All posts by nagaraj11081993

ಬೆಂಗಳೂರಿನಲ್ಲಿ ಜೂ ಎನ್​​ಟಿಆರ್: ಬಂದಿದ್ದೇಕೆ? ಆಡಿದ ಮಾತುಗಳೇನು?

ಬೆಂಗಳೂರಿನಲ್ಲಿ ಜೂ ಎನ್​​ಟಿಆರ್: ಬಂದಿದ್ದೇಕೆ? ಆಡಿದ ಮಾತುಗಳೇನು?

ಪ್ಯಾನ್ ಇಂಡಿಯಾ ಸ್ಟಾರ್, ಟಾಲಿವುಡ್​​ನ ಸೂಪರ್ ಸ್ಟಾರ್ ಜೂ ಎನ್​​ಟಿಆರ್ (Jr NTR) ಅವರು ಇಂದು (ಮಾರ್ಚ್ 08) ಬೆಂಗಳೂರಿಗೆ ಆಗಮಿಸಿದ್ದರು. ನೆರೆ ರಾಜ್ಯದ ಸ್ಟಾರ್ ನಟ-ನಟಿಯರು ಸಿನಿಮಾ ಪ್ರಚಾರಕ್ಕಾಗಿ ಮಾತ್ರವೇ ಬೆಂಗಳೂರನ್ನು, ಕರ್ನಾಟಕವನ್ನು ನೆನಪು ಮಾಡಿಕೊಳ್ಳುತ್ತಾರೆ. ಆದರೆ ಜೂ ಎನ್​​ಟಿಆರ್ ಅವರ ಯಾವ ಸಿನಿಮಾ ಸಹ ಸದ್ಯಕ್ಕೆ ಬಿಡುಗಡೆ ಆಗುತ್ತಿಲ್ಲ ಆದರೂ ಇಂದು ಹಠಾತ್ತನೇ ಅವರು ಬೆಂಗಳೂರಿಗೆ ಬಂದಿದ್ದರು. ಆಯೋಜಿತವಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಲ್ಲದೆ, ಕನ್ನಡದಲ್ಲಿಯೇ ಮಾತನಾಡಿದರು.

ಕಿಮ್ಸ್ ಆಸ್ಪತ್ರೆಯ ಹೊಸ ಘಟಕದ ಉದ್ಘಾಟನೆಗಾಗಿ ಜೂ ಎನ್​​ಟಿಆರ್ ಅವರು ಇಂದು ಬೆಂಗಳೂರಿಗೆ ಬಂದಿದ್ದರು. ಕಿಮ್ಸ್ ಜೊತೆಗೆ ಜೂ ಎನ್​​ಟಿಆರ್ ಅವರಿಗೆ ಬಲು ಆಪ್ತ ಬಂಧ ಇದೆ. 1983ರಲ್ಲಿ ಜೂ ಎನ್​​ಟಿಆರ್ ಅವರ ತಾತ ಎನ್​​ಟಿಆರ್ ಅವರೇ ಕಿಮ್ಸ್​​ಗೆ ಅಡಿಗಲ್ಲು ಹಾಕಿದ್ದರು. ಜೂ ಎನ್​​ಟಿಆರ್, 2009 ಭಾರಿ ರಸ್ತೆ ಅಪಘಾತಕ್ಕೆ ಈಡಾಗಿದ್ದರೂ ಸಹ ಅವರು ಕಿಮ್ಸ್​​ನಲ್ಲಿಯೇ ಚಿಕಿತ್ಸೆ ಪಡೆದಿದ್ದರು. ಇದೇ ಕಾರಣಕ್ಕೆ ಇಂದು ಕಿಮ್ಸ್​​ನ ಹೊಸ ಘಟಕದ ಉದ್ಘಾಟನೆಗೆ ಅವರು ಆಗಮಿಸಿದ್ದರು.

ಈ ವೇಳೆ ಕನ್ನಡದಲ್ಲಿಯೇ ಭಾಷಣ ಆರಂಭಿಸಿದ ನಟ ಜೂ ಎನ್​​ಟಿಆರ್, ‘ನನಗೆ ಕರ್ನಾಟಕಕ್ಕೆ ಬರುವುದೆಂದರೆ ಅಪ್ಪನ ಮನೆಯಿಂದ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತದೆ. ನನ್ನ ತಾಯಿಯದ್ದು ಕುಂದಾಪುರ. ನನ್ನ ತಾಯಿ ಭಾಷೆ ಕನ್ನಡ. ಹಾಗಾಗಿ ಕರ್ನಾಟಕಕ್ಕೆ ಬರುವುದೆಂದರೆ ನನಗೆ ವಿಶೇಷ ಪ್ರೀತಿ’ ಎಂದು ಜೂ ಎನ್​ಟಿಆರ್ ಹೇಳಿದರು. ಕಿಮ್ಸ್​ನ ಸೇವೆಯನ್ನು ಕೊಂಡಾಡಿದ ಜೂ ಎನ್​​ಟಿಆರ್, ಕಿಮ್ಸ್​​ನವರು ‘ಪೇಷೆಂಟ್ ಈಸ್ ಪ್ಯಾರಾಮೌಂಟ್’ ಎಂಬ ಧ್ಯೇಯ ವಾಕ್ಯದೊಂದಿಗೆ ಸಲ್ಲಿಸುತ್ತಿರುವ ಸೇವೆ ಬೆಲೆಕಟ್ಟಲಾರದ್ದು, ಅವರು ಈ ಉದ್ಯಮದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಅಪಾರ ಯಶಸ್ಸು ಅವರಿಗೆ ಸಿಗಲಿ ಎಂದು ಹಾರೈಸಿದರು.

ಇದನ್ನೂ ಓದಿ:ಜೂ ಎನ್​​ಟಿಆರ್​ ಹಳೆ ಸಿನಿಮಾ ಸೀಕ್ವೆಲ್​​ಗೆ ಕತೆ ರೆಡಿ, ಆದರೆ ನಟಿಸುತ್ತಾರಾ ನಟ?

ಮಹಿಳಾ ದಿನಾಚರಣೆ ಬಗ್ಗೆ ಮಾತನಾಡಿದ ಜೂ ಎನ್​​ಟಿಆರ್, ‘ಮಹಿಳೆಯರನ್ನು ಹೇಗೆ ನೋಡಬೇಕು, ಮಹಿಳೆಯರಿಗೆ ಗೌರವ ಕೊಡಬೇಕು ಎಂಬುದನ್ನು ಪದೇ ಪದೇ ನೆನಪು ಮಾಡಿಸುವ ಪರಿಸ್ಥಿತಿ ಇದೇ ಎಂಬುದೇ ನನಗೆ ಬೇಸರ ತರುವ ವಿಷಯ. ಮಹಿಳೆಯರು ಎಷ್ಟು ಮುಖ್ಯ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಅದು ಸ್ವಾಭಾವಿಕವಾಗಿ ಬರಬೇಕು. ಅದೆಲ್ಲ ಮನೆಯಿಂದಲೇ ಪ್ರಾರಂಭ ಆಗಬೇಕು, ನನ್ನ ಇಬ್ಬರು ಗಂಡು ಮಕ್ಕಳು ಸಹ ಹೆಣ್ಣು ಮಕ್ಕಳನ್ನು ಗೌರವಿಸುವ ವ್ಯಕ್ತಿಗಳಾಗಿಯೇ ಬೆಳೆಯಲಿದ್ದಾರೆ ಎಂಬುದು ನಾನು ಖಾತ್ರಿಪಡಿಸುತ್ತಿದ್ದೇನೆ’ ಎಂದರು ಜೂ ಎನ್​​ಟಿಆರ್.

