All posts by nagaraj11081993

‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್ – Kannada News | Sanjana Anand talks about Hayagrriva Kannada movie

ಧನ್ವೀರ್ ಗೌಡ (Dhanveer Gowda) ನಟನೆಯ ‘ಹಯಗ್ರೀವ’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಮೊದಲ ದಿನ ಕಾರಣಾಂತರಗಳಿಂದ ಸಿನಿಮಾದ ಶೋಗಳು ರದ್ದಾಗಿದ್ದವಾದರೂ ಆ ನಂತರ ಸಂಜೆ ವೇಳೆ ಸಿನಿಮಾ ಬಿಡುಗಡೆ ಆಗಿ, ಪ್ರೇಕ್ಷಕರಿಂದ ಉತ್ತರ ಆರಂಭಿಕ ಪ್ರತಿಕ್ರಿಯೆ ಪಡೆದುಕೊಂಡಿದೆ. ‘ಹಯಗ್ರೀವ’ ಸಿನಿಮಾ ಭಿನ್ನ ರೀತಿಯ ಕತೆ ಹೊಂದಿರುವ ಸಿನಿಮಾ ಎನ್ನಲಾಗುತ್ತಿದೆ. ಸಿನಿಮಾನಲ್ಲಿ ಸಂಜನಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ. ಟಿವಿ9 ಜೊತೆಗೆ ಮಾತನಾಡಿರುವ ನಟಿ ಸಂಜನಾ ಆನಂದ್, ತಮ್ಮ ನಟನೆಯ ‘ಹಯಗ್ರೀವ’ ಸಿನಿಮಾಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಗೆ ಖುಷಿ ವ್ಯಕ್ತಪಡಿಸಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪೊಲೀಸರ ವರ್ಗಾವಣೆ ಲಂಚಾವತಾರ: ಡಿಜಿಗೆ ಲೋಕಾಯುಕ್ತ ಇನ್ಸ್​​ಪೆಕ್ಟರ್​ ಮಹತ್ವದ ಪತ್ರ – Kannada News | Digital Counselling for Police Transfers: Lokayukta Inspector Urges DG Amid Bribery Allegations

ಪ್ರಾತಿನಿಧಿಕ ಚಿತ್ರImage Credit source: varthabharati

ಬೆಂಗಳೂರು, ಮಾರ್ಚ್​​ 01: ಇತ್ತೀಚಿಗೆ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ (Police transfers) ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಲಕ್ಷಾಂತರ, ಕೋಟ್ಯಂತರ ರೂ ಲಂಚ ಪಡೆದು ಅಥವಾ ರಾಜಕಾರಣಿಗಳಿಗೆ ಕೊಟ್ಟು ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಹೀಗಾಗಿ ಪೊಲೀಸ್ ಇಲಾಖೆಯಲ್ಲಿ ಡಿಜಿಟಲ್ ಕೌನ್ಸಿಲಿಂಗ್​​ ಮೂಲಕ ವರ್ಗಾವಣೆ ಮಾಡುವಂತೆ ರಾಜ್ಯ ಲೋಕಾಯುಕ್ತ ಇನ್ಸ್​ಪೆಕ್ಟರ್ ಬ್ಯಾಟರಾಯನ ಗೌಡ ಬಿ.ಪಿ ಎಂಬುವವರಿಂದ ಡಿಜಿಗೆ ಪತ್ರ ಬರೆಯಲಾಗಿದೆ. ಸದ್ಯ ಈ ಪತ್ರ ಎಲ್ಲೆಡೆ ವೈರಲ್​ ಆಗುತ್ತಿದೆ.

ಇತ್ತೀಚೆಗೆ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ವಿಚಾರವಾಗಿ ಸಾಕಷ್ಟು ಆರೋಪಗಳು ಕೇಳಿ ಬರುತ್ತಿವೆ. ಲಂಚ ನೀಡಿ ಪೋಸ್ಟಿಂಗ್ ಪಡೆಯಬೇಕು ಎಂಬ ವಿಚಾರ ಹರಿದಾಡುತ್ತಿದೆ. ಇದರ ಬಗ್ಗೆ ಮಾಧ್ಯಮಗಳಲ್ಲಿ ಕೂಡ ಸಾಕಷ್ಟು ಚರ್ಚೆ ಆಗಿದೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಡಿಜಿಟಲ್ ಕೌನ್ಸಿಲಿಂಗ್​​ ಮೂಲಕ ವರ್ಗಾವಣೆ ಮಾಡುವಂತೆ ಬ್ಯಾಟರಾಯನ ಗೌಡ ಬಿ.ಪಿ ಡಿಜಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಪೊಲೀಸ್ ಇಲಾಖೆಗೆ ಮೇಜರ್​ ಸರ್ಜರಿ: 34 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಇನ್ನು ಇತ್ತೀಚೆಗೆ ಕೆಲವು ಅಧಿಕಾರಿಗಳನ್ನು ಡಿಜಿಟಲ್ ಕೌನ್ಸಿಲಿಂಗ್​ ಮೂಲಕ ವರ್ಗಾವಣೆ ಮಾಡಲಾಗುತ್ತಿದೆ. A,B,C,D ಗ್ರೂಪ್​ ಹಾಗೂ ಗ್ರಾಮೀಣ ಪಂಚಾಯತ್ ರಾಜ್ ಇಲಾಖೆಯ ಪಿಡಿಓಗಳನ್ನ ಡಿಜಿಟಲ್ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಲಾಗಿದೆ. ಇದರ ಬಗ್ಗೆ ರಾಜಕಾರಣಿಗಳು ಸೇರಿದಂತೆ ಜನರಿಂದ ಕೂಡ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ. ಹೀಗಾಗಿ ಇದೇ ಮಾದರಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಮಾಡುವಂತೆ ಸುಮಾರು 14 ನಿಬಂಧನೆಗಳನ್ನು ಬ್ಯಾಟರಾಯನ ಗೌಡ ಬಿ.ಪಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಅನೇಕ ಪೊಲೀಸ್ ಠಾಣೆಗಳಲ್ಲಿ ಇನ್ಸ್​ಪೆಕ್ಟರ್​ಗಳೇ ಇಲ್ಲ! ಕಾನೂನು ಸುವ್ಯವಸ್ಥೆ ಕಾಪಾಡುವುದೇ ಸವಾಲು

