All posts by nagaraj11081993

ದಾವಣಗೆರೆ ಬೈ ಎಲೆಕ್ಷನ್​​: ಮುಸ್ಲಿಂ ಸಮುದಾಯದ ಆಕ್ರೋಶವೇ ಕಾಂಗ್ರೆಸ್​​ಗೀಗ ಟೆನ್ಷನ್​!

ದಾವಣಗೆರೆ ಬೈ ಎಲೆಕ್ಷನ್​​: ಮುಸ್ಲಿಂ ಸಮುದಾಯದ ಆಕ್ರೋಶವೇ ಕಾಂಗ್ರೆಸ್​​ಗೀಗ ಟೆನ್ಷನ್​!

ದಾವಣಗೆರೆ, ಏಪ್ರಿಲ್ 01: ಉಪ ಚುನಾವಣೆ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಪಕ್ಷಗಳ ಪ್ರಚಾರವೂ ಭರದಿಂದ ಸಾಗಿದೆ. ಆದರೆ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸಂಬಂಧಿಸಿ ಆಡಳಿತಾರೂಢ ಕಾಂಗ್ರೆಸ್​​ ಪಕ್ಷಕ್ಕೆ ಮುಸ್ಲಿಂ ಸಮುದಾಯದ ಅಸಮಾಧಾನವೇ ಈಗ ಬಿಸಿ ತುಪ್ಪವಾಗಿ ಮಾರ್ಪಟ್ಟಿದೆ. ಸಮುದಾಯಕ್ಕೆ ಟಿಕೆಟ್​​ ಕೈ ತಪ್ಪಿದ ಹಿನ್ನೆಲೆ ಅಸಮಾಧಾನಗೊಂಡಿದ್ದ ಕೆಲ ನಾಯಕರನ್ನು ಸ್ವತಃ ಸಿಎಂ ಮತ್ತು ಡಿಸಿಎಂ ಅವರೇ ಖುದ್ದು ಅಖಾಡಕ್ಕಿಳಿದು ಸಮಾಧಾನಪಡಿಸಿದ್ದರೂ, ಕೆಲ ಮುಖಂಡರ ಆಕ್ರೋಶದ ಕಿಚ್ಚು ಮಾತ್ರ ಇನ್ನೂ ಆರಿಲ್ಲ. ಹೀಗಾಗಿ ಮುಸ್ಲಿಂ ಮುಖಂಡರ ಮನೆಗಳಿಗೆ ಕಾಂಗ್ರೆಸ್ ನಾಯಕರ ಮಾರ್ಚ್ ಫಾಸ್ಟ್ ನಡೆಯುತ್ತಿದೆ.

ಹೌದು, ಉಪ ಚುನಾವಣೆಯ ಪ್ರಚಾರದ ಭರಾಟೆಯ ನಡುವೆಯೂ ಅಲ್ಪಸಂಖ್ಯಾತರ ಮುಖಂಡರನ್ನು ಸಮಾಧಾನ ಪಡಿಸುವ ಕೆಲಸಕ್ಕೆ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಇದೇ ಕಾರಣಕ್ಕೆ ದಾವಣಗೆರೆಗೆ ಪ್ರಚಾರಕ್ಕೆ ಬಂದ ನಾಯಕರೆಲ್ಲ ಅಲ್ಪಸಂಖ್ಯಾತರ ಮನೆಗೆ ತೆರಳಿ ಮಾತುಕತೆ ನಡೆಸುತ್ತಿದ್ದಾರೆ. ಒಂದೊಮ್ಮೆ ಮುಸ್ಲಿಂ ಸಮುದಾಯ ನಮಗೆ ಕೈಕೊಟ್ಟರೆ ಎಂಬ ಆತಂಕ ನಾಯಕರಿಗೆ ಶುರುವಾಗಿದ್ದು, ಸಚಿವ ಜಮೀರ್​​ ಕೂಡ ಇತ್ತ ಮುಖ ಮಾಡದಿರೋದು ಟೆನ್ಷನ್​​ ಹೆಚ್ಚಿಸಿದೆ. ಕ್ಷೇತ್ರಕ್ಕೆ ಜಮೀರ್​​ ಪ್ರಚಾರಕ್ಕೆ ಬರಬೇಕೆಂಬ ಬಗ್ಗೆ ಹೆಚ್ಚಿನ ಬೇಡಿಕೆ ಇದ್ದರೂ, ಸಚಿವರು ಮಾತ್ರ ಕೇರಳಕ್ಕೆ ಹೋಗಿ ಕುಳಿತಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್​​ ಟಿಕೆಟ್​​ ಕೊಡಿಸುವ ಬಗ್ಗೆ ಜಮೀರ್​​ ಶಪಥ ಮಾಡಿದ್ದರು. ಆದರೆ ಕೊನೇ ಕ್ಷಣದಲ್ಲಿ ಟಿಕೆಟ್​​ ಕೈತಪ್ಪಿದ ಕಾರಣ ಅವರು ಬೇಸರಗೊಂಡಿದ್ದಾರಾ ಎಂಬ ಅನುಮಾನವೂ ಮೂಡಿದೆ. ಇದೇ ಕಾರಣಕ್ಕೆ ಅವರು ದಾವಣಗೆರೆಯತ್ತ ಮುಖ ಮಾಡುತ್ತಿಲ್ಲ ಎಂಬ ಮಾತುಗಳೂ ಕೇಳಿಬಂದಿವೆ.

ಇದನ್ನೂ ಓದಿ: ದಾವಣಗರೆ ದಕ್ಷಿಣ ಬೈ ಎಲೆಕ್ಷನ್​​ನಿಂದ ಜಮೀರ್ ದೂರವಾಗಿದ್ಯಾಕೆ? ಅಸಲಿಗೆ ಆಗಿದ್ದೇನು?

ಇಂದು ಸಿಎಂ ಸಿದ್ದರಾಮಯ್ಯರಿಂದ ಪ್ರಚಾರ

ಕಾಂಗ್ರೆಸ್​​ಗೆ ಪ್ರತಿಷ್ಠೆಯ ಕಣವಾಗಿರುವ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಮತಬೇಟೆ ನಡೆಸಲಿದ್ದಾರೆ. ಅಹಿಂದಾ ಮತಗಳೇ ಅಧಿಕವಾಗಿರುವ ಗ್ರಾಮೀಣ ಪ್ರದೇಶಗಳ ಮೇಲೆ ಸಿಎಂ ಕಣ್ಣಿಟ್ಟಿದ್ದು, ದಾವಣಗೆರೆ ದಕ್ಷಿಣ ಕ್ಷೇತ್ರದ ನಾಗನೂರು, ಶಿರಮ ಗೊಂಡನಹಳ್ಳಿ, ಆರನೇ ಮೈಲು ಕಲ್ಲು, ಹೊಸ ಬೆಳವನುರು, ತುರ್ಚಘಟ್ಟ, ಹೊಸ ನಾಯಕನಹಳ್ಳಿ ಗ್ರಾಮಗಳಲ್ಲಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ. ಮಧ್ಯಾಹ್ನ ಹದಡಿ ಗ್ರಾಮದಲ್ಲಿನ ಸಾರ್ವಜನಿಕ ಸಭೆಯಲ್ಲಿಯೂ ಅವರು ಭಾಗಿಯಾಗಿ, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರ ಪರ ಮತಯಾಚನೆ ಮಾಡಲಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Black Cat omen: ಶುಭ ಕಾರ್ಯಗಳಿಗೆ ಹೊರಟಾಗ ಕಪ್ಪು ಬೆಕ್ಕು ದಾರಿಗೆ ಅಡ್ಡ ಬಂದರೆ ಅಶುಭವೇ?

