All posts by nagaraj11081993

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ – Kannada News | Ancient Lord Sri Ram Idol found During Road Works in Vizag

ವಿಶಾಖಪಟ್ಟಣ, ಡಿಸೆಂಬರ್ 20: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ (visakhapatnam) ರಸ್ತೆ ಕಾಮಗಾರಿಯ ಸಮಯದಲ್ಲಿ ಪ್ರಾಚೀನವಾದ ಶ್ರೀರಾಮನ ವಿಗ್ರಹ (Sri Ram Idol) ಪತ್ತೆಯಾಗಿದೆ. ರಸ್ತೆಗೆ ಡಾಂಬರು ಹಾಕಿದ ನಂತರ ಹೆಚ್ಚುವರಿಯಾದ ಮಣ್ಣನ್ನು ಎಲ್ಲೋ ಸುರಿಯಲಾಗಿತ್ತು. ಅದರಲ್ಲಿ ಶ್ರೀರಾಮನ ವಿಗ್ರಹ ಇರುವುದು ಸ್ಥಳೀಯರ ಗಮನಕ್ಕೆ ಬಂದಿದೆ. ಸೊಂಟದಿಂದ ತಲೆಯವರೆಗೆ ಮಾತ್ರ ಇರುವ ರಾಮನ ಕಲ್ಲಿನ ವಿಗ್ರಹ ಪತ್ತೆಯಾಗಿದೆ. ಈ ವಿಷಯ ಹರಡುತ್ತಿದ್ದಂತೆ, ರಾಮನ ಪ್ರತಿಮೆಯನ್ನು ನೋಡಲು ಜನರು ಜಮಾಯಿಸಿದರು. ಆ ರಾಮನ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿದರು. ಪುರಾತತ್ವ ಇಲಾಖೆಯ ಅಧಿಕಾರಿಗಳು ಈ ವಿಗ್ರಹ ಯಾವ ಕಾಲದ್ದು ಮತ್ತು ಅದು ಎಲ್ಲಿಂದ ಬಂತು ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಊಟಿಯಲ್ಲಿ ಹಿಮಪಾತ; ಪ್ರವಾಸಿಗರನ್ನು ಸೆಳೆಯುತ್ತಿವೆ ಬಿಳಿ ಸೆರಗು ಹೊದ್ದ ಹೂಗಳು – Kannada News | Minimum temperature in Ooty Severe frost in the Nilgiri district

ಊಟಿ, ಡಿಸೆಂಬರ್ 20: ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಹಿಮಪಾತವಾಗಿದ್ದು, ಕನಿಷ್ಠ ತಾಪಮಾನ 0 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದನ್ನು ಅನುಭವಿಸಲು ಪ್ರವಾಸಿಗರು ತಲೈಕುಂಧ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಊಟಿಯಲ್ಲಿ (Ooty) ಇಂದು ಕನಿಷ್ಠ ತಾಪಮಾನ 7 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರಲಿದ್ದು, ಗರಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ತಲುಪಬಹುದು. ಗಾಳಿಯು 40 ಡಿಗ್ರಿಗಳಷ್ಟು ಚಲಿಸಲಿದ್ದು, 2.78ರ ಆಸುಪಾಸಿನಲ್ಲಿ ಬೀಸಲಿದೆ. ಊಟಿಯಲ್ಲಿ ತಾಪಮಾನವು ಭಾನುವಾರದಿಂದ ಶುಕ್ರವಾರದವರೆಗೆ 7 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉಪೇಂದ್ರ ವೀಕ್​​ನೆಸ್ ಏನು ಎಂದು ಕಂಡು ಹಿಡಿದುಕೊಂಡ ರಾಜ್: ನಿಮ್ಗೂ ಅಚ್ಚರಿ ಆಗುತ್ತೆ – Kannada News | Raj B Shetty talks about Upendra and his weakness

ರಾಜ್ ಬಿ. ಶೆಟ್ಟಿ, ಉಪೇಂದ್ರ (Upendra), ಶಿವರಾಜ್​ಕುಮಾರ್ ಅವರು ‘45’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟಿದೆ. ಈಗ ಚಿತ್ರದ ಪ್ರಚಾರದ ಭಾಗವಾಗಿ ರಾಜ್, ಉಪೇಂದ್ರ ಹಾಗೂ ಸಿನಿಮಾ ನಿರ್ದೇಶಕ ಅರ್ಜುನ್ ಜನ್ಯ ಅವರು ಸಂದರ್ಶನ ನೀಡಿದ್ದಾರೆ.ಈ ಸಂದರ್ಶನದಲ್ಲಿ ಹಲವು ವಿಷಗಳನ್ನು ಇವರು ಹಂಚಿಕೊಂಡಿದ್ದಾರೆ. ಅದರಲ್ಲೂ ರಾಜ್ ಹೇಳಿದ ಒಂದು ಮಾತು ಗಮನ ಸೆಳೆಯಿತು.

ಟಿವಿ9 ಕನ್ನಡಕ್ಕೆ ಉಪೇಂದ್ರ, ರಾಜ್ ಹಾಗೂ ಅರ್ಜುನ್ ಸಂದರ್ಶನ ನೀಡಿದರು ಮತ್ತು ಈ ಸಂದರ್ಶನ ಉಪೇಂದ್ರ ಮನೆಯಲ್ಲೇ ನಡೆಯಿತು ಅನ್ನೋದು ವಿಶೇಷ. ಉಪೇಂದ್ರ ಅವರ ಮೈನಸ್ ಪಾಯಿಂಟ್ ಏನು ಎಂದು ಹೇಳೋದು ತುಂಬಾನೇ ಕಷ್ಟ. ಆದರೆ, ರಾಜ್ ಅವರು ಇದನ್ನು ಕಂಡು ಹಿಡಿದ್ದಾರೆ. ಇತ್ತೀಚೆಗೆ ಆ ವಿಷಯ ಅವರಿಗೆ ಗೊತ್ತಾಗಿದೆಯಂತೆ.

