All posts by nagaraj11081993

World Saree Day 2025: ನೀರೆಯರ ಮನಗೆದ್ದ ಸೀರೆಗೂ ಒಂದು ದಿನ; ಈ ಆಚರಣೆಯ ಮಹತ್ವವನ್ನು ತಿಳಿಯಿರಿ – Kannada News | World Saree Day 2025: What is the purpose of celebrating World Saree Day?

ಸೀರೆ (Saree) ಹೆಣ್ಣಿನ ಚೆಲುವು ಸೌಂದರ್ಯದ ಸಂಕೇತ ಅಂತಾನೇ ಹೇಳಬಹುದು. ಸೊಬಗು ಸೌಂದರ್ಯದ ಪ್ರತಿಬಿಂಬವಾಗಿರುವ ಸೀರೆ ಕೇವಲ ಉಡುಗೆಯಲ್ಲ ಇದು ನಮ್ಮ ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಸಂಪ್ರದಾಯದ ಮೂರ್ತ ರೂಪವಾಗಿದೆ. ಶತಮಾನಗಳಿಂದಲೂ ಭಾರತದಲ್ಲಿ ಮಹಿಳೆಯರು ಸೀರೆಯನ್ನು ಧರಿಸುತ್ತಿದ್ದಾರೆ. ಎಷ್ಟೇ ಫ್ಯಾಶನ್‌, ಟ್ರೆಂಡಿ ಉಡುಗೆಗಳು ಬಂದರೂ ಸೀರೆಯ ಕ್ರೇಜ್‌ ಮಾತ್ರ ಇಂದಿಗೂ ಕಮ್ಮಿಯಾಗಿಲ್ಲ. ಈ ಸೀರೆ ಫ್ಯಾಷನ್‌ಗೂ ಮೀರಿ ಸಾಂಸ್ಕೃತಿಕ ಹೆಮ್ಮೆಯನ್ನು ಪ್ರತಿನಿಧಿಸುವ ಒಂದು ಉಡುಪಾಗಿದ್ದು, ಇದರ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಐತಿಹಾಸಿಕ ಮಹತ್ವಕ್ಕೆ ಗೌರವ ನೀಡುವ ಸಲುವಾಗಿ ಪ್ರತಿವರ್ಷ ಡಿಸೆಂಬರ್‌ 21 ರಂದು ವಿಶ್ವ ಸೀರೆ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಸೀರೆ ದಿನದ ಇತಿಹಾಸವೇನು?

ನೇಕಾರರ ಸಮುದಾಯ ಮತ್ತು ಸೀರೆಗಳ ವಿಶಿಷ್ಟ ಕಲೆಯನ್ನು ಗೌರವಿಸುವ ಉದ್ದೇಶದಿಂದ ವಿಶ್ವ ಸೀರೆ ದಿನವನ್ನು ಆಚರಿಸಲಾಗುತ್ತದೆ. ಸಾಮಾಜಿಕ ಕಾರ್ಯಕರ್ತರಾದ ಸಿಂಧೂರ ಕವಿತಿ ಮತ್ತು ನಿಸ್ತುಲಾ ಹೆಬ್ಬಾರ್ ಅವರು ಸೀರೆಗಳ ಸಂಕೀರ್ಣ ಕರಕುಶಲತೆ ಮತ್ತು ಶ್ರೀಮಂತ ಪರಂಪರೆಯನ್ನು  ಸಂಭ್ರಮಿಸುವ ಸಲುವಾಗಿ 2020 ರಲ್ಲಿ ಈ ದಿನದ ಆಚರಣೆಯನ್ನು ಪ್ರಾರಂಭಿಸಿದರು.  ಈ ಉಪಕ್ರಮವು ಸಾಮಾಜಿಕ ಮಾಧ್ಯಮ ಮತ್ತು ಫ್ಯಾಷನ್ ಸಮುದಾಯದ ಗಮನ ಸೆಳೆಯಿತು. ಮತ್ತು ಇದು ವಿಶ್ವಾದ್ಯಂತ ಈ ದಿನವನ್ನು ಪ್ರತಿವರ್ಷ ಡಿಸೆಂಬರ್‌ 21 ರಂದು ಆಚರಿಸಲಾಗುತ್ತಿದೆ.

ಇದನ್ನೂ ಓದಿ: ಒಗ್ಗಟ್ಟಿನಿಂದ ಸಮಾಜದಲ್ಲಿ ಶಾಂತಿ, ಸಾಮರಸ್ಯ, ಸುಸ್ಥಿರ ಅಭಿವೃದ್ಧಿ ಸಾಧ್ಯ

ವಿಶ್ವ ಸೀರೆ ದಿನದ ಮಹತ್ವವೇನು?

ಸಾಂಸ್ಕೃತಿಕ ಪರಂಪರೆಯನ್ನು ಆಚರಿಸುವುದು: ಸೀರೆ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದ್ದು, ಸಂಪ್ರದಾಯ, ಸೊಬಗು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸಲು ಮತ್ತು ಆಚರಿಸಲು ಈ ದಿನ ಒಂದು ಅವಕಾಶವನ್ನು ಒದಗಿಸುತ್ತದೆ.

ಭಾರತೀಯ ಕೈಮಗ್ಗಗಳನ್ನು ಉತ್ತೇಜಿಸುವುದು: ಭಾರತದ ಜವಳಿ ಉದ್ಯಮದ ಅವಿಭಾಜ್ಯ ಅಂಗವಾದ ಕೈಮಗ್ಗ ನೇಯ್ಗೆಯ ಕಲೆಯನ್ನು ಉತ್ತೇಜಿಸುವುದು ಮತ್ತು ಸಂರಕ್ಷಿಸುವುದು ವಿಶ್ವ ಸೀರೆ ದಿನದ ಪ್ರಮುಖ ಉದ್ದೇಶವಾಗಿದೆ. ಈ ದಿನವು ಕೈಮಗ್ಗ ಕೈಗಾರಿಕೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.

ಕುಶಲಕರ್ಮಿಗಳನ್ನು ಗೌರವಿಸುವುದು: ಈ ದಿನ ಪ್ರತಿ ಸೀರೆಯ ಹಿಂದಿರುವ ನೇಕಾರರು ಮತ್ತು ಕುಶಲಕರ್ಮಿಗಳ ಪ್ರಯತ್ನಗಳನ್ನು ಗೌರವಿಸಲಾಗುತ್ತದೆ.

