Headlines

nagaraj11081993

ಸಿನಿಮಾ ಬಿಡುಗಡೆಗೂ ಮುನ್ನ ದೇವರ ಮೊರೆಹೋಗಿ, ‘ಇಡೀ ದೇಶಕ್ಕಾಗಿ ಪ್ರಾರ್ಥಿಸಿದೆ’ ಎಂದ ಅಕ್ಷಯ್ ಕುಮಾರ್

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ‘ಭೂತ್ ಬಂಗ್ಲಾ’ (Bhooth Bangla) ಸಿನಿಮಾದ ಬಿಡುಗಡೆಯ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಶೀಘ್ರದಲ್ಲೇ ಈ ಚಿತ್ರ ರಿಲೀಸ್ ಆಗಲಿದೆ. ಬಿಡುಗಡೆಗೂ ಮುನ್ನ ಅವರು ದೇವರ ಮೊರೆಹೋಗಿದ್ದಾರೆ. ಬುಧವಾರ (ಏಪ್ರಿಲ್ 1) ಬೆಳಿಗ್ಗೆ ಮಧ್ಯಪ್ರದೇಶದ ಉಜ್ಜಯಿನಿಯ ಪ್ರಸಿದ್ಧ ಶ್ರೀ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಕ್ಷಯ್ ಕುಮಾರ್ (Akshay Kumar) ಜೊತೆ ಅವರ ಅತ್ತೆ, ಹಿರಿಯ ನಟಿ ಡಿಂಪಲ್ ಕಪಾಡಿಯಾ ಸಾಥ್ ನೀಡಿದರು. ದೇವಸ್ಥಾನಕ್ಕೆ…

Read More

ಜೂ ಎನ್​​ಟಿಆರ್-ನೀಲ್ ಸಿನಿಮಾಕ್ಕೆ ಜೊತೆಯಾದ ಹಾಲಿವುಡ್ ತಂಡ

ಜೂ ಎನ್​​ಟಿಆರ್ (Jr NTR) ನಟಿಸಿ ಪ್ರಶಾಂತ್ ನೀಲ್ (Prashant Neel) ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾ ‘ಡ್ರ್ಯಾಗನ್’, ‘ವಾರಣಾಸಿ’, ‘ಪೆದ್ದಿ’ ಇನ್ನಿತರೆ ಕೆಲ ಸಿನಿಮಾಗಳ ರೀತಿ ದೊಡ್ಡ ಸದ್ದು ಮಾಡುತ್ತಿಲ್ಲ ಆದರೆ ಸದ್ದಿಲ್ಲದೇ ಬೃಹತ್ ಆದ, ಭಾರಿ ಬಜೆಟ್​​ನ ಹಾಗೂ ಅಂತರಾಷ್ಟ್ರೀಯ ಗುಣಮಟ್ಟದ ಸಿನಿಮಾವನ್ನು ತಯಾರು ಮಾಡುತ್ತಿದೆ ಚಿತ್ರತಂಡ. ಪ್ರಶಾಂತ್ ನೀಲ್ ತಮ್ಮ ಈ ವರೆಗಿನ ಸಿನಿಮಾಗಳನ್ನು ಸೆಟ್​​ಗಳಲ್ಲಿಯೇ ನಿರ್ಮಿಸಿರುವುದು ಹೆಚ್ಚು. ಆದರೆ ಇದೇ ಮೊದಲ ಬಾರಿಗೆ ನೀಲ್ ಅವರು ಹೊರದೇಶಕ್ಕೆ ಸಹ ಹೋಗಿದ್ದು, ಅಲ್ಲಿ…

Read More

ಟೋಲ್‌ನಲ್ಲಿ ಹೊಸ ನಿಯಮ: ಕ್ಯಾಶ್‌ಲೆಸ್‌ನಿಂದ ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ

ನೆಲಮಂಗಲ, ಏಪ್ರಿಲ್ 1: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇಂದಿನಿಂದ (ಏಪ್ರಿಲ್ 1) ನಗದುರಹಿತ ಟೋಲ್ ಪಾವತಿ ಕಡ್ಡಾಯಗೊಳಿಸಲಾಗಿದೆ. ಹೊಸ ನಿಯಮದ ಪ್ರಕಾರ, ವಾಹನ ಸವಾರರು ಟೋಲ್ ಶುಲ್ಕವನ್ನು ನಗದು ರೂಪದಲ್ಲಿ ಪಾವತಿಸುವಂತಿಲ್ಲ. ಬದಲಿಗೆ, ಫಾಸ್ಟ್‌ಟ್ಯಾಗ್ ಅಥವಾ ಡಿಜಿಟಲ್ ಪಾವತಿ ವಿಧಾನಗಳಾದ ಫೋನ್‌ಪೇ ಮತ್ತು ಗೂಗಲ್‌ಪೇ ಮೂಲಕ ಸ್ಕ್ಯಾನ್ ಮಾಡಿ ಶುಲ್ಕ ಪಾವತಿಸಬೇಕಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಹಿಂದೆ ಹೊರಡಿಸಿದ್ದ ಸುತ್ತೋಲೆಯಂತೆ ಈ ಕ್ರಮ ಜಾರಿಯಾಗಿದೆ. ಬೆಂಗಳೂರು ಸಮೀಪದ ನೆಲಮಂಗಲದ ಟೋಲ್ ಬಳಿ ಈ ಹೊಸ ನಿಯಮವನ್ನು ಪರಿಣಾಮಕಾರಿಯಾಗಿ…

