All posts by nagaraj11081993

ದಿನ ಭವಿಷ್ಯ: ಇಂದು ಈ ರಾಶಿಯವರು ತಡೆದಿಟ್ಟ ಸಂಕಟವನ್ನು ಸ್ಫೋಟ ಮಾಡುವರು – Kannada News | Horoscope March 02 Monday 2026; Dina Rashi Bhavishya Today, Checkout the details here

ಮೇಷ ರಾಶಿ:

ನಿಮಗೆ ಕೊಟ್ಟ ಜವಾಬ್ದಾರಿಯು ಹಸ್ತಾಂತರ ಆಗಬಹುದು. ಇದಕ್ಕೆ ಬೇಸರವು ಸಹಜವಾಗಿರುವುದು. ಪ್ರಭಾವಿವ್ಯಕ್ತಿಗಳ ಸಹವಾಸವು ನಿಮ್ಮ ಮನಸ್ಸನ್ನು ಹಗುರಾಗಿಸುವುದು. ಕೆಲಸದಲ್ಲಿ ಇರುವಷ್ಟು ಶ್ರದ್ಧೆ ಓದಿನ ಕಡೆಗೆ ಬರದೇ ಇರಬಹುದು. ಕೆಲವನ್ನು ಮರೆತು ಮುಂದೆ ಸಾಗುವುದು ನಿಮಗೆ ಉತ್ತಮ. ದೂರದ ಪೋಷಕರ ಜೊತೆ ಆಪ್ತವಾಗಿ ಮಾತನಾಡುವುದು ಅವರಿಗೆ ನೆಮ್ಮದಿಯನ್ನು ಕೊಡುವುದು ಎನ್ನುವ ಅರಿವು ಇರಲಿ. ನಿಮ್ಮ ಬಳಿಯ ಹಣವನ್ನು ಕೇಳಿಕೊಂಡು ಇಬರ. ಹೊಸ ಉದ್ಯೋಗಕ್ಕೆ ವಿವರಗಳನ್ನು ಕೇಳಿ ಪಡೆಯುವಿರಿ.

ವೃಷಭ ರಾಶಿ:

ಸಮಾರಂಭಗಳಿಗೆ ಭೇಟಿಕೊಡುವುದು, ಅಲ್ಲಿ ನಿಮ್ಮ ಸಮಯವನ್ನು ವ್ಯರ್ಥಮಾಡಿಕೊಳ್ಳುವಿರಿ. ಇಂದು ಯಾರ ಬಗ್ಗೆಯೂ ಸರಿ ಹಾಗೂ ತಪ್ಪುಗಳ ತುಲನೆಯು ಕಷ್ಟವಾಗುವುದು. ಏನನ್ನಾದರೂ ಬಳಸುವ ಮೊದಲು ಪರೀಕ್ಷಿಸಿಕೊಳ್ಳಿ. ಮಕ್ಕಳಲ್ಲಿ ಬದಲಾವಣೆಯನ್ನು ನೀವು ಕಾಣಬಹುದು. ಮೃದುವಾದ ಮಾತನ್ನು ನೀವು ಅಭ್ಯಾಸ ಮಾಡಿಕೊಳ್ಳಬೇಕಾದೀತು. ನಿಮ್ಮ ಕಾರ್ಯದಲ್ಲಿ ಮಗ್ನರಾಗಿ ಎಲ್ಲರನ್ನೂ ಮರೆಯುವಿರಿ. ಬಂಧುಗಳ ಜೊತೆ ದೂರ ಪ್ರಯಾಣವನ್ನು ಮಾಡಲಿದ್ದೀರಿ. ಇಂದು ಹೊರಗಿನ ಆಹಾರವನ್ನು ತಿನ್ನುವ ಸ್ಥಿತಿ ಬರಬಹುದು.

ಮಿಥುನ ರಾಶಿ:

ಸರ್ಕಾರಿ ಕೆಲಸಕ್ಕಾಗಿ ಹಣವನ್ನು ಕೊಡುವಿರಿ. ಯಾರಿಗೂ ಎತ್ತರದ ದನಿಯನ್ನು ಮಾಡುವುದು ಬೇಡ. ಹೊಸ ಉದ್ಯಮವನ್ನು ಮಾಡಲು ಆಪ್ತರ ಅಥವಾ ಅನುಭವಿಗಳ ಸಲಹೆ ಬೇಕಾದೀತು. ದಾಂಪತ್ಯದಲ್ಲಿನ ಒಡಕು ಎಲ್ಲರಿಗೂ ಗೊತ್ತಾಗುವ ಮೊದಲೇ ಸರಿ ಮಾಡಿಕೊಳ್ಳಿ. ಆಕಸ್ಮಿಕ ವಾರ್ತೆಯು ನಿಮ್ಮನ್ನು ಸ್ತಬ್ಧಗೊಳಿಸಬಹುದು. ನಿಮ್ಮ ಬಗ್ಗೆ ತಪ್ಪು ಕಲ್ಪನೆಯು ಬರಬಹುದು. ಮಕ್ಕಳ ವಿಚಾರದಲ್ಲಿ ತಾರತಮ್ಯವನ್ನು ಮಾಡುವಿರಿ. ಹಣದಲ್ಲಿ ಮೋಸವಾಗಬಹುದು. ಉನ್ನತ ಹುದ್ದೆಗೆ ಹೋಗಲು ಅವಕಾಶವಿದ್ದರೂ ನಿಮಗೆ ನಾನಾ ಕಾರಣಗಳಿಂದ ಬೇಡವೆನಿಸುವುದು.

ಕರ್ಕಾಟಕ ರಾಶಿ:

ನಿಮ್ಮ ಮಾತು ಇನ್ನೊಬ್ಬರಿಗೆ ನೋವನ್ನು ಕೊಡುಬಹುದು ಎಂಬ ತಿಳಿವಳಿಕೆ ಇರಲಿ. ನಿಮ್ಮ ಕಲೆಗೆ ಸರಿಯಾದ ಪ್ರೋತ್ಸಾಹವು ಸಿಗಲಿದೆ. ವೃತ್ತಿಯಲ್ಲಿ ನೀವು ತುಂಬಾ ನಿಧಾನದಿಂದ ಕೆಲಸ ಮಾಡುವಿರಿ. ದೂರ ಬಂಧುಗಳ ಭೇಟಿಯಿಂದ ವಿವಾಹ ನಿಶ್ಚಯವಾಗಬಹುದುದು. ಪ್ರೇಮವು ಹೊಸ ತಿರುವನ್ನು ಪಡೆಯಬಹುದು. ಮನಸ್ಸು ಕೆಡಿಸಿಕೊಂಡು ಏನೂ ಮಾಡಲಾಗದು. ವಸ್ತುಗಳನ್ನು ಕಳೆದುಹೋಗಿದ್ದು ವಿಳಂಬವಾಗಿ ಬೆಳಕಿಗೆ ಬಂದೀತು. ಹಿರಿಯ ಮಾತನ್ನು ಅಸಡ್ಡೆ ಮಾಡುವಿರಿ. ಸಂಗಾತಿಯ ನಿಲುವನ್ನು ನೀವು ಒಪ್ಪದೇ ಕಲಹವಾಗಬಹುದು. ನಿಮ್ಮ ನಿರ್ಧಾರವು ಸರಿಯಾಗಿದೆಯೇ ಎಂದು ಅವಲೋಕನ ಮಾಡಿಕೊಳ್ಳಿ.