ರಸ್ತೆ ಸುರಕ್ಷತೆ ಬಗ್ಗೆಯೂ ಮಾತನಾಡಿದ ಜೂ ಎನ್​​ಟಿಆರ್, ‘ರಸ್ತೆ ಅಪಘಾತದಿಂದ ಭಾರಿ ನಷ್ಟವನ್ನು ನಮ್ಮ ಕುಟುಂಬ ಅನುಭವಿಸಿದೆ. ನಾನು, ನನ್ನ ದೊಡ್ಡ ಅಣ್ಣ ಮತ್ತು ತಂದೆಯನ್ನು ರಸ್ತೆ ಅಪಘಾತದಲ್ಲಿ ಕಳೆದುಕೊಂಡಿದ್ದೇನೆ. ನಾನು ಸಹ ಸ್ವತಃ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದೆ, ಜೀವವೇ ಹೋಗುವ ಸ್ಥಿತಿ ಅಂದು ಇತ್ತು. ರಸ್ತೆ ಸುರಕ್ಷತೆ ಮತ್ತು ಡ್ರೈವಿಂಗ್ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಡ್ರೈವಿಂಗ್ ಮಾಡಬೇಕಾದರೆ ಕುಟುಂಬವನ್ನು ಮನಸ್ಸಿನಲ್ಲಿಟ್ಟುಕೊಂಡು ಡ್ರೈವ್ ಮಾಡಿ. ಆಗ ಎಚ್ಚರಿಕೆ ಇರುತ್ತದೆ. ಜವಾಬ್ದಾರಿ ಎಂಬುದು ಒಳಗಿನಿಂದಲೇ ಬರಲಿ, ಅದು ಹೇರಿಕೆ ಆಗುವುದು ಬೇಡ’ ಎಂದಿದ್ದಾರೆ ಜೂ ಎನ್​​ಟಿಆರ್.

ಇನ್ನು ಅಭಿಮಾನಿಗಳ ಬಗ್ಗೆ ಮಾತನಾಡಿದ ಜೂ ಎನ್​​ಟಿಆರ್, ‘ನಿಮ್ಮ ಪ್ರೀತಿಯನ್ನು ಪಡೆಯಲು ನಾನು ಅದೃಷ್ಟ ಮಾಡಿದ್ದೇನೆ. ಅಭಿಮಾನದ ಸಹೋದರರು ನೀವು. ನಿಮಗೆಲ್ಲರಿಗೂ ಕೋಟಿ-ಕೋಟಿ ಧನ್ಯವಾದ. ನಿಮ್ಮಲ್ಲಿ ಕೇಳಿಕೊಳ್ಳುವುದಿಷ್ಟೆ ಜಾಗೃತೆಯಾಗಿ ಮನೆಗೆ ಹೋಗಿ, ನಮ್ಮ ಮನೆಯಲ್ಲಿ ನಡೆದ ದುರ್ಘಟನೆ ನಿಮ್ಮ ಮನೆಯಲ್ಲಿ ನಡೆಯಬಾರದು, ನಿಮ್ಮ ಪ್ರೀತಿಗೆ, ಆಜನ್ಮ ಋಣದಲ್ಲಿರುತ್ತೇನೆ’ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ಮೊದಲ ಓವರ್‌ನಲ್ಲಿ ಸಿಕ್ಸರ್; ವಿಶ್ವ ದಾಖಲೆ ಮುರಿದ ಸಂಜು ಸ್ಯಾಮ್ಸನ್

2026 ರ ಟಿ20 ವಿಶ್ವಕಪ್ ಫೈನಲ್‌ (T20 World Cup Final) ಪಂದ್ಯ ನ್ಯೂಜಿಲೆಂಡ್ ಹಾಗೂ ಟೀಂ ಇಂಡಿಯಾ (India vs New Zealand) ನಡುವೆ ಅಹಮದಾಬಾದ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಪರ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಇನ್ನಿಂಗ್ಸ್ ಆರಂಭಿಸಿದರು. ಮೊದಲ ಓವರ್​ನಲ್ಲಿ ಸ್ಟ್ರೈಕ್ ತೆಗೆದುಕೊಂಡ ಸಂಜು ಸ್ಯಾಮ್ಸನ್ (Sanju Samson) ಅದ್ಭುತ ಸಿಕ್ಸರ್ ಬಾರಿಸುವ ಮೂಲಕ ತಮ್ಮ ಖಾತೆ ತೆರೆದರು. ಇದರೊಂದಿಗೆ ವಿಶ್ವ ದಾಖಲೆಯನ್ನು ಸೃಷ್ಟಿಸಿದರು. ಮ್ಯಾಟ್ ಹೆನ್ರಿ ಅವರ ಎಸೆತದಲ್ಲಿ ಸಂಜು ಸ್ಯಾಮ್ಸನ್ ಸಿಕ್ಸ್ ಬಾರಿಸಿದ ತಕ್ಷಣ ಟಿ20 ವಿಶ್ವಕಪ್​ ಪಂದ್ಯಗಳಲ್ಲಿ ಮೊದಲ ಓವರ್‌ನಲ್ಲಿ ಅತಿ ಹೆಚ್ಚು ಸಿಕ್ಸ್ ಬಾರಿಸಿದ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದಾರೆ.

ಸಂಜು ಸ್ಯಾಮ್ಸನ್ ಇದುವರೆಗೆ ಆಡಿರುವ ನಾಲ್ಕು ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಮೊದಲ ಓವರ್‌ನಲ್ಲಿ ಸಿಕ್ಸ್ ಬಾರಿಸಿದ್ದಾರೆ . ಇದರೊಂದಿಗೆ ಟಿ20 ವಿಶ್ವಕಪ್‌ನಲ್ಲಿ 40 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದ ಇಂಗ್ಲೆಂಡ್ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅವರ ದಾಖಲೆಯನ್ನು ಮುರಿದಿದ್ದಾರೆ. ಸಂಜು ಕೇವಲ 21 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಸಂಜು ಸ್ಯಾಮ್ಸನ್ ಮತ್ತು ಫಿಲ್ ಸಾಲ್ಟ್ ಜೊತೆಗೆ, ರಹಮಾನಲ್ಲಾ ಗುರ್ಬಾಜ್ ಟಿ20 ವಿಶ್ವಕಪ್ ಪಂದ್ಯಗಳ ಮೊದಲ ಓವರ್‌ನಲ್ಲಿ ಮೂರು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಮೊಹಮ್ಮದ್ ರಿಜ್ವಾನ್ ಮತ್ತು ಕ್ವಿಂಟನ್ ಡಿ ಕಾಕ್ ಕೂಡ ಈ ಸಾಧನೆಯನ್ನು ಮೂರು ಬಾರಿ ಮಾಡಿದ್ದಾರೆ. ಆದಾಗ್ಯೂ, ಸಂಜು ಸ್ಯಾಮ್ಸನ್ ನಾಲ್ಕು ಸಿಕ್ಸರ್‌ ಬಾರಿಸುವ ಮೂಲಕ ಈ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಮೊದಲ ಓವರ್​ನಲ್ಲೇ ಸಿಕ್ಸರ್

ನಮೀಬಿಯಾ ವಿರುದ್ಧದ ಪಂದ್ಯದ ಮೊದಲ ಓವರ್‌ನಲ್ಲಿ ಸಂಜು ಸ್ಯಾಮ್ಸನ್ ಸಿಕ್ಸರ್ ಬಾರಿಸಿದ್ದರು. ನಂತರ ಜಿಂಬಾಬ್ವೆ ವಿರುದ್ಧವೂ ಸಿಕ್ಸರ್ ಬಾರಿಸಿದ್ದರು. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಸ್ಯಾಮ್ಸನ್ ಮೊದಲ ಓವರ್‌ನಲ್ಲಿ ಸಿಕ್ಸರ್ ಬಾರಿಸಿದ್ದರು. ಇದೀಗ ನ್ಯೂಜಿಲೆಂಡ್ ವಿರುದ್ಧದ ಫೈನಲ್‌ನಲ್ಲಿ ಸ್ಯಾಮ್ಸನ್ ಮೊದಲ ಓವರ್​ನಲ್ಲಿ ಸಿಕ್ಸರ್ ಬಾರಿಸಿದ್ದಾರೆ.

