All posts by nagaraj11081993

VHT 2025-26: ದೇಶಿ ಅಂಗಳದಲ್ಲಿ ಶತಕಗಳ ಮಳೆ; ಮೊದಲ ದಿನವೇ ಸಿಡಿದವು 22 ಶತಕಗಳು – Kannada News | Vijay Hazare Trophy 2025 26: Rohit, Kohli Shine, 22 Centuries on Day 1!

ವಿಜಯ್ ಹಜಾರೆ ಟ್ರೋಫಿಯ 2025-26 (Vijay Hazare Trophy 2025-26) ರ ಆವೃತ್ತಿ ಡಿಸೆಂಬರ್ 24 ರಿಂದ ಅಬ್ಬರದಿಂದ ಆರಂಭವಾಗಿದೆ. ಮೊದಲ ಸುತ್ತಿನ ಮೊದಲ ದಿನವೇ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಿದ್ದಾರೆ. ಇದಕ್ಕೆ ಪುರಾವೆ ಎಂಬಂತೆ ಟೂರ್ನಿಯ ಮೊದಲ ದಿನವೇ ಒಟ್ಟು 22 ಶತಕಗಳು ದಾಖಲಾಗಿವೆ. ಇವುಗಳಲ್ಲಿ ಇಬ್ಬರು ಭಾರತೀಯ ದಂತಕಥೆಗಳಾದ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಅವರ ಶತಕಗಳು ಸೇರಿರುವುದು ವಿಶೇಷ. ಬಹಳ ವರ್ಷಗಳ ಬಳಿಕ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದ್ದ ರೋಹಿತ್ ಹಾಗೂ ವಿರಾಟ್ ಶತಕದ ಇನ್ನಿಂಗ್ಸ್ ಆಡುವ ಮೂಲಕ ತಮ್ಮ ತಮ್ಮ ತಂಡಗಳಿಗೆ ಜಯ ತಂದುಕೊಟ್ಟರು. ಇವರಿಬ್ಬರಲ್ಲದೆ, ಇನ್ನು 20 ಆಟಗಾರರು ಶತಕದ ಇನ್ನಿಂಗ್ಸ್ ಆಡಿದರು.

ರೋಹಿತ್, ಕೊಹ್ಲಿ ಶತಕ

ಜೈಪುರದಲ್ಲಿ ನಡೆದ ಸಿಕ್ಕಿಂ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ ಭರ್ಜರಿ 155 ರನ್​ಗಳ ಇನ್ನಿಂಗ್ಸ್ ಆಡಿದರು. ಇತ್ತ ಬೆಂಗಳೂರಿನಲ್ಲಿ ನಡೆದ ಆಂಧ್ರಪ್ರದೇಶ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ಆಡಿದ್ದ ವಿರಾಟ್ ಕೊಹ್ಲಿ 131 ರನ್ ಬಾರಿಸಿ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಹಾಗೆಯೇ ಬಿಹಾರ ಮತ್ತು ಅರುಣಾಚಲ ಪ್ರದೇಶ ನಡುವಿನ ಪಂದ್ಯದಲ್ಲಿ ಒಂದೇ ತಂಡದ ಮೂವರು ಆಟಗಾರರು ಭರ್ಜರಿ ಶತಕ ಬಾರಿಸಿದರು. ಈ ಪಂದ್ಯದಲ್ಲಿ ಬಿಹಾರ ಪರ ಕಣಕ್ಕಿಳಿದಿದ್ದ 14 ವರ್ಷದ ವೈಭವ್ ಸೂರ್ಯವಂಶಿ ಕೇವಲ 36 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಲಿಸ್ಟ್ ಎ ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡರೆ, ಇದೇ ತಂಡದ ನಾಯಕ ಸಕಿಬುಲ್ ಗನಿ ಕೂಡ 32 ಎಸೆತಗಳಲ್ಲಿ ಶತಕ ಸಿಡಿಸಿದರು. ಇವರಿಬ್ಬರ ಜೊತೆಗೆ ಆಯುಷ್ ಲೋಹರುಕ ಕೂಡ 116 ರನ್‌ಗಳ ಇನ್ನಿಂಗ್ಸ್ ಆಡಿದರು. ಈ ಮೂವರ ಶತಕದ ಇನ್ನಿಂಗ್ಸ್​ನಿಂದಾಗಿ ಬಿಹಾರ ತಂಡ 574 ರನ್ ಕಲೆಹಾಕುವ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತಿದೊಡ್ಡ ಮೊತ್ತ ಕಲೆಹಾಕಿದ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿತು.

ಮತ್ತೊಂದೆಡೆ, ಜಾರ್ಖಂಡ್‌ನ ಇಶಾನ್ ಕಿಶನ್ ಕೂಡ ಅದ್ಭುತ ಪ್ರದರ್ಶನ ನೀಡುವ ಮೂಲಕ ಕರ್ನಾಟಕ ವಿರುದ್ಧ ಕೇವಲ 33 ಎಸೆತಗಳಲ್ಲಿ ಶತಕ ಗಳಿಸಿ ಭಾರತದ ಎರಡನೇ ಅತಿ ವೇಗದ ಶತಕದ ದಾಖಲೆಯನ್ನು ಸೃಷ್ಟಿಸಿದರು. ಈ ಮೂವರ ಶತಕಗಳು ಭಾರತೀಯ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಮೂರು ವೇಗದ ಶತಕಗಳ ದಾಖಲೆಗಳನ್ನು ಮುರಿದವು. ಇಶಾನ್ ಕಿಶನ್ ಅವರ ಇನ್ನಿಂಗ್ಸ್‌ಗೆ ಪ್ರತಿಕ್ರಿಯೆಯಾಗಿ, ದೇವದತ್ ಪಡಿಕ್ಕಲ್ ಕೂಡ ಕರ್ನಾಟಕ ಪರ 147 ರನ್‌ಗಳ ಸ್ಮರಣೀಯ ಇನ್ನಿಂಗ್ಸ್ ಆಡಿ, ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ದ್ವಿಶತಕ ಸಿಡಿಸಿದ ಸ್ವಸ್ತಿಕ್ ಸಮಲ್