ಪತ್ರದಲ್ಲಿ ಉಲ್ಲೇಖಿಸಿರುವ ನಿಬಂಧನೆಗಳೊಂದಿಗೆ ಡಿಜಿಟಲ್ ವಿಧಾನದಲ್ಲಿ ಕೌನ್ಸಿಲಿಂಗ್ ಮೂಲಕ ವರ್ಗಾವಣೆಯನ್ನು ಮಾಡಿದಲ್ಲಿ ಇಲಾಖೆಯಲ್ಲಿ ಪಾರದರ್ಶಕ, ರಾಜಕೀಯ ಹಸ್ತಕ್ಷೆಪರಹಿತ, ನಿಷ್ಪಕ್ಷಪಾತ, ಭ್ರಷ್ಟಾಚಾರ ರಹಿತ, ಒತ್ತಡರಹಿತ, ಸಮಗತೆ, ದಕ್ಷತೆ ಮತ್ತು ಹೊಣೆಗಾರಿಕೆಯಿಂದ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಟ್ಟಂತೆ ಆಗುತ್ತದೆ. ಇದರಿಂದ ಸಮಾಜದಲ್ಲಿ ಇಲಾಖೆಯ ಘನತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಡಿಜಿಟಲ್ ವಿಧಾನದಲ್ಲಿ ಕೌನ್ಸಿಲಿಂಗ್‌ ಮುಖಾಂತರ ವರ್ಗಾವಣೆ ಮಾಡಲು ರಾಜ್ಯ ಲೋಕಾಯುಕ್ತ ಇನ್ಸ್​ಪೆಕ್ಟರ್ ಬ್ಯಾಟರಾಯನ ಗೌಡ ಬಿ.ಪಿ ಕೋರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಿಡುಗಡೆಗೆ 9 ತಿಂಗಳ ಮುಂಚೆಯೇ ಹೊರಬಿತ್ತು ‘ರಾಮಾಯಣ’ ಸಿನಿಮಾ ವಿಮರ್ಶೆ – Kannada News | Ramayana movie first reviews out, people loved the movie

ರಣ್​​ಬೀರ್ ಕಪೂರ್ (Ranbir Kapoor) ಮತ್ತು ಯಶ್ ಒಟ್ಟಿಗೆ ನಟಿಸಿರುವ ‘ರಾಮಾಯಣ’ ಸಿನಿಮಾ ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್​​ನ ಸಿನಿಮಾ ಎನ್ನಲಾಗುತ್ತಿದೆ. ಆಸ್ಕರ್ ವಿಜೇತ ಹಾಲಿವುಡ್​ ವಿಎಫ್​​ಎಕ್ಸ್ ಸಂಸ್ಥೆಯಾದ ಡಿಎನ್​​ಇಜಿಯ ಸಿಇಓ ಆಗಿರುವ ನಮಿತ್ ಮಲ್ಹೋತ್ರಾ ಅವರು ‘ರಾಮಾಯಣ’ ಕತೆಯನ್ನು ಭಾರಿ ಅದ್ಧೂರಿಯಾಗಿ, ಇಡೀ ವಿಶ್ವವೇ ತಿರುಗಿ ನೋಡುವಂತೆ ನಿರ್ಮಿಸಿದ್ದಾರೆ ಎನ್ನಲಾಗುತ್ತಿದೆ. ‘ರಾಮಾಯಣ’ ಸಿನಿಮಾದ ಮೊದಲ ಭಾಗ ನವೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಆದರೆ ಸಿನಿಮಾ ಬಿಡುಗಡೆಗೆ ಇನ್ನೂ ಒಂಬತ್ತು ತಿಂಗಳು ಇರುವಾಗದೇ ಸಿನಿಮಾದ ರಿವ್ಯೂ (ವಿಮರ್ಶೆ) ಹೊರಬಿದ್ದಿದೆ.

‘ರಾಮಾಯಣ’ ಸಿನಿಮಾದ ಮೊದಲ ಕಟ್ ಅಥವಾ ಆಕ್ಷನ್ ಕಟ್ ಆವೃತ್ತಿಯನ್ನು ಚಿತ್ರತಂಡವು ಈಗಾಗಲೇ ಆಯ್ದ ಕೆಲ ಪ್ರೇಕ್ಷಕರಿಗೆ ಪ್ರದರ್ಶಿಸಿದೆ. ಲಾಸ್ ಏಂಜಲ್ಸ್​​ನ ಸಿನೆಮಾರ್ಕ್ ವಿಸ್ತಾ ಸ್ಕ್ರೀನ್​​ನಲ್ಲಿ ಆಯ್ದ ಜನರಿಗೆ ಚಿತ್ರತಂಡವು ‘ರಾಮಾಯಣ’ ಸಿನಿಮಾವನ್ನು ಪ್ರದರ್ಶಿಸಿದೆ. ಈ ಗ್ರೂಪ್​​ನಲ್ಲಿ 18 ರಿಂದ 60 ವರ್ಷ ವಯಸ್ಸಿನ ಹಲವು ಕ್ಷೇತ್ರಗಳಿಗೆ ಸೇರಿದ ಪ್ರೇಕ್ಷಕರು ಇದ್ದರಂತೆ. ‘ರಾಮಾಯಣ’ ಸಿನಿಮಾದ ಫಸ್ಟ್ ಕಾಪಿಯನ್ನು ಪ್ರೇಕ್ಷಕರಿಗೆ ತೋರಿಸಲಾಗಿದ್ದು, ಅವರಿಂದ ಪ್ರತಿಕ್ರಿಯೆಗಳನ್ನು ಸಹ ಪಡೆಯಲಾಗಿದೆ.

‘ರಾಮಾಯಣ’ ಸಿನಿಮಾದ ಮೊದಲ ಕಟ್ ನೋಡಿದ ಪ್ರೇಕ್ಷಕರು ಸಿನಿಮಾವನ್ನು ಬಹಳ ಇಷ್ಟಪಟ್ಟಿದ್ದಾರೆ ಎನ್ನಲಾಗಿದೆ. ಸಿನಿಮಾದ ಅದ್ಧೂರಿತನ ಪ್ರೇಕ್ಷಕರಿಗೆ ಸಖತ್ ಇಷ್ಟವಾಯ್ತಂತೆ. ಅಲ್ಲದೆ ಕತೆಯಲ್ಲಿನ ಭಾವುಕ ಅಂಶಗಳು, ಹೀರೋಯಿಕ್ ಅಂಶಗಳು, ನೆಲಮೂಲದೊಟ್ಟಿಗೆ ಸಂಬಂಧ ಹೊಂದಿರುವಂತೆ ತೋರಿಸಲಾಗಿರುವ ಕತೆ ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಯ್ತಂತೆ.