Read More

ತನ್ನದೇ ಟೆಂಪೋದಲ್ಲಿ ಶವವಾಗಿ ಪತ್ತೆಯಾದ ಮಾಲೀಕ: ಸಾವಿನ ಸುತ್ತ ಅನುಮಾನದ ಹುತ್ತ

ಚಿಕ್ಕಬಳ್ಳಾಪುರ, ಏಪ್ರಿಲ್​ 01: ಅಶೋಕ್ ಲೇಲ್ಯಾಂಡ್ ಮಿನಿ ಟೆಂಪೋ ಮಾಲೀಕ ಕಂ ಚಾಲಕನೋರ್ವ ತನ್ನ ಟೆಂಪೋವನ್ನು ನಂಬಿಕೊಂಡು ಬಾಡಿಗೆಗೆ ಹೋಗುವುದರ ಮೂಲಕ ಜೀವನ ಸಾಗಿಸುತ್ತಿದ್ದ. ಬಾಡಿಗೆಗೆ ಹೋಗಿ ಬರುವುದಾಗಿ ಹೇಳಿ ಹೋದವನು ಟೆಂಪೋದಲ್ಲೇ ಶವವಾಗಿ ಪತ್ತೆಯಾಗಿದ್ದು (death), ಕೊಲೆ ಶಂಕೆ ವ್ಯಕ್ತವಾಗಿದೆ. ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ಕ್ಕೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ತಾಲೂಕಿನ ಆರೂರು ಗ್ರಾಮದಲ್ಲಿ ಘಟನೆ ನಡೆದಿದೆ. ನಡೆದಿದ್ದೇನು? ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕುರುಬರಕುಂಟೆಯ ಕಾಲೋನಿ ನಿವಾಸಿ 48 ವರ್ಷದ ಸುಬ್ರಮಣಿ, ಶನಿವಾರ…

Read More

ಅಸ್ಸಾಂನ ಚಹಾ ತೋಟಕ್ಕೆ ಪ್ರಧಾನಿ ಭೇಟಿ, ಕಾರ್ಮಿಕರೊಂದಿಗೆ ಚಹಾ ಎಲೆಗಳ ಕಿತ್ತ ಮೋದಿ, ಸೆಲ್ಫಿ, ಒಂದಿಷ್ಟು ಹರಟೆ

ಪ್ರಧಾನಿ ನರೇಂದ್ರ ಮೋದಿ ಅಸ್ಸಾಂನಲ್ಲಿ ಎರಡು ಚುನಾವಣಾ ರ್ಯಾಲಿಗೂ ಮುನ್ನ ದಿಬ್ರುಗಢದಲ್ಲಿರುವ ಚಹಾ ತೋಟಕ್ಕೆ ಭೇಟಿ ನೀಡಿದ್ದಾರೆ. ಅವರು ಚಹಾವನ್ನು ಅಸ್ಸಾಂನ ಆತ್ಮವೆಂದು ಬಣ್ಣಿಸಿದ್ದಾರೆ. ಇಲ್ಲಿಂದ ಬರುವ ಚಹಾ ಪ್ರಪಂಚದಾದ್ಯಂತ ತಲುಪಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇಂದು ಬೆಳಗ್ಗೆ ದಿಬ್ರುಗಢದಲ್ಲಿ, ನಾನು ಒಂದು ಚಹಾ ತೋಟಕ್ಕೆ ಭೇಟಿ ನೀಡಿ ಇಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರೊಂದಿಗೆ ಸಂವಹನ ನಡೆಸಿದೆ. ಇದು ಬಹಳ ಸ್ಮರಣೀಯ ಅನುಭವವಾಗಿತ್ತು ಎಂದು ಪ್ರಧಾನಿ ಮೋದಿ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ. ಪ್ರತಿಯೊಂದು ಚಹಾ ತೋಟಗಾರ ಕುಟುಂಬಗಳ…

