ಜಪಾನ್, ಮಾರ್ಚ್ 08: ಜಪಾನ್ ಸಚಿವೆಯೊಬ್ಬರು ಪ್ರಧಾನಿಯೊಂದಿಗಿನ ಮಾತುಕತೆಗೆ ಐದು ನಿಮಿಷ ತಡವಾಗಿ ಬಂದಿದ್ದಕ್ಕೆ ದೇಶದ ಜನತೆ ಬಳಿ ಕ್ಷಮೆಯಾಚಿಸಿರುವ ವಿಡಿಯೋ ವೈರಲ್ ಆಗಿದೆ. ಅವರ ವಿಧೇಯತೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಚಿವರು ಕೇವಲ 5 ನಿಮಿಷ ತಡವಾಗಿ ಬಂದಿದ್ದಷ್ಟೇ ಅಲ್ಲದೆ ಅವರ ತಪ್ಪನ್ನು ಅರ್ಥ ಮಾಡಿಕೊಂಡು, ಎಲ್ಲರ ಬಳಿ ಕ್ಷಮೆ ಕೇಳಿದ್ದು ಅಚ್ಚರಿ ಮೂಡಿಸಿದೆ. ಸಂಚಾರ ದಟ್ಟಣೆ ಹೆಚ್ಚಾಗಿದ್ದ ಕಾರಣ ಬರುವುದು ತಡವಾಗಿತ್ತು, ಸಭೆಗೆ ಓಡುತ್ತಲೇ ಬಂದರು. ಬಳಿಕ ಮಾಧ್ಯಮ ಹಾಗೂ ಸಭೆಯಲ್ಲಿದ್ದವರೆಲ್ಲರ ಬಳಿ ಕ್ಷಮೆಯಾಚಿಸಿದರು.
T20 World Cup 2026: ಟಿ20 ವಿಶ್ವಕಪ್ ಫೈನಲ್ ಪಂದ್ಯದ ಆರಂಭಕ್ಕೂ ಮುನ್ನ ‘ಸದ್ದಡಗಿಸುವುದು’ ಸಖತ್ ಸದ್ದು ಮಾಡುತ್ತಿದೆ. ಅಹದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತೀಯ ಪ್ರೇಕ್ಷಕರ ಸದ್ದಗಿಸುವುದೇ ನಮ್ಮ ಗುರಿ ಎಂದಿದ್ದಾರೆ ನ್ಯೂಝಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್.
ಟಿ20 ವಿಶ್ವಕಪ್ ಫೈನಲ್ ಪಂದ್ಯದ ಪೂರ್ವಭಾವಿಯಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಿಚೆಲ್ ಸ್ಯಾಂಟ್ನರ್, 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಪ್ಯಾಟ್ ಕಮ್ಮಿನ್ಸ್ ಹೇಳಿದಂತೆಯೇ, ಲಕ್ಷಾಂತರ ಭಾರತೀಯ ಅಭಿಮಾನಿಗಳ ಮುಂದೆ ಆಡುವಾಗ “ಸ್ಟೇಡಿಯಂನಲ್ಲಿರುವ ಅಭಿಮಾನಿಗಳನ್ನು ಮೌನಗೊಳಿಸುವುದೇ ನಮ್ಮ ಗುರಿ” ಎಂದಿದ್ದಾರೆ.
ಈ ಮೂಲಕ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ ಅಭಿಮಾನಿಗಳ ಸದ್ದಡಗಿಸಿ ಟ್ರೋಫಿ ಗೆಲ್ಲುವ ವಿಶ್ವಾಸವನ್ನು ಸಹ ಮಿಚೆಲ್ ಸ್ಯಾಂಟ್ನರ್ ವ್ಯಕ್ತಪಡಿಸಿದ್ದಾರೆ.
ಇನ್ನು ಸ್ವದೇಶದಲ್ಲಿ ಟಿ20 ವಿಶ್ವಕಪ್ ಗೆಲ್ಲುವ ಏಕೈಕ ಅವಕಾಶ ಭಾರತಕ್ಕಿದ್ದು, ಆ ಒತ್ತಡವನ್ನೇ ನಾವು ಲಾಭವಾಗಿ ಬಳಸಿಕೊಳ್ಳುತ್ತೇವೆ. ತವರಿನಲ್ಲಿ ಪಂದ್ಯವಾಡುತ್ತಿರುವ ಕಾರಣ ಟೀಮ್ ಇಂಡಿಯಾ ಒತ್ತಡದಲ್ಲಿದೆ. ಇದರ ಸಂಪೂರ್ಣ ಲಾಭ ಪಡೆದು ನಾವು ಮ್ಯಾಚ್ ಗೆಲ್ಲುತ್ತೇವೆ ಎಂದು ನ್ಯೂಝಿಲೆಂಡ್ ನಾಯಕ ಹೇಳಿದ್ದಾರೆ.
ಸೂರ್ಯಕುಮಾರ್ ಯಾದವ್ ತಿರುಗೇಟು:
ನ್ಯೂಝಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ನೀಡಿರುವ ಸದ್ದಡಗಿಸುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಭಾರತ ತಂಡದ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್, ಸಬ್ ಹೀ ಸೇಮ್ ಲೈನ್ ಚಿಪ್ಕಾ ರಹೇ ಹೈ. ಕುಚ್ ತೋ ನಯಾ ಬೋಲೋ” (ಎಲ್ಲರೂ ಈಗ ಅದೇ ಮಾತನ್ನು ಹೇಳುತ್ತಿದ್ದಾರೆ. ಏನಾದರೂ ಹೊಸದನ್ನು ಹೇಳಿ) ಎಂದು ತಿರುಗೇಟು ನೀಡಿದ್ದಾರೆ.