ಇನ್ನು ಒಡಿಶಾ ಮತ್ತು ಸೌರಾಷ್ಟ್ರ ನಡುವಿನ ಪಂದ್ಯದಲ್ಲಿ ಒಡಿಶಾ ತಂಡದ ಸ್ವಸ್ತಿಕ್ ಸಮಲ್ ದ್ವಿಶತಕ ಸಿಡಿಸಿ ಮಿಂಚಿದರು. ತಮ್ಮ ಇನ್ನಿಂಗ್ಸ್​ನಲ್ಲಿ 169 ಎಸೆತಗಳನ್ನು ಎದುರಿಸಿದ ಸ್ವಸ್ತಿಕ್ ಸಮಲ್, 21 ಬೌಂಡರಿ ಮತ್ತು 8 ಸಿಕ್ಸರ್ ಸೇರಿದಂತೆ 212 ರನ್ ಗಳಿಸಿ ಐತಿಹಾಸಿಕ ಇನ್ನಿಂಗ್ಸ್ ಆಡಿದರು. ಇವರ ಶತಕದಿಂದಾಗಿ ಒಡಿಶಾ ತಂಡವು 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 345 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಸೌರಾಷ್ಟ್ರ ತಂಡದ ಪರ ಸಮ್ಮರ್ ಗಜ್ಜರ್ ಕೂಡ ಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ರೋಹಿತ್, ಕೊಹ್ಲಿಯ ಶತಕಗಳ ಅಬ್ಬರ; ಬಿಸಿಸಿಐ ವಿರುದ್ಧ ಸಿಡಿದೆದ್ದ ಅಭಿಮಾನಿಗಳು

ಇವರೂ ಕೂಡ ಶತಕ ಸಿಡಿಸಿದರು

ಅರ್ಪಿತ್ ಭತೇವಾರಾ, ರಿಕಿ ಭುಯಿ, ಯಶ್ ದುಬೆ, ಸ್ನೇಹಲ್ ಕೌತಾಂಕರ್, ಶುಭಂ ಖಜುರಿಯಾ, ಕಿಶನ್ ಲಿಂಗ್ಡೋಹ್, ಅಮನ್ ಮೊಖಡೆ, ಹಿಮಾಂಶು ರಾಣಾ, ರವಿ ಸಿಂಗ್, ಬಿಪ್ಲಬ್ ಸಮಂತ್ರಾಯ್, ಧ್ರುವ ಶೋರೆ, ಫಿರೋಜಮ್ ಜೋತಿನ್ ಮತ್ತು ವಿಷ್ಣು ವಿನೋದ್ ಕೂಡ ಮೊದಲ ದಿನ ಶತಕದ ಇನ್ನಿಂಗ್ಸ್ ಆಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲೋಕಾಯುಕ್ತ ದಾಳಿ ವೇಳೆ ಸಚಿವ ಜಮೀರ್ ಆಪ್ತ ಕಾರ್ಯದರ್ಶಿ ಮನೆಯಲ್ಲಿ ಕೋಟಿ ಕೋಟಿ ಮೌಲ್ಯದ ಆಸ್ತಿ ಪತ್ತೆ – Kannada News | Lokayukta Finds Assets Worth Over ₹14 Crore at Minister Zameer Ahmed’s Personal Aide Surfraj Khans House

ಬೆಂಗಳೂರು, ಡಿಸೆಂಬರ್​​ 24: ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಕಾರ್ಯದರ್ಶಿ ಸರ್ದಾರ್ ಸರ್ಫರಾಜ್ ಖಾನ್ ನಿವಾಸದಲ್ಲಿ ಲೋಕಾಯುಕ್ತ ದಾಳಿ ಮುಕ್ತಾಯವಾಗಿದ್ದು, ಸರ್ಫರಾಜ್ ಖಾನ್ ಬಳಿ 14.38 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. 8.44 ಕೋಟಿ ರೂ. ಮೌಲ್ಯ ಸ್ಥಿರಾಸ್ತಿ ಮತ್ತು 5.93 ಕೋಟಿ ರೂ. ಮೊತ್ತದ ಚರಾಸ್ತಿ ಪತ್ತೆಯಾಗಿದೆ. 4 ವಾಸದ ಮನೆ ಮತ್ತು 35 ಎಕರೆ ಕೃಷಿ ಜಮೀನು ದಾಖಲೆ, 66,500 ಹಣ, 2.99 ಲಕ್ಷ ಮೌಲ್ಯದ ಚಿನ್ನ, 1.29 ಕೋಟಿ ಎಫ್​ಡಿ ಇರೋದು ಗೊತ್ತಾಗಿದೆ.

ಅಕ್ರಮ ಆಸ್ತಿ ಗಳಿಕೆ ಆರೋಪ ಸಂಬಂಧ ಈ ದಾಳಿ ನಡೆದಿದ್ದು, ಬೆಂಗಳೂರಿನ ಹಲಸೂರು ನಿವಾಸ, ಇತರ ಆರು ಮನೆಗಳು ಸೇರಿದಂತೆ ಒಟ್ಟು ಏಳು ಮನೆಗಳು, ಕೊಡಗಿನಲ್ಲಿರುವ ಎರಡು ಕಾಫಿ ಎಸ್ಟೇಟ್‌ಗಳು ಮತ್ತು ಹೆಚ್.ಡಿ.ಕೋಟೆಯಲ್ಲಿನ ಒಂದು ರೆಸಾರ್ಟ್ ಸೇರಿ ಸರ್ಫರಾಜ್ ಖಾನ್​​ಗೆ​​ ಸೇರಿದ ಒಟ್ಟು 13 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಸರ್ದಾರ್ ಸರ್ಫರಾಜ್ ಖಾನ್ ವಸತಿ ಇಲಾಖೆಗೆ ನಿಯೋಜನೆಗೊಂಡಿರುವ ಅಧಿಕಾರಿಯಾಗಿದ್ದು, ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆಯ ಕುರಿತು ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು (ಡಿ.24) ಬೆಳ್ಳಂಬೆಳಿಗ್ಗೆ 50ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು. ಎಲ್ಲಾ ಸ್ಥಳಗಳಲ್ಲಿ ದಾಖಲೆಗಳ ಪರಿಶೀಲನೆ ಮತ್ತು ಆಸ್ತಿ ವಿವರಗಳ ಸಂಗ್ರಹ ಕಾರ್ಯ ನಡೆದಿದೆ.

ಇದನ್ನೂ ಓದಿ:  ಸಚಿವ ಜಮೀರ್ ಅಹ್ಮದ್ ಆಪ್ತ ಕಾರ್ಯದರ್ಶಿಗೆ ಲೋಕಾಯುಕ್ತ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತು ಇದೆ ಗೊತ್ತೇ?