IND vs NZ: ಫೈನಲ್​ನಲ್ಲಿ ಟಾಸ್ ಸೋತ ಭಾರತ; ಪ್ರಶಸ್ತಿ ಪಂದ್ಯಕ್ಕೆ ಪ್ಲೇಯಿಂಗ್ 11 ಹೀಗಿದೆ

ಭಾರತಕ್ಕೆ ಸ್ಫೋಟಕ ಆರಂಭ

ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಫೈನಲ್‌ನಲ್ಲಿ ಟೀಂ ಇಂಡಿಯಾಗೆ ಭರ್ಜರಿ ಆರಂಭ ನೀಡಿದರು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಕೇವಲ ನಾಲ್ಕು ಓವರ್‌ಗಳಲ್ಲಿ ತಂಡದ ಸ್ಕೋರ್ ಅನ್ನು ಅರ್ಧಶತಕದ ಗಡಿ ದಾಟಿಸಿದರು. ಇದು ಟಿ20 ವಿಶ್ವಕಪ್ ಫೈನಲ್ ಇತಿಹಾಸದಲ್ಲಿ ಭಾರತದ ವೇಗದ ಆರಂಭಿಕ ಅರ್ಧಶತಕದ ಜೊತೆಯಾಟವಾಗಿದೆ. ಹಾಗೆಯೇ ಈ ಜೋಡಿ ಮೊದಲ ವಿಕೆಟ್​ಗೆ 7.1 ಓವರ್​ಗಳಲ್ಲಿ 98 ರನ್​ಗಳ ಜೊತೆಯಾಟವನ್ನು ನೀಡಿತು. ಅಭಿಷೇಕ್ ಶರ್ಮಾ 21 ಎಸೆತಗಳಲ್ಲಿ 52 ರನ್ ಬಾರಿಸಿ ಔಟಾದರು.

Source link

ಬಹರೇನ್​ನ ಅಮೆರಿಕನ್ ಫಿಫ್ತ್ ಫ್ಲೀಟ್ ಮೇಲೆ ಇರಾನ್ ದಾಳಿ; 21 ಸೈನಿಕರ ಹತ್ಯೆ

ಟೆಹರಾನ್, ಮಾರ್ಚ್ 8: ಬಹರೇನ್ ದೇಶದ ಮನಾಮದಲ್ಲಿರುವ ಅಮೆರಿಕದ ಐದನೇ ನೌಕಾಪಡೆ ಅಥವಾ ಫಿಫ್ಟ್ ಫ್ಲೀಟ್ (US 5th Fleet) ಮೇಲೆ ಇರಾನ್ ಮತ್ತೆ ದಾಳಿ ಎಸಗಿದೆ. ಇರಾನ್​ನ ಹಲವಾರು ಕ್ಷಿಪಣಿಗಳು ಮತ್ತು ಡ್ರೋನ್​ಗಳು ಅಮೆರಿಕದ ನೌಕೆಗಳ ಮೇಲೆ ಎರಗಿವೆ. ಈ ದಾಳಿಯಲ್ಲಿ 21 ಸೈನಿಕರು ಬಲಿಯಾಗಿದ್ದಾರೆ. ಕಳೆದ ತಿಂಗಳು, ಫೆಬ್ರುವರಿ 28ರಂದು ಕೂಡ ಇದೇ ಫಿಫ್ತ್ ಫ್ಲೀಟ್ ಹೆಡ್​ಕ್ವಾರ್ಟರ್ಸ್ ಅನ್ನು ಗುರಿಯಾಗಿಸಿಕೊಂಡು ಇರಾನ್ ಬ್ಯಾಲಿಸ್ಟಿಕ್ ಮಿಸೈಲ್​ಗಳು ಮತ್ತು ಶಾಹಿದ್-136 ಡ್ರೋನ್​ಗಳಿಂದ ದಾಳಿ ಮಾಡಲಾಗಿತ್ತು.

ರಾಡಾರ್ ಸೌಕರ್ಯಗಳು, ಸರ್ವಿಸ್ ಕಟ್ಟಡಗಳು, ಸೆಟಿಲೈಟ್ ಕಮ್ಯೂನಿಕೇಶನ್ ಟರ್ಮಿನಲ್​ಗಳು ಸೇರಿದಂತೆ ಹಲವು ಕಟ್ಟಡಗಳಿಗೆ ಹಾನಿಯಾಗಿದ್ದು ಗೊತ್ತಾಗಿದೆ. ಮೊನ್ನೆ ಮಾರ್ಚ್ 6ರಂದು ಭಾರತಕ್ಕೆ ಬಂದು ವಾಪಸ್ ಹೋಗುತ್ತಿದ್ದ ಇರಾನೀ ಯುದ್ಧನೌಕೆಯೊಂದನ್ನು ಅಮೆರಿಕದ ಟಾರ್ಪಿಡೋ ದಾಳಿಯಲ್ಲಿ ಧ್ವಂಸ ಮಾಡಲಾಗಿದೆ. ಇದರಲ್ಲಿ ಹಲವು ಜನರು ಬಲಿಯಾಗಿದ್ದರು. ಅದರ ಬೆನ್ನಲ್ಲೇ ಇರಾನ್ ಇದೀಗ ಮುಯ್ಯಿ ದಾಳಿಯಾಗಿ ಅಮೆರಿಕದ ಫಿಫ್ಟ್ ಫ್ಲೀಟ್ ಮೇಲೆ ಎರಗಿದೆ.

ಇದನ್ನೂ ಓದಿ: ಇರಾನ್ ಯುದ್ಧ: ಬೆಂಬಲಕ್ಕೆ ಬ್ರಿಟನ್ ಹಿಂದೇಟು; ಇದನ್ನು ಮರೆಯಲ್ಲ ಎಂದ ಟ್ರಂಪ್

ಏನಿದು ಅಮೆರಿಕದ ಫಿಫ್ತ್ ಫ್ಲೀಟ್?

ಅಮೆರಿಕದ ಹಡಗುಗಳ ಪಡೆಗಳಲ್ಲಿ ಒಂದು. ಫಸ್ಟ್ ಫ್ಲೀಟ್, ಸೆಕೆಂಡ್ ಫ್ಲೀಟ್, ಥರ್ಡ್ ಫ್ಲೀಟ್, ಹೀಗೆ 12 ಫ್ಲೀಟ್​ಗಳಿವೆ. ಕೆಲವು ಸಕ್ರಿಯವಾಗಿವೆ, ಕೆಲವು ನಿಷ್ಕ್ರಿಯಗೊಂಡಿವೆ. ಒಂದೊಂದು ಫ್ಲೀಟ್ ಕೂಡ ನಿರ್ದಿಷ್ಟ ಸಮುದ್ರಪ್ರದೇಶದಲ್ಲಿ ಕಣ್ಗಾವಲು ಇಟ್ಟಿರುತ್ತವೆ.

ಫಿಫ್ತ್ ಫ್ಲೀಟ್​ನ ಹೆಡ್​ಕ್ವಾರ್ಟರ್ಸ್ ಬಹರೇನ್​ನಲ್ಲಿದೆ. ಇದರಲ್ಲಿ ಸುಮಾರು 20-25 ಯುದ್ಧ ನೌಕೆಗಳಿವೆ. ಪರ್ಷಿಯಲ್ ಕೊಲ್ಲಿ, ಕೆಂಪು ಸಮುದ್ರ ಮತ್ತು ಅರೇಬಿಯನ್ ಸಮುದ್ರ ಸೇರಿದಂತೆ 2.5 ಮಿಲಿಯನ್ ಚದರ ಮೈಲುಗಳಷ್ಟು ಸಾಗರ ಪ್ರದೇಶವನ್ನು ಈ ಪಡೆ ಗಮನಿಸುತ್ತಿರುತ್ತದೆ. ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಾಗಣೆಗೆ ಅಡ್ಡಿ ಇಲ್ಲದಂತೆ ಎಚ್ಚರ ವಹಿಸುವುದು ಸೇರದಂತೆ ಹಲವು ಗುರುತರ ಕಾರ್ಯಗಳನ್ನು ಇದು ಮಾಡುತ್ತದೆ.