ಒಟ್ಟಿನಲ್ಲಿ ಫೈನಲ್ ಪಂದ್ಯಕ್ಕೂ ಮುನ್ನ ಸದ್ದಡಗಿಸುವ ಸವಾಲು ಹಾಕಿರುವ ನ್ಯೂಝಿಲೆಂಡ್ ತಂಡದ ನಾಯಕನನ್ನು ಟೀಮ್ ಇಂಡಿಯಾ ಸೈಲೆಂಟ್ ಮಾಡಲಿದೆಯಾ ಕಾದು ನೋಡಬೇಕಿದೆ.
T20 World Cup 2026: ಟಿ20 ವಿಶ್ವಕಪ್ನ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು (ಮಾ.8) ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಈ ಮುಖಾಮುಖಿಗೂ ಮುನ್ನ ನಡೆದ ‘ಕ್ಯಾಪ್ಟನ್ಸ್ ಪ್ರೆಸ್ಮೀಟ್’ ನಾಯಕರುಗಳ ವಾಕ್ಸಮರಕ್ಕೆ ಸಾಕ್ಷಿಯಾಗಿದೆ.
ಟಿ20 ವಿಶ್ವಕಪ್ ಫೈನಲ್ ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದ ನ್ಯೂಝಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ‘ಅಹಮದಾಬಾದ್‌ನ ಸ್ಟೇಡಿಯಂನಲ್ಲಿ ಪ್ರೇಕ್ಷಕರನ್ನು ಮೌನಗೊಳಿಸುವ’ ವಿಶ್ವಾಸ ವ್ಯಕ್ತಪಡಿಸಿದ್ದರು.
ಇದೇ ಪ್ರಶ್ನೆಯನ್ನು ಆ ಬಳಿಕ ಸೂರ್ಯಕುಮಾರ್ ಯಾದವ್ ಮುಂದಿಡಲಾಗಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ “ಸ್ಥಳೀಯ ಪ್ರೇಕ್ಷಕರನ್ನು ಮೌನಗೊಳಿಸುವುದಾಗಿ” ನ್ಯೂಝಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ನೀಡಿದ್ದ ಹೇಳಿಕೆಗೆ ನೀವು ಏನಂತೀರಿ ಎಂದು ಕೇಳಲಾಗಿದೆ.
ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೂರ್ಯಕುಮಾರ್ ಯಾದವ್, “ಸಬ್ ಹೀ ಸೇಮ್ ಲೈನ್ ಚಿಪ್ಕಾ ರಹೇ ಹೈ. ಕುಚ್ ತೋ ನಯಾ ಬೋಲೋ” (ಎಲ್ಲರೂ ಈಗ ಅದೇ ಮಾತನ್ನು ಹೇಳುತ್ತಿದ್ದಾರೆ. ಏನಾದರೂ ಹೊಸದನ್ನು ಹೇಳಿ) ಎಂದು ತಿರುಗೇಟು ನೀಡಿದ್ದಾರೆ.
ಅಂದರೆ ‘ಪ್ರೇಕ್ಷಕರನ್ನು ಮೌನಗೊಳಿಸುವ’ ಡೈಲಾಗ್ ಶುರುವಾಗಿದ್ದು ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಅವರಿಂದ. 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಸುದ್ಧಿಗೋಷ್ಠಿಯಲ್ಲಿ ಅವರು ಭಾರತೀಯ ಪ್ರೇಕ್ಷಕರನ್ನು ಮೌನಗೊಳಿಸಿ ಪ್ರಶಸ್ತಿ ಗೆಲ್ಲುತ್ತೇವೆ ಎಂದಿದ್ದರು.
ಇದನ್ನೇ ಇತ್ತೀಚೆಗೆ ಇಂಗ್ಲೆಂಡ್ನ ಸ್ಯಾಮ್ ಕರನ್ ಪುನರುಚ್ಚರಿಸಿದ್ದರು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಸುದ್ಧಿಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದ ಸ್ಯಾಮ್ ಕರನ್ ಭಾರತೀಯ ಪ್ರೇಕ್ಷಕರನ್ನು ಸೈಲೆಂಟ್ ಮಾಡುತ್ತೇವೆ ಎಂದಿದ್ದರು.
ಇದೀಗ ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ನ್ಯೂಝಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಕೂಡ ‘ಸೈಲೆಂಟ್’ ಡೈಲಾಗ್ ಹೊಡೆದಿದ್ದಾರೆ. ಕಿವೀಸ್ ಕ್ಯಾಪ್ಟನ್ನ ಹೇಳಿಕೆಗೆ ಹೊಸ ಡೈಲಾಗ್ ಏನನ್ನಾದರೂ ಹೇಳಿ ಎಂದೇಳುವ ಮೂಲಕ ಟೀಮ್ ಇಂಢಿಯಾ ನಾಯಕ ಸೂರ್ಯಕುಮಾರ್ ಯಾದವ್ ತಿರುಗೇಟು ನೀಡಿದ್ದಾರೆ.
