ವಿಜಯ ಹಝಾರೆ ಟೂರ್ನಿಯ ಮೊದಲ ಪಂದ್ಯದಲ್ಲೇ ವಿರಾಟ್ ಕೊಹ್ಲಿ (Virat Kohli) ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ವರ್ಲ್ಡ್ ರೆಕಾರ್ಡ್ ಮುರಿಯುವ ಮೂಲಕ ಎಂಬುದು ವಿಶೇಷ.
ವಿಜಯ ಹಝಾರೆ ಟೂರ್ನಿಯ ಮೊದಲ ಪಂದ್ಯದಲ್ಲೇ ವಿರಾಟ್ ಕೊಹ್ಲಿ (Virat Kohli) ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ವರ್ಲ್ಡ್ ರೆಕಾರ್ಡ್ ಮುರಿಯುವ ಮೂಲಕ ಎಂಬುದು ವಿಶೇಷ.
ಬೆಂಗಳೂರು, ಡಿಸೆಂಬರ್ 24: ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಇರುವ ಬಹು ದೊಡ್ಡ ಸಮಸ್ಯೆ ಎಂದರೆ ಅದು ಪಾರ್ಕಿಂಗ್. ಮೆಟ್ರೋ ಸ್ಟೇಷನ್ಗಳ ಬಳಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಮೆಟ್ರೋ ಪ್ರಯಾಣಿಕರು ಸ್ಟೇಷನ್ ಅಕ್ಕಪಕ್ಕದ ರಸ್ತೆಗಳಲ್ಲಿ, ಮನೆಗಳ ಗೇಟ್ ಬಳಿ ವಾಹನಗಳನ್ನು ನಿಲ್ಲಿಸಿ ಹೋಗುತ್ತಿದ್ದಾರೆ. ಇದರಿಂದ ದೊಡ್ಡ ಮಟ್ಟದಲ್ಲಿ ಟ್ರಾಫಿಕ್ ಸಮಸ್ಯೆ ಎದುರಿಸುವಂತಾಗುತ್ತಿದೆ. ಇದಕ್ಕೆ ಬ್ರೇಕ್ ಹಾಕಲು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮುಂದಾಗಿದ್ದು, ಮುಂಬರುವ ಮೆಟ್ರೋ ಮಾರ್ಗಗಳಲ್ಲಿ ಬರುವ ಸ್ಟೇಷನ್ಗಳ ಬಳಿ ಅಕ್ಕಪಕ್ಕದ ಜಾಗವನ್ನು ಖರೀದಿ ಮಾಡಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು, ಮೆಟ್ರೋ ಸ್ಟೇಷನ್ನಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಮಾಡಬೇಕು. ಇದರಿಂದ ಪ್ರಯಾಣಿಕರಿಗೆ ಉಪಯೋಗ ಆಗಲಿದೆ ಎಂದು ಸೂಚನೆ ನೀಡಿದ್ದಾರೆ.
ಡಿಸಿಎಂ ಸೂಚನೆ ಹಿನ್ನೆಲೆ ಬಿಎಂಆರ್ಸಿಎಲ್ ಅಧಿಕಾರಿಗಳು ಇನ್ಮುಂದೆ ಆರಂಭವಾಗಲಿರುವ ಮೆಟ್ರೋ ಮಾರ್ಗಗಳು ಮತ್ತು ವಿಸ್ತರಣೆ ಆಗಲಿರುವ ಮೆಟ್ರೋ ಮಾರ್ಗಗಳಾದ ಆರೆಂಜ್ ಲೈನ್, ಬ್ಲೂ ಲೈನ್, ರೆಡ್ ಲೈನ್, ಪಿಂಕ್ ಲೈನ್, ಯೆಲ್ಲೋ ಲೈನ್ ಮೆಟ್ರೋ ಸ್ಟೇಷನ್ಗಳ ಬಳಿ ಮಲ್ಟಿ ಲೆವೆಲ್ ಪಾರ್ಕಿಂಗ್ ನಿರ್ಮಾಣ ಮಾಡಲು ಅಕ್ಕಪಕ್ಕದ ಜಾಗವನ್ನು ಪತ್ತೆ ಮಾಡಲು ಮುಂದಾಗಿದ್ದಾರೆ. ಮೆಟ್ರೋ ನಿಲ್ದಾಣಗಳಲ್ಲಿ ಬಹುಮಹಡಿ ಪಾರ್ಕಿಂಗ್ ಸ್ಲಾಟ್ಗಳ ನಿರ್ಮಾಣಕ್ಕೆ ನಿರ್ಧಾರ ಮಾಡಿದ್ದಾರೆ. ಇದಕ್ಕಾಗಿ ಮೆಟ್ರೋ ಸ್ಟೇಷನ್ಗಳ ಬಳಿ ಹೆಚ್ಚಿನ ಭೂಮಿ ಸ್ವಾಧೀನ ಮಾಡಿಕೊಳ್ಳಲು ಬಿಎಂಆರ್ಸಿಎಲ್ ಅಧಿಕಾರಿಗಳು ಮುಂದಾಗಿದ್ದಾರೆ.