ಲೋಕಾಯುಕ್ತ ಬಲೆಗೆ ಬಿದ್ದ ಎಸಿಪಿ

30 ಸಾವಿರ ರೂ. ಲಂಚ ಸ್ವೀಕರಿಸುವಾಗ ಬೆಂಗಳೂರಿನ ಮಲ್ಲೇಶ್ವರಂ ಉಪ ವಿಭಾಗದ ಎಸಿಪಿ ಕೃಷ್ಣಮೂರ್ತಿ ಲೋಕಾ ಬಲೆಗೆ ಬಿದ್ದಿದ್ದಾರೆ. ಸಾಗರ್​ ಹೋಟೆಲ್ ಮಾಲೀಕರ ಬಳಿ ಲಂಚ ಸ್ವೀಕರಿಸುವಾಗ ಬೆಂಗಳೂರಿನ ಮಲ್ಲೇಶ್ವರಂ ಕಚೇರಿಯಲ್ಲೇ ಸಿಕ್ಕಿಬಿದ್ದಿದ್ದಾರೆ. ಪ್ರತಿ ತಿಂಗಳು 32 ಸಾವಿರ ರೂಪಾಯಿ ಕೊಡಬೇಕೆಂದು ಎಸಿಪಿ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಲೋಕಾಯುಕ್ತಕ್ಕೆ ಸಾಗರ್ ಹೋಟೆಲ್ ಮಾಲೀಕ ದೂರು ನೀಡಿದ್ದರು. ಎಸಿಪಿ ಕೃಷ್ಣಮೂರ್ತಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಆಡಿಯೋ ಕೂಡ ಲಭ್ಯವಾಗಿತ್ತು. ಈ ಆಧಾರದಲ್ಲಿಯೇ ದೂರು ದಾಖಲಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಯುದ್ಧಕ್ಕೆ ಸಿದ್ಧ ಎಂದ ಸುದೀಪ್ ಮಾತಿಗೆ ಅರ್ಜುನ್ ಜನ್ಯ ಮೊದಲ ರಿಯಾಕ್ಷನ್ – Kannada News | Arjun Janya reaction to Kichcha Sudeep controversial statement

ನಟ ಕಿಚ್ಚ ಸುದೀಪ್ (Kichcha Sudeep) ಅವರು ಹುಬ್ಬಳ್ಳಿಯಲ್ಲಿ ನಡೆದ ‘ಮಾರ್ಕ್’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ‘ಮಾತಿಗೆ ಬದ್ಧ, ಯುದ್ಧಕ್ಕೆ ಸಿದ್ಧ’ ಎಂದು ಹೇಳಿದ್ದರು. ಹಾಗಾದರೆ ಅವರು ಆ ಮಾತು ಹೇಳಿದ್ದು ಯಾರಿಗೆ ಎಂಬ ಪ್ರಶ್ನೆ ಜನರಲ್ಲಿ ಮೂಡಿತ್ತು. ‘ಮಾರ್ಕ್’ ತೆರೆಕಾಣುತ್ತಿರುವ ದಿನವೇ (ಡಿಸೆಂಬರ್ 25) ಅರ್ಜುನ್ ಜನ್ಯ ನಿರ್ದೇಶನದ ‘45’ ಸಿನಿಮಾ ರಿಲೀಸ್ ಆಗುತ್ತಿದೆ. ಈ ಬಗ್ಗೆ ಅರ್ಜುನ್ ಜನ್ಯ (Arjun Janya) ಅವರು ಟಿವಿ9 ಜೊತೆ ಮಾತನಾಡಿ ಪ್ರತಿಕ್ರಿಯೆ ನೀಡಿದ್ದಾರೆ. ‘ಪೈರಸಿಗೋಸ್ಕರ ತಾವು ಆ ರೀತಿ ಹೇಳಿಕೆ ನೀಡಿರುವುದು ಎಂದು ಸುದೀಪ್ ಸರ್ ಈಗಾಗಲೇ ಹೇಳಿದ್ದಾರೆ. ಶಿವಣ್ಣ, ಉಪೇಂದ್ರ, ರಾಜ್​ ಬಿ. ಶೆಟ್ಟಿ ಅವರಿಗೂ ಸುದೀಪ್ ಸರ್ ಎಂದರೆ ಬಹಳ ಪ್ರೀತಿ ಇದೆ. ಇವರೆಲ್ಲರ ಬಗ್ಗೆ ಸುದೀಪ್ ಅವರಿಗೂ ಬಹಳ ಅಭಿಮಾನ ಇದೆ. ಜನರು ಬೇರೆ ರೀತಿ ಅಂದುಕೊಂಡಿರಬಹುದು. ಆದರೆ ಈಗ ಸ್ಪಷ್ಟನೆ ಸಿಕ್ಕಿದೆ’ ಎಂದು ಅರ್ಜುನ್ ಜನ್ಯ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೇವಲ ಬೌಂಡರಿ, ಸಿಕ್ಸರ್​ಗಳಿಂದಲೇ 126 ರನ್ ಚಚ್ಚಿದ ರೋಹಿತ್; ವಿಡಿಯೋ ನೋಡಿ – Kannada News | Rohit Sharma Century: 155 Runs for Mumbai in Vijay Hazare Trophy

7 ವರ್ಷಗಳ ನಂತರ ವಿಜಯ್ ಹಜಾರೆ ಟ್ರೋಫಿಯಲ್ಲಿ ಕಣಕ್ಕಿಳಿದಿದ್ದ ಹಿಟ್​ಮ್ಯಾನ್ ರೋಹಿತ್ ಶರ್ಮಾ ತಮ್ಮ ಹೊಡಿಬಡಿ ಆಟದ ಮೂಲಕ ಮೊದಲ ದಿನವೇ ಭರ್ಜರಿ ಶತಕ ಸಿಡಿಸಿದರು. ಈ ಟೂರ್ನಿಯಲ್ಲಿ ಮುಂಬೈ ಪರ ಕಣಕ್ಕಿಳಿದಿದ್ದ ರೋಹಿತ್, ಸಿಕ್ಕಿಂ ವಿರುದ್ಧದ ಪಂದ್ಯದಲ್ಲಿ ಕೇವಲ 62 ಎಸೆತಗಳಲ್ಲಿ ಶತಕ ಸಿಡಿಸಿದರು. ತಮ್ಮ ಈ ಇನ್ನಿಂಗ್ಸ್​ನಲ್ಲಿ 94 ಎಸೆತಗಳನ್ನು ಎದುರಿಸಿದ ರೋಹಿತ್ 9 ಸಿಕ್ಸರ್ ಮತ್ತು 18 ಬೌಂಡರಿಗಳ ಸಹಾಯದಿಂದ ಬರೋಬ್ಬರಿ 155 ರನ್ ಸಿಡಿಸಿದರು. ಅಂದರೆ ರೋಹಿತ್ ಬರಿ ಬೌಂಡರಿ ಹಾಗೂ ಸಿಕ್ಸರ್​ಗಳಿಂದಲೇ 126 ರನ್ ಕಲೆಹಾಕಿದರು. ಇದೀಗ ಅದರ ವಿಡಿಯೋವನ್ನು ಬಿಸಿಸಿಐ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಭಾರಿ ವೈರಲ್ ಆಗುತ್ತಿದೆ.