ಕಪ್ಪು ಬಣ್ಣವನ್ನು ಶನಿಯ ಪ್ರತೀಕ ಎಂದು ಪರಿಗಣಿಸಲಾಗುತ್ತದೆ. ಇದು ನಿಧಾನಗತಿ, ಅಜ್ಞಾನ ಮತ್ತು ಅಂಧಕಾರವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಯಾವುದೇ ಬೆಕ್ಕು ದಾರಿಗೆ ಅಡ್ಡ ಬಂದರೆ, ಎಡಕ್ಕೆ ಹೋಗಲಿ ಅಥವಾ ಬಲಕ್ಕೆ ಹೋಗಲಿ, ನಮ್ಮ ಹಿರಿಯರು ವಾಹನವನ್ನು ನಿಲ್ಲಿಸಿ ಸ್ವಲ್ಪ ಸಮಯದ ನಂತರ ಮುಂದೆ ಸಾಗಲು ಸೂಚಿಸುತ್ತಾರೆ. ಕಪ್ಪು ಬೆಕ್ಕು ದಾರಿಗೆ ಅಡ್ಡ ಬಂದರೆ ಅದು ಅದೃಷ್ಟವೋ ದುರದೃಷ್ಟವೋ ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಮೂಡುತ್ತದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಶುಭ ಕಾರ್ಯಗಳಿಗೆ, ಹೊಸ ಕೆಲಸಗಳಿಗೆ, ಹೊಸ ವಾಹನ ಖರೀದಿಗೆ ಅಥವಾ ವಿವಾಹದ ವಿಷಯಗಳಿಗೆ ಹೊರಟಾಗ ಕಪ್ಪು ಬೆಕ್ಕು ಅಡ್ಡ ಬಂದರೆ, ಅದು ಕಲಹಗಳು, ಗಲಾಟೆಗಳು ಮತ್ತು ಮನಸ್ಸಿನಲ್ಲಿ ವಿಕೃತ ಭಾವನೆಗಳಿಗೆ ಕಾರಣವಾಗಬಹುದು ಎಂದು ನಂಬಲಾಗಿದೆ. ಇದು ಪ್ರಾಣಹಾನಿಯ ಸೂಚನೆಯಲ್ಲ, ಆದರೆ ಮಾನಸಿಕ ಒತ್ತಡ ಮತ್ತು ಸಂಬಂಧಗಳಲ್ಲಿ ಭಿನ್ನಾಭಿಪ್ರಾಯಗಳನ್ನು ಹೆಚ್ಚಿಸಬಹುದು. ಕಪ್ಪು ಬೆಕ್ಕು ರಾಹು ಗ್ರಹದ ಸಂಕೇತವಾಗಿದೆ. ಕಪ್ಪು ಬೆಕ್ಕಿನ ಕಣ್ಣುಗಳು ಕೇತು ಗ್ರಹದ ಸಂಕೇತವೆಂದು ಹೇಳಲಾಗುತ್ತದೆ, ಇದರಿಂದಾಗಿ ರಾಹು ಮತ್ತು ಕೇತು ಎರಡೂ ಅಂಶಗಳು ಕಪ್ಪು ಬೆಕ್ಕಿನಲ್ಲಿ ಇರುತ್ತವೆ ಎಂಬ ನಂಬಿಕೆಯಿದೆ. ಪುರಾಣಗಳ ಪ್ರಕಾರ, ಬೆಕ್ಕು ರಾಹು ಗ್ರಹದ ವಾಹನವೂ ಹೌದು.

ಹಾವೋ ಅಡ್ಡ ಬಂದರೆ ಕೆಲವೊಮ್ಮೆ ಶುಭವೆಂದು ಪರಿಗಣಿಸಿದರೆ, ಗೋವು ಅಡ್ಡ ಬರುವುದು ಬಹಳ ಶುಭವೆಂದು ಹೇಳಲಾಗುತ್ತದೆ. ಆದರೆ, ನಾಯಿ ಗೋಳಾಡುವುದು ಅಥವಾ ಅಳುವುದು ಯಾವುದೋ ಪ್ರಾಣಹಾನಿಯ ಸೂಚನೆ ಎಂದು ಹಿರಿಯರು ಹೇಳುತ್ತಾರೆ. ಅದೇ ರೀತಿ, ಕಪ್ಪು ಬೆಕ್ಕು ಅಡ್ಡ ಬರುವುದು ಅಪಾಯದ ಸೂಚನೆ. ಇದು ನಿಮ್ಮ ಮೇಲೆ ದಾಳಿ, ಗಲಾಟೆ, ಅಥವಾ ಕಲಹಗಳಿಗೆ ದಾರಿ ಮಾಡಿಕೊಡಬಹುದು. ಅಲ್ಲದೆ, ನೀವು ಮಾಡುತ್ತಿರುವ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು, ವಿಳಂಬಗಳು ಮತ್ತು ಅಪೂರ್ಣ ಕೆಲಸಗಳಿಗೆ ಕಾರಣವಾಗಬಹುದು. ಮನಸ್ಸಿನ ಸ್ಮೃತಿ ಪಟಲದ ಮೇಲೆ ಇದರ ಪ್ರಭಾವ ನೇರವಾಗಿ ಬೀಳುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಯಾವುದೇ ದಿನ, ವಾರ, ಅಥವಾ ಕಾಲ ಎಂದು ಪರಿಗಣಿಸದೆ, ಒಳ್ಳೆಯ ಮನಸ್ಸಿನಿಂದ ಹೊರಟಾಗ ಕಪ್ಪು ಬೆಕ್ಕು ಅಡ್ಡ ಬಂದರೆ, ತಕ್ಷಣಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಇದರ ಪರಿಹಾರವಾಗಿ, ಸ್ವಲ್ಪ ಸಮಯ ಕಾಯುವುದು ಉತ್ತಮ. ನಿಮ್ಮ ಕಾರಿನಲ್ಲಿ ನೀರಿದ್ದರೆ, ನೀರನ್ನು ಕುಡಿಯಿರಿ. ಒಂದೆರಡು ನಿಮಿಷ ಇಳಿದು ಓಡಾಡಿ ಅಥವಾ ಟ್ರಾಫಿಕ್‌ನಲ್ಲಿ ಸಿಲುಕಿದ್ದರೆ ರಸ್ತೆಯ ಬದಿಯಲ್ಲಿ ನಿಲ್ಲಿಸಿ. ಈ ರೀತಿಯಾಗಿ ಸ್ವಲ್ಪ ವಿರಾಮ ತೆಗೆದುಕೊಂಡು ಮುಂದೆ ಸಾಗುವುದು ಒಳ್ಳೆಯದು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಸೇರಿದಂತೆ ಹಲವೆಡೆ ಗುಡುಗು ಸಹಿತ ಮಳೆಯ ಸಾಧ್ಯತೆ!

