ಹೋಟೆಲ್ ಬಳಿ ಡ್ರಗ್ಸ್ ಸೇವನೆ: ಪ್ರಶ್ನಿಸಿದ್ದಕ್ಕೆ ಗಲಾಟೆ; ಸಿಕ್ಕಸಿಕ್ಕ ವಸ್ತುಗಳಿಂದ ಹೊಡೆದಾಟ
ಬೆಂಗಳೂರು, ಏಪ್ರಿಲ್ 01: ಕಾಫಿ ಶಾಪ್ ಬಳಿ ಡ್ರಗ್ಸ್ ಸೇವನೆ ಆರೋಪ ಹಿನ್ನೆಲೆ ಹೋಟೆಲ್ ಸಿಬ್ಬಂದಿ ಮತ್ತು ಯುವಕರ ಗುಂಪ್ಪಿನ ನಡುವೆ ಭಾರಿ ಗಲಾಟೆ (fight) ನಡೆದಿರುವಂತಹ ಘಟನೆ ಕೊತ್ತನೂರಿನ ಭಾರತಿ ಸಿಟಿಯ ಕಾಫಿ ಶಾಪ್ ಬಳಿ ನಿನ್ನೆ ರಾತ್ರಿ ನಡೆದಿದೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿದ್ದು, ತನಿಖೆ ನಡೆಸಿದ್ದಾರೆ. ನಡೆದಿದ್ದೇನು? ಹೋಟೆಲ್ ಸಿಬ್ಬಂದಿ ಮತ್ತು ಸ್ಥಳೀಯ ಯುವಕರ ಗುಂಪಿನ ನಡುವೆ ನಡೆದ ಈ ಗಲಾಟೆಗೆ ಡ್ರಗ್ಸ್ ಸೇವನೆ…