ಇದನ್ನೂ ಓದಿ:‘ಅನಿಮಲ್ ಪಾರ್ಕ್’ ಚಿತ್ರೀಕರಣ ಯಾವಾಗ: ಬಾಯ್ಬಿಟ್ಟ ರಣ್​​ಬೀರ್ ಕಪೂರ್

ಪ್ರೇಕ್ಷಕರ ಅಭಿಪ್ರಾಯಗಳನ್ನು ಸಂಗ್ರಹಿಸಿರುವ ಚಿತ್ರತಂಡ, ಪೋಸ್ಟ್ ಪ್ರೊಡಕ್ಷನ್​​ನಲ್ಲಿ ಕೆಲವು ತೀರ ಸಣ್ಣ-ಪುಟ್ಟ ಬದಲಾವಣೆಗಳನ್ನು ಮಾಡುತ್ತಿದೆ ಎನ್ನಲಾಗಿದೆ. ಸಿನಿಮಾ ಬಿಡುಗಡೆ ಇನ್ನೂ ಒಂಬತ್ತು ತಿಂಗಳು ಬಾಕಿ ಇದ್ದು, ವಿಎಫ್​​ಎಕ್ಸ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳಿಗೆ ಈ ಸಮಯವನ್ನು ಚಿತ್ರತಂಡ ಬಳಸಿಕೊಳ್ಳಲಿದೆ.

‘ರಾಮಾಯಣ’ ಸಿನಿಮಾವನ್ನು ನಿತೇಶ್ ತಿವಾರಿ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾನಲ್ಲಿ ರಾಮನ ಪಾತ್ರದಲ್ಲಿ ರಣ್​​ಬೀರ್ ಕಪೂರ್, ರಾವಣನ ಪಾತ್ರದಲ್ಲಿ ನಟ ಯಶ್, ಸೀತಾಮಾತೆಯ ಪಾತ್ರದಲ್ಲಿ ಯಶ್ ನಟಿಸಿದ್ದಾರೆ. ಸನ್ನಿ ಡಿಯೋಲ್, ಕಾಜಲ್ ಅಗರ್ವಾಲ್ ಸೇರಿದಂತೆ ಇನ್ನೂ ಹಲವು ಖ್ಯಾತ ನಟ-ನಟಿಯರು ವಿವಿಧ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಇದೇ ವರ್ಷ ದೀಪಾವಳಿ ಹಬ್ಬಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 9:49 pm, Sun, 1 March 26

Source link

IND vs WI: 2 ಕ್ಯಾಚ್ ಡ್ರಾಪ್, 10 ರನ್​ಗೆ ಔಟ್; ಅಪ್ರಯೋಜಕ ಅಭಿಷೇಕ್ ಶರ್ಮಾ

Source link

ಪತಿಯ ಜೊತೆ ‘ಪುಷ್ಪ’ ಮನೆಗೆ ಹೋದ ‘ಶ್ರೀವಲ್ಲಿ’, ಸಿಎಂ ಮನೆಗೂ ಭೇಟಿ – Kannada News | Vijay Deverakonda and Rashmika Mandanna visited Allu Arjun and CM Revanth Reddy house

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೆ ರಾಜಸ್ಥಾನದ ಉದಯಪುರದಲ್ಲಿ ಬಲು ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಶೀಘ್ರವೇ ಅವರ ಆರತಕ್ಷತೆ ಸಹ ನಡೆಯಲಿದೆ.

ಮದುವೆಯ ಬಳಿಕ ಓಡಾಟದಲ್ಲಿ ತೊಡಗಿಕೊಂಡಿರುವ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಇಂದು (ಮಾರ್ಚ್ 1) ಅಲ್ಲು ಅರ್ಜುನ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು.

‘ಪುಷ್ಪ’ ಸಿನಿಮಾನಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಪುಷ್ಪ ಮತ್ತು ಶ್ರೀವಲ್ಲಿಯಾಗಿ ನಟಿಸಿದ್ದರು. ಇದೀಗ ಮದುವೆಯ ಬಳಿಕ ಒಟ್ಟಿಗೆ ಅಲ್ಲು ಅರ್ಜುನ್ ಹೋಗಿದ್ದಲ್ಲದೆ, ಅಲ್ಲು ಅರ್ಜುನ್ ಸಹೋದರನ ಮದುವೆ ಶಾಸ್ತ್ರದಲ್ಲಿ ಭಾಗಿ ಆದರು.

ಆ ಬಳಿಕ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ನಿವಾಸಕ್ಕೂ ಸಹ ರಶ್ಮಿಕಾ-ವಿಜಯ್ ಭೇಟಿ ನೀಡಿದ್ದು, ರೇವಂತ್ ರೆಡ್ಡಿಯವರ ಪತ್ನಿ ರಶ್ಮಿಕಾಗೆ ಅರಿಶಿಣ-ಕುಂಕುಮ ನೀಡಿದ್ದಾರೆ.

ಮಾತ್ರವಲ್ಲದೆ ಸಿಎಂ ರೇವಂತ್ ರೆಡ್ಡಿ ಅವರ ಪತ್ನಿ ರಶ್ಮಿಕಾಗೆ ಉಡುಗೊರೆಗಳನ್ನು ಸಹ ನೀಡಿದ್ದಾರೆ. ಆರತಕ್ಷತೆಗೆ ಆಹ್ವಾನಿಸಲೆಂದು ಜೋಡಿ ಅವರ ಮನೆಗೆ ಭೇಟಿ ನೀಡಿತ್ತು.