ಸಿಂಹ ರಾಶಿ:

ಅಪರಿಚಿತರ ಜೊತೆ ಸಲುಗೆ ಬೆಳೆಯಬಹುದು. ಅಪರಿಚಿತರ ಜೊತೆ ಅವಶ್ಯಕತೆಯಷ್ಟೇ ವ್ಯವಹರಿಸಿ. ಭವಿಷ್ಯದ ಅನೇಕ ದ್ವಂದ್ವಗಳು ಇರಬಹುದು. ಯಾರ ಬಗ್ಗೆಯೂ ಹಗುರಾದ ಮಾತುಗಳನ್ನು ಆಡುವುದು ಬೇಡ. ಹಣಕಾಸಿನ ಉಳಿತಾಯದ ಬಗ್ಗೆ ತಜ್ಞರ ಜೊತೆ ಮಾತನಾಡುವಿರಿ, ನಿರ್ಧಾರಕ್ಕೆ ಬರುವಿರಿ. ನಿಮ್ಮದಲ್ಲದ ಉದ್ಯೋಗದಲ್ಲಿ ಒತ್ತಡ ಸ್ವೀಕರಿಸುವುದು ಅಭ್ಯಾಸವಾಗಿ ಹೋಗುವುದು. ದುರಭ್ಯಾಸವು ಸಹವಾಸದಿಂದ ಬಿಟ್ಟುಹೋಗಲಿದೆ. ಯಾವುದೇ ಪ್ರಭಾವಕ್ಕೆ ಸಿಕ್ಕಿ ನಿಮ್ಮನ್ನು ಬದಲಿಸಿಕೊಳ್ಳಬೇಕಾಗಬಹುದು.

ಕನ್ಯಾ ರಾಶಿ:

ವ್ಯಾಪಾರ ಚಟುವಟಿಕೆಗಳು ನಿಮ್ಮ‌ ಮನೋವೇಗಕ್ಕೆ ಸಿಗದು. ಕಲಾವಿದರು ಅವಕಾಶವನ್ನು ಹುಡುಕಿಕೊಂಡು ಹೋಗಬೇಕಾಗಬಹುದು. ಸಾಲದ ವಿಚಾರವಾಗಿ ಕುಟುಂಬದ ಜೊತೆ ಬಿಸಿ ಚರ್ಚೆಯಾಗಬಹುದು. ಆಸ್ತಿಯ ಹಂಚಿಕೆಯಲ್ಲಿ ನಿಮಗೆ ಸಮಾಧಾನ ಇರದು. ಹಲವು ದಿನಗಳಿಂದ ಉಳಿಸಿಕೊಂಡ ವೈಯಕ್ತಿಕ ಕೆಲಸವೇ ಉಳಿಯಲಿದೆ. ಸಹೋದರರು ನಿಮ್ಮ ಬಗ್ಗೆ ಹಗುರಾಗಿ ಮಾತನಾಡಿದ್ದು ನಿಮ್ಮ ಕಿವಿಗೆ ಮೂರನೇ ವ್ಯಕ್ತಿಗಳಿಂದ ಗೊತ್ತಾಗಲಿದೆ. ಮಕ್ಕಳ ವಿಷಯದಲ್ಲಿ ನಿರ್ಲಕ್ಷ್ಯ ಬೇಡ. ತಾಯಿ ಆರೋಗ್ಯದಲ್ಲಿ ವ್ಯತ್ಯಾಸವು ಕಾಣಿಸಿಕೊಳ್ಳಬಹುದು.

ತುಲಾ ರಾಶಿ:

ಇಂದು ನೀವು ಕೋಪವನ್ನು ಮಾಡಿಕೊಳ್ಳಲು ಕಾರಣವೇ ಬೇಕಾಗದು. ಕುಟುಂಬ ಜೊತೆ ದೇವರ ದರ್ಶನವನ್ನು ಮಾಡುವಿರಿ. ನೌಕರರಿಂದ ನಿಮಗೆ ಸರಿಯಾದ ಪ್ರತಿಕ್ರಿಯೆ ಸಿಗದು. ವಿವೇಚನೆ ಇಲ್ಲದೇ ಆಡಿದ ಮಾತುಗಳಿಂದ ಕಲಹವಾಗಬಹುದು. ನಟನೆಯನ್ನು ಇಷ್ಟಪಡುವವರಿಗೆ ಅವಕಾಶಗಳು ಸಿಗುವುದು. ಪ್ರಾಮಾಣಿಕತೆಗೆ ಸಿಕ್ಕ ಪ್ರಶಂಸೆಯಿಂದ ಇನ್ನಷ್ಟು ಉತ್ಸಾಹ ಇರುವುದು. ಯಾರದೋ ಕಾರ್ಯಕ್ಕೆ ನೀವು ದಂಡಿಸಿ ಕೆಲಸ ಮಾಡಬೇಕಾದೀತು. ನಿಮ್ಮ ಮಾತುಗಳು ಹಾಸ್ಯದಿಂದ ಕೂಡಿರಲಿದೆ. ಅನಾರೋಗ್ಯದಿಂದ ವಿಶ್ರಮಿಸಿಕೊಳ್ಳುವಿರಿ.

ವೃಶ್ಚಿಕ ರಾಶಿ:

ನಿಮ್ಮ ವ್ಯಾಪ್ತಿಯನ್ನು ಮೀರಿದ ಕೆಲಸವನ್ನು ನೀವು ಮಾಡಬೇಕಾದೀತು. ಆಸಕ್ತಿಯು ಇಲ್ಲದಿದ್ದರೂ ಒತ್ತಾಯಕ್ಕೆ ಧಾರ್ಮಿಕ ಕಾರ್ಯಗಳಲ್ಲಿ ತೊಡಗುವಿರಿ. ಆಪತ್ತಿನಲ್ಲಿ ಇರುವ ನಿಮಗೆ ಸ್ನೇಹಿತರ ಸಣ್ಣ ಸಹಾಯವೂ ನಿಮಗೆ ಧೈರ್ಯ ತಂದುಕೊಡುವುದು. ಅನಿವಾರ್ಯವಿದ್ದರೂ ಧನವ್ಯಯದ ಕಾರಣ ಖರೀದಿಯನ್ನು ಮುಂದೂಡುವಿರಿ. ಇಂದು ನೀವು ತಾಯಿಯ ಪ್ರೀತಿಯಿಂದ ವಂಚಿತರಾಗಬಹುದು. ಉದ್ಯೋಗದ ಕಾರಣಕ್ಕೆ ದೂರದ ಊರಿಗೆ ಹೋಗಬೇಕಾಗುವುದು. ಪ್ರಯಾಣದ ಮುಂಜಾಗ್ರತೆಯ ಕ್ರಮವಿರಲಿ. ಗೊತ್ತಿಲ್ಲದ ಪ್ರದೇಶಕ್ಕೆ ಒಂಟಿಯಾಗಿ ಹೋಗಬೇಕಾಗಬಹುದು.