ಅಷ್ಟೇ ಅಲ್ಲದೆ ಇದೆಲ್ಲವೂ ಮೈಂಡ್ ಗೇಮ್. ದೊಡ್ಡ ಪಂದ್ಯಗಳಿಗೆ ಮುನ್ನ ಅತಿಯಾಗಿ ಬಳಸಲಾಗುವ ಮತ್ತು ಊಹಿಸಬಹುದಾದ ಮಾತು ಅಷ್ಟೇ. ಇಂತಹ ಡೈಲಾಗ್ಗಳು ವರ್ಕ್ ಆಗಲ್ಲ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.
ಬಿಗ್ ಬಾಸ್ ಮಾಜಿ ಸ್ಪರ್ಧಿ ಡಾಗ್ ಸತೀಶ್ (Dog Satish) ಅವರು ಶೌಚಾಲಯದಲ್ಲಿ ಇರುವಂತಹ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವಾಗ ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾದ ‘ದಾದಾ ಯಾರ್ ಗೊತ್ತಾ..’ ಹಾಡನ್ನು ಬಳಸಲಾಗಿದೆ. ಅದಕ್ಕೆ ರಜತ್, ವಿನಯ್ ಗೌಡ ಮುಂತಾದವರು ತಕರಾರು ತೆಗೆದಿದರು. ಆ ವಿಚಾರ ಈಗ ವಿವಾದಕ್ಕೆ ತಿರುಗಿದೆ. ಹಲವು ವರ್ಷಗಳ ಕಾಲ ಕಷ್ಟಪಟ್ಟು ಸುದೀಪ್ (Kichcha Sudeep) ಅವರು ಮೇಲಕ್ಕೆ ಬಂದಿದ್ದಾರೆ. ಅಂಥವರ ಹಾಡನ್ನು ಈ ರೀತಿ ಬಳಕೆ ಮಾಡಿದ್ದು ಸರಿಯೇ ಎಂಬ ಪ್ರಶ್ನೆಗೆ ಡಾಗ್ ಸತೀಶ್ ಅವರು ಉತ್ತರ ನೀಡಿದ್ದಾರೆ.
‘ಸುದೀಪ್ ಸರ್ ಬಹಳ ಕಷ್ಟಪಟ್ಟು ಹೆಸರು ಮಾಡಿದ್ದಾರೆ ಅಂತ ನೀವು ಹೇಳುತ್ತಿದ್ದೀರಿ. ಆದರೆ ಅವರು ಎಲ್ಲಿಯವರೆಗೆ ಹೆಸರು ಮಾಡಿದ್ದಾರೆ? ಗೂಗಲ್ನಲ್ಲಿ ನಂಬರ್ 1 ಹೀರೋ ಅಂತ ಹುಡುಕಿದರೆ ಬರುವಂತಹ ಹಂತಕ್ಕೆ ಆಗಿದ್ದಾರಾ? ನಟ ಆದ ಮಾತ್ರಕ್ಕೆ ತಲೆ ಮೇಲೆ ಕೊಂಬು ಇರುತ್ತಾ? ನಾಯಿ ಪೀಲ್ಡ್ನಲ್ಲಿ ಪ್ರಪಂಚಕ್ಕೆ ನಂಬರ್ 1 ನಾನು ಅಂತ ಬರುತ್ತೇನೆ. ಅವರು ಕರ್ನಾಟಕಕ್ಕೆ ಇರಬಹುದು ಅಥವಾ ಅರ್ಧ ಭಾರತಕ್ಕೆ ಇರಬಹುದು. ಇಂಡಿಯಾಗೆ ನಂಬರ್ ಒನ್ ಹೀರೋ ಅಂತ ಗೂಗಲ್ನಲ್ಲಿ ಹಾಕಿದರೆ ಸುದೀಪ್ ಸರ್ ಬರುತ್ತಾರಾ’ ಎಂದು ಡಾಗ್ ಸತೀಶ್ ಪ್ರಶ್ನೆ ಮಾಡಿದ್ದಾರೆ.
‘ಸುದೀಪ್ ಅವರು ಕಷ್ಟಪಟ್ಟು ಅವರ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ನಂಬರ್ 1 ಆಗಿದ್ದಾರೆ. ನಾನು ನನ್ನ ಕ್ಷೇತ್ರದಲ್ಲಿ ನಂಬರ್ 1 ಆಗಿದ್ದೇನೆ. ನಾನು ಕೂಡ ಕಷ್ಟಪಟ್ಟಿದ್ದೇನೆ. ನನ್ನ ತಲೆ ಮೇಲೆ ಎರಡು ಕೊಂಬು ಇದೆ ಅಂತ ನಾನು ಯಾವತ್ತೂ ಮಾತನಾಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ದಾದಾ ಯಾರ್ ಗೊತ್ತಾ ಹಾಡನ್ನು ನಾನು ಬಳಸಿದ್ದು ತಪ್ಪಲ್ಲ’ ಎಂದು ಡಾಗ್ ಸತೀಶ್ ಹೇಳಿದ್ದಾರೆ.