ಇದನ್ನೂ ಓದಿ: ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಗುಡ್ನ್ಯೂಸ್: ಇನ್ಮುಂದೆ ರೈಲಿಗೆ ಹೆಚ್ಚು ಹೊತ್ತು ಕಾಯಬೇಕಿಲ್ಲ
ಒಟ್ಟಿನಲ್ಲಿ, ಮೆಟ್ರೋ ಪ್ರಯಾಣಿಕರ ಹಲವು ವರ್ಷಗಳ ಸಮಸ್ಯೆಗೆ ಬ್ರೇಕ್ ಹಾಕಲು ಡಿಸಿಎಂ ಸೂಚನೆ ನೀಡಿದ್ದಾರೆ. ಇದನ್ನು ಬಿಎಂಆರ್ಸಿಎಲ್ ಅಧಿಕಾರಿಗಳು ಎಷ್ಟರಮಟ್ಟಿಗೆ ಪಾಲಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಪುರುಷರು ಮನೆಯಲ್ಲಿ ಕಸ ಗುಡಿಸುವುದರ ಹಿಂದಿನ ಆಧ್ಯಾತ್ಮಿಕ ಮಹತ್ವದ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಗುರೂಜಿಯವರು ಹೇಳುವಂತೆ, ಸಾಮಾನ್ಯವಾಗಿ ಗೃಹಿಣಿಯನ್ನು ಮನೆಯ ಮಹಾಲಕ್ಷ್ಮಿ ಎಂದು ಪರಿಗಣಿಸಲಾಗುತ್ತದೆ. ಸಮಾಜದಲ್ಲಿ ಒಂದು ಕುಟುಂಬಕ್ಕೆ ಗಂಡು ಮತ್ತು ಹೆಣ್ಣು ಇಬ್ಬರೂ ಸಮಾನವಾಗಿ ಮುಖ್ಯರು, ಹೇಗೆ ಸೂರ್ಯ-ಚಂದ್ರರು ಅಥವಾ ಎರಡು ಕಣ್ಣುಗಳು ಮುಖ್ಯವೋ ಹಾಗೆಯೇ. ಒಬ್ಬರು ಸಂಪಾದನೆಯ ಜವಾಬ್ದಾರಿ ಹೊತ್ತರೆ, ಮತ್ತೊಬ್ಬರು ಮನೆಯ ನಿರ್ವಹಣೆಯ ಜವಾಬ್ದಾರಿ ಹೊತ್ತಿರುತ್ತಾರೆ. ಆದರೆ, ಮನೆಯ ಸ್ವಚ್ಛತೆ ಕೇವಲ ಹೆಣ್ಣು ಮಕ್ಕಳ ಕರ್ತವ್ಯ ಎಂದು ಭಾವಿಸುವುದು ಸರಿಯಲ್ಲ. ಮನೆಯನ್ನು ಸ್ವಚ್ಛವಾಗಿಡುವುದು ಪುರುಷರ ಜವಾಬ್ದಾರಿಯ ಭಾಗವೂ ಹೌದು.
ಮನೆಯಲ್ಲಿ ಪುರುಷರು ಕಸ ಗುಡಿಸುವುದರಿಂದ ಶುಭ ಫಲಗಳು ಉಂಟಾಗುತ್ತವೆಯೇ ಎಂಬ ಪ್ರಶ್ನೆಗೆ ಶಾಸ್ತ್ರಗಳು ಸಕಾರಾತ್ಮಕ ಉತ್ತರ ನೀಡುತ್ತವೆ. ಪುರುಷರು ಬೆಳಗಿನ ಜಾವದಲ್ಲಿ ಅಥವಾ ಸೂರ್ಯೋದಯದ ಸಮಯದಲ್ಲಿ ಮನೆಯ ಒಳಗಾಗಲಿ ಅಥವಾ ಹೊರಗಾಗಲಿ ಕಸ ಗುಡಿಸುವುದರಿಂದ ಅಪಾರ ಶುಭ ಫಲಗಳು ದೊರೆಯುತ್ತವೆ. ಮನೆಯ ಮುಖ್ಯಸ್ಥರು ಅಥವಾ ಪುರುಷರು ಸ್ವತಃ ಮನೆಯನ್ನು ಸ್ವಚ್ಛಗೊಳಿಸುವುದರಿಂದ ಬಡತನ ಬರುವುದಿಲ್ಲ ಎಂದು ನಂಬಲಾಗಿದೆ.
ಇದರ ಜೊತೆಗೆ, ಪುರುಷರು ಮನೆಯಲ್ಲಿ ಕಸ ಗುಡಿಸುವಾಗ, ಕುಟುಂಬದ ಇತರ ಸದಸ್ಯರಾದ ಪತ್ನಿ, ಮಕ್ಕಳು ಮತ್ತು ತಾಯಿಯೊಂದಿಗೆ ಉತ್ತಮ ಬಾಂಧವ್ಯ ಬೆಳೆಯುತ್ತದೆ. ವಿಶೇಷವಾಗಿ ಪತ್ನಿಗೆ ತನ್ನ ಪತಿಯ ಬಗ್ಗೆ ಪ್ರೀತಿ ಮತ್ತು ಮಮತೆ ಹೆಚ್ಚುತ್ತದೆ. ಜ್ಯೋತಿಷ್ಯದ ಪ್ರಕಾರ, ಈ ಕಾರ್ಯವು ಕುಟುಂಬಕ್ಕೆ ಬಹಳಷ್ಟು ಶ್ರೇಯಸ್ಸನ್ನು ತರುತ್ತದೆ. ಬಡತನ ನಿವಾರಣೆಯಾಗಿ ಸಂಪತ್ತು ವೃದ್ಧಿಯಾಗುತ್ತದೆ. ಮನೆಯಲ್ಲಿ ಶಾಂತಿ ಬೆಳೆದು, ಕೋಪ ಮತ್ತು ಮನಸ್ತಾಪಗಳು ಕಡಿಮೆಯಾಗುತ್ತವೆ. ಮಹಾಲಕ್ಷ್ಮಿಯ ಕೃಪೆ ಸದಾ ಮನೆಗೆ ಇರುತ್ತದೆ.