ಧನು ರಾಶಿ:

ಯುವಕರು ವೃತ್ತಿ ಜೀವನದಲ್ಲಿ ಉತ್ತಮ ಯಶಸ್ಸನ್ನು ಪಡೆಯು ಅವಕಾಶಗಳಿದ್ದರೂ ಅದನ್ನು ಬಳಸಿಕೊಳ್ಳಲು ಮಾರ್ಗದರ್ಶನದ ಅವಶ್ಯಕತೆ ಇದೆ. ಜೀವನದಲ್ಲಿ ಸಣ್ಣಪುಟ್ಟ ಸವಾಲುಗಳನ್ನು ಎದುರಿಸಬೇಕಾಗಬಹುದು. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಪ್ರಾಣಿಗಳ ಮೇಲೆ ಪ್ರೀತಿ ತೋರಿಸುವಿರಿ. ನಿಮ್ಮ ಕಾರ್ಯದಲ್ಲಿ ನಿಮಗೆ ತಪ್ಪು ಕಾಣಿಸುವುದು. ಹೊಗಳಿಕೆಯಿಂದ ನಿಮಗೆ ಸಂಕೋಚ ಉಂಟಾಗಬಹುದು. ಮಿತಿಮೀರಿದ ಓಡಾವು ನಿಮ್ಮ ದೇಹಬಲವನ್ನು ಕುಗ್ಗಿಸುವುದು. ನಿಮ್ಮ ಬಯಕೆಗಳಿಗೆ ಇನ್ಮೊಬ್ಬರು ಪ್ರೇರಣೆ ಆಗಬಹುದು.

ಮಕರ ರಾಶಿ:

ನಿಮ್ಮ ಸಂಗಾತಿಯೊಂದಿಗೆ ಭಾವನಾತ್ಮಕ ಬಂಧವು ಬಲವಾಗಿರುತ್ತದೆ. ಹಳೆಯ ಆಸ್ತಿಯನ್ನು ಮಾರಾಟ ಮಾಡುವುದರಿಂದ ಅಥವಾ ಬಾಡಿಗೆಗೆ ನೀಡುವುದರಿಂದ ಆರ್ಥಿಕ ಲಾಭವಿದೆ. ಭೂಮಿ ಅಥವಾ ವಾಹನದ ನಿರ್ವಹಣೆಗೆ ಹಣವನ್ನು ಖರ್ಚು ಮಾಡಲಾಗುವುದು. ಭೂಮಿಯ ವ್ಯವಹಾರದಲ್ಲಿ ಪಾಲುದಾರರಾಗಿ ಸೇರಿಕೊಳ್ಳುವ ಮನಸ್ಸು ಮಾಡುವಿರಿ. ಸಂಗಾತಿಯ ಜೊತೆ ಬಹಳ ಸಂಯೋಷದ ಕ್ಷಣವನ್ನು ಕಳೆಯುವಿರಿ. ಉದ್ಯೋಗದ ಸ್ಥಳದಲ್ಲಿ ಉಂಟಾದ ಪಕ್ಷಪಾತದಿಂದ ದ್ವೇಷಭಾವವು ಉಂಟಾಗಬಹುದು

ಕುಂಭ ರಾಶಿ:

ವೃತ್ತಿ ಜೀವನದಲ್ಲಿ ಪ್ರಮುಖ ಸಾಧನೆಗಳನ್ನು ಸಾಧಿಸಲಾಗುವುದು. ಜೀವನದಲ್ಲಿ ಧನಾತ್ಮಕ ಶಕ್ತಿಯ ಒಳಹರಿವು ಇರುತ್ತದೆ. ಹಳೆಯ ಹೂಡಿಕೆಯು ಉತ್ತಮ ಲಾಭವನ್ನು ನೀಡುತ್ತದೆ. ಸಮಾಜಸೇವೆಯಲ್ಲಿ ಆಸಕ್ತಿ ಹೆಚ್ಚಲಿದೆ. ವಾಹನ ಖರೀದಿಗೆ ಬಂಧುಗಳಿಂದ ಒತ್ತಡವು ಬರಬಹುದು. ಮನೆಗೆ ಅತಿಥಿಗಳ ಆಗಮನವಾಗಲಿದೆ. ನಿಮ್ಮ ಪೂರ್ವಯೋಜಿತ ಕಾರ್ಯಗಳನ್ನು ನೀವು ಬದಲಾಯಿಸುವಿರಿ. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಲು ಮನೆಯಿಂದ ಒಪ್ಪಿಗೆಯನ್ನು ನಿರಾಕರಿಸಬಹುದು.

ಮೀನ ರಾಶಿ:

ಇಂದು ಕೆಲವರು ಆಸ್ತಿಯಲ್ಲಿ ಹೂಡಿಕೆ ಮಾಡಬಹುದು. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಉದ್ಯೋಗದಲ್ಲಿನ ಒತ್ತಡವು ನಿಮ್ಮ ಆರೋಗ್ಯದ ಮೇಲೆ ಪರಿಣಾಮವನ್ನು ಉಂಟುಮಾಡಬಹುದು. ಮೊದಲೇ ಸಮಯವನ್ನು ಸರಿಯಾಗಿ ನಿರ್ಧರಿಸಿಕೊಂಡು ಕಾರ್ಯವನ್ನು ಆರಂಭಿಸಿದರೆ ಸಕಾಲಕ್ಕೆ ಮುಗಿಯುವುದು.

ಇಂದಿನ ಪಂಚಾಂಗ: 

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಕುಂಭ, ಮಹಾನಕ್ಷತ್ರ : ಶತಭಿಷಾ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಆಶ್ಲೇಷಾ, ಯೋಗ : ಅತಿಗಂಡ, ಕರಣ : ಗರಜ, ಸೂರ್ಯೋದಯ – 06 – 41 am, ಸೂರ್ಯಾಸ್ತ – 06 – 31 pm, ಇಂದಿನ ಶುಭಾಶುಭ ಕಾಲ : ರಾಹು 08:10 – 09:39, ಯಮಗಂಡ ಕಾಲ 11:08 – 12:37, ಗುಳಿಕ ಕಾಲ 14:05 – 15:34

-ಲೋಹಿತ ಹೆಬ್ಬಾರ್ – 8762924271 (what’s app only)

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 2ರ ದಿನಭವಿಷ್ಯ

ಈ ದಿನ ಸಂಜೆ ವೇಳೆ ಮನೆಯ ಹೊಸ್ತಿಲಲ್ಲಿ ಅಥವಾ ದೇವರ ಮನೆಯಲ್ಲಿ ತುಪ್ಪದ ದೀಪ ಹಚ್ಚುವುದರಿಂದ ದಾರಿದ್ರ್ಯ ದೂರವಾಗಿ, ಹಣಕಾಸಿನ ಒತ್ತಡದಿಂದ ಹೊರಬರಲು ಅನುಕೂಲವಾಗುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನಿಮ್ಮ ವೈಯಕ್ತಿಕ ವಿಚಾರಗಳಲ್ಲಿ ಹಾಗೂ ಪ್ರೀತಿ- ಪ್ರೇಮ ಹಾಗೂ ಮದುವೆಗೆ ಸಂಬಂಧಪಟ್ಟ ಸಂಗತಿಗಳನ್ನು ಮೂರನೇ ವ್ಯಕ್ತಿಗಳು ವಿಪರೀತ ಪ್ರಭಾವ ಬೀರುವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂಬ ಸಂಗತಿ ಗಮನಕ್ಕೆ ಬರಲಿದೆ. ಇದೇ ವೇಳೆ ಆದಾಯವನ್ನು ಹೆಚ್ಚು ಮಾಡಿಕೊಳ್ಳುವ ನಿಟ್ಟಿನಲ್ಲಿ ನಾನಾ ರೀತಿಯಲ್ಲಿ ಯೋಜನೆ, ಆಲೋಚನೆ ಶುರು ಆಗಲಿದೆ. ಆಸ್ತಿ ಮಾರಾಟಕ್ಕೆ ಇಟ್ಟಿದ್ದಲ್ಲಿ ಅದಕ್ಕೆ ಬೇಡಿಕೆ ಹೆಚ್ಚಾಗುವಂಥ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ನಿಮ್ಮಲ್ಲಿ ಕೆಲವರು ಬಾಡಿಗೆ ಆದಾಯವನ್ನು ಹೆಚ್ಚು ಮಾಡಿಕೊಳ್ಳುವುದಕ್ಕಾಗಿ ಮನೆಯನ್ನೋ ಮಳಿಗೆಯನ್ನೋ ನಿರ್ಮಿಸುವ ಬಗ್ಗೆ ಚಿಂತನೆ ನಡೆಸಲಿದ್ದೀರಿ. ದುರ್ಗಾದೇವಿ ಆರಾಧನೆ ಮಾಡುವುದರಿಂದ ಹಾಗೂ ವಿಷ್ಣು ಸಹಸ್ರನಾಮ ಶ್ರವಣ ಅಥವಾ ಪಠಣ ಮಾಡುವುದರಿಂದ ಆಲೋಚನೆಯಲ್ಲಿ ಸ್ಪಷ್ಟತೆ ಇರಲಿದೆ. ಅದೇ ವೇಳೆ ಆತ್ಮವಿಶ್ವಾಸ ಕೂಡ ಹೆಚ್ಚಾಗಲಿದೆ. ಫೋಟೋಗ್ರಫಿಯನ್ನೇ ವೃತ್ತಿ ಮಾಡಿಕೊಂಡಿರುವವರಿಗೆ ಹೊಸ ಹೊಸ ಅವಕಾಶಗಳು ದೊರೆಯುವ ಸಾಧ್ಯತೆಗಳಿವೆ