‘ರಜತ್, ವಿನಯ್ ಮತ್ತು ಧನರಾಜ್ ಪ್ರಚೋದನೆ ಮಾಡಿದ್ದರಿಂದಲೇ ಇಷ್ಟೆಲ್ಲ ಆಗಿದ್ದು. ಎಲ್ಲ ಕಡೆ ಶೇರ್ ಮಾಡಿ, ಕೆಟ್ಟದಾಗಿ ಕಮೆಂಟ್ ಹಾಕಿದ್ದು ಅವರೇ ತಾನೇ? ಅವರು ಸುಮ್ಮನೇ ಇದ್ದಿದ್ದರೆ ಮಾಮೂಲಿಯಾಗಿ ಇಷ್ಟೊಂದು ಸುದ್ದಿ ಆಗುತ್ತಿತ್ತಾ? ನಾನು ಮಾಡಿದ್ದರಲ್ಲಿ ತಪ್ಪೇ ಇಲ್ಲ’ ಎಂದು ಡಾಗ್ ಸತೀಶ್ ಅವರು ವಾದ ಮಾಡಿದ್ದಾರೆ.
‘ಅವರು ನನ್ನ ಮೇಲೆ ದೂರು ಕೊಡಲು ಚೆನ್ನಮ್ಮನ ಕೆರೆಗೆ ಹೋಗಿದ್ದಾರೆ. ನನ್ನ ವಿಡಿಯೋದಲ್ಲಿ ತಪ್ಪು ಇಲ್ಲದ ಕಾರಣ ಚೆನ್ನಮ್ಮನ ಕೆರೆ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಬನಶಂಕರಿ ಠಾಣೆಯಲ್ಲೂ ಅವರಿಗೆ ಬೈಯ್ದು ಕಳಿಸಿದ್ದಾರೆ. ಅವರು ದೂರು ಕೊಡದೇ ಸುಳ್ಳು ಹೇಳುತ್ತಿದ್ದಾರೆ. ಅದು ಅಪರಾಧ. ನನ್ನ ವಿಡಿಯೋಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ, ಬೆದರಿಕೆ ಹಾಕಿದ್ದಾರೆ. ಅದು ಸಮಾಜಕ್ಕೆ ಏನು ಸಂದೇಶ ಕೊಡುತ್ತದೆ?’ ಎಂದು ಡಾಗ್ ಸತೀಶ್ ಹೇಳಿದ್ದಾರೆ.
T20 World Cup 2026: ಟಿ20 ವಿಶ್ವಕಪ್ ಫೈನಲ್‌ಗೆ ಮುನ್ನ ಭಾರತ ತಂಡ ಅಹಮದಾಬಾದ್‌ನಲ್ಲಿರುವ ಹೋಟೆಲ್ ಅನ್ನು ಬದಲಾಯಿಸಿದೆ. ಇದರ ಬೆನ್ನಲ್ಲೇ ಇದು ಕಾಕತಾಳೀಯವೊ ಅಥವಾ ಮೂಢನಂಬಿಕೆಯೋ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ಏಕೆಂದರೆ ಈ ಹಿಂದಿನ ಪಂದ್ಯಗಳ ವೇಳೆ ಭಾರತ ತಂಡ ಐಟಿಸಿ ನರ್ಮದಾ (ITC Narmada) ಹೋಟೆಲ್‌ನಲ್ಲಿ ಉಳಿದುಕೊಂಡಿತ್ತು. ಈ ವೇಳೆ ಸೌತ್ ಆಫ್ರಿಕಾ ವಿರುದ್ಧ ಸೋಲನುಭವಿಸಿದ್ದರು.
ಇದಕ್ಕೂ ಮುನ್ನ 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ವೇಳೆಯೂ ಇದೇ ಹೋಟೆಲ್‌ನಲ್ಲಿ ತಂಗಿದ್ದರು. ಆ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೃದಯವಿದ್ರಾವಕ ಸೋಲನ್ನು ಅನುಭವಿಸಿತ್ತು. ಹೀಗಾಗಿಯೇ ಟೀಮ್ ಇಂಡಿಯಾ ಇದೀಗ ಫೈನಲ್ ಪಂದ್ಯಕ್ಕೂ ಮುನ್ನ ಹೋಟೆಲ್ ಬದಲಾಯಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಅದರಂತೆ ಇದೀಗ ಟೀಮ್ ಇಂಡಿಯಾ ಆಟಗಾರರು ತಾಜ್ ಸ್ಕೈಲೈನ್ (Taj Skyline) ಹೋಟೆಲ್‌ನಲ್ಲಿ ತಂಗಿದ್ದಾರೆ. ಅತ್ತ ನ್ಯೂಝಿಲೆಂಡ್ ತಂಡವು ಐಟಿಸಿ ನರ್ಮದಾ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ.
ಈ ಹೋಟೆಲ್ ಬದಲಾವಣೆಗೆ ಐಸಿಸಿ ಶಿಷ್ಟಾಚಾರದ ಕಾರಣ ಎಂಬ ಮಾತು ಕೂಡ ಕೇಳಿ ಬಂದಿದೆ. ಏಕೆಂದರೆ ಫೈನಲ್ ತಲುಪಿದ ಮೊದಲ ತಂಡಕ್ಕೆ (ನ್ಯೂಝಿಲೆಂಡ್) ಐಟಿಸಿ ನರ್ಮದಾ ಹೋಟೆಲ್ ಹಂಚಿಕೆಯಾಗಿತ್ತು. ಹೀಗಾಗಿ ಭಾರತ ತಂಡ ಬೇರೆ ಹೋಟೆಲ್‌ಗೆ ಹೋಗಬೇಕಾಯಿತು ಎಂದು ಹೇಳಲಾಗಿದೆ.
