All posts by nagaraj11081993

ಎಲೆಕ್ಟ್ರಿಕ್ ಕಾರು ಪ್ರಿಯರಿಗೆ ಶಾಕ್: ಇನ್ಮುಂದೆ ಕರ್ನಾಟಕದಲ್ಲಿ ಇವಿ ವಾಹನಗಳೂ ದುಬಾರಿ! ಕಾರಣ ಇಲ್ಲಿದೆ

ಎಲೆಕ್ಟ್ರಿಕ್ ಕಾರು ಪ್ರಿಯರಿಗೆ ಶಾಕ್: ಇನ್ಮುಂದೆ ಕರ್ನಾಟಕದಲ್ಲಿ ಇವಿ ವಾಹನಗಳೂ ದುಬಾರಿ! ಕಾರಣ ಇಲ್ಲಿದೆ

ಬೆಂಗಳೂರು, ಏಪ್ರಿಲ್ 1: ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳನ್ನು (Electric Vehicle) ಉತ್ತೇಜಿಸಲು ಕಳೆದ ಹತ್ತು ವರ್ಷಗಳಿಂದ ನೀಡಲಾಗುತ್ತಿದ್ದ ರಸ್ತೆ ತೆರಿಗೆ (Road Tax) ವಿನಾಯಿತಿಯನ್ನು ಹಿಂಪಡೆಯಲು ಕರ್ನಾಟಕ ಸರ್ಕಾರ ಮುಂದಾಗಿದೆ. ಈ ಸಂಬಂಧ ‘ಕರ್ನಾಟಕ ಮೋಟಾರು ವಾಹನ ತೆರಿಗೆ (ತಿದ್ದುಪಡಿ) ವಿಧೇಯಕ 2026’ಕ್ಕೆ ಈಗಾಗಲೇ ಅನುಮೋದನೆ ಪಡೆಯಲಾಗಿದ್ದು, ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

ಯಾವ ಇವಿ ವಾಹನಕ್ಕೆ ಎಷ್ಟು ತೆರಿಗೆ?

ಹೊಸ ನಿಯಮದ ಪ್ರಕಾರ, ಎಲೆಕ್ಟ್ರಿಕ್ ಕಾರುಗಳು, ಜೀಪುಗಳು ಮತ್ತು ಖಾಸಗಿ ಬಸ್‌ಗಳ ಬೆಲೆಯ ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಆ ಮಾಹಿತಿ ಇಲ್ಲಿದೆ.

  • 10 ಲಕ್ಷ ರೂ.ವರೆಗಿನ ಕಾರುಗಳಿಗೆ: ಶೇ 5 ರಷ್ಟು ತೆರಿಗೆ.
  • 10 ರೂ.ನಿಂದ 25 ಲಕ್ಷ ರೂ.ವರೆಗಿನ ಕಾರುಗಳಿಗೆ: ಶೇ 8 ರಷ್ಟು ತೆರಿಗೆ.
  • 25 ಲಕ್ಷ ರೂ.ಗಿಂತ ಹೆಚ್ಚಿನ ಬೆಲೆಯ ಕಾರುಗಳಿಗೆ: ಶೇ 10 ರಷ್ಟು ತೆರಿಗೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗಿಲ್ಲ ಟ್ಯಾಕ್ಸ್

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಈ ಹೊಸ ತೆರಿಗೆ ಅನ್ವಯಿಸುವುದಿಲ್ಲ, ಅವುಗಳಿಗೆ ಹಳೆಯ ವಿನಾಯಿತಿ ಮುಂದುವರಿಯಲಿದೆ.

ಸರ್ಕಾರದ ನಿರ್ಧಾರಕ್ಕೆ ಕಾರಣವೇನು?

ಈ ಹೊಸ ತೆರಿಗೆಯಿಂದ ರಾಜ್ಯ ಸರ್ಕಾರಕ್ಕೆ ಸುಮಾರು 259 ಕೋಟಿ ರೂ. ಹೆಚ್ಚುವರಿ ಆದಾಯ ಬರಲಿದೆ. 2016 ರಿಂದ ನೀಡಲಾಗುತ್ತಿದ್ದ ಸಂಪೂರ್ಣ ವಿನಾಯಿತಿಯನ್ನು ಈಗ ಹಂತ ಹಂತವಾಗಿ ಹಿಂಪಡೆಯಲಾಗುತ್ತಿದೆ. ಆದರೂ, ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳ ಮೇಲಿನ ತೆರಿಗೆ ಇಂದಿಗೂ ಕಡಿಮೆ ಇದೆ (ಸಾಮಾನ್ಯ ಕಾರುಗಳಿಗೆ ಶೇ 13 ರಿಂದ ಶೇ 18 ರಷ್ಟು ತೆರಿಗೆ ಇದೆ) ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

2024 ರಲ್ಲೇ ಎಲ್ಲಾ ಎಲೆಕ್ಟ್ರಿಕ್ ಕಾರುಗಳ ಮೇಲೆ ಒಂದು ಬಾರಿಯ ಲೈಫ್​ಟೈಂ ತೆರಿಗೆ ವಿಧಿಸುವ ಯೋಜನೆಗಳಿದ್ದವು. ಆದರೆ ತೀವ್ರ ವಿರೋಧದ ನಂತರ 25 ಲಕ್ಷ ರೂ.ಗಿಂತ ಹೆಚ್ಚಿನ ಬೆಲೆಯ ವಾಹನಗಳಿಗೆ ಮಾತ್ರ ತೆರಿಗೆ ವಿಧಿಸುವ ನಿರ್ಧಾರಕ್ಕೆ ಬರಲಾಗಿತ್ತು. ನೋಂದಣಿ ವಿಷಯದಲ್ಲಿ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡಿನ ನಂತರ ಕರ್ನಾಟಕವು ಭಾರತದಲ್ಲಿ ನಾಲ್ಕನೇ ಅತಿದೊಡ್ಡ ವಾಹನ ಮಾರುಕಟ್ಟೆಯಾಗಿದೆ. ಹೆಚ್ಚಿನ ರಾಜ್ಯಗಳು ವಿದ್ಯುತ್ ವಾಹನಗಳಿಗೆ ತೆರಿಗೆ ವಿನಾಯಿತಿ ಅಥವಾ ರಿಯಾಯಿತಿಗಳನ್ನು ನೀಡುತ್ತವೆ. ಆದಾಗ್ಯೂ ಗುಜರಾತ್ ಮತ್ತು ಕೇರಳದಂತಹ ಕೆಲವು ರಾಜ್ಯಗಳು ತೆರಿಗೆ ವಿಧಿಸುತ್ತವೆ.

ಖರೀದಿದಾರರ ಮೇಲೆ ಪ್ರಭಾವ

ಬೆಂಗಳೂರಿನಲ್ಲಿ ಈಗಾಗಲೇ 4.1 ಲಕ್ಷ ಎಲೆಕ್ಟ್ರಿಕ್ ವಾಹನಗಳಿದ್ದು, ಅದರಲ್ಲಿ ಕಾರುಗಳ ಸಂಖ್ಯೆ ಸುಮಾರು 37,000 ದಾಟಿದೆ. ಈಗ ಏಕಾಏಕಿ ತೆರಿಗೆ ವಿಧಿಸಿರುವುದರಿಂದ ಹೊಸದಾಗಿ ಕಾರು ಖರೀದಿಸುವವರ ಜೇಬಿಗೆ ಕತ್ತರಿ ಬೀಳಲಿದ್ದು, ಎಲೆಕ್ಟ್ರಿಕ್ ವಾಹನಗಳ ಖರೀದಿ ಪ್ರಮಾಣ ತುಸು ಕಡಿಮೆಯಾಗುವ ಆತಂಕ ಎದುರಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

UPSC Free Coaching: UPSC ಆಕಾಂಕ್ಷಿಗಳಿಗೆ ಗುಡ್​ನ್ಯೂಸ್; ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳ ತಯಾರಿಗಾಗಿ ಉಚಿತ ವಸತಿ ಸಹಿತ ತರಬೇತಿ

ನಾಗರಿಕ ಸೇವಾ ಪರೀಕ್ಷೆಗಳ (UPSC) ತಯಾರಿಯಲ್ಲಿ ತೊಡಗಿರುವ ಅಭ್ಯರ್ಥಿಗಳಿಗೆ ದೆಹಲಿಯ ಪ್ರತಿಷ್ಠಿತ ಜಾಮಿಯಾ ಮಿಲಿಯಾ ಇಸ್ಲಾಮಿಯಾ (JMI) ವಿಶ್ವವಿದ್ಯಾಲಯವು ಒಂದು ಅದ್ಭುತ ಅವಕಾಶವನ್ನು ಹೊತ್ತು ತಂದಿದೆ. 2027ರ ಯುಪಿಎಸ್‌ಸಿ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳ ತಯಾರಿಗಾಗಿ ಉಚಿತ ವಸತಿ ಸಹಿತ ತರಬೇತಿಯನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕರ್ನಾಟಕದ ಅಭ್ಯರ್ಥಿಗಳಿಗೆ ಗಮನಾರ್ಹ ಅಂಶ:

ಈ ತರಬೇತಿ ಕಾರ್ಯಕ್ರಮದ ಪ್ರವೇಶ ಪರೀಕ್ಷೆಯು ದೇಶದ ಪ್ರಮುಖ 13 ನಗರಗಳಲ್ಲಿ ನಡೆಯಲಿದ್ದು, ನಮ್ಮ ಬೆಂಗಳೂರಿನಲ್ಲಿಯೂ ಪರೀಕ್ಷಾ ಕೇಂದ್ರವಿರಲಿದೆ. ಇದರಿಂದಾಗಿ ಕರ್ನಾಟಕದ ವಿದ್ಯಾರ್ಥಿಗಳು ದೆಹಲಿ ಅಥವಾ ಇತರ ರಾಜ್ಯಗಳಿಗೆ ಪ್ರಯಾಣಿಸದೆ ಸುಲಭವಾಗಿ ಪರೀಕ್ಷೆ ಬರೆಯಬಹುದಾಗಿದೆ.