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಕ್ರೆಡಿಟ್ ಕಾರ್ಡ್ ಹೆಚ್ಚು ಬಳಸುತ್ತೀರಿ ಅಂತಾದಲ್ಲಿ ಅದರ ಬಳಕೆ ಬಗ್ಗೆ ಸರಿಯಾದ ತೀರ್ಮಾನವನ್ನು ಮಾಡುವುದು ಮುಖ್ಯ. ಸ್ನೇಹಿತರು ಅಥವಾ ಸಂಬಂಧಿಕರು ತಮಗೆ ಕ್ರೆಡಿಟ್ ಕಾರ್ಡ್ ನಲ್ಲಿ ಸಾಲ ಕೊಡಿಸುವಂತೆ ಕೇಳಲಿದ್ದಾರೆ. ಇನ್ನು ಈ ದಿನ ಬೆಳ್ಳಿ ವಸ್ತುಗಳು ಅಥವಾ ಒಡವೆಗಳನ್ನು ಖರೀದಿಸುವಂಥ ಯೋಗ ನಿಮ್ಮ ಪಾಲಿಗಿದೆ. ಇನ್ನು ನಿಮ್ಮಲ್ಲಿ ಕೆಲವರು ದಾನ- ಧರ್ಮ ಕಾರ್ಯಗಳನ್ನು ಮಾಡಲಿದ್ದೀರಿ.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 2ರ ದಿನಭವಿಷ್ಯ

ಹಸಿರು ಮೇವನ್ನು ಹಸುವಿಗೆ ನೀಡುವುದರಿಂದ ಸಕಲ ದೇವತೆಗಳ ಆಶೀರ್ವಾದ ದೊರೆತು, ಕುಟುಂಬದಲ್ಲಿ ಸುಖ-ಶಾಂತಿ ನೆಲೆಸುತ್ತದೆ. ದಾಂಪತ್ಯದಲ್ಲಿನ ವಿರಸ, ಭಿನ್ನಾಭಿಪ್ರಾಯಗಳು ಬಗೆಹರಿಸಿಕೊಳ್ಳಲು ವೇದಿಕೆ ದೊರೆಯಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಇತರರು ಹೇಳಿದ್ದಾರೆ, ಹಣ ನೀಡುತ್ತಾರೆ ಅಂತಲೋ ಅಥವಾ ಯಾವುದೋ ನಿರ್ದಿಷ್ಟ ಕೆಲಸದಲ್ಲಿ ಸಹಾಯ ಮಾಡಿಯೇ ಮಾಡುತ್ತಾರೆ ಅಂತ ನೆಚ್ಚಿಕೊಂಡು ಗಂಭೀರವಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಹೋಗಬೇಡಿ. ಸಹೋದ್ಯೋಗಿಗಳು ಅಥವಾ ಮೇಲಧಿಕಾರಿಗಳು ಉದ್ಯೋಗ ಸ್ಥಳದಲ್ಲಿ ಯಾವ ಕೆಲಸವನ್ನು ಒಪ್ಪಿಸಿರುತ್ತಾರೆ ಅದನ್ನು ಶ್ರದ್ಧಾ- ಭಕ್ತಿಯಿಂದ ಮಾಡಿದ್ದಲ್ಲಿ ಅದರ ಒಳ್ಳೆಯ ಫಲಿತ ದೊರೆಯುವ ಸೂಚನೆಯನ್ನು ಈ ದಿನ ಕಾಣಲಿದ್ದೀರಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ನಿಮ್ಮ ಮಾತಿಗೆ ಕುಟುಂಬದಲ್ಲಿ ಒಂದು ಗೌರವ ದೊರೆಯಲಿದೆ. ಎಲ್ಲರೂ ಒಪ್ಪುವಂಥ ಹಾಗೂ ಆಕರ್ಷಣೀಯ ರೀತಿಯಲ್ಲಿ ಮಾತುಗಳನ್ನು ಆಡುತ್ತೀರಿ. ಸೈಟು ಖರೀದಿಗೋ ಮನೆ ಕಟ್ಟುವುದಕ್ಕೋ ಸಾಲಕ್ಕಾಗಿ ಪ್ರಯತ್ನ ಪಡುತ್ತಿದ್ದೀರಿ ಎಂದಾದಲ್ಲಿ ಈ ದಿನ ಬಹಳ ಒಳ್ಳೆಯ ಬೆಳವಣಿಗೆಗಳು ಆಗಲಿವೆ. ಮುಖ್ಯವಾಗಿ ಹಣಕಾಸಿನ ಅಡ್ಡಿ, ಆತಂಕಗಳು ದೂರ ಆಗಲಿವೆ. ಇಷ್ಟು ಸಮಯ ನಿಮ್ಮಲ್ಲಿ ಇದ್ದ ಆತ್ಮವಿಶ್ವಾಸದ ಕೊರತೆ ದೂರ ಆಗಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಸ್ವಂತ ವ್ಯಾಪಾರ, ವ್ಯವಹಾರ ಆರಂಭ ಮಾಡಬೇಕು ಅಂದುಕೊಳ್ಳುತ್ತಾ ಇರುವವರಿಗೆ ಸ್ನೇಹಿತರಿಂದ, ಸಂಬಂಧಿಗಳಿಂದ ದೊಡ್ಡ ಮಟ್ಟದಲ್ಲಿ ನೆರವು ಒದಗಿ ಬರಲಿದೆ. ನಿಮ್ಮನ್ನು ಹೇಗಾದರೂ ಮಾಡಿ ದಿಕ್ಕು ತಪ್ಪಿಸಬೇಕು ಎಂದು ಪ್ರಯತ್ನ ಮಾಡುತ್ತಿರುವವರು ತಾವೇ ಸಂಕಷ್ಟದಲ್ಲಿ ಸಿಲುಕಿಕೊಳ್ಳಲಿದ್ದಾರೆ. ನಿಮ್ಮ ಸ್ನೇಹಿತರ ವಲಯದಲ್ಲಿ ಯಾರಿಗೆ ಬಹಳ ಎಚ್ಚರಿಕೆಯಿಂದ ಇರಿ ಎಂದು ನೀವು ಹೇಳಿರುತ್ತೀರೋ ಅವರಿಗೆ ನಿಮ್ಮ ಮಾತಿನಂತೆ ಬೆಳವಣಿಗೆಗಳಾಗಿ, ನಿಮ್ಮ ಕಡೆಗೆ ಬೆರಗಿನಿಂದ ನೋಡಲಿದ್ದಾರೆ.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 2ರ ದಿನಭವಿಷ್ಯ