ರಾಜ್ ಅವರ ಬಗ್ಗೆ ಉಪೇಂದ್ರ ಮಾತನಾಡಿದರು. ‘ರಾಜ್ ಅವರು ಪ್ರತಿ ವಿಷಯವನ್ನು ಪದರ ಪದರವಾಗಿ ನೋಡುತ್ತಾರೆ. ತುಂಬಾನೇ ಆಳವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ನೀವು ಇದನ್ನು ಒಪ್ಪಿಕೊಳ್ಳಲೇಬೇಕು’ ಎಂದು ಉಪೇಂದ್ರ ಅವರು ರಾಜ್​ಗೆ ಹೇಳಿದರು. ಇದನ್ನು ರಾಜ್ ಅವರು ಒಪ್ಪಲು ಸಿದ್ಧರೇ ಇರಲಿಲ್ಲ. ‘ನೀವು ತುಂಬಾನೇ ಜನರಿಗೆ ಸ್ಫೂರ್ತಿ ನೀಡಿದ್ದೀರಾ’ ಎಂದು ಉಪೇಂದ್ರ ಹೇಳಿದರು. ಆ ರಾಜ್ ಒಂದು ಅಚ್ಚರಿಯ ವಿಷಯ ಹೇಳಿದರು.

ಇದನ್ನೂ ಓದಿ:ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ

‘ನಾನು ಇತ್ತೀಚೆಗೆ ಉಪೇಂದ್ರ ಅವರ ಒಂದು ಮೈನಸ್ ಪಾಯಿಂಟ್ ಕಂಡು ಹಿಡಿದುಕೊಂಡಿದ್ದೇನೆ. ಅವರನ್ನು ಹೊಗಳಿದರೆ ಅವರಿಗೆ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡೋಕೆ ಆಗಲ್ಲ. ಈಗಲೂ ಹಾಗೆಯೇ ಮಾಡುತ್ತಿದ್ದಾರೆ’ ಎಂದರು ರಾಜ್. ‘ನೀವು ಹಾಗೆ ಮಾಡ್ತೀರಾ’ ಎಂದರು ಉಪೇಂದ್ರ. ಈ ವಿಷಯವನ್ನು ರಾಜ್ ಒಪ್ಪಿದರು.

ಸಾಮಾನ್ಯವಾಗಿ ಯಾರಾದರೂ ಹೊಗಳಿದರೆ ಆ ಬಗ್ಗೆ ಖುಷಿ ಆಗುತ್ತದೆ. ಆದರೆ, ಇಲ್ಲಿ ಉಪೇಂದ್ರ ಹಾಗೂ ರಾಜ್ ಮಾತ್ರ ಭಿನ್ನ. ತುಂಬಿದ ಕೊಡ ತುಳುಕುವುದಿಲ್ಲ ಎಂಬುದಕ್ಕೆ ಇದು ಉತ್ತಮ ಉದಾಹರಣೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ – Kannada News | Road Accident in Chikkaballapur Drunk Car driver Hits Scooty

ಚಿಕ್ಕಬಳ್ಳಾಪುರ, ಡಿಸೆಂಬರ್ 20: ಚಿಕ್ಕಬಳ್ಳಾಪುರದಲ್ಲಿ ಕಾರು ಹಾಗೂ ಸ್ಕೂಟಿ ನಡುವೆ ಭೀಕರ ಅಪಘಾತ (Road Accident) ಸಂಭವಿಸಿದೆ. ಇಬ್ಬರು ಮಕ್ಕಳ ಸಮೇತ ದಂಪತಿ ಪ್ರಯಾಣ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ತ್ರಿಚಕ್ರ ಬೈಕ್​ನಲ್ಲಿ ವಿಶೇಷಚೇತನ ವ್ಯಕ್ತಿ ತನ್ನ ಪತ್ನಿ ಹಾಗೂ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದರು. ಚಿಕ್ಕಬಳ್ಳಾಪುರದ ಬೈಪಾಸ್​​ನಲ್ಲಿ ಕಾರು ಆ ಬೈಕ್​ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅಪಘಾತದ ರಭಸಕ್ಕೆ ವಿಶೇಷ ಚೇತನ ಸ್ಕೂಟಿ ಸವಾರನಾದ ಮುನಿಕೃಷ್ಣ ಅವರ ಸ್ಥಿತಿ ಗಂಭೀರವಾಗಿದೆ. ಹೆಂಡತಿ ಮುನಿರತ್ನಮ್ಮನವರ ಪ್ರಜ್ಞೆ ತಪ್ಪಿದ್ದು, ಇಬ್ಬರು ಮಕ್ಕಳಿಗೆ ಗಾಯಗಳಾಗಿವೆ.

