ ಈ ವಿಚಿತ್ರ ಪದ್ಧತಿಯ ಹಿಂದಿನ ವಿಷಯಗಳ ಕುರಿತಾದ ಮಾಹಿತಿ ಇಲ್ಲಿದೆ.

ಸಾಮಾನ್ಯವಾಗಿ ನಾವು ದೇವಸ್ಥಾನಗಳಿಗೆ ಹೋದಾಗ ನಮಗೆ ಲಡ್ಡು, ಪುಳಿಯೋಗರೆ, ಪೋಹಾ ಅಥವಾ ಹಣ್ಣುಗಳನ್ನು ಪ್ರಸಾದವಾಗಿ ನೀಡಲಾಗುತ್ತದೆ. ಆದರೆ ಈ ಒಂದು ದೇವಸ್ಥಾನದಲ್ಲಿ, ನೂಡಲ್ಸ್, ಮೊಮೊಸ್, ಪಾಸ್ತಾ ಮತ್ತು ಪಿಜ್ಜಾವನ್ನು ದೇವಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಇದು ವಿಚಿತ್ರವೆನಿಸಬಹುದು ಆದರೆ ಇದು ಅಕ್ಷರಶಃ ನಿಜ. ಕೊಲ್ಕತ್ತಾದ ಚೈನಾಟೌನ್ ಎಂದು ಕರೆಯಲ್ಪಡುವ ಟ್ಯಾಂಗ್ರಾ ಪ್ರದೇಶದಲ್ಲಿ ನೆಲೆಗೊಂಡಿರುವ ಚೈನಾ ಕಾಳಿ ದೇವಸ್ಥಾನದ ವಿಶೇಷತೆಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.

ಇದನ್ನೂ ಓದಿ: Global Shiva Temples: ಭಾರತದ ಹೊರಗೂ ಮೊಳಗುತ್ತಿದೆ ಹರಹರ ಮಹಾದೇವ ಘೋಷ; ಇವು ಜಗತ್ತಿನ ಪ್ರಸಿದ್ಧ 5 ಶಿವ ದೇವಾಲಯಗಳು

ಈ ದೇವಾಲಯವು ಕೆಲವು ದಶಕಗಳ ಇತಿಹಾಸವನ್ನು ಹೊಂದಿದೆ. ಈ ದೇವಾಲಯವನ್ನು ಕೋಲ್ಕತ್ತಾದ ಟ್ಯಾಂಗ್ರಾ ಪ್ರದೇಶದಲ್ಲಿ ನೆಲೆಸಿದ ಚೀನೀ ಸಮುದಾಯದ ಸದಸ್ಯರು ನಿರ್ಮಿಸಿದ್ದಾರೆ. ಅವರು ಚರ್ಮದ ಉದ್ಯಮದಲ್ಲಿ ಕೆಲಸ ಮಾಡುತ್ತಾ ಇಲ್ಲಿ ನೆಲೆಸಿದರು. ಬಳಿಕ ಸ್ಥಳೀಯ ಬಂಗಾಳಿ ಸಂಸ್ಕೃತಿಯನ್ನು ಅಳವಡಿಸಿಕೊಂಡರು. ಕಾಳಿ ದೇವಿಯ ಬಗ್ಗೆ ಅಪಾರ ಭಕ್ತಿಯನ್ನು ಬೆಳೆಸಿಕೊಂಡರು. ಅವರು ತಮ್ಮ ಸಂಪ್ರದಾಯಗಳು ಮತ್ತು ಸ್ಥಳೀಯ ಭಕ್ತಿಯನ್ನು ಸೇರಿಸುವ ಮೂಲಕ ಈ ವಿಶಿಷ್ಟ ದೇವಾಲಯವನ್ನು ವಿನ್ಯಾಸಗೊಳಿಸಿದರು. ಹೀಗಾಗಿಯೇ ಈ ಮಂದಿರದಲ್ಲಿ ಭಕ್ತರು ತಮ್ಮ ನೆಚ್ಚಿನ ಚೌಮೀನ್, ಮೊಮೊಸ್, ನೂಡಲ್ಸ್, ಸೂಪ್ ಮತ್ತು ಪಿಜ್ಜಾಗಳನ್ನು ದೇವಿಗೆ ನೈವೇದ್ಯವಾಗಿ ಅರ್ಪಿಸುತ್ತಾರೆ. ಪೂಜೆಯ ನಂತರ ಅದೇ ಪದಾರ್ಥಗಳನ್ನು ಪ್ರಸಾದವಾಗಿ ಭಕ್ತರಿಗೆ ವಿತರಿಸಲಾಗುತ್ತದೆ.