ಇದನ್ನೂ ಓದಿ: ಕೊಲ್ಲಿ ದೇಶಗಳ ಮೇಲೆ ಇರಾನ್​ನಿಂದ ಮುಂದುವರಿದ ದಾಳಿ; ಕುವೇತ್ ಏರ್​ಪೋರ್ಟ್ ಮೇಲೂ ದಾಳಿ

ಹಾರ್ಮುಜ್ ಸ್ಟ್ರೇಟ್ ಅನ್ನು ತನ್ನ ಪೂರ್ಣ ಹತೋಟಿಗೆ ತೆಗೆದುಕೊಳ್ಳಲು ಇರಾನ್​ಗೆ ಅಡ್ಡಿಯಾಗಿರುವುದು ಅಮೆರಿಕದ ಈ ಫಿಫ್ತ್ ಫ್ಲೀಟ್ ನೌಕಾಪಡೆ. ಹೀಗಾಗಿ, ಇದನ್ನು ಗುರಿಯಾಗಿಸಿ ಇರಾನ್ ದಾಳಿಗಳನ್ನು ಮಾಡಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಈ ದಿನದಿಂದ 19ನೇ ಆವೃತ್ತಿಯ ಐಪಿಎಲ್ ಆರಂಭ; ಬಿಸಿಸಿಐ ಅಧಿಕೃತ ಮಾಹಿತಿ

2026 ರ ಟಿ20 ವಿಶ್ವಕಪ್ ಫೈನಲ್ ನಡುವೆ ಬಿಸಿಸಿಐ, ಕ್ರಿಕೆಟ್ ಪ್ರಿಯರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ವಿಶ್ವ ಕ್ರಿಕೆಟ್​ನ ಅತ್ಯಂತ ಯಶಸ್ವಿ ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ 19ನೇ ಆವೃತ್ತಿ ಇದೇ ಮಾಚ್​ 28 ರಿಂದ ಆರಂಭವಾಗಲಿದೆ ಎಂದು ಬಿಸಿಸಿಐ ಅಧಿಕೃತವಾಗಿ ಘೋಷಿಸಿದೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಿ20 ವಿಶ್ವಕಪ್ ಫೈನಲ್ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದ ನಡುವೆ ಐಪಿಎಲ್​ನ ಅಧಿಕೃತ ಪ್ರಸಾರಕರಾಗಿರುವ ಸ್ಟಾರ್ ಸ್ಪೋರ್ಟ್ಸ್ ತನ್ನ ಸೋಶಿಯಲ್ ಮೀಡಯಾ ಖಾತೆಯಲ್ಲಿ ಐಪಿಎಲ್ ಆರಂಭದ ದಿನಾಂಕವನ್ನು ಬಹಿರಂಗಪಡಿಸಿದೆ.

ಪೂರ್ಣ ವೇಳಾಪಟ್ಟಿ ಬಾಕಿ ಇದೆ

ಆದಾಗ್ಯೂ 2026 ರ ಐಪಿಎಲ್​ನ ಪೂರ್ಣ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಆದರೆ ಈ ಆವೃತ್ತಿಯ ಆರಂಭಿಕ ಪಂದ್ಯ ಯಾವಾಗ ನಡೆಯಲಿದೆ ಎಂಬುದು ಸ್ಪಷ್ಟವಾಗಿದೆ. ಕೆಲವು ದಿನಗಳಿಂದ ಕೇಳಿಬರುತ್ತಿರುವ ಮಾಹಿತಿಯ ಪ್ರಕಾರ, ಐಪಿಎಲ್ 2026 ರ ಉದ್ಘಾಟನಾ ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಸಾಧ್ಯತೆಯಿದೆ. ಮೊದಲ ಪಂದ್ಯವು ಕಳೆದ ಆವೃತ್ತಿಯ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರನ್ನರ್ ಅಪ್ ಪಂಜಾಬ್ ಕಿಂಗ್ಸ್ ನಡುವೆ ನಡೆಯುವ ಸಾಧ್ಯತೆಯಿದೆ ಎಂದು ವರದಿಗಳಿವೆ.

ಅದೇ ರೀತಿ, ಐಪಿಎಲ್ 2026 ರ ಫೈನಲ್ ಪಂದ್ಯವೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಸಾಧ್ಯತೆಗಳಿವೆ. ಹಾಗೆಯೇ ಈ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ಐದು ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದೆ. ಇದರ ಜೊತೆಗೆ, ಒಂದು ಪ್ಲೇಆಫ್ ಪಂದ್ಯ ಕೂಡ ಇದೇ ಮೈದಾನದಲ್ಲಿ ನಡೆಯುವ ಸಾಧ್ಯತೆಯಿದೆ. ಆದಾಗ್ಯೂ, ಬಿಸಿಸಿಐ ಶೀಘ್ರದಲ್ಲೇ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದ್ದು, ಅದರಲ್ಲಿ ಪೂರ್ಣ ಚಿತ್ರಣ ಸಿಗಲಿದೆ.

2  ಹಂತಗಳಲ್ಲಿ ಐಪಿಎಲ್ ವೇಳಾಪಟ್ಟಿ ಬಿಡುಗಡೆ..?

ಈ ಬಾರಿ, ಐಪಿಎಲ್ 2026 ವೇಳಾಪಟ್ಟಿಯನ್ನು ಎರಡು ಹಂತಗಳಲ್ಲಿ ಘೋಷಿಸುವ ಸಾಧ್ಯತೆಯಿದೆ ಎಂಬ ಮಾಹಿತಿ ಈಗಾಗಲೇ ಹರಿದಾಡುತ್ತಿದೆ. ಮೊದಲ ಹಂತದ ವೇಳಾಪಟ್ಟಿಯನ್ನು ಐಪಿಎಲ್ ಆಡಳಿತ ಮಂಡಳಿ ಈಗಾಗಲೇ ಅನುಮೋದಿಸಿದೆ ಎಂದು ವರದಿಯಾಗಿದೆ. ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತಮಿಳುನಾಡಿನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸಂಪೂರ್ಣ ವೇಳಾಪಟ್ಟಿಯನ್ನು ಘೋಷಿಸುವಲ್ಲಿ ಸ್ವಲ್ಪ ವಿಳಂಬವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ, ಡಿಸಿಎಂ ಹೆಸರಿನಲ್ಲಿ JDS ಶಾಸಕನಿಂದ ಮಾದಪ್ಪನಿಗೆ ಪೂಜೆ: ವಿಡಿಯೋ ನೋಡಿ

ಚಾಮರಾಜನಗರ, ಮಾರ್ಚ್​ 08: ಬಜೆಟ್​ನಲ್ಲಿ ಉಡುತೊರೆ ಜಲಾಶಯಕ್ಕೆ ನೀರು ತುಂಬಿಸುವ ಯೋಜನೆಗೆ 490 ಕೋಟಿ ರೂ. ನೀರಾವರಿ ಯೋಜನೆಗೆ ಅಸ್ತು ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್​ ಹೆಸರಿನಲ್ಲಿ ಮಾದಪ್ಪನಿಗೆ JDS ಹನೂರು ಶಾಸಕ ಮಂಜುನಾಥ್​​ರಿಂದ ಪೂಜೆ ಸಲ್ಲಿಸಲಾಗಿದೆ. ಉಡುತೊರೆ ಜಲಾಶಯಕ್ಕೆ ನೀರು ತುಂಬಿಸಬೇಕೆಂದು ಒತ್ತಾಯ ಇತ್ತು. 490 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಮಾಡಿಸುವುದಾಗಿ ಬಜೆಟ್​​ನಲ್ಲಿ ಅನುದಾನ ಘೋಷಿಸಲಾಗಿದೆ. ಹಾಗಾಗಿ ಸಿಎಂ, ಡಿಸಿಎಂ ಸೇರಿದಂತೆ ಸಚಿವರಾದ ಕೆ.ವೆಂಕಟೇಶ್, ಡಾ.ಹೆಚ್.ಸಿ.ಮಹದೇವಪ್ಪ ಹೆಸರಲ್ಲೂ ಪೂಜೆ ಮಾಡಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Video: ವೈದ್ಯರು ಪುಟ್ಟ ಕಂದಮ್ಮನನ್ನು ಕೈಗಿಡುತ್ತಿದ್ದಂತೆ ಎತ್ತಿಕೊಳ್ಳಲು ಹೆದರಿದ ತಂದೆ

ಮನೆಗೆ ಮಗುವಿನ (child) ಆಗಮನವಾಗುತ್ತಿದ್ದಂತೆ ಆ ಖುಷಿಯೇ ಬೇರೆ. ಇನ್ನುಈ ಪುಟ್ಟ ಮಗುವನ್ನು ಹೇಗೆ ಎತ್ತಿಕೊಳ್ಳುವಾಗ ಭಯವಾಗುವುದು ಸಹಜ. ಹೀಗಾಗಿ ನವಜಾತ ಶಿಶುವನ್ನು ಎತ್ತಿಕೊಳ್ಳಲು ಹಿಂದೇಟು ಹಾಕುವುದೇ ಹೆಚ್ಚು. ಇಲ್ಲೊಬ್ಬ ತಂದೆಯದ್ದು (father) ಅದೇ ಕಥೆ. ಆಗ ತಾನೇ ಜನಿಸಿದ ಮಗುವನ್ನು ವೈದ್ಯರು ವ್ಯಕ್ತಿಯ ಕೈಗೆ ಕೊಟ್ಟಿದ್ದು, ಆ ವ್ಯಕ್ತಿ ಮಾತ್ರ ಭಯದಲ್ಲೇ ಹಿಂದೇಟು ಹಾಕಿರುವ ವಿಡಿಯೋ ವೈರಲ್ ಆಗಿದೆ. ತಂದೆಯಾದ ಖುಷಿ ನಡುವೆ ಈ ವ್ಯಕ್ತಿ ನೀಡಿದ ರಿಯಾಕ್ಷನ್‌ಗೆ ನೆಟ್ಟಿಗರು ಶಾಕ್ ಆಗಿದ್ದಾರೆ.