ರಶ್ಮಿಕಾ ಮಂದಣ್ಣ ಅವರಿಗೆ ಉಡುಗೊರೆಯನ್ನು ಸಹ ಸಿಎಂ ರೇವಂತ್ ರೆಡ್ಡಿ ಪತ್ನಿ ನೀಡಿದ್ದು, ನವ ಜೋಡಿಗಳಿಗೆ ಹರಸಿದ್ದಾರೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಆರತಕ್ಷತೆ ಮಾರ್ಚ್ 04 ರಂದು ಹೈದರಾಬಾದ್​​ನ ತಾಜ್ ಕೃಷ್ಣನಲ್ಲಿ ನಡೆಯಲಿದೆ. ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ.

Published On – 9:25 pm, Sun, 1 March 26

Source link

IND vs WI: ಅತಿ ಹೆಚ್ಚು ಸಿಕ್ಸರ್; ವಿಶ್ವದಾಖಲೆ ಬರೆದ ಶಿಮ್ರಾನ್ ಹೆಟ್ಮೈಯರ್

Source link

US-Israel Strikes On Iran: ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು – Kannada News | Former Iranian president Mahmoud Ahmadinejad killed in Israeli US strikes

ಟೆಹ್ರಾನ್, (ಮಾರ್ಚ್ 01):‌ ಅಮೆರಿಕ ಹಾಗೂ ಇಸ್ರೇಲ್ (Israeli-US strikes) ಕೊನೆಗೂ ತಮ್ಮ ಗುರಿ ಸಾಧಿಸಿದೆ. ತಮ್ಮ ದೀರ್ಘಕಾಲದ ಶತ್ರುವಿನ ನೆತ್ತರು ಹೀರಿದೆ. ಖಮನೈ ಅಮೆರಿಕದ ಕೆಂಗಣ್ಣಿಗೆ ಅದ್ಯಾವ ಮಟ್ಟಿಗೆ ಗುರಿ ಆಗಿದ್ದ ಅಂದ್ರೆ, ಇಡೀ ಮಧ್ಯಪ್ರಾಚ್ಯದ ಎಲ್ಲಾ ಅರಬ್ ದೇಶಗಳು ಅಮೆರಿಕ, ಇಸ್ರೇಲ್​ಗೆ ಬೆಂಬಲವಾಗಿ ನಿಂತಿದ್ವು. ಆದ್ರೆ ಇರಾನ್ ದೇಶವೊಂದೇ ಏಕಾಂಗಿಯಾಗಿ ಅಮೆರಿಕಕ್ಕೆ ಸೆಡ್ಡು ಹೊಡೆದಿತ್ತು. ಅಣು ಬಾಂಬ್ ತಯಾರಿಕೆ ವಿಚಾರವಾಗಿ ಶುರುವಾದ ಅಮೆರಿಕ-ಖಮನೈ ತಿಕ್ಕಾಟ ಯುದ್ಧದ ಕಾರ್ಮೋಡ ಸೃಷ್ಟಿಸಿತ್ತು. ಆದ್ರೆ ಯಾವುದೇ ಕಾರಣಕ್ಕೂ ಅಮೆರಿಕದ ಗೊಡ್ಡು ಬೆದರಿಕೆಗಳಿಗೆ ಬೆದರೋ ಮಾತೇ ಇಲ್ಲ ಎಂದು ಸೆಡ್ಡು ಹೊಡೆದು ನಿಂತಿದ್ದ ಖಮನೈ ಕಥೆಯನ್ನೇ ಮುಗಿಸಿದೆ. ಇದರ ಬೆನ್ನಲ್ಲೇ ಇಸ್ರೇಲ್‌, ಅಮೆರಿಕ ದಾಳಿಯಲ್ಲಿ ಇರಾನ್ ಮಾಜಿ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಸಹ ಸಾವನ್ನಿದ್ದಾರೆ ಎಂದು ತಿಳಿದುಬಂದಿದೆ. 2005ರಿಂದ 2013ರವರೆಗೆ ಇರಾನ್ ಅಧ್ಯಕ್ಷರಾಗಿದ್ದರು. ಟೆಹರಾನ್‌ ಹೊರವಲಯದ ನರ್ಮಕ್​ ಬಳಿ ಇರುವ ಮಹಮೂದ್ ಅಹ್ಮದಿನೆಜಾದ್ ಅವರ ನಿವಾಸದ ಮೇಲೆ ಕ್ಷೀಪಣಿ ದಾಳಿಯಾಗಿದ್ದು, ಇದರಲ್ಲಿ ಮಹಮೂದ್ ಅಹ್ಮದಿನೆಜಾದ್ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಇರಾನ್​ ಮಧ್ಯಂತರ ಪರಮೋಚ್ಛ ನಾಯಕನ ಹೆಸರು ಘೋಷಣೆ, ಯಾರು ಈ ಅಲಿರೆಜಾ ಅರಾಫಿ?

Source link

ಮಾರ್ಚ್ 2ಕ್ಕೆ ‘ಟಾಕ್ಸಿಕ್’ ಮಾರ್ಚ್ 3ಕ್ಕೆ ‘ಧುರಂಧರ್’, ಮಾರ್ಚ್ 8ಕ್ಕೆ ಮತ್ತೆ ‘ಟಾಕ್ಸಿಕ್’ – Kannada News | Dhurandhar 2 trailer releasing on March 03, Toxic trailer on March 08

ಯಶ್ (Yash) ನಟಿಸಿರುವ ‘ಟಾಕ್ಸಿಕ್’ ಸಿನಿಮಾ ಭಾರತದ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಸಿನಿಮಾದ ಪ್ರೀ ರಿಲೀಸ್ ಸೇಲ್ಸ್ ಬಹುತೇಕ ಮುಗಿದಿದ್ದು, ಸಿನಿಮಾದ ಅಸಲಿ ಪ್ರಚಾರ ಶುರುವಾಗಬೇಕಿದೆ. ಆದರೆ ಈ ಬಾರಿ ‘ಟಾಕ್ಸಿಕ್’ ಸಿನಿಮಾಕ್ಕೆ ಎದುರಾಳಿಯಾಗಿ ರಣ್ವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ ಬರುತ್ತಿದೆ. ಎರಡೂ ಸಿನಿಮಾಗಳ ನಡುವೆ ಭಾರಿ ಪೈಪೋಟಿ ಏರ್ಪಡುವುದು ಖಾತ್ರಿ ಆಗಿದೆ. ‘ಧುರಂಧರ್’ ಸಿನಿಮಾ ಈಗಾಗಲೇ ಭಾರಿ ದೊಡ್ಡ ಹಿಟ್ ಆಗಿದ್ದು, ಸಹಜವಾಗಿಯೇ ‘ಧುರಂಧರ್ 2’ ಸಿನಿಮಾಕ್ಕೆ ಸಹ ದೊಡ್ಡ ಸಂಖ್ಯೆಯ ಪ್ರೇಕ್ಷಕರು ಕಾಯುತ್ತಿದ್ದು, ಬಾಕ್ಸ್ ಆಫೀಸ್​​ನಲ್ಲಿ ಎರಡೂ ಸಿನಿಮಾಗಳ ನಡುವೆ ಭರ್ಜರಿ ಫೈಟ್ ನಡೆಯಲಿದೆ.

