Headlines

nagaraj11081993

ಬೆಂಗಳೂರಿನ ರಿಯಲ್ ಎಸ್ಟೇಟ್ ಏಜೆಂಟ್ ಕಿಡ್ನ್ಯಾಪ್! ಪೊಲೀಸರ 7 ವಿಶೇಷ ತಂಡಗಳಿಂದ ಆರೋಪಿಗಳಿಗೆ ಬಲೆ

ಆನೇಕಲ್, ಮಾರ್ಚ್​ 09: ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಕರ್ಪೂರು ಗೇಟ್ ಬಳಿ ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ ಕಿಡ್ನ್ಯಾಪ್ (Kidnap) ಆಗಿದ್ದು, ಪ್ರಕರಣ ಸಂಬಂಧ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಹೊನ್ನಕಳಸಾಪುರ ಗ್ರಾಮದ ನಿವಾಸಿ ಗೋಪಾಲ್ ಅಲಿಯಾಸ್ ಗೋಪಿ ಎಂಬ ರಿಯಲ್ ಎಸ್ಟೇಟ್ ಏಜೆಂಟ್ ಅವರನ್ನು ಮಾರ್ಚ್ 8ರಂದು ಸಂಜೆ 7.30ರ ಸುಮಾರಿಗೆ ಕಿಡ್ನ್ಯಾಪ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಗೋಪಾಲ್ ಕಾರಿಗೆ ಡಿಕ್ಕಿ ಹೊಡೆದ ಕಿಡಿಗೇಡಿಗಳು ಗೋಪಾಲ್ ರಿಯಲ್…

Read More

ದುಬೈನಲ್ಲಿ ಸಿಲುಕಿದ್ದ ಮತ್ತಷ್ಟು ಕನ್ನಡಿಗರು ತಾಯ್ನಾಡಿಗೆ ವಾಪಸ್: ಬೆಂಗಳೂರಿಗೆ ಬಂದಿಳಿದ 288 ಪ್ರಯಾಣಿಕರು

ಬೆಂಗಳೂರು, ಮಾರ್ಚ್ 9: ಮಧ್ಯಪ್ರಾಚ್ಯದಲ್ಲಿ ದಿನೇ ದಿನೇ ಇಸ್ರೇಲ್-ಇರಾನ್ ಯುದ್ಧದ (Israel Iran War) ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆ ದುಬೈನಲ್ಲಿ ಸಿಲುಕಿದ್ದ ಕನ್ನಡಿಗರು ಹಂತಹಂತವಾಗಿ ತಾಯ್ನಾಡಿಗೆ ಮರಳುತ್ತಿದ್ದಾರೆ. ಮಾರ್ಚ್ 8 ರ ಭಾನುವಾರ ರಾತ್ರಿ ದುಬೈನಿಂದ ಹೊರಟ ಎಮಿರೇಟ್ಸ್ ವಿಮಾನದಲ್ಲಿ 288 ಮಂದಿ ಪ್ರಯಾಣಿಕರು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಬಂದಿಳಿದರು. ಯುದ್ಧದ ಆತಂಕದಿಂದಾಗಿ ಹಲವು ದಿನಗಳಿಂದ ದುಬೈನಲ್ಲಿ ಸಿಲುಕಿದ್ದ ಕನ್ನಡಿಗರು ಇದೀಗ ವಿಮಾನ ಸೇವೆಗಳು ತಾತ್ಕಾಲಿಕ ಪುನರಾರಂಭವಾದ ಬೆನ್ನಲ್ಲೇ ತಾಯ್ನಾಡಿಗೆ ಮರಳುತ್ತಿದ್ದಾರೆ. ಈಗಾಗಲೇ…

Read More

ಎಂಥಾ ಅದ್ಭುತ: ಹುಡುಗ ಮಾತ್ರ ಅಲ್ಲ ಇಡೀ ಫ್ಯಾಮಿಲಿಯೇ ಬಂದು ಹುಡುಗಿಗೆ ಪ್ರಪೋಸ್ ಮಾಡಿರುವ ವಿಡಿಯೋ ಇಲ್ಲಿದೆ

