ತಮ್ಮ ಜೀವನದಲ್ಲಿ ಪ್ರಭಾವ ಬೀರಿದ ಮಹಿಳೆಯರನ್ನು ಸ್ಮರಿಸಿದ ಗೌತಮ್ ಅದಾನಿ
ಅಹ್ಮದಾಬಾದ್, ಮಾರ್ಚ್ 8: ತಮ್ಮ ಜೀವನ ಹಾಗೂ ಮೌಲ್ಯಗಳು ರೂಪುಗೊಳ್ಳಲು ಕಾರಣರಾದ ಮಹಿಳೆಯರನ್ನು ಗೌತಮ್ ಅದಾನಿ (Gautam Adani) ಇವತ್ತಿನ ಮಹಿಳೆಯರ ದಿನದಂದು (International Women’s Day) ಸ್ಮರಿಸಿಕೊಂಡಿದ್ದಾರೆ. ತಮ್ಮ ಸಾಕ್ಷಿಪ್ರಜ್ಞೆ ರೂವಾರಿಗಳೆಂದು ಆ ಮಹಿಳೆಯರನ್ನು ಬಣ್ಣಿಸಿದ್ದಾರೆ. ಲಿಂಕ್ಡ್ಇನ್ನಲ್ಲಿ ಭಾವುಕವಾದ ಪೋಸ್ಟ್ವೊಂದನ್ನು ಹಾಕಿರುವ ಗೌತಮ್ ಅದಾನಿ, ತಮ್ಮ ಕುಟುಂಬದಲ್ಲಿನ ಮಹಿಳೆಯರ ಪ್ರಭಾವ ತಮಗೆ ಅದೆಷ್ಟು ಗಾಢವಾಗಿ ಆಗಿತ್ತು ಎಂದು ವಿವರಿಸಿದ್ದಾರೆ. ತಮ್ಮ ಜೀವನ, ಜವಾಬ್ದಾರಿ, ರಾಷ್ಟ್ರ ನಿರ್ಮಾಣ ವಿಚಾರದಲ್ಲಿ ಹೊಸ ದೃಷ್ಟಿಕೋನ ಸಿಗಲು ಇವರ ಪಾತ್ರ ಮಹತ್ವದ್ದೆಂದು…