ಬೆಂಗಳೂರು, ಏಪ್ರಿಲ್ 01: ಹಲವು ದಿನಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾರ್ಭಟ  (Weather Forecast) ಕಾಣಸಿಗುತ್ತಿದೆ. ಅಂತೆಯೇ ಇಂದೂ ಸಹ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಸೂಚಿಸಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಯಾವೆಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​? ​

ಬೀದರ್, ಕಲಬುರ್ಗಿ, ಯಾದಗಿರಿ, ವಿಜಯಪುರ, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದ್ದರಿಂದ ಈ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಸೂಚಿಸಲಾಗಿದೆ.

ಎಲ್ಲೆಲ್ಲಿ ಮಳೆ

ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಸೇರಿದಂತೆ ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಧಾರವಾಡ, ಯಾದಗಿರಿ, ಕಲಬುರ್ಗಿ, ಬೀದರ್, ಗದಗ, ರಾಯಚೂರು, ಬೀದರ್, ಹಾವೇರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ರಾಮನಗರದಲ್ಲೂ 30-40 ಕೀ.ಮಿ/ಗಂ ವೇಗದಲ್ಲಿ ಗಾಳಿ ಮಳೆ ಜೋರಾಗಿರಲಿದೆ. ಉಳಿದೆಡೆ ಒಣ ಹವೆಯ ವಾತಾವರಣವಿರಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

ಕ್ರೈಮಿಯಾದಲ್ಲಿ ಬಂಡೆಗೆ ಅಪ್ಪಳಿಸಿದ ರಷ್ಯಾದ ಮಿಲಿಟರಿ ವಿಮಾನ, 29 ಮಂದಿ ಸಾವು

ಮಾಸ್ಕೋ, ಏಪ್ರಿಲ್ 1: ರಷ್ಯಾ(Russia)ದ ಮಿಲಿಟರಿ ಸಾರಿಗೆ ವಿಮಾನವು ಕ್ರೈಮಿಯಾದಲ್ಲಿ ಬಂಡೆಗೆ ಅಪ್ಪಳಿಸಿದೆ, ಅದರಲ್ಲಿದ್ದ ಎಲ್ಲಾ 29 ಜನರು ಸಾವನ್ನಪ್ಪಿದ್ದಾರೆ. ಸಂಪರ್ಕ ಕಳೆದುಕೊಂಡಿದ್ದ ಆನ್ -26 ವಿಮಾನವು 2014 ರಲ್ಲಿ ರಷ್ಯಾ ಉಕ್ರೇನ್‌ನಿಂದ ಸ್ವಾಧೀನಪಡಿಸಿಕೊಂಡ ಕಪ್ಪು ಸಮುದ್ರ ಬಳಿಯ ದ್ವೀಪದಲ್ಲಿ ಪತನಗೊಂಡಿದೆ. ರಕ್ಷಣಾ ಸಚಿವಾಲಯವು 23 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದೆ. ಯಾರೂ ಬದುಕುಳಿದ ಬಗ್ಗೆ ವರದಿಯಾಗಿಲ್ಲ.

ತಾಂತ್ರಿಕ ಸಮಸ್ಯೆಗಳು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ವರದಿಗಳು ಹೇಳುತ್ತಿವೆ ಎಂದು ಆರ್‌ಐಎ ಸುದ್ದಿ ಸಂಸ್ಥೆ ವರದಿ ಮಾಡಿದೆ. ರಷ್ಯಾದ ರಕ್ಷಣಾ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಈ ಘಟನೆಯು ರಷ್ಯಾದ ಮಿಲಿಟರಿ ಸಾರಿಗೆ ಕಾರ್ಯಾಚರಣೆಗಳ ಸುರಕ್ಷತೆಯ ಬಗ್ಗೆ ಹೊಸ ಕಳವಳವನ್ನು ಹುಟ್ಟುಹಾಕಿದೆ, ಈ ಪ್ರದೇಶದಲ್ಲಿ ಹೆಚ್ಚಿದ ಉದ್ವಿಗ್ನತೆಯ ನಡುವೆ ಇದು ಸಂಭವಿಸಿದೆ.

ಶೋಧ ಮತ್ತು ರಕ್ಷಣಾ ತಂಡವು An-26 ವಿಮಾನದ ಪತನದ ಸ್ಥಳವನ್ನು ಪತ್ತೆಹಚ್ಚಿದೆ.ಕ್ಷಿಪಣಿಗಳು, ಡ್ರೋನ್‌ಗಳು ಅಥವಾ ಪಕ್ಷಿ ದಾಳಿಯಂತಹ ಅಂಶಗಳು ಇದರಲ್ಲಿ ಒಳಗೊಂಡಿಲ್ಲ ಎಂದು ಸೂಚಿಸುತ್ತದೆ. ಅಪಘಾತದ ಕಾರಣವನ್ನು ತನಿಖೆ ಮಾಡಲು ಮಿಲಿಟರಿ ಆಯೋಗವನ್ನು ಕಳುಹಿಸಲಾಗಿದೆ.

1960 ರ ದಶಕದ ಉತ್ತರಾರ್ಧದಲ್ಲಿ ಪರಿಚಯಿಸಲಾದ ಹಗುರವಾದ ಯುದ್ಧತಂತ್ರದ ಸಾರಿಗೆ ವಿಮಾನವಾದ ಆನ್-26 ಅನ್ನು ಮಿಲಿಟರಿ ಮತ್ತು ನಾಗರಿಕ ಉದ್ದೇಶಗಳಿಗಾಗಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಇದು ಉಕ್ರೇನ್, ದಕ್ಷಿಣ ಸುಡಾನ್ ಮತ್ತು ಐವರಿ ಕೋಸ್ಟ್‌ನಲ್ಲಿ ಅಪಘಾತಗಳು ಸೇರಿದಂತೆ ಹಲವು ಅಪಘಾತಗಳು ಸಂಭವಿಸಿವೆ.