ತಮಿಳ್ (Tamil) ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತಂದೆಯಾದ ಸಂಭ್ರಮದಲ್ಲಿರುವುದನ್ನು ಕಾಣಬಹುದು. ವೈದ್ಯರು ಆಗ ತಾನೇ ಹುಟ್ಟಿದ ಮಗುವನ್ನು ಕೈಗೆ ನೀಡಿದ್ದಾರೆ. ಆದರೆ ಈ ವ್ಯಕ್ತಿ ಮಾತ್ರ ನವಜಾತ ಶಿಶುವನ್ನು ಎತ್ತಿಕೊಳ್ಳಲು ಭಯ ಪಡುತ್ತಾ ಹಿಂದೇಟು ಹಾಕುತ್ತಿದ್ದು, ವೈದ್ಯರು ಭುಜ ತಟ್ಟಿ ಸಮಾಧಾನ ಪಡಿಸುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಅಂಗನವಾಡಿಗೆ ಬಿಡೋಕೆ ಬಂದ ಅಮ್ಮನ ಬಳಿ ಮುದ್ದಾಗಿ ಮಾತನಾಡಿ ಕಳಿಸಿಕೊಟ್ಟ ಕಂದಮ್ಮ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಐ ಮಿಸ್ ಯು ಪಪ್ಪಾ ಎಂದರೆ, ಮತ್ತೊಬ್ಬರು ಪ್ರತಿಯೊಬ್ಬ ತಂದೆಯ ಜೀವನದ ಸಂತೋಷದ ಹಾಗೂ ಮರೆಯಲಾರದ ಕ್ಷಣ ಎಂದು ಹೇಳಿದ್ದಾರೆ. ಇನ್ನೊಬ್ಬರು ತಂದೆಯಾಗುವ ಸಮಯದಲ್ಲಿ ಆತಂಕ ಭಯ ಸಹಜ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್‌ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Source link

Chanakya Niti: ಜೀವನದಲ್ಲಿ ಈ ವಿಚಾರಗಳು ಎಂದಿಗೂ ಅತಿಯಾಗಬಾರದು ಎನ್ನುತ್ತಾರೆ ಚಾಣಕ್ಯ

ಆಚಾರ್ಯ ಚಾಣಕ್ಯರು (Acharya Chanakya)  ತಮ್ಮ ನೀತಿಶಾಸ್ತ್ರದಲ್ಲಿ ರಾಜಕೀಯ ವಿಷಯಗಳು ಮಾತ್ರವಲ್ಲದೆ, ನಮ್ಮ ಜೀವನಕ್ಕೆ ಸಂಬಂಧಿಸಿದ ಹತ್ತು ಹಲವು ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಈ ಬೋಧನೆಗಳನ್ನು ಅನುಸರಿಸುವ ಮೂಲಕ ನೀವು ಸಂತೋಷ, ಸಮೃದ್ಧ ಮತ್ತು ಯಶಸ್ವಿ ಜೀವನವನ್ನು ನಡೆಸಬಹುದು ಮತ್ತು ಸಮಾಜದಲ್ಲಿ ಗೌರವವನ್ನೂ ಪಡೆಯಬಹುದು. ಅದೇ ರೀತಿ ಜೀವನ ಸರ್ವನಾಶವಾಗಬಾರದು ಎಂದರೆ ಈ ಒಂದಷ್ಟು ವಿಷಯಗಳು ಅತಿಯಾಗಬಾರದು ಎಂದೂ ಹೇಳಿದ್ದಾರೆ. ಹೌದು ಬದುಕಿನಲ್ಲಿ ಈ ಕೆಲವೊಂದು ವಿಷಯಗಳ ಬಗ್ಗೆ ಅತಿಯಾಗಿ ಅಹಂಕಾರ ಪಟ್ಟರೆ, ಕೆಲವು ವಿಷಯಗಳು ಅತಿಯಾದರೆ ಜೀವನವೇ ನಾಶವಾಗಬಹುದು. ಅತಿಯಾಗಬಾರದ ಆ ಸಂಗತಿಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಜೀವನದಲ್ಲಿ ಈ ಸಂಗತಿಗಳ ಬಗ್ಗೆ ಅಹಂಕಾರ ಪಡಬೇಡಿ:

ನಿಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಹೆಮ್ಮೆ ಪಡಬೇಡಿ: ಆಚಾರ್ಯ ಚಾಣಕ್ಯರ ಪ್ರಕಾರ, ಸುಂದರವಾಗಿರುವುದು ಅದ್ಭುತವಾದ ವಿಷಯ, ಆದರೆ ನಿಮ್ಮ ಸೌಂದರ್ಯದ ಬಗ್ಗೆ ಅತಿಯಾಗಿ ಹೆಮ್ಮೆಪಡುವುದು ಭವಿಷ್ಯದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಸೌಂದರ್ಯವು ಶಾಶ್ವತವಲ್ಲ. ಹಾಗಾಗಿ  ಸೌಂದರ್ಯದ ಬದಲು ವ್ಯಕ್ತಿತ್ವ ಮತ್ತು ಗುಣಗಳನ್ನು ಮೆಚ್ಚಿಕೊಳ್ಳಬೇಕು.

ಜ್ಞಾನ, ಸಂಪತ್ತಿನ ಬಗ್ಗೆ ಅಹಂಕಾರ ಬೇಡ: ಚಾಣಕ್ಯ ನೀತಿಯ ಪ್ರಕಾರ, ವ್ಯಕ್ತಿಯ ದೊಡ್ಡ ಶತ್ರು ಅಹಂಕಾರ. ಒಬ್ಬ ವ್ಯಕ್ತಿಯು ತನ್ನ ಜ್ಞಾನ, ಶಕ್ತಿ ಅಥವಾ ಸಂಪತ್ತಿನ ಬಗ್ಗೆ ಅಹಂಕಾರಪಟ್ಟರೆ ಆತನ ನಾಶ ಖಚಿತ ಎಂದು ಚಾಣಕ್ಯ ಹೇಳುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ರಾವಣ. ಹಾಗಾಗಿಆಚಾರ್ಯ ಚಾಣಕ್ಯ ಹೇಳುತ್ತಾರೆ   ಪ್ರತಿಯೊಬ್ಬ ವ್ಯಕ್ತಿಯು ಅಹಂಕಾರ ಬಿಟ್ಟು ನಮ್ರತೆಯಿಂದ ಬದುಕಲು ಕಲಿಯಬೇಕು.

ಅಗತ್ಯಕ್ಕಿಂತ ಹೆಚ್ಚಿನದನ್ನು ದಾನ ಮಾಡುವುದು: ಆಚಾರ್ಯ ಚಾಣಕ್ಯರು ದಾನ ಮಾಡುವುದು ಪುಣ್ಯದ ಕಾರ್ಯ ಎಂದು ಹೇಳುತ್ತಾರೆ. ಆದರೆ ನಿಮ್ಮ ಸಾಮರ್ಥ್ಯಕ್ಕೂ ಮೀರಿ ಹೆಚ್ಚಿನದನ್ನು ದಾನ ಮಾಡಬಾರದು. ಅತಿಯಾದರೆ ಅಮೃತವೂ ವಿಷ ಎನ್ನುವಂತೆ, ನಿಮ್ಮ ಸಾಮರ್ಥ್ಯಕ್ಕೂ ಮೀರಿ ನೀವು ದಾನ ಮಾಡಿದರೆ ತೊಂದರೆಗೆ ಸಿಲುಕುತ್ತೀರಿ.  ಹಾಗಾಗಿ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ  ಮಾಡಿ.