ಈ ದಿನ ಮುಖ್ಯವಾದ ಕೆಲಸ ಕೈಗೊಳ್ಳುತ್ತಾ ಇದ್ದೀರಿ ಅಂತಾದಲ್ಲಿ ಇಷ್ಟದೈವ ಅಥವಾ ಕುಲದೈವವನ್ನು ಸ್ಮರಿಸುವುದರಿಂದ ದಿನವಿಡೀ ಮನಸ್ಸಿನಲ್ಲಿ ಸಕಾರಾತ್ಮಕ ಚಿಂತನೆಗಳು ಮೂಡುತ್ತವೆ. ಸಾಫಲ್ಯ ಕಾಣುತ್ತೀರಿ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಸಂಗಾತಿಯ ಹಠಮಾರಿತನದ ಕಾರಣಕ್ಕೆ ನಾಲ್ಕು ಜನರ ಮಧ್ಯೆ ನಿಮಗೆ ಅವಮಾನ ಆಗುವ ಸಾಧ್ಯತೆಗಳು ಇವೆ. ಈಚೆಗಷ್ಟೇ ಮನೆ ಕಟ್ಟಿದ್ದೀರಿ ಅಥವಾ ರಿನೊವೇಷನ್ ಮಾಡಿಸಿದ್ದೀರಿ, ಆ ಕಾರಣದಿಂದಾಗಿಯೇ ಹಣಕಾಸಿನ ವಿಚಾರಕ್ಕೆ ಬಹಳ ಒತ್ತಡದಲ್ಲಿ ಇದ್ದೀರಿ ಅಂತಾದಲ್ಲಿ ಅದರಿಂದ ಹೊರಬರುವಂತಹ ಮಾರ್ಗ, ಉಪಾಯಗಳು ಗೋಚರ ಆಗಲಿವೆ. ಸ್ವಂತ ವ್ಯಾಪಾರ, ಉದ್ಯಮ ಮಾಡಿಕೊಂಡು ಇರುವವರಿಗೆ ವಿಸ್ತರಣೆಯ ಅವಕಾಶಗಳು ದೊರೆಯಲಿವೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ನಿಮ್ಮಲ್ಲಿ ಕೆಲವರು ಬ್ಯಾಂಕ್ ಗಳಲ್ಲಿ ಸಾಲಕ್ಕೆ ಪ್ರಯತ್ನ ಪಡಲಿದ್ದೀರಿ. ಇನ್ನು ನಿಮ್ಮ ಸಂಬಂಧಿಕರು ಅಥವಾ ಸ್ನೇಹಿತರು ಹಣಕಾಸಿನ ನೆರವನ್ನು ತಾತ್ಕಾಲಿಕವಾಗಿ ನೀಡಬಹುದು. ನೀವು ಮರೆತೇ ಹೋದಂತಹ ಅವಕಾಶವೊಂದು ಹುಡುಕಿಕೊಂಡು ಬರುವ ಸಾಧ್ಯತೆಗಳಿವೆ. ಅದನ್ನು ಒಪ್ಪಿಕೊಳ್ಳಬೇಕೋ ಅಥವಾ ಬೇಡವೋ ಎಂಬ ಗೊಂದಲಗಳು ಏನಾದರೂ ಇದ್ದಲ್ಲಿ ಹಿರಿಯರು ಅಥವಾ ಅನುಭವಗಳ ಸಲಹೆಯನ್ನು ಪಡೆದುಕೊಳ್ಳಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಈ ದಿನ ಒಂದು ಬಗೆಯ ಸಂತೋಷ- ಸಮಾಧಾನದ ಜತೆಗೆ, ಈ ನಿರ್ಧಾರ ಹೇಗೆ ಮಾಡಬೇಕು ಎಂಬ ಗೊಂದಲ ಇರುವಂಥ ಸವಾಲು ನಿಮ್ಮ ಎದುರು ನಿಲ್ಲಲಿದೆ. ಈ ಸಮಯದಲ್ಲಿ ನಿಮಗೆ ದೊರೆಯುವಂತಹ ಅವಕಾಶವೋ ಜವಾಬ್ದಾರಿಯೋ ಒಳ್ಳೆಯದಕ್ಕೋ ಅಥವಾ ಕೆಟ್ಟದ್ದಕ್ಕೋ ಎಂಬುದನ್ನು ನಿರ್ಧರಿಸುವುದಕ್ಕೆ ಬಹಳ ಸಮಯ ಬೇಕಾಗುತ್ತದೆ.

ಲೇಖನ- ಸ್ವಾತಿ ಎನ್.ಕೆ.

Source link

IND vs ENG: ಭಾರತ- ಇಂಗ್ಲೆಂಡ್ ನಡುವೆ ಸೆಮೀಸ್ ಕಾಳಗ; ಮರುಕಳಿಸುತ್ತಾ ಇತಿಹಾಸ? – Kannada News | T20 World Cup Semifinal: India Beats WI, Faces England. Winner Often Claims World Title!

ಹಾಲಿ ಚಾಂಪಿಯನ್ ಟೀಂ ಇಂಡಿಯಾ ಮತ್ತೊಮ್ಮೆ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ (T20 World Cup Semifinal) ಸ್ಥಾನ ಪಡೆದುಕೊಂಡಿದೆ. ಸೂಪರ್ 8 ಸುತ್ತಿನ ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮಣಿಸುವ ಮೂಲಕ 2016 ರ ಸೋಲಿಗೆ ಸೇಡು ತೀರಿಸಿಕೊಳ್ಳುವುದರ ಜೊತೆಗೆ ಸೆಮಿಫೈನಲ್​ಗೂ ಅರ್ಹತೆ ಪಡೆದುಕೊಂಡಿತು. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಗೆಲ್ಲಲೇಬೇಕಾದ ಪಂದ್ಯದಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ ಸೆಮಿಫೈನಲ್‌ಗೇರಿದೆ. ಸತತ ಮೂರನೇ ಬಾರಿಗೆ ಸೆಮಿಫೈನಲ್ ತಲುಪಿರುವ ಟೀಂ ಇಂಡಿಯಾ ಈಗ ಇಂಗ್ಲೆಂಡ್ ( India vs England) ತಂಡವನ್ನು ಎದುರಿಸಲಿದೆ.

ತವರಿನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನ ಆರಂಭವನ್ನು ಅದ್ಭುತವಾಗಿ ಮಾಡಿದ್ದ ಟೀಂ ಇಂಡಿಯಾ ಲೀಗ್ ಹಂತದಲ್ಲಿ ಅಜೇಯ ತಂಡವಾಗಿ ಸೂಪರ್ 8 ಸುತ್ತಿಗೆ ಅರ್ಹತೆ ಪಡೆದುಕೊಂಡಿತ್ತು. ಆದರೆ ಈ ಸುತ್ತಿನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯವಾಗಿ ಸೋತಿದ್ದ ಭಾರತ, ಟೂರ್ನಿಯಿಂದಲೇ ಹೊರಗುಳಿಯುವ ಹಂತದಲ್ಲಿತ್ತು. ಆದರೆ ಕೊನೆಯ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ.