ಇದನ್ನೂ ಓದಿ: ವಿಶ್ವದ ಏಕೈಕ ಸ್ತ್ರೀ ರೂಪದ ಹನುಮಂತನ ದೇವಾಲಯ; ಇಲ್ಲಿನ ವಿಗ್ರಹದ ರಹಸ್ಯವೇನು ಗೊತ್ತೇ?

ಈ ದೇವಾಲಯವು ಕಾಳಿ ಮತ್ತು ಶಿವನ ವಿಗ್ರಹಗಳನ್ನು ಹೊಂದಿದೆ. ಪುರೋಹಿತರು ಮಂತ್ರಗಳನ್ನು ಪಠಿಸಿ, ಆರತಿಗಳನ್ನು ಮಾಡುವ ಮೂಲಕ ಧೂಪ ಮತ್ತು ದೀಪಗಳನ್ನು ಅರ್ಪಿಸುತ್ತಾರೆ. ಭಕ್ತಿಯು ಧಾರ್ಮಿಕ ಮತ್ತು ರಾಷ್ಟ್ರೀಯ ಗಡಿಗಳನ್ನು ಹೇಗೆ ಮೀರುತ್ತದೆ ಎಂಬುದಕ್ಕೆ ಈ ದೇವಾಲಯವು ಜೀವಂತ ಸಾಕ್ಷಿಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಭೂತ್ ಬಂಗ್ಲ’ ಟ್ರೇಲರ್: ಮತ್ತದೇ ಹಳೇ ಕಥೆ ಹೇಳುತ್ತಾರಾ ಅಕ್ಷಯ್ ಕುಮಾರ್?

ಬಾಲಿವುಡ್‌ನ ಯಶಸ್ವಿ ಜೋಡಿಗಳಲ್ಲೊಂದಾದ ನಟ ಅಕ್ಷಯ್ ಕುಮಾರ್ (Akshay Kumar) ಮತ್ತು ನಿರ್ದೇಶಕ ಪ್ರಿಯದರ್ಶನ್ ಅವರು ದೀರ್ಘಕಾಲದ ನಂತರ ಮತ್ತೆ ಒಂದಾಗಿದ್ದಾರೆ. ಅವರಿಬ್ಬರ ಕಾಂಬಿನೇಷನ್​ನಲ್ಲಿ ಬಹುನಿರೀಕ್ಷಿತ ಹಾರರ್ ಕಾಮಿಡಿ ಸಿನಿಮಾ ‘ಭೂತ್ ಬಂಗ್ಲ’ (Bhooth Bangla) ಸಿದ್ಧವಾಗಿದೆ. ಈಗ ಈ ಚಿತ್ರದ ಟ್ರೇಲರ್ (Bhooth Bangla Trailer) ಬಿಡುಗಡೆ ಆಗಿದ್ದು, ಸಿನಿರಸಿಕರಲ್ಲಿ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ. ಏಪ್ರಿಲ್ 16ರಂದು ಈ ಚಿತ್ರ ವಿಶ್ವಾದ್ಯಂತ ತೆರೆಕಾಣಲಿದೆ. ಹಾರರ್ ಕಾಮಿಡಿ ಕಥಾಹಂದರ ಇರುವ ಈ ಸಿನಿಮಾ ಹೇಗಿದೆ ಎಂಬುದರ ಝಲಕ್ ಈ ಟ್ರೇಲರ್​ನಲ್ಲಿ ಕಾಣಿಸಿದೆ.

