Headlines

nagaraj11081993

ವಿವಿಧ ಹಣಕಾಸು ಕಾರ್ಯಗಳಿಗೆ ಪ್ಯಾನ್ ನಿಯಮಗಳಲ್ಲಿ ಬದಲಾವಣೆಗಳಿವೆ, ಗಮನಿಸಿ

ನವದೆಹಲಿ, ಏಪ್ರಿಲ್ 1: ಆದಾಯ ತೆರಿಗೆ ಕಾಯ್ದೆ ಅಡಿ ರೂಪಿಸಲಾಗಿರುವ ಹೊಸ ಐಟಿ ನಿಯಮಾವಳಿಯಲ್ಲಿ (Income tax framework) ಕೆಲ ಮಹತ್ವದ ಬದಲಾವಣೆ ಇದೆ. ಹೊಸ ಪ್ಯಾನ್ ಪಡೆಯಲು ಬೇಕಾದ ಪ್ರಕ್ರಿಯೆ, ಕೆಲ ನಿರ್ದಿಷ್ಟ ಹಣಕಾಸು ವಹಿವಾಟಿಗೆ ಪ್ಯಾನ್ ಅಗತ್ಯ ಇರುವುದು ಇತ್ಯಾದಿ ಕೆಲ ಗಮನಾರ್ಹ ಬದಲಾವಣೆಗಳಿವೆ. 10 ಲಕ್ಷಕ್ಕೂ ಅಧಿಕ ಮೊತ್ತದ ಕ್ಯಾಷ್ ಡೆಪಾಸಿಟ್ ಇತ್ಯಾದಿ ಅಧಿಕ ಮೌಲ್ಯದ ಟ್ರಾನ್ಸಾಕ್ಷನ್​ಗಳಿಗೆ ಪ್ಯಾನ್ ನಂಬರ್ ನೀಡುವುದು ಕಡ್ಡಾಯ ಮಾಡಲಾಗಿದೆ. ಹಾಗೆಯೇ, ವಿವಿಧ ಪ್ರಾಕಾರದ ತೆರಿಗೆ ಪಾವತಿದಾರರಿಗೆ ಬೇರೆ…

Read More

LSG vs DC Playing XI: ಟಾಸ್ ಗೆದ್ದ ಡೆಲ್ಲಿ; ಬಲಿಷ್ಠ ಪಡೆ ಕಣಕ್ಕಿಳಿಸಿದ ಉಭಯ ತಂಡಗಳು

ಐಪಿಎಲ್ 19 (IPL 2026) ನೇ ಸೀಸನ್​ನ ಮೊದಲ ಹಂತದ ಐದನೇ ಮತ್ತು ಕೊನೆಯ ಪಂದ್ಯ ಇಂದು ಬುಧವಾರ, ಏಪ್ರಿಲ್ 1 ರಂದು ನಡೆಯಲಿದೆ. ಈ ಸೀಸನ್​ನ ಐದನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು (LSG vs DC) ಎದುರಿಸುತ್ತಿದೆ. ಎರಡೂ ತಂಡಗಳಿಗೆ ಇದು ಈ ಸೀಸನ್​ನ ಮೊದಲ ಪಂದ್ಯವಾಗಿದೆ. ಆದ್ದರಿಂದ, ಎರಡೂ ತಂಡಗಳು ಪಂದ್ಯವನ್ನು ಗೆದ್ದು ಸೀಸನ್ ಅನ್ನು ಗೆಲುವಿನೊಂದಿಗೆ ಆರಂಭಿಸಲು ಪ್ರಯತ್ನಿಸುತ್ತವೆ. ಇದರಲ್ಲಿ ಯಾವ ತಂಡ ಯಶಸ್ವಿಯಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ….

Read More

ದೂರು ನೀಡಲು ಬಂದ ಮಹಿಳೆಯೊಂದಿಗೆ ಸಂಬಂಧ ಬೆಳೆಸಿದ್ರೆ ಇನ್ನೇನಾಗುತ್ತೆ: ಇನ್ಸ್‌ಪೆಕ್ಟರ್​​ಗೆ ಹೈಕೋರ್ಟ್ ತರಾಟೆ