ಯಾರಿಗೆ ಈ ಸೌಲಭ್ಯ ಉಚಿತ?

ಈ ವಿಶೇಷ ತರಬೇತಿ ಕಾರ್ಯಕ್ರಮವು ಮುಖ್ಯವಾಗಿ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಸಂಪೂರ್ಣವಾಗಿ ಉಚಿತವಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ತರಬೇತಿಯ ಜೊತೆಗೆ ಹಾಸ್ಟೆಲ್ ಸೌಲಭ್ಯ ಮತ್ತು 24×7 ಕಾರ್ಯನಿರ್ವಹಿಸುವ ಸುಸಜ್ಜಿತ ಗ್ರಂಥಾಲಯದ ಸೌಲಭ್ಯವೂ ದೊರೆಯಲಿದೆ.

ಪ್ರಮುಖ ದಿನಾಂಕಗಳು:

ಒಂದು ವೇಳೆ ನೀವು ಈ ಅವಕಾಶವನ್ನು ಬಳಸಿಕೊಳ್ಳಲು ಬಯಸಿದರೆ, ಈ ಕೆಳಗಿನ ದಿನಾಂಕಗಳನ್ನು ಡೈರಿಯಲ್ಲಿ ನೋಟ್ ಮಾಡಿಕೊಳ್ಳಿ:

  • ಅರ್ಜಿ ಸಲ್ಲಿಸಲು ಆರಂಭ: ಏಪ್ರಿಲ್ 1, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 26, 2026
  • ಪ್ರವೇಶ ಪರೀಕ್ಷೆ ನಡೆಯುವ ದಿನಾಂಕ: ಜೂನ್ 6, 2026
  • ಅಂತಿಮ ಫಲಿತಾಂಶ ಪ್ರಕಟಣೆ: ಆಗಸ್ಟ್ 7, 2026
  • ತರಗತಿಗಳ ಪ್ರಾರಂಭ: ಸೆಪ್ಟೆಂಬರ್ 1, 2026

ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಉದ್ಯೋಗ ಪಡೆಯುವುದು ಹೇಗೆ? ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ಮಾದರಿ:

ಒಟ್ಟು 100 ಸೀಟುಗಳಿಗಾಗಿ ಈ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಪರೀಕ್ಷೆಯು ಯುಪಿಎಸ್‌ಸಿ ಮಾದರಿಯನ್ನೇ ಹೊಂದಿರುತ್ತದೆ.

  • ಪತ್ರಿಕೆ-1 (ಸಾಮಾನ್ಯ ಅಧ್ಯಯನ): 60 ವಸ್ತುನಿಷ್ಠ (Objective) ಪ್ರಶ್ನೆಗಳಿರುತ್ತವೆ. ತಪ್ಪು ಉತ್ತರಕ್ಕೆ ನಕಾರಾತ್ಮಕ ಅಂಕಗಳಿರುತ್ತವೆ (1/3rd Negative Marking).
  • ಪತ್ರಿಕೆ-2 (ಪ್ರಬಂಧ): ಇಲ್ಲಿ ಅಭ್ಯರ್ಥಿಗಳು ಎರಡು ಪ್ರಬಂಧಗಳನ್ನು ಬರೆಯಬೇಕು. ಮೊದಲ ಪತ್ರಿಕೆಯಲ್ಲಿ ಅಗ್ರ 900 ಸ್ಥಾನ ಪಡೆದವರ ಪ್ರಬಂಧಗಳನ್ನು ಮಾತ್ರ ಮೌಲ್ಯಮಾಪನ ಮಾಡಲಾಗುತ್ತದೆ.
  • ಸಂದರ್ಶನ: ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ 30 ಅಂಕಗಳ ಸಂದರ್ಶನವಿರುತ್ತದೆ.

ಅಭ್ಯರ್ಥಿಗಳು ಇಂಗ್ಲಿಷ್, ಹಿಂದಿ ಅಥವಾ ಉರ್ದು ಈ ಮೂರರಲ್ಲಿ ತಮಗೆ ಇಷ್ಟವಾದ ಭಾಷೆಯಲ್ಲಿ ಪರೀಕ್ಷೆ ಬರೆಯುವ ಆಯ್ಕೆಯನ್ನು ಹೊಂದಿರುತ್ತಾರೆ.

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತರು ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಅಧಿಕೃತ ಪ್ರವೇಶ ಪೋರ್ಟಲ್ admission.jmi.ac.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಉನ್ನತ ಮಟ್ಟದ ತರಬೇತಿ ಮತ್ತು ಉತ್ತಮ ಕಲಿಕಾ ಪರಿಸರವನ್ನು ಹೊಂದಿರುವ ಈ ಅಕಾಡೆಮಿಯು ದೇಶಕ್ಕೆ ಹಲವಾರು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ನೀಡಿದ ಹೆಗ್ಗಳಿಕೆ ಹೊಂದಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: RCB ತಂಡದ ಏಪ್ರಿಲ್ ತಿಂಗಳ ವೇಳಾಪಟ್ಟಿ ಇಲ್ಲಿದೆ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಉದ್ಘಾಟನಾ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ದ್ವಿತೀಯ ಪಂದ್ಯಕ್ಕಾಗಿ ಸಜ್ಜಾಗುತ್ತಿದೆ. ಆರ್‌ಸಿಬಿ ತನ್ನ ಎರಡನೇ ಪಂದ್ಯದಲ್ಲಿ ಬದ್ಧ ವೈರಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನು ಎದುರಿಸಲಿದೆ. ಹೈವೋಲ್ಟೇಜ್ ಪಂದ್ಯವೆಂದೇ ಬಿಂಬಿತವಾಗಿರುವ ಈ ಮ್ಯಾಚ್​ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

ಪಂದ್ಯ ಯಾವಾಗ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯವು ಏಪ್ರಿಲ್ 5 ರಂದು ನಡೆಯಲಿದೆ. ಅಂದರೆ ಮುಂದಿನ ಭಾನುವಾರ ಬದ್ಧವೈರಿಗಳು ಮುಖಾಮುಖಿಯಾಗಲಿದ್ದಾರೆ.

ಪಂದ್ಯ ನಡೆಯುವುದು ಎಲ್ಲಿ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಎರಡನೇ ಪಂದ್ಯವನ್ನು ಸಹ ತವರಿನಲ್ಲೇ ಆಡಲಿದೆ. ಅಂದರೆ ಆರ್​ಸಿಬಿ-ಸಿಎಸ್​ಕೆ ನಡುವಣ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವಹಿಸಲಿದೆ.

ಎಷ್ಟು ಗಂಟೆಗೆ ಮ್ಯಾಚ್ ಶುರು?

ಆರ್​ಸಿಬಿ ಮತ್ತು ಸಿಎಸ್​ಕೆ ನಡುವಣ ಪಂದ್ಯವು ಭಾನುವಾರ ರಾತ್ರಿ 7.30 ರಿಂದ ಶುರುವಾಗಲಿದೆ. ಇನ್ನು ಈ ಪಂದ್ಯದ ಟಾಸ್ ಪ್ರಕ್ರಿಯೆ 7 ಗಂಟೆಗೆ ನಡೆಯಲಿದೆ.

ರಣರೋಚಕದ ಪೈಪೋಟಿ ನಿರೀಕ್ಷೆ:

ಆರ್​​ಸಿಬಿ ತಂಡದ ತವರು ಮೈದಾನವಾದ ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಈ ಪಂದ್ಯವು ಅತ್ಯಂತ ರೋಚಕವಾಗಿರಲಿದೆ. ಭಾನುವಾರ ಪಂದ್ಯವಿರುವುದರಿಂದ ಕ್ರೀಡಾಂಗಣವು ಕಿಕ್ಕಿರಿದು ತುಂಬುವ ನಿರೀಕ್ಷೆಯಿದೆ. ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಹಣಾಹಣಿಯು ಯಾವಾಗಲೂ “ಸೌತ್ ಡರ್ಬಿ” ಎಂದೇ ಪ್ರಸಿದ್ಧವಾಗಿದ್ದು, ಅಭಿಮಾನಿಗಳಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ.