ಇದಲ್ಲದೆ ಸಾಂಪ್ರದಾಯಿಕ ಭಾರತೀಯ ಉಡುಪು ಸೀರೆಯ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಐತಿಹಾಸಿಕ ಮಹತ್ವಕ್ಕೆ ಗೌರವ ನೀಡುವುದು ವಿಶ್ವ ಸೀರೆ ದಿನದ ಮುಖ್ಯ ಉದ್ದೇಶವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ – Kannada News | Pramod Shetty talks about Shetty Gang dispute in Kannada Film Industry

ಕನ್ನಡ ಚಿತ್ರರಂಗದಲ್ಲಿ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಬಿ. ಶೆಟ್ಟಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಈ ಕಲಾವಿದರು ಜೊತೆಜೊತೆಯಾಗಿ ಸಿನಿಮಾ ಕೆಲಸಗಳನ್ನು ಮಾಡುತ್ತಿದ್ದಾರೆ. ಆ ಕಾರಣದಿಂದ ಅಭಿಮಾನಿಗಳು ಇವರನ್ನು ಶೆಟ್ಟಿ ಗ್ಯಾಂಗ್ (Shetty Gang) ಎಂದು ಕರೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಒಂದು ವದಂತಿ ಹಬ್ಬಿತ್ತು. ಶೆಟ್ಟಿ ಗ್ಯಾಂಗ್​ನಲ್ಲಿ ಬಿರುಕು ಮೂಡಿದೆ ಎಂಬ ಅನುಮಾನ ವ್ಯಕ್ತವಾಗಿತ್ತು. ಆ ಬಗ್ಗೆ ನಟ ಪ್ರಮೋದ್ (Pramod Shetty) ಅವರು ಮಾತನಾಡಿದ್ದಾರೆ. ‘45’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಅವರು ಈ ಕುರಿತು ಮೌನ ಮುರಿದರು. ‘ಶಿವಣ್ಣ, ಉಪೇಂದ್ರ ಅವರ ಬಗ್ಗೆ ಮಾತನಾಡಿದ ಬಳಿಕ ನಾನು ರಾಜ್ ಬಿ. ಶೆಟ್ಟಿ ಬಗ್ಗೆ ಮಾತನಾಡಲೇಬೇಕು. ಮೊನ್ನೆ ನಾನು ರಾಜ್ ಶೆಟ್ಟಿ (Raj B Shetty) ಬಗ್ಗೆ ಜಾಸ್ತಿ ಮಾತನಾಡಿರಲಿಲ್ಲ. ನನ್ನ ಫ್ರೆಂಡ್ ಆದ್ದರಿಂದ ಜಾಸ್ತಿ ಮಾತಾಡೋದು ಬೇಡ ಅಂತ ಸುಮ್ಮನಾಗಿದ್ದೆ. ಆಮೇಲೆ ಮಾಧ್ಯಮಗಳಲ್ಲಿ ನೋಡಿದಾಗ ಗೊತ್ತಾಯಿತು ಇದು ಸಿಕ್ಕಾಪಟ್ಟೆ ಬಿರುಕು ಆಗಿದೆ ಅಂತ. ಇಷ್ಟೊಂದು ಬಿರುಕು ಯಾವಾಗ ಬಂತು? ಹೌದಾ ಅಂತ ತುಂಬಾ ಜನ ನನಗೆ ಫೋನ್ ಮಾಡಿ ಕೇಳಿದರು. ಹೌದು ಏನೀಗ ಅಂತ ನಾನು ಹೇಳಿದೆ. ನಿಮಗೆ ಯಾಕೆ ಬಿಟ್ಟಾಕಿ. ನಾವು ಆರಾಮಾಗಿ ಇದ್ದೇವೆ. ನೀವು ಯಾಕೆ ಜಗಳ ಮಾಡಿಕೊಳ್ಳುತ್ತಿದ್ದೀರಿ ಅಂತ ಕೇಳಿದೆ’ ಎಂದಿದ್ದಾರೆ ಪ್ರಮೋದ್ ಶೆಟ್ಟಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇಶಾನ್ ಕಿಶನ್ ಅಬ್ಬರದಿಂದ ರಿಂಕು ಸಿಂಗ್​ಗೆ ಖುಲಾಯಿಸಿದ ಅದೃಷ್ಟ – Kannada News | T20 World Cup 2026: Rinku Singh Selected in place of Jitesh Sharma

ಟಿ೨೦ ವಿಶ್ವಕಪ್‌ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ರಿಂಕು ಸಿಂಗ್ ಯಶಸ್ವಿಯಾಗಿದ್ದಾರೆ. ಆದರೆ ರಿಂಕು ಸಿಂಗ್​ಗೆ ದಿಢೀರ್ ಅದೃಷ್ಟ ಖುಲಾಯಿಸಿದ್ದು ಇಶಾನ್ ಕಿಶನ್ ಅಬ್ಬರದಿಂದ ಎಂಬುದು ವಿಶೇಷ.

ಇತ್ತೀಚೆಗೆ ಮುಗಿದ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಇಶಾನ್ ಕಿಶನ್ ಭರ್ಜರಿ ಪ್ರದರ್ಶನ ನೀಡಿದ್ದರು. ಜಾರ್ಖಂಡ್ ಪರ ಕಣಕ್ಕಿಳಿದಿದ್ದ ಕಿಶನ್ 2 ಶತಕ ಹಾಗೂ 2 ಅರ್ಧಶತಕಗಳೊಂದಿಗೆ ಬರೋಬ್ಬರಿ 51 ರನ್ ಕಲೆಹಾಕಿದ್ದರು. ಈ ಭರ್ಜರಿ ಪ್ರದರ್ಶನದೊಂದಿಗೆ ಇಶಾನ್ ಕಿಶನ್ ಟೀಮ್ ಇಂಡಿಯಾದ ಬಾಗಿಲು ಬಡಿದಿದ್ದರು.

ಅತ್ತ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಶುಭ್​ಮನ್ ಗಿಲ್ ಸಂಪೂರ್ಣ ವಿಫಲರಾಗಿದ್ದ ಕಾರಣ ಅವರನ್ನು ಟಿ೨೦ ತಂಡದಿಂದ ಕೈ ಬಿಡುವುದು ಬಿಸಿಸಿಐ ಪಾಲಿಗೆ ಅನಿವಾರ್ಯವಾಗಿತ್ತು. ಅವರ ಬದಲಿಗೆ ಯಾರನ್ನು ಆಯ್ಕೆ ಮಾಡಬೇಕೆಂಬ ಪ್ರಶ್ನೆಗೆ ಇದ್ದದ್ದು ಒಂದೇ ಉತ್ತರ ಇಶಾನ್ ಕಿಶನ್.

ಇಶಾನ್ ಕಿಶನ್ ಭರ್ಜರಿ ಫಾರ್ಮ್ ನಲ್ಲಿರುವ ಕಾರಣ ಅವರನ್ನೇ ಟಿ20 ವಿಶ್ವಕಪ್​ಗೆ ಆಯ್ಕೆ ಮಾಡಲಾಯಿತು. ಇತ್ತ ವಿಕೆಟ್ ಕೀಪರ್ ಆಗಿರುವ ಇಶಾನ್ ಕಿಶನ್ ಶುಭ್​ಮನ್ ಗಿಲ್ ಅವರ ಸ್ಥಾನಕ್ಕೆ ಆಯ್ಕೆಯಾಗಿದ್ದರಿಂದ ಮತ್ತೋರ್ವ ವಿಕೆಟ್ ಕೀಪರ್​ನನ್ನು ತಂಡದಿಂದ ಕೈ ಬಿಡುವುದು ಅನಿವಾರ್ಯವಾಯಿತು. ಇದರಿಂದ ಜಿತೇಶ್ ಶರ್ಮಾ ಟೀಮ್ ಇಂಡಿಯಾದಿಂದ ಹೊರಬಿದ್ದರು.