ಸತತ ಮೂರನೇ ಬಾರಿಗೆ ಮುಖಾಮುಖಿ

ಇದೀಗ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮಾರ್ಚ್ 5 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಟೂರ್ನಿಯ ಎರಡನೇ ಸೆಮಿಫೈನಲ್‌ನಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಭಾರತ ಮತ್ತು ಇಂಗ್ಲೆಂಡ್ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸತತ ಮೂರನೇ ಬಾರಿಗೆ ಮುಖಾಮುಖಿಯಾಗಲಿವೆ. ಕಾಕತಾಳೀಯವಾಗಿ, ಹಿಂದಿನ ಎರಡು ವಿಶ್ವಕಪ್‌ಗಳಂತೆ, ಇದು ಟೂರ್ನಿಯ ಎರಡನೇ ಸೆಮಿಫೈನಲ್ ಕೂಡ ಆಗಿರುತ್ತದೆ. ಇದಕ್ಕೂ ಮೊದಲು, 2022 ರಲ್ಲಿ, ಭಾರತ ಮತ್ತು ಇಂಗ್ಲೆಂಡ್ ಅಡಿಲೇಡ್‌ನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯವನ್ನು ಇಂಗ್ಲೆಂಡ್ 10 ವಿಕೆಟ್‌ಗಳಿಂದ ಗೆದ್ದಿತ್ತು. ಆ ನಂತರ, 2024 ರಲ್ಲಿ ಜಾರ್ಜ್‌ಟೌನ್‌ನಲ್ಲಿ ನಡೆದಿದ್ದ ಸೆಮಿಫೈನಲ್‌ನಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯವನ್ನು ಭಾರತ ತಂಡ 68 ರನ್‌ಗಳಿಂದ ಜಯಗಳಿಸಿ ಫೈನಲ್​ಗೇರಿತ್ತು.

IND vs WI: ಬೇಡ ಎಂದು ಬಿಸಾಡಿದವ ಭಾರತವನ್ನು ಗೆಲ್ಲಿಸಿದ; ಸೆಮೀಸ್​ಗೇರಿದ ಟೀಂ ಇಂಡಿಯಾ

ಗೆದ್ದ ತಂಡಕ್ಕೆ ಚಾಂಪಿಯನ್ ಪಟ್ಟ?

ಈಗ, ಈ ಸೆಮಿಫೈನಲ್‌ನಲ್ಲಿ ಯಾವ ತಂಡ ಗೆದ್ದರೂ ಅದು ಚಾಂಪಿಯನ್ ಪಟ್ಟ ಅಲಂಕರಿಸುವ ಸಾಧ್ಯತೆ ಹೆಚ್ಚಿದೆ. ವಾಸ್ತವವಾಗಿ, ಭಾರತ ಮತ್ತು ಇಂಗ್ಲೆಂಡ್ ನಡುವಿನ ಹಿಂದಿನ ಎರಡು ಸೆಮಿಫೈನಲ್‌ಗಳನ್ನು ಗೆದ್ದ ತಂಡವು ವಿಶ್ವಕಪ್ ಗೆದ್ದಿದೆ. 2022 ರ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡ ಭಾರತವನ್ನು ಸೋಲಿಸಿ ನಂತರ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದಿತ್ತು. ಹಾಗೆಯೇ 2024 ರಲ್ಲಿ, ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ ಗೆದ್ದ ಟೀಂ ಇಂಡಿಯಾ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ವಿಶ್ವ ಚಾಂಪಿಯನ್ ಆಗಿತ್ತು.

Published On – 11:36 pm, Sun, 1 March 26

Source link

IPSಗೆ ಸೇರಿದ ವಿಲ್ಲಾದಲ್ಲಿ ಅತ್ಯಾಚಾರ: ಬೆಂಗಳೂರು ಕಾರ್ಪೊರೇಟರ್ ಮಗ ಅರೆಸ್ಟ್, ಒಬ್ಬೊಬ್ಬರದ್ದು ಒಂದೊಂದು ಪಾತ್ರ – Kannada News | Bangaluru Amrutahalli Case: Ex Corporator Son Among 3 Arrested

ಬೆಂಗಳೂರು, ಮಾರ್ಚ್​ 01: ಅಮೃತಹಳ್ಳಿಯ ವಿಲ್ಲಾದಲ್ಲಿ ನಡೆದಿರುವ ಅತ್ಯಾಚಾರ ಕೇಸ್ (Physical Assult Case) ಸಂಬಂಧ ಮತ್ತೆ ಮೂವರ ಬಂಧನವಾಗಿದೆ. ಮಾಸ್ಟರ್ ಮೈಂಡ್ ನಿಖಿಲ್ ಕೃತ್ಯಕ್ಕೆ ಸಾಥ್ ನೀಡುತ್ತಿದ್ದ ರಾಜಕಾರಣಿ ಮಗ ಸೇರಿದಂತೆ ಮೂವರನ್ನ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಇನ್ನು ಕೃತ್ಯದ ವೇಳೆ ನಿಖಿಲ್ ಬಳಸಿದ್ದ ಕಾರ್​​ನ್ನ ಖಾಕಿ ಸೀಜ್ ಮಾಡಿದೆ.

ಡ್ರಗ್ಸ್ ದಂಧೆ ಜತೆ ಸೆಕ್ಸ್ ದಂಧೆಗೂ ಬಯಲಾಗಿದ್ದ ಕೇಸ್​ನಲ್ಲಿ ಮತ್ತೆ ಮೂವರು ಲಾಕ್ ಆಗಿದ್ದಾರೆ. ಈಗಾಗಲೇ ಪ್ರಕರಣದ ಪ್ರಮುಖ ಆರೋಪಿ ನಿಖಿಲ್, ಡಿಕ್ಸನ್ ಹೆಡೆಮುರಿ ಕಟ್ಟಿದ್ದ ಅಮೃತಹಳ್ಳಿ ಪೊಲೀಸರು ಇದೀಗ ಅನಿರುದ್ಧ, ಶ್ರವಣ್, ಮೋಹಿತ್ ಎಂಬ ಮೂವರನ್ನ ಕಸ್ಟಡಿಗೆ ಪಡೆದಿದ್ದಾರೆ. ಈ ಮೂವರು ಕೂಡ ನಿಖಿಲ್ ಕೃತ್ಯಕ್ಕೆ ಪ್ರತ್ಯಕ್ಷ, ಪರೋಕ್ಷವಾಗಿ ಸಾಥ್ ನೀಡುತ್ತಿದ್ದರು ಎನ್ನುವುದು ತನಿಖೆ ವೇಳೆ ಬಯಲಾಗಿದೆ.