ಅದರಲ್ಲೂ ಉಭಯ ತಂಡಗಳ ನಡುವಣ ಪೈಪೋಟಿಯು ಸದಾ ಪೈಪೋಟಿಯಿಂದ ಕೂಡಿರುವುದರಿಂದ ಈ ಬಾರಿ ಕೂಡ ಜಿದ್ದಾಜಿದ್ದಿ ಹೋರಾಟವನ್ನು ನಿರೀಕ್ಷಿಸಬಹುದು.

ಉಭಯ ತಂಡಗಳು:

ಚೆನ್ನೈ ಸೂಪರ್ ಕಿಂಗ್ಸ್ ತಂಡ: ರುತುರಾಜ್ ಗಾಯಕ್‌ವಾಡ್ (ನಾಯಕ), ಆಯುಷ್ ಮ್ಹಾತ್ರೆ, ಎಂಎಸ್ ಧೋನಿ, ಸಂಜು ಸ್ಯಾಮ್ಸನ್, ಡೆವಾಲ್ಡ್ ಬ್ರೆವಿಸ್, ಉರ್ವಿಲ್ ಪಟೇಲ್, ಶಿವಂ ದುಬೆ, ಜೇಮಿ ಓವರ್‌ಟನ್, ರಾಮಕೃಷ್ಣ ಘೋಷ್, ನೂರ್ ಅಹ್ಮದ್, ಖಲೀಲ್ ಅಹ್ಮದ್, ಅನ್ಶುಲ್ ಕಂಬೋಜ್, ಗುರ್ಜಪ್ನೀತ್ ಸಿಂಗ್, ಶ್ರೇಯಸ್ ಗೋಪಾಲ್, ಮುಖೇಶ್ ಚೌಧರಿ, ನಾಥನ್ ಎಲ್ಲಿಸ್, ಅಕೇಲ್ ಹೊಸೈನ್, ಪ್ರಶಾಂತ್ ವೀರ್, ಕಾರ್ತಿಕ್ ಶರ್ಮಾ, ಮ್ಯಾಥ್ಯೂ ಶಾರ್ಟ್, ಅಮನ್ ಖಾನ್, ಸರ್ಫರಾಝ್ ಖಾನ್, ಮ್ಯಾಟ್ ಹೆನ್ರಿ, ರಾಹುಲ್ ಚಹರ್, ಝಾಕ್ ಫೌಲ್ಕ್ಸ್.

ಇದನ್ನೂ ಓದಿ: IPL 2026: ಗೆಲುವಿನ ಬೆನ್ನಲ್ಲೇ ಶ್ರೇಯಸ್ ಅಯ್ಯರ್​​ಗೆ 12 ಲಕ್ಷ ರೂ. ದಂಡ..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್​ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಯಶ್ ದಯಾಳ್, ರಾಸಿಖ್ ಸಲಾಂ, ವೆಂಕಟೇಶ್ ಅಯ್ಯರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾನ್.

ಆರ್​ಸಿಬಿ ತಂಡದ ಏಪ್ರಿಲ್ ತಿಂಗಳ ವೇಳಾಪಟ್ಟಿ:

  • ಏಪ್ರಿಲ್ 15: vs ಚೆನ್ನೈ ಸೂಪರ್ ಕಿಂಗ್ಸ್ (ಬೆಂಗಳೂರು)
  • ಏಪ್ರಿಲ್ 10: vs ರಾಜಸ್ಥಾನ್ ರಾಯಲ್ಸ್ (ಗುವಾಹಟಿ)
  • ಏಪ್ರಿಲ್ 12: vs ಮುಂಬೈ ಇಂಡಿಯನ್ಸ್ (ಮುಂಬೈ)
  • ಏಪ್ರಿಲ್ 15: vs ಲಕ್ನೋ ಸೂಪರ್ ಜೈಂಟ್ಸ್ (ಬೆಂಗಳೂರು)
  • ಏಪ್ರಿಲ್ 18: vs ಡೆಲ್ಲಿ ಕ್ಯಾಪಿಟಲ್ಸ್ (ಬೆಂಗಳೂರು)
  • ಏಪ್ರಿಲ್ 24: vs ಗುಜರಾತ್ ಟೈಟಾನ್ಸ್​ (ಬೆಂಗಳೂರು)
  • ಏಪ್ರಿಲ್ 27: vs ಡೆಲ್ಲಿ ಕ್ಯಾಪಿಟಲ್ಸ್ (ದೆಹಲಿ)
  • ಏಪ್ರಿಲ್ 30: vs ಗುಜರಾತ್ ಟೈಟಾನ್ಸ್ (ಅಹಮದಾಬಾದ್)

 

Source link

ಏಪ್ರಿಲ್ 4ರಿಂದ ಜೀ ಕನ್ನಡದಲ್ಲಿ ‘ಜೋಡಿ ನಂ.1′ ಶೋ; ಜಡ್ಜ್​​-ಸ್ಪರ್ಧಿ ಇಬ್ಬರೂ ಸೂಪರ್

ಜೀ ಕನ್ನಡದಲ್ಲಿ ಹೊಸ ಹೊಸ ರಿಯಾಲಿಟಿ ಶೋಗಳು ಪ್ರಸಾರ ಕಾಣುತ್ತಾ ಇರುತ್ತವೆ. ಎಲ್ಲಾ ರಿಯಾಲಿಟಿ ಶೋಗಳು ಸಾಕಷ್ಟು ಮನರಂಜನೆ ನೀಡುವ ರೀತಿಯಲ್ಲಿ ಇದೆ. ಈಗ ಹೊಸ ರಿಯಾಲಿಟಿ ಶೋ ಪ್ರಸಾರ ಕಾಣಲು ರೆಡಿ ಆಗಿದೆ. ಅದುವೇ ‘ಜೋಡಿ ನಂಬರ್ 1’. ಏಪ್ರಿಲ್ 4ರಂದು ರಾತ್ರಿ 9 ಗಂಟೆಗೆ ಈ ಶೋ ಪ್ರಸಾರ ಕಾಣಲಿದೆ. ‘ಅಮೃತಧಾರೆ’ ಧಾರಾವಾಹಿ ಜೋಡಿ ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ಸೇರಿದಂತೆ ಅನೇಕರು ಜಡ್ಜ್ ಸ್ಥಾನದಲ್ಲಿ ಇದ್ದಾರೆ ಅನ್ನೋದು ವಿಶೇಷ.

ಜೀ ಕನ್ನಡದಲ್ಲಿ ಕಾಮಿಡಿ ಕಿಲಾಡಿಗಳು, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಸರಿಗಮಪ ಸೇರಿದಂತೆ ಅನೇಕ ರಿಯಾಲಿಟಿ ಶೋಗಳು ಪ್ರಸಾರ ಕಂಡಿವೆ. ಇದರ ಮೂಲಕ ಅನೇಕ ಪ್ರತಿಭೆಗಳಿಗೆ ವಾಹಿನಿ ವೇದಿಕೆ ಆಗಿದೆ. ಈಗ ಸೆಲೆಬ್ರಿಟಿ ಜೋಡಿಯನ್ನು ಪ್ರೇಕ್ಷಕರ ಎದುರು ತರುವ ಪ್ರಯತ್ನ ನಡೆದಿದೆ. ಈ ಶೋಗೆ ‘ಜೋಡಿ ನಂಬರ್ 1’ ಎಂದು ಹೆಸರು ಇಡಲಾಗಿದೆ.

ಹಿರಿಯ ಹಾಗೂ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸೆಲೆಬ್ರಿಟಿ ಜೋಡಿಯನ್ನು ಈ ಶೋನಲ್ಲಿ ಕರೆತರಲಾಗುತ್ತಿದೆ. ಮನರಂಜನೆ ಜೊತೆಗೆ ಜೋಡಿಯ ಹಿನ್ನೆಲೆ, ಪರಸ್ಪರ ಭೇಟಿ ಆದ ಕಥೆ ಹಾಗೂ ಮದುವೆ ಆದ ಬಳಿಕ ಜೀವನದಲ್ಲಿ ಆದ ಬದಲಾವಣೆಯನ್ನು ರಿಯಾಲಿಟಿ ಶೋನಲ್ಲಿ ಹೇಳಲಾಗುತ್ತಿದೆ.

ಈ ಶೋನಲ್ಲಿ ತೀರ್ಪುಗಾರರೇ ಹೈಲೈಟ್. ಏಕೆಂದರೆ ಹಿರಿಯ ನಟಿ ಮಾಳವಿಕಾ ಅವಿನಾಶ್ ಜಡ್ಜ್ ಸ್ಥಾನದಲ್ಲಿದ್ದಾರೆ. ‘ಅಮೃತಧಾರೆ’ ಧಾರಾವಾಹಿ ಮೂಲಕ ಎಲ್ಲರ ಮೆಚ್ಚುಗೆ ಪಡೆದ ಭೂಮಿಕಾ-ಗೌತಮ್ ಅಲಿಯಾಸ್ ಛಾಯಾ ಸಿಂಗ್ ಮತ್ತು ರಾಜೇಶ್ ನಟರಂಗ, ನೆನಪಿರಲಿ ಪ್ರೇಮ್ ಈ ಶೋ ನ ತೀರ್ಪುಗಾರರು. ಇವರು ಸ್ಪರ್ಧಿಗಳಿಗೆ ಮಾರ್ಗದರ್ಶಕರೂ ಆಗಿರಲಿದ್ದಾರೆ. ತೀರ್ಪುಗಾರರು ಶೋನಲ್ಲಿರೋ ಜೋಡಿಗಳಿಗೆ ಮಾತ್ರವಲ್ಲ, ವೀಕ್ಷಕರ ದಾಂಪತ್ಯಕ್ಕೂ ಟಿಪ್ಸ್ ನೀಡುವ ಕೆಲಸ ಮಾಡಲಿದ್ದಾರೆ. ಈ ಶೋನ ಕುರಿ ಪ್ರತಾಪ್ ಮತ್ತು ಚೆಲುವೆ ಶ್ವೇತಾ ಚೆಂಗಪ್ಪ ಅವರು ನಿರೂಪಿಸಲಿದ್ದಾರೆ. ಹೀಗಾಗಿ, ಇಲ್ಲಿ ಹಾಸ್ಯಕ್ಕೆ ಯಾವುದೇ ಕೊರತೆ ಇರೋದಿಲ್ಲ.