ಮತ್ತಷ್ಟು ಓದಿ: ಏಪ್ರಿಲ್ 1ರಿಂದ ಪೆಟ್ರೋಲ್ ರಫ್ತು ನಿಷೇಧಿಸಿದ ರಷ್ಯಾ; ಭಾರತಕ್ಕೇನು ಪರಿಣಾಮ?

ಕ್ರೈಮಿಯಾವು ಕಪ್ಪು ಸಮುದ್ರದ ಉತ್ತರ ಕರಾವಳಿಯಲ್ಲಿರುವ ಪ್ರಮುಖ ಪರ್ಯಾಯ ದ್ವೀಪವಾಗಿದೆ. 2014 ರಲ್ಲಿ ಉಕ್ರೇನ್‌ನಿಂದ ರಷ್ಯಾ ಈ ಪ್ರದೇಶವನ್ನು ತನ್ನದಾಗಿಸಿಕೊಂಡಿತು, ಇದನ್ನು ಅಂತಾರಾಷ್ಟ್ರೀಯ ಸಮುದಾಯದ ಬಹುಪಾಲು ದೇಶಗಳು ಅಕ್ರಮವೆಂದು ಪರಿಗಣಿಸಿವೆ. ರಷ್ಯಾ ಇದನ್ನು ಕ್ರೈಮಿಯಾ ಗಣರಾಜ್ಯವೆಂದು ಕರೆಯುತ್ತದೆ ಮತ್ತು ತನ್ನ ಭೂಭಾಗವೆಂದು ಪರಿಗಣಿಸುತ್ತದೆ. ಕ್ರೆಮ್ಲಿನ್ ಇದನ್ನು 1954 ರಲ್ಲಿ ಉಕ್ರೇನ್‌ಗೆ ತಪ್ಪಾಗಿ ಹಸ್ತಾಂತರಿಸಲಾಗಿತ್ತು, ಅದನ್ನು ಸರಿಪಡಿಸಲಾಗಿದೆ ಎಂದು ಸಮರ್ಥಿಸಿಕೊಳ್ಳುತ್ತದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಧುರಂಧರ್ 2’ ಬಳಿಕ ಬರ್ತಿದೆ ಏಳೂವರೆ ಗಂಟೆ ಸಿನಿಮಾ; ಎರಡು ಇಂಟರ್​​ವಲ್

‘ಧುರಂಧರ್’ (Dhurandhar) ಸಿನಿಮಾದ ಅವಧಿ 3 ಗಂಟೆ 34 ನಿಮಿಷ ಇತ್ತು. ಅದೇ ರೀತಿ, ‘ಧುರಂಧರ್ 2’ ಸಿನಿಮಾ 3 ಗಂಟೆ 49 ನಿಮಿಷ ಇತ್ತು. ಇಷ್ಟು ದೀರ್ಘ ಅವಧಿ ಇದ್ದರೂ ಸಿನಿಮಾ ಯಶಸ್ಸು ಕಂಡಿತ್ತು. ಇದಾದ ಬೆನ್ನಲ್ಲೇ ಏಳು ಗಂಟೆ 30 ನಿಮಿಷಗಳ ಸಿನಿಮಾ ತೆರೆಗೆ ಬರೋಕೆ ರೆಡಿ ಆಗಿದೆ! ಇದು ಅಚ್ಚರಿ ಎನಿಸಿದರೂ ನಿಜ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾದ ಸೆನ್ಸಾರ್ ಪ್ರಮಾಣಪತ್ರ ವೈರಲ್ ಆಗಿದೆ.

ಈ ಮೊದಲು ‘ಬಾಹುಬಲಿ’ ಹಾಗೂ ‘ಬಾಹುಬಲಿ 2’ ಚಿತ್ರವನ್ನು ಕಂಬೈನ್ ಮಾಡಿ ಸಿನಿಮಾ ರಿಲೀಸ್ ಮಾಡಲಾಗಿತ್ತು. ಈ ಸಿನಿಮಾ ಗಮನ ಸೆಳೆದಿತ್ತು. ‘ಬಾಹುಬಲಿ’ ರಿಲೀಸ್ ಆಗಿ 10 ವರ್ಷಗಳ ಸಂಭ್ರಮದಲ್ಲಿ ಈ ಚಿತ್ರ ತೆರೆಗೆ ಬಂದಿತ್ತು. ಈ ಸಿನಿಮಾ ಹೊಸ ಅನುಭವ ನೀಡಿತ್ತು. ಈಗ ‘ಧುರಂಧರ್’ ಹಾಗೂ ‘ಧುರಂಧರ್ 2’ ಸಿನಿಮಾ ಸೇರಿಸಿ ‘ಧುರಂಧರ್: ಡೈರೆಕ್ಟರ್ ಕಟ್’ ಎಂಬ ಚಿತ್ರವನ್ನು ತೆರೆಗೆ ತರಲಾಗುತ್ತಿದೆ.

ಪಾರ್ಥ ಚತುರ್ವೇದಿ ಎಂಬುವವರು ಸೋಶಿಯಲ್ ಮೀಡಿಯಾದಲ್ಲಿ ಈ ಸಿನಿಮಾದ ಸೆನ್ಸಾರ್ ಪ್ರಮಾಣಪತ್ರ ಹಂಚಿಕೊಂಡಿದ್ದಾರೆ. ‘ಧುರಂಧರ್: ಡೈರೆಕ್ಟರ್ಸ್ ಕಟ್’ ಎಂದು ಬರೆಯಲಾಗಿದೆ. ಸಿನಿಮಾಗೆ ಎ ಪ್ರಮಾಣ ಪತ್ರ ನೀಡಿರುವುದನ್ನು ಉಲ್ಲೇಖಿಸಲಾಗಿದೆ. ಈ ಸಿನಿಮಾದ ಅವಧಿ 450 ನಿಮಿಷ ಎಂದು ಬರೆಯಲಾಗಿದೆ. ಅಂದರೆ, ಏಳು ಗಂಟೆ 30 ನಿಮಿಷ ಸಿನಿಮಾ ಇರಲಿದೆ.