ಕಾರಿನಲ್ಲಿದ್ದ ಯುವಕರು ಕುಡಿದು ಕಾರು ಚಲಾಯಿಸಿದ ಆರೋಪ ಕೇಳಿಬಂದಿದೆ. ಮದ್ಯ ಸೇವಿಸಿದ ಅಮಲಿನಲ್ಲಿ ಮುಂದೆ ಹೋಗುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾರೆ. ಕಾರಿನ ಚಾಲಕ ಸೇರಿ ಕಾರಿನಲ್ಲಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸ್ಥಳಕ್ಕೆ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಸಿಯೂಟದಲ್ಲಿ ಹುಳುಗಳು ಪತ್ತೆ: ಟಿವಿ9 ವರದಿ ಇಂಪ್ಯಾಕ್ಟ್; ಶಾಲೆಗಳಿಗೆ ಬಂತು ಗುಣಮಟ್ಟದ ಬೇಳೆ – Kannada News | Worms Found in School Meals: Impact of TV9 Report Leads to Supply of Quality Pulses

ಬೆಂಗಳೂರು, ಡಿಸೆಂಬರ್​ 20: ಅನ್ನದಲ್ಲೂ ಹುಳು (maggots), ಸಾಂಬರ್​​ನಲ್ಲೂ ಹುಳು, ಅಕ್ಕಿ, ಬೇಳೆಗಳಲ್ಲೂ ಹುಳುವೋ ಹುಳು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ನೀಡುತ್ತಿರುವ ಬಿಸಿಯೂಟ ಅಧ್ವಾನ ಎದ್ದಿದೆ. ವಿದ್ಯಾರ್ಥಿಗಳಿಗೆ ನೀಡುತ್ತಿರುವ ಕಳಪೆ ಆಹಾರದ ವಿರುದ್ಧ ಟಿವಿ9 ಸಮರ ಸಾರಿದ್ದು, ಶಾಲೆಗಳಲ್ಲಿನ ಕರ್ಮಕಾಂಡವನ್ನೂ ತೆರೆದಿಟ್ಟಿದೆ. ವರದಿ ಇಂಪ್ಯಾಕ್ಟ್ ಬೆನ್ನಲ್ಲೇ ಶಾಲೆಗಳಿಗೆ ಗುಣಮಟ್ಟದ ಬೇಳೆ ಬಂದಿದೆ. ಮತ್ತೊಂದೆಡೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ.

ಚಿಕ್ಕಮಗಳೂರಲ್ಲೂ ‘ಹುಳು ಊಟದ’ ಕರ್ಮಕಾಂಡ!

ಇಂದು ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಬಿಟ್ಟೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಪೂರೈಸ್ತಿದ್ದ ಊಟದಲ್ಲಿ ಕೂಡ ಹುಳು ಪತ್ತೆ ಆಗಿದೆ. ಇವತ್ತು ಅಡುಗೆ ಮನೆಗೆ ತೆರೆಳಿದ್ದ ಪೋಷಕರು, ಅನ್ನ, ಸಾಂಬರ್​​​ನಲ್ಲಿ ಹುಳು ಕಂಡು ಕೆರಳಿದ್ದಾರೆ. ಆದರೆ ಸರ್ಕಾರದಿಂದ ಬರೋದೆ ಹೀಗೆ ನಾವೇನ್ ಮಾಡೋಣ ಅಂತ ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.

ಶಾಲೆಗೆ ರಾಜ್ಯ ಮಕ್ಕಳ ಆಯೋಗದ ಅಧ್ಯಕ್ಷರ ಭೇಟಿ

ಯಾದಗಿರಿಯ ರಾಮಸಮುದ್ರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ, ಬಿಸಿಯೂಟಕ್ಕೆ ಬಳಸ್ತಿದ್ದ ಅಕ್ಕಿ, ತೊಗರಿ ಬೇಳೆಯಲ್ಲಿ ಹುಳು ತುಂಬಿ ತುಳುಕುತ್ತಿದ್ದವು. ಕೊಯಿಲೂರಿನ ಶಾಲೆಯಲ್ಲೂ ನುಶಿ ಹಾಗೂ ಬಾಲದುಳು ಇರುವ ಗೋಧಿಯನ್ನೇ ಮಕ್ಕಳ ಊಟಕ್ಕೆ ಬಳಕೆ ಮಾಡ್ತಿದ್ದರು. ಈ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡಿತ್ತು. ಇದೀಗ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು, ರಾಮಸಮುದ್ರದ ಶಾಲೆಗೆ ದಿಢೀರ್​ ಭೇಟಿ ಕೊಟ್ಟು, ಪರಿಶೀಲಿಸಿದರು. ಕಳಪೆ ಗುಣಮಟ್ಟದ ಬೇಳೆ ಪೂರೈಕೆಗೆ ಕಿಡಿಕಾರಿದ್ದು, ವರದಿ ಸಲ್ಲಿಕೆಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಮಧ್ಯಾಹ್ನದ ಬಿಸಿಯೂಟದ ತುಂಬ ಹುಳಗಳ ರಾಶಿ! ಪೋಷಕರು ಕೆಂಡಾಮಂಡಲ

ಇನ್ನು ಟಿವಿ9 ವರದಿ ಆಧರಿಸಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಈ ಬಗ್ಗೆ ಕಲಬುರಗಿಯಲ್ಲಿ ಅಧ್ಯಕ್ಷ ಶಶೀಧರ್ ಕೋಸುಂಬೆ ಪ್ರತಿಕ್ರಿಯಿಸಿದ್ದು, ಟಿವಿ9 ವರದಿ ನೋಡಿ ಎಲ್ಲಾ ಡಿಡಿಪಿಐಗಳಿಗೆ ಸೂಚಿಸಿದ್ದೇನೆ. 3 ದಿನದೊಳಗೆ ಸಮಗ್ರ ವರದಿ ನೀಡಲು ರಾಜ್ಯ ಬಿಸಿಯೂಟ ಯೋಜನೆ ಉಪಕಾರ್ಯರ್ಶಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ.

