T20 World Cup 2026: ಟಿ20 ವಿಶ್ವಕಪ್ನಲ್ಲಿ ಸಂಜು ಸ್ಯಾಮ್ಸನ್ (Sanju Samson) ಭರ್ಜರಿ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ದಾಖಲೆಗಳ ಸರದಾರ ವಿರಾಟ್ ಕೊಹ್ಲಿಯ (Virat Kohli) ಹೆಸರಿನಲ್ಲಿದ್ದ ಭರ್ಜರಿ ದಾಖಲೆ ಮುರಿಯುವ ಮೂಲಕ ಎಂಬುದು ವಿಶೇಷ.
T20 World Cup 2026: ಟಿ20 ವಿಶ್ವಕಪ್ನಲ್ಲಿ ಸಂಜು ಸ್ಯಾಮ್ಸನ್ (Sanju Samson) ಭರ್ಜರಿ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ದಾಖಲೆಗಳ ಸರದಾರ ವಿರಾಟ್ ಕೊಹ್ಲಿಯ (Virat Kohli) ಹೆಸರಿನಲ್ಲಿದ್ದ ಭರ್ಜರಿ ದಾಖಲೆ ಮುರಿಯುವ ಮೂಲಕ ಎಂಬುದು ವಿಶೇಷ.
ಯಾವುದೇ ಜೋಡಿ ಹಿಟ್ ಆದರೂ ಅವರನ್ನು ಜಾಹೀರಾತಲ್ಲಿ ಬಳಸಿಕೊಳ್ಳಲು ಕಂಪನಿಗಳು ನಾಮುಂದು-ತಾಮುಂದು ಎಂದು ಬರುತ್ತವೆ. ಅದರಲ್ಲೂ ಸೆಲೆಬ್ರಿಟಿ ಜೋಡಿ ವಿವಾಹ ಆದರಂತೂ ಕೇಳೋದೇಬೇಡ. ಶತಾಯ-ಗತಾಯ ಪ್ರಯತ್ನಿಸಿ ಜಾಹೀರಾತಿಗೆ ಎಳೆತಂದು ಬಿಡುತ್ತವೆ. ಈಗಲೂ ಹಾಗೆಯೇ ಆಗಿದೆ. ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ ವಿವಾಹ ಆಗುತ್ತಿದ್ದಂತೆ ಅನೇಕ ಕಂಪನಿಗಳು ಇವರ ಹಿಂದೆ ಬಿದ್ದಿವೆ. ಈ ಪೈಕಿ ಒಂದು ಜಾಹೀರಾತನ್ನು ಒಪ್ಪಿ ದಂಪತಿ ನಟಿಸಿದ್ದಾರೆ.
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಕಳೆದ ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದಾರೆ. ಇತ್ತೀಚೆಗೆ ಅದು ಸ್ಪಷ್ಟವಾಗುತ್ತಿತ್ತು. ಈಗ ವಿವಾಹ ಆಗುವ ಮೂಲಕ ಅಭಿಮಾನಿಗಳಿಗೆ ಖುಷಿ ಸುದ್ದಿ ಕೊಟ್ಟಿದ್ದಾರೆ. ಇವರು ವಿವಾಹ ಆಗುತ್ತಿದ್ದಂತೆ ಬಟ್ಟೆ ಕಂಪನಿಯೊಂದು ಇವರನ್ನು ಸಂಪರ್ಕಿಸಿ ಜಾಹೀರಾತು ಶೂಟ್ ಮಾಡಿದೆ.
ಸದ್ಯ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ವಿವಾಹ ಬಿಸಿಬಿಸಿ ಚರ್ಚೆ ಆಗುತ್ತಿದೆ. ಈ ಸಂದರ್ಭದಲ್ಲಿ ಅವರು ಯಾವುದೇ ವಿಷಯ ಪೋಸ್ಟ್ ಮಾಡಿದರೂ ಜನರು ನೋಡುತ್ತಾರೆ. ಹೀಗಾಗಿ, ಬಟ್ಟೆ ಕಂಪನಿಯವು ಇದರ ಲಾಭ ಪಡೆದಿದ್ದಾರೆ. ರಶ್ಮಿಕಾ-ವಿಜಯ್ ಕೊಲ್ಯಾಬರೇಷನ್ ಅಲ್ಲಿ ಪೋಸ್ಟ್ ಮಾಡಿರೋ ಜಾಹೀರಾತು 15 ಗಂಟೆಯಲ್ಲಿ ಬರೋಬ್ಬರಿ 5 ಮಿಲಿಯನ್ ಲೈಕ್ಸ್ ಹಾಗೂ 57 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.
ಸರಿಯಾದ ಸಮಯದಲ್ಲಿ ಇವರು ಜೋಡಿಯನ್ನು ಸಂಪರ್ಕಿಸಿ ಜಾಹೀರಾತು ಶೂಟ್ ಮಾಡಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಅವರಿಗೆ ದೊಡ್ಡ ಲಾಭವಾಗಿದೆ. ಇನ್ನು, ರಶ್ಮಿಕಾ ವಿಜಯ್ ಕೂಡ ಈ ಜಾಹೀರಾತು ಶೂಟ್ ಮಾಡಲು ದೊಡ್ಡ ಮಟ್ಟದಲ್ಲೇ ಹಣ ಪಡೆದಿದ್ದಾರೆ ಎಂದು ವರದಿ ಆಗಿದೆ.