ಇದನ್ನೂ ಓದಿ: ‘ಹೂವಿನ ಬಾಣದಂತೆ’ ಹುಡುಗಿಗೆ ಜೀ ಕನ್ನಡ ಅವಕಾಶ; ಟ್ರೋಲ್ ಮಾಡಿದವರಿಗೆ ನಿತ್ಯಶ್ರೀ ತಿರುಗೇಟು

ಶೋನಲ್ಲಿ ಭಾಗವಹಿಸಲಿರೋ ಜೋಡಿಗಳು:

ರುದ್ರ ಮಾಸ್ಟರ್ – ನಿರೀಕ್ಷ, ಧನರಾಜ್ – ಪ್ರಜ್ಞಾ, ರಜನಿ-ಅರುಣ್ ಗೌಡ, ನಯನಾ ನಾಗರಾಜ್ – ಸುಹಾಸ್, ಬಾಳು ಬೆಳಗುಂದಿ – ಮಾಲಾಶ್ರೀ, ಜಗ್ಗಪ್ಪ – ಸುಶ್ಮಿತಾ, ಮಿಮಿಕ್ರಿ ಗೋಪಿ – ಉಷಾರಾಣಿ, ಗೀತಾ ಭಾರತೀ ಭಟ್ – ರಾಜಾರಾಮ್ ಭಟ್, ಕೋಟೆ ಪ್ರಭಾಕರ್ – ಮಾಲತಿ ಹಾಗೂ ಅಭಿಲಾಷ್ – ಅಪೂರ್ವ ಅವರು ಜೋಡಿ.ನಂ.1 ನಲ್ಲಿ ಸ್ಪರ್ಧಿಗಳಾಗಿದ್ದಾರೆ. ಇವರಿಗೆ ವಿವಿಧ ಟಾಸ್ಕ್​​ಗಳು,ರ‍್ಯಾಪಿಡ್ ಫೈಯರ್ ರೀತಿಯ ಟಾಸ್ಕ್ ಇರಲಿದೆ. ಜೀ ಕನ್ನಡದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಶೋ ಪ್ರಸಾರ ಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶಿವಕುಮಾರ ಸ್ವಾಮೀಜಿ ಜನ್ಮದಿನೋತ್ಸವ: ಸಿದ್ಧಗಂಗಾ ಮಠದ ಗುಣಗಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ತುಮಕೂರು, ಏಪ್ರಿಲ್​​ 01: ದೇಶದ ವಿಕಾಸಕ್ಕೆ ಸಿದ್ಧಗಂಗಾ ಮಠದ ಪಾತ್ರ ಬಹುದೊಡ್ಡದಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ. ಸಿದ್ಧಗಂಗಾಮಠದ ವಸ್ತು ಪ್ರದರ್ಶನಾಲಯ ಮೈದಾನದಲ್ಲಿ ನಡೆದ ಡಾ.ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸಿದ್ಧಗಂಗಾ ಮಠಕ್ಕೆ ಬಂದಿರುವುದಕ್ಕೆ ನನಗೆ ಖುಷಿಯಾಗಿದೆ. ಬಡ ಮಕ್ಕಳಿಗೆ ಶಿಕ್ಷಣ, ದಾಸೋಹ‌ ಆಶ್ರಯದ ಮೂಲಕ ಮಠ ಸೇವೆ ಸಲ್ಲಿಸಿದ್ದು, ದಯವೇ ಧರ್ಮದ ಮೂಲವಯ್ಯ ಎಂಬಂತೆ ಶ್ರೀಮಠ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

‘ಸ್ವಾಮೀಜಿಗಳ ದಾರಿ ಪವಾಡ ಎನ್ನಬಹುದು

ವೀರಶೈವ-ಲಿಂಗಾಯತ ಮಠಗಳು ತಮ್ಮದೇ ಆದ ಸೇವೆ ಸಲ್ಲಿಸುತ್ತಾ ಬಂದಿದ್ದು, ಅದರಲ್ಲಿ ಸಿದ್ಧಗಂಗಾಮಠ ಮುಂಚೂಣಿಯಲ್ಲಿದೆ. ಶಿವಕುಮಾರ ಸ್ವಾಮೀಜಿಗಳು ಇಷ್ಟು ವರ್ಷಗಳು ಒಂದೇ ಸ್ಥಳದಲ್ಲಿ ಒಂದೇ ಕಾರ್ಯ ನಿರಂತರವಾಗಿ ಮಾಡುವ ಮೂಲಕ ಜೀವನ ಸಮರ್ಪಣೆ ಮಾಡಿದ್ದಾರೆ. ಸ್ವಾಮೀಜಿಗಳ ದಾರಿಯನ್ನು ವಿಸ್ಮಯ ಹಾಗೂ ಪವಾಡ ಎನ್ನಬಹುದು ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದಲಿಂಗಸ್ವಾಮೀಜಿ ಹೇಳಿದ್ದಾರೆ. ಶಿವಕುಮಾರ ಸ್ವಾಮೀಜಿಗಳ ಬದುಕಿನಲ್ಲಿ 2 ಘಟನೆಗಳಿವೆ. ಅವೆಂದರೆ ಬಡಮಕ್ಕಳಿಗೆ ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡೋದು ಎಂದು ಶ್ರೀಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಡಾ. ಶಿವಕುಮಾರ ಸ್ವಾಮೀಜಿಯವರ 119ನೇ ಜನ್ಮದಿನೋತ್ಸವ; ಬೆಳ್ಳಂ ಬೆಳಿಗ್ಗೆ ಮಠಕ್ಕೆ ಭಕ್ತರ ದಂಡು

ಇದೇ ವೇಳೆ ಮಾತನಾಡಿದ ರಾಜ್ಯಪಾಲ ಗೆಹ್ಲೋಟ್​​, ಮಾನವತಾ ಕಲ್ಯಾಣಕ್ಕಾಗಿ ದುಡಿದ ಶಿವಕುಮಾರ ಶ್ರಿಗಳ ಸೇವೆ ಅನನ್ಯವಾಗಿದೆ. ಸಬಕ್ ಸಾಥ್ ಸಬ್ ಕಾ ವಿಕಾಸ್ ರೀತಿ ಶ್ರೀಗಳು ಸೇವೆ ಮಾಡುತಿದ್ದರು ಎಂದು ಗುಣಗಾನ ಮಾಡಿದ್ದಾರೆ. ಶಿವಕುಮಾರ ಸ್ವಾಮಿಜಿಗಳು ಒಂದು ಶಕ್ತಿಯಾಗಿದ್ದರು. ಅನಾಥ ಮಕ್ಕಳ ಅಪ್ಪನಾಗಿ ಸಲಹಿದ ಕಥೆ ಅವರದ್ದು. ಸ್ವಾಮೀಜಿ ಮನ್ಯಷ್ಯನಿಂದ ಮಹದೇವರಾದವರು ಎಂದು ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಅಭಿಪ್ರಾಯಪಟ್ಟಿದ್ದಾರೆ. ತ್ರಿವಿಧ ದಾಸೋಹದ ಮೂಲಕ ಸಿದ್ಧಗಂಗಾ ಮಠ ಪ್ರಸಿದ್ಧಿಯಾಗಿದ್ದು, ಆಧ್ಯಾತ್ಮಿಕ ಕ್ಷೇತ್ರವಾಗಿ ಸಿದ್ಧಗಂಗಾ ಮಠ ಜನಪರ ಕೆಲಸ ಮಾಡಿದೆ. ಸಿದ್ಧಗಂಗಾ ಮಠ ಕೇವಲ ಧರ್ಮ ಕ್ಷೇತ್ರವಲ್ಲ. ಬದಲಾಗಿ ಶೈಕ್ಷಣಿಕ ಮತ್ತು ಸಾಮಾಜಿಕ ಕ್ರಾಂತಿಯ ಕ್ಷೇತ್ರ ಎಂದು ಗೃಹ ಸಚಿವ ಡಾ.ಪರಮೇಶ್ವರ್ ಕೂಡ ಶ್ರೀಗಳ ಸಮಾಜ ಸೇವೆಯನ್ನು ಕೊಂಡಾಡಿದ್ದಾರೆ. ಇದೇ ವೇಳೆ ರಾಷ್ಟ್ರಪತಿಗಳಿಗೆ ಮಠದ ಪರವಾಗಿ ಬಸವಣ್ಣನ ಮೂರ್ತಿಯನ್ನ ಸಿದ್ದಲಿಂಗ ಸ್ವಾಮೀಜಿ ಉಡುಗೊರೆಯಾಗಿ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Phone Hijack Scam: ಫೋನ್ ಹೈಜಾಕ್ ಹಗರಣ ಎಂದರೇನು?: ಲಕ್ಷಾಂತರ ಹಣ ಕಳೆದುಕೊಳ್ಳುವ ಮುನ್ನ ಎಚ್ಚರ