ಈ ಸಿನಿಮಾ ಪ್ರೀಮಿಯಂ ಸ್ಕ್ರೀನ್​​ಗಳಾದ ಡಿಸಿ, ಐಮ್ಯಾಕ್ಸ್, ಎಚ್​​ಡಿಆರ್​ ಅಲ್ಲಿ ಮಾತ್ರ ಪ್ರದರ್ಶನ ಕಾಣಲಿದ್ದು, ಎರಡು ಇಂಟರ್​​ವಲ್​​ಗಳು ಇರಲಿವೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಇದನ್ನೂ ಓದಿ: ‘ಧುರಂಧರ್ 2’ ಮೇಲೆ ಕಥೆ ಕದ್ದ ಆರೋಪ: ಚಿತ್ರತಂಡದ ವಿರುದ್ಧ ಕೇಸ್ ಹಾಕಲು ನಿರ್ಧಾರ

ಇಂದು (ಏಪ್ರಿಲ್ 1) ಮೂರ್ಖರ ದಿನ. ಹೀಗಾಗಿ, ಫೂಲ್ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಆ ರೀತಿ ಮೂರ್ಖರನ್ನಾಗಿ ಮಾಡುವ ಪ್ರಯತ್ನ ಕೂಡ ಇರಬಹುದು ಎಂದು ಹೇಳಲಾಗುತ್ತಿದೆ.ಈ ಬಗ್ಗೆ ಸಿನಿಮಾ ತಂಡದಿಂದ ಸ್ಪಷ್ಟನೆ ಸಿಗಬೇಕಿದೆ.

‘ಧುರಂಧರ್ 2’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಹಿಟ್ ಗಿದೆ. ಈ ಸಿನಿಮಾ ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶುಭ್​​ಮನ್ ಗಿಲ್ ಮಾಡಿದ ಒಂದು ತಪ್ಪಿನಿಂದಾಗಿ ಸೋತ ಗುಜರಾತ್ ಟೈಟಾನ್ಸ್​

ಐಪಿಎಲ್ 2026ರ ಸೀಸನ್‌ನ ರೋಚಕ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಗುಜರಾತ್ ಟೈಟಾನ್ಸ್ (GT)  ಮೂರು ವಿಕೆಟ್‌ಗಳ ಸೋಲನ್ನು ಅನುಭವಿಸಿತು. ಆದರೆ, ಈ ಸೋಲಿಗಿಂತ ಹೆಚ್ಚಾಗಿ ಚರ್ಚೆಯಾಗುತ್ತಿರುವುದು ನಾಯಕ ಶುಭ್​ಮನ್ ಗಿಲ್ ಅವರ ಒಂದು ವಿಚಿತ್ರ ನಿರ್ಧಾರ. ಅದುವೇ ತಂಡದ ಪ್ರಮುಖ ವೇಗಿ ಮೊಹಮ್ಮದ್ ಸಿರಾಜ್ ಅವರಿಗೆ ಪೂರ್ಣ ಓವರ್‌ಗಳನ್ನು ನೀಡದೇ ಇರುವುದು!

ಮುಲ್ಲನ್​ಪುರ್​ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 162 ರನ್‌ಗಳ ಸಾಧಾರಣ ಮೊತ್ತವನ್ನು ಕಲೆಹಾಕಿತು. ಈ ಮೊತ್ತವನ್ನು ರಕ್ಷಿಸುವ ಜವಾಬ್ದಾರಿ ಬೌಲರ್‌ಗಳ ಮೇಲಿತ್ತು. ಪವರ್‌ಪ್ಲೇನಲ್ಲಿ ಮೊಹಮ್ಮದ್ ಸಿರಾಜ್ ಅತ್ಯುತ್ತಮ ಲಯದಲ್ಲಿದ್ದಂತೆ ಕಂಡು ಬಂದರು. ಅಲ್ಲದೆ ಈ ವೇಳೆ ಎಸೆದ 2 ಓವರ್‌ಗಳಲ್ಲಿ ಸಿರಾಜ್​ ನೀಡಿದ್ದು ಕೇವಲ 15 ರನ್​​ಗಳು ಮಾತ್ರ.

ಅಂದರೆ ಪವರ್​ಪ್ಲೇನಲ್ಲೇ ಮೊಹಮ್ಮದ್ ಸಿರಾಜ್ ಪಂಜಾಬ್ ಕಿಂಗ್ಸ್ ಬ್ಯಾಟರ್​​ಗಳ ರನ್ ವೇಗಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಅಚ್ಚರಿಯ ವಿಷಯವೆಂದರೆ ಆ 2 ಓವರ್‌ಗಳ ನಂತರ ಶುಭ್​​ಮನ್ ಗಿಲ್, ಸಿರಾಜ್‌ಗೆ ಮತ್ತೆ ಚೆಂಡನ್ನೇ ನೀಡಲಿಲ್ಲ!

ಇತ್ತ 13ನೇ ಓವರ್​ ವೇಳೆ ದಾಳಿಗಿಳಿದ ಪ್ರಸಿದ್ಧ್ ಕೃಷ್ಣ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸುವ ಮೂಲಕ ಪಂಜಾಬ್ ಕಿಂಗ್ಸ್ ತಂಡಕ್ಕೆ ಆಘಾತ ನೀಡಿದ್ದರು. 2 ಓವರ್​​ಗಳಲ್ಲಿ 3 ವಿಕೆಟ್ ಉರುಳಿಸಿದ ಪ್ರಸಿದ್ಧ್ ಗುಜರಾತ್ ಟೈಟಾನ್ಸ್ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ದರು. ಆದರೆ ಈ ಹಂತದಲ್ಲೂ ಶುಭ್​​ಮನ್ ಗಿಲ್ ಮೊಹಮ್ಮದ್ ಸಿರಾಜ್ ಅವರನ್ನು ದಾಳಿಗೆ ಇಳಿಸಿರಲಿಲ್ಲ ಎಂಬುದೇ ಅಚ್ಚರಿ.

  • ಶುಭ್​​ಮನ್ ಗಿಲ್ ಮೊದಲ 2 ಓವರ್​​​ಗಳಲ್ಲಿ ಅತ್ಯುತ್ತಮ ದಾಳಿ ಸಂಘಟಿಸಿದ ಮೊಹಮ್ಮದ್ ಸಿರಾಜ್​ಗೆ ಮತ್ತೆ ಓವರ್ ನೀಡಲೇ ಇಲ್ಲ.
  • ಸಿರಾಜ್​ ಅವರ ಬಳಿಕ ಪ್ರಸಿದ್ಧ್ ಕೃಷ್ಣಗೂ ಓವರ್​ ನೀಡಿರಲಿಲ್ಲ. ಅಂದರೆ ಪ್ರಸಿದ್ಧ್ ದಾಳಿಗೆ ಇಳಿದದ್ದು 13ನೇ ಓವರ್​ನಲ್ಲಿ.
  • ಉತ್ತಮ ಲಯದಲ್ಲಿದ್ದರೂ ಸಿರಾಜ್ ಅವರನ್ನು ಸರಿಯಾಗಿ ಬಳಸಿಕೊಂಡಿಲ್ಲ. ಅತ್ತ ಅನುಭವಿ ಪ್ರಸಿದ್ಧ್ ಕೃಷ್ಣ ಅವರನ್ನು ಸಹ ಮೊದಲೇ ದಾಳಿಗಿಳಿಸಿರಲಿಲ್ಲ.