ಇದಾಗ್ಯೂ ಟೀಮ್ ಇಂಡಿಯಾ ಸಿಬ್ಬಂದಿ ವರ್ಗದಲ್ಲಿರುವ ವ್ಯಕ್ತಿಯೋರ್ವರು ಅಪಶಕುನಗಳ ಬಗ್ಗೆ ಹೆಚ್ಚಿನ ನಂಬಿಕೆಯುಳ್ಳವರು. ಅವರ ಸಲಹೆ ಮೇರೆಗೆ ಈ ಬದಲಾವಣೆ ಮಾಡಲಾಗಿದೆ. ಈ ಹಿಂದೆ ಕೂಡ ಅವರು ಇಂತಹ ಸಲಹೆಗಳನ್ನು ನೀಡಿದ್ದರು.
ಇದಕ್ಕೆ ತಾಜಾ ಉದಾಹರಣೆ, ಟೀಮ್ ಇಂಡಿಯಾ ಚಂದ್ರಗ್ರಹಣದ ವೇಳೆ ಅಭ್ಯಾಸ ನಡೆಸದೇ ಇರುವುದು. ಭಾರತೀಯ ಆಟಗಾರರು ಚಂದ್ರಗ್ರಹಣದ ದಿನದಂದು ತಡವಾಗಿ ಅಭ್ಯಾಸಕ್ಕೆ ಹಾಜರಾಗಿದ್ದರು.
ಅಭ್ಯಾಸದ ಮೂಲ ವೇಳಾಪಟ್ಟಿಯಂತೆ ಸಂಜೆ 6:00 ಗಂಟೆಗೆ ಆರಂಭವಾಗಬೇಕಿದ್ದ ತರಬೇತಿಯು, ಗ್ರಹಣದ ಹಿನ್ನೆಲೆಯಲ್ಲಿ ಸಂಜೆ 7:20ಕ್ಕೆ ಆರಂಭಿಸಲಾಯಿತು. ಹಿಂದೂ ಸಂಪ್ರದಾಯದಲ್ಲಿ, ಗ್ರಹಣದ ಸಮಯದಲ್ಲಿ ಯಾವುದರೂ ಪ್ರಮುಖ ಕಾರ್ಯದಲ್ಲಿ ನಿರತರಾಗುವುದು ಒಳಿತಲ್ಲ ಎಂದು ನಂಬಲಾಗುತ್ತದೆ. ಈ ಸಲಹೆಯನ್ನು ಕೂಡ ಇದೇ ಸಿಬ್ಬಂದಿ ನೀಡಿದ್ದರು ಎಂದು ಹೇಳಲಾಗಿದೆ.
ಇದೀಗ ಅದೇ ಸಿಬ್ಬಂದಿ ಹೋಟೆಲ್ ಬದಲಾವಣೆಯೊಂದಿಗೆ ಬ್ಯಾಡ್ ಲಕ್ ಹೋಗಲಾಡಿಸಲು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಈ ಸಲಹೆಯಂತೆ ಟೀಮ್ ಇಂಡಿಯಾ ಹೋಟೆಲ್ ಬದಲಿಸಿದ್ದು, ಈ ಮೂಲಕ ಲಕ್ ಅನ್ನು ಕೂಡ ಬದಲಾಯಿಸುವ ವಿಶ್ವಾಸದಲ್ಲಿದೆ.
ಬೆಂಗಳೂರು, ಮಾರ್ಚ್ 08: ನಗರದ ಹೊರವಲಯದ ಅಗರ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಯುವಕರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಮೃತಪಟ್ಟ ಯುವಕರನ್ನು ಸೈಫ್ ಪಾಷಾ, ಯೂಸುಫ್ ಖಾನ್ ಮತ್ತು ಅಜರ್ ಪಾಷಾ ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಬೆಂಗಳೂರಿನಿಂದ ಹಾರೋಹಳ್ಳಿ ಕಡೆಗೆ ಚಲಿಸುತ್ತಿದ್ದ ಲಾರಿಯ ಹಿಂಭಾಗಕ್ಕೆ ಅತಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗವು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಮೃತದೇಹಗಳನ್ನು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಕಗ್ಗಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೊರಾದಾಬಾದ್, ಮಾರ್ಚ್ 08: ಬ್ರೇಕಪ್(Breakup) ಬಳಿಕ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬ ಅವಳಿ ಸಹೋದರಿಯರಿಗೆ 40ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ನಡೆದಿದೆ. ನಂತರ ತನ್ನ ತಾಯಿಯ ಮೇಲೂ ಹಲ್ಲೆ ನಡೆಸಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಓರ್ವ ಸಹೋದರಿ ಸಾವನ್ನಪ್ಪಿದ್ದಾರೆ.