‘ಟಾಕ್ಸಿಕ್’ ಸಿನಿಮಾ ಈಗಾಗಲೇ ಕೆಲವು ಪೋಸ್ಟರ್​​ಗಳು, ಟೀಸರ್​​ಗಳನ್ನು ಬಿಡುಗಡೆ ಮಾಡಿದ್ದು, ಸಿನಿಮಾದ ಆನ್​​ಲೈನ್ ಪ್ರಚಾರ ಪ್ರಾರಂಭಿಸಿದೆ. ಆದರೆ ‘ಧುರಂಧರ್ 2’ ಸಿನಿಮಾ ಇನ್ನೂ ಪ್ರಚಾರವನ್ನೇ ಆರಂಭಿಸಿಲ್ಲ. ಆದರೆ ಇದೀಗ ‘ಧುರಂಧರ್ 2’ ಸಹ ಹಳಿಗೆ ಬಂದಿದ್ದು, ಶೀಘ್ರವೇ ಟ್ರೈಲರ್ ಬಿಡುಗಡೆ ಮಾಡಲಿದೆ. ಸಿನಿಮಾದ ಟ್ರೈಲರ್ ಬಿಡುಗಡೆ ದಿನಾಂಕವೂ ಪ್ರಕಟವಾಗಿದೆ.

‘ಧುರಂಧರ್ 2’ ಸಿನಿಮಾದ ಟ್ರೈಲರ್ ಮಾರ್ಚ್ 3ರಂದು ಬಿಡುಗಡೆ ಆಗಲಿದೆ. ‘ಟಾಕ್ಸಿಕ್’ ಸಿನಿಮಾದ ಮೊದಲ ಹಾಡು ಮಾರ್ಚ್ 2 ರಂದು ಬಿಡುಗಡೆ ಆಗಲಿದ್ದು, ‘ಟಾಕ್ಸಿಕ್’ ತಂಡ ಬಿಡುಗಡೆ ಮಾಡುತ್ತಿರುವ ಮೊದಲ ಹಾಡು ಇದಾಗಿದೆ. ಅದಾದ ಮರುದಿನವೇ ‘ಧುರಂಧರ್ 2’ ಸಿನಿಮಾದ ಟ್ರೈಲರ್ ಬಿಡುಗಡೆ ಆಗುತ್ತಿದ್ದು, ಎರಡರ ನಡುವೆ ಸಣ್ಣ ಸೋಷಿಯಲ್ ಮೀಡಿಯಾ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.

ಇದನ್ನೂ ಓದಿ:ಧುರಂಧರ್ 2 Vs ಟಾಕ್ಸಿಕ್; ಯಶ್-ರಣವೀರ್ ಸಿಂಗ್ ಪೈಕಿ ಯಾರ ಸಿನಿಮಾ ಬಜೆಟ್ ಹೆಚ್ಚು?

ಈ ಹಿಂದೆ ಬಿಡುಗಡೆ ಆದ ‘ಟಾಕ್ಸಿಕ್’ ಸಿನಿಮಾದ ಟೀಸರ್ ದಾಖಲೆ ಸಂಖ್ಯೆಯ ವೀಕ್ಷಣೆಗಳನ್ನು ಯೂಟ್ಯೂಬ್​​​ನಲ್ಲಿ ಪಡೆದಿದೆ. ಇದೀಗ ‘ಧುರಂಧರ್ 2’ ಸಿನಿಮಾದ ಟ್ರೈಲರ್ ಆ ದಾಖಲೆಗಳನ್ನು ಮುರಿಯಲಿದೆಯೇ? ಎಂಬುದನ್ನು ಕಾದು ನೋಡಬೇಕಿದೆ. ಅಂದಹಾಗೆ ‘ಧುರಂಧರ್ 2’ ಸಿನಿಮಾದ ಟ್ರೈಲರ್ ಬಿಡುಗಡೆ ಆದ ಕೇವಲ ಐದೇ ದಿನಕ್ಕೆ ‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ಸಹ ಬಿಡುಗಡೆ ಆಗಲಿದೆ. ಮಾರ್ಚ್ 08 ರಂದು ‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಲಿದ್ದು, ಟ್ರೈಲರ್ ಸಹ ದಾಖಲೆ ಬರೆಯುವ ನಿರೀಕ್ಷೆ ಇದೆ.

‘ಧುರಂಧರ್ 2’ ಸಿನಿಮಾನಲ್ಲಿ ರಣ್ವೀರ್ ಸಿಂಗ್ ನಾಯಕನಾಗಿ ನಟಿಸಿದ್ದು, ಆದಿತ್ಯ ಧರ್ ಸಿನಿಮಾ ನಿರ್ದೇಶಿಸಿದ್ದಾರೆ. ಇದು ಭಾರತದ ಸೈನಿಕನೊಬ್ಬ ಪಾಕಿಸ್ತಾನದಲ್ಲಿ ಗುಪ್ತಚರ ಇಲಾಖೆ ಏಜೆಂಟ್ ಆಗಿ ಕೆಲಸ ಮಾಡುವ ಕತೆಯನ್ನು ಒಳಗೊಂಡಿದೆ. ಎರಡೂ ಸಿನಿಮಾಗಳು ಮಾರ್ಚ್ 19ರಂದು ಬಿಡುಗಡೆ ಆಗಲಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇರಾನ್​, ಇಸ್ರೇಲ್ ಯುದ್ಧ: ಮಧ್ಯಪ್ರಾಚ್ಯದಲ್ಲಿ ಸಿಲುಕಿದ ಕನ್ನಡಿಗರ ನೆರವಿಗೆ ನಿಂತ ರಾಜ್ಯ ಸರ್ಕಾರ – Kannada News | Karnataka government Aids Stranded Kannadigas in Middle East Amid Israel Iran War