ಇದನ್ನೂ ಓದಿ: ಮನಿ ಪ್ಲಾಂಟ್‌ನ ಬುಡದಲ್ಲಿ ಒಂದು ನಾಣ್ಯ ಹೂತಿಡಿ; ಪ್ರಯೋಜನ ಸಾಕಷ್ಟಿವೆ
ಒಬ್ಬ ಪುರುಷನು ಮನೆಯನ್ನು ನಿರ್ಲಕ್ಷಿಸಿ, ಎಲ್ಲಿ ಬೇಕೆಂದರಲ್ಲಿ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, ಸ್ವಚ್ಛತೆ ಕಾಪಾಡದಿದ್ದರೆ, ಆ ಮನೆಗೆ ದಾರಿದ್ರ್ಯ ದೇವತೆ ಆವರಿಸುತ್ತದೆ ಎಂದು ನಂಬಲಾಗಿದೆ. ಹಿಂದೂ ಸನಾತನ ಸಂಸ್ಕೃತಿಯಲ್ಲಿ ಹೇಳಿರುವ ಕೆಲವು ವಿಧಿವಿಧಾನಗಳನ್ನು ಪಾಲಿಸುವುದರಿಂದ ಬಹಳಷ್ಟು ಶುಭ ಫಲಗಳು ದೊರೆಯುತ್ತವೆ. ಮನೆಯ ಸ್ವಚ್ಛತೆಯನ್ನು ಕಾಪಾಡುವುದರಲ್ಲಿ ಪುರುಷರ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ. ಈ ಕಾರ್ಯದಿಂದ ಕರ್ಮಗಳು ಸಹ ಕಡಿಮೆಯಾಗುತ್ತವೆ. ಪ್ರತಿದಿನ ಸಾಧ್ಯವಾಗದಿದ್ದರೂ, ಕನಿಷ್ಠ ವಾರಕ್ಕೊಮ್ಮೆಯಾದರೂ ಪುರುಷರು ಮನೆಯಲ್ಲಿ ಕಸ ಗುಡಿಸುವುದು ಆ ಮನೆಗೆ ಅದೃಷ್ಟವನ್ನು ತರುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
‘45’ ಸಿನಿಮಾದಲ್ಲಿ ಶಿವರಾಜ್ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟಿಸಿದ್ದಾರೆ.‘ಮಾರ್ಕ್’ ಸಿನಿಮಾದಲ್ಲಿ ಸುದೀಪ್ ಅಭಿನಯಿಸಿದ್ದಾರೆ. ಈ ಎರಡೂ ಚಿತ್ರಗಳು ಇಂದು ರಿಲೀಸ್ ಆಗಿದೆ. ಈ ಸಿನಿಮಾದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾದ ಬಗ್ಗೆ ಫ್ಯಾನ್ಸ್ ವಿಮರ್ಶೆ ಏನು? ಸಿನಿಮಾ ನೋಡಿದವರು ಯಾವ ರೀತಿ ಪ್ರತಿಕ್ರಿಯಿಸುತ್ತಿದ್ದಾರೆ ಎಂಬುದರ ಬಗ್ಗೆ ಇಲ್ಲಿದೆ ವಿವರ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಬೆಂಗಳೂರು, ಡಿ.25: ಇಂದು ಬೆಂಗಳೂರು (Bengaluru winter weather) ಸೇರಿದಂತೆ ರಾಜ್ಯದ ಹಲವು ಭಾಗದಲ್ಲಿ ಚಳಿಯ ವಾತಾವರಣ ಇದೆ. ಬೆಂಗಳೂರು ನಗರದಲ್ಲಿ ಆಹ್ಲಾದಕರ ಚಳಿ ಇರಲಿದೆ. ಬೆಳಿಗ್ಗಿನ ಹೊತ್ತು ತಂಪಾಗಿದ್ದು, ತಾಪಮಾನ ಸುಮಾರು 17°C (63°F) ಇರಲಿದೆ. ಮುಂದಿನ 7 ದಿನಗಳಲ್ಲಿ ಮಂಜು ಬೀಳಲಿದೆ. ರಾತ್ರಿಯಲ್ಲಿ ಗರಿಷ್ಠ ತಾಪಮಾನವು ಸುಮಾರು 26°C (79°F) ತಲುಪುವ ನಿರೀಕ್ಷೆಯಿದೆ , ಕನಿಷ್ಠ ತಾಪಮಾನವು ಸುಮಾರು 15°C (59°F) ಇರುತ್ತದೆ. ಡಿಸೆಂಬರ್ ತಿಂಗಳ ಸರಾಸರಿ ತಾಪಮಾನದ ವ್ಯಾಪ್ತಿಯು 16°C ನಿಂದ 28°C (60°F ನಿಂದ 82°F) ವರೆಗೆ ಇರುತ್ತದೆ. ಪ್ರಸ್ತುತ ತಾಪಮಾನವು ಈ ವ್ಯಾಪ್ತಿಯಲ್ಲಿಯೇ ಇರಲಿದೆ. ದಿನವು ಬಹುತೇಕ ಮೋಡ ಕವಿದ ವಾತಾವರಣದಿಂದ ಕೂಡಿರುತ್ತದೆ, ಮಳೆಯಾಗುವ ಸಾಧ್ಯತೆ ಕಡಿಮೆ ಇರುತ್ತದೆ, ಇದರಿಂದಾಗಿ ಹಗಲಿನಲ್ಲಿ ಸಾಕಷ್ಟು ಬಿಸಿಲು ಇರುತ್ತದೆ.