ಇದನ್ನೂ ಓದಿ: ರಕ್ಷಿತ್ ವಿಷಯದಲ್ಲಿ ರಶ್ಮಿಕಾ ವಿವಾಹ ಟ್ರೋಲ್ ಮಾಡಿದವರಿಗೆ ಖಡಕ್ ತಿರುಗೇಟು ಕೊಟ್ಟ ಕನ್ನಡತಿ
ಇನ್ನೂ, ಅನೇಕ ಸಂಸ್ಥೆಗಳು ರಶ್ಮಿಕಾ ಹಾಗೂ ವಿಜಯ್ ಹಿಂದೆ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಆದರೆ, ಸದ್ಯ ಅವರು ಸಿನಿಮಾ ಕೆಲಸಗಳಿಂದ ಒಂದು ಬ್ರೇಕ್ ಪಡೆದಿದ್ದಾರೆ. ಈ ಕಾರಣಕ್ಕೆ ಸ್ವಲ್ಪ ಸಮಯದ ಬಳಿಕ ಈ ಬಗ್ಗೆ ಅವರು ಚಿಂತಿಸಬಹುದು. ರಶ್ಮಿಕಾ ಹಾಗೂ ವಿಜಯ್ ಫೆಬ್ರವರಿ 26ರಂದು ಮದುವೆ ಆಗಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಈ ವಿವಾಹ ಅದ್ದೂರಿಯಾಗಿ ನೆರವೇರಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಟೆಹ್ರಾನ್, ಮಾರ್ಚ್ 02: ಇರಾನ್(Iran)ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಪ್ರಧಾನ ಕಚೇರಿಯನ್ನು ಪ್ರಮುಖ ದಾಳಿಯಲ್ಲಿ ನಾಶಪಡಿಸಲಾಗಿದೆ ಎಂದು ಅಮೆರಿಕ ದೃಢಪಡಿಸಿದೆ. ಕಳೆದ 47 ವರ್ಷಗಳಲ್ಲಿ 1,000 ಕ್ಕೂ ಹೆಚ್ಚು ಅಮೆರಿಕನ್ನರ ಸಾವಿಗೆ ಐಆರ್ಜಿಸಿ ಕಾರಣವಾಗಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ಹೇಳಿದೆ. ಈ ಕ್ರಮವನ್ನು “ಹಾವಿನ ತಲೆಯನ್ನು ಕತ್ತರಿಸುವುದು” ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಬಣ್ಣಿಸಿದೆ ಮತ್ತು ಯುಎಸ್ ವಿಶ್ವದ ಅತ್ಯಂತ ಶಕ್ತಿಶಾಲಿ ಸೈನ್ಯವನ್ನು ಹೊಂದಿದೆ ಮತ್ತು ಐಆರ್ಜಿಸಿ ಇನ್ನು ಮುಂದೆ ಪ್ರಧಾನ ಕಚೇರಿಯನ್ನು ಹೊಂದಿರುವುದಿಲ್ಲ ಎಂದು ಹೇಳಿದೆ.
ಇಸ್ರೇಲಿ ಸೇನೆಯು ಐಆರ್‌ಜಿಸಿ ಕೇಂದ್ರ, ಗುಪ್ತಚರ ಪ್ರಧಾನ ಕಚೇರಿ, ಐಆರ್‌ಜಿಸಿ ವಾಯುಪಡೆಯ ಕಮಾಂಡ್ ಕೇಂದ್ರ ಮತ್ತು ಆಂತರಿಕ ಭದ್ರತಾ ಪ್ರಧಾನ ಕಚೇರಿ ಸೇರಿದಂತೆ ಡಜನ್‌ಗಟ್ಟಲೆ ಇರಾನಿನ ಮಿಲಿಟರಿ ಕಮಾಂಡ್ ಕೇಂದ್ರಗಳ ಮೇಲೆ ದಾಳಿ ನಡೆಸಿರುವುದಾಗಿ ವರದಿ ಮಾಡಿದೆ.
ಶನಿವಾರ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯವರ ಹತ್ಯೆಯ ನಂತರ, ಅಮೆರಿಕ-ಇಸ್ರೇಲಿ ಜಂಟಿ ಕಾರ್ಯಾಚರಣೆಗಳು ಭಾನುವಾರದವರೆಗೆ ಮುಂದುವರೆದವು. ಇರಾನ್ 66 ವರ್ಷದ ಧರ್ಮಗುರು ಅಲಿರೆಜಾ ಅರಾಫಿ ಅವರನ್ನು ಮೂರು ಸದಸ್ಯರ ನಾಯಕತ್ವ ಮಂಡಳಿಗೆ ನೇಮಿಸಿತು, ಹೊಸ ಸರ್ವೋಚ್ಚ ನಾಯಕನನ್ನು ಆಯ್ಕೆ ಮಾಡುವವರೆಗೆ ದೇಶವನ್ನು ಆಳುವ ಜವಾಬ್ದಾರಿಯನ್ನು ಹೊಂದಿದ್ದಾರೆ.
ಇಡೀ ಮಧ್ಯಪ್ರಾಚ್ಯ ಈಗ ಕುದಿಯುತ್ತಿರುವ ಕೆಂಡದಂತಾಗಿದ್ದು, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಹತರಾದ ಸುದ್ದಿ ದೃಢಪಡುತ್ತಿದ್ದಂತೆಯೇ ಇರಾನ್‌ನಲ್ಲಿ ಸೇಡಿನ ಕಿಚ್ಚು ಹೊತ್ತಿ ಉರಿಯುತ್ತಿದೆ.
ಮತ್ತಷ್ಟು ಓದಿ: ಚಿಕ್ಕಬಳ್ಳಾಪುರ ಅಲೀಪುರದ 20 ಸಾವಿರ ಮಂದಿಗೆ ಅಲಿ ಖಮೇನಿ ಧರ್ಮಗುರು! ಕರ್ನಾಟಕದ ಮಿನಿ ಇರಾನ್ ಬಗ್ಗೆ ನಿಮಗೆ ಗೊತ್ತೇ!