ಏಕೆಂದರೆ ವಿಕೆಟ್ ಕೀಪರ್ ಬ್ಯಾಟರ್​ ಆಗಿ ಸಂಜು ಸ್ಯಾಮ್ಸನ್ ಇದ್ದು, ಅವರೊಂದಿಗೆ ಹೆಚ್ಚುವರಿ ವಿಕೆಟ್ ಕೀಪರ್​ ಆಗಿ ಇದೀಗ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಲಾಗಿದೆ. ಕಿಶನ್ ಆಯ್ಕೆಯಿಂದ ಹೆಚ್ಚುವರಿ ವಿಕೆಟ್ ಕೀಪರ್ ಹಾಗೂ ಆರಂಭಿಕನ ಸ್ಥಾನ ಕೂಡ ಭರ್ತಿಯಾಗಿದೆ. ಇದರಿಂದ ವಿಕೆಟ್ ಕೀಪರ್​ ಆಗಿ ತಂಡದಲ್ಲಿದ್ದ ಜಿತೇಶ್ ಶರ್ಮಾ ಅವರನ್ನು ಕೈ ಬಿಡಲೇಬೇಕಾಯಿತು.

ಅತ್ತ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಅವರನ್ನು ಕೈ ಬಿಟ್ಟಿದ್ದರಿಂದ ಟೀಮ್ ಇಂಡಿಯಾಗೆ ಹೆಚ್ಚುವರಿ ಫಿನಿಶರ್​ನ ಅನಿವಾರ್ಯತೆ ಎದುರಾಗಿದೆ. ಈ ವೇಳೆ ಬಿಸಿಸಿಐ ಮುಂದಿದ್ದ ಏಕೈಕ ಆಯ್ಕೆ ರಿಂಕು ಸಿಂಗ್. ಅದರಂತೆ ಭಾರತ ಟಿ20 ವಿಶ್ವಕಪ್​ ತಂಡದಲ್ಲಿ ರಿಂಕು ಸಿಂಗ್​ಗೆ ಅವಕಾಶ ಲಭಿಸಿತು.

ಒಂದು ವೇಳೆ ಇಶಾನ್ ಕಿಶನ್ ಆರಂಭಿಕನಾಗಿ ಆಯ್ಕೆಯಾಗದೇ ಇದ್ದಿದ್ದರೆ ರಿಂಕು ಸಿಂಗ್​ಗೆ ಚಾನ್ಸ್ ಸಿಗುವ ಸಾಧ್ಯತೆ ಇರಲಿಲ್ಲ. ಏಕೆಂದರೆ ಇಶಾನ್ ಕಿಶನ್ ಹೆಚ್ಚುವರಿ ಆರಂಭಿಕ + ಹೆಚ್ಚುವರಿ ವಿಕೆಟ್ ಕೀಪರ್ ಸ್ಥಾನ ತುಂಬಿದ್ದರಿಂದ ಶುಭ್​​ಮನ್ ಗಿಲ್ ಹಾಗೂ ಜಿತೇಶ್ ಶರ್ಮಾ ತಂಡದಿಂದ ಹೊರಗುಳಿಯಬೇಕಾಯಿತು.

ಇದನ್ನೂ ಓದಿ: ಟೀಮ್ ಇಂಡಿಯಾದಿಂದ 7 ಆಟಗಾರರು ಔಟ್..!

ಇತ್ತ ಜಿತೇಶ್ ಶರ್ಮಾ ಹೊರಗುಳಿದ ಪರಿಣಾಮ ರಿಂಕು ಸಿಂಗ್ ಅವರಿಗೆ ಅದೃಷ್ಟ ಖುಲಾಯಿಸಿದೆ. ಈ ಮೂಲಕ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಳ್ಳದ ರಿಂಕು ಸಿಂಗ್ ನೇರವಾಗಿ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ.

Source link

Daily Devotional: ಒಂದೇ ಗೋತ್ರದಲ್ಲಿ ಮದುವೆ ಆದರೆ ಏನಾಗುತ್ತೆ? ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | Gotra and Marriage: An Astrological, Spiritual, and Scientific Perspective

ವಿವಾಹ ಹೊಂದಾಣಿಕೆ ಪ್ರಕ್ರಿಯೆಯಲ್ಲಿ ನಾಮಬಲ ಮತ್ತು ಜನ್ಮದಿನಾಂಕಗಳ ಜೊತೆಗೆ ಗೋತ್ರಕ್ಕೂ ಮಹತ್ವ ನೀಡಲಾಗುತ್ತದೆ. ಒಂದೇ ಗೋತ್ರದವರ ನಡುವೆ ವಿವಾಹ ಸಾಧ್ಯವೇ ಅಥವಾ ಸೂಕ್ತವೇ ಎಂಬ ಪ್ರಶ್ನೆ ಹಲವು ಕುಟುಂಬಗಳಲ್ಲಿ ಆಗಾಗ್ಗೆ ಉದ್ಭವಿಸುತ್ತದೆ. ಗೋತ್ರವನ್ನು ವ್ಯಕ್ತಿಯ ಜೀವಾ ನಾಡಿ ಎಂದು ಪರಿಗಣಿಸಲಾಗುತ್ತದೆ ಮತ್ತು ಇದು ವ್ಯಕ್ತಿಯ ಹುಟ್ಟಿಗೆ ಮಹತ್ತರ ಸಂಬಂಧ ಹೊಂದಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ತಜ್ಞರಾದ ಡಾ. ಬಸವರಾಜ ಗುರೂಜಿ ತಮ್ಮ ನಿತ್ಯ ಭಕ್ತಿಯಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಜ್ಯೋತಿಷ್ಯ ಶಾಸ್ತ್ರ, ಆಧ್ಯಾತ್ಮಿಕ ಮತ್ತು ಹಿಂದೂ ಪರಂಪರೆಯಲ್ಲಿ, ಸನಾತನ ಧರ್ಮದಲ್ಲಿ ವಿವಾಹಕ್ಕಾಗಿ ಗೋತ್ರವನ್ನು ಪರಿಶೀಲಿಸುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ. ಸಂಪ್ರದಾಯಸ್ಥರು ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸುತ್ತಾರೆ. ಗೋತ್ರದ ವೈಜ್ಞಾನಿಕ ಮಹತ್ವವನ್ನು ವಿವರಿಸುವಾಗ, ಇದನ್ನು ಮಾನವನ ವರ್ಣತಂತುಗಳಿಗೆ (ಕ್ರೋಮೋಸೋಮ್‌ಗಳು – X-Y, X-X) ಹೋಲಿಸಲಾಗುತ್ತದೆ. ಒಂದೇ ಗೋತ್ರ ಎಂದರೆ ಒಂದೇ ರಕ್ತ ಎಂಬ ಅರ್ಥವನ್ನು ಕೂಡ ಕೊಡುತ್ತದೆ. ಮಾನವ ದೇಹದಲ್ಲಿ 23 ವರ್ಣತಂತುಗಳು ಇರುವುದು ತಿಳಿದಿರುವ ಸಂಗತಿ.