ಹೋಳಿ ಹಬ್ಬಕ್ಕೆಂದು ಇಡೀ ಕುಟುಂಬವೇ ಒಟ್ಟುಗೂಡಿತ್ತು.ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಯುವತಿಯೊಬ್ಬಳನ್ನು ಆತ ಪ್ರೀತಿಸುತ್ತಿದ್ದ. ಸಂಬಂಧ ಮುರಿದು ಬೀಳಲು ತನ್ನ ತಾಯಿ ಮತ್ತು ಸಹೋದರಿ ಕಾರಣ ಎಂದು ನಂಬಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕೋಪವು ಅಂತಿಮವಾಗಿ ಕ್ರೂರ ದಾಳಿಯಾಗಿ ಭುಗಿಲೆದ್ದಿದ್ದು, ಅದು ಕುಟುಂಬವನ್ನು ಛಿದ್ರಗೊಳಿಸಿದೆ. ಮೊರಾದಾಬಾದ್‌ನ ಮಜೋಲಾ ಪೊಲೀಸ್ ಠಾಣೆ ವ್ಯಾಪ್ತಿಯ ಬುದ್ಧಿ ವಿಹಾರ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.
ಕಾಲೋನಿಯಲ್ಲಿ ವಾಸಿಸುವ ನೀಲಿಮಾ ಆರೋಗ್ಯ ವಿಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಅವಳಿ ಮಕ್ಕಳಾದ 25 ವರ್ಷದ ಹಾರ್ದಿಕ್ ಮತ್ತು ಹಿಮಶಿಖಾ ಅವರು ಗುರುಗ್ರಾಮ್‌ನಲ್ಲಿ ಒಟ್ಟಿಗೆ ವಾಸವಿದ್ದರು, ಅಲ್ಲಿ ಅವರು ಕೆಲಸ ಮಾಡುತ್ತಿದ್ದರು. ಸಹೋದರಿಯರು ತಮ್ಮ ತಾಯಿಯೊಂದಿಗೆ ಹೋಳಿ ಆಚರಿಸಲು ಮೊರಾದಾಬಾದ್‌ಗೆ ಬಂದಿದ್ದರು ಮತ್ತು ಶುಕ್ರವಾರ ಗುರುಗ್ರಾಮ್‌ಗೆ ಮರಳಲು ತಯಾರಿ ನಡೆಸುತ್ತಿದ್ದರು.
ಪೊಲೀಸರ ಪ್ರಕಾರ, ಹೋಳಿ ರಜೆಯ ನಂತರ ನೀಲಿಮಾ ತನ್ನ ಕಚೇರಿಗೆ ತೆರಳಿದ್ದರು, ಆದರೆ ಹಾರ್ದಿಕ್ ಮತ್ತು ಹಿಮಶಿಖಾ ಮನೆಯಲ್ಲಿ ಒಂಟಿಯಾಗಿದ್ದರು. ಹಾರ್ದಿಕ್ ತನ್ನ ಸಹೋದರಿಯ ಮೇಲೆ ಮನೆಯೊಳಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಅವನು ಆಕೆಗೆ ಪದೇ ಪದೇ ಇರಿದನು, ಇದರಿಂದಾಗಿ ಆಕೆ ತೀವ್ರವಾಗಿ ಗಾಯಗೊಂಡಿದ್ದಾಳೆ. ನಂತರ ಆರೋಪಿಯು ತನ್ನ ತಾಯಿಯ ಕಚೇರಿಗೆ ಹೋಗಿ, ಯಾವುದಾದರೂ ನೆಪ ಹೇಳಿ ತನ್ನೊಂದಿಗೆ ಮನೆಗೆ ಬರುವಂತೆ ಕೇಳಿಕೊಂಡಿದ್ದಾನೆ.
ನೀಲಿಮಾ ಮನೆಗೆ ಪ್ರವೇಶಿಸಿದಾಗ, ತನ್ನ ಮಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಿದ್ದಾರೆ. ಆಕೆಯ ಕಿರುಚಾಟ ಮನೆ ಮತ್ತು ಅಕ್ಕಪಕ್ಕದ ಮನೆಯವರೆಗೂ ಕೇಳಿತ್ತು. ಆಗ ಹಾರ್ದಿಕ್ ತನ್ನ ತಾಯಿಯ ಮೇಲೂ ಹಲ್ಲೆ ನಡೆಸಿ, ಕಾರಿನಲ್ಲಿ ಪರಾರಿಯಾಗುವ ಮೊದಲು ಹಲವಾರು ಬಾರಿ ಇರಿದಿದ್ದಾನೆ ಎನ್ನಲಾಗಿದೆ. ತಾಯಿಯ ಕಿರುಚಾಟ ಕೇಳಿ ಪಕ್ಕದ ಮನೆಯವರು ಒಳಗೆ ಓಡಿ ಬಂದು ದೃಶ್ಯ ನೋಡಿ ದಿಗ್ಭ್ರಮೆಗೊಂಡರು.
ತಕ್ಷಣವೇ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಇಬ್ಬರನ್ನೂ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹಿಮ್ಶಿಖಾ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ನೀಲಿಮಾ ಅವರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸುಮಾರು ಏಳು ತಿಂಗಳ ಹಿಂದೆ ಸಂಬಂಧ ಕೊನೆಗೊಂಡಿತು, ನಂತರ ಆರೋಪಿ ಭಾವನಾತ್ಮಕವಾಗಿ ತೊಂದರೆಗೀಡಾದನಂತೆ ಕಂಡುಬಂದನು. ವಿಚಾರಣೆಯ ಸಮಯದಲ್ಲಿ, ಆರೋಪಿಯು ದಾಳಿ ಹೇಗೆ ನಡೆಯಿತು ಎಂಬುದನ್ನು ತನಿಖಾಧಿಕಾರಿಗಳಿಗೆ ವಿವರಿಸಿದ್ದಾನೆ. ಹಿಮ್ಶಿಖಾ ಅವರ ದೇಹದ ಮೇಲೆ 40 ಕ್ಕೂ ಹೆಚ್ಚು ಇರಿತದ ಗಾಯಗಳಾಗಿತ್ತು.