Source link

Bomb Attack: ಬಾಂಗ್ಲಾದೇಶದಲ್ಲಿ ನಿಲ್ಲದ ಹಿಂಸಾಚಾರ; ಬಾಂಬ್ ದಾಳಿಗೆ ಒಬ್ಬ ಬಲಿ – Kannada News | Bangladesh Violence, 1 killed in crude bomb attack in Dhaka moghbazar area

ಢಾಕಾ, ಡಿಸೆಂಬರ್ 24: ಬಾಂಗ್ಲಾದೇಶ ಹೊತ್ತಿ ಉರಿಯುವುದು ಮುಂದುವರಿದಿದೆ. ಅದರ ರಾಜಧಾನಿ ಢಾಕಾದ ಮೋಘಬಜಾರ್ ಪ್ರದೇಶದಲ್ಲಿ ಬುಧವಾರ ಸಂಜೆ ಬಾಂಬ್ ದಾಳಿಯಾಗಿದೆ. ಇಲ್ಲಿಯ ಫ್ಲೈಓವರ್ ಮೇಲಿಂದ ಅಪರಿಚಿತ ದುಷ್ಕರ್ಮಿಗಳು ಕಚ್ಛಾ ಬಾಂಬ್ (crude bomb blast) ಅನ್ನು ಎಸೆದಿದ್ದಾರೆ. ಕೆಳಗೆ ರಸ್ತೆಬದಿಯಲ್ಲಿ ಚಹಾ ಕುಡಿಯುತ್ತಿದ್ದ ವ್ಯಕ್ತಿಯ ತಲೆ ಮೇಲೆ ಬಾಂಬ್ ಬಿದ್ದು ಸ್ಫೋಟಗೊಂಡಿದೆ. ಪರಿಣಾಮವಾಗಿ, ಆ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬುಧವಾರ ಸಂಜೆ 7 ಗಂಟೆಗೆ ಈ ಘಟನೆ ಸಂಭವಿಸಿರುವುದು ತಿಳಿದುಬಂದಿದೆ. ಬಾಂಬ್​ಗೆ ಬಲಿಯಾದ ವ್ಯಕ್ತಿ 21 ವರ್ಷದ ಯುವಕ ಸೈಫುಲ್ ಎಂದು ಗುರುತಿಸಲಾಗಿದೆ.

‘ರಸ್ತೆಬದಿ ಅಂಗಡಿಯಲ್ಲಿ ಸೈಫೂಲ್ ಚಹಾ ಸೇವಿಸುತ್ತಿದ್ದಾಗ, ಫ್ಲೈ ಓವರ್ ಮೇಲಿಂದ ಎಸೆಯಲಾದ ಕಚ್ಛಾ ಬಾಂಬ್ ಆತನ ಮೇಲೆ ಬಿದ್ದಿದೆ. ತಲೆಗೆ ತೀವ್ರ ಪೆಟ್ಟು ಬಿದ್ದು ವಿಪರೀತ ರಕ್ತ ಸ್ರಾವವವಾಗಿ ಆತ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ’ ಎಂದು ಢಾಕಾದ ಹಾತಿರ್ಜೀಲ್ ಪೊಲೀಸ್ ಸ್ಟೇಷನ್ ಇನ್ಸ್​ಪೆಕ್ಟರ್ ಹೇಳಿದ್ದಾರೆ.

ಇದನ್ನೂ ಓದಿ: ಬಾಂಗ್ಲಾದೇಶ ಮಾರ್ಗದ ಮೂಲಕ ಭಾರತಕ್ಕೆ ಉಗ್ರರನ್ನು ನುಸುಳಿಸಲು ಪಾಕಿಸ್ತಾನ ಪ್ಲಾನ್

ಬಾಂಬ್ ನೇರವಾಗಿ ತಲೆಗೆ ಬಡಿದು ಸ್ಫೋಟಗೊಂಡಿದ್ದರಿಂದ ಸೈಫುಲ್​ನ ತಲೆಯಿಂದ ಮಿದುಳು ಹೊರಬಂದು ಎಲ್ಲೆಡೆ ಚೆಲ್ಲಾಪಿಲ್ಲಿಯಾಗಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಭಯಾನಕ ದೃಶ್ಯವನ್ನು ಬಣ್ಣಿಸಿದ್ದಾರೆ. ಬಾಂಬ್ ಬಿದ್ಧ ಜಾಗವು 1971ರ ಬಾಂಗ್ಲಾ ಮುಕ್ತಿ ಹೋರಾಟಗಾರರ ಕಚೇರಿಗೆ ಸಮೀಪ ಇದೆ ಎನ್ನಲಾಗಿದೆ.

ಕಳೆದ ವರ್ಷ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆಗಳಿಂದ ಶುರುವಾದ ಹೋರಾಟ, ದಂಗೆ, ಹಿಂಸಾಚಾರ ಇವತ್ತು ಆ ದೇಶದಲ್ಲಿ ರಕ್ತಪಾತ ತೀರಾ ಸಾಮಾನ್ಯವಾಗಿಸಿದೆ. ಪ್ರಧಾನಿ ಶೇಖ್ ಹಸೀನಾ ದೇಶ ಬಿಟ್ಟು ಭಾರತಕ್ಕೆ ಓಡಿ ಬರುವಂತಾಯಿತು. ಆ ಸಂದರ್ಭದಲ್ಲಿ ಬಾಂಗ್ಲಾದ ವಿವಿಧೆಡೆ ಸಾಕಷ್ಟು ಹಿಂಸಾಚಾರಗಳಾದವು. ನಂತರ ಬಂದ ಮಧ್ಯಂತರ ಸರ್ಕಾರವು ಭಾರತ ವಿರೋಧಿ ನೀತಿಗಳನ್ನು ಅನುಸರಿಸುತ್ತಾ ಬಂದಿದೆ.