ಇರಾನ್‌ನ ಪವಿತ್ರ ನಗರವಾದ ಕೊಮ್ನಲ್ಲಿರುವ ಜಮ್ಕಾರನ್ ಮಸೀದಿಯ ಮೇಲೆ ಸೇಡಿನ ಕೆಂಪು ಬಾವುಟ ಹಾರಾಡುತ್ತಿದ್ದು, ಇದು ಇಡೀ ಜಗತ್ತಿಗೆ ಒಂದು ಭೀಕರ ಎಚ್ಚರಿಕೆಯ ಸಂಕೇತವಾಗಿದೆ. ಇರಾನ್ ಸಂಪ್ರದಾಯದ ಪ್ರಕಾರ, ಮಸೀದಿಯ ಮೇಲೆ ಕೆಂಪು ಬಾವುಟ ಹಾರಿಸುವುದು ಎಂದರೆ ಅದು ಕೇವಲ ಶೋಕವಲ್ಲ, ಬದಲಾಗಿ ರಕ್ತಕ್ಕೆ ರಕ್ತದ ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆ.
ಖಮೇನಿ ಸಾವಿಗೆ ಅಮೆರಿಕ ಮತ್ತು ಇಸ್ರೇಲ್ ಬೆಲೆ ತೆರಲೇಬೇಕು ಎಂಬ ಸಂದೇಶವನ್ನು ಇರಾನ್ ರವಾನಿಸಿದೆ. ಖಮೇನಿ ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇತಿಹಾಸದ ಅತ್ಯಂತ ಕ್ರೂರ ವ್ಯಕ್ತಿಗಳಲ್ಲಿ ಒಬ್ಬನಾದ ಖಮೇನಿ ಮೃತಪಟ್ಟಿದ್ದಾನೆ. ಇರಾನ್ ಜನರು ತಮ್ಮ ದೇಶವನ್ನು ಮರಳಿ ಪಡೆಯಲು ಇದು ಒಳ್ಳೆಯ ಅವಕಾಶ ಎಂದು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾ.2: ರಾಜ್ಯದಲ್ಲಿ ಬೇಸಿಗೆಯ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹವಾಮಾನ ಇಲಾಖೆಯ ಇಂದಿನ ವರದಿಯ ಪ್ರಕಾರ, ಉತ್ತರ ಒಳನಾಡಿನಲ್ಲಿ ಉಷ್ಣಾಂಶ ಏರಿಕೆಯಾಗುತ್ತಿದ್ದರೆ, ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಸಾಧಾರಣ ಮೋಡಕವಿದ ವಾತಾವರಣ ಇರಲಿದೆ. ಕರ್ನಾಟಕದಲ್ಲಿ ಇಂದು ಗರಿಷ್ಠ ತಾಪಮಾನ 34°C ವರೆಗೆ ದಾಖಲಾಗುವ ಸಾಧ್ಯತೆ ಇದೆ. ಕನಿಷ್ಠ ತಾಪಮಾನ 22°C ಇರಲಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದ್ದು, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವೇ ಕೆಲವು ಪ್ರದೇಶಗಳಲ್ಲಿ ಸ್ವಲ್ಪ ಮಳೆಯಾಗುವ ಸಾಧ್ಯತೆ ಇದೆ. ಆಗ್ನೇಯ ದಿಕ್ಕಿನಿಂದ ಗಂಟೆಗೆ ಸುಮಾರು 6 ಮೈಲಿ (6 mph) ವೇಗದಲ್ಲಿ ಗಾಳಿ ಬೀಸಲಿದೆ.
ಇಂದು ಯುವಿ ಇಂಡೆಕ್ಸ್ 9 ರಷ್ಟಿದ್ದು, ಇದು ಅತ್ಯಂತ ಹೆಚ್ಚಾಗಿದೆ. ಮಧ್ಯಾಹ್ನದ ಸಮಯದಲ್ಲಿ ನೇರ ಸೂರ್ಯನ ಕಿರಣಗಳಿಂದ ರಕ್ಷಣೆ ಪಡೆಯುವುದು ಅಗತ್ಯ. ನಗರದಲ್ಲಿ ಗರಿಷ್ಠ 32°C ತಾಪಮಾನ ಇರಲಿದ್ದು, ಹವಾಮಾನವು ಶುಭ್ರವಾಗಿರಲಿದೆ. ಕಲಬುರಗಿ, ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಬಿಸಿಲಿನ ಬೇಗೆ ಹೆಚ್ಚಿರಲಿದೆ. ಮಂಗಳೂರು ಮತ್ತು ಉಡುಪಿ ಭಾಗದಲ್ಲಿ ಆರ್ದ್ರತೆ (Humidity) ಹೆಚ್ಚಿರಲಿದ್ದು, ಸೆಖೆಯ ಅನುಭವವಾಗಲಿದೆ. ಮಂಗಳೂರಿನಲ್ಲಿ ಅತಿಯಾದ ಸೆಖೆ ಮತ್ತು ಬೆವರಿನ ಅನುಭವ. ವಾರದ ಅಂತ್ಯದಲ್ಲಿ ಸಾಧಾರಣ ಮೋಡಕವಿದ ವಾತಾವರಣವಿರಲಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹವಾಮಾನವು ಆಹ್ಲಾದಕರವಾಗಿದ್ದರೂ ಮಧ್ಯಾಹ್ನ ಬಿಸಿಲು ಹೆಚ್ಚಿರಲಿದೆ. ಇನ್ನು ಇಲ್ಲಿನ ಸ್ಥಿತಿ ಶುಷ್ಕ ಹವೆ ಹಾಗೂ ಮಳೆಯ ಸಾಧ್ಯತೆ ಇಲ್ಲ. ಇನ್ನು ಬೆಳಗಾವಿಯಲ್ಲಿ ಬೆಳಗಾವಿಯಲ್ಲಿ ಬೆಳಿಗ್ಗೆ ಮತ್ತು ರಾತ್ರಿ ತಂಪು ಹವೆ ಇರಲಿದ್ದು, ಮಧ್ಯಾಹ್ನ ತಾಪಮಾನ ಏರಿಕೆಯಾಗಲಿದೆ. ರಾಜ್ಯದ ಅತ್ಯಂತ ಬಿಸಿಲಿನ ಜಿಲ್ಲೆಯಾಗಿರುವ ಕಲಬುರ್ಗಿಯಲ್ಲಿ ಬಿಸಿ ಗಾಳಿಯ (Heat Wave) ಎಚ್ಚರಿಕೆ ನೀಡಲಾಗಿದೆ. ಕಾಫಿ ನಾಡಿನಲ್ಲಿ ಹವಾಮಾನವು ಇತರೆ ಜಿಲ್ಲೆಗಳಿಗಿಂತ ತಂಪಾಗಿರಲಿದೆ.