ಇದನ್ನೂ ಓದಿ: ವಿದ್ಯಾರ್ಥಿನಿಗಳ ಜತೆ ಪಾರ್ಟಿ ಮಾಡಿದ ಎಕ್ಸ್ಕ್ಲೂಸಿವ್ ದೃಶ್ಯ: ನಿಖಿಲ್​​ ಯುವತಿಯರ ಜತೆಗೆ ಖುಲ್ಲಂ ಖುಲ್ಲಾ

ಡ್ರಗ್ಸ್ ನೀಡಿ ರೇಪ್ ಮಾಡಿದ್ದಾನೆ ಎನ್ನುವ ದೊಡ್ಡ ಆರೋಪ ಹೊತ್ತಿರುವ ನಿಖಿಲ್​​ನ ಕೆಲಸಕ್ಕೆಲ್ಲಾ ಈ ನಾಲ್ವರು ಕೂಡ ಬಲಗೈ ಎಡಗೈನಂತಿದ್ದರು. ಯಾವಾಗ ನಿಖಿಲ್ ಮತ್ತು ಡಿಕ್ಸನ್ ಬಂಧನವಾಯ್ತೋ ಈ ಮೂವರದ್ದು ಕೂಡ ಇದರಲ್ಲಿ ಪಾತ್ರವಿದೆ ಅನ್ನೋದು ಗೊತ್ತಾಯ್ತು. ಹೀಗಾಗಿ ಪೊಲೀಸರು ಮೂವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿ ಈಗ ಬಂಧಿಸಿದ್ದಾರೆ.

ಒಬ್ಬಬ್ಬರದ್ದು ಒಂದೊಂದು ಪಾತ್ರ

ನಿಖಿಲ್- ಪಾರ್ಟಿಯ ಮಾಸ್ಟರ್ ಮೈಂಡ್. ಡಿಕ್ಸನ್ ಸಾಂಡ್ರಾ: ಹುಡುಗಿರನ್ನ ಕರೆತರುವುದು, ಅನಿರುದ್ಧ: ಪಾರ್ಟಿಗೆ ವಿಲ್ಲಾ ಬುಕ್ ಮಾಡಿ, ಹಣದ ವ್ಯವಸ್ಥೆ ಮಾಡಿದ್ದ, ಶ್ರವಣ್‌: ಹುಡುಗಿಯರ ಪಿಕ್ ಮಾಡಿ ಕರೆತರುವುದು, ಮೋಹಿತ್: ಮೂಲತಃ ಗುಜರಾತ್ ಮೂಲದವನಾಗಿದ್ದು ಇವನು ಪಾರ್ಟಿಯಲ್ಲಿದ್ದ.

ಹೀಗೆ ನಿಖಿಲ್ ನಡೆಸುತ್ತಿದ್ದ ಪಾರ್ಟಿಯಲ್ಲಿ ಈ ನಾಲ್ವರು ಒಂದಲ್ಲಾ ಒಂದು ರೀತಿ ಪಾತ್ರದಾರಿಗಳಾಗಿದ್ದರು. ಇನ್ನು ಅನಿರುದ್ಧ ದಾವಣಗೆರೆ ಮೂಲದ ಮಾಜಿ ಕಾರ್ಪೊರೇಟರ್ ಮಗನಾಗಿದ್ದು, ಕಂಟ್ರಾಕ್ಟರ್ ಕೂಡ ಆಗಿದ್ದ ಅನ್ನೋದು ಗೊತ್ತಾಗಿದೆ. ಸದ್ಯ ಈ ಆರೋಪಿಗಳ ನೀಚತನದ ಬಗ್ಗೆ ತನಿಖೆ ಚುರುಕಾಗಿದೆ.

ಇದನ್ನೂ ಓದಿ: ಐಪಿಎಸ್ ಅಧಿಕಾರಿಗೆ ಸೇರಿದ ವಿಲ್ಲಾದಲ್ಲೇ ಸಾಮೂಹಿಕ ಅತ್ಯಾಚಾರ: ಕಟ್ಟಡದ ಮಾಲೀಕನ ಮೇಲೆ ಕ್ರಮ ಯಾಕಿಲ್ಲ?

ಮತ್ತೊಂದು ಕಡೆ ಪ್ರೇಮಿಗಳ ದಿನಾಚರಣೆ ದಿನ ನಡೆದ ಪಾರ್ಟಿ ನಂತರ ನಿಖಿಲ್ ಸಂತ್ರಸ್ಥೆಯನ್ನ ಡ್ರಾಪ್ ಮಾಡಿದ್ದ. ಈ ವೇಳೆ ನಿಖಿಲ್ ಇದೇ KA 05-NC 7299 ನೋಂದಣಿ ಫಾರ್ಚುನರ್ ಕಾರಿನಲ್ಲಿ ಯುವತಿಯನ್ನ ಹತ್ತಿಸಿಕೊಂಡು ಅಲ್ಲು ಕಿರುಕುಳ ನೀಡಿ ಬೆದರಿಕೆ ಹಾಕಿದ್ದ.

ಕಾರು ವಶಕ್ಕೆ 

ಪಾರ್ಟಿ ಬಳಿಕ ಯುವತಿಯನ್ನ ತನ್ನ ಕಾರಿನಲ್ಲಿ ಕೂರಿಸಿಕೊಂಡಿದ್ದ ನಿಖಿಲ್, ನಡೆದ ವಿಚಾರವನ್ನ ಯಾರಿಗೂ ಹೇಳದಂತೆ ಅಸಭ್ಯವಾಗಿ ವರ್ತಿಸುತ್ತಲೇ ಯುವತಿಗೆ ಬೆದರಿಕೆ ಹಾಕಿದ್ದ ಅಂತನೂ ಯುವತಿ ಆರೋಪಿಸಿದ್ದಾಳೆ. ಸದ್ಯ ಈ ತನಿಖೆಯ ಭಾಗವಾಗಿ ಪೊಲೀಸರು ಈ ಕಾರನ್ನ ವಶಕ್ಕೆ ಪಡೆದಿದ್ದು, ಪ್ರಕರಣದಲ್ಲಿ ಮತ್ತೆ ಯಾರ ಕೈಗೆ ಕೋಳ ಬೀಳುತ್ತೋ ಕಾದು ನೋಡಬೇಕು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs WI: ಬೇಡ ಎಂದು ಬಿಸಾಡಿದವ ಭಾರತವನ್ನು ಗೆಲ್ಲಿಸಿದ; ಸೆಮೀಸ್​ಗೇರಿದ ಟೀಂ ಇಂಡಿಯಾ – Kannada News | Sanju Samson’s Heroics: India Beats West Indies to Qualify for T20 World Cup Semifinals

ಕೋಲ್ಕತ್ತಾದ ಈಡನ್​ಗಾರ್ಡನ್ಸ್ ಮೈದಾನದಲ್ಲಿ ನಡೆದ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಸೂಪರ್ 8 ಸುತ್ತಿನ ಪಂದ್ಯ ರಣರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು. ಈ ಮೊದಲೇ ಹೇಳಿದಂತೆ ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಸೆಮಿಫೈನಲ್ ಟಿಕೆಟ್ ಸಿಗುತ್ತಿತ್ತು. ಹೀಗಾಗಿ ಎರಡು ತಂಡಗಳು ಗೆಲುವಿಗಾಗಿ ರಣತಂತ್ರವನ್ನೇ ಹೆಣೆದಿದ್ದವು. ಆದರೆ ಕೆಚ್ಚೆದೆಯ ಆಟವನ್ನಾಡಿದ ಟೀಂ ಇಂಡಿಯಾ ಈ ಪಂದ್ಯವನ್ನು ಗೆದ್ದು ಸೆಮಿಫೈನಲ್​ಗೆ ಅರ್ಹತೆ ಪಡೆಯಿತು. ಟೀಂ ಇಂಡಿಯಾದ ಈ ಗೆಲುವಿನ ರೂವಾರಿ ಸಂಜು ಸ್ಯಾಮ್ಸನ್ ಎಂದರೆ ತಪ್ಪಾಗಲಾರದು. ಆರಂಭಿಕನಾಗಿ ಕಣಕ್ಕಿಳಿದಿದ್ದ ಸಂಜು ತಂಡದ ಪರ ಏಕಾಂಗಿ ಹೋರಾಟ ನಡೆಸಿದರು. ಸಂಜು ಅವರ ಈ ಸ್ಮರಣೀಯ ಇನ್ನಿಂಗ್ಸ್​ನಿಂದಾಗಿ ವಿಂಡೀಸ್ ನೀಡಿದ 195 ರನ್​ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ ಐತಿಹಾಸಿಕ ಜಯ ಸಾಧಿಸಿತು.