ಪಂಜಾಬ್ ಕಿಂಗ್ಸ್ ತಂಡವು ಸತತ ವಿಕೆಟ್ ಕಳೆದುಕೊಂಡ ಒತ್ತಡಕ್ಕೊಳಗಾಗಿದ್ದರೂ ಶುಭ್​​ಮನ್ ಗಿಲ್ ಅನಾನುಭವಿ ಅಶೋಕ್ ಶರ್ಮಾ ಮತ್ತು ವಾಷಿಂಗ್ಟನ್ ಸುಂದರ್ ಅವರಂತಹ ಬೌಲರ್‌ಗಳನ್ನು ದೀರ್ಘಕಾಲ ಬಳಸಿಕೊಂಡರು.

ಒಂದು ಹಂತದಲ್ಲಿ 118 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ಪಂಜಾಬ್ ಕಿಂಗ್ಸ್ ಸೋಲಿನ ಸುಳಿಗೆ ಸಿಲುಕಿತ್ತು. ಒಂದು ವೇಳೆ ಈ ಹಂತದಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ಬಳಸಿಕೊಂಡಿದ್ದರೆ, ಅಥವಾ 7 ವಿಕೆಟ್ ಕಳೆದುಕೊಂಡ ಬಳಿಕ ಸಿರಾಜ್ ಕೈಗೆ ಚೆಂಡು ನೀಡಿದ್ದರೆ ವಿಕೆಟ್ ಪಡೆಯುವ ಅಥವಾ ರನ್ ನಿಯಂತ್ರಿಸುವ ಸಾಧ್ಯತೆ ಹೆಚ್ಚಿತ್ತು.

ಏಕೆಂದರೆ ಪವರ್​ಪ್ಲೇನಲ್ಲಿ ಪ್ರಭ್​ಸಿಮ್ರಾನ್ ಸಿಂಗ್ ಹಾಗೂ ಕೂಪರ್ ಕೊನೊಲಿ ಅಬ್ಬರಿಸಿದರೂ ಮೊಹಮ್ಮದ್ ಸಿರಾಜ್ 12 ಎಸೆತಗಳಲ್ಲಿ ನೀಡಿದ್ದು ಕೇವಲ 15 ರನ್​​ಗಳು ಮಾತ್ರವಾಗಿತ್ತು. ಹೀಗಾಗಿ ನಿರ್ಣಾಯಕ ಹಂತದಲ್ಲಿ ಸಿರಾಜ್ ಅವರ ಅನುಭವವನ್ನು ಬಳಸಿಕೊಂಡು ಪಂಜಾಬ್ ಕಿಂಗ್ಸ್ ಮೇಲೆ ಒತ್ತಡ ಹೇರುವ ಅವಕಾಶ ಶುಭ್​​ಮನ್ ಗಿಲ್ ಮುಂದಿತ್ತು.

ಇದಾಗ್ಯೂ ಶುಭ್​​ಮನ್ ಗಿಲ್  ಅವರ ರಕ್ಷಣಾತ್ಮಕ ನಾಯಕತ್ವದಿಂದಾಗಿ ಪಂಜಾಬ್‌ನ ಯುವ ಆಟಗಾರ ಕೂಪರ್ ಕೊನೊಲಿ (72)* ಅಬ್ಬರಿಸಲು ಅವಕಾಶ ಸಿಕ್ಕಿತು. ಅಂತಿಮವಾಗಿ ಪಂಜಾಬ್ 19.1 ಓವರ್‌ಗಳಲ್ಲಿ ಗುರಿ ತಲುಪುವ ಮೂಲಕ 3 ವಿಕೆಟ್​​ಗಳ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಮುಗಿಯದ ಓವರ್… ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್

ಈ ಸೋಲಿನ ಬೆನ್ನಲ್ಲೇ ಶುಭ್​​ಮನ್ ಗಿಲ್ ಅವರ ನಾಯಕತ್ವದ ಬಗ್ಗೆ ಪ್ರಶ್ನೆಗಳೆದ್ದಿವೆ. ಅದರಲ್ಲೂ ಗಿಲ್​  ನಾಯಕನಾಗಿ ಒತ್ತಡದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂಬ ಟೀಕೆ ಕೇಳಿಬರುತ್ತಿದೆ. ಈ ಟೀಕೆಗಳ ನಡುವೆ ಮುಂದಿನ ಪಂದ್ಯಗಳಲ್ಲಿ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಅವರಂತಹ ಹಿರಿಯ ಬೌಲರ್‌ಗಳನ್ನು ಗಿಲ್ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

 

 

Source link

Commercial LPG Cylinder Price: ಗಾಯದ ಮೇಲೆ ಬರೆ; ಕಮರ್ಷಿಯಲ್​​ ಸಿಲಿಂಡರ್​​ ದರ 195ರೂ. ಹೆಚ್ಚಳ

ನವದೆಹಲಿ, ಏಪ್ರಿಲ್​​ 01: ಕಮರ್ಷಿಯಲ್​​ ಸಿಲಿಂಡರ್​​ ಅಭಾವದ ನಡುವೆ ಬಳಕೆದಾರರಿಗೆ ಮತ್ತೊಂದು ಶಾಕ್​​ ಎದುರಾಗಿದೆ. ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಂಡಿರುವ ಸಂಘರ್ಷದ ಹಿನ್ನೆಲೆ ಜಾಗತಿಕ ತೈಲ ಬೆಲೆ ಏರಿಕೆಯಾಗಿರುವ ಕಾರಣ, ಇಂದಿನಿಂದ (ಏಪ್ರಿಲ್ 1) ವಾಣಿಜ್ಯ ಬಳಕೆಯ LPG ಸಿಲಿಂಡರ್‌ಗಳ ಬೆಲೆಯಲ್ಲಿ 195.50 ರೂ. ಹೆಚ್ಚಳವಾಗಿದೆ. ಇದಕ್ಕೂ ಮೊದಲು ಮಾರ್ಚ್ 1ರಂದು 19 ಕೆ.ಜಿ. ಸಿಲಿಂಡರ್‌ ಬೆಲೆ 114.5 ರೂ. ಏರಿಕೆಯಾಗಿತ್ತು.