ಬೆಂಗಳೂರು (ಏ. 01): ಸೈಬರ್ ಅಪರಾಧಿಗಳು (Cyber Attack) ಜನರನ್ನು ವಂಚಿಸಲು ನಿರಂತರವಾಗಿ ಹೊಸ ವಿಧಾನಗಳನ್ನು ಬಳಸುತ್ತಿದ್ದಾರೆ. ಡಿಜಿಟಲ್ ಬಂಧನದ ನಂತರ, ಹೊಸ ರೀತಿಯ ವಂಚನೆಗಳು ಇದೀಗ ಚಾಲ್ತಿಯಲ್ಲಿದೆ. ಹ್ಯಾಕರ್‌ಗಳು ಬಳಕೆದಾರರ ಫೋನ್‌ಗಳನ್ನು ಹೈಜಾಕ್ ಮಾಡಿ ವಂಚನೆ ಮಾಡುತ್ತಿದ್ದಾರೆ. ಇತ್ತೀಚೆಗೆ ಹ್ಯಾಕರ್‌ಗಳು ಮಹಿಳೆಯೊಬ್ಬರಿಗೆ 13 ರೂಪಾಯಿ ಪಾವತಿಸಲು ಕೇಳಿದರು. ಇದರ ಬೆನ್ನಲ್ಲೇ ಹ್ಯಾಕರ್ಸ್ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿದ್ದಾರೆ. ಇದು ನಿಮಗೆ ಆಗದಂತೆ ತಡೆಯಲು, ನೀವು ಏನೆಲ್ಲ ಎಚ್ಚರವಹಿಸಬೇಕು ಎಂಬುದನ್ನು ನಾವು ಹೇಳುತ್ತೇವೆ.

ಫೋನ್ ಅನ್ನು ಹೇಗೆ ಹೈಜಾಕ್ ಮಾಡುತ್ತಾರೆ?

ವರದಿಗಳ ಪ್ರಕಾರ, ಸೈಬರ್ ಅಪರಾಧಿಗಳು ಮುಂಬೈನಲ್ಲಿ 78 ವರ್ಷದ ಮಹಿಳೆಯ ಫೋನ್ ಅನ್ನು ಹೈಜಾಕ್ ಮಾಡಿ ಲಕ್ಷಾಂತರ ರೂಪಾಯಿಗಳನ್ನು ಕದ್ದಿದ್ದಾರೆ. ವಂಚಕರು ಚಾಣಾಕ್ಷತನದಿಂದ ಅವರ ಬ್ಯಾಂಕ್ ಖಾತೆ ವಿವರಗಳನ್ನು ಪಡೆದು 2.5 ಮಿಲಿಯನ್ ರೂಪಾಯಿಗಳನ್ನು ಕದ್ದಿದ್ದಾರೆ. ಸೈಬರ್ ಅಪರಾಧಿಗಳು ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ಪ್ರಕಾರ, ಸೈಬರ್ ಅಪರಾಧಿಗಳು ತ್ವರಿತ ಸಂದೇಶ ವೇದಿಕೆ ವಾಟ್ಸ್​ಆ್ಯಪ್ ಮೂಲಕ ಮಹಿಳೆಯನ್ನು ಸಂಪರ್ಕಿಸಿ ಫೈಲ್ ಡೌನ್‌ಲೋಡ್ ಮಾಡಲು ಕೇಳಿಕೊಂಡಿದ್ದಾರೆ.

ವಿದ್ಯುತ್ ಇಲಾಖೆಯ ಅಧಿಕಾರಿಗಳಂತೆ ನಟಿಸಿದ ಹ್ಯಾಕರ್‌ಗಳು, ಮಹಿಳೆಯ ವಿದ್ಯುತ್ ಸಂಪರ್ಕದಲ್ಲಿ ತಮ್ಮ ಹೆಸರನ್ನು ನವೀಕರಿಸಲು ಕೇಳಿಕೊಂಡರು. ಆ ಸಮಯದಲ್ಲಿ ಮಹಿಳೆ ಕೇರಳಕ್ಕೆ ಪ್ರವಾಸದಲ್ಲಿದ್ದರು. ಕರೆ ಸರ್ಕಾರಿ ಇಲಾಖೆಯಿಂದ ಬಂದಿದೆ ಎಂದು ಭಾವಿಸಿ, ಹ್ಯಾಕರ್‌ಗಳು ಒದಗಿಸಿದ ವಿವರಗಳನ್ನು ಬಳಸಿಕೊಂಡು ರೂ. 13 ಪಾವತಿಸಿದರು. ನಂತರ ಹ್ಯಾಕರ್‌ಗಳು ಮಹಿಳೆಯ ಫೋನ್ ಅನ್ನು ಹೈಜಾಕ್ ಮಾಡಿ, ಅವರ ಬ್ಯಾಂಕಿಂಗ್ ವಿವರಗಳನ್ನು ಕದ್ದು ಅವರ ಖಾತೆಯಿಂದ ₹2.5 ಮಿಲಿಯನ್ ಪಡೆದುಕೊಂಡಿದ್ದಾರೆ.

Smartphones launch in April: ಭಾರತದಲ್ಲಿ ಸ್ಮಾರ್ಟ್​ಫೋನ್ ಮಾರಾಟ ಕುಸಿತ: ಆದರೂ ಈ ವಾರ ರಿಲೀಸ್ ಆಗಲಿದೆ 4 ಫೋನ್ಸ್

ಫೋನ್ ಹೈಜಾಕ್ ಹಗರಣದಿಂದ ಜಾಗರೂಕರಾಗಿರುವುದು ಹೇಗೆ?

  • ಸೈಬರ್ ಅಪರಾಧಿಗಳು ಎಸ್​ಎಮ್​ಎಸ್, ವಾಟ್ಸ್​​ಆ್ಯಪ್ ಸಂದೇಶಗಳು, ಇಮೇಲ್‌ಗಳು, ನಕಲಿ ಕರೆಗಳು ಇತ್ಯಾದಿಗಳ ಮೂಲಕ ಜನರನ್ನು ಸಂಪರ್ಕಿಸುತ್ತಾರೆ. ಅವರು ಸರ್ಕಾರಿ ಇಲಾಖೆ, ಬ್ಯಾಂಕ್ ಅಥವಾ ಮೊಬೈಲ್ ಕಂಪನಿಯ ಅಧಿಕಾರಿಗಳಂತೆ ನಟಿಸಿ ನಂತರ ಅವರನ್ನು ವಂಚಿಸುತ್ತಾರೆ.
  • ಯಾರಾದರೂ ನಿಮ್ಮನ್ನು ಎಸ್​ಎಮ್​ಎಸ್, ವಾಟ್ಸ್​​ಆ್ಯಪ್ ಅಥವಾ ಇಮೇಲ್ ಮೂಲಕ ಫೈಲ್ ಡೌನ್‌ಲೋಡ್ ಮಾಡಲು ಅಥವಾ ಲಿಂಕ್ ತೆರೆಯಲು ಕೇಳಿದರೆ, ಅದನ್ನು ನಿರ್ಲಕ್ಷಿಸಿ.
  • ಅಂತಹ ಲಿಂಕ್‌ಗಳು ಮತ್ತು ಫೈಲ್‌ಗಳು ಮಾಲ್‌ವೇರ್‌ಗಳನ್ನು ಒಳಗೊಂಡಿರುತ್ತವೆ ಮತ್ತು ನಿಮ್ಮ ಫೋನ್ ಅನ್ನು ಹ್ಯಾಕ್ ಮಾಡಬಹುದು.
  • ಇದಲ್ಲದೆ, ನಿಮ್ಮ ಪಿನ್, ಒಟಿಪಿ ಇತ್ಯಾದಿಗಳನ್ನು ನೀವು ಯಾರೊಂದಿಗೂ ಹಂಚಿಕೊಳ್ಳಬಾರದು.
  • ನಿಮ್ಮ ವೈಯಕ್ತಿಕ ದಾಖಲೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಹ್ಯಾಕರ್‌ಗಳು ಕೆಲವೊಮ್ಮೆ ನಿಮ್ಮ ದಾಖಲೆಗಳನ್ನು ಬಳಸಿಕೊಂಡು ನಕಲಿ ಸಿಮ್ ಕಾರ್ಡ್ ಪಡೆಯಬಹುದು ಮತ್ತು ನಂತರ ನಿಮ್ಮನ್ನು ವಂಚಿಸಬಹುದು.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gold Rates: ಗ್ರಾಮ್​ಗೆ 200 ರೂ ಏರಿದ ಚಿನ್ನದ ಬೆಲೆ; ಇಲ್ಲಿದೆ ದರಪಟ್ಟಿ