ಸಾಮಾನ್ಯವಾಗಿ ಹೋಟೆಲ್​ಗೋ ಅಥವಾ ಯಾವುದೋ ಒಳ್ಳೆಯ ಸ್ಥಳಕ್ಕೆ ಹೋಗಿ ಹುಡುಗರು ಹುಡುಗಿಯರಿಗೆ ಪ್ರೇಮ ನಿವೇದನೆ ಮಾಡುತ್ತಾರೆ. ಆದರೆ ಹುಡುಗ ಮಾತ್ರವಲ್ಲ ಇಡೀ ಕುಟುಂಬವೇ ಆಕೆಗೆ ಪ್ರಪೋಸ್ ಮಾಡಲು ಅವರ ಮನೆ ಕೆಳಗೆ ನಿಂತು ಬಾಲ್ಕನಿಯಲ್ಲಿ ನಿಂತಿರುವ ಯುವತಿಗೆ ಪ್ರಪೋಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಆ ವ್ಯಕ್ತಿ ತನ್ನ ಗೆಳತಿಯ ಮನೆಯ ಹೊರಗೆ ತನ್ನ ಸ್ನೇಹಿತರು, ಸಂಬಂಧಿಕರು ಮತ್ತು ಕುಟುಂಬ ಸದಸ್ಯರನ್ನು ಒಟ್ಟುಗೂಡಿಸಿದ್ದರು. ಎಲ್ಲರೂ ಒಟ್ಟಿಗೆ ಕಾಯುತ್ತಿದ್ದರು. ಜನರು ನೃತ್ಯ ಮಾಡುತ್ತಾ, ಹಾಡುತ್ತಾ, ಯುವತಿಗೆ ಬಾಲ್ಕನಿಯಲ್ಲಿ ನೋಡುವಂತೆ…

Read More

ತ್ರಿಷಾಗೆ ನಡೆದಿತ್ತು ನಿಶ್ಚಿತಾರ್ಥ; ಹುಡುಗ ಯಾರು? ಬೇಡ ಎಂದಿದ್ದು ಏಕೆ?

ನಟಿ ತ್ರಿಷಾ (Trisha) ಅವರು ಈಗ ಸುದ್ದಿಯಲ್ಲಿ ಇದ್ದಾರೆ. ಅವರು ನಟ ಹಾಗೂ ರಾಜಕಾರಣಿ ದಳಪತಿ ವಿಜಯ್ ಜೊತೆ ಸುತ್ತಾಡುತ್ತಾ ಇದ್ದಾರೆ. ಈ ಕಾರಣಕ್ಕೆ ವಿಜಯ್ ಹಾಗೂ ಅವರ ಮಧ್ಯೆ ಸಂಬಂಧ ಕಲ್ಪಿಸಲಾಗುತ್ತಿದೆ. ಹೀಗಿರುವಾಗಲೇ ವಿಜಯ್ ಪತ್ನಿ ಸಂಗೀತಾ ಅವರು ‘ವಿಜಯ್ಗೆ ನಟಿಯ ಜೊತೆ ಸಂಬಂಧ ಇದೆ’ ಎಂದು ಆರೋಪಿಸಿದ್ದಾರೆ. ತ್ರಿಷಾ ಅವರಿಗೆ ಈಗ 42 ವರ್ಷ. ತ್ರಿಷಾ ಇನ್ನೂ ವಿವಾಹ ಆಗಿಲ್ಲ. ಹಾಗಂತ ಅವರು ಈ ಬಗ್ಗೆ ಆಲೋಚನೆ ಮಾಡಿಯೇ ಇಲ್ಲ ಎಂದು ಹೇಳೋಕೆ ಆಗುವುದಿಲ್ಲ….

Read More

ಕೋಚ್ ಸಾಬ್, ಕಿಲ್ಲರ್ ಕಾಂಬಿನೇಶನ್​… ಗಂಭೀರ್​ನ ಪ್ರಶಂಸಿಸಿದ ಧೋನಿ

T20 World Cup 2026: 2026ರ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಚಾಂಪಿಯನ್ ಪಟ್ಟದೊಂದಿಗೆ ಟಿ20 ವಿಶ್ವಕಪ್​ ಇತಿಹಾಸದಲ್ಲಿ ಮೂರು ಬಾರಿ ಟ್ರೋಫಿ ಎತ್ತಿ ಹಿಡಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಟೀಮ್ ಇಂಡಿಯಾ ಪಾತ್ರವಾಗಿದೆ. ಇದಕ್ಕೂ ಮುನ್ನ ಭಾರತ ತಂಡವು 2007  ಮತ್ತು 2024 ರಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು. ಇದೀಗ ಮತ್ತೊಮ್ಮೆ ವಿಶ್ವ ಕಿರೀಟ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಐತಿಹಾಸಿಕ ಕ್ಷಣಗಳಿಗೆ ಈ ಹಿಂದಿನ ವಿಶ್ವಕಪ್ ವಿಜೇತ ನಾಯಕರುಗಳು ಸಾಕ್ಷಿಯಾಗಿದ್ದರು. ಅಂದರೆ…