ಉತ್ತರ, ಮಧ್ಯ, ದಕ್ಷಿಣ ಒಳನಾಡು ಹಾಗೂ ಬೆಂಗಳೂರಿನಲ್ಲಿ ದಟ್ಟ ಮಂಜು ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕರಾವಳಿ ಭಾಗದಲ್ಲಿ ಇಂದು ಮತ್ತು ನಾಳೆ ಮೋಡ ಕವಿದ ವಾತಾವರಣ ಇರಲಿದೆ. ಆದರೆ ಮಳೆಯಾಗುವ ಸಾಧ್ಯತೆ ಕಡಿಮೆ ಇದೆ. ಇನ್ನು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಶೀತಗಾಳಿ ಇರಲಿದೆ ಎಂದು ಹೇಳಲಾಗಿದೆ. ಬೀದರ್, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ಚಳಿ ಅಧಿಕವಾಗಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿ: ಅಧಿಕ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರಲು ನಿಂಬೆ ನೀರು ಕುಡಿಯುವುದು ಒಳ್ಳೆಯದೇ… ಇಲ್ಲಿದೆ ತಜ್ಞರ ಅಭಿಪ್ರಾಯ
ಬೆಳಗಾವಿ, ಬಾಗಲಕೋಟೆ, ಬಳ್ಳಾರಿ, ವಿಜಯನಗರ, ಯಾದಗಿರಿ, ರಾಯಚೂರು, ಗದಗ, ಧಾರವಾಡ, ಹಾವೇರಿ ಮತ್ತು ಕೊಪ್ಪಳದಲ್ಲಿ ಒಣ ಹವೆ ಇರಲಿದೆ. ಚಿಕ್ಕಮಗಳೂರು, ಹಾಸನ ಜಿಲ್ಲೆಯಲ್ಲಿ ತಂಪಾದ ವಾತಾವರಣ ಇರಲಿ. ಹಾಗಾಗಿ ಮುಂಜಾನೆ ಹೊತ್ತು ವಾಹನ ಸವಾರರು ಸ್ವಲ್ಪ ಎಚ್ಚರದಿಂದ ಇರುವಂತೆ ಹೇಳಿದ್ದಾರೆ. ಹಾಗೂ ಇಂದು ರೈಲ್ವೆ, ವಿಮಾನ ಹಾರಾಟಕ್ಕೂ ಅಡಚಣೆಯಾಗುವ ಸಾಧ್ಯತೆ ಇದೆ. ಮುಂದಿನ 7 ದಿನಗಳ ಕಾಲ ಕರ್ನಾಟಕದಲ್ಲಿ ಒಣಹವೆ ಮುಂದುವರೆಯಲಿದೆ. ಜತೆಗೆ ಚಳಿಯೂ ತೀವ್ರಗೊಳಲಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಏಕದಿನ ಪಂದ್ಯದಲ್ಲಿ 400 ಕ್ಕಿಂತಲೂ ಅಧಿಕ ರನ್ಗಳನ್ನು ಚೇಸ್ ಮಾಡಿ ಗೆದ್ದಿರುವುದು ಕೇವಲ 2 ತಂಡಗಳು ಮಾತ್ರ. ಈ ಸಾಧನೆ ಮಾಡಿದ ಮೊದಲ ತಂಡ ಸೌತ್ ಆಫ್ರಿಕಾ. ಇನ್ನು ಎರಡನೇ ತಂಡ ಕರ್ನಾಟಕ. ಪ್ರಸ್ತುತ ನಡೆಯುತ್ತಿರುವ ವಿಜಯ ಹಝಾರೆ ಟೂರ್ನಿಯ ಮೊದಲ ಪಂದ್ಯದಲ್ಲೇ ಬೃಹತ್ ಮೊತ್ತ ಬೆನ್ನತ್ತಿ ಕರ್ನಾಟಕ ತಂಡ ಹೊಸ ಇತಿಹಾಸ ನಿರ್ಮಿಸಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಜಾರ್ಖಂಡ್ ಶಿಖರ್ ಮೋಹನ್ 44 ರನ್ ಬಾರಿಸಿದರೆ, ವಿರಾಟ್ ಸಿಂಗ್ 88 ರನ್ ಕಲೆಹಾಕಿದ್ದರು.
ಇನ್ನು ಐದನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ನಾಯಕ ಇಶಾನ್ ಕಿಶನ್ ಕರ್ನಾಟಕ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ ಕೇವಲ 33 ಎಸೆತಗಳಲ್ಲಿ ಶತಕ ಮೂಡಿಬಂತು. ಅಷ್ಟೇ ಅಲ್ಲದೆ 39 ಎಸೆತಗಳನ್ನು ಎದುರಿಸಿದ ಇಶಾನ್ 14 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 125 ರನ್ ಬಾರಿಸಿದರು.
ಇಶಾನ್ ಕಿಶನ್ ಅವರ ಈ ಸ್ಫೋಟಕ ಸೆಂಚುರಿ ನೆರವಿನೊಂದಿಗೆ ಜಾರ್ಖಂಡ್ ತಂಡವು 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 412 ರನ್ ಕಲೆಹಾಕಿತು.
413 ರನ್ಗಳ ಕಠಿಣ ಗುರಿ ಪಡೆದ ಕರ್ನಾಟಕ ತಂಡಕ್ಕೆ ಆರಂಭಿಕರಾದ ಮಯಾಂಕ್ ಅಗರ್ವಾಲ್ ಹಾಗೂ ದೇವದತ್ ಪಡಿಕ್ಕಲ್ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 114 ರನ್ ಪೇರಿಸಿ ಮಯಾಂಕ್ ಅಗರ್ವಾಲ್ (54) ವಿಕೆಟ್ ಒಪ್ಪಿಸಿದರು.
ಆ ಬಳಿಕ ಬಂದ ಕರುಣ್ ನಾಯರ್ 29 ರನ್ಗಳ ಕೊಡುಗೆ ನೀಡಿದರು. ಇನ್ನು ಸ್ಮರಣ್ ರವಿಚಂದ್ರನ್ 27 ರನ್ಗಳಿಸಿದರು. ಇದಾಗ್ಯೂ ಮತ್ತೊಂದೆಡೆ ದೇವದತ್ ಪಡಿಕ್ಕಲ್ ಜವಾಬ್ದಾರಿಯುತ ಬ್ಯಾಟಿಂಗ್ ಮುಂದುವರೆಸಿದ್ದರು.
ಇನ್ನು ಕೃಷ್ಣನ್ ಶ್ರೀಜಿತ್ (38) ಜೊತೆಗೂಡಿ ಪಡಿಕ್ಕಲ್ ತಂಡದ ಮೊತ್ತವನ್ನು 250 ರನ್ಗಳ ಗಡಿದಾಟಿದರು. ಇದರ ಬೆನ್ನಲ್ಲೇ ದೇವದತ್ ಪಡಿಕ್ಕಲ್ ತಮ್ಮ ಭರ್ಜರಿ ಶತಕವನ್ನೂ ಸಹ ಪೂರೈಸಿದರು.