ಬೆಂಗಳೂರು, ಮಾರ್ಚ್ 08: ರಾಜ್ಯದಲ್ಲಿ ಹಲವು ದಿನಗಳಿಂದ ತಾಪಮಾನ ಹೆಚ್ಚಿದ್ದು, ಕೆಲ ದಿನಗಳಿಂದ ಒಣ ಹವೆಯ (Weather Forecast) ವಾತಾವರಣವೇ ಕಂಡುಬಂದಿದೆ. ಆದರೆ ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇಂದು ಬೆಂಗಳೂರಿನಲ್ಲಿ ತಾಪಮಾನದಲ್ಲಿ ಕೊಂಚ ಏರಿಕೆಯಾಗಬಹುದು ಎಂದು ಇಲಾಖೆ ತಿಳಿಸಿದೆ.
ಎಲ್ಲೆಲ್ಲಿ ಒಣ ಹವೆ?
ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇಂದಿನಿಂದ ಕೆಲ ದಿನ ರಾಜ್ಯದಲ್ಲಿ ಶುಷ್ಕ ವಾತಾವರಣವೇ ಇರಲಿದೆ ಎಂದು ಇಲಾಖೆ ತಿಳಿಸಿದ್ದು, ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.
ಮಾರ್ಚ್ ಎರಡನೇ ವಾರದಲ್ಲಿ ತಾಪಮಾನ ಹೆಚ್ಚಳ
ನಗರದಲ್ಲಿ ಮಾರ್ಚ್ ಎರಡನೇ ವಾರದ ಬಳಿಕ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೂಡ ಅಲರ್ಟ್ ಆಗಿದೆ. ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಅನಗತ್ಯವಾಗಿ ಹೊರಗೆ ಹೋಗದಂತೆ ಸೂಚನೆ ನೀಡಲಾಗಿದೆ. ಹೀಟ್ ಸ್ಟ್ರೋಕ್ ಹಾಗೂ ಡಿಹೈಡ್ರೇಶನ್ ಅಪಾಯ ಇರುವುದರಿಂದ ವೃದ್ಧರು, ಗರ್ಭಿಣಿಯರು, ಮಕ್ಕಳು ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರು ವಿಶೇಷ ಎಚ್ಚರಿಕೆ ವಹಿಸಬೇಕು.
ಹೆಚ್ಚಾಗಿ ನೀರು, ತಂಪು ಪಾನೀಯಗಳು ಹಾಗೂ ಹಣ್ಣುಗಳನ್ನು ಸೇವಿಸಿ ದೇಹದ ತಾಪಮಾನ ನಿಯಂತ್ರಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ, ಈ ವರ್ಷವೂ ಬೆಂಗಳೂರು ಮಂದಿಗೆ ಕಠಿಣ ಬೇಸಿಗೆ ಎದುರಾಗುವ ಸೂಚನೆಗಳಿವೆ.
ಮಂಡ್ಯ/ ಬಳ್ಳಾರಿ, ಮಾರ್ಚ್ 08: ಪಕ್ಕದ ಊರಿಗೆ ಪೂಜೆಗೆ ಹೋಗುತ್ತಿರೋದಾಗಿ ತಿಳಿಸಿ ಹೊರಟಿದ್ದ ಅರ್ಚಕರೋರ್ವರ ಶವ ನಗ್ನ ಸ್ಥಿತಿಯಲ್ಲಿ ನಾಲೆಯಲ್ಲಿ ಪತ್ತೆಯಾಗಿರುವ ಘಟನೆ ಮಂಡ್ಯದ ಶ್ರೀರಂಗಪಟ್ಟಣದ ಮರಳಗಾಲ ಗ್ರಾಮದಲ್ಲಿ ನಡೆದಿದೆ. ಸಿದ್ದಲಿಂಗಪ್ಪ (46) ಮೃತ ವ್ಯಕ್ತಿ. ಪಕ್ಕದ ಶೆಟ್ಟಿಹಳ್ಳಿ ಗ್ರಾಮಕ್ಕೆ ಪೂಜೆಗೆ ಹೋಗುತ್ತಿದ್ದೇನೆ ಎಂದು ಮನೆಯಲ್ಲಿ ಹೇಳಿ ಹೊರಟಿದ್ದ ಸಿದ್ದಲಿಂಗಪ್ಪ ಅವರ ಸ್ಕೂಟರ್ ಸಿಡಿಎಸ್ ನಾಲೆಯಲ್ಲಿ ತೇಲುತ್ತಿರೋದನ್ನು ಕಂಡ ಗ್ರಾಮಸ್ಥರು, ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದರು. ಹೀಗಾಗಿ ನಾಪತ್ತೆಯಾದ ಸಿದ್ದಲಿಂಗಪ್ಪಗಾಗಿ ಹುಡುಕಾಟ ನಡೆಸಿದಾಗ ಮೈಮೇಲೆ ಬಟ್ಟೆ ಇಲ್ಲದ ರೀತಿ ಮೃತದೇಹ ಪತ್ತೆಯಾಗಿದೆ. ಅಲ್ಲದೆ ನಾಲೆ ಬಳಿ ರಕ್ತದ ಕಲೆಗಳು ಕಂಡುಬಂದ ಕಾರಣ, ಯಾರೋ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ ಎನ್ನುವ ಸಂಶಯ ವ್ಯಕ್ತವಾಗಿದೆ.