ಇದನ್ನೂ ಓದಿ: ಸತ್ತ ಆರ್ಥಿಕತೆಯಷ್ಟೇ ಅಲ್ಲ, ಸತ್ತ ಸಮಾಜವೂ ಆಗುತ್ತಿದ್ದೇವೆ: ಉನ್ನಾವೋ ರೇಪ್ ಸಂತ್ರಸ್ತೆ ಭೇಟಿ ಬಳಿಕ ರಾಹುಲ್ ಗಾಂಧಿ ಆಕ್ರೋಶದ ಹೇಳಿಕೆ

ವಿದ್ಯಾರ್ಥಿ ಪ್ರತಿಭಟನೆಯ ರೂವಾರಿಯಾಗಿದ್ದ ಷರೀಫ್ ಉಸ್ಮಾನ್ ಹದಿ ಅವರನ್ನು ಡಿಸೆಂಬರ್ 12ರಂದು ಆಗಂತುಕರು ಹತ್ಯೆ ಮಾಡಿದರು. ಇದಾದ ಬಳಿಕ ಮತ್ತೊಮ್ಮೆ ಬಾಂಗ್ಲಾದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಭಾರತೀಯರು, ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿಗಳು ಹೆಚ್ಚಾಗಿವೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಲ್ಲಿ ಚೀನಾ ಮಾದರಿ ರೈಲ್ವೆ ಟರ್ಮಿನಲ್!: ನಿರ್ಮಾಣ ಆಗೋದೆಲ್ಲಿ ಗೊತ್ತಾ? – Kannada News | Yelahanka Gets India’s 1st China Model Multi Level Railway Terminal

ಬೆಂಗಳೂರು, ಡಿಸೆಂಬರ್​​ 24: ದೇಶದಲ್ಲಿ ಇದೇ ಮೊದಲ ಬಾರಿಗೆ ಚೈನಾದ ಹ್ಯಾಂಗ್ಜೋ ಮಾದರಿಯಲ್ಲಿ ಬೆಂಗಳೂರಿನ ಯಲಹಂಕದಲ್ಲಿ ರೈಲ್ವೆ ಟರ್ಮಿನಲ್ ನಿರ್ಮಾಣಕ್ಕೆ ಇಲಾಖೆ ಸಿದ್ದತೆ ನಡೆಸಿದೆ. ಒಟ್ಟು 20 ಎಕರೆ ವಿಸ್ತೀರ್ಣದ ಜಾಗದಲ್ಲಿ, 6 ಸಾವಿರ ಕೋಟಿ ರೂಪಾಯಿ ವೆಚ್ಚದೊಂದಿಗೆ ಮಲ್ಟಿ ಲೆವಲ್ ರೈಲ್ವೆ ಸ್ಟೇಷನ್ ನಿರ್ಮಾಣ ಮಾಡಲು ಪ್ಲ್ಯಾನ್ ನಡೆಯುತ್ತಿದ್ದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರೀತಿಯಲ್ಲಿ ಇದು ಇರಲಿದೆ ಎನ್ನಲಾಗಿದೆ.

ರೈಲ್ ವೀಲ್ ಫ್ಯಾಕ್ಟರಿ ಬಳಿ ಟರ್ಮಿನಲ್ ಸ್ಟೇಷನ್​​ ನಿರ್ಮಾಣ

ಮೊದಲಿಗೆ ದೇವನಹಳ್ಳಿಯಲ್ಲಿ ಈ ಟರ್ಮಿನಲ್ ಸ್ಟೇಷನ್ ನಿರ್ಮಾಣ ಮಾಡಲು ಇಲಾಖೆ ಚಿಂತನೆ ನಡೆಸಿತ್ತು. ಆದರೆ ಅಲ್ಲಿ ಜಾಗದ ಸಮಸ್ಯೆ ಹಿನ್ನೆಲೆ ಯಲಹಂಕದ ರೈಲ್ ವೀಲ್ ಫ್ಯಾಕ್ಟರಿ ಬಳಿ ಟರ್ಮಿನಲ್ ಸ್ಟೇಷನ್ ಮಾಡಲು ಸೌತ್ ವೆಸ್ಟರ್ನ್ ರೈಲ್ವೆ ಒಲವು ತೋರಿಸಿದೆ ಎನ್ನಲಾಗಿದ್ದು, ಈ ಬಗ್ಗೆ ಯಲಹಂಕ ನಿವಾಸಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ರೈಲ್ವೆ ಪ್ರಯಾಣಿಕರೇ ಗಮನಿಸಿ, ಇನ್ಮುಂದೆ ಟಿಕೆಟ್​ ಅನ್ನು ಮೊಬೈಲ್​ನಲ್ಲಿ ತೋರಿಸಿದ್ರೆ ಸಾಲ್ದು

ಒಟ್ಟು ಐದು ಫ್ಲೋರ್​​ಗಳಲ್ಲಿ ರೈಲುಗಳು ಸಂಚಾರ!

ಇನ್ನು ಈ ರೈಲ್ವೆ ಟರ್ಮಿನಲ್​​ನಲ್ಲಿ 16 ಫ್ಲಾಟ್ ಫಾರಂ ಇರಲಿದೆ. ಅಂಡರ್ ಗ್ರೌಂಡ್, ಫಸ್ಟ್ ಫ್ಲೋರ್ ಸೇರಿದಂತೆ ಒಟ್ಟು ಐದು ಫ್ಲೋರ್​​ಗಳಲ್ಲಿ ರೈಲುಗಳು ಸಂಚಾರ ಮಾಡಲಿವೆಯಂತೆ. ಆ ಮೂಲಕ ಇದು ದೇಶದ ಮೊದಲ ಸಂಪೂರ್ಣ ಎತ್ತರಿಸಿದ ರೈಲ್ವೆ ಸ್ಟೇಷನ್ ಆಗಲಿದೆ. ಜೊತೆಗೆ ಈ ಟರ್ಮಿನಲ್ ಬ್ಲ್ಯೂ ಲೈನ್​​ನಲ್ಲಿರುವ ಕೋಗಿಲು ಕ್ರಾಸ್ ಮೆಟ್ರೋ ನಿಲ್ದಾಣಕ್ಕೂ ಸಂಪರ್ಕ ಕಲ್ಪಿಸಲಿದೆ. ಯಲಹಂಕ-ದೊಡ್ಡಬಳ್ಳಾಪುರ ಹೆದ್ದಾರಿ ಕಡೆಯಿಂದ ಟರ್ಮಿನಲ್​​ನ​​ ಮುಖ್ಯದ್ವಾರ ಇರಲಿದೆ ಎನ್ನಲಾಗಿದೆ. ಈ ಬಗ್ಗೆ ರೈಲ್ವೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದು, ಈ ರೈಲ್ವೆ ಟರ್ಮಿನಲ್​​ ನಿರ್ಮಾಣವಾದರೆ ಅಂತಾರಾಷ್ಟ್ರೀಯ ಏರ್​​ಪೋರ್ಟ್​​ಗೆ ಸಂಚಾರವೂ ಸುಲಭವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Virat Kohli: ಕಿಂಗ್ ಕೊಹ್ಲಿಯ ಶತಕದ ಇನ್ನಿಂಗ್ಸ್​ನ ವಿಡಿಯೋ ಹಂಚಿಕೊಂಡ ಬಿಸಿಸಿಐ – Kannada News | Virat Kohli Smashes Century in Vijay Hazare: BCCI Shares Highlights, Fans Rejoice

ಬೆಂಗಳೂರಿನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯ ಮೊದಲ ದಿನವೇ ಅಭಿಮಾನಿಗಳಿಗೆ ನಿರಾಸೆ ಎದುರಾಗಿತ್ತು. ಇದಕ್ಕೆ ಕಾರಣ, ದಿಗ್ಗಜರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಆಟವನ್ನು ನೇರಪ್ರಸಾರ ನೋಡುವ ಅವಕಾಶ ಇರಲಿಲ್ಲ. ಆದರೀಗ ಅಭಿಮಾನಿಗಳಿಗೆ ಕೊಂಚ ಸಮಾದಾನಪಡಿಸಿರುವ ಬಿಸಿಸಿಐ, ವಿರಾಟ್ ಕೊಹ್ಲಿಯ ಶತಕದ ಇನ್ನಿಂಗ್ಸ್​ನ ಹೈಲೈಟ್ಸ್ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇಂದಿನ ಪಂದ್ಯದಲ್ಲಿ ದೆಹಲಿ ಪರ ಕಣಕ್ಕಿಳಿದಿದ್ದ ಕೊಹ್ಲಿ, ಆಂಧ್ರಪ್ರದೇಶ ವಿರುದ್ಧ ಭರ್ಜರಿ ಶತಕ ಸಿಡಿಸಿ ಮಿಂಚಿದರು. ತಮ್ಮ ಇನ್ನಿಂಗ್ಸ್​ನಲ್ಲಿ 101 ಎಸೆತಗಳನ್ನು ಎದುರಿಸಿದ ವಿರಾಟ್, 14 ಬೌಂಡರಿ ಹಾಗೂ 3 ಬೌಂಡರಿ ಸಹಿತ131 ರನ್ ಬಾರಿಸಿದರು. ಈ ಮೂಲಕ ಕೊಹ್ಲಿ, ಲಿಸ್ಟ್ ಎ ಕ್ರಿಕೆಟ್‌ನಲ್ಲಿ 16,000 ರನ್ ಪೂರೈಸಿದ ಭಾರತದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Source link

ಜಾಮೀನು ಅರ್ಜಿ ವಜಾ; ಆರ್​ಸಿಬಿ ವೇಗ ಯಶ್ ದಯಾಳ್​ಗೆ ಬಂಧನ ಭೀತಿ – Kannada News | Yash Dayal POCSO Case: Anticipatory Bail Rejected, RCB Pacer Faces Arrest

ಭಾರತ ಕ್ರಿಕೆಟ್‌ನ ಉದಯೋನ್ಮುಖ ವೇಗಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಎಡಗೈ ವೇಗದ ಬೌಲರ್ ಯಶ್ ದಯಾಳ್​ಗೆ (Yash Dayal) ಬಂಧನದ ಭೀತಿ ಎದುರಾಗಿದೆ. ಜೈಪುರದ ಪೋಕ್ಸೋ ನ್ಯಾಯಾಲಯವು ಯಶ್ ದಯಾಳ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ವಾಸ್ತವವಾಗಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪದ ಮೇಲೆ ಪೊಲೀಸರು ಯಶ್ ದಯಾಳ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.

ಇದೀಗ ಜೈಪುರ ಮೆಟ್ರೋಪಾಲಿಟನ್ ಫಸ್ಟ್‌ನ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶೆ ಅಲ್ಕಾ ಬನ್ಸಾಲ್ ಅವರ ತೀರ್ಪಿನ ಪ್ರಕಾರ, ಲಭ್ಯವಿರುವ ಪುರಾವೆಗಳು ಮತ್ತು ತನಿಖೆಯ ವರದಿಯನ್ನು ನೋಡಿದರೆ, ಆರೋಪಿ ವಿರುದ್ಧ ಷಡ್ಯಾಂತ್ರ ಮಾಡಲಾಗಿದೆ ಎಂಬುದನ್ನು ಒಪ್ಪಲಾಗದು. ತನಿಖೆಯ ವರದಿಯನ್ನು ಗಮನಿಸಿದರೆ, ಇದರಲ್ಲಿ ಆರೋಪಿಯ ಪಾತ್ರವಿದೆ ಎಂಬುದನ್ನು ಅರಿಯಬಹುದು ಎಂಬ ತೀರ್ಪು ನೀಡಿದ್ದು, ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಆದಾಗ್ಯೂ ಯಶ್ ದಯಾಳ್​ಗೆ ಇನ್ನೂ ಹೈಕೋರ್ಟ್‌ಗೆ ಹೋಗುವ ಆಯ್ಕೆಯಿರುವ ಕಾರಣ, ಜೈಲು ಪಾಲಾಗುವ ಸಾಧ್ಯತೆಗಳಿಲ್ಲ.

ಜುಲೈ 2025 ರಲ್ಲಿ ದೂರು ದಾಖಲು

ಜುಲೈ 23, 2025 ರಂದು, ಜೈಪುರದ ಸಂಗನೇರ್ ಸದರ್ ಪೊಲೀಸ್ ಠಾಣೆಯಲ್ಲಿ 19 ವರ್ಷದ ಯುವತಿಯೊಬ್ಬಳು ಯಶ್ ದಯಾಳ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಯುವತಿ ದೂರು ನೀಡಿರುವ ಪ್ರಕಾರ, ‘ಎರಡು ವರ್ಷಗಳ ಹಿಂದೆ ಐಪಿಎಲ್ ಪಂದ್ಯವನ್ನಾಡಲು ಯಶ್ ದಯಾಳ್ ಜೈಪುರಕ್ಕೆ ಬಂದಿದ್ದರು. ಆ ವೇಳೆ ನಾನು ಅಪ್ರಾಪ್ತ ವಯಸ್ಸಿನವಳಾಗಿದ್ದು ತನ್ನ ಕ್ರಿಕೆಟ್ ವೃತ್ತಿಜೀವನದ ಬಗ್ಗೆ ಸಲಹೆ ನೀಡುವ ನೆಪದಲ್ಲಿ ಯಶ್ ದಯಾಳ್ ತನ್ನನ್ನು ಸೀತಾಪುರದಲ್ಲಿರುವ ಹೋಟೆಲ್ ಇಂಟರ್ ಕಾಂಟಿನೆಂಟಲ್‌ಗೆ ಕರೆಸಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಳು.