ಟಿವಿ9 ಇಂಪ್ಯಾಕ್ಟ್​: ಶಾಲೆಗೆ ಬಂತು ಗುಣಮಟ್ಟದ ಬೇಳೆ

ತುಮಕೂರಿನ ವಡ್ಡರಹಳ್ಳಿ ಸರ್ಕಾರಿ ಶಾಲೆಯಲ್ಲಿ ಹಾಳಾದ ತೊಗರಿ ಬೇಳೆ ಬಗ್ಗೆ ಟಿವಿ9 ನಿನ್ನೆ ವರದಿ ಪ್ರಸಾರ ಮಾಡಿತ್ತು. ಗುಡಿಪಾಳ್ಯದ ಶಾಲೆಯಲ್ಲಿನ ಬೇಳೆಗೆ ಬಂದ ದುಸ್ಥಿತಿಯನ್ನ ತೆರೆದಿಟ್ಟಿತ್ತು. ಇದೀಗ ಅಕ್ಷರ ದಾಸೋಹ ಅಧಿಕಾರಿಗಳು ಎಚ್ಚೆತ್ತಿದ್ದು, ಶಾಲೆಗಳಿಗೆ ಗುಣಮಟ್ಟದ ತೊಗರಿ ಬೇಳೆ ಪೂರೈಸಿದ್ದಾರೆ.

ಇದನ್ನೂ ಓದಿ: ಯಾದಗಿರಿ: ಶಾಲಾ ಮಕ್ಕಳ ಬಿಸಿಯೂಟಕ್ಕೆ ಹುಳ ಬಿದ್ದಿರೋ ಅಕ್ಕಿ ಬೇಳೆ; TV9 ರಿಯಾಲಿಟಿ ಚೆಕ್​ನಲ್ಲಿ ಬಯಲಾಯ್ತು ಅಸಲಿಯತ್ತು

ಹುಳು ಬಿದ್ದ ತೊಗರಿ ಬೇಳೆಗಳನ್ನು ಅಧಿಕಾರಿಗಳು ಗುತ್ತಿಗೆದಾರರಿಗೆ ವಾಪಾಸ್ ಕಳುಹಿಸಿದ್ದಾರೆ. ಈಗಾಗಲೇ ತುಮಕೂರಿನ ಗುಬ್ಬಿ ಗೇಟ್​​ ಬಳಿಯ ಗೋಡೌನ್​​​ಗೆ 179 ಕ್ವಿಂಟಾಲ್​ ಬೇಳೆ ಬಂದಿದೆ. ಎಲ್ಲಾ ಶಾಲೆಗಳಿಗೆ ಗುಣಮಟ್ಟದ ಬೇಳೆ ವಿತರಣೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಆ ಮೂಲಕ ಮಕ್ಕಳು ಹಾಗೂ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

ಬ್ಯುರೋ ರಿಪೋರ್ಟ್, ಟಿವಿ9

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅಸಮರ್ಥರನ್ನು ಜಗದೇಕ ವೀರ ಎನ್ನಬೇಕೆ?; ಅಮಿತ್ ಶಾ ವಿರುದ್ಧ ಪ್ರಿಯಾಂಕ್ ಖರ್ಗೆ ಟೀಕಾಪ್ರಹಾರ – Kannada News | Karnataka Minister Priyank Kharge targets Union Home Minister Amit Shah in His Social Media Post

ಬೆಂಗಳೂರು, ಡಿಸೆಂಬರ್ 20: ಬಾಂಗ್ಲಾ ವಲಸಿಗರ ಬಗ್ಗೆ ಅತಾರ್ಕಿಕವಾಗಿ ರಾಜ್ಯ ಸರ್ಕಾರವನ್ನು ಟೀಕಿಸುವ ಬಿಜೆಪಿಗರಿಗೆ ಬಾಂಗ್ಲಾ ವಲಸಿಗರು ದೇಶದೊಳಗೆ ನುಸುಳುವಂತಾಗಿದ್ದು ಹೇಗೆ? ಮತ್ತು ಯಾರ ಅಸಾಮರ್ಥ್ಯದಿಂದ? ಎಂಬ ಪ್ರಶ್ನೆಗೆ ಉತ್ತರ ಹೇಳುವ ಧೈರ್ಯವಿಲ್ಲ ಎಂದು ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಟೀಕಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಅಸಮರ್ಥ ನಾಯಕ ಎಂದು ಕರೆದಿರುವ ಪ್ರಿಯಾಂಕ್ ಖರ್ಗೆ ಅದಕ್ಕೆ ಕಾರಣವನ್ನೂ ನೀಡಿದ್ದಾರೆ.

ಬಾಂಗ್ಲಾ ವಲಸಿಗರು ದೇಶದ ಗಡಿ ದಾಟಿ ಬರುವಂತಾಗಿದ್ದು ಕೇಂದ್ರ ಗೃಹ ಸಚಿವರ ವೈಫಲ್ಯವಲ್ಲವೇ? ದೆಹಲಿಯ ಕೆಂಪು ಕೋಟೆ ಬಳಿಯೇ ಸ್ಫೋಟವಾಗುತ್ತದೆ ಎಂದರೆ ಅದು ಕೇಂದ್ರ ಗೃಹ ಸಚಿವರ ಅಸಾಮರ್ಥ್ಯವಲ್ಲವೇ? ಪಹಲ್ಗಾಮ್ ದಾಳಿಯಾಗುವಾಗ ಅಮಿತ್ ಶಾ ಅವರ ಚಾಣಾಕ್ಷತನ ಎಲ್ಲಿ ಅಡಗಿತ್ತು? ವರ್ಷಗಳ ಕಾಲ ಮಣಿಪುರದಲ್ಲಿ ದಂಗೆ ನಡೆಯುತ್ತಿದ್ದುದನ್ನು ಸುಮ್ಮನೆ ನೋಡುತ್ತಾ ಕುಳಿತಿದ್ದನ್ನು ಅಸಾಮರ್ಥ್ಯ ಎನ್ನಬೇಕೋ ಅಥವಾ ಪರಾಕ್ರಮ ಎನ್ನಬೇಕೋ? ಮಹಿಳೆಯರ ಬೆತ್ತಲೆ ಮೆರವಣಿಗೆಯಿಂದ ಇಡೀ ಜಗತ್ತಿನ ಎದುರು ನಮ್ಮ ದೇಶದ ಘನತೆ ಮಣ್ಣುಪಾಲಾದಾಗ ಕಣ್ಮುಚ್ಚಿ ಕುಳಿತಿದ್ದು ಅಸಾಮರ್ಥ್ಯವಲ್ಲದೆ ಇನ್ನೇನು? ಎಂದು ಪ್ರಿಯಾಂಕ್ ಖರ್ಗೆ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಬುಲ್ಡೋಜರ್ ಮೂಲಕ ನರೇಗಾ ನೆಲಸಮ; ಬಿಜೆಪಿ ಸರ್ಕಾರದ ವಿರುದ್ಧ ಸೋನಿಯಾ ಗಾಂಧಿ ಆಕ್ರೋಶ