ಯುದ್ಧದ ಕಾರಣಕ್ಕೆ ಭಾರತಕ್ಕೆ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ LPG ಪೂರೈಕೆ ಬಹಳ ವ್ಯತ್ಯಾಸವಾಗಿ ಉದ್ಯಮಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ನಡುವೆ, ಸಿಲಿಂಡರ್​​ ದರ ಹೆಚ್ಚಳ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪಶ್ಚಿಮ ಏಷ್ಯಾದ ಸಂಘರ್ಷದಿಂದ ಜಾಗತಿಕ ತೈಲ ಬೆಲೆ ಸುಮಾರು ಶೇ. 50ರವರೆಗೆ ಏರಿಕೆಯಾಗಿದೆ. ಪ್ರತಿ ತಿಂಗಳ ಮೊದಲ ದಿನದಂದು ಅಂತಾರಾಷ್ಟ್ರೀಯ ಮಾನದಂಡಗಳು ಮತ್ತು ವಿನಿಮಯ ದರ ಆಧರಿಸಿ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗಳು LPG ಮತ್ತು ATF ದರಗಳನ್ನು ಪರಿಷ್ಕರಿಸುತ್ತವೆ. ಅದೇ ರೀತಿ ಇಂದಿನಿಂದ ಕಮರ್ಷಿಯಲ್​​ ಸಿಲಿಂಡರ್​​ ಬೆಲೆಯಲ್ಲೂ ಪರಿಷ್ಕರಣೆಯಾಗಿದೆ.

ಇದನ್ನೂ ಓದಿ: ಎಲ್​ಪಿಜಿ ಕೊರತೆ ನಡುವೆ ಗ್ಯಾಸ್ ಬುಕಿಂಗ್ ನಿಯಮ ಬದಲಿಸಿದ ಕೇಂದ್ರ , ಸಿಲಿಂಡರ್ ಬುಕ್ ಮಾಡಿದ್ರೆ ಎಷ್ಟು ದಿನ ಕಾಯ್ಬೇಕು?

ನಗರವಾರು ಹೊಸ ದರಗಳು

  • ದೆಹಲಿ – 2078.50 ರೂ.
  • ಕೊಲ್ಕತ್ತಾ – 2208.00 ರೂ.
  • ಮುಂಬೈ –2031.00 ರೂ.
  • ಚೆನ್ನೈ –2246.50 ರೂ.

ಗೃಹ ಬಳಕೆಯ LPG ದರದಲ್ಲಿಲ್ಲ ಬದಲಾವಣೆ

ಮಾರ್ಚ್ 7ರಂದು 60 ರೂ. ಏರಿಕೆಯಾದ ನಂತರ, ಗೃಹ ಬಳಕೆಯ 14.2 ಕೆ.ಜಿ. ಸಿಲಿಂಡರ್‌ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಸದ್ಯ ಹೆಚ್ಚಳವಾಗಿರೋದು ಕಮರ್ಷಿಯಲ್​​ ಸಿಲಿಂಡರ್​​ಗಳ ದರ ಮಾತ್ರವಾಗಿದೆ. ಫೆಬ್ರವರಿ 28ರಂದು ಇರಾನ್‌ನ ಸುಪ್ರೀಂ ಲೀಡರ್ ಅಲಿ ಖಾಮೆನೇಯಿ ಸಾವಿನ ನಂತರ ಪರಿಸ್ಥಿತಿ ಗಂಭೀರಗೊಂಡಿದೆ. ಇದರ ಪರಿಣಾಮವಾಗಿ ಹೋರ್ಮುಜ್ ಸಮುದ್ರ ಮಾರ್ಗದ ಮೂಲಕ ಸಾಗುವ ಜಾಗತಿಕ ತೈಲ ಸಾಗಾಟಕ್ಕೂ ಅಡ್ಡಿಯಾಗಿದೆ. ಈ ಮಾರ್ಗದ ಮೂಲಕ ವಿಶ್ವದ ಸುಮಾರು ಐದನೇ ಭಾಗದ ತೈಲ ಸಾಗಾಟವಾಗುವುದರಿಂದ, ಜಾಗತಿಕ ಇಂಧನ ಮಾರುಕಟ್ಟೆ ಹಾಗೂ ಆರ್ಥಿಕ ಸ್ಥಿತಿಗೆ ದೊಡ್ಡ ಹೊಡೆತ ಬಿದ್ದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Daily Devotional: ನೀವು ಸತ್ತಂತೆ ಕನಸು ಕಂಡಿದ್ದೀರಾ? ಇದರ ಹಿಂದಿನ ರಹಸ್ಯವೇನು ಗೊತ್ತಾ?

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ನಮ್ಮ ಕನಸಿನಲ್ಲಿ ನಾವು ಸಾವನ್ನಪ್ಪಿದರೆ ಏನು ಅರ್ಥ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಸ್ವಪ್ನಶಾಸ್ತ್ರದ ಪ್ರಕಾರ, ಮರಣಕ್ಕೆ ಸಂಬಂಧಿಸಿದ ಕನಸುಗಳು ಸಾಮಾನ್ಯವಾಗಿ ಶುಭ ಸೂಚಕವಾಗಿರುತ್ತವೆ. ನಿಮ್ಮ ಸಾವು ಕನಸಿನಲ್ಲಿ ಕಂಡರೆ ಅದು ಕಷ್ಟಗಳಿಂದ ಪಾರಾಗುವ, ಸಂಕಟಗಳು ದೂರವಾಗುವ, ದೋಷಗಳು ನಿವಾರಣೆಯಾಗುವ ಮತ್ತು ಅದೃಷ್ಟ ಕೂಡಿ ಬರುವ ಸೂಚನೆಯಾಗಿದೆ. ಬೇರೆಯವರ ಮರಣವನ್ನು ಕನಸಿನಲ್ಲಿ ಕಂಡರೆ ಅವರಿಗೆ ಆಯುಷ್ಯ ವೃದ್ಧಿಯಾಗುತ್ತದೆ. ಬ್ರಹ್ಮ ವೈವರ್ತ ಪುರಾಣದಲ್ಲಿ  ಇದನ್ನು ಸ್ಪಷ್ಟಪಡಿಸಲಾಗಿದೆ. ಇಂತಹ ಕನಸುಗಳು ಶುಭವನ್ನು ತರುವುದರಿಂದ ಯಾವುದೇ ಚಿಂತೆ ಅಥವಾ ನಕಾರಾತ್ಮಕ ಆಲೋಚನೆಗಳಿಗೆ ಒಳಗಾಗಬಾರದು ಎಂದು ಗುರೂಜಿ ಹೇಳಿದ್ದಾರೆ.