ಇದನ್ನೂ ಓದಿ: ಯಾವುದೇ ಕಾರಣಕ್ಕೂ ಇಂತಹ ಜನರ ಸಹವಾಸ ಮಾಡಬೇಡಿ ಎಂದಿದ್ದಾರೆ ಚಾಣಕ್ಯ

ಅತಿಯಾದ ನಂಬಿಕೆ ಒಳ್ಳೆಯದಲ್ಲ: ಆಚಾರ್ಯ ಚಾಣಕ್ಯರ ಪ್ರಕಾರ, ಯಾರನ್ನಾದರೂ ಕುರುಡಾಗಿ ನಂಬುವುದು ಒಳ್ಳೆಯದಲ್ಲ. ಏಕೆಂದರೆ ಅತಿಯಾದ ನಂಬಿಕೆ ಹೆಚ್ಚಾಗಿ ದ್ರೋಹಕ್ಕೆ ಕಾರಣವಾಗಬಹುದು. ಹೌದು ಕೆಲವರು ನಿಮ್ಮ ನಂಬಿಕೆಯನ್ನು ಗಳಿಸಿ ಎಲ್ಲಾ ರೀತಿಯಲ್ಲೂ ನಿಮಗೆ ಮೋಸ ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಯಾರನ್ನೂ ಹೆಚ್ಚು ನಂಬಬೇಡಿ.

ಅತಿಯಾಗಿ ಮಾತನಾಡುವುದು: ಹೆಚ್ಚು ಮಾತನಾಡುವುದರಿಂದ ಗಂಭೀರ ತೊಂದರೆಯಾಗಬಹುದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬಂತೆ ಅತಿಯಾಗಿ ಮಾತನಾಡಿದರೆ ನೀವೇ ತೊಂದರೆಯಲ್ಲಿ ಸಿಲುಕುತ್ತೀರಿ. ಹಾಗಾಗಿ ಯಾವಾಗಲೂ ಬುದ್ಧಿವಂತಿಕೆಯಿಂದ, ಚಿಂತನಶೀಲವಾಗಿ ಮತ್ತು ಅಗತ್ಯವಿದ್ದಾಗ ಮಾತ್ರ ಮಾತನಾಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಿ ನರಸೀಪುರದ ಸಿಲ್ಕ್ ಫ್ಯಾಕ್ಟರಿ ಜಾಗದಲ್ಲಿ ಕ್ರೀಡಾಂಗಣ: ಸಚಿವ ಮಹದೇವಪ್ಪ ಭೇಟಿಯಾದ ಪ್ರಮೋದಾದೇವಿ ಒಡೆಯರ್

ಮೈಸೂರು, ಮಾರ್ಚ್​​ 08: ಟಿ.ನರಸೀಪುರದ ಸಿಲ್ಕ್ ಫ್ಯಾಕ್ಟರಿ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ವಿಚಾರವಾಗಿ ರೈತರು ಸಿಡಿದೆದಿದ್ದಾರೆ. ಟಿ.ನರಸೀಪುರದ ಸಿಲ್ಕ್ ಫ್ಯಾಕ್ಟರಿ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಬಾರದು ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಸದಸ್ಯರು ಇತ್ತೀಚೆಗೆ ಮೈಸೂರಿನಲ್ಲಿ ಪ್ರತಿಭಟಿಸಿದ್ದರು. ಈ ವಿಚಾರವಾಗಿ ರಾಜಮಾತೆ ಪ್ರಮೋದಾದೇವಿ ಒಡೆಯರ್​ (pramoda devi wadiyar) ಅವರು ಸಚಿವ ಹೆಚ್.ಸಿ.ಮಹದೇವಪ್ಪ ಭೇಟಿ ಮಾಡಿದ್ದಾರೆ. ಈ ವೇಳೆ ಟಿ.ನರಸೀಪುರದ ಕೆಎಸ್​ಐಸಿ ಕಾರ್ಖಾನೆ ಮುಚ್ಚುವುದಿಲ್ಲವೆಂದು ಸಚಿವ ಮಹದೇವಪ್ಪ ಭರವಸೆ ನೀಡಿದ್ದಾರೆ.

ಇನ್ನು ಸಚಿವರ ಸಕಾರಾತ್ಮಕ ಸ್ಪಂದನೆಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಕೃತಜ್ಞತೆ ಸಲ್ಲಿಸಿದ್ದು, ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಮೈಸೂರು ಸಿಲ್ಕ್ ಇಂದು ವಿಶ್ವಪ್ರಸಿದ್ಧ. ಮೈಸೂರು ಸಿಲ್ಕ್ ಸೀರೆ ಮತ್ತು ಪಂಚೆಗೆ ಜಿಯೋಗ್ರಾಫಿಕಲ್ ಇಂಡಿಕೇಷನ್ (GI) ಟ್ಯಾಗ್​​​ ಅದರ ವಿಶಿಷ್ಟತೆ ಹಾಗೂ ಗುಣಮಟ್ಟಕ್ಕೆ ಮುದ್ರೆ.

ಇದನ್ನೂ ಓದಿ: ಯೂನಿಟಿ ಮಾಲ್ ನಿರ್ಮಾಣ ವಿವಾದ: ಪತ್ರಿಕಾ ಪ್ರಕಟಣೆ ಮೂಲಕ ಪ್ರಮೋದಾ ದೇವಿ ಸ್ಪಷ್ಟನೆ

ಭಾರತದ ಸಮೃದ್ಧ ವಸ್ತ್ರ ಪರಂಪರೆಯ ಪ್ರತೀಕವಾಗಿ ಮೈಸೂರು ಸಿಲ್ಕ್ ಗುರುತಿಸಿಕೊಂಡಿದೆ. ಪರಂಪರೆ, ಕೈಚಳಕ, ವೈಶಿಷ್ಟ್ಯ ಹಾಗೂ ಐತಿಹಾಸಿಕ ಮಹತ್ವದಿಂದ ಮೈಸೂರು ಸಿಲ್ಕ್ ಪೀಳಿಗೆಯಿಂದ ಪೀಳಿಗೆಗೆ ಸಾಗುತ್ತಿರುವ ಅಮೂಲ್ಯ ಪರಂಪರೆ. ಜಾಗತಿಕ ಫ್ಯಾಷನ್ ಕ್ಷೇತ್ರದಲ್ಲಿ ಪರಂಪರೆಯ ಹಾಗೂ ಪರಿಸರ ಸ್ನೇಹಿ ವಸ್ತ್ರಗಳಿಗೆ ಹೆಚ್ಚುತ್ತಿರುವ ಬೇಡಿಕೆಯಲ್ಲಿ ಮೈಸೂರು ಸಿಲ್ಕ್ ಪ್ರಮುಖ ಸ್ಥಾನ ಪಡೆದಿದೆ.

ಇದನ್ನೂ ಓದಿ: ಸಿದ್ದಯ್ಯನಪುರ: ಊರೇ ಖಾಲಿ ಮಾಡಬೇಕಾದ ಭೀತಿಯಲ್ಲಿ ಗ್ರಾಮಸ್ಥರು, ಆಸ್ತಿ ಖಾತೆ ಮಾಡುವಂತೆ ಪ್ರಮೋದಾದೇವಿ ಪತ್ರದ ಬೆನ್ನಲ್ಲೇ ಆತಂಕ

ಟಿ.ನರಸೀಪುರ ಪ್ರದೇಶದ ಹವಾಮಾನ, ಭೌಗೋಳಿಕ ಪರಿಸ್ಥಿತಿ ಹಾಗೂ ನೀರಿನ ಲಭ್ಯತೆ ರೇಷ್ಮೆ ಬೆಳೆಗೆ ಅತ್ಯಂತ ಸೂಕ್ತ. ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ನಡೆದರೆ ರೇಷ್ಮೆಯ ಗುಣಮಟ್ಟಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ. ಟಿ.ನರಸೀಪುರದಲ್ಲಿರುವ ಕೆಎಸ್‌ಐಸಿ ಕಾರ್ಖಾನೆ ಭವಿಷ್ಯದ ಬಗ್ಗೆ ಮೈಸೂರು ಮತ್ತು ಬೆಂಗಳೂರು ಜನರಿಂದ ಆತಂಕ ವ್ಯಕ್ತವಾಗಿದೆ. ಈ ವೇಳೆ ಮೈಸೂರು ಸಿಲ್ಕ್ ಸ್ಥಾಪನೆಗೆ ಕಾರಣವಾದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೂ ಗೌರವ ಸಮರ್ಪಣೆ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತಮ್ಮ ಜೀವನದಲ್ಲಿ ಪ್ರಭಾವ ಬೀರಿದ ಮಹಿಳೆಯರನ್ನು ಸ್ಮರಿಸಿದ ಗೌತಮ್ ಅದಾನಿ