ಅಮಿತ್ ಶಾ ಅವರ ಸಾಮರ್ಥ್ಯ, ಪರಾಕ್ರಮಗಳಿರುವುದು ಬಿಜೆಪಿಯೇತರ ಸರ್ಕಾರಗಳನ್ನು ಉರುಳಿಸುವುದರಲ್ಲಿ ಮತ್ತು ICCಯನ್ನು ಸಮೃದ್ಧಗೊಳಿಸುವುದರಲ್ಲಿ ಮಾತ್ರವೇ? ಎಂದು ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ. ಪ್ರಮೋಷನ್ ಗಾಗಿ, ಅಸ್ತಿತ್ವಕ್ಕಾಗಿ ಅಮಿತ್ ಶಾ ಅವರನ್ನು ಸ್ಪರ್ಧೆಗೆ ಬಿದ್ದವರಂತೆ ಸಮರ್ಥಿಸಿಕೊಳ್ಳುವುದು ರಾಜ್ಯದ ಬಿಜೆಪಿ ನಾಯಕರಿಗೆ ಅನಿವಾರ್ಯ ಎಂಬ ಸಂಗತಿ ನಮಗೂ ತಿಳಿದಿದೆ, ಅದು ಜನತೆಗೂ ತಿಳಿದಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಮಹಾತ್ಮ ಗಾಂಧಿ, ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಸೇರಿದಂತೆ ದೇಶ ಕಟ್ಟಿದ ನಾಯಕರ ಬಗ್ಗೆಯೇ ಅಸಂಸದೀಯ ಭಾಷೆಯ ಮೂಲಕ ನಾಲಿಗೆ ಹರಿಬಿಡುವ ಕರ್ನಾಟಕದ ಬಿಜೆಪಿ ನಾಯಕರು ಇಂದು ಅಸಮರ್ಥ ಎಂಬ ಪದವನ್ನು ಸಹಿಸಲಾಗದೆ ಒದ್ದಾಡುತ್ತಿರುವುದು ಅವರ ಶೋಚನಿಯ ಸ್ಥಿತಿಗೆ ಹಿಡಿದ ಕನ್ನಡಿ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬುಲ್ಡೋಜರ್ ಮೂಲಕ ನರೇಗಾ ನೆಲಸಮ; ಬಿಜೆಪಿ ಸರ್ಕಾರದ ವಿರುದ್ಧ ಸೋನಿಯಾ ಗಾಂಧಿ ಆಕ್ರೋಶ – Kannada News | Modi Government bulldozed MGNREGA Sonia Gandhi slams VB G RAM G Bill

ನವದೆಹಲಿ, ಡಿಸೆಂಬರ್ 20: ಕೇಂದ್ರ ಸರ್ಕಾರವು MNREGA (ನರೇಗಾ) ಯೋಜನೆಯಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ಅದನ್ನು ದುರ್ಬಲಗೊಳಿಸುತ್ತಿದೆ. 20 ವರ್ಷಗಳ ಹಿಂದೆ ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದ MNREGA ಯೋಜನೆ ಲಕ್ಷಾಂತರ ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಮತ್ತು ಘನತೆಯನ್ನು ಒದಗಿಸಿದೆ. ಕೊವಿಡ್ ಬಿಕ್ಕಟ್ಟಿನ ಸಮಯದಲ್ಲಿ MNREGA ಹಲವರ ಜೀವ ಉಳಿಸಿದೆ, ಕುಟುಂಬಕ್ಕೆ ಆಧಾರವಾಗಿದೆ. ಆದರೆ ಮೋದಿ ಸರ್ಕಾರವು ಯಾವುದೇ ಸಮಾಲೋಚನೆಯಿಲ್ಲದೆ ಅದನ್ನು ಬದಲಾಯಿಸಿತು. ಸರ್ಕಾರವು MNREGA ಅನ್ನು ಬುಲ್ಡೋಜರ್ ಮೂಲಕ ನಾಶಮಾಡಿದೆ. ಇದರ ವಿರುದ್ಧ ನಾವು ಹೋರಾಟ ನಡೆಸಲು ಸಿದ್ಧರಿದ್ದೇವೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ವಾಗ್ದಾಳಿ ನಡೆಸಿದ್ದಾರೆ.

ಸಂಸತ್ತಿನ ಎರಡೂ ಸದನಗಳು ಅಂಗೀಕರಿಸಿದ ವಿಬಿಜಿ ರಾಮ್‌ಜಿ ಮಸೂದೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ರಾಷ್ಟ್ರಕ್ಕೆ ಈ ವಿಡಿಯೋ ಸಂದೇಶ ನೀಡಿದ್ದಾರೆ. ಇದರಲ್ಲಿ ಅವರು ನರೇಗಾ ಯೋಜನೆಯ (MNREGA) ಸಾಧನೆಗಳನ್ನು ಎತ್ತಿ ತೋರಿಸಿದ್ದಾರೆ. ಯಾರನ್ನೂ ಸಂಪರ್ಕಿಸದೆ ಕೇಂದ್ರ ಸರ್ಕಾರ ಎಂಎನ್‌ಆರ್‌ಇಜಿಎ ರಚನೆಯನ್ನು ಬದಲಾಯಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಸೋನಿಯಾ ಗಾಂಧಿಯವರ ವಿಡಿಯೋ ಸಂದೇಶದ ಹೈಲೈಟ್ಸ್ ಇಲ್ಲಿದೆ.