ಭಾರತೀಯ ಸಂಪ್ರದಾಯದ ಪ್ರಕಾರ, ವಿವಾಹದ ನಂತರ ಹೆಣ್ಣು ತನ್ನ ತಂದೆಯ ಗೋತ್ರವನ್ನು ಬಿಟ್ಟು ಗಂಡನ ಗೋತ್ರವನ್ನು ಅನುಸರಿಸುತ್ತಾಳೆ. ಇದು ಕುಟುಂಬದ ರೇಖೆ ಮತ್ತು ವಂಶದ ನಿರಂತರತೆಗೆ ಸಂಕೇತವಾಗಿದೆ. ಆದರೆ ಒಂದೇ ಗೋತ್ರದವರ ವಿವಾಹದ ಬಗ್ಗೆ ಗಂಭೀರ ಪರಿಗಣನೆ ಅಗತ್ಯ ಎಂದು ಶಾಸ್ತ್ರಗಳು ಹೇಳುತ್ತವೆ.

ಒಂದೇ ಗೋತ್ರದ ವಿವಾಹದ ಪರಿಣಾಮಗಳನ್ನು ವಿಶ್ಲೇಷಿಸಿದಾಗ, ಇದು ಕೆಲವು ಸಂಭಾವ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ನಂಬಲಾಗಿದೆ. ಪ್ರಮುಖವಾಗಿ, ಮಕ್ಕಳಿಗೆ ಸಂಬಂಧಿಸಿದಂತೆ ಅಭಿವೃದ್ಧಿಯ ಕೊರತೆ ಕಂಡುಬರಬಹುದು. ದೈಹಿಕ, ಮಾನಸಿಕ ಅಭಿವೃದ್ಧಿ ಕಡಿಮೆ ಆಗಬಹುದು. ಮಾನಸಿಕ ಅಸ್ವಸ್ಥತೆ ಅಥವಾ ಅಂಗವೈಕಲ್ಯದ ಸಾಧ್ಯತೆಗಳು ಇರುತ್ತವೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಒಂದೇ ಗೋತ್ರದ ವ್ಯಕ್ತಿಗಳಲ್ಲಿ ತಕ್ಷಣದ ಪ್ರತಿಕ್ರಿಯೆ, ಕೋಪ, ಹಾಗೂ ಅಧಿಕ ಸ್ವಾಭಿಮಾನದ ಪ್ರದರ್ಶನ ಹೆಚ್ಚಾಗಿ ಕಾಣಿಸಬಹುದು, ಇದು ವೈವಾಹಿಕ ಜೀವನದಲ್ಲಿ ಸಾಮರಸ್ಯಕ್ಕೆ ಅಡ್ಡಿಯಾಗಬಹುದು.

ಇದನ್ನೂ ಓದಿ: ವಾಸ್ತು ಪ್ರಕಾರ, ಮನೆಯಲ್ಲಿ ಕಾಮಧೇನುವಿನ ವಿಗ್ರಹ ಇಡುವುದರಿಂದ ಸಿಗುವ ಅದ್ಭುತ ಲಾಭಗಳಿವು!

ವಿವಾಹ ಹೊಂದಾಣಿಕೆಯ ಅಷ್ಟಕೂಟ ವಿಧಾನದಲ್ಲಿ, ನಾಡಿ ಕೂಟವು ಅತ್ಯಂತ ಪ್ರಮುಖವಾದುದು. ನಾಡಿ ಕೂಟದಲ್ಲಿ ಆದಿ ನಾಡಿ, ಮಧ್ಯ ನಾಡಿ ಮತ್ತು ಅಂತ್ಯ ನಾಡಿ ಎಂಬ ಮೂರು ವಿಧಗಳಿವೆ. ಒಂದೇ ನಾಡಿಯ (ಉದಾಹರಣೆಗೆ, ಆದಿ ನಾಡಿ ಮತ್ತು ಆದಿ ನಾಡಿ) ಜೋಡಿ ವಿವಾಹವಾದರೆ ಸಂತಾನಕ್ಕೆ ಸಂಬಂಧಿಸಿದ ಏರುಪೇರುಗಳು ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಇದು ಬೇರೆ ಕಾರಣಗಳಿಂದಲೂ ಇರಬಹುದು, ಆದರೆ ನಾಡಿ ದೋಷವು ಒಂದು ಪ್ರಮುಖ ಅಂಶವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಒಂದೇ ಗೋತ್ರದವರ ವಿವಾಹವನ್ನು ಅಷ್ಟು ಶುಭಕರವೆಂದು ಪರಿಗಣಿಸಲಾಗುವುದಿಲ್ಲ. ಹಾಗಾಗಿ, ಇಂತಹ ವಿವಾಹಕ್ಕೆ ಮುಂದಾಗುವ ಮೊದಲು ತಜ್ಞರ ಸಲಹೆ ಪಡೆದು, ಸೂಕ್ತ ವಿಚಾರಣೆ ಮತ್ತು ವಿಶ್ಲೇಷಣೆ ಮಾಡುವುದು ಉತ್ತಮ. ಇದು ಕೇವಲ ನಂಬಿಕೆಗಳ ಆಧಾರದಲ್ಲಿ ಮಾತ್ರವಲ್ಲದೆ, ಪರೋಕ್ಷವಾಗಿ ಸಂತಾನದ ಆರೋಗ್ಯ ಮತ್ತು ಕುಟುಂಬದ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳನ್ನು ಒಳಗೊಂಡಿರುತ್ತದೆ ಎಂದು ಗುರೂಜಿ ಎಚ್ಚರಿಸಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:58 am, Sun, 21 December 25

Source link

ನಾಯಕತ್ವ ಬದಲಾವಣೆ ಗೊಂದಲ ಆದಷ್ಟು ಬೇಗ ಬಗೆಹರಿಸಿ: ಮಲ್ಲಿಕಾರ್ಜುನ ಖರ್ಗೆಗೆ VR ಸುದರ್ಶನ್ ಪತ್ರ – Kannada News | Karnataka Power Tussle: KPCC Vice President Appeals to AICC President Kharge Over Political Uncertainty in State