Read More

‘ತ್ರಿಷಾ ಮನೆಯಲ್ಲೇ ಇರಬೇಕು’; ಪಾರ್ಥಿಬನ್ ಹೇಳಿಕೆ ಬಗ್ಗೆ ಶುರುವಾಗಿದೆ ಚರ್ಚೆ

ಕಳೆದ ಕೆಲವು ವಾರಗಳಿಂದ ನಟ ದಳಪತಿ ವಿಜಯ್ ಹಾಗೂ ನಟಿ ತ್ರಿಷಾ (Trisha) ಅವರ ಹೆಸರು ಚರ್ಚೆಯಲ್ಲಿದೆ. ಅವರಿಬ್ಬರ ಸಂಬಂಧದ ಕಾರಣದಿಂದ ಸಂಗೀತಾ ಅವರು ವಿಜಯ್​​ಗೆ ವಿಚ್ಛೇದನ ನೀಡಲಿದ್ದಾರೆ ಎಂಬ ಸುದ್ದಿ ಹರಿದಾಡಿತು. ವಿವಾಹ ಆರತಕ್ಷತೆಯೊಂದಕ್ಕೆ ವಿಜಯ್ ಮತ್ತು ತ್ರಿಷಾ ಒಟ್ಟಾಗಿ ತೆರಳಿದ್ದರು. ಇದರ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಾದ ಬಳಿಕ ಚರ್ಚೆ ಶುರುವಾಗಿದೆ. ಈಗ ಈ ಬಗ್ಗೆ ನಟ ಹಾಗೂ ನಿರ್ದೇಶಕ ಪಾರ್ಥಿಬನ್ ಅವರು ಕುಹಕವಾಡಿದ್ದಾರೆ. ದಳಪತಿ ವಿಜಯ್ ಹಾಗೂ…

Read More

ಈ ವಂದೇ ಭಾರತ್ ರೈಲಿನಲ್ಲಿ ಪುರುಷ ಸಿಬ್ಬಂದಿಯೇ ಇರ್ಲಿಲ್ಲ, ಎಲ್ಲರೂ ಮಹಿಳೆಯರೇ!

ಬೆಂಗಳೂರು, ಮಾರ್ಚ್ 9: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗವು ಮಾರ್ಚ್ 8ರಂದು ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು, ಗಮನ ಸೆಳೆಯಿತು. ಇದರ ಭಾಗವಾಗಿ ಬೆಂಗಳೂರು ಮತ್ತು ಮೈಸೂರು ಮಾರ್ಗದಲ್ಲಿ ಭಾನುವಾರ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲನ್ನು ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯೇ ನಿರ್ವಹಿಸಿದರು. ಲೋಕೊ ಪೈಲಟ್, ಟಿಟಿ (ಟಿಕೆಟ್ ಪರಿಶೀಲಕರು) ಸೇರಿದಂತೆ ರೈಲಿನ ಕಾರ್ಯಾಚರಣೆಗೆ ಸಂಬಂಧಿಸಿದ ವಿವಿಧ ಜವಾಬ್ದಾರಿಗಳನ್ನು ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯೇ ನಿರ್ವಹಿಸಿದರು. ಮಹಿಳೆಯರ ಸಾಧನೆ ಮತ್ತು ಅವರ ಪಾತ್ರವನ್ನು ಗೌರವಿಸುವ ಉದ್ದೇಶದಿಂದ…