  1. “ಸಹೋದರ ಸಹೋದರಿಯರೇ… ನಮಸ್ಕಾರ. 20 ವರ್ಷಗಳ ಹಿಂದೆ ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ MNREGA ಕಾನೂನನ್ನು ಸಂಸತ್ತಿನಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು ಎಂದು ನನಗೆ ಇನ್ನೂ ನೆನಪಿದೆ. ಇದು ಒಂದು ಕ್ರಾಂತಿಕಾರಿ ಹೆಜ್ಜೆಯಾಗಿತ್ತು. ಲಕ್ಷಾಂತರ ಗ್ರಾಮೀಣ ಕುಟುಂಬಗಳು ಇದರಿಂದ ಪ್ರಯೋಜನ ಪಡೆದವು. ಇದು ಜೀವನೋಪಾಯದ ಮೂಲವಾಯಿತು. ಅದರಲ್ಲೂ ವಿಶೇಷವಾಗಿ ವಂಚಿತರು, ಶೋಷಿತರು, ಬಡವರು ಮತ್ತು ಅತ್ಯಂತ ಬಡವರಿಗೆ ಇದರಿಂದ ಅನುಕೂಲವಾಯಿತು.
  2. “ಜನರು ತಾಯ್ನಾಡು, ಗ್ರಾಮ, ಮನೆ ಮತ್ತು ಕುಟುಂಬದಿಂದ ಉದ್ಯೋಗ ಅರಸಿ ಬೇರೆಡೆ ವಲಸೆ ಹೋಗುವುದನ್ನು ಈ ಯೋಜನೆಯಿಂದ ನಿಲ್ಲಿಸಲಾಯಿತು. ಉದ್ಯೋಗಕ್ಕೆ ಕಾನೂನುಬದ್ಧ ಹಕ್ಕುಗಳನ್ನು ನೀಡಲಾಯಿತು. ಗ್ರಾಮ ಪಂಚಾಯಿತಿಗಳಿಗೆ ಸಬಲೀಕರಣ ಮಾಡಲಾಯಿತು. MNREGA ಮೂಲಕ, ಭಾರತದಲ್ಲಿ ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುವತ್ತ ದೃಢವಾದ ಹೆಜ್ಜೆ ಇಡಲಾಯಿತು.
  3. “ಕಳೆದ 11 ವರ್ಷಗಳಲ್ಲಿ ಮೋದಿ ಸರ್ಕಾರವು MNREGA ಅನ್ನು ದುರ್ಬಲಗೊಳಿಸಲು ಎಲ್ಲ ಪ್ರಯತ್ನಗಳನ್ನು ಮಾಡಿದೆ. ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳು, ಬಡವರು ಮತ್ತು ಅಂಚಿನಲ್ಲಿರುವವರ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿದೆ. ಕೊವಿಡ್ ಸಮಯದಲ್ಲಿ ಈ ಯೋಜನೆ ಬಡವರಿಗೆ ಜೀವನಾಡಿಯಾಗಿದ್ದರೂ, ಕೇಂದ್ರ ಸರ್ಕಾರದ ಈ ನಿರ್ಧಾರ ತುಂಬಾ ದುರದೃಷ್ಟಕರ.
  4. ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕಿದ್ದಲ್ಲದೆ ಯಾವುದೇ ಚರ್ಚೆಯಿಲ್ಲದೆ, ಸಮಾಲೋಚನೆಯಿಲ್ಲದೆ ಮತ್ತು ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ MNREGA ಯೋಜನೆಯ ರಚನೆಯನ್ನೇ ನಿರಂಕುಶವಾಗಿ ಬದಲಾಯಿಸಲಾಗಿದೆ.
  5. ಈ ಮೂಲಕ ಮೋದಿ ಸರ್ಕಾರವು ದೇಶಾದ್ಯಂತ ಕೋಟ್ಯಂತರ ರೈತರು, ಕಾರ್ಮಿಕರು ಮತ್ತು ಭೂಹೀನರ ಹಿತಾಸಕ್ತಿಗಳ ಮೇಲೆ ದಾಳಿ ಮಾಡಿದೆ ಎಂದು ಅವರು ಹೇಳಿದರು. ಕಳೆದ 11 ವರ್ಷಗಳಲ್ಲಿ ಕೇಂದ್ರ ಸರ್ಕಾರವು ಗ್ರಾಮೀಣ ಬಡವರ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿದೆ.
  6. MNREGA ಜಾರಿಗೆ ತರುವಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಿದೆ. ಆದರೆ ಇದು ಎಂದಿಗೂ ಪಕ್ಷಕ್ಕೆ ಸಂಬಂಧಿಸಿದ ವಿಷಯವಾಗಿರಲಿಲ್ಲ. ಇದು ರಾಷ್ಟ್ರೀಯ ಮತ್ತು ಸಾರ್ವಜನಿಕ ಹಿತಾಸಕ್ತಿಯ ಯೋಜನೆಯಾಗಿತ್ತು. ಈ ಕಾನೂನನ್ನು ದುರ್ಬಲಗೊಳಿಸುವ ಮೂಲಕ ಮೋದಿ ಸರ್ಕಾರವು ಲಕ್ಷಾಂತರ ರೈತರು, ಕಾರ್ಮಿಕರು ಮತ್ತು ಭೂಹೀನ ಗ್ರಾಮೀಣ ಬಡವರ ಹಿತಾಸಕ್ತಿಗಳ ಮೇಲೆ ದಾಳಿ ಮಾಡಿದೆ. ಈ ದಾಳಿಯನ್ನು ಎದುರಿಸಲು ನಾವೆಲ್ಲರೂ ಸಿದ್ಧರಿದ್ದೇವೆ.
  7. 20 ವರ್ಷಗಳ ಹಿಂದೆ, ನಾನು ನನ್ನ ಬಡ ಸಹೋದರ ಸಹೋದರಿಯರಿಗೆ ಉದ್ಯೋಗ ಹಕ್ಕುಗಳನ್ನು ಪಡೆಯಲು ಹೋರಾಡಿದೆ. ಇಂದಿಗೂ, ಈ ಕರಾಳ ಕಾನೂನಿನ ವಿರುದ್ಧ ಹೋರಾಡಲು ನಾನು ಬದ್ಧಳಾಗಿದ್ದೇನೆ. ನನ್ನಂತಹ ಎಲ್ಲಾ ಕಾಂಗ್ರೆಸ್ ನಾಯಕರು ಮತ್ತು ಲಕ್ಷಾಂತರ ಕಾರ್ಮಿಕರು ಈ ಹೋರಾಟದಲ್ಲಿ ಜೊತೆಯಾಗಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ – Kannada News | Arjun Janya talks about how 45 movie story stuck to him