ದೇವಸ್ಥಾನವೊಂದರ ಅರ್ಚಕರಾಗಿದ್ದ ಸಿದ್ದಲಿಂಗಪ್ಪ, ತಾನಾಯ್ತು, ತನ್ನ ವೃತ್ತಿ ಆಯ್ತು ಅಂತ ಪೂಜೆ-ಪುನಸ್ಕಾರ ಮಾಡಿಕೊಂಡು ಇದ್ದವರು. ಹೀಗಿರುವಾಗ ಪೂಜೆಗೆಂದು ಪಕ್ಕದ ಊರಿಗೆ ಹೋಗಿದ್ದ ಅವರಿಗೆ ಆಗಿದ್ದೇನು ಎಂಬ ಪ್ರಶ್ನೆ ಗ್ರಾಮಸ್ಥರನ್ನು ಕಾಡತೊಡಗಿದೆ. ಇನ್ನು ಘಟನೆ ಬಗ್ಗೆ ಮಾಹಿತಿ ನೀಡಿದ ಕುಟುಂಬಸ್ಥರು, ಏನಾಯ್ತು ಅಂತ ಗೊತ್ತಿಲ್ಲ. ಪೂಜೆಗೆ ಎಂದು ಹೋದವರು ಈ ಸ್ಥಿತಿಯಲ್ಲಿ ಸಿಕ್ಕಿದ್ದಾರೆ. ಸಿದ್ದಲಿಂಗಪ್ಪ ಅವರಿಗೆ ಯಾರು ಕೂಡ ವೈರಿಗಳು ಇರಲಿಲ್ಲ ಎಂದಿದ್ದಾರೆ. ಸದ್ಯ ಶ್ರೀರಂಗಪಟ್ಟಣದ ಗ್ರಾಮಾಂತರ ಠಾಣಾ ಪೊಲೀಸರು, ಮಂಡ್ಯ ಮಿಮ್ಸ್ನಲ್ಲಿ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಅರ್ಚಕರದ್ದು ಆಕಸ್ಮಿಕ ಸಾವೋ ಅಥವಾ ಹತ್ಯೆಯೋ ಎನ್ನುವುದು ತನಿಖೆಯಿಂದ ಬಯಲಾಗಬೇಕಿದೆ.
ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬಳ್ಳಾರಿಯ ಖಾಸಗಿ ಶಾಲೆಗೆ ಸೇರಿದ ಹಾಸ್ಟೆಲ್ನಲ್ಲಿ ನಡೆದಿದೆ. ಗಲಾಟೆ ವೇಳೆ 9ನೇ ತರಗತಿ ವಿದ್ಯಾರ್ಥಿ ಹಲವರ ಮೇಲೆ ರಾಡ್ನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದರೆ, 7 ವಿದ್ಯಾರ್ಥಿಗಳಿಗೆ ಗಾಯವಾಗಿದೆ. ಹಾಸ್ಟೆಲ್ ವಾರ್ಡನ್ ಮೇಲೂ ಹಲ್ಲೆ ನಡೆಸಿ ಬಾಲಕ ಪರಾರಿಯಾಗಿದ್ದು, ಗಾಯಾಳುಗಳನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಳ್ಳಾರಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್ 8, ಭಾನು ವರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಕೃಷ್ಣ ಪಕ್ಷದ ಪಂಚಮಿ, ಸ್ವಾತಿ ನಕ್ಷತ್ರ, ಧ್ರುವ ಯೋಗ ಮತ್ತು ಕೌಲವ ಕರಣ ಇರುತ್ತದೆ. ರಾಹುಕಾಲ ಸಂಜೆ 4 ಗಂಟೆ 59 ನಿಮಿಷದಿಂದ 6 ಗಂಟೆ 29 ನಿಮಿಷದವರೆಗೆ ಇರಲಿದೆ. ಬೆಳಗಿನ ಜಾವ 11 ಗಂಟೆ 1 ನಿಮಿಷದಿಂದ 12 ಗಂಟೆ 30 ನಿಮಿಷದವರೆಗೆ ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ ಹಾಗೂ ಶುಭಕಾಲ ಇರಲಿದೆ.
ಮಾರ್ಚ್ 8 ಭಾನುವಾರವು ಸೂರ್ಯನ ದಿನವಾಗಿದ್ದು, ಸರ್ಕಾರಿ ರಜೆಯ ದಿನವೂ ಆಗಿದೆ. ಈ ದಿನ ರಂಗ ಪಂಚಮಿ ಇರುವುದರಿಂದ ಕಾರ್ಯಸಿದ್ಧಿಗೆ ಶುಭ ಎಂದು ತಿಳಿಸಲಾಗಿದೆ. ಪಂಚಮಿ ತಿಥಿಯು ಎಲ್ಲ ರಾಶಿಗಳವರಿಗೂ ಧನಾತ್ಮಕ ಶಕ್ತಿಯನ್ನು ತರುತ್ತದೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.