ಬೆಂಗಳೂರು/ಮಂಗಳೂರು, (ಮೇ 01): ಅಮಾನತುಗೊಂಡ ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಕಾಮಕಾಂಡ ಪ್ರಕರಣ ರಾಜ್ಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ. ಶಿಕ್ಷಕಿ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸಂದೇಶ್ ವಿರುದ್ದ ಹೊಸ ಎಫ್ಐಆರ್ ದಾಖಲಾಗಿದೆ. ಇದೀಗ ಈ ಪ್ರಕರಣವನ್ನು ರದ್ದುಕೋರಿ ಸಂದೇಶ ಹೈಕೋರ್ಟ್ (Karnataka High Court) ಮೆಟ್ಟಿಲೇರಿದ್ದಾರೆ. ಆದ್ರೆ, ಹೈಕೋರ್ಟ್​, ಇನ್ಸ್‌ಪೆಕ್ಟರ್ ಮಾಡಿರುವುದು ಅಧಿಕಾರದ ದುರುಪಯೋಗವಲ್ಲವೇ? ದೂರು ಕೊಡಲು ಬಂದ ಮಹಿಳೆಯೊಂದಿಗೆ ಸಂಬಂಧ ಬೆಳೆಸಿದ್ರೆ ಇನ್ನೇನಾಗುತ್ತೆ ಎಂದು ಸಂದೇಶ್​​ಗೆ ತರಾಟೆಗೆ ತೆಗೆದುಕೊಂಡಿದ್ದು, ಪ್ರಕರಣಕ್ಕೆ…

Read More

ಡಿಕ್ಕಿ ಹೊಡೆದ ರಭಸಕ್ಕೆ ಹೊತ್ತಿಉರಿದ ಕಾರು: ಮೂವರು ಸಜೀವದಹನ, ಓರ್ವ ಗಂಭೀರ

ತುಮಕೂರು, ಏಪ್ರಿಲ್​ 01: ಭೀಕರ ಅಪಘಾತಕ್ಕೆ ಕಾರೊಂದು ಹೊತ್ತಿಉರಿದಿದ್ದು, ಮೂವರು ಸಜೀವದಹನವಾಗಿರುವಂತಹ (death) ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಬಳಿ ಕೋರಗೆರೆ ಸೇತುವೆ ಮೇಲೆ ನಡೆದಿದೆ. ಮೃತರು ಗುಬ್ಬಿ ತಾಲೂಕಿನವರು ಎನ್ನಲಾಗುತ್ತಿದೆ. ಘಟನೆಯಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದು, ಸದ್ಯ ಗಾಯಾಳನ್ನು ಹತ್ತಿರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಹುಳಿಯಾರು ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ನಡೆದಿದ್ದೇನು? ನಾಲ್ವರು ಇಂದು ಪಂಚಣಿಯಹಳ್ಳಿ ಹತ್ತಿರದ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದುಕೊಂಡು ವಾಪಸ್​ ಆಗುತ್ತಿದ್ದರು. ಈ ವೇಳೆ…

Read More

ಗದಗ: ಎಗ್ಗಿಲ್ಲದೇ ನಡೀತಿದೆ ಅಕ್ರಮ ಮರಳು ಲೂಟಿ, ಸರ್ಕಾರಕ್ಕೆ ನಿತ್ಯ ಲಕ್ಷಾಂತರ ರೂ. ತೆರಿಗೆ ವಂಚನೆ

ಗದಗ, ಏಪ್ರಿಲ್ 1: ಗದಗ (Gadag) ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಮರಳು ಗಣಿಗಾರಿಕೆ ಎಗ್ಗಿಲ್ಲದೇ ಸಾಗಿದ್ದು, ಕಾನೂನಿನ ಭಯವಿಲ್ಲದೇ ಹಗಲು-ರಾತ್ರಿ ಮರಳು ಲೂಟಿ ಮಾಡಲಾಗುತ್ತಿದೆ. ಸಕ್ರಮದ ಪರವಾನಗಿ ಪಡೆದು ಅದರ ಮರೆಯಲ್ಲಿ ಅಕ್ರಮವಾಗಿ ಮರಳು ಸಾಗಿಸುವ ಮೂಲಕ ಸರ್ಕಾರಕ್ಕೆ ನಿತ್ಯ ಲಕ್ಷಾಂತರ ರೂಪಾಯಿ ತೆರಿಗೆ ವಂಚನೆ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಕ್ರಮದ ಹೆಸರಲ್ಲಿ ಅಕ್ರಮದ ಅಟ್ಟಹಾಸ ನರಗುಂದ ತಾಲೂಕಿನ ವಾಸನ, ಕಲ್ಲಾಪುರ ಹಾಗೂ ಶಿರೋಳ ಗ್ರಾಮಗಳ ವ್ಯಾಪ್ತಿಯ ಪಟ್ಟಾ ಭೂಮಿಯಲ್ಲಿ ಮರಳು ತೆಗೆಯಲು ಸರ್ಕಾರದಿಂದ…

Read More

LSG vs DC IPL 2026 Live Score: ಲಕ್ನೋ- ಡೆಲ್ಲಿ ಮುಖಾಮುಖಿ – Kannada News | Lucknow Super Giants vs Delhi Capitals IPL 2026 Live Cricket Score LSG vs DC Match on 1st April latest news in Kannada