ಕನ್ನಡ ಚಿತ್ರರಂಗದ ಸ್ಟಾರ್ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ (Arjun Janya) ಅವರು ಸಿನಿಮಾ ನಿರ್ದೇಶಕನಾಗಿದ್ದಾರೆ. ಸಂಗೀತ ನಿರ್ದೇಶನ ಅದ್ಭುತವಾಗಿ ನಡೆಯುತ್ತಿರುವಾಗಲೇ ಅವರು ಸಿನಿಮಾ ನಿರ್ದೇಶಕನ ಟೋಪಿ ಧರಿಸಿದ್ದಾರೆ. ‘45’ ಹೆಸರಿನ ಸಿನಿಮಾ ನಿರ್ದೇಶಿಸಿದ್ದು, ಸಿನಿಮಾನಲ್ಲಿ ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ನಟಿಸಿದ್ದಾರೆ. ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದೆ. ಸಿನಿಮಾದ ಟ್ರೈಲರ್​​ನಿಂದಲೇ ಇದೊಂದು ಭಿನ್ನವಾದ ಕತೆ ಎಂಬುದು ತಿಳಿದು ಬರುತ್ತಿದೆ. ಈ ಭಿನ್ನವಾದ ಕತೆ ಅರ್ಜುನ್ ಜನ್ಯಗೆ ಹೊಳೆದಿದ್ದು ಹೇಗೆ? ಟಿವಿ9 ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಅರ್ಜುನ್ ಜನ್ಯ, ‘45’ ಕತೆ ಎಂಥಹಾ ಭಾವುಕ ಸನ್ನಿವೇಶದಲ್ಲಿ ತಮಗೆ ಹೊಳೆಯಿತು ಎಂದು ಹೇಳಿಕೊಂಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ – Kannada News | DK Shivakumar Receives Blessings from Naga Sadhus at His Residence Today

ಬೆಂಗಳೂರು, ಡಿಸೆಂಬರ್​​ 20: ಶುಕ್ರವಾರ ಗೋಕಾರ್ಣದ ದೇಗುಲಕ್ಕೆ ಡಿಸಿಎಂ ಡಿಕೆ ಶಿಕವಕುಮಾರ್​ ತೆರಳಿದ್ದರು. ಈ ವೇಳೆ ಪ್ರಾರ್ಥನೆ ಸಲ್ಲಿಸುವಾಗ ಗಣಪತಿಯ ಬಲಗಡೆಯಿಂದ ಹೂ ಬಿದ್ದಿತ್ತು. ಜಗದೀಶ್ವರಿ ದೇಗುಲದಲ್ಲಿ ಬೇಡಿಕೆ ಇಟ್ಟಾಗಲೂ ಒಳ್ಳೆಯ ಮುನ್ಸೂಚನೆ ಸಿಕ್ಕಿತ್ತು. ಈ ಮಧ್ಯೆ ಇಂದು ಸದಾಶಿವನಗರದ ನಿವಾಸಕ್ಕೆ ಉತ್ತರ ಪ್ರದೇಶ, ಉತ್ತರಾಖಂಡ್​ನಿಂದ 10ಕ್ಕೂ ಹೆಚ್ಚು ನಾಗಾಸಾಧುಗಳು ಆಗಮಿಸಿ ಡಿಕೆ ಶಿವಕುಮಾರ್​ಗೆ ಆಶೀರ್ವಾದ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಒಟಿಟಿಗೆ ಬರಲಿದೆ ಉಪ್ಪಿ ನಟನೆಯ ತೆಲುಗು ಸಿನಿಮಾ: ಬಿಡುಗಡೆ ಯಾವಾಗ? – Kannada News | Upendra Ram Pothineni starrer Andhra King Taluka movie releasing on OTT

ಉಪೇಂದ್ರ (Upendra) ಕನ್ನಡದಲ್ಲಿ ಮಾತ್ರವಲ್ಲ ನೆರೆಯ ತೆಲುಗು ಚಿತ್ರರಂಗದಲ್ಲೂ ಜನಪ್ರಿಯರು. ಸಾಕಷ್ಟು ತೆಲುಗು ಸಿನಿ ಪ್ರಿಯರನ್ನು ಅಭಿಮಾನಿಗಳನ್ನಾಗಿ ಹೊಂದಿದ್ದಾರೆ ಉಪೇಂದ್ರ. ಆಗೊಮ್ಮೆ ಈಗೊಮ್ಮೆ ತೆಲುಗು ಸಿನಿಮಾಗಳಲ್ಲಿಯೂ ನಟಿಸುತ್ತಿರುತ್ತಾರೆ ಉಪೇಂದ್ರ. ಇತ್ತೀಚೆಗಷ್ಟೆ ‘ಆಂಧ್ರ ಕಿಂಗ್ ತಾಲೂಕ’ ಹೆಸರಿನ ತೆಲುಗು ಸಿನಿಮಾನಲ್ಲಿ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಂಡಿದೆ. ಇದೀಗ ಇದೇ ಸಿನಿಮಾ ಒಟಿಟಿಗೆ ಬರುತ್ತಿದೆ.