Read More

ಹಾವು ರಕ್ಷಣೆ ಕುರಿತ ಕರೆಗಳ ಏರಿಕೆಗೆ GBA ಹೈರಾಣ: ಇತ್ತ ಅಗತ್ಯ ಸೌಲಭ್ಯ, ವೇತನ ಇಲ್ಲದೆ ಸಂಕಷ್ಟದಲ್ಲಿ ಉರಗ ರಕ್ಷಕರು

ಬೆಂಗಳೂರು, ಏಪ್ರಿಲ್​​ 01: ನಗರದಲ್ಲಿ ಹಾವುಗಳ ಕಾಟ ಹೆಚ್ಚಿದ್ದು ಇವುಗಳನ್ನು ಹಿಡಿಯಲು ಸಹಾಯ ಕೋರಿ ಜಿಬಿಎಗೆ ಪ್ರತಿದಿನ 150ಕ್ಕೂ ಹೆಚ್ಚು ಕರೆಗಳು ಬರುತ್ತಿವೆ. ಆದರೆ ಈ ಸೇವೆಗೆ ಇರುವ 7 ಸದಸ್ಯರ ತಂಡಕ್ಕೆ ಎಲ್ಲ ಕರೆಗಳಿಗೂ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಮೇ ಮತ್ತು ಜೂನ್ ತಿಂಗಳಲ್ಲಿ ಹಾವುಗಳು ಮೊಟ್ಟೆ ಇಡುವ ಹಾಗೂ ಮರಿ ಹೊರಬರುವ ಅವಧಿಯಾಗಿರುವುದರಿಂದ ಕರೆಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ರಕ್ಷಕರ ಸಂಖ್ಯೆಯನ್ನು ದ್ವಿಗುಣಗೊಳಿಸಲು GBA ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ….

Read More

ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ: ನಮ್ಮ ಯೋಜನೆಯಿಂದ ಅವನಿಗೆ ಕೆಲಸವಿಲ್ಲದಂತಾಗಲಿದೆ

ಬಾಲುಸ್ಸೇರಿ, ಏ.1 : ಕೇರಳ ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಯುಡಿಎಫ್ (UDF) ನಾಯಕರು ಮತದಾರರನ್ನು ಸೆಳೆಯಲು ವಿನೂತನ ಹಾದಿ ಹಿಡಿದಿದ್ದಾರೆ. ಬಾಲುಸ್ಸೇರಿಯಲ್ಲಿ ಬಸ್ ಪ್ರಯಾಣದ ವೇಳೆ ‘ಯಮರಾಜನ’ ವೇಷಧಾರಿ ವ್ಯಕ್ತಿಯನ್ನು ಭೇಟಿಯಾದ ನಾಯಕರು, ತಮ್ಮ ಹೊಸ ಆರೋಗ್ಯ ಯೋಜನೆಯಿಂದ ಯಮರಾಜನಿಗೆ ಕೆಲಸವಿಲ್ಲದಂತಾಗಲಿದೆ ಎಂದು ವ್ಯಂಗ್ಯವಾಡಿದ್ದಾರೆ. ಯುಡಿಎಫ್ ಅಧಿಕಾರಕ್ಕೆ ಬಂದರೆ ಜಾರಿಗೆ ತರಲಿರುವ ‘ಉಮ್ಮನ್ ಚಾಂಡಿ ಆರೋಗ್ಯ ವಿಮಾ ಯೋಜನೆ’ಯಡಿ ಪ್ರತಿ ಕುಟುಂಬಕ್ಕೆ ವಾರ್ಷಿಕ 25 ಲಕ್ಷ ರೂಪಾಯಿ ಮೊತ್ತದ ಆರೋಗ್ಯ ವಿಮೆಯನ್ನು ಒದಗಿಸುವುದಾಗಿ ಭರವಸೆ ನೀಡಲಾಗಿದೆ….

Read More

Mars-Saturn Conjunction: ಮೀನ ರಾಶಿಯಲ್ಲಿ ಮಂಗಳ-ಶನಿ ಸಂಯೋಗ; ಈ ಯೋಗದಿಂದ ಹಲವೆಡೆ ಆತಂಕದ ಭೀತಿ