ಬೆಂಗಳೂರು, ಡಿಸೆಂಬರ್​ 21: ಕರ್ನಾಟಕ ಕಾಂಗ್ರೆಸ್‌ನಲ್ಲಿನ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ಬೆಳವಣಿಗೆ ನಡೆದಿದೆ. ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್.ಸುದರ್ಶನ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ. ಕೆಪಿಸಿಸಿ ಪದಾಧಿಕಾರಿಗಳ ಪರವಾಗಿ ಬರೆದ ಈ ಪತ್ರದಲ್ಲಿ, ರಾಜ್ಯದಲ್ಲಿರುವ ರಾಜಕೀಯ ಗೊಂದಲಗಳನ್ನು ಆದಷ್ಟು ಬೇಗ ಬಗೆಹರಿಸುವಂತೆ ಮನವಿ ಮಾಡಿದ್ದಾರೆ. ರಾಜ್ಯದ ಆಡಳಿತ ಮತ್ತು ಪಕ್ಷದ ಪ್ರತಿಷ್ಠೆಗೆ ಈ ಗೊಂದಲಗಳು ಧಕ್ಕೆ ತರುತ್ತಿವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಬಿಗ್ ಬಾಸ್ ಮನೆಯೊಳಗೆ ಗಿಲ್ಲಿಗೆ ಬಂತ ಕೊರೊನಾ? ಮೂಡಿದೆ ಅನುಮಾನ – Kannada News | Gilli Nata doubts about Corona Virus in Bigg Boss Kannada Season 12

ಕೊರನಾ ವೈರಸ್ ಹಾವಳಿ ಹೆಚ್ಚಿದಾಗ ಜನಜೀವನ ಅಸ್ತವ್ಯಸ್ತ ಆಗಿತ್ತು. ಬಿಗ್ ಬಾಸ್ ಶೋ ಕೂಡ ಅರ್ಧಕ್ಕೆ ನಿಲ್ಲುವಂತೆ ಆಗಿತ್ತು. ಈಗ ಗಿಲ್ಲಿ ನಟ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋನಲ್ಲಿ ಕೊರೊನಾ ಬಗ್ಗೆ ಮಾತನಾಡಿದ್ದಾರೆ. ಡಿಸೆಂಬರ್ 21ರ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಎಲ್ಲ ಸ್ಪರ್ಧಿಗಳಿಗೆ ಒಂದು ಟಾಸ್ಕ್ ನೀಡಿದರು. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ತಮ್ಮ ಎದುರು ಇರುವ ಆಹಾರವನು ತಿಂದು, ಅದೇನು ಎಂಬುದನ್ನು ಪತ್ತೆ ಹಚ್ಚಬೇಕು. ಈ ಚಟುವಟಿಕೆಯಲ್ಲಿ ಗಿಲ್ಲಿ ನಟ (Gilli Nata) ಹಿಂದೆ ಬಿದ್ದಿದ್ದಾರೆ. ರುಚಿ ಮತ್ತು ವಾಸನೆ ಗ್ರಹಿಸಲು ಗಿಲ್ಲಿ ಸೋತಿದ್ದಾರೆ. ‘ನನಗೆ ಏನಾದರೂ ಕೊರೊನಾ ಬಂದಿದೆಯಾ’ ಎಂದು ಅವರೇ ಅನುಮಾನ ವ್ಯಕ್ತಪಡಿಸಿದ್ದಾರೆ. ಗಿಲ್ಲಿ ಹೇಳಿದ ಈ ಮಾತು ಕೇಳಿ ಎಲ್ಲರೂ ನಕ್ಕಿದ್ದಾರೆ. ಈ ಸಂಚಿಕೆಯ ಪ್ರೋಮೋ ಇಲ್ಲಿದೆ. ‘ಕಲರ್ಸ್ ಕನ್ನಡ’ ಚಾನೆಲ್ ಮತ್ತು ‘ಜಿಯೋ ಹಾಟ್​ ಸ್ಟಾರ್’ ಒಟಿಟಿಯಲ್ಲಿ ಪೂರ್ತಿ ಸಂಚಿಕೆ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಾನು ಬಾಯಿ ಮುಚ್ಕೊಂಡು ಇದ್ದೆ, ಯಾಕಂದ್ರೆ; ಹುಬ್ಬಳಿಯಿಂದ ಇಡೀ ರಾಜ್ಯಕ್ಕೆ ಸುದೀಪ್ ಖಡಕ್ ಸಂದೇಶ – Kannada News | Kichcha Sudeep speech in Mark Movie pre release event in Hubballi

ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ (Mark Movie) ಡಿಸೆಂಬರ್ 25ರಂದು ಅದ್ದೂರಿಯಾಗಿ ತೆರೆಕಾಣಲಿದೆ. ಈ ಪ್ರಯುಕ್ತ ಡಿಸೆಂಬರ್ 20ರ ಸಂಜೆ ಹುಬ್ಬಳ್ಳಿಯಲ್ಲಿ ಪ್ರೀ-ರಿಲೀಸ್ ಇವೆಂಟ್ ಮಾಡಲಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು ಇದರಲ್ಲಿ ಭಾಗಿ ಆಗಿದ್ದಾರೆ. ಚಿತ್ರತಂಡದ ಕಲಾವಿದರು, ತಂತ್ರಜ್ಞರು ಹಾಗೂ ಆಪ್ತರ ಸಮ್ಮುಖದಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರು ಮಾತನಾಡಿದರು. ಈ ವೇದಿಕೆಯಲ್ಲಿ ತಮ್ಮ ಅಭಿಮಾನಿಗಳಿಗೆ ಅವರು ಖಡಕ್ ಸಂದೇಶ ನೀಡಿದರು.

‘ಎಲ್ಲರೂ ಹೇಗಿದ್ದೀರಿ? 2003ರಲ್ಲಿ ಇಲ್ಲಿ ಒಂದು ಪ್ರೋಗ್ರಾಂ ಮಾಡಿದ ಬಳಿಕ ಮತ್ತೆ ಇಲ್ಲಿಗೆ ಬರಲು ಇವತ್ತೇ ಅವಕಾಶ ಸಿಕ್ಕಿದ್ದು. ಬಹಳ ಚೆನ್ನಾಗಿ, ಸುಂದರವಾಗಿ ಸ್ವಾಗತಿಸಿದ್ದಕ್ಕೆ ಧನ್ಯವಾದಗಳು. ಮಾತಾಡೊದಕ್ಕೆ ತುಂಬಾ ಆಸೆ ಇದೆ. ಕೆಲವು ಕಂಟ್ರೋಲ್ ಮಾಡಿಕೊಂಡು ಮಾತಾಡುತ್ತೀನಿ. ಹುಬ್ಬಳ್ಳಿಗೆ ಬಂದು ಈ ಕಾರ್ಯಕ್ರಮ ಮಾಡೋದಕ್ಕೆ ಒಂದು ದೊಡ್ಡ ಕಾರಣ ಇದೆ’ ಎನ್ನುವ ಮೂಲಕ ಕಿಚ್ಚ ಸುದೀಪ್ ಅವರು ಮಾತು ಆರಂಭಿಸಿದರು.