ಅಹ್ಮದಾಬಾದ್, ಮಾರ್ಚ್ 8: ತಮ್ಮ ಜೀವನ ಹಾಗೂ ಮೌಲ್ಯಗಳು ರೂಪುಗೊಳ್ಳಲು ಕಾರಣರಾದ ಮಹಿಳೆಯರನ್ನು ಗೌತಮ್ ಅದಾನಿ (Gautam Adani) ಇವತ್ತಿನ ಮಹಿಳೆಯರ ದಿನದಂದು (International Women’s Day) ಸ್ಮರಿಸಿಕೊಂಡಿದ್ದಾರೆ. ತಮ್ಮ ಸಾಕ್ಷಿಪ್ರಜ್ಞೆ ರೂವಾರಿಗಳೆಂದು ಆ ಮಹಿಳೆಯರನ್ನು ಬಣ್ಣಿಸಿದ್ದಾರೆ. ಲಿಂಕ್ಡ್​ಇನ್​ನಲ್ಲಿ ಭಾವುಕವಾದ ಪೋಸ್ಟ್​ವೊಂದನ್ನು ಹಾಕಿರುವ ಗೌತಮ್ ಅದಾನಿ, ತಮ್ಮ ಕುಟುಂಬದಲ್ಲಿನ ಮಹಿಳೆಯರ ಪ್ರಭಾವ ತಮಗೆ ಅದೆಷ್ಟು ಗಾಢವಾಗಿ ಆಗಿತ್ತು ಎಂದು ವಿವರಿಸಿದ್ದಾರೆ. ತಮ್ಮ ಜೀವನ, ಜವಾಬ್ದಾರಿ, ರಾಷ್ಟ್ರ ನಿರ್ಮಾಣ ವಿಚಾರದಲ್ಲಿ ಹೊಸ ದೃಷ್ಟಿಕೋನ ಸಿಗಲು ಇವರ ಪಾತ್ರ ಮಹತ್ವದ್ದೆಂದು ಹೇಳಿಕೊಂಡಿದ್ದಾರೆ.

ಅಮ್ಮನಿಂದ ಅದಾನಿಗೆ ಸಿಕ್ಕ ಶಕ್ತಿ

ಎಲ್ಲಾ ಮಕ್ಕಳಿಗೂ ತಾಯಿಯೇ ಮೊದಲ ಗುರು. ಅಂತೆಯೇ ಗೌತಮ್ ಅದಾನಿ ಅವರಿಗೂ ತಾಯಿಯೇ ಮೊದಲು ಗುರು. ಅವರ ಅಮ್ಮನ ಪ್ರಭಾವ ಅಚ್ಚಳಿಯದೇ ಉಳಿದಿದೆ. ಭಾರತದ ಪುರಾಣ ಕಥೆಗಳನ್ನು ಅಮ್ಮನಿಂದ ಕೇಳುತ್ತಾ ಬೆಳೆದವರು ಅದಾನಿ. ಆ ಕಥೆಗಳು ಪಠ್ಯಪುಸ್ತಕಗಳಿಗಿಂತ ಬಹಳ ಉನ್ನತ ಮೌಲ್ಯಗಳನ್ನು ತಂದುಕೊಡುತ್ತವೆ. ತಮಗೆ ಧೈರ್ಯ, ತ್ಯಾಗ, ಕರ್ತವ್ಯ ಮತ್ತು ನಂಬಿಕೆಯ ಬೀಜಗಳು ಬಿತ್ತಿದ್ದು ಅಮ್ಮ ಹೇಳುತ್ತಿದ್ದ ಈ ಕಥೆಗಳೇ ಎಂದು ಅದಾನಿ ಸ್ಮರಿಸಿಕೊಂಡಿದ್ದಾರೆ.

ಸ್ವಂತವಾಗಿ ಏನಾದರೂ ಸಾಧಿಸಬೇಕೆಂಬ ಛಲದಲ್ಲಿ 16ರ ವಯಸ್ಸಿನಲ್ಲಿ ಮನೆ ತೊರೆದು ಮುಂಬೈಗೆ ಹೋಗಿದ್ದು, ಹಾಗು ಅಸ್ಪಷ್ಟ ಭವಿಷ್ಯದ ಜಗತ್ತಿಗೆ ಮಗನನ್ನು ಕಳುಹಿಸಿಕೊಡಲು ತನ್ನ ತಾಯಿ ಅದೆಷ್ಟು ಧೈರ್ಯ ಹೊಂದಿದ್ದಿರಬೇಕು ಎಂದು ಅದಾನಿ ಕೇಳಿದ್ದಾರೆ.

ಇದನ್ನೂ ಓದಿ: ಕೇಂದ್ರದ ಈ ಪ್ರಮುಖ ಹಣಕಾಸು ಯೋಜನೆಗಳಲ್ಲಿ ಮಹಿಳೆಯರೇ ಹೆಚ್ಚು ಫಲಾನುಭವಿಗಳು

ಪತ್ನಿಯನ್ನು ಹೊಗಳಿದ ಅದಾನಿ

ಗೌತಮ್ ಅದಾನಿ ಅವರು ತಮ್ಮ ಪತ್ನಿ ಪ್ರೀತಿ ಅದಾನಿಯನ್ನು ‘ನನ್ನ ಆತ್ಮಸಾಕ್ಷಿಯ ಪಾಲಕಿ’ ಎಂದು ವರ್ಣಿಸಿದ್ದಾರೆ. ದಂತವೈದ್ಯೆಯಾಗಿರುವ ಪ್ರೀತಿ ಅದಾನಿ ಅವರು ಅದಾನಿ ಫೌಂಡೇಶನ್ ಸ್ಥಾಪಿಸಿ 22 ರಾಜ್ಯಗಳಲ್ಲಿ ಶಿಕ್ಷಣ, ಆರೋಗ್ಯ, ಸುಸ್ಥಿರ ಜೀವನ, ಸಮುದಾಯ ಅಭಿವೃದ್ಧಿ ಮೂಲಕ ಕೋಟಿಗೂ ಅಧಿಕ ಜನರ ಬದುಕನ್ನು ಬದಲಿಸಿದ ಶಕ್ತಿಯಾಗಿದ್ದಾರೆ.

ಸೊಸೆಯಂದಿರಿಂದ ಹೊಸ ದೃಷ್ಟಿಕೋನ

ಗೌತಮ್ ಅದಾನಿ ತಮ್ಮ ಇಬ್ಬರು ಸೊಸೆಯಂದಿರಾದ ಪರಿಧಿ ಮತ್ತು ದಿವಾ ಅವರಿಬ್ಬರನ್ನೂ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಪ್ರಶಂಸಿಸಿದ್ದಾರೆ. ಇಬ್ಬರೂ ಕೂಡ ಕುಟುಂಬಕ್ಕೆ ಹೊಸ ದೃಷ್ಟಿಕೋನ ಮತ್ತು ಸಾಧನೆ ತಂದಿದ್ದಾರೆ ಎಂದಿದ್ದಾರೆ. ಪರಿಧಿಯವರು ಒಬ್ಬ ವಕೀಲೆ. ದಿವಾ ಅವರು ಸೃಜನಶೀಲ ವಿನ್ಯಾಸಕಿಯಾಗಿದ್ದು, ವಿಶೇಷ ಚೇತನ ಜನರಿಗೆ ನೆರವಾಗುತ್ತಿದ್ದಾರೆ.