ಇರಾನ್​, ಇಸ್ರೇಲ್ ಯುದ್ಧImage Credit source: google

ಬೆಂಗಳೂರು, ಮಾರ್ಚ್​​ 01: ಇರಾನ್​, ಇಸ್ರೇಲ್ ಯುದ್ಧದಿಂದ (Israel–Iran War) ಅರಬ್ ರಾಷ್ಟ್ರಗಳಲ್ಲಿ ಕನ್ನಡಿಗರು ಪರದಾಡುತ್ತಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಕನ್ನಡಿಗರ ನೆರವಿಗೆ ಮುಂದಾಗಿದೆ. ಕನ್ನಡಿಗರ ಜೊತೆ ಫೋನ್ ಮೂಲಕ ಮಾತುಕತೆ ನಡೆಸಿ ಧೈರ್ಯ ಹೇಳುತ್ತಿದೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರ ವಿಚಾರವಾಗಿ ರಾಜ್ಯ ಸರ್ಕಾರ ವಿದೇಶಾಂಗ ಸಚಿವಾಲಯದ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು, ಇಲ್ಲಿಯವರೆಗೆ ಸುಮಾರು 200 ಜನರನ್ನು ಸಂಪರ್ಕಿಸಿರುವುದಾಗಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥ, ಐಎಎಸ್​ ಅಧಿಕಾರಿ ಮುನೀಶ್ ಮೌದ್ಗಿಲ್ (Munish Moudgil) ತಿಳಿಸಿದ್ದಾರೆ.

ಮಾಧ್ಯಮ ಪ್ರಕಟಣೆಯಲ್ಲಿ ಏನಿದೆ?

ಈ ಬಗ್ಗೆ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥ, ಐಎಎಸ್​ ಅಧಿಕಾರಿ ಮುನೀಶ್ ಮೌದ್ಗಿಲ್​ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಇರಾನ್​, ಇಸ್ರೇಲ್ ಯುದ್ಧ ಹಿನ್ನೆಲೆ ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿಕೊಂಡಿರುವ ರಾಜ್ಯದ ಜನರನ್ನು ಕರೆತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ತಿಳಿಸಿದ್ದಾರೆ.

ಸದ್ಯ ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿಕೊಂಡಿರುವ ಕನ್ನಡಿಗರ ವಿವರಗಳನ್ನು ಸಂಗ್ರಹಿಸಿ, ಅವರ ಸ್ಥಿತಿಗತಿ ಕುರಿತು ಸಚಿವಾಲಯದಿಂದ ಮಾಹಿತಿ ಪಡೆಯಲು ಪಟ್ಟಿ ಸಿದ್ಧಪಡಿಸಲಾಗಿತ್ತಿದೆ. ಇಲ್ಲಿಯವರೆಗೆ ಸುಮಾರು 200 ಜನರು ನಮ್ಮನ್ನು ಸಂಪರ್ಕಿಸಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಮಧ್ಯಪ್ರಾಚ್ಯದಲ್ಲಿ ಯುದ್ಧ: ಹೊರದೇಶಗಳಲ್ಲಿ ಸಿಲುಕಿರುವ ರಕ್ಷಣೆಗೆ ಕೋಲಾರ ಜಿಲ್ಲಾಡಳಿತದಿಂದ ಸಹಾಯವಾಣಿ

ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ನಾವು ಸಂಪರ್ಕದಲ್ಲಿದ್ದು, ಸದ್ಯ ಲಭ್ಯವಾದ ಮಾಹಿತಿ ಪ್ರಕಾರ  ಎಲ್ಲರೂ ಸುರಕ್ಷಿತರಾಗಿದ್ದಾರೆ. ವಿಮಾನ ಹಾರಾಟ ವ್ಯವಸ್ಥೆ ಆರಂಭಗೊಳ್ಳುತ್ತಿದ್ದಂತೆ ಅವರನ್ನು ಸ್ಥಳಾಂತರಿಸಲು  ತಕ್ಷಣ ಕ್ರಮಕೈಗೊಳ್ಳಲಾಗುವುದು. ಮುಂದಿನ ಎಲ್ಲಾ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ಮುನೀಶ್ ಮೌದ್ಗಿಲ್ ಮಾಹಿತಿ ನೀಡಿದ್ದಾರೆ.

ತೊಂದರೆ ಆಗದಂತೆ ಎಲ್ಲಾ ಕನ್ನಡಿಗರನ್ನು ಕರೆತರುತ್ತೇವೆ: ಸಿಎಂ ಸಿದ್ದರಾಮಯ್ಯ

ಇನ್ನು ಕನ್ನಡಿಗರನ್ನು ಕರೆತರುವ ವಿಚಾರವಾಗಿ ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ತೊಂದರೆ ಆಗದಂತೆ ಎಲ್ಲಾ ಕನ್ನಡಿಗರನ್ನು ಕರೆತರುತ್ತೇವೆ. ಈಗಾಗಲೇ ಮುಖ್ಯ ಕಾರ್ಯದರ್ಶಿ ಜೊತೆಗೆ ಮಾತನಾಡಿದ್ದೇನೆ. ಏರ್​ಪೋರ್ಟ್ ನಿರ್ಬಂಧ ತೆರವು ಮಾಡಿದ ತಕ್ಷಣ ಕರೆತರುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇಸ್ರೇಲ್–ಇರಾನ್ ಸಂಘರ್ಷ: ದುಬೈನಲ್ಲಿ ಸಿಲುಕಿರುವ ಕನ್ನಡಿಗರ ನೆರವಿಗೆ ನಿಂತ ಒಕ್ಕಲಿಗರ ಸಂಘ

ಭೋಜೇಗೌಡ ಅಲ್ಲೇ ಸಿಲುಕಿದ್ದಾರೆ, ಅವರ ಜೊತೆ ಮಾತಾಡಿದ್ದೇನೆ. ಅರಾಮಾಗಿ ಹೋಟೆಲ್​ನಲ್ಲಿ ಇದ್ದೇನೆಂದು ಭೋಜೇಗೌಡ ಹೇಳಿದ್ದಾರೆ. ವಿದೇಶಾಂಗ ಸಚಿವಾಲಯದ ಜೊತೆಗೆ ಸಂಪರ್ಕದಲ್ಲಿದ್ದೇವೆ. ಕನ್ನಡಿಗರನ್ನು ವಾಪಸ್​ ಕರೆದುಕೊಂಡು ಬರಲು ವ್ಯವಸ್ಥೆ ಮಾಡುತ್ತೇವೆ. ದುಬೈನಲ್ಲಿ ಎಲ್ಲಾ ಭಾರತೀಯರು ಸುರಕ್ಷಿತರಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:33 pm, Sun, 1 March 26

Source link

ಇರಾನ್​ ಮಧ್ಯಂತರ ಪರಮೋಚ್ಛ ನಾಯಕನ ಹೆಸರು ಘೋಷಣೆ, ಯಾರು ಈ ಅಲಿರೆಜಾ ಅರಾಫಿ? – Kannada News | Khamenei Confidant An Seminary Chief: Who Is Alireza Arafi of Iran Interim Supreme Leader?