ಶ್ರೀಜಿತ್ ಔಟಾದ ಬೆನ್ನಲ್ಲೇ ಆಗಮಿಸಿದ ಅಭಿನವ್ ಮನೋಹರ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ 40 ಓವರ್ ಆಗುವಷ್ಟರಲ್ಲಿ ಕರ್ನಾಟಕ ತಂಡದ ಸ್ಕೋರ್ 300 ರ ಗಡಿದಾಟಿತು.
ಆದರೆ ಕರ್ನಾಟಕ ತಂಡವು 325 ರನ್ಗಳಿದ್ದ ವೇಳೆ ಭರ್ಜರಿ ಹೊಡೆತಕ್ಕೆ ಮುಂದಾಗಿ ದೇವದತ್ ಪಡಿಕ್ಕಲ್ ವಿಕೆಟ್ ಒಪ್ಪಿಸಿದರು. ಇದರೊಂದಿಗೆ 118 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 10 ಫೋರ್ಗಳೊಂದಿಗೆ 147 ರನ್ ಬಾರಿಸಿದ್ದ ಪಡಿಕ್ಕಲ್ ಇನಿಂಗ್ಸ್ ಅಂತ್ಯವಾಯಿತು.
ಈ ಹಂತದಲ್ಲಿ ಜೊತೆಗೂಡಿದ ಅಭಿನವ್ ಮನೋಹರ್ (56) ಹಾಗೂ ಧ್ರುವ್ ಪ್ರಭಾಕರ್ (40) ಬಿರುಸಿನ ಬ್ಯಾಟಿಂಗ್ನೊಂದಿಗೆ 47.3 ಓವರ್ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು. ಈ ಮೂಲಕ ಕರ್ನಾಟಕ ತಂಡವು 15 ಎಸೆತಗಳು ಬಾಕಿಯಿರುವಂತೆ 413 ರನ್ಗಳಿಸಿ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಇದರೊಂದಿಗೆ ಲಿಸ್ಟ್ ಎ (ಏಕದಿನ ಕ್ರಿಕೆಟ್) ಪಂದ್ಯದಲ್ಲಿ 400+ ರನ್ ಚೇಸ್ ಮಾಡಿದ ವಿಶ್ವದ ಎರಡನೇ ತಂಡವೆಂಬ ವಿಶ್ವ ದಾಖಲೆಯನ್ನು ಕರ್ನಾಟಕ ತಂಡ ತನ್ನದಾಗಿಸಿಕೊಂಡಿತು. ಅಷ್ಟೇ ಅಲ್ಲದೆ ವಿಜಯ ಹಝಾರೆ ಟೂರ್ನಿಯಲ್ಲಿ ಅತ್ಯಧಿಕ ರನ್ ಚೇಸ್ ಮಾಡಿ ಗೆದ್ದ ಹೆಗ್ಗಳಿಕೆಗೂ ಪಾತ್ರವಾಯಿತು.
ಇದಕ್ಕೂ ಮುನ್ನ ವಿಜಯ ಹಝಾರೆ ಟೂರ್ನಿಯಲ್ಲಿ 384 ರನ್ಗಳನ್ನು ಬೆನ್ನತ್ತಿರುವುದು ಸರ್ವಶ್ರೇಷ್ಠ ದಾಖಲೆಯಾಗಿತ್ತು. 2011 ರಲ್ಲಿ ಗೋವಾ ನೀಡಿದ 384 ರನ್ಗಳನ್ನು ಗುರಿಯನ್ನು ಆಂಧ್ರ ಪ್ರದೇಶ್ ತಂಡ ಚೇಸ್ ಮಾಡುವ ಮೂಲಕ ಈ ಸಾಧನೆ ಮಾಡಿದ್ದರು. ಇದೀಗ 413 ರನ್ಗಳ ಚೇಸಿಂಗ್ನೊಂದಿಗೆ ಕರ್ನಾಟಕ ತಂಡ ಹೊಸ ದಾಖಲೆ ನಿರ್ಮಿಸಿದೆ.
ಕರ್ನಾಟಕ (ಪ್ಲೇಯಿಂಗ್ XI): ಮಯಾಂಕ್ ಅಗರ್ವಾಲ್ (ನಾಯಕ), ದೇವದತ್ ಪಡಿಕ್ಕಲ್, ಕರುಣ್ ನಾಯರ್, ಸ್ಮರಣ್ ರವಿಚಂದ್ರನ್, ಕೃಷ್ಣನ್ ಶ್ರೀಜಿತ್ (ವಿಕೆಟ್ ಕೀಪರ್), ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ಧ್ರುವ್ ಪ್ರಭಾಕರ್, ವಿದ್ಯಾಧರ್ ಪಾಟೀಲ್, ವಿಜಯ್ ಕುಮಾರ್ ವೈಶಾಕ್, ಅಭಿಲಾಷ್ ಶೆಟ್ಟಿ.
ಇದನ್ನೂ ಓದಿ: ವೈಭವ್ ಆರ್ಭಟಕ್ಕೆ ದಾಖಲೆಗಳೇ ಧೂಳೀಪಟ..!
ಜಾರ್ಖಂಡ್ (ಪ್ಲೇಯಿಂಗ್ XI): ಇಶಾನ್ ಕಿಶನ್ (ನಾಯಕ), ಕುಮಾರ್ ಕುಶಾಗ್ರಾ, ಶಿಖರ್ ಮೋಹನ್, ಉತ್ಕರ್ಷ್ ಸಿಂಗ್, ವಿರಾಟ್ ಸಿಂಗ್, ರಾಬಿನ್ ಮಿಂಝ್, ಅನುಕುಲ್ ರಾಯ್, ಶುಭ್ ಶರ್ಮಾ, ಸೌರಭ್ ಶೇಖರ್, ಸುಶಾಂತ್ ಮಿಶ್ರಾ, ವಿಕಾಶ್ ಸಿಂಗ್.