ಅದಾನಿ ಮೇಲೆ ಮೊಮ್ಮಕ್ಕಳ ಪ್ರಭಾವ

ತಮ್ಮ ಮೂವರು ಹೆಣ್ಣು ಮೊಮ್ಮಕ್ಕಳು ತಮಗೆ ಇತ್ತ ಸಂತೋಷವನ್ನು ಅದಾನಿ ಸ್ಮರಿಸಿದ್ದಾರೆ. ಕೆಲಸದ ಒತ್ತಡವನ್ನು ಈ ಹುಡುಗಿಯರಿಂದ ಮರೆಯಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಪಿಎಂ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತಿಂಗಳಿಗೆ 1,000 ಹೂಡಿಕೆ ಮಾಡಿದರೆ ಎಷ್ಟು ಸಿಗುತ್ತೆ ರಿಟರ್ನ್? ಇಲ್ಲಿದೆ ಲೆಕ್ಕಾಚಾರ

‘ಒಬ್ಬ ಪುರುಷ ತನ್ನ ಜೀವನವನ್ನು ಪೋರ್ಟ್, ಏರ್​​ಪೋರ್ಟ್, ವಿದ್ಯುತ್ ಘಟಕ, ಬ್ಯುಸಿನೆಸ್​ಗಳನ್ನು ಕಟ್ಟಲು ಕಳೆದಿರುತ್ತಾನೆ. ಆದರೆ, ಒಂದು ಮೊಮ್ಮಗು ಬಂದು ತೊಡೆ ಏರಿ ಪೂರ್ಣ ನಂಬಿಕೆಯಿಂದ ಆತನನ್ನು ಕಂಡಾಗ, ಆ ಪುರುಷನಿಗೆ ತಾನೇಕೆ ಕಟ್ಟುತ್ತಿದ್ದೇನೆ ಎಂದು ಬಹಳ ಸ್ಪಷ್ಟವಾಗಿ ಗೊತ್ತಾಗುತ್ತದೆ’ ಎಂದು ಲಿಂಕ್ಡ್​ಇನ್ ಪೋಸ್ಟ್​ನಲ್ಲಿ ಅದಾನಿ ಬರೆದುಕೊಂಡಿದ್ದಾರೆ.

‘ಜೀವನದ ಅತಿ ಭದ್ರ ಬುನಾದಿಯನ್ನು ಯಾವುದೇ ಉಕ್ಕು ಅಥವಾ ಕಾಂಕ್ರೀಟ್​ನಿಂದ ಹಾಕಲಾಗುವುದಿಲ್ಲ. ನಮ್ಮನ್ನು ರೂಪಿಸುವ ಜನರು ಈ ಬುನಾದಿ ನಿರ್ಮಿಸುತ್ತಾರೆ. ನನ್ನ ಪ್ರಯಾಣವನ್ನು ಈ ಜಗತ್ತು ನೆನಪಲ್ಲಿ ಇಟ್ಟುಕೊಳ್ಳುತ್ತದೆ ಎಂದಾದರೆ ಅದು ಇದನ್ನೇ ಎಂದು ಭಾವಿಸುತ್ತೇನೆ’ ಎಂದು ಬಹಳ ಭಾವನಾತ್ಮಕವಾಗಿ ಅದಾನಿ ತಮ್ಮ ಬರಹವನ್ನು ಮುಗಿಸಿದ್ದಾರೆ.

ಗೌತಮ್ ಅದಾನಿ ಅವರ ಲಿಂಕ್ಡ್​ಇನ್ ಪೋಸ್ಟ್​ನ ಲಿಂಕ್ ಇಲ್ಲಿದೆ

Source link

ಮುಸ್ಲಿಂ ವ್ಯಕ್ತಿಯನ್ನು ಲವ್ ಮಾಡಿ ಮತಾಂತರಗೊಂಡ ವಿವಾಹಿತ ಮಹಿಳೆ: ಈಗ ಅಸಲಿ ರೂಪ ತೋರಿಸಿದ ಪತಿ

ಬಾಗಲಕೋಟೆ, ಮಾ.8: ಪ್ರೀತಿಸಿ ಮತಾಂತರಗೊಂಡು ಮದುವೆಯಾದ ಪತಿ ತನಗೆ ಚಿತ್ರಹಿಂಸೆ ನೀಡಿ, ಹಣ ಹಾಗೂ ಬಂಗಾರವನ್ನೆಲ್ಲಾ ದೋಚಿ ಬೀದಿಗೆ ಬಿಟ್ಟಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (SP) ಕಚೇರಿ ಎದುರು ಕಣ್ಣೀರು ಹಾಕಿದ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ನಿವಾಸಿಯಾದ ಶ್ರೀದೇವಿ (ಈಗಿನ ಹೆಸರು ಹಬೀಬಾ) ಮೂಲತಃ ಕುರುಬ ಸಮುದಾಯದವರು. 14 ವರ್ಷಗಳ ಹಿಂದೆ ಇವರಿಗೆ ಸ್ವಜಾತಿಯ ವ್ಯಕ್ತಿಯೊಂದಿಗೆ ಮದುವೆಯಾಗಿ ಮಕ್ಕಳಿದ್ದರು. ಆದರೆ, ಮುಧೋಳದಲ್ಲಿ ಕೆಲಸಕ್ಕೆ ಬಂದಾಗ ಮುಸ್ಲಿಂ ಸಮುದಾಯದ ಸವಿಫ್ ಪತ್ತೆ ಎಂಬಾತನ ಪರಿಚಯವಾಗಿತ್ತು. ಸವಿಫ್‌ಗೆ ಈಗಾಗಲೇ ಇಬ್ಬರು ಪತ್ನಿಯರಿದ್ದರೂ, ಶ್ರೀದೇವಿಯವರನ್ನು ಪ್ರೀತಿಸುವುದಾಗಿ ನಂಬಿಸಿ ಮತಾಂತರ ಮಾಡಿದ್ದ ಎನ್ನಲಾಗಿದೆ.

ಸವಿಫ್ ತನ್ನನ್ನು ಬೆದರಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿದ್ದಾನೆ. ಶ್ರೀದೇವಿ ಎಂಬ ಹೆಸರನ್ನು ‘ಹಬೀಬಾ’ ಎಂದು ಬದಲಿಸಿ, ಫೆಬ್ರವರಿ 7, 2023 ರಂದು ಮುಸ್ಲಿಂ ಪದ್ಧತಿಯಂತೆ ನಿಖಾ ಮಾಡಿಕೊಂಡಿದ್ದ ಎಂದು ಮಹಿಳೆ ತಿಳಿಸಿದ್ದಾರೆ. ಮದುವೆಯಾದ ಕೆಲವು ದಿನಗಳ ನಂತರ ಸವಿಫ್ ತನ್ನ ಅಸಲಿ ರೂಪ ತೋರಿಸಿದ್ದಾನೆ. ತನ್ನ ಬಳಿಯಿದ್ದ 4 ಲಕ್ಷ ರೂಪಾಯಿ ನಗದು ಮತ್ತು 4 ತೊಲೆ ಚಿನ್ನದ ಆಭರಣಗಳನ್ನು ಒಯ್ದು, ಈಗ ಮೊದಲ ಪತ್ನಿ ಜೊತೆ ಸೇರಿಕೊಂಡಿದ್ದಾನೆ. ನನಗೆ ಹೊಡೆದು ಬಡಿದು ಬೀದಿಗೆ ತಳ್ಳಿದ್ದಾನೆ ಎಂದು ಶ್ರೀದೇವಿ ಗೋಳಾಡಿದ್ದಾರೆ.

ಇದನ್ನೂ ಓದಿ: ಹೆಣ್ಮಕ್ಕಳಿಗೆ ಸರ್ಕಾರದಿಂದ ಬಂಪರ್ ಪ್ಯಾಕೇಜ್: ಜನನದಿಂದ ಪದವಿಯವರೆಗೆ ಸಿಗಲಿದೆ 25 ಸಾವಿರ ರೂ.

“ನನಗೆ ಈಗ ಮೊದಲ ಗಂಡನೂ ಇಲ್ಲ, ಎರಡನೇ ಪತಿಯೂ ಕೈಕೊಟ್ಟಿದ್ದಾನೆ. ಮಕ್ಕಳನ್ನು ಕಟ್ಟಿಕೊಂಡು ಎಲ್ಲಿಗೆ ಹೋಗಲಿ?” ಎಂದು ಮಹಿಳೆ ಪ್ರಶ್ನಿಸಿದ್ದಾರೆ. ಮುಧೋಳ ಠಾಣೆಯಲ್ಲಿ ದೂರು ನೀಡಲು ಹೋದರೆ ಸ್ಪಂದಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ಮಹಿಳೆಯ ಗೋಳು ಆಲಿಸಿದ ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೋಯಲ್, “ಮಹಿಳೆಗೆ ಪತಿಯಿಂದ ಕಿರುಕುಳವಾಗಿರುವ ಬಗ್ಗೆ ದೂರು ಬಂದಿದೆ. ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಮಹಿಳಾ ಠಾಣೆಯ ಮೂಲಕವೂ ಈ ಕೇಸನ್ನು ಪರಿಶೀಲಿಸಲಾಗುವುದು” ಎಂದು ಭರವಸೆ ನೀಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link