ಪ್ರಿಯದರ್ಶನ್ ಅವರ ವಿಶಿಷ್ಟ ಶೈಲಿಯ ಹಾಸ್ಯವು ‘ಭೂತ್ ಬಂಗ್ಲ’ ಟ್ರೇಲರ್​ನಲ್ಲಿದೆ. ಹೀರೋಗೆ ಪಿತ್ರಾರ್ಜಿತವಾಗಿ ಒಂದು ಹಳೆಯ ಬಂಗಲೆ ಆಸ್ತಿಯಾಗಿ ಬರುತ್ತದೆ. ಆದರೆ, ಆ ಬಂಗಲೆಯ ಹಿಂದೆ ಒಂದು ಭಯಾನಕ ಅರಣ್ಯವಿರುತ್ತದೆ. ಕಥೆಯ ಮತ್ತೊಂದು ಆಸಕ್ತಿದಾಯಕ ತಿರುವೆಂದರೆ, ಮದುವೆಗಳೇ ನಡೆಯದ ಮಂಗಳಪುರ ಎಂಬ ಗ್ರಾಮದಲ್ಲಿ ಹೀರೋ ಮದುವೆ ನಿಶ್ಚಯವಾಗುತ್ತದೆ. ಅಲ್ಲಿಂದ ಆರಂಭವಾಗುವ ಗೊಂದಲ ಮತ್ತು ಹಾಸ್ಯದ ಸನ್ನಿವೇಶಗಳೇ ಈ ಚಿತ್ರದ ಜೀವಾಳ.

ಈ ಚಿತ್ರದ ದೊಡ್ಡ ಆಕರ್ಷಣೆ ಎಂದರೆ ಅದು ನಟಿ ಟಬು. ಟ್ರೇಲರ್‌ನಲ್ಲಿ ಅವರ ಎಂಟ್ರಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಚಿತ್ರದ ಗಂಭೀರತೆ ಮತ್ತು ನಿಗೂಢತೆಯನ್ನು ಹೆಚ್ಚಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿರುವಂತೆ ಕಾಣುತ್ತಿದೆ. ಟ್ರೇಲರ್​ನಲ್ಲಿ ಅದ್ದೂರಿ ದೃಶ್ಯಗಳು ಮತ್ತು ಹಾಸ್ಯದ ಸಂಭಾಷಣೆಗಳು ಇದ್ದರೂ ಕೂಡ ಚಿತ್ರದ ಮೂಲ ಕಥೆ ಸ್ವಲ್ಪ ಹಳೆಯ ಶೈಲಿಯದ್ದೇ ಇರಬಹುದು ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿವೆ.

ಭೂತ್ ಬಂಗ್ಲ ಟ್ರೇಲರ್:

ಸದ್ಯ ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ರಣವೀರ್ ಸಿಂಗ್ ಅವರ ‘ಧುರಂಧರ್ 2’ ಸಿನಿಮಾ ಸುನಾಮಿ ಎಬ್ಬಿಸಿದೆ. 1000 ಕೋಟಿಗೂ ರೂಪಾಯಿಗೂ ಅಧಿಕ ಗಳಿಕೆ ಮಾಡಿರುವ ಆ ಚಿತ್ರದ ಪ್ರಭಾವ ಇನ್ನೂ ಕಡಿಮೆಯಾಗಿಲ್ಲ. ಇಂತಹ ಸಂದರ್ಭದಲ್ಲಿ, ಪ್ರೇಕ್ಷಕರು ಹಾರರ್ ಕಾಮಿಡಿ ಶೈಲಿಯ ‘ಭೂತ್ ಬಂಗ್ಲ’ ಚಿತ್ರಕ್ಕೆ ಎಷ್ಟರ ಮಟ್ಟಿಗೆ ಸ್ಪಂದಿಸುತ್ತಾರೆ ಎಂಬುದು ಈಗಿರುವ ದೊಡ್ಡ ಪ್ರಶ್ನೆ.