‘ಕೆಲವು ಮಾತು ಈ ಹುಬ್ಬಳಿಗೆ ಬಂದು ವೇದಿಕೆ ಮೇಲೆ ಮಾತಾಡಿದರೆ ಇಡೀ ಕರ್ನಾಟಕಕ್ಕೆ ಎಲ್ಲಿ ತಟ್ಟಬೇಕೋ ತಟ್ಟುತ್ತೆ, ಹೇಗೆ ತಟ್ಟಬೇಕೋ ತಟ್ಟುತ್ತೆ. ಯಾವ ಭರ್ಜರಿಯಲ್ಲಿ ತಟ್ಟಬೇಕೋ ತಟ್ಟುತ್ತೆ. ಪ್ರತಿ ಬಾರಿ ಈ ಊರಲ್ಲಿ ನಮಗೆ ಸಿಕ್ಕ ಪ್ರೀತಿ, ವಿಶ್ವಾಸ, ಬೆಂಬಲವನ್ನು ನಾವು ಎಂದಿಗೂ ಮರೆಯಲ್ಲ. ಈ ವೇದಿಕೆಗೆ ಬಂದ ಎಲ್ಲ ಸ್ನೇಹಿತರಿಗೆ, ಜನಸಾಗರಕ್ಕೆ, ನನ್ನ ಕುಟುಂಬಕ್ಕೆ ಧನ್ಯವಾದ’ ಎಂದು ಸುದೀಪ್ ಹೇಳಿದ್ದಾರೆ.

‘ಜುಲೈ 5ರಂದು ಒಂದು ಪ್ರಾಮಿಸ್ ಮಾಡಿದ್ದೆ. ಡಿಸೆಂಬರ್ 25ನೇ ತಾರೀಕು ಬಾಗಿಲು ತಟ್ಟುತ್ತೇನೆ ಅಂತ. ಜೋರಾಗಿ ತಟ್ಟುತ್ತಾ ಇದ್ದೇವೆ ನಾವು. ಈ ಜರ್ನಿಯಲ್ಲಿ 25ಕ್ಕೆ ಥಿಯೇಟರ್​​ನಲ್ಲಿ ಒಂದು ಸಿನಿಮಾ ಬಿಡುಗಡೆ ಆಗುತ್ತೆ. ಆದರೆ ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿ ಆಗುತ್ತಾ ಇದೆ. ಈ ವೇದಿಕೆ ಮೇಲಿಂದ ಹೇಳ್ತಾ ಇದ್ದೇನೆ. ಯುದ್ಧಕ್ಕೆ ಸಿದ್ಧ. ಯಾಕೆಂದರೆ ನಾವು ನಮ್ಮ ಮಾತಿಗೆ ಬದ್ಧ’ ಎಂದಿದ್ದಾರೆ ಸುದೀಪ್.

‘ಮಾರ್ಕ್’ ಸಿನಿಮಾ ಪ್ರೀ-ರಿಲೀಸ್ ಇವೆಂಟ್ ವಿಡಿಯೋ:

‘ಕೆಲವೊಮ್ಮೆ ನನಗೆ ಅನಿಸುತ್ತೆ, ಸೈಲೆಂಟ್ ಆಗಿ ಇರುವುದು ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲ. ಆದರೆ ನಿಮಗೋಸ್ಕರ, ನನ್ನ ಸ್ನೇಹಿತರು ನೀವೆಲ್ಲ ಚೆನ್ನಾಗಿರಬೇಕು ಎಂಬ ಒಂದೇ ಕಾರಣಕ್ಕೋಸ್ಕರ, ನಾವೆಲ್ಲರೂ ಒಳ್ಳೆಯ ಹೆಸರಲ್ಲಿ ಇರಬೇಕು ಎಂಬ ಕಾರಣಕ್ಕೋಸ್ಕರ ನಾನು ಬಾಯಿ ಮುಚ್ಚಿಕೊಂಡು ಇದ್ದೆ ಹೊರತು ಬಾಯಿ ಇಲ್ಲ ಅಂತಲ್ಲ’ ಎಂದಿದ್ದಾರೆ ಕಿಚ್ಚ ಸುದೀಪ್.

ಇದನ್ನೂ ಓದಿ: ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?

‘ನನ್ನಿಂದ, ನನ್ನ ಸಹನೆನಿಂದ ಬಹಳಷ್ಟು ಕಲ್ಲಿನ ತೂರಾಟ ನಿಮ್ಮ ಮೇಲೆ ಬೀಳುತ್ತಲೇ ಇರುತ್ತದೆ. ಅದನ್ನು ನೀವು ತಡೆದುಕೊಂಡು ಬರುತ್ತಲೇ ಇದ್ದೀರಿ. ಈಗ ಹೇಳ್ತಾ ಇದೀನಿ. ತಡೆಯೋ ತನಕ ತಡೆಯಿರಿ. ಮಾತಾಡೋ ಟೈಮ್​​ನಲ್ಲಿ ಮಾತಾಡಿ. ಮಾರ್ಕ್ ಒಂದು ಅದ್ಭುತವಾದ ಸಿನಿಮಾ. ಇಡೀ ತಂಡಕ್ಕೆ ಧನ್ಯವಾದ. ಡಿಸೆಂಬರ್ 25ಕ್ಕೆ ಇಲ್ಲಿನ ಕೂಗಾಟ ನನಗೆ ಬೆಂಗಳೂರಲ್ಲಿ ಕೇಳಿಸಬೇಕು’ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನ್ಯೂಝಿಲೆಂಡ್ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ – Kannada News | India Squad For New Zealand Series

ಭಾರತ ಮತ್ತು ನ್ಯೂಝಿಲೆಂಡ್ ನಡುವಣ 8 ಪಂದ್ಯಗಳ ಸರಣಿಯು ಜನವರಿ 11 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಮೊದಲಿಗೆ ಏಕದಿನ ಪಂದ್ಯಗಳನ್ನಾಡಲಾಗುತ್ತಿದ್ದು, ಇದಾದ ಬಳಿಕ ಟಿ20 ಸರಣಿ ಜರುಗಲಿದೆ. ಇದೀಗ ಟಿ20 ಸರಣಿಗಾಗಿ 15 ಸದಸ್ಯರುಗಳ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದ ನಾಯಕನಾಗಿ ಸೂರ್ಯಕುಮಾರ್ ಯಾದವ್ ಕಾಣಿಸಿಕೊಂಡರೆ, ಉಪನಾಯಕನಾಗಿ ಅಕ್ಷರ್ ಪಟೇಲ್ ಕಣಕ್ಕಿಳಿಯಲಿದ್ದಾರೆ.