ನಟ ಹೃತಿಕ್ ರೋಷನ್ ಮನೆಯಲ್ಲಿ ಈಗ ಹಬ್ಬದ ವಾತಾವರಣವಿದೆ. ಏಕೆಂದರೆ ಅವರ ಸೋದರಸಂಬಂಧಿ ಇಶಾನ್ ರೋಷನ್ ಇತ್ತೀಚೆಗೆ ವಿವಾಹವಾದರು. ಈ ವಿವಾಹದ ವಿವಿಧ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ ವೀಡಿಯೊಗಳಲ್ಲಿ ಒಂದರಲ್ಲಿ, ಹೃತಿಕ್ ಮತ್ತು ಅವರ ತಂದೆ ರಾಕೇಶ್ ರೋಷನ್ ಮೆರವಣಿಗೆಯಲ್ಲಿ ನೃತ್ಯ ಮಾಡುತ್ತಿರುವುದು ಕಂಡು ಬಂದಿದೆ. ಅಭಿಮಾನಿಗಳು ಹೃತಿಕ್ ಡ್ಯಾನ್ಸ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
ಹೃತಿಕ್ ವೇದಿಕೆ ಮೇಲೆ ಅನೇಕ ಬಾರಿ ಡ್ಯಾನ್ಸ್ ಮಾಡಿದ್ದಾರೆ. ಆದರೆ, ಮಕ್ಕಳೊಂದಿಗೆ ನೃತ್ಯ ಮಾಡುತ್ತಿರುವುದು ಇದೇ ಮೊದಲು. ಮದುವೆ ಸಮಾರಂಭದಲ್ಲಿ, ಹೃತಿಕ್ ತಮ್ಮ ಇಬ್ಬರು ಮಕ್ಕಳಾದ ರೆಹಾನ್ ಮತ್ತು ಹೃದಾನ್ ಅವರೊಂದಿಗೆ ನೃತ್ಯ ಮಾಡುತ್ತಿರುವುದು ಕಂಡುಬರುತ್ತದೆ. ಈ ವೀಡಿಯೊ ಪ್ರೇಕ್ಷಕರ ವಿಶೇಷ ಗಮನ ಸೆಳೆದಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೊದಲ್ಲಿ, ಹೃತಿಕ್ ರೆಹಾನ್ ಮತ್ತು ಹೃದಾನ್ ಜೊತೆ ನೃತ್ಯ ಮಾಡುತ್ತಿರುವುದನ್ನು ನೋಡಬಹುದು. ಅವರ ಸೋದರ ಸೊಸೆ ಸುರಾನಿಕಾ ಸೋನಿ ಮತ್ತು ಸೋದರಸಂಬಂಧಿ ಪಶ್ಮಿನಾ ರೋಷನ್ ಕೂಡ ನೃತ್ಯದಲ್ಲಿ ಭಾಗವಹಿಸಿದ್ದಾರೆ. ಈ ವೀಡಿಯೊದಲ್ಲಿ, ಹೃತಿಕ್ ‘ಇಷ್ಕ್ ತೇರಾ ತಡ್ಪಾವೆ’ ಹಾಡಿಗೆ ನೃತ್ಯ ಮಾಡಡಿದ್ದಾರೆ.
ಹೃತಿಕ್ ಮಕ್ಕಳೊಂದಿಗೆ ನೃತ್ಯ ಮಾಡುವುದನ್ನು ನೋಡಿ ಅಭಿಮಾನಿಗಳು ತುಂಬಾ ಸಂತೋಷಪಟ್ಟಿದ್ದಾರೆ. ‘ಹೃತಿಕ್ ಅವರ ಮಕ್ಕಳು ಎಲ್ಲಾ ಒಳ್ಳೆಯ ವಿಷಯಗಳನ್ನು ಆನುವಂಶಿಕವಾಗಿ ಪಡೆದಿದ್ದಾರೆ’ ಎಂದು ಒಬ್ಬರು ಬರೆದಿದ್ದಾರೆ.
The Roshan boys rock the dance floor at Eshaan’s wedding. #HrithikRoshan #HrehaanRoshan #HridaanRoshan pic.twitter.com/xMwcG8c2jD
— HrithikRules.com (@HrithikRules) December 23, 2025
ಮತ್ತೊಂದೆಡೆ, ಈ ವಿವಾಹದ ಗೊಂದಲದ ನಡುವೆ, ಹೃತಿಕ್ ರೋಷನ್ ಅವರ ಗೆಳತಿ ಮತ್ತು ನಟಿ ಸಬಾ ಆಜಾದ್ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಅವರು ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಆಸ್ಪತ್ರೆಯ ಹಾಸಿಗೆಯ ಮೇಲೆ ತಮ್ಮ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಫೋಟೋದಲ್ಲಿ, ಅವರು ತಮ್ಮ ಕೈಗೆ ಸಲೈನ್ ಹಚ್ಚಿಕೊಂಡಿರುವುದು ಕಂಡುಬರುತ್ತದೆ. ‘ಹೊರಗಿನಿಂದ ಏನನ್ನೂ ತಿನ್ನಬೇಡಿ. ನಾನು ನನ್ನ ಸಹೋದರನ ಮದುವೆಯನ್ನು ತಪ್ಪಿಸಿಕೊಳ್ಳುತ್ತಿದ್ದೆ’ ಎಂದು ಅವರು ಫೋಟೋದಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಹೃತಿಕ್ ಆಯ್ತು ಈಗ ಶಾರುಖ್ ಖಾನ್ ಜೊತೆ ನಟಿಸಲಿದ್ದಾರಾ ಜೂ ಎನ್ಟಿಆರ್?