ಇದನ್ನೂ ಓದಿ: ಮಂತ್ರಗಳನ್ನು ಹೇಳುವುದು ಜೀವನಕ್ಕೆ ಶುಭ, ಅಶುಭ ಎರೆಡೂ ಆಗುತ್ತೆ, ಅದು ಹೇಗೆ?
ರಾಜ್ಯದಲ್ಲಿ ಬೇಸಿಗೆಯ ಪ್ರತಾಪ ತಾರಕಕ್ಕೇರಲಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ 7 ದಿನಗಳ ಕಾಲ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉಷ್ಣಾಂಶವು ಸರಾಸರಿಗಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ. ದಕ್ಷಿಣ ಒಳನಾಡು ಪ್ರದೇಶದಲ್ಲಿ (ಬೆಂಗಳೂರು, ಮೈಸೂರು)ಹವಾಮಾನವು ಶುಷ್ಕವಾಗಿರಲಿದ್ದು, ಮಧ್ಯಾಹ್ನದ ವೇಳೆ ತೀವ್ರ ಬಿಸಿಲು ಇರಲಿದೆ. ಮಳೆಯ ಸಾಧ್ಯತೆ ತೀರಾ ಕಡಿಮೆ. ಉತ್ತರ ಒಳನಾಡು ಪ್ರದೇಶದಲ್ಲಿ (ಕಲಬುರಗಿ, ರಾಯಚೂರು) ಇಲ್ಲಿ ಉಷ್ಣಾಂಶವು 38°C ದಾಟುವ ಸಾಧ್ಯತೆ ಇದೆ. ಬಿಸಿ ಗಾಳಿಯ (Heat Wave) ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಕರಾವಳಿ ಭಾಗದಲ್ಲಿ (ಮಂಗಳೂರು, ಉಡುಪಿ) ಗರಿಷ್ಠ ತಾಪಮಾನ 33°C ಇದ್ದರೂ, ಆರ್ದ್ರತೆ (Humidity) ಹೆಚ್ಚಿರುವ ಕಾರಣ ಅತಿಯಾದ ಸೆಖೆ ಮತ್ತು ಬೆವರಿನ ಅನುಭವವಾಗಲಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ರಕ್ಷಿತ್ ಶೆಟ್ಟಿ ಎಂಗೇಜ್ಮೆಂಟ್ ಮುರಿದುಬಿದ್ದು ದಶಕ ಕಳೆಯುತ್ತಾ ಬಂದಿದೆ. ಆದಾಗ್ಯೂ ಕೆಲವರು ಆ ವಿಷಯವನ್ನು ಕೆದಕೋದನ್ನು ಬಿಟ್ಟಿಲ್ಲ. ಅದರಲ್ಲೂ ರಶ್ಮಿಕಾ ಈಗ ವಿಜಯ್ ದೇವರಕೊಂಡ ಅವರನ್ನು ಮದುವೆ ಆಗುತ್ತಿದ್ದಂತೆ ಅವರನ್ನು ಮತ್ತಷ್ಟು ಟೀಕೆ ಮಾಡಲಾಗುತ್ತಿದೆ. ಈ ವಿಷಯದಲ್ಲಿ ಅನೇಕರು ಟ್ರೋಲರ್ಗಳ ಪರ ಧ್ವನಿ ಎತ್ತಿದ್ದಾರೆ. ಆದರೆ, ಕೆಲವರು ರಶ್ಮಿಕಾ ಪರ ಧ್ವನಿ ಎತ್ತಿದ್ದಾರೆ. ಯಾರನ್ನು ಮದುವೆ ಆಗಬೇಕು ಎಂಬುದು ಅವರವರ ಆಯ್ಕೆ ಎಂದು ಖಡಕ್ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.
ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ‘ಕಿರಿಕ್ ಪಾರ್ಟಿ’ (2016) ಸಿನಿಮಾದಲ್ಲಿ ಒಟ್ಟಿಗೆ ನಟಿಸಿದರು. ಕರ್ಣ ಹಾಗೂ ಸಾನ್ವಿ ಜೋಡಿಯನ್ನು ಅಭಿಮಾನಿಗಳು ಇಷ್ಟಪಟ್ಟರು. ಇವರಿಬ್ಬರಿಗೂ ಪ್ರೀತಿ ಮೂಡಿತು. ಆ ಪ್ರೀತಿ ನಿಶ್ಚಿತಾರ್ಥದವರೆಗೆ ಹೋಯಿತು. ಕೊನೆಗೆ ಇವರ ಮಧ್ಯೆ ಏನಾಯಿತೋ ಏನೋ, ಏಕಾಏಕಿ ನಿಶ್ಚಿತಾರ್ಥ ರದ್ದು ಮಾಡಿಕೊಂಡರು. ಇದಕ್ಕೆ ಕಾರಣ ಈವರೆಗೆ ತಿಳಿದಿಲ್ಲ. ಆದರೆ, ವಿಜಯ್ನ ವಿವಾಹ ಆದ ಬಳಿಕ ರಶ್ಮಿಕಾನ ಟ್ರೋಲ್ ಮಾಡಲಾಯಿತು. ಇದಕ್ಕೆ ಸಂಧ್ಯಾ ಎಂಬುವವರು ತಿರುಗೇಟು ಕೊಟ್ಟಿದ್ದಾರೆ.