ಇದಕ್ಕೂ ಮುನ್ನ ನಡೆದ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಶುಭ್​ಮನ್ ಗಿಲ್ ಉಪನಾಯಕನಾಗಿ ಕಾಣಿಸಿಕೊಂಡಿದ್ದರು. ಇದೀಗ ಅವರನ್ನು ಟಿ20 ತಂಡದಿಂದ ಕೈ ಬಿಡಲಾಗಿದ್ದು, ಅವರ ಬದಲಿಗೆ ಇಶಾನ್ ಕಿಶನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಹಾಗೆಯೇ ಜಿತೇಶ್ ಶರ್ಮಾ ಬದಲಿಗೆ ರಿಂಕು ಸಿಂಗ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅದರಂತೆ ಕಿವೀಸ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಈ ಕೆಳಗಿನಂತಿವೆ…

ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

ಇನ್ನು ಈ ಇದೇ ತಂಡವೇ ಫೆಬ್ರವರಿ 7 ರಿಂದ ಶುರುವಾಗಲಿರುವ ಟಿ20 ವಿಶ್ವಕಪ್​ನಲ್ಲೂ ಕಣಕ್ಕಿಳಿಯಲಿದೆ. ಅಂದರೆ ನ್ಯೂಝಿಲೆಂಡ್ ವಿರುದ್ಧದ ಸರಣಿಯ ಮೂಲಕ 15 ಸದಸ್ಯರುಗಳ ಬಳಗವು ಟಿ20 ವಿಶ್ವಕಪ್​ಗೆ ಸಿದ್ಧತೆಗಳನ್ನು ನಡೆಸಲಿದೆ.

ಭಾರತ vs ನ್ಯೂಝಿಲೆಂಡ್ ಏಕದಿನ ಸರಣಿ ವೇಳಾಪಟ್ಟಿ

  • ಮೊದಲ ಏಕದಿನ ಪಂದ್ಯ – ಜನವರಿ 11 – ವಡೋದರಾ – ಮಧ್ಯಾಹ್ನ 1:30
  • ಎರಡನೇ ಏಕದಿನ ಪಂದ್ಯ – ಜನವರಿ 14 – ರಾಜ್‌ಕೋಟ್ – ಮಧ್ಯಾಹ್ನ 1:30
  • ಮೂರನೇ ಏಕದಿನ ಪಂದ್ಯ – ಜನವರಿ 18 – ಇಂದೋರ್ – ಮಧ್ಯಾಹ್ನ 1:30

ಇದನ್ನೂ ಓದಿ: ಆಸ್ಟ್ರೇಲಿಯಾ ದಾಂಡಿಗರ ಸಿಡಿಲಬ್ಬರ… ಟಿ20 ದಾಖಲೆಗಳು ಧೂಳೀಪಟ

ಭಾರತ vs ನ್ಯೂಝಿಲೆಂಡ್ ಟಿ20 ಸರಣಿ ವೇಳಾಪಟ್ಟಿ

  • ಮೊದಲ ಟಿ20 ಪಂದ್ಯ – ಜನವರಿ 21 – ನಾಗ್ಪುರ – ರಾತ್ರಿ 7:00
  • ಎರಡನೇ ಟಿ20 ಪಂದ್ಯ – ಜನವರಿ 23 – ರಾಯ್ಪುರ – ರಾತ್ರಿ 7:00
  • ಮೂರನೇ ಟಿ20 ಪಂದ್ಯ – ಜನವರಿ 25 – ಗುವಾಹಟಿ – ರಾತ್ರಿ 7:00
  • ನಾಲ್ಕನೇ ಟಿ20 ಪಂದ್ಯ – ಜನವರಿ 28 – ವಿಶಾಖಪಟ್ಟಣ – ರಾತ್ರಿ 7:00
  • ಐದನೇ ಟಿ20 ಪಂದ್ಯ – ಜನವರಿ 31 – ತಿರುವನಂತಪುರಂ – ರಾತ್ರಿ 7:00

Source link

ಚಾಮರಾಜನಗರದಲ್ಲಿ ಶುರುವಾಯ್ತು ಆಪರೇಶನ್ ಬೀಸ್ಟ್! ಹುಲಿ ಸೆರೆಗೆ ಈಗಲ್ ಡ್ರೋನ್ ಕ್ಯಾಮರಾ ಮೂಲಕ ಕಾರ್ಯಾಚರಣೆ – Kannada News | Operation Beast: Chamarajanagar Eagle Drone Tiger Combing and Capture

ಚಾಮರಾಜನಗರ, ಡಿಸೆಂಬರ್ 21: ಚಾಮರಾಜನಗರದಲ್ಲಿ ಇತ್ತೀಚೆಗೆ ಹುಲಿಗಳ ಹಾವಳಿ ಹೆಚ್ಚಿರುವ ಕಾರಣ, ಅರಣ್ಯ ಇಲಾಖೆಯು ಆಪರೇಷನ್ ಬೀಸ್ಟ್ ಹೆಸರಿನಲ್ಲಿ ಬೃಹತ್ ಕೂಂಬಿಂಗ್ ಕಾರ್ಯಾಚರಣೆಯನ್ನು ಹಮ್ಮಿಕೊಂಡಿದೆ. ಬಂಡೀಪುರ ಹುಲಿ ಮೀಸಲು ಅರಣ್ಯ ಸಿಬ್ಬಂದಿ ಹುಲಿ ಸೆರೆ ಹಿಡಿಯಲು ಮುಂದಾಗಿದ್ದು, ಈ ಕಾರ್ಯಾಚರಣೆಯಲ್ಲಿ ಡ್ರೋನ್ ಕ್ಯಾಮೆರಾಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಸಿಎಫ್ ಪ್ರಭಾಕರನ್ ಅವರ ಸೂಚನೆಯ ಮೇರೆಗೆ, ವಿಶೇಷವಾಗಿ ಟೈಗರ್ ಕೂಂಬಿಂಗ್‌ಗಾಗಿಯೇ ಸಿದ್ಧಪಡಿಸಲಾದ ಈಗಲ್ ಡ್ರೋನ್ ಕ್ಯಾಮೆರಾವನ್ನು ಬಳಸಲಾಗುತ್ತಿದೆ.