 

 

 

Source link

ಯಾವುದೇ ಒಪ್ಪಂದವಿಲ್ಲದೆ 2-3 ವಾರಗಳಲ್ಲಿ ಇರಾನ್-ಅಮೆರಿಕ ಯುದ್ಧ ಕೊನೆಗೊಳ್ಳುತ್ತೆ ಎಂದ ಟ್ರಂಪ್

ವಾಷಿಂಗ್ಟನ್, ಏಪ್ರಿಲ್ 1: ಇರಾನ್(Iran) ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹೊಸ ಗಡುವನ್ನು ನಿಗದಿಪಡಿಸಿದ್ದಾರೆ. ಇರಾನ್ ಯುದ್ಧವು ಎರಡು, ಮೂರು ವಾರಗಳಲ್ಲಿ ಕೊನೆಗೊಳ್ಳಲಿದೆ ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕ ಶೀಘ್ರದಲ್ಲೇ ಇರಾನ್​ನಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳಲಿದೆ. ಇರಾನ್‌ನಲ್ಲಿ ಆಡಳಿತ ಬದಲಾವಣೆಯ ಗುರಿಯನ್ನು ಸಾಧಿಸಲಾಗಿದೆ , ಈ ಸಂಘರ್ಷವನ್ನು ಮುಂದುವರಿಸಲು ಅಮೆರಿಕ ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇರಾನ್ ಯುದ್ಧವನ್ನು ಕೊನೆಗೊಳಿಸಲು ಯಾವುದೇ ಒಪ್ಪಂದದ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಆದಾಗ್ಯೂ, ಒಪ್ಪಂದ ಅಸಾಧ್ಯ ಎಂದು ಅವರು ಹೇಳಲಿಲ್ಲ, ಒಪ್ಪಂದ ಸಾಧ್ಯವಾಗಬಹುದು ಎಂದು ಟ್ರಂಪ್ ಹೇಳಿದ್ದಾರೆ.

ಮಸೌದ್ ಪೆಜೆಶ್ಕಿಯಾನ್ ಮಾತನಾಡಿ, ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ದ್ವೇಷವನ್ನು ಕೊನೆಗೊಳಿಸಲು ಟೆಹ್ರಾನ್ ಸಿದ್ಧವಾಗಿದೆ, ಆದರೆ ದಾಳಿಗಳು ಮತ್ತೆ ಸಂಭವಿಸುವುದಿಲ್ಲ ಎಂಬ ಭರವಸೆ ನೀಡಬೇಕು ಎಂದು ಹೇಳಿದ್ದಾರೆ.ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಅವರೊಂದಿಗೆ ದೂರವಾಣಿ ಸಂಭಾಷಣೆಯ ಸಮಯದಲ್ಲಿ ಮಾತನಾಡಿದ ಮಸೌದ್ ಪೆಜೆಶ್ಕಿಯಾನ್ ಈ ಹೇಳಿಕೆಗಳನ್ನು ನೀಡಿದ್ದಾರೆ.

ಮತ್ತಷ್ಟು ಓದಿ: ಇರಾನ್​​ನ ಇಸ್ಫಹಾನ್​ನಲ್ಲಿ ಅಮೆರಿಕ-ಇಸ್ರೇಲ್ ದಾಳಿ, ವಿಡಿಯೋ ಹಂಚಿಕೊಂಡ ಟ್ರಂಪ್

ಫೆಬ್ರವರಿ 28 ರಂದು ಇಸ್ರೇಲ್-ಅಮೆರಿಕ ಜಂಟಿ ವೈಮಾನಿಕ ದಾಳಿಯಲ್ಲಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಕೊಲ್ಲಲ್ಪಟ್ಟಾಗ ಇರಾನ್ ಯುದ್ಧ ಪ್ರಾರಂಭವಾಯಿತು. ಅಂದಿನಿಂದ, ಹಲವಾರು ಪ್ರಮುಖ ಇರಾನಿನ ನಾಯಕರು ಮತ್ತು ಅಧಿಕಾರಿಗಳು ಕೊಲ್ಲಲ್ಪಟ್ಟರು ಮತ್ತು ಮೊಜ್ತಬಾ ಖಮೇನಿ ಸುಪ್ರೀಂ ನಾಯಕನ ಸ್ಥಾನವನ್ನು ವಹಿಸಿಕೊಂಡಿದ್ದಾರೆ.

ಯುದ್ಧದ ಪರಿಣಾಮಗಳು ಈಗ ಅಮೆರಿಕವನ್ನು ತಲುಪಿವೆ. ಅಮೆರಿಕದಲ್ಲಿ ಅನಿಲದ ಸರಾಸರಿ ಬೆಲೆ ಪ್ರತಿ ಗ್ಯಾಲನ್‌ಗೆ 4 ಡಾಲರ್​ ಏರಿದೆ, ಇದು 2022 ರ ನಂತರದ ಅತ್ಯಧಿಕವಾಗಿದೆ. ಯುದ್ಧವನ್ನು ಕೊನೆಗೊಳಿಸಿ ಪ್ರಮುಖ ವ್ಯಾಪಾರ ಮಾರ್ಗವನ್ನು ಮತ್ತೆ ತೆರೆಯುವ ಒಪ್ಪಂದವನ್ನು ಶೀಘ್ರದಲ್ಲೇ ತಲುಪದಿದ್ದರೆ ಇರಾನ್‌ನ ನೀರು ಮತ್ತು ಇಂಧನ ಮೂಲಸೌಕರ್ಯವನ್ನು ನಾಶಪಡಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ.

ಮಧ್ಯಪ್ರಾಚ್ಯದಾದ್ಯಂತ 3,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇರಾನ್‌ನಲ್ಲಿ, ಇಸ್ರೇಲಿ ಮತ್ತು ಅಮೇರಿಕನ್ ದಾಳಿಗಳು 1,900 ಕ್ಕೂ ಹೆಚ್ಚು ಜನರನ್ನು ಕೊಂದಿವೆ .

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Horoscope Today: ಇಂದು ಈ ರಾಶಿಯವರಿಗೆ ಆರ್ಥಿಕವಾಗಿ ಉತ್ತಮ ದಿನ

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 1, ಬುಧವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷ, ಚತುರ್ದಶಿ ತಿಥಿಯಾಗಿದೆ. ಇಂದು ಡಾ. ಬಸವರಾಜ ಗುರೂಜಿಯವರು ಪ್ರತಿ ರಾಶಿಯವರಿಗೂ ಆರೋಗ್ಯ, ಆರ್ಥಿಕ ಸ್ಥಿತಿ, ಉದ್ಯೋಗ, ವ್ಯಾಪಾರ, ಕುಟುಂಬ ಮತ್ತು ವೈಯಕ್ತಿಕ ಸಂಬಂಧಗಳ ಕುರಿತು ವಿವರವಾದ ಸಲಹೆಗಳನ್ನು ನೀಡಿದ್ದಾರೆ. ರವಿ ಮೀನ ರಾಶಿಯಲ್ಲಿ ಮತ್ತು ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸಲಿದ್ದಾನೆ ಎಂಬುದನ್ನು ಅವರು ವಿವರಿಸಿದ್ದಾರೆ.

 

 

Source link