ಋಣ ತೀರಿಸಲು ತಮಿಳಿಗೆ ಬರುತ್ತಿದ್ದಾರೆ ಶಾರುಖ್ ಖಾನ್: ಸಿನಿಮಾ ಯಾವುದು? – Kannada News | Shah Rukh Khan acting in Jailer 2 movie with Rajinikanth
ಶಾರುಖ್ ಖಾನ್ (Shah Rukh Khan) ಬಾಲಿವುಡ್ನ ಸೂಪರ್ ಸ್ಟಾರ್ ನಟ. ‘ಪಠಾಣ್’, ‘ಜವಾನ್’, ‘ಡಂಕಿ’ ಮೂಲಕ ಸತತ ಮೂರು ಹಿಟ್ ಸಿನಿಮಾಗಳನ್ನು ನೀಡಿರುವ ಶಾರುಖ್ ಖಾನ್ ಇದೀಗ ‘ಕಿಂಗ್’ ಮೂಲಕ ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾಕ್ಕೆ ತಯಾರಿ ನಡೆಸುತ್ತಿದ್ದಾರೆ. ಶಾರುಖ್ ಖಾನ್ ಅತಿಥಿ ಪಾತ್ರಗಳಲ್ಲಿ ನಟಿಸುವುದು ಬಹಳ ಅಪರೂಪ. ಅದರಲ್ಲೂ ಪರ ಭಾಷೆಯಲ್ಲಿ ಅತಿಥಿ ಪಾತ್ರಗಳಲ್ಲಿ ಶಾರುಖ್ ಖಾನ್ ನಟಿಸುವುದೆಂದರೆ ಅದಕ್ಕೆ ವಿಶೇಷ ಕಾರಣವೇ ಇರಬೇಕು. ಇದೀಗ ಶಾರುಖ್ ಖಾನ್, ತಮಿಳಿನ ಒಂದು ಸಿನಿಮಾದ ಅತಿಥಿ…