ಇದನ್ನೂ ಓದಿ: ವಿವಾಹದ ಬೆನ್ನಲ್ಲೇ ಫ್ಯಾನ್ಸ್ಗೆ ಸರ್ಪ್ರೈಸ್ ಕೊಟ್ಟ ರಶ್ಮಿಕಾ-ವಿಜಯ್ ಜೋಡಿ
‘ರಶ್ಮಿಕಾನ ರಕ್ಷಿತ್ ಶೆಟ್ಟಿ ಕ್ಷಮಿಸಿದ್ರೂ, ಕನ್ನಡದ ಜನತೆ ಕ್ಷಮಿಸಲ್ಲ’ ಎಂಬ ಪೋಸ್ಟ್ ವೈರಲ್ ಆಗಿತ್ತು. ಈ ವಿಷಯದ ಬಗ್ಗೆ ಸಂಧ್ಯಾ ಅವರು ಮಾತನಾಡಿದ್ದಾರೆ. ‘ನೀವು ಹೇಳೋ ಕನ್ನಡದ ಜನತೆಯಲ್ಲಿ ನಾನಿನಲ್ಲ. ನಿನ್ನಂತಹ ಕೆಲವು ಅತೃಪ್ತ ಆತ್ಮಗಳು ಇರಬಹುದು. 10-12 ವರ್ಷಗಳ ಹಿಂದೆ ನಡೆದ ಘಟನೆಯನ್ನು ರಬ್ಬರ್ ಎಳೆದಂತೆ ಎಳೆಯುತ್ತಿದ್ದೀರಾ’ ಎಂದು ಅವರು ಹೇಳಿದ್ದಾರೆ.
‘ರಶ್ಮಿಕಾನ ಪದೇ ಪದೇ ಕಟಕಟೆಗೆ ಎಳೆದು ತಂದು ನಿಲ್ಲಿಸುತ್ತೀರಾ. ಅವರಿಗೆ ಪದೇ ಪದೇ ಶಾಪ ಹಾಕುತ್ತೀರಾ. ಆದರೆ, ನಾನು ನಿಮ್ಮಂತೆ ಅಲ್ಲ. ಅವರಿಗೆ ಒಳ್ಳೆಯದಾಗಲಿ ಎಂದು ಬಯಸುತ್ತೇನೆ. ಮಧ್ಯಮವರ್ಗದಲ್ಲೇ ವಿಚ್ಛೇದನ ಜಾಸ್ತಿ ಆಗಿದೆ. ಹಾಗಿರುವಾಗ ಎಂಗೇಜ್ಮೆಂಟ್ ಮುರಿದುಬಿತ್ತು ಎಂಬುದನ್ನು ಇಟ್ಟುಕೊಂಡು ಎಳೆಯೋದ್ರಲ್ಲಿ ಅರ್ಥ ಇಲ್ಲ’ ಎಂದಿದ್ದಾರೆ ಅವರು. ಈ ಮೂಲಕ ರಶ್ಮಿಕಾಗೆ ಬೆಂಬಲ ಸೂಚಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On – 7:02 am, Mon, 2 March 26
ಬೆಂಗಳೂರು, ಮಾರ್ಚ್ 2: ಇಸ್ರೇಲ್-ಇರಾನ್ ಸಂಘರ್ಷವು ವಿಶ್ವದಾದ್ಯಂತ ತಲ್ಲಣ ಮೂಡಿಸಿದೆ. ಈ ಯುದ್ಧದ ಪರಿಣಾಮವಾಗಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲವು ವಿಮಾನಗಳ ಹಾರಾಟ ಸ್ಥಗಿತಗೊಂಡಿದ್ದು, ಸಾವಿರಾರು ಪ್ರಯಾಣಿಕರು ಪರದಾಡುತ್ತಿದ್ದಾರೆ. ಅರಬ್ ರಾಷ್ಟ್ರಗಳಾದ ದುಬೈ, ದೋಹಾ, ಅಬುದಾಬಿ, ಜಿದ್ದಾ, ದಮಾಮ್‌ಗೆ ತೆರಳಬೇಕಿದ್ದ ಆರು ವಿಮಾನಗಳು ಹಾಗೂ ಅಲ್ಲಿಂದ ಆಗಮಿಸಬೇಕಿದ್ದ ಒಂಬತ್ತು ವಿಮಾನಗಳು ಸೇರಿದಂತೆ ಒಟ್ಟು 15 ವಿಮಾನಗಳು ರದ್ದಾಗಿವೆ.