ತೆಲುಗು ಚಿತ್ರರಂಗದ ಜನಪ್ರಿಯ ನಟ ರಾಮ್ ಪೋತಿನೇನಿ ನಾಯಕನಾಗಿ, ಭಾಗ್ಯಶ್ರೀ ಬೋರ್ಸೆ ನಾಯಕಿಯಾಗಿ ನಟಿಸಿರುವ ‘ಆಂಧ್ರ ಕಿಂಗ್ ತಾಲ್ಲೂಕ’ ಸಿನಿಮಾ ನವೆಂಬರ್ 27ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಈ ಸಿನಿಮಾನಲ್ಲಿ ಉಪೇಂದ್ರ ತೆಲುಗು ಚಿತ್ರರಂಗದ ಸ್ಟಾರ್ ನಟನ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ಸ್ಟಾರ್ ನಟ ಹಾಗೂ ಅಭಿಮಾನಿ ನಡುವಿನ ಕತೆಯನ್ನು ಒಳಗೊಂಡಿತ್ತು. ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಬಹಳ ಒಳ್ಳೆಯ ವಿಮರ್ಶೆಗಳನ್ನು ಗಳಿಸಿತ್ತು, ಸಿನಿಮಾನಲ್ಲಿ ರಾಮ್ ಪೋತಿನೇನಿ, ಭಾಗ್ಯಶ್ರೀ ಮತ್ತು ಉಪೇಂದ್ರ ನಟನೆಗೂ ಸಹ ಮೆಚ್ಚುಗೆ ವ್ಯಕ್ತವಾಗಿತ್ತು.

ಇದೀಗ ಈ ಸಿನಿಮಾ ಒಟಿಟಿಗೆ ಬರುತ್ತಿದೆ. ‘ಆಂಧ್ರ ಕಿಂಗ್ ತಾಲೂಕ’ ಸಿನಿಮಾ ಅನ್ನು ಉತ್ತಮ ಮೊತ್ತಕ್ಕೆ ನೆಟ್​​ಫ್ಲಿಕ್ಸ್​ ನವರು ಖರೀದಿ ಮಾಡಿದ್ದಾರೆ. ಸಿನಿಮಾ ಡಿಸೆಂಬರ್ 25ಕ್ಕೆ ಅಂದರೆ ಕ್ರಿಸ್​​ಮಸ್​ ದಿನದಂದು ನೆಟ್​​ಫ್ಲಿಕ್ಸ್​​ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ‘ಇಷ್ಟು ದಿನ ಸ್ಟಾರ್ ನಟರ ಬಯೋಪಿಕ್ ನೋಡಿದ್ದೀರ, ಈಗ ಅಭಿಮಾನಿಯ ಬಯೋಪಿಕ್ ನೋಡಿ’ ಎಂದು ‘ಆಂಧ್ರ ಕಿಂಗ್ ತಾಲೂಕ’ದ ಪ್ರಚಾರ ಮಾಡುತ್ತಿದೆ ನೆಟ್​ಫ್ಲಿಕ್ಸ್​.

ಇದನ್ನೂ ಓದಿ:ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ

‘ಆಂಧ್ರ ಕಿಂಗ್ ತಾಲೂಕ’ ಸಿನಿಮಾನಲ್ಲಿ ರಾಮ್ ಪೋತಿನೇನಿ ಸಿನಿಮಾ ನಟನ ಅಭಿಮಾನಿಯ ಪಾತ್ರದಲ್ಲಿ ನಟಿಸಿದ್ದಾರೆ. ಭಾಗ್ಯಶ್ರೀ ಬೋರ್ಸೆ ಚಿತ್ರಮಂದಿರ ಮಾಲೀಕನ ಪುತ್ರಿಯ ಪಾತ್ರದಲ್ಲಿ ನಟಿಸಿದ್ದಾರೆ. ಉಪೆಂದ್ರ, ತೆಲುಗು ಚಿತ್ರರಂಗದ ಸ್ಟಾರ್ ನಟ ಸೂರ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಮಹೇಶ್ ಬಾಬು ಪಚ್ಚಿಗೊಲ್ಲ. ಸ್ಟಾರ್ ನಟನಿಂದ ಅಭಿಮಾನಿ ಹಾಗೂ ಅಭಿಮಾನಿ ಒಬ್ಬನಿಂದ ಸ್ಟಾರ್ ನಟ ಹೇಗೆ ಪರಸ್ಪರ ನೆರವಿಗೆ ಬರುತ್ತಾರೆ, ಇಬ್ಬರೂ ಭೇಟಿಯೇ ಆಗದಿದ್ದರೂ ಇಬ್ಬರ ನಡುವಿನ ಬಂಧ, ಅಭಿಮಾನಿಯ ಸವಾಲು, ಸ್ಟಾರ್ ನಟ ಪ್ರೀತಿ ಹೀಗೆ ಹಲವು ವಿಷಯಗಳನ್ನು ಈ ಸಿನಿಮಾ ಒಳಗೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link