ಬೆಂಗಳೂರು, ಏಪ್ರಿಲ್ 1: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸತತವಾಗಿ ಏರಿಕೆ ಕಂಡಿವೆ. ನಿನ್ನೆ ಗ್ರಾಮ್​ಗೆ 185 ರೂ ಹೆಚ್ಚಿದ್ದ ಚಿನ್ನದ ಬೆಲೆ ಇಂದು ಬುಧವಾರ 200 ರೂ ಏರಿದೆ. ಎರಡು ದಿನದಲ್ಲಿ ಬಹುತೇಕ 400 ರೂಗಳಷ್ಟು ಹೆಚ್ಚಳ ಆಗಿದೆ. ಅಪರಂಜಿ ಚಿನ್ನದ ಬೆಲೆ (Gold Rates) 15,000 ರೂ ಗಡಿದಾಟಿದೆ. ವಿದೇಶಗಳಲ್ಲೂ ಅನೇಕ ಕಡೆ ಚಿನ್ನದ ಬೆಲೆಯಲ್ಲಿ ಏರಿಕೆ ಆಗಿದೆ. ಇದೇ ವೇಳೆ, ಬೆಳ್ಳಿ ಬೆಲೆಯೂ ನಿನ್ನೆಯಂತೆ ಇವತ್ತೂ 5 ರೂ ಹೆಚ್ಚಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,38,850 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,51,480 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,38,850 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 1ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,148 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,885 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,361 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 255 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,148 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,885 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 255 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,885 ರೂ
  • ಚೆನ್ನೈ: 14,050 ರೂ
  • ಮುಂಬೈ: 13,885 ರೂ
  • ದೆಹಲಿ: 13,900 ರೂ
  • ಕೋಲ್ಕತಾ: 13,885 ರೂ
  • ಕೇರಳ: 13,885 ರೂ
  • ಅಹ್ಮದಾಬಾದ್: 13,890 ರೂ
  • ಜೈಪುರ್: 13,900 ರೂ
  • ಲಕ್ನೋ: 13,900 ರೂ
  • ಭುವನೇಶ್ವರ್: 13,885 ರೂ

ಇದನ್ನೂ ಓದಿ: ಪ್ರೀಮಿಯಮ್ ಪೆಟ್ರೋಲ್, ಡೀಸಲ್ ಬೆಲೆ ಮತ್ತೆ ಏರಿಕೆ; ಲೀಟರ್​ಗೆ 11 ರೂ ದರ ಹೆಚ್ಚಳ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 574 ರಿಂಗಿಟ್ (13,298 ರುಪಾಯಿ)
  • ದುಬೈ: 518.25 ಡಿರಾಮ್ (13,144 ರುಪಾಯಿ)
  • ಅಮೆರಿಕ: 144 ಡಾಲರ್ (13,415 ರುಪಾಯಿ)
  • ಸಿಂಗಾಪುರ: 187.90 ಸಿಂಗಾಪುರ್ ಡಾಲರ್ (13,644 ರುಪಾಯಿ)
  • ಕತಾರ್: 515 ಕತಾರಿ ರಿಯಾಲ್ (13,162 ರೂ)
  • ಸೌದಿ ಅರೇಬಿಯಾ: 527 ಸೌದಿ ರಿಯಾಲ್ (13,083 ರುಪಾಯಿ)
  • ಓಮನ್: 54.90 ಒಮಾನಿ ರಿಯಾಲ್ (13,287 ರುಪಾಯಿ)
  • ಕುವೇತ್: 42.83 ಕುವೇತಿ ದಿನಾರ್ (13,010 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 255 ರೂ
  • ಚೆನ್ನೈ: 265 ರೂ
  • ಮುಂಬೈ: 255 ರೂ
  • ದೆಹಲಿ: 255 ರೂ
  • ಕೋಲ್ಕತಾ: 255 ರೂ
  • ಕೇರಳ: 265 ರೂ
  • ಅಹ್ಮದಾಬಾದ್: 255 ರೂ
  • ಜೈಪುರ್: 255 ರೂ
  • ಲಕ್ನೋ: 255 ರೂ
  • ಭುವನೇಶ್ವರ್: 265 ರೂ
  • ಪುಣೆ: 255

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮತ್ತೆ ಬಂದ ‘ಕೆಇಬಿ’ ಈ ಬಾರಿ ಸಿನಿಮಾ, ಡಾಲಿಯದ್ದೇ ಬಂಡವಾಳ

ಈಗ ಕನ್ನಡದಲ್ಲಿ ಹಲವಾರು ಯೂಟ್ಯೂಬರ್​​ಗಳಿದ್ದಾರೆ, ಆದರೆ ಕೋವಿಡ್​​ಗೆ ಮುಂಚೆ ಕನ್ನಡದಲ್ಲಿ ಇಷ್ಟೋಂದು ಯೂಟ್ಯೂಬರ್​​ಗಳು (YouTube) ಇರಲಿಲ್ಲ. ಇದ್ದರೂ ಒಳ್ಳೆಯ ಕಂಟೆಂಟ್​​ಗಳನ್ನೇನೂ ನೀಡುತ್ತಿರಲಿಲ್ಲ. ಎಲ್ಲೋ ಕೆಲವು ಯೂಟ್ಯೂಬರ್​​ಗಳು ಅಥವಾ ಯೂಟ್ಯೂಬ್ ಚಾನೆಲ್​​ಗಳು ಮಾತ್ರವೇ ಒಳ್ಳೆಯ ಕಂಟೆಂಟ್​​ ಅನ್ನು ಕೊಡುತ್ತಿದ್ದವು. ಅವುಗಳಲ್ಲಿ ‘ಕೆಇಬಿ’ (ಕರ್ನಾಟಕ ಎಂಟರ್ಟೈನ್​​ಮೆಂಟ್ ಬೋರ್ಡ್) ಸಹ ಒಂದು. ಡಾಲಿ ಧನಂಜಯ್ ಮತ್ತು ಗೆಳೆಯರು ಪ್ರಾರಂಭಿಸಿದ್ದ ಯೂಟ್ಯೂಬ್ ಚಾನೆಲ್ ಇದಾಗಿತ್ತು. ಈ ಯೂಟ್ಯೂಬ್ ಚಾನೆಲ್​​ನಲ್ಲಿ ಕೆಲಸ ಮಾಡಿದ್ದ ಹಲವರು ಈಗ ಕನ್ನಡ ಚಿತ್ರರಂಗದ ಜನಪ್ರಿಯ ನಟ, ನಿರ್ದೇಶಕರಾಗಿದ್ದಾರೆ. ಆದರೆ ಇದೀಗ ಹಲವಾರು ವರ್ಷಗಳ ಬಳಿಕ ಮತ್ತೆ ‘ಕೆಇಬಿ’ ಸಕ್ರಿಯವಾಗಿದ್ದು, ‘ಕೆಇಬಿ’ ಮೂಲಕ ಸಿನಿಮಾ ಮಾಡುತ್ತಿದ್ದಾರೆ.

ಡಾಲಿ ಧನಂಜಯ್, ಮೈಸೂರು ಪೂರ್ಣ, ನಾಗಭೂಷಣ್, ಶಶಾಂಕ್ ಸೋಗಾಲ, ಮಹದೇವ ಪ್ರಸಾದ್ ಇನ್ನೂ ಹಲವಾರು ಪ್ರತಿಭಾವಂತರು ಕೆಇಬಿಗೆ ಕೆಲಸ ಮಾಡುತ್ತಿದ್ದರು. ಆದರೆ ಕಳೆದ ಏಳು ವರ್ಷಗಳಿಂದಲೂ ಈ ಚಾನೆಲ್​​ನಲ್ಲಿ ಯಾವುದೇ ವಿಡಿಯೋ ಹಂಚಿಕೊಂಡಿರಲಿಲ್ಲ. ಆದರೆ ಇದೀಗ ‘ಕೆಇಬಿ’ಯ ಹಳೆಯ ಸದಸ್ಯರೆಲ್ಲ ಸೇರಿ ಹೊಸದೊಂದು ವಿಡಿಯೋವನ್ನು ಯೂಟ್ಯೂಬ್ ಚಾನೆಲ್​​ನಲ್ಲಿ ಹಂಚಿಕೊಂಡಿದ್ದು, ‘ಕೆಇಬಿ’ ಈಗ ಯೂಟ್ಯೂಬ್​ ವಿಡಿಯೋ ಅಲ್ಲ ಬದಲಿಗೆ ಸಿನಿಮಾ ಮಾಡಲಿದೆ ಎಂದು ಘೋಷಿಸಿದ್ದಾರೆ.

