Bomb Attack: ಬಾಂಗ್ಲಾದೇಶದಲ್ಲಿ ನಿಲ್ಲದ ಹಿಂಸಾಚಾರ; ಬಾಂಬ್ ದಾಳಿಗೆ ಒಬ್ಬ ಬಲಿ – Kannada News | Bangladesh Violence, 1 killed in crude bomb attack in Dhaka moghbazar area
ಢಾಕಾ, ಡಿಸೆಂಬರ್ 24: ಬಾಂಗ್ಲಾದೇಶ ಹೊತ್ತಿ ಉರಿಯುವುದು ಮುಂದುವರಿದಿದೆ. ಅದರ ರಾಜಧಾನಿ ಢಾಕಾದ ಮೋಘಬಜಾರ್ ಪ್ರದೇಶದಲ್ಲಿ ಬುಧವಾರ ಸಂಜೆ ಬಾಂಬ್ ದಾಳಿಯಾಗಿದೆ. ಇಲ್ಲಿಯ ಫ್ಲೈಓವರ್ ಮೇಲಿಂದ ಅಪರಿಚಿತ ದುಷ್ಕರ್ಮಿಗಳು ಕಚ್ಛಾ ಬಾಂಬ್ (crude bomb blast) ಅನ್ನು ಎಸೆದಿದ್ದಾರೆ. ಕೆಳಗೆ ರಸ್ತೆಬದಿಯಲ್ಲಿ ಚಹಾ ಕುಡಿಯುತ್ತಿದ್ದ ವ್ಯಕ್ತಿಯ ತಲೆ ಮೇಲೆ ಬಾಂಬ್ ಬಿದ್ದು ಸ್ಫೋಟಗೊಂಡಿದೆ. ಪರಿಣಾಮವಾಗಿ, ಆ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬುಧವಾರ ಸಂಜೆ 7 ಗಂಟೆಗೆ ಈ ಘಟನೆ ಸಂಭವಿಸಿರುವುದು ತಿಳಿದುಬಂದಿದೆ. ಬಾಂಬ್ಗೆ ಬಲಿಯಾದ ವ್ಯಕ್ತಿ 21…