ವಿಮಾನಗಳ ರದ್ದತಿಯಿಂದಾಗಿ 1533ಕ್ಕೂ ಹೆಚ್ಚು ಪ್ರಯಾಣಿಕರು ಏರ್‌ಪೋರ್ಟ್‌ನಲ್ಲಿ ಅತಂತ್ರರಾಗಿದ್ದಾರೆ. ಏರ್‌ಪೋರ್ಟ್ ಸಿಬ್ಬಂದಿ ಪ್ರಯಾಣಿಕರ ಪರದಾಟವನ್ನು ಅರಿತು, ಅವರಿಗೆ ತಿಂಡಿ-ಬಿಸ್ಕತ್‌ಗಳ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೆ, ಪ್ರಯಾಣಿಕರಿಗೆ ಮಾಹಿತಿ ನೀಡಲು ಮತ್ತು ನೆರವಾಗಲು ಹೆಲ್ಪ್ ಡೆಸ್ಕ್‌ಗಳನ್ನು ಸ್ಥಾಪಿಸಲಾಗಿದೆ. ವಿಮಾನ ಟಿಕೆಟ್ ರದ್ದುಪಡಿಸಲು ಮತ್ತು ಮನೆಗಳಿಗೆ ಮರಳಲು ಹಲವು ಪ್ರಯಾಣಿಕರು ಮುಂದಾಗಿದ್ದಾರೆ. ಈ ಸಂಘರ್ಷವು ಅಂತರರಾಷ್ಟ್ರೀಯ ವಿಮಾನಯಾನದ ಮೇಲೆ ದೊಡ್ಡ ಪರಿಣಾಮ ಬೀರಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತ್ಯಾನಹು (ಸಂಗ್ರಹ ಚಿತ್ರ)Image Credit source: X/@narendramodi
ನವದೆಹಲಿ, ಮಾರ್ಚ್ 2: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತ್ಯಾನಹು (Benjamin Netanyahu) ಅವರಿಗೆ ದೂರವಾಣಿ ಕರೆ ಮಾಡಿ ಪರಿಸ್ಥಿತಿ ಕುರಿತು ಚರ್ಚಿಸಿದರು. ಇದೇ ವೇಳೆ, ಯುದ್ಧ ತಕ್ಷಣ ನಿಲ್ಲಿಸುವ ಅಗತ್ಯವಿದೆ ಎಂದು ಭಾರತ ಪುನರುಚ್ಚರಿಸಿರುವುದಾಗಿ ಮೋದಿ ತಿಳಿಸಿದ್ದಾರೆ. ಇಸ್ರೇಲ್, ಅಮೆರಿಕ ದಾಳಿಗೆ ಪ್ರತಿಯಾಗಿ ಇರಾನ್ ಕ್ಷಿಪಣಿ ದಾಳಿ ಮುಂದುವರಿಸಿರುವ ಹಿನ್ನೆಲೆ ಪ್ರಾದೇಶಿಕ ಭದ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸಿರುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ.
ಈ ಕುರಿತು ತಮ್ಮ ‘ಎಕ್ಸ್’ ಖಾತೆಯಲ್ಲಿ ಮಾಹಿತಿ ಹಂಚಿಕೊಂಡ ಪ್ರಧಾನಿ ಮೋದಿ, ಇತ್ತೀಚಿನ ಬೆಳವಣಿಗೆಗಳ ಕುರಿತು ಭಾರತದ ಕಳವಳಗಳನ್ನು ಬೆಂಜಮಿನ್ ನೆತ್ಯಾನಹುಗೆ ತಿಳಿಸಿದ್ದೇನೆ. ನಾಗರಿಕರ ಸುರಕ್ಷತೆ ಮೊದಲ ಆದ್ಯತೆಯಾಗಿದೆ ಎಂಬುದನ್ನು ಒತ್ತಿ ಹೇಳಿದ್ದೇನೆ. ಯುದ್ಧವನ್ನು ಬೇಗನೆ ನಿಲ್ಲಿಸುವ ಅಗತ್ಯವನ್ನು ಭಾರತ ಪುನರುಚ್ಚರಿಸಿದೆ ಎಂದು ತಿಳಿಸಿದ್ದಾರೆ.
Had a telephone call with PM Benjamin Netanyahu to discuss the current regional situation. Conveyed India’s concerns over recent developments and emphasised the safety of civilians as a priority. India reiterates the need for an early cessation of hostilities.@netanyahu
— Narendra Modi (@narendramodi) March 1, 2026
ಏತನ್ಮಧ್ಯೆ, ಇಸ್ರೇಲ್‌ನ ಪ್ರಮುಖ ನಗರಗಳನ್ನು ಗುರಿಯಾಗಿಸಿಕೊಂಡು ಇರಾನ್ ಪ್ರತೀಕಾರದ ದಾಳಿ ನಡೆಸಿದೆ. ರಾಜಧಾನಿ ಜೆರುಸಲೇಂ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇಸ್ರೇಲ್ ಮೇಲಿನ ಪ್ರತೀಕಾರದ ದಾಳಿ ಮುಂದುವರಿದಿರುವುದರಿಂದ ಪರಿಸ್ಥಿತಿ ಉದ್ವಿಗ್ನವಾಗಿದೆ.
ಮತ್ತೊಂದೆಡೆ, ಯುನೈಟೆಡ್ ಅರಬ್ ಎಮಿರೇಟ್ಸ್ (UAE) ರಾಷ್ಟ್ರಗಳ ಮೇಲೂ ಇರಾನ್ ಸೇನೆಯಿಂದ ದಾಳಿ ನಡೆದಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಟೆಹ್ರಾನ್ನನಲ್ಲಿ ಇರುವ ತನ್ನ ರಾಯಭಾರ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚುವುದಾಗಿ ಯುಎಇ ವಿದೇಶಾಂಗ ಸಚಿವಾಲಯ ಘೋಷಿಸಿದೆ. ಅಲ್ಲಿರುವ ರಾಯಭಾರಿ ಅಧಿಕಾರಿಗಳು ಹಾಗೂ ರಾಜತಾಂತ್ರಿಕ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳಲಾಗುತ್ತದೆ ಎಂದು ‘ಎಕ್ಸ್’ ಮೂಲಕ ತಿಳಿಸಿದೆ.