‘ಕೆಇಬಿ’ ತಂಡದವರು ಸೇರಿಕೊಂಡು ಇದೀಗ ಹಾಸ್ಯಮಯ ಸಿನಿಮಾ ಮಾಡುತ್ತಿದ್ದು, ಮೈಸೂರು ಪೂರ್ಣ ಅವರು ಈ ಸಿನಿಮಾದ ಚಿತ್ರಕತೆ ಬರೆದಿದ್ದಾರೆ. ಡಾಲಿ ಧನಂಜಯ್ ಅವರು ಸಿನಿಮಾದ ನಿರ್ಮಾಣ ಮಾಡಲಿದ್ದಾರೆ. ಕೆಇಬಿ ಮತ್ತು ಡಾಲಿ ಪಿಚರ್ಸ್ ಒಟ್ಟಿಗೆ ಈ ಸಿನಿಮಾವನ್ನು ಪ್ರೆಸೆಂಟ್ ಮಾಡಲಿದ್ದಾರೆ. ಸಿನಿಮಾದ ಪೋಸ್ಟರ್ ಒಂದನ್ನು ಇಂದು (ಏಪ್ರಿಲ್ 01) ಬಿಡುಗಡೆ ಮಾಡಲಾಗಿದೆ. ಪೋಸ್ಟರ್​​ನಲ್ಲಿ ಸಿನಿಮಾದ ಹೆಸರನ್ನು ಚೈನೀಸ್ ಭಾಷೆಯಲ್ಲಿ ನೀಡಲಾಗಿದ್ದು, ‘ನಮ್ಮದು ಪ್ಯಾನ್ ಯೂನಿವರ್ಸ್’ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ.

ಇದನ್ನೂ ಓದಿ:‘ಉತ್ತರಕಾಂಡ’ ಸಿನಿಮಾ ನಿಂತಿದ್ದು ಏಕೆ? ಮುಂದೇನು? ಡಾಲಿ ಧನಂಜಯ್ ಉತ್ತರ

ಡಾಲಿ ಧನಂಜಯ್ ಅವರು ಸಹ ಈ ಸಿನಿಮಾ ಬಗ್ಗೆ ಬರೆದುಕೊಂಡಿದ್ದು, ‘ಮೈಸೂರು ಪೂರ್ಣ ಅವರು ಬರೆದಿದ್ದ ಈ ಚಿತ್ರಕತೆ ಹಲವು ತಿಂಗಳುಗಳಿಂದ ನನ್ನ ಬಳಿ ಇತ್ತು, ಆದರೆ ಓದಿರಲಿಲ್ಲ, ಇತ್ತೀಚೆಗೆ ಓದಿದಾಗ ಇದು ಖಂಡಿತ ಸಿನಿಮಾ ಆಗಬೇಕಾದ ಸಿನಿಮಾ ಎನಿಸಿತು. ಇದೊಂದು ಅದ್ಭುತವಾದ ಕತೆ’ ಎಂದಿದ್ದಾರೆ. ಸಿನಿಮಾ ಬಗ್ಗೆ ಕೆಇಬಿ ಹಂಚಿಕೊಂಡಿರುವ ವಿಡಿಯೋನಲ್ಲಿ ಡಾಲಿ ಧನಂಜಯ್ ಅವರ ಧ್ವನಿಯೂ ಇದ್ದು, ‘ಚಿತ್ರಕತೆ ಓದಿದ್ದೇನೆ, ಸಿನಿಮಾ ಮಾಡೋಣ’ ಎಂದಿದ್ದಾರೆ ಡಾಲಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಚೇಸಿಂಗ್​ನಲ್ಲಿ ಹೊಸ ವಿಶ್ವ ದಾಖಲೆ ಬರೆದ ನ್ಯೂಝಿಲೆಂಡ್

ಮಹಿಳಾ ಏಕದಿನ ಅಂತರಾಷ್ಟ್ರೀಯ (ODI) ಕ್ರಿಕೆಟ್ ಇತಿಹಾಸದಲ್ಲಿ ನ್ಯೂಝಿಲೆಂಡ್ ತಂಡ ಹೊಸ ವಿಶ್ವ ದಾಖಲೆ ನಿರ್ಮಿಸಿದೆ. ವೆಲ್ಲಿಂಗ್ಟನ್​ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಝಿಲೆಂಡ್ ಮಹಿಳಾ ತಂಡವು 347 ರನ್‌ಗಳ ಬೃಹತ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ಈ ವಿಶ್ವ ದಾಖಲೆ ಬರೆದಿದೆ.

ಈ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವು ಮೊದಲು ಬ್ಯಾಟ್ ಮಾಡಿ 6 ವಿಕೆಟ್ ನಷ್ಟಕ್ಕೆ 346 ರನ್‌ಗಳ ಸವಾಲಿನ ಮೊತ್ತವನ್ನು ಪೇರಿಸಿತ್ತು. ಇದನ್ನು ಬೆನ್ನಟ್ಟಿದ ನ್ಯೂಝಿಲೆಂಡ್ ತಂಡವು ಕೇವಲ 2 ಎಸೆತಗಳು ಬಾಕಿ ಇರುವಂತೆಯೇ 350/8 ರನ್ ಗಳಿಸಿ ಐತಿಹಾಸಿಕ ಜಯ ದಾಖಲಿಸಿದೆ.

ಅಮೆಲಿಯಾ ಕೆರ್ ಸ್ಮರಣೀಯ ಇನ್ನಿಂಗ್ಸ್:

ಈ ಗೆಲುವಿನ ರೂವಾರಿ ನ್ಯೂಝಿಲೆಂಡ್ ತಂಡದ ನಾಯಕಿ ಅಮೆಲಿಯಾ ಕೆರ್. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೆರ್ ಕೇವಲ 139 ಎಸೆತಗಳಲ್ಲಿ ಅಜೇಯ 179 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇವರಿಗೆ ಸಾಥ್ ನೀಡಿದ ವಿಕೆಟ್ ಕೀಪರ್ ಇಸಾಬೆಲ್ಲಾ ಗೇಜ್ 48 ಎಸೆತಗಳಲ್ಲಿ ಭರ್ಜರಿ 68 ರನ್ ಗಳಿಸಿದರು.

ಹಳೆಯ ದಾಖಲೆ ಉಡೀಸ್:

ಈ ಹಿಂದೆ 2025ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 341 ರನ್ ಬೆನ್ನಟ್ಟಿದ್ದು ಇದುವರೆಗಿನ ದಾಖಲೆಯಾಗಿತ್ತು. ಈಗ 347 ರನ್​​ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ನ್ಯೂಝಿಲೆಂಡ್ ಆ ದಾಖಲೆಯನ್ನು ಅಳಿಸಿ ಹಾಕಿ ಅಗ್ರಸ್ಥಾನಕ್ಕೇರಿದೆ.

ವುಮೆನ್ಸ್ ಒಡಿಐ ಚೇಸಿಂಗ್ ದಾಖಲೆಗಳು:

  • ನ್ಯೂಝಿಲೆಂಡ್ (350/8) – vs  ಆಫ್ರಿಕಾ (2026)
  • ಭಾರತ (341/5) – vs ಆಸ್ಟ್ರೇಲಿಯಾ (2025)
  • ಆಸ್ಟ್ರೇಲಿಯಾ (331/7) – vs ಭಾರತ (2025)

ನ್ಯೂಝಿಲೆಂಡ್ ಪ್ಲೇಯಿಂಗ್ 11: ಸುಝಿ ಬೇಟ್ಸ್ , ಜಾರ್ಜಿಯಾ ಪ್ಲಿಮ್ಮರ್ , ಅಮೆಲಿಯಾ ಕೆರ್ (ನಾಯಕಿ), ಮ್ಯಾಡಿ ಗ್ರೀನ್ , ಬ್ರೂಕ್ ಹ್ಯಾಲಿಡೇ , ಇಸಾಬೆಲ್ಲಾ ಗೇಜ್ (ವಿಕೆಟ್ ಕೀಪರ್), ಇಜ್ಜಿ ಶಾರ್ಪ್, ಜೆಸ್ ಕೆರ್, ಕೇಲಿ ನೈಟ್, ರೋಸ್ಮರಿ ಮೇಯರ್, ಬ್ರೀ ಇಲಿಂಗ್.

ಇದನ್ನೂ ಓದಿ: IPL 2026: ಗೆಲುವಿನ ಬೆನ್ನಲ್ಲೇ ಶ್ರೇಯಸ್ ಅಯ್ಯರ್​​ಗೆ 12 ಲಕ್ಷ ರೂ. ದಂಡ..!

ಸೌತ್ ಆಫ್ರಿಕಾ ಪ್ಲೇಯಿಂಗ್ 11: ಲಾರಾ ವುಲ್ಫ್​ವರ್ಡ್ (ನಾಯಕಿ), ತಾಜ್ಮಿನ್ ಬ್ರಿಟ್ಸ್, ಅನ್ನಕೆ ಬಾಷ್, ಸುನೆ ಲೂಸ್, ಸಿನಾಲೋ ಜಾಫ್ಟಾ (ವಿಕೆಟ್ ಕೀಪರ್), ಕ್ಲೋಯ್ ಟ್ರಯಾನ್, ನಾಡಿನ್ ಡಿ ಕ್ಲರ್ಕ್, ಕೈಲಾ ರೇನೆಕೆ, ಅಯಬೊಂಗಾ ಖಾಕಾ, ಮಸಬಾಟಾ ಕ್ಲಾಸ್ , ನೊಂಕುಲುಲೆಕೊ ಮ್ಲಾಬಾ.

 

Source link

Smartphones launch in April: ಭಾರತದಲ್ಲಿ ಸ್ಮಾರ್ಟ್​ಫೋನ್ ಮಾರಾಟ ಕುಸಿತ: ಆದರೂ ಈ ವಾರ ರಿಲೀಸ್ ಆಗಲಿದೆ 4 ಫೋನ್ಸ್

ಬೆಂಗಳೂರು (ಏ. 01): ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕೌಂಟರ್‌ಪಾಯಿಂಟ್ ವರದಿಯ ಪ್ರಕಾರ, 2026 ರ ಮೊದಲ ಒಂಬತ್ತು ವಾರಗಳಲ್ಲಿ (ಮಾರ್ಚ್ ಮೊದಲ ವಾರದವರೆಗೆ) ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳ ಮಾರಾಟದಲ್ಲಿ ಕುಸಿತ ಕಂಡುಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮಾರಾಟವು ಶೇ. 9 ರಷ್ಟು ಕಡಿಮೆಯಾಗಿದೆ. ಫೋನ್ ಮಾರಾಟದಲ್ಲಿನ ಕುಸಿತಕ್ಕೆ ಪ್ರಮುಖ ಕಾರಣವೆಂದರೆ ಮೆಮೊರಿ ಘಟಕಗಳ ಬೆಲೆಗಳ ಏರಿಕೆ ಎಂದು ಹೇಳಲಾಗುತ್ತದೆ. ಮೆಮೊರಿಯ ಬೆಲೆ ಏರಿಕೆಯಿಂದಾಗಿ, ವಿವೋ (Vivo) ಮತ್ತು ಒಪ್ಪೋದಂತಹ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ತಯಾರಕರು ತಮ್ಮ ಅಸ್ತಿತ್ವದಲ್ಲಿರುವ ಮಾದರಿಗಳ ಬೆಲೆಗಳನ್ನು ಹೆಚ್ಚಿಸಿದ್ದಾರೆ. ಹೀಗಿದ್ದರೂ ಫೋನುಗಳ ಬಿಡುಗಡೆ ಕಾರ್ಯಕ್ರಮ ಭರ್ಜರಿ ಆಗಿದೆ.

ಏಪ್ರಿಲ್ ಮೊದಲ ವಾರವೇ ಒಂದು ಅಥವಾ ಎರಡು ಅಲ್ಲ, ನಾಲ್ಕು ಹೊಸ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗುತ್ತಿವೆ. ಈ ವಾರ, ಐಕ್ಯೂ, ರಿಯಲ್ ಮಿ ಮತ್ತು ವಿವೋನಿಂದ ಹೊಸ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಪಾದಾರ್ಪಣೆ ಮಾಡಲಿವೆ.

ಐಕ್ಯೂ 15 ಅಪೆಕ್ಸ್

ಐಕ್ಯೂ ನಿಂದ ಈ ಹೊಸ ಮತ್ತು ಮುಂಬರುವ ಫೋನ್ ಇಂದು ಏಪ್ರಿಲ್ 1 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ. ಈ ಹ್ಯಾಂಡ್‌ಸೆಟ್‌ಗಾಗಿ ಅಮೆಜಾನ್‌ನಲ್ಲಿ ಮೈಕ್ರೋಸೈಟ್ ರಚಿಸಲಾಗಿದ್ದು, ಇದು 4 ಮಿಲಿಯನ್‌ಗಿಂತ ಹೆಚ್ಚಿನ AnTuTu ಸ್ಕೋರ್‌ನೊಂದಿಗೆ ಸ್ನಾಪ್‌ಡ್ರಾಗನ್ 8 ಎಲೈಟ್ ಜನರೇಷನ್ 5 ಪ್ರೊಸೆಸರ್‌ನೊಂದಿಗೆ ಬರಲಿದೆ. ಹೆಚ್ಚುವರಿಯಾಗಿ, ಫೋನ್ ಕಂಪನಿಯಿಂದ ಐದು ವರ್ಷಗಳ OS ನವೀಕರಣಗಳು ಮತ್ತು ಏಳು ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆಯುತ್ತದೆ. ಈ ಹ್ಯಾಂಡ್‌ಸೆಟ್ 2K M14 OLED ಡಿಸ್ಪ್ಲೇ, ಸೂಪರ್ ಕಂಪ್ಯೂಟಿಂಗ್ Q3 ಚಿಪ್ ಮತ್ತು 50-ಮೆಗಾಪಿಕ್ಸೆಲ್ ಪೆರಿಸ್ಕೋಪ್ ಕ್ಯಾಮೆರಾವನ್ನು ಹೊಂದಿರುತ್ತದೆ.

ರಿಯಲ್ ಮಿ 16 5G

ಈ ಮುಂಬರುವ ರಿಯಲ್‌ಮಿ ಫೋನ್ ನಾಳೆ, ಏಪ್ರಿಲ್ 2 ರಂದು ಮಧ್ಯಾಹ್ನ 12 ಗಂಟೆಗೆ ಗ್ರಾಹಕರಿಗಾಗಿ ಬಿಡುಗಡೆಯಾಗಲಿದೆ. ಇದು ಫ್ಲಿಪ್‌ಕಾರ್ಟ್ ಮತ್ತು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಖರೀದಿಗೆ ಲಭ್ಯವಿರುತ್ತದೆ. ಈ ಹ್ಯಾಂಡ್‌ಸೆಟ್‌ನ ಮೈಕ್ರೋಸೈಟ್ ಇದು ಸೆಲ್ಫಿ ಮಿರರ್ ಹೊಂದಿರುವ ಭಾರತದ ಮೊದಲ ಫೋನ್ ಆಗಿದೆ. ಇದು 6.57-ಇಂಚಿನ ಡಿಸ್ಪ್ಲೇ, ದೊಡ್ಡ 7000 mAh ಬ್ಯಾಟರಿ, 50-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಮತ್ತು 50-ಮೆಗಾಪಿಕ್ಸೆಲ್ ಸೋನಿ ಹಿಂಭಾಗದ ಕ್ಯಾಮೆರಾವನ್ನು ಒಳಗೊಂಡಿದೆ.

ಡಿಜಿಟಲ್ ಅರೆಸ್ಟ್ ವಂಚನೆಗೆ ಬ್ರೇಕ್: ವಾಟ್ಸಾಪ್‌ ಸಂಸ್ಥೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಮೋದಿ ಸರ್ಕಾರ!

ವಿವೋ V70 FE

200-ಮೆಗಾಪಿಕ್ಸೆಲ್ ಪೋರ್ಟ್ರೇಟ್ ಕ್ಯಾಮೆರಾ ಸೆನ್ಸರ್ ಹೊಂದಿರುವ ಈ ವಿವೋ ಫೋನ್ ನಾಳೆ, ಏಪ್ರಿಲ್ 2 ರಂದು ಮಧ್ಯಾಹ್ನ 12 ಗಂಟೆಗೆ ಗ್ರಾಹಕರಿಗೆ ಬಿಡುಗಡೆಯಾಗಲಿದೆ. ಡಾರ್ಕ್ನೆಸ್ ಗ್ಲೋ ತಂತ್ರಜ್ಞಾನ ಹೊಂದಿರುವ ವಿವೋದ ಮೊದಲ ಫೋನ್ ಇದಾಗಿದೆ. ಇದು 50-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, 8-ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ, 200-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 7000 mAh ಬ್ಯಾಟರಿ, 90-ವ್ಯಾಟ್ ವೇಗದ ಚಾರ್ಜಿಂಗ್ ಮತ್ತು 120 Hz ರಿಫ್ರೆಶ್ ದರದಂತಹ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ. ಈ ಫೋನ್ ಕಂಪನಿಯ ವೆಬ್‌ಸೈಟ್‌ನಲ್ಲಿ ಹಾಗೂ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ.

ರಿಯಲ್ ಮಿ ನೋಟ್ 15 SE 5G

ಈ ವಿಶೇಷ ಆವೃತ್ತಿಯ ರೆಡ್‌ಮಿ ನಾಳೆ, ಏಪ್ರಿಲ್ 2 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಮುಂಬರುವ ಫೋನ್‌ಗಾಗಿ ಫ್ಲಿಪ್‌ಕಾರ್ಟ್‌ನಲ್ಲಿ ಮೈಕ್ರೋಸೈಟ್ ರಚಿಸಲಾಗಿದ್ದು, ಇದು 7.35mm ತೆಳ್ಳಗಿರುತ್ತದೆ. ಇದು ಮೂರು ಬಣ್ಣ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ. ಇದು 4K ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುವ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾದೊಂದಿಗೆ ಬರುತ್ತದೆ. ಇದಲ್ಲದೆ, 45W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5800 mAh ಬ್ಯಾಟರಿಯಿಂದ ಚಾಲಿತವಾಗಲಿದೆ. ವೇಗ ಮತ್ತು ಬಹುಕಾರ್ಯಕ್ಕಾಗಿ, ಇದು ಸ್ನಾಪ್‌ಡ್ರಾಗನ್ 6 ನೇ ಜನರೇಷನ್ 3 ಪ್ರೊಸೆಸರ್‌ನಿಂದ ಚಾಲಿತವಾಗಲಿದೆ. ಈ ಫೋನ್ Mi.com ಜೊತೆಗೆ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುತ್ತದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link