IND vs NZ: ತಂಡದಿಂದಲೇ ಹೊರಗಿದ್ದವ ಟೂರ್ನಮೆಂಟ್ ಆಟಗಾರ ಪ್ರಶಸ್ತಿ ಗೆದ್ದ; ಸಂಜು ಸೂಪರ್ ಸ್ಯಾಮ್ಸನ್
ಸಂಜು ಸ್ಯಾಮ್ಸನ್… ಸಾಮರ್ಥ್ಯ, ಧೃಡ ಸಂಕಲ್ಪ ಬಿಟ್ಟು ಕೊಡದ ಮನೋಭಾವ ಇದ್ದರೆ ಏನು ಬೇಕಾದರು ಸಾಧಿಸಬಹುದು ಎಂಬುದಕ್ಕೆ ತಕ್ಕ ಉದಾಹರಣೆ. ಟಿ20 ವಿಶ್ವಕಪ್ ಆರಂಭಕ್ಕೆ ಕೆಲವೇ ದಿನಗಳ ಮೊದಲು ತಂಡದ ಆರಂಭಿಕ ಬ್ಯಾಟ್ಸ್‌ಮನ್ ಆಗಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದ ಸ್ಯಾಮ್ಸನ್, ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ತೋರಿದ ಕೆಟ್ಟ ಪ್ರದರ್ಶನದ ಪರಿಣಾಮವಾಗಿ ಟಿ20 ವಿಶ್ವಕಪ್ ತಂಡದಲ್ಲಿ ಎರಡನೇ ಆರಂಭಿಕ ಆಟಗಾರನಾಗಬೇಕಾಯಿತು. ಈ ಎಲ್ಲಾ ಅವಮಾನಗಳ ನಡುವೆಯೂ ಸಿಕ್ಕ ಅವಕಾಶವನ್ನು ದೋಚಿಕೊಂಡ ಸಂಜು ಸ್ಯಾಮ್ಸನ್ ಸತತ ಮೂರು ಪಂದ್ಯಗಳಲ್ಲಿ…