Source link

ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ – Kannada News | Once Again kadsiddheshwara swamiji controversy Statement On Sharanas at Bagalkot

ಬಾಗಲಕೋಟೆ, ಮಾರ್ಚ್ 01): ನಗರದಲ್ಲಿ ಛತ್ರಪತಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲು ಚಪ್ಪಲಿ ಎಸೆತದ‌ ಕಿಚ್ಚು ಇಂದಿಗೂ ಆರಿಲ್ಲ.ಮಸೀದಿಯಿಂದ ಚಪ್ಪಲಿ ಕಲ್ಲು ಎಸೆತದಿಂದ ಕೇಸರಿ‌ಕಲಿಗಳ ಕೋಪ ಇಂದಿಗೂ ಆರಿಲ್ಲ.ಇದರ ಮಧ್ಯೆ ನಗರದಲ್ಲಿ ಇಂದು ಬೃಹತ್ ವಿರಾಟ್ ಹಿಂದೂ ಸಮ್ಮೇಳನ ನಡೆಯಿತು.ವಿವಾದಿತ ಸ್ಥಳದಲ್ಲೇ‌ ಭರ್ಜರಿ ಮೆರವಣಿಗೆ ಮಾಡಿ ಹಿಂದೂಗಳು ಭರ್ಜರಿ ಶಕ್ತಿ ಪ್ರದರ್ಶನ ಮಾಡಿದರು. ಇದೇ ವೇಳೆ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಮತ್ತೆ ವಿವಾದದ ಕಿಡಿ ಹೊತ್ತಿಸಿದ್ದಾರೆ. ಇತ್ತೀಚೆಗೆ ಕೆಲ ಲಿಂಗಾಯತ ಸ್ವಾಮೀಜಿಗಳ ವಿರುದ್ಧ ವಾಗ್ದಾಳಿ ನಡೆಸಿ ಭಾರೀ ಸುದ್ದಿಯಲ್ಲಿದ್ದ ಕನ್ನೇರಿ ಸ್ವಾಮೀಜಿ , ಇದೀಗ ಮತ್ತೆ ಗುಡುಗಿದ್ದಾರೆ. ಶರಣರು ಹಿಂದೂಗಳಲ್ಲ ಎಂದು ವಿವದಾತ್ಮಕ ಹೇಳಿಕೆ ನೀಡಿದ್ದು, ಇದು ಯಾವ ಸ್ವರೂಪ ಪಡೆದುಕೊಳ್ಳುತ್ತೆ ಎಂದು ಕಾದುನೋಡಬೇಕಿದೆ.

Source link

‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ – Kannada News | Ram Charan started Peddi movie Dubbing here is the video

ರಾಮ್ ಚರಣ್ (Ram Charan), ಜಾನ್ಹವಿ ಕಪೂರ್ ಮತ್ತು ಶಿವರಾಜ್ ಕುಮಾರ್ ನಟಿಸಿರುವ ‘ಪೆದ್ದಿ’ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಇದೀಗ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ. ನಟ ರಾಮ್ ಚರಣ್ ಅವರು ಇದೀಗ ಸಿನಿಮಾದ ಡಬ್ಬಿಂಗ್ ಕಾರ್ಯ ಮುಗಿಸಿದ್ದಾರೆ. ಜೊತೆಗೆ ನಿರ್ದೇಶಕ ಬುಜ್ಜಿಬಾಬು ಸನಾ ಸಹ ಇದ್ದಾರೆ. ಬುಜ್ಜಿಬಾಬು ಸಹ ಈ ಸಿನಿಮಾದಲ್ಲಿ ನಟಿಸಿದಂತಿದ್ದು, ಅದರ ಬಗ್ಗೆಯೇ ನಟ ರಾಮ್ ಚರಣ್ ಬುಜ್ಜಿ ಬಾಬು ಅವರ ಕಾಲೆಳೆಯುತ್ತಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸ್ವಿಮ್ಮಿಂಗ್ ಪೂಲ್​​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ – Kannada News | Youth drowns to death in swimming pool at Haveri, Last Moments Captured In CCTV

ಹಾವೇರಿ, (ಮಾರ್ಚ್ 01): ಈಜುಕೊಳದಲ್ಲಿ ಈಜಲು ಹೋದ ಯುವಕ ದುರಂತ ಸಾವು ಕಂಡಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದ ಕಾಕೋಳದಲ್ಲಿ ನಡೆದಿದೆ. ಡಕಣಾಚಾರಿ ನಾಗರಾಜ್ ಬಡಿಗೇರ್ (23) ಮೃತ ಯುವಕ. ನಾಗರಾಜ್ ಗೆಳೆಯರೊಂದಿಗೆ ಕಾಕೋಳ ರಸ್ತೆಯಲ್ಲಿರೋ ಮಹಾಕೊಟೇಶ್ವರ ಈಜುಕೊಳದಲ್ಲಿ ಸ್ವಿಮ್ಮಿಂಗ್ ಆಡಲು ಹೋಗಿದ್ದು, ಈ ವೇಳೆ ದುರಂತ ಸಾವು ಕಂಡಿದ್ದಾರೆ. ಮೊದಲು ಸ್ನೇಹಿತರೊಂದಿಗೆ ಈಜಾಡಿದ್ದಾನೆ. ಬಳಿಕ ತಲೆ ಕೆಳಗೆ ಮಾಡಿ ಡೈವ್ ಹೊಡೆದಿದ್ದಾನೆ. ಆದ್ರೆ, ಡೈವ್ ಹೊಡೆದವ ಮೇಲೇಳಲೇ ಇಲ್ಲ. ಹಾಗೇ ಮುಳುಗಿದ್ದಾನೆ. ಪಕದಲ್ಲಿ ಗೆಳೆಯರು ಆಟವಾಡುತ್ತಿದ್ದರೂ ಸಹ ಗಮನಿಸಿಲ್ಲ. ಬಳಿಕ ದಡದಲ್ಲಿದ್ದ ಮತ್ತೋರ್ವ ಗಮನಿಸಿ ಬಂದು ನಾಗರಾಜ್​​​ನನ್ನು ಮೇಲೆತ್ತೆ ದಡಕ್ಕೆ ತಂದಿದ್ದಾರೆ. ಆದ್ರೆ, ದುರದೃಷ್ಟವಶಾತ್ ಅಷ್ಟೊತ್ತಿಗಾಗಲೇ ನಾಗರಾಜ್ ನೀಡು ಕುಡಿದು ಸಾವನ್ನಪ್ಪಿದ್ದ. ನಾಗರಾಜ್ ಮುಳುಗಿ ಸಾವನ್ನಪ್ಪಿದ ವಿಡಿಯೋ ನೋಡಿದ್ರೆ ಅಯ್ಯೋ ಅನ್ನಿಸುತ್ತೆ.

Source link