ಇದನ್ನೂ ಓದಿ: ಸಿನಿಮಾ ಬಿಡುಗಡೆಗೂ ಮುನ್ನ ದೇವರ ಮೊರೆಹೋಗಿ, ‘ಇಡೀ ದೇಶಕ್ಕಾಗಿ ಪ್ರಾರ್ಥಿಸಿದೆ’ ಎಂದ ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್ ಮತ್ತು ಪ್ರಿಯದರ್ಶನ್ ಅವರ ಕಾಂಬಿನೇಷನ್ ಮೇಲೆ ಪ್ರೇಕ್ಷಕರಿಗೆ ನಂಬಿಕೆ ಇದೆ. ಆದರೆ ಬದಲಾದ ಈ ಕಾಲಘಟ್ಟದಲ್ಲಿ ಅವರಿಬ್ಬರು ಮ್ಯಾಜಿಕ್ ಮಾಡುತ್ತಾರಾ ಇಲ್ಲವಾ ಎಂಬ ಅನುಮಾನ ಮೂಡಿದೆ. ನೆಟ್ಟಿಗರ ವಲಯದಲ್ಲಿ ಈ ಟ್ರೇಲರ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಏಪ್ರಿಲ್ 16ರಂದು ಸಿನಿಮಾದ ಅಸಲಿ ಕಹಾನಿ ಏನು ಎಂಬುದು ತಿಳಿಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತಂದೆ-ಮಗನ ಲಾಕಪ್ ಡೆತ್ ಪ್ರಕರಣ; ತಮಿಳುನಾಡಿನ 9 ಪೊಲೀಸರಿಗೆ ಮರಣದಂಡನೆ

ಚೆನ್ನೈ, ಏಪ್ರಿಲ್ 6: 2020ರಲ್ಲಿ ಕೊರೊನಾ (Covid-19) ಅವಧಿಯಲ್ಲಿ ರಾತ್ರಿಯಿಡೀ ಅಂಗಡಿ ತೆರೆದಿದ್ದರು ಎಂಬ ಕಾರಣಕ್ಕೆ ತಮಿಳುನಾಡಿನ (Tamil Nadu) ತೂತುಕುಡಿ ಜಿಲ್ಲೆಯ ಸಾಥನ್‌ಕುಲಂನಲ್ಲಿ ಅಂಗಡಿ ಮಾಲೀಕ ಜಯರಾಜ್ ಮತ್ತು ಅವರ ಮಗ ಬೆನ್ನಿಕ್ಸ್ ಅವರನ್ನು ಸಾಥನ್‌ಕುಲಂ ಪೊಲೀಸರು ಕ್ರೂರವಾಗಿ ಥಳಿಸಿದ್ದರು. ಕಸ್ಟಡಿಯಲ್ಲಿದ್ದಾಗ ಅವರಿಗೆ ಚಿತ್ರಹಿಂಸೆ ನೀಡಿದ್ದರಿಂದ ಅವರಿಬ್ಬರೂ ಪೊಲೀಸ್ ಠಾಣೆಯಲ್ಲೇ ಮೃತಪಟ್ಟಿದ್ದರು. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಈ ಪ್ರಕರಣದ ತನಿಖೆಯನ್ನು ಸರ್ಕಾರ ಸಿಬಿಐಗೆ ವಹಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಮಗ್ರ ತನಿಖೆ ನಡೆಸಿ 2,427 ಪುಟಗಳ ಚಾರ್ಜ್‌ಶೀಟ್ ಅನ್ನು ಮಧುರೈ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಅದರ ಆಧಾರದ ಮೇಲೆ ತಂದೆ-ಮಗನ ಲಾಕಪ್ ಡೆತ್ ಪ್ರಕರಣದಲ್ಲಿ ಬಂಧಿತರಾದ ಎಲ್ಲಾ 9 ಪೊಲೀಸರು ತಪ್ಪಿತಸ್ಥರೆಂದು ಕೋರ್ಟ್ ಘೋಷಿಸಿತ್ತು. ಇಂದು ಅವರ ಶಿಕ್ಷೆಯ ಪ್ರಮಾಣ ಪ್ರಕಟವಾಗಿದ್ದು, ಎಲ್ಲ ಆರೋಪಿಗಳಿಗೂ ಗಲ್ಲು ಶಿಕ್ಷೆ ವಿಧಿಸಲಾಗಿದೆ.