ಐಪಿಎಲ್ 2026 ರ ಐದನೇ ಪಂದ್ಯವು ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯುತ್ತಿದೆ. ಎರಡೂ ತಂಡಗಳು ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿವೆ. ಈ ಪಂದ್ಯದೊಂದಿಗೆ ಎರಡೂ ತಂಡಗಳು ತಮ್ಮ ಅಭಿಯಾನವನ್ನು ಪ್ರಾರಂಭಿಸುತ್ತವೆ. ರಿಷಭ್ ಪಂತ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸುತ್ತಿದ್ದರೆ, ಅಕ್ಷರ್ ಪಟೇಲ್ ದೆಹಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. Source link

Read More

ಮಹತ್ವದ ಕಾರ್ಯಕ್ಕೆ ಕೈ ಹಾಕಿದ ಅಲ್ಲು ಅರ್ಜುನ್ ಅಭಿಮಾನಿಗಳು, ಎಲ್ಲರಿಗೂ ಮಾದರಿ

ಭಾರತದಲ್ಲಿ ಸಿನಿಮಾ (Cinema) ನಟರನ್ನು ಆರಾಧಿಸುವವರ ಸಂಖ್ಯೆ ಹೆಚ್ಚು. ಅದರಲ್ಲೂ ದಕ್ಷಿಣ ಭಾರತ ಚಿತ್ರರಂಗದಲ್ಲಿ ಈ ಸಂಸ್ಕೃತಿ ತುಸು ಹೆಚ್ಚಾಗಿಯೇ ಇದೆ. ದಕ್ಷಿಣದಲ್ಲಿ ಸ್ಟಾರ್ ನಟರುಗಳ ಅಭಿಮಾನಿಗಳು ಪರಸ್ಪರ ಕಿತ್ತಾಡುವುದು, ಜಗಳ ಮಾಡುವುದು, ಪರಸ್ಪರರ ನಟರ ನಿಂದನೆ ಮಾಡುವುದು, ಚಿತ್ರಮಂದಿರಗಳಲ್ಲಿ ಗಲಾಟೆ ಮಾಡುವುದು ಕೆಲವು ಸಂದರ್ಭದಲ್ಲಿ ಇದೇ ಕಾರಣಕ್ಕೆ ಕೊಲೆಗಳು ಸಹ ನಡೆದಿರುವುದು ಇದೆ. ಆದರೆ ತೀರಾ ಅಪರೂಪಕ್ಕೆ ಈ ಅಭಿಮಾನಿ ಸಂಘಗಳು ನಿಜಕ್ಕೂ ಸಮಾಜದಲ್ಲಿ ಬದಲಾವಣೆ ತರುವ ಕಾರ್ಯಗಳನ್ನು ಮಾಡುತ್ತವೆ. ಇದೀಗ ಅಲ್ಲು ಅರ್ಜುನ್ ಅವರ…

Read More

ಬೈರತ್‌ನಲ್ಲಿ ಇಸ್ರೇಲ್ ನೌಕಾಪಡೆಯಿಂದ ಹಿಜ್ಬೊಲ್ಲಾದ ಕಮಾಂಡರ್ ಹತ್ಯೆ

ಟೆಹ್ರಾನ್, ಏಪ್ರಿಲ್ 1: ದಕ್ಷಿಣ ಲೆಬನಾನ್‌ನಲ್ಲಿ ಭಯೋತ್ಪಾದಕ ಗುಂಪಿನ ಮಿಲಿಟರಿ ಚಟುವಟಿಕೆಗೆ ಕಾರಣರಾಗಿದ್ದ ಹೆಜ್ಬೊಲ್ಲಾದ ಟಾಪ್ ಕಮಾಂಡರ್ ನಿನ್ನೆ ಬೈರತ್‌ನಲ್ಲಿ ನಡೆದ ಇಸ್ರೇಲ್ ನೌಕಾಪಡೆಯ ದಾಳಿಯಲ್ಲಿ (Israel Attack) ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಲೆಬನಾನ್ ರಾಜಧಾನಿಯಲ್ಲಿ ನಡೆದ ದಾಳಿಯಲ್ಲಿ ಹಜ್ ಯೂಸುಫ್ ಇಸ್ಮಾಯಿಲ್ ಹಶೆಮ್ ಸಾವನ್ನಪ್ಪಿದ್ದಾರೆ. ಅವರು ಸೆಪ್ಟೆಂಬರ್ 2024ರಲ್ಲಿ ಅಲಿ ಕರಕಿಯಿಂದ ದಕ್ಷಿಣದ ಟಾಪ್ ಕಮಾಂಡರ್ ಹುದ್ದೆಯನ್ನು ವಹಿಸಿಕೊಂಡರು. ಈ ಬಗ್ಗೆ ಐಡಿಎಫ್ ಮಾಹಿತಿ ಪ್ರಕಟಿಸಿದ್ದು, ಇಸ್ರೇಲಿ ದಾಳಿಯಲ್ಲಿ ಹಿಜ್ಬೊಲ್ಲಾ ಕಮಾಂಡರ್ ಹಜ್ ಯೂಸುಫ್ ಇಸ್ಮಾಯಿಲ್ ಹಶೆಮ್…