ಟೆಹ್ರಾನ್, (ಮಾರ್ಚ್ 01):‌ ಅಮೆರಿಕ-ಇಸ್ರೇಲ್‌ ನಡೆಸಿದ ಜಂಟಿ ಕಾರ್ಯಚರಣೆಯಲ್ಲಿ (US-Israel Strikes On Iran )ಇರಾನ್‌ ನ ಸುಪ್ರೀಂ ಲೀಡರ್‌ ಆಯತೊಲ್ಲಾ ಅಲಿ ಖಮೇನಿ ಹತ್ಯೆಗೀಡಾಗಿದ್ದಾರೆ. ಈ ಬೆನ್ನಲ್ಲೇ ಮಧ್ಯಪ್ರಾಚ್ಯದಲ್ಲಿ ಯುದ್ದ ಆರಂಭವಾಗಿದ್ದು, ಈ ನಡುವೆ ಇರಾನ್, ಅಲಿ ಖಮೇನಿ (Ali Khamenei) ಸ್ಥಾನಕ್ಕೆ ಧರ್ಮಗುರು ಅಯತೊಲ್ಲಾ ಅಲಿರೆಜಾ ಅರಾಫಿ (Ayatollah Arafi) ಅವರನ್ನ ಮಧ್ಯಂತರ ಪರಮೋಚ್ಛ ನಾಯಕ ಎಂದು ಘೋಷಣೆ ಮಾಡಿದೆ. ಇರಾನ್​ನ ಗಾರ್ಡಿಯನ್ ಕೌನ್ಸಿಲ್​ ಸದಸ್ಯರಾಗಿರುವ ಅಲಿರೆಜಾ ಅರಾಫಿ, ಆಯತೊಲ್ಲಾ ಅಲಿ ಖಮನೈಗೆ ಆಪ್ತರಾಗಿದ್ದಾರೆ.

ಇರಾನ್‌ ಸಂವಿಧಾನಿಕ ಪ್ರಕ್ರಿಯೆಯ ಅಡಿಯಲ್ಲಿ ಆಯ್ಕೆ ಮಾಡಿ ಅವರಿಗೆ ಈ ಇರಾನ್‌ ನಾಯಕತ್ವದ ಜವಾಬ್ದಾರಿಯನ್ನು ಹಸ್ತಾಂತರಿಸಲು ತಾತ್ಕಾಲಿಕ ನ್ಯಾಯಮಂಡಳಿಯನ್ನು ನೇಮಿಸಿದ್ದು, ಇದರ ಮುಖ್ಯ ನ್ಯಾಯಶಾಸ್ತ್ರಜ್ಞ ಸದಸ್ಯರಾಗಿ ಅಯತೊಲ್ಲಾ ಅಲಿರೆಜಾ ಅರಾಫಿ ಕಾರ್ಯನಿರ್ವಹಿಸಲಿದ್ದಾರೆ. ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಮತ್ತು ಮುಖ್ಯ ನ್ಯಾಯಮೂರ್ತಿ ಘೋಲಮ್‌ಹೊಸೇನ್ ಮೊಹ್ಸೆನಿ ಎಜೆಯ್ ಸಹ ಮಂಡಳಿಯಲ್ಲಿದ್ದಾರೆ. ಅಲ್ಲದೆ, ಇವರು ಇರಾನ್‌ ನ ಮುಂದಿನ ಸರ್ವೋಚ್ಚ ನಾಯಕನ್ನನ್ನು ಆಯ್ಕೆ ಮಾಡುವ ಕಾರ್ಯ ನಿರ್ವಹಿಸಲಿದ್ದಾರೆ. ಈ ಮೂಲಕ ಇಲ್ಲಿಯವರೆಗೂ ಇರಾನ್‌ ನಲ್ಲಿ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಹಕ್ಕನ್ನು ಅಲಿರೆಜಾ ಹೊಂದಿದ್ದಾರೆ.

ಇದನ್ನೂ ಓದಿ: ಆಯತುಲ್ಲಾ ಖಮೇನಿ ಮೇಲೆ ದಾಳಿಗೆ ಶನಿವಾರ ಬೆಳಗಿನ ಸಮಯ ಆರಿಸಿದ್ದು ಯಾಕೆ? ಬೇರೆ ಇದ್ದ ಪ್ಲಾನ್ ಬದಲಾಗಿದ್ದು ಯಾಕೆ?

ಯಾರು ಈ ಮಧ್ಯಂತರ ಸುಪ್ರೀಂ ಲೀಡರ್‌ ಅಲಿರೆಜಾ?