ಇರಾನ್ ದಾಳಿಯನ್ನು ಖಂಡಿಸಿರುವ ಯುಎಇ, ಭದ್ರತಾ ಕಾರಣಗಳಿಂದಾಗಿ ದುಬೈ ಹಾಗೂ ಅಬುಧಾಬಿ ಷೇರು ಮಾರುಕಟ್ಟೆಗಳನ್ನು ಎರಡು ದಿನಗಳ ಕಾಲ ಬಂದ್ ಮಾಡುವ ನಿರ್ಧಾರ ಕೈಗೊಂಡಿದೆ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವುದರಿಂದ ಜಾಗತಿಕ ಮಟ್ಟದಲ್ಲೂ ಆತಂಕ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ಓದಿ: ಇರಾನ್ ಸಂಘರ್ಷ ತೀವ್ರ ಕಳವಳಕಾರಿ; ಶಾಂತಿಯುತ ಮಾತುಕತೆಗೆ ಕರೆ ನೀಡಿದ ಭಾರತ
ಕಳೆದ ವಾರವಷ್ಟೇ ಪ್ರಧಾನಿ ಮೋದಿ ಇಸ್ರೇಲ್ಗೆ 2 ದಿನಗಳ ಕಾಲ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಇಸ್ರೇಲ್ ಹಾಗೂ ಭಾರತ ಮಧ್ಯೆ ಹಲವು ಒಪ್ಪಂದಗಳು ಏರ್ಪಟ್ಟಿದ್ದವು. ಇದೀಗ ಮತ್ತೆ ಇಸ್ರೇಲ್ ಪ್ರಧಾನಿಗೆ ಕರೆ ಮಾಡಿ ಮೋದಿ ಮಾತನಾಡಿದ್ದಾರೆ. ಒಟ್ಟಿನಲ್ಲಿ, ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗಾಗಿ ಎಲ್ಲಾ ದೇಶಗಳು ತಾಳ್ಮೆ ಪ್ರದರ್ಶಿಸಿ ಸಂವಾದದ ಮೂಲಕ ಸಮಸ್ಯೆ ಪರಿಹರಿಸಬೇಕು ಎಂಬುದು ಭಾರತದ ನಿಲುವು ಎಂಬುದನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 6:33 am, Mon, 2 March 26
ಬೆಂಗಳೂರು, ಮಾ.2: ಮಂತ್ರಗಳು ಆಧ್ಯಾತ್ಮಿಕ ಅಭ್ಯಾಸದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. “ಮನನಾ ತ್ರಾಯತೇ ಇತಿ ಮಂತ್ರಃ” ಎಂದರೆ ಮನಸ್ಸಿನಿಂದ ಧ್ಯಾನಿಸುವುದರಿಂದ ರಕ್ಷಣೆ ನೀಡುವಂತದ್ದು. ಮಂತ್ರಗಳು ವ್ಯಕ್ತಿಯಲ್ಲಿ ನಂಬಿಕೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿ, ದೈವಿಕ ಸಂಬಂಧವನ್ನು ಸುಧಾರಿಸುತ್ತವೆ. ಆದಾಗ್ಯೂ, ಮಂತ್ರಗಳು ಶುಭ ಮತ್ತು ಅಶುಭ ಫಲಿತಾಂಶಗಳೆರಡನ್ನೂ ನೀಡಬಲ್ಲವು. ಅವುಗಳನ್ನು ಜಪಿಸಲು ಬ್ರಾಹ್ಮೀ, ಅಭಿಜಿನ್, ಮತ್ತು ಗೋದೋಳಿ ಮುಹೂರ್ತಗಳಂತಹ ಸೂಕ್ತ ಸಮಯಗಳನ್ನು ಪಾಲಿಸುವುದು ಮುಖ್ಯ. ಒಳ್ಳೆಯ ಉದ್ದೇಶದಿಂದ ಮತ್ತು ಸರಿಯಾದ ಮಾರ್ಗದರ್ಶನದೊಂದಿಗೆ ಪಠಿಸಿದಾಗ, ಮಂತ್ರಗಳು ಧನಾತ್ಮಕ ಶಕ್ತಿಯನ್ನು ನೀಡುತ್ತವೆ. ವಿದ್ಯಾರ್ಥಿಗಳು, ರೈತರು, ಮತ್ತು ಉದ್ಯೋಗಸ್ಥರಿಗೆ ತಮ್ಮ ಗುರಿ ಸಾಧಿಸಲು ಸಹಾಯ ಮಾಡುತ್ತವೆ. ಓಂಕಾರ, ಗಾಯತ್ರೀ ಮಂತ್ರ, ಮೃತ್ಯುಂಜಯ ಮಂತ್ರ, ಮತ್ತು ವಿಷ್ಣು ಸ್ತೋತ್ರಗಳು ಧನಾತ್ಮಕ ಪರಿಣಾಮಗಳನ್ನು ಹೊಂದಿವೆ. ಆದರೆ, ತಾಂತ್ರಿಕ ಮಂತ್ರಗಳನ್ನು ದುರುದ್ದೇಶದಿಂದ ಅಥವಾ ಗುರುಗಳ ಮಾರ್ಗದರ್ಶನವಿಲ್ಲದೆ ಬಳಸಿದರೆ, ಅವು ಜಪಿಸುವವರಿಗೇ ಹಾನಿ ಉಂಟುಮಾಡಬಹುದು. ಮಂತ್ರಗಳ ಉಚ್ಚಾರಣೆ ಮತ್ತು ಧ್ವನಿ ಸಹ ಅವುಗಳ ಪರಿಣಾಮದಲ್ಲಿ ಮುಖ್ಯ. ಆದ್ದರಿಂದ, ಮಂತ್ರಗಳನ್ನು ಸದುದ್ದೇಶದಿಂದ, ಸರಿಯಾದ ಸ್ಥಳದಲ್ಲಿ ಮತ್ತು ಗುರುಗಳ ಮಾರ್ಗದರ್ಶನದಲ್ಲಿ ಬಳಸಬೇಕು ಎಂದು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಹೇಳಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾ.2: ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್ 2, ಭಾನುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ವಿಶ್ವಾ ವಸನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಶುಕ್ಲಪಕ್ಷ ಚತುರ್ದಶಿ ದಿನವಾದ ಇಂದು ಬೆಳಗ್ಗೆ 5:57ಕ್ಕೆ ಚತುರ್ದಶಿ ಮುಗಿದು ಹುಣ್ಣಿಮೆ ಪ್ರಾರಂಭವಾಗುತ್ತದೆ. ಆಶ್ಲೇಷ ನಕ್ಷತ್ರ, ಅತಿಗಂಡ ಯೋಗ, ವಣಿಕ ಕರಣವಿರುವ ಈ ದಿನದ ರಾಹುಕಾಲ ಬೆಳಗಿನ ಜಾವ 8:03 ರಿಂದ 9:32 ರವರೆಗೆ ಇರುತ್ತದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭಕಾಲ 9:33 ರಿಂದ 11:02 ರವರೆಗೆ ಇದೆ. ಇಂದು ಶುಕ್ರ ಗ್ರಹವು ಕುಂಭ ರಾಶಿಯಿಂದ ಮೀನ ರಾಶಿಗೆ (ಉಚ್ಚ ಸ್ಥಾನ) ಬೆಳಗಿನ ಜಾವ 1:01ಕ್ಕೆ ಸಂಚಾರ ಮಾಡಿದೆ. ರವಿ ಕುಂಭ ರಾಶಿಯಲ್ಲಿ ಮತ್ತು ಚಂದ್ರ ಕಟಕ ರಾಶಿಯಲ್ಲಿ ಇರುತ್ತಾನೆ. ಕಾಮದಹನದ ಹಬ್ಬವೂ ಇಂದು ಆಚರಿಸಲ್ಪಡುತ್ತದೆ. ಕನಕಗಿರಿ ಧ್ವಜ, ತುರುವೇಕೆರೆ ಬೆಟ್ಟದ ರಥ, ನೇರಳೆಕಟ್ಟೆ ಜಾತ್ರೆ, ದೇವರಾಯನದುರ್ಗದಲ್ಲಿ ರಥೋತ್ಸವ ನಡೆಯುವ ಪರ್ವದಿನ ಕೂಡ ಇದಾಗಿದೆ. ಜನ್ಮದಿನ ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸುವವರಿಗೆ ಗುರೂಜಿ ಶುಭ ಕೋರಿದ್ದಾರೆ. ಪ್ರತಿಯೊಂದು ರಾಶಿಯವರಿಗೂ ಆರ್ಥಿಕ, ಕೌಟುಂಬಿಕ, ಉದ್ಯೋಗ ಸಂಬಂಧಿತ ವಿಷಯಗಳಲ್ಲಿ ಆಗುವ ಬದಲಾವಣೆಗಳು, ಅದೃಷ್ಟ ಸಂಖ್ಯೆ, ಶುಭ ಬಣ್ಣ ಮತ್ತು ಜಪಿಸಬೇಕಾದ ಮಂತ್ರಗಳ ಕುರಿತು ಮಾಹಿತಿ ನೀಡಲಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾ.2: ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್ 2, ಭಾನುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ವಿಶ್ವಾ ವಸನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಶುಕ್ಲಪಕ್ಷ ಚತುರ್ದಶಿ ದಿನವಾದ ಇಂದು ಬೆಳಗ್ಗೆ 5:57ಕ್ಕೆ ಚತುರ್ದಶಿ ಮುಗಿದು ಹುಣ್ಣಿಮೆ ಪ್ರಾರಂಭವಾಗುತ್ತದೆ. ಆಶ್ಲೇಷ ನಕ್ಷತ್ರ, ಅತಿಗಂಡ ಯೋಗ, ವಣಿಕ ಕರಣವಿರುವ ಈ ದಿನದ ರಾಹುಕಾಲ ಬೆಳಗಿನ ಜಾವ 8:03 ರಿಂದ 9:32 ರವರೆಗೆ ಇರುತ್ತದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭಕಾಲ 9:33 ರಿಂದ 11:02 ರವರೆಗೆ ಇದೆ. ಇಂದು ಶುಕ್ರ ಗ್ರಹವು ಕುಂಭ ರಾಶಿಯಿಂದ ಮೀನ ರಾಶಿಗೆ (ಉಚ್ಚ ಸ್ಥಾನ) ಬೆಳಗಿನ ಜಾವ 1:01ಕ್ಕೆ ಸಂಚಾರ ಮಾಡಿದೆ. ರವಿ ಕುಂಭ ರಾಶಿಯಲ್ಲಿ ಮತ್ತು ಚಂದ್ರ ಕಟಕ ರಾಶಿಯಲ್ಲಿ ಇರುತ್ತಾನೆ. ಕಾಮದಹನದ ಹಬ್ಬವೂ ಇಂದು ಆಚರಿಸಲ್ಪಡುತ್ತದೆ. ಕನಕಗಿರಿ ಧ್ವಜ, ತುರುವೇಕೆರೆ ಬೆಟ್ಟದ ರಥ, ನೇರಳೆಕಟ್ಟೆ ಜಾತ್ರೆ, ದೇವರಾಯನದುರ್ಗದಲ್ಲಿ ರಥೋತ್ಸವ ನಡೆಯುವ ಪರ್ವದಿನ ಕೂಡ ಇದಾಗಿದೆ. ಜನ್ಮದಿನ ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸುವವರಿಗೆ ಗುರೂಜಿ ಶುಭ ಕೋರಿದ್ದಾರೆ. ಪ್ರತಿಯೊಂದು ರಾಶಿಯವರಿಗೂ ಆರ್ಥಿಕ, ಕೌಟುಂಬಿಕ, ಉದ್ಯೋಗ ಸಂಬಂಧಿತ ವಿಷಯಗಳಲ್ಲಿ ಆಗುವ ಬದಲಾವಣೆಗಳು, ಅದೃಷ್ಟ ಸಂಖ್ಯೆ, ಶುಭ ಬಣ್ಣ ಮತ್ತು ಜಪಿಸಬೇಕಾದ ಮಂತ್ರಗಳ ಕುರಿತು ಮಾಹಿತಿ ನೀಡಲಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