ಮೀನ ರಾಶಿಯಲ್ಲಿ ಮಂಗಳ ಮತ್ತು ಶನಿಯರ ಸಂಯೋಗವು ಜ್ಯೋತಿಷ್ಯ ಶಾಸ್ತ್ರದಲ್ಲಿ ದ್ವಂದ್ವ ಯುದ್ಧದಂತೆ ಭಾಸವಾಗುತ್ತದೆ. ಈ ಯೋಗವು ಏಪ್ರಿಲ್ 30ರಿಂದ ಮೇ 10 ರವೆಗೆ ಇರಲಿದ್ದು ಅನೇಕ ವಿಚಾರಗಳು ಜಾಗತಿಕ ಮಟ್ಟದಲ್ಲಿ ನಡೆಯಲಿವೆ. ಜನರಲ್ಲಿ ಆತಂಕ, ದೇಶ ವಿದೇಶಗಳಲ್ಲಿ ಉನ್ಮಾದದ ಸ್ಥಿತಿಯೂ ಎದುರಾಗಬಹುದು. ಮೀನದಲ್ಲಿರುವಶನಿಯು ಶಿಸ್ತು, ನಿಧಾನಗತಿ ಮತ್ತು ಕರ್ಮದ ಸಂಕೇತವಾದರೆ, ಮಂಗಳನು ವೇಗ, ಆವೇಶ ಮತ್ತು ಶಕ್ತಿಯ ಪ್ರತೀಕ. ಈ ಎರಡು ಶಕ್ತಿಗಳು ಮೀನ ಎಂಬ ಜಲತತ್ವದ ರಾಶಿಯಲ್ಲಿ ಸಂಧಿಸಿದಾಗ ಉಂಟಾಗಲಿದೆ. ​ಜಾಗತಿಕ ಮತ್ತು ಸಾಮಾಜಿಕ…

Read More

ದೇಹದಲ್ಲಿ ವಿಟಮಿನ್ ಎ ಕೊರತೆಯಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ? ನಿರ್ಲಕ್ಷಿಸಿದರೆ ಏನಾಗುತ್ತೆ?

ವಿಟಮಿನ್ ಎ (Vitamin A) ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರಬಹುದು. ದೇಹವನ್ನು ಆರೋಗ್ಯಕರವಾಗಿಡಲು ಇದು ಪ್ರಮುಖ ಪಾತ್ರ ವಹಿಸುತ್ತದೆ. ಅದಕ್ಕೂ ಮಿಗಿಲಾಗಿ ಕಣ್ಣಿನ ದೃಷ್ಟಿಯನ್ನು ಉತ್ತಮವಾಗಿರಿಸಲು, ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಮತ್ತು ಚರ್ಮವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ವಿಟಮಿನ್ ಎ ಕೊರತೆಯಿಂದ ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳು, ಪದೇಪದೇ ಸೋಂಕುಗಳು ಮತ್ತು ಚರ್ಮ ಒಣಗುವಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅದರಲ್ಲಿಯೂ ಚಿಕ್ಕ ಮಕ್ಕಳು, ಗರ್ಭಿಣಿಯರು ಮತ್ತು ದುರ್ಬಲ ರೋಗನಿರೋಧಕ ಶಕ್ತಿಯುಳ್ಳವರಲ್ಲಿ ವಿಟಮಿನ್ ಎ ಕೊರತೆಯ ಅಪಾಯ ಹೆಚ್ಚಾಗಿರುತ್ತದೆ. ಸಮತೋಲನಯುತ ಆಹಾರದ…

Read More

ಸಕಲೇಶಪುರ: ಅರಣ್ಯ ಇಲಾಖೆ ಸಿಬ್ಬಂದಿ ಕಂಡು ರೌದ್ರಾವತಾರ ತಾಳಿ ಬೈಕ್​ಗಳ ಮೆಟ್ಟಿ ಪುಡಿ ಮಾಡಿದ ಕಾಡಾನೆ! ವಿಡಿಯೋ ನೋಡಿ

ಹಾಸನ, ಏಪ್ರಿಲ್ 1: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮತ್ತೂರು ಗ್ರಾಮದಲ್ಲಿ ಕಾಡಾನೆಗಳ ಚಲನವಲನ ಗಮನಿಸುತ್ತಿದ್ದ ಅರಣ್ಯ ಇಲಾಖೆಯ ಎಲಿಫೆಂಟ್ ಟಾಸ್ಕ್ ಫೋರ್ಸ್ (ETF) ಸಿಬ್ಬಂದಿ ಮೇಲೆ ಕಾಡಾನೆಯೊಂದು ಭೀಕರವಾಗಿ ದಾಳಿ ಮಾಡಿದೆ. ಈ ವೇಳೆ ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಟಿಎಫ್ ಸಿಬ್ಬಂದಿಯಾದ ಪ್ರಸನ್ನ, ಯುವರಾಜ್ ಮತ್ತು ಧನಂಜಯ ಮತ್ತೂರು ಗ್ರಾಮದ ಬಳಿ ಕಾಡಾನೆಗಳ ಮೇಲೆ ನಿಗಾ ಇರಿಸಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಆನೆಯೊಂದು ಇವರತ್ತ ನುಗ್ಗಿ ಬಂದಿದೆ. ಆನೆ ದಾಳಿ ಮಾಡುತ್ತಿದ್ದಂತೆ ಗಾಬರಿಗೊಂಡ…

Read More