ಈ ಘಟನೆ ನಡೆದು 6 ವರ್ಷಗಳ ವಿಚಾರಣೆಯ ನಂತರ ಇಂದು ತೀರ್ಪು ಹೊರಬಿದ್ದಿದೆ. ವ್ಯಾಪಾರಿ ಪಿ. ಜಯರಾಜ್ (59) ಮತ್ತು ಅವರ ಮಗ ಜೆ. ಬೆನ್ನಿಕ್ಸ್ (31) ಅವರ ಸಾವಿನ ಪ್ರಕರಣದಲ್ಲಿ ಕೊಲೆ ಮತ್ತು ಸಂಬಂಧಿತ ಅಪರಾಧಗಳಲ್ಲಿ 9 ಆರೋಪಿಗಳನ್ನು ತಪ್ಪಿತಸ್ಥರೆಂದು ನ್ಯಾಯಾಧೀಶ ಜಿ ಮುತ್ತುಕುಮಾರನ್ ತೀರ್ಪು ನೀಡಿದ್ದಾರೆ. ಕಸ್ಟಡಿಯಲ್ಲಿದ್ದಾಗ ಪೂರ್ವನಿಯೋಜಿತವಾಗಿ ಪ್ಲಾನ್ ಮಾಡಿ ರಾತ್ರಿಯಿಡೀ ಚಿತ್ರಹಿಂಸೆಯನ್ನು ನೀಡಲಾಗಿದೆ ಎಂಬ ಕೇಂದ್ರ ತನಿಖಾ ದಳದ (ಸಿಬಿಐ) ವಾದವನ್ನು ನ್ಯಾಯಾಲಯ ಸ್ವೀಕರಿಸಿದೆ. ಹೀಗಾಗಿ, ಗರಿಷ್ಠ ಶಿಕ್ಷೆಯನ್ನು ವಿಧಿಸಲಾಗಿದೆ.

ಇದನ್ನೂ ಓದಿ: ವಿಜಯ್ ಹಾಡಿಗೆ ಡ್ಯಾನ್ಸ್ ಮಾಡಿದ ತಮಿಳುನಾಡಿನ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕಿ ಅಮಾನತು

ಗಲ್ಲು ಶಿಕ್ಷೆಗೊಳಗಾದವರಲ್ಲಿ ಇನ್ಸ್‌ಪೆಕ್ಟರ್ ಎಸ್. ಶ್ರೀಧರ್, ಸಬ್ ಇನ್ಸ್‌ಪೆಕ್ಟರ್‌ಗಳಾದ ಪಿ. ರಘು ಗಣೇಶ್ ಮತ್ತು ಕೆ. ಬಾಲಕೃಷ್ಣನ್, ಹೆಡ್ ಕಾನ್‌ಸ್ಟೆಬಲ್‌ಗಳಾದ ಎಸ್. ಮುರುಗನ್ ಮತ್ತು ಎ. ಸಮದುರೈ, ಕಾನ್‌ಸ್ಟೆಬಲ್‌ಗಳಾದ ಎಂ. ಮುತ್ತುರಾಜ್, ಎಸ್. ಚೆಲ್ಲಾದುರೈ, ಎಕ್ಸ್. ಥಾಮಸ್ ಫ್ರಾನ್ಸಿಸ್ ಮತ್ತು ಎಸ್. ವೇಲುಮುತ್ತು ಸೇರಿದ್ದಾರೆ. ಹತ್ತನೇ ಆರೋಪಿಯಾದ ವಿಶೇಷ ಸಬ್ ಇನ್ಸ್‌ಪೆಕ್ಟರ್ ಪೌಲ್ದುರೈ, ವಿಚಾರಣೆಯ ಸಮಯದಲ್ಲಿ ಕೊವಿಡ್​​-19ನಿಂದ ನಿಧನರಾಗಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link