‘ಐಪಿಎಲ್ ವೇಳೆ ದೈಹಿಕ ಕಿರುಕುಳ ನೀಡಿದ್ರು’; ಯಶ್ ದಯಾಳ್ ವಿರುದ್ಧ ದೂರು ನೀಡಿದ ಮತ್ತೋರ್ವ ಯುವತಿ

ಆರ್‌ಸಿಬಿ ಪರ ಕಣಕ್ಕಿಳಿಯುತ್ತಾರಾ ದಯಾಳ್?

ಲೈಂಗಿಕ ದೌರ್ಜನ್ಯ ಆರೋಪದಿಂದ ಬಂಧನ ಭೀತಿಯಲ್ಲಿರುವ ಯಶ್ ದಯಾಳ್, ಕ್ರಿಕೆಟ್ ಲೋಕದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಆದಾಗ್ಯೂ ಆರ್‌ಸಿಬಿ ತಂಡವು ಅವರನ್ನು ತಂಡದಲ್ಲಿ ಉಳಿಸಿಕೊಂಡಿದೆ. 2024 ರ ಐಪಿಎಲ್​ಗೂ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡಿದ್ದ ದಯಾಳ್​ಗೆ ಆರ್​ಸಿಬಿ 5 ಕೋಟಿ ರೂ. ವೇತನ ನೀಡುತ್ತಿದೆ. ಕಳೆದ ಆವೃತ್ತಿಯಲ್ಲಿ ಆರ್​ಸಿಬಿ ಚಾಂಪಿಯನ್ ಆಗುವಲ್ಲಿ ಯಶ್ ದಯಾಳ್ ಪ್ರಮುಖ ಪಾತ್ರ ವಹಿಸಿದ್ದರು. ಪರಿಣಾಮವಾಗಿ, ಅವರನ್ನು ಐಪಿಎಲ್ 2026 ಕ್ಕೂ ತಂಡಕ್ಕೆ ಉಳಿಸಿಕೊಳ್ಳಲಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘45’ ಸಿನಿಮಾ ಪ್ರೀಮಿಯರ್ ಶೋ: ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ಫ್ಯಾನ್ಸ್ ಸಂಭ್ರಮ ನೋಡಿ – Kannada News | 45 Kannada movie fans celebrate in front of theatre during premiere show

ಅರ್ಜುನ್ ಜನ್ಯ ಅವರು ನಿರ್ದೇಶನ ಮಾಡಿರುವ ‘45’ ಸಿನಿಮಾ (45 Kannada Movie) ಬಿಡುಗಡೆ ಆಗುತ್ತಿದೆ. ಒಂದು ದಿನ ಮೊದಲೇ ಪ್ರೀಮಿಯರ್ ಶೋ ಮಾಡಲಾಗಿದೆ. ಬೆಂಗಳೂರಿನ ಹಲವು ಕಡೆಗಳಲ್ಲಿ ಪ್ರೀಮಿಯರ್ ಶೋ ನಡೆದಿದೆ. ಅಭಿಮಾನಿಗಳು ಭಾರಿ ಉತ್ಸಾಹದಲ್ಲಿ ಬಂದು ಸಿನಿಮಾ ನೋಡುತ್ತಿದ್ದಾರೆ. ಶಿವರಾಜ್​​ಕುಮಾರ್, ರಾಜ್ ಬಿ. ಶೆಟ್ಟಿ, ಉಪೇಂದ್ರ (Upendra) ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಈ ಸ್ಟಾರ್ ನಟರ ಅಭಿಮಾನಿಗಳು ಚಿತ್ರಮಂದಿರಗಳ ಎದುರು ಜೋರಾಗಿ ಸಂಭ್ರಮಿಸುತ್ತಿದ್ದಾರೆ. ಈಗಾಗಲೇ ‘45’ ಸಿನಿಮಾ ನೋಡಿದ ಅಭಿಮಾನಿಗಳು ಪಾಸಿಟಿವ್ ಪ್ರತಿಕ್ರಿಯೆ ನೀಡುತ್ತಿದ್ದಾರೆ. ರಮೇಶ್ ರೆಡ್ಡಿ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ (Arjun Janya) ಅವರ ಚೊಚ್ಚಲ ನಿರ್ದೇಶನಕ್ಕೆ ಜನರಿಂದ ಮೆಚ್ಚುಗೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪೂರ್ಣ ಅರಾವಳಿ ರಕ್ಷಣೆ; ಹೊಸ ಮೈನಿಂಗ್ ಲೀಸ್ ಇಲ್ಲ: ಕೇಂದ್ರ ನಿರ್ಧಾರ ಮತ್ತು ಭರವಸೆ – Kannada News | Govt says it will protect entire aravali, won’t give new mining lease

ನವದೆಹಲಿ, ಡಿಸೆಂಬರ್ 24: ಅಮೂಲ್ಯ ನೈಸರ್ಗಿಕ ಸಂಪತ್ತಿರುವ ಅರಾವಳಿ ಪರ್ವತ ಶ್ರೇಣಿಯನ್ನು (Aravali Range) ಸಂಪೂರ್ಣವಾಗಿ ರಕ್ಷಿಸಲು ಬದ್ಧವಾಗಿದ್ದೇವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಅರಾವಳಿ ವ್ಯಾಪ್ತಿಯಲ್ಲಿ ಗಣಿಗಾರಿಕೆ ಮೂಲಕ ಈ ಸೂಕ್ಷ್ಮ ಪ್ರದೇಶವನ್ನು ನಾಶ ಮಾಡುವ ಪ್ರಯತ್ನ ನಡೆದಿದೆ ಎನ್ನುವ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಸ್ಪಷ್ಟನೆ ಕೊಟ್ಟಿದೆ. ಇಂದು ಪತ್ರಿಕಾ ಹೇಳಿಕೆ ಹೊರಡಿಸಿದ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು, ಅರಾವಳಿ ಶ್ರೇಣಿಯಲ್ಲಿ ಯಾವುದೇ ಹೊಸ ಗಣಿಗಳಿಗೆ ಅನುಮತಿ ನೀಡಬಾರದು ಎಂದು ವಿವಿಧ ರಾಜ್ಯಗಳಿಗೆ ನಿರ್ದೇಶನ ನೀಡಿದೆ.