ಇಶಾನ್ ರೋಷನ್ ಕುಟುಂಬದ ಮದುವೆಯಲ್ಲಿ ಹೃತಿಕ್ ಅವರ ಮಾಜಿ ಪತ್ನಿ ಸುಸೇನ್ ಖಾನ್ ಕೂಡ ಹಾಜರಿದ್ದರು. ಸುಸಾನೆ ಖಾನ್ ತನ್ನ ಗೆಳೆಯ ಅಲಿ ಗೋನಿ ಜೊತೆ ಮದುವೆಗೆ ಆಗಮಿಸಿದ್ದರು. ವಿಚ್ಛೇದನದ ನಂತರವೂ ಹೃತಿಕ್ ಮತ್ತು ಸುಸಾನೆ ಖಾನ್ ಸ್ನೇಹ ಸಂಬಂಧವನ್ನು ಉಳಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ, ಸಬಾ ಮತ್ತು ಸುಸಾನೆ ಕೂಡ ಒಳ್ಳೆಯ ಸ್ನೇಹಿತರು ಎಂದು ಕಂಡುಬರುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On – 7:47 am, Thu, 25 December 25
ಚಿತ್ರದುರ್ಗ, ಡಿಸೆಂಬರ್ 25: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕನಿಷ್ಠ 17 ಮಂದಿ ಸಜೀವ ದಹನವಾಗಿದ್ದಾರೆ. ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಸೀಬರ್ಡ್ ಸ್ಲೀಪರ್ ಕೋಚ್ ಬಸ್‌ಗೆ ಎದುರಿನಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬಸ್ ಸಂಪೂರ್ಣವಾಗಿ ಬೆಂಕಿ ಹೊತ್ತಿಕೊಂಡು ಭಸ್ಮವಾಗಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಬಸ್‌ನ ಚಾಲಕ ಮತ್ತು ನಿರ್ವಾಹಕ ತಕ್ಷಣವೇ ಹೊರಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾರಿ ಚಾಲಕ ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಸ್‌ನಲ್ಲಿ 14 ಮಹಿಳೆಯರು ಹಾಗೂ 15 ಪುರುಷರು ಇದ್ದರು. ಗಾಯಗೊಂಡ 21 ಮಂದಿಯನ್ನು ಹಿರಿಯೂರು ಮತ್ತು ತುಮಕೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಘಟನೆ ಕುರಿತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಅಪಘಾತದ ಕುರಿತು ಹೆಚ್ಚಿನ ಮಾಹಿತಿಗೆ: ಮತ್ತೊಂದು ಘನಘೋರ ದುರಂತ: ಚಿತ್ರದುರ್ಗ ಹೆದ್ದಾರಿಯಲ್ಲಿ ಹೊತ್ತಿ ಉರಿದ ಖಾಸಗಿ ಬಸ್, 17ಕ್ಕೂ ಹೆಚ್ಚು ಜನ ಸಜೀವ ದಹನ
ಚಿತ್ರದುರ್ಗ ಭೀಕರ ಬಸ್ ಅಪಘಾತ: ಮೃತಪಟ್ಟ ಪ್ರಯಾಣಿಕರಲ್ಲಿ ಗೋಕರ್ಣದವರೇ ಹೆಚ್ಚು
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬಿಗ್ ಬಾಸ್ ಮನೆಯಲ್ಲಿ ಈ ವಾರ ಫ್ಯಾಮಿಲಿ ವೀಕ್ ನಡೆಯುತ್ತಿದೆ. ವಿವಿಧ ಸ್ಪರ್ಧಿಗಳ ಕುಟುಂಬದವರು ದೊಡ್ಮನೆಗೆ ಆಗಮಿಸಿ ಸ್ಪರ್ಧಿಗಳಿಗೆ ಹುರುಪು ತುಂಬುತ್ತಾ ಇದ್ದಾರೆ. ಈಗ ಧನುಷ್ಗೆ ತಾಯಿಯಿಂದಲೇ ಮುಖಭಂಗ ಆಗಿದೆ. ಗಿಲ್ಲಿ ಕಾಮಿಡಿ ವಿಷಯದಲ್ಲಿ ಯಾವಾಗಲೂ ಧನುಷ್ ತಕರಾರರು ತೆಗೆಯುತ್ತಲೇ ಇದ್ದರು. ಗಿಲ್ಲಿಯನ್ನು ನಾಮಿನೇಟ್ ಮಾಡಲು ಧನುಷ್ ಕೊಡುತ್ತಿದ್ದ ಕಾರಣಗಳೇ ಇದಾಗಿತ್ತು. ಆದರೆ, ಗಿಲ್ಲಿಗೆ ಧನುಷ್ ತಾಯಿ ಮೆಚ್ಚುಗೆ ಸೂಚಿಸಿದರು.
ಧನುಷ್ ಅವರು ಯಾವಾಗಲೂ ಗಿಲ್ಲಿ ಬಗ್ಗೆ ಕಂಪ್ಲೇಂಟ್ ಮಾಡುತ್ತಲೇ ಬರುತ್ತಿದ್ದಾರೆ. ಗಿಲ್ಲಿ ಉತ್ತಮವಾಗಿ ಆಡೋದಿಲ್ಲ, ಹಾಸ್ಯದ ಮೂಲಕ ಎಲ್ಲರಿಗೂ ನೋವುಂಟು ಮಾಡುತ್ತಾನೆ ಎಂದೆಲ್ಲ ಹೇಳುತ್ತಿದ್ದರು. ಆದರೆ, ಹೊರಗಿನ ಪ್ರಪಂಚ ಗಿಲ್ಲಿಯನ್ನು ನೋಡುತ್ತಿರುವ ರೀತಿಯೇ ಬೇರೆ ಎನ್ನೋದು ಧನುಷ್ಗೆ ಈಗ ಅರ್ಥವಾದಂತೆ ಇದೆ. ಅದು ಕೂಡ ಧನುಷ್ ತಾಯಿ ಕಡೆಯಿಂದಲೇ ಎಂಬುದು ವಿಶೇಷ.