Read More

ಚಿಯಾ, ಕಲ್ಲಂಗಡಿ ಬೆನ್ನಲ್ಲೇ ಕರಬೂಜಕ್ಕೂ ತಟ್ಟಿದ ಯುದ್ಧದ ಬಿಸಿ: ದರ ಕುಸಿತ, ಹೊಲದಲ್ಲೇ ಕೊಳೆಯುತ್ತಿರುವ ಹಣ್ಣು

ಬೀದರ್, ಏಪ್ರಿಲ್​ 01: ಗಲ್ಫ್​ ರಾಷ್ಟ್ರದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಸದ್ಯ ಕರಬೂಜ ಹಣ್ಣು (muskmelon) ಬೆಳೆಗಾರರಿಗೂ ತಟ್ಟಿದೆ. ಹೀಗಾಗಿ ಏಕಾಏಕಿ ಕರಬೂಜ ಹಣ್ಣಿನ ದರ ಕುಸಿತವಾಗಿದ್ದು, ರೈತರಿಗೆ ಸಂಕಷ್ಟ ತಂದೊಡ್ಡಿದೆ. ಉತ್ತಮ ಗುಣಮಟ್ಟದ ಕರಬೂಜ ಹಣ್ಣು ಮಾರಾಟವಾಗದೇ ಹೊಲದಲ್ಲಿಯೇ ಕೊಳೆಯುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಕರಬೂಜ ಹಣ್ಣು ಮಾರಾಟದಲ್ಲಿ ಭಾರೀ ಕುಸಿತ ಗಲ್ಫ್​ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಬಿಸಿ ಇದೀಗ ಬೀದರ್ ಜಿಲ್ಲೆಯ ಕರಬೂಜ ಹಣ್ಣು ಬೆಳೆಗಾರರಿಗೆ ತಟ್ಟಿದೆ. ಯುದ್ಧದ ಪರಿಣಾಮವಾಗಿ ರಫ್ತು ವ್ಯವಸ್ಥೆ ಅಸ್ತವ್ಯಸ್ತವಾಗಿದ್ದು, ಕರಬೂಜ…

Read More

ಮನೆದಲ್ಲಿ ಹಿರಿಯರು ಇದ್ದಾರಾ? ಹಾಗಿದ್ರೆ ನೀವು ಈ ಸಲಹೆಗಳನ್ನು ಅನುಸರಿಸಲೇಬೇಕು

ಮನೆಯಲ್ಲಿ ಹಿರಿಯರಿದ್ದರೆ ಮನೆ ಮಂದಿಗೆಲ್ಲಾ ಒಂದು ರೀತಿಯ ಸಂತೋಷ. ಆದರೆ ಅವರ ಜೊತೆ ಕಾಲಕಳೆಯುವುದರ ಜೊತೆಗೆ ಅವರ ಆರೋಗ್ಯದ ಕಡೆ ವಿಶೇಷ ಗಮನ ನೀಡುವುದು ಅತ್ಯಂತ ಮುಖ್ಯವಾಗುತ್ತದೆ. ಏಕೆಂದರೆ ವಯಸ್ಸು ಹೆಚ್ಚಾಗುತ್ತಿದ್ದಂತೆ ಹಲವಾರು ರೀತಿಯ ಕಾಯಿಲೆಗಳು ಬರುವ ಅಪಾಯ ಕೂಡ ಹೆಚ್ಚಾಗಿಯೇ ಇರುತ್ತದೆ. ಹಾಗಾಗಿ ಹಿರಿಯರ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಲು ಏನು ಮಾಡಬೇಕು ಎಂಬುದರ ಕುರಿತು ತಿಳಿದುಕೊಂಡಿರುವುದು ಬಹಳ ಮುಖ್ಯವಾಗುತ್ತದೆ. ವಯೋವೃದ್ಧರಲ್ಲಿ ಹೈ ಬಿಪಿ (Hypertension), ಶುಗರ್, ಎಲುಬಿನ ನೋವು ಮತ್ತು ನೆನಪಿನ ಶಕ್ತಿ ಕುಂದುವುದು ಮುಂತಾದ…

Read More