ಭೀಮನ ಬೀಡು ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಲಿಯ ಚಲನವಲನವನ್ನು ಪತ್ತೆಹಚ್ಚಲು ಈ ಡ್ರೋನ್ ನೆರವಾಗುತ್ತಿದೆ. ಕಳೆದ ಎರಡು-ಮೂರು ದಿನಗಳಿಂದ ಅರಣ್ಯ ಸಿಬ್ಬಂದಿ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಭೀಮನ ಬೀಡು ಗ್ರಾಮದ ಹೊರ ವಲಯದಲ್ಲಿನ ನೀರು ಹರಿಯುವ ಪ್ರದೇಶದಲ್ಲಿ ಹುಲಿಯ ಇರುವಿಕೆ ಈಗಾಗಲೇ ಖಚಿತವಾಗಿದೆ. ಈ ಹಿಂದೆ ಇದೇ ಡ್ರೋನ್ ಕ್ಯಾಮೆರಾದಿಂದ ಸಿಕ್ಕ ಮಾಹಿತಿ ಆಧಾರದ ಮೇಲೆ ನಾಲ್ಕು ವರ್ಷದ ಹುಲಿಯನ್ನು ಯಶಸ್ವಿಯಾಗಿ ಸೆರೆಹಿಡಿಯಲಾಗಿತ್ತು. ಈಗಲೂ ಡ್ರೋನ್ ಕಾರ್ಯಾಚರಣೆ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಚಳಿಗಾಲದ ಎಫೆಕ್ಟ್‌: ಸಾವಿರ ರೂ ಗಡಿಯತ್ತ ಮಟನ್‌ ದರ; ನಾನ್‌ವೆಜ್‌ ಪ್ರಿಯರಿಗೆ ಶಾಕ್​​! – Kannada News | Non Veg Price Shock in Karnataka: Mutton and Chicken Rates Surge Amid Cold Wave

ಬೆಂಗಳೂರು, ಡಿಸೆಂಬರ್​​​ 21: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಚಳಿ (Cold) ಹಾಗೂ ಶೀತಗಾಳಿ ಶುರುವಾಗಿದೆ. ಚಳಿ ಮತ್ತು ಗಾಳಿಗೆ ಥರಗುಟ್ಟುತ್ತಿರುವ ಜನರು ಮಾಂಸಹಾರಕ್ಕೆ (Non-Veg) ಹೆಚ್ಚು ಮೊರೆ ಹೋಗುತ್ತಿದ್ದಾರೆ. ಕುರಿ, ಕೋಳಿ ಉತ್ಪಾದನೆಯಲ್ಲಿ ಕುಸಿತ ಕಂಡಿದೆ. ಅದರಲ್ಲೂ ಕ್ರಿಸ್‌ಮಸ್‌ ಹಾಗೂ ಹೊಸ ವರ್ಷದಿಂದಾಗಿ ಬೇಡಿಕೆ ಹೆಚ್ಚಿದ್ರಿಂದ ರೇಟ್‌ ಸಾವಿರ ಗಡಿ ಮುಟ್ಟಿದ್ದು, ನಾನ್‌ವೆಜ್‌ ಪ್ರಿಯರಿಗಂತೂ ಬಿಗ್ ಶಾಕ್​ ಉಂಟಾಗಿದೆ.

ರಾಜ್ಯದಲ್ಲಿ ಅತಿಯಾದ ಚಳಿ ಹಿನ್ನೆಲೆ ಮಟನ್, ಚಿಕನ್ ದರ ಏರಿಕೆಯಾಗಿದೆ. ಸಾವಿರ ಗಡಿಯತ್ತ ಮಟನ್ ದರ ಏರಿಕೆಯ ಸಾಧ್ಯತೆ ಇದ್ದು, ಕೋಳಿ ಬೆಲೆಯೂ ಏರಿಕೆ ಕಂಡಿರುವುದು ನಾನ್‌ವೆಜ್‌ ಪ್ರಿಯರಿಗೆ ಬೇಸರ ಉಂಡಾಗಿದೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಚಳಿಯೋ ಚಳಿ; 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​!

ತೀವ್ರಚಳಿ, ಹವಮಾನದಲ್ಲಿ ಬದಲಾವಣೆ ಹಿನ್ನಲೆ ಕುರಿ, ಕೋಳಿ ಉತ್ಪದಾನೆ ಕುಸಿತವಾಗಿದೆ. ಜೊತೆಗೆ ಕ್ರಿಸ್ ಮಸ್ ಹಾಗೂ ನ್ಯೂಇಯರ್ ಹಿನ್ನಲೆ ಮಟನ್ ಹಾಗೂ ಚಿಕನ್, ಮೊಟ್ಟೆಗೆ ಬೇಡಿಕೆ ಹೆಚ್ಚಿದೆ. ದಾಖಲೆಯ ಪ್ರಮಾಣದಲ್ಲಿ ಚಿಕನ್ ಹಾಗೂ ಮಟನ್ ದರದಲ್ಲಿ ದರ ಏರಿಕೆಯಾಗಿದೆ.

ಮಟನ್‌ ರೇಟ್‌ 900 ರೂ

ಕಳೆದೊಂದು ತಿಂಗಳಿನಿಂದ ಚಿಕನ್ ಹಾಗೂ ಮಟನ್​​ ದರದಲ್ಲಿ ಗರಿಷ್ಠ ಏರಿಕೆ ಕಂಡಿದೆ. ಚಳಿಯಿಂದ ಕುರಿ ಬೆಳವಣಿಗೆ ಕುಸಿತವಾದ ಹಿನ್ನಲೆ ಕೆಜಿ ಮಟನ್​​ಗೆ 900 ರೂ. ಇದ್ದು, ಮುಂದಿನ ವಾರ ಒಂದು ಸಾವಿರ ರೂ. ಆಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ 230 ರಿಂದ 240 ರೂ. ರವರಗೆ ಇರುತ್ತಿದ್ದ ಚಿಕನ್ ದರ ಇದೀಗ ಕೆಜಿಗೆ  300 ರಿಂದ 310 ರೂ. ಗೆ ಏರಿಕೆ ಕಂಡಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ: ಮಕ್ಕಳು, ಗರ್ಭಿಣಿಯರಿಗೆ ಅಪಾಯ; ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ

ಅತಿಯಾದ ಹವಾಮಾನ ಹಾಗೂ ಬೇಡಿಕೆ ಹೆಚ್ಚಾದ ಹಿನ್ನಲೆ ದರ ಏರಿಕೆಯಾಗಿದೆ. ಮೊಟ್ಟೆಯಲ್ಲಿ ಕ್ಯಾನ್ಸರ್ ಅಂಶದ ಚರ್ಚೆ ನಡುವೆ ಹೊಸ ವರ್ಷ ಹಾಗೂ ಕ್ರಿಸ್ ಮಸ್ ಹಬ್ಬದ ಬೇಡಿಕೆ ಮಧ್ಯೆ ಮಾಂಸ ಪ್ರಿಯರಿಗೆ ಇದು ನಿಜಕ್ಕೂ ಆಘಾತ ಉಂಟುಮಾಡಿದೆ.

ಒಟ್ಟಿನಲ್ಲಿ ಅತಿಯಾದ ಚಳಿ ಹಾಗೂ ಹೆಚ್ಚಾದ ಬೇಡಿಕೆಯಿಂದ ಬೆಲೆ ಏರಿಕೆ ನಾನ್ ವೆಜ್ ಪ್ರಿಯರಿಗೆ ಟೆನ್ಷನ್​​ ಶುರುವಾಗಿದ್ದು, ಬೆಲೆ ಏರಿಕೆಗೆ ಕಂಗೆಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link