ಧನುಷ್ ತಾಯಿ ಗಿಲ್ಲಿಯನ್ನು ಹಾಡಿ ಹೊಗಳಿದ್ದಾರೆ. ‘ಗಿಲ್ಲಿ ಕಾಮಿಡಿ ನಂಗೆ ತುಂಬಾನೇ ಇಷ್ಟ ಆಗುತ್ತದೆ’ ಎಂದು ಮನಸಾರೆ ಹೇಳಿದ್ದಾರೆ. ಆಗ ಧನುಷ್ಗೆ ಏನು ಹೇಳಬೇಕು ಎನ್ನುವುದು ಗೊತ್ತಾಗಿಲ್ಲ. ‘ಗಿಲ್ಲಿ ಇಲ್ಲದಿದ್ದರೆ ನಿಮಗೆಲ್ಲ ಬೇಸರ ಆಗುತ್ತಿತ್ತು. ಧನುಷ್ ಈ ಮನೆಯಲ್ಲಿ ಇಲ್ಲದೆ ಇದ್ದಿದ್ದರೆ ನನ್ನೆಲ್ಲ ವೋಟ್ನ ಗಿಲ್ಲಿಗೆ ಹಾಕುತ್ತಿದ್ದೆ’ ಎಂಬುದನ್ನು ಕೂಡ ಉಲ್ಲೇಖ ಮಾಡಿದ್ದಾರೆ ಧನುಷ್ ತಾಯಿ. ಈ ಹೊಗಳಿಕೆಯಿಂದ ಗಿಲ್ಲಿ ಖುಷಿಯಾದರು. ಧನುಷ್ ತಾಯಿ ಮಾತು ಇಡೀ ಮನೆಯವರಿಗೆ ಇದು ಅಚ್ಚರಿ ಎನಿಸಿದೆ.
ಇದನ್ನೂ ಓದಿ: ಕಾವ್ಯ ಎದುರಲ್ಲೇ ಗಿಲ್ಲಿ ಹಣೆಬರಹ ತೆರೆದಿಟ್ಟ ಧನುಷ್: ಅಶ್ವಿನಿ ಸೈಲೆಂಟ್ ಆಗಿದ್ದೇಕೆ?
ಸಾಮಾನ್ಯವಾಗಿ ಯಾವುದೇ ಸ್ಪರ್ಧಿಗಳ ಕುಟುಂಬದವರು ಬಂದವರು ತಮ್ಮ ಮಕ್ಕಳನ್ನು ಹೊಗಳುವ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಮಕ್ಕಳ ಬಗ್ಗೆ ಮೆಚ್ಚುಗೆ ಸೂಚಿಸುತ್ತಾರೆ. ಈ ಸಂದರ್ಭದಲ್ಲಿ ಬೇರೆಯವರನ್ನು ಹೊಗಳಿದರೆ ಅವರ ಆಟಕ್ಕೆ ಮೈಲೇಜ್ ಸಿಗುತ್ತದೆ ಎಂಬುದು ಗೊತ್ತಿದೆ. ಆದಾಗ್ಯೂ ಈ ಕೆಲಸವನ್ನು ಧನುಷ್ ತಾಯಿ ಮಾಡಿರುವುದು ಅನೇಕರ ಮೆಚ್ಚುಗೆಗೆ ಕಾರಣ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ದೇವರ ಟ್ಯಾಟೂಗಳ ಮಹತ್ವ ಮತ್ತು ಅವುಗಳನ್ನು ಹಾಕಿಸಿಕೊಳ್ಳುವಾಗ ಅನುಸರಿಸಬೇಕಾದ ಸೂಕ್ಷ್ಮ ವಿಧಾನಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ದೇಹದ ಮೇಲೆ ದೇವರ ವಿಗ್ರಹಗಳು, ದೇವತಾ ಮೂರ್ತಿಗಳು, ಓಂಕಾರ, ಸ್ವಸ್ತಿಕ್, ಶ್ರೀ ಚಕ್ರದಂತಹ ಚಿಹ್ನೆಗಳನ್ನು ಟ್ಯಾಟೂ ಹಾಕಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇದು ಭಕ್ತಿಯ ಒಂದು ಸಂಕೇತವಾಗಿ ಕಂಡುಬಂದರೂ, ಶಾಸ್ತ್ರಗಳ ಪ್ರಕಾರ ಈ ದೇಹವು ಮಲ-ಮೂತ್ರಗಳಿಂದ ಕೂಡಿದ ದೇಹ ಎಂಬ ಅರಿವಿರಬೇಕು.ದೇಹದ ಮೇಲೆ ದೇವರ ಚಿತ್ರಗಳನ್ನು ಹಾಕಿಸಿಕೊಳ್ಳುವುದು ಆ ದೈವಿಕ ಶಕ್ತಿಯನ್ನು ದೇಹದೊಳಕ್ಕೆ ಆವಾಹನೆ ಮಾಡಿಕೊಳ್ಳುವ ಸಂಕೇತವಾಗಿದೆ. ಇದನ್ನು ಒಂದು ದೀಕ್ಷೆಯ ಸಮಾನವೆಂದು ಪರಿಗಣಿಸಬೇಕು. ಟ್ಯಾಟೂ ಹಾಕಿಸಿಕೊಂಡ ನಂತರ ನಾವು ಆ ಭಗವಂತನ ಸ್ವರೂಪಕ್ಕೆ ತಕ್ಕಂತೆ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ದುಶ್ಚಟಗಳು ಮತ್ತು ದುರ್ಬುದ್ಧಿಗಳನ್ನು ತ್ಯಜಿಸಿ, ಮನಸ್ಸು ಮತ್ತು ದೇಹವನ್ನು ಶುದ್ಧವಾಗಿಟ್ಟುಕೊಳ್ಳುವ ಸಂಕಲ್ಪದಿಂದ ಹಾಕಿಸಿಕೊಂಡರೆ ಶುಭ ಫಲಗಳು ದೊರೆಯುತ್ತವೆ. ಕೇವಲ ತೋರ್ಪಡಿಕೆಗಾಗಿ ಹಾಕಿಸಿಕೊಂಡರೆ ಅದು ಶುಭವನ್ನು ತರಲಾರದು ಎಂದು ತಿಳಿಸಲಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