ಖಮೇನಿ ಸಾವಿನ ಬಳಿಕ ತಕ್ಷಣವೇ ಮತ್ತೊಬ್ಬ ನಾಯಕನನ್ನು ಘೋಷಣೆ ಮಾಡಿದೆ. ಆದರೆ, ಇದಕ್ಕೂ ಮೊದಲೇ ತುರ್ತು ಪರಿಸ್ಥಿತಿಯಲ್ಲಿ ಇರಾನ್‌ ಸರ್ಕಾರವನ್ನು ಮುನ್ನಡೆಸುವ ಶಕ್ತಿ ಬೇಕು ಎಂಬುದನ್ನು ಮೊದಲೇ ಅರಿತಿದ್ದ ಖಮೇನಿ, ಗಾರ್ಡಿಯನ್ ಕೌನ್ಸಿಲ್​ ಸದಸ್ಯರಾಗಿದ್ದ ತಮ್ಮ ಆಪ್ತ ಅಲಿರೆಜಾ ಅವರನ್ನು ಆಯ್ಕೆ ಮಾಡಿದ್ದಾರೆಂಬ ಸುದ್ದಿ ಹರಡುತ್ತಿದ್ದವು. ಇದೀಗ ಖಮೇನಿ ಹತ್ಯೆ ಬೆನ್ನಲ್ಲೇ ಇರಾನ್‌ ನ ಮಧ್ಯಂತರ ಸುಪ್ರೀಂ ಲೀಡರ್‌ ಆಗಿ ಇರಾನ್‌ ಹಿರಿಯ ಧರ್ಮಗುರು ಅಯತೊಲ್ಲಾ ಅಲಿರೆಜಾ ಅರಾಫಿ ಅವರನ್ನ ಆಯ್ಕೆ ಮಾಡಲಾಗಿದೆ.

1959ರಲ್ಲಿ ಜನಿಸಿದ ಅಲಿರೆಜಾ ಅರಾಫಿ, ಇರಾನ್‌ನ ಧಾರ್ಮಿಕ ಸ್ಥಾಪನೆಯಲ್ಲಿ ಪ್ರಮುಖರಾಗಿದ್ದು, ಮಧ್ಯಂತರ ಸುಪ್ರೀಂ ಲೀಡರ್‌ ಆಗುವುದಕ್ಕೂ ಮುನ್ನ ಇರಾನ್‌ ಸರ್ಕಾರದಲ್ಲಿ ಇರಾನ್‌ನ ರಾಷ್ಟ್ರವ್ಯಾಪಿ ಇಸ್ಲಾಮಿಕ್ ಸೆಮಿನರಿ ವ್ಯವಸ್ಥೆಯ ನಿರ್ದೇಶಕರು, ಪ್ರಬಲ ಗಾರ್ಡಿಯನ್ ಕೌನ್ಸಿಲ್‌ನ ಪರಿಶೀಲನಾ ಸದಸ್ಯರು ಮತ್ತು ತಜ್ಞರ ಸಭೆಯ ಹಾಲಿ ಸದಸ್ಯರು ಹೀಗೆ ಏಕಕಾಲಕ್ಕೆ 3 ಅತ್ಯಂತ ಶಕ್ತಿಯುತ ಹುದ್ದೆಯಲ್ಲಿದ್ದರು.

ಕೋಮ್‌ನ ಸಾಂಪ್ರದಾಯಿಕ ಕ್ಲೆರಿಕಲ್ ರಚನೆಯಲ್ಲಿ ಆಳವಾಗಿ ಹುದುಗಿದ್ದರೂ, ಅರಾಫಿ ಸ್ವಲ್ಪ ವಿಭಿನ್ನವಾದ ಆಡಳಿತ ವ್ಯವಸ್ಥೆಯ ಒಳಗಿನವರನ್ನು ಪ್ರತಿನಿಧಿಸುತ್ತಾರೆ.ಇರಾನ್‌ ನಲ್ಲಿ ಅರೇಬಿಕ್ ಮತ್ತು ಇಂಗ್ಲಿಷ್ ಎರಡರಲ್ಲೂ ನಿರರ್ಗಳವಾಗಿ ಮಾತನಾಡುವ ಬಹುಭಾಷಾ ಪಂಡಿತರಾಗಿದ್ದು, ತಾಂತ್ರಿಕವಾಗಿಯೂ ಸಹ ಪ್ರಾವಿಣ್ಯತೆಯನ್ನು ಹೊಂದಿದ್ದಾರೆ. ಅಲ್ಲದೆ, ಜಾಗತಿಕವಾಗಿ ತನ್ನ ಸೈದ್ಧಾಂತಿಕ ಸಂದೇಶವನ್ನು ಹರಡಲು ಆಡಳಿತವು ಕೃತಕ ಬುದ್ಧಿಮತ್ತೆಗೆ ಹೊಂದಿಕೊಳ್ಳುವ ಅಗತ್ಯತೆಯ ಬಗ್ಗೆಯೂ ಉತ್ತಮ ನಿಲುವನ್ನು ಹೊಂದಿದ್ದು, ಇರಾನ್‌ ನಲ್ಲಿ ಇವರನ್ನು ಹೆಚ್ಚು ವಿದ್ಯಾವಂತರೆಂದು ಪರಿಗಣಿಸಲಾಗುತ್ತದೆ.

ಇನ್ನು, ಉದ್ವಿಗ್ನತೆಯ ಸಮಯದಲ್ಲಿ ಅಲಿರೆಜಾ ಅರಾಫಿಯನ್ನು ಮಧ್ಯಂತರ ಸುಪ್ರೀಂ ನಾಯರನ್ನಾಗಿ ಆಯ್ಕೆ ಮಾಡಿರುವುದು ಸೈದ್ದಾಂತಿಕವಾಗಿ ಸಂಕೇತದಂತಿದೆ. ಈ ಹಿಂದೆ ಇರಾನ್‌ ನ ಇಸ್ಲಾಮಿಕ್‌ ಗಣರಾಜ್ಯದ ಸಿದ್ಧಾಂತವನ್ನು ವಿದೇಶಗಳಿಗೆ ರಫ್ತು ಮಾಡಲು ಮೀಸಲಾಗಿರುವ ಬೃಹತ್ ಧಾರ್ಮಿಕ ಕೇಂದ್ರವಾದ ಅಲ್-ಮುಸ್ತಫಾ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.

ಸದ್ಯ ಅಮೆರಿಕ-ಇಸ್ರೇಲ್‌ ಜಂಟಿಯಾಗಿ ತಮ್ಮ ರಾಷ್ಟ್ರದ ಮೇಲೆ ಯುದ್ದ ಸಾರಿದ್ದು, ಇದನ್ನು ಹೇಗೆ ನಿಭಾಯಿಸುತ್ತಾರೆ? ಯುದ್ಧದಿಂದ ತಮ್ಮ ದೇಶವನ್ನು ರಕ್ಷಣೆ ಮಾಡುವ ಸವಾಲು ಈ ಹೊಸ ಸುಪ್ರೀಂ ಲೀಡರ್‌ ಅಲಿರೆಜಾ ಮೇಲಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 8:23 pm, Sun, 1 March 26

Source link