ಭಾರತದಲ್ಲಿ ಪಶ್ಚಿಮ ಘಟ್ಟ, ವಿಂಧ್ಯ, ಕಾರಕೋರಮ್ ಇತ್ಯಾದಿ ಇರುವ ಕೆಲ ಪ್ರಮುಖ ಪರ್ವತ ಶ್ರೇಣಿಗಳಲ್ಲಿ ಅರಾವಳಿಯೂ ಒಂದು. ದೆಹಲಿ ಸಮೀಪ ಶುರುವಾಗುವ ಈ ಪರ್ವತ ಶ್ರೇಣಿಯು ಹರ್ಯಾಣ, ರಾಜಸ್ಥಾನ ಮತ್ತು ಗುಜರಾತ್ ರಾಜ್ಯದವರೆಗೂ ಇದೆ. ಇದರ ಹೆಚ್ಚಿನ ಭಾಗವು ರಾಜಸ್ಥಾನದಲ್ಲಿ ಇದೆ.

ಹಲವು ವರ್ಷಗಳಿಂದ ಈ ಪ್ರದೇಶದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಾಕಷ್ಟು ಗಣಿಗಾರಿಕೆಗಳು ನಡೆದಿವೆ. ಇದರಿಂದ ಇಲ್ಲಿಯ ಸೂಕ್ಷ್ಮ ಪರಿಸರಕ್ಕೆ ಧಕ್ಕೆಯಾಗಿದೆ ಎನ್ನುವುದು ಪರಿಸರ ಹೋರಾಟಗಾರರು ಮಾಡುತ್ತಿರುವ ಆರೋಪ.

ಇದನ್ನೂ ಓದಿ: ಸತ್ತ ಆರ್ಥಿಕತೆಯಷ್ಟೇ ಅಲ್ಲ, ಸತ್ತ ಸಮಾಜವೂ ಆಗುತ್ತಿದ್ದೇವೆ: ಉನ್ನಾವೋ ರೇಪ್ ಸಂತ್ರಸ್ತೆ ಭೇಟಿ ಬಳಿಕ ರಾಹುಲ್ ಗಾಂಧಿ ಆಕ್ರೋಶದ ಹೇಳಿಕೆ

ಅರಾವಳಿ ಪರ್ವತ ಶ್ರೇಣಿಯಲ್ಲಿ ಯಾವ್ಯಾವ ಪ್ರದೇಶಗಳಲ್ಲಿ ಮೈನಿಂಗ್ ಅನ್ನು ಸಂಪೂರ್ಣ ನಿಷೇಧಿಸಬೇಕು ಎಂಬುದನ್ನು ಗುರುತಿಸುವಂತೆ ಸರ್ಕಾರವು ಅರಣ್ಯ ಸಂಶೋಧನೆ ಮಂಡಳಿಯಾದ ಐಸಿಎಫ್​ಆರ್​ಇಗೆ ನಿರ್ದೇಶನ ನೀಡಿದೆ. ವಿವಿಧ ಮಾನದಂಡಗಳು ಹಾಗೂ ಅಂಶಗಳ ಆಧಾರದ ಮೇಲೆ ಈ ಸಂಸ್ಥೆಯು ಅರಾವಳಿ ಪ್ರದೇಶವನ್ನು ಅವಲೋಕಿಸಲಿದೆ.

ಹಾಗೆಯೇ, ವೈಜ್ಞಾನಿಕವಾಗಿ ಹಾಗೂ ಸುಸ್ಥಿರವಾಗಿ ಮಾಡಬಹುದಾದ ಗಣಿಗಾರಿಕೆ ಸಾಧ್ಯತೆ ಬಗ್ಗೆ ಐಸಿಎಫ್​ಆರ್​ಇ ಒಂದು ಸಮಗ್ರ ವರದಿ ಮಾಡಲಿದೆ. ಗಣಿಗಾರಿಕೆಯಿಂದ ಏನೇನು ಅನಾಹುತ, ಪರಿಣಾಮಗಳಾಗಬಹುದು, ಇತ್ಯಾದಿ ಎಲ್ಲಾ ರೀತಿಯ ಸಾಧ್ಯಾಸಾಧ್ಯತೆಗಳ ವಿಶ್ಲೇಷಣೆಯು ಈ ವರದಿಯಲ್ಲಿ ಇರುತ್ತದೆ. ಈ ವರದಿಯು ಸಾರ್ವತ್ರಿಕವಾಗಿ ಲಭ್ಯ ಇರುವಂತೆ ಮಾಡಲಾಗುತ್ತದೆ.

ಇದನ್ನೂ ಓದಿ: ದೆಹಲಿ ಮಾಲಿನ್ಯದ ಭೀಕರತೆಯನ್ನು ತೆರೆದಿಟ್ಟ ಸಚಿವ ನಿತಿನ್ ಗಡ್ಕರಿ

ಅರಾವಳಿ ಶ್ರೇಣಿ ಬಗ್ಗೆ ಹೊಸ ವ್ಯಾಖ್ಯಾನ; ಪರಿಸರವಾದಿಗಳಿಗೆ ಬೇಸರ?

ಅರಾವಳಿ ಶ್ರೇಣಿಯಲ್ಲಿ 100 ಮೀಟರ್​ಗಿಂತ ಹೆಚ್ಚು ಎತ್ತರದ ಗುಡ್ಡಗಳನ್ನು ಅರಾವಳಿ ಪರ್ವತ ಎಂದು ಪರಿಗಣಿಸಬಹುದು ಎಂದು ನವೆಂಬರ್ 20ರಂದು ಸುಪ್ರೀಂಕೋರ್ಟ್ ತೀರ್ಪು ಕೊಟ್ಟಿತು. ಇದು ಪರಿಸರ ಹೋರಾಟಗಾರರನ್ನು ಆತಂಕಕ್ಕೆ ತಳ್ಳಿದೆ. ಅರಾವಳಿ ಶ್ರೇಣಿಯಲ್ಲಿ 100 ಮೀಟರ್​ಗಿಂತ ಕಡಿಮೆ ಎತ್ತರದ ಹಲವು ಪರ್ವತಗಳಿವೆ. ಅವುಗಳನ್ನು ಅರಾವಳಿ ಶ್ರೇಣಿ ಎಂದು ಪರಿಗಣಿಸದೇ ಅಲ್ಲಿ ಗಣಿಗಾರಿಕೆಗೆ ಸರ್ಕಾರ ಅನುಮತಿಸಬಹುದು ಎಂಬುದು ಪ್ರಮುಖ ತಕರಾರು. ಈ ಹಿನ್ನೆಲೆಯಲ್ಲಿ ಸರ್ಕಾರವು ಇಡೀ ಅರಾವಳಿ ಶ್ರೇಣಿಯನ್ನೇ ರಕ್ಷಿಸುವುದಾಗಿ ಸ್ಪಷ್ಟನೆ ಕೊಟ್ಟಿರುವುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link