Read More

ಮದುವೆ ಒತ್ತಡದಿಂದ ತಪ್ಪಿಸಿಕೊಳ್ಳಲು ತಲೆ ಬೋಳಿಸಿಕೊಂಡ ಯುವತಿ

ತಂದೆ-ತಾಯಿಗೂ ಮಕ್ಕಳು ಮದುವೆಯಾಗಬೇಕು, ಅವರ ಜೀವನವನ್ನು ಅವರು ಕಟ್ಟಿಕೊಳ್ಳಬೇಕೆಂಬ ಕನಸಿರುತ್ತದೆ. ಹಾಗೆಯೇ ಮಕ್ಕಳಿಗೂ ತಮ್ಮ ಕಾಲ ಮೇಲೆ ನಾವು ನಿಲ್ಲಬೇಕು ಚೆನ್ನಾಗಿ ಸಂಪಾದನೆ ಮಾಡಬೇಕು ಮದುವೆ ಏನಿದ್ದರೂ ಆಮೇಲೆ ಎನ್ನುವ ಮನಸ್ಥಿತಿ ಇರುತ್ತದೆ. ಆದರೆ ಮಕ್ಕಳಿಗೆ ಅಪ್ಪ-ಅಮ್ಮನ ನೋಯಿಸಲೂ ಇಷ್ಟ ಇರುವುದಿಲ್ಲ. ಅಂಥಾ ಸಮಯದಲ್ಲಿ ಎಂಥಾ ಆಲೋಚನೆಗಳು ಬರುತ್ತವೆ ನೋಡಿ. ಯುವತಿಯೊಬ್ಬಳು ಮದುವೆ ಒತ್ತಡದಿಂದ ತಪ್ಪಿಸಿಕೊಳ್ಳಲು ತಲೆ ಬೋಳಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ವೈಯಕ್ತಿಕ ಸ್ವಾತಂತ್ರ್ಯ ಮತ್ತು ಹೆಣ್ಣುಮಕ್ಕಳ ಮೇಲೆ ಇರಿಸಲಾಗಿರುವ ಸಾಮಾಜಿಕ ನಿರೀಕ್ಷೆಗಳ ಬಗ್ಗೆ ವ್ಯಾಪಕ…

Read More

Sanju Samson: ನನ್ನ ಈ ಪ್ರದರ್ಶನಕ್ಕೆ ‘ಅವರೇ’ ಕಾರಣ..!

T20 World Cup 2026: ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಮೂರನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಚಾಂಪಿಯನ್ ಪಟ್ಟದ ಹಿಂದಿನ ರೂವಾರಿ ಸಂಜು ಸ್ಯಾಮ್ಸನ್. ಆರಂಭಿಕ ಪಂದ್ಯಗಳಿಂದ ಹೊರಗುಳಿದಿದ್ದ ಸ್ಯಾಮ್ಸನ್ ನಿರ್ಣಾಯಕ ಹಂತದಲ್ಲಿ ಕಣಕ್ಕಿಳಿದು ಅಬ್ಬರಿಸುವ ಮೂಲಕ ಟೀಮ್ ಇಂಡಿಯಾಗೆ ಚಾಂಪಿಯನ್ ಪಟ್ಟ ತಂದು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಅದರಲ್ಲೂ ಮುಂಬೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಮ್ಯಾಚ್​ನಲ್ಲಿ 89 ರನ್ ಬಾರಿಸಿದ ಸ್ಯಾಮ್ಸನ್, ಫೈನಲ್​​ನಲ್ಲೂ ನ್ಯೂಝಿಲೆಂಡ್ ವಿರುದ್ಧ ಅಬ್ಬರಿಸಿದರು. ಅಹಮದಾಬಾದ್​ನಲ್ಲಿ ನಡೆದ ಈ…

Read More

Bengaluru Air Quality: ಇನ್ನೂ ಕಳಪೆ ಮಟ್ಟಕ್ಕಿಳಿದ ಬೆಂಗಳೂರಿನ ವಾಯು ಗುಣಮಟ್ಟ!

ಬೆಂಗಳೂರು, ಮಾರ್ಚ್​ 09: ರಾಜ್ಯದೆಲ್ಲೆಡೆ ಬಿಸಿಲಿನ ಬೇಗೆ ಹೆಚ್ಚಾಗಿದ್ದು ಈ ತಿಂಗಳು ಪೂರ್ತಿ ಇದೇ ವಾತಾವರಣ ಇರಲಿದೆ. ಈ ನಡುವೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವಾಯು ಗುಣಮಟ್ಟ (Bengaluru Air Quality) ಕುಸಿತ ಕಂಡಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ನಗರಗಳ ಗಾಳಿಯ ಕಳಪೆ ಗುಣಮಟ್ಟ, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬೆಂಗಳೂರು, ಕಲಬುರ್ಗಿ, ಬಳ್ಳಾರಿ ಸೇರಿದಂತೆ ಹಲವೆಡೆ ಇಂದು ವಾಯು ಗುಣಮಟ್ಟ 150 ದಾಟಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ…

Read More